Viral Video: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಬಿದ್ದ ಕಬ್ಬಿಣದ ಗೇಟ್; ಶಾಕಿಂಗ್‌ ವಿಡಿಯೊ - Vistara News

Latest

Viral Video: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಬಿದ್ದ ಕಬ್ಬಿಣದ ಗೇಟ್; ಶಾಕಿಂಗ್‌ ವಿಡಿಯೊ

Viral Video: ಮಕ್ಕಳು ಆಟವಾಡುತ್ತಿದ್ದಾರೆ ಎಂದು ಹೆಚ್ಚಿನ ಪೋಷಕರು ಸುಮ್ಮನಿದ್ದು ಬಿಡುತ್ತಾರೆ. ಆದರೆ ಇಂತಹ ಸಂದರ್ಭದಲ್ಲಿಯೇ ದುರಂತಗಳು ಸಂಭವಿಸುವುದು. ಇಂತಹದೊಂದು ಘಟನೆ ಪುಣೆಯಲ್ಲಿ ನಡೆದಿದೆ. ಮನೆಯ ಹೊರಗೆ ಆಟವಾಡುತ್ತಿದ್ದ ಮೂರೂವರೆ ವರ್ಷದ ಬಾಲಕಿಯ ಮೇಲೆ ಭಾರವಾದ ಕಬ್ಬಿಣದ ಗೇಟ್ ಬಿದ್ದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಪುಣೆಯ ಪಿಂಪ್ರಿ-ಚಿಂಚ್ವಾಡಿಯ ಗಣೇಶ್ ನಗರದ ಬೋಪ್ಖೇಲ್‌ನಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಪುಣೆ : ಮಕ್ಕಳನ್ನು ಮನೆಯ ಹೊರಗೆ ಆಟವಾಡಲು ಬಿಡುವಾಗ ಪೋಷಕರು ಸ್ವಲ್ಪ ಎಚ್ಚರ ವಹಿಸಬೇಕು. ಮಕ್ಕಳನ್ನು ಅವರ ಪಾಡಿಗೆ ಬಿಡಬಾರದು. ಅವರು ಮನೆಯ ಹೊರಗೆ ಆಟವಾಡುತ್ತಿದ್ದರೆ ಅವರ ಕಡೆ ಗಮನ ಕೊಡುತ್ತಿರಬೇಕು. ಇಲ್ಲವಾದರೆ ಇದರಿಂದ ದುರ್ಘಟನೆಗಳು ಸಂಭವಿಸಿ ಮಕ್ಕಳಿಗೆ ಅಪಾಯವಾಗಬಹುದು. ಅಂತಹದೊಂದು ಘಟನೆ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಮನೆಯ ಹೊರಗೆ ಆಟವಾಡುತ್ತಿದ್ದ ಮೂರುವರೆ ವರ್ಷದ ಬಾಲಕಿಯ ಮೇಲೆ ಭಾರವಾದ ಕಬ್ಬಿಣದ ಗೇಟ್ ಬಿದ್ದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಪುಣೆಯ ಪಿಂಪ್ರಿ-ಚಿಂಚ್ವಾಡಿಯ ಗಣೇಶ್ ನಗರದ ಬೋಪ್ಖೇಲ್‍ನಲ್ಲಿ ಬುಧವಾರ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ನಾಲ್ಕು ಮಕ್ಕಳು ತಮ್ಮ ಮನೆಯ ಹೊರಗೆ ಆಟವಾಡುತ್ತಿದ್ದರು. ಕೆಲವು ಕ್ಷಣಗಳ ನಂತರ, ಹುಡುಗರಲ್ಲಿ ಒಬ್ಬ ಸೈಕಲ್ ಹೊಂದಿರುವ ಮತ್ತೊಂದು ಹುಡುಗನಿಗೆ ಮನೆಯೊಳಗೆ ಹೋಗಲು ಗೇಟ್ ಅನ್ನು ಹಿಂದಕ್ಕೆ ತಳ್ಳಿದನು. ಹುಡುಗ ಪ್ರವೇಶಿಸಿದಾಗ, ಅವನು ಅದನ್ನು ಲಾಕ್ ಮಾಡಲು ಗೇಟ್ ಅನ್ನು ಮುಂದಕ್ಕೆ ಎಳೆದಿದ್ದಾನೆ. ಇದನ್ನು ನೋಡಿದ ಇಬ್ಬರು ಹುಡುಗಿಯರು ಕಬ್ಬಿಣದ ಗೇಟ್ ಕಡೆಗೆ ಓಡಿ ಬಂದಿದ್ದಾರೆ. ಆಗ ಗೇಟ್ ಆಯತಪ್ಪಿ ಕೆಳಗೆ ಬಿದ್ದಿದೆ. ಆ ವೇಳೆ ಟೆಡ್ಡಿ ಬೇರ್ ಹಿಡಿದಿದ್ದ ಒಬ್ಬ ಹುಡುಗಿ ಸಮಯಕ್ಕೆ ಸರಿಯಾಗಿ ಅಲ್ಲಿಂದ ಜಿಗಿದರೆ, ಗೇಟ್ ಕೆಳಗೆ ಬಿದ್ದು ಇನ್ನೊಬ್ಬ ಹುಡುಗಿ ನಜ್ಜುಗುಜ್ಜಾಗಿದ್ದಾಳೆ.

ಭಯಭೀತರಾದ ಮಕ್ಕಳು ಸಹಾಯಕ್ಕಾಗಿ ಕೂಗುತ್ತಾ ಓಡಿಹೋದರು. ನಂತರ ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು ಗೇಟ್ ಅನ್ನು ಎತ್ತಿ ಮಗುವನ್ನು ಎತ್ತಿಕೊಂಡು ಓಡಿದ್ದಾರೆ. ವರದಿಗಳ ಪ್ರಕಾರ, ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಪ್ರಾರಂಭವಾಗುವ ಮೊದಲೇ ಅವಳು ಸತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಪ್ರೀತಿಸಿದ ಹುಡುಗಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವಕ; ಗಾಬರಿಗೊಳಿಸುವ ವಿಡಿಯೊ

ಮೃತಪಟ್ಟ ಹುಡುಗಿಯನ್ನು ಗಿರಿಜಾ ಗಣೇಶ್ ಶಿಂಧೆ ಎಂದು ಗುರುತಿಸಲಾಗಿದೆ. ಕಟ್ಟಡದ ಮಾಲೀಕರು ಮತ್ತು ನಿವಾಸಿಗಳು ಗೇಟ್ ಸರಿಯಾಗಿರಲಿಲ್ಲ. ಹಾಗಾಗಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ತನಿಖೆಯ ವೇಳೆ ತಿಳಿಸಿದ್ದಾರೆ. ಈ ಘಟನೆಯು ನಿವಾಸಿಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಕಟ್ಟಡ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಥೋ! ಈ ಮುದುಕರಿಗೆ ಈ ವಯಸ್ಸಲ್ಲಿ ಏನೆಲ್ಲ ಚಪಲ ನೋಡಿ! ಹಿಂದೆಂದೂ ಕಂಡಿರದಂಥ ವಿಡಿಯೊ!

