Almonds Benefits: ಈ 9 ಕಾರಣಗಳಿಗಾಗಿ ನೆನೆಸಿದ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ನಿತ್ಯ ಸೇವಿಸಬೇಕು! - Vistara News

ಆರೋಗ್ಯ

Almonds Benefits: ಈ 9 ಕಾರಣಗಳಿಗಾಗಿ ನೆನೆಸಿದ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ನಿತ್ಯ ಸೇವಿಸಬೇಕು!

Almonds Benefits: ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದ ಮೇಲೆ ಸಿಪ್ಪೆ ಸುಲಿದು ನೀವು ತಿಂದಿರಬಹುದು, ನಿಮ್ಮ ಮಕ್ಕಳಿಗೂ ಕೊಟ್ಟಿರಬಹುದು. ಹೀಗೆ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇರುವ ಲಾಭಗಳೇನು ಗೊತ್ತೇ? ಬನ್ನಿ, ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲೇ ನಾವು ಯಾಕೆ ತಿನ್ನಬೇಕು ಎಂಬುದಕ್ಕೆ ಕಾರಣಗಳನ್ನು ತಿಳಿಯೋಣ.

VISTARANEWS.COM


on

Almonds
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಲವು ಆಹಾರಗಳ್ನು ಕೆಲವು ಹೊತ್ತಿನಲ್ಲಿ ತಿಂದರೆ ಆ ಆಹಾರದ ಸರ್ವ ಗುಣಗಳ ಲಾಭವನ್ನೂ ನಾವು ಪಡೆಯಬಹುದು ಎನ್ನುತ್ತಾರೆ ತಜ್ಞರು. ಆಹಾರವೇ ಹಾಗೆ, ಹೊತ್ತಲ್ಲದ ಹೊತ್ತಿನಲ್ಲಿ ತಿಂದರೆ ಲಾಭಕ್ಕಿಂತ ನಷ್ಟ ಹೆಚ್ಚು. ಯಾವಾಗ, ಹೇಗೆ ಮತ್ತು ಎಷ್ಟು ತಿನ್ನಬೇಕು ಎಂಬ ಸಾಮಾನ್ಯ ಜ್ಞಾನ, ನಮಗೆ ತಿಳಿದಿರಬೇಕು. ಅದು ಪ್ರತಿ ಆಹಾರಕ್ಕೂ ಅನ್ವಯಿಸುತ್ತದೆ. ಇನ್ನು ಕೆಲವು ಆಹಾರಗಳನ್ನು ಇಂತಹ ಹೊತ್ತಿನಲ್ಲಿ ತಿಂದರೆ, ಹೆಚ್ಚು ಅಡ್ಡ ಪರಿಣಾಮಗಳಾಗದು ಎಂಬ ಸತ್ಯವೂ ಇದೆ. ಒಟ್ಟಾರೆ, ಆಹಾರದ ಬಗೆಗಿನ ಸಾಮಾನ್ಯ ಜ್ಞಾನ ಜೀವನದಲ್ಲಿ ನಮಗಿದ್ದರೆ, ಆರೋಗ್ಯವೂ ನಮ್ಮ ಕೈಯಲ್ಲಿದ್ದಂತೆ. ಯಾಕೆಂದರೆ, ನಮ್ಮ ಆರೋಗ್ಯದ ಬಹುಪಾಲು ಗುಟ್ಟು ಅಡಗಿರುವುದು ನಾವು ತಿನ್ನುವ ಆಹಾರದಲ್ಲಿಯೇ.
ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದ ಮೇಲೆ ಸಿಪ್ಪೆ ಸುಲಿದು ನೀವು ತಿಂದಿರಬಹುದು, ನಿಮ್ಮ ಮಕ್ಕಳಿಗೂ ಕೊಟ್ಟಿರಬಹುದು. ಹೀಗೆ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇರುವ ಲಾಭಗಳೇನು ಗೊತ್ತೇ? ಬನ್ನಿ, ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲೇ ನಾವು ಯಾಕೆ ತಿನ್ನಬೇಕು ಎಂಬುದಕ್ಕೆ (Almonds Benefits) ಕಾರಣಗಳನ್ನು ತಿಳಿಯೋಣ.

Almonds Dry Fruits for Womens Health

ಜೀವಸತ್ವಗಳು ಸರಿಯಾಗಿ ಹೀರಲ್ಪಡುತ್ತವೆ

ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ, ಆಹಾರದಲ್ಲಿರುವ ಜೀವಸತ್ವಗಳು ಸರಿಯಾಗಿ ಹೀರಲ್ಪಡುತ್ತವೆ. ಬಾದಾಮಿಯಲ್ಲಿರುವ ಪ್ರೊಟೀನ್‌ ಹಾಗೂ ಕೊಬ್ಬು ಈ ಕೆಲಸವನ್ನು ಮಾಡುತ್ತವೆ. ಬಾದಾಮಿಯ ಸೇವನೆಯ ನಂತರ ನಮ್ಮ ದೇಹಕ್ಕೆ ಸೇರಿದ ಆಹಾಋದ ಸಂಪೂರ್ಣ ಉಪಯೋಗವನ್ನು ನಾವು ಪಡೆಯುವಂತಾಗುತ್ತದೆ.

weight loss

ತೂಕ ಇಳಿಕೆಗೆ ಸಹಕಾರಿ

ನೀವು ತೂಕ ಇಳಿಸುವವರಾಗಿದ್ದರೆ, ಈ ಅಭ್ಯಾಸ ಬಹಳ ಒಳ್ಳೆಯದು. ಬಾದಾಮಿಯಲ್ಲಿ ಹೆಚ್ಚು ನಾರಿನಂಶ ಹಾಗೂ ಪ್ರೊಟೀನ್‌ ಇರುವುದರಿಂದ ಇದು ಹೆಚ್ಚು ಹಸಿವಾಗಲು ಬಿಡುವುದಿಲ್ಲ. ಖಾಲಿ ಹೊಟ್ಟೆಯಲ್ಲಿ ಬಾದಾಮಿ ಸೇವಿಸಿದ್ದರಿಂದ ಹಸಿವು ಕೊಂಚ ನಿಯಂತ್ರಣಕ್ಕೆ ಬಂದು ನೀವು ಕಡಿಮೆ ತಿನ್ನುತ್ತೀರಿ. ಸಹಜವಾಗಿಯೇ, ಕ್ಯಾಲರಿ ಕಡಿಮೆ ದೇಹಕ್ಕೆ ಸೇರುವುದರಿಂದ ತೂಕ ಇಳಿಕೆಯತ್ತ ಸಾಗುತ್ತದೆ.

ealthy internal organs of human digestive system / highlighted blue organs

ಜೀರ್ಣಕ್ರಿಯೆ ಹೆಚ್ಚಳ

ನಿಮ್ಮ ಜೀರ್ಣಕ್ರಿಯೆಯ ಶಕ್ತಿ ಇಮ್ಮಡಿಗೊಳ್ಳುತ್ತದೆ. ಬಾದಾಮಿಯಲ್ಲಿ ನಾರಿನಂಶವು ಹೇರಳವಾಗಿರುವುದರಿಂದ ಇದು ಜೀರ್ಣಕ್ರಿಯೆಯ ಶಕ್ತಿಯನ್ನು ಹೆಚ್ಚಿಸುವ ತಾಕತ್ತನ್ನು ಹೊಂದಿದೆ.

