Hing benefits | ಅಡುಗೆಮನೆಯಲ್ಲೇ ಇರುವ ನಿಮ್ಮ ಆಪತ್‌ಬಾಂಧವ ಇಂಗು - Vistara News

ಆಹಾರ/ಅಡುಗೆ

Hing benefits | ಅಡುಗೆಮನೆಯಲ್ಲೇ ಇರುವ ನಿಮ್ಮ ಆಪತ್‌ಬಾಂಧವ ಇಂಗು

ಭಾರತೀಯ ಸೂಪಶಾಸ್ತ್ರದಲ್ಲಿ ಇಂಗಿಲ್ಲದೆ ಅಡುಗೆಯಿಲ್ಲ ಎನ್ನುವಷ್ಟು ಪ್ರಚಲಿತವಿರುವ ಈ ವಸ್ತು, ಹಲವಾರು ಔಷಧೀಯ ಪದ್ಧತಿಗಳಲ್ಲಿ ಚಿಕಿತ್ಸೆಗೆ ಬಳಸಲ್ಪಡುತ್ತದೆ. ಮನೆಮದ್ದಾಗಿ ನಾನಾ ಸಮಸ್ಯೆಗಳಿಗೆ ಸಮಾಧಾನ ನೀಡುತ್ತಿದೆ.

VISTARANEWS.COM


on

hing uses
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂಗು ತೆಂಗು ಇದ್ದರೆ ಮಂಗಮ್ಮನ ಅಡುಗೆಯೂ ರುಚಿ ಎನ್ನುವ ಅಜ್ಜಿಕಾಲದ ಗಾದೆಯನ್ನು ನಾವೆಲ್ಲ ಕೇಳಿದವರೇ. ಭಾರತೀಯ ಅಡುಗೆ ಮನೆಗಳಲ್ಲಿ ಇರಲೇಬೇಕಾದ ಕೆಲವು ಸಾಮಗ್ರಿಗಳ ಪೈಕಿ ಇಂಗು ಸಹ ಒಂದು. ಗಾದೆಯೇ ಸೂಚಿಸುವಂತೆ, ಅಡುಗೆಯನ್ನು ರುಚಿಗಟ್ಟಿಸಲು ಬೇಕೇಬೇಕಾದ ವಸ್ತುವಿದು. ಭಾರತ, ಪಾಕಿಸ್ತಾನ, ಇರಾನ್‌ ಮತ್ತು ಅಫ್ಘಾನಿಸ್ತಾನಗಳಲ್ಲಿ ಪೊದರಿನಂತೆ ಬೆಳೆಯುವ ಒಂದು ಜಾತಿಯ ಹಳದಿ ಮಿಶ್ರಿತ ಹಸಿರು ಗಿಡಗಳಿಂದ ದೊರೆಯುವ ಅಂಟು ಈ ಇಂಗು. ಭಾರತೀಯ ಸೂಪಶಾಸ್ತ್ರದಲ್ಲಿ ಇಂಗಿಲ್ಲದೆ ಅಡುಗೆಯಿಲ್ಲ ಎನ್ನುವಷ್ಟು ಪ್ರಚಲಿತವಿರುವ ಈ ವಸ್ತು, ಹಲವಾರು ಔಷಧೀಯ ಪದ್ಧತಿಗಳಲ್ಲಿ ಚಿಕಿತ್ಸೆಗೆ ಬಳಸಲ್ಪಡುತ್ತದೆ. ಮನೆಮದ್ದಾಗಿ ನಾನಾ ಸಮಸ್ಯೆಗಳಿಗೆ ಸಮಾಧಾನ ನೀಡುತ್ತಿದೆ.

ಪಚನಕಾರಿ: ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಇಂಗೇ ಮದ್ದು. ಅಸಿಡಿಟಿ, ಅಜೀರ್ಣ, ಹೊಟ್ಟೆಯುಬ್ಬರ ಮತ್ತು ಇದರಿಂದಾಗಿ ಹೊಟ್ಟೆ ನೋವು, ಹೊಟ್ಟೆಯ ಸಣ್ಣಪುಟ್ಟ ಸೋಂಕುಗಳಿಗೂ ಇದು ಪರಿಹಾರವಾಗಬಲ್ಲದು. ಪಚನಕ್ರಿಯೆಯನ್ನು ಸರಾಗಗೊಳಿಸುವ ಈ ಸಾಮರ್ಥ್ಯದಿಂದಾಗಿ, ತೂಕ ಇಳಿಸುವವರು ಇಂಗನ್ನು ಧಾರಾಳವಾಗಿ ಬಳಸಬಹುದು.

ಶ್ವಾಸನಾಳದ ಸಮಸ್ಯೆಗಳು: ಶಿಲೀಂಧ್ರ ನಿರೋಧಕ, ವೈರಸ್‌ ನಾಶಕ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣವಿರುವ ಇಂಗನ್ನು, ನೆಗಡಿ, ಕೆಮ್ಮು, ಅಸ್ತಮಾ, ಬ್ರಾಂಕೈಟಿಸ್‌, ನ್ಯುಮೋನಿಯಾ, ನಾಯಿಕೆಮ್ಮು ಮುಂತಾದ ಶ್ವಾಸನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಕಟ್ಟಿದ ಕಫದಿಂದ ಎದೆ ಬಿಗಿಯುವ ಅನುಭವವನ್ನು ಕಡಿಮೆ ಮಾಡಿ, ಉಸಿರಾಟವನ್ನು ಸರಾಗ ಮಾಡುವ ಸಾಮರ್ಥ್ಯ ಇದಕ್ಕಿದೆ.

ಫಲವಂತಿಕೆ ಹೆಚ್ಚಳ: ಮಹಿಳೆ ಮತ್ತು ಪುರುಷರಿಬ್ಬರಲ್ಲೂ ಫಲವಂತಿಕೆ ಹೆಚ್ಚಳಕ್ಕೆ ಇಂಗು ಬಳಕೆಯಲ್ಲಿದೆ. ಮಹಿಳೆಯರಲ್ಲಿ ಪ್ರೊಜೆಸ್ಟಿರಾನ್‌ ಚೋದಕವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಕಾಮೋತ್ತೇಜಕ ಗುಣವೂ ಈ ವಸ್ತುವಿಗಿದೆ.

hing uses

ಹೃದಯಕ್ಕೆ ಕ್ಷೇಮ: ರಕ್ತ ನೀರಾಗಿಸುವ ಸತ್ವವನ್ನು ಇಂಗು ಹೊಂದಿದೆ. ಹೆಚ್ಚಿನ ಪ್ರಮಾಣದ ಪೊಟಾಶಿಯಂ ಹೊಂದಿರುವ ಈ ಅಂಟು, ರಕ್ತದೊತ್ತಡವನ್ನೂ ಕಡಿಮೆ ಮಾಡಬಲ್ಲದು. ಹೀಗೆ ರಕ್ತ ಹೆಪ್ಪುಗಟ್ಟದಂತೆ ತಡೆದು, ರಕ್ತದೊತ್ತಡವನ್ನೂ ಕಡಿಮೆ ಮಾಡುವ ಇಂಗಿನ ಸತತ ಬಳಕೆಯಿಂದ ಪಾರ್ಶ್ವವಾಯು ಮತ್ತು ಹೃದ್ರೋಗಗಳನ್ನು ದೂರವಿಡಲು ಸಹಾಯವಾಗುತ್ತದೆ.

