Arthritis Relief: ಸಂಧಿವಾತದ ಸಮಸ್ಯೆಯೇ? ಈ ಹಣ್ಣುಗಳನ್ನು ಆಹಾರ ಕ್ರಮದಲ್ಲಿ ಅಳವಡಿಸಿ - Vistara News

ಆರೋಗ್ಯ

Arthritis Relief: ಸಂಧಿವಾತದ ಸಮಸ್ಯೆಯೇ? ಈ ಹಣ್ಣುಗಳನ್ನು ಆಹಾರ ಕ್ರಮದಲ್ಲಿ ಅಳವಡಿಸಿ

ನಮ್ಮ ಆಹಾರಶೈಲಿಯಿಂದ (Arthritis Food Remedies) ಕೆಲ ಹಣ್ಣುಗಳ ಸೇವೆಯಿಂದ ಕೊಂಚ ಮಟ್ಟಿಗೆ ಹತೋಟಿಗೆ ತರಬಹುದು. ತೀವ್ರನೋವಿಗೆ ಕೊಂಚ ಆರಾಮದಾಯಕ ಉತ್ತರವೂ ಸಿಕ್ಕೀತು. ಹಾಗಾಗಿ ಬನ್ನಿ, ಯಾವೆಲ್ಲ ಹಣ್ಣುಗಳು ಸಂಧಿವಾತಕ್ಕೆ ಒಳ್ಳೆಯದು ಎಂಬುದನ್ನು ನೋಡೋಣ.

VISTARANEWS.COM


on

arthritis relief fruits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಹಳಷ್ಟು ಮಂದಿಗೆ ಇಂದು ಸಂಧಿವಾತ (ಆರ್ಥ್ರೈಟಿಸ್‌) ಸಾಮಾನ್ಯ ತೊಂದರೆ. ವಯಸ್ಸಾಗುತ್ತ ಹೋದಂತೆ ಸಂಧಿವಾತ ಸಾಮಾನ್ಯ. ಕೆಲವರಿಗೆ ಇದು ಅನುವಂಶೀಯವಾದರೆ, ಇನ್ನೂ ಕೆಲವರಿಗೆ ವಯಸ್ಸಾದಂತೆ ಅಂಟಿಕೊಂಡ ಸಮಸ್ಯೆ. ಮೇಲ್ನೋಟಕ್ಕೆ ಇದು ಸಾಮಾನ್ಯ ತೊಂದರೆಯಾದರೂ, ಇದರ ನೋವು ಬಲ್ಲವನೇ ಬಲ್ಲ. ಮೆಟ್ಟಿಲು ಹತ್ತುವುದರಿಂದ ಹಿಡಿದು ಸಣ್ಣ ಸಣ್ಣ ಚಲನೆಯೂ ಅತೀವ ಹಿಂಸೆ ಕೊಡುವ ನೋವಿದು. ಇದಕ್ಕೆ ಸರಿಯಾದ ಗಮನ ಕೊಡದೇ ಹೋದರೆ ದಿನದಿಂದ ದಿನಕ್ಕೆ ನೋವು ಹೆಚ್ಚಾಗುತ್ತಲೇ ಹೋಗುತ್ತದೆ. ಇದನ್ನು ಪೂರ್ತಿಯಾಗಿ ಗುಣಪಡಿಸಲು ಸೂಕ್ತ ಔಷಧಿ ಇಲ್ಲದಿದ್ದರೂ ಇದನ್ನು ನಮ್ಮ ಆಹಾರಶೈಲಿಯಿಂದ (Arthritis Relief) ಕೆಲ ಹಣ್ಣುಗಳ ಸೇವೆಯಿಂದ ಕೊಂಚ ಮಟ್ಟಿಗೆ ಹತೋಟಿಗೆ ತರಬಹುದು. ತೀವ್ರನೋವಿಗೆ ಕೊಂಚ ಆರಾಮದಾಯಕ ಉತ್ತರವೂ ಸಿಕ್ಕೀತು. ಹಾಗಾಗಿ ಬನ್ನಿ, ಯಾವೆಲ್ಲ ಹಣ್ಣುಗಳು ಸಂಧಿವಾತಕ್ಕೆ ಒಳ್ಳೆಯದು ಎಂಬುದನ್ನು ನೋಡೋಣ.

1. ಸೇಬು: ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರವಿರಬಹುದು ಎಂಬ ಗಾದೆಯನ್ನು ನೀವು ಕೇಳಿರಬಹುದು. ಈ ಮಾತು ಸಂಧಿವಾತಕ್ಕೂ ಅನ್ವಯಿಸುತ್ತದೆ. ಸೇಬು ಹಣ್ಣು ಸಾಕಷ್ಟು ಒಳ್ಳೆಯ ಗುಣಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿದೆ. ಸೇಬು ಹಣ್ಣಿನಲ್ಲಿ ಊತದಂತಹ ಸಮಸ್ಯೆಗಳಿಗೆ ಉತ್ತರ ನೀಡುವ ಕ್ವೆರ್ಸೆಟಿನ್‌ ಎಂಬ ಅಂಶ ಇರುವುದರಿಂದ ಇದು ಸಂಧಿವಾತದಂತಹ ಸಮಸ್ಯೆಗಳು ಬರದಂತೆ ಕಾಯುತ್ತದೆ. ಅಷ್ಟೇ ಅಲ್ಲ, ಸಂಧಿವಾತದ ನೋವನ್ನು ಕೊಂಚ ಮಟ್ಟಿಗೆ ಶಮನಗೊಳಿಸು ಪ್ರಯತ್ನ ಮಾಡುತ್ತದೆ.

Arthritis pain

2. ಚೆರ್ರಿ: ಚೆರ್ರಿ ಹಣ್ಣುಗಳು ಸಂಧಿವಾತಕ್ಕೆ ಹೇಳಿ ಮಾಡಿಸಿದಂತಹ ಹಣ್ಣು. ಚೆರ್ರಿ ಹಣ್ಣಿನಲ್ಲಿ ಆಂಥೋ ಸಯನಿನ್ ಎಂಬ ಅಂಶ ಇದ್ದು, ಇದು ಸಂಧಿವಾತದಂತಹ ನೋವುಗಳಿಗೆ ಉತ್ತಮ ನಿವಾರಕವಾಗಿ ಕೆಲಸ ಮಾಡುತ್ತದೆ. ಚೆರ್ರಿ ಹಣ್ಣು ತಿನ್ನುವುದರಿಂದ ಅಥವಾ ಚೆರ್ರಿ ಜ್ಯೂಸ್‌ ಕುಡಿಯುವುದರಿಂದ ನೋವಿನಿಂದ ಕೊಂಚ ಮಟ್ಟಿಗೆ ಸಮಾಧಾನ ಪಡೆಯಬಹುದು.

3. ಅನನಾಸು: ಅನನಾಸಿನಲ್ಲಿ ಬೊಮೆಲೈನ್‌ ಎಂಬ ಎನ್‌ಝೈಮ್‌ ಇರುವುದರಿಂದ ಇದರಲ್ಲಿರುವ ನೋವುನಾಶಕ ಗುಣ ಸಂಧಿವಾತದಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರ ಒದಗಿಸುತ್ತದೆ. ನಿತ್ಯವೂ ಅನನಾಸು ಸೇವನೆಯಿಂದ ಸಂಧಿವಾತದ ನೋವಿನಲ್ಲಿ ಪರಿಣಾಮಕಾರಿ ಬದಲಾವಣೆ ಗಮನಿಸಬಹುದು. ಗಂಟು ನೋವು, ಊತದಂತಹ ಸಮಸ್ಯೆಗಳೂ ಇದರಿಂದ ಕಡಿಮೆಯಾಗಬಹುದು.

pineapple

ಇದನ್ನೂ ಓದಿ: Health Tips: ಬೆಳ್ಳಂಬೆಳಗ್ಗೆ ಶೌಚವೇ ಒಂದು ಸಮಸ್ಯೆ: ಸುಲಭ ಶೌಚಕ್ಕೆ ಪಂಚಸೂತ್ರಗಳು!