ಚಯಾಪಚಯಕ್ರಿಯೆ ಚುರುಕು

ಚಯಾಪಚಯಕ್ರಿಯೆ ಚುರುಕಾಗುತ್ತದೆ. ದೇಹದಲ್ಲಿ ಈ ಕ್ರಿಯೆಗೆ ಚುರುಕು ಬಂದ ತಕ್ಷಣ ಶಕ್ತಿ ಉತ್ಪಾದನೆಯೂ ಹೆಚ್ಚಾಗುತ್ತದೆ. ನಿಮ್ಮ ಸುಸ್ತು, ಬೇಸರಗಳೆಲ್ಲ ಮಾಯವಾಗಿ ನಿಮ್ಮ ದೇಹ ಚುರುಕಾಗುತ್ತದೆ.

Heart Health Fish Benefits

ಹೃದಯ ಸ್ನೇಹಿ

ಎಲ್ಲಕ್ಕಿಂತ ಮುಖ್ಯವಾಗಿ ಬಾದಾಮಿ ಹೃದಯ ಸ್ನೇಹಿ. ಇದರಲ್ಲಿರುವ ಮೋನೋ ಸ್ಯಾಚುರೇಟೆಡ್‌ ಕೊಬ್ಬು ಹೃದಯಕ್ಕೆ ಒಳ್ಳೆಯದನ್ನೇ ಬಯಸುತ್ತದೆ. ಹೃದಯದಲ್ಲಿ ರಕ್ತಪೂರಣಕ್ಕೆ ಚುರುಕು ಮುಟ್ಟುತ್ತದೆ. ಹೃದಯದ ಸಮಸ್ಯೆಗಳು ದೂರ ನಿಲ್ಲುತ್ತವೆ.

ಸಕ್ಕರೆ ಮಟ್ಟ ಏರಿಕೆ ಕಡಿಮೆ

ಬಾದಾಮಿಯಲ್ಲಿ ಗ್ಲಿಸೆಮಿಕ್‌ ಇಂಡೆಕ್ಸ್‌ ತೀರಾ ಕಡಿಮೆ ಇದೆ. ಇದರಿಂದ ಸಹಜವಾಗಿಯೇ, ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಕೆಯ ಪರಿಣಾಮ ಕಡಿಮೆಯೇ ಇರುತ್ತದೆ.

ಚರ್ಮದ ಆರೋಗ್ಯಕ್ಕೆ ಪೂರಕ

ಚರ್ಮದ ಕಾಳಜಿ ವಹಿಸುವ ಮಂದಿ ಇದನ್ನು ಖಂಡಿತ ಬಳಸಬೇಕು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಜೀವಸತ್ವಗಳು ಚರ್ಮದ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಇವು ಆಂಟಿ ಏಜಿಂಗ್‌ ಕೂಡಾ. ಚರ್ಮವನ್ನು ನಯವಾಗಿ ಹೊಳಪಾಗಿ ಇರಿಸುವ ಜೊತೆಗೆ ಚರ್ಮಕ್ಕೆ ಬೇಕಾದ ಪೋಷಣಾಯನ್ನು ನೀಡುತ್ತವೆ.

Antioxidants in it keep immunity strong Benefits Of Mandakki

ರೋಗ ನಿರೋಧಕ ಶಕ್ತಿ

ಬಾದಾಮಿಯಲ್ಲಿ ವಿಟಮಿನ್‌ ಇ ಹಾಗೂ ಝಿಂಕ್‌ ಇರುವುದರಿಂದ ಇವು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನೂ ನೀಡುತ್ತವೆ. ದೇಹವನ್ನು ಇನ್‌ಫೆಕ್ಷನ್‌ನಿಂದ ದೂರವಿರಿಸುತ್ತದೆ. ಒಟ್ಟಾರೆ ರೋಗನಿರೋಧಕತೆ ಹೆಚ್ಚುತ್ತದೆ.

ಇದನ್ನೂ ಓದಿ: Water For Health: ಆರೋಗ್ಯವಾಗಿರಬೇಕೆಂದರೆ ನಾವು ದಿನಕ್ಕೆಷ್ಟು ನೀರು ಕುಡಿಯಬೇಕು?

ದೇಹವನ್ನು ಹೈಡ್ರೇಟ್‌ ಆಗಿ ಇರಿಸುತ್ತದೆ

ಬಾದಾಮಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರೂ ಇದೆ ಎಂದರೆ ನೀವು ನಂಬಲೇ ಬೇಕು. ಅದು ಒಣವಾಗಿ ಕಂಡರೂ, ತನ್ನ ಒಣ ಅಂಶದಷ್ಟೇ ಪ್ರಮಾಣದಲ್ಲಿ ನೀರನ್ನೂ ಹೊಂದಿದೆ ಎಂದರೆ ನೀವು ನಂಬಬೇಕು. ಹೀಗಾಗಿ, ದೇಹವನ್ನು ಸದಾ ಹೈಡ್ರೇಟ್‌ ಆಗಿ ಇಡುವಲ್ಲಿ ಇದು ತನ್ನ ಕಾಣಿಕೆಯನ್ನೂ ನೀಡುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Colon cancer : ಕರುಳಿನ ಕ್ಯಾನ್ಸರ್ ವಯಸ್ಸಾದವರಿಗೆ ಕಂಟಕ! ಈ ಆಹಾರಗಳನ್ನು ತಿನ್ನಲೇಬೇಡಿ

Colon cancer : ಕರುಳಿನ ಕ್ಯಾನ್ಸರ್‌ ಬಗ್ಗೆ ನಿರ್ಲಕ್ಷ್ಯ ಬೇಡ, ಮುಂಜಾಗೃತಿ ಇರಲಿ ಎಂದು ಹುಬ್ಬಳ್ಳಿಯ ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಕೇಂದ್ರದ ಹಿರಿಯ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ಸಂತೋಷ್ ಚಿಕ್ಕ್‌ರೆಡ್ಡಿ ತಿಳಿಸಿದ್ದಾರೆ.

VISTARANEWS.COM


on

By

Colon cancer is on the rise‌ Those above 50 years of age are targeted
ಸಾಂದರ್ಭಿಕ ಚಿತ್ರ
Koo

ಬದಲಾಗುತ್ತಿರುವ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಇಂದು ಹಲವು ಕ್ಯಾನ್ಸರ್‌ ನಮ್ಮನ್ನು ಕಾಡಲಾರಂಭಿಸಿವೆ. ಅದರಲ್ಲಿ ಇದೀಗ ಕರುಳಿನ ಕ್ಯಾನ್ಸರ್‌ (Colon cancer ) ಅಥವಾ ಕೊಲೊರೆಕ್ಟಲ್ ಕ್ಯಾನ್ಸರ್ ಕೂಡ ಮುನ್ನೆಲೆಗೆ ಬರುತ್ತಿರುವುದು ಆತಂಕಕಾರಿ. ನಮ್ಮ ಪಚನಕ್ರಿಯೆಯನ್ನು ಸಮತೋಲದಲ್ಲಿ ಇಟ್ಟುಕೊಳ್ಳುವ ಕರುಳಿನ ಆರೋಗ್ಯ ಹದಗೆಟ್ಟರೆ ಇಡೀ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನಾವು ತಿನ್ನುವ ಆಹಾರ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದಿಂದ ಕರುಳಿನ ಕ್ಯಾನ್ಸರ್‌ ಅಭಿವೃದ್ಧಿಗೊಳ್ಳಲಿದೆ. ಕರುಳಿನ ಕ್ಯಾನ್ಸರ್‌ಗೆ ಕಾರಣ ಹಾಗೂ ಅದಕ್ಕೆ ಪರಿಹಾರದ ಕುರಿತು ವೈದ್ಯರು ವಿವರಿಸಿದ್ದಾರೆ.