ಇದನ್ನೂ ಓದಿ | Avocado benefits | ಹಲವು ಕ್ಯಾನ್ಸರ್‌ಗಳಿಗೆ ಮದ್ದು ಈ ಬೆಣ್ಣೆ ಹಣ್ಣು

ಹೊಟ್ಟೆನೋವು ಶಮನ: ಮಹಿಳೆಯರಿಗೆ ಮುಟ್ಟಿನ ಸಂದರ್ಭಗಳಲ್ಲಿ ಬರುವ ಹೊಟ್ಟೆನೋವು ಶಮನಕ್ಕೆ ಇಂಗು ಉಪಯೋಗವಾಗುತ್ತದೆ. ಅಂದರೆ, ರಕ್ತ ತಿಳಿಗೊಳಿಸುವುದರಿಂದ ಕಿಬ್ಬೊಟ್ಟೆಯಲ್ಲಿನ ತೀಕ್ಷ್ಣ ನೋವು ಕಡಿಮೆ ಮಾಡುತ್ತದೆ. ಪ್ರೊಜೆಸ್ಟಿರಾನ್‌ ಹಾರ್ಮೋನು ಉತ್ಪತ್ತಿ ಮಾಡುವುದರಿಂದ, ಅನಿಯಮಿತ ಋತುಸ್ರಾವದ ತೊಂದರೆಯನ್ನೂ ನಿವಾರಿಸಬಲ್ಲದು. ಆದರೆ ಗರ್ಭಿಣಿಯರು ಇಂಗಿನ ಬಳಕೆಯನ್ನು ಮಿತವಾಗಿ ಮಾಡಲು ಆಯುರ್ವೇದ ಸೂಚಿಸುತ್ತದೆ.

ತಲೆನೋವಿಗೆ: ತಲೆಯಲ್ಲಿ ಸಿಡಿಯುವಂಥ ಶೂಲೆಯಿದ್ದರೆ ಅದನ್ನು ನಿವಾರಿಸಬಲ್ಲದು ಇಂಗು. ಉರಿಯೂತ ತಗ್ಗಿಸಲು ಸಮರ್ಥವಾಗಿರುವ ಈ ಅಂಟು, ಒತ್ತಡ ನಿವಾರಣೆಗೂ ಸೈ. ಹಾಗಾಗಿ ಮೈಗ್ರೇನ್‌ನಿಂದ, ಒತ್ತಡದಿಂದ ಕಾಣಿಸಿಕೊಳ್ಳುವ ತಲೆಶೂಲೆಯನ್ನು ಕಡಿಮೆ ಮಾಡಲು ಇಂಗಿನ ನೆರವು ಪಡೆಯಬಹುದು.

ಕೀಟಗಳ ಕಡಿತಕ್ಕೆ: ಕೆಲವು ಜಾತಿಯ ಕೀಟಗಳ ಕಡಿತ ಅಥವಾ ಕುಟುಕು ಅತೀವ ನೋವು ತರಬಲ್ಲದು. ಕಡಿತದ ನಂಜು ತಗ್ಗುವವರೆಗೆ ತೀಕ್ಷ್ಣ ನೋವು ಕಾಡುತ್ತಲೇ ಇರುತ್ತದೆ. ಉರಿಯೂತ ತಗ್ಗಿಸುವುದರ ಜೊತೆಗೆ ನೋವು ನಿವಾರಣೆಯ ಸಾಧ್ಯತೆಯನ್ನೂ ಹೊಂದಿರುವ ಇಂಗು ಈಗಲೂ ಉಪಕಾರಿ. ಬೆಳ್ಳುಳ್ಳಿಯೊಂದಿಗೆ ಇಂಗನ್ನು ಅರೆದು, ಕೀಟ ಕಚ್ಚಿದ ಜಾಗಕ್ಕೆ ನೇರವಾಗಿ ಲೇಪಿಸುವುದು ಒಳ್ಳೆಯ ಉಪಶಮನ ನೀಡುತ್ತದೆ.

ಇದನ್ನೂ ಓದಿ | Skin Care | ಕಾಂತಿಯುಕ್ತ ತ್ವಚೆ ಬೇಕೆ?: ಈ ಆಹಾರಗಳು ನಿಮ್ಮ ಹೊಟ್ಟೆ ಸೇರಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Benefits Of Tofu: ಪನೀರ್‌ನಂತೆ ಕಾಣುವ ಈ ಆಹಾರದ ಬಗ್ಗೆ ನಿಮಗೆ ಗೊತ್ತೆ?

ʻಬೀನ್‌ ಕರ್ಡ್‌ʼ ಎಂಬ ಹೆಸರಿನಿಂದಲೂ ಕರೆಸಿಕೊಳ್ಳುವ ಈ ತೋಫು ಸೋಯಾ ಉತ್ಪನ್ನ. ಸಸ್ಯದಿಂದಲೇ ಸಿದ್ಧಗೊಂಡ ಈ ತೋಫು ಅತಿ ಹೆಚ್ಚಿನ ಪ್ರೊಟೀನ್‌ ಹೊಂದಿರುವ ತಿನಿಸು. ಜೊತೆಗೆ ಹಲವು ರೀತಿಯ ಪೋಷಕಸತ್ವಗಳು ಇದರಲ್ಲಿದ್ದು, ಅತ್ಯಂತ ಆರೋಗ್ಯಕರ (Health benefits Of Tofu) ತಿನಿಸು ಎಂಬ ಖ್ಯಾತಿಗೂ ಪಾತ್ರವಾಗಿದೆ.

VISTARANEWS.COM


on

Health Benefits Of Tofu
Koo

ನೋಡುವುದಕ್ಕೆ ಪನೀರ್‌ನಂತೆಯೇ ಕಾಣುವ ಈ ವಸ್ತುವಿನ ಬಗ್ಗೆ ಬಹಳಷ್ಟು ಜನರಿಗೆ ಕುತೂಹಲವಿದೆ. ಅದೂ ಪನೀರ್‌ನ ಒಂದು ಬಗೆ ಎಂದು ಭಾವಿಸಿದವರಿದ್ದಾರೆ. ಹಾಲಿನಿಂದಲೇ ಮಾಡಿದ್ದು ಎಂದು ತಿಳಿದವರಿದ್ದಾರೆ. ಆದರೆ ʻತೋಫುʼ ಎಂಬ ಹೆಸರು ಕೇಳಿ ಇದೇನು ಸಸ್ಯಜನ್ಯವೋ, ಪ್ರಾಣಿಜನ್ಯವೋ ಎಂಬ ಗೊಂದಲಕ್ಕೆ ಬಿದ್ದವರೂ ಇದ್ದಾರೆ. ʻಬೀನ್‌ ಕರ್ಡ್‌ʼ ಎಂಬ ಹೆಸರಿನಿಂದಲೂ ಕರೆಸಿಕೊಳ್ಳುವ ಇದು ಸೋಯಾ ಉತ್ಪನ್ನ. ಸಸ್ಯದಿಂದಲೇ ಸಿದ್ಧಗೊಂಡ ಈ ತೋಫು ಅತಿ ಹೆಚ್ಚಿನ ಪ್ರೊಟೀನ್‌ ಹೊಂದಿರುವ ತಿನಿಸು. ಜೊತೆಗೆ ಹಲವು ರೀತಿಯ ಪೋಷಕಸತ್ವಗಳು ಇದರಲ್ಲಿದ್ದು, ಅತ್ಯಂತ ಆರೋಗ್ಯಕರ (Health benefits Of Tofu) ತಿನಿಸು ಎಂಬ ಖ್ಯಾತಿಗೂ ಪಾತ್ರವಾಗಿದೆ.

Tofu

ಏನಿದು ತೋಫು?

