High Calcium Foods: ದೇಹಕ್ಕೆ ಮುಖ್ಯವಾದ ಅಧಿಕ ಕ್ಯಾಲ್ಶಿಯಂ ಆಹಾರಗಳನ್ನು ಪಡೆಯುವುದು ಹೇಗೆ? - Vistara News

ಆರೋಗ್ಯ

High Calcium Foods: ದೇಹಕ್ಕೆ ಮುಖ್ಯವಾದ ಅಧಿಕ ಕ್ಯಾಲ್ಶಿಯಂ ಆಹಾರಗಳನ್ನು ಪಡೆಯುವುದು ಹೇಗೆ?

High Calcium Foods: ಕ್ಯಾಲ್ಶಿಯಂ ಆಹಾರ ಎನ್ನುತ್ತಿದ್ದಂತೆ ನಮಗೆ ನೆನಪಾಗುವುದು ಡೇರಿ ಉತ್ಪನ್ನಗಳು. ಆದರೆ ಕ್ಯಾಲ್ಶಿಯಂ ಆಹಾರಗಳು ಅದಷ್ಟೇ ಅಲ್ಲ, ಇನ್ನೂ ಎಷ್ಟೋ ಬೇರೆಯ ಆಹಾರಗಳು ಒಂದು ಸರ್ವಿಂಗ್‌ನಲ್ಲಿ ಒಂದು ಗ್ಲಾಸ್‌ ಹಾಲಿಗಿಂತಲೂ ಹೆಚ್ಚಿನ ಕ್ಯಾಲ್ಶಿಯಂ ಒದಗಿಸುತ್ತವೆ ದೇಹಕ್ಕೆ. ಯಾವ ಆಹಾರಗಳವು? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

High Calcium Foods
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕ್ಯಾಲ್ಶಿಯಂ ಖನಿಜ (High Calcium Foods) ನಮ್ಮ ಆರೋಗ್ಯಕ್ಕೆ ಅಗತ್ಯ ಎಂಬುದು ನಮಗೆಲ್ಲ ಗೊತ್ತು. ಹಲ್ಲು, ಮೂಳೆಗಳಿಂದ ಹಿಡಿದು ನಮ್ಮಿಡೀ ದೇಹದ ಸ್ವಾಸ್ಥ್ಯ ರಕ್ಷಣೆಗೆ ಇದು ಅಗತ್ಯ. ನರಗಳ ಆರೋಗ್ಯ ಚೆನ್ನಾಗಿರಿಸಲು, ಸ್ನಾಯುಗಳ ವಿಕಸನಕ್ಕೆ, ರಕ್ತ ಹೆಪ್ಪುಗಟ್ಟಲು… ಹೀಗೆ ಬಹಳಷ್ಟು ಕೆಲಸಗಳಿಗೆ ಕ್ಯಾಲ್ಶಿಯಂ ಅಗತ್ಯವಿದೆ. ಕ್ಯಾಲ್ಶಿಯಂ ಆಹಾರ ಎನ್ನುತ್ತಿದ್ದಂತೆ ನಮಗೆ ನೆನಪಾಗುವುದು ಡೇರಿ ಉತ್ಪನ್ನಗಳು. ಸಸ್ಯಾಹಾರಿಗಳಂತೂ ಹಾಲು, ಚೀಸ್‌, ಪನೀರ್‌ ಮುಂತಾದವುಗಳನ್ನೇ ಕ್ಯಾಲ್ಶಿಯಂ ಪೂರೈಕೆಗೆ ನೆಚ್ಚಿಕೊಂಡಿರುತ್ತಾರೆ. ಆದರೆ ಕ್ಯಾಲ್ಶಿಯಂ ಆಹಾರಗಳು ಅದಷ್ಟೇ ಅಲ್ಲ, ಇನ್ನೂ ಎಷ್ಟೋ ಬೇರೆಯ ಆಹಾರಗಳು ಒಂದು ಸರ್ವಿಂಗ್‌ನಲ್ಲಿ ಒಂದು ಗ್ಲಾಸ್‌ ಹಾಲಿಗಿಂತಲೂ ಹೆಚ್ಚಿನ ಕ್ಯಾಲ್ಶಿಯಂ ಒದಗಿಸುತ್ತವೆ ದೇಹಕ್ಕೆ. ಯಾವ ಆಹಾರಗಳವು?

Greens vegetables

ಹಸಿರು ಸೊಪ್ಪುಗಳು

ಪಾಲಕ್‌ ಸೊಪ್ಪು, ಲೆಟೂಸ್‌, ಸ್ವಿಸ್‌ ಚಾರ್ಡ್‌, ಸಾಸಿವೆ ಸೊಪ್ಪುಗಳು, ಟರ್ನಿಪ್‌ ಸೊಪ್ಪು, ಕೆಲವು ಬಗೆಯ ಎಲೆಕೋಸು ಮುಂತಾದ ಹಲವು ಬಗೆಯ ಸೊಪ್ಪುಗಳಲ್ಲಿ ಕ್ಯಾಲ್ಶಿಯಂ ಅಂಶ ಅಧಿಕವಾಗಿದೆ. ಒಂದು ಕಪ್‌ ಬೇಯಿಸಿದ ಸೊಪ್ಪಿನಲ್ಲಿ 265 ಮಿ.ಗ್ರಾಂನಷ್ಟು ಕ್ಯಾಲ್ಶಿಯಂ ದೊರೆಯುತ್ತದೆ. ಅದೇ ಒಂದು ಕಪ್‌ (160 ಎಂ.ಎಲ್‌) ಹಾಲಿನಲ್ಲಿ 250 ಮಿ.ಗ್ರಾಂ.ನಷ್ಟು ಕ್ಯಾಲ್ಶಿಯಂ ಇರುತ್ತದೆ. ಹಾಗಾಗಿ ಇಂಥ ಸೊಪ್ಪುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಕ್ಯಾಲ್ಶಿಯಂ ಮಾತ್ರವಲ್ಲ, ಅವುಗಳಿಂದ ದೊರೆಯುವ ಸೂಕ್ಷ್ಮ ಪೋಷಕಾಂಶಗಳು ದೇಹದ ಆರೋಗ್ಯ ಹೆಚ್ಚಿಸುವಲ್ಲಿ ಮಹತ್ವದ ಕೆಲಸ ಮಾಡುತ್ತವೆ.

Mackerel fish on ice
Broccoli

ಮೀನು

ಮೀನುಗಳಲ್ಲಿರುವ ಲೀನ್‌ ಮೀಟ್‌ ಆರೋಗ್ಯಕ್ಕೆ ಸೂಕ್ತವಾದದ್ದು. ಅದರಲ್ಲೂ ಭೂತಾಯಿಯಂಥ ಮೀನಿನಲ್ಲಿ ಕ್ಯಾಲ್ಶಿಯಂ ಪ್ರಮಾಣ ಅಧಿಕ 3.75 ಔನ್ಸ್‌ ಮೀನಿನಿಂದ 325 ಎಂ.ಜಿ. ಕ್ಯಾಲ್ಶಿಯಂ ದೊರೆಯುತ್ತದೆ. ಇದರಲ್ಲಿ ಕ್ಯಾಲ್ಶಿಯಂ ಮಾತ್ರವಲ್ಲ, ಹಲವು ಬಗೆಯ ಖನಿಜಗಳು ಮತ್ತು ಒಮೇಗಾ 3 ಕೊಬ್ಬಿನಾಮ್ಲವೂ ಇದರಿಂದ ವಿಫುಲವಾಗಿ ಸಿಗುತ್ತದೆ.

Health Benefits Of Tofu

ತೋಫು

ಸೋಯಾ ಉತ್ಪನ್ನವಾದ ತೋಫುವಿನಲ್ಲೂ ಅಧಿಕ ಪ್ರಮಾಣದಲ್ಲಿ ಕ್ಯಾಲ್ಶಿಯಂ ಇದೆ. ಇದರ ಸಂಸ್ಕರಣೆಯಲ್ಲಿ ಕ್ಯಾಲ್ಶಿಯಂ ಸಲ್ಫೇಟ್‌ ಬಳಸಲಾಗಿದ್ದರೆ, ಅರ್ಧ ಕಪ್‌ ತೋಫುವಿನಿಂದ 250ರಿಂದ 850 ಎಂ.ಜಿ.ವರೆಗೂ ಕ್ಯಾಲ್ಶಿಯಂ ದೊರೆಯುತ್ತದೆ. ನೋಡುವುದಕ್ಕೆ ಪನೀರ್‌ನಂತೆಯೇ ಇರುವ ಇದನ್ನು ಹಲವು ರೀತಿಯ ಅಡುಗೆಗಳಲ್ಲಿ ಬಳಸಿ, ಕ್ಯಾಲ್ಶಿಯಂ ಸೇವನೆಯನ್ನು ಹೆಚ್ಚಿಸಿಕೊಳ್ಳಬಹುದು.