4. ಬ್ಲೂಬೆರ್ರಿ: ಬ್ಲೂಬೆರ್ರಿ ಭಾರತದಲ್ಲಿ ಸುಲಭವಾಗಿ ದೊರೆಯದಿದ್ದರೂ ಇದು ಸಾಕಷ್ಟು ಪೋಷಕಾಂಶಗಳನ್ನು ಹೊತ್ತು ತಂದಿರುವ ಪವರ್‌ಹೌಸ್‌ ಹಣ್ಣು. ಇದರಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಜೊತೆಗೆ ಆಂಥೋಸಯನಿನ್ಗಳೂ ಇರುವುದರಿಂದ ನೋವಿನ ಶಮನಕಾರಿಯಾಗಿ ಕೆಲಸ ಮಾಡುತ್ತದೆ. ಒತ್ತಡದಂತಹ ಸಮಸ್ಯೆಗೂ ಇದು ಒಳ್ಳೆಯ ಆಹಾರ. ಇದರ ಸೇವನೆಯಿಂದ ದೇಹದ ನೋವುಗಳಲ್ಲಿ ಸಾಕಷ್ಟು ಉತ್ತಮ ಪರಿಣಾಮ ಕಾಣಬಹುದು.

orange fruit benefits

5. ಕಿತ್ತಳೆ: ಕಿತ್ತಳೆ ಹಣ್ಣು ಕೇವಲ ತಾಜಾ ಅನುಭೂತಿ ನೀಡಿ ದಾಹ ಇಂಗಿಸುವುದಷ್ಟೇ ಅಲ್ಲ, ಇದರಲ್ಲಿರುವ ಸಿ ವಿಟಮಿನ್‌ ದೇಹಕ್ಕೆ ಅತ್ಯಂತ ಅಗತ್ಯಾದ ಪೋಷಕಾಂಶ. ವಿಟಮಿನ್‌ ಸಿಗೆ ಸಾಕಷ್ಟು ನೋವುಗಳಿಗೆ, ರೋಗಗಳಿಗೆ ಮದ್ದಾಗುವ ಗುಣವಿದೆ. ಇದು ದೇಹದ ಉರಿಯೂತವನ್ನೂ ಕಡಿಮೆ ಮಾಡುವುದರಿಂದ ಸಂಧಿವಾತದಿಂದ ಉಲ್ಬಣಿಸುವ ಸ್ನಾಯುಸೆಳೆತ, ಗಂಟು ನೋವು, ಬಾವುಗಳನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ.

ಆಹಾರದಲ್ಲಿ ಶಿಸ್ತು, ಸಂಧಿವಾತಕ್ಕೆ ಪೂರಕ ಆಹಾರ ಸೇವನೆ ಇತ್ಯಾದಿಗಳಿಂದ ಸಂಧಿವಾತದಂತಹ ತೊಂದರೆಯನ್ನು ಕೊಂಚ ಹಿಡಿತದಲ್ಲಿ ಇಟ್ಟುಕೊಳ್ಳಬಹುದು.

ಇದನ್ನೂ ಓದಿ: Health Tips: ಬಾರ್ಲಿ ನೀರಿನಲ್ಲಿದೆ ಹಲವು ಹಲವು ಆರೋಗ್ಯ ಪ್ರಯೋಜನ, ಇದು ಬೇಸಿಗೆಯ ಸಂಗಾತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

5:2 Diet: ಏನಿದು 5:2 ಮಧ್ಯಂತರ ಉಪವಾಸ? ಇದರ ಪ್ರಯೋಜನಗಳೇನು?

ನಮ್ಮ ಜೀರ್ಣಾಂಗಗಳು ಅವಿಶ್ರಾಂತವಾಗಿ ದುಡಿಯುವಂತೆ ಹೊಟ್ಟೆಗೆ ಆಹಾರ ನೀಡುತ್ತಲೇ ಇದ್ದರೆ, ದೇಹದ ಚಯಾಪಚಯ ವ್ಯವಸ್ಥೆ ಕ್ರಮೇಣ ಕುಸಿಯುತ್ತವೆ. ಹೀಗಾದರೆ ತೂಕ, ಬೊಜ್ಜು ಇಳಿಸುವುದು ಅಸಾಧ್ಯ. ಬದಲಿಗೆ, ನಿಗದಿತವಾಗಿ ಹೊಟ್ಟೆಯನ್ನು ಖಾಲಿ ಬಿಡುವುದು ಮತ್ತು ಆಹಾರ ಸೇವನೆಯ ಸಂದರ್ಭದಲ್ಲಿ ಸಮತೋಲನೆಯತ್ತ ಗಮನ ನೀಡುವುದು ಮಧ್ಯಂತರ ಉಪವಾಸದ ಕ್ರಮ. ಈ ಬಗ್ಗೆ ಹೆಚ್ಚಿನ (5:2 Diet)ವಿವರಗಳು ಇಲ್ಲಿವೆ.

VISTARANEWS.COM


on

5:2 Diet
Koo

ತೂಕ ಇಳಿಕೆಯ ಭರಾಟೆಯಲ್ಲಿ ಯಾರು ಏನು ಸಲಹೆಯನ್ನು ಕೊಟ್ಟರೂ ಕೇಳಬೇಕೆನಿಸುತ್ತದೆ. ಅದು ಒಳ್ಳೆಯದೇ, ಕೆಟ್ಟದ್ದೇ, ಇದರಿಂದ ಆರೋಗ್ಯ ಏನಾಗುತ್ತದೆ- ಇಂಥ ವಿಷಯಗಳನ್ನು ಅಷ್ಟಾಗಿ ಯೋಚಿಸುವುದಿಲ್ಲ. ತೂಕ ಇಳಿಸುವಾಗ ದೇಹದ ಸ್ವಾಸ್ಥ್ಯ ಕ್ಷೀಣಿಸದಂತೆ ನೋಡಿಕೊಳ್ಳುವುದು ಮುಖ್ಯ. ಅಂದರೆ, ಊಟ ಬಿಟ್ಟು ಉಪವಾಸ ಮಾಡುವುದು, ಯಾವುದೋ ಒಂದೇ ರೀತಿಯ ಆಹಾರ ತಿನ್ನುವುದು ಮುಂತಾದ ಹುಚ್ಚು ಖಯಾಲಿಗಳು ದೇಹವನ್ನು ಅಪಾಯಕ್ಕೆ ದೂಡುವಂಥವು. ಈ ಎಲ್ಲವುಗಳ ಹಿನ್ನೆಲೆಯಲ್ಲಿ, ಮಧ್ಯಂತರ ಉಪವಾಸಕ್ಕೆ ಪೋಷಕಾಂಶ ತಜ್ಞರು ಹೆಚ್ಚಿನ ಅಂಕಗಳನ್ನು ನೀಡುತ್ತಾರೆ. ಅದೇ ಹಿನ್ನೆಲೆಯಲ್ಲಿ ಜಾರಿಯಲ್ಲಿ ಇರುವಂಥದ್ದು 5:2 (5:2 Diet) ಉಪವಾಸ.

Dieting concept. Healthy Food. Beautiful Young Asian Woman

ಏನಿದು?

ಇದು ಸಹ ಮಧ್ಯಂತರ ಉಪವಾಸದ ಒಂದು ಕ್ರಮ. ಇದನ್ನು ತಿಳಿಯುವ ಮುನ್ನ ಮಧ್ಯಂತರ ಉಪವಾಸ ಎಂದರೇನು ಎಂಬುದನ್ನು ತಿಳಿಯೋಣ. ಈ ಕ್ರಮದಲ್ಲಿ ಇಂಥದ್ದೇ ಆಹಾರಗಳನ್ನು ತಿನ್ನಬೇಕೆಂಬ ಕಟ್ಟುನಿಟ್ಟಿಲ್ಲ. ಬದಲಿಗೆ ಆಹಾರ ಸೇವಿಸುವ ಹೊತ್ತಿನಲ್ಲಿ ವ್ಯತ್ಯಾಸ ಮಾಡಲಾಗುತ್ತದೆ. ನಮ್ಮ ಜೀರ್ಣಾಂಗಗಳು ಅವಿಶ್ರಾಂತವಾಗಿ ದುಡಿಯುವಂತೆ ಹೊಟ್ಟೆಗೆ ಆಹಾರ ನೀಡುತ್ತಿಲೇ ಇದ್ದರೆ, ದೇಹದ ಚಯಾಪಚಯ ವ್ಯವಸ್ಥೆ ಕ್ರಮೇಣ ಕುಸಿಯುತ್ತವೆ. ಹೀಗಾದರೆ ತೂಕ, ಬೊಜ್ಜು ಇಳಿಸುವುದು ಅಸಾಧ್ಯ. ಬದಲಿಗೆ, ನಿಗದಿತವಾಗಿ ಹೊಟ್ಟೆಯನ್ನು ಖಾಲಿ ಬಿಡುವುದು ಮತ್ತು ಆಹಾರ ಸೇವನೆಯ ಸಂದರ್ಭದಲ್ಲಿ ಸಮತೋಲನೆಯತ್ತ ಗಮನ ನೀಡುವುದು. ಉದಾ, ಒಂದು ಊಟದಿಂದ ಇನ್ನೊಂದು ಊಟಕ್ಕೆ 4 ತಾಸುಗಳ ಬಿಡುವು ಸಾಮಾನ್ಯವಾಗಿದ್ದರೆ, ಅದನ್ನು 6 ತಾಸುಗಳಿಗೆ, ನಂತರ 8, ಆಮೇಲೆ 12 ತಾಸುಗಳಿಗೆ ಹೆಚ್ಚಿಸುವುದು… ಹೀಗೆ.

