Fitness Tips | ನಮಗೆಂಥ ವ್ಯಾಯಾಮ ಸೂಕ್ತ?: ನಿಮಗಾಗಿ ಇಲ್ಲಿದೆ ಮಾಹಿತಿ - Vistara News

ಲೈಫ್‌ಸ್ಟೈಲ್

Fitness Tips | ನಮಗೆಂಥ ವ್ಯಾಯಾಮ ಸೂಕ್ತ?: ನಿಮಗಾಗಿ ಇಲ್ಲಿದೆ ಮಾಹಿತಿ

ಇದು ಹೊಸ ಪ್ರತಿಜ್ಞೆಗಳ ಪರ್ವ ಕಾಲವೂ ಹೌದು. ಉಪ್ಪು ತಿನ್ನುವುದು ಕಡಿಮೆ ಮಾಡುತ್ತೇನೆ ಎಂಬುದರಿಂದ ಆರಂಭವಾಗುವ ಪ್ರತಿಜ್ಞೆಗಳು, ಲೋಕ ಸುತ್ತುತ್ತೇನೆ ಎನ್ನುವವರೆಗೆ ಏನು ಬೇಕಾದರೂ ಆಗಬಹುದು. ಫಿಟ್ ನೆಸ್ ಬಗ್ಗೆಯೂ ನಿಮ್ಮ ಪ್ರತಿಜ್ಞೆ ಇರಲಿ.

VISTARANEWS.COM


on

Fitness Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸ ವರ್ಷ ಬರುತ್ತಿದೆಯಲ್ಲ; ಇದರಲ್ಲೇನು ಹೊಸತು, ಪ್ರತಿ ವರ್ಷವೂ ಬರುತ್ತದೆ ಎಂದಿರಾ? ಇದು ಹೊಸ ಪ್ರತಿಜ್ಞೆಗಳ ಪರ್ವ ಕಾಲವೂ ಹೌದು. ಉಪ್ಪು ತಿನ್ನುವುದು ಕಡಿಮೆ ಮಾಡುತ್ತೇನೆ ಎಂಬುದರಿಂದ ಆರಂಭವಾಗುವ ಪ್ರತಿಜ್ಞೆಗಳು, ಲೋಕ ಸುತ್ತುತ್ತೇನೆ ಎನ್ನುವವರೆಗೆ ಏನು ಬೇಕಾದರೂ ಆಗಬಹುದು. ಇವುಗಳ ನಡುವೆ ತೂಕ ಇಳಿಸುವ ಅಥವಾ ವ್ಯಾಯಾಮ ಮಾಡುವಂಥ ಪಣಗಳನ್ನು ತೊಡುವ ಧೀರರೂ ಸಿಕ್ಕಾಪಟ್ಟೆ ಇದ್ದಾರೆ. ವ್ಯಾಯಾಮ ಮಾಡುವುದು ಒಳ್ಳೆಯದೇ, ಅನುಮಾನ ಬೇಡ. ಆದರೆ ಯಾರಿಗೆ ಯಾವ ರೀತಿಯದ್ದು ಎಂಬುದರ ಬಗ್ಗೆ ಗೊಂದಲವೇನಾದರೂ ಇದ್ದರೆ- ಇಲ್ಲಿದೆ ಮಾಹಿತಿ.

Fitness Tips

ವ್ಯಾಯಾಮವನ್ನು ಅತಿ ಸ್ಥೂಲವಾಗಿ ವಿಂಗಡಿಸಬಹುದಾದರೆ ಏರೋಬಿಕ್‌ ಮತ್ತು ಅನರೋಬಿಕ್‌ ಎನ್ನಬಹುದು. ಅಂದರೆ ಏರೋಬಿಕ್‌ ವ್ಯಾಯಾಮಗಳನ್ನು ಕಾರ್ಡಿಯೊ ಮಾದರಿಗಳೆಂದು ಕರೆಯಬಹುದು. ಅಂದರೆ ನಮ್ಮ ಇಡೀ ದೇಹಕ್ಕೆ ರಕ್ತಪರಿಚಲನೆಯನ್ನು ಹೆಚ್ಚಿಸಿ, ಇದಕ್ಕಾಗಿ ಹೆಚ್ಚು ಕೆಲಸ ಮಾಡುವಂತೆ ನಮ್ಮ ಹೃದಯವನ್ನು ಪ್ರೇರೇಪಿಸುತ್ತದೆ. ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಿ, ಅದಕ್ಕಾಗಿ ದೇಹದೆಲ್ಲ ಅಂಗಗಳೂ ಕ್ರಿಯಾಶೀಲವಾಗಿ ಇರುವಂತೆ ಮಾಡಿ, ಇಡೀ ದೇಹಕ್ಕೆ ಸುಸ್ಥಿರವಾದ ಶಕ್ತಿಯನ್ನು ಪೂರೈಕೆ ಮಾಡುವಂಥ ವ್ಯಾಯಾಮಗಳಿವು. ನಮ್ಮ ಸ್ನಾಯುಗಳು, ಶ್ವಾಸಕೋಶ, ಹೃದಯ ಮುಂತಾದ ಅಂಗಗಳನ್ನು ಬಲಗೊಳಿಸುತ್ತವೆ. ಇದರಲ್ಲಿ ಉಸಿರಾಟದ ರೀತಿಯೂ ಅನರೋಬಿಕ್‌ ವ್ಯಾಯಾಮಕ್ಕಿಂತ ಭಿನ್ನವಾಗಿಯೇ ಇರುತ್ತದೆ.

Fitness Tips

ಏನು ಹಾಗೆಂದರೆ?
ಯಾವೆಲ್ಲಾ ವ್ಯಾಯಾಮಗಳನ್ನು ಏರೋಬಿಕ್‌ ಅಥವಾ ಕಾರ್ಡಿಯೊ ಮಾದರಿಯದ್ದೆಂದು ಕರೆಯಬಹುದು? ನಡಿಗೆ, ಜಾಗಿಂಗ್‌, ಈಜು, ಸೈಕ್ಲಿಂಗ್‌ ಮತ್ತು ಮಧ್ಯಮ ತೀವ್ರತೆಯ ಬಹುತೇಕ ವ್ಯಾಯಾಮಗಳು ಏರೋಬಿಕ್‌ ಎನಿಸಿಕೊಳ್ಳುತ್ತವೆ. ರಕ್ತದ ಒತ್ತಡ ಮತ್ತು ಮಧುಮೇಹ ನಿಯಂತ್ರಣಕ್ಕೆ, ದೇಹದ ಶಕ್ತಿ ವರ್ಧನೆಗೆ, ಸ್ನಾಯುಗಳ ಸಾಮರ್ಥ್ಯ ಹೆಚ್ಚಳಕ್ಕೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು- ಹೀಗೆ ಹಲವಾರು ಪ್ರಯೋಜನಗಳು ಈ ವ್ಯಾಯಾಮಗಳಿಗೆ ಇವೆ. ಮಧುಮೇಹಿಗಳು, ಹೃದ್ರೋಗಿಗಳು, ಯಾವುದೇ ವಯಸ್ಸಿನವರು, ಅಲ್ಪಸ್ವಲ್ಪ ತೂಕ ಇಳಿಸುವ ಉದ್ದೇಶದವರು, ಸುಮ್ಮನೆ ದೇಹವನ್ನು ಚಟುವಟಿಕೆಯಲ್ಲಿ ಇರಿಸಬಯಸುವವರು – ಹೀಗೆ ಯಾವುದೇ ಉದ್ದೇಶಕ್ಕೆ ವ್ಯಾಯಾಮ ಮಾಡುವವರಿಗೂ ಹೊಂದುವಂಥ ವ್ಯಾಯಾಮಗಳನ್ನು ಏರೋಬಿಕ್‌ ವಿಭಾಗದಲ್ಲಿ ಆಯ್ಕೆ ಮಾಡಿಕೊಳ್ಳಬಹುದು.

