World Summit | ಕ್ರಿಕೆಟ್‌ ಹೊರತು ಬೇರೆ ಕ್ರೀಡೆಗಳಿಗೆ ವೀಕ್ಷಕರ ಸೆಳೆಯುವ ಕೆಲಸವಾಗಲಿ: ಕಿರಣ್‌ ರಿಜಿಜು - Vistara News

ಕರ್ನಾಟಕ

World Summit | ಕ್ರಿಕೆಟ್‌ ಹೊರತು ಬೇರೆ ಕ್ರೀಡೆಗಳಿಗೆ ವೀಕ್ಷಕರ ಸೆಳೆಯುವ ಕೆಲಸವಾಗಲಿ: ಕಿರಣ್‌ ರಿಜಿಜು

World Summit | ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹಾಗೂ ವರ್ಲ್ಡ್ ಫೋರಂ ಫಾರ್ ಎಥಿಕ್ಸ್ ಇನ್ ಬಿಸ್ನೆಸ್ ವತಿಯಿಂದ 6ನೇ ವರ್ಲ್ಡ್ ಸಮ್ಮಿಟ್ ಫಾರ್ ಎಥಿಕ್ಸ್ ಆ್ಯಂಡ್ ಲೀಡರ್‌ಶಿಪ್‌ ಇನ್ ಸ್ಪೋರ್ಟ್ಸ್‌ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಎರಡು ದಿನದ ಈ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ಸಿಕ್ಕಿದೆ.

VISTARANEWS.COM


on

art of living sports 2
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪ್ರೋತ್ಸಾಹಿಸಲಾಗುತ್ತಿದ್ದು, ಕ್ರಿಕೆಟ್‌ ಹೊರತಾಗಿಯೂ ಬೇರೆ ಕ್ರೀಡೆಗಳಿಗೆ ವೀಕ್ಷಕರನ್ನು ಸೆಳೆಯುವಂತಹ ವಾತಾವರಣವನ್ನು ಸೃಷ್ಟಿಸಬೇಕಾಗಿದೆ. ಕ್ರೀಡೆಯ ಬಗ್ಗೆ ಒಲವು ಹೊಂದುವಂತೆ ಮಾಡುವುದೂ ಅಷ್ಟೇ ಮುಖ್ಯ. ಈ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಕಾನೂನು ಹಾಗೂ ನ್ಯಾಯ ಇಲಾಖೆ ಸಚಿವ ಕಿರಣ್ ರಿಜಿಜು ಹೇಳಿದರು.

ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹಾಗೂ ವರ್ಲ್ಡ್ ಫೋರಂ ಫಾರ್ ಎಥಿಕ್ಸ್ ಇನ್ ಬಿಸ್ನೆಸ್ ವತಿಯಿಂದ ಗುರುವಾರ ಮತ್ತು ಶುಕ್ರವಾರ ಆಯೋಜಿಸಿದ್ದ 6ನೇ ವರ್ಲ್ಡ್ ಸಮ್ಮಿಟ್ ಫಾರ್ ಎಥಿಕ್ಸ್ ಆ್ಯಂಡ್ ಲೀಡರ್‌ಶಿಪ್‌ ಇನ್ ಸ್ಪೋರ್ಟ್ಸ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ದೇಶವು ಕ್ರೀಡಾ ಪರಂಪರೆಯನ್ನು ಹೊಂದಿದೆ,” ಎಂದು ಹೇಳಿದರು.

World Summit

ಆರ್ಟ್‌ ಆಫ್‌ ಲಿವಿಂಗ್‌ ಮುಖ್ಯಸ್ಥ ಶ್ರೀ ರವಿಶಂಕರ್ ಗುರೂಜಿ, ಕ್ರೀಡೆಗಳು ಜನರನ್ನು ಒಗ್ಗೂಡಿಸುವ ಒಂದು ಮಾಧ್ಯಮ. ಆದರೆ, ಕ್ರೀಡೆಗಳನ್ನು ಯುದ್ಧದ ಮಾದರಿಯಲ್ಲಿ ನೋಡಲಾಗುತ್ತದೆ. ಕ್ರೀಡಾಪಟುಗಳು ಜವಾಬ್ದಾರಿ ಪ್ರದರ್ಶನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ | Team India | ಚಂದದ ಕಾರನ್ನು ಶೆಡ್‌ನಲ್ಲಿಡಲಾಗಿದೆ; ಟೀಮ್‌ ಇಂಡಿಯಾ ಬಗ್ಗೆ ಬ್ರೆಟ್‌ ಲೀ ಮಾತಿನ ಹುರುಳೇನು?

ಕ್ರೀಡೆಯಲ್ಲಿ ಎಫ್‌ಐಆರ್‌ ಮುಖ್ಯ- ಪಂಕಜ್‌ ಅಡ್ವಾಣಿ
ಬಿಲಿಯರ್ಡ್ಸ್‌ ಹಾಗೂ ಸ್ನೂಕರ್‌ ಕ್ರೀಡಾಪಟು ಪಂಕಜ್ ಅಡ್ವಾಣಿ ಮಾತನಾಡಿ, ಕ್ರೀಡಾಜಗತ್ತಿನಲ್ಲಿ ಎಫ್‌ಐಆರ್ ಬಹಳ ಮುಖ್ಯ ಪಾತ್ರವಹಿಸುತ್ತದೆ. ಅಂದರೆ, ಫೇರ್‌ ಪ್ಲೇ (ನ್ಯಾಯಸಮ್ಮತ ಆಟ), ಇಂಟಿಗ್ರಿಟಿ (ಸಮಗ್ರತೆ) ಮತ್ತು ರೆಸ್ಪೆಕ್ಟ್ (ಗೌರವ) ಬಹಳ ಮುಖ್ಯ ಪಾತ್ರವಹಿಸುತ್ತದೆ. ಇಲ್ಲಿ ನಾವು ನಮ್ಮವರಿಗಷ್ಟೇ ಅಲ್ಲ, ಎದುರಾಳಿ ತಂಡದ ವೀಕ್ಷಕರಿಗೂ ಸೈ ಎನ್ನಿಸುವಂತೆ ಆಡಬೇಕು. ಆ ನಿಟ್ಟಿನಲ್ಲಿ ನಮ್ಮ ಆಟ ಇರಬೇಕು ಎಂದು ಹೇಳಿದರು.