ಸರಳವಾಗಿ ಹೇಳುವುದಾದರೆ ಸೋಯಾ ಹಾಲಿನ ಪನೀರ್‌ ಎಂದು ತಿಳಿಯಬಹುದು. ನೋಡುವುದಕ್ಕೆ ಪನೀರ್‌ನಂತೆಯೇ ಇದ್ದರೂ, ಇವೆರಡರಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಸೋಯಾ ಹಾಲಿಗೆ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಉಪ್ಪನ್ನು ಸೇರಿಸಿ, ಹಸುವಿನ ಹಾಲಿನಂತೆಯೇ ಒಡೆಸಿ ಪನೀರ್‌ ರೀತಿಯಲ್ಲಿ ಕಾಣುವಂತೆಯೇ ತೋಫುವನ್ನು ಸಿದ್ಧಪಡಿಸಲಾಗುತ್ತದೆ. ನಂತರ ಇದನ್ನು ಚಚ್ಚೌಕವಾಗಿ ಕತ್ತರಿಸಲಾಗುತ್ತದೆ. ಇದು ಸಂಪೂರ್ಣ ಸಸ್ಯಜನ್ಯ ಉತ್ಪನ್ನ. ವೇಗನ್‌ಗಳಿಗೆ ಹೇಳಿ ಮಾಡಿಸಿದ ಆಹಾರ. ಇದನ್ನು ಎಲ್ಲರೂ ಸೇವಿಸಬಹುದು. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳಷ್ಟು ರೀತಿಯಲ್ಲಿ ಲಾಭಗಳಿವೆ. ಏನು ಪ್ರಯೋಜನಗಳಿವೆ ಸೋಯಾ ಹಾಲಿನ ಪನೀರ್‌ ಅಥವಾ ತೋಫು ಸೇವನೆಯಿಂದ?

paneer tofu

ಅತ್ತ್ಯುತ್ತಮ ಪ್ರಾಣಿಜನ್ಯ ಪ್ರೊಟೀನ್

ಸಸ್ಯಾಹಾರಿಗಳಿಗೆ ಪ್ರೊಟೀನ್‌ ಸಾಲುವುದಿಲ್ಲ ಎಂಬ ದೂರು ಸಾಮಾನ್ಯ. ಆದರೆ ನಿಯಮಿತವಾಗಿ ಪನೀರ್‌, ತೋಫು ಸೇವನೆಯನ್ನು ರೂಢಿಸಿಕೊಂಡರೆ ಸಸ್ಯಾಹಾರಿಗಳೂ ಪ್ರೊಟೀನ್‌ ಕೊರತೆಯನ್ನು ನೀಗಿಸಿಕೊಳ್ಳಬಹುದು. ಅರ್ಧ ಕಪ್‌ ತೋಫುವಿನಲ್ಲಿ 181 ಕ್ಯಾಲೊರಿಗಳು, 21.8 ಗ್ರಾಂನಷ್ಟು ಪ್ರೊಟೀನ್‌, 11 ಗ್ರಾಂ ಕೊಬ್ಬು ಪ್ರಮುಖವಾಗಿ ದೊರೆಯುತ್ತದೆ. ಇದರಲ್ಲಿ ಅಗತ್ಯವಾದ ಎಲ್ಲ 9 ಅಮೈನೊ ಆಮ್ಲಗಳು ಸಮೃದ್ಧವಾಗಿ ದೊರೆಯುತ್ತವೆ. ಸ್ನಾಯುಗಳ ದುರಸ್ತಿ ಮಾಡಿ, ಬೆಳವಣಿಗೆಗೆ ಅಗತ್ಯವಾದಂಥ ಸಂಪೂರ್ಣ ಪ್ರೊಟೀನ್‌ ತೋಫುವಿನಲ್ಲಿ ದೊರೆಯುತ್ತದೆ.

weight loss

ತೂಕ ಇಳಿಕೆಗೆ ಸೂಕ್ತ

ಕಡಿಮೆ ಕ್ಯಾಲರಿ ಮತ್ತು ಹೆಚ್ಚು ಪ್ರೊಟೀನ್‌ ಹೊಂದಿರುವ ಕಾರಣದಿಂದ, ತೂಕ ಇಳಿಸುವವರಿಗೆ ಹೇಳಿ ಮಾಡಿಸಿದ ಆಹಾರವಿದು. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುವ ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರಿಂದ ಆಗಾಗ ಕಾಡುವ ಕಳ್ಳ ಹಸಿವನ್ನು ದೂರ ಮಾಡಿ, ದೇಹದಲ್ಲಿ ಅನಗತ್ಯ ಕೊಬ್ಬು ಜಮಾಯಿಸುವುದನ್ನು ಸಹ ತಡೆಯಬಹುದು. ಹೀಗಾಗಿ ತೂಕ ಇಳಿಸುವವರಿಗೆ ಇದು ಸೂಕ್ತವಾದ ಆಹಾರವಿದು.

Heart Health In Winter

ಹೃದಯದ ಮಿತ್ರ

ತೋಫುವಿನಲ್ಲಿ ಸ್ಯಾಚುರೇಟೆಡ್‌ ಕೊಬ್ಬಿನ ಪ್ರಮಾಣ ಅತಿ ಕಡಿಮೆ. ಇದರಲ್ಲಿ ಇರುವ ಐಸೊಫ್ಲೇವನ್‌ಗಳು ಎಲ್‌ಡಿಎಲ್‌ ಕೊಲೆಸ್ಟ್ರಾಲ್‌ಗಳ ಜಮಾವಣೆಯನ್ನು ತಗ್ಗಿಸಲು ಸಹಾಯ ಮಾಡುತ್ತವೆ. ಹೀಗೆ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯ ಕಾಪಾಡಲು ಸೋಯಾ ಪನೀರ್‌ ನೆರವಾಗುತ್ತದೆ.

heart attack and Diabetes control

ಮಧುಮೇಹ ನಿಯಂತ್ರಣ

ತೋಫುವಿನ ಗ್ಲೈಸೆಮಿಕ್‌ ಸೂಚಿ ಕಡಿಮೆಯಿದೆ. ಅಂದರೆ ರಕ್ತದಲ್ಲಿರುವ ಸಕ್ಕರೆಯಂಶ ದಿಢೀರ್‌ ಏರಿಕೆಯಾಗಲು ಇದು ಅವಕಾಶ ನೀಡುವುದಿಲ್ಲ. ದೇಹದ ಚಯಾಪಚಯವನ್ನು ಹೆಚ್ಚಿಸುವ ಇದು, ನಾರು ಮತ್ತು ಪ್ರೊಟೀನನ್ನು ಸಾಂದ್ರವಾಗಿ ಹೊಂದಿದೆ. ಇಂಥ ಆಹಾರಗಳು ಮಧುಮೇಹಿಗಳಿಗೆ ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತವೆ. ಗರ್ಭಾವಸ್ಥೆಯ ಮಧುಮೇಹ ಹೊಂದಿದವರ ಮೇಲೆ ನಡೆಸಿದ ಪ್ರಯೋಗದಲ್ಲಿ, ಆರು ವಾರಗಳವರೆಗೆ ಹೆಚ್ಚಿನ ಪ್ರಮಾಣದ ಸೋಯ್‌ ಪ್ರೊಟೀನ್‌ ಸೇವಿಸಿದ ಮಹಿಳೆಯರಲ್ಲಿ ಸಕ್ಕರೆ ಕಾಯಿಲೆ ಗಣನೀಯವಾಗಿ ನಿಯಂತ್ರಣಕ್ಕೆ ಬಂದಿದ್ದು ದಾಖಲಾಗಿದೆ.

ealthy internal organs of human digestive system / highlighted blue organs

ಜೀರ್ಣಾಂಗಗಳು ಕ್ಷೇಮ

ತೋಫುವಿನಲ್ಲಿ ಸಾಕಷ್ಟು ನಾರಿನಂಶವಿದೆ. ಇದು ಮಲಬದ್ಧತೆಯ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ, ನಾರು ಹೆಚ್ಚಿರುವ ಆಹಾರಗಳಿಂದ ಜೀರ್ಣಾಂಗಗಳಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ವೃದ್ಧಿಸಬಹುದು. ಇದಲ್ಲದೆ, ಕೆಲವು ಬಗೆಯ ತೋಫುಗಳ ತಯಾರಿಕೆಯ ಪ್ರಕ್ರಿಯೆಯಲ್ಲಿ ಒಂದಿಷ್ಟು ಪ್ರೊಬಯಾಟಿಕ್‌ ಬ್ಯಾಕ್ಟೀರಿಯಗಳು ಸೇರಿಕೊಳ್ಳುತ್ತವೆ. ಈ ಎಲ್ಲದರಿಂದ ಜೀರ್ಣಾಂಗಗಳ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಾಧ್ಯವಿದೆ.