Fitness Tips

ಅನರೋಬಿಕ್‌ ಎಂದರೇನು?
ಇಷ್ಟೆಲ್ಲಾ ಪ್ರವರಗಳು ಏರೋಬಿಕ್‌ ವ್ಯಾಯಾಮಗಳಿಗಿದ್ದರೆ, ಅನರೋಬಿಕ್‌ ವ್ಯಾಯಾಮಗಳ ವಿಶೇಷವೇನು? ಇವು ವಾಕಿಂಗ್‌, ಜಾಗಿಂಗ್‌ನಂತಲ್ಲದೆ ಹೆಚ್ಚು ತೀವ್ರತೆಯ ವ್ಯಾಯಾಮಗಳು. ಕಡಿಮೆ ಸಮಯದಲ್ಲಿ ದೇಹದಿಂದ ಹೆಚ್ಚು ಶಕ್ತಿಯನ್ನು ಖರ್ಚು ಮಾಡಿಸುವ ಈ ಕಸರತ್ತುಗಳು ಆಮ್ಲಜನಕದ ಮೇಲೆ ಕೆಲಸ ಮಾಡುವವಲ್ಲ. ಬದಲಿಗೆ, ನೇರವಾಗಿ ದೇಹದಲ್ಲಿರುವ ಗ್ಲೂಕೋಸ್‌ ಮೇಲೆ ಕೆಲಸ ಮಾಡುತ್ತವೆ, ಅಂದರೆ ದೇಹದಿಂದ ಹೆಚ್ಚು ಪ್ರಮಾಣದ ಶಕ್ತಿ ವ್ಯಯವಾಗುತ್ತದೆ. ಇಂದು ತಾಸು ವಾಕಿಂಗ್‌ ಮಾಡಿದಂತೆ ಇವುಗಳನ್ನು ಒಂದು ತಾಸು ಸತತ ಮಾಡಲು ಸಾಧ್ಯವಿಲ್ಲ. ದೇಹವನ್ನು ಚನ್ನಾಗಿ ದಂಡಿಸಿ, ಸುಸ್ತು ಮಾಡಿಸುತ್ತವೆ.

Fitness Tips

ಯಾವೆಲ್ಲಾ ವ್ಯಾಯಾಮಗಳು ಈ ಪಟ್ಟಿಯಲ್ಲಿವೆ ಎಂದರೆ- ಸ್ಕಿಪ್ಪಿಂಗ್‌, ಜಂಪಿಂಗ್‌, ಭಾರ ಎತ್ತುವುದು, ಸ್ಪ್ರಿಂಟಿಂಗ್‌, ಪುಷಪ್‌ ಅಥವಾ ಪುಲಪ್‌ಗಳು ಮುಂತಾದವು. ದೊಡ್ಡ ಪ್ರಮಾಣದಲ್ಲಿ ತೂಕ ಇಳಿಸುವವರಿಗೆ ಇದು ಸೂಕ್ತ. ಕಾರಣ, ವ್ಯಾಯಾಮ ಮುಗಿದ ಮೇಲೂ ದೇಹ ತನ್ನ ಶಕ್ತಿ ಕರಗಿಸುವ ಪ್ರಕ್ರಿಯೆಯನ್ನು ಕೆಲವು ಕಾಲ ಜಾರಿಯಲ್ಲಿ ಇಡಬೇಕಾಗುತ್ತದೆ. ಕ್ರೀಡಾ ಪಟುಗಳಿಗೆ ಅವರವರ ಅಗತ್ಯಕ್ಕೆ ತಕ್ಕಂತೆ ಬೇಕಾಗುವ ವ್ಯಾಯಾಮಗಳಿವು. ಆದರೆ ಇವುಗಳನ್ನು ಎಲ್ಲರೂ ಮಾಡುವ ಮುನ್ನ ಸೂಕ್ತ ಮಾರ್ಗದರ್ಶನ ಬೇಕಾಗುತ್ತದೆ. ಸರಿಯಾದ ವೈದ್ಯರು, ಫಿಸಿಯೊ ಅಥವಾ ಟ್ರೇನರ್‌ ಸಲಹೆಯನ್ನು ತೆಗೆದುಕೊಳ್ಳಲಾಗದೆ ಅನರೋಬಿಕ್‌ ವ್ಯಾಯಾಮಗಳು ಮಾಡುವುದು ಸರಿಯಲ್ಲ. ಈಗ ನಿಮ್ಮ ಆದ್ಯತೆ ಮತ್ತು ಅಗತ್ಯದ ಮೇರೆಗೆ ಎಂಥ ವ್ಯಾಯಾಮ ನಿಮಗೆ ಬೇಕು ಎಂಬುದನ್ನು ನಿರ್ಧರಿಸಬಹುದು.

ಇದನ್ನೂ ಓದಿ| Healthy breakfast | ಬೆಳಗಿನ ತಿಂಡಿಗಳು: ನಮ್ಮಲ್ಲೇ ಇದೆ, ನಮ್ಮ ಆರೋಗ್ಯದ ಸೀಕ್ರೆಟ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips: ಕಿಡ್ನಿಕಲ್ಲಿನ ಸಮಸ್ಯೆ ನಿವಾರಣೆಗೆ ಬಾಳೆ ದಿಂಡನ್ನು ಹೀಗೆ ಬಳಸಿ…

Health Tips: ತೆಂಗಿನಂತೆ ಬಾಳೆಯೂ ಕಲ್ಪವೃಕ್ಷ ಎನಿಸಿಕೊಂಡಿದೆ. ಇದರ ಪ್ರತಿಯೊಂದು ಭಾಗವೂ ಉಪಯೋಗಕ್ಕೆ ಬರುತ್ತದೆ. ಅದರಲ್ಲಿಯೂ ಬಾಳೆದಿಂಡಿನಲ್ಲಿ ಅಪೂರ್ವ ಔಷಧೀಯ ಗುಣಗಳಿವೆ. ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವ ಅದ್ಭುತ ಶಕ್ತಿ ಬಾಳೆ ದಿಂಡಿಗಿದೆ. ಜತೆಗೆ ಗ್ಯಾಸ್ಟ್ರಿಕ್ ಸಮಸ್ಯೆ, ಮೂತ್ರಪಿಂಡದ ಸಮಸ್ಯೆಗೆ ಇದು ರಾಮಬಾಣ. ಖಾಲಿ ಹೊಟ್ಟೆಯಲ್ಲಿ ಬಾಳೆದಿಂಡಿರ ರಸವನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ.

VISTARANEWS.COM


on

Health Tips
Koo

ಕುಮಾರ ಪೆರ್ನಾಜೆ, ಪುತ್ತೂರು
ಬೆಂಗಳೂರು: ಕಲ್ಪವೃಕ್ಷ ಎಂದಾಕ್ಷಣ ತೆಂಗಿನ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಅದರ ಜತೆಗೆ ಬಾಳೆಯೂ ಕಲ್ಪವೃಕ್ಷವೇ. ತೆಂಗಿನಂತೆ ಇದರ ಎಲ್ಲ ಭಾಗಗಳು ಉಪಯುಕ್ತ. ಬಾಳೆ ದಿಂಡು ಉತ್ತಮ ಔಷಧಿಯ ಗುಣಗಳನ್ನು ಹೊಂದಿದ್ದು, ಇತ್ತೀಚೆಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಿಡ್ನಿಯ ಕಲ್ಲಿನ ಸಮಸ್ಯೆಯನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ. ಈ ಬಗೆಗಿನ ವಿವರ ಇಲ್ಲಿದೆ (Health Tips).

