ಕರ್ನಾಟಕ
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಹೋಟೆಲ್ ಮ್ಯಾಸ್ಟಿಫ್‌ನಲ್ಲಿ ನಡೆದ ಸಮಾರಂಭದಲ್ಲಿ, ಬಹುಮಾನ ವಿಜೇತರನ್ನು ಕತೆಗಾರ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಘೋಷಿಸಿದರು.
ಬೆಂಗಳೂರು: ಕನ್ನಡ ಸಾಹಿತ್ಯ ಚರಿತ್ರೆಯಲ್ಲೇ ದಾಖಲೆ ಬಹುಮಾನ ಮೊತ್ತ ಹೊಂದಿದ ʼವಿಸ್ತಾರ ನ್ಯೂಸ್ ಯುಗಾದಿ ಕಥಾಸ್ಪರ್ಧೆ- 2023ʼರ ಬಹುಮಾನಿತರ ಘೋಷಣೆ ಮತ್ತು ಪ್ರದಾನ ಕಾರ್ಯಕ್ರಮ ಇಂದು (ಮೇ 27) ನಡೆಯಿತು. ಮೊದಲ ಬಹುಮಾನವನ್ನು ಚಂದ್ರಶೇಖರ ಡಿ.ಆರ್., ಎರಡನೇ ಬಹುಮಾನವನ್ನು ದಾದಾಪೀರ್ ಜೈಮನ್, ಮೂರನೇ ಬಹುಮಾನವನ್ನು ಪೂರ್ಣಿಮಾ ಮಾಳಗಿಮನಿ ತಮ್ಮದಾಗಿಸಿಕೊಂಡರು.
ಕ್ವೀನ್ಸ್ ರಸ್ತೆಯ ಹೋಟೆಲ್ ಮ್ಯಾಸ್ಟಿಫ್‌ನಲ್ಲಿ ನಡೆದ ಸಮಾರಂಭದಲ್ಲಿ, ಬಹುಮಾನ ವಿಜೇತರನ್ನು ಖ್ಯಾತ ಕತೆಗಾರ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಘೋಷಿಸಿದರು. ಮೊದಲ ಬಹುಮಾನದ ಮೊತ್ತ ರೂ. 55,000, ಎರಡನೇ ಬಹುಮಾನ ರೂ. 25,000 ರೂ., ಮೂರನೇ ಬಹುಮಾನ 10,000 ರೂ. ಹಾಗೂ ತಲಾ 2,000 ರೂ. ಮೊತ್ತದ ಮೆಚ್ಚುಗೆ ಬಹುಮಾನಗಳನ್ನು 5 ಮಂದಿಗೆ ವಿತರಿಸಲಾಯಿತು. ಕವಿ, ವಿಮರ್ಶಕಿ ಲಲಿತಾ ಸಿದ್ದಬಸವಯ್ಯ, ಕಾದಂಬರಿಕಾರ, ವಿಮರ್ಶಕ ಬಿ. ಜನಾರ್ದನ ಭಟ್ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ್ದರು.
ವಿಸ್ತಾರ ನ್ಯೂಸ್ ಟಿವಿ ವಾಹಿನಿಯ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಕಥಾಸ್ಪರ್ಧೆಯ ಆಶಯವನ್ನು ವಿವರಿಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಚೇರ್‌ಮನ್ ಎಚ್.ವಿ. ಧರ್ಮೇಶ್, ಬಹುಮಾನ ಆಯೋಜಕರಾದ ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಮಾಲೀಕ ಬಸವರಾಜ ಕೊನೇಕ, ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಆರ್ ವೆಂಕಟೇಶ್, ವಿ2 ಹೋಲ್ಡಿಂಗ್ಸ್ ಹೌಸಿಂಗ್ ಡೆವಲಪ್‌ಮೆಂಟ್ ಪ್ರೈ. ಲಿ. ಎಂ.ಡಿ ಡಾ.ಪಿ.ಎಲ್ ವೆಂಕಟರಾಮ ರೆಡ್ಡಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಹುಮಾನಿತ ಹಾಗೂ ಟಾಪ್ 25 ಕತೆಗಳು ವಿಸ್ತಾರ ನ್ಯೂಸ್ ಜಾಲತಾಣದಲ್ಲಿ ಪ್ರಕಟವಾಗಲಿವೆ. ಈ ಕತೆಗಳು ಪುಸ್ತಕವಾಗಿಯೂ ಪ್ರಕಟಗೊಳ್ಳಲಿವೆ.
ಬಹುಮಾನಿತರ ವಿವರಗಳು ಈ ಕೆಳಗಿನಂತಿವೆ:
ಬಹುಮಾನ- ಕಥೆ- ಕಥೆಗಾರರು
ಪ್ರಥಮ: ಸೋಮನ ಕುಣಿತ- ಚಂದ್ರಶೇಖರ ಡಿ.ಆರ್
ದ್ವಿತೀಯ: ಅಂತಃಕಾರಣದ ಟಿಪ್ಪಣಿಗಳು- ದಾದಾಪೀರ್ ಜೈಮನ್
ತೃತೀಯ: ಅದು ಅವರ ಪ್ರಾಬ್ಲಮ್- ಪೂರ್ಣಿಮಾ ಮಾಳಗಿಮನಿ
ಮೆಚ್ಚುಗೆ: ಹುಣಿಸೆ ಹೂವು- ದೀಪದ ಮಲ್ಲಿ
ಮೆಚ್ಚುಗೆ: ಪಿಂಕ್ ಟ್ರಂಪೆಟ್- ಚೈತ್ರಿಕಾ ಹೆಗಡೆ
ಮೆಚ್ಚುಗೆ: ಪರವೇಶ್ಮಸ್ಥನ ಫಿಕ್ಹ್ ಪ್ರಸಂಗ- ಬಿ.ಎಂ ಹನೀಫ್
ಮೆಚ್ಚುಗೆ: ಕಿತ್ತಳೆ ಚಿಟ್ಟೆ- ಮಂಜು ನಾಯಕ್ ಚೆಳ್ಳೂರು
ಮೆಚ್ಚುಗೆ: ನೆಲೆ- ದೀಪಾ ಹಿರೇಗುತ್ತಿ