Black Chia Seed

ಚಿಯಾ ಬೀಜಗಳು

ನೋಡುವುದಕ್ಕೆ ತೀರಾ ಸಣ್ಣದಾಗಿರು ಈ ಬೀಜಗಳು ಸತ್ವದಲ್ಲಿ ತ್ರಿವಿಕ್ರಮನಂತೆ. ಕೇವಲ ಎರಡು ಟೇಬಲ್‌ ಚಮಚ ಚಿಯಾ ಬೀಜಗಳಿಂದ 180 ಎಂ.ಜಿ. ಕ್ಯಾಲ್ಶಿಯಂ ದೊರೆಯುತ್ತದೆ. ಇವುಗಳನ್ನು ನೀರಿನಲ್ಲಿ ನೆನೆಸಿ, ನಂತರ ಸ್ಮೂದಿ, ಸಲಾಡ್‌ ಮುಂತಾದ ಯಾವುದಕ್ಕೇ ಆದರೂ ಸೇರಿಸಿಕೊಳ್ಳಬಹುದು. ಇವುಗಳಲ್ಲಿ ನಾರು ಮತ್ತು ಒಳ್ಳೆಯ ಕೊಬ್ಬು ವಿಫುಲವಾಗಿವೆ.

sesame-seeds

ಎಳ್ಳು

ಇದನ್ನು ಅಂತೆಯೇ ತಿನ್ನುವುದಕ್ಕಿಂತ ಚಟ್ನಿಯಂತೆ ರುಬ್ಬಿ ತಿನ್ನುವುದು ಹೆಚ್ಚು ಪರಿಣಾಮಕಾರಿ. ಯಾವುದೇ ರೀತಿಯಲ್ಲಿ ಎಳ್ಳನ್ನು ರುಬ್ಬಿ ಅಡುಗೆಗೆ ಸೇರಿಸಿಕೊಳ್ಳಬಹುದು. ಎರಡು ಟೇಬಲ್‌ ಚಮಚ ಎಳ್ಳಿನಿಂದ 130 ಎಂ.ಜಿ.ಯಷ್ಟು ಕ್ಯಾಲ್ಶಿಯಂ ದೊರೆಯುತ್ತದೆ.

Broccoli

ಬ್ರೊಕೊಲಿ

ವಿಟಮಿನ್‌ ಸಿ ಮತ್ತು ಕೆ ಹೆಚ್ಚಾಗಿರುವ ಈ ತರಕಾರಿಯನ್ನು ಯಾವುದೇ ರೂಪದಲ್ಲಿ ತಿಂದರೂ ಆರೋಗ್ಯಕ್ಕೆ ಒಳ್ಳೆಯದು. ಒಂದು ಕಪ್‌ ಬೇಯಿಸಿದ ಬ್ರೊಕೊಲಿಯಿಂದ 62 ಎಂ.ಜಿ. ಕ್ಯಾಲ್ಶಿಯಂ ದೊರೆಯುತ್ತದೆ. ಉಳಿದೆಲ್ಲ ಹಸಿರು ಸೊಪ್ಪುಗಳ ಜೊತೆಗೆ ಇದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬಹುದು.

ಇದನ್ನೂ ಓದಿ: Water For Health: ಆರೋಗ್ಯವಾಗಿರಬೇಕೆಂದರೆ ನಾವು ದಿನಕ್ಕೆಷ್ಟು ನೀರು ಕುಡಿಯಬೇಕು?

ಬಾದಾಮಿ, ಅಂಜೂರ

ಒಂದು ಔನ್ಸ್‌ ಬಾದಾಮಿಯಲ್ಲಿ (ಅಂದಾಜು 23 ಬಾದಾಮಿ) 76 ಎಂ.ಜಿ.ಯಷ್ಟು ಕ್ಯಾಲ್ಶಿಯಂ ದೊರೆಯುತ್ತದೆ. ಅದಲ್ಲದೆ, ಈ ಬೀಜಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೊಟೀನ್‌ ಮತ್ತು ಇತರ ಖನಿಜಗಳು ಧಾರಾಳವಾಗಿವೆ. ಅಂಜೂರವೂ ಇದಕ್ಕಿಂತ ಕಡಿಮೆಯೇನಿಲ್ಲ. ಕಾಲು ಕಪ್‌ನಷ್ಟು ಅಂಜೂರದಲ್ಲಿ ಸುಮಾರು 90 ಎಂ.ಜಿಯಷ್ಟು ಕ್ಯಾಲ್ಶಿಯಂ ದೊರೆಯುತ್ತದೆ. ಇದರಲ್ಲಿ ನಾರಿನಂಶವೂ ಸಾಕಷ್ಟಿದ್ದು, ಜೀರ್ಣಾಂಗಗಳ ಆರೋಗ್ಯವನ್ನು ವೃದ್ಧಿಸುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Knuckle Cracking: ನೆಟಿಕೆ ಮುರಿಯುವುದು ಒಳ್ಳೆಯದೇ ಕೆಟ್ಟದ್ದೇ? ಇದರಿಂದ ಸಂಧಿವಾತ ಬರುತ್ತದೆಯೇ?

Knuckle Cracking: ಬೆರಳುಗಳನ್ನು ಒಮ್ಮೆ ಎಳೆದು ಅಥವಾ ಮಡಚಿ, ಟಕ್‌ ಎಂಬ ಶಬ್ದ ಕೇಳಿದಾಗ ನಮಗೆ ನೆಮ್ಮದಿಯ ಅನುಭವವಾಗುತ್ತದೆ. ಆಹಾ ಎಂಬ ನಿಟ್ಟುಸಿರು ಬಿಡುತ್ತೇವೆ. ಅನೇಕರಿಗೆ ಇದು ನಿತ್ಯದ ಅಭ್ಯಾಸ. ದಿನಕ್ಕೊಮ್ಮೆ ನೆಟಿಕೆ ಮುರಿಯದಿದ್ದರೆ ಯಾಕೋ ಏನೋ ಕಳೆದುಕೊಂಡ ಭಾವ. ಆದರೆ, ಇನ್ನೂ ಕೆಲವರಿಗೆ ನೆಟಿಕೆ ಮುರಿಯುವುದು ಆಗದು. ಎಲ್ಲಿ ಬೆರಳು ಮುರಿದೇ ಬಿಡುತ್ತೇವೋ ಎಂಬ ಆತಂಕ ಕೆಲವರದ್ದು. ಒಟ್ಟಾರೆ, ಹೇಳುವುದಾದರೆ, ನೆಟಿಕೆ ಮುರಿಯುವುದು ಹಲವರ ಒಂದು ಅಭ್ಯಾಸ. ಉದ್ವೇಗವನ್ನು ದೂರ ಮಾಡುವ ಮಾರ್ಗವೂ ಹೌದು. ಆದರೆ…

