T20 World Cup : ಪಾಕಿಸ್ತಾನಕ್ಕೆ ಸಂಕಷ್ಟ ತಂದಿಟ್ಟ ಭಾರತ; ಸೂಪರ್ 8 ಹಂತ ಪ್ರವೇಶವೂ ಕಷ್ಟ! - Vistara News

Latest

T20 World Cup : ಪಾಕಿಸ್ತಾನಕ್ಕೆ ಸಂಕಷ್ಟ ತಂದಿಟ್ಟ ಭಾರತ; ಸೂಪರ್ 8 ಹಂತ ಪ್ರವೇಶವೂ ಕಷ್ಟ!

T20 World Cup : ಸದ್ಯದ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಆಡಿರುವ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ನಾಲ್ಕು ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಇದು ಅವರ ನೆಟ್ ರನ್ ರೇಟ್ (ಎನ್ಆರ್ಆರ್) ಅನ್ನು +1.455 ಕ್ಕೆ ಹೆಚ್ಚಿಸಿದೆ. ಭಾರತದಷ್ಟೇ ಅಂಕ ಹೊಂದಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ನಂತರದ ಸ್ಥಾನದಲ್ಲಿದೆ.

VISTARANEWS.COM


on

T20 World Cup
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂಯಾರ್ಕ್​: ಇಲ್ಲಿ ಭಾನುವಾರ ರಾತ್ರಿ ನಡೆದ ಟಿ 20 ವಿಶ್ವಕಪ್ 2024ರ (T20 World Cup) 19 ನೇ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಪಾಕಿಸ್ತಾನ (Pakistan Cricket Team) ಮುಖಾಮುಖಿಯಾದಾಗ ಟೂರ್ನಿಯ ಕೇಂದ್ರ ಬಿಂದು ಎಂದು ಹೇಳಲಾಯಿತು. ಅದು ಸಾಕ್ಷಿ ಸಮೇತ ಸಾಬೀತು ಕೂಡ ಆಗಿದೆ. ಟಾಸ್ ಗೆದ್ದ ನಂತರ ನಾಯಕ ಬಾಬರ್ ಅಜಮ್ ಭಾರತ ತಂಡಕ್ಕೆ ಬ್ಯಾಟ್ ಮಾಡಲು ಆಹ್ವಾನ ಕೊಟ್ಟರು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬೇಗ ಔಟಾದಾಗ ಇದು ಸರಿ ಎನಿಸಿತು. ಆದರೆ, ಸಿಕ್ಕ ಅವಕಾಶವನ್ನು ಕಳೆದುಕೊಂಡ ಪಾಕಿಸ್ತಾನ ತಂಡ ಕೊನೆಯಲ್ಲಿ 6 ರನ್​ಗಳಿಂದ ಸೋತಿತು. ಈ ಮೂಲಕ ಪರಿತಪಿಸಲು ಆರಂಭಿಸಿದೆ. ಭಾರತ ತಂಡದ ಪಾಕಿಸ್ತಾನದ ಸೂಪರ್-8 ಹಂತದ ಪ್ರವೇಶಕ್ಕೆ ಮುಳ್ಳಾಗಿದೆ.

ಪಂದ್ಯದಲ್ಲಿ ಭಾರತ ಪರ ಯುವ ಬ್ಯಾಟರ್​ ರಿಷಭ್ ಪಂತ್ 41 ರನ್ ಬಾರಿಸಿದರು. ಅವರ ರನ್​ ಭಾರತ ಪರ ಗರಿಷ್ಠ ಸ್ಕೋರ್. ಆದರೆ ನಸೀಮ್ ಶಾ ಮತ್ತು ಮೊಹಮ್ಮದ್ ಅಮೀರ್ ಅವರ ಬೌಲಿಂಗ್ ಸ್ಪೆಲ್​ಗಳು ಭಾರತದ ಬ್ಯಾಟಿಂಗ್ ಘಟಕವನ್ನು ಧೂಳಿಪಟ ಮಾಡಿದರು. ಒಂದು ಬಾರಿ ಕುಸಿದ ಭಾರತ ಚೇತರಿಸಿಕೊಳ್ಳಲೇ ಇಲ್ಲ. ಅಂತಿಮವಾಗಿ 18.3 ಓವರ್​ಗಳಲ್ಲಿ 119 ರನ್​ಗಳಿಗೆ ಆಲ್​ಔಟ್ ಆಯಿತು.

ಉತ್ತರವಾಗಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಎಚ್ಚರಿಕೆಯಿಂದ ಇನಿಂಗ್ಸ್​​ ಪ್ರಾರಂಭಿಸಿದರು. ಆದರೆ ಶೀಘ್ರದಲ್ಲೇ ಜಸ್ಪ್ರೀತ್ ಬುಮ್ರಾ ಭಾರತಕ್ಕೆ ಪ್ರಗತಿ ತಂದುಕೊಟ್ಟರು. ಆದಾಗ್ಯೂ, ರಿಜ್ವಾನ್ ತಳವೂರಿ ಆಡಿ ಸ್ಕೋರ್ ಬೋರ್ಡ್ ಹಿಗ್ಗಿಸಲು ಯತ್ನಿಸಿದರು. ಆದರೆ ಮೊಹಮ್ಮದ್ ಸಿರಾಜ್ ಮತ್ತು ನಂತರ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರ ಕೆಲವು ಬಿಗಿಯಾದ ಸ್ಪೆಲ್​ಗಳು ಪಾಕಿಸ್ತಾನಕ್ಕೆ ರನ್​ ಗಳಿಸಲು ಕೊಂಚವೂ ಅವಕಾಶ ಕೊಡಲಿಲ್ಲ. ನಂತರ, ಬುಮ್ರಾ 19 ನೇ ಓವರ್​ನಲ್ಲಿ ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಭಾರತ ತಂಡ ಪರ ತಿರುಗಿಸಿದರು. ಅಲ್ಲದೆ ಮತ್ತೊಮ್ಮೆ ತಾವು ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತುಪಡಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಆಡಿರುವ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ನಾಲ್ಕು ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಇದು ಅವರ ನೆಟ್ ರನ್ ರೇಟ್ (ಎನ್ಆರ್ಆರ್) ಅನ್ನು +1.455 ಕ್ಕೆ ಹೆಚ್ಚಿಸಿದೆ. ಭಾರತದಷ್ಟೇ ಅಂಕ ಹೊಂದಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ನಂತರದ ಸ್ಥಾನದಲ್ಲಿದೆ. ಅವರ ನೆಟ್ ರನ್ ರೇಟ್ ಪ್ರಸ್ತುತ +0.626 ಆಗಿದೆ. ಇದಲ್ಲದೆ, ಆರಂಭಿಕ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಸೋತ ನಂತರ ಐರ್ಲೆಂಡ್ ಅನ್ನು ಸೋಲಿಸಿದ ಕೆನಡಾ ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನ ಮತ್ತು ಐರ್ಲೆಂಡ್ ಪ್ರಸ್ತುತ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ. ಪಾಕ್​ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಇನ್ನೂ ಖಾತೆ ತೆರೆದಿಲ್ಲ. ಹೀಗಾಗಿ ಸೂಪರ್ 8 ರೌಂಡ್ ಅರ್ಹತೆಯ ಬೇಟೆಯಲ್ಲಿ ಆ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.