ಕೊಲೊರೆಕ್ಟಲ್ ಕ್ಯಾನ್ಸರ್ ಎಂದೂ ಕರೆಯಲ್ಪಡುವ ಕರುಳಿನ ಕ್ಯಾನ್ಸರ್‌, ದೊಡ್ಡ ಕರುಳಿನ (ಕೊಲೊನ್ ಮತ್ತು ಗುದನಾಳ) ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ಆಗಿದೆ. ಇದು ವಿಶ್ವಾದ್ಯಂತ ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಒಂದಾಗಿದ್ದು, 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಈ ಕ್ಯಾನ್ಸರ್‌ ಹೆಚ್ಚಾಗಿ ಕಂಡು ಬರಲಿದೆ. ವಯಸ್ಸಾದಂತೆ ಪಚನಕ್ರಿಯೆ ನಿಧಾನವಾಗುವುದರಿಂದ ಕರುಳಿನ ಆರೋಗ್ಯವೂ ಕ್ಷೀಣಿಸುತ್ತಾ ಬರಲಿದೆ. ಹೀಗಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಕರುಳಿನ ಕ್ಯಾನ್ಸರ್‌ನ ನಿಯಮಿತ ಸ್ಕ್ರೀನಿಂಗ್‌ಗಳು ಮತ್ತು ತಪಾಸಣೆಗೆ ಒಳಗಾಗುವುದು ಅತ್ಯವಶ್ಯಕವಾಗಿದೆ.

ಅನುವಂಶಿಕ ಪರೀಕ್ಷೆಗೆ ಒಳಗಾಗಿ

ಕೊಲೊರೆಕ್ಟಲ್ ಕ್ಯಾನ್ಸರ್ ಹೆಚ್ಚಾಗಿ ಕುಟುಂಬದ ಇತಿಹಾಸ ಹೊಂದಿರುವವರಲ್ಲಿಯೂ ಕಾಣಿಸಿಕೊಳ್ಳಲಿದೆ. ಫ್ಯಾಮಿಲಿ ಅಡೆನೊಮ್ಯಾಟಸ್ ಪಾಲಿಪೊಸಿಸ್ (FAP) ಅಥವಾ ಲಿಂಚ್ ಸಿಂಡ್ರೋಮ್‌ನಂತಹ ಕೆಲವು ಆನುವಂಶಿಕ ಪರಿಸ್ಥಿತಿಗಳು, ರೋಗವನ್ನು ಅಭಿವೃದ್ಧಿ ಪಡಿಸಲಿದೆ. ನಿಮ್ಮ ಕುಟುಂಬದಲ್ಲಿಯೂ ಯಾರಿಗಾದರು ಕರುಳಿನ ಕ್ಯಾನ್ಸರ್‌ಗೆ ತುತ್ತಾಗಿದ್ದರೆ, ನೀವು ಸಹ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ, ಅನುವಂಶಿಕ ಪರೀಕ್ಷೆಗೆ ಒಳಗಾಗುವುದು ಉತ್ತಮ

ಕರುಳಿನ ಕ್ಯಾನ್ಸರ್‌ಗೆ ಇತರೆ ಕಾರಣಗಳೇನು?

ಉರಿಯೂತದ ಕರುಳಿನ ಕಾಯಿಲೆ (IBD), ಟೈಪ್ 2 ಮಧುಮೇಹ ಮತ್ತು ಬೊಜ್ಜು ಮುಂತಾದ ಕೆಲವು ಆರೋಗ್ಯ ಸಮಸ್ಯೆಗಳು ಕರುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಕರುಳಿನ ಕ್ಯಾನ್ಸರ್ ಸಾಮಾನ್ಯವಾಗಿ ಆನುವಂಶಿಕ ಮತ್ತು ಪರಿಸರ ಅಂಶಗಳ ಸಂಯೋಜನೆಯಿಂದ ಉಂಟಾಗುತ್ತದೆ, ಇದು ಕರುಳಿನಲ್ಲಿ ಪಾಲಿಪ್ಸ್ ಬೆಳವಣಿಗೆಗೆ ಕಾರಣವಾಗುತ್ತದೆ. ಪತ್ತೆ ಮಾಡದೆ ಬಿಟ್ಟರೆ, ಈ ಪಾಲಿಪ್ಸ್ ಕ್ಯಾನ್ಸರ್ ಆಗಬಹುದು. ಹೀಗಾಗಿ ಕ್ಯಾನ್ಸರ್‌ನ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಕ್ಯಾನ್ಸರ್‌ನ ಲಕ್ಷಣಗಳೇನು?

  • ಮಲದಲ್ಲಿನ ರಕ್ತ, ಕಡಿಮೆ ಪ್ರಮಾಣದಲ್ಲಿ ಮಲವಿಸರ್ಜನೆ
  • ಕರುಳಿನ ಚಲನೆಗಳಲ್ಲಿನ ಬದಲಾವಣೆಗಳು (ಅತಿಸಾರ ಅಥವಾ ಮಲಬದ್ಧತೆ),
  • ಹೊಟ್ಟೆ ನೋವು ಅಥವಾ ಸೆಳೆತ,
  • ದೌರ್ಬಲ್ಯ, ಆಯಾಸ,
  • ತೂಕ ನಷ್ಟ ಮತ್ತು ಹಸಿವು ಆಗದೇ ಇರುವುದು
  • ಕೆಲವು ತೋಟಗಳಿಗೆ ಸಿಂಪಡಿಸುವ ಕೆಲವು ಕೀಟನಾಶ ಕಣಗಳು ದೇಹಕ್ಕೆ ಸೇರುವುದರಿಂದ

