Guava Benefits: ಸೀಬೆ ಹಣ್ಣು ಎಂಬ ʻಸೂಪರ್‌ ಫುಡ್ʼ; ಇದು ಔಷಧೀಯ ಗುಣಗಳ ಕಣಜ! - Vistara News

ಆರೋಗ್ಯ

Guava Benefits: ಸೀಬೆ ಹಣ್ಣು ಎಂಬ ʻಸೂಪರ್‌ ಫುಡ್ʼ; ಇದು ಔಷಧೀಯ ಗುಣಗಳ ಕಣಜ!

ಸೀಬೇಹಣ್ಣಿನಲ್ಲಿರುವಷ್ಟು ಔಷಧೀಯ ಗುಣಗಳು (guava benefits) ಬೇರಾವ ಹಣ್ಣುಗಳಲ್ಲೂ ಸಿಗಲಿಕ್ಕಿಲ್ಲ. ಈ ಹಣ್ಣಿನಲ್ಲಿ ಎಲ್ಲ ಬಗೆಯ ರೋಗಗಳಿಗೂ ಉತ್ತರವಿದೆ. ಜೊತೆಗೆ ಬ್ಯಾಕ್ಟೀರಿಯಾಗಳನ್ನು ದೇಹದಿಂದ ಹೊರಗಟ್ಟುವ ಸಾಮರ್ಥ್ಯವಿದೆ.

VISTARANEWS.COM


on

Guava Benefits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪೇರಳೆ ಅಥವಾ ಸೀಬೇಹಣ್ಣು ಅಥವಾ ಚೇಪೇಕಾಯಿ ʻಹಣ್ಣುಗಳ ರಾಣಿʼ ಎಂಬುದು ನಿಮಗೆ ಗೊತ್ತೇ? ಹೌದು. ಸೀಬೇಹಣ್ಣಿನಲ್ಲಿರುವಷ್ಟು ಔಷಧೀಯ ಗುಣಗಳು ಬೇರಾವ ಹಣ್ಣುಗಳಲ್ಲೂ ಸಿಗಲಿಕ್ಕಿಲ್ಲ. ಈ ಹಣ್ಣಿನಲ್ಲಿ ಎಲ್ಲ ಬಗೆಯ ರೋಗಗಳಿಗೂ ಉತ್ತರವಿದೆ. ಜೊತೆಗೆ ಬ್ಯಾಕ್ಟೀರಿಯಾಗಳನ್ನು ದೇಹದಿಂದ ಹೊರಗಟ್ಟುವ ಸಾಮರ್ಥ್ಯವಿದೆ. ಇದರಲ್ಲಿರುವ ಪೋಷಕಾಂಶಗಳಿಗೆ, ಉರಿಯೂತಗಳು, ಋತುಗಳಿಗನುಸಾರವಾಗಿ ವಕ್ಕರಿಸುವ ಸಾಮಾನ್ಯ ರೋಗಗಳನ್ನು (guava benefits) ಬಡಿದಟ್ಟುವ ಗುಣವಿದೆ. ಅಷ್ಟೇ ಅಲ್ಲ, ಜೀರ್ಣಕ್ರಿಯೆ, ಹೃದಯದ ಆರೋಗ್ಯ, ಮಧುಮೇಹ ಹೀಗೆ ಹಲವು ಸಮಸ್ಯೆಗಳಿಗೆ ಪರಿಹಾರವಿದೆ. ಅದಕ್ಕೇ ಸೀಬೆ ಹಣ್ಣುಗಳ ರಾಣಿ!

guava fruits

ಆದರೆ, ಸೀಬೆ ಹಣ್ಣನ್ನು ಕಂಡರೆ ನಮಗ್ಯಾಕೋ ಸದರ. ಮಾರುಕಟ್ಟೆಯಲ್ಲಿ ಯಾವು ಯಾವುದೋ ಊರುಗಳಿಂದ ಲಗ್ಗೆಯಿಡುವ ಥಳಥಳಿಸುವ ಸ್ಟಿಕ್ಕರ್‌ ಅಂಟಿಸಿ ಬರುವ ಹಣ್ಣುಗಳನ್ನು ತಿನ್ನುವ ನಾವು, ಮನೆಯಂಗಳದಲ್ಲೇ ಬೆಳವ, ಸ್ಥಳೀಯ ಹಣ್ಣಾದ ಸೀಬೆಯ ಬಗ್ಗೆ ನಿರ್ಲಕ್ಷ್ಯ ತಾಳುತ್ತೇವೆ. ಆದರೆ, ಸೀಬೆಯ ಗುಣಗಳನ್ನು ತಿಳಿದರೆ, ನಾವು ಯಾಕೆ ಈ ಹಣ್ಣನ್ನು ತಿನ್ನುವುದು ಅಗತ್ಯ ಎಂಬ ಮನವರಿಕೆಯಾದೀತು. ಬನ್ನಿ, ಸೀಬೆ ಹಣ್ಣಿನ ಅದ್ಭುತ ಲಾಭಗಳನ್ನು ತಿಳಿಯೋಣ.

Diabetic

ಮಧುಮೇಹಿಗಳಿಗೆ ಒಳ್ಳೆಯದು

ಸೀಬೆಯ ಚಿಗುರೆಲೆಗಳ ಸೇವನೆ ಮಧುಮೇಹಿಗಳಿಗೆ ಬಹಳ ಒಳ್ಳೆಯದು. ಇದು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್‌ ಮಟ್ಟದಲ್ಲಿ ಏರುಪೇರು ಸಮಸ್ಯೆ ಇರುವ ಮಂದಿಗೂ ಇದು ಬಹಳ ಒಳ್ಳೆಯದು. ನಿತ್ಯವೂ ಪೇರಳೆಯ ಚಿಗುರೆಲೆ ಚಹಾ ಮಾಡಿ ಕುಡಿದರೆ, ಮಧುಮೇಹಿಗಳು ಫಲಿತಾಂಶ ಕಾಣಬಹುದು.

ಇದು ಹೃದಯಸ್ನೇಹಿ

ಸೀಬೆ ಹಣ್ಣು ಹೃದಯ ಸ್ನೇಹಿ. ಹೃದಯದ ಆರೋಗ್ಯ ಕಾಪಾಡುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಹಾಗೂ ವಿಟಮಿನ್‌ಗಳು ಫ್ರೀ ರ್ಯಾಡಿಕಲ್‌ಗಳ ಮೂಲಕ ಹೃದಯಕ್ಕೆ ಹಾನಿಯಾಗುವುದನ್ನು ತಪ್ಪಿಸುತ್ತವೆ. ಅಷ್ಟೇ ಅಲ್ಲ, ಇದರಲ್ಲಿ ಹೆಚ್ಚು ಪೊಟಾಶಿಯಂ ಇದ್ದು, ಇದು ಹೃದಯಕ್ಕೆ ಒಳ್ಳೆಯದು. ಪೇರಳೆ ಎಲೆಯು ಅಧಿಕ ರಕ್ತದೊತ್ತಡವನ್ನೂ ಕಡಿಮೆಗೊಳಿಸುತ್ತದೆ. ಕೆಟ್ಟ ಕೊಲೆಸ್ಟರಾಲ್‌ ಅನ್ನೂ ಹತೋಟಿಗೆ ತರುತ್ತದೆ. ಆ ಮೂಲಕ ಪರೋಕ್ಷವಾಗಿ ಹೃದಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ.

ಇದು ಸೂಪರ್‌ ಫುಡ್‌ ಏಕೆಂದರೆ

ಸೀಬೆಹಣ್ಣು ಒಂದು ಸೂಪರ್‌ಫುಡ್‌. ಯಾಕೆ ಗೊತ್ತಾ? ಇದರಲ್ಲಿ ಬಹುತೇಕ ಎಲ್ಲ ಪೋಷಕಾಂಶಗಳೂ ಸಮೃದ್ಧವಾಗಿವೆ. ಇದರಲ್ಲಿ ಫೋಲಿಕ್‌ ಆಸಿಡ್‌, ವಿಟಮಿನ್‌ ಬಿ೯ಗಳೂ ಇರುವುದರಿಂದ ಇದು ಸಣ್ಣ ಮಕ್ಕಳ ಮೆದುಳು ಹಾಗೂ ನರಮಂಡಲದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗಾಗಿ ಗರ್ಭಿಣಿ ಸ್ತ್ರೀಯರು ಸೇಬುಹಣ್ಣನ್ನು ತಿನ್ನುವುದು ಒಳ್ಳೆಯದು.

weight loss

ತೂಕ ಇಳಿಸಲು ಅನುಕೂಲ

ತೂಕ ಇಳಿಸುವ ಮಂದಿಗೂ ಇದು ಶುಭಸುದ್ದಿ. ಸೀಬೆ ಅತ್ಯಂತ ಕಡಿಮೆ ಕ್ಯಾಲರಿ ಇರುವ ಹಣ್ಣು. ಅಷ್ಟೇ ಅಲ್ಲ ಇದರಲ್ಲಿ ನಾರಿನಂಶವೂ ಇರುವುದರಿಂದ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಜೊತೆಗೆ ಈ ಹಣ್ಣಿನಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆಯ ಅಂಶ ಇರುವುದರಿಂದ ಹೊಟ್ಟೆ ತುಂಬಿಸುವ ಜೊತೆಗೆ ತೂಕವನ್ನೂ ಇಳಿಸುತ್ತದೆ.

