ವಿಸ್ತಾರ TOP 10 NEWS | ಮೋದಿ ಸ್ವಾಗತಕ್ಕೆ ಬೆಂಗಳೂರು ರೆಡಿಯಿಂದ T20 ವಿಶ್ವಕಪ್‌ನಿಂದ ಭಾರತ ನಿರ್ಗಮನದವರೆಗೆ ಪ್ರಮುಖ ಸುದ್ದಿಗಳು - Vistara News

T20 ವಿಶ್ವಕಪ್

ವಿಸ್ತಾರ TOP 10 NEWS | ಮೋದಿ ಸ್ವಾಗತಕ್ಕೆ ಬೆಂಗಳೂರು ರೆಡಿಯಿಂದ T20 ವಿಶ್ವಕಪ್‌ನಿಂದ ಭಾರತ ನಿರ್ಗಮನದವರೆಗೆ ಪ್ರಮುಖ ಸುದ್ದಿಗಳು

ವಿಸ್ತಾರ TOP 10 NEWS : ರಾಜ್ಯ, ದೇಶ, ಕ್ರೀಡಾಲೋಕದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳ ಟಾಪ್‌ 10 ಸುದ್ದಿಗುಚ್ಛ ಇದು.

VISTARANEWS.COM


on

top 10 news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರಿಗೆ ಬಂದು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅವರಿಗಾಗಿ ರಸ್ತೆ ರಿಪೇರಿಯಿಂದ ಹಿಡಿದು ಬಿಗಿಭದ್ರತೆವರೆಗೆ ಹಲವು ರೀತಿಯಲ್ಲಿ ಸಿದ್ಧತೆಗಳು ನಡೆದಿದೆ. ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಸಾಂಗವಾಗಿ ನೆರವೇರಿದ ನಡುವೆಯೇ ಸರಕಾರ ಮುಜರಾಯಿ ದೇವಾಲಯಗಳಲ್ಲಿ ಮುದ್ರಾಧಾರಣೆ ಸೇರಿ ಕೆಲವೊಂದು ಆಚರಣೆಗೆ ಕಡಿವಾಣ ಹಾಕಿದೆ. ಮುರುಘಾಶ್ರೀಗಳ ಲೈಂಗಿಕ ಹಗರಣದ ನಡುವೆಯೇ ಮಠದ ಆಡಳಿತಾಧಿಕಾರಿಯಾಗಿದ್ದ ಬಸವರಾಜನ್‌ ಬಂಧನವಾಗಿದೆ. ಇತ್ತ ಇಂಗ್ಲೆಂಡ್‌ ವಿರುದ್ಧ ಟಿ೨೦ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಸೋತು ವಿಶ್ವಕಪ್‌ನಿಂದ ಹೊರನಡೆದದ್ದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಪ್ರಧಾನಿ ಮೋದಿ ಸ್ವಾಗತಕ್ಕೆ ರೆಡಿಯಾಗಿದೆ ಬೆಂಗಳೂರು, ಅನಾವರಣಗೊಳ್ಳಲಿದೆ ಕೆಂಪೇಗೌಡ ಪ್ರತಿಮೆ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ೨ನೇ ಟರ್ಮಿನಲ್‌ ಉದ್ಘಾಟನೆ ಮತ್ತು ಕೆಂಪೇಗೌಡರ ೧೦೮ ಅಡಿ ಎತ್ತರದ ಬೃಹತ್‌ ಪ್ರತಿಮೆಯ ಅನಾವರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆಗಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮೈಸೂರು-ಚೆನ್ನೈ ನಡುವೆ ಓಡಾಡುವ ವಂದೇ ಭಾರತ್‌ ರೈಲಿಗೆ ಹಸಿರುನಿಶಾನೆ ತೋರಿಸಲಿದ್ದಾರೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಬೃಹತ್‌ ಸಮಾವೇಶವೂ ನಡೆಯಲಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ
ಇನ್ನೊಂದು ವರದಿ | ಬೆಂಗಳೂರಿಗೆ ಬರಲಿರುವ ಮೋದಿಗೆ ಸಿದ್ದರಾಮಯ್ಯರ 10 ಪ್ರಶ್ನೆಗಳು ಮತ್ತು ಕೆಲವು ಸಲಹೆಗಳು!

2. ಒಂದೇ ಸರ್ಕಾರಿ ಭೇಟಿಯಲ್ಲಿ 3 ಪ್ರಬಲ ಸಮುದಾಯಗಳನ್ನು ಸೆಳೆಯಲು ಮಾಸ್ಟರ್‌ ಪ್ಲ್ಯಾನ್‌
ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಬರುತ್ತಿದ್ದಾರೆ. ಅವರು ಆಗಮಿಸುವ ಶುಕ್ರವಾರ (ನವೆಂಬರ್‌ ೧೧) ಕನಕದಾಸರ ಜಯಂತಿ ಸಹ ಇರುವುದರಿಂದ ಕುರುಬ ಸಮುದಾಯವನ್ನು ಖುಷಿ ಪಡಿಸಲು ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿಸಲಾಗುತ್ತಿದೆ. ಕನಕದಾಸರ ಪ್ರತಿಮೆ ಎದುರು ವಾಲ್ಮೀಕಿ ಪ್ರತಿಮೆಯೂ ಇರುವುದರಿಂದ ಆ ಪ್ರತಿಮೆಗೂ ಸಹ ಮಾಲಾರ್ಪಣೆ ಮಾಡಲಾಗುತ್ತಿದೆ. ಹೀಗಾಗಿ ಒಂದು ಕಾರ್ಯಕ್ರಮದಲ್ಲಿ ಮೂರು ಪ್ರಬಲ ಸಮುದಾಯಗಳನ್ನು ಸೆಳೆಯುವ ಪ್ಲ್ಯಾನ್‌ ಮಾಡಲಾಗಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

