Condom Cause Cancer: ಕಾಂಡೋಮ್, ಲೂಬ್ರಿಕೆಂಟ್‍ ಬಳಸಿದರೂ ಕ್ಯಾನ್ಸರ್‌! ಅಧ್ಯಯನ ವರದಿಯಲ್ಲಿ ಆಘಾತಕಾರಿ ಸಂಗತಿ - Vistara News

Latest

Condom Cause Cancer: ಕಾಂಡೋಮ್, ಲೂಬ್ರಿಕೆಂಟ್‍ ಬಳಸಿದರೂ ಕ್ಯಾನ್ಸರ್‌! ಅಧ್ಯಯನ ವರದಿಯಲ್ಲಿ ಆಘಾತಕಾರಿ ಸಂಗತಿ

Condom Cause Cancer: ಕಾಂಡೋಮ್ ಹಾಗೂ ಲೂಬ್ರಿಕೆಂಟ್‌ಗಳಲ್ಲಿ ಬಂಜೆತನ, ಕ್ಯಾನ್ಸರ್ ಸೇರಿದಂತೆ ಇತರ ಸಮಸ್ಯೆಗಳಿಗೆ ಕಾರಣವಾಗುವ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಪಿಎಫ್ಎಎಸ್ ಅನ್ನು ಹೆಚ್ಚು ಬಳಸುವುದರಿಂದ ಕ್ಯಾನ್ಸರ್, ಯಕೃತ್ತಿನ ಹಾನಿ, ಥೈರಾಯ್ಡ್ ಸಮಸ್ಯೆಗಳು, ಜನನ ದೋಷಗಳು ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆಯಂತೆ.

VISTARANEWS.COM


on

Condom Cause Cancer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಸಾಮಾನ್ಯವಾಗಿ ದಂಪತಿ ಬೇಡದ ಗರ್ಭವನ್ನು ತಡೆಯಲು ಕಾಂಡೋಮ್‌ಗಳನ್ನು ಬಳಸುತ್ತಾರೆ. ಹಾಗೇ ಸಂಭೋಗದ ವೇಳೆ ಯೋನಿಯಲ್ಲಿ ಲೋಳೆ ಸ್ರಾವ ಕಡಿಮೆಯಾದಾಗ ಯೋನಿ ನಾಳದ ನೋವು, ಬಿಗಿತವನ್ನು ಕಡಿಮೆ ಮಾಡಲು ಕೆಲವರು ಲೂಬ್ರಿಕೆಂಟ್ ಅನ್ನು ಬಳಸುತ್ತಾರೆ. ಆದರೆ ನೀವು ಬಳಸುವಂತಹ ಈ ಕಾಂಡೋಮ್ (Condom Cause Cancer) ಹಾಗೂ ಲೂಬ್ರಿಕೆಂಟ್‍ಗಳಲ್ಲಿ ಬಂಜೆತನ, ಕ್ಯಾನ್ಸರ್ ಸೇರಿದಂತೆ ಇತರ ಸಮಸ್ಯೆಗಳಿಗೆ ಕಾರಣವಾಗುವ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ!

ಕಾಂಡೋಮ್‍ಗಳು ಮತ್ತು ಲೂಬ್ರಿಕೆಂಟ್‍ಗಳ ಹಲವಾರು ಪ್ರಸಿದ್ಧ ಬ್ರಾಂಡ್‍ಗಳಲ್ಲಿ ಈ ವಿಷಕಾರಿ ಪಿಎಫ್ಎಎಸ್ ರಾಸಾಯನಿಕಗಳ ಅಪಾಯಕಾರಿ ಮಟ್ಟಲ್ಲಿದೆ ಎಂಬುದನ್ನು ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ. ಗ್ರಾಹಕ ನ್ಯಾಯವಾದಿ ಸಂಸ್ಥೆಯಾದ ಮಾಮಾವೇಶನ್ ನಡೆಸಿದ ಸಂಶೋಧನೆಯು ಈ ಉತ್ಪನ್ನಗಳಿಗೆ ಸಂಬಂಧಿಸಿದ ಗಮನಾರ್ಹ ಆರೋಗ್ಯ ಅಪಾಯಗಳನ್ನು ಬಹಿರಂಗಪಡಿಸಿದೆ. ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ ಪ್ರಯೋಗಾಲಯವು ನಡೆಸಿದ ಅಧ್ಯಯನವು ಟ್ರೋಜನ್ ಅಲ್ಟ್ರಾ ಥಿನ್ ಕಾಂಡೋಮ್‍ಗಳು ಮತ್ತು ಕೆ-ವೈ ಜೆಲ್ಲಿ ಕ್ಲಾಸಿಕ್ ವಾಟರ್ ಬೇಸಡ್ ಫರ್ಸನಲ್ ಲೂಬ್ರಿಕೆಂಟ್ ಸೇರಿದಂತೆ ವಿವಿಧ ಸಂತಾನೋತ್ಪತ್ತಿಗೆ ಸಂಬಂಧಿಸಿದ ಆರೋಗ್ಯ ಉತ್ಪನ್ನಗಳಲ್ಲಿ ಪಿಎಫ್ಎಎಸ್ ಅನ್ನು ಪತ್ತೆ ಮಾಡಿದೆ.

ಟ್ರೋಜನ್ ಅಲ್ಟ್ರಾ ಥಿನ್ ಕಾಂಡೋಮ್‍ಗಳು ಮತ್ತು ಯೂನಿಯನ್ ಸ್ಟ್ಯಾಂಡರ್ಡ್ ಅಲ್ಟ್ರಾ ಥಿನ್ ಲೂಬ್ರಿಕೇಟೆಡ್ ಮೇಲ್ ಲ್ಯಾಟೆಕ್ಸ್ ಕಾಂಡೋಮ್‍ಗಳಲ್ಲಿ ಪಿಎಫ್ಎಎಸ್ ಮಟ್ಟವು ವಿಶೇಷವಾಗಿ ಹೆಚ್ಚಾಗಿದೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಇತರ ಲೂಬ್ರಿಕೆಂಟ್‍ಗಳಾದ ಲೋಲಾ ಟಿಂಗ್ ಲಿಂಗ್ ಮಿಂಟ್ ಪ್ಲೆಷರ್ ಜೆಲ್ ಸಹ ಈ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿವೆ ಎನ್ನಲಾಗಿದೆ.