ಟಾಪ್ 25 ಪಟ್ಟಿ ಸೇರಿರುವ ಇತರ ಕತೆಗಳು
ಮಾಚಣ್ಣನ ಮಗ- ಸಂದೀಪ ನಾಯಕ
ಆತ್ಮದ ಗಿಡುಗ- ಮಂಜುನಾಥ್ ಲತಾ
ಪ್ರೀತಿ ಇಲ್ಲದ ಮೇಲೆ- ಶರತ್ ಭಟ್ ಸೇರಾಜೆ
ಸೀಕ್ರೆಟ್ ಸಂಟಾ- ಪೂರ್ಣಿಮಾ ಭಟ್ಟ ಸಣ್ಣಕೇರಿ
ಚೆಕ್‌ಔಟ್- ಸದಾಶಿವ ಸೊರಟೂರು
ಹುರಿಮೀಸೆ- ಚೀಮನಹಳ್ಳಿ ರಮೇಶ್ ಬಾಬು
ಪರಸೆ- ಭಾಗ್ಯರೇಖಾ ದೇಶಪಾಂಡೆ
ಮುಕ್ಕೋಡ್ಲು ಅಂಚೆ ಮತ್ತು ಪೋಸ್ಟ್- ಮೇ. ಕುಶ್ವಂತ್ ಕೋಳಿಬೈಲು
ಶ್ರೀಗಳ ಅರಣ್ಯಕಾಂಡ- ಮೌನೇಶ್ ಬಡಿಗೇರ್
ಶ್ರಾವಣಾ- ಬಸವಣ್ಣೆಪ್ಪ ಕಂಬಾರ
ಕಸೂತಿ- ಸೌಮ್ಯ ಪ್ರಭು ಕಲ್ಯಾಣಕರ್
ಗುಡ್‌ಮಾರ್ನಿಂಗ್ ಮೆಸೇಜ್- ಅಂಜನಾ ಹೆಗಡೆ
ಮೈ ಲೈಫ್ ಮೈ ಪ್ರಾಬ್ಲೆಮ್- ಸುಷ್ಮಾ ಸಿಂಧು
ಉರಿವ ರಾತ್ರಿ ಸುರಿದ ಮಳೆ- ಭವ್ಯಾ ನವೀನ್
ಕಿಂಡಿ- ಸಂಪತ್ ಸಿರಿಮನೆ
ಹೇರ್‌ಪಿನ್ ತಿರುವು- ಪ್ರಸಾದ್ ಶೆಣೈ ಆರ್.ಕೆ
ಏಳುಮಲ್ಲಿಗೆ ತೂಕದವಳು- ಶರಣಬಸವ ಗುಡದಿನ್ನಿ
ತೀರ್ಪುಗಾರರ ಪರಿಚಯ
ಲಲಿತಾ ಸಿದ್ದಬಸವಯ್ಯ
ಕವಯಿತ್ರಿ ಲಲಿತಾ ಸಿದ್ದಬಸವಯ್ಯ ಅವರು ಬಿ.ಎಸ್ಸಿ. ಪದವೀಧರೆ. 27-02-1955ರಂದು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಯ್ಯ, ತಾಯಿ ಪುಟ್ಟಮ್ಮಣ್ಣಿ. 28 ವರ್ಷ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ನಂತರ ಬರವಣಿಗೆಯಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮೊದಲ ಸಿರಿ, ಇಹದ ಸ್ವರ, ಕೆಬ್ಬೆ ನೆಲ, ದಾರಿನೆಂಟ ಮತ್ತು ಬಿಡಿ ಹರಳು ಎಂಬ ಕವಿತಾ ಸಂಕಲನಗಳನ್ನೂ, ಆನೆಘಟ್ಟ ಎಂಬ ಕಥಾಸಂಕಲನವನ್ನೂ, ಇನ್ನೊಂದು ಸಭಾಪರ್ವ ಎಂಬ ನಾಟಕವನ್ನೂ, ಮಿ.ಛತ್ರಪತಿ ಎಂಬ ನಗೆಬರಹವನ್ನು ಪ್ರಕಟಿಸಿರುವ ಇವರಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ಬಿಎಂಶ್ರೀ ಕಾವ್ಯ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ ಮುಂತಾದ ಪುರಸ್ಕಾರಗಳು ಸಂದಿವೆ.
ಡಾ. ಬಿ.ಜನಾರ್ದನ ಭಟ್
ಡಾ. ಬಿ. ಜನಾರ್ದನ ಭಟ್ ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ, ನಂತರ ಡಾಕ್ಟರೇಟ್ ಪದವಿಯನ್ನೂ ಪಡೆದಿರುವ ಅವರು ಬೆಳ್ಮಣ್ ಸ.ಪ.ಪೂ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದಾರೆ. ಅವರ ಗ್ರಂಥಗಳಲ್ಲಿ ದಕ್ಷಿಣ ಕನ್ನಡದ ಶತಮಾನದ ಕಾವ್ಯ, ದಕ್ಷಿಣ ಕನ್ನಡದ ಶತಮಾನದ ಕತೆಗಳು, ಉಡುಪಿ ಜಿಲ್ಲೆಯ ಶತಮಾನದ ಕತೆಗಳು ಮುಖ್ಯವಾದವು. ಉತ್ತರಾಧಿಕಾರ, ಹಸ್ತಾಂತರ, ಮೂರು ಹೆಜ್ಜೆ ಭೂಮಿ, ಕಲ್ಲುಕಂಬವೇರಿದ ಹುಂಬ, ಅನಿಕೇತನ ಮುಂತಾದ ಕಾದಂಬರಿಗಳನ್ನು ಬರೆದಿದ್ದಾರೆ.
ಮೊದಲ ಮೂರು ಬಹುಮಾನಿತ ಕಥೆಗಾರರ ವಿವರ
ಚಂದ್ರಶೇಖರ ಡಿ.ಆರ್
ಮೂಲತಃ ತುಮಕೂರು. ಹುಟ್ಟಿದ್ದು ಓದಿದ್ದು ಎಲ್ಲಾ ತುಮಕೂರಿನಲ್ಲಿ. ಪ್ರಸ್ತುತ ಎಸ್‌ಬಿಐನಲ್ಲಿ 10 ವರ್ಷದಿಂದ ಮ್ಯಾನೇಜರ್. ಇವರು ಬರೆದ ಕತೆ ಸಮಾಜಮುಖಿ ಮ್ಯಾಗಜೀನ್‌ನಲ್ಲಿ ಪ್ರಕಟವಾಗಿದೆ. ಸ್ಟೇಟ್ ಬ್ಯಾಂಕ್‌ನ ಸಣ್ಣ ಕಥಾ ವಿಭಾಗದಲ್ಲಿ ಕೂಡ ಬಹುಮಾನ ಬಂದಿತ್ತು.