ಕ್ಯಾನ್ಸರ್‌ ನಿರೋಧಕ

ಸೀಬೆಹಣ್ಣಿನಲ್ಲಿ ಲೈಕೋಪೀನ್‌ ಎಂಬ ಆಂಟಿ ಆಕ್ಸಿಡೆಂಟ್‌ ಇದ್ದು, ಇದು ಕ್ಯಾನ್ಸರ್‌ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ.

 fresh guava fruit

ಹೇರಳ ವಿಟಮಿನ್‌ ಎ

ಸೀಬೆಹಣ್ಣಿನಲ್ಲಿ ವಿಟಮಿನ್‌ ಎ ಹೇರಳವಾಗಿ ಇರುವುದರಿಂದ ಕಣ್ಣಿನ ಆರೋಗ್ಯಕ್ಕೂ ಸೀಬೆ ಒಳ್ಳೆಯದು. ವಯಸ್ಸಾಗುತ್ತಿದ್ದ ಹಾಗೆ ಕಾಡುವ ಕಣ್ಣಿನ ಪೊರೆಯಂಥ ಸಮಸ್ಯೆಗಳನ್ನು ಬಹುಬೇಗನೆ ಬರದಂತೆ ಇದು ತಡೆಯುತ್ತದೆ.

ಮಾಂಸಖಂಡಗಳಿಗೆ ಅನುಕೂಲ

ಸೀಬೆಯಲ್ಲಿ ಮೆಗ್ನೀಶಿಯಂ ಕೂಡಾ ಹೇರಳವಾಗಿ ಇರುವುದರಿಂದ ಇದು ದಣಿದ ಮಾಂಸಖಂಡಗಳು ಹಾಗೂ ನರಮಂಡಲವನ್ನು ರಿಲ್ಯಾಕ್ಸ್‌ ಮಾಡಿಸಲು ಸಹಾಯ ಮಾಡುತ್ತದೆ. ಮಾನಸಿಕ ಆರೋಗ್ಯಕ್ಕೂ ಇದು ಒಳ್ಳೆಯದು. ಅಷ್ಟೇ ಅಲ್ಲ, ಇದರಲ್ಲಿರುವ ಮ್ಯಾಂಗನೀಸ್‌, ದೇಹ ಸಮರ್ಪಕವಾಗಿ ಆಹಾರಗಳಿಂದ ಪೋಷಕಾಂಶಗಳನ್ನು ಹೀರಲು ಪ್ರಚೋದಿಸುತ್ತದೆ.

ಇದನ್ನೂ ಓದಿ: Tips to Keep Joints Healthy: ಹೀಗೆ ಮಾಡಿ, ಕೀಲುಗಳ ಸ್ವಾಸ್ಥ್ಯ ಕಾಪಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

World Hearing Day 2024: ಇಂದು ವಿಶ್ವ ಶ್ರವಣ ದಿನ: ಈ ಜಗತ್ತಿನ 150 ಕೋಟಿ ಜನರಿಗೆ ಕಿವುಡತನ ಸಮಸ್ಯೆ!

ವಿಶ್ವ ಶ್ರವಣ ದಿನಾಚರಣೆಯ ಈ ಸಂದರ್ಭದಲ್ಲಿ ರಿಹ್ಯಾಬಿಲಿಟೇಷನ್ ಟ್ರಸ್ಟ್ ಸಹಯೋಗದೊಂದಿಗೆ “ನಾಯಕ್ – ವಾಕ್-ಶ್ರವಣ ಸಂಸ್ಥೆ” ಮಕ್ಕಳಿಗೆ ಉಚಿತ ಶ್ರವಣ ತಪಾಸಣಾ ಕೇಂದ್ರವನ್ನು ಆರಂಭಿಸಲಿದೆ.

VISTARANEWS.COM


on

World Hearing Day
Koo

ಶ್ರವಣ ದೋಷದ ಸಮಸ್ಯೆ ವಿಶ್ವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ವಿಶ್ವ ಆರೋಗ್ಯ ಸಂಸ್ಥೆಯ ಆಧ್ಯಯನ ವರದಿಯ ಪ್ರಕಾರ ಜಗತ್ತಿನಲ್ಲಿ 150 ಕೋಟಿ ಮಂದಿ ಕಿವುಡುತನ ಸಹಿತ ನಾನಾ ರೀತಿಯ ಶ್ರವಣ ದೋಷ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2050ರಲ್ಲಿ ಈ ಸಮಸ್ಯೆಯಿಂದ ಬಳಲುವವರ ಸಂಖ್ಯೆ 250 ಕೋಟಿಗೆ ತಲುಪಲಿದೆ.
ಮಾರ್ಚ್ 3 ರಂದು ಪ್ರಪಂಚದಾದ್ಯಂತ ವಿಶ್ವ ಶ್ರವಣ ದಿನವನ್ನು (World Hearing Day 2024) ಆಚರಿಸಲಾಗುತ್ತದೆ. ಶ್ರವಣ ನ್ಯೂನ್ಯತೆಯನ್ನು ತಡೆಗಟ್ಟಲು ಮತ್ತು ಕಿವಿ ಹಾಗೂ ಶ್ರವಣ ಆರೈಕೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯಸಂಸ್ಥೆ ವಿಶ್ವ ಶ್ರವಣ ದಿನವನ್ನು ಆಚರಿಸುತ್ತದೆ.

2024ರ ವಿಷಯ “ಮನಸ್ಥಿತಿಗಳನ್ನು ಬದಲಾಯಿಸಿ: ಸರ್ವರಿಗೂ ಕಿವಿ ಮತ್ತು ಶ್ರವಣ ಆರೈಕೆಯನ್ನು ನಿಜವಾಗಿಸೋಣʼ.
ಈ ವರ್ಷ ವಿಶ್ವ ಶ್ರವಣ ದಿನ ಸಾರ್ವಜನಿಕರು ಮತ್ತು ವೈದ್ಯಕೀಯ ಸೇವೆ ಒದಗಿಸುವವರಲ್ಲಿ ಅರಿವು ಮೂಡಿಸುವುದು ಹಾಗೂ ಮಾಹಿತಿ ಹಂಚುವ ಮೂಲಕ ಸಮಾಜದ ತಪ್ಪುಗ್ರಹಿಕೆಗಳು ಮತ್ತು ಕಳಂಕಿತ ಮನಸ್ಥಿತಿಗಳಿಂದ ಎದುರಾಗುವ ಸವಾಲುಗಳನ್ನು ನಿವಾರಿಸುವ ಪ್ರಮುಖ ಉದ್ದೇಶವಾಗಿದೆ.

ಜಾಗತಿಕವಾಗಿ ಕಿವಿ ಮತ್ತು ಶ್ರವಣ ಆರೈಕೆಯ ಅಗತ್ಯವಿರುವ ಶೇ.80ರಷ್ಟು ಜನ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಿಲ್ಲ ಎಂದು ವಿಶ್ವ ಸಂಸ್ಥೆ ಗುರುತಿಸಿದೆ. ನ್ಯೂನ್ಯತೆಯ ಬಗ್ಗೆ ಸಾಮಾಜಿಕ ತಪ್ಪುಗ್ರಹಿಕೆಗಳು ಮತ್ತು ಕಳಂಕಿತ ಮನಸ್ಥಿತಿಗಳು ಶ್ರವಣ ನ್ಯೂನ್ಯತೆಯನ್ನು ತಡೆಗಟ್ಟುವ ಮತ್ತು ಪರಿಹರಿಸುವ ಪ್ರಯತ್ನಗಳಿಗೆ ಅಡ್ಡಿಯಾಗುವ ಅಂಶಗಳಾಗಿವೆ. ಹೀಗಾಗಿ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಸಾರ್ವಜನಿಕರಲ್ಲಿ ಸರಿಯಾದ ಗ್ರಹಿಕೆಗಳನ್ನು ಮರುರೂಪಿಸಲು ಸತ್ಯಾಧಾರಿತ ಮಾಹಿತಿಗಳನ್ನು ಹಂಚುವುದು ಕಿವಿ ಮತ್ತು ಶ್ರವಣ ಆರೈಕೆಗೆ ಅಗತ್ಯವಿರುವ ಎಲ್ಲರಿಗೂ ಅತ್ಯಗತ್ಯವಾದ ಆರೋಗ್ಯ ಸೇವೆ ಪಡೆಯುವಂತಾಗಲು ಅವಕಾಶ ದೊರಕಿಸಿಕೊಡಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ | Raja Marga Column : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಇಲ್ಲಿದೆ 10 ಸೂತ್ರ