ಪಿಎಫ್ಎಎಸ್ ಎಂಬುದು ನೀರು, ಕಲೆಗಳು ಮತ್ತು ಶಾಖ ನಿರೋಧಕ ಉತ್ಪನ್ನಗಳನ್ನು ತಯಾರಿಸಲು ಬಳಸುವ ಸುಮಾರು 15,000 ಸಂಶ್ಲೇಷಿತ ರಾಸಾಯನಿಕಗಳ ಗುಂಪು. ಅವುಗಳನ್ನು “ಫಾರೇವರ್ ಕೆಮಿಕಲ್ಸ್” ಎಂದು ಕರೆಯಲಾಗುತ್ತದೆ. ಏಕೆಂದರೆ ಅವು ಪರಿಸರದಲ್ಲಿ ನೈಸರ್ಗಿಕವಾಗಿ ಕರಗುವುದಿಲ್ಲ ಮತ್ತು ಮಾನವ ದೇಹದಲ್ಲಿ ಸಂಗ್ರಹವಾಗುವಂತಹ ರಾಸಾಯನಿಕವಾಗಿದೆ. ಹಾಗಾಗಿ ಪಿಎಫ್ಎಎಸ್ ಅನ್ನು ಹೆಚ್ಚು ಬಳಸುವುದರಿಂದ ಕ್ಯಾನ್ಸರ್, ಯಕೃತ್ತಿನ ಹಾನಿ, ಥೈರಾಯ್ಡ್ ಸಮಸ್ಯೆಗಳು, ಜನನ ದೋಷಗಳು ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು. ಅಲ್ಲದೇ ಇಂತಹ ಕಾಂಡೋಮ್‍ಗಳು ಮತ್ತು ಲೂಬ್ರಿಕೆಂಟ್‍ಗಳನ್ನು ಶಿಶ್ನ ಮತ್ತು ಯೋನಿಯಂತಹ ತುಂಬಾ ಸೂಕ್ಷ್ಮ ಪ್ರದೇಶಗಳಿಗೆ ಬಳಸುವುದರಿಂದ ಹೆಚ್ಚು ಆತಂಕಕಾರಿಯಾಗಿದೆ. ಯಾಕೆಂದರೆ ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಅವು ರಾಸಾಯನಿಕಗಳನ್ನು ಸುಲಭವಾಗಿ ಹೀರಿಕೊಳ್ಳಬಲ್ಲವು. ಅಲ್ಲದೇ ಈ ರಾಸಾಯನಿಕಗಳ ಕಾಂಡೋಮ್ ಬಳಕೆ ಮಾಡುವುದರಿಂದ ಸ್ತ್ರೀ ಸಂತಾನೋತ್ಪತ್ತಿಯ ನಾಳವು ಹಾನಿಗೊಳಗಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ತಂದೆಯ ಜೀವ ಉಳಿಸಲು ಮೊಸಳೆ ಬಾಯಿಗೆ ಕೈ ಹಾಕಿದ ಬಾಲಕ!

ಈ ರಾಸಾಯನಿಕಗಳನ್ನು ತಮ್ಮ ಉತ್ಪನ್ನಗಳಿಂದ ತೆಗೆದುಹಾಕಲು ಕೈಗಾರಿಕೆಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಸಂಭವಿಸಬಹುದಾದ ಆರೋಗ್ಯ ಅಪಾಯಗಳನ್ನು ತಡೆಗಟ್ಟಲು ಕಾಂಡೋಮ್ ಮತ್ತು ಲೂಬ್ರಿಕೆಂಟ್‍ಗಳಿಂದ ಪಿಎಫ್ಎಎಸ್ ಅನ್ನು ತೆಗೆದುಹಾಕಲು ತಕ್ಷಣದ ಕ್ರಮಕ್ಕೆ ಮಾಮಾವತಿ ಕರೆ ನೀಡುತ್ತಿದೆ. ತಯಾರಕರು ತಮ್ಮ ಉತ್ಪನ್ನಗಳಿಂದ ಈ ಹಾನಿಕಾರಕ ರಾಸಾಯನಿಕಗಳನ್ನು ತೆಗೆದುಹಾಕುವ ಮೂಲಕ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸಂಸ್ಥೆ ಒತ್ತಾಯಿಸುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಹಾವು ಕಚ್ಚಿದ ಮಹಿಳೆಯನ್ನು ಗಂಗಾ ನದಿಯಲ್ಲಿ ತೇಲಿ ಬಿಟ್ಟರು! ಆಕೆ ಬದುಕಿ ಬರುತ್ತಾಳೆ ಎಂದರು!

Viral Video: ಸತ್ತವರ ದೇಹವನ್ನು ಸುಟ್ಟು ಅವರ ಅಸ್ಥಿಯನ್ನು ಗಂಗಾ ನದಿಯಲ್ಲಿ ಬಿಟ್ಟರೆ ಅವರಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಆದರೆ ಉತ್ತರ ಪ್ರದೇಶದ ಹಾಪುರದ ಘರ್ ಮುಕ್ತೇಶ್ವರ ಪ್ರದೇಶದಲ್ಲಿ 20 ವರ್ಷದ ಯುವತಿಯ ಶವವನ್ನು ದೋಣಿಯಿಂದ ಗಂಗಾ ನದಿಗೆ ತೇಲಿಸಿ ಬಿಡಲಾಗಿದೆ. ಇಬ್ಬರು ವ್ಯಕ್ತಿಗಳು ಬಟ್ಟೆಯಲ್ಲಿ ಸುತ್ತಿದ ಶವವನ್ನು ನದಿಗೆ ಎಸೆಯುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾವು ಕಡಿತದಿಂದ ಯಾರಾದರೂ ಸತ್ತರೆ, ಅವರ ದೇಹವನ್ನು ಗಂಗಾ ನದಿಯಲ್ಲಿ ತೇಲಿಸಿ ಬಿಟ್ಟರೆ ಅವರು ಮತ್ತೆ ಜೀವಂತವಾಗಿ ಬರಬಹುದು ಎಂದು ನಂಬಿಕೆಯಿಂದ ಹೀಗೆ ಮಾಡಿದರಂತೆ!