World Summit

ಚರ್ಚಿತ ವಿಷಯಗಳು
“ಯುನೈಟೆಡ್ ಫಾರ್ ಎಥಿಕ್ಸ್ ಇನ್ ಸ್ಪೋರ್ಟ್ಸ್” ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು, ಕ್ರೀಡಾಪಟುಗಳು ಚರ್ಚೆ ನಡೆಸಿದರು. ಅಲ್ಲದೆ, ಕ್ರೀಡೆಗಳಲ್ಲಿ ನೈತಿಕತೆ, ಸಮಗ್ರತೆ, ಕೋವಿಡ್‌ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಆದ ಪ್ರಭಾವ, ಮಾನಸಿಕ ರೋಗಗಳ ಸಮಸ್ಯೆ, ಕ್ರೀಡೆಯಲ್ಲಿ ಪಾರದರ್ಶಕತೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆಯೂ ಮುಕ್ತವಾಗಿ ಚರ್ಚೆ ನಡೆಸಲಾಯಿತು. ಕ್ರೀಡಾ ಆಡಳಿತದ ಪ್ರಮುಖ ಸವಾಲುಗಳಾದ ಭ್ರಷ್ಟಾಚಾರ, ಮಾದಕವಸ್ತು ಸೇವನೆ, ಮಾನವೀಯ ಹಕ್ಕುಗಳ ಸವಾಲುಗಳನ್ನು ಗುರುತಿಸುವ ಬಗ್ಗೆಯೂ ಚರ್ಚಿಸಲಾಯಿತು.

ಈ ಸಮಾವೇಶದಲ್ಲಿ 2022ನೇ ಎಥಿಕ್ಸ್ ಇನ್ ಸ್ಪೋರ್ಟ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಹಾಗೂ ಸಾರ್ವಜನಿಕ ಜೀವನದಲ್ಲಿ ನೈತಿಕತೆ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಎತ್ತಿ ಹಿಡಿದ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ.

ಈ ವರ್ಷದ ಪ್ರಶಸ್ತಿಯ ವಿಜೇತರು

  1. ಎಫ್‌ಸಿ ಯೂನಿಯನ್ ಬರ್ಲಿನ್ ಇವಿ ಫಾರ್ ಔಟ್‌ಸ್ಟ್ಯಾಂಡಿಂಗ್ ಆರ್ಗನೈಸೇಷನ್
  2. ಕು. ಅಂಜಾ ಹಾಮ್ಮರ್ಸೆಂಗ್ -ಎಡಿನ್ (ಕ್ರೀಡೆಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಪ್ರೋತ್ಸಾಹ)
  3. ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವ ಕೇಂದ್ರ ಸಚಿವ ಕಿರಣ್ ರಿಜಿಜು
  4. ಸಂದೀಪ್ ಸಿಂಗ್- ಕ್ರೀಡೆ

ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ರಾಷ್ಟ್ರೀಯ ತರಬೇತುದಾರ ಪುಲ್ಲೆಲ ಗೋಪಿಚಂದ್, ಭಾರತದ ಪ್ರಥಮ ಫಾರ್ಮುಲಾ ಒನ್ ಪಟು ನರೇನ್ ಕಾರ್ತಿಕೇಯನ್, ರಾಷ್ಟ್ರೀಯ ಮಹಿಳಾ ಹಾಕಿ ತಂಡದ ನಾಯಕಿ ಸವಿತಾ ಪುನಿಯ, ಹರ್ಯಾಣದ ಕ್ರೀಡಾ ಮಂತ್ರಿ, ರಾಷ್ಟ್ರೀಯ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್, ರಾಷ್ಟ್ರೀಯ ಹಾಕಿ ತಂಡದ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್, ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತರಾದ, ಬಿಲ್ಲಿಯಾರ್ಡ್ಸ್‌ ಕ್ರೀಡಾಪಟು ಪಂಕಜ್ ಅಡ್ವಾಣಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಇದನ್ನೂ ಓದಿ | BCCI President | ಬಿಸಿಸಿಐ ಅಧ್ಯಕ್ಷ ಗಾದಿ ತೊರೆದ ಬಗ್ಗೆ ಮೌನ ಮುರಿದ ಸೌರವ್‌ ಗಂಗೂಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮಳೆ

Karnataka Weather : ಇಂದು ಮೂರು ಹೊತ್ತು ಒಂದೊಂದು ವಾತಾವರಣ

Karnataka Weather Forecast : ಹಗಲು ಹೊತ್ತು ಬಿಸಿ ಗಾಳಿ ಬೀಸಿದರೆ, ಮಧ್ಯಾಹ್ನದಂದು ಉರಿ ಬಿಸಿಲು ನೆತ್ತಿ ಸುಡುಲಿದೆ. ರಾತ್ರಿಯಾದರೆ ವಾತಾವರಣವು ಬೆಚ್ಚಗೆ ಇರಲಿದೆ. ಈ ಮಧ್ಯೆ ಕೆಲವೆಡೆ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Dry Weather) ನೀಡಿದೆ.