Viral Video: ಇಲ್ಲೊಬ್ಬ ಬೊಕ್ಕ ತಲೆಯ ವ್ಯಕ್ತಿ ಮಹಿಳೆಯ ಕೂದಲಿನ ಜೊತೆ ವಿಚಿತ್ರವಾಗಿ ವರ್ತಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಅನೇಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯಲ್ಲಿ ಮಹಿಳೆಯ ಹಿಂದೆ ಬೊಕ್ಕ ತಲೆಯ ಮುದುಕನೊಬ್ಬ ಅವಳ ಕೂದಲನ್ನು ಸ್ಪರ್ಶಿಸಲು ಮತ್ತು ಅದರ ವಾಸನೆ ನೋಡಲು ಪ್ರಯತ್ನಿಸುತ್ತಿದ್ದಾನೆ. ಅಶ್ಲೀಲವಾಗಿರುವುದರ ಜೊತೆಗೆ, ಅವನ ವರ್ತನೆ ಕಳವಳಕಾರಿಯಾಗಿದೆ.

VISTARANEWS.COM


on

Viral Video
Koo


ಈ ಮುದುಕರಿಗೆ ವಯಸ್ಸಾಗುತ್ತಿದ್ದಂತೆ ಏನೆಲ್ಲ ಚಪಲ ಬರುತ್ತದೋ ಹೇಳಲಾಗುವುದಿಲ್ಲ. ಕೆಲವರು ಚಿಕ್ಕ ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ಎಸಗಲು ಹೇಸುವುದಿಲ್ಲ. ಕೆಲವರು ಬಸ್‌ಗಳಲ್ಲಿ, ರೈಲುಗಳಲ್ಲಿ ಮಹಿಳೆಯರ ಮೈ ಸವರುವುದರಲ್ಲೇ ವಿಕೃತ ಖುಷಿ ಅನುಭವಿಸುತ್ತಾರೆ. ಆದರೆ ಇಲ್ಲಿ ಈ ಮುದುಕ ಯುವತಿಯೊಬ್ಬಳ ಕೂದಲನ್ನು ಮುಟ್ಟಲು, ಅದನ್ನು ಮುದ್ದಿಸಲು ಪಡುವ ಪ್ರಯತ್ನ ನಗು ತರಿಸುತ್ತದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದು ಅನೇಕರಲ್ಲಿ ಆಶ್ಚರ್ಯವನ್ನುಂಟುಮಾಡಿದೆ.

ಉತ್ತರ ಪ್ರದೇಶದ ಬಿಸೋಲಿಯಲ್ಲಿ ನಡೆದಿದೆ ಎನ್ನಲಾದ ಈ ಘಟನೆಯ ವಿಡಿಯೊದಲ್ಲಿ ವಯಸ್ಸಾದ ಬೊಕ್ಕ ತಲೆಯ ವ್ಯಕ್ತಿ ಮತ್ತು ಉದ್ದವಾದ ಕೂದಲನ್ನು ಹೊಂದಿರುವ ಮಹಿಳೆ ಕಾಣಿಸುತ್ತಿದ್ದಾರೆ. ಈ ವಿಡಿಯೊದಲ್ಲಿ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದು, ಅನೇಕರ ಗಮನವನ್ನು ಸೆಳೆದಿದೆ. ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯಲ್ಲಿ ಮಹಿಳೆಯ ಹಿಂದೆ ಬೊಕ್ಕ ತಲೆಯ ಮುದುಕನೊಬ್ಬ ಅವಳ ಕೂದಲನ್ನು ಸ್ಪರ್ಶಿಸಲು ಮತ್ತು ವಾಸನೆ ನೋಡಲು ಪ್ರಯತ್ನಿಸುತ್ತಿದ್ದಾನೆ. ಅಶ್ಲೀಲವಾಗಿರುವುದರ ಜೊತೆಗೆ, ಅವನ ವರ್ತನೆ ಕಳವಳಕಾರಿಯಾಗಿದೆ. ಏಕೆಂದರೆ ಆ ಮಹಿಳೆಗೆ ತನ್ನ ಹಿಂದೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ತಿಳಿದಿಲ್ಲ.

ವಿಡಿಯೊ ಮುಂದುವರಿಯುತ್ತಿದ್ದಂತೆ ಆ ವ್ಯಕ್ತಿ ಮಹಿಳೆಗೆ ಹತ್ತಿರವಾಗಲು ಅನೇಕ ಬಾರಿ ಪ್ರಯತ್ನಿಸುತ್ತಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವನ ಎಲ್ಲಾ ಅನುಚಿತ ಕೃತ್ಯಗಳು ರೆಕಾರ್ಡ್ ಆಗಿದೆ. ಈ ವಿಡಿಯೊವನ್ನು ಘರ್ ಕೆ ಕಾಲೇಶ್ ಎಂಬ ಖಾತೆಯಿಂದ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೊವನ್ನು ಕಂಡು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಇದನ್ನು ನೋಡಿದ ನಂತರ ಅನೇಕ ವೀಕ್ಷಕರು ಕೋಪಗೊಂಡಿದ್ದಾರೆ.