5:2 ಎಂದರೆ…:

ಇದೇ ಕ್ರಮದ ಮುಂದುವರಿಕೆಯಾಗಿ 5:2 ಉಪವಾಸ ಚಾಲ್ತಿಯಲ್ಲಿದೆ. ಅಂದರೆ ವಾರದಲ್ಲಿ 5 ದಿನ ಸಾಮಾನ್ಯ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು; 2 ದಿನ ಹೊಟ್ಟೆಗೆ ಕೊಂಚ ಬಿಡುವು ನೀಡುವುದು. ಎರಡು ದಿನಗಳನ್ನು ವಾರದಲ್ಲಿ ಬೇಕಾದಂತೆ ಇರಿಸಿಕೊಳ್ಳಬಹುದು. ಅಂದರೆ ಒಂದು ಭಾನುವಾರ, ಇನ್ನೊಂದು ಬುಧವಾರ… ಹೀಗೆ. ಆ ದಿನಗಳಲ್ಲೂ ಪೂರ್ಣ ಉಪವಾಸವಲ್ಲ, ಮಹಿಳೆಯರು 500-600 ಕ್ಯಾಲರಿಯಷ್ಟು ಆಹಾರ ಮತ್ತು ಪುರುಷರು 600-800 ಕ್ಯಾಲರಿಯಷ್ಟು ಆಹಾರ ಸೇವಿಸಬಹುದು. ಉಳಿದ ಐದು ದಿನಗಳಲ್ಲಿ ಇಡೀ ಧಾನ್ಯಗಳು, ಸಲಾಡ್‌ಗಳು, ಹಣ್ಣುಗಳು, ಡೇರಿ ಉತ್ಪನ್ನಗಳು, ಕಾಳು-ಬೇಳೆಗಳು, ಬೀಜಗಳು, ಮೀನು-ಮೊಟ್ಟೆಯಂಥವು ಹೊಟ್ಟೆ ಸೇರಬೇಕು. ಅಲ್ಲಿಯೂ ಸಂಸ್ಕರಿತ ಪಿಷ್ಟಗಳು, ಸಕ್ಕರೆ, ಕೆಟ್ಟ ಕೊಬ್ಬುಗಳನ್ನೆಲ್ಲ ತಿನ್ನುವುದಕ್ಕೆ ಅವಕಾಶವಿಲ್ಲ. ಹಾಗಾದರೆ ಉಪವಾಸದ ಎರಡು ದಿನಗಳಲ್ಲಿ ಏನು ತಿನ್ನಬಹುದು? ಬೇಕಾದಷ್ಟು ಹಸಿ ತರಕಾರಿಗಳು, ಕೋಸಂಬರಿ, ಸಿಹಿ ಸೇರಿಲ್ಲದ ಯೋಗರ್ಟ್‌, ಮನೆಯಲ್ಲಿ ಮಾಡಿದ ಮೊಸರು-ಮಜ್ಜಿಗೆ, ಬೇಯಿಸಿದ ಮೊಟ್ಟೆ, ತರಕಾರಿ ಸೂಪ್‌ಗಳು, ಸ್ವಲ್ಪ ಪ್ರಮಾಣದ ಧಾನ್ಯ- ಅಂದರೆ ಒಂದು ಚಪಾತಿ ಅಥವಾ ಸಣ್ಣ ಕಪ್‌ನಲ್ಲಿ ಅನ್ನ- ಇಂಥವುಗಳಲ್ಲಿ ಒಂದೆರಡನ್ನು ಆಯ್ದುಕೊಳ್ಳಬಹುದು.

diet woman with salad and measuring tape

ಲಾಭಗಳೇನು?

ಯಾವುದೇ ಕಾರಣಕ್ಕೆ ಇಂಥ ಮಧ್ಯಂತರ ಉಪವಾಸಗಳನ್ನು ಮಾಡುತ್ತಿದ್ದರೂ, ಊಟ ಮಾಡುವಾಗ ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮಹತ್ವದ್ದು. ಉಪವಾಸದ ಹೆಸರಿನಲ್ಲಿ ಶರೀರವನ್ನು ನಿಶ್ಶಕ್ತಗೊಳಿಸುವುದಲ್ಲ; ಬದಲಿಗೆ, ಚೈತನ್ಯವನ್ನು ಹೆಚ್ಚಿಸಿಕೊಳ್ಳುವುದು ನಮ್ಮ ಉದ್ದೇಶ. ತೂಕ ಇಳಿಸುವವರು ಇದನ್ನು ಹೆಚ್ಚಾಗಿ ನೆಚ್ಚಿಕೊಳ್ಳುತ್ತಿರುವುದರಿಂದ, ದೇಹದ ಕೊಬ್ಬು ಮಾತ್ರವೇ ಕರಗಬೇಕೆ ಹೊರತು, ಚರ್ಮ ಸುಕ್ಕಾಗುವುದು, ಕೂದಲುದುರುವುದು ಮುಂತಾದ ಸಮಸ್ಯೆಗಳು ಹೆಚ್ಚುವರಿಯಾಗಿ ಬರಬಾರದು.

ಇದನ್ನೂ ಓದಿ: Food Tips Kannada: ಇನ್‌ಸ್ಟಂಟ್‌ ನೂಡಲ್ಸ್‌ ತಿಂದರೆ ಆರೋಗ್ಯಕ್ಕೆ ತೊಂದರೆ ಇದೆಯೆ?

ರೋಗಗಳು ದೂರ

ಈಗಾಗಲೇ ಮಧುಮೇಹ ಇರುವವರು ಉಪವಾಸ ಮಾಡುವಂತಿಲ್ಲ. ಹಾಗಾಗಿ ಮಧ್ಯಂತರ ಉಪವಾಸಗಳು ಅವರಿಗೆ ಹೇಳಿಸಿದ್ದಲ್ಲ. ಆದರೆ ಇಂಥ ಕ್ರಮಗಳನ್ನು ಅನುಸರಿಸುವುದರಿಂದ, ಆರೋಗ್ಯವಂತರಿಗೆ ಮಧುಮೇಹ ಬರುವಂಥ ಸಾಧ್ಯತೆಗಳು ಕಡಿಮೆ ಎನ್ನುತ್ತವೆ ಅಧ್ಯಯನಗಳು. ಕಾರಣ, ತನಗೆ ದೊರೆಯುವ ಗ್ಲೂಕೋಸ್‌ ಮತ್ತು ಉತ್ಪತ್ತಿಯಾಗುವ ಇನ್‌ಸುಲಿನ್‌ ಪ್ರಮಾಣಗಳನ್ನು ಶರೀರ ಸಮರ್ಥವಾಗಿ ನಿಭಾಯಿಸುತ್ತದೆ.
ಮಧ್ಯಂತರ ಉಪವಾಸಗಳು ರಕ್ತದೊತ್ತಡವನ್ನು ನಿಯಂತ್ರಿಸಿ, ಶರೀರದಲ್ಲಿರುವ ಕೊಬ್ಬು ಕರಗಿಸಬಲ್ಲವು. ಇವೆರಡೂ ಅಂಶಗಳು ಹೃದಯದ ಆರೋಗ್ಯಕ್ಕೆ ಪೂರಕವಾದಂಥವು. ಆಹಾರ ತೆಗೆದುಕೊಳ್ಳುವ ಸಮಯದಲ್ಲಿ ಆರೋಗ್ಯಕರ ಕೊಬ್ಬುಗಳನ್ನು ಸೇವಿಸಿದರೆ, ದೇಹದ ಮೇಲೆ ಅತ್ಯಂತ ಒಳ್ಳೆಯ ಪರಿಣಾಮವನ್ನು ಈ ಉಪವಾಸದ ಕ್ರಮ ನೀಡಬಲ್ಲದು.

Continue Reading

ಆರೋಗ್ಯ

Food Tips Kannada: ಇನ್‌ಸ್ಟಂಟ್‌ ನೂಡಲ್ಸ್‌ ತಿಂದರೆ ಆರೋಗ್ಯಕ್ಕೆ ತೊಂದರೆ ಇದೆಯೆ?

ವ್ಯಸ್ತ ಬದುಕಿನ ಕಾರಣಕ್ಕೆ ಇನ್‌ಸ್ಟಂಟ್‌ ನೂಡಲ್‌ಗಳು ಸ್ವಸ್ಥ ಆಯ್ಕೆ ಎನ್ನುವಂತಿಲ್ಲ. ಹಲವು ರೀತಿಯ ಆರೋಗ್ಯ ತೊಂದರೆಗಳನ್ನು ಇವು ತಂದಿಡಬಹುದು. ಅಪರೂಪಕ್ಕೆ ತಿಂದರೆ, ಜೀವಕ್ಕೆ ಅಪಾಯವಿಲ್ಲದಿದ್ದರೂ, ಇದೇ ಆಹಾರವಾದರೆ ಮಾತ್ರ ಅಪಾಯ ತಪ್ಪಿದ್ದಲ್ಲ. ಈ ಕುರಿತ ಉಪಯುಕ್ತ ಆಹಾರ ಮತ್ತು ಆರೋಗ್ಯ (Food Tips Kannada) ಮಾಹಿತಿ ಇಲ್ಲಿದೆ.