VISTARANEWS.COM


on

By

karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯಾದ್ಯಂತ ಶುಷ್ಕ ವಾತಾವರಣ (Dry Weather) ಇದ್ದರೂ, ಕೆಲವೆಡೆ ಮಳೆಯ (Rain News) ಸಿಂಚನವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಏ.2ರಂದು ಮಲೆನಾಡಿನ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಜತೆಗೆ ದಕ್ಷಿಣ ಒಳನಾಡಿನ ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರಿನ ಪ್ರತ್ಯೇಕ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ.

ಬೆಂಗಳೂರಲ್ಲಿ ಮುಖ್ಯವಾಗಿ ಶುಭ್ರ ಆಕಾಶವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

ರೆಡ್ ಅಲರ್ಟ್

ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ಮೇ 5ರವರೆಗೆ ಈ ಜಿಲ್ಲೆಗಳಲ್ಲಿ ತಾಪಮಾನ ವಿಪರೀತವಾಗಿ ಇರಲಿದೆ. ಉರಿ ಸೆಕೆಯ ವಾತಾವರಣ ಇರಲಿದೆ.

ಆರೆಂಜ್ ಅಲರ್ಟ್

ಇನ್ನೂ ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮುಂದಿನ 5 ದಿನಗಳ ಕಾಲ ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮೇ 5 ರವರೆಗೆ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ‌Prajwal Revanna Case: ಪ್ರಜ್ವಲ್ ಕಾಂಗ್ರೆಸ್‌ ಬೆಂಬಲಿತ ಸಂಸದ; ನಿಮಗಾಗದಿದ್ದರೆ ನಮಗೆ ಅಧಿಕಾರ ಕೊಡಿ, 24 ಗಂಟೆಯಲ್ಲಿ ಹಿಡಿಯುತ್ತೇವೆ: ಅಶೋಕ್

Summer Tips: ಬಿಸಿಲಿನ ಆಘಾತದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ…

ಬಿಸಿಲು ಈಗಲೇ ಸಹಿಸುವುದಕ್ಕೆ ಅಸಾಧ್ಯವಾಗಿದೆ. ಇದಲ್ಲ, ಇನ್ನೂ ಹೆಚ್ಚಾಗಲಿದೆ ಎಂಬ ಮುನ್ಸೂಚನೆ ಹವಾಮಾನ ತಜ್ಞರಿಂದ ದೊರೆತಿದೆ. ಈ ಘೋರ ಬಿಸಿಲಿನಲ್ಲಿ ಸ್ಮೃತಿ ತಪ್ಪಿದವರ ಸುದ್ದಿಗಳು ಅಲ್ಲಲ್ಲಿ ಕೇಳುತ್ತಿವೆ. ಬಿಸಿಲಾಘಾತಕ್ಕೆ ಜೀವ ತೆತ್ತವರ ವಿಷಯಗಳೂ ಕೇಳಿಬರುತ್ತಿವೆ. ಛತ್ರಿ ಹಿಡಿದೇ ಹೋಗುತ್ತೇವೆ ಹೊರಗೆ, ಚೆನ್ನಾಗಿ ನೀರು ಕುಡಿಯುತ್ತೇವೆ ನಾವು. ನಮಗೇನು ಬಿಸಿಲಿನ ಭಯವಿಲ್ಲ ಎನ್ನುವವರಿದ್ದಾರೆ. ವಿಷಯ ಹಾಗಲ್ಲ, ಬಿಸಿಲ ದಿನಗಳಲ್ಲಿ ಆರೋಗ್ಯದ ಕಾಳಜಿಯನ್ನು ಎಷ್ಟು ಮಾಡಿದರೂ ಸಾಲದು. ಒಮ್ಮೆ ಶಾಖದ ಆಘಾತಕ್ಕೆ ಅಥವಾ ನಿರ್ಜಲೀಕರಣಕ್ಕೆ ತುತ್ತಾದರೆ, ಚೇತರಿಸಿಕೊಳ್ಳಲು ನಾಲ್ಕಾರು ದಿನಗಳಾದರೂ ಬೇಕಾಗುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ, ಜೀವಕ್ಕೆ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಇವುಗಳಿಂದ (Summer Tips) ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲವೇ?

Dry weather Summer Heat

ಏಕೆ ಹೀಗಾಗುತ್ತದೆ?

ಮೊದಲಿಗೆ, ಬಿಸಿಲಿಗೆ ಎಚ್ಚರ ತಪ್ಪುವುದೇಕೆ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಹೊರಗಿನ ವಾತಾವರಣದ ಉಷ್ಣತೆಯನ್ನು ಆಧರಿಸಿ, ನಮ್ಮ ದೇಹ ತನ್ನ ಉಷ್ಣತೆಯನ್ನು ಮಾರ್ಪಾಡು ಮಾಡಿಕೊಳ್ಳುತ್ತದೆ. ಹೊರಗಿನ ತಾಪಮಾನ ತೀವ್ರವಾಗಿ ಏರಿಕೆಯಾದಾಗ, ದೇಹದೊಳಗಿನ ಉಷ್ಣತೆಯನ್ನು ತಗ್ಗಿಸುವುದಕ್ಕೆ ಶರೀರ ಬೆವರಲು ಪ್ರಾರಂಭಿಸುತ್ತದೆ. ಇದರಿಂದಲೇ ದೇಹ ತಣ್ಣಗಾಗಬೇಕು, ಆಂತರಿಕ ಉಷ್ಣತೆ ನಿಯಂತ್ರಣದಲ್ಲಿ ಇರಬೇಕು. ಆದರೆ ಈ ಎಲ್ಲ ತಂತ್ರಗಳು ಕೈಕೊಟ್ಟಾಗ, ಸಾಕಾಗದೆ ಇದ್ದಾಗ ಅಥವಾ ಅತಿಯಾಗಿ ಬೆವರಿ ದೇಹದಲ್ಲಿ ನೀರಿನಂಶ ಕಡಿಮೆ ಆದಾಗ, ಎಚ್ಚರ ತಪ್ಪುತ್ತದೆ. ಇದರಿಂದ ಮೆದುಳಿಗೆ ಅಗತ್ಯವಾದಷ್ಟು ರಕ್ತಸಂಚಾರ ಆಗದಿದ್ದರೆ, ಪಾರ್ಶ್ವವಾಯು ಸಂಭವಿಸಿ ಜೀವಹಾನಿಯೂ ಆಗಬಹುದು.