ಇದನ್ನೂ ಓದಿ: ಕಾಂಡೋಮ್, ಲೂಬ್ರಿಕೆಂಟ್‍ ಬಳಸಿದರೂ ಕ್ಯಾನ್ಸರ್‌! ಅಧ್ಯಯನ ವರದಿಯಲ್ಲಿ ಆಘಾತಕಾರಿ ಸಂಗತಿ

ಜುಲೈ 31ರಂದು ಪೋಸ್ಟ್ ಮಾಡಲಾದ ಈ ವಿಡಿಯೊ ವೈರಲ್ ಆಗಿದ್ದು, 3.3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಅವರಲ್ಲಿ ಅನೇಕರು ತಮ್ಮ ಕೋಪ ವ್ಯಕ್ತಪಡಿಸಿದ್ದಾರೆ. “ಅವನ ತಲೆ ಬೋಳು ಆಗಿರುವುದರಿಂದ ಅವಳ ಕೂದಲಿನ ಮೇಲೆ ಆಸೆ ಪಟ್ಟಿರಬೇಕು” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ವಯಸ್ಸಾದಂತೆ ಕೆಲವು ಮುದುಕರಲ್ಲಿ ವಿಕೃತ ಸ್ವಭಾವವು ಹೆಚ್ಚಾಗುತ್ತದೆ. ಅನೇಕ ವೃದ್ಧರು ಇಂಥದ್ದನ್ನು ಮಾಡುವುದನ್ನು ನೋಡಿದ್ದೇನೆ” ಎಂಬುದಾಗಿ ಬರೆದಿದ್ದಾರೆ. ಇನ್ನೂ ಕೆಲವರು ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

Continue Reading

Latest

Sexual Abuse: ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ಮಗು ಜನನ! ಆಘಾತಗೊಂಡು ಅಲ್ಲೇ ಕೂತಿದ್ದ ಬಾಲಕಿ

Sexual Abuse: ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಮೊದಲ ವರ್ಷದ ಇಂಟರ್ ಮೀಡಿಯಟ್ ವಿದ್ಯಾರ್ಥಿನಿಯೊಬ್ಬಳು ಬಾತ್ ರೂಮ್‌ನಲ್ಲಿ ಇನ್ನೂ ಬೆಳವಣಿಗೆ ಹೊಂದದ ಮಗುವಿಗೆ ಜನ್ಮ ನೀಡಿದ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೊಥಪಟ್ಟಣಂನ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ನಡೆದಿದೆ. ವಿದ್ಯಾರ್ಥಿನಿ ಬಹಳ ಸಮಯದ ನಂತರ ತನ್ನ ತರಗತಿಗೆ ಹಾಜರಾಗದಿದ್ದಾಗ, ಅವಳ ಸಹಪಾಠಿಗಳು ಅಲ್ಲಿಯ ಸಿಬ್ಬಂದಿಗೆ ಮಾಹಿತಿ ನೀಡಿದರು. ಆಗ ಆಕೆಯನ್ನು ಹುಡುಕಿಕೊಂಡು ಬಾತ್‌ರೂಂಗೆ ಬಂದ ಶಿಕ್ಷಕರಿಗೆ ಅಲ್ಲಿ ಈ ಘೋರ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ.

VISTARANEWS.COM


on

Sexual Abuse
Koo

ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದೀಗ 16 ವರ್ಷದ ಇಂಟರ್ ಮೀಡಿಯೆಟ್ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್‌ ಬಾತ್‍ರೂಮ್‌(Sexual Abuse)ನಲ್ಲಿ ಇನ್ನೂ ಬೆಳವಣಿಗೆ ಹೊಂದದ ಭ್ರೂಣಕ್ಕೆ ಜನ್ಮ ನೀಡಿದ್ದಾಳೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೊಥಪಟ್ಟಣಂನ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ.

ಈಕೆ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಮೊದಲ ವರ್ಷದ ಇಂಟರ್‌ ಮೀಡಿಯಟ್‌ ವಿದ್ಯಾರ್ಥಿನಿಯಾಗಿದ್ದು, ಕಳೆದ ಎರಡು ತಿಂಗಳಿನಿಂದ ಹಾಸ್ಟೆಲ್‍ನಲ್ಲಿ ವಾಸವಾಗಿದ್ದಳು. ಶಾಲಾ ಅಧಿಕಾರಿಗಳ ಮಾಹಿತಿ ಪ್ರಕಾರ, ವಿದ್ಯಾರ್ಥಿನಿ ಹೊಟ್ಟೆ ನೋವಿನ ಬಗ್ಗೆ ಹೇಳಿಕೊಂಡಿದ್ದಳು. ಆಗ ಅವಳನ್ನು ಬಾತ್ ರೂಮ್‌ಗೆ ಹೋಗಿ ಬರುವಂತೆ ಹೇಳಲಾಗಿತ್ತು. ಅಲ್ಲಿ ಅವಳು ಇನ್ನೂ ಬೆಳವಣಿಗೆ ಹೊಂದದ ಮಗುವಿಗೆ ಜನ್ಮ ನೀಡಿದ್ದಾಳೆ. ವಿದ್ಯಾರ್ಥಿನಿ ಬಹಳ ಸಮಯ ಕಳೆದರೂ ಬಾತ್‌ರೂಮ್‌ನಿಂದ ಬಾರದ ಕಾರಣ, ಅವಳ ಸಹಪಾಠಿಗಳು ಅಲ್ಲಿಯ ಉಸ್ತುವಾರಿಗೆ ಮಾಹಿತಿ ನೀಡಿದರು. ಆಗ ಆಕೆಯನ್ನು ಹುಡುಕಿಕೊಂಡು ಬಾತ್‍ರೂಮ್‌ಗೆ ಬಂದ ಅವರು ಅಲ್ಲಿ ಈ ಘೋರ ದೃಶ್ಯ ಕಂಡುಬಂದಿದೆ.