Bone Health In Winter

ಮೂಳೆಗಳ ಸಾಂದ್ರತೆ ರಕ್ಷಣೆ

ತೋಫು ತಯಾರಿಸುವ ಪ್ರಕ್ರಿಯೆಯಲ್ಲಿಯೇ ಕ್ಯಾಲ್ಶಿಯಂ ಮತ್ತು ಮೆಗ್ನೀಶಿಯಂ ಇದರಲ್ಲಿ ಸೇರಿಕೊಳ್ಳುತ್ತವೆ. ಮೂಳೆಗಳ ಸಾಂದ್ರತೆಯ ರಕ್ಷಣೆಗೆ ಈ ಖನಿಜಗಳು ಅಗತ್ಯವಾಗಿ ಬೇಕು. ಹಾಗಾಗಿ ಆಸ್ಟಿಯೊಪೊರೊಸಿಸ್‌ ಇರುವಂಥವರಿಗೆ ಇದು ಒಳ್ಳೆಯ ಆಹಾರ. ಜೊತೆಗೆ, ಋತುಬಂಧದ ಸಮಪದಲ್ಲಿರುವವರು, ಯಾವುದೇ ರೀತಿಯ ಕ್ಯಾಲ್ಶಿಯಂ ಕೊರತೆ ಇರುವವರಿಗೂ ಇದು ಸೂಕ್ತ. ಮಿತ ಪ್ರಮಾಣದಲ್ಲಿ ಎಲ್ಲರೂ ಇದನ್ನು ಸೇವಿಸುವುದು ಒಳ್ಳೆಯದೆ.

ಇದನ್ನೂ ಓದಿ: Mango Juice Benefits: ತಾಜಾ ಮಾವಿನ ರಸ ಕುಡಿಯುವುದರಿಂದ ಎಷ್ಟೊಂದು ಪ್ರಯೋಜನ ಇದೆ ನೋಡಿ…

ಜಾಗ್ರತೆ ಮಾಡಿ

ಹಾಗೆಂದು ಇದನ್ನು ಮಿತಿಮೀರಿಯೂ ತಿನ್ನುವಂತಿಲ್ಲ. ಸೋಯ್‌ ಅಲರ್ಜಿ ಇರುವವರು, ಥೈರಾಯ್ಡ್‌ ತೊಂದರೆಗಳು ಇರುವವರು, ಅದರಲ್ಲೂ ಮುಖ್ಯವಾಗಿ ಹೈಪೊ ಥೈರಾಯ್ಡ್‌ ಇರುವವರು, ಕಿಡ್ನಿ ಕಲ್ಲು ಇರುವವರು ಇದನ್ನು ಮಿತವಾಗಿ ಬಳಸುವುದು ಸೂಕ್ತ. ಹೆಚ್ಚಿನ ಪ್ರೊಟೀನ್‌ ಮತ್ತು ನಾರು ಸೇವನೆಯಿಂದ ಕೆಲವರಿಗೆ ಹೊಟ್ಟೆ ಉಬ್ಬರ, ಅಜೀರ್ಣ, ಡಯರಿಯಾ ಕಾಡಬಹುದು. ಹಾಗಾಗಿ ತೋಫು ಒಳ್ಳೆಯದೇ ಆದರೂ ಇದನ್ನು ಮಿತವಾಗಿ ಸೇವಿಸುವುದು ಉತ್ತಮ.

Continue Reading

ಆರೋಗ್ಯ

Tea Tips: ಹಾಲಿನ ಚಹಾ ಬದಲು ಬ್ಲ್ಯಾಕ್‌ ಟೀ ಕುಡಿಯಿರಿ!

ಕಾಫಿ ಮತ್ತು ಚಹಾ ಸೇವನೆ (Tea Tips) ಭಾರತ ಉಪಖಂಡದ ಸಂಸ್ಕೃತಿ ಎನಿಸಿದೆ. ಆದರೆ ಅದನ್ನು ಅತಿಯಾಗಿ ಸೇವಿಸುವುದರಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಐಸಿಎಂಆರ್‌ ಗಮನ ಸೆಳೆದಿದೆ. ಚಾ-ಕಾಪಿ ಕುಡಿಯುವುದಕ್ಕೆ ಮಿತಿ ಎಷ್ಟು, ಯಾವಾಗ ಕುಡಿಯಬಹುದು ಎಂಬಿತ್ಯಾದಿ ಮಾಹಿತಿಗಳನ್ನೂ ನೀಡಿದೆ. ಈ ಲೇಖನ ಓದಿ, ಟೀ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳಿ.

VISTARANEWS.COM


on

Tea Tips
Koo

ಭಾರತೀಯರಿಗೆ ಕಾಫಿ-ಚಹಾ ಇಲ್ಲದೆ (Tea Tips) ಬೆಳಗಾಗುವುದೇ ಇಲ್ಲ. ಆದರೆ ಅತಿಯಾಗಿ ಕೆಫೇನ್‌ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಈ ಬಗ್ಗೆ ವಿಸ್ತೃತವಾದ ನಿರ್ದೇಶನಗಳನ್ನು ನೀಡಿದ್ದು, ಕೆಫೇನ್‌ ಎಷ್ಟು ಸೇವಿಸಬಹುದು ಮತ್ತು ಯಾವಾಗ ಸೇವಿಸಬಹುದು ಎಂಬ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಿದೆ. ಮಾತ್ರವಲ್ಲ, ಅತಿಯಾದ ಕೆಫೇನ್‌ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ಎಚ್ಚರಿಕೆ ನೀಡಿದೆ.
ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್‌ಐಎನ್‌) ಜೊತೆಗೂಡಿ, 17 ಹೊಸ ಆಹಾರಕ್ರಮದ ನಿರ್ದೇಶನಗಳನ್ನು ಐಸಿಎಂಆರ್‌ ಬಿಡುಗಡೆ ಮಾಡಿದೆ. ಭಾರತೀಯರಿಗಾಗಿಯೇ ಬಿಡುಗಡೆ ಮಾಡಲಾಗಿರುವ ಈ ಮಾರ್ಗದರ್ಶಿ ಸೂತ್ರಗಳು ಆರೋಗ್ಯಕರ ಆಹಾರ ಕ್ರಮವನ್ನು ದೇಶದೆಲ್ಲೆಡೆ ಪ್ರಚುರಪಡಿಸುವ ಉದ್ದೇಶವನ್ನು ಹೊಂದಿವೆ. ಈ ನಿರ್ದೇಶನಗಳಲ್ಲಿ ಅತಿಯಾಗಿ ಕಾಫಿ-ಚಹಾ ಸೇವನೆಯ ಅಡ್ಡ ಪರಿಣಾಮಗಳನ್ನೂ ತಿಳಿಸಲಾಗಿದೆ.

Cup of Tea

ಹೆಚ್ಚಾದರೆ ಏನಾಗುತ್ತದೆ?