ಪಾಕಿಸ್ತಾನದ ಪರಿಸ್ಥಿತಿ ಏನು?

ಮುಂದಿನ ಪಂದ್ಯಗಳಲ್ಲಿ ನೆಟ್ ರನ್ ರೇಟ್ (ಎನ್ಆರ್​ಆರ್​) ವಿಷಯದಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಪಾಕಿಸ್ತಾನ ತಂಡವು ಈಗ ಇತರ ತಂಡಗಳನ್ನು ಅವಲಂಬಿಸಬೇಕಾಗಿದೆ. ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ಪಾಕ್​ ಮೊದಲು ಗ್ರೂಪ್ ಹಂತದ ಉಳಿದ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಇದೇ ವೇಳೆ ಅಮೆರಿಕ ಮತ್ತು ಐರ್ಲೆಂಡ್​​ ಭಾರತ ವಿರುದ್ಧ ಸೋಲಲೇಬೇಕು. ಹಾಗಾದರೆ ಮಾತ್ರ ಯುಎಸ್ಎ ತಂಡ ಆರು ಅಂಕಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ:IND vs PAK : ಪಾಕಿಸ್ತಾನದ ಬೌಲರ್​ ವಿರುದ್ಧ ವಿಶೇಷ ದಾಖಲೆ ಮಾಡಿದ ರೋಹಿತ್ ಶರ್ಮಾ

ಕುತೂಹಲಕಾರಿ ಸಂಗತಿಯೆಂದರೆ, ಐರ್ಲೆಂಡ್ ಯುಎಸ್ಎ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಇದು ಪಾಕಿಸ್ತಾನಕ್ಕೆ ಅವಕಾಶ ಕೊಡಲಿದೆ. ತಮ್ಮ ಉಳಿದ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದು ಮತ್ತು ಭಾರತ ಅಥವಾ ಯುಎಸ್ಎಗಿಂತ ಉತ್ತಮ ರನ್ ರೇಟ್ ಹೊಂದಿದರೆ ಟಿ 20 ವಿಶ್ವಕಪ್ 2024 ರ ಸೂಪರ್ 8 ಸುತ್ತಿಗೆ ಪ್ರವೇಶಿಸಬಹುದು. ಇಲ್ಲದಿದ್ದರೆ ಪಾಕಿಸ್ತಾನ ಗುಂಪು ಹಂತದಿಂದಲೇ ಹೊರಕ್ಕೆ ಹೋಗುವುದು ಖಚಿತ.

ಟೀಮ್ ಇಂಡಿಯಾದ ಹೇಳುವುದಾದರೆ ಈಗಾಗಲೇ ಮುಂಚೂಣಿ ಸ್ಥಾನ ಪಡೆದುಕೊಂಡಿದೆ. ಗುಂಪಿನ ಅಗ್ರಸ್ಥಾನಿಗಳಾಗಿ ಉಳಿಯಲು ಇನ್ನೂ ಒಂದು ಪಂದ್ಯ ಗೆಲ್ಲಬೇಕು. ಆದ್ದರಿಂದ ಜೂನ್ 12 ರಂದು ಯುಎಸ್ಎ ವಿರುದ್ಧ ಗೆದ್ದರೆ ಸಾಕು. ಭಾರತಕ್ಕೆ ಕೆನಡಾ ವಿರುದ್ಧ ಇನ್ನೊಂದು ಪಂದ್ಯವಿದೆ. ಆದಾಗ್ಯೂ ಅಮೆರಿಕ ಮಣಿಸಿದರೆ ಸೂಪರ್8 ಸ್ಥಾನ ಖಾತರಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಮೆಟ್ಟಿಲುಗಳ ಮೇಲೆ ಬೈಕ್‌ ಸವಾರಿ; ರೋಚಕ ವಿಡಿಯೊ ವೈರಲ್‌

Viral Video: ಸೋಷಿಯಲ್ ಮೀಡಿಯಾದಲ್ಲಿ ಈಗ ರೀಲ್ಸ್‌ಗಳದ್ದೇ ಹಾವಳಿ. ಒಬ್ಬರಿಗಿಂತ ಇನ್ನೊಬ್ಬರು ತಾವು ಮುಂದೆ ಎನ್ನುವ ಹಾಗೇ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಾರೆ. ಈ ರೀಲ್ಸ್‌ಗಳನ್ನು ನೋಡುವಾಗ ಎದೆ ಝಲ್ ಅನ್ನುತ್ತದೆ.ವ್ಯಕ್ತಿಯೊಬ್ಬರು ಮೆಟ್ಟಿಲುಗಳ ಮೇಲೆ ಬೈಕ್ ಓಡಿಸುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೊ ನೋಡಲು ರೋಮಾಂಚನಕಾರಿಯಾಗಿದ್ದು, ನೋಡುಗರನ್ನು ಬೆರಗುಗೊಳಿಸುವುದಂತು ಸತ್ಯ. ಆದರೆ ಈ ಸ್ಟಂಟ್ ಅಪಾಯಕಾರಿಯಾಗಿದ್ದು, ಒಂದು ವೇಳೆ ಎಡವಿ ಬಿದ್ದರೆ ಸಾವಿಗೆ ಕಾರಣವಾಗಬಹುದು.

VISTARANEWS.COM


on

Viral Video
Koo

ಇತ್ತೀಚಿನ ದಿನಗಳಲ್ಲಿ ಜನರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು, ಹೆಚ್ಚು ಫಾಲೋವರ್ಸ್ ಅನ್ನು ಪಡೆಯಲು ಹಲವಾರು ಸರ್ಕಸ್‌ಗಳನ್ನು ಮಾಡುತ್ತಾರೆ. ಅದಕ್ಕಾಗಿ ಅಪಾಯಕಾರಿ ರೀಲ್ಸ್ ಮಾಡುವುದು, ಸ್ಟಂಟ್ ಮಾಡುವುದು ಮುಂತಾದವುಗಳನ್ನು ಮಾಡುತ್ತಿರುತ್ತಾರೆ. ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದರೂ ಕೂಡ ಜನರು ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುವಂತಹ ಕೆಲಸ ಬಿಟ್ಟಿಲ್ಲ. ಇದೀಗ ವ್ಯಕ್ತಿಯೊಬ್ಬ ಬೈಕ್‌ನಿಂದ ಮೆಟ್ಟಿಲು ಹತ್ತುವ ದುಸ್ಸಾಹಸ ಮಾಡಿದ್ದು, ಈ ವಿಡಿಯೊ ವೈರಲ್ (Viral Video) ಆಗಿದೆ.

