cashew benefits Cashew Benefits: ಗೋಡಂಬಿ ಸೇವನೆ ಅನಾರೋಗ್ಯಕ್ಕೆ ಮೂಲ ಎನ್ನುವುದು ನಿಜವೆ? Vistara News

ಆರೋಗ್ಯ

Cashew Benefits: ಗೋಡಂಬಿ ಸೇವನೆ ಅನಾರೋಗ್ಯಕ್ಕೆ ಮೂಲ ಎನ್ನುವುದು ನಿಜವೆ?

ಅಡುಗೆಯ ರುಚಿ ಹೆಚ್ಚಿಸಬಲ್ಲ ಗೋಡಂಬಿ (cashew benefits) ಬೀಜಗಳ ಅಭಿಮಾನಿ ಬಳಗ ಇರುವಂತೆಯೇ ವಿರೋಧಿ ಬಳಗವೂ ಸಾಕಷ್ಟು ದೊಡ್ಡದೇ ಇದೆ. ನಿಜಕ್ಕೂ ವಾಸ್ತವ ಏನು?

VISTARANEWS.COM


on

cashew benefits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿಹಿ ತಿಂಡಿಗಳಿಗೂ ಒಗ್ಗರಣೆ ಬೇಕಾಗುತ್ತದೆ- ಅಂದರೆ ಬೆಳ್ಳುಳ್ಳಿ, ಇಂಗು ಇತ್ಯಾದಿಗಳದ್ದಲ್ಲ. ಸಾರಿಗೆ ಹಾಕುವ ಒಗ್ಗರಣೆಗೂ ಪಾಯಸಕ್ಕೆ ಹಾಕುವ ಒಗ್ಗರಣೆಗೂ ವ್ಯತ್ಯಾಸವಿದೆಯಲ್ಲ. ಹಾಗೆ ಪಾಯಸಕ್ಕೆ ಹಾಕುವ ಒಗ್ಗರಣೆಯ ಮುಖ್ಯ ವಸ್ತುಗಳಲ್ಲಿ ಒಂದು ಗೋಡಂಬಿ ಅಥವಾ (cashew benefits) ಗೇರುಬೀಜ. ಇದೇನು ಪಾಯಸಕ್ಕೆ ಮಾತ್ರವೇ ಅಲ್ಲ, ಇನ್ನೂ ಬಹಳಷ್ಟು ಸಿಹಿ ಖಾದ್ಯಗಳಲ್ಲಿ, ಖಾರದ ಅಡುಗೆಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುವಂಥದ್ದು. ಅಡುಗೆಯ ರುಚಿ ಹೆಚ್ಚಿಸಬಲ್ಲ ಈ ಬೀಜಗಳ ಅಭಿಮಾನಿ ಬಳಗ ಇರುವಂತೆಯೇ ವಿರೋಧಿ ಬಳಗವೂ ಸಾಕಷ್ಟು ದೊಡ್ಡದೇ ಇದೆ. ಕಂಡ ಅಡುಗೆಗೆಲ್ಲಾ ಬಳಸುವುದೇ ಅಲ್ಲದೇ, ಸುಮ್ಮನೆ ಮೆಲ್ಲುವವರೂ ಸಾಕಷ್ಟು ಮಂದಿಯಿದ್ದಾರೆ. ಆದರೆ ಇದರಿಂದ ಅಲರ್ಜಿ ಹೆಚ್ಚುತ್ತದೆ, ತೂಕ ಏರುತ್ತದೆ, ಆರೋಗ್ಯಕ್ಕೆ ಹಿತವಲ್ಲ- ಇತ್ಯಾದಿ ಆರೋಪಗಳನ್ನು ಮಾಡುವವರೂ ಇಲ್ಲದಿಲ್ಲ. ಆದರೆ ಆಹಾರ ತಜ್ಞರ ಪ್ರಕಾರ, ಹಿತಮಿತವಾಗಿ ಸೇವನೆ ಮಾಡುವುದರಿಂದ ಗೋಡಂಬಿ ಆರೋಗ್ಯಕ್ಕೆ ಲಾಭವನ್ನೇ ತರುತ್ತದೆ ಹೊರತು ತೊಂದರೆಯನ್ನಲ್ಲ. ಏನೀ ಗೊಂದಲಗಳು? ನೋಡೋಣ.

cashew benefits

ಗೋಡಂಬಿಗಳು ತೂಕ ಹೆಚ್ಚಿಸುತ್ತವೆಯೇ?

ಹಾಗೇನಿಲ್ಲ. ಆದರೆ ಇದು ಹೆಚ್ಚಿನ ಕ್ಯಾಲರಿ ಹೊಂದಿರುವ ಆಹಾರ ಎಂಬುದರಲ್ಲಿ ಎರಡು ಮಾತಿಲ್ಲ. ಸುಮಾರು 100 ಗ್ರಾಂ ಗೋಡಂಬಿಯಲ್ಲಿ ಸುಮಾರು 550 ಕ್ಯಾಲರಿಗಳಿರುತ್ತವೆ. ಹಾಗಾಗಿ ಗೋಡಂಬಿ ಮಾತ್ರವೇ ಅಲ್ಲ, ಎಲ್ಲಾ ಬೀಜಗಳೂ ಕ್ಯಾಲರಿಯಲ್ಲಿ ಹೆಚ್ಚು ತೂಗುವುದರಿಂದ ಅವುಗಳನ್ನು ಮಿತವಾದ ಪ್ರಮಾಣದಲ್ಲಿ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ.

ಹಾಗೆ ನೋಡಿದರೆ, ಲೆಕ್ಕಾಚಾರದಲ್ಲಿ ಗೋಡಂಬಿ ತಿನ್ನುವುದರಿಂದ ತೂಕ ಇಳಿಸಲೂ ಸಾಧ್ಯವಿದೆ. ಕಾರಣ, ಇದರಲ್ಲಿರುವ ಮೊನೊ ಅನ್‌ಸ್ಯಾಚುರೇಟೆಡ್‌ ಕೊಬ್ಬಿನಿಂದಾಗಿ ಆರೋಗ್ಯಕ್ಕೆ ಲಾಭವಿದ್ದು, ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಾಧ್ಯವಿದೆ. ಇದರಿಂದ ದೇಹದ ಒಟ್ಟಾರೆ ಆರೋಗ್ಯದ ಮೇಲೆ ಪೂರಕ ಪರಿಣಾಮ ಬೀರುತ್ತದೆ.

cashew benefits

ಗೋಡಂಬಿ ಸೇವನೆಯಿಂದ ಕೊಲೆಸ್ಟ್ರಾಲ್‌ ನಿಯಂತ್ರಣ ಕಷ್ಟವೇ?

ಇದೂ ಪೂರ್ಣ ನಿಜವಲ್ಲ. ಸಾಮಾನ್ಯವಾಗಿ ಸಸ್ಯಜನ್ಯ ಆಹಾರಗಳಿಂದ ಕೊಲೆಸ್ಟ್ರಾಲ್‌ ಹೆಚ್ಚುವುದಿಲ್ಲ; ಇದೇನಿದ್ದರೂ ಪ್ರಾಣಿಜನ್ಯ ಆಹಾರಗಳಿಂದಲೇ ಹೆಚ್ಚು. ಆದರೊಂದು, ಗೋಡಂಬಿಯಲ್ಲಿರುವ ಫೈಟೊಸ್ಟೆರಾಲ್‌ಗಳ ರಾಸಾಯನಿಕ ವಿನ್ಯಾಸ ಕೊಲೆಸ್ಟ್ರಾಲ್‌ನಂತೆಯೇ ಇದೆ. ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟದಲ್ಲಿ ಏರಿಕೆ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ದಿನಕ್ಕೆ 25 ಗ್ರಾಂ ಮೀರದಂತೆ ಗೋಡಂಬಿ ತಿನ್ನುವುದರಿಂದ, ದೇಹದಲ್ಲಿ ಎಲ್‌ಡಿಎಲ್‌ ಕಡಿಮೆ ಮಾಡಿ, ಎಚ್‌ಡಿಎಲ್‌ ಏರಿಸುವ ಕೆಲಸಕ್ಕೆ ಸಹಾಯ ದೊರೆಯುತ್ತದೆ.

ಇದರಿಂದ ಮಧುಮೇಹ ಹೆಚ್ಚುವುದೇ?

