Viral Video: ಹಳೆಯ ವಿದ್ಯಾರ್ಥಿಗಳನ್ನು ಸಾಲಾಗಿ ಕರೆಸಿ ಬೆತ್ತದಿಂದ ಹೊಡೆದ ಪ್ರಾಂಶುಪಾಲರು! ಅಪರೂಪದ ವಿಡಿಯೊ - Vistara News

Latest

Viral Video: ಹಳೆಯ ವಿದ್ಯಾರ್ಥಿಗಳನ್ನು ಸಾಲಾಗಿ ಕರೆಸಿ ಬೆತ್ತದಿಂದ ಹೊಡೆದ ಪ್ರಾಂಶುಪಾಲರು! ಅಪರೂಪದ ವಿಡಿಯೊ

Viral Video: ಶಾಲಾ ವಿದ್ಯಾರ್ಥಿಗಳ ಪುನರ್ಮಿಲನವನ್ನು ತೋರಿಸುವ ಸಣ್ಣ ವಿಡಿಯೊವೊಂದು ಭಾರೀ ಶೇರ್‌ ಆಗುತ್ತಿದೆ. ಅಲ್ಲಿ ಪ್ರಾಂಶುಪಾಲರೆಂದು ಹೇಳಲಾದ ವ್ಯಕ್ತಿಯೊಬ್ಬರು ತಮ್ಮ ಮಾಜಿ ವಿದ್ಯಾರ್ಥಿಗಳನ್ನು ಬೆತ್ತದಿಂದ ಹೊಡೆಯುತ್ತಿದ್ದಾರೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಧ್ಯವಯಸ್ಸಿಗೆ ಬಂದಿರುವ ಆಗಿನ ವಿದ್ಯಾರ್ಥಿಗಳು ಏಟು ತಿಂದಿದ್ದಾರೆ. ಅವರಲ್ಲಿ ಕೆಲವರು ಪೊಲೀಸ್ ಅಧಿಕಾರಿಗಳು, ವೈದ್ಯರು, ವಕೀಲರು, ಶಿಕ್ಷಕರು ಮತ್ತು ಬ್ಯುಸಿನೆಸ್‌ಮ್ಯಾನ್‌ ಆಗಿದ್ದಾರೆ. ಆದರೆ ಈಗ ತಮ್ಮ ಪುನರ್ಮಿಲನದ ಸಮಯದಲ್ಲಿ, ಅವರೆಲ್ಲರೂ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ತಮ್ಮ ಶಾಲಾ ಪ್ರಾಂಶುಪಾಲರ ಜೊತೆ ಕಳೆದ ಆ ವಿಶೇಷ ಕ್ಷಣವನ್ನು ಆನಂದಿಸಿದ್ದಾರೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ನಮ್ಮ ಬಾಲ್ಯದ ಜೀವನ ಬಹಳ ಸುಂದರ. ನಾವು ಶಾಲೆಯ ಹೋಗುವಾಗ ಕಳೆದ ದಿನಗಳ ನೆನಪುಗಳು ಮರುಕಳಿಸಿದರೆ ಎಲ್ಲರ ಮುಖದಲ್ಲಿ ನಗುವು ಮೂಡುತ್ತದೆ. ಅದು ಮರೆಯಲಾಗದಂತಹ ಸವಿಸವಿ ನೆನಪು. ಆ ಜೀವನಕ್ಕೆ ಮತ್ತೆ ಹೋಗಲು ಸಾಧ್ಯವಾಗದಿದ್ದರೂ ಅಂದಿನ ದಿನಗಳ ಬಗ್ಗೆ ಇಂದು ಅನುಕರಣೆ ಮಾಡಬಹುದು. ಅದರಿಂದಲೂ ಕೆಲವರಿಗೆ ಖುಷಿ ಸಿಗುತ್ತದೆ. ಹಾಗಾಗಿ ಹಳೆಯ ನೆನಪುಗಳನ್ನು ಮೆಲುಕು ಹಾಕಲು, ಶಾಲೆಯ ಮಾಜಿ ವಿದ್ಯಾರ್ಥಿಗಳು ತಮ್ಮ ಪ್ರಾಂಶುಪಾಲರಿಂದ ಹೊಡೆಸಿಕೊಳ್ಳುವ ಮೂಲಕ ತಮ್ಮ ಪುನರ್ಮಿಲನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದರು. ಹಾಗಾಗಿ ಎಕ್ಸ್ ಬಳಕೆದಾರರಾದ ಕೃಷ್ಣ ಎಂಬುವವರು ಶಾಲೆಯ ಪುನರ್ಮಿಲನವನ್ನು ತೋರಿಸುವ ಸಣ್ಣ ವಿಡಿಯೊವನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಪ್ರಾಂಶುಪಾಲರೆಂದು ಹೇಳಲಾದ ವ್ಯಕ್ತಿಯೊಬ್ಬರು ತಮ್ಮ ಮಾಜಿ ವಿದ್ಯಾರ್ಥಿಗಳನ್ನು “ಬೆತ್ತದಿಂದ ಹೊಡೆಯುತ್ತಿದ್ದಾರೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ಈ ವಿಡಿಯೊದಲ್ಲಿ ಇದ್ದವರು ಮಧ್ಯವಯಸ್ಸಿಗೆ ಬಂದಿರುವ ಆಗಿನ ವಿದ್ಯಾರ್ಥಿಗಳು. ಅವರಲ್ಲಿ ಕೆಲವರು ಪೊಲೀಸ್ ಅಧಿಕಾರಿಗಳು, ವೈದ್ಯರು, ವಕೀಲರು, ಶಿಕ್ಷಕರು ಮತ್ತು ಬ್ಯುಸಿನೆಸ್‍ಮ್ಯಾನ್ ಆಗಿದ್ದಾರೆ. ಆದರೆ ಈಗ ತಮ್ಮ ಪುನರ್ಮಿಲನದ ಸಮಯದಲ್ಲಿ, ಅವರೆಲ್ಲರೂ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ತಮ್ಮ ಶಾಲಾ ಪ್ರಾಂಶುಪಾಲರ ಜೊತೆ ಕಳೆದ ಆ ವಿಶೇಷ ಕ್ಷಣವನ್ನು ಆನಂದಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಶಾಲಾ ಸಮವಸ್ತ್ರವನ್ನು ನೆನಪಿಸುವಂತಹ ಬಿಳಿ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರು ಮತ್ತು ಒಬ್ಬೊಬ್ಬರಾಗಿ ಪ್ರಾಂಶುಪಾಲರ ಮುಂದೆ ಬಂದು ಪ್ರಾಂಶುಪಾಲರಿಂದ ಬೆತ್ತದಲ್ಲಿ ಹೊಡೆಸಿಕೊಳ್ಳುತ್ತಿದ್ದಾರೆ, ಆ ಮೂಲಕ ಅವರ ಶಾಲೆಯ ಹಳೆಯ ನೆನಪುಗಳನ್ನು ಮೆಲುಕುಹಾಕಿದ್ದಾರೆ. ಹಾಗೇ ಈ ರೀತಿ ಹೊಡೆಯುವುದು ಆ ವಿದ್ಯಾರ್ಥಿಗಳು ವ್ಯಕ್ತಪಡಿಸಿದ ವಿಶೇಷ ಬಯಕೆಯಾಗಿದ್ದು, ತಮ್ಮ ಯಶಸ್ಸಿಗೆ ತಮ್ಮ ಪ್ರಾಂಶುಪಾಲರ ಬೆತ್ತದ ಆಶೀರ್ವಾದವೇ ಕಾರಣ ಎಂದು ಆ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಶಿಕ್ಷಕಿ, ಸಹಪಾಠಿಗಳ ಕಿರುಕುಳ ತಾಳಲಾರದೆ ನೇಣಿಗೆ ಶರಣಾದ ಬಾಲಕ