VISTARANEWS.COM


on

Food Tips Kannada
Koo

ಸಮಯದ ಅಭಾವ ಇರುವಾಗ ಹೊಟ್ಟೆಯ ಗಲಾಟೆಯನ್ನು ತಣಿಸುವುದು ಕಷ್ಟದ ಕೆಲಸ ಎನಿಸುತ್ತದೆ. ಅದರಲ್ಲೂ ಹೊರಗಿನ ಆಹಾರ ಬೇಡ, ಮನೆಯದ್ದೇ ಇರಲಿ ಎನ್ನುವವರಿಗೆ ಹೊಟ್ಟೆ ತಾಳ ಹಾಕುವಾಗ ಬೇಯಿಸಿಕೊಳ್ಳುವುದಕ್ಕೆ ಸಮಯ ಇಲ್ಲದಿದ್ದರೆ ಅವಸ್ಥೆಯೇ ಸರಿ. ಇಂಥ ಹೊತ್ತಿಗೆಂದೇ ತ್ವರಿತವಾಗಿ ಸಿದ್ಧವಾಗುವ ಇನ್‌ಸ್ಟಂಟ್‌ ನೂಡಲ್‌ಗಳು ಅಡುಗೆಮನೆಯ ಕಪಾಟನ್ನು ಅಲಂಕರಿಸಿರುತ್ತವೆ. ಬೇಕಷ್ಟು ಪ್ಯಾಕೆಟ್‌ಗಳನ್ನು ತೆಗೆದು ಬಾಣಲೆಗೆ ಹಾಕಿದರಾಯ್ತು, ಮಸಾಲೆ ಸುರಿದರಾಯ್ತು, ನಿಮಿಷಗಳಲ್ಲಿ ಆಹಾರ ಸಿದ್ಧ. ಯಾವತ್ತೋ ಒಂದಿನ ಇಂಥವನ್ನು ಮಾಡಿದಾಗ ಆರೋಗ್ಯಕ್ಕೇನೂ ವ್ಯತ್ಯಾಸವಾಗದು. ಆದರೆ ಇನ್‌ಸ್ಟಂಟ್‌ ನೂಡಲ್‌ಗಳನ್ನು ಆಗಾಗ ತಿನ್ನುವ ಅಭ್ಯಾಸ ಇದೆ ಎಂದರೆ… ಈ (Food Tips Kannada) ಲೇಖನ ನಿಮಗಾಗಿ! ವ್ಯಸ್ತ ಬದುಕು ಕಾರಣಕ್ಕೆ ಇದನ್ನು ಸ್ವಸ್ಥ ಆಯ್ಕೆ ಎನ್ನುವಂತಿಲ್ಲ. ರೋಲ್‌ ಮಾಡಿದ ಓಟ್‌ಮೀಲ್‌ ಕುಕ್ಕರ್‌ಗೆ ಹಾಕಿದರೆ, ತನ್ನಷ್ಟಕ್ಕೆ ಬೆಂದುಕೊಳ್ಳುತ್ತದೆ. ಅದನ್ನು ತೆಗೆದು ಬೇಕಾದಂತೆ ಹಾಲು, ಹಣ್ಣು, ಜೇನುತುಪ್ಪ ಮುಂತಾದವನ್ನು ಸೇರಿಸಿ ಸೇವಿಸಿದರಾಯ್ತು. ಸ್ವಲ್ಪ ಗಮನ ನೀಡಿದರೆ, ಇಂಥ ಸರಳ ಮತ್ತು ಆರೋಗ್ಯಕರ ಆಯ್ಕೆಗಳು ನಮ್ಮ ಸುತ್ತ ಬಹಳಷ್ಟಿವೆ. ಇದಕ್ಕಾಗಿ ಇನ್‌ಸ್ಟಂಟ್‌ ನೂಡಲ್ಸ್‌ಗೇ ಮೊರೆ ಹೋಗಬೇಕೆಂದಿಲ್ಲ. ಇಂಥ ಸಂಸ್ಕರಿತ ಆಹಾರಗಳು ಆರೋಗ್ಯಕರವಲ್ಲ ಎಂದು ಹೇಳುವುದಕ್ಕೆ ಕಾರಣಗಳು ಒಂದೆರಡಲ್ಲ. ಏನು ಕಾರಣಗಳವು?

Instant noodles. Instant yakisoba

ಸೋಡಿಯಂ ಅಧಿಕ

ಇನ್‌ಸ್ಟಂಟ್‌ ನೂಡಲ್‌ಗಳು ತಮ್ಮಲ್ಲಿರುವ ಸೋಡಿಯಂ ಪ್ರಮಾಣಕ್ಕಾಗಿ ಕುಖ್ಯಾತವಾಗಿವೆ. ಕೆಲವು ನೂಡಲ್‌ಗಳಂತೂ ಒಂದು ಸರ್ವಿಂಗ್‌ನಲ್ಲಿ ಇಡೀ ದಿನಕ್ಕೆ ನಾವು ತಿನ್ನಬಹುದಾದ ಸೋಡಿಯಂನ ಅರ್ಧ ಭಾಗದಷ್ಟನ್ನು ದೇಹಕ್ಕೆ ಸೇರಿಸಿಬಿಡುತ್ತವೆ. ಹೀಗೆ ಅತಿಯಾಗಿ ಸೋಡಿಯಂ ಅಥವಾ ಉಪ್ಪಿನಂಶವನ್ನು ತಿನ್ನುವುದರಿಂದ ರಕ್ತದೊತ್ತಡ ಹೆಚ್ಚುತ್ತದೆ, ಹೃದಯ ರೋಗಗಳು ಅಮರಿಕೊಳ್ಳುತ್ತವೆ, ಪಾರ್ಶ್ವವಾಯು ದಾಳಿ ಮಾಡುತ್ತದೆ. ಹಾಗಾಗಿ ಇನ್‌ಸ್ಟಂಟ್‌ ನೂಡಲ್‌ಗಳನ್ನು ಹೊಟ್ಟೆಗಿಳಿಸುವ ಮುನ್ನ ಈ ವಿಷಯಗಳ ಬಗ್ಗೆ ಗಮನ ಇರಲಿ.

ಸತ್ವಹೀನ

ಹೊಟ್ಟೆ ಹಸಿದಾಗ ಏನು ಸಿಕ್ಕರೂ ತಿನ್ನುವಂತೆನಿಸುವುದು ಸಹಜ. ಆ ಹೊತ್ತಿಗೆ ಇಂಥ ಗುಜರಿ ತಿಂಡಿಗಳು ಸಿಕ್ಕಿಬಿಟ್ಟರೆ ಕೆಲಸ ಕೆಟ್ಟಂತೆ. ಕಾರಣ, ಇನ್‌ಸ್ಟಂಟ್‌ ನೂಡಲ್‌ಗಳು ಕ್ಯಾಲರಿಯನ್ನೇನೋ ನೀಡುತ್ತವೆ; ಆದರೆ ಸತ್ವಗಳು ಇರುವುದಿಲ್ಲ. ಅಂದರೆ ಶರೀರಕ್ಕೆ ಬೇಕಾದಂಥ ಪ್ರೊಟೀನ್‌, ನಾರು, ಖನಿಜಗಳಂಥ ಒಳ್ಳೆಯ ಅಂಶಗಳೇನೂ ಇರುವುದಿಲ್ಲ ಇದರಲ್ಲಿ. ಬದಲಿಗೆ ಕೆಟ್ಟ ಕೊಬ್ಬುಗಳು ಮತ್ತು ಸಂಸ್ಕರಿತ ಪಿಷ್ಟ ಹೊಟ್ಟೆ ಸೇರಿತ್ತದೆ. ಸಾಲದೆಂಬಂತೆ ಕೃತಕ ಬಣ್ಣ, ರುಚಿಗಳೂ ಇದರಲ್ಲಿ ಸೇರಿರುತ್ತವೆ. ಹಾಗಾಗಿ ಇದನ್ನು ಸದಾ ತಿಂದರೆ, ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯಾಗುವುದು ನಿಶ್ಚಿತ.

Man Eats Instant Noodles at Home

ಅನಾರೋಗ್ಯಕರ ಕೊಬ್ಬು

ಟ್ರಾನ್ಸ್‌ ಫ್ಯಾಟ್‌ ಮತ್ತು ಸ್ಯಾಚುರೇಟೆಡ್‌ ಫ್ಯಾಟ್‌ನಂಥ ಅನಾರೋಗ್ಯಕರ ಕೊಬ್ಬುಗಳು ಇದರಲ್ಲಿ ಭರಪೂರ ಇರಬಹುದು. ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್‌ ಜಮೆಯಾಗುವುದು ಸಹ ಅಧಿಕವಾಗುತ್ತದೆ. ಮೊದಲಿಗೆ ಈ ನೂಡಲ್‌ಗಳನ್ನು ಕರಿಯುವ ಸಂದರ್ಭದಲ್ಲಿ ಅಧಿಕ ಪ್ರಮಾಣದ ಎಣ್ಣೆಯನ್ನು ಇವು ಹೀರಿಕೊಂಡಿರುತ್ತವೆ. ನಂತರ ನಮ್ಮ ಅಡುಗೆ ಮನೆಗಳಲ್ಲಿ ನಿಮಿಷಗಳಲ್ಲಿ ಸಿದ್ಧ ಆಗುವಾಗ, ಆ ಕೊಬ್ಬಿನಂಶವೆಲ್ಲ ಸೇರುವುದು ನಮ್ಮ ಹೊಟ್ಟೆಯನ್ನೇ.