ಈ ಆರೋಪದಲ್ಲಿಯೂ ಯಾವುದೇ ಹುರುಳಿಲ್ಲ. ಗೋಡಂಬಿಯಲ್ಲಿರುವ ಉತ್ತಮ ಗುಣಮಟ್ಟದ ಕೊಬ್ಬು, ಪ್ರೊಟೀನ್‌ ಮತ್ತು ನಾರಿನಂಶಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವು ನೀಡುತ್ತವೆ. ಗೋಡಂಬಿಯ ಗ್ಲೈಸೆಮಿಕ್‌ ಇಂಡೆಕ್ಸ್‌ ಕಡಿಮೆಯೇ ಇದೆ (25). ಅಂದರೆ, ಇದು ದೇಹದಲ್ಲಿ ನಿಧಾನಕ್ಕೆ ಹೀರಲ್ಪಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದಿಢೀರ್‌ ಏರಿಕೆ ಮಾಡುವುದಿಲ್ಲ. ಆದರೆ ಮಧುಮೇಹಿಗಳಿಗೆ ಇಂತಹ ಹೆಚ್ಚು ಕ್ಯಾಲರಿಯ ಆಹಾರ ತಿನ್ನುವಾಗ ಹೆಚ್ಚಿನ ಎಚ್ಚರಿಕೆ ಮತ್ತು ನಿಯಂತ್ರಣದ ಅಗತ್ಯವಿದೆ.

cashew benefits

ಗೋಡಂಬಿ ತಿನ್ನುವುದರಿಂದ ಮುಖದ ಮೇಲೆ ಮೊಡವೆ ಹೆಚ್ಚುವುದೇ?

ಇದಕ್ಕೂ ವೈಜ್ಞಾನಿಕವಾಗಿ ಯಾವುದೇ ಆಧಾರಗಳಿಲ್ಲ. ಹಾಗೆ ನೋಡಿದರೆ, ಗೋಡಂಬಿಯಲ್ಲಿರುವ ಸೆಲೆನಿಯಂ ಮತ್ತು ವಿಟಮಿನ್‌ ಸಿ ಅಂಶಗಳು ಚರ್ಮದ ಆರೋಗ್ಯಕ್ಕೆ ಲಾಭದಾಯಕವಾದಂಥವು. ಇಷ್ಟು ಮಾತ್ರವಲ್ಲ, ಗೇರುಬೀಜದಲ್ಲಿರುವ ಒಳ್ಳೆಯ ಕೊಬ್ಬಿನಿಂದಾಗಿ ದೇಹದಲ್ಲಿ ಉರಿಯೂತ ಕಡಿಮೆಯಾಗಲು ಸಾಧ್ಯವಿದೆ. ಉರಿಯೂತದ ಪ್ರಮಾಣ ಹೆಚ್ಚುವುದು ಸಹ ಚರ್ಮದ ಕಿರಿಕಿರಿ, ಮೊಡವೆಯಂಥ ಸಮಸ್ಯೆಗಳಿಗೆ ಕಾರಣವಾಗಬಹುದು.

cashew benefits

ಆದಾಗ್ಯೂ, ಪ್ರತಿಯೊಬ್ಬರ ದೇಹವೂ ಅನನ್ಯ. ಎಲ್ಲರಿಗೂ ಒಂದೇ ತತ್ವವನ್ನು ಹೇರಲು ಸಾಧ್ಯವಿಲ್ಲ. ಹಾಗಾಗಿ ಬೀಜಗಳ ಅಲರ್ಜಿ ಇರುವವರಿಗೆ ಗೋಡಂಬಿ ಸೇವನೆ ಸಮಸ್ಯೆ ತರಬಹುದು. ಉಸಿರಾಟ ತೊಂದರೆ, ಚರ್ಮದ ಕಿರಿಕಿರಿ ಇಂಥವೆಲ್ಲಾ ಅಲರ್ಜಿಯಿಂದಲೂ ಪ್ರಚೋದನೆ ಪಡೆಯಬಹುದು. ಯಾವ ಆಹಾರ ನಮಗೆ ಹಿತ ಎನ್ನುವುದನ್ನು ನಾವೇ ಕಂಡುಕೊಳ್ಳಬೇಕು. ಜೊತೆಗೆ, ಸೇವನೆಯಲ್ಲಿ ಮಿತಿಮೀರದಂತೆ ಎಚ್ಚರಿಕೆಯೂ ಬೇಕು.

ಇದನ್ನೂ ಓದಿ: Health Tips: ಬೇಸಿಗೆಯಲ್ಲಿ ಕಾಡುವ ಎದೆಯುರಿಗೆ ಈ ಮಸಾಲೆ ಪದಾರ್ಥಗಳೇ ಕಾರಣ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Radish Benefits: ಮೂಲಂಗಿಯೆಂದು ಮೂಲೆಗೆಸೆಯದಿರಿ! ಮೂಲಂಗಿ ಮಹಿಮೆಯ ತಿಳಿದುಕೊಳ್ಳಿ

ನೋಡಲು ತಾಜಾವಾಗಿ ಕಾಣುವ ಮೂಲಂಗಿ ನಮ್ಮನ್ನು ಕೈಬೀಸಿ ಕರೆದರೂ ಬಹುತೇಕರು ಮೂಲಂಗಿ ಎಂದರೆ ಮೂಗು ಮುರಿಯುತ್ತಾರೆ. ಕಾರಣ ಇದಕ್ಕಿರುವ ವಿಚಿತ್ರ ವಾಸನೆ ಬಹುತೇಕರಿಗೆ ಇಷ್ಟವಾಗುವುದಿಲ್ಲ. ಆದರೆ (Radish Benefits)

VISTARANEWS.COM


on

Radish Benefits
Koo

ಚಳಿಗಾಲ ಬಂದಾಕ್ಷಣ ಮಾರುಕಟ್ಟೆಯನ್ನು ಅಲಂಕರಿಸುವ ತರಕಾರಿಗಳ ಪೈಕಿ ಅಗ್ರಗಣ್ಯ ಸ್ಥಾನ ಮೂಲಂಗಿಗೆ. ಬೆಳ್ಳನೆಯ ಉದ್ದದ ಮೂಲಂಗಿ ಗೆಡ್ಡೆಗಳು ತಮ್ಮ ಎಲೆಗಳ ಜೊತೆಗೆ ಬುಡಸಮೇತ ಕಿತ್ತು ಬಂದು ಮಾರುಕಟ್ಟೆಯಲ್ಲಿರುತ್ತವೆ. ನೋಡಲು ತಾಜಾವಾಗಿ ಕಾಣುವ ಮೂಲಂಗಿ ನಮ್ಮನ್ನು ಕೈಬೀಸಿ ಕರೆದರೂ (Radish Benefits) ಬಹುತೇಕರು ಮೂಲಂಗಿ ಎಂದರೆ ಮೂಗು ಮುರಿಯುತ್ತಾರೆ. ಕಾರಣ ಇದಕ್ಕಿರುವ ವಿಚಿತ್ರ ವಾಸನೆ ಬಹುತೇಕರಿಗೆ ಇಷ್ಟವಾಗುವುದಿಲ್ಲ. ಜೊತೆಗೆ ಇದರ ರುಚಿಯೂ ಕೆಲವರಿಗೆ ಆಗಿಬರುವುದಿಲ್ಲ. ಇನ್ನೂ ಕೆಲವರಿಗೆ ಮೂಲಂಗಿಯ ಯಾವ ಅಡುಗೆಯೂ ರುಚಿಕರವಾಗಿ ಅನಿಸದು. ಹೀಗಾಗಿ ಮೂಲಂಗಿ ಅಂದರೆ ಹಲವರಿಗೆ ಅಷ್ಟಕ್ಕಷ್ಟೇ.

White radish

ಆದರೆ, ಉತ್ತರ ಭಾರತದೆಲ್ಲೆಡೆ ಚಳಿಗಾಲ ಎಂದರೆ ಮೂಲಂಗಿ ಸಂಭ್ರಮ. ತಾಜಾ ಆಗ ಸಿಗುವ ಮೂಲಂಗಿ ಗಡ್ಡೆಗಳನ್ನು ಹಸಿಯಾಗಿ ತಿನ್ನುವ ಮಂದಿಯೂ ಇಲ್ಲಿ ಅನೇಕರು. ಊಟದ ಜೊತೆಗೆ ಸಲಾಡ್‌ನಂತೆ ಮೂಲಂಗಿ, ಕ್ಯಾರೆಟ್ಟನ್ನು ವೃತ್ತಾಕಾರವಾಗಿ ಕತ್ತರಿಸಿ ತಟ್ಟೆಯಲ್ಲಿಡುವುದು ಇಲ್ಲಿನವರಿಗೆ ರೂಢಿ. ಇನ್ನು ಮೂಲಂಗಿಯಿಂದ ಪರಾಠಾ, ಸಬ್ಜಿ, ಉಪ್ಪಿನಕಾಯಿ ಹೀಗೆ ಬಗೆಬಗೆಯ ಆಹಾರಗಳನ್ನು ತಯಾರಿಸಿ ನಿತ್ಯವೂ ತಿನ್ನುತ್ತಾರೆ ಕೂಡಾ. ಇಂಥ ಮೂಲಂಗಿ ತನ್ನ ವಿಶಿಷ್ಟ ವಾಸನೆಯಿಂದ ಹಲವರನ್ನು ತನ್ನ ಹತ್ತಿರ ಬರಲು ಬಿಡದಿದ್ದರೂ, ಖಂಡಿತವಾಗಿ ಮೂಲಂಗಿ ಎಂದು ಮೂಲೆಗುಂಪಾಗಿಸಬೇಡಿ. ಮೂಲಂಗಿ ಗುಣಗಳನ್ನು ತಿಳಿದರೆ, ಚಳಿಗಾಲದಲ್ಲಿ ತಾಜಾ ಆಗಿ ದೊರೆಯುವ ಈ ತರಕಾರಿಯನ್ನು ಖಂಡಿತವಾಗಿ ನೀವು ತಿನ್ನಲೇಬೇಕು. ಬನ್ನಿ, ಮೂಲಂಗಿಯ ಅದ್ಭುತ ಗುಣಗಳನ್ನು (Radish Benefits ತಿಳಿಯೋಣ).