ದಾದಾಪೀರ್ ಜೈಮನ್
ವೃತ್ತಿಯಿಂದ ಶಿಕ್ಷಕ ಆಗಿರುವ ಇವರಿಗೆ ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಆಸಕ್ತಿಯ ಕ್ಷೇತ್ರಗಳು. ಇಕ್ಬಾಲುನ್ನೀಸಾ ಹುಸೇನ್ ಅವರ ‘ಪರ್ದಾ & ಪಾಲಗಮಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ದಿಮಿತ್ರಿ ಗಾರಿಶ್ ಅವರ ʼಬ್ಯಾರೆನ್ ಲ್ಯಾಂಡ್’ ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ನೀಲಕುರಿಂಜಿ ಇವರ ಪ್ರಥಮ ಕಥಾ ಸಂಕಲನ. ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪಡೆದಿದ್ದಾರೆ.
ಪೂರ್ಣಿಮಾ ಮಾಳಗಿಮನಿ
ʼAnyone but the Spouse’ ಎನ್ನುವ ಇಂಗ್ಲೀಷ್ ಕಥಾ ಸಂಕಲನ, ಇಜಯಾ, ಪ್ರೀತಿ ಪ್ರೇಮ -ಪುಸ್ತಕದಾಚೆಯ ಬದನೇಕಾಯಿ, ಅಗಮ್ಯ ಇವರ ಕಾದಂಬರಿಗಳು. ‘ಡೂಡಲ್ ಕಥೆಗಳು’ ಕಥಾ ಸಂಕಲನ. 2022ನೇ ಸಾಲಿನ ಬುಕ್ ಬ್ರಹ್ಮ ಸ್ವಾತಂತ್ರೋತ್ಸವ ಕಥಾ ಬಹುಮಾನ ವಿಜೇತರು. ಇಜಯಾ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಸಂದಿದೆ. ಶಿವಮೊಗ್ಗ ಜಿಲ್ಲೆಯ ಹನುಮಂತಾಪುರ ಗ್ರಾಮದಲ್ಲಿ ಜನಿಸಿದವರು. ಭಾರತೀಯ ವಾಯುಸೇನೆಯಲ್ಲಿ ಏರೋ ನಾಟಿಕಲ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ಈಗ ಕೇಂದ್ರ ಸರಕಾರದ ಸಂಸ್ಥೆಯಲ್ಲಿ ಜಾಯಿಂಟ್ ಡೆಪ್ಯೂಟಿ ಡೈರೆಕ್ಟರ್ ಆಗಿದ್ದಾರೆ.
ಮೆಚ್ಚುಗೆ ಬಹುಮಾನಿತ ಕಥೆಗಾರರ ವಿವರ
ದೀಪಾ ಗಿರೀಶ್
‘ದೀಪದ ಮಲ್ಲಿ’ ಕಾವ್ಯನಾಮದಲ್ಲಿ ಬರವಣಿಗೆಯಲ್ಲಿ ತೊಡಗಿರುವ ದೀಪಾ, ಸಾಹಿತ್ಯ, ರಂಗಭೂಮಿ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯ. ಪ್ರಸ್ತುತ ಇವರು ಸುದ್ದಿಸಂಸ್ಥೆಯೊಂದರಲ್ಲಿ ನಿರೂಪಕರು. ಇವರ ʼಅಸ್ಮಿತಾʼ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚೊಚ್ಚಲ ಪುಸ್ತಕ ಬಹುಮಾನ, ಕರ್ನಾಟಕ ಲೇಖಕಿಯರ ಸಂಘದ ʼಶ್ರೀಲೇಖಾ ದತ್ತಿ ಪ್ರಶಸ್ತಿʼ ದೊರಕಿದೆ.
ದೀಪಾ ಹಿರೇಗುತ್ತಿ
ಕುಮಟಾ ತಾಲೂಕಿನ ಹಿರೇಗುತ್ತಿಯಲ್ಲಿ ಜನಿಸಿದ ದೀಪಾ, ಚಿಕ್ಕಮಗಳೂರಿನ ಕೊಪ್ಪದಲ್ಲಿ ಇಂಗ್ಲಿಷ್ ಉಪನ್ಯಾಸಕಿ. ಹಲವು ಕಥಾ, ಕವನ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸುತ್ತಲೇ ಇರುವ ಇವರ ಪ್ರಕಟಿತ ಕೃತಿಗಳು ಪರಿಮಳವಿಲ್ಲದ ಹೂಗಳ ಮಧ್ಯ ಕವನ ಸಂಕಲನ, ನಾನು ನೀವು ಮತ್ತು, ಫೀನಿಕ್ಸ್ ಅಂಕಣ ಬರಹಗಳ ಸಂಗ್ರಹ. ಕಸಾಪ ನೀಡುವ ಮಯೂರ ವರ್ಮ ಪ್ರಶಸ್ತಿಗೆ ಇವರು ಪಾತ್ರರಾಗಿದ್ದಾರೆ.
ಮಂಜು ಚಳ್ಳೂರು
ಇವರ ಹುಟ್ಟೂರು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಚಳ್ಳೂರು. ಚಳ್ಳೂರು, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಪ್ರಸ್ತುತ ವೈಕಾಮ್18 ಮೀಡಿಯಾ ಸಂಸ್ಥೆಯಲ್ಲಿ ಬರಹಗಾರನಾಗಿ ಉದ್ಯೋಗ. ಫೂ ಮತ್ತು ಇತರ ಕತೆಗಳು ಎಂಬ ಕಥಾ ಸಂಕಲನ ಪ್ರಕಟವಾಗಿದೆ. ಟೋಟೋ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿ, ಕಾಜಾಣ ಯುವ ಪುರಸ್ಕಾರ ಲಭಿಸಿವೆ. ಸಿನಿಮಾ ಮತ್ತು ಫೋಟೋಗ್ರಫಿ ಆಸಕ್ತಿಯ ಕ್ಷೇತ್ರಗಳು.
ಬಿ.ಎಂ ಹನೀಫ್
ಮೂಲತಃ ಪತ್ರಕರ್ತರಾದ ಬಿ.ಎಂ ಹನೀಫ್ ಕಥೆಗಾರ ಮತ್ತು ಕವಿಯಾಗಿಯೂ ಪರಿಚಿತರು. ಪ್ರಜಾವಾಣಿ ಸಮೂಹದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಇವರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬೆಳ್ಳಾಯರು. ಮಾಂಜಿ ರವಾ ಫ್ರೈ ಕಥಾ ಸಂಕಲನ, ಕನಸು ಕನ್ನಡಿ ಅಂಕಣ ಬರಹಗಳ ಸಂಕಲನ, ಕತ್ತಲೆಗೆ ಯಾವ ಬಣ್ಣ ಕವನ ಸಂಕಲನ ಮತ್ತಿತರ ಪುಸ್ತಕಗಳ ಜತೆಗೆ ಹಲವು ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ.