ಶ್ರವಣ ನ್ಯೂನ್ಯತೆಯು ವ್ಯಕ್ತಿಯ ಮಾತು – ಭಾಷೆ, ಕಲಿಕೆ, ಶೈಕ್ಷಣಿಕ, ಮಾನಸಿಕ, ಆರ್ಥಿಕ ಅಂಶಗಳ ಮೇಲೆ ಮತ್ತು ರಾಷ್ಟ್ರೀಯ ಉತ್ಪಾದಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಶ್ರವಣದೋಷವಿರುವ ಮಕ್ಕಳು ಪಠ್ಯ ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ, ಹೆಚ್ಚಿನ ವಯಸ್ಕರು ನಿರುದ್ಯೋಗದ ಸಮಸ್ಯೆ ಎದುರಿಸುತ್ತಾರೆ. ನ್ಯೂನ್ಯತೆಯು ಖಿನ್ನತೆ ಮತ್ತು ಆತಂಕ ಸೇರಿದಂತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಗಮನಿಸಬೇಕಾದ ಸಂಗತಿಗಳು

ಶ್ರವಣ ದೋಷವು ವಿಶ್ವಾದ್ಯಂತ ಹೆಚ್ಚಾಗುತ್ತಿದೆ. ಪ್ರಸ್ತುತ ವಿಶ್ವಾದ್ಯಂತ 150 ಕೋಟಿ ಜನ ಒಂದಲ್ಲ ಒಂದು ಬಗೆಯ ಶ್ರವಣ ದೋಷ ಹೊಂದಿದ್ದಾರೆ. 2050ರ ವೇಳೆಗೆ ಈ ಸಂಖ್ಯೆ ಒಂದೂವರೆ ಪಟ್ಟು ಹೆಚ್ಚಾಗುವ ಸಂಭವವಿದೆ; ಆಗ ಶ್ರವಣ ನ್ಯೂನ್ಯತೆ ಹೊಂದುವವರ ಸಂಖ್ಯೆ 250 ಕೋಟಿಗೂ ಹೆಚ್ಚಾಗುತ್ತದೆ. 2050ರಲ್ಲಿ ನಾಲ್ಕು ಜನರಲ್ಲಿ ಒಬ್ಬರು ಶ್ರವಣ ದೋಷ ಪಡೆದರೆ, 10 ಜನರಲ್ಲಿ ಒಬ್ಬರಿಗೆ ತೀವ್ರ ಪ್ರಮಾಣದ ಶ್ರವಣ ನ್ಯೂನ್ಯತೆ ಹೊಂದುವ ಅಪಾಯವಿದೆ.

ವಿಶ್ವಾದ್ಯಂತ 3.4 ಕೋಟಿ ಮಕ್ಕಳೂ ಸೇರಿ 43 ಕೋಟಿ ಜನ ತೀವ್ರವಾದ ಶ್ರವಣ ನ್ಯೂನ್ಯತೆಯಿಂದ ಬಳಲುತಿದ್ದಾರೆ. 13 ರಿಂದ 35 ವರ್ಷ ವಯಸ್ಸಿನ 100 ಕೋಟಿ ಯುವಕರು ತಪ್ಪಿಸಬಹುದಾದ ಶ್ರವಣ ದೋಷ ಹೊಂದುವ ಅಪಾಯದಲ್ಲಿದ್ದಾರೆ, ಮಕ್ಕಳೂ ಸೇರಿ 20 ಕೋಟಿ ಜನ ತಪ್ಪಿಸಬಹುದಾದ ಕಿವಿ ನ್ಯೂನ್ಯತೆ ಪಡೆದಿರುತ್ತಾರೆ. 60 ವರ್ಷ ಮೇಲ್ಪಟ್ಟವರಲ್ಲಿ ಶೇ.25 ಕ್ಕಿಂತ ಹೆಚ್ಚು ಜನರು ಶ್ರವಣ ನ್ಯೂನ್ಯತೆ ಪಡೆದಿದ್ದಾರೆ.

ಭಾರತದಲ್ಲಿ 6.3 ಕೋಟಿ ಜನರು ಶ್ರವಣ ನ್ಯೂನ್ಯತೆ ಹೊಂದಿದ್ದಾರೆ. 2001ರ ಸಮೀಕ್ಷೆ ಪ್ರಕಾರ ಒಂದು ಲಕ್ಷ ಜನಸಂಖ್ಯೆಯಲ್ಲಿ 291 ವ್ಯಕ್ತಿಗಳು (ಹೆಚ್ಚಿನವರು 0 ರಿಂದ 14 ವಯೋಮಾನದ ಮಕ್ಕಳು) ತೀವ್ರವಾದ ನ್ಯೂನ್ಯತೆ ಹೊಂದಿದ್ದಾರೆ. ಕರ್ನಾಟಕದಲ್ಲಿ 6 ವರ್ಷದೊಳಗಿನ 20839 ಮಕ್ಕಳು ಸೇರಿದಂತೆ ಸುಮಾರು 40 ಲಕ್ಷ ಜನ ಶ್ರವಣ ನ್ಯೂನ್ಯತೆ ಪಡೆದಿದ್ದಾರೆ. ಅರ್ಧದಷ್ಟು ಪ್ರಕರಣಗಳನ್ನು ತಡೆಗಟ್ಟಬಹುದಾದರೂ ಸರಿಪಡಿಸದ ಶ್ರವಣ ನ್ಯೂನ್ಯತೆ ಶೈಕ್ಷಣಿಕ – ಸಾಮಾಜಿಕ ಬೆಂಬಲ ಮತ್ತು ಕಳೆದುಕೊಂಡ ಉತ್ಪಾದಕತೆಯ ಪರಿಣಾಮದಿಂದ ಜಾಗತೀಕವಾಗಿ ಸುಮಾರು US$ 1 ಟ್ರಿಲಿಯನ್ ಡಾಲರ್ (1 ಲಕ್ಷ ಕೋಟಿಯಷ್ಟು ವಾರ್ಷಿಕ ವೆಚ್ಚವನ್ನು ಉಂಟು ಮಾಡುತ್ತದೆ).

2030 ರ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು, ಶ್ರವಣ ಆರೈಕೆ ಸೇರಿ ಎಲ್ಲಾ ಜನರು ಆರ್ಥಿಕ ಸಂಕಷ್ಠವನ್ನು ಎದುರಿಸದೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಹೊಂದಿರಬೇಕು. ಹೀಗಾಗಿ ಮುಂದಿನ 10 ವರ್ಷಗಳಲ್ಲಿ (ವಿಶ್ವ ಸಂಸ್ಥೆಯ ಮದ್ಯಸ್ಥಿಕೆಗಳ ಮೂಲಕ) ಶ್ರವಣ ಆರೈಕೆ ಒದಗಿಸಲು ತಲಾ US$ 1.33 ಮಿಲಿಯನ್ ಡಾಲರ್ ಹೆಚ್ಚುವರಿ ವಾರ್ಷಿಕ ಹೂಡಿಕೆಯ ಅಗತ್ಯವಿರುತ್ತದೆ.

ಭಾರತಕ್ಕೆ ಬರೋಬ್ಬರಿ 7000 ಕೋಟಿಗೂ ಹೆಚ್ಚಿನ ವಾರ್ಷಿಕ ಹೂಡಿಕೆಯ ವೆಚ್ಚ ತಗುಲುತ್ತದೆ. ಕಿವಿ ಮತ್ತು ಶ್ರವಣ ಆರೈಕೆಯಲ್ಲಿ ಹೂಡಿಕೆ ವೆಚ್ಚ ಫಲಪ್ರದವಾಗಿರುತ್ತದೆ. ಹೂಡಿಕೆ ಮಾಡಿದ ಪ್ರತಿ ಒಂದು ಡಾಲರ್‌ಗೆ ಸುಮಾರು 16 ಪಟ್ಟು ಅಂತಾರಾಷ್ಟ್ರೀಯ ಡಾಲರ್‌ಗಳ ಆರೋಗ್ಯ ಲಾಭವನ್ನು ನೋಡಬಹುದು. ಶ್ರವಣ ದೋಷವನ್ನು ಹೊಂದಿರುವ ಶೇ. 80 ರಷ್ಟು ಜನ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿದ್ದಾರೆ.

ನಮ್ಮ ದೇಶದಲ್ಲಿ ಕಿವುಡುತನ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ N.P.P.C.D. (National Programme for Prevention and Control of Deafness) ಎಂಬ ರಾಷ್ಟ್ರೀಯ ಕಾರ್ಯಕ್ರಮವನ್ನು 2007ರಲ್ಲಿ ಪ್ರಾರಂಭಿಸಲಾಗಿದೆ. ದೇಶಾದ್ಯಂತ 797 ಜಿಲ್ಲೆಗಳ ಪೈಕಿ 558 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಜಾರಿಯಲ್ಲಿದೆ. ಈ ಕಾರ್ಯಕ್ರಮವನ್ನು ಆದಷ್ಟು ಬೇಗ ಬಲಪಡಿಸಿ ಇಡೀ ದೇಶಕ್ಕೆ ವಿಸ್ತರಿಸಬೇಕು.