Portrait of Woman

ಚರ್ಮದ ಆರೋಗ್ಯಕ್ಕಾಗಿ

ಮೂಲಂಗಿಯಲ್ಲಿ ಹೇರಳವಾಗಿ ವಿಟಮಿನ್‌ ಸಿ ಹಾಗೂ ಕೆ ಇವೆ. ವಿಟಮಿನ್‌ ಸಿಯ ಸೇವನೆಯಿಂದ ದೇಃದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ ದೇಹ ಸದೃಢವಾಗುತ್ತದೆ. ಚರ್ಮದಲ್ಲಿ ಕೊಲಾಜೆನ್‌ ಹೆಚ್ಚಿ ಚರ್ಮ ಆರೋಗ್ಯದಿಂದ ಕಂಗೊಳಿಸುತ್ತದೆ. ವಿಟಮಿನ್‌ ಕೆ ದೇಹದಲ್ಲಿ ಮೂಳೆಗಳನ್ನು ಗಟ್ಟಿಗೊಳಿಸಲು ಹಾಗೂ ರಕ್ತ ಹೆಪ್ಪುಗಟ್ಟಿಸಲು ಸಹಕಾರಿ. ಹಾಗಾಗಿ ಇವೆರಡನ್ನೂ ಹೇರಳವಾಗಿ ದೇಹಕ್ಕೆ ಒದಗಿಸುವ ಮೂಲಂಗಿ ಚಳಿಗಾಲಕ್ಕೆ ಅತ್ಯುತ್ತಮ ಆಹಾರವೂ ಹೌದು.

ನಾರಿನಂಶ ಹೆಚ್ಚಿದೆ

ಮೂಲಂಗಿಯಲ್ಲಿ ಸಾಕಷ್ಟು ನಾರಿನಂಶವಿದೆ. ಹೀಗಾಘಿ ಇದು ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದು. ಜೀರ್ಣಕ್ರಿಯೆಯನ್ನು ಚುರುಕುಗೊಳಿಸುವುದಷ್ಟೇ ಅಲ್ಲದೆ, ಜೀರ್ಣಾಂಗವ್ಯೂಹದ ಆರೋಗ್ಯಕ್ಕೂ ಇದು ಒಳ್ಳೆಯದು.

Weight Loss, Slim Body, Healthy Lifestyle Concept.

ತೂಕ ಇಳಿಸಲು ಸಹಕಾರಿ

ಮೂಲಂಗಿ ತೂಕ ಇಳಿಸುವ ಮಂದಿಯ ಸಂಗಾತಿ. ನಾರಿನಂಶ ಹೇರಳವಾಗಿರುವ ಮೂಲಂಗಿಯಲ್ಲಿ ಕ್ಯಾಲರಿ ಅತ್ಯಂತ ಕಡಿಮೆ. ಇದರ ಸೇವನೆಯಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ, ಹಾಗಾಗಿ, ಹಸಿವೆಯ ಚಿಂತೆ ಇರುವುದಿಲ್ಲ. ಸಹಜವಾಗಿಯೇ ಕಡಿಮೆ ತಿನ್ನುತ್ತೇವೆ. ಹೀಗಾಗಿ ತೂಕದಲ್ಲಿ ಇಳಿಕೆಯಾಗುತ್ತದೆ, ಅಥವಾ ಸಮತೋಲನೆ ಕಾಯ್ದುಕೊಳ್ಳಬಹುದು.

ರಕ್ಷಣಾ ಕವಚ

ಹಲವು ಮಾರಣಾಂತಿಕ ಕಾಯಿಲೆಗಳನ್ನೂ ಬರದಂತೆ ಮೂಲಂಗಿ ಕಾಪಾಡುತ್ತದೆ. ಮೂಲಂಗಿಯಲ್ಲಿ ಆಂಥೋಸಯನಿನ್‌, ಫ್ಲೇವನಾಯ್ಡ್‌ ಹಾಗೂ ಇತರ ಕೆಲವು ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಅವುಫರೀ ರ್ಯಾಡಿಕಲ್‌ಗಳ ವಿರುದ್ಧ ರಕ್ಷಣಾ ಕವಚದಂತೆ ವರ್ತಿಸುತ್ತವೆ.

ನೀರಿನ ಅಂಶ ಹೆಚ್ಚಿದೆ

ದೇಹವು ಆರೋಗ್ಯವಾಗಿರಬೇಕಾದರೆ, ಚರ್ಮ ಕಂಗೊಳಿಸಬೇಕಾದರೆ ದೇಹಕ್ಕೆ ಸರಿಯಾಗಿ ನೀರು ಸಿಗಬೇಕು. ಮೂಲಂಗಿಯಲ್ಲಿ ನೀರು ಹೆಚ್ಚಿದೆ. ಹೀಗಾಗಿ, ಇದರ ಸೇವನೆಯಿಂದ ದೇಹಕ್ಕೆ ಹೆಚ್ಚು ನೀರು ಸಿಗುತ್ತದೆ. ಆರೋಗ್ಯ ಇಮ್ಮಡಿಸುತ್ತದೆ.

Person in Blue Long Sleeve Shirt Holding White Electric Socket Cumin Water Benefits

ರಕ್ತದೊತ್ತಡ ನಿಯಂತ್ರಣ

ಇತ್ತೀಚೆಗಿನ ಕೆಲವು ಸಂಶೋಧನೆಗಳ ಪ್ರಕಾರ ಮೂಲಂಗಿಯಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಿಸುವ ಗುಣವೂ ಇದೆ. ಹೀಗಾಗಿ ಇದು ರಕ್ಯದೊತ್ತಡವನ್ನು ಸಮತೋಲನಗೊಳಿಸುವ ಮೂಲಕ ಪರೋಕ್ಷವಾಗಿ ಹೃದಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ.

ಹೇರಳ ಪೋಷಕಾಂಶ

ಚರ್ಮದ ಕಾಳಜಿ ಮಾಡುವ ಮಂದಿ ಮೂಲಂಗಿಯ ಮೊರೆ ಹೋಗಬಹುದು. ಮೂಲಂಗಿಯಲ್ಲಿರುವ ಪೋಷಕಾಂಶಗಳು ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಅತ್ಯುತ್ತಮ ಸುಂದರ ತ್ವಚೆ ಅವರದಾಗುತ್ತದೆ

ಇದನ್ನೂ ಓದಿ: Health Tips: ಮೊಸರು, ಲಸ್ಸಿ, ಮಜ್ಜಿಗೆ; ಇವುಗಳಲ್ಲಿ ಯಾವುದು ಒಳ್ಳೆಯದು?

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

How To Preserve Bananas: ಬಾಳೆಹಣ್ಣು ಬೇಗ ಹಾಳಾಗದಂತೆ ಸಂರಕ್ಷಿಸಿಡುವುದು ಹೇಗೆ?: ಇಲ್ಲಿವೆ ಟಿಪ್ಸ್!

ಒಮ್ಮೆ ಬಾಳೆಹಣ್ಣು ಹಣ್ಣಾಗಿಬಿಟ್ಟರೆ ಒಂದೆರಡು ದಿನಗಳು ಕಳೆಯುವಷ್ಟರಲ್ಲಿ ಸಿಪ್ಪೆ ಕಪ್ಪಾಗಿಬಿಡುತ್ತದೆ. ಆಮೇಲೆ ಕೊಳೆಯಲು ಶುರುವಾಗುತ್ತದೆ. ಹೀಗಾಗಿ ಹೆಚ್ಚು ಬಾಳೆಹಣ್ಣು ಇದ್ದರೆ ಅವುಗಳನ್ನು ಶೇಖರಿಸಿ (How To Preserve Bananas) ಕೆಲದಿನಗಳ ಇಡುವುದೆಂದರೆ ದೊಡ್ಡ ಸಮಸ್ಯೆ.