VISTARANEWS.COM


on

knuckle cracking
Koo

ನಾವು ಬಹಳಷ್ಟು ಮಂದಿ ಕೈಕಾಲುಗಳ ಬೆರಳುಗಳಲ್ಲಿ, ಗಂಟುಗಳಲ್ಲಿ ನೆಟಿಕೆ ಮುರಿಯುವುದರ (Knuckle Cracking) ಮೂಲಕ ರಿಲ್ಯಾಕ್ಸ್‌ ಫೀಲ್‌ ಮಾಡುತ್ತೇವೆ. ಬೆರಳುಗಳನ್ನು ಒಮ್ಮೆ ಎಳೆದು ಅಥವಾ ಮಡಚಿ, ಟಕ್‌ ಎಂಬ ಶಬ್ದ ಕೇಳಿದಾಗ ನಮಗೆ ನೆಮ್ಮದಿಯ ಅನುಭವವಾಗುತ್ತದೆ. ಆಹಾ ಎಂಬ ನಿಟ್ಟುಸಿರು ಬಿಡುತ್ತೇವೆ. ಅನೇಕರಿಗೆ ಇದು ನಿತ್ಯದ ಅಭ್ಯಾಸ. ದಿನಕ್ಕೊಮ್ಮೆ ನೆಟಿಕೆ ಮುರಿಯದಿದ್ದರೆ ಯಾಕೋ ಏನೋ ಕಳೆದುಕೊಂಡ ಭಾವ. ಆದರೆ, ಇನ್ನೂ ಕೆಲವರಿಗೆ ನೆಟಿಕೆ ಮುರಿಯುವುದು ಆಗದು. ಎಲ್ಲಿ ಬೆರಳು ಮುರಿದೇ ಬಿಡುತ್ತೇವೋ ಎಂಬ ಆತಂಕ ಕೆಲವರದ್ದು. ಒಟ್ಟಾರೆ, ಹೇಳುವುದಾದರೆ, ನೆಟಿಕೆ ಮುರಿಯುವುದು ಹಲವರ ಒಂದು ಅಭ್ಯಾಸ. ಉದ್ವೇಗವನ್ನು ದೂರ ಮಾಡುವ ಮಾರ್ಗವೂ ಹೌದು. ಈ ನೆಟಿಕೆ ತೆಗೆಯುವ (Knuckle Cracking) ಅಭ್ಯಾಸಕ್ಕೆ ಯಾವುದೇ ವೈಜ್ಞಾನಿಕ, ಮಾನಸಿಕ ಕಾರಣಗಳಿಲ್ಲ. ಆದರೆ ಇದು ಚಡಪಡಿಕೆಯ ಸಂಕೇತ. ಸುಮ್ಮನೆ ಕುಳಿತಲ್ಲಿ, ಕಾಯುತ್ತಾ ಇರುವಾಗ, ತಮ್ಮ ಸರದಿಗಾಗಿ ಉದ್ವೇಗದಲ್ಲಿ ಕುಳಿತಿರುವಾಗ, ಪರೀಕ್ಷೆ ಬರೆಯುವ ಮೊದಲು ಹೀಗೆ ಯಾವುದೇ ಸ್ಪರ್ಧೆಗಳನ್ನು ಎದುರಿಸುವುದಕ್ಕೂ ಮೊದಲು ನೆಟಿಕೆ ಮುರಿಯುವ ಅಭ್ಯಾಸವನ್ನು ಅನೇಕರು ರೂಢಿಸಿಕೊಂಡಿರುತ್ತಾರೆ. ಮನಸ್ಸು ಉದ್ವೇಗಕ್ಕೆ ಒಳಗಾಗುವ ಸಂದರ್ಭ ಅದರಿಂದ ಹೊರಬರಲು, ರಿಲ್ಯಾಕ್ಸ್‌ ಮಾಡಿಕೊಳ್ಳುವುದಕ್ಕೂ ಇದನ್ನು ತಮಗರಿವಿಲ್ಲದಂತೆ ಮಾಡುವ ಅಭ್ಯಾಸವನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ಒಟ್ಟಾರೆಯಾಗಿ, ನೆಟಿಕೆ ಮುರಿಯುವುದು, ತಮ್ಮ ಉದ್ವೇಗದಿಂದ, ಹೊರಬರಲು ಮಾಡುವ ಮಾನಸಿಕ ತಯಾರಿಯೂ ಕೆಲವು ಸಂದರ್ಭದಲ್ಲಿ ಆಗಿರುತ್ತದೆ. ನರ್ವಸ್‌ ಆದಾಗಲೂ, ಸ್ಟೇಜ್‌ನ ಮೇಲೆ ಹೋಗುವ ಮೊದಲು ಆಗುವ ಭಯವನ್ನು ನಿವಾರಿಸಲೂ, ಸಂದರ್ಶನಗಳನ್ನು ಎದುರಿಸುವುದಕ್ಕೂ ಮೊದಲು ನೆಟಿಕೆ ಮುರಿಯುವುವಂತೆ ಪ್ರೇರಣೆ ಆಗುವುದೂ ಸಾಮಾನ್ಯ. ಹಾಗಾಗಿ, ನೆಟಿಕೆ ಮುರಿಯುವುದು, ವ್ಯಕ್ತಿತ್ವದ ದೃಷ್ಟಿಯಿಂದ ನೋಡಿದಾಗ ನರ್ವಸ್‌ನೆಸ್‌ನ ಸಂಕೇತವಾಗಿಯೂ ಕಾಣಲಾಗುತ್ತದೆ.

Man Cracking His Knuckles on Blurred Background
Man Cracking His Knuckles on Blurred Background

ಸಂಧಿವಾತ ಬರದು

ಆದರೆ, ಸಮಾಜದಲ್ಲಿ ಸಾಕಷ್ಟು ಮಂದಿಯಲ್ಲಿ, ಈ ನೆಟಿಕೆ ಮುರಿಯುವುದರಿಂದ ಮುಂದೊಮ್ಮೆ ಸಂಧಿವಾತ, ಎಲುಬಿನ ತೊಂದರೆ ಬರುವ ಸಂಭವ ಹೆಚ್ಚಿದೆ ಎಂಬ ನಂಬಿಕೆಯಿದೆ. ನೆಟಿಕೆ ಎಂಬುದು ಸಾಮಾನ್ಯವಾಗಿ ಗಂಟುಗಳನ್ನು ಸದಾ ತೇವವಾಗಿಟ್ಟುಕೊಳ್ಳುವ ಸೈನೋವಿಯಲ್‌ ಎಂಬ ದ್ರವದಲ್ಲಿ ಇರುವ ಗುಳ್ಳೆಗಳು ಒಡೆದಾಗ ಆಗುವ ಶಬ್ದ. ಈ ದ್ರವದಲ್ಲಿ ಸಾರಜನಕ, ಆಮ್ಲಜನಕ, ಕಾರ್ಬನ್‌ ಡೈ ಆಕ್ಸೈಡ್‌ನ ಗುಳ್ಳೆಗಳನ್ನು ಬಿಡುಗಡೆ ಮಾಡುತ್ತವೆ. ನಾವು ನಮ್ಮ ಗಂಟುಗಳನ್ನು ಎಳೆದಾಗ ಹಾಗೂ ಮುರಿದಂತೆ ಮಾಡುವಾಗ ಅದು ʻಟಕ್‌ʼ ಎಂಬ ಸದ್ದಿನೊಂದಿಗೆ ಸಿಡಿಯುತ್ತದೆ. ಇದು ಹಲವರಿಗೆ ಸಂದುಗಳಲ್ಲಿರು ಟೈಟ್‌ನೆಸ್‌ ಅನ್ನು ಕಡಿಮೆ ಮಾಡುವ ಜೊತೆಗೆ ಆರಾಮದ ಅನುಭವ ನೀಡುತ್ತದೆ. ಆದರೆ ಎಲ್ಲರೂ ನಂಬಿರುವಂತೆ ಇದು ಸಂಧಿವಾತ ಅಥವಾ ಮೂಳೆಗಳ ಸಮಸ್ಯೆಯನ್ನು ತಂದೊಡ್ಡುವುದಿಲ್ಲ. ಸಂಧಿವಾತ ವಯಸ್ಸಾದಂತೆ ಹಾಗೂ ವಂಶವಾಹಿನಿಯಿಂದ ಬರುವ ಸಮಸ್ಯೆಯಾಗಿದ್ದು, ನೆಟಿಕೆ ಮುರಿಯುವುದರಿಂದ ಬರುವುದಿಲ್ಲ ಎಂದು ವೈದ್ಯರು ಸ್ಪಷ್ಟವಾಗಿ ಹೇಳುತ್ತಾರೆ. ಆದರೆ, ಸರಿಯಾಗಿ ನೆಟಿಕೆ ತೆಗೆಯದಿದ್ದರೆ, ಖಂಡಿತ ಉಳುಕು ಹಾಗೂ ಸಮಸ್ಯೆಯನ್ನು ತಂದೊಡ್ಡಬಹುದು. ಇಲ್ಲವಾದರೆ ಇದರಿಂದ ಏನೂ ಹಾನಿಯಿಲ್ಲ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Bluetooth Side Effects: ಬ್ಲೂಟೂತ್‌ ಹೆಡ್‌ಫೋನ್‌ ರೇಡಿಯೊ ಕಿರಣಗಳಿಂದ ಕ್ಯಾನ್ಸರ್‌?