ಕಾಫಿ-ಚಹಾ ಹೆಚ್ಚು ಕುಡಿದರೆ ಏನಾಗುತ್ತದೆ ಎನ್ನುವುದಕ್ಕೆ ಸಂಸ್ಥೆ ಸ್ಪಷ್ಟ ಉತ್ತರ ನೀಡಿದೆ. ಚಹಾ, ಕಾಫಿ ಹೆಚ್ಚು ಕುಡಿಯುವುದರಿಂದ ಆಹಾರದಲ್ಲಿನ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ದೇಹಕ್ಕೆ ತೊಡಕಾಗುತ್ತದೆ. ಕೆಫೇನ್‌ ಪೇಯಗಳಲ್ಲಿರುವ ಟ್ಯಾನಿನ್‌ಗಳು ಕಬ್ಬಿಣದಂಶ ಹೀರಿಕೊಳ್ಳಲು ಅಡ್ಡಿಪಡಿಸುತ್ತವೆ. ಇದರಿಂದ ಕಬ್ಬಿಣದಂಶದ ಕೊರತೆಯಾಗಿ ಅನೀಮಿಯ ಉಂಟಾಗಬಹುದು. ಜೊತೆಗೆ, ಕಾಫಿ-ಟೀ ಸೇವನೆ ಹೆಚ್ಚಾದರೆ ರಕ್ತದೊತ್ತಡ ಸ್ಥಿರವಾಗಿರದೆ, ಏರಿಳಿತ ಕಾಣಬಹುದು. ಹೃದಯದ ತೊಂದರೆಗಳು ಅಂಟಿಕೊಳ್ಳಬಹುದು.

ಯಾವಾಗ ಸೇವಿಸಬಹುದು?

ಹೊಟ್ಟೆ ತೀವ್ರವಾಗಿ ಹಸಿದಿದ್ದಾಗ, ಆಹಾರದ ಜೊತೆಗೆ ಅಥವಾ ಆಹಾರ ಸೇವಿಸಿದ ತಕ್ಷಣ ಕೆಫೇನ್‌ ಸೇವನೆ ಸರಿಯಲ್ಲ. ಬದಲಿಗೆ, ಆಹಾರ ಸೇವಿಸಿದ ಒಂದು ತಾಸಿನ ನಂತರ ಕಾಫಿ, ಚಹಾ ಕುಡಿಯಬಹುದು. ಇವುಗಳನ್ನು ಅತಿಯಾಗಿ ಕುಡಿಯುವುದು ಕೇಂದ್ರ ನರಮಂಡಲವನ್ನು ಪ್ರಚೋದಿಸುತ್ತದೆ. ಈ ಮೂಲಕ ವ್ಯಸನವನ್ನೂ ಉಂಟು ಮಾಡುತ್ತದೆ. ಹಾಗಾಗಿ ಇದನ್ನು ಮಿತಿಯಲ್ಲಿ ಇರಿಸಿಕೊಳ್ಳುವುದು ಸೂಕ್ತ.

Black and green tea

ದಿನಕ್ಕೆ ಎಷ್ಟು?

ಇದರರ್ಥ ಕಾಫಿ-ಚಹಾ ಕುಡಿಯುವುದೇ ಬೇಡ ಎಂಬುದಲ್ಲ. ಬದಲಿಗೆ ಮಿತಿ ನಿಗದಿ ಮಾಡಿಕೊಳ್ಳಿ ಎನ್ನುತ್ತದೆ ಈ ನಿರ್ದೇಶನ. ದಿನಕ್ಕೆ 300 ಎಂ.ಜಿ.ಗಿಂತ ಹೆಚ್ಚು ಕೆಫೇನ್‌ ಸೇವನೆ ಸೂಕ್ತವಲ್ಲ. ಆದರೆ ಅದನ್ನು ಲೆಕ್ಕ ಹಾಕುವುದು ಹೇಗೆ? ತಾಜಾ ಡಿಕಾಕ್ಷನ್‌ ತೆಗೆದ 150 ಎಂ.ಎಲ್‌. ಕಾಫಿಯಲ್ಲಿ 80ರಿಂದ 120 ಎಂ.ಜಿ. ಕೆಫೇನ್‌ ಇರುತ್ತದೆ. ಅಷ್ಟೇ ಪ್ರಮಾಣದ ಇನ್‌ಸ್ಟಂಟ್‌ ಕಾಫಿಯಲ್ಲಿ 50ರಿಂದ 65 ಎಂ.ಜಿ. ಕೆಫೇನ್‌ ಇರುತ್ತದೆ. ಒಂದು ಸರ್ವಿಂಗ್‌ ಚಹಾದಲ್ಲಿ 30ರಿಂದ 65 ಎಂ.ಜಿ.ವರೆಗೂ ಕೆಫೇನ್‌ ದೇಹಕ್ಕೆ ದೊರೆಯುತ್ತದೆ. ಈ ಪ್ರಮಾಣಗಳನ್ನು ತಿಳಿದುಕೊಂಡರೆ, ಕೆಫೇನ್‌ ಎಷ್ಟು ಸೇವಿಸುತ್ತಿದ್ದೇವೆ ಎಂಬುದನ್ನು ಲೆಕ್ಕ ಹಾಕುವುದಕ್ಕೆ ಕಷ್ಟವಾಗುವುದಿಲ್ಲ.

ಇದನ್ನೂ ಓದಿ: Hair Conditioner: ರಾಸಾಯನಿಕ ಹೇರ್‌ ಕಂಡೀಷನರ್‌ ಬಿಡಿ; ಈ 5 ನೈಸರ್ಗಿಕ ಹೇರ್ ಕಂಡೀಷನರ್ ಬಳಸಿ

ಹಾಲಿನ ಚಹಾ ಬೇಡ

ಭಾರತದಲ್ಲಿ ಚಹಾ ಎಂಬುದು ಪ್ರಾರಂಭವಾಗಿದ್ದು ಬ್ರಿಟೀಷರಿಂದ. ಇಂಗ್ಲಿಷ್‌ ಚಹಾ ಎಂದರೆ ಹಾಲು ಸೇರಿಸಿದ ಚಹಾ. ಬ್ಲ್ಯಾಕ್‌ ಟೀ, ಗ್ರೀನ್‌ ಟೀ, ಲೆಮೆನ್‌ ಟೀ ಇತ್ಯಾದಿಗಳೆಲ್ಲ ನಂತರದಲ್ಲಿ ಬಂದಿದ್ದು. ಆದರೆ ಹಾಲು ಬೆರೆಸಿದ ಚಹಾಗಿಂತ ಬ್ಲ್ಯಾಕ್‌ ಟೀ ಸೇವಿಸುವುದು ಒಳ್ಳೆಯದು ಎಂಬುದು ಐಸಿಎಂಆರ್‌ ಅಭಿಮತ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಬ್ಲ್ಯಾಕ್‌ ಟೀ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸುವ ಸಂಭವವಿದೆ. ಜೊತೆಗೆ, ಹೊಟ್ಟೆಯ ಕ್ಯಾನ್ಸರ್‌ ಭೀತಿಯನ್ನೂ ಕಡಿಮೆ ಮಾಡುತ್ತದೆ. ಹಾಗಾಗಿ ಹಾಲು ಬೆರೆಸಿದ ಚಹಾ ಸೇವನೆಯನ್ನು ಕಡಿಮೆ ಮಾಡಿ ಎಂಬುದು ಸಂಸ್ಥೆಯ ಕಿವಿಮಾತು.

Continue Reading

ವಿಜಯನಗರ

Food Department : ಜೀವಂತ ಇದ್ದವಳನ್ನು ಸತ್ತಿದ್ದಾಗಿ ಘೋಷಿಸಿದ ಆಹಾರ ಇಲಾಖೆ; ರೇಷನ್‌ ಕಾರ್ಡ್‌ನಿಂದಲೇ ಹೆಸರು ಡಿಲೀಟ್‌

Food Department : ತಾಯಿ-ಮಗ ಜೀವಂತವಾಗಿದ್ದರೂ, ಬದುಕಿಲ್ಲ ಎಂದು ಪಡಿತರ ಚೀಟಿಯಿಂದ (BPL Card) ಹೆಸರನ್ನೇ ಡಿಲೀಟ್‌ ಮಾಡಿದ್ದಾರೆ. ಸ್ಥಳ ಪರಿಶೀಲನೆ ಮಾಡದೆ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳದೇ ಆಹಾರ ಇಲಾಖೆಯ (ration card) ಅಧಿಕಾರಿಗಳ ಯಡವಟ್ಟಿಗೆ ಕಡು ಬಡತನದ ಕುಟುಂಬವೊಂದು ಪರದಾಡುತ್ತಿದೆ.