“ಶಾಲೆಯ ಹಳೆಯ ವಿದ್ಯಾರ್ಥಿಗಳ ವಿಚಿತ್ರ ಪುನರ್ಮಿಲನ ಇಲ್ಲಿದೆ! ಇದರಲ್ಲಿ ಪೊಲೀಸ್ ಅಧಿಕಾರಿಗಳು, ವೈದ್ಯರು, ವಕೀಲರು, ಪ್ರಾಂಶುಪಾಲರು, ಶಿಕ್ಷಕರು, ಉದ್ಯಮಿಗಳು ಮತ್ತು ಶಾಲೆಗಳ ಮಾಲೀಕರು ಇದ್ದಾರೆ. ಅವರೆಲ್ಲರಿಗೂ ಒಂದು ಆಸೆ ಇತ್ತು. ಅವರ ವಿಶೇಷವಾದ ಶಾಲಾ ಜೀವನವನ್ನು ನೆನಪಿಸಿಕೊಳ್ಳಲು ಅವರ ಪ್ರಾಂಶುಪಾಲರು ತಮ್ಮ ಬೆತ್ತದಿಂದ ಅವರನ್ನು ಹೊಡೆಯಬೇಕು. ಏಕೆಂದರೆ ಪ್ರಾಂಶುಪಾಲರ ಕೈಯಲ್ಲಿ ತಿಂದ ಆ ‘ಬೆತ್ತದ ಆಶೀರ್ವಾದ’ದ ಪರಿಣಾಮವಾಗಿ ಅವರು ತಮ್ಮ ಜೀವನದಲ್ಲಿ ಹೆಚ್ಚಿನ ಎತ್ತರವನ್ನು ತಲುಪಿದ್ದಾರೆ ಎಂದು ಅವರು ನಂಬುತ್ತಾರೆ” ಎಂದು ಈ ಪೋಸ್ಟ್ ಗೆ ಶೀರ್ಷಿಕೆ ಬರೆಯಲಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದನ್ನು ನೋಡಿದ ನಂತರ ಹಲವಾರು ಸೋಶಿಯಲ್ ಮೀಡಿಯಾದ ಬಳಕೆದಾರರು ತಮ್ಮ ಗತಕಾಲವನ್ನು ನೆನೆದು ಭಾವುಕರಾಗಿದ್ದಾರೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಶಾಲೆಯಲ್ಲಿ ಶಿಕ್ಷಕಿ, ಶಿಕ್ಷಕನ ನಡುವೆ ಭೀಕರ ಮಾರಾಮಾರಿ! ವಿಡಿಯೊ ನೋಡಿದವರಿಗೆ ಗಾಬರಿ!

Viral Video: ಉತ್ತರ ಪ್ರದೇಶದ ಚಿತ್ರಕೂಟ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೇ ಹೊಡೆದಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಿಕ್ಷಕರು ಪರಸ್ಪರ ಹೊಡೆದಾಡಿಕೊಳ್ಳುವ ಮೂಲಕ ಗೊಂದಲದ ಪರಿಸ್ಥಿತಿಯನ್ನು ಸೃಷ್ಟಿಮಾಡಿದ್ದಾರೆ. ಈ ಪರಿಸ್ಥಿತಿಯನ್ನು ಬೇಗನೆ ಪರಿಹರಿಸಲು ಮತ್ತು ಇಂತಹ ಘಟನೆಗಳು ಮತ್ತೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳನ್ನು ಸ್ಥಳೀಯರು ಒತ್ತಾಯಿಸಿದ್ದಾರೆ.