VISTARANEWS.COM


on

Dead Body in Ganga River
Koo

ಮೀರತ್: ಗಂಗೆಯನ್ನು ಪವಿತ್ರ ನದಿ ಎಂದು ಕರೆಯುತ್ತಾರೆ. ಬಹಳ ಹಿಂದಿನ ಕಾಲದಿಂದಲೂ ಸತ್ತವರ ದೇಹವನ್ನು ಸುಟ್ಟು ಅವರ ಅಸ್ತಿಯನ್ನು ಗಂಗಾ ನದಿಯಲ್ಲಿ ಬಿಟ್ಟರೆ ಅವರಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇತ್ತು. ಹಾಗಾಗಿ ಜನರು ಸತ್ತವರ ಅಸ್ತಿಯನ್ನು ತೆಗೆದುಕೊಂಡು ಕಾಶಿಗೆ ಪ್ರಯಾಣಿಸುತ್ತಿದ್ದರು. ಇದೀಗ ಹಾಪುರದ ಘರ್ ಮುಕ್ತೇಶ್ವರ ಪ್ರದೇಶದಲ್ಲಿ 20 ವರ್ಷದ ಯುವತಿಯ ಶವವನ್ನು ದೋಣಿಯಿಂದ ಗಂಗಾ (Viral Video) ನದಿಗೆ ತೇಲಿಸಿ ಬಿಟ್ಟ ಆಘಾತಕಾರಿ ವಿಡಿಯೊ ಬೆಳಕಿಗೆ ಬಂದಿದೆ. ಇಬ್ಬರು ವ್ಯಕ್ತಿಗಳು ಬಟ್ಟೆಯಲ್ಲಿ ಸುತ್ತಿದ ಶವವನ್ನು ನದಿಗೆ ಎಸೆಯುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ದಲಿತ ಸಮುದಾಯಕ್ಕೆ ಸೇರಿದ ಮಹಿಳೆ ಬಹದ್ದೂರ್‌ಗಢ ಪ್ರದೇಶದ ನಿವಾಸಿಯಾಗಿದ್ದು, ಜುಲೈ 26ರಂದು ಹಾವು ಕಡಿತದಿಂದ ಸಾವನ್ನಪ್ಪಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಹಾವು ಕಡಿತದಿಂದ ಯಾರಾದರೂ ಸತ್ತರೆ, ಅವರ ದೇಹವನ್ನು ಗಂಗಾ ನದಿಯಲ್ಲಿ ತೇಲಿಸಿ ಬಿಟ್ಟರೆ ಅವರು ಮತ್ತೆ ಜೀವಂತವಾಗಿ ಬರುತ್ತಾರೆ ಎಂಬ ವಿಚಿತ್ರ ನಂಬಿಕೆ ಸ್ಥಳೀಯರಲ್ಲಿದೆ.

ಪೊಲೀಸರು ಆಕೆಯ ಕುಟುಂಬ, ಗ್ರಾಮದ ಮುಖ್ಯಸ್ಥ ಮತ್ತು ಕೆಲವು ಗ್ರಾಮಸ್ಥರನ್ನು ಪ್ರಶ್ನಿಸಿದಾಗ, ಮಹಿಳೆ ಹಾವು ಕಡಿತದಿಂದ ಸಾವನ್ನಪ್ಪಿದ್ದು ಎಂದು ದೃಢವಾಗಿದೆ. ಸ್ಥಳೀಯ ತಂತ್ರಿಯಿಂದ ಚಿಕಿತ್ಸೆ ಪಡೆದರೂ ಆಕೆ ಚೇತರಿಸಿಕೊಳ್ಳದಿದ್ದಾಗ, ಆಕೆಯ ಕುಟುಂಬವು ಮೂಢನಂಬಿಕೆಯಂತೆ ಆಕೆಯ ಶವವನ್ನು ಗಂಗಾ ನದಿಗೆ ತೇಲಿಸಿ ಬಿಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ಸತ್ಯಾಂಶಗಳನ್ನು ದೃಢಪಡಿಸಿದ ನಂತರ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದರು. ಮತ್ತು ಆಕೆಯ ಸಾವಿನಲ್ಲಿ ಯಾವುದೇ ದುರುದ್ದೇಶವಿಲ್ಲದ ಕಾರಣ ಶವವನ್ನು ಹಿಂಪಡೆಯುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಹಾವು ಕಚ್ಚಿದವರ ಶವಗಳನ್ನು ತೇಲಿಸಿ ಬಿಡುವ ಅಭ್ಯಾಸ ಸ್ಥಳೀಯ ಹಳ್ಳಿಗಳಲ್ಲಿ ಹೊಸತೇನಲ್ಲ. ಮೇ ತಿಂಗಳಲ್ಲಿ ಬುಲಂದ್ ಶಹರ್‌ನ ಜಹಾಂಗೀರಾಬಾದ್ ಪ್ರದೇಶದಲ್ಲಿ ಹಾವು ಕಚ್ಚಿದ ನಂತರ 22 ವರ್ಷದ ವ್ಯಕ್ತಿಯ ದೇಹವನ್ನು ಎರಡು ದಿನಗಳ ಕಾಲ ಗಂಗಾ ನದಿಯಲ್ಲಿ ಮುಳುಗಿಸಲಾಗಿತ್ತು. ದೇಹವು ಕೊಳೆಯಲು ಪ್ರಾರಂಭಿಸಿದ ನಂತರವೇ ದಹನ ಮಾಡಲಾಗಿತ್ತು.

ಇದನ್ನೂ ಓದಿ: ವರದಕ್ಷಿಣೆ ತರಲು ನಿರಾಕರಿಸಿದ ಪತ್ನಿಗೆ ವಾಟ್ಸಾಪ್‍ನಲ್ಲೇ ತ್ರಿವಳಿ ತಲಾಖ್!

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾವು ಕಡಿತದಿಂದ ಸಾವನ್ನಪ್ಪಿದೆ. ಬಿಹಾರದ ಸರನ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ರಾಜೀವ್ ಪ್ರತಾಪ್ ಸೋಮವಾರ ಸಂಸತ್ತಿನಲ್ಲಿ ಮಾತನಾಡಿ, “ದೇಶದಲ್ಲಿ ಪ್ರತಿವರ್ಷ ಸುಮಾರು 50,000 ಜನರು ಹಾವು ಕಡಿತದಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಪ್ರತಿ ವರ್ಷ ಭಾರತದಾದ್ಯಂತ 30-40 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಾರೆ” ಎಂದು ಹೇಳಿದ್ದಾರೆ.