ಬಾಳೆ ದಿಂಡಿನ ಪ್ರಾಮುಖ್ಯತೆ ಇದೀಗ ಪ್ರತಿಯೊಬ್ಬರ ಅರಿವಿಗೂ ಬಂದಿದೆ. ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಒಂದು ಅಡಿ ಉದ್ದದ ದಿಂಡಿಗೂ ಬಹಳ ಬೇಡಿಕೆ ಸೃಷ್ಟಿಯಾಗಿದೆ. ಇದರಲ್ಲಿ ಚಟ್ನಿ, ಸಾಸಿವೆ, ಸಾಂಬಾರ್, ಪಲ್ಯ, ಪಕೋಡ, ದೋಸೆ, ಇಡ್ಲಿ, ಸಲಾಡ್, ಮೊಸರು ಗೊಜ್ಜು ಹೀಗೆ ನಾನಾ ಭಕ್ಷ್ಯ ತಯಾರಿಸಬಹುದು. ಮಾತ್ರವಲ್ಲ ಬಾಳೆ ನಾರಿನಿಂದ ವಿವಿಧ ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರಿಸಬಹುದು. ಚೀಲಗಳು, ಬುಟ್ಟಿಗಳು, ಸಸಿ ಕುಂಡಗಳು, ಯೋಗಾಸನ ಚಾಪೆಗಳು, ಹಗ್ಗ, ಬಟ್ಟೆ ತಯಾರಿ ಹೀಗೆ…ಏನೆಲ್ಲ ಮಾಡಬಹುದು ಎಂಬ ಸಂಶೋಧನೆ ಮಾಡುವ ತನಕ ಬಾಳೆ ಇಷ್ಟೊಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.

ಕಿಡ್ನಿ ಕಲ್ಲು ಕರಗಿಸುವ ಬಾಳೆ ದಿಂಡು

ಮೊದಲೇ ಹೇಳಿದಂತೆ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವ ಅದ್ಭುತ ಶಕ್ತಿ ಬಾಳೆ ದಿಂಡಿಗಿದೆ. ಜತೆಗೆ ಗ್ಯಾಸ್ಟ್ರಿಕ್ ಸಮಸ್ಯೆ, ಮೂತ್ರಪಿಂಡದ ಸಮಸ್ಯೆಗೆ ಇದು ರಾಮಬಾಣ. ಖಾಲಿ ಹೊಟ್ಟೆಯಲ್ಲಿ ಬಾಳೆದಿಂಡಿರ ರಸವನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ. ಕಿಡ್ನಿ ಕಲ್ಲಿನ ಸಮಸ್ಯೆ ನಿವಾರಣೆಗೆ ಬಾಳೆ ದಿಂಡಿನ ನೀರನ್ನು ಕುಡಿಯುವುದು ಅತ್ಯುತ್ತಮ ಮಾರ್ಗ ಎನಿಸಿಕೊಂಡಿದೆ. ಈ ನೀರನ್ನು ಹೇಗೆ ಸಂಗ್ರಹಿಸಬಹುದು ಎನ್ನುವುದರ ವಿವರ ಇಲ್ಲಿದೆ. ಬಾಳೆಗಿಡ ಕಡಿದು ಮಧ್ಯದ ದಿಂಡನ್ನು ತೆಗೆದು ಕಾಂಡದಲ್ಲಿ ಗುಳಿಯ ಆಕಾರವನ್ನು ತೋಡಿ. ಬಳಿಕ ಕಸ, ಧೂಳು ಹಾರದಂತೆ ಅದಕ್ಕೆ ಪ್ಲಾಸ್ಟಿಕ್ ಅಥವಾ ಬಾಳೆ ಎಲೆ ಮುಚ್ಚಿ. ಮರುದಿನ ನೋಡಿದಾಗ ಗುಳಿಯಲ್ಲಿ ನೀರು ತುಂಬಿರುತ್ತದೆ.

ಈ ನೀರನ್ನು ಶುಭ್ರ ಪಾತ್ರೆಯಲ್ಲಿ ತೆಗೆದುಕೊಂಡು ನಿಯಮಿತವಾಗಿ ಸೇವಿಸಿ. ಇದರಿಂದ ಕಿಡ್ನಿ ಕಲ್ಲಿ ಕರಗುತ್ತದೆ ಎನ್ನುತ್ತಾರೆ ತಜ್ಞರು. ಅಲ್ಲದೆ ಬಾಳೆ ದಿಂಡನ್ನು ಅರೆದು ಅದನ್ನು ಸೋಸಿಯೂ ಕುಡಿಯಬಹುದು. ಹೀಗೆ ಬಾಳೆದಿಂಡಿನ ರಸವನ್ನು ವರ್ಷಕ್ಕೆ ಎರಡು ಬಾರಿಯಾದರೂ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರ ಹಾಕಬಹುದು.

ಇದನ್ನೂ ಓದಿ: Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

ಜ್ಯೂಸ್‌ ತಯಾರಿಸಿ

ಬಾಳೆ ದಿಂಡಿನ ರಸವನ್ನು ನೇರವಾಗಿ ಸೇವಿಸಲು ಸಾಧ್ಯವಾಗದಿದ್ದರೆ ಜ್ಯೂಸ್‌ ತಯಾರಿಸಿಯೂ ಕುಡಿಯಬಹುದು. ಬಾಳೆದಿಂಡಿನ ನೀರಿಗೆ ಜೀರಿಗೆ, ಶುಂಠಿ, ನಿಂಬೆರಸ, ಗಾಂಧಾರಿ ಮೆಣಸು, ಚಿಟಿಕೆ ಉಪ್ಪು, ಬೇಕಿದ್ದರೆ ಕಲ್ಲು ಸಕ್ಕರೆ ಸೇರಿಸಿ ಕುಡಿಯಬಹುದು. ಇದನ್ನು ಸಮಸ್ಯೆ ಇದ್ದವರೇ ಕುಡಿಯಬೇಕೆಂದಿಲ್ಲ. ಯಾರೂ ಬೇಕಾದರೂ ಸೇವಿಸಬಹುದು. ಇತ್ತೀಚೆಗಂತೂ ಬಿಸಿಲಿನ ತಾಪ ವಿಪರೀತವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಸಾಧ್ಯವಾದಷ್ಟು ಮನೆಯಲ್ಲಿಯೇ ತಯಾರಿಸಿದ ಆಹಾರದ ಜತೆಗೆ ಇಂತಹ ಪ್ರಾಕೃತಿಕ ಔಷಧಗಳ ಪ್ರಯೋಜನ ಪಡೆಯಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

Continue Reading

ಲೈಫ್‌ಸ್ಟೈಲ್

Mosquito control: ಸೊಳ್ಳೆ ಕಾಟಕ್ಕೆ ಬೇಸತ್ತಿದ್ದೀರಾ? ಹಾಗಿದ್ರೆ ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ!

Mosquito control: ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾದಂತಹ ಮಾರಣಾಂತಿಕ ಕಾಯಿಲೆಗಳು ಕಾಡುತ್ತದೆ. ಹಾಗಾಗಿ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಬೇಕು. ಅದಕ್ಕಾಗಿ ನೀವು ಎಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು.

VISTARANEWS.COM


on

Mosquito controle
Koo

ಬೆಂಗಳೂರು: ಸೊಳ್ಳೆ ಎಂದರೆ ಸಾಕು ಕೆಲವರು ಕುಳಿತಲ್ಲಿಯೇ ಹೌಹಾರುತ್ತಾರೆ. ಗಾತ್ರದಲ್ಲಿ ಚಿಕ್ಕದಾದರೂ ಇವು ಕೊಡುವ ಕಾಟ ಹೇಳತೀರದು. ಇನ್ನು ಬೇಸಿಗೆಯಲ್ಲಿ ಸೊಳ್ಳೆಗಳ ಕಾಟ (Mosquito control) ಹೆಚ್ಚಾಗಿರುತ್ತದೆ. ಸಂಜೆಯಾಗುತ್ತಿದ್ದಂತೆ ಮನೆಯ ಕಿಟಕಿ ಮತ್ತು ಬಾಗಿಲಿನ ಸಂದಿಯಲ್ಲಿ ನುಸುಳಿಕೊಂಡು ಮನೆಯೊಳಗೆ ಪ್ರವೇಶಿಸುತ್ತವೆ. ಮನೆಯೊಳಗೆ ಸಿಕ್ಕಿದವರಿಗೆ ಕಚ್ಚಿ ರಕ್ತ ಹೀರುತ್ತದೆ. ಇವುಗಳಿಂದ ರಾತ್ರಿ ನಿದ್ರೆ ಮಾಡಲು ಸಾದ್ಯವಾಗುವುದಿಲ್ಲ. ಹಾಗಾಗಿ ಜನರು ಸೊಳ್ಳೆ ನಿವಾರಕಗಳನ್ನು ಬಳಸುತ್ತಾರೆ.