ಮಾನವ ಶರೀರ ತನ್ನಷ್ಟಕ್ಕೆ ತಡೆದುಕೊಳ್ಳಲು ಸಾಧ್ಯವಾಗುವ ಗರಿಷ್ಟ ಉಷ್ಣತೆಯೆಂದರೆ ೪೨.೩ ಡಿಗ್ರಿ ಸೆ. ಇದಿಷ್ಟು ತಡೆಯುವುದೂ ಸುಲಭವಿಲ್ಲ. ಇನ್ನು ಇದಕ್ಕಿಂತಲೂ ಹೆಚ್ಚಿನ ತಾಪಮಾನವನ್ನು ಸಹಿಸಿಕೊಳ್ಳಲು ಏನೆಲ್ಲ ಉಪಚಾರ ಸಾಧ್ಯವೋ ಅದನ್ನು ನಮಗೆ ನಾವೇ ಮಾಡಿಕೊಳ್ಳಬೇಕು. ಸಿಕ್ಕಾಪಟ್ಟೆ ನೀರು ಕುಡಿಯುವುದು, ಎಲೆಕ್ಟ್ರೋಲೈಟ್‌ ಮರುಪೂರಣ ಮಾಡುವುದು, ಚೆನ್ನಾಗಿ ಗಾಳಿಯಾಡುವ ವಾತಾವರಣದಲ್ಲಿರುವುದು- ಇಂಥವೆಲ್ಲ ನಾವು ಅಗತ್ಯವಾಗಿ ಮಾಡಬೇಕಾದ ಕೆಲಸಗಳು.

ಉಷ್ಣತೆಗೆ ಮಾತ್ರವಲ್ಲ

ತೀವ್ರ ತಾಪಮಾನಗಳಿಗೆ ಎಚ್ಚರ ತಪ್ಪುವುದು ಬಿಸಿ ಹೆಚ್ಚಾದಾಗ ಮಾತ್ರವಲ್ಲ, ತೀವ್ರ ಚಳಿಯಲ್ಲೂ ಆಗುತ್ತದೆ. ಈ ಎರಡೂ ಅತಿರೇಕದ ತಾಪಮಾನಗಳಲ್ಲಿ ದೇಹದ ಉಷ್ಣತಾ-ನಿಯಂತ್ರಕ ವ್ಯವಸ್ಥೆ ಕೈಕೊಡಬಹುದು. ಬಿಸಿ ಹೆಚ್ಚಾದಾಗ ಮೆದುಳಿಗೆ ರಕ್ತಸಂಚಾರ ಸರಾಗ ಆಗದಿರುವ ಸಂಭವ ಇರುವದಂತೆಯೇ, ಚಳಿ ಹೆಚ್ಚಾದಾಗಲೂ ಆಗುತ್ತದೆ. ಹೊರಗಿನ ಚಳಿ ತೀವ್ರವಾಗಿ ಹೆಚ್ಚಾದರೆ, ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವುದಕ್ಕೆ ರಕ್ತ ನಾಳಗಳು ಸಂಕೋಚಗೊಳ್ಳುತ್ತವೆ. ಹೀಗೆ ಸಂಕೋಚಗೊಳ್ಳುವುದು ಅತಿಯಾದರೆ ಆಗಲೂ ಮೆದುಳಿಗೆ ಬೇಕಾದಷ್ಟು ರಕ್ತಸಂಚಾರ ಆಗದೆ ಜ್ಞಾನ ತಪ್ಪಬಹುದು.

Summer Fashion

ತಪ್ಪಿಸಿಕೊಳ್ಳಲಾಗದೆ?