Continue Reading

ಆರೋಗ್ಯ

Oats or Quinoa: ಓಟ್ಸ್‌, ಕಿನೊವಾ- ಇವೆರೆಡರಲ್ಲಿ ಯಾವುದು ಬೆಸ್ಟ್?

Oats or Quinoa: ಓಟ್‌ಮೀಲ್‌ ಮತ್ತು ಕಿನೊವಾ ನಡುವೆ ಆರೋಗ್ಯಕ್ಕಾಗಿ ಸ್ಪರ್ಧೆಯೊಂದು ನಡೆಯಿತು ಅಂತಿಟ್ಟುಕೊಳ್ಳಿ. ಗೆದ್ದವರನ್ನು ನಿರ್ಧರಿಸುವುದು ಹೇಗೆ? ಸ್ಪರ್ಧಿಗಳ ಸಾಮರ್ಥ್ಯ, ಸದ್ಗುಣಗಳನ್ನು ನೋಡಿಯೇ ತಾನೇ? ಆ ಎಲ್ಲಾ ಪರೀಕ್ಷೆಗಳೂ ನಡೆದ ಮೇಲೆ ವಿಜೇತರನ್ನು ಘೋಷಿಸಲಾದ್ದು, ಯಾರು ಎಂಬ ಕುತೂಹಲವಿದ್ದರೆ, ಇದನ್ನು ಓದಿ!

VISTARANEWS.COM


on

Oats or Quinoa
Koo

ಆರೋಗ್ಯಕರ ಸ್ಪರ್ಧೆ ಒಳ್ಳೆಯದು; ಆರೋಗ್ಯಕ್ಕಾಗಿ ಸ್ಪರ್ಧೆ ಇನ್ನೂ ಒಳ್ಳೆಯದು; ಆರೋಗ್ಯಕರ ತಿನಿಸುಗಳಲ್ಲೇ ಸ್ಪರ್ಧೆ ಏರ್ಪಟ್ಟರೆ ತಿನ್ನುವವರಿಗೆಲ್ಲ ಒಳ್ಳೆಯದು! ಇದೇನೋ ಒಗಟು ಅಂದುಕೊಳ್ಳಬೇಡಿ, ಎರಡು ಆರೋಗ್ಯಕರ ತಿನಿಸುಗಳ ನಡುವೆ ʻಯಾವುದು ಹೆಚ್ಚು ಒಳ್ಳೆಯದು?ʼ ಎನ್ನುವ ಸ್ಪರ್ಧೆ ಏರ್ಪಟ್ಟರೆ ಹೇಗಿರುತ್ತದೆಂಬ ಕುತೂಹಲ ಇರುವುದಿಲ್ಲವೇ? ಉದಾ, ಓಟ್ಸ್‌ ಮತ್ತು ಕಿನೊವಾ ನಡುವೆ ಯಾವುದನ್ನೂ ನಂಬರ್‌ 1 ಎಂದು ನಿರ್ಧರಿಸುವುದು ಹೇಗೆ? ಇವೆರಡರಲ್ಲಿ ಗೆಲ್ಲುವವರು ಯಾರು? ಇದನ್ನು ನಿರ್ಧರಿಸುವ ಮುನ್ನ, ಯಾವುದರ ಗುಣಗಳು ಏನೇನು (Oats or Quinoa) ಎಂಬುದನ್ನು ಅರ್ಥ ಮಾಡಿಕೊಳ್ಳೋಣ.

Oats For Weight Loss

ಓಟ್ಸ್‌

ಬೀಟಾ ಗ್ಲೂಕನ್‌ ಎಂಬ ಉತ್ಕೃಷ್ಟವಾದ ಕರಗಬಲ್ಲ ನಾರಿನ ಆಗರವಿದು. ದೇಹದಲ್ಲಿ ಜಮೆಯಾಗಿರುವ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ, ಹೃದಯದ ಆರೋಗ್ಯ ಚೆನ್ನಾಗಿರಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ನಾರು ಮಾತ್ರವಲ್ಲ, ಮೆಗ್ನೀಶಿಯಂ, ಮ್ಯಾಂಗನೀಸ್‌, ಫಾಸ್ಫರಸ್‌, ಕಬ್ಬಿಣದಂಥ ಅಗತ್ಯ ಖನಿಜಗಳು ಇದರಲ್ಲಿ ಭರಪೂರ ಇವೆ. ಗ್ಲೂಟೆನ್‌ ರಹಿತವಾದ ಆಹಾರವಾದ್ದರಿಂದ, ಗೋದಿಯಂಥ ಧಾನ್ಯಗಳ ಅಲರ್ಜಿ ಇರುವವರಿಗೆ ಇದು ಸೂಕ್ತವಾದ ಆಹಾರ. ಬೆಳಗಿನ ತಿಂಡಿಗೆ, ಬೇಕ್‌ ಮಾಡುವಾಗ, ಸ್ಮೂದಿಗಳಲ್ಲಿ, ಗ್ರನೋಲಾ ಬಾರ್‌ಗಳಲ್ಲಿ- ಹೀಗೆ ಹಲವು ಬಗೆಯ ಅಡುಗೆಗಳಲ್ಲಿ ಇದನ್ನು ಉಪಯೋಗಿಸಲು ಸಾಧ್ಯವಿದೆ. ಇದು ಹೃದಯದ ಆರೋಗ್ಯಕ್ಕೆ ಪೂರಕ ಮಾತ್ರವಲ್ಲ, ತನ್ನ ನಾರಿನಂಶದಿಂದಾಗಿ ಮಧುಮೇಹ ನಿಯಂತ್ರಣಕ್ಕೂ ಸೂಕ್ತವಾದ ಆಹಾರವಿದು. ಜೀರ್ಣವಾಗಲು ದೀರ್ಘಕಾಲ ತೆಗೆದುಕೊಂಡು, ರಕ್ತದಲ್ಲಿ ಸಕ್ಕರೆಯಂಶ ಏರಿಳಿಯದಂತೆ ನೋಡಿಕೊಳ್ಳುತ್ತದೆ. ಜೀರ್ಣವಾಗಲು ಹೆಚ್ಚು ಸಮಯ ಬೇಕು ಎನ್ನುವ ಕಾರಣಕ್ಕಾಗಿಯೇ ತೂಕ ಇಳಿಸುವವರಿಗೆ ಇದು ಅಚ್ಚುಮೆಚ್ಚು. ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವವನ್ನೇ ನೀಡುತ್ತದೆ. ಹೆಚ್ಚು ನಾರಿನಂಶ ಇರುವ ಆಹಾರಗಳೆಲ್ಲವೂ ಜೀರ್ಣಾಂಗಗದ ಆರೋಗ್ಯವನ್ನು ಚೆನ್ನಾಗಿ ಇಡುವಂಥವು. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಉರಿಯೂತ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಹಾಗಾಗಿ ಬೆಳಗಿನ ಹೊತ್ತು ಒಂದು ಬೌಲ್‌ ತುಂಬಾ ಬಿಸಿಯಾದ ಓಟ್‌ಮೀಲ್‌ ಸವಿಯುವುದಕ್ಕೆ ಯಾವ ತಡೆಯೂ ಇರಲಾರದು.