ಚೀಮಕುರ್ತಿ ಮಂಡಲದ ನಿವಾಸಿಯಾದ ಈ ವಿದ್ಯಾರ್ಥಿನಿ ಜೂನ್ 19ರಂದು ಈ ಶಿಕ್ಷಣ ಸಂಸ್ಥೆಗೆ ಸೇರಿದ್ದಳು. ಪ್ರತಿದಿನ ತರಗತಿಗಳಿಗೆ ಹಾಜರಾಗುತ್ತಿದ್ದಳು. ಅವಳು ಒಂದು ವಾರ ಮನೆಗೆ ಹೋಗಿ ಹಾಸ್ಟೆಲ್‍ಗೆ ಹಿಂದಿರುಗಿದ್ದಳು. ಹಾಸ್ಟೆಲ್‍ನಲ್ಲಿ ಅವಳ ಜೊತೆ ಇತರ ವಿದ್ಯಾರ್ಥಿಗಳು ವಾಸವಾಗಿದ್ದಾರೆ. ವಿದ್ಯಾರ್ಥಿನಿಯ ಗರ್ಭಧಾರಣೆಯ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂಬುದಾಗಿ ಶಾಲಾ ಅಧಿಕಾರಿಗಳು ಹೇಳಿದ್ದಾರೆ. ವಿದ್ಯಾರ್ಥಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಒಂಗೋಲ್‍ನ ರಿಮ್ಸ್(ಆರ್ ಐಎಂಎಸ್) ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಪೊಲೀಸರ ಮಾಹಿತಿ ಪ್ರಕಾರ, ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದ ಹಾಸ್ಟೆಲ್‌ ಶೌಚಾಲಯದಲ್ಲಿ ಹದಿನಾರು ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಅವಳು ಬಹಳ ಸಮಯದಿಂದ ಶೌಚಾಲಯದಿಂದ ಹೊರಗೆ ಬರದಿರುವುದನ್ನು ಕಾಲೇಜು ಸಿಬ್ಬಂದಿ ಗಮನಿಸಿದ್ದಾರೆ. ಉಪನ್ಯಾಸಕಿಯೊಬ್ಬರು ಒಳಗೆ ಹೋಗಿ ನೋಡಿದಾಗ ವಿದ್ಯಾರ್ಥಿನಿಯ ಪಕ್ಕದಲ್ಲಿ ಗಂಡು ಮಗು ಸತ್ತು ಬಿದ್ದಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ವಿದ್ಯಾರ್ಥಿನಿ ಆಘಾತಗೊಂಡು ಅಲ್ಲೇ ಕುಳಿತಿದ್ದಳು.

ಇದನ್ನೂ ಓದಿ: ಟೋಸ್ಟ್‌ ನೀಡುವುದಾಗಿ ಕರೆದು ಬಾಲಕಿ ಮೇಲೆ ಅತ್ಯಾಚಾರ; ಮೋಯಿದ್‌ ಖಾನ್‌, ರಾಜ ಖಾನ್‌ ಬಂಧನ

ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯನ್ನು ಒಂಗೋಲ್‍ನ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಚಿಮಕುರ್ತಿಯ ವ್ಯಕ್ತಿಯೊಬ್ಬ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂಬುದಾಗಿ ತಿಳಿದುಬಂದಿದೆ.

Continue Reading

ಸಿನಿಮಾ

OTT Releases: ಒಟಿಟಿಯಲ್ಲಿ ಈ ತಿಂಗಳು ಕಲ್ಕಿ, ಇಂಡಿಯನ್‌, ಟರ್ಬೊ ಜತೆಗೆ ಇನ್ಯಾವ ಹೊಸ ಚಿತ್ರ, ವೆಬ್‌ ಸಿರೀಸ್‌?

ಆಕ್ಷನ್, ಥ್ರಿಲರ್, ಹಾಸ್ಯವನ್ನೊಳಗೊಂಡ ಕಥೆಗಳು ಸಿನಿಮಾ, ವೆಬ್ ಸರಣಿ ರೂಪದಲ್ಲಿ ಈ ತಿಂಗಳಲ್ಲಿ ಒಟಿಟಿಯಲ್ಲಿ (OTT Releases) ತೆರೆಕಾಣಲಿದೆ. ಕಲ್ಕಿ, ಟರ್ಬೊ, ಘುಡಚಡಿ ಸೇರಿದಂತೆ ಹಲವು ಭಾರತೀಯ ಸಿನಿಮಾಗಳು ಒಟಿಟಿ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಬಾರಿ ಭರ್ಜರಿ ಮನೋರಂಜನೆ ಒದಗಿಸಲಿದೆ. ಈ ತಿಂಗಳು ವಿವಿಧ ಒಟಿಟಿಗಳಲ್ಲಿ ನೋಡಲು ಸಿಗುವ ಸಿನಿಮಾಗಳು ಮತ್ತು ವೆಬ್‌ ಸಿರೀಸ್‌ಗಳ ಮಾಹಿತಿ ಇಲ್ಲಿದೆ.

VISTARANEWS.COM


on

By

Koo

ಫಿರ್ ಆಯಿ ಹಸೀನ್ ದಿಲ್ರುಬಾ (Phir Aayi Hasseen Dillruba), ಘುಡಚಡಿ (Ghudchadi), ಟರ್ಬೊ (Turbo) ಸೇರಿದಂತೆ ಭಾರತೀಯ ಹಲವು ಸಿನಿಮಾಗಳು (indian film), ವೆಬ್ ಸರಣಿಗಳು (Web series) ಜಿಯೋ ಸಿನಿಮಾ, ನೆಟ್ ಫ್ಲಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್ ಸೇರಿದಂತೆ ಹಲವು ಒಟಿಟಿ ವೇದಿಕೆಯಲ್ಲಿ (OTT Releases) ಈ ತಿಂಗಳಲ್ಲಿ ಪ್ರೇಕ್ಷಕರಿಗೆ ಭರ್ಜರಿ ಮನೋರಂಜನೆ ಒದಗಿಸಲಿದೆ. ಆಗಸ್ಟ್ ನಲ್ಲಿ ಪ್ರೇಕ್ಷಕರ ಮನಸೂರೆಗೊಳಿಸುವ ಚಿತ್ರ, ವೆಬ್ ಸರಣಿಗಳ ಮಾಹಿತಿ ಇಲ್ಲಿದೆ.

ಡ್ಯೂನ್‌-ಭಾಗ ಎರಡು

ʼಹೌಸ್ ಹಾರ್ಕೊನೆನ್ʼ ಎಂಬ ಗ್ರಹದ ವಿರುದ್ಧ ಯುದ್ಧ ಮಾಡಲು ಪಾಲ್ ಅಟ್ರೀಡ್ಸ್ ಎಂಬಾತ ಮರುಭೂಮಿ ಗ್ರಹ ಅರ್ರಾಕಿಸ್‌ನ ಫ್ರೀಮೆನ್ ಎಂದು ಕರೆಯುವ ಜನರೊಂದಿಗೆ ಒಂದಾಗುವ ಕಥೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಆಸ್ಟಿನ್ ಬಟ್ಲರ್, ಫ್ಲಾರೆನ್ಸ್ ಪಗ್, ಝೆಂಡಾಯಾ ಅಭಿನಯಿಸಿದ್ದಾರೆ. ಆಗಸ್ಟ್ 1ರಿಂದ ಜಿಯೋ ಸಿನಿಮಾದಲ್ಲಿ ತೆರೆಕಾಣುತ್ತಿರುವ ಸಾಹಸಮಯ ಚಿತ್ರ ಇದಾಗಿದೆ.