ನಾಯಕ್ – ವಾಕ್-ಶ್ರವಣ ಸಂಸ್ಥೆಯಿಂದ ಮಕ್ಕಳಿಗೆ ಉಚಿತ ಶ್ರವಣ ತಪಾಸಣಾ ಕೇಂದ್ರ

ವಿಶ್ವ ಶ್ರವಣ ದಿನಾಚರಣೆಯ ಈ ಸಂದರ್ಭದಲ್ಲಿ ರಿಹ್ಯಾಬಿಲಿಟೇಷನ್ ಟ್ರಸ್ಟ್ ಸಹಯೋಗದೊಂದಿಗೆ “ನಾಯಕ್ – ವಾಕ್-ಶ್ರವಣ ಸಂಸ್ಥೆ” ಮಕ್ಕಳಿಗೆ ಉಚಿತ ಶ್ರವಣ ತಪಾಸಣಾ ಕೇಂದ್ರವನ್ನು ಆರಂಭಿಸಲಿದೆ. ಈ ಸೌಲಭ್ಯದಿಂದ ಶೈಶಾವಸ್ಥೆಯಲ್ಲಿಯೇ ಕಿವುಡುತನ ಹೊಂದಿರುವ ಮಕ್ಕಳ ನ್ಯೂನ್ಯತೆಯನ್ನು ಗುರುತಿಸಿ ಹಸ್ತಕ್ಷೇಪ ಒದಗಿಸುವ ಮೂಲಕ ಸಾಮಾನ್ಯವಾಗಿ ಕಿವಿಕೇಳುವ ಮಕ್ಕಳಂತೆ ಕಿವಿ ಕೇಳದ ಮಕ್ಕಳೂ ಸಹ ಸ್ವಾಭಾವಿಕ ವಾಕ್ ಕೌಶಲ್ಯ ಕಲಿಯಲು ಸಹಾಯವಾಗಲಿದೆ.

ಪೋಷಕರಿಗೆ ತಮ್ಮ ಶಿಶುಗಳಿಗೆ ಕಿವಿ ಕೇಳುತ್ತಿಲ್ಲ ಎಂದು ಅನಿಸಿದಲ್ಲಿ ಅಥವಾ ಮಕ್ಕಳ ವಾಕ್ ಶ್ರವಣ ಬೆಳವಣಿಗೆಯ ಹಂತಗಳು ತಡವಾದಲ್ಲಿ ಈ ಕೇಂದ್ರದಲ್ಲಿ ಕಿವಿ ಪರೀಕ್ಷಿಸಿಕೊಳ್ಳಬಹುದು. ಇದೇ ಮಾರ್ಚ್ 3ರ ಭಾನುವಾರದಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ ದಯಾನಂದ ಅವರು ಉಚಿತ ಶ್ರವಣ ತಪಾಸಣೆ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ | Raja Marga Column : ಬ್ರಿಟಿಷ್ ವಿಜ್ಞಾನಿಗಳು ವಿಷ ಎಂದು ಕೊಟ್ಟ ದ್ರಾವಣವನ್ನು ಆ ವಿಜ್ಞಾನಿ ಗಟಗಟ ಕುಡಿದಿದ್ದರು!

ಪ್ರತಿ ಮಂಗಳವಾರ ಈ ಕೇಂದ್ರದಲ್ಲಿ 3 ವರ್ಷದೊಳಗಿನ ಪುಟಾಣಿಗಳಿಗೆ ಉಚಿತವಾಗಿ ಶ್ರವಣ ತಪಾಸಣೆ ನಡೆಸಲಾಗುವುದು ಹೆಚ್ಚಿನ ಮಾಹಿತಿಗೆ 080-42075691 ದೂರವಾಣಿಗೆ ಸಂಪರ್ಕಿಸಬಹುದು.

Continue Reading

ಕರ್ನಾಟಕ

ವಿಸ್ತಾರ ಸಂಪಾದಕೀಯ: ರಾಜ್ಯದ 1,093 ನಕಲಿ ಕ್ಲಿನಿಕ್‌ಗಳಿಗೆ ಬೀಗ; ಇನ್ನಷ್ಟು ಕ್ರಮ ಆಗಲಿ ಬೇಗ

ರಾಜ್ಯದಲ್ಲಿ ಒಂದು ಸಾವಿರಕ್ಕೂ ಅಧಿಕ ಆಸ್ಪತ್ರೆಗಳಿಗೆ ಬೀಗ ಜಡಿದು, ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆಯು ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಆದರೆ, ಇವೆಲ್ಲ ಕ್ರಮಗಳನ್ನು ದೀರ್ಘಾವಧಿಗೆ ತೆಗೆದುಕೊಂಡರೆ ಮಾತ್ರ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.

VISTARANEWS.COM


on

Fake Doctors In Karnataka
Koo

ರಾಜ್ಯಾದ್ಯಂತ ನಕಲಿ ಆಸ್ಪತ್ರೆಗಳು (Fake Hospitals), ಕ್ಲಿನಿಕ್‌ಗಳು, ಪ್ರಯೋಗಾಲಯಗಳು ಹಾಗೂ ನಕಲಿ ವೈದ್ಯರ (Fake Doctors) ವಿರುದ್ಧ ಕೊನೆಗೂ ಆರೋಗ್ಯ ಇಲಾಖೆಯು (Health Department) ಸಮರ ಸಾರಿರುವುದು ಜನ ನಿಟ್ಟುಸಿರು ಬಿಡುವ ಸಂಗತಿಯಾಗಿದೆ. ರಾಜ್ಯದ (Karnataka) ಹಲವೆಡೆ ಕಾರ್ಯನಿರ್ವಹಿಸುತ್ತಿದ್ದ ಸುಮಾರು 1,093 ನಕಲಿ ಕ್ಲಿನಿಕ್‌ಗಳು, ಲ್ಯಾಬ್‌ಗಳಿಗೆ ಬೀಗ ಜಡಿದಿರುವುದು ಸ್ವಾಗತಾರ್ಹ ಕ್ರಮವಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಪದವಿ ಪ್ರಮಾಣಪತ್ರ ಪಡೆಯುವುದು, ಪರವಾನಗಿ ಇಲ್ಲದೆ, ನೋಂದಣಿ ಮಾಡಿಸಿಕೊಳ್ಳದೆ, ವೈದ್ಯಕೀಯ ಪದವಿ ಸೇರಿ ಅರ್ಹ ವಿದ್ಯಾರ್ಹತೆಯೇ ಇಲ್ಲದೆ ಕ್ಲಿನಿಕ್‌ಗಳನ್ನು ತೆರೆದುಕೊಂಡು, ಭ್ರೂಣ ಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆ ಸೇರಿ ಹತ್ತಾರು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಸಾವಿರಾರು ದೂರುಗಳ ಬಳಿಕ ಆರೋಗ್ಯ ಇಲಾಖೆಯು ಬೀಗ ಜಡಿದಿರುವುದು ಸಕಾರಾತ್ಮಕ ಕ್ರಮವಾಗಿದೆ.

ಕಳೆದ ವರ್ಷಾಂತ್ಯಕ್ಕೆ 1,775 ನಕಲಿ ವೈದ್ಯರನ್ನು ಪತ್ತೆ ಮಾಡಲಾಗಿದೆ. ಈಗಲೂ ಸಾವಿರಾರು ನಕಲಿ ವೈದ್ಯರು ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿಯೇ ಸುಮಾರು 54 ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆಯು ಮುಟ್ಟುಗೋಲು ಹಾಕಿಕೊಂಡಿದೆ. 24 ನಕಲಿ ಕ್ಲಿನಿಕ್‌ಗಳ ವೈದ್ಯರಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗಿದೆ. ಕೋರ್ಟ್‌ನಲ್ಲಿ 143 ಪ್ರಕರಣಗಳು ದಾಖಲಾಗಿವೆ. ಇವೆಲ್ಲ ಆತಂಕಕಾರಿ ಬೆಳವಣಿಗೆಗಳಾಗಿದ್ದು, ಸಂಪೂರ್ಣವಾಗಿ ನಕಲಿ ವೈದ್ಯರ ಜಾಲವನ್ನು ಭೇದಿಸಬೇಕಾಗಿದೆ. ಈ ದಿಸೆಯಲ್ಲಿ ಆರೋಗ್ಯ ಇಲಾಖೆಯು ಮೊದಲ ಹೆಜ್ಜೆ ಇರಿಸಿರುವುದು ಶ್ಲಾಘನೀಯವಾಗಿದೆ.