Quinoa
Quinoa

ಕಿನೊವಾ

ಎಲ್ಲಾ ಒಂಬತ್ತು ಪ್ರಮುಖ ಅಮೈನೋ ಆಮ್ಲಗಳನ್ನು ಹೊಂದಿರುವ ಸಂಪೂರ್ಣ ಪ್ರೊಟೀನ್‌ ಇದರಲ್ಲಿದೆ. ಹಾಗಾಗಿ ಸಸ್ಯಾಹಾರಿಗಳು ಮತ್ತು ವೇಗನ್‌ಗಳು ಅಧಿಕ ಪ್ರೊಟೀನ್‌ ಆಹಾರಗಳಲ್ಲಿ ಇದನ್ನು ನಿಶ್ಚಿತವಾಗಿ ಪರಿಗಣಿಸಬಹುದು. ಇದರಲ್ಲಿ ಕರಗದಿರುವ ಹಾಗೂ ಕರಗಬಲ್ಲ- ಈ ಎರಡೂ ರೀತಿಯ ನಾರುಗಳಿವೆ. ಕರಗದಿರುವ ನಾರುಗಳು ಜೀರ್ಣಾಂಗಗಳನ್ನು ಸಶಕ್ತ ಮಾಡಿ, ಮಲಬದ್ಧತೆಯನ್ನು ದೂರ ಮಾಡುತ್ತವೆ. ಕರಗಬಲ್ಲ ನಾರುಗಳು ದೇಹದಲ್ಲಿ ಜಮೆಯಾಗಿರುವ ಕೊಬ್ಬಿನಂಶವನ್ನು ಖಾಲಿ ಮಾಡಿಸುತ್ತವೆ. ಮೆಗ್ನೀಶಿಯಂ, ಪೊಟಾಶಿಯಂ, ಕಬ್ಬಿಣ, ಹಲವು ರೀತಿಯ ಬಿ ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಇದು ಹೊಂದಿದೆ.
ಪ್ರೋಟನ್‌ ಮತ್ತು ನಾರು- ಈ ಎರಡೂ ಸತ್ವಗಳು ಹೆಚ್ಚಿರುವ ಆಹಾರಗಳು ಬಹುವಿಧಗಳಲ್ಲಿ ನಮ್ಮ ಆರೋಗ್ಯ ಸುಧಾರಣೆಯನ್ನು ಮಾಡಬಲ್ಲವು. ಮಧುಮೇಹ ನಿಯಂತ್ರಣಕ್ಕೆ ಇದು ಸೂಕ್ತವಾದ ಆಹಾರ. ತೂಕ ಇಳಿಸುವವರಿಗಂತೂ ಇದೇ ನಂಬರ್‌ 1. ಗ್ಲೂಟೆನ್‌ ಅಂಶ ಲವಲೇಶವೂ ಇಲ್ಲದಿರುವುದಕ್ಕೆ ಅಲರ್ಜಿಗಳ ರಗಳೆ ಇದರಿಂದ ಕಾಡುವುದಿಲ್ಲ. ಕ್ವೆರ್ಸೆಟಿನ್‌, ಕೆಂಫೆರಾಲ್‌ನಂಥ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಉರಿಯೂತ ಶಮನ ಮಾಡಿ, ಸ್ವಾಸ್ಥ್ಯ ಕಾಪಾಡುತ್ತವೆ. ಇಂಥ ಒಳ್ಳೆಯ ಆಹಾರವನ್ನು ಬಳಸುವುದು ಹೇಗೆ ಎಂಬ ಸಮಸ್ಯೆ ಹಲವರಿಗೆ ಇರಬಹುದು. ನೋಡುವುದಕ್ಕೆ ಸಿರಿಧಾನ್ಯಗಳ ಅಣ್ಣ-ತಮ್ಮನಂತೆ ಕಾಣುವ ಇದನ್ನು ಹಲವು ರೀತಿಯ ಭಾರತೀಯ ಅಡುಗೆಗಳಲ್ಲಿ ಬಳಸಬಹುದು. ಸಲಾಡ್‌, ಸ್ಮೂದಿಗಳಿಂದ ಹಿಡಿದು, ಉಪ್ಪಿಟ್ಟು, ಅವಲಕ್ಕಿಗಳವರೆಗೆ ಇದನ್ನು ಉಪಯೋಗಿಸಬಹುದು. ಅನ್ನದಂತೆ ಸಾರು, ಪಲ್ಯಗಳೊಂದಿಗೆ ಊಟ ಮಾಡಬಹುದು. ಕಿಚಡಿ, ಬಿಸಿಬೇಳೆಭಾತ್‌, ಪಲಾವಿಗೂ ಇದು ಒದಗಿ ಬರುತ್ತದೆ.

ಇದನ್ನೂ ಓದಿ: Foods For Weight Loss: ಈ ಆಹಾರಗಳನ್ನು ಸೇವಿಸಿ; ಸಲೀಸಾಗಿ ತೂಕ ಇಳಿಸಿ!

ಗೆದ್ದವರು ಯಾರು?

ಇವೆರಡರ ಪ್ರವರಗಳನ್ನೆಲ್ಲ ನೋಡಿದ್ದಾಯಿತು. ಈಗ ವಿಜೇತರನ್ನು ಘೋಷಿಸುವ ಸಮಯ… ಇವೆರಡರಲ್ಲಿ ಯಾವುದನ್ನೇ ತಿಂದರೂ ಅಥವಾ ಎರಡನ್ನೂ ತಿಂದರೂ, ಗೆಲ್ಲುವುದು ಮಾತ್ರ ತಿಂದವರು! ಕಾರಣ, ಆರೋಗ್ಯ ಸುಧಾರಿಸುವುದು ಅವರದ್ದೇ ತಾನೆ?

Continue Reading

ಆರೋಗ್ಯ

Hair Oil Tips: ನಮ್ಮ ತಲೆಗೂದಲಿಗೆ ಬೇಕಾದ ತೈಲವನ್ನು ಆಯ್ದುಕೊಳ್ಳುವುದು ಹೇಗೆ?

Hair Oil Tips: ನಮ್ಮ ತಲೆಗೂದಲು ಹೇಗಿದೆ? ಉದ್ದ, ಗಿಡ್ಡ, ದಪ್ಪ, ಸಪೂರ, ಕಪ್ಪು, ಕೆಂಚು- ಇಂಥ ಉತ್ತರಗಳೇ ಬರಬಹುದು, ತಪ್ಪೇನಿಲ್ಲ. ಆದರೆ ನಮ್ಮ ಕೂದಲಿಗೆ ಎಂಥಾ ತೈಲ ಸರಿಹೊಂದುತ್ತದೆ ಎಂಬುದು ನಮಗೆ ತಿಳಿದಿದೆಯೇ? ತಲೆಯ ಚರ್ಮದ ಹೇಗಿದ್ದರೆ, ಅದಕ್ಕೆ ಯಾವ ತೈಲ ಒಳ್ಳೆಯದು ಗೊತ್ತೇ? ಗೊತ್ತಿಲ್ಲದಿದ್ದರೆ, ಇಲ್ಲಿದೆ ವಿವರಗಳು.

VISTARANEWS.COM


on

Hair Oil Tips
Koo

ʻಸರ್ವ ರೋಗಕ್ಕೆ ಒಂದೇ ಮದ್ದುʼ ಅಂತ ಆಗುವುದುಂಟೇ? ಕೆಲವೊಮ್ಮೆ ಉಂಟು! ಉದಾ, ತಲೆಕೂದಲ ಸಮಸ್ಯೆ ಏನೇ ಇದ್ದರೂ ನಮ್ಮ ಅಜ್ಜಿಯರ ಕಾಲದಲ್ಲಿ ಇರುತ್ತಿದ್ದುದು ಒಂದೇ ಮದ್ದು- ತಲೆಗೆ ಹದವಾದ ಎಣ್ಣೆ ಮಸಾಜ್‌ ಮಾಡುವುದು! ನಿಜ, ತಲೆ ನೋವಿನಿಂದ ಪ್ರಾರಂಭವಾಗಿ, ಕೂದಲು ಉದುರುವುದಕ್ಕೆ, ತಲೆ ಹೊಟ್ಟಿಗೆ, ಸೀಳುಗೂದಲಿಗೆ, ಬಾಲನೆರೆಗೆ- ಹೀಗೆ ಎಲ್ಲದಕ್ಕೂ ಎಣ್ಣೆ ಮಸಾಜ್‌ ಅವರ ಉತ್ತರವಾಗಿತ್ತು. ಆದರೆ ಎಣ್ಣೆಗಳನ್ನು ಅವರೇ ತಯಾರು ಮಾಡುತ್ತಿದ್ದರಿಂದ, ಯಾವ ಸಮಸ್ಯೆಗೆ ಎಂಥಾ ಎಣ್ಣೆ ಬೇಕು ಎನ್ನುವುದು ಅವರಿಗೆ ಗೊತ್ತಿರುತ್ತಿತ್ತು. ನಮಗೀಗ ಗೊತ್ತಿಲ್ಲವಲ್ಲ, ಇದು ಸಮಸ್ಯೆ. ಎಂಥಾ ಕೂದಲಿಗೆ ಯಾವ ರೀತಿಯ ಎಣ್ಣೆ ಸೂಕ್ತ? (Hair Oil Tips) ವಿವರಗಳು ಈ ಲೇಖನದಲ್ಲಿವೆ.

ಯಾವ ರೀತಿಯ ಕೂದಲು?