VISTARANEWS.COM


on

How To Preserve Bananas
Koo

ಸಾಮಾನ್ಯವಾಗಿ ಬಹುತೇಕ ಎಲ್ಲರೂ ನಿತ್ಯವೂ ತಿನ್ನುವ ಹಣ್ಣು ಎಂದರೆ ಬಾಳೆಹಣ್ಣು. ಸಾಮಾನ್ಯರ ಕೈಗೆಟಕುವ ಬಾಳೆಹಣ್ಣು ಎಷ್ಟೋ ಬಾರಿ ಹಸಿದಿರುವವರ ಮಂದಿಯ ಇಡೀ ದಿನವ ಊಟವೂ ಆಗುವ ತಾಕತ್ತಿದೆ. ಒಂದು ಬಾಳೆಹಣ್ಣು ಸುಲಿದು ತಿಂದರೆ, ನಿಃಶಕ್ತಿಯೆಲ್ಲ ಮಾಯ. ಹಸಿದ ಹೊಟ್ಟೆಯೂ ಒಮ್ಮೆಗೆ ಸಮಾಧಾನ ಪಟ್ಟುಕೊಳ್ಳುತ್ತದೆ. ಯಾಕೆಂದರೆ ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಹೀಗಾಗಿ, ಹೊಟ್ಟೆಗೇನೂ ಸಿಗದಿದ್ದರೂ ಬಾಳೆಹಣ್ಣು ತಿಂದರೂ ಬದುಕಲು ಸಾಕಾಗುತ್ತದೆ. ಇಂಥ ಬಾಳೆಹಣ್ಣು ಎಂಬ ಅನಾಥ ರಕ್ಷಕ ಹಣ್ಣನ್ನು ಬಹುಬೇಗನೆ ಹಾಳಾಗದಂತೆ ಸಂರಕ್ಷಿಸಿ ಕೆಲದಿನಗಳ ಕಾಲ ಇಡುವುದು ಮಾತ್ರ ಕಠಿಣವಾದ ಕೆಲಸ. ಒಮ್ಮೆ ಬಾಳೆಹಣ್ಣು ಹಣ್ಣಾಗಿಬಿಟ್ಟರೆ ಒಂದೆರಡು ದಿನಗಳು ಕಳೆಯುವಷ್ಟರಲ್ಲಿ ಸಿಪ್ಪೆ ಕಪ್ಪಾಗಿಬಿಡುತ್ತದೆ. ಆಮೇಲೆ ಕೊಳೆಯಲು ಶುರುವಾಗುತ್ತದೆ. ಹೀಗಾಗಿ ಹೆಚ್ಚು ಬಾಳೆಹಣ್ಣು ಇದ್ದರೆ ಅವುಗಳನ್ನು ಶೇಖರಿಸಿ ಕೆಲದಿನಗಳ ಇಡುವುದೆಂದರೆ ದೊಡ್ಡ ಸಮಸ್ಯೆ. ಹಾಗಾದರೆ ಬನ್ನಿ, ಬಾಳೆಹಣ್ಣನ್ನು ಬೇಗ ಕಪ್ಪಾಗದಂತೆ ಯಾವೆಲ್ಲ ವಿಧಾನಗಳಿಂದ (How To Preserve Bananas) ಸಂರಕ್ಷಿಸಿ ಕೆಲದಿನಗಳವರೆಗೆ ಇಡಬಹುದು ಎಂಬುದನ್ನು ನೋಡೋಣ.

Green Bananas in White Background

ಖರೀದಿಸುವಾಗ ಇದು ತಿಳಿದಿರಲಿ

ಬಾಳೆಹಣ್ಣನ್ನು ಖರೀದಿಸುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮುಖ್ಯವಾಗಿ ನಿಮಗೆ ಯಾವಾಗ ಹಣ್ಣಾಗಬೇಕು ಎಂಬ ಬಗ್ಗೆ ಯೋಚನೆಯಿರಲಿ. ನಿಮಗೆ ಕೂಡಲೇ ತಿನ್ನಲು ಬಾಳೆಹಣ್ಣು ಬೇಕಿದ್ದರೆ ಸರಿಯಾಗಿ ಹಳದಿ ಬಣ್ಣಕ್ಕೆ ತಿರುಗಿರುವ ಬಾಳೆಹಣ್ಣು ಖರೀದಿಸಿ. ಎರಡು ದಿನಗಳ ನಂತರ ತಿನ್ನುವ ಯೋಚನೆಯಿದ್ದರೆ, ಇನ್ನೂ ಪೂರ್ತಿಯಾಗಿ ಹಣ್ಣಾಗದ, ಹಳದಿ ಬಣ್ಣಕ್ಕೆ ತಿರುಗಲು ಆರಂಭವಾದ, ಆದರೆ ಅಲ್ಲಲ್ಲಿ ಹಸಿರು ಬಣ್ಣದ ಕುರುಹುಗಳೂ ಇರುವ ಹಣ್ಣನ್ನು ಆಯ್ಕೆ ಮಾಡಿ. ಇವು ಎರಡು ಮೂರು ದಿನಗಳೊಳಗೆ ಚೆನ್ನಾಗಿ ಹಣ್ಣಾಗುತ್ತವೆ. ಹೀಗೆ ಬಾಳೆಹಣ್ಣು ಖರೀದಿಸುವ ಮುನ್ನ ಸರಿಯಾಗಿ ಯೋಚಿಸಿ ಖರೀದಿಸಿ.

Raw banana

ಖರೀದಿಸಿದ ತಕ್ಷಣ ಸಂರಕ್ಷಿಸಿ

ಬಾಳೆಹಣ್ಣು ಒಮ್ಮೆ ಹಣ್ಣಾಗಲು ಆರಂಭವಾಯಿತೆಂದಾದಲ್ಲಿ ಬಹುಬೇಗನೆ ಹಣ್ಣಾಗಿಬಿಡುತ್ತದೆ. ಹೀಗಾಗಿ ಬಾಳೆಹಣ್ಣನ್ನು ಖರೀದಿಸಿದ ತಕ್ಷಣ ಸಂರಕ್ಷಿಸಿಡಿ. ಮುಖ್ಯವಾಗಿ, ಬಾಳೆಹಣ್ಣನ್ನು ಬೇರೆಲ್ಲ ಹಣ್ಣುಗಳಿಂದ ದೂರ ಇಡಿ. ಸರಿಯಾಗಿ ಗಾಳಿಯಾಡುವ ಬೌಲ್‌ನಲ್ಲಿ ಹಾಕಿಡಿ. ಸರಿಯಾಗಿ ಗಾಳಿಯಾಡುವಂತಿದ್ದರೆ ಬಹುಬೇಗನೆ ಹಣ್ಣಾಗುವುದಿಲ್ಲ.

ಹೆಚ್ಚು ಬಾಳೆಹಣ್ಣು ಇದ್ದರೆ ಹೀಗೆ ಮಾಡಿ

ಕೆಲವೊಮ್ಮೆ ಏನಾಗುತ್ತದೆ ಎಂದರೆ, ಒಂದೇ ಸಲ, ನಾನಾ ಕಾರಣಗಳಿಂದಾಗಿ ಸಿಕ್ಕಾಪಟ್ಟೆ ಬಾಳೆಹಣ್ಣು ಸಿಕ್ಕಿಬಿಡುತ್ತವೆ. ಯಾರೋ ಮನೆಗೆ ಬಂದಾಗ ತಂದರು, ಅಥವಾ ತೋಟದಲ್ಲಿ ಒಂದೇ ಸಲ ಹಲವು ಗೊನೆಗಳು ಬಿಟ್ಟ್ವು ಅಥವಾ ದೇವಸ್ಥಾನ ಭೇಟಿ, ಪೂಜೆ ಇತ್ಯಾದಿಗಳ ಕಾರಣದಿಂದ ಒಂದೇ ಬಾರಿಗೆ ರಾಶಿ ಬಾಳೆಹಣ್ಣು ಒಟ್ಟು ಸೇರಿದಾಗ, ಒಮ್ಮೆಲೆ ಮುಗಿಸಲು ಸಾಧ್ಯವಾಗುವುದಿಲ್ಲ. ಹೀಗಾದಾಗ ಬಾಳೆಹಣ್ಣನ್ನು ಶೇಖರಿಸಿಡುವುದು ಹೇಗೆ ಎಂಬ ಗೊಂದಲಗಳಾಗುವುದು ಸಹಜ. ಆದರೆ ಬಾಳೆಹಣ್ಣನ್ನು ಸಿಪ್ಪೆ ಸುಲಿದು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಫ್ರೀಜರ್‌ನಲ್ಲಿಡಬಹುದು. ಇವು ತಿಂಗಳುಗಳ ಕಾಲ ಹಾಗೆಯೇ ಇರುತ್ತವೆ. ಸ್ಮೂದಿಗಳು, ಬೇಕಿಂಗ್‌ ಮತ್ತಿತರ ಸಂದರ್ಭಗಳಲ್ಲಿ ಇವನ್ನು ಬಳಸಬಹುದು, ಅಥವಾ ಹಾಗೆಯೇ ಫ್ರೋಝನ್‌ ಹಣ್ಣನ್ನು ಬೇರೆ ಬೇರೆ ಮಾದರಿಯಲ್ಲಿ ಅಲಂಕರಿಸಿ ತಿನ್ನಬಹುದು.