ಕೆಲ ತಿಂಗಳ ಹಿಂದಷ್ಟೇ ಮಂಡ್ಯ ತಾಲೂಕಿನ ಹುಳ್ಳೇನಹಳ್ಳಿ-ಹಾಡ್ಯ ಗ್ರಾಮದ ಕಬ್ಬಿನಗದ್ದೆಯ ಮಧ್ಯಭಾಗದಲ್ಲಿದ್ದ ‘ಆಲೆಮನೆʼಯಲ್ಲಿ ಭ್ರೂಣಲಿಂಗ ಪತ್ತೆಯ ದೊಡ್ಡ ದಂಧೆಯೇ ಬಯಲಾಗಿದ್ದು ಕರ್ನಾಟಕವನ್ನೇ ಬೆಚ್ಚಿಬೀಳಿಸಿತ್ತು. ಹುಳ್ಳೇನಹಳ್ಳಿ ಗ್ರಾಮದ ನಯನ್ ಮತ್ತು ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ನವೀನ್ ಎಂಬಿಬ್ಬರು ಭಾವ ಹಾಗೂ ಬಾಮೈದುನರು ಆಲೆಮನೆಯನ್ನು ಬಾಡಿಗೆಗೆ ಪಡೆದು ಪಕ್ಕದಲ್ಲೇ ಸಣ್ಣದಾದ ಶೆಡ್ ನಿರ್ಮಿಸಿ ಸ್ಕ್ಯಾನಿಂಗ್ ನಡೆಸುತ್ತಿದ್ದರು. ಮತ್ತೊಂದು ಗ್ಯಾಂಗ್ ಮಧ್ಯವರ್ತಿಗಳ ಸಹಾಯದಿಂದ ಗರ್ಭಿಣಿಯರನ್ನು ಸಂಪರ್ಕಿಸಿ, ಬಳಿಕ ಬೆಂಗಳೂರಿನಿಂದ ತಮ್ಮ ಖಾಸಗಿ ವಾಹನಗಳಲ್ಲಿ ಕರೆದುಕೊಂಡು ಹೋಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಿತ್ತು. ಅಲ್ಲಿ ಭ್ರೂಣ ಹೆಣ್ಣು ಎನ್ನುವುದು ತಿಳಿದರೆ, ಮೈಸೂರಿಗೆ ಕರೆದುಕೊಂಡು ಬಂದು ಗರ್ಭಪಾತ ಮಾಡಿಸಲಾಗುತ್ತಿತ್ತು. ಇಲ್ಲಿ ಸುಮಾರು 900 ಭ್ರೂಣಗಳನ್ನು ಹತ್ಯೆ ಮಾಡಲಾಗಿತ್ತು ಎಂಬ ಸಂಗತಿಯೇ ಎಲ್ಲರನ್ನೂ ತಲೆತಗ್ಗಿಸುವಂತೆ ಮಾಡುತ್ತವೆ. ಇಂತಹ ಪ್ರಕರಣಗಳು ನಾಗರಿಕ ಸಮಾಜಕ್ಕೆ ಮಾರಕವಾಗಿವೆ.

ಆರೋಗ್ಯ ಇಲಾಖೆಯೇನೋ ನಕಲಿ ಆಸ್ಪತ್ರೆಗಳಿಗೆ ಬೀಗ ಜಡಿದಿದೆ. ಒಂದಷ್ಟು ಆಸ್ಪತ್ರೆಗಳಿಗೆ ದಂಡ ವಿಧಿಸಲಾಗಿದೆ. ಆದರೆ, ಕೆಲ ತಿಂಗಳಲ್ಲಿ ನಕಲಿ ವೈದ್ಯರು ದಂಡ ಕಟ್ಟಿ, ಮತ್ತದೆ ನಕಲಿ ದಾಖಲೆ ಸೃಷ್ಟಿಸಿ, ಯಾರ ಭಿಡೆ, ಅಡ್ಡಿ-ಆತಂಕವಿಲ್ಲದೆ ನಕಲಿ ಆಸ್ಪತ್ರೆಗಳನ್ನು ತೆರೆದುಕೊಂಡು ಹಣ ಗಳಿಸಲು ಆರಂಭಿಸುತ್ತಾರೆ. ಭ್ರೂಣಲಿಂಗ ಪತ್ತೆ, ಹೆಣ್ಣು ಭ್ರೂಣದ ಹತ್ಯೆ, ಜನರಿಗೆ ಬೇಕಾಬಿಟ್ಟಿ ಚಿಕಿತ್ಸೆ ನೀಡುವುದು, ಹಣ ವಂಚಿಸುವುದು ಸೇರಿ ಹತ್ತಾರು ಅಕ್ರಮಗಳು ನಡೆಯುತ್ತವೆ. ಹಾಗಾಗಿ, ಆರೋಗ್ಯ ಇಲಾಖೆಯು ಆರಂಭ ಶೂರತ್ವ ಪ್ರದರ್ಶಿಸಬಾರದು. ನಿರಂತರವಾಗಿ ನಕಲಿ ವೈದ್ಯರ ಮೇಲೆ, ಪರವಾನಗಿಯನ್ನೇ ಇಲ್ಲದೆ ನಡೆಸುವ ಕ್ಲಿನಿಕ್‌ಗಳ ಮೇಲೆ ನಿಗಾ ಇಡಬೇಕು. ನಕಲಿ ವೈದ್ಯರನ್ನು ಜೈಲಿಗೆ ಕಳುಹಿಸಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು. ಭಾರಿ ಪ್ರಮಾಣದಲ್ಲಿ ದಂಡ ವಿಧಿಸಬೇಕು. ಶಾಶ್ವತವಾಗಿ ನಕಲಿ ಆಸ್ಪತ್ರೆಗಳನ್ನು ಮುಚ್ಚಿಸಬೇಕು. ಜನರಲ್ಲಿ ಇವುಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಇಷ್ಟೆಲ್ಲ ಕ್ರಮಗಳನ್ನು ದೀರ್ಘಾವಧಿಗೆ ತೆಗೆದುಕೊಂಡಾಗ ಮಾತ್ರ ನಕಲಿ ವೈದ್ಯರು, ನೋಂದಣಿಯಾಗದ ಆಸ್ಪತ್ರೆಗಳ ಹಾವಳಿ ತಪ್ಪುತ್ತದೆ. ಜನರು ಕೂಡ ನಿಟ್ಟುಸಿರು ಬಿಡುತ್ತಾರೆ. ಹೆಣ್ಣು ಭ್ರೂಣಗಳು ಜನಿಸಲು, ಅದೇ ಹೆಣ್ಣುಮಕ್ಕಳು ಸಮಾಜಕ್ಕೆ ಬೆಳಕಾಗಲು ಕಾರಣವಾಗುತ್ತದೆ. ಇಷ್ಟೆಲ್ಲ ಕ್ರಮಗಳನ್ನು ಆರೋಗ್ಯ ಇಲಾಖೆಯು ತೆಗೆದುಕೊಳ್ಳಲಿ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಹೆಣ್ಣು ಭ್ರೂಣ ಹತ್ಯೆ ತಡೆ ಕಾರ್ಯಪಡೆ ಶೀಘ್ರ ಜಾರಿಯಾಗಲಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

World Hearing Day: ಹೇಳಿದ್ದು ಕೇಳಿಸ್ತಾ… ಇವತ್ತು ವಿಶ್ವ ಶ್ರವಣ ದಿನ!

ಇಂದು ವಿಶ್ವ ಶ್ರವಣ ದಿನ (World Hearing Day). ಕಿವಿಯ ಮತ್ತು ಕೇಳುವ ಸಾಮರ್ಥ್ಯದ ಕಾಳಜಿಗಾಗಿ ಜನರ ಗಮನವನ್ನು ಸೆಳೆಯುವುದಕ್ಕಾಗಿಯೇ ಜಗತ್ತಿನೆಲ್ಲೆಡೆ ಈ ದಿನವನ್ನು ಗುರುತಿಸಲಾಗಿದೆ. ಈ ಬಗ್ಗೆ ಹೇಳುತ್ತಿರುವುದಕ್ಕೆ ಸ್ವಲ್ಪ ಕಿವಿ ಕೊಡುತ್ತೀರಾ?