Hair Oil Tips

ನೇರ ಕೂದಲು

ಯಾವುದೇ ಗುಂಗುರು, ಸುರುಳಿಗಳಿಲ್ಲದೇ ನೇರವಾಗಿ ಇಳಿಬೀಳುವ ಕೂದಲುಗಳಿವು. ಇವು ನೋಡುವುದಕ್ಕೆ ಮೃದುವಾದ, ಹೊಳೆಯುವ ಗುಚ್ಛದಂತೆ ಕಾಣುವ ಕೇಶಗಳು. ಪರಿಣಾಮವಾಗಿ, ಕೂದಲಿಗೆ ಸ್ವಲ್ಪ ಎಣ್ಣೆ ಹಾಕಿದರೂ, ತೈಲವನ್ನು ಹಿಡಿದಿಟ್ಟುಕೊಳ್ಳದೆ ಹೊರಸೂಸುತ್ತವೆ, ಅಂಟಾಗಿ ಜಿಡ್ಡಾಗಿ ಕಾಣುತ್ತವೆ. ಇವುಗಳಿಗೆ ಹೆಚ್ಚು ಜಿಡ್ಡಿಲ್ಲದ ಲಘುವಾದ ತೈಲಗಳು ಸೂಕ್ತ. ಬಾದಾಮಿ ಎಣ್ಣೆ, ಜೊಜೂಬಾ ಎಣ್ಣೆ, ಆರ್ಗಾನ್‌ ಎಣ್ಣೆಯಂಥವು ಇದಕ್ಕೆ ಸೂಕ್ತ.

wavy hair

ಅಲೆಯಾದ ಕೂದಲು

“S” ಆಕಾರದಲ್ಲಿ ಕಾಣುವ ಕೂದಲುಗಳಿವು. ಅಲ್ಲಲ್ಲಿ ಸುರುಳಿಗಳಿದ್ದು ನೋಡುವುದಕ್ಕೆ ಸುಂದರ ಕೂದಲುಗಳಿವು. ಆದರೆ ಕೂದಲು ಒಣಗುವ ಮತ್ತು ಸಿಕ್ಕಾಗುವ ಸಾಧ್ಯತೆ ನೇರ ಕೂದಲಿಗಿಂತ ಅಧಿಕ. ಹಾಗಾಗಿ ಹೆಚ್ಚು ಉದುರಲೂಬಹುದು. ಇಂಥ ಕೂದಲಿಗೆ ಮಧ್ಯಮ ಪ್ರಮಾಣದಲ್ಲಿ ಜಿಡ್ಡಿರುವಂಥ ತೈಲಗಳು ಬೇಕು. ತೀರಾ ಲಘುವಾದ ತೈಲಗಳು ನಾಟುವುದೇ ಇಲ್ಲ. ಕೊಬ್ಬರಿ ಎಣ್ಣೆ ಇದಕ್ಕೆ ತಕ್ಕುದಾದದ್ದು. ಬೇರಾವುದೇ ತೈಲಗಳನ್ನು ಮಾಡಿಕೊಳ್ಳುವುದಾದರೂ ಅದಕ್ಕೆ ಆಧಾರವಾಗಿ ಕೊಬ್ಬರಿ ಎಣ್ಣೆಯನ್ನೇ ಉಪಯೋಗಿಸುವುದು ಸೂಕ್ತ.

Thick, curly hair

ದಪ್ಪ, ಗುಂಗುರು ಕೂದಲು

ಇಂಥ ಕೂದಲು ಹೆಚ್ಚು ಉದ್ದ ಬೆಳೆಯಲಾರದು. ಬದಲಿಗೆ ದಪ್ಪನಾಗಿ ಬೆಳೆದು, ಗುಂಗುರಾಗಿ ಭುಜಕ್ಕಿಂತ ಸ್ವಲ್ಪ ಕೆಳಗಿಳಿಯಬಲ್ಲದಷ್ಟೆ. ಇದನ್ನು ಸರಿಗಾಣಿಸಿ ಇರಿಸಿಕೊಳ್ಳುವುದು ಸವಾಲಿನ ಕೆಲಸ. ಇದಕ್ಕೆ ಘನವಾದ ತೈಲಗಳೇ ಬೇಕು. ಇಲ್ಲದಿದ್ದರೆ ಬಾಚಣಿಕೆ ಮೇಲಿಂದ ಕೆಳಕ್ಕಿಳಿಯುವುದೂ ಕಷ್ಟವಾಗಬಹುದು. ಹಾಗಾಗಿ ಆಲಿವ್‌ ಎಣ್ಣೆ, ಎಳ್ಳೆಣ್ಣೆ, ಹರಳೆಣ್ಣೆಯಂಥ ದಿವಿನಾದ ತೈಲಗಳ ಮೊರೆ ಹೋಗುವುದು ಒಳ್ಳೆಯದು. ಒಂದೊಮ್ಮೆ ಈ ತೈಲಗಳ ವಾಸನೆ ಇಷ್ಟವಾಗದಿದ್ದರೆ, ಕೊಬ್ಬರಿ ಎಣ್ಣೆಯನ್ನೇ ನಿತ್ಯವೂ ಲೇಪಿಸಬೇಕಾಗುತ್ತದೆ.

thin hair
Young Woman Takes Care of Her Hair Using Natural Oils and Conditioners for Hair Care

ಸಪೂರ ಕೂದಲು

ಇದು ಕೂದಲು ಉದುರಿ ತೆಳ್ಳಗಾಗಿದ್ದಲ್ಲ, ಇದ್ದಿದ್ದೇ ಸಪೂರ. ಇವು ಸಹ ಬೇಗ ತುಂಡಾಗಿ, ಶಕ್ತಿಹೀನವಾದಂತೆ ಕಾಣುತ್ತವೆ. ಇವುಗಳಿಗೂ ಲಘುವಾದ ತೈಲಗಳೇ ಸೂಕ್ತ. ಜೊಜೂಬಾ ತೈಲ, ತೆಂಗಿನ ಹಾಲಿನ ತೈಲ ಮುಂತಾದ ತೀರಾ ಜಿಡ್ಡಿಲ್ಲದ, ಅಂಟಾಗದಂಥ ಎಣ್ಣೆಗಳು ಇಂಥ ಕೂದಲಿಗೆ ಬೇಕಾಗುತ್ತದೆ. ಅಂಟಾಗುತ್ತದೆಂದು ಎಣ್ಣೆಯನ್ನೇ ಹಾಕದಿದ್ದರೆ ಕೂದಲ ಆರೋಗ್ಯ ಬಿಗಡಾಯಿಸುವುದು ನಿಶ್ಚಿತ.

ತಲೆಯ ಚರ್ಮದಲ್ಲೂ ವಿಧಗಳಿವೆ!: ನಿಮ್ಮದು ಹೇಗಿದೆ?

ಸಾಮಾನ್ಯ ಚರ್ಮ

ಇಂಥ ತಲೆಚರ್ಮಗಳಲ್ಲಿ ಅಧಿಕವಾದ ತೈಲ ಉತ್ಪಾದನೆ ಆಗುವುದಿಲ್ಲ. ತಲೆಸ್ನಾನ ಮಾಡುವುದು ಒಂದೆರಡು ದಿನ ಆಚೀಚೆಯಾದರೆ, ಕೂದಲೆಲ್ಲ ಅಂಟಾಗಿ, ಜಲೀಜಾಗಿ ಮುಂದ್ದೆಯಾಗುವುದಿಲ್ಲ. ಇಂಥವರಿಗೆ ಕೊಬ್ಬರಿ ಎಣ್ಣೆ ಒಳ್ಳೆಯ ಆಯ್ಕೆ.

Young Woman Takes Care of Her Hair Using Natural Oils and Conditioners for Hair Care
Young Woman Takes Care of Her Hair Using Natural Oils and Conditioners for Hair Care

ಎಣ್ಣೆ ಚರ್ಮ

ತಲೆಯ ಚರ್ಮದಲ್ಲಿ ತೈಲ ಅಥವಾ ಸೇಬಂ ಅತಿಯಾಗಿ ಉತ್ಪಾದನೆ ಆಗುತ್ತದೆ ಕೆಲವರಿಗೆ. ಬೇಗನೆ ಕೂದಲು ಕೊಳೆಯಾಗುವುದು, ಅಂಟಾಗುವುದು, ಜೀವವೇ ಇಲ್ಲದಂತೆ ಕಾಣುವುದು, ಹೊಟ್ಟಾಗುವುದೆಲ್ಲ ಇದರ ಅಡ್ಡ ಪರಿಣಾಮಗಳು. ಇಂಥವರು ಲಘುವಾದ ಎಣ್ಣೆಗಳನ್ನೇ ಕೂದಲಿಗೆ ಲೇಪಿಸಬೇಕು. ಜೊಊಬಾ ಎಣ್ಣೆ, ಟೀಟ್ರೀ ಎಣ್ಣೆ, ಗ್ರೇಪ್‌ಸೀಡ್‌ ಎಣ್ಣೆಯಂಥವು ಸೂಕ್ತ.