VISTARANEWS.COM


on

By

Food department deletes name from ration card list even though it is alive
Koo

ವಿಜಯನಗರ: ಜೀವಂತವಾಗಿರುವ ತಾಯಿ-ಮಗನನ್ನು ಸತ್ತಿದ್ದಾಗಿ ಘೋಷಿಸಿ, ಇಬ್ಬರನ್ನೂ ಪಡಿತರ ಚೀಟಿ (BPL Card) ಹೆಸರಿನಿಂದ ಆಹಾರ ಇಲಾಖೆಯು (Food Department) ಡಿಲೀಟ್ ಮಾಡಿದೆ. ವಿಜಯನಗರ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳ (ration card) ಯಡವಟ್ಟಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಅಂಜೀನಮ್ಮ ಮತ್ತು ಅವರ ಪುತ್ರ ಅಜಯ್ ಬದುಕಿದ್ದರೂ 2019ರಲ್ಲೇ ಸತ್ತಿದ್ದಾರೆ ಎಂದು ಬಿಪಿಎಲ್‌ ಕಾರ್ಡ್‌ನಿಂದ ಹೆಸರು ಡಿಲೀಟ್‌ ಮಾಡಲಾಗಿದೆ. ಕಳೆದ ಐದು ವರ್ಷದಿಂದ ಪಡಿತರದಿಂದ ಬಡ ಕುಟುಂಬವೊಂದು ವಂಚಿತವಾಗಿದೆ. ಆಹಾರ ಇಲಾಖೆ ಯಡವಟ್ಟಿನಿಂದ ಪಡಬಾರದ ಕಷ್ಟ ಪಡುತ್ತಿರುವ ಕುಟಂಬ ತಿಂಗಳ ಪಡಿತರಕ್ಕೂ ಅಲೆಯುತ್ತಿದೆ.

ಇದನ್ನೂ ಓದಿ: Road Accident : ಬಸ್‌ ಗುದ್ದಿದ ರಭಸಕ್ಕೆ ಕಾರು ಛಿದ್ರ ಛಿದ್ರ; ಚಾಲಕ ಸ್ಪಾಟ್‌ ಡೆತ್‌, ನಾಲ್ವರಿಗೆ ಗಾಯ

ಆಹಾರ ಇಲಾಖೆ ಯಾರದ್ದೋ ಮಾತು ಕೇಳಿ ಪಡಿತರ ಚೀಟಿಯಿಂದ ಹೆಸರು ಡಿಲೀಟ್ ಮಾಡಿದೆ. ಕೂಡ್ಲಿಗಿ ತಾಲೂಕಿನ ಅಂಜಿನಮ್ಮ ತೀರಾ ಕಡು ಬಡವರಾಗಿದ್ದು, ಆಹಾರ ಇಲಾಖೆಯ ಕೆಲಸಕ್ಕೆ ಇತರೇ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ರೇಷನ್ ಕಾರ್ಡ್ ಇಲ್ಲದೇ ಇರುವುದರಿಂದ ಗೃಹ ಲಕ್ಷ್ಮೀ ಯೋಜನೆಯ ಲಾಭವೂ ಅಂಜಿನಮ್ಮಗೆ ಸಿಕ್ಕಿಲ್ಲ.

ಇತ್ತ ನ್ಯಾಯಕ್ಕಾಗಿ ಅಂಜಿನಮ್ಮ ಕುಟುಂಬ ನಿತ್ಯ ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗೆ ಅಲೆದು ಸುಸ್ತಾಗಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಪಡಿತರ ಚೀಟಿಯಿಂದ ಹೆಸರು ತೆಗೆಯಬೇಕಾದರೆ ಅಧಿಕಾರಿಗಳು ಸ್ಪಾಟ್‌ ವಿಸಿಟ್‌ ಮಾಡಬೇಕು. ಪಡಿತರ ಚೀಟಿಯಲ್ಲಿ ಇರುವವರು ಬದುಕಿದ್ದಾರಾ ಇಲ್ವಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಅಧಿಕಾರಿಗಳು ಪರಿಶೀಲಿಸದೇ ಹೀಗೆ ಅಂಜೀನಮ್ಮ ಹೆಸರು ತೆಗೆದಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆಹಾರ/ಅಡುಗೆ

History Of Ice Cream: ಎಲ್ಲರ ನೆಚ್ಚಿನ ಐಸ್‌ಕ್ರೀಮ್‌ ಹುಟ್ಟಿದ್ದು ಹೇಗೆ?

ಐಸ್‌ಕ್ರೀಮ್‌ ಪ್ರಿಯರಿಗೆ (History Of Ice Cream) ಕಾಲ-ದೇಶ-ಪಾತ್ರಗಳ ಹಂಗಿಲ್ಲ. ಚಳಿ-ಮಳೆ-ಬಿಸಿಲು ಎಂಬ ಭೇದವಿಲ್ಲದೆ, ಹಗಲು-ರಾತ್ರಿಗಳ ಲಕ್ಷ್ಯವಿಲ್ಲದಂತೆ ಐಸ್‌ಕ್ರೀಮ್‌ ತಿನ್ನಬಲ್ಲರು. ವಯಸ್ಸಿನ ಭೇದವನ್ನೂ ಮೀರಿ ಇಷ್ಟೊಂದು ಮೆಚ್ಚಾಗಿರುವ ಐಸ್‌ಕ್ರೀಮ್‌ (Ice Cream) ಹುಟ್ಟಿದ್ದು ಯಾವಾಗ? ಕುತೂಹಲಕರ ಹಿನ್ನೋಟ ಇಲ್ಲಿದೆ.

VISTARANEWS.COM


on

History Of Ice Cream
Koo

ಬೇಸಿಗೆಯನ್ನು ದೂರುವವರು (History Of Ice Cream) ಇರುವಂತೆಯೇ ಅದನ್ನು ಇಷ್ಟ ಪಡುವವರೂ ಇದ್ದಾರೆ. ಯಾಕೆ ಇಷ್ಟ ಬೇಸಿಗೆ ಎಂದು ಕೇಳಿದರೆ ಜ್ಯೂಸ್‌, ಎಳನೀರು ಮುಂತಾದ ತಂಪು ಪೇಯಗಳನ್ನು ಕುಡಿಯುವುದಕ್ಕೆ ಎನ್ನುವವರಿರಬಹುದು; ಆದರೆ ಐಸ್‌ಕ್ರೀಮ್‌ (Ice Cream) ಮೆಲ್ಲುವುದಕ್ಕೆ ಎನ್ನುವವರದ್ದೇ ಬಹುಮತ. ತರಹೇವಾರಿ ಬಣ್ಣ, ಆಕಾರ, ರುಚಿಗಳಲ್ಲಿ ದೊರೆಯುವ ಇವುಗಳನ್ನೇ ನಂಬಿ-ನೆಚ್ಚಿ ಬದುಕಿದವರಿದ್ದಾರೆ. ಹಾಗಾಗಿ ಉಳಿದೆಲ್ಲ ತಿನಿಸುಗಳನ್ನೂ ಮೀರಿಸಿದ್ದು ಇವುಗಳ ಜನಪ್ರಿಯತೆ. ಹಾಗೆಂದೇ ಐಸ್‌ಕ್ರೀಮ್‌ ಪ್ರಿಯರಿಗೆ ಕಾಲ-ದೇಶ-ಪಾತ್ರಗಳ ಹಂಗಿಲ್ಲ. ಚಳಿ-ಮಳೆ-ಬಿಸಿಲು ಎಂಬ ಭೇದವಿಲ್ಲದೆ, ಹಗಲು-ರಾತ್ರಿಗಳ ಲಕ್ಷ್ಯವಿಲ್ಲದಂತೆ ಐಸ್‌ಕ್ರೀಮ್‌ ತಿನ್ನಬಲ್ಲರು. ವಯಸ್ಸಿನ ಭೇದವನ್ನೂ ಮೀರಿ ಇಷ್ಟೊಂದು ಮೆಚ್ಚಾಗಿರುವ ಐಸ್‌ಕ್ರೀಮ್‌ ಹುಟ್ಟಿದ್ದು (Ice Cream) ಯಾವಾಗ? ಶತಮಾನಗಳಿಂದ ವಿಕಾಸಕೊಳ್ಳುತ್ತಲೇ ಬಂದಿರುವ ಇದು ನಡೆದಿರುವ ಹಾದಿ ಹೇಗಿದೆ ಎಂಬ ಕುತೂಹಲದ ನೋಟವಿದು.