3. ಇನ್ನು ಮುಜರಾಯಿ ದೇವಾಲಯಗಳಲ್ಲಿಲ್ಲ ಮುದ್ರಾಧಾರಣೆ, ಜಯಂತಿ; ಸರ್ಕಾರದ ಆದೇಶಕ್ಕೆ ವ್ಯಾಪಕ ಆಕ್ರೋಶ
ಇನ್ನು ಮುಂದೆ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಾಲಯಗಳಲ್ಲಿ ಮುದ್ರಾಧಾರಣೆ, ಜಯಂತಿ ಆಚರಣೆ ಸೇರಿದಂತೆ ಚಾಲ್ತಿಯಲ್ಲಿರುವ ಪದ್ಧತಿ, ಸಂಪ್ರದಾಯಗಳಿಗೆ ವಿರುದ್ಧ ಆಚರಣೆ ನಡೆಸುವಂತಿಲ್ಲ. ಇಂಥದ್ದೊಂದು ಆದೇಶವನ್ನು ಈಗ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಹೊರಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಗೊಳಪಟ್ಟ ದೇವಾಲಯಗಳಲ್ಲಿ ಹಲವು ಆಚರಣೆಗೆ ತಡೆ ಬೀಳಲಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಯಶಸ್ವಿ, ನಾಳೆ ಕನಕ ಜಯಂತಿಗೆ ಶ್ರೀರಾಮ ಸೇನೆ ರೆಡಿ!
ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಕೊನೆಗೂ ಟಿಪ್ಪು ಜಯಂತಿ ಆಚರಣೆ ಮಾಡಲಾಗಿದೆ. ಶ್ರೀ ರಾಮ ಸೇನೆಯ ತೀವ್ರ ವಿರೋಧದ ನಡುವೆಯೂ ಎಐಎಂಐಎಂ ಪಕ್ಷದ ಮುಖಂಡರು ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದಾರೆ. ಬಿಜೆಪಿ ಆಡಳಿತವಿರುವ ಪಾಲಿಕೆಯಿಂದ ಟಿಪ್ಪು ಜಯಂತಿಗೆ ಅಧಿಕೃತ ಅನುಮತಿ ದೊರೆತಿದ್ದು ಶ್ರೀ ರಾಮ ಸೇನೆಯನ್ನು ಕೆರಳಿಸಿದೆ. ಇದರ ಜತೆಗೆ ಶ್ರೀರಾಮ ಸೇನೆ ವತಿಯಿಂದ ಶುಕ್ರವಾರ ಕನಕ ಜಯಂತಿ ಆಚರಣೆಗೆ ಸಿದ್ಧತೆ ನಡೆದಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಮುರುಘಾ ಶ್ರೀ ಕೇಸ್‌: ಮಾಜಿ ಶಾಸಕ ಎಸ್.ಕೆ. ಬಸವರಾಜನ್‌ ಬಂಧನ; 4 ದಿನ ಕಸ್ಟಡಿಗೆ
ಮುರುಘಾ ಮಠದ ಮುರುಘಾ ಶರಣರ ವಿರುದ್ಧ ಪಿತೂರಿ ನಡೆಸಿದ ಹಾಗೂ ಮಠದ ರಾಜಾಂಗಣದ ಗೋಡೆ ಮೇಲಿನ ಫೋಟೊ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ ಬಸವರಾಜನ್ ಅವರನ್ನು ಬಂಧನವಾಗಿದ್ದು, ೪ ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ವಹಿಸಿ ನ್ಯಾಯಾಲಯ ಆದೇಶಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ

6. Gujarat Election | ಹಾರ್ದಿಕ್ ಪಟೇಲ್, ಕ್ರಿಕೆಟರ್ ಜಡೇಜಾ ಪತ್ನಿಗೆ ಟಿಕೆಟ್, ಬಿಜೆಪಿ ಅಭ್ಯರ್ಥಿಗಳ ಫಸ್ಟ್ ಲಿಸ್ಟ್!
ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕ್ರಿಕೆಟರ್ ರವೀಂದ್ರ ಜಡೇಜಾ ಅವರ ಪತ್ನಿಗೂ ಬಿಜೆಪಿ ಟಿಕೆಟ್ ನೀಡಿದ್ದು ಅವರು ಜಾಮ್ ನಗರ ಉತ್ತರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರವಾಗಿದ್ದ ಹಾರ್ದಿಕ್ ಪಟೇಲ್ ಅವರಿಗೂ ಟಿಕೆಟ್ ನೀಡಲಾಗಿದೆ. ವೀರಾಮಗಂ ಕ್ಷೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

7.WhatsApp Self Chat | ವಾಟ್ಸ್ಆ್ಯಪ್ ಸೆಲ್ಫ್ ಚಾಟ್ ಫೀಚರ್ ಶುರು, ಶೀಘ್ರ ಎಲ್ಲರಿಗೂ ಲಭ್ಯ
ಜನಪ್ರಿಯ ಆ್ಯಪ್ ವಾಟ್ಸ್ಆ್ಯಪ್ ಬಳಕೆದಾರರಿಗೆ ಅನುಕೂಲವಾಗುವ ಫೀಚರ್‌ಗಳನ್ನು ಜಾರಿಗೊಳಿಸುತ್ತಿದೆ. ಈ ಹಿಂದೆ ಘೋಷಣೆ ಮಾಡಿದಂತೆ ವಾಟ್ಸ್ಆ್ಯಪ್ ಸೆಲ್ಫ್ ಚಾಟ್ (WhatsApp Self Chat) ಫೀಚರ್ ಪರಿಚಯಿಸಿದ್ದು, ಸದ್ಯಕ್ಕೆ ಬೀಟಾ ವರ್ಷನ್‌ನಲ್ಲಿ ಮಾತ್ರ ದೊರೆಯುತ್ತಿದೆ. ಪರೀಕ್ಷೆ ಮುಗಿದ ಬಳಿಕ ಸೆಲ್ಫ್ ಚಾಟ್ ಫೀಚರ್ ಎಲ್ಲ ಬಳಕೆದಾರರಿಗೂ ಶೀಘ್ರವೇ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ನಾಲ್ಕೈದು ಫೀಚರ್‌ಗಳನ್ನು ಆ್ಯಡ್ ಮಾಡಿತ್ತು. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