VISTARANEWS.COM


on

Viral Video
Koo


ಶಾಲೆಗಳಲ್ಲಿ ವಿದ್ಯಾರ್ಥಿಗಳ ನಡುವೆ ಜಗಳ, ಗಲಾಟೆ, ಹೊಡೆದಾಟಗಳು ನಡೆಯುವುದು ಸಹಜ. ಆಗ ಶಿಕ್ಷಕರು ಮಧ್ಯೆ ಬಂದು ಅವರಿಗೆ ಬುದ್ಧಿ ಹೇಳಿ ಸಮಾಧಾನ ಮಾಡುವುದನ್ನು ನಾವು ಕಂಡಿರುತ್ತೇವೆ. ಆದರೆ ಉತ್ತರ ಪ್ರದೇಶದ ಚಿತ್ರಕೂಟ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೇ ಹೊಡೆದಾಡಿಕೊಂಡ ಘಟನೆ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಆಗಸ್ಟ್ 14ರಂದು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಶಿಕ್ಷಕಿ ಸಪ್ನಾ ಶುಕ್ಲಾ ಮತ್ತು ಶಿಕ್ಷಕ ಆದೇಶ್ ತಿವಾರಿ ನಡುವಿನ ಜಗಳ, ಹೊಡೆದಾಟವನ್ನು ವಿಡಿಯೊದಲ್ಲಿ ರೆಕಾರ್ಡ್ ಮಾಡಲಾಗಿದೆ. ರಾಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕುಮ್ಹಾರ್ನ್ ಪೂರ್ವಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಶಿಕ್ಷಕರು ಪರಸ್ಪರ ಹೊಡೆದಾಡಿಕೊಳ್ಳುವ ಮೂಲಕ ಗೊಂದಲದ ಪರಿಸ್ಥಿತಿಯನ್ನು ಸೃಷ್ಟಿಮಾಡಿದ್ದಾರೆ. ಈ ಪರಿಸ್ಥಿತಿಯನ್ನು ಬೇಗನೆ ಪರಿಹರಿಸಲು ಮತ್ತು ಇಂತಹ ಘಟನೆಗಳು ಮತ್ತೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ ಎನ್ನಲಾಗಿದೆ.

ಈ ವಿಡಿಯೊ ಹಲವಾರು ವಿವಾದಗಳನ್ನು ಹುಟ್ಟುಹಾಕಿದೆ, ವಿಡಿಯೊದಲ್ಲಿ ಇಬ್ಬರು ಶಿಕ್ಷಕರ ಆಕ್ರಮಣಶೀಲ ಗುಣವು ಆ ಶಾಲೆಯಲ್ಲಿನ ಶಿಕ್ಷಣದ ಗುಣಮಟ್ಟಕ್ಕೆ ಕಳಂಕವಾಗಲಿದೆ. ಬೋಧನಾ ಸಿಬ್ಬಂದಿಯಲ್ಲಿ ಸಮಸ್ಯೆ ಇದ್ದರೆ , ಅದು ಶಾಲೆ ಮತ್ತು ವಿದ್ಯಾರ್ಥಿಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಶಿಕ್ಷಕರ ಹೊಡೆದಾಟವನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೊ ಮಾಡಿ ನಂತರ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಅನೇಕ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಶೀಘ್ರದಲ್ಲೇ ಇದು ಸಾರ್ವಜನಿಕ ಚರ್ಚೆಯ ವಿಷಯವಾಗಿದೆ ಈ ಘಟನೆಯಲ್ಲಿ ಭಾಗಿಯಾಗಿರುವ ಶಿಕ್ಷಕರ ನಡವಳಿಕೆಯ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: 90 ಲಕ್ಷ ರೂ. ಠೇವಣಿ ಎಗರಿಸಲು ವೃದ್ಧನ ಕೊಂದ ಮಹಿಳಾ ಬ್ಯಾಂಕ್‌ ಮ್ಯಾನೇಜರ್‌! ಪ್ಲ್ಯಾನ್‌ ಹೇಗಿತ್ತು ನೋಡಿ!

ಈ ವೈರಲ್ ವಿಡಿಯೊಗೆ ಸಂಬಂಧಿಸಿದಂತೆ, ಬ್ಲಾಕ್ ಶಿಕ್ಷಣ ಅಧಿಕಾರಿ ಈ ವಿಡಿಯೊ ಸುಮಾರು 15 ದಿನಗಳಷ್ಟು ಹಳೆಯದು, ಅವರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ತನಿಖಾ ವರದಿಯನ್ನು ಶೀಘ್ರದಲ್ಲೇ ಬಿಎಸ್ಎಗೆ ಸಲ್ಲಿಸಲಾಗುವುದು. ಪ್ರಾಥಮಿಕ ತನಿಖೆಯಲ್ಲಿ ಮಹಿಳಾ ಶಿಕ್ಷಕಿ ಶಾಲೆಯಲ್ಲಿ ವಿಡಿಯೊಗಳನ್ನು ಮಾಡುತ್ತಿದ್ದರು. ಇದರಿಂದಾಗಿ ಇತರ ಶಿಕ್ಷಕರು ಕೋಪಗೊಂಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು ಎಂಬುದಾಗಿ ತಿಳಿದು ಬಂದಿದೆ.

Continue Reading

Latest

Sexual Abuse: ದಲಿತ ಬಾಲಕಿಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರ; ಮುಸ್ಲಿಂ ಧರ್ಮಗುರು ಬಂಧನ

Sexual Abuse: ಮುಸ್ಲಿಂ ಧರ್ಮಗುರುವೊಬ್ಬ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಯನ್ನು ಅಪಹರಿಸಿ ಬಾಂಗ್ಲಾದೇಶದ ಗಡಿಗೆ ಕರೆದೊಯ್ದು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಲ್ಲದೆ, ಆಕೆಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗುವಂತೆ ಮಾಡಿದ್ದಾನೆ. ಈ ಕುರಿತ ದೂರಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಕುಶಿನಗರ ಪೊಲೀಸರು ಅತ್ಯಾಚಾರ ಮತ್ತು ಅಕ್ರಮ ಮತಾಂತರದ ಆರೋಪದ ಮೇಲೆ ಮುಸ್ಲಿಂ ಧರ್ಮಗುರುವನ್ನು ಬಂಧಿಸಿದ್ದಾರೆ.

VISTARANEWS.COM


on

Sexual Abuse
Koo


ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಲೇ ಇದೆ. ಇದೀಗ ಮುಸ್ಲಿಂ ಧರ್ಮಗುರು ಒಬ್ಬ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಯನ್ನು ಅಪಹರಿಸಿ ಬಾಂಗ್ಲಾದೇಶದ ಗಡಿಗೆ ಕರೆದೊಯ್ದು ಇಸ್ಲಾಂಧರ್ಮಕ್ಕೆ ಮತಾಂತರ ಮಾಡಿದ್ದಲ್ಲದೆ, ಆಕೆಯ ಮೇಲೆ ಅತ್ಯಾಚಾರ (Sexual Abuse) ಎಸಗಿ ಗರ್ಭಿಣಿಯಾಗುವಂತೆ ಮಾಡಿದ್ದಾನೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಕುಶಿನಗರ ಪೊಲೀಸರು ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಮತ್ತು ಅಕ್ರಮ ಮತಾಂತರದ ಆರೋಪದ ಮೇಲೆ ಮುಸ್ಲಿಂ ಧರ್ಮಗುರುವನ್ನು ಬಂಧಿಸಿದ್ದಾರೆ.