ಆದರೆ ಈ ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾದಂತಹ ಮಾರಣಾಂತಿಕ ಕಾಯಿಲೆಗಳು ಕಾಡುತ್ತದೆ. ಹಾಗಾಗಿ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಬೇಕು. ಅದಕ್ಕಾಗಿ ನೀವು ಎಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಹಾಗೇ ಸೊಳ್ಳೆಗಳ ಕಡಿತದಿಂದ ಉಂಟಾಗುವಂತಹ ಮಲೇರಿಯಾ ರೋಗವನ್ನು ತಡೆಗಟ್ಟಲು ಈ ಮನೆಮದ್ದುಗಳನ್ನು ತಪ್ಪದೇ ಬಳಸಿ.

ಆರ್ಟೆಮಿಸಿಯಾ ಆನ್ಯುವಾ(ಸ್ವೀಟ್ ವರ್ಮ್ವುಡ್ ): ಇದು ಸಾಂಪ್ರಾದಾಯಿಕ ಚೀನೀ ಔಷಧದ ಮೂಲಾಧಾರವಾಗಿದೆ. ಇದು ಮಲೇರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಆರ್ಟೆಮಿಸಿನಿನ್ ಸಂಯುಕ್ತ ಮಲೇರಿಯಾದ ಚಿಕಿತ್ಸೆಗೆ ಪರಿಣಾಮಕಾರಿಯಾಗಿದೆ. ಈ ಸಸ್ಯದ ಎಲೆಗಳಿಂದ ತಯಾರಿಸಿದ ಚಹಾವನ್ನು ಕುಡಿಯುವುದರ ಮೂಲಕ ಚಿಕಿತ್ಸೆಯನ್ನು ಪಡೆಯಬಹುದು.

Mosquito controle

ಬೇವು: ಬೇವಿನ ಎಲೆಗಳು ಮಲೇರಿಯಾ ಚಿಕಿತ್ಸೆಗೆ ಪರಿಣಾಮಕಾರಿ ಮನೆಮದ್ದಾಗಿದೆ. ಇದು ಜ್ವರ ನಿವಾರಕ ಗುಣವನ್ನು ಹೊಂದಿದೆ. ಬೇವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಮೂಲಕ ರಕ್ತ ಪರಿಚಲನೆಯ ಮೂಲಕ ಮಲೇರಿಯಾಕ್ಕೆ ಕಾರಣವಾಗುವಂತಹ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ.

ಸಿಂಕೋನಾ ಟ್ರೀ ತೊಗಟೆ: ಇದು ದಕ್ಷಿಣಾ ಅಮೇರಿಕಾದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಈ ಮರದ ತೊಗಟೆಯು ಕ್ವಿನೈನ್ ಅನ್ನು ಹೊಂದಿರುತ್ತದೆ. ಇದನ್ನು ಶತಮಾನಗಳಿಂದ ಮಲೇರಿಯಾ ಚಿಕಿತ್ಸೆಯಲ್ಲಿ ಬಳಸಲಾಗುತ್ತಿತ್ತು. ಹಾಗಾಗಿ ಜನರು ಮಲೇರಿಯಾ ತಡೆಗಟ್ಟಲು ಕ್ವಿನೈನ್ ಅಂಶವನ್ನು ಹೊಂದಿರುವ ನೀರನ್ನು ಕುಡಿಯುತ್ತಿದ್ದರು.

Mosquito controle

ಬೆಳ್ಳುಳ್ಳಿ : ಇದು ಆ್ಯಂಟಿ ಮೈಕ್ರೊಬಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾಗಿ ಇದನ್ನು ಸೇವಿಸುವುದರಿಂದ ಮಲೇರಿಯಾ ರೋಗ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Mosquito controle

ಶುಂಠಿ: ಶುಂಠಿಯು ಮಲೇರಿಯಾಕ್ಕೆ ಚಿಕಿತ್ಸೆ ನೀಡುವ ಮತ್ತು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ಹಾಗೇ ಇದು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರಲ್ಲಿರುವ ಜಿಂಜರಾಲ್ ಮತ್ತು ಜಿಂಜರೋನ್ ಉರಿಯೂತ ಮತ್ತು ಜ್ವರ ನಿವಾರಕ ಗುಣಗಳನ್ನು ಹೊಂದಿದೆ. ಇದು ಮಲೇರಿಯಾ ರೋಗಗಳಿಗೆ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: E-Pass Mandatory: ಊಟಿ, ಕೊಡೈಕೆನಾಲ್‌ ಪ್ರವಾಸ ಹೊರಟಿದ್ದೀರಾ? ಹಾಗಿದ್ದರೆ ಗಮನಿಸಿ

ಅರಿಶಿನ: ಇದನ್ನು ಆಯುರ್ವೇದದ ಚಿಕಿತ್ಸೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಕರ್ಕ್ಯುಮಿನ್ ಅಂಶವನ್ನು ಹೊಂದಿದ್ದು, ಮಲೇರಿಯಾವನ್ನು ತಡೆಗಟ್ಟಲು ಪರಿಣಾಮಕಾರಿಯಾಗಿದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಮೂಲಕ ರೋಗಗಳನ್ನು ತಡೆಗಟ್ಟುತ್ತದೆ.

Mosquito controle

ಪಪ್ಪಾಯ ಎಲೆಗಳು: ಮಲೇರಿಯಾದ ಚಿಕಿತ್ಸೆಗೆ ಪಪ್ಪಾಯ ಎಲೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿರುವ ಅಂಶವು ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮಲೇರಿಯಾ ರೋಗವನ್ನು ಕಡಿಮೆಮಾಡುತ್ತದೆ.

Continue Reading

ಆರೋಗ್ಯ

Tobacco Use: ತಂಬಾಕು ಸೇವನೆ; ವಿಶ್ವದಲ್ಲೇ ಭಾರತಕ್ಕೆ ಎರಡನೇ ಸ್ಥಾನ

Tobacco Use: ಭಾರತವು ಶೇ. 27ರಷ್ಟು ವಯಸ್ಕ ತಂಬಾಕು ಸೇವನೆ ಮಾಡುವವರನ್ನು ಹೊಂದಿದೆಯಂತೆ. 2019ರ ಅಂಕಿ ಅಂಶದ ಪ್ರಕಾರ ವಿಶ್ವದಲ್ಲೇ 70 ಲಕ್ಷಕ್ಕೂ ಹೆಚ್ಚು ಮಂದಿ ತಂಬಾಕು ಸೇವಿಸಿ ಸಾವನ್ನಪ್ಪಿದ್ದು, ಭಾರತದಲ್ಲಿ 13.5 ಲಕ್ಷ ಮಂದಿ ಮೃತಪಟ್ಟಿದ್ದಾರೆ