8. PSI Scam | ಬಂಧಿತ ಎಡಿಜಿಪಿ ಅಮೃತ್ ಪಾಲ್, ಡಿವೈಎಸ್‌ಪಿ ಶಾಂತಕುಮಾರ್ ಮನೆ ಮೇಲೆ ಇ.ಡಿ ದಾಳಿ
ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ (PSI Scam) ಪ್ರಮುಖ ಬಂಧಿತ ಆರೋಪಿಗಳಾದ ಎಡಿಜಿಪಿ ಅಮೃತ್ ಪಾಲ್ ಮತ್ತು ಡಿವೈಎಸ್‌ಪಿ ಶಾಂತಕುಮಾರ್ ಮನೆಗಳ ಮೇಲೆ ಬುಧವಾರ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಆರೋಪಿಗಳ ವಿರುದ್ಧ ಆಗಸ್ಟ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೆ ಸಂಬಂಧಪಟ್ಟ 11 ಸ್ಥಳಗಳಲ್ಲಿ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.‌ ಪೂರ್ಣ ವರದಿಗೆ ಕ್ಲಿಕ್‌ ಮಾಡಿ

. ವಿಸ್ತಾರ Money Guide | ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 7.6% ಬಡ್ಡಿ: ಏನು? ಎತ್ತ?
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ನಿವೃತ್ತರಿಗೆ ಅಚ್ಚುಮೆಚ್ಚಿನ ಹೂಡಿಕೆಯ ಆಯ್ಕೆಯಾಗಿದೆ. ಸರ್ಕಾರದ ಈ ಯೋಜನೆ ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದರ ಪ್ರಯೋಜನ ಪಡೆಯುವುದು ಹೇಗೆ? ಇಲ್ಲಿದೆ ವಿವರ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೧೦. ‌ಟಿ೨೦ ವಿಶ್ವಕಪ್‌: ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ ಸೋಲು, ಟೀಮ್‌ ಇಂಡಿಯಾ ಅಭಿಯಾನ ಅಂತ್ಯ
ಟೀಮ್‌ ಇಂಡಿಯಾದ ದುರ್ಬಲ ಬೌಲಿಂಗ್‌ ವಿಭಾಗವನ್ನು ಚಿಂದಿ ಉಡಾಯಿಸಿದ ಇಂಗ್ಲೆಂಡ್‌ ತಂಡ, ಟಿ೨೦ ವಿಶ್ವ ಕಪ್‌ನ ಸೆಮಿ ಫೈನಲ್‌ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಇದರೊಂದಿಗೆ ಭಾರತ ತಂಡದ ವಿಶ್ವ ಕಪ್‌ ಅಭಿಯಾನ ಉಪಾಂತ್ಯಕ್ಕೆ ಕೊನೆಗೊಂಡಿತು. ಭಾನುವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

ಮತ್ತಷ್ಟು ಆಸಕ್ತಿಕರ ಸುದ್ದಿಗಳು

🔴 5G and Cancer | 5G ಮೊಬೈಲ್‌ಗಳಿಂದ ಕ್ಯಾನ್ಸರ್‌ ಬರುತ್ತಾ?, ಅಧ್ಯಯನ ವರದಿಗಳು ಹೇಳುವುದೇನು?
🔴‌ ಒಂದು ಟಗರು, ಹತ್ತು ಹೋರಿ ಕತೆ; ಕ್ಷಮೆಕೋರಿದ ಮುಕುಡಪ್ಪ, ನಾನು ಹೇಳಿರ್ಲಿಲ್ವಾ ಅಂದ್ರು ಸಿ.ಟಿ. ರವಿ
🔴‌ Aadhaar Rules | 10 ವರ್ಷಕ್ಕೊಮ್ಮೆ ಆಧಾರ್‌ ಕಾರ್ಡ್‌ ಪರಿಷ್ಕರಣೆ ಕಡ್ಡಾಯ: ಸರ್ಕಾರದಿಂದ ಅಧಿಸೂಚನೆ
🔴‌ Jio 5G | ಬೆಂಗಳೂರು, ಹೈದರಾಬಾದ್‌ನಲ್ಲಿ ಜಿಯೊ ಟ್ರೂ 5G ಸೇವೆ ಆರಂಭ
🔴‌ ವೀರ್‌ ದಾಸ್‌ ಕಾಮಿಡಿ ಶೋ ನಿಷೇಧಕ್ಕೆ ಆಗ್ರಹಿಸಿ ಹಿಂದು ಸಂಘಟನೆಗಳ ಪ್ರತಿಭಟನೆ, ಲಾಠಿ ಚಾರ್ಜ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

KL Rahul: ಟಿ20 ವಿಶ್ವಕಪ್​ನಲ್ಲಿ ರಾಹುಲ್​ಗೆ ಅವಕಾಶ ಸಿಗದಿರಲು ಕಾರಣ ತಿಳಿಸಿದ ಮಾಜಿ ಆಟಗಾರ

KL Rahul: “ದುರದೃಷ್ಟವಶಾತ್ ರಾಹುಲ್​ ಐಪಿಎಲ್​ನಲ್ಲಿ ಆರಂಭಿಕನಾಗಿ ಆಡಿದ್ದೇ ಅವರಿಗೆ ಮುಳುವಾಯಿತು. ಹೀಗಾಗಿ ಅವರು ಟಿ20 ವಿಶ್ವಕಪ್​ಗೆ ಆಯ್ಕೆಯಾಗಿಲ್ಲ. ಒಂದೊಮ್ಮೆ ಏಕದಿನ ವಿಶ್ವಕಪ್​ನಂತೆ ಐಪಿಎಲ್​ನಲ್ಲಿಯೂ ಮಧ್ಯಮ ಕ್ರಮಾಂಕದಲ್ಲಿ ರಾಹುಲ್​ ಆಡುತ್ತಿದ್ದರೆ ಅವರಿಗೆ ಸ್ಥಾನ ಸಿಗುತ್ತಿತ್ತು” ಎಂದು ಇರ್ಫಾನ್​ ಪಠಾಣ್​ ಹೇಳಿದ್ದಾರೆ.