ಕ್ಯಾನ್ಸರ್‌ ತಡೆಗಟ್ಟಲು ಈ ಅಭ್ಯಾಸವಿರಲಿ

ನಾವು ಪ್ರತಿನಿತ್ಯ ತಿನ್ನುವ ಆಹಾರದಿಂದಲೇ ಕೊಲೊರೆಕ್ಟಲ್ ಕ್ಯಾನ್ಸರ್ ಅಭಿವೃದ್ಧಿ ಹೊಂದಲಿದೆ. ಹೌದು, ಕೆಂಪು ಮತ್ತು ಸಂಸ್ಕರಿಸಿದ ಮಾಂಸದಲ್ಲಿ ಹೆಚ್ಚಿನ ಆಹಾರ, ಕಡಿಮೆ ಫೈಬರ್ ಮತ್ತು ಅಗತ್ಯ ಪೋಷಕಾಂಶಗಳ ಕೊರತೆಯು ಕರುಳಿನ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗಬಹುದು. ಜಡ ಜೀವನಶೈಲಿಯು ಅಪಾಯವನ್ನು ಹೆಚ್ಚಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಹಣ್ಣು, ತರಕಾರಿಗಳು ಮತ್ತು ಧಾನ್ಯಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಬೇಕು. ಹೆಚ್ಚು ಆಯಿಲ್‌ಯುಕ್ತ ಆಹಾರ ಸೇವನೆ, ಜಂಕ್‌ ಫುಡ್‌ ಸೇವನೆಯೂ ಸಹ ನಮ್ಮ ಕರುಳಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಉತ್ತಮ ಆಹಾರ ಸೇವನೆಯ ಜೊತೆಗೆ ನಿಯಮಿತ ವ್ಯಾಯಾಮವೂ ಅತ್ಯವಶ್ಯಕ. ವ್ಯಾಯಾಮ, ಯೋಗ, ಧ್ಯಾನ ಇತರೆ ದೈಹಿಕ ಚಟುವಟಿಕೆಯನ್ನು ದಿನದಲ್ಲಿ ಕನಿಷ್ಠ ೩೦ ನಿಮಿಷಗಳು ಮಾಡುವುದರಿಂದ ಈ ಕ್ಯಾನ್ಸರ್‌ನ ಅಪಾಯದಿಂದ ಪಾರಾಗಬಹುದು. ಅನುವಂಶಿಕ ಹಿನ್ನೆಲೆ ಇದ್ದರೂ ಸಹ ಉತ್ತಮ ಜೀವನಶೈಲಿ ಹೊಂದಿದ್ದರೆ, ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಬಹುದು.

Continue Reading

ಆರೋಗ್ಯ

Dengue Fever : ಮಹಾಮಾರಿ ಡೆಂಗ್ಯೂ ಈಗ ಸಾಂಕ್ರಾಮಿಕ ರೋಗ; ಸೊಳ್ಳೆಗಳ ನಿಯಂತ್ರಣ ಮಾಡದಿದ್ದರೆ ದಂಡಾಸ್ತ್ರ ಪ್ರಯೋಗ

Dengue Fever : ಮಹಾಮಾರಿ ಡೆಂಗ್ಯೂ ಈಗ ಸಾಂಕ್ರಾಮಿಕ ರೋಗ; ಸೊಳ್ಳೆಗಳ ನಿಯಂತ್ರಣ ಮಾಡದಿದ್ದರೆ ದಂಡಾಸ್ತ್ರ ಪ್ರಯೋಗ

VISTARANEWS.COM


on

By

Dengue is now an epidemic
Koo

ಬೆಂಗಳೂರು: ಡೆಂಗ್ಯೂ ಜ್ವರವನ್ನು (Dengue Fever) ಸಾಂಕ್ರಾಮಿಕ ರೋಗ (Epidemic Diseases) ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಸಾಂಕ್ರಾಮಿಕ ರೋಗಗಳ ಕಾಯಿದೆ 2020 ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆ ಉಲ್ಲಂಘನೆಗೂ ದಂಡ ನಿಗದಿ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಸೂಚನೆ ನೀಡಿದೆ. ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಕ್ರಮವಹಿಸಲಾಗಿದೆ. ಸೊಳ್ಳೆಗಳ ನಿಯಂತ್ರಣ ಮಾಡದಿದ್ದರೆ ದಂಡಾಸ್ತ್ರ ಪ್ರಯೋಗ ಮಾಡಲಾಗುತ್ತದೆ.

ಡಿಸಿಗಳಿಗೆ ಅಧಿಕಾರ

ಡೆಂಗ್ಯೂ ರೋಗವನ್ನು ಸಾಂಕ್ರಾಮಿಕ ರೋಗ ಪಟ್ಟಿಗೆ ಸೇರಿಸಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಜನರಿಗೆ ಇದುವರೆಗೆ ಜಾಗೃತಿ ಮೂಡಿಸಿ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದ್ದವಿ. ಆದರೆ ಇದುವರೆಗೆ ನಮಗೆ ಯಾವ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಮಂಗಳೂರು, ಬೆಂಗಳೂರಿನಲ್ಲಿ ಮಾತ್ರ ಪಾಲಿಕೆಗಳು ಕೆಲ ಕ್ರಮ ತೆಗೆದುಕೊಳ್ಳುವ ಅವಕಾಶ ಇತ್ತು, ಬೇರೆ ಕಡೆ ಇರಲಿಲ್ಲ. ಇದೀಗ ಡೆಪ್ಯುಟಿ ಕಮೀಷನರ್‌, ಡಿಸಿಗಳು ಇನ್ನು ಮುಂದೆ ಕ್ರಮ ತೆಗೆದುಕೊಳ್ಳುವ ಅಧಿಕಾರ ನೀಡಿದ್ದೇವೆ. ಮನೆ, ಸಂಸ್ಥೆ, ಕಟ್ಟಡಗಳು, ನಿರ್ಮಾಣ ಹಂತದ ಸೈಟ್, ಹೋಟೆಲ್ ಹೀಗೆ ಹಲವು ಸ್ಥಳಗಳ ಸುತ್ತಮುತ್ತ ಸರಿಯಾದ ನಿರ್ವಹಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.

ಆ ಪ್ರಕಾರ ಗ್ರಾಮೀಣ ಪ್ರದೇಶಗಳ ಮನೆಗಳಿಗೆ 200 ರೂ. ದಂಡ, ನಗರ ಪ್ರದೇಶಗಳ ಮನೆಗಳಿಗೆ 400 ರೂ., ನಗರ ಪ್ರದೇಶದ ವಾಣಿಜ್ಯ ಪ್ರದೇಶ, ಮಾಲ್, ಮಾರುಕಟ್ಟೆಗಳಿಗೆ 1 ಸಾವಿರ ರೂ, ಗ್ರಾಮೀಣ ಪ್ರದೇಶಗಳಲ್ಲಿ 500 ರೂವರೆಗೆ ದಂಡ ಇರಲಿದೆ. ಖಾಲಿ ಸ್ಥಳ, construction ಸೈಟ್ ( ನಗರ ಪ್ರದೇಶ) 2 ಸಾವಿರ ರೂ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1 ಸಾವಿರ ರೂ ದಂಡ ಇರಲಿದೆ.

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Amla For Your Hair: ತಲೆಗೂದಲ ಆರೈಕೆಯಲ್ಲಿ ನೆಲ್ಲಿಕಾಯಿಯ ಬಳಕೆ ಹೇಗೆ?

Amla For Your Hair: ತಲೆಗೂದಲ ಬೆಳವಣಿಗೆಗೆ ನೆಲ್ಲಿಕಾಯಿ ಎಣ್ಣೆ ಪರಾಂಪರಾಗತ ಔಷಧಿಯಲ್ಲಿ ಪ್ರಸಿದ್ಧವಾದುದು. ತಲೆಗೆ ಹಾಕುವುದು ಮಾತ್ರವಲ್ಲ, ಇದನ್ನು ಹೊಟ್ಟೆಗೆ ಹಾಕಿದರೂ ಕೂದಲುಗಳಿಗೆ ಲಾಭವಿದೆ. ತಲೆಯ ಚರ್ಮದ ಆರೋಗ್ಯ ಹೆಚ್ಚಿಸಿ, ಹೊಟ್ಟಿನಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ನೆಲ್ಲಿಕಾಯಿಯ ಇನ್ನಷ್ಟು ಉಪಯೋಗಗಳ ಬಗ್ಗೆ, ಹೇರ್‌ಮಾಸ್ಕ್‌ ಮಾಡುವ ಬಗ್ಗೆಯೂ ಇಲ್ಲಿವೆ ವಿವರ.