ಇದನ್ನೂ ಓದಿ: Herbal Supplement: ಅರಿಶಿನ ಸೇರಿದಂತೆ ಹರ್ಬಲ್‌ ಸಪ್ಲಿಮೆಂಟ್‌ ಸೇವಿಸುತ್ತಿದ್ದೀರಾ? ಹಾಗಾದರೆ ಎಚ್ಚರ!

ಒಣ ಚರ್ಮ

ಇವರಲ್ಲಿ ತಲೆಯ ಚರ್ಮಕ್ಕೆ ಹೆಚ್ಚು ತೇವವೇ ಇರುವುದಿಲ್ಲ; ಹಾಗಾಗಿ ಒಣಗಿ ಜೀವವಿಲ್ಲದಂತೆ ಕಾಣುತ್ತದೆ. ಇದರಿಂದಾಗಿ ತಲೆಯಲ್ಲಿ ಹೊಟ್ಟಾಗುವುದು, ತುರಿಕೆ, ಕಿರಿಕಿರಿ ಮಾಮೂಲಾಗುತ್ತದೆ. ಹಾಗೆಯೇ ಬಿಟ್ಟರೆ ಎಕ್ಸಿಮಾ, ಸೋರಿಯಾಸಿಸ್‌ನಂಥ ತೊಂದರೆಗಳು ಬರಬಹುದು. ಹಾಗಾಗಿ ಕೊಬ್ಬರಿ ಎಣ್ಣೆ, ಅವಕಾಡೊ ಎಣ್ಣೆ, ಆಲಿವ್‌ ಎಣ್ಣೆಯಂಥವು ಇವರಿಗೆ ಒಳ್ಳೆಯದ ಆಯ್ಕೆ.

Continue Reading

ಆರೋಗ್ಯ

Herbal Supplement: ಅರಿಶಿನ ಸೇರಿದಂತೆ ಹರ್ಬಲ್‌ ಸಪ್ಲಿಮೆಂಟ್‌ ಸೇವಿಸುತ್ತಿದ್ದೀರಾ? ಹಾಗಾದರೆ ಎಚ್ಚರ!

Herbal supplement: ಅರಿಶಿನ ಎಂಬುದು ಆರೋಗ್ಯದ ವಿಚಾರದಲ್ಲಿ ಚಿನ್ನ ಹೌದೇ ಆದರೂ, ಅತಿಯಾದರೆ ಏನೇನು ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅರಿಶಿನದ ಸಪ್ಲಿಮೆಂಟ್‌ಗಳನ್ನು ಉತ್ತಮ ಆರೋಗ್ಯಕ್ಕಾಗಿ ಎಂಬ ದೃಷ್ಟಿಯಿಂದ ತೆಗೆದುಕೊಳ್ಳುತ್ತಿದ್ದರೆ ಅದರಿಂದ ಪಿತ್ತಕೋಶಕ್ಕೆ ಸಮಸ್ಯೆಯಾಗಬಹುದು ಎಂದು ಇತ್ತೀಚೆಗಿನ ಸಮೀಕ್ಷೆಯೊಂದು ವರದಿ ಮಾಡಿದೆ.

VISTARANEWS.COM


on

Herbal Supplement
Koo

ಅತಿಯಾದರೆ ಅಮೃತವೂ ವಿಷವೇ ಎಂಬ ಮಾತಿಗೆ ಸರಿಯಾದ ಉದಾಹರಣೆಯಿದು. ಅರಿಶಿನ ಎಂಬುದು ಆರೋಗ್ಯದ ವಿಚಾರದಲ್ಲಿ ಚಿನ್ನ ಹೌದೇ ಆದರೂ, ಅತಿಯಾದರೆ ಏನೇನು ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅರಿಶಿನದ ಸಪ್ಲಿಮೆಂಟ್‌ಗಳನ್ನು ಉತ್ತಮ ಆರೋಗ್ಯಕ್ಕಾಗಿ ಎಂಬ ದೃಷ್ಟಿಯಿಂದ ತೆಗೆದುಕೊಳ್ಳುತ್ತಿದ್ದರೆ ಅದರಿಂದ ಪಿತ್ತಕೋಶಕ್ಕೆ ಸಮಸ್ಯೆಯಾಗಬಹುದು ಎಂದು ಇತ್ತೀಚೆಗಿನ ಸಮೀಕ್ಷೆಯೊಂದು ವರದಿ ಮಾಡಿದೆ. ಅರಿಶಿನ, ಗ್ರೀನ್‌ ಟೀ ಎಕ್‌ಟ್ರ್ಯಾಕ್ಟ್‌, ಅಶ್ವಗಂಧ, ಗಾರ್ಸಿನಿಯಾ ಕಾಂಬೋಜಿಯಾ ಇತ್ಯಾದಿಗಳ ಸಪ್ಲಿಮೆಂಟ್‌ಗಳನ್ನು (Herbal Supplement) ಇಂದು ವ್ಯಾಪಕವಾಗಿ ಅಮೆರಿಕವೂ ಸೇರಿದಂತೆ ವಿಶ್ವದೆಲ್ಲೆಡೆ ಜನರು ಸೇವಿಸುತ್ತಿದ್ದು, ಇದರ ಬಳಕೆ ಅನೇಕ ಆರೋಗ್ಯದ ಸಮಸ್ಯೆಗಳನ್ನು ಹುಟ್ಟುಹಾಕಬಹುದು ಎಂದು ವರದಿ ಹೇಳಿದೆ. ವೈದ್ಯರ ಸಲಹೆಯಿಲ್ಲದೆ, ನೇರವಾಗಿ ತಾವೇ ತಾವಾಗಿ ಇಂತಹ ಸಪ್ಲಿಮೆಂಟ್‌ಗಳನ್ನು ಬಳಸುವುದು ಸಾಮಾನ್ಯವಾಗಿದೆ. ಅಗತ್ಯವಿಲ್ಲದೆ ಇವುಗಳನ್ನು ಸೇವನೆ ಮಾಡುವುದರಿಂದ ಪಿತ್ತಕೋಶದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಸಂಧಿವಾತದಂತಹ ಸಮಸ್ಯೆಗೆ ಅರಿಶಿನದ ಸಪ್ಲಿಮೆಂಟ್‌, ಶಕ್ತಿವರ್ಧನೆಗೆ ಗ್ರೀನ್‌ಟೀ ಸಪ್ಲಿಮೆಂಟ್‌, ಒತ್ತಡವನ್ನು ಕಡಿಮೆ ಮಾಡಲು ಅಶ್ವಗಂಧ, ತೂಕ ಇಳಿಕೆಗೆ ಗಾರ್ಸಿನಿಯಾ ಕಾಂಬೋಜಿಯಾ, ಹೃದಯದ ಆರೋಗ್ಯಕ್ಕೆ ಕೆಂಪು ಈಸ್ಟ್‌ ಅನ್ನ ಇತ್ಯಾದಿಗಳು ಇತ್ತೀಚೆಗೆ ಟ್ರೆಂಡ್‌ ಆಗುತ್ತಿದ್ದು, ಜನರು ವ್ಯಾಪಕವಾಗಿ ಬಳಸುತ್ತಿದ್ದಾರೆ. ಗ್ರೀನ್‌ಟೀ ಕುಡಿಯುವುದಕ್ಕೂ ಇದಕ್ಕೂ ಬಹಳ ವ್ಯತ್ಯಾಸವಿದೆ. ಇದು ಗ್ರೀನ್‌ ಟೀ ಎಕ್ಟ್ರ್ಯಾಕ್ಟ್‌ ಸಪ್ಲಿಮೆಂಟ್‌ ಕುರಿತಾಗಿದೆ ಎಂದು ಯುನಿವರ್ಸಿಟಿ ಆಫ್‌ ಮಿಚಿಗನ್‌ ತನ್ನ ವರದಿಯಲ್ಲಿ ಹೇಳಿದೆ.