VISTARANEWS.COM


on

KL Rahul
Koo

ಮುಂಬಯಿ: ಭಾರತದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್(Irfan Pathan) ಭಾರತದ ಟಿ20 ವಿಶ್ವಕಪ್(T20 World Cup) ತಂಡದಿಂದ ಕೆ.ಎಲ್​ ರಾಹುಲ್(KL Rahul) ಅವರನ್ನು ಕೈಬಿಡಲು ಕಾರಣ ಏನೆಂಬುದನ್ನು ವಿವರಿಸಿದ್ದಾರೆ. ಅಹಮದಾಬಾದ್‌ನಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ನಡೆಸಿದ ಸಭೆಯ ಬಳಿಕ 15 ಸದಸ್ಯರ ತಂಡವನ್ನು ಪ್ರಕಟಿಸಲಾಯಿತು. ರಿಷಭ್​ ಪಂತ್​(Rishabh Pant) ಮೊದಲ ಆಯ್ಕೆಯ ಕೀಪರ್​ ಆಗಿದ್ದರೂ ಕೂಡ ರಾಹುಲ್​ ಅವರಿಗೆ ಅವಕಾಶ ಸಿಗಬಹುದೆಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಆದರೆ ತಂಡ ಪ್ರಕಟಗೊಂಡಾಗ ಅವರ ಬದಲು ಸಂಜು ಸ್ಯಾಮ್ಸನ್​ ಹೆಸರಿತ್ತು. ಇದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

“ದುರದೃಷ್ಟವಶಾತ್ ರಾಹುಲ್​ ಐಪಿಎಲ್​ನಲ್ಲಿ ಆರಂಭಿಕನಾಗಿ ಆಡಿದ್ದೇ ಅವರಿಗೆ ಮುಳುವಾಯಿತು. ಹೀಗಾಗಿ ಅವರು ಟಿ20 ವಿಶ್ವಕಪ್​ಗೆ ಆಯ್ಕೆಯಾಗಿಲ್ಲ. ಒಂದೊಮ್ಮೆ ಏಕದಿನ ವಿಶ್ವಕಪ್​ನಂತೆ ಐಪಿಎಲ್​ನಲ್ಲಿಯೂ ಮಧ್ಯಮ ಕ್ರಮಾಂಕದಲ್ಲಿ ರಾಹುಲ್​ ಆಡುತ್ತಿದ್ದರೆ ಅವರಿಗೆ ಸ್ಥಾನ ಸಿಗುತ್ತಿತ್ತು” ಎಂದು ಇರ್ಫಾನ್​ ಪಠಾಣ್​ ಹೇಳಿದ್ದಾರೆ.

ಆರಂಭಿಕ ಸ್ಥಾನಕ್ಕೆ ರೋಹಿತ್​ ಶರ್ಮ ಜತೆ ಶುಭಮನ್​ ಗಿಲ್​ ಮತ್ತು ಜೈಸ್ವಾಲ್​ ರೇಸ್​ನಲ್ಲಿದ್ದರು. ಹೀಗಾಗಿ ರಾಹುಲ್​ಗೆ ಈ ಸ್ಥಾನ ಸಿಗುವು ಅನುಮಾನ ಎನ್ನುವುದು ಮೊದಲೇ ತಿಳಿದಿತ್ತು. ಬಿಸಿಸಿಐ ಮತ್ತು ಆಯ್ಕೆ ಸಮಿತಿ ರಿಷಭ್​ ಪಂತ್​ ಫಿಟ್​ ಆಗದಿದ್ದರೆ ಅವರ ಸ್ಥಾನದಲ್ಲಿ ಕೀಪಿಂಗ್​ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಆಡುವ ಆಟಗಾರ ಹುಡುಕಾಟದಲ್ಲಿತ್ತು. ರಾಹುಲ್​ ಐಪಿಎಲ್​ನಲ್ಲಿ ಆರಂಭಿಕನಾಗಿ ಆಡಿದರೆ, ಸಂಜು ವಿಕೆಟ್​ ಕೀಪಿಂಗ್​ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸುತ್ತಿದ್ದಾರೆ. ಇದೇ ಕಾರಣ ಸಂಜುಗೆ(Sanju Samson) ಅವಕಾಶ ಸಿಕ್ಕಿತು ಎಂದು ಇರ್ಫಾನ್​ ವಿವರಿಸಿದರು.

ಇದನ್ನೂ ಓದಿ IPL 2024: ನಾಯಕ ಹಾರ್ದಿಕ್​ ಪಾಂಡ್ಯ ಸೇರಿ ಮುಂಬೈ ತಂಡದ ಆಟಗಾರರಿಗೆ ಬಿತ್ತು ಭಾರೀ ದಂಡ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

Continue Reading

ಕ್ರೀಡೆ

T20 World Cup 2024: ಡ್ರಾಪ್ -ಇನ್ ಪಿಚ್ ಅಳವಡಿಕೆ ಕಾರ್ಯ ಆರಂಭಿಸಿದ ಐಸಿಸಿ

T20 World Cup 2024: ಟಿ20 ವಿಶ್ವಕಪ್​ಗಾಗಿಯೇ ನ್ಯೂಯಾರ್ಕ್​ನಲ್ಲಿ ತಾತ್ಕಾಲಿಕವಾಗಿ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂ(Nassau County International Cricket Stadium) ನಿರ್ಮಾಣ ಮಾಡಲಾಗಿದೆ. 34 ಸಾವಿರ ಪ್ರೇಕ್ಷಕರು ಕೂರುವಷ್ಟು ಸಾಮರ್ಥ್ಯದ ಸ್ಟೇಡಿಯಂ ಇದಾಗಿದೆ.