VISTARANEWS.COM


on

By

Tobacco use
Koo

ತಂಬಾಕು ಬಳಸುವವರಲ್ಲಿ (Tobacco Use) ವಿಶ್ವದಲ್ಲೇ ಭಾರತ (india) ಎರಡನೇ ಸ್ಥಾನದಲ್ಲಿದ್ದು, ಶೇ. 27ರಷ್ಟು ವಯಸ್ಕ ಭಾರತೀಯರು ತಂಬಾಕು ಸೇವನೆ (Tobacco consumption) ಮಾಡುತ್ತಾರೆ ಎಂದು ಕೆಪಿಎಂಜಿ (KPMG) ಅಶ್ಯೂರೆನ್ಸ್ ಮತ್ತು ಕನ್ಸಲ್ಟಿಂಗ್ ಸರ್ವಿಸಸ್ ಎಲ್ಎಪಿಯ ವರದಿ ಹೇಳಿದೆ. 2019ರಲ್ಲಿ ವಿಶ್ವದಲ್ಲೇ 7 ಮಿಲಿಯನ್‌ಗೂ ಹೆಚ್ಚು ಮಂದಿ ತಂಬಾಕು ಸೇವಿಸಿ ಸಾವನ್ನಪ್ಪಿದ್ದು , ಭಾರತದಲ್ಲಿ 1.35 ಮಿಲಿಯನ್ ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇಟಿ ಎಡ್ಜ್ ಸಹಯೋಗದೊಂದಿಗೆ ನಡೆದ ಸಮೀಕ್ಷೆಯಲ್ಲಿ ಭಾರತವು ಶೇ. 27ರಷ್ಟು ವಯಸ್ಕ ತಂಬಾಕು ಸೇವನೆ ಮಾಡುವವರನ್ನು ಹೊಂದಿದ್ದು, ವಿಶ್ವದ ಎರಡನೇ ಅತೀ ದೊಡ್ಡ ತಂಬಾಕು ಬಳಸುವ ಜನಸಂಖ್ಯೆಯನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ.

ಈ ಅಂಕಿ ಅಂಶವು ತಂಬಾಕು ಪ್ರೇರಿತ ಹಾನಿಯನ್ನು ಕಡಿಮೆ ಮಾಡಲು ತಂಬಾಕು ನಿಯಂತ್ರಣದ ಕಡೆಗೆ ಸಮಗ್ರ ಮಾರ್ಗಸೂಚಿಯನ್ನು ಹೊಂದಲು ಕಡ್ಡಾಯ ಮತ್ತು ನಿರ್ಣಾಯಕವಾಗಿದೆ. 2060ರ ವೇಳೆಗೆ ತಂಬಾಕು ಸಂಬಂಧಿತ ರೋಗಗಳಿಂದ ಜಾಗತಿಕವಾಗಿ ವಾರ್ಷಿಕ ಮರಣಗಳ ಅಂದಾಜು ಶೇ. 50ರಷ್ಟು ಕಡಿಮೆ ಮಾಡುವ ಉದ್ದೇಶವಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Covishield Vaccine: ಭಾರತದಲ್ಲಿ ಕೋವಿಶೀಲ್ಡ್‌ ಅಡ್ಡ ಪರಿಣಾಮದ ಅಪಾಯವಿಲ್ಲ: ಯಾಕೆ ಗೊತ್ತೆ?

ಭಾರತದ ತಂಬಾಕು ಬಳಕೆ

2019ರಲ್ಲಿ ಜಾಗತಿಕವಾಗಿ 7 ಮಿಲಿಯನ್ ತಂಬಾಕು ಸಂಬಂಧಿತ ಸಾವುಗಳಲ್ಲಿ ಭಾರತದಲ್ಲಿ 1.35 ಮಿಲಿಯನ್ ಸಾವು ಸಂಭವಿಸಿವೆ. ಶೇ. 66ರಷ್ಟು ಭಾರತೀಯರು 20- 25 ವರ್ಷ ವಯಸ್ಸಿನ ನಡುವೆ ತಂಬಾಕು ಸೇವಿಸಲು ಪ್ರಾರಂಭಿಸಿದರು. ಪರ್ಯಾಯ ಮಾರ್ಗಗಳ ಕೊರತೆಯಿಂದ ಶೇ.45ರಷ್ಟು ಮಂದಿಗೆ ಧೂಮಪಾನ ಅಥವಾ ತಂಬಾಕು ಜಗಿಯುವುದನ್ನು ಬಿಡಲು ಸಾಧ್ಯವಾಗಲಿಲ್ಲ.

ಜನರು ಬಳಸುವ ತಂಬಾಕಿನಲ್ಲಿ ಶೇ. 8ರಷ್ಟು ಮಾತ್ರ ಕಾನೂನುಬದ್ಧವಾಗಿ ಉತ್ಪಾದಿಸಲಾಗಿದೆ. ಆದರೆ ಉಳಿದ ಶೇ. 92 ರಷ್ಟು ಬಳಕೆ ಬೀಡಿಗಳು, ಜಗಿಯುವ ತಂಬಾಕು, ಖೈನಿ ಮುಂತಾದ ಅಗ್ಗದ ತಂಬಾಕು ಉತ್ಪನ್ನಗಳಾಗಿದೆ. ತಂಬಾಕು ಸೇವನೆಗೆ ಮುಖ್ಯ ಕಾರಣ ಒತ್ತಡ, ಆತಂಕ ಮತ್ತು ಭಾವನಾತ್ಮಕ ಯಾತನೆ ಎಂಬುದನ್ನು ಸಮೀಕ್ಷೆಯು ಬಹಿರಂಗಪಡಿಸಿದೆ.

ಭಾರತದಲ್ಲಿ ತಂಬಾಕು ಸೇವನೆಗೆ ನಿಯಂತ್ರಣ ಹೇರುವುದು ಅತೀ ಅವಶ್ಯಕವಾಗಿದೆ. ಜಾಗತಿಕವಾಗಿ ಸೂಚಿಸಲಾದ ತಂಬಾಕು ನಿಯಂತ್ರಣ ಕ್ರಮಗಳನ್ನು ಭಾರತದಲ್ಲಿ ಜಾರಿಗೊಳಿಸಲು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸಹಾಯ ಮಾಡುವ ಉದ್ದೇಶ ಹೊಂದಿರುವುದು ಸವಾಲಾಗಿ ಪರಿಣಮಿಸುತ್ತಿದೆ.


ತಂಬಾಕು ಸೇವನೆ ಮಾಡುವ ಶೇ. 50ರಷ್ಟು ಪುರುಷರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದರಲ್ಲಿ ಶೇ. 29 ರಷ್ಟು ಗಂಭೀರ ಪ್ರಕರಣಗಳಾಗಿವೆ. ಅರಿವಿನ ಕೊರತೆ ಮತ್ತು ಪರ್ಯಾಯಗಳ ಅಲಭ್ಯತೆಯಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳಿರುವ ನಗರಗಳಲ್ಲಿ ಶೇ. 81ರಷ್ಟು ಮಂದಿ ಪುರುಷರು ತಂಬಾಕನ್ನು ತ್ಯಜಿಸಲು ಮುಂದಾಗುತ್ತಿಲ್ಲ.
2030ರ ವೇಳೆಗೆ ತಂಬಾಕು ಸಂಬಂಧಿತ ಸಾವುಗಳಲ್ಲಿ ಶೇ.80ಕ್ಕಿಂತ ಹೆಚ್ಚು ಸಾವುಗಳು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಸಂಭವಿಸಬಹುದು ಎಂದು ವರದಿ ಹೇಳಿದೆ.

ಜಿಡಿಪಿ ಮೇಲೆ ಪರಿಣಾಮ

ತಂಬಾಕು ಸೇವನೆಯಿಂದ ಉಂಟಾಗುವ ರೋಗಗಳು ಮತ್ತು ಸಾವುಗಳಿಂದಾಗಿ ಭಾರತವು ಪ್ರತಿ ವರ್ಷ ತನ್ನ ಜಿಡಿಪಿಯ ಶೇ.1ರಷ್ಟನ್ನು ಕಳೆದುಕೊಳ್ಳುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ಪರಿಣಾಮಕಾರಿ ತಂಬಾಕು ನಿಯಂತ್ರಣ ನೀತಿಯನ್ನು ಅಳವಡಿಸಿಕೊಳ್ಳಲು ಭಾರತ ಮುಂದಾಗಬೇಕಿದೆ.