ಈ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಎತ್ತರವಾಗಿರುವ ಮೆಟ್ಟಿಲುಗಳನ್ನು ತಮ್ಮ ಬೈಕ್ ಮೂಲಕ ಹತ್ತುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊ ನೋಡಲು ರೋಮಾಂಚನಕಾರಿಯಾಗಿದ್ದು, ನೋಡುಗರನ್ನು ಬೆರಗುಗೊಳಿಸುವುದಂತು ಸತ್ಯ. ಆದರೆ ಈ ಸ್ಟಂಟ್ ಅಪಾಯಕಾರಿಯಾಗಿದ್ದು, ಒಂದು ವೇಳೆ ಎಡವಿ ಬಿದ್ದರೆ ಸಾವಿಗೆ ಕಾರಣವಾಗಬಹುದು. ಇದನ್ನು ಸ್ಟಂಟ್ ಮಾಡುವಲ್ಲಿ ಪರಿಣತರು ಮಾತ್ರ ಮಾಡಬಹುದು ಎಂಬುದನ್ನು ವೀಕ್ಷಕರು ತಿಳಿದಿರಬೇಕು.

ಈ ಬೈಕ್ ಸವಾರಿ ವಿಡಿಯೊವನ್ನು ಲೂಯಿಜಿನ್ಹೋ ಫೆರೆರಾ (@luizinhoferreiraa) ಎಂಬುವವರು ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಕೆಲವೇ ದಿನಗಳಲ್ಲಿ ವೈರಲ್ ಆಗಿದ್ದು, 2.3 ಕೋಟಿಗೂ ಹೆಚ್ಚು ವೀವ್ಸ್‌ಗಳನ್ನು ಗಳಿಸಿದೆ. ಈ ಪೋಸ್ಟ್ ಅನ್ನು 9.8 ಲಕ್ಷಕ್ಕೂ ಹೆಚ್ಚು ವೀಕ್ಷಕರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ವೀಡಿಯೊಗೆ ಕಾಮೆಂಟ್ ಮಾಡಿದ್ದಾರೆ. ಮೆಟ್ಟಿಲುಗಳ ಮೇಲೆ ವ್ಯಕ್ತಿ ಬಹಳ ಸುಲಭವಾಗಿ ಬೈಕ್ ಸವಾರಿ ಮಾಡುತ್ತಿರುವುದನ್ನು ನೋಡಿದ ನೆಟ್ಟಿಗರು ಆಶ್ಚರ್ಯಚಕಿತರಾದರು. ಯಮಹಾ ಕಂಪನಿಯು ಇದನ್ನು ತಮ್ಮ ಅಧಿಕೃತ ಜಾಹೀರಾತಾಗಿ ಮಾಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ವ್ಯಕ್ತಿಯ ಸ್ಟಂಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಮತ್ತೊಬ್ಬರು ವ್ಯಕ್ತಿಯನ್ನು ಸ್ಟಂಟ್ ಮಾಸ್ಟರ್ ಎಂದು ಹೊಗಳಿದ್ದಾರೆ.

ಇದನ್ನೂ ಓದಿ: ಮಹಿಳೆಯ ಬೆತ್ತಲೆ ದೇಹದ ಮೇಲೆ ಮೃಷ್ಟಾನ್ನ ಬಡಿಸುವ ರೆಸ್ಟೋರೆಂಟ್‌!

ಬೈಕ್ ಸಂಬಂಧಿತ ಸ್ಟಂಟ್ ವೀಡಿಯೊಗಳನ್ನು ಪೋಸ್ಟ್ ಮಾಡಲು ಈ ಬಳಕೆದಾರರು ಹೆಚ್ಚು ಪ್ರಸಿದ್ಧರಾಗಿದ್ದಾರೆ. ಹಾಗಾಗಿ ಇವರು ತಮ್ಮ ಇನ್‌ಸ್ಟಾಗ್ರಾಂ ಹ್ಯಾಂಡಲ್ ನಲ್ಲಿ 91 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಮತ್ತೊಂದು ವೀಡಿಯೊದಲ್ಲಿ, ಅವರು ಬೈಕ್ ಸವಾರಿ ಮೂಲಕ ಮೆಟ್ಟಿಲುಗಳಿಂದ ಕೆಳಗೆ ಇಳಿಯುತ್ತಿರುವುದು ಕಂಡುಬಂದಿದೆ, ಇದು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ.

Continue Reading

Latest

Actor Kamal Haasan: ರಜನಿಕಾಂತ್ ಮತ್ತು ಕಮಲ್ ಹಾಸನ್ ಒಟ್ಟಾಗಿ ನಟಿಸದಿರಲು ಇದೇ ಕಾರಣ!

Actor Kamal Haasan: ರಜನಿಕಾಂತ್ ಹಾಗೂ ಕಮಲ್ ಹಾಸನ್ ಇಬ್ಬರೂ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ ನಟರು. ಇವರು ಚಿತ್ರರಂಗಕ್ಕೆ ಕಾಲಿಟ್ಟಾಗಲಿನಿಂದ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದ್ದರು.ಸಾಕಷ್ಟು ಸಿನಿಮಾಗಳಲ್ಲಿ ಇಬ್ಬರೂ ಜತೆಯಾಗಿ ನಟಿಸಿದ್ದಾರೆ. ಆದರೆ ಅವರು ಸೂಪರ್‌ಸ್ಟಾರ್‌ಗಳಾದ ನಂತರ ಒಟ್ಟಿಗೆ ಚಿತ್ರ ಮಾಡಿಲ್ಲ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಈಗ ಅದಕ್ಕೆ ನಟ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ.

VISTARANEWS.COM


on

Actor Kamal Haasan
Koo

ಚೆನ್ನೈ : ರಜನಿಕಾಂತ್ ಹಾಗೂ ನಟ ಕಮಲ್ ಹಾಸನ್ (Actor Kamal Haasan) ಅವರು ತಮಿಳು ಚಿತ್ರರಂಗದ ಖ್ಯಾತ ನಟರು. ಇವರು ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದ್ದರು. ಇಳಮೈ ಊಂಜಲ್ ಆಡುಕಿರಾತು, ತಿಲ್ಲು ಮುಲ್ಲು, ಅಪೂರ್ವ ರಾಗಂಗಲ್, ಅವಲ್ ಅಪ್ಪಾದಿಥನ್, 16 ವಯತಿನಿಲೆ, ಐ ಮತ್ತು ನೈನೈತಾಲೆ ಇನಿಕ್ಕುಮ್ ಸೇರಿದಂತೆ ಸುಮಾರು 16 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು.