VISTARANEWS.COM


on

T20 World Cup 2024
Koo

ನ್ಯೂಯಾರ್ಕ್: ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಟೂರ್ನಿಗೆ(T20 World Cup 2024) ಇನ್ನು ಕೆಲವೇ ಇಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ವಿಶ್ವಕಪ್​ ಪಂದ್ಯಾವಳಿಗಳು ಜೂನ್​ 1ರಿಂದ 29ರ ತನಕ ಸಾಗಲಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ದೇಶಗಳು ಬಲಿಷ್ಠ ತಂಡವನ್ನು ಕೂಡ ಪ್ರಕಟಿಸುತ್ತಿವೆ. ಇದೇ ಮೊದಲ ಬಾರಿಗೆ ಅಮೆರಿಕ ಐಸಿಸಿ ಪಂದ್ಯಾವಳಿ ಆತಿಥ್ಯ ವಹಿಸಿಕೊಂಡಿದೆ. ಸುಸಜ್ಜಿತ ಪಿಚ್ ಇಲ್ಲದ ಕಾರಣ ಆಸ್ಟ್ರೇಲಿಯಾದಿಂದ ತರಿಸಿದ ಡ್ರಾಪ್ ಇನ್ ಪಿಚ್‌ಗಳನ್ನು(Drop-In Pitches) ಅಳವಡಿಸಲಾಗುತ್ತಿದೆ ಎಂದು ಐಸಿಸಿ ಬುಧವಾರ ತಿಳಿಸಿದೆ.

“ಟಿ20 ವಿಶ್ವಕಪ್‌ಗಾಗಿ ಸಿದ್ಧಪಡಿಸಲಾದ ಡ್ರಾಪ್-ಇನ್ ಪಿಚ್‌ಗಳನ್ನು ಫ್ಲೋರಿಡಾದಿಂದ ನ್ಯೂಯಾರ್ಕ್‌ಗೆ ಸೆಮಿ ಟ್ರೈಲರ್ ಟ್ರಕ್‌ಗಳಲ್ಲಿ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂಗೆ ತರಲಾಗಿದ್ದು, ಇದರ ಅಳವಡಿಕೆಯ ಕಾರ್ಯ ಇನ್ನೆರಡು ದಿನಗಳಲ್ಲಿ ಆರಂಭಗೊಳ್ಳಲಿದೆ’ ಎಂದು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಬುಧವಾರ ತಿಳಿಸಿದೆ. ಡ್ರಾಪ್-ಇನ್ ಪಿಚ್​ ಫುಟ್‌ಬಾಲ್, ರಗ್ಬಿ ಮತ್ತು ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಅನುವು ಮಾಡಿಕೊಡುತ್ತದೆ.

ನಸ್ಸೌ ಕ್ರೀಡಾಂಗಣದಲ್ಲಿ ನಾಲ್ಕು ಪಿಚ್‌ಗಳನ್ನು ಸ್ಥಾಪಿಸಲಾಗುವುದು, ನೆರೆಯ ಅಭ್ಯಾಸ ಸೌಲಭ್ಯಗಳಿಗಾಗಿ ಹೆಚ್ಚುವರಿ ಆರು ಪಿಚ್​ ಮಾಡಲಾಗುವುದು ಎಂದು ಐಸಿಸಿ ತಿಳಿಸಿದೆ. ಟಿ20 ವಿಶ್ವಕಪ್​ಗಾಗಿಯೇ ನ್ಯೂಯಾರ್ಕ್​ನಲ್ಲಿ ತಾತ್ಕಾಲಿಕವಾಗಿ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂ(Nassau County International Cricket Stadium) ನಿರ್ಮಾಣ ಮಾಡಲಾಗಿದೆ. ಬಹುತೇಕ ಇದರ ಕಾಮಗಾರಿ ಮುಕ್ತಾಯ ಕಂಡಿದೆ. ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಿನ ಹೈ-ವೋಲ್ಟೇಜ್ ಘರ್ಷಣೆ ಸೇರಿದಂತೆ ಭಾರತದ ಎಲ್ಲಾ ಗುಂಪು-ಹಂತದ ಪಂದ್ಯಗಳಿಗೆ ಈ ಕ್ರೀಡಾಂಗಣವು ಅಣಿಯಾಗಿದೆ. ಅಚ್ಚರಿ ಎಂದರೆ ಈ ಸ್ಟೇಡಿಯಂ ಅನ್ನು ನಿರ್ಮಾಣ ಮಾಡಿದ್ದೇ ಭಾರತ ಮತ್ತು ಪಾಕಿಸ್ತಾನ ಎದುರಿನ ಪಂದ್ಯಕ್ಕಾಗಿ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಅನುಭವಿ ಸ್ಮಿತ್​ಗೆ ಅವಕಾಶವಿಲ್ಲ