ತಂಬಾಕು ನಿಯಂತ್ರಣಕ್ಕೆ ಕ್ರಮ

ಭಾರತವು ಈಗಾಗಲೇ ತಂಬಾಕು ಸೇವನೆಯನ್ನು ನಿಯಂತ್ರಿಸುವ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಗುರಿಯನ್ನು ಹೊಂದಿರುವ ಕಠಿಣ ನಿಯಮಗಳನ್ನು ಸಕ್ರಿಯವಾಗಿ ಜಾರಿಗೊಳಿಸುತ್ತಿದೆ. ತಂಬಾಕು ಉತ್ಪನ್ನಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಡಬ್ಲ್ಯೂ ಎಚ್‌ಒ ಸೂಚಿಸಿದ ಕಾನೂನುಗಳ ನಿಬಂಧನೆಗಳಿಗೆ ಹೊಂದಿಕೆಯಾಗಲು ದೇಶವು ತಂಬಾಕು ನಿಯಂತ್ರಣ ಕಾನೂನುಗಳನ್ನು ಜಾರಿಗೆ ತಂದಿದೆ. ಧೂಮಪಾನಿಗಳಲ್ಲದವರನ್ನು ಧೂಮಪಾನದಿಂದ ದೂರವಿಡಲು ಇದು ಸಹಾಯ ಮಾಡುತ್ತದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯಲ್ಲಿ (NLEM) ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿಯನ್ನು (NRT) ಪರಿಚಯಿಸಿದೆ. ಉದಾಹರಣೆಗೆ ಚೂಯಿಂಗ್ ನಿಕೋಟಿನ್ ಗಮ್ ಅಥವಾ ಇನ್ಹೇಲರ್‌ಗಳನ್ನು ಬಳಸುವುದು ಧೂಮಪಾನ ಅಭ್ಯಾಸವನ್ನು ಮುರಿಯಲು ಮತ್ತು ಸಿಗರೇಟಿನ ಮೇಲೆ ಮಾನಸಿಕ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಜಾಗತಿಕ ನೀತಿಗಳು

ತಂಬಾಕು ಬಳಕೆಯನ್ನು ನಿಯಂತ್ರಿಸಲು ಅನೇಕ ದೇಶಗಳು ಡಬ್ಲ್ಯೂ ಎಚ್ ಒ ಫ್ರೇಮ್‌ವರ್ಕ್ ಕನ್ವೆನ್ಶನ್ ಆನ್ ತಂಬಾಕು ನಿಯಂತ್ರಣವನ್ನು (FCTC) ಅನುಸರಿಸಿದರೆ, ಕೆಲವು ಸೂಕ್ತವಾದ ವಿಧಾನವನ್ನು ಅಳವಡಿಸಿಕೊಂಡಿವೆ.

ಭಾರತ, ಆಸ್ಟ್ರೇಲಿಯಾ ಮತ್ತು ಸಿಂಗಾಪುರಕ್ಕೆ ಹೋಲಿಸಿದರೆ ಜಪಾನ್, ಯುಕೆ, ನ್ಯೂಜಿಲೆಂಡ್ ಮತ್ತು ಸ್ವೀಡನ್‌ನಂತಹ ದೇಶಗಳಲ್ಲಿ ಧೂಮಪಾನದ ಪ್ರಮಾಣವು ಹೆಚ್ಚು ಎಂದು ವರದಿ ಬಹಿರಂಗಪಡಿಸಿದೆ.

ಏನು ಮಾಡಬಹುದು?

ಧೂಮಪಾನವನ್ನು ತೊರೆಯಲು ಇಷ್ಟಪಡದ ವ್ಯಕ್ತಿಗಳು ಕಡಿಮೆ ಅಪಾಯಕಾರಿ ತಂಬಾಕುಗಳನ್ನು ಬಳಸಲು ಪ್ರೋತ್ಸಾಹಿಸಬೇಕು. ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿ (ಎನ್‌ಆರ್‌ಟಿ) ಅನ್ನು ಕೈಗೆಟುಕುವ ಮತ್ತು ಸುಲಭವಾಗಿ ಸಿಗುವಂತೆ ಮಾಡಬೇಕು. ತಂಬಾಕು ಉತ್ಪನ್ನಗಳ ಪಟ್ಟಿ ಮಾಡಲಾದ ಮತ್ತು ಪಟ್ಟಿ ಮಾಡದ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳ ಸಮಗ್ರ ಡೇಟಾಬೇಸ್ ಅನ್ನು ಅಧಿಕಾರಿಗಳು ಸಂಗ್ರಹಿಸಬೇಕು. ಧೂಮಪಾನಿಗಳಿಗೆ ಶಿಕ್ಷಣ ನೀಡಲು, ತಂಬಾಕು ಬಳಕೆಯ ಬಗ್ಗೆ ಇರುವ ಮಿಥ್ಯೆಗಳನ್ನು ಹೋಗಲಾಡಿಸಲು ರಾಷ್ಟ್ರವ್ಯಾಪಿ ಸಮೂಹ ಮಾಧ್ಯಮ ಪ್ರಚಾರಕ್ಕಾಗಿ ಹೂಡಿಕೆಯನ್ನು ಹೆಚ್ಚಳ ಮಾಡಬೇಕು.

ಆರೋಗ್ಯಕರ ಭವಿಷ್ಯಕ್ಕಾಗಿ ವಾಸ್ತವಿಕ ಮತ್ತು ವೈಜ್ಞಾನಿಕ ತಂಬಾಕು ನಿಯಂತ್ರಣ ನೀತಿಗಳನ್ನು ಸುಗಮಗೊಳಿಸಲು ಗ್ರಾಹಕರು, ಉದ್ಯಮಿಗಳು ಮತ್ತು ಸರ್ಕಾರ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಆತಂಕಕಾರಿ

Continue Reading

ಪ್ರವಾಸ

Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

Jammu Tour: ಸೆಕೆಯ ತಾಪದಿಂದ ಒಂದೊಂದು ದಿನಕಳೆಯುವುದು ಕಷ್ಟ ಎನ್ನುವವರು ಜುಮ್ಮುವಿನ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ. ಇಲ್ಲಿನ ವಿಸ್ತಾರವಾದ ಕಾಡುಗಳು, ಪುರಾತನ ದೇವಾಲಯಗಳು ಹಿಮದಿಂದ ಆವೃತವಾದ ಪರ್ವತ ಶಿಖರಗಳು ನಿಮ್ಮ ಕಣ್ಮನ ಸೆಳೆಯುವುದಂತೂ ಗ್ಯಾರಂಟಿ. ಈ ಪ್ರವಾಸಿ ತಾಣಗಳ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Jammu Tour
Koo

ಬೆಂಗಳೂರು: ಎತ್ತರದ ಹಿಮಾಲಯದ ತಪ್ಪಲಿನಲ್ಲಿರುವ ಜಮ್ಮು ತುಂಬಾ ಚಳಿಯಿಂದ ಕೂಡಿದ ಪ್ರದೇಶವಾಗಿದೆ. ಹಾಗಾಗಿ ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ಬೆಂದು ಹೋದವರು ಎಸಿಯಲ್ಲಿ ಕುಳಿತು ಕಾಲ ಕಳೆಯುವ ಬದಲು ಈ ಸ್ಥಳಕ್ಕೆ ಪ್ರಯಾಣ ಬೆಳೆಸಬಹುದು. ಇಲ್ಲಿನ ವಿಸ್ತಾರವಾದ ಕಾಡುಗಳು, ಪುರಾತನ ದೇವಾಲಯಗಳು ಹಿಮದಿಂದ ಆವೃತವಾದ ಪರ್ವತ ಶಿಖರಗಳು ನಿಮ್ಮನ್ನು ಮೋಡಿ ಮಾಡುವುದಂತು ಸತ್ಯ. ಹಾಗಾಗಿ ಜಮ್ಮುವಿಗೆ ಪ್ರಯಾಣ (Jammu Tour) ಬೆಳೆಸುವವರು ಈ ಸ್ಥಳಗಳಿಗೆ ಭೇಟಿ ನೀಡಿ ಮತ್ತು ಈ ವಿಚಾರಗಳನ್ನು ತಿಳಿದುಕೊಂಡಿರಿ.