ಚೈತ್ರಿಕಾ ಶ್ರೀಧರ್ ಹೆಗಡೆ
ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರ ತಾಲೂಕಿನ, ಕಂಚೀಮನೆ ಎಂಬ ಪುಟ್ಟ ಊರಿನಲ್ಲಿ ಜನಿಸಿದ ಚೈತ್ರಿಕಾ, ಬಿಕಾಂ ಓದಿ ಸದ್ಯ ಕನ್ನಡ ಕಿರುತೆರೆ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುತ್ತಿದ್ದಾರೆ. ಕವಿತೆಗಳ ಹಸ್ತಪ್ರತಿಗೆ ಕೊಡಮಾಡುವ 2016ರ ‘ಸಾಹಿತ್ಯ ಅಕಾಡೆಮಿ ದತ್ತಿ ಬಹುಮಾನ’ವು ‘ಎರಡು ನಂಬರಿನ ಟಿಕಲಿ’ ಎಂಬ ಹಸ್ತಪ್ರತಿಗೆ ದೊರೆತಿದೆ. 2021ರಲ್ಲಿ ಇವರ ಮೊದಲ ಕಥಾ ಸಂಕಲನ “ನೀಲಿ ಬಣ್ಣದ ಸ್ಕಾರ್ಫು” ಬಿಡುಗಡೆ ಆಗಿದೆ.
ಇದನ್ನೂ ಓದಿ: ವಿಸ್ತಾರ ನ್ಯೂಸ್ ಯುಗಾದಿ ಕಥಾಸ್ಪರ್ಧೆ: ಇತಿಹಾಸ ಬರೆದ ಕಥಾಪ್ರವಾಹ; ಟಾಪ್ 25 ಕಥೆಗಾರರ ಪಟ್ಟಿ ಇಲ್ಲಿದೆ!
ಕರ್ನಾಟಕ
Lok Sabha Election 2024: ಸೋಮಣ್ಣಗೆ ತುಮಕೂರು ಲೋಕಸಭೆ ಟಿಕೆಟ್; ಗುಟ್ಟು ಬಿಚ್ಚಿಟ್ಟ ಹಾಲಿ ಸಂಸದ
Lok Sabha Election 2024: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಮಾಜಿ ಸಚಿವ ವಿ.ಸೋಮಣ್ಣ ಸ್ಪರ್ಧೆ ಮಾಡುತ್ತಾರೆ ಎಂದು ಹಾಲಿ ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿರುವ ಆಡಿಯೊ ವೈರಲ್ ಆಗಿದೆ.
ತುಮಕೂರು: ಲೋಕಸಭೆ ಚುನಾವಣೆಗೆ (Lok Sabha Election 2024) ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಆದರೆ, ಚುನಾವಣಾ ಕಣದಿಂದ ದೂರವಿರುವುದಾಗಿ ಈ ಹಿಂದೆಯೇ ಬಿಜೆಪಿ ಹಾಲಿ ಸಂಸದ ಜಿ.ಎಸ್. ಬಸವರಾಜು ಅವರು ಘೋಷಿಸಿದ್ದರು. ಹೀಗಾಗಿ ಮಾಜಿ ಸಚಿವ ವಿ.ಸೋಮಣ್ಣ ಅವರು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಸಂಸದ ಜಿ.ಎಸ್. ಬಸವರಾಜು ಅವರು ಮಾತನಾಡಿರುವ ಆಡಿಯೊ ವೈರಲ್ ಆಗಿದೆ.
ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಇದರಲ್ಲಿ ವಿ.ಸೋಮಣ್ಣ ತುಮಕೂರಿನಿಂದ ಲೋಕಸಭೆಗೆ ಸ್ಪರ್ಧೆ ಮಾಡುತ್ತಾರೆ. ಅವರ ಬೆಂಬಲಕ್ಕೆ ನೀವು ನಿಲ್ಲಬೇಕು ಎಂದು ವೀರಶೈವ ಸಮಾಜಕ್ಕೆ ಸಂಸದ ಜಿ.ಎಸ್.ಬಸವರಾಜು ಮನವಿ ಮಾಡಿದ್ದಾರೆ.
ಇದನ್ನೂ ಓದಿ | MLC Election: ಕಾಂಗ್ರೆಸ್ ಸರ್ಕಾರಕ್ಕೆ 3ನೇ ಸವಾಲು: 3 ಪರಿಷತ್ ಸ್ಥಾನಕ್ಕೆ 19 ಆಕಾಂಕ್ಷಿಗಳು, ನಾಲ್ಕೈದು ಬಣಗಳು!
ಸಮಾಜ ಒಗ್ಗಟ್ಟಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ನಿಮ್ಮಲ್ಲೇ ಕಿತ್ತಾಡಿದರೆ ಒದ್ದು ಓಡಿಸುತ್ತಾರೆ. ಆ ಸಮಯ ಕೂಡ ಸನ್ನಿಹಿತವಾಗಿದೆ. ಯಾವಾಗ ಒಗ್ಗಟ್ಟು ಮುರಿಯುತ್ತದೆಯೋ ಆಗ ಏನೇನು ಮಾಡಬೇಕು ಎಂಬುವುದು ಅವರಿಗೆ (ವಿರೋಧ ಪಕ್ಷಗಳಿಗೆ) ಗೊತ್ತಿದೆ. ಕೆಲವೇ ಜನ ಇದ್ದೀರಿ ಒಗ್ಗಟ್ಟಾಗಿರಬೇಕು ಎಂದು ಸಂದೇಶ ನೀಡಿದ್ದಾರೆ.
ನನ್ನ ಅವಧಿ ಮುಗಿಯಿತು, ಈಗ ನನ್ನ ಸೀಟ್ ಸೋಮಣ್ಣಗೆ ಕೊಡುತ್ತಾರೆ. ನಾನು ಚುನಾವಣೆಯಲ್ಲಿ ನಿಲ್ಲಲ್ಲ, ಈ ಬಗ್ಗೆ ದೆಹಲಿಗೆ ಹೋಗಿದ್ದಾಗ ಹಿರಿಯ ನಾಯಕರಿಗೆ ಹೇಳಿದ್ದೇನೆ ಎಂದಿರುವ ಸಂಸದರು, ಮುಂದೆ ಬರುವವರನ್ನು ಉಪಯೋಗಿಸಿಕೊಳ್ಳಿ. 8 ಸಲ ಚುನಾವಣೆಗೆ ನಿಂತಿದ್ದೇನೆ, 5 ಸಲ ಗೆದ್ದಿದ್ದೇನೆ, ಮೂರು ಸಲ ಸೋತಿದ್ದೇನೆ. ಈ ಹಿಂದೆ ನಮ್ಮವರೇ ನನ್ನ ಸೋಲಿಸಿದ್ದರು. ನಾನು ಸೋತರೂ ಒಂದೇ, ಗೆದ್ದರೂ ಒಂದೇ, ಕೆಲಸ ಮಾಡಿಸಿಕೊಂಡು ಬರುತ್ತಿದ್ದೆ ಎಂದು ಹೇಳಿದ್ಧಾರೆ.