34 ಸಾವಿರ ಪ್ರೇಕ್ಷಕರು ಕೂರುವಷ್ಟು ಸಾಮರ್ಥ್ಯದ ಸ್ಟೇಡಿಯಂ ಇದಾಗಿದ್ದು. ಭಾರತ-ಪಾಕ್​ ಪಂದ್ಯಕ್ಕಾಗಿಯೇ ಇದನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಪಂದ್ಯದ ನಂತರ ಇದನ್ನು ಕೆಡವಲಾಗುತ್ತದೆ ಎಂದು ತಿಳಿಸಲಾಗಿದೆ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ವಿಶ್ವಕಪ್ ಟೂರ್ನಿಗೆ ಅಮೆರಿಕದ ಮೂರು ಸ್ಟೇಡಿಯಂಗಳು ಆತಿಥ್ಯ ವಹಿಸಿವೆ. ಇಲ್ಲಿ 16 ಪಂದ್ಯಗಳು ನಡೆಯಲಿದೆ. ಈ ಮೈದಾನಕ್ಕೆ ಆಸ್ಟ್ರೇಲಿಯಾದಿಂದ ತರಿಸಲಾದ ಡ್ರಾಪ್ ಇನ್ ಪಿಚ್ ಬಳಸಗಾಗುತ್ತದೆ. ಪಿಚ್ ಸಂಪೂರ್ಣವಾಗಿ ಅಡಿಲೇಡ್‌ನಲ್ಲಿ ತಯಾರಿಸಲಾಗಿದ್ದು, ಅದನ್ನು ಹಡಗಿನಲ್ಲೇ 22,500 ಕಿಲೋಮೀಟರ್ ದೂರದ ಫ್ಲೋರಿಡಾ ಮೂಲಕ ನ್ಯೂಯಾರ್ಕ್‌ಗೆ ತರಲಾಗಿದೆ. ಅಮೆರಿಕದ ಈ ಮೂರು ಕ್ರೀಡಾಂಗಣಗಳಲ್ಲಿ 16 ಪಂದ್ಯಗಳು ನಡೆಯಲಿದೆ. ಉಳಿದ 39 ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

Continue Reading

ಕ್ರೀಡೆ

T20 World Cup: ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆದ ಚಹಲ್​ಗೆ ಪತ್ನಿಯಿಂದ ವಿಶೇಷ ಹಾರೈಕೆ

T20 World Cup: ಯಜುವೇಂದ್ರ ಚಹಲ್​ ಮತ್ತು ಧನಶ್ರೀ ವರ್ಮಾ ಮಧ್ಯೆ ಎಲ್ಲವೂ ಸರಿಯಿಲ್ಲ. ಶೀಘ್ರದಲ್ಲೇ ಈ ಜೋಡಿ ದೂರವಾಗಲಿದ್ದಾರೆ ಎಂದು ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ ಈ ಜೋಡಿ ಮಾತ್ರ ಈ ಮಾತಿಗೆ ಕ್ಯಾರೆ ಎನ್ನದೆ ನಮ್ಮ ಸಂಸಾರದ ಮಧ್ಯೆ ಯಾವುದೇ ಬಿರುಕು ಮೂಡಿಲ್ಲ ಎಂದು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ.

VISTARANEWS.COM


on

T20 World Cup
Koo

ಮುಂಬಯಿ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ಜೂನ್​ 1ರಿಂದ 29ರ ತನಕ ನಡೆಯುವ ಐಸಿಸಿ ಪುರುಷರ ಟಿ20 ವಿಶ್ವಕಪ್​ಗೆ(T20 World Cup) ಬಿಸಿಸಿಐ ಮಂಗಳವಾರ ಭಾರತ ತಂಡವನ್ನು ಪ್ರಕಟಿಸಿತ್ತು. ಈ ತಂಡದಲ್ಲಿ ಸ್ಪಿನ್ನರ್​ ಯಜುವೇಂದ್ರ ಚಹಲ್(Yuzvendra Chahal)​ ಕೂಡ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಖುಷಿಯಲ್ಲಿ ಚಹಲ್​ ಪತ್ನಿ ಧನಶ್ರೀ ವರ್ಮಾ(Dhanashree Verma) ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ಪತಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ‘ಕಮ್​ ಆನ್ ಯುಜಿ​… ಹಿ ಈಸ್ ಬ್ಯಾಕ್ ಎಂದು ಬರೆದುಕೊಂಡಿದ್ದಾರೆ.

ಯಜುವೇಂದ್ರ ಚಹಲ್​ ಮತ್ತು ಧನಶ್ರೀ ವರ್ಮಾ ಮಧ್ಯೆ ಎಲ್ಲವೂ ಸರಿಯಿಲ್ಲ. ಶೀಘ್ರದಲ್ಲೇ ಈ ಜೋಡಿ ದೂರವಾಗಲಿದ್ದಾರೆ ಎಂದು ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ ಈ ಜೋಡಿ ಮಾತ್ರ ಈ ಮಾತಿಗೆ ಕ್ಯಾರೆ ಎನ್ನದೆ ನಮ್ಮ ಸಂಸಾರದ ಮಧ್ಯೆ ಯಾವುದೇ ಬಿರುಕು ಮೂಡಿಲ್ಲ ಎಂದು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಇಬ್ಬರೂ ಕೂಡ ಹಲವು ಬಾರಿ ವಿದೇಶ ಪ್ರವಾಸದಲ್ಲಿ ಜಾಲಿ ಮೂಡ್​ನಲ್ಲಿರುವ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.