ಸಂತ್ರಸ್ತೆಯ ತಾಯಿ ಆಗಸ್ಟ್ 8, 2024ರಂದು ಮುಸ್ಲಿಂ ಧರ್ಮಗುರು ವಿರುದ್ಧ ದೂರು ನೀಡಿದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ನಿವಾಸಿ ಮೌಲಾನಾ ಮುಹಮ್ಮದ್ ಓವೈಸ್ ತನ್ನ ಮಗಳನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದಾನೆ ಮತ್ತು ಅಕ್ರಮವಾಗಿ ಮತಾಂತರ ಮಾಡಿದ್ದಾನೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಮೌಲಾನಾ ಮುಹಮ್ಮದ್ ಓವೈಸ್ ಕಳೆದ ಎರಡು ವರ್ಷಗಳಿಂದ ಉತ್ತರ ಪ್ರದೇಶದ ಕುಶಿನಗರದ ಮದರಸಾದಲ್ಲಿ ಧರ್ಮಗುರುವಾಗಿ ಬೋಧನೆ ಮಾಡುತ್ತಿದ್ದಾನೆ.

ಘಟನೆಯ ಬಗ್ಗೆ ಮಾತನಾಡಿದ ಕುಶಿನಗರ ಎಸ್ಪಿ ಸಂತೋಷ್ ಕುಮಾರ್ ಮಿಶ್ರಾ, ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ಗ್ವಾಲ್ಪೋಖರ್ ಪೊಲೀಸ್ ಠಾಣೆ ಪ್ರದೇಶದ ಉತ್ತರ ಜಾರ್ಬಾರಿ ನಿವಾಸಿ ಮೌಲಾನಾ ಮುಹಮ್ಮದ್ ಒವೈಸ್ ಉತ್ತರ ಪ್ರದೇಶದ ಕುಶಿನಗರದಲ್ಲಿರುವ ಮದರಸಾದಲ್ಲಿ ಬೋಧನೆ ಮಾಡಲು ಬಂದಿದ್ದರು. ಅವನು ಬಾಲಕಿಯನ್ನು ಬಾಂಗ್ಲಾದೇಶದ ಗಡಿಯಲ್ಲಿರುವ ತನ್ನ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಅವಳನ್ನು ತನ್ನ ಧರ್ಮಕ್ಕೆ ಮತಾಂತರಿಸಿದ. ಬಳಿಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರಿಂದ ಅವಳು ಈಗ ಗರ್ಭಿಣಿಯಾಗಿದ್ದಾಳೆ. ಆತ ಬಾಲಕಿಯ ಹೆಸರನ್ನು ರಾಣಿ ಖತುನ್ ಎಂದು ಬದಲಾಯಿಸಿದ್ದಾನೆ. ಆರೋಪಿ ಆಗಾಗ ಬಾಂಗ್ಲಾದೇಶದ ಗಡಿಗೆ ಭೇಟಿ ನೀಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ ಎಂಬುದಾಗಿ ಎಸ್ಪಿ ಹೇಳಿದ್ದಾರೆ.

ಇದನ್ನೂ ಓದಿ: ಬಸ್ ನಿಲ್ಲಿಸದಿದ್ದಕ್ಕೆ ಕೋಪಗೊಂಡು ಕಂಡಕ್ಟರ್‌ ಮೇಲೆ ನಾಗರಹಾವನ್ನು ಎಸೆದ ಮಹಿಳೆ!

ಸೋಮವಾರ (ಆಗಸ್ಟ್ 11) ಮತ್ತು ಮಂಗಳವಾರ (ಆಗಸ್ಟ್ 12) ಮಧ್ಯರಾತ್ರಿ, ಮೌಲಾನಾ ಮುಹಮ್ಮದ್ ಒವೈಸಿ ಅಪ್ರಾಪ್ತ ಬಾಲಕಿಯೊಂದಿಗೆ ನಗರದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬ ಮಾಹಿತಿ ಕುಶಿನಗರ ಪೊಲೀಸರಿಗೆ ಸಿಕ್ಕಿತು. ಕುಶಿನಗರ ಪಿಎಸ್ ಎಸ್ಎಚ್ಒ ಓಂಪ್ರಕಾಶ್ ತಿವಾರಿ ಮತ್ತು ಮನ್ಸಛಪರ್ ಪಿಎಸ್ ಹೊರಠಾಣೆಯ ಉಸ್ತುವಾರಿ ಗೌರವ್ ಶುಕ್ಲಾ ತಂಡವನ್ನು ರಚಿಸಿ ಸ್ಥಳಕ್ಕೆ ತಲುಪಿದರು. ಆರೋಪಿಯು ಸಂತ್ರಸ್ತೆಯೊಂದಿಗೆ ಪದ್ರೌನಾಗೆ ಪರಾರಿಯಾಗಲು ಪ್ರಯತ್ನಿಸುತ್ತಿರುವುದನ್ನು ಪೊಲೀಸರು ಕಂಡು ಆತನನ್ನು ಬಂಧಿಸಿದರು. ಬಾಲಕಿಯನ್ನು ಅವಳ ಹೆತ್ತವರ ಬಳಿಗೆ ಕಳುಹಿಸಲಾಯಿತು ಎನ್ನಲಾಗಿದೆ. ಅಪಹರಣ, ಅತ್ಯಾಚಾರ ಮತ್ತು ಅಕ್ರಮ ಮತಾಂತರಕ್ಕಾಗಿ ಐಪಿಸಿಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Continue Reading