ಇದನ್ನೂ ಓದಿ | BJP Karnataka: ಸೋತು 25 ದಿನದ ನಂತರ ಅವಲೋಕನ ನಡೆಸಲಿದೆ ಬಿಜೆಪಿ!: ಗೆದ್ದ-ಸೋತವರ ಸಭೆ ಗುರುವಾರ
ಸಂಸದ ಜಿ.ಎಸ್.ಬಸವರಾಜು ರಾಜಕೀಯ ನಿವೃತ್ತಿ
ತುಮಕೂರು ಕ್ಷೇತ್ರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ವಿರುದ್ಧ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಗೆದ್ದಿದ್ದರು. ಆದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಜನವರಿಯಲ್ಲಿ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಕ್ಷೇತ್ರದಿಂದ ಹೊಸ ಈ ಬಾರಿ ಹೊಸ ಅಭ್ಯರ್ಥಿ ಕಣಕ್ಕಿಳಿವುದು ಖಚಿತವಾಗಿದೆ.
ಇದನ್ನೂ ಓದಿ | Farooq Abdullah: ಮಾಜಿ ಪಿಎಂ ದೇವೇಗೌಡ, ಸಿಎಂ ಸಿದ್ದರಾಮಯ್ಯ ಜತೆ ಫಾರೂಕ್ ಅಬ್ದುಲ್ಲಾ ʼಲೋಕಾʼಭಿರಾಮ!
ಇನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರ ಬಿಟ್ಟು ಚಾಮರಾಜನಗರ ಹಾಗೂ ವರುಣ ಕ್ಷೇತ್ರದಲ್ಲಿ ವಿ.ಸೋಮಣ್ಣ ಸ್ಪರ್ಧಿಸಿದ್ದರು. ಆದರೆ, ಎರಡೂ ಕ್ಷೇತ್ರಗಳಲ್ಲಿ ಸೋಲು ಕಂಡ ಹಿನ್ನೆಲೆಯಲ್ಲಿ ಅವರು ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಹೈಕಮಾಂಡ್ ನಾಯಕರ ಮಾತು ಕೇಳಿ ಚಿನ್ನದಂತಹ ಗೋವಿಂದರಾಜನಗರ ಕ್ಷೇತ್ರ ಬಿಟ್ಟು ಹೋದೆ ಎಂದು ಕಿಡಿಕಾರಿದ್ದರು. ಹೀಗಾಗಿ ಸಮಾಧಾನಪಡಿಸಲು ತುಮಕೂರು ಲೋಕಸಭಾ ಕ್ಷೇತ್ರ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಕರ್ನಾಟಕ
Ballari News : 5 ವರ್ಷದ ಬಾಲಕನಿಗೆ ಅತೀ ವಿರಳ ಯಶಸ್ವಿ ಮೆದುಳಿನ ಶಸ್ತ್ರ ಚಿಕಿತ್ಸೆ
Ballari News: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾರಾನಗರದ ನಾಗೇಶ್ ಮತ್ತು ಪಾರ್ವತಿ ದಂಪತಿಯ 5 ವರ್ಷದ ಬಾಲಕನಿಗೆ ಮೆದುಳಿನ ಅರ್ಧ ಭಾಗದ ತಲೆಯ ಬುರುಡೆ ತೆರೆದು ಮೈಕ್ರೋಸ್ಕೋಪ್ ಮೂಲಕ ಅತೀ ಕ್ಲಿಷ್ಟಕರ ಹಾಗೂ ಅತೀ ಸೂಕ್ಷ್ಮ ರೀತಿಯ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ವಿಮ್ಸ್ ನ್ಯೂರೋ ಸರ್ಜರಿ ವಿಭಾಗದ ಡಾ. ವಿಶ್ವನಾಥ್ ಯಶಸ್ವಿಯಾಗಿದ್ದಾರೆ.
ಬಳ್ಳಾರಿ: ಐದು ವರ್ಷದ ಬಾಲಕನಿಗೆ ಮೆದುಳಿನ (Brain) ಅರ್ಧ ಭಾಗದ ತಲೆಯ ಬುರುಡೆ ತೆರೆದು ಮೈಕ್ರೋಸ್ಕೋಪ್ (Microscope) ಮೂಲಕ ಅತೀ ಕ್ಲಿಷ್ಟಕರ ಹಾಗೂ ಅತೀ ಸೂಕ್ಷ್ಮ ರೀತಿಯ ಶಸ್ತ್ರ ಚಿಕಿತ್ಸೆ (Surgery) ಮಾಡುವಲ್ಲಿ ಯಶಸ್ವಿಯಾಗಿರುವ ವಿಮ್ಸ್ ನ್ಯೂರೋ ಸರ್ಜರಿ ವಿಭಾಗದ ಡಾ. ವಿಶ್ವನಾಥ ಅವರ ಸಾಧನೆ ವೈದ್ಯಕೀಯ ಕ್ಷೇತ್ರವೇ ಹೆಮ್ಮೆ ಪಡುವ ಸಂಗತಿಯಾಗಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾರನಗರದ ನಾಗೇಶ್ ಮತ್ತು ಪಾರ್ವತಿ ದಂಪತಿಯ ಐದು ವರ್ಷದ ಬಾಲಕ ಹುಟ್ಟಿನಿಂದಲೇ ಈ ಕಾಯಿಲೆಯಿಂದ ಬಳಲುತ್ತಿದ್ದನು. ಕಳೆದ ಕೆಲ ತಿಂಗಳಿನಿಂದ ನಿರಂತರವಾಗಿ ನಿಯಂತ್ರಣ ತಪ್ಪಿ ಬೀಳುತ್ತಿದ್ದ, ಇದನ್ನು ಗಮನಿಸಿದ ಪೋಷಕರು ಸ್ಥಳೀಯ ವೈದ್ಯರ ಬಳಿ ತಪಾಸಣೆಗೊಳಪಡಿಸಿದಾಗ ಮಗುವಿಗೆ ಅತೀ ವಿರಳ ಕಾಯಿಲೆ ಇದ್ದು, ನರ ರೋಗತಜ್ಞ ವೈದ್ಯರ ಬಳಿ ಮಾಡಿಸುವಂತೆ ಸಲಹೆ ನೀಡಲಾಗಿತ್ತು.