Continue Reading

ದೇಶ

Pralhad Joshi: ಹಸಿರು ಜಲಜನಕ ಮಿಷನ್‌ಗೆ 19744 ಕೋಟಿ ರೂ. ಮೀಸಲು; ಪ್ರಲ್ಹಾದ್‌ ಜೋಶಿ

Pralhad Joshi: ಕೇಂದ್ರ ಸರ್ಕಾರವು ಹಸಿರು ಜಲಜನಕ ಮಿಷನ್‌ಗೆ 19744 ಕೋಟಿ ರೂ. ಮೀಸಲಿಟ್ಟಿದೆ ಎಂದು ತಿಳಿಸಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹಸಿರು ಜಲಜನಕವನ್ನು ಬಳಸುವ ಮುನ್ನವೇ ಭಾರತದಲ್ಲಿ ಈಗ ಹಸಿರು ಜಲಜನಕದ ಬಳಕೆಗೆ ನಾಂದಿ ಹಾಡಲಾಗುತ್ತಿದೆ. ಇದರ ಶ್ರೇಯಸ್ಸು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ತಿಳಿಸಿದ್ದಾರೆ.

VISTARANEWS.COM


on

19744 Crore rupees Reserve for Green Hydrogen Mission says Minister Pralhad Joshi Information
Koo

ನವದೆಹಲಿ: ಕೇಂದ್ರ ಸರ್ಕಾರವು ಹಸಿರು ಜಲಜನಕ ಮಿಷನ್‌ಗೆ 19744 ಕೋಟಿ ರೂ. ಮೀಸಲಿಟ್ಟಿದೆ ಎಂದು ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದರು.

ಸದನದಲ್ಲಿ ಪ್ರಶ್ನೋತ್ತರ ವೇಳೆ ಪ್ರಸ್ತಾಪಿಸಿದ ಸಚಿವರು, SIGHT ಯೋಜನೆಯಡಿಯಲ್ಲಿ ಹಸಿರು ಜಲಜನಕ ಮಿಷನ್‌ಗೆ ಉತ್ತೇಜನ ನೀಡಲಾಗಿದೆ ಎಂದ ಅವರು, ಭಾರತದಲ್ಲಿ ನಾವು ಹಸಿರು ಉದ್ಯೋಗ ವಲಯಕ್ಕಾಗಿ ಬೃಹತ್ ಮಾರ್ಗಸೂಚಿ ಸಿದ್ಧಪಡಿಸಿದ್ದೇವೆ. ಹಸಿರು ಜಲಜನಕ, ಎಲೆಕ್ಟ್ರಿಕ್ ವಾಹನಗಳಂತಹ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Paris Olympics: ಕಂಚಿನ ಪದಕ ಗೆದ್ದ ರೈಲ್ವೆ ಟಿಕೆಟ್ ಕಲೆಕ್ಟರ್ ಸ್ವಪ್ನಿಲ್‌ ಕುಸಾಲೆ

ದೇಶದಲ್ಲಿ ಹಸಿರು ಜಲಜನಕದ ಉತ್ಪಾದನೆಗೆ ಪ್ರೋತ್ಸಾಹಿಸುವ ಜತೆಗೆ ರಫ್ತಿಗೂ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ನಿರ್ಮಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಬಂದಾಗಿನಿಂದ ಭಾರತದಲ್ಲಿ ತಂತ್ರಜ್ಞಾನದ ಅನುಷ್ಠಾನ ಪ್ರಪಂಚಕ್ಕೆ ಹೋಲಿಸಿದರೆ ಯಾವಾಗಲೂ ಬಹಳ ವಿಳಂಬವಾಗಿಯೇ ಇದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹಸಿರು ಜಲಜನಕವನ್ನು ಬಳಸುವ ಮುನ್ನವೇ ಭಾರತದಲ್ಲಿ ಈಗ ಹಸಿರು ಜಲಜನಕದ ಬಳಕೆಗೆ ನಾಂದಿ ಹಾಡಲಾಗುತ್ತಿದೆ. ಇದರ ಶ್ರೇಯಸ್ಸು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

Continue Reading

ವೈರಲ್ ನ್ಯೂಸ್

Viral Video: ಬಟ್ಟೆ ಹರಿದುಕೊಂಡು ಪುರುಷನ ಮೇಲೆ ಮುಗಿಬಿದ್ದ ಮಹಿಳೆ! ಅಬ್ಬಾ, ಎಂಥ ಜಗಳಗಂಟಿ ಎಂದ ನೆಟ್ಟಿಗರು!

Viral Video: ಜಗಳ, ಹೊಡೆದಾಟ ನಮ್ಮೊಳಗಿನ ರಾಕ್ಷಸತ್ವವನ್ನು ಹೆಚ್ಚಿಸುತ್ತದೆ ಹೊರತು ಕಡಿಮೆ ಮಾಡುವುದಿಲ್ಲ. ಇಲ್ಲೊಬ್ಬಳು ಮಹಿಳೆ ಪುರುಷನೊಂದಿಗೆ ಜಗಳವಾಡುತ್ತಾ ತನ್ನ ಬಟ್ಟೆಯನ್ನು ತಾನೇ ಹಿದುಕೊಂಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ, ಹೆಚ್ಚಿನ ಸಂಖ್ಯೆಯ ಬಳಕೆದಾರರು ಬಟ್ಟೆಯನ್ನು ಹರಿದುಹಾಕಿದ ಮಹಿಳೆಯ ಕೃತ್ಯದ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ವಿಡಿಯೊ ರೆಕಾರ್ಡ್ ಮಾಡಿ ತನ್ನನ್ನು ಸುಳ್ಳು ಆರೋಪಗಳಿಂದ ಕಾಪಾಡಿಕೊಂಡ ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ.