Latest

Viral News: ಭರತನಾಟ್ಯ ರಂಗಪ್ರವೇಶ ಮಾಡಿ ಇತಿಹಾಸ ನಿರ್ಮಿಸಿದ 13 ವರ್ಷದ ಚೀನೀ ಬಾಲಕಿ

Viral News: ಚೀನಾದ 13 ವರ್ಷದ ಬಾಲಕಿಯೊಬ್ಬಳು ತನ್ನ ದೇಶದಲ್ಲಿ ಭರತನಾಟ್ಯ “ರಂಗೇತ್ರಂ” ಅನ್ನು ಪ್ರದರ್ಶಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾಳೆ. ಪ್ರಸಿದ್ಧ ಭರತನಾಟ್ಯ ನೃತ್ಯಗಾರ್ತಿ ಲೀಲಾ ಸ್ಯಾಮ್ಸನ್, ಭಾರತೀಯ ರಾಜತಾಂತ್ರಿಕರು ಮತ್ತು ಚೀನಾದ ಅಭಿಮಾನಿಗಳ ಸಮ್ಮುಖದಲ್ಲಿ ದೊಡ್ಡ ವೇದಿಕೆಯ ಮೇಲೆ ಲೀ ಮುಜಿ ನೃತ್ಯ ಮಾಡಿದ್ದಾಳೆ. ಇದು ಚೀನಾದಲ್ಲಿ ಮೊದಲ “ರಂಗಪ್ರವೇಶ ” – ಭರತನಾಟ್ಯದ ಪದವಿ ಸಮಾರಂಭವಾಗಿದೆ.

VISTARANEWS.COM


on

Viral News
Koo


ಭಾರತದ ಜನಪ್ರಿಯ ನೃತ್ಯವಾದ ಭರತನಾಟ್ಯವನ್ನು ಹೆಚ್ಚಾಗಿ ಭಾರತೀಯರು ಕಲಿತು ನೃತ್ಯ ಮಾಡುತ್ತಾರೆ. ಆದರೆ ಚೀನಾದ 13 ವರ್ಷದ ಬಾಲಕಿಯೊಬ್ಬಳು ಚೀನಾದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡುವ ಮೂಲಕ ಹೊಸ ಇತಿಹಾಸವನ್ನು ಬರೆದಿದ್ದಾಳೆ. ಇದು ನೆರೆಯ ದೇಶದಲ್ಲಿ ಪ್ರಾಚೀನ ಭಾರತೀಯ ನೃತ್ಯ ಜನಪ್ರಿಯತೆ ಗಳಿಸುತ್ತಿರುವುದು ಎಲ್ಲೆಡೆ ವೈರಲ್‌ (Viral News) ಆಗಿದೆ.

ಪ್ರಸಿದ್ಧ ಭರತನಾಟ್ಯ ನೃತ್ಯಗಾರ್ತಿ ಲೀಲಾ ಸ್ಯಾಮ್ಸನ್, ಭಾರತೀಯ ರಾಜತಾಂತ್ರಿಕರು ಮತ್ತು ಚೀನಾದ ಅಭಿಮಾನಿಗಳ ಸಮ್ಮುಖದಲ್ಲಿ ದೊಡ್ಡ ವೇದಿಕೆಯ ಮೇಲೆ ಲೀ ಮುಜಿ ನೃತ್ಯ ಮಾಡಿದ್ದಾಳೆ. ಇದು ಚೀನಾದಲ್ಲಿ ಮೊದಲ “ರಂಗಪ್ರವೇಶ ” – ಭರತನಾಟ್ಯದ ಪದವಿ ಸಮಾರಂಭವಾಗಿದೆ. ದಶಕಗಳಿಂದ ಭರತನಾಟ್ಯ ಕಲಿಯಲು ಮತ್ತು ಪ್ರದರ್ಶಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಭಾರತೀಯ ಶಾಸ್ತ್ರೀಯ ಕಲೆ ಮತ್ತು ನೃತ್ಯ ಪ್ರಕಾರಗಳ ಕಟ್ಟಾ ಚೀನೀ ಅಭಿಮಾನಿಗಳಿಗೆ, ಈ ದಿನ ಇತಿಹಾಸದ ಕ್ಷಣ ಮತ್ತು ಮೈಲುಗಲ್ಲು ಎಂದೇ ಹೇಳಬಹುದು. ಯಾಕೆಂದರೆ ಭರತನಾಟ್ಯ ರಂಗಪ್ರವೇಶದ ನಂತರವೇ ವಿದ್ಯಾರ್ಥಿಗಳಿಗೆ ತಮ್ಮದೇ ಆದ ಪ್ರದರ್ಶನ ನೀಡಲು ಅಥವಾ ಇದನ್ನು ಕಲಿಯಲು ಬಯಸುವ ನೃತ್ಯಗಾರರಿಗೆ ತರಬೇತಿ ನೀಡಲು ಅವಕಾಶವಿದೆ.

“ಚೀನಾದಲ್ಲಿ ಸಂಪೂರ್ಣವಾಗಿ ತರಬೇತಿ ಪಡೆದ ಮತ್ತು ಚೀನಾದಲ್ಲಿ ಪ್ರದರ್ಶನ ನೀಡಿದ ವಿದ್ಯಾರ್ಥಿಯ ಮೊದಲ ಭರತನಾಟ್ಯ ರಂಗಪ್ರವೇಶ ಇದಾಗಿದೆ” ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಟಿ.ಎಸ್.ವಿವೇಕಾನಂದ ಹೇಳಿದ್ದಾರೆ.

“ಚೀನೀ ಶಿಕ್ಷಕರಿಂದ ತರಬೇತಿ ಪಡೆದ ಚೀನೀ ವಿದ್ಯಾರ್ಥಿಗಳಲ್ಲಿ ಒಬ್ಬಳಾದ ಈಕೆ ಚೀನಾದಲ್ಲಿ ಮೊದಲ ಬಾರಿಗೆ ಇದನ್ನು ಪೂರ್ಣಗೊಳಿಸಿದ್ದಾಳೆ. ಭರತನಾಟ್ಯ ಪರಂಪರೆಯ ಇತಿಹಾಸದಲ್ಲಿ ಇದೊಂದು ಹೆಗ್ಗುರುತಾಗಿದೆ” ಎಂದು ಲೀಗೆ ತರಬೇತಿ ನೀಡಿದ ಚೀನಾದ ಭರತನಾಟ್ಯ ನೃತ್ಯಗಾರ ಜಿನ್ ಶಾನ್ ಶಾನ್ ಹೇಳಿದ್ದಾರೆ.