ಇದನ್ನೂ ಓದಿ: WTC Final 2023: ಭಾರತ, ಆಸ್ಟ್ರೇಲಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರ ಹಿಂದಿದೆ ಭಾವುಕ ಕಾರಣ
ಏನಿದು ಕಾಯಿಲೆ?
ಉಸಿರಾಟ ಮತ್ತು ಹೃದಯ ಬಡಿತ ಕ್ರಿಯೆ ನಿಯಂತ್ರಿಸುವ ಬ್ರೈನ್ ಸ್ಟೆಮ್ ಬಳಿ ಮೆದುಳಿನ ದ್ರವದಿಂದ ಉಂಟಾದ ನೀರಿನ ಗುಳ್ಳೆ ರೂಪದ ಚೀಲ (cyst) ದಂತಹ ಅತೀವಿರಳ ಖಾಯಿಲೆಯಿಂದ ಬಳಲುತ್ತಿದ್ದನು. ಬೆಂಗಳೂರಿನ ನಿಮಾನ್ಸ್, ಇಂದಿರಾಗಾಂಧಿ ಆಸ್ಪತ್ರೆಗೆ ಬಂದು ತಪಾಸಣೆಗೊಳಪಟ್ಟು, ಶೀಘ್ರವಾಗಿ ಚಿಕಿತ್ಸೆಗೆ ದಿನಾಂಕ ನಿಗದಿಯಾಗದ ಹಿನ್ನಲೆಯಲ್ಲಿ ವಿಮ್ಸ್‌ನಲ್ಲಿ ತಪಾಸಣೆಗೊಳಗಾಗಿದ್ದನು. ಎಂಆರ್‌ಐ ಪರೀಕ್ಷೆಯಿಂದ ಅತೀ ವಿರಳ ಖಾಯಿಲೆ ಇರುವುದನ್ನು ಖಚಿತಪಡಿಸಿಕೊಂಡ ಡಾ.ವಿಶ್ವನಾಥ್, ಬಾಲಕನನ್ನು ಮೇ 08 ರಂದು ದಾಖಲು ಮಾಡಿಕೊಂಡು ಪಾಲಕರೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದರು.
ಇದನ್ನೂ ಓದಿ: BSNL Revival: ಬಿಎಸ್ಸೆನ್ನೆಲ್ ಹಳಿಗೆ ತರಲು ಕೇಂದ್ರದಿಂದ 89 ಸಾವಿರ ಕೋಟಿ ರೂ. ಪ್ಯಾಕೇಜ್, ಸಿಗಲಿದೆಯೇ 5ಜಿ?
ವಿರಳ ಶಸ್ತ್ರ ಚಿಕಿತ್ಸೆಯಲ್ಲಿ ಎರಡನೇಯದು
ವೈದ್ಯಕೀಯ ದಾಖಲಾತಿಗಳ ಸಂಗ್ರಹವಾದ ಪಬ್ ಮೆಡ್ (Pub Med) ಪ್ರಕಾರ ಜಗತ್ತಿನಲ್ಲೇ ಅತ್ಯಂತ ವಿರಳ ಚಿಕಿತ್ಸೆಯಲ್ಲಿ ಇದು ಎರಡನೇ ಶಸ್ತ್ರ ಚಿಕಿತ್ಸೆಯಾಗಿದೆ ಎಂದು ತಿಳಿದು ಬಂದಿದೆ. ಈ ಬಾಲಕನಿಗೆ ಟ್ರಾಮಾಕೇರ್ ಸೆಂಟರ್‌ನಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿ, ನಂತರ ನಿರಂತರ ತಪಾಸಣೆ ಔಷದೋಪಚಾರ ನೀಡಲಾಗಿದೆ. ಬಾಲಕನಲ್ಲಿ ಸಹಜ ಚಟುವಟಿಕೆಗಳು ಕಂಡುಬಂದಿದ್ದು, ಯಾವುದೇ ನ್ಯೂನತೆಗಳನ್ನು ಇರುವುದಿಲ್ಲ. ಸ್ವತಂತ್ರವಾಗಿ ಆಹಾರ ಸೇವನೆ, ಚಲನೆ ಮಾಡುತ್ತಿದ್ದಾನೆ. ಇಂತಹ ಅತೀ ವಿರಳ ಶಸ್ತ್ರ ಚಿಕಿತ್ಸೆ ಉಚಿತವಾಗಿ ಕೈಗೊಂಡು, ಬಾಲಕ ಸಹಜತೆಯತ್ತ ಮಾಡುವಂತೆ ಪರಿಶ್ರಮ ಪಟ್ಟ ಡಾ.ವಿಶ್ವನಾಥ ಮತ್ತು ಅವರ ತಂಡ ಹಾಗೂ ವಿಮ್ಸ್ ಗೆ ಬಾಲಕನ ಪೋಷಕರಾದ ನಾಗೇಶ್ ಮತ್ತು ಪಾರ್ವತಿ ಕೃತಜ್ಞತೆ ತಿಳಿಸಿದ್ದಾರೆ.
ತಂಡಕ್ಕೆ ಮೆಚ್ಚುಗೆ
ಶಸ್ತ್ರಚಿಕಿತ್ಸೆಯಲ್ಲಿ ಡಾ. ವಿಶ್ವನಾಥ್ ಅವರೊಂದಿಗೆ ಡಾ. ಬಸವರಾಜ್ ಪಾಟೀಲ್, ಡಾ. ಚಂದ್ರಕುಮಾರ್, ಅರವಳಿಕೆ ತಜ್ಞ ಡಾ. ಶ್ರೀನಿವಾಸುಲು, ಶುಶ್ರೂಷಕಿರಾದ ಸಿಜ್ಜು, ನ್ಯಾನ್ಸಿ ಅವರು ಪಾಲ್ಗೊಂಡಿದ್ದರು.
ವಿಮ್ಸ್‌ನ ಮೆದುಳು ಮತ್ತು ನರರೋಗ ಶಸ್ತ್ರ ಚಿಕಿತ್ಸೆ ತಜ್ಞ (ನ್ಯೂರೋ ಸರ್ಜನ್) ಡಾ. ಎಸ್. ವಿಶ್ವನಾಥ ಅವರು ಮೆದುಳು ಹಾಗೂ ನರರೋಗಗಳಿಗೆ ಸಂಬಂಧಿಸಿದ ಅನೇಕ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಗಳನ್ನು ಕೈಗೊಂಡು ವಿಮ್ಸ್ ಗೆ ಕೀರ್ತಿ ತಂದಿದ್ದಾರೆ.