Ice Cream

ಹುಟ್ಟಿದ್ದು ಎಲ್ಲಿ?

ಹಳೆಯ ಮೆಸಪೊಟೇಮಿಯ ನಾಗರಿಕತೆಯಲ್ಲಿ ಯೂಫ್ರೆಟಿಸ್‌ ನದಿಯ ದಂಡೆಯಲ್ಲಿ ಐಸ್‌ ಮನೆಗಳಂತೆ ಮಾಡಿ, ಅಲ್ಲಿ ವಸ್ತುಗಳನ್ನು ತಣ್ಣಗೆ ಇರಿಸಿಕೊಳ್ಳುತ್ತಿದ್ದಂತೆ. ಇದೀಗ ಕ್ರಿ.ಪೂ. 4000 ವರ್ಷಗಳ ಹಿಂದಿನ ಕಥೆ! ಅಂದರೆ, ತಣ್ಣಗಿನ ವಸ್ತುಗಳನ್ನು ತಿನ್ನುವ ಖಯಾಲಿ ಅಷ್ಟೊಂದು ಸಾವಿರ ವರ್ಷಗಳ ಹಿಂದೆಯೇ ಮನುಷ್ಯರಿಗಿತ್ತು ಎಂದಾಯಿತು. ಹಳೆಯ ಅಥೆನ್ಸ್‌ನಲ್ಲಿ ವೈನ್‌ಗಳನ್ನು ತಣ್ಣಗಿರಿಸಲು ಐಸ್‌ ಬಳಸುತ್ತಿದ್ದ ಕಥೆಗಳಿವೆ. ಪ್ರಾಚೀನ ಚೀನಾದಲ್ಲಿ ಟಾಂಗ್‌ ರಾಜವಂಶದವರು ಹಾಲಿನಿಂದ ಮಾಡಿದ ಖಾದ್ಯಗಳನ್ನು ಹೀಗೆ ತಣ್ಣಗಾಗಿಸಿ ತಿನ್ನುತ್ತಿದ್ದ ಉಲ್ಲೇಖಗಳಿವೆ. ಭಾರತದಲ್ಲಿ ಮೊಘಲರೂ ಗಟ್ಟಿಯಾದ ಕೆನೆಭರಿತ ಹಾಲಿನಲ್ಲಿ ಕುಲ್ಫಿಯಂಥವನ್ನು ಮಾಡಿ ಸವಿಯುತ್ತಿದ್ದರಂತೆ. ಇವೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಇಂದಿನ ಐಸ್‌ಕ್ರೀಮಿನ ಪೂರ್ವಸ್ಥಿತಿಗಳು ಎಂದು ಹೇಳಲಾಗುತ್ತದೆ.

ಐಸ್‌ಕ್ರೀಮ್‌ನ ಆಧುನಿಕ ರೂಪ

ಈ ತಿನಿಸಿಗಿರುವ ಇಂದಿನ ರೂಪದ ಸಮೀಪಕ್ಕೆ ಮೊದಲು ಬಂದಿದ್ದು ಇಟಲಿಯಲ್ಲಿ, ಹದಿನೇಳನೇ ಶತಮಾನದ ನಡುವಿಗೆ. ನಂತರ, ಫ್ರಾನ್ಸ್‌, ಸ್ಪೇನ್‌ ಸೇರಿದಂತೆ ಯುರೋಪ್‌ನೆಲ್ಲೆಡೆ ಮೇಜವಾನಿಗಳ ಮೋಜು ಹೆಚ್ಚಿಸುವ ನೆಚ್ಚಿನ ವಸ್ತುವಾಯಿತು ಇದು. 1671ರಲ್ಲಿ ಬ್ರಿಟನ್‌ನ ರಾಜ ಎರಡನೇ ಚಾರ್ಲ್ಸ್‌ ಮೊದಲಿಗೆ ಐಸ್‌ಕ್ರೀಮ್‌ ಸವಿದ ದಾಖಲೆಗಳಿವೆ. ಆದರೆ ಇದರಿಂದಲೇ ಆರೋಗ್ಯದ ತುರ್ತು ಪರಿಸ್ಥಿತಿ ಇಂಗ್ಲೆಂಡ್‌ನಲ್ಲಿ ಉದ್ಭವವಾಗಿತ್ತು ಮಾತ್ರ ಕುತೂಹಲಕರ ಸಂಗತಿ.