ಸಂರಕ್ಷಕಗಳು

ತಯಾರಿಕೆಯ ಹಂತದಲ್ಲೇ ಒಂದಿಷ್ಟು ಕೃತಕ ವಸ್ತುಗಳು ಇದಕ್ಕೆ ಸೇರ್ಪಡೆಯಾಗುತ್ತವೆ. ಕೃತಕವಾದ ಬಣ್ಣ, ರುಚಿ, ಘಮಗಳೆಲ್ಲ ಇದರಲ್ಲಿ ಸೇರಿವೆ. ಮಾತ್ರವಲ್ಲದೆ ಸಂರಕ್ಷಕಗಳೂ ಇದಕ್ಕೆ ಜೊತೆಯಾಗಿರುತ್ತವೆ. ಮಾನೊಸೋಡಿಯಂ ಗ್ಲೂಟಮೇಟ್‌ನಂಥ (ಎಂಎಸ್‌ಜಿ) ರಾಸಾಯನಿಕಗಳನ್ನು ಹೆಚ್ಚಿನ ನೂಡಲ್‌ಗಳಲ್ಲಿ ಸೇರಿಸಲಾಗುತ್ತದೆ. ಇಂಥ ಅಂಶಗಳು ದೇಹದಲ್ಲಿ ಸೇರಿದರೆ ತಲೆನೋವು, ಅಲರ್ಜಿಗಳು, ಜೀರ್ಣಾಂಗಗಳ ತೊಂದರೆಗಳು ಕಟ್ಟಿಟ್ಟಿದ್ದು.

ಜೀವಶೈಲಿಯ ಕಾಯಿಲೆಗಳು

ಸಂಸ್ಕರಿತ ಪಿಷ್ಟ, ಕೆಟ್ಟ ಕೊಬ್ಬು, ಅಧಿಕ ಸೋಡಿಯಂನಂಥ ಅಂಶಗಳು ದೇಹಕ್ಕೆ ಸೇರಿದರೆ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್‌, ಬೊಜ್ಜಿನಂಥ ಜೀವನಶೈಲಿಯ ಖಾಯಿಲೆಗಳು ಬೆನ್ನು ಬೀಳುತ್ತವೆ. ಕಿಬ್ಬೊಟ್ಟೆಯಲ್ಲಿ ಕೊಬ್ಬು ಸೇರಿಕೊಳ್ಳುತ್ತದೆ. ದೇಹದ ಚಯಾಪಚಯವನ್ನೇ ಬುಡಮೇಲು ಮಾಡಿ, ಶರೀರವನ್ನು ರೋಗಗಳ ಗೂಡಾಗಿಸುತ್ತದೆ. ಹಾಗಾಗಿ ಬಾಯಿಗೆ ರುಚಿ ಎನಿಸುವ ಇನ್‌ಸ್ಟಂಟ್‌ ನೂಡಲ್‌ಗಳ ಬಗ್ಗೆ ಈ ಅರಿವು ಹೊಂದುವುದು ಅಗತ್ಯ.

healthy internal organs of human digestive system

ಜೀರ್ಣಾಂಗಗಳ ಸಮಸ್ಯೆ

ನಾರು ಇಲ್ಲದಂಥ ಆಹಾರಗಳು ಜೀರ್ಣಾಂಗಗಳ ಸಂಕಷ್ಟವನ್ನು ಹೆಚ್ಚಿಸುತ್ತವೆ. ಅದರಲ್ಲೂ ಅತಿಯಾಗಿ ಸಂಸ್ಕರಿಸಿದ ತಿನಿಸುಗಳು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳನ್ನೂ ಕೊಲ್ಲುತ್ತವೆ. ಇವೆಲ್ಲವುಗಳ ಫಲವಾಗಿ ಅಜೀರ್ಣ, ಹೊಟ್ಟೆಯುಬ್ಬರ, ಆಸಿಡಿಟಿಯಂಥ ಕಿರಿಕಿರಿಗಳು ಹೆಚ್ಚುತ್ತವೆ. ಮಲಬದ್ಧತೆಯೂ ಕಾಡಬಹುದು. ಇವೆಲ್ಲವುಗಳಿಂದ ಜೀರ್ಣಾಂಗಗಳ ಆರೋಗ್ಯ ಸಂಪೂರ್ಣ ಹಾಳಾಗುತ್ತದೆ. ಇದರ ಬದಲಿಗೆ, ಹಣ್ಣು-ತರಕಾರಿಗಳು, ಇಡೀ ಧಾನ್ಯಗಳು, ಪ್ರೊಬಯಾಟಿಕ್‌ಗಳು ಜೀರ್ಣಾಂಗಗಳ ಆರೋಗ್ಯವನ್ನು ಸುಧಾರಿಸುತ್ತವೆ.

Belly Fat Reduction

ಬೊಜ್ಜು

ಸತ್ವಗಳಿಲ್ಲದ ಖಾಲಿ ಕ್ಯಾಲರಿಗಳು ದೇಹವನ್ನು ನಿತ್ರಾಣದತ್ತ ದೂಡುತ್ತವೆ. ಹಾಗೆಂದು ಆ ವ್ಯಕ್ತಿ ಸಪೂರ ಕಡ್ಡಿಯಂತೇನೂ ಇರುವುದಿಲ್ಲ. ಸ್ಥೂಲಕಾಯವೇ ಇದ್ದರೂ, ನಿತ್ಯದ ಚಟುವಟಿಕೆಗೆ ಬೇಕಾದ ಚೈತನ್ಯ ಇರುವುದಿಲ್ಲ. ಇವೆಲ್ಲ ಕೆಟ್ಟ ಆಹಾರಕ್ರಮದ ಪರಿಣಾಮಗಳು. ಇನ್‌ಸ್ಟಂಟ್‌ ನೂಡಲ್‌ಗಳ ನಿಯಮಿತ ಸೇವನೆಯು ದೇಹದ ತೂಕವನ್ನು ಹೆಚ್ಚಿಸಿ, ದೇಹದಲ್ಲಿ ಬೊಜ್ಜು ತುಂಬಿಸುತ್ತದೆ. ಖಾಲಿ ಕ್ಯಾಲರಿಗಳು ಹಸಿವು ಹೆಚ್ಚಿಸುತ್ತವೆ. ಮತ್ತೆ ಇದನ್ನೇ ತಿನ್ನುತ್ತೀರಿ, ಹಸಿವು ತಣಿಯುವುದೇ ಇಲ್ಲ. ತೂಕ ಏರುತ್ತಲೇ ಹೋಗುತ್ತದೆ.

ಇದನ್ನೂ ಓದಿ: World Brain Tumor Day: ಇಂದು ವಿಶ್ವ ಬ್ರೇನ್‌ ಟ್ಯೂಮರ್‌ ದಿನ; ಮೊದಲೇ ಎಚ್ಚೆತ್ತುಕೊಂಡರೆ ಈ ಕಾಯಿಲೆಯಿಂದ ಪಾರಾಗಬಹುದು

Continue Reading

ಆರೋಗ್ಯ

World Brain Tumor Day: ಇಂದು ವಿಶ್ವ ಬ್ರೇನ್‌ ಟ್ಯೂಮರ್‌ ದಿನ; ಮೊದಲೇ ಎಚ್ಚೆತ್ತುಕೊಂಡರೆ ಈ ಕಾಯಿಲೆಯಿಂದ ಪಾರಾಗಬಹುದು

ತಲೆನೋವು ಬಂದಾಕ್ಷಣ ತಲೆಯೊಳಗೆ ಏನೋ ಆಗಬಾರದ್ದು ಆಗಿದೆಯೆಂದು ಹೆದರುವ ಅಗತ್ಯವಿಲ್ಲ. ಆದರೆ ಬ್ರೇನ್‌ ಟ್ಯೂಮರ್‌ ಲಕ್ಷಣಗಳನ್ನು ತಿಳಿದಿದ್ದರೆ, ಪ್ರಾರಂಭಿಕ ಲಕ್ಷಣಗಳನ್ನು ಪತ್ತೆ ಮಾಡಿ, ರೋಗಿಗೆ ಶಾಶ್ವತ ಹಾನಿ ಆಗದಂತೆ ತಡೆಯಬಹುದು. ವಿಶ್ವ ಬ್ರೇನ್‌ ಟ್ಯೂಮರ್‌ ದಿನದ (World Brain Tumor Day) ಹಿನ್ನೆಲೆಯಲ್ಲಿ ಅರಿವಿನ ಲೇಖನವಿದು.