ಇದನ್ನೂ ಓದಿ: Chaitra Hallikeri: ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಹಳ್ಳಿಕೇರಿ
ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ಕೈಗೊಂಡು ಸಾಧನೆಗೈದ ಡಾ. ವಿಶ್ವನಾಥ್ ಮತ್ತು ತಂಡಕ್ಕೆ ವಿಮ್ಸ್ ನ ನಿರ್ದೇಶಕ ಡಾ. ಗಂಗಾಧರ ಗೌಡ, ಟ್ರಾಮಾಕೇರ್ ಸೆಂಟರ್‌ನ ಅಧೀಕ್ಷಕ ಡಾ. ಶಿವ ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ
Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್ ವಿಡಿಯೊ ಇಲ್ಲಿದೆ
Abhishek Ambareesh Reception: ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವ ಬಿಡಪ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿತ್ರರಂಗದ ಗಣ್ಯರು, ಪ್ರಮುಖ ರಾಜಕೀಯ ನಾಯಕರು ಆಗಮಿಸಿ ದಂಪತಿಗೆ ಶುಭ ಕೋರಿದ್ದಾರೆ.
ಕರ್ನಾಟಕ
ವಿಸ್ತಾರ TOP 10 NEWS: ಬಾಡಿಗೆಯವರಿಗೂ ಫ್ರೀ ಕರೆಂಟ್‌ನಿಂದ, ಅಂತಿಮ ಘಟ್ಟದಲ್ಲಿ ಕುಸ್ತಿ ಕದನದವರೆಗಿನ ಪ್ರಮುಖ ಸುದ್ದಿಗಳಿವು
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
1. Congress Guarantee: ಬಾಡಿಗೆಯವರಿಗೂ ಸಿಗುತ್ತೆ ಫ್ರೀ ಕರೆಂಟ್ ಎಂದ ಸರ್ಕಾರ: ಏನೇನು ದಾಖಲೆ ಬೇಕು? ಇಲ್ಲಿದೆ ವಿವರ
ರಾಜ್ಯ ಸರ್ಕಾರ ನೀಡಲು ಮುಂದಾಗಿರುವ ಮಾಸಿಕ 200 ಯುನಿಟ್ ಉಚಿತ ವಿದ್ಯುತ್ ಯೋಜನೆಯು ಬಾಡಿಗೆ ಮನೆಯವರಿಗೂ ಅನ್ವಯ ಆಗುತ್ತದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ಬಾಡಿಗೆ ಮನೆಯವರು ತಮ್ಮ ಆಧಾರ್ ಸಂಖ್ಯೆ, ಬಾಡಿಗೆ ಕರಾರು ಪತ್ರ, ವೋಟರ್ ಐಡಿಯನ್ನು ಆರ್‌ಆರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕು. ಆಗ ಅವರಿಗೂ ಯೋಜನೆ ಅನ್ವಯ ಆಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Congress Guarantee : ತೆರಿಗೆ ಪಾವತಿಸುವವರ ಪತ್ನಿಗೆ ಗೃಹ ಲಕ್ಷ್ಮಿ ಯೋಜನೆಯ 2 ಸಾವಿರ ರೂ. ಸಿಗೋದಿಲ್ಲ!
5 ಪ್ರಮುಖ ಗ್ಯಾರಂಟಿಗಳಲ್ಲಿ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2000 ರೂಪಾಯಿ ನೀಡುವ ʼಗೃಹಲಕ್ಷ್ಮಿʼ ಯೋಜನೆಗೆ (Congress Guarantee) ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಯೋಜನೆ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ವಿವರವಾದ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದ್ದು, ತೆರಿಗೆ ಪಾವತಿದಾರನ ಪತ್ನಿ ಹೊರತುಪಡಿಸಿ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಯಜಮಾನಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್ ಗಿಮಿಕ್ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!
ಈ ಬಾರಿಯ ಚುನಾವಣೆಯಲ್ಲಿ ಘೋಷಣೆ ಮಾಡಲಾಗಿರುವ ಗ್ಯಾರಂಟಿ (Congress Guarantee) ಯೋಜನೆಗಳು ಚುನಾವಣೆ ಗಿಮಿಕ್ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (N Chaluvarayaswamy) ಅವರು ಹೇಳಿರುವ ವಿಡಿಯೊವೊಂದು ವೈರಲ್ (Video Viral) ಆಗಿದೆ. ಚುನಾವಣೆ ವೇಳೆ ಅಧಿಕಾರವನ್ನು ಹಿಡಿಯುವುದೇ ಬಹುಮುಖ್ಯ ಆಗಿದ್ದರಿಂದ ನಮಗೆ ಇಷ್ಟ ಇದೆಯೋ ಇಲ್ಲವೋ, ಸಿದ್ದರಾಮಯ್ಯ (CM Siddaramaiah) ಅವರಿಗೆ ಇಷ್ಟ ಆಗುತ್ತದೆಯೋ ಇಲ್ಲವೋ ಇಂಥ ಚೀಪ್ ಗಿಮಿಕ್‌ಗಳನ್ನು ಮಾಡಬೇಕಾಗುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಇವರ ಈ ಹೇಳಿಕೆಯು ಸರ್ಕಾರಕ್ಕೆ ಮುಜುಗರವನ್ನು ತಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Caste Census: ಮತ್ತೆ ಜಾತಿ ಹುತ್ತಕ್ಕೆ ಕೈಹಾಕಿದ ಸಿದ್ದರಾಮಯ್ಯ?: ಒಕ್ಕಲಿಗ- ವೀರಶೈವ ಲಿಂಗಾಯತರು ವಿರೋಧಿಸಿದ್ದ ವರದಿ ಸ್ವೀಕಾರ?
ಈ ಹಿಂದೆ ಒಮ್ಮೆ ರಾಜ್ಯದಲ್ಲಿ ವಿವಾದಕ್ಕೀಡಾಗಿ ತಣ್ಣಗಾಗಿದ್ದ ವಿಚಾರವನ್ನು ಮತ್ತೆ ಕೈಗೆತ್ತಿಕೊಳ್ಳಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ತಮ್ಮ ಮೊದಲ ಅವಧಿಯಲ್ಲಿ ನಡೆಸಲಾದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು (ಜಾತಿ ಗಣತಿ) ಸ್ವೀಕರಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ವರದಿಗೆ ರಾಜ್ಯದ ಎರಡು ಪ್ರಬಲ ಜಾತಿಗಳಾದ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ಈ ಹಿಂದೆಯೇ ವಿರೋಧ ವ್ಯಕ್ತಪಡಿಸಿದ್ದವು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!