VISTARANEWS.COM


on

Hair Care Habits
Koo

ಆಯುರ್ವೇದದಲ್ಲಿ ಶತಶತಮಾನಗಳಿಂದ ಬಳಕೆಯಲ್ಲಿರುವ ನೆಲ್ಲಿಕಾಯಿ ಅಥವಾ ಆಮಲಕಿ ತನ್ನ ವಿಶೇಷ ಸತ್ವಗಳಿಂದ ಈಗ ವಿಶ್ವದೆಲ್ಲೆಡೆ ಹೆಸರಾಗಿದೆ. ವಿಟಮಿನ್‌-ಸಿಯಂಥ ಉತ್ಕರ್ಷಣ ನಿರೋಧಕಗಳಿಂದ ಭರಿತವಾದ ಇದು, ದೃಷ್ಟಿಗೆ, ಕೂದಲಿಗೆ, ಚರ್ಮಕ್ಕೆ ಉಪಯುಕ್ತ ಸತ್ವಗಳನ್ನು ಹೊಂದಿದೆ. ಮಧುಮೇಹ ನಿಯಂತ್ರಣಕ್ಕೆ ಮತ್ತು ತೂಕ ಇಳಿಕೆಗೆ ಅನುಕೂಲಕರವಾಗಿದೆ. ಜೊತೆಗೆ, ಹಲವು ರೀತಿಯ ಜೀವಸತ್ವಗಳು, ಖನಿಜಗಳು, ಫೈಟೊಕೆಮಿಕಲ್‌ಗಳು ಇಡೀ ದೇಹಕ್ಕೆ ಬೇಕಾದಂಥ ಸತ್ವಗಳನ್ನು ಒದಗಿಸಬಲ್ಲವು. ಹೀಗೆ ಬಹೂಪಯೋಗಿ ಎನಿಸಿರುವ ನೆಲ್ಲಿಕಾಯಿಯಿಂದ ಆಗುವಂಥ ಅನುಕೂಲಗಳನ್ನು ಒಮ್ಮೆ ಗಮನಿಸೋಣ. ಜೊತೆಗೆ ಹಲವು ಬಗೆಯ ಹೇರ್‌ಮಾಸ್ಕ್‌ಗಳನ್ನು ಮಾಡುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ. ನಳನಳಿಸುವ (Amla For Your Hair) ಕೂದಲು ನಿಮ್ಮದಾಗಲಿ.

Skin Health Cucumber Benefits

ಚರ್ಮಕ್ಕೆ ಕಾಂತಿ

ಇದರಲ್ಲಿರುವ ವಿಟಮಿನ್‌ ಸಿ ಅಂಶವು ಕೊಲಾಜಿನ್‌ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಹಾಗಾಗಿ ಚರ್ಮದಲ್ಲಿ ಸುಕ್ಕು ಬರುವುದು ಕಡಿಮೆಯಾಗಿ, ತಾರುಣ್ಯಭರಿತ ತ್ವಚೆಯನ್ನು ಹೊಂದಬಹುದು. ಜೊತೆಗೆ, ಚರ್ಮದ ಹೊಳಪು ಹೆಚ್ಚಿಸಿ, ತ್ವಚೆಯನ್ನು ಬಿಗಿ ಮಾಡಿ, ಕಪ್ಪುಕಲೆಗಳನ್ನು ತೆಗೆಯುತ್ತದೆ. ಹಾಗಾಗಿ ಕಾಂತಿಯುಕ್ತ ತ್ವಚೆಯನ್ನು ಪಡೆಯಲು ಈ ಮೂಲಕ ನೆರವಾಗುತ್ತದೆ.

Image Of Egg Benefits For Hair

ಕೂದಲು ಸೊಂಪು

ತಲೆಗೂದಲ ಬೆಳವಣಿಗೆಗೆ ನೆಲ್ಲಿಕಾಯಿ ಎಣ್ಣೆ ಪರಾಂಪರಾಗತ ಔಷಧಿಯಲ್ಲಿ ಪ್ರಸಿದ್ಧವಾದುದು. ತಲೆಗೆ ಹಾಕುವುದು ಮಾತ್ರವಲ್ಲ, ಇದನ್ನು ಹೊಟ್ಟೆಗೆ ಹಾಕಿದರೂ ಕೂದಲುಗಳಿಗೆ ಲಾಭವಿದೆ. ತಲೆಯ ಚರ್ಮದ ಆರೋಗ್ಯ ಹೆಚ್ಚಿಸಿ, ಹೊಟ್ಟಿನಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ಕೂದಲೆಳೆಗಳ ಬುಡವನ್ನು ಸದೃಢ ಮಾಡಿ, ಕೂದಲು ತುಂಡಾಗದಂತೆ ಅಥವಾ ಉದುರದಂತೆ ತಡೆಯುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಗೂ ಪೋಷಣೆ ನೀಡುತ್ತದೆ.

ಪ್ರತಿರೋಧಕ ಶಕ್ತಿ ಹೆಚ್ಚಳ

ವಿಟಮಿನ್‌ ಸಿ ಜೀವಸತ್ವ ನೆಲ್ಲಿಕಾಯಿಯಲ್ಲಿ ಅತ್ಯಧಿಕವಾಗಿದೆ. ದೇಹದ ಮೇಲೆ ದಾಳಿ ಮಾಡುವ ರೋಗಾಣುಗಳು ಮತ್ತು ಸೋಂಕುಗಳನ್ನು ತಡೆಯುವುದಕ್ಕೆ ವಿಟಮಿನ್‌ ಸಿ ದೊರೆಯಬೇಕಾದ್ದು ಅಗತ್ಯ. ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ನೆಗಡಿ, ಕೆಮ್ಮು, ಜ್ವರದಂಥ ತೊಂದರೆಗಳನ್ನು ದೂರ ಮಾಡಬಹುದು.

Antioxidants in it keep immunity strong Benefits Of Mandakki

ಉತ್ಕರ್ಷಣ ನಿರೋಧಕಗಳು

ಹಲವು ರೀತಿಯ ಫ್ಲೆವನಾಯ್ಡ್‌ಗಳು, ಪಾಲಿಫೆನಾಲ್‌ಗಳು ನೆಲ್ಲಿಕಾಯಿಯಲ್ಲಿ ವಿಫುಲವಾಗಿವೆ. ಇವು ದೇಹದಲ್ಲಿ ಉರಿಯೂತ ಶಮನ ಮಾಡುವುದಕ್ಕೆ ಸಹಕಾರಿ. ಜೊತೆಗೆ, ಬೀಡಾಡಿಗಳಂತೆ ಅಲೆದುಕೊಂಡಿರುವ ಮುಕ್ತ ಕಣಗಳನ್ನು ನಿರ್ಬಂಧಿಸಲು ಇವು ಅಗತ್ಯ. ಇದರಿಂದ ಮಧುಮೇಹ, ಹೃದಯ ಸಮಸ್ಯೆಗಳು, ಕ್ಯಾನ್ಸರ್‌ನಂಥ ರೋಗಗಳ ಭೀತಿ ದೂರವಾಗುತ್ತದೆ.