VISTARANEWS.COM


on

World Brain Tumor Day
Koo

ಪ್ರತಿವರ್ಷ ಜೂನ್‌ ತಿಂಗಳ ಎಂಟನೇ ದಿನವನ್ನು (ಜೂನ್‌ 8) ವಿಶ್ವ ಬ್ರೇನ್‌ ಟ್ಯೂಮರ್‌ ಜಾಗೃತಿ ದಿನ (World Brain Tumor Day) ಎಂದು ಗುರುತಿಸಲಾಗಿದೆ. ಪ್ರಾರಂಭಿಕ ಹಂತದಲ್ಲಿಯೇ ಈ ಸಮಸ್ಯೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳುವ ಮಹತ್ವವನ್ನು ಸಾರುವುದು ಈ ಜಾಗೃತಿ ದಿನದ ಉದ್ದೇಶ. ಎಲ್ಲಾ ವಯೋಮಾನದವರನ್ನೂ ಕಾಡುವ ಮೆದುಳಿನ ಟ್ಯೂಮರ್‌ಗಳು, ಕ್ಯಾನ್ಸರ್‌ಕಾರಕವಾಗದೆಯೂ ಬೆಳೆಯಬಲ್ಲಂಥವು. ಆದರೆ ಇದರ ಸೂಚನೆಗಳನ್ನು ಶೀಘ್ರ ಗುರುತಿಸುವುದು, ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಮುಖ್ಯವಾಗುತ್ತದೆ. ಮಸ್ತಿಷ್ಕದಲ್ಲಿ ಅಷ್ಟಾಗಿ ಸಕ್ರಿಯವಲ್ಲದ ಭಾಗಗಳಲ್ಲಿ ಗಡ್ಡೆಗಳು ಕಾಣಿಸಿಕೊಂಡರೆ, ಹೆಚ್ಚಿನ ಲಕ್ಷಣಗಳು ಕಾಣಿಸುವಷ್ಟರಲ್ಲಿ ಗಡ್ಡೆಗಳು ಬಹಳಷ್ಟು ಬೆಳೆದಿರಬಹುದು. ಆದರೆ ಸಕ್ರಿಯ ಭಾಗಗಳಲ್ಲಿ ಗಂಟುಗಳು ಮೂಡಿದರೆ ಅಥವಾ ಅವು ಕ್ಯಾನ್ಸರ್‌ಕಾರಕ ಆಗಿದ್ದರೆ ಆಗ ಲಕ್ಷಣಗಳು ಶೀಘ್ರವೇ ಗೋಚರಿಸಲು ಸಾಧ್ಯವಿದೆ. ಜೊತೆಗೆ, ಮೆದುಳಿನ ಯಾವ ಭಾಗದಲ್ಲಿ ಟ್ಯೂಮರ್‌ ಉಂಟಾಗಿದೆ ಎಂಬುದರ ಮೇಲೆ ಲಕ್ಷಣಗಳು ಕೊಂಚ ಭಿನ್ನವಾಗುವ ಸಾಧ್ಯತೆಯೂ ಇದೆ. ಒಂದೆಡೆಯಿಂದ ಇನ್ನೊಂದೆಡೆಗೆ ಹರಡುವಂಥ ಮೆಟಾಸ್ಟಾಟಿಕ್‌ ಬ್ರೇನ್‌ ಟ್ಯೂಮರ್‌ ಸಹ ಗಂಟು ಬೀಳಬಹುದು. ಈ ಎಲ್ಲವುಗಳ ಬಗ್ಗೆ ಮಾಹಿತಿ ಇಲ್ಲಿದೆ.

Woman having headache. stressed, Migraine, World Brain Tumor day

ಲಕ್ಷಣಗಳೇನು?

ಯಾವುದೇ ಅಸಹಜ ಬೆಳವಣಿಗೆಗಳು ತಲೆಯೊಳಗೆ ನಡೆದರೆ, ಅಲ್ಲಿ ಒತ್ತಡ ಹೆಚ್ಚುವುದು ಸಾಮಾನ್ಯ. ಹಾಗಾಗಿ ಸಣ್ಣ ಗಂಟಾದರೂ, ಮೊದಲಿಗೆ ಕಾಣಿಸಿಕೊಳ್ಳುವುದು ತಲೆನೋವು. ಇದರರ್ಥ ತಲೆನೋವು ಬಂದಾಕ್ಷಣ ಮೆದುಳಿಗೇನೋ ಆಗಿದೆ ಎಂದಲ್ಲ. ಸೌಮ್ಯವಾಗಿ ಪ್ರಾರಂಭವಾಗುವ ನೋವು ಕ್ರಮೇಣ ತೀಕ್ಷ್ಣವಾಗಬಹುದು. ಜೊತೆಗೆ ಹೊಟ್ಟೆ ತೊಳೆಸುವುದು, ವಾಂತಿ, ತಲೆ ಸುತ್ತುವುದು, ಸ್ಮೃತಿ ತಪ್ಪುವುದು, ಫಿಟ್ಸ್‌ ಬರುವುದು, ತನ್ನಷ್ಟಕ್ಕೇ ಕೈ-ಕಾಲುಗಳಲ್ಲಿ ಚಲನೆ, ದೇಹದ ಸಮತೋಲನ ತಪ್ಪುವುದು ನಡೆಯಲು ಕಷ್ಟವಾಗಿ ಬೀಳುವುದು, ಆಗಾಗ ಎಡವುವುದು ಇಂಥವು ಕಂಡರೆ ನರರೋಗ ತಜ್ಞರನ್ನು ಭೇಟಿ ಮಾಡುವುದು ಅಗತ್ಯ. ಇವು ಮಾತ್ರವಲ್ಲ, ದೃಷ್ಟಿಗೆ ಇದ್ದಕ್ಕಿದ್ದಂತೆ ಬೆಳಕು ಗೋಚರಿಸುವುದು, ಎದುರಿನ ವಸ್ತು ಸರಿಯಾಗಿ ಗೋಚರಿಸದಿರುವುದು ಅಥವಾ ಒಂದಿದ್ದಿದ್ದು ಎರಡಾಗಿ ಕಾಣುವುದು ಸಹ ವೈದ್ಯರನ್ನು ಕಾಣಬೇಕು ಎಂಬುದರ ಸೂಚನೆಗಳು.

ಪರೀಕ್ಷೆಗಳೇನು?

ನರಗಳ ಕಾರ್ಯಚಟುವಟಿಕೆಯನ್ನು ಕುರಿತಂತೆ ವೈದ್ಯರು ಮೊದಲಿಗೆ ವಿವರವಾಗಿ ದೈಹಿಕ ಪರೀಕ್ಷೆ ನಡೆಸುತ್ತಾರೆ. ಕಣ್ಣುಗಳ ಪರೀಕ್ಷೆಯನ್ನೂ ನಡೆಸುತ್ತಾರೆ. ತಲೆಯೊಳಗೆ ಒತ್ತಡ ಹೆಚ್ಚಿದರೆ ಅದು ಕಣ್ಣಿನ ನರಗಳ ಮೇಲೂ ಪರಿಣಾಮ ತೋರಿಸುತ್ತದೆ. ಈ ಪ್ರಾಥಮಿಕ ಪರೀಕ್ಷೆಗಳ ನಂತರ ಅಗತ್ಯ ಎನಿಸಿದರೆ ಹೆಚ್ಚಿನ ಪರೀಕ್ಷೆಗಳಿಗೆ, ಅಂದರೆ ಸ್ಕ್ಯಾನ್‌ ಅಥವಾ ಎಂಆರ್‌ಐಯಂಥ ಪರೀಕ್ಷೆಗಳನ್ನು ವೈದ್ಯರು ಸೂಚಿಸಬಹುದು.

World Brain Tumor Day pic

ಚಿಕಿತ್ಸೆ

ಕೆಲವು ಟ್ಯೂಮರ್‌ಗಳನ್ನು ಗುಣ ಮಾಡಬಹುದು. ಆದರೆ ಈ ಸಮಸ್ಯೆ ಎಷ್ಟು ಬೇಗ ಪತ್ತೆಯಾಗುತ್ತದೊ ಅಷ್ಟು ಪರಿಣಾಮಕಾರಿಯಾಗಿ ಚಿಕಿತ್ಸೆಯನ್ನು ನೀಡಬಹುದು. ಟ್ಯೂಮರ್‌ ಮೆದುಳಿನ ಯಾವ ಭಾಗದಲ್ಲಿದೆ, ಎಂಥಾ ಟ್ಯೂಮರ್‌, ಎಷ್ಟು ದೊಡ್ಡದಿದೆ ಮತ್ತು ಆ ವ್ಯಕ್ತಿಯ ಆರೋಗ್ಯ ಉಳಿದಂತೆ ಹೇಗಿದೆ ಎನ್ನುವುದರ ಮೇಲೆ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆ, ಕೀಮೊಥೆರಪಿ, ರೇಡಿಯೇಶನ್‌ ಚಿಕಿತ್ಸೆಗಳು ಬೇಕಾಗುತ್ತವೆ.

ಇದನ್ನೂ ಓದಿ: Health Tips Kannada: ಯಾವ ಬೀಜ ತಿಂದರೆ ನಮ್ಮ ಆರೋಗ್ಯಕ್ಕೆ ಏನು ಪ್ರಯೋಜನ?