VISTARANEWS.COM


on

Viral Video
Koo


ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದ್ದಲ್ಲದೆ ಮೈಮೇಲಿದ್ದ ಬಟ್ಟೆಯನ್ನು ಹರಿದುಕೊಂಡು ಪುರುಷನೊಬ್ಬನ ಜೊತೆ ಮಹಿಳೆಯೊಬ್ಬಳು ಜಗಳವಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಇದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಪುರುಷ ಮತ್ತು ಮಹಿಳೆ ಕೆಟ್ಟದಾಗಿ ಜಗಳವಾಡುತ್ತಿರುವ ದೃಶ್ಯ ಕಂಡು ಬಂದಿದೆ. ಈ ಕ್ಲಿಪ್‍ನಲ್ಲಿ ಮಹಿಳೆ ಮತ್ತು ಪುರುಷರೊಬ್ಬರ ನಡುವೆ ಬಿಸಿಯಾದ ಮಾತಿನ ಚಕಮಕಿ ನಡೆಯುತ್ತಿದೆ. ಮಹಿಳೆಯೊಬ್ಬಳು ಜಮೀನಿನಲ್ಲಿ ನೀರು ನಿಲ್ಲುವ ವಿವಾದದ ಬಗ್ಗೆ ವ್ಯಕ್ತಿಯೊಂದಿಗೆ ವಾದಿಸುತ್ತ ತನ್ನ ಬಟ್ಟೆಗಳನ್ನು ತಾನೇ ಹರಿದುಕೊಂಡಿದ್ದಾಳೆ. ಕೈಯಲ್ಲಿ ರಾಡ್ ಹಿಡಿದುಕೊಂಡು ಆ ವ್ಯಕ್ತಿಯನ್ನು ಹೊಡೆಯಲು ಓಡಿಸಿಕೊಂಡು ಹೋಗುತ್ತಿದ್ದಾಳೆ. ನಂತರ ಅವಳು ತನ್ನ ಕೈಯಲ್ಲಿ ರಾಡ್ ಅನ್ನು ತೆಗೆದುಕೊಂಡು ಇಟ್ಟಿಗೆಯ ಗೋಡೆಯನ್ನು ಒಡೆದು ಹಾಕಿದ್ದಾಳೆ. ಆ ವ್ಯಕ್ತಿ ಅದನ್ನು ವಿಡಿಯೊ ಮಾಡಿದ್ದಾನೆ.

ಅದನ್ನು ನೋಡಿದ , ಮಹಿಳೆ ತನ್ನನ್ನು ವಿಡಿಯೊ ಮಾಡುವ ವ್ಯಕ್ತಿಗೆ ಅದೇ ಕೋಲಿನಿಂದ ಹೊಡೆಯುವುದಾಗಿ ಬೆದರಿಕೆ ಹಾಕುತ್ತಾಳೆ. ʼಹಿಮಾಲಯನ್ ಹಿಂದೂʼ ಎಂಬ ಬಳಕೆದಾರರು ಎಕ್ಸ್ (ಈ ಹಿಂದೆ ಟ್ವಿಟರ್)ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಘಟನೆಯ ನಿಖರವಾದ ದಿನಾಂಕ, ಸ್ಥಳ ಮತ್ತು ಸಮಯದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಇದನ್ನೂ ಓದಿ: ಮಹಿಳೆಯ ಎದೆ, ಕುತ್ತಿಗೆಗೆ ಭೀಕರವಾಗಿ ತಿವಿದ ಬೀದಿ ಹಸು; ಮೈ ನಡುಗಿಸುವ ವಿಡಿಯೊ

ಆದರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ, ಹೆಚ್ಚಿನ ಸಂಖ್ಯೆಯ ಬಳಕೆದಾರರು ಬಟ್ಟೆಯನ್ನು ಹರಿದುಹಾಕಿದ ಮಹಿಳೆಯ ಕೃತ್ಯದ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ವಿಡಿಯೊ ರೆಕಾರ್ಡ್ ಮಾಡಿ ತನ್ನನ್ನು ಸುಳ್ಳು ಆರೋಪಗಳಿಂದ ಕಾಪಾಡಿಕೊಂಡ ವ್ಯಕ್ತಿಯನ್ನು ಶ್ಲಾಘಿಸುತ್ತಿದ್ದಾರೆ. ‘ಸುಳ್ಳು ಆರೋಪಗಳನ್ನು ಹೊರಿಸುವುದು ಇತ್ತೀಚಿನ ದಿನಗಳಲ್ಲಿ ಸುಲಭದ ಕೆಲಸ’ ಎಂದು ಇನ್ನೊಬ್ಬರು ಬರೆದಿದ್ದಾರೆ. ಈ ಜಗಳದ ವಿಡಿಯೊ ನೋಡಿದ ಜನ, ಥೋ…ಈಕೆ ಎಂಥ ಜಗಳಗಂಟಿ ಎಂದು ಉದ್ಗರಿಸಿದ್ದಾರೆ.

Continue Reading

ವಿದೇಶ

Israel Attack: ಟೂತ್‌ಪೇಸ್ಟ್‌ನಲ್ಲಿ ವಿಷ ಬೆರೆಸಿದ ಇಸ್ರೇಲ್‌ ಗುಪ್ತದಳ! ಪ್ಯಾಲೆಸ್ತೀನ್‌ ಕಮಾಂಡರ್‌ ನರಳಿ ನರಳಿ ಸತ್ತ! ಸೇಡಿನ interesting story

ಇಸ್ಮಾಯಿಲ್ ಹನಿಯೆಹ್ ಮತ್ತು ಫುವಾಡ್ ಶುಕರ್ ಎಂಬ ಹಮಾಸ್‌ ಉಗ್ರ ನಾಯಕರ ಮೇಲೆ ದಾಳಿ ನಡೆಸಿ ಇಸ್ರೇಲ್ (Israel Attack) ಕೊಂದು ಹಾಕಿದೆ. ಈ ಮೂಲಕ ತನ್ನ ಶತ್ರುವನ್ನು ಎಲ್ಲಿ ಬೇಕಾದರೂ ಕೊಲ್ಲಬಹುದು ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. 1978ರಲ್ಲೂ ಇಂಥದ್ದೇ ಒಂದು ಘಟನೆ ನಡೆದಿತ್ತು. ಸಣ್ಣ ಸುಳಿವನ್ನೂ ಬಿಟ್ಟು ಕೊಡದ ಹಾಗೆ ಇಸ್ರೇಲ್‌ ಗುಪ್ತಚರ ದಳ ʼಮೊಸಾದ್‌ʼ ಪ್ಯಾಲೆಸ್ತೀನ್‌ ಕಮಾಂಡರ್‌ನನ್ನು ಅತ್ಯಂತ ಚಾಣಾಕ್ಷತನದಿಂದ ಕೊಂದು ಹಾಕಿತ್ತು. ಈ ಕುರಿತ ರೋಚಕ ಮಾಹಿತಿ ಇಲ್ಲಿದೆ.