ಕಿಂಗ್ಡಮ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್

ಸೀಸರ್ ಆಳ್ವಿಕೆಯ ವರ್ಷಗಳ ಅನಂತರ ಅಧಿಕಾರಕ್ಕೆ ಬರುವ ಯುವ ಕೋತಿಯು ಹಿಂದಿನ ಕೆಲವು ನೀತಿಗಳನ್ನು ಪ್ರಶ್ನಿಸತೊಡಗುತ್ತದೆ. ಇದು ಮಂಗಗಳು ಮತ್ತು ಮನುಷ್ಯರ ಭವಿಷ್ಯವನ್ನು ರೂಪಿಸುವ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಫ್ರೇಯಾ ಅಲನ್, ಕೆವಿನ್ ಡ್ಯುರಾಂಡ್, ಓವನ್ ಟೀಗ್ ಅಭಿನಯಿಸಿರುವ ಈ ಚಿತ್ರ ಆಗಸ್ಟ್ 2ರಂದು ಡಿಸ್ನಿ+ ಹಾಟ್‌ಸ್ಟಾರ್ ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರದಲ್ಲಿ ಸಾಕಷ್ಟು ಸಾಹಸಮಯ ದೃಶ್ಯಗಳಿವೆ.

ಇಂಡಿಯನ್ 2

ಸೇನಾಪತಿ, ಮಾಜಿ ಸ್ವಾತಂತ್ರ್ಯ ಹೋರಾಟಗಾರ ಯುವಕನೊಬ್ಬ ಭ್ರಷ್ಟ ರಾಜಕಾರಣಿಗಳನ್ನು ಆನ್‌ಲೈನ್‌ನಲ್ಲಿ ಬಹಿರಂಗಪಡಿಸಲು ಸಹಾಯ ಮಾಡಲು ದೇಶಕ್ಕೆ ಹಿಂತಿರುಗುವ ಕಥೆಯನ್ನು ಇದು ಒಳಗೊಂಡಿದೆ. ಕಮಲ್ ಹಾಸನ್, ಸಿದ್ಧಾರ್ಥ್, ಪ್ರಿಯಾ ಭವಾನಿ ಶಂಕರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಸಾಕಷ್ಟು ಥ್ರಿಲರ್ ದೃಶ್ಯಗಳನ್ನು ಒಳಗೊಂಡಿರುವ ಈ ಚಿತ್ರ ಆಗಸ್ಟ್ 2ರ ಬಳಿಕ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ.

ಫಿರ್ ಆಯಿ ಹಸೀನ್ ದಿಲ್‌ರುಬಾ


ಪತಿಯನ್ನು ಕೊಲೆ ಮಾಡಿದ ಶಂಕಿತ ಮಹಿಳೆಯನ್ನು ಬಂಧಿಸಲು ಪುರಾವೆಗಾಗಿ ಪೊಲೀಸರು ಹುಡುಕುತ್ತಿರುವಾಗ ಮಹಿಳೆ ತನ್ನ ಮದುವೆಯ ಬಗ್ಗೆ ಆಕರ್ಷಕ ಕಥೆಯನ್ನು ವಿವರಿಸುವ ಚಿತ್ರ ಕಥೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ತಾಪ್ಸಿ ಪನ್ನು, ವಿಕ್ರಾಂತ್ ಮಾಸ್ಸೆ ಮತ್ತು ಸನ್ನಿ ಕೌಶಲ್ ಅಭಿನಯಿಸಿದ್ದಾರೆ. ಥ್ರಿಲ್ಲರ್ ಕಥಾ ಹಂದರವಿರುವ ಚಿತ್ರ ಆಗಸ್ಟ್ 9ರಂದು ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ.

ಘುಡ್‌ಚಡಿ

ತಂದೆ ಮತ್ತು ಮಗ, ತಾಯಿ ಮತ್ತು ಅವಳ ಮಗಳೊಂದಿಗೆ ಪ್ರೀತಿಯಲ್ಲಿ ಬೀಳುವ ಕಥೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಸಂಜಯ್ ದತ್, ರವೀನಾ ಟಂಡನ್, ಪಾರ್ಥ್ ಸಮತಾನ್, ಖುಶಾಲಿ ಕುಮಾರ್ ಅಭಿನಯಿಸಿದ್ದಾರೆ. ರೋಮ್ಯಾಂಟಿಕ್, ಹಾಸ್ಯ ಚಿತ್ರ ಇದಾಗಿದ್ದು, ಜಿಯೋ ಸಿನಿಮಾದಲ್ಲಿ ಆಗಸ್ಟ್ 9ರಂದು ಬಿಡುಗಡೆಯಾಗಲಿದೆ.

ಟರ್ಬೊ

ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಜೋಸ್ ಚೆನ್ನೈಗೆ ಹೋಗಿ ಅಲ್ಲಿ ಸಿಂಧು ಮತ್ತು ಅವನ ಆತ್ಮೀಯ ಸ್ನೇಹಿತನೊಂದಿಗೆ ಇರುತ್ತಾನೆ. ಇದು ಅನಿರೀಕ್ಷಿತ ಘಟನೆಗಳಿಗೆ ಕಾರಣವಾಗುವ ಕಥಾ ಹಂದರವಿರುವ ಚಿತ್ರದಲ್ಲಿ ಮಮ್ಮುಟ್ಟಿ, ಅಂಜನಾ ಜಯಪ್ರಕಾಶ್, ರಾಜ್ ಬಿ. ಶೆಟ್ಟಿ ಅಭಿನಯಯಿಸಿದ್ದಾರೆ. ಆಕ್ಷನ್, ಕಾಮಿಡಿ ಚಿತ್ರ ಇದಾಗಿದ್ದು, ಸೋನಿ ಲೈವ್ ನಲ್ಲಿ ಆಗಸ್ಟ್ 9ರಂದು ಬಿಡುಗಡೆಯಾಗಲಿದೆ.