Actor Kamala Hasan

ಈ ಇಬ್ಬರು ಚಿತ್ರರಂಗಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಸೂಪರ್ ಸ್ಟಾರ್ ನಟರೆನಿಸಿಕೊಂಡಿದ್ದಾರೆ. ಹಿಂದಿ ಚಿತ್ರ ಗಿರಫ್ತಾರ್ (1985)ನಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ ಕೊನೆಯ ಚಿತ್ರವಾಗಿತ್ತು. ಇದರಲ್ಲಿ ಇಬ್ಬರೂ ಅಮಿತಾಭ್ ಬಚ್ಚನ್ ಜೊತೆ ಕಾಣಿಸಿಕೊಂಡರು. ಆದರೆ ಅವರು ಸೂಪರ್‌ಸ್ಟಾರ್‌ಗಳಾದ ನಂತರ ಒಟ್ಟಿಗೆ ಚಿತ್ರ ಮಾಡಿಲ್ಲ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಈಗ ಅದಕ್ಕೆ ನಟ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ.

Actor Kamala Hasan

ನಟ ಕಮಲ್ ಹಾಸನ್ ಅವರ ನಟನೆಯ ‘ಇಂಡಿಯನ್ 2’ ಸಿನಿಮಾದ ಪ್ರಚಾರ ಕೆಲಸ ಪ್ರಾರಂಭವಾಗಿದೆ. ಇತ್ತೀಚೆಗೆ ಮುಂಬೈನಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿ ಬಹಳ ಸದ್ದು ಮಾಡಿತ್ತು. ಈ ಸಿನಿಮಾ ಬಗ್ಗೆ ಇತ್ತೀಚೆಗೆ, ಕಮಲ್ ಹಾಸನ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಈ ವೇಳೆ ಅವರು ತಮ್ಮ ಹಾಗೂ ರಜನಿಕಾಂತ್ ಅವರ ನಡುವಿನ ಒಡನಾಟದ ಬಗ್ಗೆ ತಿಳಿಸಿದ್ದಾರೆ. ಹಾಗೂ ತಾವು ಒಟ್ಟಿಗೆ ಚಿತ್ರ ಮಾಡದಿರಲು ಕಾರಣವೇನು ಎಂಬುದಕ್ಕೆ ವಿವರಣೆ ನೀಡಿದ್ದಾರೆ. ಚಿತ್ರರಂಗದಲ್ಲಿ ಯಶಸ್ಸು ಕಂಡ ನಂತರ ಅವರು ಮತ್ತು ರಜನಿಕಾಂತ್ ಇಬ್ಬರೂ ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡದಿರಲು ನಿರ್ಧರಿಸಿದ್ದರು. ಆದರೆ ಅವರಿಬ್ಬರ ಮಾರ್ಗದರ್ಶಕರು ಪ್ರಸಿದ್ಧ ತಮಿಳು ಚಲನಚಿತ್ರ ನಿರ್ಮಾಪಕ ಕೆ. ಬಾಲಚಂದರ್ ಎಂಬುದು ಎಲ್ಲರಿಗೂ ತಿಳಿದಿದೆ ಎಂಬುದಾಗಿ ತಿಳಿಸಿದ್ದಾರೆ.

“ನಾವು ಆರಂಭದಲ್ಲಿ ಒಟ್ಟಿಗೆ ಅನೇಕ ಚಲನಚಿತ್ರಗಳನ್ನು ಮಾಡಿದ್ದೇವೆ. ನಂತರ ನಾವು ಒಟ್ಟಿಗೆ ಕೆಲಸ ಮಾಡದಿರಲು ನಿರ್ಧರಿಸಿದ್ದೇವೆ. ನಾವು ಇಬ್ಬರು ಕಾಂಪಿಟೇಟರ್‌ಗಳಲ್ಲ. ನಮಗೆ ಒಂದೇ ಮಾರ್ಗದರ್ಶಕರಿದ್ದರು. ನಮ್ಮ ನಡುವೆ ಯಾವುದೇ ಅಸೂಯೆ ಇಲ್ಲ ಮತ್ತು ನಮ್ಮ ದಾರಿ ಬೇರೆ ಬೇರೆ. ನಾವು ಎಂದಿಗೂ ಪರಸ್ಪರರ ಬಗ್ಗೆ ಕೀಳುಮಟ್ಟದ ಟೀಕೆಗಳನ್ನು ಮಾಡುವುದಿಲ್ಲ. ನಾವು ನಮ್ಮ 20ರ ಹರೆಯದಲ್ಲಿದ್ದಾಗಲೇ ಈ ಬಗ್ಗೆ ಪ್ರಾಮಿಸ್ ಮಾಡಿದ್ದೇವೆ. ಇಂಥದ್ದೇ ಎಂಬ ಕಾರಣವನ್ನು ಹೇಳಲು ಆಗುವುದಿಲ್ಲ. ಆದರೆ ನಾವು ಒಂದು ಹಂತಕ್ಕೆ ಬಂದ ಮೇಲೆ ನಮ್ಮ ನಮ್ಮ ಅಭಿರುಚಿಗಳು ಬೇರೆ ಬೇರೆಯಾದವು. ಹಾಗಾಗಿ ಒಟ್ಟಿಗೆ ಚಿತ್ರ ಮಾಡದಿರಲು ನಿರ್ಧರಿಸಿದೆವು” ಎಂಬುದಾಗಿ ಕಮಲ್‌ ಹಾಸನ್‌ ಅವರು ಹೇಳಿದ್ದಾರೆ.

ಅಲ್ಲದೇ ಕಮಲ್ ಹಾಸನ್ 1981ರಲ್ಲಿ ‘ಏಕ್ ದುಜೆ ಕೆ ಲಿಯೆ’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದು ಕೆ ಬಾಲಚಂದರ್ ನಿರ್ದೇಶನದ ಅವರ ತೆಲುಗು ಚಿತ್ರ ‘ಮರೋ ಚರಿತ್ರ’ದ ರಿಮೇಕ್ ಆಗಿದೆ. ಈ ವೇಳೆ ಕಮಲ್ ಹಾಸನ್ ತಮಗೆ ಹಿಂದಿ ಚಿತ್ರರಂಗದಲ್ಲಿ ಬೆಂಬಲ ನೀಡಿದ ಅಭಿಮಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ:ಸಾಲದ ಇಎಂಐ ಕಟ್ಟಲಾಗದೆ ಕಾರನ್ನು ಕಳೆದುಕೊಂಡಿದ್ದ ಶಾರುಖ್ ಖಾನ್!