VISTARANEWS.COM


on

By

Israel Attack
Koo

ಇಬ್ಬರು ದೊಡ್ಡ ಶತ್ರುಗಳನ್ನು ಇಸ್ರೇಲ್ (Israel Attack) ಕೇವಲ ಹನ್ನೆರಡು ಗಂಟೆಗಳ ಅವಧಿಯಲ್ಲಿ ಕೊಂದು ಹಾಕಿದೆ. ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ಹಮಾಸ್‌ನ ಉನ್ನತ ನಾಯಕ ಇಸ್ಮಾಯಿಲ್ ಹನಿಯೆಹ್ (Ismail Haniyeh) ಮತ್ತು ಲೆಬನಾನ್ ರಾಜಧಾನಿ ಬೈರುತ್‌ನಲ್ಲಿ ಹಿಜ್ಬುಲ್ಲಾ ಕಮಾಂಡರ್ ಫುವಾಡ್ ಶುಕರ್ (Fuad Shukar) ಮೇಲೆ ವೈಮಾನಿಕ ದಾಳಿ ನಡೆಸಿ ಕೊಂದು ಹಾಕಲಾಗಿದೆ. ಈ ಎರಡೂ ಘಟನೆಗಳ ಹಿಂದೆ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ (Israel’s intelligence agency Mossad) ಕೈವಾಡ ಇರುವುದು ಅತ್ಯಂತ ಸ್ಪಷ್ಟವಾಗಿದೆ.

ಇಸ್ರೇಲ್ ತನ್ನ ಶತ್ರುವನ್ನು ಎಲ್ಲಿ ಬೇಕಾದರೂ ಕೊಲ್ಲಬಹುದು ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. 1978ರಲ್ಲೂ ಇಂಥದ್ದೇ ಒಂದು ಘಟನೆ ನಡೆದಿತ್ತು. ಸಣ್ಣ ಸುಳಿವನ್ನೂ ಬಿಟ್ಟು ಕೊಡದ ಹಾಗೆ ʼಮೊಸಾದ್‌ʼ ಪ್ಯಾಲೇಸ್ಟಿನಿಯನ್ ಕಮಾಂಡರ್ ವಾಡಿ ಹಡ್ಡಾಡ್‌ನನ್ನು (Wadie Haddad) ಟೂತ್‌ಪೇಸ್ಟ್‌ನಲ್ಲಿ ವಿಷ ಬೆರೆಸಿ ಕೊಂದು ಹಾಕಿತ್ತು!

ಪ್ಯಾಲೆಸ್ತೀನ್‌ ವಿಮೋಚನೆಗಾಗಿ ಪಾಪ್ಯುಲರ್ ಫ್ರಂಟ್ ಎಂಬ ಪ್ಯಾಲೆಸ್ತೀನ್ ಸಂಘಟನೆಯ ಮುಖ್ಯಸ್ಥನಾಗಿದ್ದ ವಾಡಿ ಹಡ್ಡಾಡ್‌ನನ್ನು 1978ರಲ್ಲಿ ಕೊಲ್ಲಲಾಯಿತು. ಬಾಗ್ದಾದ್‌ನಲ್ಲಿ ಊಟ ಸೇವಿಸಿದ ಬಳಿಕ ಆತ ತೀವ್ರವಾದ ಹೊಟ್ಟೆ ನೋವನ್ನು ಅನುಭವಿಸಿದ್ದ. ಅನಂತರ ಅವನಿಗೆ ಹಸಿವು ಕಡಿಮೆಯಾಗಿತ್ತು. ಸುಮಾರು 25 ಪೌಂಡ್‌ಗಳಿಗಿಂತ ಹೆಚ್ಚು ತೂಕವನ್ನು ಕಳೆದುಕೊಂಡ. ಆತನ ಸ್ಥಿತಿ ಗಂಭೀರವಾದಾಗ ಇರಾನಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ವೈದ್ಯರು ಹೆಪಟೈಟಿಸ್ ಅನ್ನು ಶಂಕಿಸಿದರು. ಶಕ್ತಿಯುತವಾದ ಪ್ರತಿಜೀವಕಗಳನ್ನು ನೀಡಲಾಯಿತು. ಅತ್ಯುತ್ತಮ ವೈದ್ಯರು ಆತನಿಗೆ ಚಿಕಿತ್ಸೆ ನೀಡಿದರು. ಆದರೆ ಹಡ್ದಾಡ್‌ನ ಸ್ಥಿತಿ ಸುಧಾರಿಸಲಿಲ್ಲ. ಕೂದಲು ಉದುರಲಾರಂಭಿಸಿತು. ಜ್ವರ ಕಡಿಮೆಯಾಗಲೇ ಇಲ್ಲ. ವಿಷ ಉಣಿಸಿರುವ ಶಂಕೆ ವ್ಯಕ್ತವಾದರೂ ಅದು ಯಾವುದು, ಹೇಗೆ ಅದನ್ನು ನೀಡಲಾಯಿತು ಎಂಬುದನ್ನು ವೈದ್ಯರಿಗೆ ಪತ್ತೆ ಹಚ್ಚಲು ಸಾಧ್ಯವಾಗಲೇ ಇಲ್ಲ.

ಪ್ಯಾಲೆಸ್ತೀನ್‌ ಲಿಬರೇಶನ್ ಆರ್ಗನೈಸೇಶನ್‌ನ ನಾಯಕ ಯಾಸರ್ ಅರಾಫತ್, ಪೂರ್ವ ಜರ್ಮನಿಯ ರಹಸ್ಯ ದಳವಾದ ʼಸ್ಟಾಸಿʼಯಿಂದ ಸಹಾಯ ಪಡೆಯಲು ಸಹಾಯಕರನ್ನು ಕೇಳಿದರು. ಇದು ಸೋವಿಯತ್ ರಷ್ಯಾ ಪ್ಯಾಲೆಸ್ತೀನ್‌ ಹೋರಾಟಗಾರರಿಗೆ ಸಹಾಯ ಮಾಡಿದ ಸಮಯವಾಗಿತ್ತು. ಅವರಿಗೆ ಪಾಸ್‌ಪೋರ್ಟ್‌, ಆಶ್ರಯ, ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರವನ್ನು ಒದಗಿಸಿತು.