ಗ್ಯಾರಾಹ್‌ ಗ್ಯಾರಾಹ್‌


15 ವರ್ಷಗಳಿಂದ ಇತ್ಯರ್ಥವಾಗದ ಕೊಲೆ ಪ್ರಕರಣಗಳನ್ನು ಭೇದಿಸಲು ಇಬ್ಬರು ಅಧಿಕಾರಿಗಳು ಮುಂದಾಗುವ ಕಥೆಯನ್ನು ಒಳಗೊಂಡಿರುವ ಚಿತ್ರದಲ್ಲಿ ರಾಘವ್ ಜುಯಲ್, ಕೃತಿಕಾ ಕಮ್ರಾ, ಧೈರ್ಯ ಕರ್ವಾ ಅಭಿನಯಿಸಿದ್ದಾರೆ.
ಥ್ರಿಲ್ಲರ್ ಚಿತ್ರ ಇದಾಗಿದ್ದು ಝೀ5 ನಲ್ಲಿ ಆಗಸ್ಟ್ 9ರಂದು ಚಿತ್ರ ಬಿಡುಗಡೆಯಾಗಲಿದೆ.

ಮನೋರಥಂಗಲ್

ಆಧುನಿಕ ಮಲಯಾಳಂ ಸಾಹಿತ್ಯದಲ್ಲಿ ಪ್ರಸಿದ್ಧ ಲೇಖಕರಾದ ಎಂ.ಟಿ. ವಾಸುದೇವನ್ ನಾಯರ್ ಬರೆದ ಒಂಬತ್ತು ಕಥೆಗಳನ್ನು ಆಧರಿಸಿರುವ ಈ ಚಿತ್ರದಲ್ಲಿ ಮೋಹನ್ ಲಾಲ್, ಮಮ್ಮುಟ್ಟಿ, ಫಹದ್ ಫಾಸಿಲ್ ಅಭಿನಯಿಸಿದ್ದಾರೆ.
ಝೀ5ನಲ್ಲಿ ಆಗಸ್ಟ್ 15ರಂದು ಚಿತ್ರ ಬಿಡುಗಡೆಯಾಗಲಿದೆ.

ಕಲ್ಕಿ 2898ಎಡಿ

ದುಷ್ಟ ಶಕ್ತಿಗಳಿಂದ ಜಗತ್ತನ್ನು ರಕ್ಷಿಸಲು ವಿಷ್ಣುವಿನ ಆಧುನಿಕ ಅವತಾರ ಭೂಮಿಗೆ ಬರುವ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಅಭಿನಯಿಸಿದ್ದಾರೆ.
ಸಾಕಷ್ಟು ಸಾಹಸಮಯ ದೃಶ್ಯಗಳನ್ನು ಒಳಗೊಂಡಿರುವ ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋ ಆಗಸ್ಟ್ 15ರ ಬಳಿಕ ಬಿಡುಗಡೆಯಾಗಲಿದೆ.

ದಿ ಡೆಲಿವರೆನ್ಸ್

ನಾಲ್ವರು ಸ್ನೇಹಿತರು ತಮ್ಮ ದೈನಂದಿನ ಜೀವನದಿಂದ ತಪ್ಪಿಸಿಕೊಳ್ಳಲು ಗ್ರಾಮೀಣ ಜಾರ್ಜಿಯಾದಲ್ಲಿ ಒಂದು ವಾರ ಕಳೆಯಲು ಕ್ಯಾನೋ ಟ್ರಿಪ್ ಹೊರಡುತ್ತಾರೆ. ಈ ಪ್ರವಾಸ ಅವರನ್ನು ಸಾವು ಬದುಕಿನ ಹೊರಟವನ್ನಾಗಿ ಮಾಡುತ್ತದೆ.
ಚಿತ್ರದಲ್ಲಿ ಜಾನ್ ವಾಯ್ಟ್, ಬರ್ಟ್ ರೆನಾಲ್ಡ್ಸ್, ನೆಡ್ ಬೀಟಿ, ರೋನಿ ಕಾಕ್ಸ್ ಅಭಿನಯಿಸಿದ್ದಾರೆ. ಹಾರರ್, ಥ್ರಿಲ್ಲರ್ ಕಥೆಯನ್ನು ಒಳಗೊಂಡಿರುವ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಆಗಸ್ಟ್ 30ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: Movies on Israel: ಪ್ಯಾಲೇಸ್ತಿನ್‌ ಉಗ್ರರ ವಿರುದ್ಧ ಇಸ್ರೇಲ್ ಸೇಡು! ಮೈನವಿರೇಳಿಸುವ ಈ ಸಿನೆಮಾಗಳನ್ನು ನೋಡಲೇಬೇಕು!

ಕಿಲ್

ಹೊಸದಿಲ್ಲಿ ರೈಲಿನಲ್ಲಿ ದರೋಡೆಕೋರರೊಂದಿಗೆ ಕಮಾಂಡೋಗಳು ಹೊರಾಡುವ ಕಥೆಯನ್ನು ಇದು ಒಳಗೊಂಡಿದೆ. ಲಕ್ಷ್ಯ, ರಾಘವ್ ಜುಯಲ್, ತಾನ್ಯಾ ಮಾಣಿಕ್ತಾಲಾ ಅಭಿನಯಿಸಿದ್ದಾರೆ. ಆಕ್ಷನ್, ಥ್ರಿಲ್ಲರ್ ಕಥೆಯನ್ನೊಳಗೊಂಡಿರುವ ಈ ಸಿನಿಮಾವು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಆಗಸ್ಟ್ 30ರ ಬಳಿಕ ಬಿಡುಗಡೆಯಾಗಲಿದೆ.

Continue Reading

ಗ್ಯಾಜೆಟ್ಸ್

Phone Storage Issue: ನಿಮ್ಮ ಮೊಬೈಲ್ ಸ್ಟೋರೇಜ್ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ!