Improves digestion Peach Benefits

ಜೀರ್ಣಾಂಗಗಳು ಚುರುಕು

ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸಲು ನೆಲ್ಲಿಕಾಯಿ ಪ್ರಚೋದನೆ ನೀಡುತ್ತದೆ. ಇದರಿಂದ ಜೀರ್ಣಾಂಗಗಳು ಚುರುಕಾಗುತ್ತವೆ. ಆಹಾರ ಸುಲಲಿತವಾಗಿ ಪಚನವಾಗುತ್ತವೆ ಎಂಬುದಷ್ಟೇ ಅಲ್ಲ, ಸತ್ವಗಳನ್ನೂ ಚೆನ್ನಾಗಿ ಹೀರಿಕೊಳ್ಳಲು ದೇಹಕ್ಕೆ ಸಾಧ್ಯವಾಗುತ್ತದೆ. ಲಘುವಾದ ವಿರೇಚನದ ಗುಣವನ್ನೂ ಆಮಲಕಿ ಹೊಂದಿದೆ. ಹಾಗಾಗಿ ಮಲಬದ್ಧತೆಯನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.

May support eye health Peach Benefits

ದೃಷ್ಟಿ ಉತ್ತಮ

ನೆಲ್ಲಿಕಾಯಲ್ಲಿರುವ ವಿಟಮಿನ್‌ ಎ ಅಂಶವು ಕಣ್ಣಿನ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದಂಥ ಪೋಷಕ ಸತ್ವ. ಜೊತೆಗೆ, ಕೆರೊಟಿನಾಯ್ಡ್‌ಗಳಂಥ ಉತ್ಕರ್ಷಣ ನಿರೋಧಕಗಳು ದೃಷ್ಟಿ ಮಂದವಾಗದಂತೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವಯಸ್ಸಾದಂತೆ ಕಾಡುವ ಕ್ಯಾಟರಾಕ್ಟ್‌ ನಂಥ ಸಮಸ್ಯೆಗಳು ಬಾರದಂತೆ ಮುಂದೂಡುತ್ತವೆ.

ನೆಲ್ಲಿಕಾಯಿ ಎಣ್ಣೆ:

ಅಗಲವಾದ ಬಾಯಿಯ ಪಾತ್ರೆಯಲ್ಲಿ ಒಂದು ಕಪ್‌ ನೆಲ್ಲಿಕಾಯಿ ಪುಡಿಯನ್ನು ಎರಡು ಕಪ್‌ ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ಮಿಶ್ರ ಮಾಡಿ. ಇದನ್ನು ಮಂದವಾದ ಉರಿಯಲ್ಲಿ ಕುದಿಯುವುದಕ್ಕೆ ಬಿಡಿ. ಸುಮಾರು ೧೦-೧೫ ನಿಮಿಷಗಳ ನಂತರ ತಿಳಿಯಾದ ಹಸಿರು ಬಣ್ಣದ ಎಣ್ಣೆ ಸಿದ್ಧವಾಗುತ್ತದೆ. ಇದನ್ನು ಸೋಸಿ, ಗಾಜಿನ ಬಾಟಲಿಗೆ ತುಂಬಿಟ್ಟುಕೊಳ್ಳಿ. ಈ ನೆಲ್ಲಿಕಾಯಿ ಎಣ್ಣೆಯನ್ನು ನಿಯಮಿತವಾಗಿ ತಲೆಕೂದಲಿಗೆ ಉಪಯೋಗಿಸುವುದರಿಂದ ಆರೋಗ್ಯಕರ ಕೇಶರಾಶಿಯನ್ನು ಹೊಂದಲು ಸಾಧ್ಯ.

ಇದನ್ನೂ ಓದಿ: Home Remedies for Skin: ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದು ಹೇಗೆ?

ಹೇರ್‌ ಮಾಸ್ಕ್‌

ನಾಲ್ಕು ಚಮಚ ನೆಲ್ಲಿಕಾಯಿ ಪುಡಿಯನ್ನು ಅಷ್ಟೇ ಪ್ರಮಾಣದ ಮೊಸರಿನೊಂದಿಗೆ ಸೇರಿಸಿ ಪೇಸ್ಟ್‌ ಮಾಡಿ. ಇದನ್ನು ತಲೆಗೂದಲು ಬುಡದಿಂದ ತುದಿಯವರೆಗೆ ಲೇಪಿಸಿ. ಅರ್ಧ ತಾಸಿನ ನಂತರ ಉಗುರು ಬಿಸಿ ನೀರಿನಿಂದ ತಲೆಸ್ನಾನ ಮಾಡಿ. ಹಾಗೆಯೇ, ಸಮ ಪ್ರಮಾಣದಲ್ಲಿ ನೆಲ್ಲಿಕಾಯಿ ಪುಡಿ, ಮದರಂಗಿ ಪುಡಿ ಮತ್ತು ಮೊಸರನ್ನು ಮಿಶ್ರ ಮಾಡಿ ಪೇಸ್ಟ್‌ ಮಾಡಿ. ಇದನ್ನು ತಲೆಯ ರೋಮರೋಮಗಳಿಗೆ ಹಚ್ಚಿ, ಅರ್ಧ ತಾಸಿನ ನಂತರ ಉಗುರು ಬಿಸಿಯಾದ ನೀರಿನಿಂದ ತಲೆಸ್ನಾನ ಮಾಡಿ. ಇನ್ನೊಂದು ಉತ್ತಮ ಹೇರ್‌ ಮಾಸ್ಕ್‌ ಎಂದರೆ- ೪ ಚಮಚ ನೆಲ್ಲಿಕಾಯಿ ಪುಡಿಗೆ ಕಾಲು ಕಪ್‌ ತೆಂಗಿನಕಾಯಿ ಹಾಲು ಸೇರಿಸಿ, ಹದವಾಗಿ ಪೇಸ್ಟ್‌ ತಯಾರಿಸಿ. ಇದನ್ನು ತಲೆಗೆಲ್ಲ ಆಮೂಲಾಗ್ರವಾಗಿ ಲೇಪಿಸಿ ಒಂದು ತಾಸು ಹಾಗೆಯೇ ಬಿಡಿ. ನಂತರ ಹದ ಉಷ್ಣತೆಯ ನೀರಿನಿಂದ ತೊಳೆಯಿರಿ.

Continue Reading

ಆರೋಗ್ಯ

Home Remedies for Skin: ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದು ಹೇಗೆ?

Home Remedies for Skin: ದೇಹಕ್ಕೆ ದೊರೆಯಬೇಕಾದ ಸತ್ವಗಳು ದೊರೆತಾಗ ಮಾತ್ರವೇ ಆರೋಗ್ಯಯುತ ತ್ವಚೆಯನ್ನು ಹೊಂದುವುದಕ್ಕೆ ಸಾಧ್ಯ. ಅದರಲ್ಲೂ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಂಥ ಆಹಾರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಜೊತೆಗೆ ಕೆಲವು ಫೇಸ್‌ಪ್ಯಾಕ್‌ ಅಥವಾ ಫೇಸ್‌ ಮಾಸ್ಕ್‌ಗಳು ಸಹ ಒಳ್ಳೆಯ ಫಲಿತಾಂಶ ನೀಡಬಲ್ಲವು. ಅಂಥ ಕೆಲವನ್ನು ಇಲ್ಲಿ ವಿವರಿಸಲಾಗಿದೆ.