ರಾಜ್ಯದಲ್ಲಿ ಮುಂಗಾರು (Monsoon Season) ಇನ್ನೂ ವಿಳಂಬ ಆಗುವ ಸೂಚನೆ ಕಂಡುಬಂದಿದೆ. ಆದರೆ, ರಾಜ್ಯದ ಹಲವು ಕಡೆ ಹಿಂಗಾರು ಮಳೆ ಭರ್ಜರಿಯಾಗಿಯೇ ಸುರಿಯುತ್ತಿದೆ. ಅಲ್ಲದೆ, ಈಗ ಬಿಪರ್‌ಜಾಯ್ ಚಂಡಮಾರುತದಿಂದಾಗಿ (Cyclone Biparjoy) ಇನ್ನೂ ಮೂರು ದಿನ (ಜೂನ್ 7, 8, 9) ರಾಜ್ಯದ ಹಲವು ಕಡೆ ಮಳೆಯಾಗಲಿದೆ. ಇನ್ನು ಈ ಬಾರಿ ಕರಾವಳಿ ಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಅಷ್ಟಾಗಿ ಮಳೆ ಆಗದೇ ಇರುವುದು ತೀವ್ರ ನೀರಿನ ಅಭಾವಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಮಂಗಳೂರು ವಿಶ್ವವಿದ್ಯಾಲಯವು (Mangalore University) ತನ್ನ ಕಾಲೇಜಿಗೆ ರಜೆಯನ್ನೇ ಘೋಷಿಸಿದೆ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Weather Report: ಬಿಪರ್‌ಜಾಯ್ ಸೈಕ್ಲೋನ್ ಎಫೆಕ್ಟ್; ರಾಜ್ಯಾದ್ಯಂತ ಇನ್ನೂ 4 ದಿನ ಜಡಿ ಮಳೆ
ಬಿಪರ್‌ಜಾಯ್ ಸೈಕ್ಲೋನ್ (Cyclone Biporjoy) ಎಫೆಕ್ಟ್‌ನಿಂದಾಗಿ ರಾಜ್ಯಾದ್ಯಂತ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ಕರಾವಳಿ ಸೇರಿ ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಮುಂದಿನ 4 ದಿನ ಮಳೆಯ ಅಬ್ಬರ (Weather Report) ಇರಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Wrestlers Protest: ಅನುರಾಗ್ ಠಾಕೂರ್ ಮನೆಗೆ ಭೇಟಿ ನೀಡಿದ ಕುಸ್ತಿಪಟುಗಳು
ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ಭೂಷನ್ ಸಿಂಗ್ ಶರಣ್ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಅವರನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಚರ್ಚೆಗೆ ಆಹ್ವಾನಿಸಿದೆ. ಇದರ ಬೆನ್ನಲ್ಲೇ ಕುಸ್ತಿಪಟುಗಳು ಸಚಿವ ಅನುರಾಗ್ ಠಾಕೂರ್ ಅವರ ನಿವಾಸಕ್ಕೆ ತೆರಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. ಮಹಾರಾಷ್ಟ್ರದಲ್ಲೂ ಟಿಪ್ಪು ವಿವಾದ; ಕೊಲ್ಹಾಪುರದಲ್ಲಿ ಹಿಂದು ಸಂಘಟನೆಗಳ ಪ್ರತಿಭಟನೆ, ಪರಿಸ್ಥಿತಿ ಉದ್ವಿಗ್ನ
ಕರ್ನಾಟಕದಲ್ಲಿ ಮೈಸೂರು ಅರಸ ಟಿಪ್ಪು ಸುಲ್ತಾನ್ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಆಗಾಗ ವಾಗ್ವಾದ, ಆಕ್ರೋಶ, ಟೀಕೆ, ವ್ಯಂಗ್ಯ, ಪ್ರತ್ಯುತ್ತರಗಳು ನಡೆಯುತ್ತಲೇ ಇರುತ್ತವೆ. ಟಿಪ್ಪು ಜಯಂತಿ ವಿಚಾರದಲ್ಲೂ ವಾಗ್ಯುದ್ಧವೇ ನಡೆಯುತ್ತದೆ. ಆದರೆ, ಟಿಪ್ಪು ಸುಲ್ತಾನ್ ವಿವಾದವೀಗ ಮಹಾರಾಷ್ಟ್ರಕ್ಕೂ ಕಾಲಿಟ್ಟಿದೆ. ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇನ್ನು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. WTC Final 2023: ಆಡುವ ಬಳಗದಿಂದ ಅಶ್ವಿನ್ ಕೈ ಬಿಡಲು ಕಾರಣ ಇದಂತೆ
ಆಸ್ಟ್ರೇಲಿಯಾ ವಿರುದ್ಧ ಆರಂಭಗೊಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆರ್. ಅಶ್ವಿನ್ಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಇದೇ ವಿಚಾರವಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ತಂಡ ಮಾಡಿದ ದೊಡ್ಡ ತಪ್ಪು ಇದಾಗಿದೆ ಎಂದು ಹೇಳಿದ್ದಾರೆ. ಆದರೆ ತಂಡದ ನಾಯಕ ರೋಹಿತ್ ಶರ್ಮ ಅವರು ಅಶ್ವಿನ್ ಅವರನ್ನು ಕೈಬಿಟ್ಟ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. The Kerala Story: ʼದಿ ಕೇರಳ ಸ್ಟೋರಿʼ ನೋಡಲು ಸಾಧ್ವಿ ಪ್ರಜ್ಞಾ ಕರೆದೊಯ್ದು ಯುವತಿ ಮುಸ್ಲಿಂ ಲವರ್ ಜತೆ ಪರಾರಿ!
ಭೋಪಾಲ್‌ನ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ತನ್ನ ಮುಸ್ಲಿಂ ಪ್ರಿಯಕರನ ಜತೆ ಪರಾರಿಯಾಗಿದ್ದಾಳೆ. ಆದರೆ ಸ್ವಾರಸ್ಯಕರ ಸಂಗತಿ ಬೇರೊಂದಿದೆ. ಈಕೆಯನ್ನು ಬಿಜೆಪಿಯ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ʼದಿ ಕೇರಳ ಸ್ಟೋರಿʼ (The Kerala Story) ಫಿಲಂ ನೋಡಲು ಕರೆದೊಯ್ದಿದ್ದಳು ಹಾಗೂ ಮುಸ್ಲಿಂ ಬಾಯ್‌ಫ್ರೆಂಡ್‌ನಿಂದ ದೂರವಿರುವಂತೆ ತಾಕೀತು ಮಾಡಿದ್ದಳು ಎಂಬುದೇ ಅದು! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ12 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ14 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ22 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ17 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ24 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಕರ್ನಾಟಕ8 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!
-
ಪ್ರಮುಖ ಸುದ್ದಿ24 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?