ತಾಜಾ ಆಗಿರಲು ಹೀಗೆ ಮಾಡಿ

ಬಾಳೆಹಣ್ಣಿನ ತೊಟ್ಟನ್ನು ಅಲ್ಯೂಮಿನಿಯಂ ಫಾಯಿಲ್‌ ಅಥವಾ ಪ್ಲಾಸ್ಟಿಕ್‌ ಕವರ್‌ನಿಂದ ಸುತ್ತಿಡಿ. ಹೀಗೆ ಮಾಡುವುದರಿಂದಲೂ ಬಾಳೆಹಣ್ಣು ಬೇಗನೆ ಹಣ್ಣಾಗಿ ಹಾಳಾಗದು. ಹೆಚ್ಚು ಕಾಲ ಹಣ್ಣು ತಾಜಾ ಆಗಿ ಉಳಿಯುತ್ತದೆ ಕೂಡಾ.

Pile of Bananas in Close Up

ಕೂಡಲೇ ಫ್ರಿಡ್ಜ್ ನಲ್ಲಿಡಿ

ಬಾಳೆಹಣ್ಣು ತುಂಬ ಇದ್ದರೆ, ಒಂದೆರಡು ದಿನಗಳಿಗೆ ಬೇಕಾಗುವಷ್ಟು ಬಾಳೆಹಣ್ಣನ್ನು ತೆಗೆದಿಟ್ಟು ಉಳಿದ ಹಣ್ಣುಗಳನ್ನು ಕೂಡಲೇ ಫ್ರಿಡ್ಜ್‌ನಲ್ಲಿಡಿ. ಹೀಗೆ ಇಟ್ಟರೆ, ಹಣ್ಣಾಗಲು ಹೆಚ್ಚು ಕಾಲ ಹಿಡಿಯುತ್ತದೆ. ಅಷ್ಟೇ ಅಲ್ಲ, ಈಗಾಗಲೇ ಹಣ್ಣಾಗಿದ್ದರೆ, ಹೊರಗಿನ ಹಣ್ಣುಗಳಿಗಿಂತ ಹೆಚ್ಚು ಕಾಲ ಹಾಗೆಯೇ ಉಳಿಯುತ್ತದೆ. ಹೀಗೆ ಇಡುವುದರಿಂದ ಹಣ್ಣಿನ ಹೊರಮೈಯ ಬಣ್ಣ ಬದಲಾದರೂ, ಒಳಗಿನ ಹಣ್ಣು ಕೆಡದೆ ಹಾಗೆಯೇ ಇರುತ್ತದೆ. ಆದಷ್ಟೂ ಫ್ರಿಡ್ಜ್‌ನಲ್ಲಿ ತುಂಬ ತಂಪಿರುವ ಜಾಗದಲ್ಲಿಡಿ.

ಇದನ್ನೂ ಓದಿ: Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

ಕೃತಕ ಬಣ್ಣ, ರುಚಿ, ಪರಿಮಳ, ಹೆಚ್ಚು ಕಾಲ ಉಳಿಯುವ ಪ್ರಿಸರ್ವೇಟಿವ್‌ಗಳು ಸೇರಿದಂತೆ ಆಹಾರಕ್ಕೆ ಹಲವು ಕಾರಣಗಳಿಗಾಗಿ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಇವು ನಮ್ಮ ದೇಹಕ್ಕೆ ಅತ್ಯಂತ (Harmful chemicals) ಮಾರಕವಾಗಿವೆ.

VISTARANEWS.COM


on

healthy food
Koo

ದೇಹದಲ್ಲಾಗುವ ಯಾವುದೇ ರಾಸಾಯನಿಕ ಪ್ರಕ್ರಿಯೆಗೂ ನಾವು ಸೇವಿಸುವ ಆಹಾರ, ಗಾಳಿ, ನೀರಿನ ಅವಶ್ಯಕತೆ ಇದೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ (Health Tips) ನಾವು ಉತ್ತಮ ಆಹಾರ (Healthy Food) ಸೇವಿಸಲೇಬೇಕು ಎಂಬ ಸತ್ಯ ನಮಗೆ ತಿಳಿದಿದೆ. ನೈಸರ್ಗಿಕವಾಗಿ ಸಿಗುವ ಆಹಾರಗಳನ್ನು ಸೇವಿಸುವುದಷ್ಟೇ ಅಲ್ಲ, ಈಗ ನಾವು ಸಂಸ್ಕರಿಸಿದ ಆಹಾರಗಳನ್ನೂ ಸಾಕಷ್ಟು ಹೊಟ್ಟೆಗಿಳಿಸುತ್ತಿದ್ದೇವೆ. ಪ್ಯಾಕೆಟ್ಟುಗಳಲ್ಲಿ ಸುಲಭವಾಗಿ ದೊರೆಯುವ ಆಹಾರ, ಅರ್ಧ ತಯಾರಿಸಲ್ಪಟ್ಟ ರೆಡಿ ಟು ಈಟ್‌ಗಳು ಸೇರಿದಂತೆ ನಾನಾ ಬಗೆಯಲ್ಲಿ ನಮ್ಮ ದೇಹಕ್ಕೆ ಸಂಸ್ಕರಿಸಿದ ಆಹಾರ (processed food) ಸೇರುತ್ತದೆ. ಆಹಾರವನ್ನು ಮಾರುಕಟ್ಟೆಯಲ್ಲಿ ಖರೀದಿಸುವಾಗ ಅದರೊಳಗೆ ಯಾವೆಲ್ಲ ವಸ್ತುಗಳನ್ನು ಬಳಸಿದ್ದಾರೆ, ಯಾವೆಲ್ಲ ವಸ್ತುಗಳನ್ನು ಹಾಕಿ ಆ ವಸ್ತು ತಯಾರಿಸಲಾಗಿದೆ ಅಥವಾ ಅದರಲ್ಲಿರುವ ಪೋಷಕಾಂಶಗಳ ಪ್ರವಾಣಗಳೆಷ್ಟು ಎಂಬ ಯಾವ ವಿಚಾರವನ್ನೂ ನಾವು ಹೆಚ್ಚು ತಲೆ ಕೆಡಿಸಿಕೊಳ್ಳದೆ, ಎಲ್ಲರೂ ಖರೀದಿಸುತ್ತೇವೆ. ಮಕ್ಕಳಿಗೂ ಪ್ಯಾಕೆಟ್ಟುಗಳನ್ನು ಖರೀದಿಸಿ ಕೊಡುತ್ತೇವೆ. ಸುಲಭವಾಗಿ ದೊರೆಯುವಾಗ, ಕಷ್ಟಪಟ್ಟು ಮಾಡುವ ಅಭ್ಯಾಸ ಬಹುತೇಕ ಮರೆತೇ ಹೋಗಿದೆ. ಅಥವಾ ಒಂದಿಷ್ಟನ್ನು ಮನೆಯಲ್ಲೇ ಮಾಡಿ, ಕೆಲವಕ್ಕೆ ಮಾರುಕಟ್ಟೆಯ ರೆಡಿಮೇಡ್‌ ಆಹಾರಗಳನ್ನೇ (ready to eat) ಅವಲಂಬಿಸುವುದು ನಮಗೆ ಅಭ್ಯಾಸವೇ ಆಗಿಬಿಟ್ಟಿದೆ.ಆದರೆ ನಿಜವಾಗಿ ನೋಡಿದರೆ, ನಮಗೆ ನಾವು ಏನು ತಿನ್ನುತ್ತಿದ್ದೇವೆ ಎಂಬ ಅರಿವೇ ಇಲ್ಲ!