ಆಧ್ಯಾತ್ಮಿಕ ಸಾರ

ಅನೇಕ ಧರ್ಮಗುರುಗಳ ತವರೂರಾದ ಜಮ್ಮು ತನ್ನ ಸಂಸ್ಕೃತಿಯನ್ನು ಪ್ರದರ್ಶಿಸುವಂತಹ ಇಸ್ಲಾಮಿಕ್ ದರ್ಗಾಗಳು ಮತ್ತು ಸಿಖ್ ಗುರುದ್ವಾರಗಳ ಜೊತೆಗೆ ಪ್ರಸಿದ್ಧ ಹಿಂದೂ ದೇವಾಲಯಗಳನ್ನು ಹೊಂದಿದೆ. ಇಲ್ಲಿನ ರಘುನಾಥ ದೇವಾಲಯದ ಸಂಕೀರ್ಣವು ಉತ್ತರ ಭಾರತದ ಅತಿದೊಡ್ಡ ದೇವಾಲಯದ ಸಂಕೀರ್ಣಗಳಲ್ಲಿ ಒಂದಾಗಿದೆ. ಇದು ಎತ್ತರದ ಗೋಪುರಗಳನ್ನು ಹೊಂದಿದೆ. ಅಲ್ಲದೇ ಇಲ್ಲಿನ ಬಾವೆ ವಾಲಿ ಮಾತಾ ದೇವಸ್ಥಾನ ಮತ್ತು ಪೀರ್ ಬಾಬಾ ದೇವಾಲಯ ಭಕ್ತರನ್ನು ಆಕರ್ಷಿಸುತ್ತದೆ.

Vaishno Devi Yatra Jammu

ದೈವಿಕ ವೈಷ್ಣೋದೇವಿ ಯಾತ್ರೆ

ತ್ರಿಕೂಟ ಬೆಟ್ಟ ಗಳಲ್ಲಿರುವ ಮಾತಾ ವೈಷ್ಣೋದೇವಿಯ ಪವಿತ್ರ ಗುಹೆಯ ದೇಗುಲಕ್ಕೆ ಚಾರಣ ಮಾಡುವುದು ಭಾರತದ ಅತ್ಯಂತ ಪೂಜ್ಯ ತೀರ್ಥಯಾತ್ರೆಗಳಲ್ಲಿ ಒಂದು ಎನ್ನಬಹುದು. ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಜನರು ಬಂದು ತಮ್ಮ ದೀರ್ಘ ಪ್ರಯಾಣದ ಮೂಲಕ ಭಕ್ತಿಯನ್ನ ಸಾರುತ್ತಾರೆ. ತೀರ್ಥಯಾತ್ರೆಯ ಸಮಯದಲ್ಲಿ ಈ ಸ್ಥಳದಲ್ಲಿ ಯಾವುದೇ ಸಮಸ್ಯೆಯಾಗುವುದನ್ನು ತಡೆಯಲು ಅಧಿಕಾರಿಗಳನ್ನು ನೀಮಿಸಲಾಗುತ್ತದೆ. ಅವರು ಭದ್ರತಾ ಕ್ರಮಗಳನ್ನು ನೋಡಿಕೊಳ್ಳುತ್ತಾರೆ.

Jammu navaratri

ಸಂಸ್ಕೃತಿ ಮತ್ತು ಹಬ್ಬಗಳು

9 ದಿನಗಳ ನವರಾತ್ರಿ ಉತ್ಸವವನ್ನು ಜಮ್ಮುವಿನಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಮೇಳಗಳನ್ನು ನಡೆಸಲಾಗುತ್ತದೆ. ಸ್ಥಳೀಯ ನೃತ್ಯಗಳು, ಸಂಗೀತ ಮತ್ತು ಕರಕುಶಲ ವಸ್ತುಗಳ ಪ್ರದರ್ಶನೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನವೆಂಬರ್ ನಲ್ಲಿ ಕಲಾಕೇಂದ್ರವು ವಾರ್ಷಿಕ ಜಮ್ಮು ಉತ್ಸವವನ್ನು ಆಯೋಜಿಸುತ್ತದೆ.

Kesar Fenni

ಫ್ಯೂಷನ್ ಆಹಾರ

ಜಮ್ಮುವಿನ ಪಾಕಪದ್ಧತಿಯು ಪಂಜಾಬ್, ಕಾಶ್ಮೀರ ಮತ್ತು ದಕ್ಷಿಣ ಭಾರತ ಸೇರಿದಂತೆ ದೇಶದ ವಿವಿಧ ಭಾಗಗಳ ರುಚಿಗಳನ್ನು ಹೊಂದಿರುತ್ತದೆ. ನೀವು ಇಲ್ಲಿಗೆ ಭೇಟಿ ನೀಡಿದರೆ ರಾಜ್ಮಾ-ಅಕ್ಕಿ, ಚೋಲೆ-ಪುರಿಮತ್ತು ಕುಲ್ಚಾದಂತಹ ವಿಶೇಷ ತಿಂಡಿಗಳ ರುಚಿ ಸವಿಯುವುದನ್ನು ಮರೆಯಬೇಡಿ. ಇದಲ್ಲದೇ ಫಿರ್ನಿ(ಅಕ್ಕಿ ಕಡುಬು), ಗುಡ್ ಪಾಪ್ಡಿ ಮತ್ತು ಕಳಾರಿಯಂತಹ ಭಕ್ಷ್ಯಗಳನ್ನು ಕೇಸರ್ ಗುಲ್ಶನ್‌ನ ಪ್ರಸಿದ್ಧ ಕೇಸರಿ ಚಹಾ ಅಥವಾ ಕಾಶ್ಮೀರಿ ಕಹ್ವಾದೊಂದಿಗೆ ಸವಿಯಿರಿ.

ಪ್ರಕೃತಿಯ ಅದ್ಭುತ

ಜಮ್ಮುವಿನ ಸಮೀಪದಲ್ಲಿರುವ ಪಟ್ನಿಟಾಪ್ ಗಿರಿಧಾಮವು ಬೇಸಿಗೆಯಲ್ಲಿ ಅಥವಾ ಚಳಿಗಾಲದಲ್ಲಿ ಪ್ರವಾಸಿಗರಿಗೆ ಕಾಲ ಕಳೆಯಲು ಉತ್ತಮ ಸ್ಥಳವಾಗಿದೆ. ಇಲ್ಲಿ ಪ್ಯಾರಾಗ್ಲೈಡಿಂಗ್ ಮತ್ತು ಸ್ಕೀಯಿಂಗ್ ನಂತಹ ಚಟುವಟಿಕೆಗಳನ್ನು ನೀಡಲಾಗುತ್ತದೆ. ಇಲ್ಲಿನ ಸನ್ಸಾರ್ ಮತ್ತು ಮನ್ಸಾರ್ ಸರೋವರದಲ್ಲಿ ನೀವು ಕ್ಯಾಂಪಿಂಗ್ ಮತ್ತು ಬೋಟಿಂಗ್ ಮಾಡಬಹುದು.

Badamwari Garden in Srinagar, Jammu and Kashmir

ಐತಿಹಾಸಿಕ ತಾಣಗಳು

ತಾವಿ ನದಿಯ ಮೇಲಿರುವ ಬಹು ಕೋಟೆಯು ಜಮ್ಮುವಿನ ವಿಶೇಷವಾದ ಐತಿಹಾಸಿಕ ತಾಣವಾಗಿದೆ. ಇಲ್ಲಿ ಹಲವಾರು ಹಿಂದೂ ದೇವಾಲಯಗಳಿವೆ. ಜೊತೆಗೆ ಸ್ಮಾರಕ, ಆಹಾರ ಪದಾರ್ಥಗಳವರೆಗೆ ಎಲ್ಲವನ್ನೂ ಮಾರಾಟ ಮಾಡುವಂತಹ ಅಂಗಡಿಗಳನ್ನ ಹೊಂದಿದೆ. ಇಲ್ಲಿ ಪಾಳು ಬಿದ್ದಿರುವ ಸಿಮ್ಥಾನ್ ಶಿಖರವನ್ನು ಏರಿದರೆ ಜಲಚರಗಳು ಮತ್ತು ಕಲ್ಲಿನ ಕಟ್ಟಡಗಳನ್ನು ನೋಡಬಹುದು.