VISTARANEWS.COM


on

World Hearing Day
Koo

ಕಿವಿಯಲ್ಲಿ ಏನೋ ಆಗುತ್ತಿದೆ ಎನ್ನುತ್ತಾ ಕಡ್ಡಿ ಹಾಕಿ ಕುಕ್ಕುವುದು, ಬೆಚ್ಚಗಿನ ಎಣ್ಣೆಗಳನ್ನು ಬಿಡುವುದು, ಏನೇನೊ ಮನೆಮದ್ದು ಮಾಡುವುದು ಸಾಮಾನ್ಯ. ʻಕಿವಿ ತಾನೆ, ಹೇಗಾದರೂ ಸರಿ!ʼ ಎನ್ನುವ ಬೀಡುಬೀಸಾದ ಧೋರಣೆ ಹೆಚ್ಚಿನವರಲ್ಲಿದೆ. ಆದರೆ ದೇಹದ ಉಳಿದೆಲ್ಲ ಅಂಗಗಳ ಕಾಳಜಿ ಮಾಡಿದಂತೆಯೇ ನಮ್ಮ ಶ್ರವಣೇಂದ್ರಿಯಗಳ ಕಾಳಜಿಯನ್ನೂ ಮಾಡಬೇಕಾದ್ದು ಅಗತ್ಯ. ನಮ್ಮ ಕಿವಿ ಮತ್ತು ಕೇಳುವ ಸಾಧ್ಯತೆಯನ್ನು ಜೋಪಾನ ಮಾಡುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್‌ 3ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಘೋಷವಾಕ್ಯ- ಕಿವಿ ಮತ್ತು ಕೇಳುವ ಬಗೆಗಿನ (World Hearing Day) ಕಾಳಜಿ ಎಲ್ಲರಿಗಾಗಿʼ .

Little Girl with Hearing Problem on Light Background

ಬಾಲ್ಯದಲ್ಲಿ

ಮಕ್ಕಳಿಗೆ ಬಾಲ್ಯದಲ್ಲೇ ಶ್ರವಣ ದೋಷವನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡಿದರೆ ಅವರ ಭಾಷೆ ಮತ್ತು ಮಾತು ಕುಂಠಿತವಾಗದಂತೆ ಅಭಿವೃದ್ಧಿ ಹೊಂದುವಂತೆ ಮಾಡಬಹುದು ಎನ್ನುತ್ತಾರೆ ತಜ್ಞರು. ಕೆಲವೊಮ್ಮೆ ಮಕ್ಕಳಿಗೆ ಹುಟ್ಟುವಾಗಲೇ ಶ್ರವಣ ದೋಷ ಬಂದಿರಬಹುದು. ಹಾಗಲ್ಲದೆ, ಯಾವುದಾದರೂ ಸೋಂಕಿನಿಂದಲೂ ಈ ದೋಷ ಕಾಣಿಸಿಕೊಳ್ಳುವ ಸಾಧ್ಯತೆಯಿದೆ; ಅಥವಾ ಕಿವಿಯ ಸಂರಚನೆಯಲ್ಲಿ ಸಮಸ್ಯೆಗಳಿದ್ದರೆ ಅದರಿಂದಲೂ ಕೇಳುವ ಸಾಮರ್ಥ್ಯ ಕುಂಠಿತಗೊಳ್ಳಬಹುದು. ಇದನ್ನು ಶೀಘ್ರ ಪತ್ತೆ ಮಾಡಿ ಚಿಕಿತ್ಸೆ ಕೊಡಿಸಿದರೆ, ಎಳೆಯರ ಭವಿಷ್ಯ ಮಸುಕಾಗುವುದಿಲ್ಲ. ಕೆಲವೊಂದು ದೋಷಗಳನ್ನು ಭ್ರೂಣಾವಸ್ಥೆಯಲ್ಲೂ ಪತ್ತೆ ಮಾಡಬಹುದು ಎನ್ನುತ್ತಾರೆ ತಜ್ಞರು.

ಇತರ ಕಾರಣಗಳು

ಕೆಲವು ತೀವ್ರ ತೆರನಾದ ಸೋಂಕುಗಳು, ನೆಗಡಿ-ಕೆಮ್ಮಿನ ನಂತರ ಕಿವಿಯಲ್ಲಿ ಕಾಣಿಸಿಕೊಳ್ಳುವ ವಿಪರೀತ ನೋವಿಗೆ ಚಿಕಿತ್ಸೆ ದೊರೆಯದಿದ್ದರೆ, ಬಿಪಿ-ಮಧುಮೇಹದಂಥ ತೊಂದರೆಗಳು, ಗಾಯಗಳು, ಥೈರಾಯ್ಡ್‌ ಸಮಸ್ಯೆಗಳಿಂದಲೂ ಕೇಳುವ ಸಾಮರ್ಥ್ಯ ಕಡಿಮೆಯಾಗಬಹುದು. ಸದಾ ಕಾಲ‌ ದೊಡ್ಡ ದನಿಯಲ್ಲಿ ಇಯರ್‌ಫೋನ್ ಬಳಸುವುದು, ಗಿರಣಿ ಅಥವಾ ಕಾರ್ಖಾನೆಗಳ ದೊಡ್ಡ ಶಬ್ದಕ್ಕೆ ಸದಾ ಒಡ್ಡಿಕೊಳ್ಳುವುದು, ಕಿವಿ ಸ್ವಚ್ಛತೆಯ ನೆವದಲ್ಲಿ ಪೊರೆಗೆ ಹಾನಿ ಮಾಡಿಕೊಳ್ಳುವುದು- ಇವೆಲ್ಲವೂ ಶ್ರವಣೇಂದ್ರಿಯಕ್ಕೆ ಹಾನಿ ಮಾಡಬಲ್ಲವು. ಇನ್ನು ಸಿಗರೇಟ್‌ ಚಟವಿದ್ದರಂತೂ ಕಿವಿಗೆ ಅಪಾಯ ಕಟ್ಟಿಟ್ಟಿದ್ದು.

Young man with symptom of hearing loss on color background

ಏನು ಮಾಡಬಹುದು?

ಬಾಲ್ಯದಲ್ಲಿ ಅಗತ್ಯವಾದ ಲಸಿಕೆಗಳನ್ನೆಲ್ಲ ಮಕ್ಕಳಿಗೆ ತಪ್ಪದೆ ಹಾಕಿಸುವುದು ಮುಖ್ಯ. ಎಂಎಂಆರ್‌, ನ್ಯುಮೊಕೋಕಲ್‌ನಂಥ ಚುಚ್ಚುಮದ್ದುಗಳು ಕಿವಿಗೆ ಆಯಾ ಸೋಂಕಿನಿಂದ ಆಗಬಹುದಾದ ಹಾನಿಯನ್ನು ತಪ್ಪಿಸಬಲ್ಲವು. ಕಣ್ಣು, ಕಿವಿ ಅಥವಾ ಮೂಗಿನಲ್ಲಿ ಯಾವುದೇ ಸೋಂಕಿದ್ದರೆ, ಅದನ್ನು ಆದಷ್ಟೂ ಶೀಘ್ರ ವೈದ್ಯರಲ್ಲಿ ತೋರಿಸಿ. ಇಂಥ ಸೋಂಕುಗಳು ನೇರವಾಗಿ ಕೇಳುವ ಸಾಧ್ಯತೆಯ ಮೇಲೆ ಪರಿಣಾಮ ಬೀರುತ್ತವೆ.

ಸದಾ ಇಯರ್‌ಫೋನ್‌ ಬಳಸದಿರಿ. ಅದನ್ನು ಬಳಸುವುದು ಅನಿವಾರ್ಯವೇ ಆದರೆ, ಆಗಾಗ ಬಿಡುವು ನೀಡಿ. ತಾಸಿಗೊಮ್ಮೆ ಇಯರ್‌ ಫೋನ್‌ ತೆಗೆದು ಕೆಲವು ನಿಮಿಷಗಳವರೆಗೆ ಕಿವಿಗೆ ವಿಶ್ರಾಂತಿ ನೀಡಿ. ಕೆಲಸ ಮಾಡುವ ಸ್ಥಳದಲ್ಲಿ ಸಿಕ್ಕಾಪಟ್ಟೆ ಗದ್ದಲ ಇದ್ದರೆ, ಅಲ್ಲಿಂದ ಹೊರಗೆ ಹೋದ ಮೇಲೆ ಮತ್ತೆ ಇಯರ್‌ಫೋನ್‌ ಬಳಸಬೇಡಿ. ಪಾಪದ ಕಿವಿಯ ಮೇಲೆ ಕರುಣೆ ಇರಲಿ!

ನಿಯಮಿತವಾಗಿ ವ್ಯಾಯಾಮ ಮಾಡುವುದು ಶ್ರವಣೇಂದ್ರಿಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು. ವ್ಯಾಯಾಮದಿಂದ ದೇಹದೆಲ್ಲೆಡೆ ರಕ್ತ ಸಂಚಲನೆ ಸರಾಗವಾಗಿ, ದೇಹದೆಲ್ಲೆಡೆ ಆಮ್ಲಜನಕದ ಮಟ್ಟ ಹೆಚ್ಚಿದಂತೆ ಕಿವಿಗೂ ಆಗುತ್ತದೆ. ಅದರಲ್ಲೂ ಹೆಚ್ಚಿನ ಗದ್ದಲವಿಲ್ಲದೆ ಮಾಡುವ ಯೋಗ-ಧ್ಯಾನದಂಥವು ಕಿವಿಯ ಆರೋಗ್ಯಕ್ಕೂ ಒಳ್ಳೆಯದು.