gall bladder

ಪಿತ್ತಕೋಶಕ್ಕೆ ಹಾನಿ

ವರದಿಯಲ್ಲಿ ಇನ್ನೂ ಅನೇಕ ವಿವರಗಳೂ ಉಲ್ಲೇಖವಾಗಿವೆ. ಸಪ್ಲಿಮೆಂಟ್‌ಗಳಿಂದಾಗಿ ಪಿತ್ತಕೋಶಕ್ಕೆ ಹಾನಿಯಾಗುವುದು ಇದೇ ಮೊದಲಲ್ಲ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಇವುಗಳ ಬಳಕೆ ಅಧಿಕವಾಗಿದೆ. ಅಗತ್ಯವಿಲ್ಲದಲ್ಲೂ ಆರೋಗ್ಯದ ನೆಪದಲ್ಲಿ ಅತಿಯಾಗಿ ಸೇವನೆ ಮಾಡುವುದು ಅಧಿಕವಾಗಿದೆ. ವೈದ್ಯರು ಸೂಚಿಸದೇ ಇದ್ದರೂ, ತಾವೇ ತಾವಾಗಿ ಕೊಂಡುಕೊಂಡು ನಿತ್ಯವೂ ಸೇವನೆ ಮಾಡುವುದರಿಂದ ದೇಹದ ಅಂಗಾಂಗಳ ಮೇಳೆ ಒತ್ತಡ ಬೀರುತ್ತದೆ. ಸಪ್ಲಿಮೆಂಟ್‌ಗಳ ಓವರ್‌ಡೋಸ್‌ ಆಗಿ, ಈ ಕಾರಣದಿಂದ ಆಸ್ಪತ್ರೆ ಸೇರುವ ಪ್ರಕರಣಗಳೂ ನಡೆದಿವೆ ಎಂದು ಅದು ಹೇಳಿದೆ.

ಇದನ್ನೂ ಓದಿ: Tea vs Coffee: ಟೀ ಒಳ್ಳೆಯದಾ ಕಾಫಿ ಒಳ್ಳೆಯದಾ? ಇಲ್ಲಿದೆ ಉತ್ತರ

ಅಡ್ಡ ಪರಿಣಾಮ

ಹರ್ಬಲ್‌ ಹೆಸರಿನಲ್ಲಿ ಇಂದು ಮಾರುಕಟ್ಟೆಗೆ ಬಗೆಬಗೆಯ ಸಪ್ಲಿಮೆಂಟ್‌ಗಳು ದಾಳಿ ಮಾಡುತ್ತಿದ್ದು, ಇದರಿಂದ ಹಲವು ಅಡ್ಡ ಪರಿಣಾಮಗಳೂ ಆಗುತ್ತಿವೆ. ಇದನ್ನು ತಿಳಿಯದೆ ಜನರು ಸೇವಿಸುತ್ತಿದ್ದಾರೆ. ವೈದ್ಯರ ನೆರವನ್ನೂ ಕೇಳುತ್ತಿಲ್ಲವಾದ್ದರಿಂದ, ಈ ಸಮಸ್ಯೆ ಉದ್ಭವಿಸಿದೆ ಎಂದು ಹೇಳಿದೆ. ಜೊತೆಗೆ, ಕೆಲವು ಹರ್ಬಲ್‌ ಪ್ರಾಡಕ್ಟ್‌ಗಳು ನಿಜಕ್ಕೂ ಉಪಯೋಗಕರವೇ ಆಗಿದ್ದರೂ, ಅದನ್ನು ಎಷ್ಟು, ಯಾವಾಗ ತೆಗೆದುಕೊಳ್ಳಬಹುದು ಎಂಬುದೂ ಸರಿಯಾಗಿ ತಿಳಿಯದೆ ಓವರ್‌ ಡೋಸ್‌ ಆಗುತ್ತಿದೆ. ಜನರು ಅಗತ್ಯವಿದ್ದರೆ, ವೈದ್ಯರ ಸಲಹೆಯನ್ನು ಪಡೆದುಕೊಂಡು ಸಪ್ಲಿಮೆಂಟ್‌ಗಳ ಮೊರೆ ಹೋಗಬೇಕು. ಅನಗತ್ಯ ಸಂದರ್ಭಗಳಲ್ಲಿ ಸೇವಿಸಬಾರದು. ದೇಹಕ್ಕೆ ಅತಿಯಾದರೆ ಆರೋಗ್ಯಕರವಾದ ಸಪ್ಲಿಮೆಂಟ್‌ಗಳೂ ಕೂಡಾ ತೊಂದರೆಯನ್ನೇ ಉಂಟು ಮಾಡಬಹುದು. ಹಾಗಾಗಿ ಈ ಬಗ್ಗೆ ಎಚ್ಚರ ಅಗತ್ಯ ಎಂದು ಅದು ಹೇಳಿದೆ.

Continue Reading
Advertisement
Hindu Population
ದೇಶ19 mins ago

Hindu Population: ಅಸ್ಸಾಂನಲ್ಲಿ ಹಿಂದುಗಳ ಸಂಖ್ಯೆ ಶೇ.10ರಷ್ಟು ಕುಸಿತ; ಲೆಕ್ಕ ಕೊಟ್ಟ ಹಿಮಂತ ಬಿಸ್ವಾ ಶರ್ಮಾ!

Kashmir Encounter
ದೇಶ41 mins ago

Kashmir Encounter: ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಅಟ್ಟಹಾಸ; ಇಬ್ಬರು ಯೋಧರು ಹುತಾತ್ಮ

Parsis Olympics 2024
ಕ್ರೀಡೆ51 mins ago

Paris Olympics 2024 : ನಾಳೆ ಪ್ಯಾರಿಸ್​ ಒಲಿಂಪಿಕ್ಸ್​ ಸಮಾರೋಪ; ಎಲ್ಲಿ ಕಾರ್ಯಕ್ರಮ? ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಎಲ್ಲ ವಿವರ

BJP-JDS Padayatra
ಕರ್ನಾಟಕ1 hour ago

BJP-JDS Padayatra: ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ನಮ್ಮ ಹೋರಾಟ ಎಂದ ವಿಜಯೇಂದ್ರ

ಮಳೆ1 hour ago

Karnataka Weather : ವೀಕೆಂಡ್‌ ಮೋಜಿಗೆ ಮಳೆ ಅಡ್ಡಿ; ಬೆಂಗಳೂರು ಸೇರಿ ಇಲ್ಲೆಲ್ಲ ನಾಳೆ ವರ್ಷಧಾರೆ

ಪ್ರಮುಖ ಸುದ್ದಿ2 hours ago

Vinesh Phogat : ವಿನೇಶ್​ ಫೋಗಟ್​ಗೆ ಅನ್ಯಾಯವಾಗಿದೆ ಎಂದ ಆರ್​. ಅಶ್ವಿನ್​; ಅಥ್ಲೀಟ್​ಗಳ ಸಮಸ್ಯೆ ವಿವರಿಸಿದ ಸ್ಪಿನ್ನರ್​

TV Somanathan
ದೇಶ2 hours ago

TV Somanathan: ಸಂಪುಟ ಕಾರ್ಯದರ್ಶಿಯಾಗಿ ಸೋಮನಾಥನ್‌ ನೇಮಕ; ಯಾರಿವರು?

ಮೈಸೂರು2 hours ago

BJP-JDS Padayatra: ಬಂಡೆ ರೀತಿ ನಿಲ್ತೀನಿ ಎಂದು ನನ್ನ ಮೇಲೂ ಬಂಡೆ ಹಾಕಿದ್ರು: ಡಿಕೆಶಿ ವಿರುದ್ಧ ಎಚ್‌ಡಿಕೆ ಕಿಡಿ

Hindus in Bangla
ವಿದೇಶ2 hours ago

Hindus in Bangla: ಬಾಂಗ್ಲಾದಲ್ಲಿ ಹಿಂದೂ ಆಗಿರುವುದೇ ಅಪರಾಧ; ಕರಾಳ ದಿನ ನೆನಪಿಸಿಕೊಳ್ಳುವ ವಲಸಿಗರು; ವಿಡಿಯೊಗಳಿವೆ

KCET Mock Allotment 2024 Engineering mock seat allotment announced
ಬೆಂಗಳೂರು2 hours ago

KCET Mock Allotment 2024: ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಪ್ರಕಟ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ6 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