ಖಂಡಿತ ಸಾಧ್ಯವಿದೆ. ಮೊದಲಿಗೆ, 40 ಡಿ.ಸೆ. ಉಷ್ಣತೆಯನ್ನು ತಲುಪಿದಾಗ ಮನೆಯಿಂದ ಹೊರಗೆ ಹೋಗಬೇಡಿ. ಹೋಗುವುದು ಅನಿವಾರ್ಯವಾದರೆ, ಸಡಿಲವಾದ ಬಿಳಿ ಅಥವಾ ತಿಳಿ ಬಣ್ಣದ ಹತ್ತಿಯ ಬಟ್ಟೆಗಳನ್ನೇ ಧರಿಸಿ. ತಲೆಗೆ ಟೋಪಿ, ಛತ್ರಿಗಳಂಥವು ಇದ್ದರೆ ಒಳ್ಳೆಯದು. ನಿಲ್ಲಿಸಿದ ಕಾರಿನೊಳಗೆ ಯಾರನ್ನೂ ಬಿಡಬೇಡಿ. ಈ ಸೆಕೆಯಲ್ಲಿ ದಿನಕ್ಕೆ ಐದು ಲೀಟರ್‌ ನೀರು ಅಥವಾ ಪೇಯಗಳನ್ನು ಕುಡಿಯುವ ಗುರಿ ಇರಿಸಿಕೊಳ್ಳಿ. ಆಲ್ಕೋಹಾಲ್‌ ಮತ್ತು ಕೆಫೇನ್‌ ಸೇವನೆಯ ಮೇಲೆ ಕಡಿವಾಣ ಅಗತ್ಯ. ಇಲ್ಲದಿದ್ದರೆ ದೇಹ ಬೇಗನೇ ನಿರ್ಜಲೀಕರಣಕ್ಕೆ ತುತ್ತಾಗುತ್ತದೆ. ಜೊತೆಗೆ, ಸೆಕೆಯಲ್ಲಿ ದೇಹವನ್ನು ತಂಪಾಗಿಸುವ ಶಾರೀರಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ತಲೆನೋವು, ಅತಿಯಾಗಿ ಬೆವರುವುದು, ಬಾಯಿ ಒಣಗುವುದು, ತೀರದ ದಾಹ, ಮೈಯೆಲ್ಲ ಬಿಸಿಯಾದ ಅನುಭವಗಳು ಆದರೆ ಜಾಗ್ರತೆ ಮಾಡಿ. ತಕ್ಷಣವೇ ದೇಹವನ್ನು ತಂಪಾಗಿಸುವ ಬಗ್ಗೆ ಕ್ರಮ ಕೈಗೊಳ್ಳಿ. ತಂಪಾದ ಬಟ್ಟೆಯಿಂದ ಇಡೀ ದೇಹವನ್ನು ಒರೆಸಬಹುದು. ಒಆರೆಸ್‌, ಎಳನೀರು ಮುಂತಾದ ಎಲೆಕ್ಟ್ರೋಲೈಟಿಕ್‌ ಪೇಯಗಳು ಬೇಕಾಗುತ್ತವೆ. ಕೂಲರ್‌, ಎಸಿಯಂಥ ಉಪಕರಣಗಳ ಮೂಲಕ ಮನೆಯ ವಾತಾವರಣವನ್ನು ತಂಪಾಗಿಸಲು ಪ್ರಯತ್ನಿಸಿ. ಈ ಹೊತ್ತಿನಲ್ಲಿ ಮನೆಯಿಂದ ಹೊರಗಿದ್ದರೆ, ತಂಪಾದ ನೆರಳಿನಂಥ ಜಾಗಕ್ಕೆ ಹೋಗಿ. ಬಿಸಿಲಿನ ಆಘಾತ ತಾಗಿದಾಗ ತ್ವರಿತವಾಗಿ ಕ್ರಮ ಕೈಗೊಳ್ಳದಿದ್ದರೆ ಜೀವಕ್ಕೇ ಎರವಾಗುತ್ತದೆ, ನೆನಪಿರಲಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Bhajanotsava: ಓಂಕಾರ ಆಶ್ರಮದಲ್ಲಿ ನಿರಂತರ ಭಜನೋತ್ಸವ ಸಂಪನ್ನ

Bhajanotsava: ಬೆಂಗಳೂರಿನ ಕೆಂಗೇರಿ- ಉತ್ತರಹಳ್ಳಿ ಮುಖ್ಯರಸ್ತೆಯ ಶ್ರೀನಿವಾಸಪುರದ ಓಂಕಾರ ಆಶ್ರಮದಲ್ಲಿ ನಿರಂತರ ಭಜನೋತ್ಸವದ ಸಮಾರೋಪ ಸಮಾರಂಭ ನೆರವೇರಿದೆ.

VISTARANEWS.COM


on

Bhajanotsava
Koo

ಬೆಂಗಳೂರು: ನಶಿಸಿ ಹೋಗುತ್ತಿರುವ ಭಜನಾ ಪದ್ಧತಿಯ ಪುನರುತ್ಥಾನ, ವಿಶ್ವಶಾಂತಿ ಹಾಗೂ ವಿಶ್ವಕ್ಕೆ ಜ್ಞಾನದ ಬೆಳಕನ್ನು ಹರಡಿದ ಹಿಂದು ಧರ್ಮದ ಸಂಘಟನೆಯ ನಿಟ್ಟಿನಲ್ಲಿ ಗಿರಿನಗರದ ಅಖಿಲ ಕರ್ನಾಟಕ ಭಜನಾ ಪರಿಷತ್ತು ವತಿಯಿಂದ ನಗರದ ಕೆಂಗೇರಿ- ಉತ್ತರಹಳ್ಳಿ ಮುಖ್ಯರಸ್ತೆಯ ಶ್ರೀನಿವಾಸಪುರದ ಓಂಕಾರ ಆಶ್ರಮದಲ್ಲಿ ನಿರಂತರ ಭಜನೋತ್ಸವದ (Bhajanotsava) ಸಮಾರೋಪ ಸಮಾರಂಭ ಬುಧವಾರ ನೆರವೇರಿತು.

ಓಂಕಾರ ಆಶ್ರಮದ ಪೂಜ್ಯ ಶ್ರೀ ಮಧುಸೂದನಂದಪುರಿ ಸ್ವಾಮಿಗಳು, ಕೆ.ಆರ್. ಪುರಂ ರಾಮಕೃಷ್ಣ ವಿವೇಕಾನಂದ ಸಾಧನ ಕೇಂದ್ರದ ಚಂದ್ರೇಶಾನಂದಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಂಘ ಚಾಲಕರಾದ ಜಿ.ಎಸ್ ಉಮಾಪತಿ ದಿಕ್ಸೂಚಿ ಭಾಷಣ ಮಾಡಿದರು.