Israel Attack
Israel Attack


ಅರಾಫತ್‌ನ ಸಹಾಯಕನು ಪೂರ್ವ ಜರ್ಮನ್ ರಹಸ್ಯ ಸೇವೆ ಅಥವಾ ಸ್ಟಾಸಿಯನ್ನು ತಲುಪಿದಾಗ ಹಡ್ಡಾಡ್‌ನನ್ನು 1978ರ ಮಾರ್ಚ್ 19ರಂದು ಇರಾಕ್‌ ರಾಜಧಾನಿ ಬಾಗ್ದಾದ್‌ನಿಂದ ಪೂರ್ವ ಬರ್ಲಿನ್‌ಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಗುಪ್ತಚರ ಮತ್ತು ರಹಸ್ಯ ಸೇವೆಯ ಸಮುದಾಯದ ಸದಸ್ಯರು ಚಿಕಿತ್ಸೆ ನೀಡಿದರು. ಅದಾಗಲೇ ಎರಡು ತಿಂಗಳ ನೋವಿನಿಂದ ಒದ್ದಾಡಿದ್ದ ಹಡ್ಡಾಡ್‌ಗೆ ಏನಾಗಿದೆ ಎಂಬುದನ್ನು ಪತ್ತೆ ಹಚ್ಚಲು ಅಲ್ಲೂ ಸಾಧ್ಯವಾಗಲಿಲ್ಲ.

ಆದರೆ ಬಾಗ್ದಾದ್‌ನಿಂದ ಏರ್‌ಲಿಫ್ಟ್‌ ಆಗುತ್ತಿರುವಾಗ ಹಡ್ಡಾಡ್‌ನ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿದಾಗ ಅದರಲ್ಲಿ ಟೂತ್‌ಪೇಸ್ಟ್‌ನ ಟ್ಯೂಬ್ ಒಂದು ಪತ್ತೆಯಾಯಿತು. ನಲವತ್ತೊಂದು ವರ್ಷದ ಹಡ್ಡಾಡ್‌ನನ್ನು ಪೂರ್ವ ಬರ್ಲಿನ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಅದಾಗಲೇ ಆತನ ದೇಹದ ವಿವಿಧ ಭಾಗಗಳಲ್ಲಿ ರಕ್ತಸ್ರಾವವಾಗುತ್ತಿತ್ತು. ಹೃದಯದ ಸುತ್ತ ಇರುವ ಪೆರಿಕಾರ್ಡಿಯಂ, ನಾಲಿಗೆ, ಪ್ಲೆರಲ್ ಪೊರೆಗಳು, ಟಾನ್ಸಿಲ್‌, ಮೂತ್ರ, ಮಲದಲ್ಲೂ ರಕ್ತ ಸೋರಿಕೆಯಾಗಿದ್ದು ಮಾತ್ರವಲ್ಲ ಪ್ಲೇಟ್ಲೆಟ್ ಸಂಖ್ಯೆ ಅಪಾಯಕಾರಿಯಾಗಿ ಕುಸಿಯಿತು.

ವೈದ್ಯರು ಆತನಿಗೆ ಸಾಧ್ಯವಿರುವ ಎಲ್ಲಾ ಪರೀಕ್ಷೆಗಳನ್ನು ನಡೆಸಿದರು. ಆದರೆ ಏನೂ ಫಲಿತಾಂಶ ಹೊರಬರಲಿಲ್ಲ. ಆತನಿಗೆ ಇಲಿ ವಿಷ ಅಥವಾ ಥಾಲಿಯಮ್ ನೀಡಲಾಗಿದೆ ಎಂದು ಊಹಿಸಲಾಯಿತು. ಆದರೆ ಇದಕ್ಕೂ ಸ್ಪಷ್ಟತೆ ಸಿಗಲಿಲ್ಲ. ಅಲ್ಲಿ ಆತ ತೀವ್ರವಾಗಿ ನೋವಿನಿಂದ ಒದ್ದಾಡುತ್ತಿದ್ದ. ಆತನ ಕಿರುಚಾಟ, ನರಳಾಟ ಆಸ್ಪತ್ರೆಯ ತುಂಬೆಲ್ಲ ಕೇಳುತ್ತಿತ್ತು. ವೈದ್ಯರು ಹಗಲು ರಾತ್ರಿ ಆತನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಇಡಬೇಕಾಯಿತು.

ಅಲ್ಲಿ ಹತ್ತು ದಿನಗಳ ಕಾಲ ತೀವ್ರ ಸಂಕಟ ಅನುಭವಿಸಿ ಮಾರ್ಚ್ 29ರಂದು ಹಡ್ಡಾಡ್‌ ಸತ್ತೇ ಹೋದ. ಅನಂತರ ಸಂಪೂರ್ಣ ಶವಪರೀಕ್ಷೆ ನಡೆಸಲಾಯಿತು. ಗುಪ್ತಚರ ಸಂಸ್ಥೆ ʼಸ್ಟಾಸಿʼಯ ಫೋರೆನ್ಸಿಕ್ ತಜ್ಞ ಪ್ರೊಫೆಸರ್ ಒಟ್ಟೊ ಪ್ರೊಕೊಪ್ ಅವರು ಈ ಕುರಿತು ಮಾಹಿತಿ ನೀಡಿ, ಹಡ್ಡಾಡ್‌ ಮೆದುಳಿನ ರಕ್ತಸ್ರಾವ ಮತ್ತು ನ್ಯುಮೋನಿಯಾದಿಂದ ಸಾವನ್ನಪ್ಪಿದ್ದಾನೆ. ಆತನನ್ನು ಹತ್ಯೆ ಮಾಡಿರುವ ಅನುಮಾನವಿದೆ ಎಂದು ಹೇಳಿದರು.

ಇದನ್ನೂ ಓದಿ: Ismail Haniyeh Killing: ಹಮಾಸ್‌ನ ಹೊಸ ಮುಖ್ಯಸ್ಥನಾಗಿ ಖಲೀದ್‌ ಮೆಶಾಕ್‌? ಈತನ ಹಿನ್ನೆಲೆ ಏನು?

ಟೂತ್ ಪೇಸ್ಟ್‌ನಲ್ಲಿತ್ತು ವಿಷ!