ಹಾನಿ ತಡೆ

ತಲೆಯೊಳಗಿನ ಭಾಗದಲ್ಲಿ ಬೆಳೆಯುವ ಗಂಟುಗಳು ನರವ್ಯೂಹದ ಮೇಲೆ ಅಪಾರ ಪ್ರಮಾಣದ ಒತ್ತಡವನ್ನು ಹಾಕುತ್ತವೆ. ಇದರಿಂದ ಮೆದುಳಿನ ಕೆಲವು ಗುರುತರ ಭಾಗಗಳಿಗೆ ಅಥವಾ ನರಗಳಿಗೆ ಹಾನಿಯಾಗಬಹುದು. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಮೆದುಳಿಗೆ ಶಾಶ್ವತ ಹಾನಿಯಾಗುವ ಭೀತಿ ಇದೆ. ಪಾರ್ಶ್ವವಾಯು, ಮಾತಾಡಲು ಆಗದಿರುವುದು, ಬುದ್ಧಿ ಮಂದವಾಗುವುದು, ದೇಹದ ಸಮತೋಲನ ನಷ್ಟವಾಗುವುದು- ಇಂಥ ದೀರ್ಘಕಾಲೀನ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಪ್ರಾರಂಭಿಕ ಲಕ್ಷಣಗಳು ಗೋಚರಿಸಿದಾಗಲೇ ಜಾಗ್ರತೆ ವಹಿಸುವುದು ಅತಿ ಮುಖ್ಯ.

Continue Reading

ಆರೋಗ್ಯ

Health Tips Kannada: ಯಾವ ಬೀಜ ತಿಂದರೆ ನಮ್ಮ ಆರೋಗ್ಯಕ್ಕೆ ಏನು ಪ್ರಯೋಜನ?

ವಿಟಮಿನ್‌ಗಳು, ಖನಿಜಾಂಶಗಳು, ಒಳ್ಳೆಯ ಕೊಬ್ಬು, ಪ್ರೊಟೀನ್‌ ಸೇರಿದಂತೆ ಎಲ್ಲವೂ ಇರುವ ಬೀಜಗಳು ತಿನ್ನಲು ರುಚಿಕರವಾಗಿಯೂ, ಆರೋಗ್ಯಕರವಾಗಿಯೂ ಇರುತ್ತವೆ. ಹಲವು ರೋಗಗಳು ಬರದಂತೆ ತಡೆಯುವ, ಶಕ್ತಿ ಸಾಮರ್ಥ್ಯ ಹೆಚ್ಚಿಸುವ ಈ ಬೀಜಗಳ ಸೇವನೆಯಿಂದ ನಮ್ಮ ಸೌಂದರ್ಯವೂ ಸೇರಿದಂತೆ ಆರೋಗ್ಯವೂ ವೃದ್ಧಿಯಾಗುತ್ತದೆ. ಯಾವ ಬೀಜ ಸೇವಿಸಿದರೆ ಯಾವ ಲಾಭ ಪಡೆಯಬಹುದು ಎಂಬ ಮಾಹಿತಿ (Health Tips Kannada) ಇಲ್ಲಿದೆ.

VISTARANEWS.COM


on

Health Tips Kannada
Koo

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು (Health Tips Kannada) ಎಂಬ ಹಳೇ ಗಾದೆಯನ್ನು ಈ ಬೀಜಗಳ ವಿಚಾರಕ್ಕೆ ಹೇಳಬಹುದೇನೋ. ಯಾಕೆಂದರೆ ಬೀಜಗಳು ನೋಡಲು ಚಿಕ್ಕದಾದರೂ, ಅದರಲ್ಲಿರುವ ಪೋಷಕಾಂಶಗಳ ವಿಚಾರಕ್ಕೆ ಬಂದರೆ ದೇಹಕ್ಕೆ ಅಗತ್ಯವಾಗಿರುವ ಎಲ್ಲವನ್ನೂ ಒಳಗೊಂಡಿವೆ. ವಿಟಮಿನ್‌ಗಳು, ಖನಿಜಾಂಶಗಳು, ಒಳ್ಳೆಯ ಕೊಬ್ಬು, ಪ್ರೊಟೀನ್‌ ಸೇರಿದಂತೆ ಎಲ್ಲವೂ ಇರುವ ಬೀಜಗಳು ತಿನ್ನಲು ರುಚಿಕರವಾಗಿಯೂ, ಆರೋಗ್ಯಕರವಾಗಿಯೂ ಇರುತ್ತವೆ. ಹಲವು ರೋಗಗಳು ಬರದಂತೆ ತಡೆಯುವ, ಶಕ್ತಿ ಸಾಮರ್ಥ್ಯ ಹೆಚ್ಚಿಸುವ ಈ ಬೀಜಗಳ ಸೇವನೆಯಿಂದ ನಮ್ಮ ಸೌಂದರ್ಯವೂ ಸೇರಿದಂತೆ ಆರೋಗ್ಯವೂ ವೃದ್ಧಿಯಾಗುತ್ತದೆ. ಬನ್ನಿ, ಯಾವೆಲ್ಲ ಬೀಜಗಳಿಂದ ಯಾವ ಲಾಭಗಳನ್ನು ನಾವು ಪ್ರಮುಖವಾಗಿ ಪಡೆಯಬಹುದು ಎಂಬುದನ್ನು ನೋಡೋಣ.

Pomegranate seeds

ದಾಳಿಂಬೆ ಬೀಜಗಳು

ಕೆಂಬಣ್ಣದ ದಾಳಿಂಬೆ ಹಣ್ಣಿನ ಬೀಜಗಳನ್ನು ಕವಿಗಳು ಹಲ್ಲುಗಳಿಗೆ ಹೋಲಿಸುತ್ತಾರೆ. ಮುತ್ತಿನಂತ ಹಲ್ಲನ್ನು ಹೊಂದಿದ್ದರೆ ದಾಳಿಂಬೆಯ ಬೀಜದಂತೆ ಮುದ್ದಾಗಿವೆ ಎನ್ನುವುದನ್ನು ನೀವು ನೋಡಿರಬಹುದು. ಈ ದಾಳಿಂಬೆಯ ಕೆಂಬಣ್ಣದ ಬೀಜಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳೂ, ವಿಟಮಿನ್‌ ಸಿಯೂ ಹೇರಳವಾಗಿವೆ. ಇದು ಕೊಬ್ಬನ್ನು ಕರಗಿಸುವ ಜೊತೆಗೆ ಆಂಟಿ ಏಜಿಂಗ್‌ ಗುಣಗಳನ್ನೂ ಹೊಂದಿದೆ. ಹೀಗಾಗಿ ತೂಕ ಇಳಿಸುವ ಮಂದಿಗೆ ದಾಳಿಂಬೆ ತಿನ್ನುವುದು ಬಹಳ ಒಳ್ಳೆಯದು.

Sunflower seed and flax seed

ಸೂರ್ಯಕಾಂತಿ ಬೀಜ ಹಾಗೂ ಅಗಸೆ ಬೀಜ

ಸೂರ್ಯಕಾಂತಿ ಹೂವಿನ ಬೀಜಗಳ ಸಿಪ್ಪೆ ಸುಲಿದು ಅದರೊಳಗಿನ ಬೀಜವನ್ನು ಸೇವಿಸುವುದರಿಂದ ಸಾಕಷ್ಟು ಲಾಭಗಳಿವೆ. ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್‌ ಬಿ೧, ತಾಮ್ರ, ವಿಟಮಿನ್‌ ಇ, ಆಂಟಿ ಆಕ್ಸಿಡೆಂಟ್‌ಗಳು, ಪ್ರೊಟೀನ್‌ ಹಾಗೂ ನಾರಿನಂಶ ಹೇರಳವಾಗಿವೆ. ಇದು ಮಧುಮೇಹಕ್ಕೆ ಬಹಳ ಒಳ್ಳೆಯದು. ಸೂರ್ಯಕಾಂತಿ ಹಾಗೂ ಅಗಸೆ ಬೀಜಗಳು ಗ್ಲುಕೋಸ್‌ ಮಟ್ಟವನ್ನು ಕೆಳಗಿಳಿಸುವ ಗುಣವನ್ನು ಹೊಂದಿರುವುದರಿಂದ ಇವೆರಡೂ ಕೂಡಾ ಮಧುಮೇಹಕ್ಕೆ ಒಳ್ಳೆಯ ಆಹಾರಗಳು.