ಆಯೋಜಕರಾದ ಅಧ್ಯಕ್ಷ ಡಾ.ಕೆ ವಿ ಮುರಳಿಧರ ಶರ್ಮ ಪ್ರಾಸ್ತವಿಕ ಮಾತುಗಳನ್ನು ಆಡುತ್ತಾ, ಸತ್ಸಂಗ ಭಜನಾ ಮಹಾ ಮಂಡಳಿ ಸಭಾ ರಾಷ್ಟ್ರಮಟ್ಟದಲ್ಲಿ ಭಜನಾಮೇಳ ಆಯೋಜಿಸುವಲ್ಲಿ ಒಂದು ದಿಟ್ಟ ಹೆಜ್ಜೆ ಇಟ್ಟು, 365 ದಿನಗಳ ನಿರಂತರ ಭಜನೋತ್ಸವವನ್ನು ಆರಂಭಿಸಿ, ನಶಿಸಿ ಹೋಗುತ್ತಿರುವ ಭಜನಾ ಪದ್ಧತಿಯ ಪುನರುತ್ಥಾನ, ವಿಶ್ವಶಾಂತಿಗಾಗಿ ವಿಶ್ವಕ್ಕೆ ಜ್ಞಾನದ ಬೆಳಕನ್ನು ಹರಡಿದ ಹಿಂದು ಧರ್ಮದ ಸಂಘಟನೆಯ ನಿಟ್ಟಿನಲ್ಲಿ ಆಯೋಜಿಸಿದೆ. ಬೆಂಗಳೂರು ಮಹಾನಗರದ ಹಲವಾರು ಭಜನಾ ಮಂಡಳಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ 2019-20 ರಲ್ಲಿ 365 ದಿನಗಳ ನಿರಂತರ ಭಜನಾ ಉತ್ಸವವನ್ನು ಏರ್ಪಡಿಸಲಾಗಿತ್ತು. ಅದರ ಸಮಾರೋಪ ಸಮಾರಂಭ ಇದಾಗಿದ್ದು, ಮುಂದಿನ ದಿನಗಳಲ್ಲಿ ನಗರದ ನಾನಾ ಭಾಗಗಳಲ್ಲಿ ಧರ್ಮ ಜಾಗೃತಿ ಮಾಡಲು ಸಂಕಲ್ಪ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಮಾರಂಭದ ವೇದಿಕೆಯಲ್ಲಿ ಅಖಿಲ ಭಾರತ ಬ್ರಾಹ್ಮಿನ್ ಫೆಡರೇಷನ್‌ನ ಮಾಲಿನಿ, ಗ್ಲೋಬಲ್ ವಿಷ್ಣು ಸಹಸ್ರನಾಮ ಫೆಡರೇಶನ್ ನಿರ್ದೇಶಕಿ ಮಂಗಳ ಭಾಸ್ಕರ್, ಎಕೆ ಬಿಎಮ್ಎಸ್ ಉಪಾಧ್ಯಕ್ಷ ಎಂ.ಆರ್. ಶಿವಶಂಕರ್, ಕೊಟ್ಟೂರು ಅಮರನಾಥ ಯಾತ್ರಾ ಸೇವಾ ಸಮಿತಿಯ ಕಾರ್ಯದರ್ಶಿ ಸಾಯಿ ಸತೀಶ್ ಕೋರಗಲ್ ಮತ್ತು ಎಕೆ ಬಿಪಿಯ ಕಾರ್ಯದರ್ಶಿ ಮಲ್ಲಿಕಾರ್ಜುನ ಟಿ.ಎಸ್. ಉಪಸ್ಥಿತರಿದ್ದರು.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶ್ರೀರಾಮ ಆಗುವುದು ಕಷ್ಟ, ರಾವಣ ಆಗುವುದು ಕೂಡ ಕಷ್ಟವೇ!

ಹಿರಿಯ ಭಜನಾ ಸಂಘಟಕ ಕೀರ್ತಿಶೇಷ ಡಾ. ಬ್ರಹ್ಮತೇಜ ವೆಂಕಟರಾಮಯ್ಯ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಸತ್ಸಂಗ ಭಜನಾ ಮಹಾಮಂಡಳಿಯ ವತಿಯಿಂದ ವರ್ಷಾದ್ಯಂತ ನಡೆದ ಭಜನೋತ್ಸವದಲ್ಲಿ ಪಾಲ್ಗೊಂಡ ಅನೇಕ ಭಜನಾ ಮಂಡಳಿಗಳಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣೆಕೆಯನ್ನು ವಿತರಿಸಲಾಯಿತು. ವಿದ್ವಾನ್ ಖಾಸಿಂಮಲ್ಲಿಗೆ ಮಡುವು ನೇತೃತ್ವದ ತಂಡದ ಮಕ್ಕಳಿಂದ ವಿಶೇಷ ಶಿವ ತಾಂಡವ ಸ್ತೋತ್ರದ ಪ್ರಸ್ತುತಿ ನಡೆಯಿತು.

Continue Reading

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರದ ವಾಯುದೇವ, ರಾಮಕೃಷ್ಣ ದೇವರ ಸನ್ನಿಧಾನದಲ್ಲಿ ಶತ ಚಂಡಿಕಾ ಯಾಗ ಸಂಪನ್ನ

ಚಿಕ್ಕಬಳ್ಳಾಪುರ ಸಮೀಪದ ವಾಯುದೇವರ ಮತ್ತು ರಾಮಕೃಷ್ಣ ದೇವರ ಸನ್ನಿಧಾನದಲ್ಲಿ ಲೋಕೇಶ ಆಚಾರ್ಯರ ನೇತೃತ್ವದಲ್ಲಿ ಶತ ಚಂಡಿಕಾ ಯಾಗ ಸಂಪನ್ನಗೊಂಡಿತು.