ಭಾರತೀಯ ರಾಯಭಾರಿ ಪ್ರದೀಪ್ ರಾವತ್ ಅವರ ಪತ್ನಿ ಶ್ರುತಿ ರಾವತ್ ಅವರು ಲೀಸ್ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳ ದೊಡ್ಡ ಗುಂಪು ಭಾಗವಹಿಸಿತು. ಅವರು ಎರಡು ಗಂಟೆಗಳ ಸುದೀರ್ಘ ಪ್ರದರ್ಶನಕ್ಕಾಗಿ ಆಕೆಯನ್ನು ಹುರಿದುಂಬಿಸಿದರು. ಹಾಗಾಗಿ ಆಕೆ ಹಲವಾರು ಶಾಸ್ತ್ರೀಯ ಹಾಡುಗಳಿಗೆ ನೃತ್ಯ ಮಾಡಿದಳು. ಲೀಲಾ ಸ್ಯಾಂಪ್ಸನ್ ಅವರಲ್ಲದೆ, ಚೆನ್ನೈನಿಂದ ಬಂದ ಸಂಗೀತಗಾರರ ತಂಡವು ಲೀ ಪ್ರದರ್ಶನಕ್ಕಾಗಿ ಶಾಸ್ತ್ರೀಯ ಹಾಡುಗಳನ್ನು ಹಾಡಿದೆ.

ಜಿನ್ ನಡೆಸುತ್ತಿರುವ ಭರತನಾಟ್ಯ ಶಾಲೆಯಲ್ಲಿ ಲೀ 10 ವರ್ಷಗಳ ಕಾಲ ತರಬೇತಿ ಪಡೆದದ್ದಳು. ಜಿನ್ ಅವರು 1999ರಲ್ಲಿ ನವದೆಹಲಿಯಲ್ಲಿ ಭರತನಾಟ್ಯ ರಂಗಪ್ರವೇಶವನ್ನು ಮಾಡಿದ ಮೊದಲ ನಿಪುಣ ಭರತನಾಟ್ಯ ನೃತ್ಯಗಾರ್ತಿಯಾಗಿದ್ದಾರೆ. ಪ್ರಸಿದ್ಧ ಚೀನೀ ನೃತ್ಯಗಾರ ಜಾಂಗ್ ಜುನ್ ಅವರಿಂದ ತರಬೇತಿ ಪಡೆದ ಹಲವಾರು ಚೀನೀ ವಿದ್ಯಾರ್ಥಿಗಳಲ್ಲಿ ಜಿನ್ ಕೂಡ ಒಬ್ಬರಾಗಿದ್ದರು.

ಇದನ್ನೂ ಓದಿ: ಒಂದು ಹಾವು, ಮೂರು ಮುಂಗುಸಿ; ಏರ್‌ಪೋರ್ಟ್‌ ರನ್‌ವೇಯಲ್ಲೇ ಫೈಟ್‌! ಸೋತಿದ್ಯಾರು? ವಿಡಿಯೊ ನೋಡಿ

ಡುಡು ಎಂದೂ ಕರೆಯಲ್ಪಡುವ ಲೀ 2014ರಲ್ಲಿ ಜಿನ್ ಅವರ ಶಾಲೆಗೆ ಸೇರಿದಾಗಿನಿಂದ ಭರತನಾಟ್ಯವನ್ನು ತುಂಬಾ ಇಷ್ಟಪಡುತ್ತಿದ್ದಳು. “ನಾನು ಅದನ್ನು ಸಂಪೂರ್ಣವಾಗಿ ಪ್ರೀತಿಸುತ್ತಿದ್ದೆ. ನಾನು ಇಲ್ಲಿಯವರೆಗೆ ನೃತ್ಯ ಮಾಡುತ್ತಲೇ ಇದ್ದೆ. ನನಗೆ ಭರತನಾಟ್ಯವು ಸುಂದರವಾದ ಕಲೆ ಮತ್ತು ನೃತ್ಯ ಪ್ರಕಾರ ಮಾತ್ರವಲ್ಲ, ಭಾರತೀಯ ಸಂಸ್ಕೃತಿಯ ಸಾಕಾರ ರೂಪವಾಗಿದೆ” ಎಂದು ಲೀ ಹೇಳಿದ್ದಾಳೆ. ಚೀನಾ ಮತ್ತು ಭಾರತದಲ್ಲಿ ವ್ಯಾಪಕವಾಗಿ ಪರಿಚಿತರಾಗಿರುವ ಮತ್ತು ಹಲವಾರು ಪ್ರದರ್ಶನಗಳನ್ನು ನೀಡಿರುವ ಜಿನ್, ತನ್ನ ವಿದ್ಯಾರ್ಥಿಗಳಲ್ಲಿ ಒಬ್ಬಳು ಭರತನಾಟ್ಯ ರಂಗಪ್ರವೇಶ ಅನ್ನು ಪೂರ್ಣಗೊಳಿಸುವುದನ್ನು ನೋಡಲು ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.

Continue Reading

Latest

Sexual Abuse: ಹಿಂದೂ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಬಲವಂತವಾಗಿ ಗೋಮಾಂಸ ತಿನ್ನಿಸಿ ದೌರ್ಜನ್ಯ

Sexual Abuse: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮುಸ್ಲಿಂ ಯುವಕನೊಬ್ಬ ವಿವಾಹಿತ ಹಿಂದೂ ಮಹಿಳೆಯನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ತನ್ನ ಸ್ನೇಹಿತರ ಜತೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆಗೆ ಹಸುವಿನ ಮಾಂಸವನ್ನು ತಿನ್ನುವಂತೆ ಮತ್ತು ರೋಜಾ ಆಚರಿಸುವಂತೆ ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ.