ಹಡ್ಡಾಡ್‌ನ ಸಾವು ಸಹಜ ಎಂದು ಕಾಣುವಂತೆ ಮಾಡಲು ಆತ ಬಳಸುತ್ತಿದ್ದ ಟೂತ್ ಪೇಸ್ಟ್ ಅನ್ನೇ ಅಸ್ರ್ರವಾಗಿ ಬಳಸಲಾಗಿತ್ತು. ಹಡ್ಡಾಡ್ ನಿತ್ಯ ಬಳಸುವ ಟೂತ್ ಪೇಸ್ಟ್ ಅನ್ನು ವಿಷಕಾರಿ ಟೂತ್ ಪೇಸ್ಟ್ ನೊಂದಿಗೆ ಬದಲಾಯಿಸಲಾಗಿತ್ತು! ಆತನ ಮರಣದ ಬಳಿಕ ಪರೀಕ್ಷೆ ಮಾಡಿದ ಟೂತ್ ಪೇಸ್ಟ್ ಟ್ಯೂಬ್‌ನಲ್ಲಿ ವಿಷ ಕಂಡು ಬಂದಿತ್ತು. ಟೆಲ್ ಅವೀವ್‌ನ ಆಗ್ನೇಯ ಭಾಗದಲ್ಲಿರುವ ನೆಸ್ ಜಿಯೋನಾದಲ್ಲಿರುವ ಇಸ್ರೇಲ್ ಇನ್‌ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್‌ನಲ್ಲಿ ಈ ವಿಷವನ್ನು ಅಭಿವೃದ್ಧಿಪಡಿಸಲಾಗಿತ್ತು. ಹಡ್ಡಾಡ್‌ ಹಲ್ಲುಜ್ಜುತ್ತಿದ್ದಾಗ ಈ ವಿಷವು ಅವನ ದೇಹವನ್ನು ಪ್ರವೇಶಿಸುತ್ತಿತ್ತು. ಇದು ನಿಧಾನವಾಗಿ ನಿರ್ಣಾಯಕ ಮಟ್ಟ ತಲುಪಿದಾಗ ಆತನ ಜೀವಕ್ಕೆ ಮಾರಕವಾಯಿತು. ಹೀಗೆ ಅತ್ಯಂತ ಚಾಣಾಕ್ಷತನದಿಂದ ಇಸ್ರೇಲ್‌ ಗುಪ್ತಚರ ದಳವು ತನ್ನ ವೈರಿ ʼಉಗ್ರ ನಾಯಕʼನನ್ನು ಕೊಂದು ಹಾಕಿತ್ತು!

Continue Reading
Advertisement
Parliament session
ದೇಶ1 min ago

Parliament Building: ಸೋರುತಿಹುದು ನೂತನ ಸಂಸತ್‌ ಭವನದ ಮಾಳಿಗೆ-ಪ್ರತಿಪಕ್ಷಗಳು ಕಿಡಿ

Paris Olympic
ಕ್ರೀಡೆ8 mins ago

Paris Olympic: ಐತಿಹಾಸಿಕ ಪದಕ ಗೆದ್ದ ಸ್ವಪ್ನಿಲ್‌ ಕುಸಾಲೆಗೆ ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ

MS Dhoni
ಪ್ರಮುಖ ಸುದ್ದಿ21 mins ago

MS Dhoni : ಸಿಎಸ್​​ಕೆಗೆ ನ್ಯಾಯ ಸಲ್ಲಿಸುವೆ; ಐಪಿಎಲ್ ನಿವೃತ್ತಿ ಕುರಿತು ಸ್ಪಷ್ಟನೆ ನೀಡಿದ ಎಂಎಸ್​ ಧೋನಿ

karnataka rain
ಮಳೆ34 mins ago

Karnataka Rain : ಕೃಷ್ಣಾ ನದಿ ಪ್ರವಾಹದಲ್ಲಿ ಪಲ್ಟಿ ಹೊಡೆದ ಬೋಟ್‌; ಎತ್ತುಗಳ ಮೇಲೆ ಕುಸಿದು ಬಿದ್ದ ಗೋಡೆ

Job Alert
ಉದ್ಯೋಗ37 mins ago

Job Alert: ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಐಟಿಐ ಪಾಸಾದವರು ಅಪ್ಲೈ ಮಾಡಿ

Paris Olympics
ಕ್ರೀಡೆ51 mins ago

Paris Olympics: ಒಲಿಂಪಿಕ್ಸ್​ ಅಭಿಯಾನ ಮುಗಿಸಿದ ಬಾಕ್ಸರ್​ ನಿಖತ್ ಜರೀನ್; ಪ್ರೀ ಕ್ವಾರ್ಟರ್​ನಲ್ಲಿ ಸೋಲು

Swapnil Kusale
ಪ್ರಮುಖ ಸುದ್ದಿ53 mins ago

Swapnil Kusale : ರೈಲ್ವೆ ಟಿಕೆಟ್​ ಕಲೆಕ್ಟರ್​ ಈಗ ಒಲಿಂಪಿಕ್​ ಹೀರೊ; ಧೋನಿಯಂತೆಯೇ ಸಾಧನೆ ಮಾಡಿ ಕಂಚು ಗೆದ್ದ ಶೂಟರ್​ ಸ್ವಪ್ನಿಲ್ ಕುಸಾಲೆ

Students
ಶಿಕ್ಷಣ54 mins ago

ಪದವಿ, ಸ್ನಾತಕೋತ್ತರ ಪದವಿ ಸೀಟುಗಳು ಖಾಲಿ ಉಳಿದರೆ ಸಿಇಟಿ ನಡೆಸಲು ವಿವಿಗಳಿಗೆ ಯುಜಿಸಿ ಅನುಮತಿ!

Krishna Janmabhoomi
ದೇಶ56 mins ago

Mathura Krishna Janmabhoomi: ಮಥುರಾ ಶ್ರೀಕೃಷ್ಣ ಜನ್ಮಭೂಮಿ ವಿವಾದ; ಮುಸ್ಲಿಂ ಪರ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

Darshan Judicial Custody extended till 14th August
ಸ್ಯಾಂಡಲ್ ವುಡ್59 mins ago

Actor Darshan: ದರ್ಶನ್​ & ಗ್ಯಾಂಗ್​ಗೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