VISTARANEWS.COM


on

Shata Chandika Yaga
Koo

ಚಿಕ್ಕಬಳ್ಳಾಪುರ: ನಗರ ಸಮೀಪದ ವಾಯುದೇವರ ಮತ್ತು ರಾಮಕೃಷ್ಣ ದೇವರ ಸನ್ನಿಧಾನದಲ್ಲಿ ಲೋಕೇಶ ಆಚಾರ್ಯರ ನೇತೃತ್ವದಲ್ಲಿ ಬುಧವಾರ ಶತ ಚಂಡಿಕಾ ಯಾಗ ನೆರವೇರಿತು. ಹರಿದಾಸ ಮಯ್ಯ ಮತ್ತು ವಿಶ್ವಾಸ ಆಚಾರ್ಯ ಮತ್ತತರ ತಂಡ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಲೋಕ ಕಲ್ಯಾಣಕ್ಕಾಗಿ, ದೇಶದಲ್ಲಿ ಒಳ್ಳೆಯ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿ ಯಾಗ ಮಾಡಲಾಯಿತು. ಸುಮಾರು 40ಕ್ಕೂ ಹೆಚ್ಚಿನ ನಮ್ಮ ವಿದ್ಯಾಪೀಠದ ಅನೇಕ ವಿದ್ವಾಂಸರುಗಳು ಭಾಗವಹಿಸಿದ್ದರು. ವಿದ್ವಾಂಸರಾದ ಯು.ಕೇಶವಾಚಾರ್ಯರು ಶತಚಂಡಿಕ ಯಾಗವನ್ನು ನಿರ್ವಿಘ್ನವಾಗಿ ನೆರವೇರಿಸಿಕೊಟ್ಟರು.

ಇದನ್ನೂ ಓದಿ | ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

Continue Reading

ಕರ್ನಾಟಕ

Prajwal Revanna Case: ಸಂಸದ ಪ್ರಜ್ವಲ್ ರೇವಣ್ಣ ಗೆಸ್ಟ್ ಹೌಸ್‌ನಲ್ಲಿಲ್ಲ ಸಿಸಿ ಕ್ಯಾಮೆರಾ?; ಹಲವು ಅನುಮಾನ

Prajwal Revanna Case: ಹಾಸನದಲ್ಲಿ ಮುಖ್ಯ ರಸ್ತೆ ಪಕ್ಕದಲ್ಲೇ ಸಂಸದ ಪ್ರಜ್ವಲ್‌ ರೇವಣ್ಣ ಅವರ ಹೌಸ್‌ ಇದ್ದರೂ ಅಲ್ಲಿ ಸಿಸಿ ಕ್ಯಾಮೆರಾಗಳು ಇಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

VISTARANEWS.COM


on

Prajwal Revanna Case
Koo

ಹಾಸನ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದ (Prajwal Revanna Case) ಬಗ್ಗೆ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಗಳು ಕೇಳಿಬರುತ್ತಿವೆ. ಈ ನಡುವೆ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಣ ಮಾಡಿರುವುದು ಬೇರೆ ಎಲ್ಲೂ ಅಲ್ಲ, ನಗರದ ಎಂಪಿ ಗೆಸ್ಟ್‌ ಹೌಸ್‌ನಲ್ಲೇ ಎನ್ನಲಾಗಿದೆ. ಮತ್ತೊಂದೆಡೆ ಮುಖ್ಯ ರಸ್ತೆ ಪಕ್ಕದಲ್ಲೇ ಗೆಸ್ಟ್‌ ಹೌಸ್‌ ಇದ್ದರೂ ಅಲ್ಲಿ ಸಿಸಿ ಕ್ಯಾಮೆರಾಗಳು ಇಲ್ಲದಿರುವುದರಿಂದ ಹಲವು ಅನುಮಾನಗಳು ವ್ಯಕ್ತವಾಗಿದೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಂಪಿ ಗೆಸ್ಟ್ ಹೌಸ್‌, ರಸ್ತೆ ಪಕ್ಕದಲ್ಲೇ ಇದ್ದರೂ ಕಟ್ಟಡದ ಹೊರಗೆ ಹಾಗೂ ಒಳಗೆ ಎಲ್ಲೂ ಸಿಸಿ ಕ್ಯಾಮೆರಾ ಪತ್ತೆಯಾಗಿಲ್ಲ. ಸರ್ಕಾರಿ ಬಂಗಲೆಗೆ ಸಿಸಿ ಕ್ಯಾಮೆರಾ ಇಲ್ಲದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಯಾರು ಬಂದರು, ಹೋದರು ಎಂಬ ಸಾಕ್ಷಿಗೂ ಸಿಸಿ ಕ್ಯಾಮೆರಾಗಳು ಇಲ್ಲದಂತಾಗಿದೆ.

ಇನ್ನು ಪ್ರಜ್ವಲ್‌ ವಿರುದ್ಧ ಪ್ರಕರಣದ ದಾಖಲಾದ ಬಳಿಕ ಹಾಸನ ಎಂಪಿ ಗೆಸ್ಟ್ ಹೌಸ್ ಖಾಲಿ ಖಾಲಿಯಾಗಿದ್ದು, ಅಲ್ಲಿಗೆ ಬಂದಿರುವ ಪತ್ರಗಳು ಬಾಗಿಲಿನಲ್ಲೇ ಸಿಕ್ಕಿಸಿರುವುದು ಕಂಡುಬಂದಿದೆ. ಪತ್ರಗಳು ಬಂದು ಎರಡು ದಿನ ಕಳೆದರೂ ಯಾರೂ ತೆಗೆದುಕೊಂಡಿಲ್ಲ.