ಪ್ರಸ್ತುತ, ಕಮಲ್ ಹಾಸನ್ ಅವರು ಕಲ್ಕಿ 2898ಎಡಿ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಅವರು ಕೇವಲ ಕೆಲವು ನಿಮಿಷಗಳ ಕಾಲ ಮಾತ್ರ ಪರದೆಯ ಮೇಲೆ ಕಾಣಿಸಿಕೊಳ್ಳುವಂತಹ ಚಿಕ್ಕ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರದ ಮುಂದಿನ ಭಾಗದಲ್ಲಿ ಈ ಪಾತ್ರ ಮಹತ್ವದ್ದಾಗಿದೆ ಎನ್ನಲಾಗಿದೆ.

Continue Reading

ಸಿನಿಮಾ

Highest Collection Movie: ಅತೀ ಹೆಚ್ಚು ಗಳಿಕೆ ದಾಖಲಿಸಿದ ಭಾರತದ ಟಾಪ್‌ 10 ಸಿನಿಮಾಗಳಿವು

Highest Collection Movie: ಭಾರತೀಯ ಸಿನಿಮಾ (Indian Movies) ರಂಗದಲ್ಲಿ ಕೆಲವು ಚಿತ್ರಗಳು ಗಳಿಕೆಯಲ್ಲಿ ವಿಶ್ವ ದಾಖಲೆಯನ್ನೇ ಮಾಡಿದೆ. ಅದರಲ್ಲಿ ಅತಿ ಹೆಚ್ಚು ಗಳಿಕೆಯನ್ನು ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಬರೆದಿರುವ ಹತ್ತು ಸಿನಿಮಾಗಳನ್ನು ಇಂದಿಗೂ ಹಲವು ಮಂದಿ ಪದೇ ಪದೇ ನೋಡುತ್ತಿರುತ್ತಾರೆ. ಆ ಚಿತ್ರಗಳು ಯಾವುದು, ಗಳಿಕೆ ಎಷ್ಟಾಗಿತ್ತು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Highest Collection Movie
Koo

ಭಾರತೀಯ ಸಿನಿಮಾ (Indian Movies) ರಂಗದಲ್ಲಿ ಬಾಲಿವುಡ್ (Highest Collection Movie) ದಾಖಲೆಗಳು ನಿರಂತರವಾಗಿವೆ. ಹಲವಾರು ಚಿತ್ರಗಳು ಸಾರ್ವಕಾಲಿಕವಾಗಿ ಅತಿ ಹೆಚ್ಚು ಗಳಿಕೆಯನ್ನು ಪಡೆದಿವೆ. ದಂಗಲ್‌ (Dangal), ಜವಾನ್ (Jawan), ಪಠಾಣ್ (Pathaan), ಬಜರಂಗಿ ಭಾಯಿಜಾನ್ (Bajrangi Bhaijaan), ಸೀಕ್ರೆಟ್ ಸೂಪರ್‌ಸ್ಟಾರ್ (Secret Superstar), ಪಿಕೆ (PK) ಈ ಚಿತ್ರಗಳು ತೆರೆಗೆ ಬಂದು ಹತ್ತು ವರ್ಷಗಳೇ ಕಳೆದರೂ ಇಂದಿಗೂ ಬಹುತೇಕ ಮಂದಿಯ ಮೆಚ್ಚಿನ ಚಿತ್ರವಾಗಿ ಉಳಿದಿದೆ.

ಭಾರತೀಯ ಸಿನಿಮಾ ರಂಗದಲ್ಲಿ ಕೆಲವು ಚಿತ್ರಗಳು ಗಳಿಕೆಯಲ್ಲಿ ವಿಶ್ವ ದಾಖಲೆಯನ್ನೇ ಮಾಡಿದೆ. ಅದರಲ್ಲಿ ಅತಿ ಹೆಚ್ಚು ಗಳಿಕೆಯನ್ನು ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ (box office) ದಾಖಲೆ ಬರೆದಿರುವ ಹತ್ತು ಸಿನಿಮಾಗಳನ್ನು ಇಂದಿಗೂ ಹಲವು ಮಂದಿ ಪದೇ ಪದೇ ನೋಡುತ್ತಿರುತ್ತಾರೆ. ಆ ಚಿತ್ರಗಳು ಯಾವುದು, ಗಳಿಕೆ ಎಷ್ಟಾಗಿತ್ತು ಎನ್ನುವ ಮಾಹಿತಿ ಇಲ್ಲಿದೆ.

1. ದಂಗಲ್

ಕುಸ್ತಿ ಪಟುಗಳಾದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಅವರ ಜೀವನಾಧಾರಿತ ಚಿತ್ರದಲ್ಲಿ ಮಹಾವೀರ್ ಸಿಂಗ್ ಪಾತ್ರಧಾರಿಯಾಗಿ ಆಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. 2016ರಲ್ಲಿ ತೆರೆಗೆ ಬಂದ ಈ ಚಿತ್ರ 30 ಕೋಟಿ ರೂ. ಬಜೆಟ್‌ನದ್ದಾಗಿದ್ದು, ವಿಶ್ವಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ 2,024 ಕೋಟಿ ರೂ. ಗಳಿಸಿ ದಾಖಲೆ ಬರೆದು ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಆದಾಯಗಳಿಸಿದ ಸಿನೆಮಾ ಎಂಬ ಖ್ಯಾತಿಯನ್ನು ಪಡೆದಿದೆ. ಅದರಲ್ಲೂ ಚೀನಾದಲ್ಲಿ ಈ ಸಿನಿಮಾ ಅತಿ ಹೆಚ್ಚು ಆದಾಯವನ್ನು ಗಳಿಸಿದ ಅನ್ಯ ಭಾಷೆಯ ಮೂರನೇ ಸಿನಿಮಾ ಇದು ಎನ್ನುವ ಖ್ಯಾತಿಯೂ ʼದಂಗಲ್ʼ ಚಿತ್ರದ್ದಾಗಿದೆ.


2. ಬಾಹುಬಲಿ 2

ಪ್ರಭಾಸ್ ಅಭಿನಯದ ‘ಬಾಹುಬಲಿ 2’ ಚಿತ್ರ 2012ರಲ್ಲಿ ತೆರೆಗೆ ಬಂದಿದ್ದು, ಎಸ್.ಎಸ್. ರಾಜಮೌಳಿ ಮತ್ತು ವಿ. ವಿಜಯೇಂದ್ರ ಪ್ರಸಾದ್ ಬರೆದು ನಿರ್ದೇಶಿಸಿದ್ದಾರೆ. 250 ಕೋಟಿ ರೂ. ಬಜೆಟ್ ನ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ 1,810.60 ಕೋಟಿ ರೂ. ಆದಾಯ ಗಳಿಸಿ ದಾಖಲೆ ಬರೆದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಗಳಿಸಿರುವ ಚಿತ್ರ ಎಂಬ ಖ್ಯಾತಿ ಈ ಸಿನೆಮಾದ್ದಾಗಿದೆ. ಚಿತ್ರ ಬಿಡುಗಡೆಯಾದ ಮೊದಲ ಆರು ದಿನದಲ್ಲಿ 789 ಕೋಟಿ ರೂ. ಗಳಿಸಿರುವುದು ಮಾತ್ರವಲ್ಲ 10 ದಿನದಲ್ಲಿ 1 ಸಾವಿರ ಕೋಟಿ ರೂ. ಆದಾಯ ಪಡೆದ ಸಿನೆಮಾ ಇದಾಗಿದೆ.