ಹಾಗೆಯೇ, ಸಿಕ್ಕಿದ ಯಾವುದೋ ಡ್ರಾಪ್‌ ಕಿವಿಗೆ ಹಾಕುವುದು ಅಥವಾ ಕಡ್ಡಿ, ಪೆನ್ನು, ಪೆನ್ಸಿಲ್‌ನಂಥ ಏನನ್ನೂ ಕಿವಿಯೊಳಗೆ ಹಾಕಿ ಶುಚಿ ಮಾಡುವ ಸಾಹಸ ಸಲ್ಲದು. ಮಧುಮೇಹ, ರಕ್ತದೊತ್ತಡ ಮತ್ತು ಹೃದ್ರೋಗಗಳು ಸಹ ಕಿವಿಯ ಮೇಲೆ ಘೋರ ಪರಿಣಾಮ ಬೀರಬಲ್ಲವು. ಕಿವಿಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಪ್ರಾರಂಭದಲ್ಲೇ ಅದನ್ನು ಪತ್ತೆ ಮಾಡುವುದರಿಂದ ಕಿವುಡುತನವನ್ನು ತಡೆಗಟ್ಟಿ, ಬದುಕನ್ನು ಕೇಳಿ ಖುಷಿ ಪಡಬಹುದು.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

Continue Reading

ಆರೋಗ್ಯ

Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

ಮಾನಸಿಕ ಒತ್ತಡ ಹೆಚ್ಚಿದಾಗ ದೇಹದ ನಾನಾ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅಂಥವುಗಳಲ್ಲಿ ಒಂದು ಕುತ್ತಿಗೆ ನೋವು. ಒತ್ತಡ (Stress can cause neck pain) ಶಮನ ಮಾಡುವುದರ ಜೊತೆಗೆ, ಇನ್ನೂ ಕೆಲವು ತಂತ್ರಗಳು ನೋವಿನಿಂದ ಮುಕ್ತಿ ನೀಡಬಲ್ಲವು.

VISTARANEWS.COM


on

Stress can cause neck pain
Koo

ಮಾನಸಿಕ ಒತ್ತಡವು ದೇಹದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರಬಲ್ಲದು. ಜೀರ್ಣಾಂಗಗಳ ಆರೋಗ್ಯದಲ್ಲಿ ಏರುಪೇರು, ಬೆನ್ನು ನೋವು, ಕುತ್ತಿಗೆ ನೋವು- ಹೀಗೆ ತರಹೇವಾರಿ ಸಮಸ್ಯೆಗಳನ್ನು ಹುಟ್ಟುಹಾಕಬಲ್ಲದು. ಅದರಲ್ಲೂ ತೀವ್ರವಾದ ಆತಂಕ ಮತ್ತು ಒತ್ತಡವು ಅಷ್ಟೇ ತೀವ್ರವಾದ ಕುತ್ತಿಗೆ ನೋವನ್ನು ಸೃಷ್ಟಿಸಬಲ್ಲದು. ಮಾನಸಿಕ ಒತ್ತಡ (Stress can cause neck pain) ಹೆಚ್ಚಾದಷ್ಟೂ ಸ್ನಾಯುಗಳ ಮೇಲಿನ ಒತ್ತಡವೂ ಹೆಚ್ಚುತ್ತದೆ. ಇದರಿಂದ ನೋವು ಮತ್ತು ಕಿರಿಕಿರಿ ಇನ್ನಷ್ಟು ಏರುತ್ತದೆ. ಒತ್ತಡಕ್ಕೂ ಕುತ್ತಿಗೆಗೂ…: ಸಂಬಂಧ ಇದೆ ಎನ್ನುವುದನ್ನು ಅಧ್ಯಯನಗಳು ದೃಢಪಡಿಸಿವೆ. ನಮ್ಮ ದೇಹದಲ್ಲಿ ಒತ್ತಡ ಹೆಚ್ಚಾದಷ್ಟಕ್ಕೂ ಶರೀರ ಫೈಟ್‌-ಫ್ಲೈಟ್‌ ಎನ್ನುವ ಅವಸ್ಥೆಗೆ ತಲುಪುತ್ತದೆ. ಹೀಗಿರುವಾಗ ಸ್ನಾಯುಗಳ ಮೇಲಿನ ಒತ್ತಡ ಏರುತ್ತದೆ. ದೀರ್ಘ ಕಾಲ ಒತ್ತಡ ಶಮನಕ್ಕೆ ಯಾವುದೇ ಮಾರ್ಗವನ್ನು ಅನುಸರಿಸದಿದ್ದರೆ, ತಡೆಯಲಾರದಂಥ ಕುತ್ತಿಗೆ ನೋವು ಕಾಡುತ್ತದೆ. ಮಾತ್ರವಲ್ಲ, ಒತ್ತಡ ಹೆಚ್ಚಿದಾಗ ನಿದ್ದೆಗೆಡುವುದು, ಉರಿಯೂತ ಹೆಚ್ಚುವಂಥ ಆಹಾರಗಳನ್ನು ತಿನ್ನುವುದು, ಯಾವ್ಯಾವುದೋ ಭಂಗಿಗಳಲ್ಲಿ ಕುಳಿತುಕೊಳ್ಳುವುದು ಸಹ ಹೆಚ್ಚಾಗುತ್ತದೆ. ಇವೆಲ್ಲವುಗಳ ಕೃಪೆಯಿಂದ ಕುತ್ತಿಗೆ ನೋವು ಅಸಹನೀಯ ಎನ್ನುವಷ್ಟಾಗುತ್ತದೆ. ಇದಕ್ಕೆ ಮದ್ದುಂಟೇ?

Pain pressure irritation in neck muscles Excessive Use Of Electronic Gadgets

ಭಂಗಿ

ಮೊದಲಿಗೆ ಕುಳಿತುಕೊಳ್ಳುವ, ಮಲಗುವ ಭಂಗಿಗಳ ಬಗ್ಗೆ ಗಮನ ಕೊಡಿ. ದಿನವಿಡೀ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರಾಗಿದ್ದರೆ ಕಣ್ಣಿನ ಮಟ್ಟಕ್ಕೇ ಪರದೆ ಇರಿಸಿಕೊಳ್ಳಿ. ಭುಜಗಳನ್ನು ನಿರಾಳವಾಗಿ ಇರಿಸಿಕೊಳ್ಳಿ. ಕೂರುವ ಕುರ್ಚಿ ನಿಮ್ಮ ಎತ್ತರಕ್ಕೆ ಸರಿಯಾಗಿರಲಿ. ಮಲಗುವಾಗಲೂ ಸರಿಯಾಗ ಭಂಗಿಗಳು ಅಗತ್ಯ. ಬೆನ್ನು, ಕುತ್ತಿಗೆ ನೋವಿನ ಸಂದರ್ಭಗಳಲ್ಲಿ ಸೂಕ್ತ ಎತ್ತರದ ದಿಂಬುಗಳಿರಲಿ.

ಸ್ಟ್ರೆಚ್‌ ಮಾಡಿ

ತಾಸುಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಥವಾ ನಿಲ್ಲುವುದು ಸರಿಯಲ್ಲ. ಇದರಿಂದ ಸ್ನಾಯುಗಳ ಮೇಲಿನ ಒತ್ತಡ ದ್ವಿಗುಣಗೊಳ್ಳುತ್ತದೆ. ಸದಾ ಒಂದೇ ಭಂಗಿಯಲ್ಲಿ ಕೂರುವ ಬದಲು ತಾಸಿಗೊಮ್ಮೆ ಕೆಲವು ನಿಮಿಷಗಳ ವಿರಾಮ ತೆಗೆದುಕೊಳ್ಳಿ. ಬೆನ್ನು, ಕುತ್ತಿಗೆ ಮತ್ತು ತೋಳುಗಳನ್ನು ಚೆನ್ನಾಗಿ ಸ್ಟ್ರೆಚ್‌ ಮಾಡಿ. ಇದರಿಂದ ನೋವು ಹೆಚ್ಚಾಗುವುದನ್ನು ತಡೆಯಬಹುದು.

Do not do heavy lifting instead do weight lifting exercises under the guidance of an expert Back Pain After 40 Years

ತೂಕ ಎತ್ತದಿರಿ

ದೇಹದಲ್ಲಿ ಯಾವುದೇ ಭಾಗದಲ್ಲಿ ನೋವಿದ್ದರೆ, ತೂಕ ಎತ್ತುವ ಸಾಹಸಕ್ಕೆ ಕೈ ಹಾಕಬೇಡಿ. ಹೀಗೆಂದರೆ ಜಿಮ್‌ಗೆ ಹೋಗಿ ತೂಕ ಎತ್ತುವವರಿಗೆ ಮಾತ್ರವೇ ಇದು ಅನ್ವಯಿಸುತ್ತದೆ ಎಂದು ಭಾವಿಸುವಂತಿಲ್ಲ. ಮನೆಯಲ್ಲೇ ಗ್ರೈಂಡರ್‌ ಎತ್ತುವುದು, ಮಂಚ, ಕುರ್ಚಿ-ಮೇಜುಗಳನ್ನು ಜರುಗಿಸುವುದು- ಇಂಥವೆಲ್ಲ ಬೆನ್ನು ಮತ್ತು ಕುತ್ತಿಗೆಯ ಮೇಲೆ ಒತ್ತಡ ಹೆಚ್ಚಿಸುತ್ತವೆ.