Jammu

ಟ್ರಾವೆಲ್ ಪಾಯಿಂಟರ್ಸ್

ಜಮ್ಮುವಿಗೆ ಪ್ರಯಾಣಿಸಲು ಬಯಸುವವರು ದೆಹಲಿ , ಶ್ರೀನಗರ, ಮುಂಬೈ ಮತ್ತು ಅಮೃತಸರದಂತಹ ಪ್ರಮುಖ ನಗರಗಳಿಂದ ನೇರ ವಿಮಾನಗಳ ವ್ಯವಸ್ಥೆಯಿದೆ. ಹಾಗೇ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಪ್ರವಾಣಿಸುವವರಿಗೆ ಖಾಸಗಿ ಮತ್ತು ರಾಜ್ಯ ಸಾರಿಗೆ ಬಸ್ಸುಗಳ ವ್ಯವಸ್ಥೆ ಇದ್ದು, ಇವು ಹಿಮಾಚಲ ಪ್ರದೇಶದ ಹತ್ತಿರದ ಪ್ರವಾಸಿ ತಾಣಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.

ಇದನ್ನೂ ಓದಿ: Travel Time: ಸಮುದ್ರದಲ್ಲೇ ಜೀವನ; ಹೊಸ ಬಗೆಯ ಅಲೆಮಾರಿ ಪ್ರವಾಸಿ ದಂಪತಿ ಇವರು!

ಜಮ್ಮುವಿಗೆ ಪ್ರಯಾಣಿಸುವವರು ನೆನಪಿಡಬೇಕಾದ ವಿಷಯಗಳು

ನೀವು ಜಮ್ಮುವಿಗೆ ಪ್ರಯಾಣ ಬೆಳೆಸುವಾಗ ನಿಮ್ಮ ಐಡಿ ಕಾರ್ಡ್ ಗಳನ್ನು ತೆಗೆದುಕೊಂಡು ಹೋಗಿ. ಹಾಗೇ ರಾತ್ರಿಯ ಸಮಯದಲ್ಲಿ ಪ್ರಯಾಣಿಸುವವರು ನಿರ್ಜನ ಪ್ರದೇಶದಲ್ಲಿ ಮತ್ತು ಮಂದ ಬೆಳಕಿರುವ ಕಾಲುದಾರಿಗಳಲ್ಲಿ ಸಾಗುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ. ಸಾಧಾರಣ ಉಡುಪುಗಳನ್ನು ಧರಿಸಿ. ಇಲ್ಲಿನ ಪವಿತ್ರ ಸ್ಥಳಗಳಿಗೆ ಪ್ರವೇಶಿಸುವಾಗ ನಿಮ್ಮ ಪಾದರಕ್ಷೆಗಳನ್ನು ಹೊರಗೆ ಬಿಚ್ಚಿಡಿ. ಹಾಗೇ ಯಾವುದೇ ಸ್ಥಳೀಯ ಅಥವಾ ಅಧಿಕೃತ /ಮಿಲಿಟರಿ ಸಂಸ್ಥೆಗಳ ಫೋಟೊಗಳನ್ನು ಕ್ಲಿಕ್ಕಿಸುವ ಮುನ್ನ ಅನುಮತಿ ಪಡೆಯಿರಿ.

Continue Reading
Advertisement
assault case in Bengaluru
ಬೆಂಗಳೂರು6 mins ago

Assault Case : ವಿವಾಹಿತೆ ಹಿಂದೆ ಬಿದ್ದ ಪಾಗಲ್‌ ಪ್ರೇಮಿ; ಮದುವೆ ನಿರಾಕರಿಸಿದ್ದಕ್ಕೆ ಮನೆಗೆ ಇಟ್ಟ ಬೆಂಕಿ

Vote Jihad
ದೇಶ18 mins ago

Vote Jihad: ವೋಟ್‌ ಜಿಹಾದ್‌ಗೆ ಕರೆ ನೀಡಿದ್ದು ಇಂಡಿಯಾ ಒಕ್ಕೂಟದ ಮನಸ್ಥಿತಿಗೆ ಕನ್ನಡಿ ಎಂದ ಮೋದಿ

Prajwal Revanna Case PM Modi defends MP accused of rape says Rahul Gandhi
Lok Sabha Election 202424 mins ago

Prajwal Revanna Case: ಮಹಾನ್‌ ರೇಪಿಸ್ಟ್‌ಗೆ ಮೋದಿಯಿಂದ ರಕ್ಷಣೆ; ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ರಾಹುಲ್‌ ಗಾಂಧಿ ಗುಡುಗು

Rinku Singh
ಕ್ರೀಡೆ32 mins ago

Rinku Singh: ಟಿ20 ವಿಶ್ವಕಪ್​ಗೆ ರಿಂಕು ಆಯ್ಕೆಯಾಗಬಹುದೆಂದು ಪಟಾಕಿ, ಸಿಹಿ ತಂದಿಟ್ಟಿದ್ದ ತಂದೆಗೆ ನಿರಾಸೆ

Crime News
ಕ್ರೈಂ33 mins ago

Crime News : 6 ವರ್ಷದ ಬಾಲಕಿಯ ಅಪಹರಿಸಲು ಯತ್ನಿಸಿದ ದುಷ್ಟ; ಹಿಟ್‌ ಆ್ಯಂಡ್‌ ರನ್‌ ಮಾಡಿ ಚಾಲಕರಿಬ್ಬರು ಎಸ್ಕೇಪ್‌

Samsung
ತಂತ್ರಜ್ಞಾನ52 mins ago

ಸ್ಯಾಮ್‌ಸಂಗ್‌ನ ‘ಫ್ಯಾಬ್ ಗ್ರಾಬ್ ಫೆಸ್ಟ್’: ಸ್ಮಾರ್ಟ್‌ಫೋನ್‌, ಟಿವಿ, ಲ್ಯಾಪ್‌ಟಾಪ್‌, ಡಿಜಿಟಲ್ ಉಪಕರಣಗಳ ಮೇಲೆ ಅದ್ಭುತ ಆಫರ್

students self harming
ಕ್ರೈಂ1 hour ago

Students Self harming: 20 ವರ್ಷಗಳಲ್ಲಿ ಐಐಟಿಯ 115 ವಿದ್ಯಾರ್ಥಿಗಳು ಆತ್ಮಹತ್ಯೆ

Prajwal Revanna Case HD DeveGowda and HD Kumaraswamy slams HD Revanna
ಕ್ರೈಂ2 hours ago

Prajwal Revanna Case: ನಿನ್ನ ಮಗನಿಂದ ಇಂಥ ಕಪ್ಪು ಚುಕ್ಕೆ ಬಂತು; ರೇವಣ್ಣ ಮೇಲೆ ಮುಗಿಬಿದ್ದ ಎಚ್‌ಡಿಡಿ, ಎಚ್‌ಡಿಕೆ

Pawan Kalyan Hari Hara Veera Mallu Part 1 teaser Out
ಟಾಲಿವುಡ್2 hours ago

Pawan Kalyan: ʻಹರಿ ಹರ ವೀರ ಮಲ್ಲುʼವಾಗಿ ಅಬ್ಬರಿಸಿದ ಪವನ್ ಕಲ್ಯಾಣ್; ಟೀಸರ್‌ ಔಟ್‌!

supreme court
ದೇಶ2 hours ago

Supreme Court: CBI ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿಲ್ಲ; ಸುಪ್ರೀಂಕೋರ್ಟ್‌ಗೆ ಸರ್ಕಾರ ಸ್ಪಷ್ಟನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