ಫೋನ್‌ನಲ್ಲಿ ಸ್ಟೋರೇಜ್ ಸಮಸ್ಯೆ ಎದುರಾಗುವುದು ಸಾಮಾನ್ಯ. ವಿಶೇಷವಾಗಿ ಅನೇಕ ಅಪ್ಲಿಕೇಶನ್‌, ಫೋಟೋ, ವಿಡಿಯೋಗಳು ಮತ್ತು ಇತರ ಫೈಲ್‌ಗಳನ್ನು ಹೆಚ್ಚಾಗುತ್ತಾ ಹೋದಂತೆ ಫೋನ್ ನಲ್ಲಿ ಜಾಗದ ಸಮಸ್ಯೆ (Phone Storage Issue) ಎದುರಾಗುತ್ತದೆ. ಹೊಸ ಫೋನ್ ಖರೀದಿಸದೆಯೇ ಫೋನ್‌ನಲ್ಲಿ ಜಾಗವನ್ನು ಮುಕ್ತಗೊಳಿಸಲು ಕೆಲವು ಸುಲಭ ಮಾರ್ಗಗಳು ಇಲ್ಲಿವೆ.

VISTARANEWS.COM


on

By

Phone Storage Issue
Koo

ಎಲ್ಲರ ಫೋನ್ ನಲ್ಲಿ (phone) ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಎಂದರೆ ಸ್ಟೋರೇಜ್ (Phone Storage Issue). ಎಷ್ಟೇ ಒಳ್ಳೆಯ ಫೋನ್ ಆಗಿದ್ದರೂ ವರ್ಷ ಕಳೆಯುವಷ್ಟರಲ್ಲಿ ಸ್ಟೋರೇಜ್ ಫುಲ್ (storage full) ಎಂಬುದಾಗಿ ತೋರಿಸಲು ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ನಾವು ಜೋಪಾನ ಮಾಡಿ ಇಡಬೇಕು ಎಂದುಕೊಂಡಿರುವ ಫೈಲ್, ಫೋಟೋ, ವಿಡಿಯೋಗಳನ್ನು ಇಷ್ಟವಿಲ್ಲದೇ ಇದ್ದರೂ ಡಿಲೀಟ್ ಮಾಡಲೇಬೇಕಾದ ಸಂದರ್ಭ ಎದುರಾಗುತ್ತದೆ.

ಫೋನ್‌ನಲ್ಲಿ ಸ್ಟೋರೇಜ್ ಸಮಸ್ಯೆ ಎದುರಾಗುವುದು ಸಾಮಾನ್ಯ. ವಿಶೇಷವಾಗಿ ಅನೇಕ ಅಪ್ಲಿಕೇಶನ್‌, ಫೋಟೋ, ವಿಡಿಯೋಗಳು ಮತ್ತು ಇತರ ಫೈಲ್‌ಗಳನ್ನು ಹೆಚ್ಚಾಗುತ್ತಾ ಹೋದಂತೆ ಫೋನ್ ನಲ್ಲಿ ಜಾಗದ ಸಮಸ್ಯೆ ಎದುರಾಗುತ್ತದೆ.
ಹೊಸ ಫೋನ್ ಖರೀದಿಸದೆಯೇ ಫೋನ್‌ನಲ್ಲಿ ಜಾಗವನ್ನು ಮುಕ್ತಗೊಳಿಸಲು ಕೆಲವು ಸುಲಭ ಮಾರ್ಗಗಳು ಇಲ್ಲಿವೆ.

Phone Storage Issue
Phone Storage Issue


ಅನಗತ್ಯ ಅಪ್ಲಿಕೇಶನ್‌ಗಳನ್ನು ಅಳಿಸಿ

ಸಾಮಾನ್ಯವಾಗಿ ನಮಗೆ ಬೇಡವಾದ ಸಾಕಷ್ಟು ಆಪ್ ಗಳು ಮೊಬೈಲ್ ನಲ್ಲಿ ತುಂಬಿಕೊಂಡಿರುತ್ತವೆ. ಎಷ್ಟೋ ಸಂದರ್ಭದಲ್ಲಿ ಕೆಲವೊಂದು ಆಪ್ ಗಳನ್ನು ನಾವು ಬಳಸುವುದೇ ಇಲ್ಲ. ಇಂತಹ ಆಪ್ ಗಳನ್ನೂ ಅಳಿಸಿ. ಇದರಿಂದ ನೋಟಿಫಿಕೇಶನ್ ಗಳನ್ನು ತಪ್ಪಿಸಬಹುದು. ಜೊತೆಗೆ ಮೊಬೈಲ್ ನಲ್ಲಿ ಹೆಚ್ಚು ಸ್ಪೇಸ್ ಸೃಷ್ಟಿಸಬಹುದು.

ಕ್ಲೌಡ್‌ ಸೇವೆಗಳನ್ನು ಬಳಸಿ

ಫೋಟೋ, ವಿಡಿಯೋಗಳನ್ನು ಸಂಗ್ರಹಿಸಲು ಗೂಗಲ್ ಫೋಟೋಗಳು, ಒನ್ ಡ್ರೈವ್ ಅಥವಾ ಯಾವುದೇ ಇತರ ಕ್ಲೌಡ್ ಸಂಗ್ರಹಣೆಯಂತಹ ಕ್ಲೌಡ್ ಸಂಗ್ರಹಣೆ ಸೇವೆಗಳನ್ನು ಬಳಸಿ. ಇದು ಫೋನ್‌ನಲ್ಲಿ ಸಾಕಷ್ಟು ಜಾಗವನ್ನು ಮುಕ್ತಗೊಳಿಸುತ್ತದೆ. ಇದು ಅನೇಕ ಸಂಗ್ರಹಣೆ ಸಮಸ್ಯೆಗಳನ್ನು ನಿವಾರಿಸುತ್ತದೆ.

Phone Storage Issue
Phone Storage Issue


ಚಾಟಿಂಗ್ ಆಪ್ ಡೇಟಾಗಳನ್ನು ಅಳಿಸಿ

ವಾಟ್ಸಾಪ್, ಟೆಲಿಗ್ರಾಮ್ ನಂತಹ ಅಪ್ಲಿಕೇಶನ್‌ಗಳಿಂದ ಹಳೆಯ ಸಂದೇಶ, ವಿಡಿಯೋ ಮತ್ತು ಫೋಟೋಗಳನ್ನು ಅಳಿಸುವುದು ಉತ್ತಮ ಆಯ್ಕೆಯಾಗಿದೆ. ವಾಟ್ಸಾಪ್ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಅನಗತ್ಯ ಡೇಟಾವನ್ನು ತೆಗೆದುಹಾಕಲು ಸಂಗ್ರಹ ನಿರ್ವಹಣೆ ಆಯ್ಕೆಯನ್ನು ಆರಿಸಿ. ಹೆಚ್ಚುವರಿಯಾಗಿ ದೀರ್ಘ ಅಥವಾ ಅನಗತ್ಯ ಆಡಿಯೋ ಮತ್ತು ವಿಡಿಯೋ ಫೈಲ್ ಗಳನ್ನು ಅಳಿಸಿ. ಈ ಫೈಲ್‌ಗಳನ್ನು ಕಂಪ್ಯೂಟರ್ ಅಥವಾ ಬಾಹ್ಯ ಹಾರ್ಡ್ ಡ್ರೈವ್‌ಗೆ ವರ್ಗಾಯಿಸಿ ಇಟ್ಟುಕೊಳ್ಳಬಹುದು.