ಇತ್ತೀಚೆಗೆ 150ನೇ ಐಪಿಎಲ್​ ಪಂದ್ಯವನ್ನಾಡಿದ ಚಹಲ್​ಗೆ ಪತ್ನಿ ಭಾವುಕ ವಿಡಿಯೊ ಸಂದೇಶದ ಮೂಲಕ ಹಾರೈಸಿದ್ದರು. “ಹೇ ಯುಜಿ, ನಿಮ್ಮ 150ನೇ ಐಪಿಎಲ್ ಪಂದ್ಯಕ್ಕೆ ಅಭಿನಂದನೆಗಳು. ನಿವು ಈ ಹಿಂದೆ ಆಡಿದ ತಂಡಕ್ಕೆ ಮತ್ತು ಈಗ ಆಡುತ್ತಿರುವ ರಾಜಸ್ಥಾನ್ ರಾಯಲ್ಸ್‌ಗೆ ನೀವು ಅಪಾರ ಕೊಡುಗೆ ನೀಡಿದ್ದೀರಿ. ನಿಮ್ಮ ಬಗ್ಗೆ ನನಗೆ ಯಾವತ್ತೂ ಹೆಮ್ಮೆ ಇದೆ. ನೀವು ನಿಮ್ಮ ಆಟವನ್ನು ಹೇಗೆ ಆಡುತ್ತೀರಿ ಮತ್ತು ಪ್ರತಿ ಬಾರಿ ನೀವು ಕಮ್​ಬ್ಯಾಕ್​ ಮಾಡುವ ರೀತಿ ನಿಜಕ್ಕೂ ಮೆಚ್ಚಲೇ ಬೇಕು. ಯಾವುದೇ ಪಂದ್ಯ ಒತ್ತಡದಲ್ಲಿದ್ದಾಗಲೆಲ್ಲಾ ವಿಕೆಟ್​ ತೆಗೆಯಬಲ್ಲ ಬೌಲರ್​ ನೀವಾಗಿದ್ದೀರಿ. ನಾನು ನಿಮ್ಮ ದೊಡ್ಡ ಚೀರ್‌ಲೀಡರ್ ಮತ್ತು ನಾನು ಯಾವಾಗಲೂ 100 ಪ್ರತಿಶತದಷ್ಟು ನಿಮ್ಮನ್ನು ಬೆಂಬಲಿಸುತ್ತೇನೆ. ನಿಮ್ಮ 150 ನೇ ಐಪಿಎಲ್ ಪಂದ್ಯವನ್ನು ಆನಂದಿಸಿ” ಎಂದು ಶುಭ ಹಾರೈಸಿದ್ದರು. ವಿಡಿಯೊವನ್ನು ರಾಜಸ್ಥಾನ್​ ರಾಯಲ್ಸ್(Rajasthan Royals)​ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡಿತ್ತು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಅನುಭವಿ ಸ್ಮಿತ್​ಗೆ ಅವಕಾಶವಿಲ್ಲ

ಏಷ್ಯಾ ಕಪ್​ ಮತ್ತು ಏಕದಿನ ವಿಶ್ವಕಪ್​ನಲ್ಲಿ ಅವಕಾಶ ಸಿಗದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಐಪಿಎಲ್​ ಪ್ರದರ್ಶನ ನೋಡಿ ಟಿ20ಯಲ್ಲಿ ಅವಕಾಶ ನೀಡಲಾಗಿದೆ. ಚಹಲ್​ ಇದುವರೆಗೆ ಭಾರತ ಪರ 72 ಏಕದಿನ ಪಂದ್ಯಗಳಿಂದ 121 ವಿಕೆಟ್​, 80 ಟಿ20 ಆಡಿ 96 ವಿಕೆಟ್​ ಕಡೆವಿದ್ದಾರೆ. ಇದುವರೆಗೂ ಟೆಸ್ಟ್​ ಕ್ರಿಕೆಟ್​ ಆಡಿಲ್ಲ.

ಟಿ20 ವಿಶ್ವಕಪ್​ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಅನುಭವಿ ಸ್ಮಿತ್​ಗೆ ಅವಕಾಶವಿಲ್ಲ

T20 World Cup 2024: ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ಡೇವಿಡ್ ವಾರ್ನರ್, ಟಿಮ್‌ ಡೇವಿಡ್ ಅವರನ್ನು ಬ್ಯಾಟಿಂಗ್​ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ. ಗ್ಲೆನ್​ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೊಯಿನಿಸ್, ಕ್ಯಾಮರೂನ್ ಗ್ರೀನ್ ತಂಡದ ಸ್ಟಾರ್​ ಆಲ್​ರೌಂಡರ್​ಗಳಾಗಿದ್ದಾರೆ.

VISTARANEWS.COM


on

australia t20 world cup
Koo

ಸಿಡ್ನಿ: ಕ್ರಿಕೆಟ್​ ಆಸ್ಟ್ರೇಲಿಯಾ ಇದೇ ಜೂನ್​ನಲ್ಲಿ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್​ಗೆ(T20 World Cup 2024) ತನ್ನ 15 ಸದಸ್ಯರ ತಂಡವನ್ನು(T20 World Cup Australia squad) ಬುಧವಾರ ಪ್ರಕಟಿಸಿದೆ. ಆದರೆ, ಅನುಭವಿ ಬ್ಯಾಟರ್ ಸ್ಟೀವನ್​ ಸ್ಮಿತ್(Steve Smith) ಮತ್ತು ಈ ಬಾರಿಯ ಐಪಿಎಲ್​ನಲ್ಲಿ ಡೆಲ್ಲಿ ತಂಡದ ಪರ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ಸಂಚಲನ ಸೃಷ್ಟಿಸಿದ್ದ ಯುವ ಆಟಗಾರ ಜೇಕ್ ಫ್ರೇಸರ್-ಮೆಕ್‌ಗುರ್ಕ್​ಗೆ(Jake Fraser-McGurk) ಕೊಕ್​ ನೀಡಲಾಗಿದೆ. ಕಳೆದ ಒಂದು ವರ್ಷಗಳಿಂದ ಆಸ್ಟ್ರೇಲಿಯಾ ಟಿ20 ತಂಡವನ್ನು ಹಂಗಾಮಿಯಾಗಿ ಮುನ್ನಡೆಸುತ್ತಿದ್ದ ಮಿಚೆಲ್​ ಮಾರ್ಷ್​ ತಂಡದ ನಾಯಕನಾಗಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ರಿಕಿ ಪಾಂಟಿಂಗ್​, ಗಿಲ್​ಕ್ರಿಸ್ಟ್​, ಮೈಕಲ್​ ಹಸ್ಸಿ, ಮ್ಯಾಥ್ಯೂ ಹೇಡನ್​, ಮೈಕಲ್​ ಕ್ಲಾರ್ಕ್​, ಮೆಗ್ರಾತ್​ ಮತ್ತು ದಿವಂಗತ ಆ್ಯಂಡ್ರ್ಯೂ ಸೈಮಂಡ್ಸ್‌ ಅವರ ಮಕ್ಕಳಿಬ್ಬರು ಆಟಗಾರರ ಕ್ಯಾಪ್​ ಸಂಖ್ಯೆಯನ್ನು ಹೇಳುವ ಮೂಲಕ ಟಿ20ಗೆ ತಂಡವನ್ನು ಪ್ರಕಟಿಸಿದರು. ಇದಕ್ಕೂ ಮುನ್ನ ಸೋಮವಾರ ನ್ಯೂಜಿಲ್ಯಾಂಡ್ ತಂಡವನ್ನು​ ಇಬ್ಬರು ಮಕ್ಕಳು ಸುದ್ದಿಗೋಷ್ಠಿ ನಡೆಸಿ ಟಿ20ಗೆ ತಂಡ ಪ್ರಕಟಿಸಿ ಎಲ್ಲರ ಗಮನಸೆಳೆದಿದ್ದರು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಕನ್ನಡಿಗ ರಾಹುಲ್​ಗೆ ಕೊಕ್​

ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ಡೇವಿಡ್ ವಾರ್ನರ್, ಟಿಮ್‌ ಡೇವಿಡ್ ಅವರನ್ನು ಬ್ಯಾಟಿಂಗ್​ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ. ಗ್ಲೆನ್​ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೊಯಿನಿಸ್, ಕ್ಯಾಮರೂನ್ ಗ್ರೀನ್ ತಂಡದ ಸ್ಟಾರ್​ ಆಲ್​ರೌಂಡರ್​ಗಳಾಗಿದ್ದಾರೆ. ಸ್ಪಿನ್ಸ್‌ ಬೌಲರ್​ಗಳಾಗಿ ಆ್ಯಡಂ ಝಂಪಾ ಮತ್ತು ಆ್ಯಶ್ಟನ್​ ಅಗರ್ ಸ್ಥಾನ ಪಡೆದಿದ್ದಾರೆ. ವೇಗಿಗಳಾಗಿ ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್ ಅವರನ್ನು ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯವನ್ನು ಜೂನ್​ 3ರಂದು ಉಗಾಂಡ ವಿರುದ್ಧ ಆಡಲಿದೆ.

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿತ್ತು. ಹೀಗಾಗಿ ಅಂತಿಮ ದಿನದಂದೆ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿತು. ಏಪ್ರಿಲ್​ 30ರಂದು ಹಾಲಿ ಚಾಂಪಿಯನ್​ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಭಾರತ ತನ್ನ ತಂಡವನ್ನು ಪ್ರಕಟಿಸಿತ್ತು. ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಆ್ಯಶ್ಟನ್​ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ.

Continue Reading
Advertisement
Road Accident in anekal
ಬೆಂಗಳೂರು ಗ್ರಾಮಾಂತರ4 mins ago

Road Accident : ಚಲಿಸುತ್ತಿರುವಾಗಲೇ ಬಸ್‌ನಿಂದ ಕಳಚಿಕೊಂಡ ಚಕ್ರಗಳು; ಗಲಿಬಿಲಿಗೊಂಡ ಪ್ರಯಾಣಿಕರು

Puttakkana Makkalu Serial puttakka daughter Sahana left home
ಕಿರುತೆರೆ29 mins ago

Puttakkana Makkalu Serial: ಅವ್ವನಂತೆ ಯಾರ ಹಂಗಿಲ್ಲದೆ ಬದುಕಲು ಮನೆ ಬಿಟ್ಟು ಹೊರಟೇ ಬಿಟ್ಟಳು ಸಹನಾ!

Mosquito controle
ಲೈಫ್‌ಸ್ಟೈಲ್38 mins ago

Mosquito control: ಸೊಳ್ಳೆ ಕಾಟಕ್ಕೆ ಬೇಸತ್ತಿದ್ದೀರಾ? ಹಾಗಿದ್ರೆ ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ!

Health Plan
ಮನಿ-ಗೈಡ್39 mins ago

Money Guide: ಕಾರ್ಪೊರೇಟ್- ವೈಯಕ್ತಿಕ ಆರೋಗ್ಯ ವಿಮೆಯ ನಡುವಿನ ವ್ಯತ್ಯಾಸ ತಿಳಿದಿರಲಿ

New Food Rules
ಪ್ರಮುಖ ಸುದ್ದಿ46 mins ago

New Food Rules: ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಪಾಕ್‌ ಹೈರಾಣ-ಹೊಸ ಭಕ್ಷ್ಯ ನೀತಿ ಜಾರಿ

MS Dhoni
ಕ್ರೀಡೆ51 mins ago

MS Dhoni: ರನ್​ ಓಡದೆ ಸ್ವಾರ್ಥ ತೋರಿದ ಧೋನಿ; ನೆಟ್ಟಿಗರಿಂದ ಭಾರೀ ಟೀಕೆ

Google Layoff
ವಿದೇಶ53 mins ago

Google Layoff: ಮತ್ತಷ್ಟು ಉದ್ಯೋಗ ಕಡಿತಗೊಳಿಸಿದ ಗೂಗಲ್‌; ಕಾರಣವೇನು?

Tobacco use
ಆರೋಗ್ಯ54 mins ago

Tobacco Use: ತಂಬಾಕು ಸೇವನೆ; ವಿಶ್ವದಲ್ಲೇ ಭಾರತಕ್ಕೆ ಎರಡನೇ ಸ್ಥಾನ

Jammu Tour
ಪ್ರವಾಸ1 hour ago

Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

Uma Ramanan dies in Chennai
ಕಾಲಿವುಡ್1 hour ago

Uma Ramanan: ಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್ ಇನ್ನಿಲ್ಲ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