VISTARANEWS.COM


on

Monsoon Skincare
Koo

ಪ್ರಾಯವನ್ನು ಮುಚ್ಚಿಡುವುದಕ್ಕೆ ಸಾಧ್ಯವೇ ಎಂಬ ಬಗ್ಗೆ ಮಾನವನ ಶೋಧ ಕೊನೆಯರಿಯದ್ದು. ನಮ್ಮ ಆಹಾರ, ಜೀವನಶೈಲಿ, ವಂಶವಾಹಿಗಳೆಲ್ಲ ಸೇರಿ ನಮ್ಮ ಚರ್ಮದ ನಯ, ಹೊಳಪು, ಸುಕ್ಕು ಮುಂತಾದ ಬಹಳಷ್ಟನ್ನು ನಿರ್ಧರಿಸುತ್ತವೆ, ಎಂಬಲ್ಲಿಗೆ ನಮಗೆ ವಯಸ್ಸಾದಂತೆ ಕಾಣುವುದು ಅಥವಾ ಕಾಣದಿರುವುದನ್ನೂ ನಿರ್ಧರಿಸುತ್ತವೆ ಎಂದಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ದೇಹಕ್ಕೆ ದೊರೆಯಬೇಕಾದ ಸತ್ವಗಳು ದೊರೆತಾಗ ಮಾತ್ರವೇ ಆರೋಗ್ಯಯುತ ತ್ವಚೆಯನ್ನು ಹೊಂದುವುದಕ್ಕೆ ಸಾಧ್ಯ. ಅದರಲ್ಲೂ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಂಥ ಆಹಾರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಜೊತೆಗೆ ಕೆಲವು ಫೇಸ್‌ಪ್ಯಾಕ್‌ ಅಥವಾ ಫೇಸ್‌ ಮಾಸ್ಕ್‌ಗಳು ಸಹ ಒಳ್ಳೆಯ ಫಲಿತಾಂಶ ನೀಡಬಲ್ಲವು. ಅಂಥ ಕೆಲವನ್ನು (Home Remedies for Skin) ಇಲ್ಲಿ ವಿವರಿಸಲಾಗಿದೆ.

beautiful asian young woman eating healthy food Sleep Tips

ಆಹಾರ

ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದ ಆಹಾರಗಳ ಸೇವನೆ ಅತಿಮುಖ್ಯ. ಇವುಗಳು ದೇಹದಲ್ಲಿ ಕೊಲಾಜಿನ್‌ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರಿಂದ ಚರ್ಮ ಸುಕ್ಕಾಗುವುದನ್ನು ತಡೆಯುವುದು ಮಾತ್ರವಲ್ಲ, ಕೀಲುಗಳು ಸವೆಯದಂತೆಯೂ ಕಾಪಾಡಿಕೊಳ್ಳಬಹುದು. ಒಮೇಗಾ ೩ ಕೊಬ್ಬಿನಾಮ್ಲ ಹೆಚ್ಚಿರುವ ಆಹಾರಗಳು, ವಿಟಮಿನ್‌ ಸಿ ಅಧಿಕವಿರುವ ಹಣ್ಣು ತರಕಾರಿಗಳು, ವಿಟಮಿನ್‌ ಇ ಹೇರಳವಾಗಿರುವ ಕಾಯಿ-ಬೀಜಗಳು- ಇವೆಲ್ಲವೂ ದಿನವೂ ನಮ್ಮ ಆಹಾರದ ಭಾಗವಾಗಿರಬೇಕು.

Aloe Vera Herbs For Hair Growth Aloe vera contains enzymes that can promote healthy hair growth by removing dead skin cells from the scalp and promoting hair follicle health.

ಲೋಳೆಸರ

ಅಲೋವೇರಾ ಎಂದೇ ಕರೆಸಿಕೊಳ್ಳುವ ಇದನ್ನು ಯಾವುದೇ ಫೇಸ್‌ ಮಾಸ್ಕ್‌ಗೆ ಬಳಸುವ ಬದಲು, ಇದನ್ನೇ ಪ್ರತ್ಯೇಕವಾಗಿ ಮುಖಕ್ಕೆ ಲೇಪಿಸಬಹುದು. ಇದರಲ್ಲಿರುವ ಮ್ಯಾಲಿಕ್‌ ಆಮ್ಲವು ಚರ್ಮದ ಮೇಲೆ ಅತ್ಯಂತ ಪೂರಕ ಪರಿಣಾಮವನ್ನು ಬೀರುತ್ತದೆ. ಚರ್ಮವನ್ನು ಬಿಗಿಗೊಳಿಸಿ, ಸುಕ್ಕುಗಳನ್ನು ನಿವಾರಿಸಿ, ಶುಷ್ಕತೆಯನ್ನು ಹೋಗಲಾಡಿಸುತ್ತದೆ. ಇದನ್ನು ಲೇಪಿಸಿ ಸುಮಾರು ೨೦ ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಮೊಟ್ಟೆ, ಜೇನುತುಪ್ಪದ ಮಾಸ್ಕ್‌

ಮೊಟ್ಟೆಯ ಬಿಳಿಯ ಭಾಗ ಇದಕ್ಕೆ ಸೂಕ್ತವಾದದ್ದು. ಇದರಲ್ಲಿರುವ ಅಲ್ಬುಮಿನ್‌ ಅಂಶವು ಚರ್ಮದಲ್ಲಿ ಕೊಲಾಜಿನ್‌ ಹೆಚ್ಚಳಕ್ಕೆ ನೆರವಾಗುತ್ತದೆ. ಜೊತೆಗೆ ಜೇನುತುಪ್ಪವು ಚರ್ಮದ ನೈಸರ್ಗಿಕ ತೇವಾಂಶ ನಾಶವಾಗದಂತೆ ನೋಡಿಕೊಳ್ಳುತ್ತದೆ. ಮೊಟ್ಟೆಯ ಬಿಳಿ ಭಾಗ ಮತ್ತು ಜೇನುತುಪ್ಪದ ಮಿಶ್ರಣವನ್ನು ಮುಖಕ್ಕೆಲ್ಲ ಲೇಪಿಸಿ ಕನಿಷ್ಟ ೨೦ ನಿಮಿಷಗಳಾದರೂ ಬಿಡಿ. ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆದರಾಯ್ತು.