3. ಆರ್ ಆರ್ ಆರ್

ರಾಮ್ ಚರಣ್ ಮತ್ತು ಜ್ಯೂ. ಎನ್ ಟಿ ಆರ್ ಅಭಿನಯದ ಆರ್ ಆರ್ ಆರ್ ಚಿತ್ರ 2022ರಲ್ಲಿ ತೆರೆಗೆ ಬಂದಿದ್ದು, 550 ಕೋಟಿ ರೂ. ಬಜೆಟ್ ನದ್ದಾಗಿದೆ. ಅತ್ಯಂತ ದುಬಾರಿ ಖರ್ಚು ಮಾಡಿ ನಿರ್ಮಿಸಿರುವ ಈ ಚಿತ್ರ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 405.9 ಕೋಟಿ ರೂ. ಗಳಿಸಿದೆ. ವಿಶ್ವದಾದ್ಯಂತ 1,387.26 ಕೋಟಿ ರೂ. ಆದಾಯ ಗಳಿಸಿದೆ. ಭಾರತದಲ್ಲಿ ಮೂರನೇ ಅತಿ ಹೆಚ್ಚು ಆದಾಯ ಗಳಿಸಿದ ಚಿತ್ರವಾಗಿ ಮಾತ್ರವಲ್ಲ ತೆಲುಗಿನಲ್ಲಿ ಎರಡನೇ ಅತಿ ಹೆಚ್ಚು ಆದಾಯಗಳಿಸಿರುವ ಚಿತ್ರವಾಗಿ ಗುರುತಿಸಿಕೊಂಡಿದೆ.


4. ಕೆಜಿಎಫ್ ಚಾಪ್ಟರ್ 2

2022ರಲ್ಲಿ ತೆರೆಗೆ ಬಂದ ಯಶ್ ಅಭಿನಯದ ಕನ್ನಡ ಚಿತ್ರ ಕೆಜಿಎಫ್ ಚಾಪ್ಟರ್ 2 ಅನ್ನು ಪ್ರಶಾಂತ್ ನೀಲ್ ಅವರು ನಿರ್ದೇಶಿಸಿದ್ದಾರೆ. ವಿಜಯ ಕಿರಗಂದೂರ್ ನಿರ್ಮಿಸಿದ್ದಾರೆ.

100 ಕೋಟಿ ಬಜೆಟ್‌ನ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ 1,250 ಕೋಟಿ ರೂ. ಆದಾಯ ಗಳಿಸಿದೆ. ವಿಶ್ವದಲ್ಲಿ (ಭಾರತೀಯ ಚಿತ್ರ) ನಾಲ್ಕನೇ ಹಾಗೂ ಭಾರತದಲ್ಲಿ ಎರಡನೇ ಅತಿ ಹೆಚ್ಚು ಆದಾಯ ಗಳಿಸಿರುವ ಚಿತ್ರವಾಗಿ ಇದು ಗುರುತಿಸಿಕೊಂಡಿದೆ.

5. ಜವಾನ್

ಶಾರುಖ್ ಖಾನ್ ಅಭಿನಯದ ‘ಜವಾನ್’ ಚಿತ್ರ 2023ರಲ್ಲಿ ತೆರೆಗೆ ಬಂದಿದ್ದು, 1,148.32 ಕೋಟಿ ರೂ. ಆದಾಯ ಗಳಿಸಿದೆ. 300 ಕೋಟಿ ರೂ. ಬಜೆಟ್‌ನ ಈ ಚಿತ್ರದಲ್ಲಿ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರ ಕೂಡ ಕಾಣಿಸಿಕೊಂಡಿದ್ದಾರೆ.

ಹಿಂದಿ ಭಾಷೆಯಲ್ಲಿ ಎರಡನೇ ಅತಿ ಹೆಚ್ಚು ಆದಾಯ ಗಳಿಸಿರುವ ಚಿತ್ರವಾಗಿ ಇದು ಗುರುತಿಸಿಕೊಂಡಿದ್ದು, ಭಾರತೀಯ ಸಿನಿಮಾದಲ್ಲಿ ಐದನೇ ಸ್ಥಾನ ಪಡೆದಿದೆ.


6. ಪಠಾಣ್

ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿರುವ ಚಿತ್ರ ʼಪಠಾಣ್ʼ ವಿಶ್ವದಾದ್ಯಂತ 1,050.30 ಕೋಟಿ ರೂ. ಆದಾಯ ಗಳಿಸಿದೆ. ಶಾರುಖ್ ಖಾನ್ ಅಭಿನಯದ ಈ ಚಿತ್ರ ಗಳಿಕೆಯಲ್ಲಿ ಹಿಂದಿ ಭಾಷೆಯಲ್ಲಿ ಮೂರನೇ ಸ್ಥಾನ ಹಾಗೂ ಭಾರತೀಯ ಸಿನಿಮಾ ರಂಗದಲ್ಲಿ ಆರನೇ ಸ್ಥಾನವನ್ನು ಗಳಿಸಿದೆ. 240 ಕೋಟಿ ರೂ. ಬಜೆಟ್ ನ ಚಿತ್ರ ಇದಾಗಿದೆ.


7. ಬಜರಂಗಿ ಭಾಯಿಜಾನ್

ಭಾರತದಾದ್ಯಂತ ಬಾಯಿಜಾನ್ ಎಂದೇ ಕರೆಯಲ್ಪಡುವ ಸಲ್ಮಾನ್ ಖಾನ್, ಕರೀನಾ ಕಪೂರ್ ಅಭಿನಯದ ಈ ಚಿತ್ರ 2015ರಲ್ಲಿ ತೆರೆಗೆ ಬಂದಿದ್ದು, ಕಬೀರ್ ಖಾನ್ ನಿರ್ದೇಶಿಸಿದ್ದಾರೆ. ವಿಶ್ವದಾದ್ಯಂತ 969 ಕೋಟಿ ರೂ. ಆದಾಯವನ್ನು ಈ ಚಿತ್ರ ಗಳಿಸಿದ್ದು, ಅತಿ ಹೆಚ್ಚು ಆದಾಯ ಗಳಿಸಿದ ಭಾರತದ 7ನೇ ಚಿತ್ರ ಹಾಗೂ ಹಿಂದಿ ಭಾಷೆಯ 4ನೇ ಚಿತ್ರವಾಗಿ ಗುರುತಿಸಿಕೊಂಡಿದೆ.