Penny Lick

ʻಪೆನ್ನಿ ಲಿಕ್‌ʼ

19ನೇ ಶತಮಾನದ ಹೊತ್ತಿಗೆ ಇಂಗ್ಲೆಂಡ್‌ನಲ್ಲಿ ಇದೆಷ್ಟು ಜನಪ್ರಿಯವಾಯಿತೆಂದರೆ, ರಾಜರ, ಶ್ರೀಮಂತರ ಊಟದ ಟೇಬಲ್‌ನ ಸೀಮೆಯನ್ನು ಮೀರಿ, ಬೀದಿಬೀದಿಗಳಲ್ಲಿ ಮಾರಾಟವಾಗತೊಡಗಿತು. ಒಂದು ʻಪೆನ್ನಿʼಗೆ (ಅಲ್ಲಿನ ಪೈಸೆ) ಪುಟ್ಟ ಕಪ್‌ನಲ್ಲಿ ಐಸ್‌ಕ್ರೀಮ್‌ ತುಂಬಿಸಿ ಕೊಡಲಾಗುತ್ತಿತ್ತು. ಇದನ್ನು ನೆಕ್ಕಿ ಸ್ವಚ್ಛ ಮಾಡಿ ಗ್ರಾಹಕರು ಮರಳಿ ನೀಡುತ್ತಿದ್ದರು. ಇದು ʻಪೆನ್ನಿ ಲಿಕ್‌ʼ ಎಂದೇ ಪ್ರಸಿದ್ಧವಾಯಿತು. ಇದೆಷ್ಟು ಜನಪ್ರಿಯವಾಯಿತೆಂದರೆ ಬರುವ ಗ್ರಾಹಕರಿಗೆ ಐಸ್‌ಕ್ರೀಮ್‌ ಕಪ್‌ಗಳನ್ನು ತೊಳೆದು ತುಂಬಿಸಿಕೊಡುವಷ್ಟು ವ್ಯವಧಾನವಿಲ್ಲದ ವ್ಯಾಪಾರಿಗಳು, ಸ್ವಚ್ಛತೆಯನ್ನು ಕಡೆಗಣಿಸಿದರು. ಇದರಿಂದ ಕಾಲರಾ, ಕ್ಷಯದಂಥ ರೋಗಗಳು ತೀವ್ರವಾಗಿ ಹರಡಲಾರಂಭಿಸಿದವು. 1879ರಲ್ಲಿ ಕಾಲರಾ ಸಾಂಕ್ರಾಮಿಕ ಹರಡಿದ್ದು ʻಪೆನ್ನಿ ಲಿಕ್‌ʼನಿಂದಾಗಿಯೇ ಎಂದು ಅಲ್ಲಿನ ಆರೋಗ್ಯ ದಾಖಲೆಗಳು ಹೇಳುತ್ತವೆ.
ಅಂತಿಮವಾಗಿ ʻಪೆನ್ನಿ ಲಿಕ್‌ʼ ಮೇಲೆ ನಿಷೇಧ ಹೇರಲಾಯಿತು. ಇದರ ಪರಿಣಾಮವೆಂದರೆ ಹೊಸ ಆವಿಷ್ಕಾರಗಳನ್ನು ವರ್ತಕರು ಮಾಡಿದ್ದು. ಐಸ್‌ಕ್ರೀಮ್‌ ಕೋನ್‌ಗಳು ರೂಪುಗೊಂಡಿದ್ದು ಹೀಗೆ. ಸ್ವಚ್ಛತೆಯ ರಗಳೆಯಿಲ್ಲದೆ, ಕಪ್‌ ತೊಳೆದಿದ್ದಾರೋ ಇಲ್ಲವೋ ಎಂಬ ಹೆದರಿಕೆಗೆ ಅವಕಾಶವಿಲ್ಲದಂತೆ ಯಾರು, ಎಲ್ಲಿ ಬೇಕಾದರೂ ಸೇವಿಸಬೇಕಾದಂತೆ ಕೋನ್‌ಗಳನ್ನು ಸಿದ್ಧಪಡಿಸಲಾಯಿತು. ಹಾಗೆಯೇ ಕಡ್ಡಿ ಚುಚ್ಚಿ ಕೊಡುವ ಇನ್ನೂ ಅಗ್ಗದ ಕ್ಯಾಂಡಿಗಳು ಸಹ ಪ್ರಚಾರಕ್ಕೆ ಬಂದವು.

ಇದನ್ನೂ ಓದಿ: Food Tips Kannada: ಸಸ್ಯಾಹಾರಿಗಳಿಗೆ ಒಮೇಗಾ 3 ಕೊಬ್ಬಿನಾಮ್ಲ ಯಾವುದರಲ್ಲಿ ದೊರೆಯುತ್ತದೆ?

ಅಲ್ಲಿಂದ ಮುಂದುವರಿದು, ಹೊಸ ರುಚಿಗಳು, ಫ್ಲೇವರ್‌ಗಳು ರೂಪುಗೊಂಡವು. ಸರಳವಾದ ವೆನಿಲಾದಿಂದ ಹಿಡಿದು, ನಾನಾ ರೀತಿಯ ʻಸಂಡೇʼ ಫ್ಲೇವರ್‌ಗಳು, ಕಾಯಿ-ಬೀಜಗಳನ್ನು ಒಳಗೊಂಡ ದುಬಾರಿ ಬೆಲೆಯವು, ಎಲ್ಲೆಲ್ಲೋ ಬೆಳೆಯುವ ಹಣ್ಣುಗಳನ್ನು ಸೇರಿಸಿಕೊಂಡವು- ಹೀಗೆ ಲೆಕ್ಕವಿಲ್ಲದಷ್ಟು ನಮೂನೆಯ ಐಸ್‌ಕ್ರೀಮ್‌ಗಳು ಈಗ ಲಭ್ಯವಾಗುತ್ತವೆ. ಸುಡು ಬೇಸಿಗೆಯನ್ನು ಸಹನೀಯವಾಗಿಸಿ, ಮಕ್ಕಳಿಗೆ ಮೋಜು ನೀಡುತ್ತಿವೆ. ಆದರೆ ಅದು ಬೆಳೆದುಬಂದ ಚರಿತ್ರೆಯನ್ನು ನೋಡಿದಾಗ, ಎಷ್ಟೊಂದು ಶತಮಾನಗಳ ಹಿಂದೆ ಐಸ್‌ಕ್ರೀಮ್‌ನ ಈ ಪಯಣ ಆರಂಭವಾಯಿತು ಎಂಬುದು ತಿಳಿಯುತ್ತದೆ. ಜೊತೆಗೆ, ಸದಾಕಾಲ ವಿಕಾಸಗೊಳ್ಳುತ್ತಲೇ ಇರುವ ಮಾನವನ ಜಿಹ್ವಾ ಚಾಪಲ್ಯದ ಇತಿಹಾಸವೂ ಅನಾವರಣಗೊಳ್ಳುತ್ತದೆ.

Continue Reading
Advertisement
Drown in pond
ಕರ್ನಾಟಕ2 mins ago

Drowns in Farm Pond: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

Ebrahim Raisi
ವಿದೇಶ2 mins ago

Ebrahim Raisi: ಹೆಲಿಕಾಪ್ಟರ್‌ ಪತನದಲ್ಲಿ ಇರಾನ್‌ ಅಧ್ಯಕ್ಷ ದುರಂತ ಸಾವು; ಇಸ್ರೇಲ್ ಫಸ್ಟ್‌ ರಿಯಾಕ್ಷನ್‌ ಏನು?

2nd Puc Exam
ಬೆಂಗಳೂರು3 mins ago

2nd PUC Exam : ದ್ವಿತೀಯ ಪಿಯುಸಿ ಪರೀಕ್ಷೆ-3ರ ವೇಳಾಪಟ್ಟಿ ಪ್ರಕಟ; ನೋಂದಣಿಗೂ ಡೇಟ್‌ ಫಿಕ್ಸ್‌

RCB vs RR
ಕ್ರೀಡೆ15 mins ago

RCB vs RR: ಆರ್​ಸಿಬಿ-ರಾಜಸ್ಥಾನ್ ತಂಡಗಳ​ ಐಪಿಎಲ್​ ​ಪ್ಲೇ ಆಫ್/ನಾಕೌಟ್ ದಾಖಲೆ ಹೇಗಿದೆ?

India Skills National Competition 2024 Grand Finale 58 Winners to Represent India at World Skills
ದೇಶ18 mins ago

India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

Cm Siddaramaiah hits out at BJP for Gaurantee Scheme
ರಾಜಕೀಯ20 mins ago

CM Siddaramaiah: ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ

Meghana Raj Mother Day Gift Shopping to mother
ಸ್ಯಾಂಡಲ್ ವುಡ್22 mins ago

Meghana Raj: ಅಮ್ಮನಿಗೆ ಚಿನ್ನದ ಓಲೆ ಗಿಫ್ಟ್‌ ಕೊಟ್ಟ ಮೇಘನಾ ರಾಜ್‌; ಕಣ್ಣೀರಿಟ್ಟ ಪ್ರಮೀಳಾ

Prashant Kishor
ದೇಶ30 mins ago

Prashant Kishor: ಮೋದಿ ಮೇಲೆ ಜನರಿಗೆ ಎಳ್ಳಷ್ಟೂ ಸಿಟ್ಟಿಲ್ಲ ಎಂದ ಪ್ರಶಾಂತ್‌ ಕಿಶೋರ್;‌ ಕೊಟ್ಟ ಕಾರಣ ಹೀಗಿದೆ

Ujjivan Small Finance Bank
ವಾಣಿಜ್ಯ30 mins ago

Ujjivan Small Finance Bank : ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಲಾಭಾಂಶ ಹೆಚ್ಚಳ

Kempegowda International Airport parking
ಬೆಂಗಳೂರು46 mins ago

Kempegowda International Airport: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲೂ ಹಣ ಕೊಡಬೇಕು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