ಹೌದು, ಅಧ್ಯಯನಗಳ ಪ್ರಕಾರ, ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಆಹಾರಗಳಿಗೆ ಸುಮಾರು 3000ಕ್ಕೂ ಹೆಚ್ಚು ಬಗೆಯ ವಿವಿಧ ರಾಸಾಯನಿಕಗಳನ್ನು ಸೇರಿಸುತ್ತಾರಂತೆ. ಕೃತಕ ಬಣ್ಣ, ರುಚಿ, ಪರಿಮಳ, ಹೆಚ್ಚು ಕಾಲ ಇಳಿಯುವ ಪ್ರಿಸರ್ವೇಟಿವ್‌ಗಳು ಸೇರಿದಂತೆ ಆಹಾರಕ್ಕೆ ಹಲವು ಕಾರಣಗಳಿಗಾಗಿ ಇಂತಹ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಅವೆಲ್ಲವೂ ಆಹಾರದೊಳಗೆ ಸೇರಿಕೊಂಡರೆ ನಮಗೆ ನಾವು ತಿನ್ನುವ ಆಹಾರದಲ್ಲಿ ಏನಿದೆ ಎಂದೇ ತಿಳಿದೇ ಇರುವುದಿಲ್ಲ. ಬಹುತೇಕ ಇಂತಹ ರಾಸಾಯನಿಕಗಳನ್ನು ಕಾರ್ಸಿನೋಜೆನ್‌ಗಳೆಂದು ಕರೆಯಲಾಗುತ್ತಿದ್ದು, ಇವು ನಮ್ಮ ದೇಹಕ್ಕೆ ಅತ್ಯಂತ (Harmful chemicals) ಮಾರಕವಾಗಿವೆ. ಹಾಗಾದರೆ ಬನ್ನಿ, ನೀವು ಖರೀದಿಸುವ ಆಹಾರ ತಯಾರಿಕೆಗೆ ಇವನ್ನು ಬಳಸಿದ್ದರೆ, ಅವನ್ನು ಬಳಸಬೇಡಿ. ಅವು ಯಾವುವು ಎಂಬುದನ್ನು ನೋಡೋಣ.

1. ಹೈ ಫ್ರಕ್ಟೋಸ್‌ ಕಾರ್ನ್‌ ಸಿರಪ್‌ (ಎಚ್‌ಎಫ್‌ಸಿಎಸ್):‌ ಈ ರಾಸಾಯನಿಕ ನಮ್ಮ ದೇಹಕ್ಕೆ ಸೇರಿದರೆ ಇದು ದೇಹದಲ್ಲಿರುವ ಲಿಪೋಪ್ರೊಟೀನ್‌ನನ್ನು ಹೆಚ್ಚು ಮಾಡುವ ಮೂಲಕ ಬಹುಬೇಗನೆ ಮಧುಮೇಹದಂಥ ಖಾಯಿಲೆ ತರಿಸುತ್ತದೆ.

2. ಕೃತಕ ಸಿಹಿಗಳು: ಅಸ್ಪಾಟೇಮ್‌ ಎಂಬ ಕೃತಕ ಸಿಹಿಯನ್ನು ಇಂದು ಬಹುತೇಕ ಆಹಾರಗಳಿಗೆ ಹಾಕಲಾಗುತ್ತದೆ. ಇದು ನಮ್ಮ ದೇಹ ಸೇರುವುದರಿಂದ ತಲೆನೋವು, ತಲೆಸುತ್ತು, ವರ್ಟಿಗೋ, ತೊದಲು ಮಾತು, ಸ್ಮರಣ ಶಕ್ತಿ ಕಡಿಮೆಯಾಗುವುದು, ಕಿವಿ ಗುಂಯ್‌ಗುಡುವುದು, ರುಚಿಗ್ರಹಣ ಶಕ್ತಿ ಕಡಿಮೆಯಾಗುವುದು ಇತ್ಯಾದಿ ಸಮಸ್ಯೆಗಳು ಮುಂದೆ ಕಾಡಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಡ್ರಿಂಕ್‌ಗಳಲ್ಲಿ ಇದನ್ನು ಸಕ್ಕರೆಯ ಬದಲಾಗಿ ಬಳಸಿರುತ್ತಾರೆ.

3. ಮೋನೋಸೋಡಿಯಂ ಗ್ಲುಟಮೇಟ್‌: ಇದು ರುಚಿಯನ್ನು ಹೆಚ್ಚಿಸುವ ರಸಾಯನಿಕ. ಇದರಿಂದ ಆಹಾರದ ರುಚಿ ಹೆಚ್ಚಾಗುತ್ತದೆಯಾದರೂ, ಅಂಗಾಂಶಗಳಿಗೆ ಹಾನಿ ಮಾಡುತ್ತದೆ.

4. ಟ್ರಾನ್ಸ್‌ಫ್ಯಾಟ್‌: ಹೊರಗಿನ ತಿಂಡಿಗಳಲ್ಲಿ ಟ್ರಾನ್ಸ್‌ಫ್ಯಾಟ್‌ ಅಧಿಕವಾಗಿರುವುದನ್ನು ನೀವು ಪ್ಯಾಕಟ್ಟುಗಳ ಹಿಂಬದಿಯಲ್ಲಿ ಬರೆದಿರುವುದನ್ನು ಓದಿರಬಹುದು. ಇದರಿಂದ ಎಲ್‌ಡಿಎಲ್‌ ಕೊಲೆಸ್ಟೆರಾಲ್‌ನಲ್ಲಿ ಏರಿಕೆಯಾಗುತ್ತದೆ.

5. ಕೃತಕ ಬಣ್ಣಗಳು: ಕೃತಕ ಬಣ್ಣಗಳಿಂದ ತಯಾರಿಸಿದ ಆಹಾರಗಳ ಅತಿಯಾದ ಸೇವನೆಯಿಂದ ಮಕ್ಕಳ ನಡವಳಿಕೆಯ ಸಂಬಂಧಿ ಸಮಸ್ಯೆಗಳೂ ಬರಬಹುದು. ಮಾನಸಿಕ ಸಮಸ್ಯೆಗಳೂ ಮಕ್ಕಳಿಗೆ ಬರುವ ಸಾಧ್ಯತೆಗಳಿವೆ.

super foods to cure irregular periods

6. ಸಲ್ಫರ್‌ ಡೈ ಆಕ್ಸೈಡ್‌: ಈಗಾಗಲೇ ಯುಎಸ್‌ನಲ್ಲಿ ಬಹಿಷ್ಕಾರ ಹಾಕಲಾಗಿರುವ ಇದನ್ನು ಹಣ್ಣು ತರಕಾರಿಗಳನ್ನು ತಾಜಾ ಆಗಿ ಇರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಇದರಿಂದ ಶ್ವಾಸಕೋಶದ ತೊಂದರೆಗಳು, ಅಧಿಕ ರಕ್ತದೊತ್ತಡದಂತ ಸಮಸ್ಯೆಗಳೂ ಬರಬಹುದು.

7. ಪೊಟಾಶಿಯಂ ಬ್ರೋಮೇಟ್‌: ಕೆಲವು ಬಗೆಯ ಬ್ರೆಡ್‌ಗಳಲ್ಲಿ ಇದನ್ನು ಬಳಸಲಾಗುತ್ತದೆ. ಇದರಿಂದ ಕ್ಯಾನ್ಸರ್‌ನಂತಹ ಮಾರಣಾಂತಿಕ ಖಾಯಿಲೆಗಳೂ ಬರಬಹುದು.

ಹೊರಗಿನ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಈಗಿನ ಕಾಲಘಟ್ಟದಲ್ಲಿ ಸಾಧ್ಯವಿಲ್ಲ ನಿಜ. ಆದರೆ, ಆದಷ್ಟೂ ಇಂತಹ ವಸ್ತುಗಳು ನೀವು ತಿನ್ನುವ ಆಹಾರದಲ್ಲಿದೆಯೇ ಎಂದು ಗಮನಿಸಬಹುದು. ಪ್ರಕೃತಿಯಲ್ಲೇ ದೊರೆವ ಅವಸ್ತುಳನ್ನು ಬಳಸಿಕೊಂಡು ಮನೆಯಲ್ಲೇ ತಾಜಾ ಆಗಿ ತಯಾರಿಸಿ ತಿನ್ನುವುದೇ ಹೆಚ್ಚು ಒಳ್ಳೆಯದು. ಆರೋಗ್ಯಕರ ಕೂಡಾ.

ಇದನ್ನೂ ಓದಿ: Health Tips: ಮೊಸರು, ಲಸ್ಸಿ, ಮಜ್ಜಿಗೆ; ಇವುಗಳಲ್ಲಿ ಯಾವುದು ಒಳ್ಳೆಯದು?

Continue Reading

ಆರೋಗ್ಯ

Health Tips: ಮೊಸರು, ಲಸ್ಸಿ, ಮಜ್ಜಿಗೆ; ಇವುಗಳಲ್ಲಿ ಯಾವುದು ಒಳ್ಳೆಯದು?