8. ಅನಿಮಲ್

ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ದಿಮ್ರಿ ಅಭಿನಯದ ಈ ಚಿತ್ರ ವಿಶ್ವದಾದ್ಯಂತ 917.36 ಕೋಟಿ ರೂ. ಆದಾಯ ಗಳಿಸಿದೆ. ಈ ಚಿತ್ರವನ್ನು 200 ಕೋಟಿ ರೂ. ಬಜೆಟ್ ನಲ್ಲಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ.


9. ಸೀಕ್ರೆಟ್ ಸೂಪರ್ ಸ್ಟಾರ್

2017ರಲ್ಲಿ ತೆರೆಗೆ ಬಂದ ‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರವನ್ನು ಅದ್ವತ್ ಚಂದನ್ ನಿರ್ದೇಶಿಸಿದ್ದು, ಆಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಶ್ವದಾದ್ಯಂತ 905.7 ಕೋಟಿ ರೂ. ಆದಾಯ ಗಳಿಸಿರುವ ಈ ಚಿತ್ರವನ್ನು ಅತೀ ಕಡಿಮೆ ಬಜೆಟ್ 15 ಕೋಟಿ ರೂ.ನಲ್ಲಿ ನಿರ್ಮಿಸಲಾಗಿದೆ.


ಇದನ್ನೂ ಓದಿ: Kalki 2898 AD: ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ʼಕಲ್ಕಿʼ; ಬಿಡುಗಡೆಯಾದ 5ನೇ ದಿನ ಗಳಿಸಿದ್ದು ಬರೋಬ್ಬರಿ 84 ಕೋಟಿ ರೂ.

10. ಪಿಕೆ

ಆಮೀರ್ ಖಾನ್, ಅನುಷ್ಕಾ ಶರ್ಮಾ, ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಈ ಚಿತ್ರ 2014ರಲ್ಲಿ ತೆರೆಗೆ ಬಂದಿತ್ತು. ರಾಜಕುಮಾರ್ ಹಿರಾನಿ ನಿರ್ದೇಶಿರುವ ಈ ಚಿತ್ರವನ್ನು 122 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಿಸಲಾಗಿದ್ದು, ವಿಶ್ವದಾದ್ಯಂತ 769.89 ಕೋಟಿ ರೂ. ಆದಾಯವನ್ನು ಗಳಿಸಿದೆ.

Continue Reading

Latest

Police Arrest: ಅಕ್ರಮ ಮದ್ಯ ಸಾಗಿಸಲು ಸಹಾಯ; ಸಿಕ್ಕಿ ಬಿದ್ದ ಸಿಐಡಿ ಲೇಡಿ ಆಫೀಸರ್!

Police Arrest: ಪೊಲೀಸರೆಂದರೆ ಕಳ್ಳರನ್ನು ಹಿಡಿದು ತಕ್ಕ ಶಿಕ್ಷೆ ನೀಡುತ್ತಾರೆ ಎಂಬ ನಂಬಿಕೆ ಜನರಿಗೆ. ಆದರೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿಯೊಂದು ನಿರ್ಮಾಣವಾಗಿದೆ. ಅದೇನೆಂದರೆ, ಗುಜರಾತ್‌ನ ಕಚ್‌ನಲ್ಲಿ ಇತ್ತೀಚೆಗೆ ಮಹಿಳಾ ಅಪರಾಧ ತನಿಖಾ ಇಲಾಖೆ (ಸಿಐಡಿ) ಪೊಲೀಸ್ ಅಧಿಕಾರಿಯೊಬ್ಬರು ಮದ್ಯವನ್ನು ಸಾಗಿಸುವ ಪ್ರಯತ್ನದಲ್ಲಿ ಕಳ್ಳಸಾಗಣೆದಾರನಿಗೆ ಸಹಾಯ ಮಾಡಿ ಸಿಕ್ಕಿಬಿದ್ದಿದ್ದಾರೆ. ಇವರ ವಿರುದ್ಧ ಪೊಲೀಸರು ಐಪಿಸಿಯ ಸೆಕ್ಷನ್ 307 ಮತ್ತು 427ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

VISTARANEWS.COM


on

Police Arrest
Koo

ಅಹಮದಾಬಾದ್: ಪೊಲೀಸ್ ಅಧಿಕಾರಿಗಳೆಂದರೆ ಕಳ್ಳತನ, ಸುಲಿಗೆ, ದರೋಡೆ ಮಾಡುವಂತಹ ದುಷ್ಟರನ್ನು ಹಿಡಿದು ಜನರಿಗೆ ನ್ಯಾಯ ಕೊಡಿಸುವವರು ಎಂಬ ಭಾವನೆ ಜನರಲ್ಲಿದೆ. ಆದರೆ ಗುಜರಾತ್‌ನ ಕಚ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಪೊಲೀಸ್ ವೃತ್ತಿಗೆ ಅಪಖ್ಯಾತಿ ತರುವಂತದಾಗಿದೆ. ಯಾಕೆಂದರೆ ಮಹಿಳಾ ಅಪರಾಧ ತನಿಖಾ ಇಲಾಖೆ (ಸಿಐಡಿ) ಪೊಲೀಸ್ ಅಧಿಕಾರಿಯೊಬ್ಬರು ಮದ್ಯವನ್ನು ಸಾಗಿಸುವ ಪ್ರಯತ್ನದಲ್ಲಿ ಕಳ್ಳಸಾಗಣೆದಾರನಿಗೆ ಸಹಾಯ ಮಾಡಿ ಸಿಕ್ಕಿಬಿದ್ದಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ (Police arrest).