Extra virgin olive oil Foods For Healthy Joints And Muscles

ಆಲಿವ್‌ ಎಣ್ಣೆ

ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿಂದ ಭರಿತವಾದ ಆಲಿವ್‌ ಎಣ್ಣೆಯಲ್ಲಿ ವಿಟಮಿನ್‌ ಎ ಮತ್ತು ಇ ಅಂಶಗಳು ಹೇರಳವಾಗಿವೆ. ಇವು ಚರ್ಮದ ಆರೋಗ್ಯ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ರಾತ್ರಿ ಮಲಗುವ ಮುನ್ನ, ಆಲಿವ್‌ ಎಣ್ಣೆಯ ಕೆಲವು ಹನಿಗಳನ್ನು ಅಂಗೈಗೆ ಹಾಕಿಕೊಂಡು ಅದನ್ನು ಮುಖಕ್ಕೆಲ್ಲ ಲೇಪಿಸಿ. ಲಘುವಾಗಿ ವೃತ್ತಾಕಾರವಾಗಿ ಮುಖವನ್ನೆಲ್ಲ ಮಸಾಜ್‌ ಮಾಡುತ್ತಾ ಬನ್ನಿ. ಇದನ್ನು ರಾತ್ರಿಡೀ ಹಾಗೆಯೇ ಇರಿಸಿಕೊಂಡು ಮಲಗುವುದು ಸೂಕ್ತ. ಇದರಿಂದ ಚರ್ಮದ ಆರೈಕೆಗೆ ಅನುಕೂಲವಾಗುತ್ತದೆ.

Image Of Cucumber Benefits

ಸೌತೇಕಾಯಿ

ಈ ತರಕಾರಿಯಲ್ಲಿರುವ ನೀರಿನಂಶ ಮತ್ತು ಸಿಲಿಕಾಗಳು ಚರ್ಮದ ಬಿಗಿಯನ್ನು ಹೆಚ್ಚಿಸಿ, ಶುಷ್ಕತೆಯನ್ನು ಹೋಗಲಾಡಿಸುತ್ತವೆ. ಜೊತೆಗೆ ಚರ್ಮದ ಕಾಂತಿಯನ್ನು ಸಹ ಹೆಚ್ಚಿಸುತ್ತವೆ. ತಾಜಾ ಸೌತೇಕಾಯಿ ತುರಿಯನ್ನು ಮುಖದ ಮೇಲೆಲ್ಲ ಲೇಪಿಸಿ, ಅರ್ಧ ತಾಸು ಬಿಡಿ. ನಂತರ ತಂಪಾದ ನೀರಿನಲ್ಲಿ ಮುಖ ತೊಳೆಯುವುದರಿಂದ, ಇಡೀ ಮುಖದ ಚರ್ಮವೆಲ್ಲ ತಾಜಾ ಆಗುತ್ತದೆ.

ಇದನ್ನೂ ಓದಿ: Breastfeeding diet: ಹಾಲುಣಿಸುವ ಅಮ್ಮಂದಿರ ಆಹಾರ ಹೇಗಿರಬೇಕು?

ಅವಕಾಡೊ

ಬೆಣ್ಣೆ ಹಣ್ಣು ಚರ್ಮದ ಆರೈಕೆಯಲ್ಲಿ ಮಾತ್ರವೇ ಅಲ್ಲ, ಇಡೀ ಶರೀರಕ್ಕೆ ಬೇಕಾದ ಆರೈಕೆಯನ್ನೂ ಒದಗಿಸುವಷ್ಟು ಪೌಷ್ಟಿಕಾಂಶಗಳನ್ನು ಹೊಂದಿದೆ. ಚರ್ಮಕ್ಕೆ ಬೇಕಾದ ಕೊಲಾಜಿನ್‌ ಉತ್ಪಾದನೆಗೆ ಅಗತ್ಯವಾದ ಸತ್ವಗಳನ್ನು ಇದು ನೀಡುತ್ತದೆ. ಆರೋಗ್ಯಕರವಾದ ಕೊಬ್ಬಿನಂಶ, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಇದು ಚರ್ಮಕ್ಕೆ ಒದಗಿಸುತ್ತದೆ. ಚೆನ್ನಾಗಿ ಹಣ್ಣಾದ ಅವಕಾಡೊವನ್ನು ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿ. ಅರ್ಧ ತಾಸಿನ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ.

Continue Reading
Advertisement
Prosecution against Siddaramaiah Hc reserves verdict after hearing arguments
ಕೋರ್ಟ್1 hour ago

CM Siddaramaiah : ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್;​ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿಸಿರಿದ ಹೈಕೋರ್ಟ್, ಮಧ್ಯಂತರ ತಡೆ ಮುಂದುವರಿಕೆ

Colon cancer is on the rise‌ Those above 50 years of age are targeted
ಆರೋಗ್ಯ2 hours ago

Colon cancer : ಕರುಳಿನ ಕ್ಯಾನ್ಸರ್ ವಯಸ್ಸಾದವರಿಗೆ ಕಂಟಕ! ಈ ಆಹಾರಗಳನ್ನು ತಿನ್ನಲೇಬೇಡಿ

Suvarna Celebrity League a reality show launched on Star Suvarna
ಸಿನಿಮಾ3 hours ago

Suvarna Celebrity League : ವಾರಾಂತ್ಯದಲ್ಲಿ ಸೆಲೆಬ್ರಿಟಿಗಳ ಸಮರ; ಕಿರುತೆರೆಯಲ್ಲಿ ಶುರುವಾಗಲಿದೆ ಸುವರ್ಣ ಸೆಲೆಬ್ರಿಟಿ ಲೀಗ್

Self harming
ಬೆಂಗಳೂರು5 hours ago

Self Harming : ಅಮ್ಮ ಬೈಕ್‌ ಕೊಡಿಸಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಯುವಕ

Actor darshan
ಸಿನಿಮಾ6 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಗ್ಯಾಂಗ್‌ಗೆ ಮತ್ತೊಂದು ದಿನ ಸೆರೆವಾಸ; ನಾಳೆಗೆ ವಿಚಾರಣೆ ಮುಂದೂಡಿದ ಕೋರ್ಟ್‌

CM Siddaramaiah
ರಾಜಕೀಯ6 hours ago

CM Siddaramaiah : ಸಿದ್ದರಾಮಯ್ಯ ವಿಷ್ಯದಲ್ಲಿ ಆತುರದ ನಿರ್ಣಯ; ರಾಜ್ಯಪಾಲರಿಂದ ಸಂವಿಧಾನಕ್ಕೆ ಅಪಚಾರ- ಹಿರಿಯ ವಕೀಲ ಅಭಿಷೇಕ್‌ ಮನುಸಿಂಘ್ವಿ

Road Accident
ಪ್ರಮುಖ ಸುದ್ದಿ8 hours ago

Road Accident : ಏರ್‌ಪೋರ್ಟ್‌ ರೋಡ್‌ನಲ್ಲಿ ಡೆಡ್ಲಿ ಹಿಟ್‌ ಆ್ಯಂಡ್‌ ರನ್‌; ಲಾಂಗ್‌ ಡ್ರೈವ್‌‌ ಬಂದಿದ್ದ ಮೂವರು ವಿದ್ಯಾರ್ಥಿಗಳು ಬಲಿ

Dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯವರ ಅನುಮಾನವೇ ಸಂಬಂಧಗಳನ್ನು ಹಾಳು ಮಾಡುತ್ತೆ

Installation of Ganesha idol at home Muslim man preaches message of unity
ಗದಗ1 day ago

Ganesh Chaturthi: ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಭಾವೈಕ್ಯತೆಯ ಸಂದೇಶ ಸಾರಿದ ಮುಸ್ಲಿಂ ವ್ಯಕ್ತಿ

karnataka weather Forecast
ಮಳೆ2 days ago

Karnataka Weather : 40 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಭಾರಿ ಮಳೆ ಎಚ್ಚರಿಕೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್2 weeks ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 weeks ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