Chia Seeds Black Foods

ಚಿಯಾ ಬೀಜಗಳು

ಚಿಯಾ ಬೀಜಗಳು ಆಕಾರದಲ್ಲಿ ಪುಟಾಣಿಯಾದರೂ ಇವುಗಳಲ್ಲಿರುವ ಶಕ್ತಿ ದೊಡ್ಡದು. ಇತ್ತೀಚೆಗಿನ ದಿನಗಳಲ್ಲಿ ಚಿಯಾ ಬೀಜಗಳು ಹೆಚ್ಚು ಪ್ರಸಿದ್ಧಿಗೆ ಬಂದಿದ್ದು, ಸಲಾಡ್‌ಗಳಲ್ಲಿ, ಸ್ಮೂದಿಗಳಲ್ಲಿ ಹಾಗೂ ಡೆಸರ್ಟ್‌ಗಳಲ್ಲಿ ಬಳಕೆಯಾಗುತ್ತಿವೆ. ಕ್ಯಾಲ್ಶಿಯಂ ಹೆಚ್ಚಿರುವ ಚಿಯಾ ಬೀಜಗಳನ್ನು ತಿನ್ನುವುದರಿಂದ ಎಲುಬಿನ ಆರೋಗ್ಯ ವೃದ್ಧಿಯಾಗುತ್ತದೆ. ಎಲುಬು ಗಟ್ಟಿಯಾಗುತ್ತದೆ.

Sweet pumpkin seed

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜಗಳು ಹಸಿರು ಬಣ್ಣದಲ್ಲಿರುವ ಬೀಜಗಳಾಗಿದ್ದು, ಇವುಗಳ ಸೇವನೆಯಿಂದಲೂ ಸಾಕಷ್ಟು ಆರೋಗ್ಯದ ಲಾಭಗಳಿವೆ. ಸಲಾಡ್‌ ಹಾಗೂ ಸಿರಿಯಲ್‌ಗಳ ಜೊತೆಗೆ ಇವನನು ಸೇರಿಸಿ ಬಳಸಲಾಗುತ್ತದೆ. ಕಬ್ಬಿಣಾಂಶ ಅತ್ಯಂತ ಹೆಚ್ಚಿರುವ ಈ ಬೀಜಗಳು ಶಕ್ತಿವರ್ಧಕಗಳು. ನಮ್ಮ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಗೆ ರಕ್ತದಲ್ಲಿ ಹಿಮೋಗ್ಲೋಬಿನ್‌ ಅನ್ನೂ ಇದು ಹೆಚ್ಚಿಸುವಲ್ಲಿ ಪಾತ್ರ ವಹಿಸುತ್ತದೆ. ತೂಕ ಇಳಿಕೆಗೂ ಇದು ಒಳ್ಳೆಯದು.

sesame seeds Sesame Benefits

ಎಳ್ಳು

ಎಳ್ಳಿನ ಬೀಜಗಳೂ ಕೂಡಾ ನೋಡಲು ಚಿಕ್ಕವಾಗಿದ್ದರೂ ತಮ್ಮ ಗುಣದಲ್ಲಿ ಶ್ರೇಷ್ಠತೆಯನ್ನು ಮೆರೆಯುವಂಥವುಗಳು. ಫೈಟೋನ್ಯೂಟ್ರಿಯೆಂಟ್‌ಗಳು, ಆಂಟಿ ಆಕ್ಸಿಡೆಂಟ್‌ಗಳು, ವಿಟಮಿನ್‌ ಹಾಗೂ ನಾರಿನಂಶ ಹೆಚ್ಚಿರುವ ಈ ಬೀಜಗಳಲ್ಲಿ ಒಮೆಗಾ 6 ಫ್ಯಾಟಿ ಆಸಿಡ್‌ ಕೂಡಾ ಹೇರಳವಾಗಿದೆ. ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನೂ ಇದು ಹೆಚ್ಚಿಸುತ್ತದೆ. ಅಮೆರಿಕನ್‌ ಹಾರ್ಟ್‌ ಅಸೋಸಿಯೇಶನ್‌ ವರದಿಯ ಪ್ರಕಾರ, ಎಳ್ಳಿನಲ್ಲಿರುವ ಮೋನೋ ಸ್ಯಾಚುರೇಟೆಡ್‌ ಹಾಗೂ ಪಾಲಿ ಸ್ಯಾಚುರೇಟೆಡ್‌ ಕೊಬ್ಬು ಹಿತಮಿತವಾಗಿ ದೇಹ ಸೇರಿದರೆ, ಹೃದಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಅಷ್ಟೇ ಅಲ್ಲ, ಪಾರ್ಶ್ವವಾಯುವಿನಂಥ ಸಮಸ್ಯೆಗಳನ್ನೂ ದೂರವಿರಿಸುತ್ತದೆ. ಇಂಥ ಅಪಾಯದಿಂದ ನಮ್ಮನ್ನು ದೂರವಿರಿಸುವ ಸಾಮರ್ಥಿವನ್ನು ಹೊಂದಿದೆ ಎಂದು ವರದಿ ಮಾಡಿದೆ.
ಈ ಬೀಜಗಳ ಲಾಭಗಳನ್ನು ನಾವು ಪಡೆಯುವುದಕ್ಕಾಗಿ ನಾವು ಮಾಡಬಹುದಾದ ಬೆಸ್ಟ್‌ ಉಪಾಯಗಳಲ್ಲಿ ಪ್ರಮುಖವಾದುದು, ಸಲಾಡ್‌ಗಳ ಮೇಲೆ ಟಾಪಿಂಗ್‌ನಂತೆ ಹಾಕಿ ಸೇವಿಸುವುದು. ಇಲ್ಲವಾದರೆ, ಸ್ನ್ಯಾಕಿಂಗ್‌ ಸಮಯದಲ್ಲಿ ಸಿಕ್ಕಸಿಕ್ಕ ತಿನಿಸುಗಳನ್ನು ತಿನ್ನುವ ಬದಲು ಇವನ್ನು ಸೇವಿಸುವುದು.

ಇದನ್ನೂ ಓದಿ: Pulses Benefits: ಬೇಳೆಕಾಳುಗಳಲ್ಲಿರುವ ಎಲ್ಲ ಪೋಷಕಾಂಶಗಳು ದೇಹಕ್ಕೆ ಸೇರಬೇಕಾದರೆ ಹೀಗೆ ಮಾಡಿ!

Continue Reading
Advertisement
Modi 3.0 Cabinet
ಪ್ರಮುಖ ಸುದ್ದಿ20 mins ago

Modi 3.0 Cabinet: ಮೋದಿ 3ನೇ ಅವಧಿಯಲ್ಲಿ ಯಾರಿಗೆಲ್ಲ ಮಂತ್ರಿ ಭಾಗ್ಯ? ರೇಸ್‌ನಲ್ಲಿ ಯಾರಿದ್ದಾರೆ? ಇಲ್ಲಿದೆ ಪಟ್ಟಿ

Eating Style
ಲೈಫ್‌ಸ್ಟೈಲ್21 mins ago

Eating Style: ಉಣ್ಣುವ ರೀತಿ ನಾವು ಎಂಥವರು ಎನ್ನುವುದನ್ನು ಬಯಲು ಮಾಡುತ್ತದೆ! ಅದು ಹೇಗೆ?

Narendra Modi
ದೇಶ50 mins ago

Narendra Modi: ಮೋದಿ ಪ್ರಮಾಣವಚನ; ಇಂದಿನ ಕಾರ್ಯಕ್ರಮ ಏನೇನು? ಹೇಗಿದೆ ಭದ್ರತೆ, ಸಿದ್ಧತೆ?

karnataka weather forecast
ಮಳೆ51 mins ago

Karnataka Weather : ಬೆಂಗಳೂರು ಸೇರಿ ರಾಜ್ಯದಲ್ಲಿ ಇನ್ನೆಷ್ಟು ದಿನ ಮಳೆ ಅಬ್ಬರ?

Narendra Modi
ದೇಶ1 hour ago

Narendra Modi: 3ನೇ ಬಾರಿ ಪ್ರಧಾನಿಯಾಗಿ ಇಂದು ಸಂಜೆ ಮೋದಿ ಪ್ರಮಾಣ; ಇಲ್ಲಿದೆ ಬಾಲ್ಯದಿಂದ ವಿಶ್ವಗುರುತನಕದ ಜೀವನ ಚಿತ್ರಣ

5:2 Diet
ಆರೋಗ್ಯ1 hour ago

5:2 Diet: ಏನಿದು 5:2 ಮಧ್ಯಂತರ ಉಪವಾಸ? ಇದರ ಪ್ರಯೋಜನಗಳೇನು?

IND vs PAK
ಕ್ರೀಡೆ2 hours ago

IND vs PAK: ಇಂದು ಇಂಡೋ-ಪಾಕ್​ ರೋಚಕ ಟಿ20 ಕದನ; ವಿಜಯ ಪತಾಕೆ ಹಾರಿಸಲಿ ಭಾರತ

Dina Bhavishya
ಭವಿಷ್ಯ2 hours ago

Dina Bhavishya : ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಇರಲಿ ಎಚ್ಚರಿಕೆ

NED vs RSA
T20 ವಿಶ್ವಕಪ್8 hours ago

NED vs RSA: ಹೋರಾಡಿ ಸೋತ ನೆದರ್ಲೆಂಡ್ಸ್​; ಹರಿಣ ಪಡೆಗೆ ಪ್ರಯಾಸದ ಗೆಲುವು

Karnataka police
ಕರ್ನಾಟಕ9 hours ago

Davanagere News: ದಾವಣಗೆರೆಯಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ; ನಾಲ್ವರ ಬಂಧನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ7 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