ಇದನ್ನೂ ಓದಿ: Honor 200 Series : ಒಂದೇ ದಿನ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್

ವಾಲ್‌ಪೇಪರ್‌, ರಿಂಗ್‌ಟೋನ್‌ಗಳನ್ನು ಆಪ್ಟಿಮೈಜ್ ಮಾಡಿ

ಹೆಚ್ಚಿನ ರೆಸಲ್ಯೂಶನ್ ಇರುವ ವಾಲ್‌ಪೇಪರ್‌ ಮತ್ತು ರಿಂಗ್‌ಟೋನ್‌ಗಳನ್ನು ಬಳಸುವುದನ್ನು ತಪ್ಪಿಸಿ. ಯಾಕೆಂದರೆ ಅವುಗಳು ಸಾಕಷ್ಟು ಜಾಗವನ್ನು ತೆಗೆದುಕೊಳ್ಳುತ್ತದೆ. ಮೊಬೈಲ್ ನಲ್ಲಿ ಹೆಚ್ಚು ಸ್ಟೋರೇಜ್ ಆಗುವುದನ್ನು ತಪ್ಪಿಸಲು ಎಸ್ ಡಿ ಕಾರ್ಡ್ ಬಳಸಿ. ಕೆಲವನ್ನು ಆಪ್ಟಿಮೈಜ್ ಮಾಡುವುದರಿಂದ ಫೋನ್ ಅನ್ನು ಅಪ್‌ಡೇಟ್ ಮಾಡಿ. ಇದು ಫೋನ್ ನಲ್ಲಿರುವ ಸಂಗ್ರಹಣೆ ಸಮಸ್ಯೆಗಳನ್ನು ಪರಿಹರಿಸುತ್ತದೆ.

Continue Reading
Advertisement
Model Monsoon Fashion
ಲೈಫ್‌ಸ್ಟೈಲ್14 mins ago

Model Monsoon Fashion: ಮಾನ್ಸೂನ್‌ ಫ್ಯಾಷನ್‌ನಲ್ಲಿ ಮಾಡೆಲ್‌ ಸನ್ನಿಧಿಯ ಸಿಂಪಲ್‌ ಲುಕ್ಸ್!

Ismail Haniyeh Killing
ವಿದೇಶ23 mins ago

Ismail Haniyh Killing: ಇಸ್ಮಾಯಿಲ್‌ ಹನಿಯೆಹ್‌ ಹತ್ಯೆಗೆ ನಡೆದಿತ್ತಾ ಮಾಸ್ಟರ್‌ ಪ್ಲ್ಯಾನ್? ತಿಂಗಳ ಹಿಂದೆಯೇ ಗೆಸ್ಟ್‌ಹೌಸ್‌ನಲ್ಲಿ‌ ಇಡಲಾಗಿತ್ತಾ ಬಾಂಬ್‌?

Paris Olympics
ಕ್ರೀಡೆ27 mins ago

Paris Olympics: ಆರ್ಚರಿ ಪ್ರೀ ಕ್ವಾರ್ಟರ್‌ನಲ್ಲಿ ನಾಳೆ ಭಾರತದ ದೀಪಿಕಾ ಕುಮಾರಿ-ಭಜನ್ ಕೌರ್ ಕಣಕ್ಕೆ

BBMP Property Tax
ಪ್ರಮುಖ ಸುದ್ದಿ1 hour ago

BBMP Property Tax: ಆಸ್ತಿ ತೆರಿಗೆ ಒನ್‌ ಟೈಮ್‌ ಸೆಟ್ಲ್‌ಮೆಂಟ್‌ಗೆ ಮತ್ತೆ 1 ತಿಂಗಳು ಕಾಲಾವಕಾಶ ವಿಸ್ತರಣೆ ಮಾಡಿದ ಬಿಬಿಎಂಪಿ

Love Case
ಬಳ್ಳಾರಿ2 hours ago

Love case : ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ; ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ

thawar chand gehlot siddaramaiah Governor versus state
ಪ್ರಮುಖ ಸುದ್ದಿ2 hours ago

Governor Versus State: ಶುರುವಾಯ್ತು ರಾಜ್ಯದಲ್ಲಿ ರಾಜ್ಯ ಸರ್ಕಾರ ವರ್ಸಸ್ ರಾಜ್ಯಪಾಲ ಸಂಘರ್ಷ; ರಾಜ್ಯಪಾಲರ ಮುಂದಿನ ನಡೆ ಏನು?

Viral Video
Latest2 hours ago

Viral Video: ಥೋ! ಈ ಮುದುಕರಿಗೆ ಈ ವಯಸ್ಸಲ್ಲಿ ಏನೆಲ್ಲ ಚಪಲ ನೋಡಿ! ಹಿಂದೆಂದೂ ಕಂಡಿರದಂಥ ವಿಡಿಯೊ!

Paris Olympics
ಕ್ರೀಡೆ2 hours ago

Paris Olympics: ಆರ್ಚರಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಕ್ವಾರ್ಟರ್​ ಫೈನಲ್​ ತಲುಪಿದ ಧೀರಜ್‌- ಅಂಕಿತಾ ಜೋಡಿ

intel layoffs
ವಿದೇಶ2 hours ago

Intel Layoffs: ಆರ್ಥಿಕ ಬಿಕ್ಕಟ್ಟು- ಇಂಟೆಲ್‌ ಕಂಪನಿಯಿಂದ 18,000 ಉದ್ಯೋಗಿಗಳು ವಜಾ

Sexual Abuse
Latest2 hours ago

Sexual Abuse: ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ಮಗು ಜನನ! ಆಘಾತಗೊಂಡು ಅಲ್ಲೇ ಕೂತಿದ್ದ ಬಾಲಕಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 day ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 day ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