VISTARANEWS.COM


on

Sexual Abuse
Koo


ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಅಖೀಲ್ ಎಂಬ ವ್ಯಕ್ತಿ ಮತ್ತು ಅವನ ಸ್ನೇಹಿತರು ವಿವಾಹಿತ ಹಿಂದೂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ (Sexual Abuse) ಎಸಗಿದ್ದಾರೆ ಎಂದು ದೂರು ದಾಖಲಾಗಿದೆ. ಆರೋಪಿಯು ಹಿಂದೂ ಮಹಿಳೆಯನ್ನು ಬಂಧನದಲ್ಲಿಟ್ಟು ಹಸುವಿನ ಮಾಂಸವನ್ನು ತಿನ್ನುವಂತೆ ಮತ್ತು ರೋಜಾ ಆಚರಿಸುವಂತೆ ಮಾಡಿದರು ಎಂದು ಆರೋಪಿಸಲಾಗಿದೆ. ಸಂತ್ರಸ್ತೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ, ಆರೋಪಿಗಳು ಅವಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಅಕೀಲ್ ಜೊತೆಗೆ, ಅವನ ತಾಯಿ-ತಂದೆ, ಖಲೀಲ್, ಸಾನು, ಇರ್ಫಾನ್ ಇಂಟೆಜಾರ್ ಮತ್ತು ಅಪರಿಚಿತ ವ್ಯಕ್ತಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಅಖೀಲ್‌ ತಾನು ಮುಸ್ಲಿಂ ಎನ್ನುವುದನ್ನು ಮರೆಮಾಚಿ ತನ್ನ ಹೆಸರು ಅಕಿಲ್‌ ಯಾದವ್‌ ಎಂದು ಸುಳ್ಳು ಹೇಳಿ ಮಹಿಳೆಯ ವಿಶ್ವಾಸ ಗಳಿಸಿದ್ದ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಲಕ್ನೋದ ಮೋಹನ್‍ಲಾಲ್‍ಗಂಜ್ ಪೊಲೀಸ್ ಠಾಣೆಯಲ್ಲಿ ಸೋಮವಾರ (ಆಗಸ್ಟ್ 12) ಎಫ್ಐಆರ್ ದಾಖಲಿಸಲಾಗಿದೆ ಮತ್ತು ತನಿಖೆಯನ್ನು ಪ್ರಾರಂಭಿಸಲಾಗಿದೆ. ಸಂತ್ರಸ್ತೆ ತನ್ನ ದೂರಿನಲ್ಲಿ, 2023ರಲ್ಲಿ ತಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ತನ್ನ ಜೊತೆ ಕೆಲಸ ಮಾಡುತ್ತಿದ್ದ ಸಾನು ಎಂಬಾತ ಸಂತ್ರಸ್ತೆಯ ಫೋನ್ ಸಂಖ್ಯೆಯನ್ನು ಆರೋಪಿ ಅಕೀಲ್‍ಗೆ ನೀಡಿದ್ದ. ಅಕೀಲ್ ತಾನು ಮುಸ್ಲಿಂ ಎನ್ನುವುದನ್ನು ಮರೆಮಾಚಿ ಅಖಿಲ್ ಯಾದವ್ ಎಂದು ಪರಿಚಯಿಸಿಕೊಂಡಿದ್ದ. ಕ್ರಮೇಣ ಸಂತ್ರಸ್ತೆಯ ವಿಶ್ವಾಸವನ್ನು ಗಳಿಸಿದ್ದ. 2023ರ ಡಿಸೆಂಬರ್ 8ರಂದು ಆರೋಪಿ ಅಕೀಲ್ ಕೆಲಸ ನೀಡುವ ನೆಪದಲ್ಲಿ ಲಕ್ನೋದ ಕೈಸರ್ಬಾಗ್ ನ್ಯಾಯಾಲಯಕ್ಕೆ ಕರೆದೊಯ್ದಿದ್ದ.

ಈ ವೇಳೆ ಇಂಟೆಜಾರ್ ಅಹ್ಮದ್, ಖಲೀಲ್ ಹಾಗೂ ಅಪರಿಚಿತ ವ್ಯಕ್ತಿಯೊಬ್ಬರು ಬಂದಿದ್ದರು. ಈ ಜನರು ಸಂತ್ರಸ್ತೆಗೆ ಕೆಲವು ಕಾನೂನು ದಾಖಲೆಗಳಿಗೆ ಸಹಿ ಮಾಡುವಂತೆ ತಿಳಿಸಿದರು. ಸಂತ್ರಸ್ತೆ ಓದುವ-ಬರೆಯಲು ತಿಳಿಯದ ಕಾರಣ ಆ ಕಾಗದಗಳ ಮೇಲೆ ನಿಖರವಾಗಿ ಏನು ಬರೆಯಲಾಗಿದೆ ಎಂಬುದು ಅವಳಿಗೆ ಅರ್ಥವಾಗದೆ ಅದಕ್ಕೆ ಸಹಿ ಹಾಕಿದ್ದಾಳೆ. ನಂತರ, ಅಕೀಲ್ ಮತ್ತು ಅವನ ಸಹಚರರು ಸಂತ್ರಸ್ತೆಯನ್ನು ಅಕೀಲ್ ಅವರ ಮನೆಗೆ ಕರೆದೊಯ್ದರು. ಅಲ್ಲಿ ಆಕೆಯನ್ನು 2024ರ ಜನವರಿ 17ರವರೆಗೆ ಬಂಧನದಲ್ಲಿರಿಸಿದ್ದರು.

ಈ ಸಮಯದಲ್ಲಿ ಆರೋಪಿ ಅಕೀಲ್ ಮತ್ತು ಅವನ ತಂದೆ ಹಿಂದೂ ಮಹಿಳೆಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದರೆ, ಅಕೀಲ್ ತಾಯಿ ಅಪರಾಧವನ್ನು ಮಾಡಲು ಇವರಿಬ್ಬರನ್ನು ಪ್ರೋತ್ಸಾಹಿಸುತ್ತಿದ್ದರು. ಜನವರಿ 17, 2024ರಂದು, ಅಕೀಲ್ ಅವರ ತಂದೆ ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಕೋಣೆಯನ್ನು ಬಾಡಿಗೆಗೆ ಪಡೆದು ಸಂತ್ರಸ್ತೆಯನ್ನು ಅಲ್ಲಿ ಇರಿಸಿದ್ದರು. ಈ ಕೋಣೆಯಲ್ಲಿ ಅಕೀಲ್, ಇರ್ಫಾನ್, ಇಂಟೆಜಾರ್ ಮತ್ತು ಇನ್ನೊಬ್ಬ ಅಪರಿಚಿತ ವ್ಯಕ್ತಿ ಸಂತ್ರಸ್ತೆಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಹಿಂದೂ ಸಂತ್ರಸ್ತೆಯ ಮೇಲೆ ತನ್ನ ಸ್ನೇಹಿತರಿಗೆ ಅತ್ಯಾಚಾರ ಮಾಡಲು ಪ್ರತಿಯಾಗಿ ಅಕೀಲ್ ಹಣವನ್ನು ಕೇಳುತ್ತಿದ್ದ ಎಂದು ಆರೋಪಿಸಲಾಗಿದೆ.