ಭಚೌ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಭಾನುವಾರ ರಾತ್ರಿ, ಮದ್ಯ ಕಳ್ಳಸಾಗಣೆಯನ್ನು ತಡೆಯಲು ಕಚ್(kutch) ನ ಭಚೌ ಪೊಲೀಸ್ ಠಾಣೆ ಪ್ರದೇಶದ ಚೋಪ್ಡ್ವಾ(chopdwa) ಸೇತುವೆಯ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ, ಬಿಳಿ ಥಾರ್ ವಾಹನವೊಂದು ಪೊಲೀಸ್ ತಪಾಸಣೆಯನ್ನು ಕಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿತು. ಮತ್ತೊಂದು ಪೊಲೀಸ್ ಬೆಂಗಾವಲು ವಾಹನ ಅವರನ್ನು ಹಿಂಬಾಲಿಸಿ ತಡೆದರು. ನಂತರ ಪೊಲೀಸರು ವಾಹನವನ್ನು ಶೋಧಿಸಿದಾಗ ಅದರಲ್ಲಿ 16 ಬಾಟಲಿ ಮದ್ಯ ಮತ್ತು ಎರಡು ಕ್ಯಾನ್ ಬಿಯರ್ ಪತ್ತೆಯಾಗಿದೆ. ನಂತರ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಕಚ್ ಪೂರ್ವ ಸಿಐಡಿಯ ಅಧಿಕಾರಿ ನೀತಾ ಚೌಧರಿ ಮತ್ತು ಕಳ್ಳಸಾಗಣೆದಾರನನ್ನು ಯುವರಾಜ್ ಸಿಂಗ್ ಎಂದು ಪತ್ತೆ ಮಾಡಲಾಗಿದೆ. ಇವರಿಬ್ಬರ ವಿರುದ್ಧ ಪೊಲೀಸರು ಐಪಿಸಿಯ ಸೆಕ್ಷನ್ 307 ಮತ್ತು 427 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎನ್ನಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಯುವರಾಜ್ ಸಿಂಗ್ ಈ ಹಿಂದೆ 16 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕೊಲೆ ಯತ್ನ ಸೇರಿದಂತೆ 6 ಪ್ರಕರಣಗಳಲ್ಲಿ ಬೇಕಾಗಿದ್ದಾನೆ ಎನ್ನಲಾಗಿದೆ. ಮತ್ತು ಪೊಲೀಸ್ ಅಧಿಕಾರಿ ನೀತಾ ಚೌಧರಿ ಅವರು ಪೊಲೀಸ್ ಸಮವಸ್ತ್ರದಲ್ಲಿ ನೃತ್ಯ ವೀಡಿಯೊಗಳನ್ನು ಮಾಡುವುದು ಸೇರಿದಂತೆ ತನ್ನ ಅಸಾಂಪ್ರದಾಯಿಕ ನಡವಳಿಕೆಗಾಗಿ ಅವರು ಈ ಹಿಂದೆ ವಿವಾದದಲ್ಲಿ ಸಿಲುಕಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಭಾರತದ ಶ್ರೀಮಂತ ಕುಟುಂಬಗಳ ಅತ್ಯಂತ ಅದ್ಧೂರಿ ಮದುವೆ ಯಾರದು? ಪಟ್ಟಿ ಇಲ್ಲಿದೆ

ಈ ಹಿಂದೆ, ಗುಜರಾತ್ ನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿದ್ದರೂ ಕೆಲವು ಪೊಲೀಸ್ ಅಧಿಕಾರಿಗಳು ಕಳ್ಳಸಾಗಾಣಿಕೆದಾರರಿಗೆ ಸಹಾಯ ಮಾಡುತ್ತಿದ್ದರು ಎಂಬುದಾಗಿ ಮಾಹಿತಿ ತಿಳಿದುಬಂದಿತ್ತು. ಅಲ್ಲದೇ ಗುಜರಾತ್‌ನ ಭೋಪಾಲ್ ಮತ್ತು ಅಹಮದಾಬಾದ್‌ನಲ್ಲಿ ನಡೆದ ಅಪಘಾತಕ್ಕೀಡಾದ ವಾಹನದಲ್ಲಿ ಮದ್ಯ ನಿಷೇಧದ ಹೊರತಾಗಿಯೂ ಹಲವಾರು ಮದ್ಯದ ಬಾಟಲಿಗಳು ಪತ್ತೆಯಾಗಿವೆ ಎಂಬುದಾಗಿ ತಿಳಿದುಬಂದಿದೆ.

Continue Reading
Advertisement
wild animals Attack
ಹಾಸನ6 mins ago

Wild Animals Attack : ಕರೆಯದೆ ಬಂದ ಅತಿಥಿ; ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ ಕೋತಿ!ಮುಂದೇನಾಯ್ತು?

IND vs ZIM
ಕ್ರೀಡೆ25 mins ago

IND vs ZIM: ಜಿಂಬಾಬ್ವೆ ಟಿ20 ಸರಣಿಗೆ ಭಾರತ ತಂಡಲ್ಲಿ ದಿಢೀರ್​ ಬದಲಾವಣೆ ಮಾಡಿದ ಬಿಸಿಸಿಐ

Job Alert
ಉದ್ಯೋಗ41 mins ago

Job Alert: KSRTCಯಿಂದ ಬೃಹತ್‌ ನೇಮಕಾತಿ; 13,000 ಚಾಲಕ ಹುದ್ದೆಗಳಿಗೆ 7ನೇ ತರಗತಿ ಪಾಸಾದವರು ಅಪ್ಲೈ ಮಾಡಿ

Narendra Modi
ದೇಶ45 mins ago

Narendra Modi Live: ಕೆಲವೇ ಕ್ಷಣಗಳಲ್ಲಿ ಸಂಸತ್‌ನಲ್ಲಿ ಮೋದಿ ಭಾಷಣ; ಲೈವ್‌ ಇಲ್ಲಿ ವೀಕ್ಷಿಸಿ

Akhilesh Yadav
ದೇಶ60 mins ago

Akhilesh Yadav: ಎಲ್ಲ ಕ್ಷೇತ್ರ ಗೆದ್ದರೂ ಇವಿಎಂಗಳನ್ನು ನಂಬಲ್ಲ ಎಂದ ಅಖಿಲೇಶ್‌ ಯಾದವ್;‌ ಮತ್ತೆ ವಿವಾದ

Viral Video
Latest1 hour ago

Viral Video: ಮೆಟ್ಟಿಲುಗಳ ಮೇಲೆ ಬೈಕ್‌ ಸವಾರಿ; ರೋಚಕ ವಿಡಿಯೊ ವೈರಲ್‌

Bike Accident
ಕರ್ನಾಟಕ1 hour ago

Bike Accident: ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಒಬ್ಬ ಸವಾರ ಸಾವು, ಇಬ್ಬರಿಗೆ ಗಾಯ

Heart Attack
ಕ್ರೀಡೆ1 hour ago

Heart Attack: ಬ್ಯಾಡ್ಮಿಂಟನ್​ ಆಡುತ್ತಿದ್ದಾಗಲೇ ಕುಸಿದು ಬಿದ್ದು  ಸಾವನ್ನಪ್ಪಿದ 17 ವರ್ಷದ ಶಟ್ಲರ್‌

Actor Kamal Haasan
Latest1 hour ago

Actor Kamal Haasan: ರಜನಿಕಾಂತ್ ಮತ್ತು ಕಮಲ್ ಹಾಸನ್ ಒಟ್ಟಾಗಿ ನಟಿಸದಿರಲು ಇದೇ ಕಾರಣ!

Google Map
ವೈರಲ್ ನ್ಯೂಸ್1 hour ago

Google Map: ಗೂಗಲ್‌ ಮ್ಯಾಪ್‌ ನಂಬಿ ಹೊರಟವರಿಗೆ ಕಾದಿತ್ತು ಬಿಗ್‌ ಶಾಕ್‌; 11ಗಂಟೆ ದಟ್ಟ ಕಾಡಿನಲ್ಲೇ ಸಿಲುಕಿದ ವಿದ್ಯಾರ್ಥಿಗಳು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ22 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