ಮೊಸರು, ಮಜ್ಜಿಗೆ, ಲಸ್ಸಿ- ಎಲ್ಲವೂ ಒಂದೇ ಮರದ ಕೊಂಬೆಗಳಲ್ಲವೇ? ಯಾವುದನ್ನು ಸೇವಿಸಿದರೂ ಒಂದೇ ಎಂದು ಯೋಚಿಸಿದರೆ (Health Tips) ಅದು ಸಹಜವೇ. ಆದರೆ ನಿಜಕ್ಕೂ ಈ ಎಲ್ಲದರ ಗುಣಧರ್ಮಗಳೂ ಒಂದೇ ಅಲ್ಲ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Curd, lassi, buttermilk
Koo

ದೇಹ ಹೆಚ್ಚಾಗಿ ಸೇವಿಸ ಬಯಸುವ ವಸ್ತುಗಳ ಪೈಕಿ ಮೊಸರು, ಮಜ್ಜಿಗೆ ಅಥವಾ ಚಾಸ್ , ಲಸ್ಸಿ ಸಹ ಹೌದು. ಬಿಸಿಲು ಮೇಲೇರಿದ ಹೊತ್ತಿನಲ್ಲಿ, ದೇಹದ ಉಷ್ಣತೆಯೂ ನೆತ್ತಿಗೇರಿದ ಹೊತ್ತಿನಲ್ಲಿ ಒಂದೊಂದು ಲೋಟ ತಂಪಾದ ಮಜ್ಜಿಗೆ ಅಥವಾ ಲಸ್ಸಿಯನ್ನು ಹೊಟ್ಟೆಗಿಳಿಸಿದರೆ ಜೀವಕ್ಕೆ ತಂಪೆನಿಸುವುದು ಹೌದು. ಮೊಸರು, ಮಜ್ಜಿಗೆ, ಲಸ್ಸಿ- ಎಲ್ಲವೂ ಒಂದೇ ಮರದ ಕೊಂಬೆಗಳಲ್ಲವೇ? ಯಾವುದನ್ನು ಸೇವಿಸಿದರೂ ಒಂದೇ ಎಂದು ಯೋಚಿಸಿದರೆ ಅದು ಸಹಜವೇ. ಆದರೆ ನಿಜಕ್ಕೂ ಈ ಎಲ್ಲದರ ಗುಣಧರ್ಮಗಳೂ ಒಂದೇ ಅಲ್ಲ. ಅವುಗಳ ಸೇವನೆಯಿಂದ ದೇಹದ ಮೇಲಾಗುವ ಪರಿಣಾಮಗಳೂ ಒಂದೇ ಅಲ್ಲ. ಹಾಗಾದರೆ (Health Tips) ಏನು ಸಾಮ್ಯತೆ ಹಾಗೂ ವ್ಯತ್ಯಾಸಗಳಿವೆ ಮೊಸರು, ಮಜ್ಜಿಗೆ ಮತ್ತು ಲಸ್ಸಿಗಳಲ್ಲಿ?

Cold Indian Drink Lassi

ಸಾಮ್ಯತೆ

ಇವೆಲ್ಲವೂ ಅತ್ತ್ಯುತ್ತಮವಾದ ಪ್ರೊಬಯಾಟಿಕ್ ಆಹಾರಗಳು. ಎಲ್ಲದರಲ್ಲೂ ಪ್ರೊಟೀನ್ ಮತ್ತು ಕ್ಯಾಲ್ಶಿಯಂ ಧಾರಾಳವಾಗಿದ್ದು, ಮಾಂಸಖಂಡಗಳನ್ನು ಹಾಗೂ ಮೂಳೆಗಳನ್ನು ಸಶಕ್ತಗೊಳಿಸುತ್ತವೆ. ಎಲ್ಲದರಲ್ಲೂ ಲ್ಯಾಕ್ಟಿಕ್ ಆಮ್ಲ ಮತ್ತು ವಿಟಮಿನ್ ಡಿ ಅಂಶಗಳು ಸಾಕಷ್ಟಿದ್ದು, ದೇಹದ ಪ್ರತಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಎಲ್ಲದರಲ್ಲಿ ಇರುವ ಖನಿಜದ ಅಂಶಗಳಲ್ಲೂ ಹೆಚ್ಚಿನ ಭಿನ್ನತೆಯಿಲ್ಲ.

ಭಿನ್ನತೆ ಏನು?

ಮೊದಲಿಗೆ, ಲಸ್ಸಿ ಮತ್ತು ಮಜ್ಜಿಗೆಯಲ್ಲಿರುವ ಭಿನ್ನತೆಗಳನ್ನು ಗಮನಿಸೋಣ. (Health Tips) ಇವೆರಡರ ಮೂಲವೂ ಮೊಸರೇ. ಮೊಸರನ್ನು ಕಡೆದು ಮಾಡಿರುವುದರಿಂದ, ಚಾಸ್ ಅಥವಾ ಮಜ್ಜಿಗೆಯಲ್ಲಿ ಕೆನೆ ಅಂಶವಿರುವುದಿಲ್ಲ, ಅಂದರೆ ಕೊಬ್ಬಿನಂಶ ಅತಿ ಕಡಿಮೆ ಇರುತ್ತದೆ. ಆದರೆ ಲಸ್ಸಿ ಕೆನೆಭರಿತ, ಅಂದರೆ ಮಜ್ಜಿಗೆಗಿಂತ ಅಧಿಕ ಪ್ರಮಾಣದಲ್ಲಿ ಲಸ್ಸಿಯಲ್ಲಿ ಕೊಬ್ಬಿನಂಶ ಇರುತ್ತದೆ. ಉಳಿದಂತೆ ಪೌಷ್ಟಿಕಾಂಶದಲ್ಲಿ ಇವೆರಡಕ್ಕೆ ಹೆಚ್ಚಿನ ವ್ಯತ್ಯಾಸವಿಲ್ಲ.

ರುಚಿಯಲ್ಲೂ ಎರಡರ ನಡುವೆ ಸಾಕಷ್ಟು ಭಿನ್ನತೆಯಿದೆ. ಲಸ್ಸಿಯ ರುಚಿ ಸಿಹಿ. ಅಂದರೆ ಇದರಲ್ಲಿ ಹೆಚ್ಚಿನದಾಗಿ ಸಕ್ಕರೆ ಸೇರಿರುತ್ತದೆ. ಮಜ್ಜಿಗೆ ಅಥವಾ ಚಾಸ್ ಸ್ವಲ್ಪ ಉಪ್ಪು ಮತ್ತು ಖಾರದ ಜೊತೆಗೆ ಹೊಟ್ಟೆ ಸೇರುವಂಥದ್ದು. ಲಸ್ಸಿಗೆ ಸಿಹಿಯ ಜೊತೆಗೆ ಹೊಂದುವಂಥ ಹಣ್ಣುಗಳು ಸೇರಿದರೆ, ಮಜ್ಜಿಗೆಗೆ ಶುಂಠಿ, ಪುದೀನಾದಂಥ ಉಪ್ಪು-ಖಾರಕ್ಕೆ ಹೊಂದುವಂಥವು ಜೊತೆ ಸೇರುತ್ತದೆ.

ಇನ್ನೀಗ ಕ್ಯಾಲರಿಯ ವಿಷಯಕ್ಕೆ ಬಂದರೆ, ನಿಸ್ಸಂಶಯವಾಗಿ ಲಸ್ಸಿಯಲ್ಲಿ ಮಜ್ಜಿಗೆಗಿಂತ ಕಾಲರಿ ಹೆಚ್ಚು. ಸಕ್ಕರೆಯಂಶ ಹೆಚ್ಚು, ಕೊಬ್ಬೂ ಅಧಿಕ. ಹಾಗಾಗಿ ತೂಕ ಇಳಿಸುವ ಉದ್ದೇಶವಿದ್ದರೆ ಲಸ್ಸಿಗಿಂತಲೂ ಮಜ್ಜಿಗೆಯ ಸೇವನೆ ಉಪಯುಕ್ತ. ದೇಹದ ಚಯಾಪಚಯಕ್ಕೂ ಹೆಚ್ಚು ಸಕ್ಕರೆ, ಕೊಬ್ಬು ಮತ್ತಿತರ ರುಚಿಗಳನ್ನು ಸೇರಿಸಿದ ಲಸ್ಸಿ ಸ್ವಲ್ಪ ಹೊರೆ ಎನಿಸುತ್ತದೆ. ಬದಲಿಗೆ, ಪುದೀನಾ, ಜೀರಿಗೆ, ಇಂಗು, ಕೊತ್ತಂಬರಿ ಸೊಪ್ಪು, ಶುಂಠಿ ಮುಂತಾದ ಜೀರ್ಣಕಾರಕ ವಸ್ತುಗಳನ್ನು ಸೇರಿಸಿದ ಮಜ್ಜಿಗೆಯ ಸೇವನೆ ಅನುಕೂಲಕರ.

buttermilk and curd

ಮಜ್ಜಿಗೆ ಮತ್ತು ಮೊಸರಿಗೆ ಇರುವ ಭಿನ್ನತೆಯೇನು?