Sleepless woman suffering from insomnia

ದಿಂಬು

ಮಲಗುವಾಗ ಹಾಕುವ ದಿಂಬಿನ ಎತ್ತರದ ಬಗ್ಗೆ ಗಮನ ನೀಡಿ. ತೀರಾ ಎತ್ತರದ ದಿಂಬು ಮತ್ತು ದಿಂಬೇ ಇಲ್ಲದಿರುವುದು- ಈ ಎರಡೂ ವಿಷಯಗಳು ಕುತ್ತಿಗೆ ನೋವನ್ನು ಹೆಚ್ಚಿಸುತ್ತವೆ. ಮೆಮರಿ ಫೋಮ್‌ ದಿಂಬುಗಳು ಕುತ್ತಿಗೆ ನೋವಿನ ತೀವ್ರತೆಯನ್ನು ಗಣನೀಯವಾಗಿ ತಗ್ಗಿಸುತ್ತವೆ. ಖರೀದಿಸುವಾಗ ದುಬಾರಿ ಎನಿಸಿದರೂ, ನಿಮ್ಮ ಕುತ್ತಿಗೆಯ ಆರೋಗ್ಯಕ್ಕಾಗಿ ಇದೇನು ದೊಡ್ಡದೆನಿಸದು.

ಫಿಸಿಯೊಥೆರಪಿ

ಕುತ್ತಿಗೆ ನೋವಿಗೆ ಫಿಸಿಯೊಥೆರಪಿ ಉತ್ತಮ ಮದ್ದಾಗಬಲ್ಲದು. ಈ ಬಗ್ಗೆ ವೈದ್ಯರ ಸಲಹೆ ಕೇಳಿ ಮುಂದುವರಿಯುವುದು ಒಳ್ಳೆಯದು. ನೋವಿಗೆ ಕಾರಣವೇನೆಂದು ಪತ್ತೆ ಮಾಡಿ, ಅದಕ್ಕೆ ಸರಿ ಹೊಂದುವ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಜೊತೆಗೆ ವ್ಯಾಯಾಮ, ಮಸಾಜ್‌ ಮುಂತಾದವು ಬಿಗಿದ ಸ್ನಾಯುಗಳನ್ನು ಸಡಿಲ ಮಾಡುತ್ತದೆ.

Hot Pack For Neck Pain
#image_title

ಬಿಸಿ-ತಣ್ಣಗಿನ ಪ್ಯಾಕ್‌

ಕುತ್ತಿಗೆಯ ಸ್ನಾಯುಗಳ ಬಿಗಿತ ಅಥವಾ ಉರಿಯೂತವನ್ನು ಶಮನ ಮಾಡುವುದಕ್ಕೆ ಬಿಸಿ ಇಲ್ಲವೇ ತಣ್ಣಗಿನ ಪ್ಯಾಕ್‌ಗಳು ಸಹಾಯ ಮಾಡುತ್ತವೆ. ಹೀಟಿಂಗ್‌ ಪ್ಯಾಡ್‌, ಬಿಸಿ ನೀರಿನ ಬಟ್ಟೆ ಮುಂತಾದವು ೧೫ ನಿಮಿಷಗಳ ಕುತ್ತಿಗೆಯ ಮೇಲಿದ್ದರೆ ಆರಾಮ ನೀಡಬಲ್ಲವು. ಪ್ರತಿಯಾಗಿ, ತಣ್ಣನೆಯ ಪ್ಯಾಡ್‌ ಅಥವಾ ತಣ್ಣೀರು ಬಟ್ಟೆಯೂ ಅನುಕೂಲವಾಗುತ್ತದೆ.

stress

ಒತ್ತಡ ನಿರ್ವಹಣೆ

ಇದು ಎಲ್ಲಕ್ಕಿಂತ ಅತ್ಯಂತ ಮಹತ್ವದ್ದು. ಯೋಗ, ಪ್ರಾಣಾಯಾಮ, ದೀರ್ಘ ಉಸಿರಾಟ, ಧ್ಯಾನ, ಸಂಗೀತ ಕೇಳುವುದು ಅಥವಾ ಇನ್ಯಾವುದೇ ರೀತಿಯ ಒತ್ತಡ ನಿರ್ವಹಣೆಯ ತಂತ್ರಗಳು ನೋವಿನಿಂದ ಮುಕ್ತಿ ನೀಡಬಲ್ಲವು.

ಇದನ್ನೂ ಓದಿ: Hair Growth Tips: ತಲೆ ಕೂದಲು ವೇಗವಾಗಿ ಬೆಳೆಯಬೇಕೆ? ಹೀಗೆ ಮಾಡಿ

Continue Reading
Advertisement
Chaithra Hebbar News found
ದಕ್ಷಿಣ ಕನ್ನಡ10 mins ago

Chaithra Hebbar : ಚೈತ್ರಾ ಹೆಬ್ಬಾರ್‌ ಮಿಸ್ಸಿಂಗ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್‌; ಪ್ರಿಯಕರ ಹಿಮಾಚಲದಲ್ಲಿ; ಅವಳೆಲ್ಲಿ?

Shah Rukh Khan chants Jai Shri Ram at Anant-Radhika pre-wedding
ಬಾಲಿವುಡ್12 mins ago

Shah Rukh Khan: ಅಂಬಾನಿ ಮಗನ ಮದುವೆ: ʻಜೈ ಶ್ರೀ ರಾಮ್’ ಎಂದ ಶಾರುಖ್‌ ಖಾನ್‌!

Modi sha
ದೇಶ17 mins ago

BJP Candidates List : ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆದ ಘಟಾನುಘಟಿ ನಾಯಕರಿವರು…

operation
ವೈರಲ್ ನ್ಯೂಸ್44 mins ago

Viral News: ವೈದ್ಯರ ಎಡವಟ್ಟು; ಪಿತ್ತಕೋಶದ ಶಸ್ತ್ರಚಿಕಿತ್ಸೆ ಬದಲು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದರು !

Illicit relationship mysore.webp
ಮೈಸೂರು50 mins ago

Illicit Relationship : ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಗೆ ಮನೆಯಿಂದ್ಲೇ ಹೊರಗಟ್ಟಿದ ಭೂಪ

Narendra Modi
ಪ್ರಮುಖ ಸುದ್ದಿ53 mins ago

Narendra Modi : ಭಾರತ್​ ಶಕ್ತಿಯಲ್ಲಿ ಭಾಗಿಯಾಗಲಿದ್ದಾರೆ ಪ್ರಧಾನಿ ಮೋದಿ; ಏನಿದು ಮಿಲಿಟರಿ ಶಕ್ತಿ ಪ್ರದರ್ಶನ

SRK Aamir Salman Come Together For Performance Anant Wedding
ಬಾಲಿವುಡ್1 hour ago

Anant Ambani: `ನಾಟು ನಾಟು’ಗೆ ಸಖತ್‌ ಸ್ಟೆಪ್ಸ್‌ ಹಾಕಿದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್‌!

Sangeeta Phoghat
ಕ್ರೀಡೆ2 hours ago

Sangeeta Phogat : ಯಜ್ವೇಂದ್ರ ಚಹಲ್​ ಎತ್ತಿ ಹೆಗಲ ಮೇಲೆ ಕೂರಿಸಿದ ಸಂಗೀತಾ ಫೋಗಟ್​​, ಇಲ್ಲಿದೆ ವಿಡಿಯೊ

rld
ದೇಶ2 hours ago

Jayant Chaudhary: ಐಎನ್​ಡಿಐಎ ಮೈತ್ರಿಕೂಟಕ್ಕೆ ಮತ್ತೊಂದು ಹೊಡೆತ; ಎನ್‌ಡಿಎಗೆ ಸೇರ್ಪಡೆಯಾದ ಆರ್‌ಎಲ್‌ಡಿ

Actor Yash Fan Who Injured By Followers Car Police Complaint
ಸ್ಯಾಂಡಲ್ ವುಡ್2 hours ago

Actor Yash: ಯಶ್ ಬೆಂಗಾವಲು ವಾಹನ ಹರಿದು ಗಾಯಗೊಂಡಿದ್ದ ಯುವಕನಿಂದ ದೂರು

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for march 3rd 2024
ಭವಿಷ್ಯ6 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು17 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು21 hours ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು2 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ5 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ಟ್ರೆಂಡಿಂಗ್‌