ಅಲ್ಲದೇ ಅವನು ಸಂತ್ರಸ್ತೆಗೆ ಗೋಮಾಂಸ ತಿನ್ನಲು ಮತ್ತು ರೋಜಾವನ್ನು ಆಚರಿಸಲು ಒತ್ತಾಯಿಸುತ್ತಿದ್ದ. ಸಂತ್ರಸ್ತೆ ಇದಕ್ಕೆ ಒಪ್ಪದಿದ್ದಾಗ ಆರೋಪಿಗಳು ಅವಳನ್ನು, ಅವಳ ಪತಿ ಮತ್ತು ಇಡೀ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಆಗಸ್ಟ್ 9ರಂದು ಅಕೀಲ್ ಕೆಲವು ಕೆಲಸದ ನೆಪದಲ್ಲಿ ಮೋಹನ್‍ಲಾಲ್‍ಗಂಜ್ ಪ್ರದೇಶದಲ್ಲಿ ತನ್ನನ್ನು ಭೇಟಿಯಾಗಲು ಸಂತ್ರಸ್ತೆಗೆ ತಿಳಿಸಿದ್ದು, ಸಂತ್ರಸ್ತೆ ಅಲ್ಲಿಗೆ ಬಂದಾಗ ಅಕೀಲ್ ಅವಳನ್ನು ನಿರ್ಜನ ತೋಟಕ್ಕೆ ಕರೆದೊಯ್ದು ಮತ್ತೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅವಳೊಂದಿಗೆ ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಅವಳು ಅವನನ್ನು ತಡೆಯಲು ಪ್ರಯತ್ನಿಸಿದಾಗ ಅಕೀಲ್ ಅವಳ ಮೇಲೆ ಹಲ್ಲೆ ಮಾಡಿದ್ದಾನೆ. ಅಕೀಲ್, ಆತನ ತಾಯಿ-ತಂದೆ ಮತ್ತು ಎಲ್ಲಾ ಆರೋಪಿ ಸ್ನೇಹಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆ ತನ್ನ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ 9ನೇ ತರಗತಿ ವಿದ್ಯಾರ್ಥಿ!

ಲಕ್ನೋ ಪೊಲೀಸರು ಸಂತ್ರಸ್ತೆಯ ದೂರನ್ನು ಪರಿಗಣಿಸಿ ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376-ಡಿ, 420, 342, 323, 377 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Continue Reading
Advertisement
Terror Attack
ದೇಶ23 mins ago

Terror Attack: ಕ್ಯಾಪ್ಟನ್‌ ಹುತಾತ್ಮರಾಗಿರುವ ಬೆನ್ನಲ್ಲೇ ಉಗ್ರನನ್ನು ಹೊಡೆದುರುಳಿಸಿದ ಸೇನೆ; ಮುಂದುವರಿದ ಕಾರ್ಯಾಚರಣೆ

Viral Video
Latest25 mins ago

Viral Video: ಶಾಲೆಯಲ್ಲಿ ಶಿಕ್ಷಕಿ, ಶಿಕ್ಷಕನ ನಡುವೆ ಭೀಕರ ಮಾರಾಮಾರಿ! ವಿಡಿಯೊ ನೋಡಿದವರಿಗೆ ಗಾಬರಿ!

Sexual Abuse
Latest53 mins ago

Sexual Abuse: ದಲಿತ ಬಾಲಕಿಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರ; ಮುಸ್ಲಿಂ ಧರ್ಮಗುರು ಬಂಧನ

Government Employees
ಕರ್ನಾಟಕ1 hour ago

Government Employees: ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಆ.17ಕ್ಕೆ ಅಭಿನಂದನಾ ಸಮಾರಂಭ, ಕಾರ್ಯಾಗಾರ: ಸಿ.ಎಸ್. ಷಡಾಕ್ಷರಿ

Viral News
Latest1 hour ago

Viral News: ಭರತನಾಟ್ಯ ರಂಗಪ್ರವೇಶ ಮಾಡಿ ಇತಿಹಾಸ ನಿರ್ಮಿಸಿದ 13 ವರ್ಷದ ಚೀನೀ ಬಾಲಕಿ

kolkata doctor murder case
ದೇಶ1 hour ago

Kolkata Doctor Murder Case: ದೇಹದಲ್ಲಿ 150 ಮಿಲಿ ಗ್ರಾಂ ವೀರ್ಯ ಪತ್ತೆ- ಟ್ರೈನಿ ವೈದ್ಯೆಯ ಮೇಲೆ ಗ್ಯಾಂಗ್‌ರೇಪ್‌ ಆಗಿತ್ತಾ?

Sexual Abuse
Latest1 hour ago

Sexual Abuse: ಹಿಂದೂ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಬಲವಂತವಾಗಿ ಗೋಮಾಂಸ ತಿನ್ನಿಸಿ ದೌರ್ಜನ್ಯ

Independence Day 2024
ದೇಶ2 hours ago

Independence day 2024: ಆಗಸ್ಟ್ 15ರ ಕುರಿತ 8 ಪ್ರಶ್ನೆಗಳಿಗೆ ಇಲ್ಲಿದೆ ಕುತೂಹಲಕರ ಉತ್ತರ!

Disha Patani Goes Bold in Strapless Gown As She Flaunts Her Curves During Sexy Photoshoot
ಬಾಲಿವುಡ್2 hours ago

Disha Patani: ಬೋಲ್ಡ್‌ ಫೋಟೊಶೂಟ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ದಿಶಾ ಪಟಾನಿ!

Google AI Robot
ತಂತ್ರಜ್ಞಾನ2 hours ago

Google AI Robot: ಟೇಬಲ್ ಟೆನಿಸ್ ಅಂಗಳಕ್ಕೂ ಇಳಿದ ರೋಬೋಟ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ6 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ6 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ6 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