ಮೊಸರು ಕೆನೆ ಸಹಿತವಾಗಿಯೇ ಇರುವುದರಿಂದ ಕೆಲವು ಅನನುಕೂಲತೆಗಳು ಇರುವುದು ಹೌದು. ಹೆಪ್ಪುಗಟ್ಟಿದ ಮೊಸರಿಗೆ ಹುಳಿಯಾಗುತ್ತಲೇ ಹೋಗುವ ಗುಣವಿದೆ. ಹೊಟ್ಟೆಗೆ ಹೋದಮೇಲೂ ಕೆಲವೊಮ್ಮೆ ತನ್ನ ಅತಿಯಾದ ಕ್ಯಾಲರಿಯಿಂದಾಗಿ ಮತ್ತು ಹೆಚ್ಚುವ ಹುಳಿಯಿಂದಾಗಿ ಉಷ್ಣದ ಪ್ರಕೋಪಗಳನ್ನು ತೋರುತ್ತದೆ. ಕೆಲವೊಮ್ಮೆ ಉರಿಯೂತಗಳನ್ನೂ ಹೆಚ್ಚಿಸುತ್ತದೆ. ಇದೇ ಕಾರಣದಿಂದಾಗಿ ಬೊಜ್ಜು, ಆರ್ಥರೈಟಿಸ್ ಮುಂತಾದ ಸಮಸ್ಯೆ ಇರುವವರಿಗೆ ಮೊಸರಿಗಿಂತ ಮಜ್ಜಿಗೆ ಸೂಕ್ತ ಎನ್ನುತ್ತಾರೆ ಆಹಾರ ಪರಿಣಿತರು. ಹಾಗಾಗಿ ಬೇಸಿಗೆಯಲ್ಲಿ ಮೊಸರು ಸೇವಿಸುವುದಕ್ಕಿಂತ ಮಜ್ಜಿಗೆ ಅನುಕೂಲಕರ.

ಕೆಮ್ಮು, ಕಫ, ಸೈನಸ್ ಸಮಸ್ಯೆ ಇರುವವರು ಮೊಸರಿನ ಸೇವನೆಯನ್ನು ರಾತ್ರಿಯ ಹೊತ್ತು ಮಾಡದಿರುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಪರಂಪರಾಗತವಾಗಿ, ತಲೆನೋವು, ಚರ್ಮದ ತೊಂದರೆಗಳು, ನಿದ್ರಾಹೀನತೆಯಂಥ ಸಮಸ್ಯೆಯಿದ್ದರೆ ಮೊಸರಿನ ಸೇವನೆಯಿಂದ ದೂರ ಇರುವಂತೆಯೇ ಹೇಳಲಾಗುತ್ತದೆ.

ಮಜ್ಜಿಗೆಗೆ ಅಂಥ ಯಾವುದೇ ದೋಷವನ್ನೂ ಆಹಾರ ತಜ್ಞರು ಹೇಳುವುದಿಲ್ಲ. ತೂಕ ಇಳಿಸಲು ಬಯಸುವವರು, ಅನೀಮಿಯದಿಂದ ಬಳಲುವವರು, ಆಸಿಡಿಟಿ, ಹುಳಿತೇಗು ಮುಂತಾದ ಜೀರ್ಣಾಂಗದ ತೊಂದರೆಗಳನ್ನು ಎದುರಿಸುತ್ತಿರುವವರು, ಮಲಬದ್ಧತೆಯಿಂದ ಒದ್ದಾಡುತ್ತಿರುವವರು ಎಲ್ಲರಿಗೂ ಮಜ್ಜಿಗೆ ಸೇವಿಸುವುದು ಅನುಕೂಲಕರ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವುದರ ಜೊತೆಜೊತೆಗೆ ಆರೋಗ್ಯಕ್ಕೂ ಬಹಳಷ್ಟು ಹೆಚ್ಚುವರಿ ಉಪಯೋಗಗಳನ್ನು ತರುತ್ತದೆ ಈ ಮಜ್ಜಿಗೆಯೆಂಬ ಪೇಯ.

ಇದನ್ನೂ ಓದಿ: Health Update: ಮಕ್ಕಳಲ್ಲಿ ಹೆಚ್ಚುತ್ತಿದೆ ಜ್ವರ ಬಾಧೆ; ಮುನ್ನೆಚ್ಚರಿಕೆ ಇರಲಿ, ಆತಂಕ ಬೇಡ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
PM Narendra Modi phone call to workers, who rescued from collapsed tunnel
ದೇಶ7 mins ago

ಸುರಂಗದಿಂದ ರಕ್ಷಿಸಲಾದ ಕಾರ್ಮಿಕರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ!

mantralaya mutt
ಕರ್ನಾಟಕ39 mins ago

ಮಂತ್ರಾಲಯ ಮಠಕ್ಕೆ ಭಕ್ತರೊಬ್ಬರಿಂದ ಹೆಲಿಕಾಪ್ಟರ್‌ ಕೊಡುಗೆ

Uttarakhand CM announces rs 1 lakh rupees to trapped labourers Who rescued after 17 days
ದೇಶ1 hour ago

ಬದುಕುಳಿದು ಬಂದ ಕಾರ್ಮಿಕರಿಗೆ 1 ಲಕ್ಷ ಪರಿಹಾರ ಎಂದ ಉತ್ತರಾಖಂಡ ಸಿಎಂ ಧಾಮಿ

Maxwell
ಕ್ರಿಕೆಟ್1 hour ago

Ind vs Aus : ಮ್ಯಾಕ್ಸ್​ವೆಲ್​ ಸ್ಫೋಟಕ ಶತಕ; 3ನೇ ಪಂದ್ಯದಲ್ಲಿ ಭಾರತಕ್ಕೆ ಸೋಲು

Siddaramaiah
ಕರ್ನಾಟಕ2 hours ago

ಕಾರ್ಮಿಕರಿಗೆ ಮರುಹುಟ್ಟು ನೀಡಿದ ರಕ್ಷಣಾ ಸಿಬ್ಬಂದಿಗೆ ಸಿದ್ದರಾಮಯ್ಯ ಧನ್ಯವಾದ

Uttarkashi Tunnel Rescue and Makeshift hospital
ದೇಶ2 hours ago

ಸುರಂಗದಿಂದ 41 ಕಾರ್ಮಿಕರ ರಕ್ಷಣೆ; ಮುಂದೇನಾಗುತ್ತದೆ ಎಂಬುದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Top 10 news
ಕರ್ನಾಟಕ2 hours ago

VISTARA TOP 10 NEWS: ಸುರಂಗದಲ್ಲಿ ಸಿಲುಕಿದ್ದ ಎಲ್ಲ ಕಾರ್ಮಿಕರ ರಕ್ಷಣೆ, ಮಕ್ಕಳ ಮಾರಾಟ ಬೃಹತ್​ ಜಾಲ ಪತ್ತೆ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Uttarakhand Tunnel Collapse
EXPLAINER3 hours ago

150 ಮೀಟರ್‌ ಸುರಂಗ ಕುಸಿತ, 57 ಮೀಟರ್‌ ಕೊರೆತ! 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ?

Uttarkashi Tunnel rescue success makes us emotional says PM Narendra Modi
ದೇಶ3 hours ago

ಕಾರ್ಮಿಕರ ರಕ್ಷಣೆಯ ಯಶಸ್ಸು ನಮ್ಮನ್ನೆಲ್ಲ ಭಾವುಕರನ್ನಾಗಿಸಿದೆ ಎಂದ ಪ್ರಧಾನಿ ಮೋದಿ

Ruturaj Gaikwad
ಕ್ರಿಕೆಟ್3 hours ago

Ruturaj Gaikwad : ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ವಿಶೇಷ ಸಾಧನೆ ಮಾಡಿದ ಋತುರಾಜ್​

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ19 hours ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ1 day ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ1 day ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ2 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ2 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

BY Vijayendra and HD Kumarswamy
ಕರ್ನಾಟಕ2 days ago

BJP JDS Alliance: ಎಚ್‌ಡಿಕೆ-ವಿಜಯೇಂದ್ರ ಭೇಟಿ; 28ಕ್ಕೆ 28 ಸ್ಥಾನ ಗೆಲ್ಲುವ ಪಣ!

ಟ್ರೆಂಡಿಂಗ್‌