ಸಂಸದರಾಗಿದ್ದಾಗ ಹಾಸನದ ಎಂಪಿ ಕ್ವಾರ್ಟರ್ಸ್‌ ​​ದೇವೇಗೌಡರ ಅಧಿಕೃತ ನಿವಾಸವಾಗಿತ್ತು. ಬಳಿಕ ಸಂಸದರಾಗಿ ಪ್ರಜ್ವಲ್ ರೇವಣ್ಣ ಆಯ್ಕೆಯಾಗುತ್ತಲೇ ಪ್ರಜ್ವಲ್​​ಗೆ ಮನೆ ಹಸ್ತಾಂತರ ಮಾಡಲಾಗಿತ್ತು, ಹಾಸನಕ್ಕೆ ಬಂದಾಗ ಸಂಸದರ ನಿವಾಸದಲ್ಲೇ ಪ್ರಜ್ವಲ್ ವಾಸ್ತವ್ಯ ಹೂಡುತ್ತಿದ್ದರು. ಚುನಾವಣಾ ಸಮಯದಲ್ಲಿ ಇದೇ ಮನೆಯಲ್ಲಿ ಪ್ರಜ್ವಲ್ ರೇವಣ್ಣ ನೆಲೆಸಿದ್ದರು. ಅಧಿಕಾರಿಗಳ ಸಭೆ ಸೇರಿದಂತೆ ಜೆಡಿಎಸ್ ಮುಖಂಡರ ಸಭೆಗಳನ್ನು ಪ್ರಜ್ವಲ್ ನಡೆಸುತ್ತಿದ್ದರು.

ಇದನ್ನೂ ಓದಿ | Prajwal Revanna: ಜರ್ಮನಿಯಲ್ಲಿ ಪ್ರಜ್ವಲ್‌ ಅಜ್ಞಾತವಾಸ, ಮಲೇಷ್ಯಾದಲ್ಲಿ ಕಾರ್ತಿಕ್‌ ಹಾಲಿಡೇಸ್?

ಮಾಜಿ ಪ್ರಧಾನಿ ದೇವೇಗೌಡರು ಹಾಸನದ ಸಂಸದರಾಗಿದ್ದಾಗ ಸರ್ಕಾರದಿಂದ ನಿವೇಶನ ಮಂಜೂರಾಗಿ, ಅವರ ವಾಸ್ತವ್ಯಕ್ಕಾಗಿ 2019ರಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಕಟ್ಟಡದಲ್ಲಿ ಒಟ್ಟು ನಾಲ್ಕು ಕೊಠಡಿ ಇದ್ದು, ನೆಲ ಮಹಡಿಯಲ್ಲಿ ಎರಡು ಹಾಗೂ ಮೊದಲ ಅಂತಸ್ತಿನಲ್ಲಿ ಎರಡು ಕೊಠಡಿಗಳಿವೆ. ದೇವೇಗೌಡರು ಹಾಸನಕ್ಕೆ ಬಂದಾಗ ಹೆಚ್ಚಾಗಿ ಇದೇ ಗೆಸ್ಟ್ ಹೌಸ್​ನಲ್ಲಿ ಉಳಿಯುತ್ತಿದ್ದರು.

Continue Reading
Advertisement
karnataka Weather Forecast
ಮಳೆ25 mins ago

Karnataka Weather : ಇಂದು ಮೂರು ಹೊತ್ತು ಒಂದೊಂದು ವಾತಾವರಣ

Vastu Tips
ಲೈಫ್‌ಸ್ಟೈಲ್33 mins ago

Vastu Tips: ಮನೆ ಹೊರಗಿನ ಉದ್ಯಾನದಲ್ಲಿ ವಾಸ್ತು ಪಾಲಿಸಿ; ಮನೆಯೊಳಗಿನ ನೆಮ್ಮದಿ ವೃದ್ಧಿಸಿ

SMART Missile
ಸಂಪಾದಕೀಯ54 mins ago

ವಿಸ್ತಾರ ಸಂಪಾದಕೀಯ: ಕ್ಷಿಪಣಿ ಬಲದಿಂದ ನಮ್ಮ ನೌಕಾಪಡೆ ‘ಸ್ಮಾರ್ಟ್‌’ ಜತೆಗೆ ಇನ್ನಷ್ಟು ಬಲಿಷ್ಠ

Aloe Vera face mask
ಆರೋಗ್ಯ55 mins ago

Aloe Vera Benefits: ಬೇಸಿಗೆಯಲ್ಲಿ ಚರ್ಮವನ್ನು ತಂಪಾಗಿಸಲು ಲೋಳೆಸರದ ಮಾಸ್ಕ್‌ ಬಳಸಿ

Dina Bhavishya
ಭವಿಷ್ಯ2 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

Benefits of Tender Coconut
ಆರೋಗ್ಯ2 hours ago

Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

Bhajanotsava
ಬೆಂಗಳೂರು5 hours ago

Bhajanotsava: ಓಂಕಾರ ಆಶ್ರಮದಲ್ಲಿ ನಿರಂತರ ಭಜನೋತ್ಸವ ಸಂಪನ್ನ

Shata Chandika Yaga
ಚಿಕ್ಕಬಳ್ಳಾಪುರ6 hours ago

ಚಿಕ್ಕಬಳ್ಳಾಪುರದ ವಾಯುದೇವ, ರಾಮಕೃಷ್ಣ ದೇವರ ಸನ್ನಿಧಾನದಲ್ಲಿ ಶತ ಚಂಡಿಕಾ ಯಾಗ ಸಂಪನ್ನ

Prajwal Revanna Case
ಕರ್ನಾಟಕ7 hours ago

Prajwal Revanna Case: ಸಂಸದ ಪ್ರಜ್ವಲ್ ರೇವಣ್ಣ ಗೆಸ್ಟ್ ಹೌಸ್‌ನಲ್ಲಿಲ್ಲ ಸಿಸಿ ಕ್ಯಾಮೆರಾ?; ಹಲವು ಅನುಮಾನ

Danesh Palyani
ವಿದೇಶ7 hours ago

Danesh Palyani: ಪಾಕಿಸ್ತಾನದಲ್ಲಿ ಹಿಂದು ಯುವತಿಯರ ಮತಾಂತರ; ಕರಾಳ ಮುಖ ಬಿಚ್ಚಿಟ್ಟ ಸಂಸದ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