Protein Overload: ಪ್ರೊಟೀನ್‌ ನಮ್ಮ ದೇಹಕ್ಕೆ ಎಷ್ಟು ಬೇಕು? ಹೆಚ್ಚಾದರೆ ಏನಾಗುತ್ತದೆ? - Vistara News

ಆರೋಗ್ಯ

Protein Overload: ಪ್ರೊಟೀನ್‌ ನಮ್ಮ ದೇಹಕ್ಕೆ ಎಷ್ಟು ಬೇಕು? ಹೆಚ್ಚಾದರೆ ಏನಾಗುತ್ತದೆ?

ಅಗತ್ಯಕ್ಕಿಂತ ಅತಿಹೆಚ್ಚು ಪ್ರಮಾಣದಲ್ಲಿ ಪ್ರೊಟೀನ್‌ ದೊರೆತರೂ ದೇಹಕ್ಕದು ಸಮಸ್ಯೆಯೇ. ಉಪಯೋಗಿಸಿ ಉಳಿದ ಸತ್ವನ್ನು ದೇಹದಿಂದ ಹೊರದೂಡುವುದು (Protein overload) ಸಣ್ಣ ಕೆಲಸವಲ್ಲ. ಹಾಗಾಗಿ ಊಟದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯವಾದದ್ದು.

VISTARANEWS.COM


on

Protein Overload
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಫಿಟ್‌ನೆಸ್‌ ಪ್ರಿಯರಿಗೆ, ಕ್ರೀಡಾ ಪಟುಗಳಿಗೆ, ಜಿಮ್‌ನಲ್ಲಿ ಬೆವರುವವರಿಗೆ, ದೇಹ ಹುರಿಗಟ್ಟಿಸುವವರಿಗೆ, ಆರೋಗ್ಯದ ಆಸಕ್ತರಿಗೆ – ಹೀಗೆ ಹಲವು ರೀತಿಯ ಜನರ ಚಿತ್ತ ಪ್ರೊಟೀನ್‌ ಸತ್ವದತ್ತ ಇರುವುದು ಸಹಜ. ದೇಹಕ್ಕೆ ಪ್ರೊಟೀನ್‌ ಅಗತ್ಯವಿದೆ ಎಂಬ ನಿಟ್ಟಿನಲ್ಲಿ ಪ್ರೊಟೀನ್‌ ಪುಡಿಗಳು, ಶೇಕ್‌ಗಳು, ಬಾರ್‌ಗಳು, ಹೆಚ್ಚಿನ ಪ್ರಮಾಣದ ಮಾಂಸಾಹಾರ, ಮೊಟ್ಟೆ- ಇಂಥವನ್ನೆಲ್ಲ ತಿನ್ನುವವರಿದ್ದಾರೆ. ದೇಹಕ್ಕೆ ಪ್ರೊಟೀನ್‌ ಬೇಕು ಎಂಬುದು ನಿಜ. ಯಾಕೆ ಮತ್ತು ಎಷ್ಟು ಬೇಕು? (Protein overload) ವಿವರಗಳನ್ನು ನೋಡೋಣ. ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಪೌಷ್ಟಿಕಾಂಶಗಳಲ್ಲಿ ಪ್ರೊಟೀನ್‌ ಪ್ರಮುಖವಾದದ್ದು. ದೇಹದ ಯಾವುದೇ ರಿಪೇರಿ ಕೆಲಸಕ್ಕೆ, ಕಿಣ್ವಗಳು ಮತ್ತು ಚೋದಕಗಳನ್ನು ಉತ್ಪತ್ತಿ ಮಾಡುವುದಕ್ಕೆ, ರೋಗ ನಿರೋಧಕ ಶಕ್ತಿ ಹೊಂದುವುದಕ್ಕೆ, ಮಾಂಸಖಂಡಗಳ ದೃಢತೆ ಮತ್ತು ದೇಹದ ಶಕ್ತಿಗೆ- ಹೀಗೆ ಹತ್ತು ಹಲವು ಕೆಲಸಗಳಿಗೆ ಪ್ರೊಟೀನ್‌ ಅಗತ್ಯವಾಗಿ ಬೇಕು. ಅಗತ್ಯವಾದಷ್ಟು ಪ್ರೊಟೀನ್‌ ದೇಹಕ್ಕೆ ದೊರೆಯದಿದ್ದರೆ ಆಗುವ ಸಮಸ್ಯೆಗಳು ಒಂದೆರಡೇ ಅಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ, ದೇಹಕ್ಕೆ ಪ್ರೊಟೀನ್‌ ಹೆಚ್ಚಾಗಿಯೂ ಸಮಸ್ಯೆ ಆಗಿದ್ದಿದೆ.
ಹೌದು! ಅಗತ್ಯಕ್ಕಿಂತ ಅತಿಹೆಚ್ಚು ಪ್ರಮಾಣದಲ್ಲಿ ಪ್ರೊಟೀನ್‌ ದೊರೆತರೂ ದೇಹಕ್ಕದು ಸಮಸ್ಯೆಯೇ. ಉಪಯೋಗಿಸಿ ಉಳಿದ ಸತ್ವನ್ನು ದೇಹದಿಂದ ಹೊರದೂಡುವುದು ಸಣ್ಣ ಕೆಲಸವಲ್ಲ. ಪ್ರೊಟೀನ್‌ ಸಂಸ್ಕರಣೆಯಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ನೈಟ್ರೋಜನ್‌ ಹೊರದೂಡಬೇಕು. ಇವೆಲ್ಲದಕ್ಕೂ ದೇಹದ ಯಕೃತ್ತು ಮತ್ತು ಮೂತ್ರಪಿಂಡಗಳು ಹೆಚ್ಚುವರಿಯಾಗಿ ದುಡಿಯಬೇಕು. ಹಾಗಾಗಿ ಊಟದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯವಾದದ್ದು.

Weight loss protein shakes or bars Artificial Sweetener

ತಿಳಿಯುವುದು ಹೇಗೆ?

ತಿನ್ನುತ್ತಿರುವ ಪ್ರೊಟೀನ್‌ ಪ್ರಮಾಣ ಹೆಚ್ಚು ಎಂಬುದು ತಿಳಿಯುವುದು ಹೇಗೆ? ಇದಕ್ಕೆ ಅಳತೆ ಇದೆಯೇ? ಇದು ಸಹಜವಾದ ಪ್ರಶ್ನೆ. ಅಂದಾಜಿಗೆ ಹೇಳುವುದಾದರೆ, ದೇಹದ ಒಂದು ಕೆ.ಜಿ. ತೂಕಕ್ಕೆ 0.8 ಗ್ರಾಂ ಪ್ರೊಟೀನ್‌ ಬೇಕಾಗುತ್ತದೆ ಮತ್ತು ಸಾಕಾಗುತ್ತದೆ. ಈ ಲೆಕ್ಕದಲ್ಲಿ ವಯಸ್ಕ ಪುರುಷರಿಗೆ ದಿನಕ್ಕೆ ಸುಮಾರು 56 ಗ್ರಾಂ ಪ್ರೊಟೀನ್‌ ಮತ್ತು ವಯಸ್ಕ ಮಹಿಳೆಯರಿಗೆ 46 ಗ್ರಾಂ ಪ್ರೊಟೀನ್‌ ಸಾಕಾಗುತ್ತದೆ. ಕ್ರೀಡಾಪಟುಗಳು ಮತ್ತು ಗರ್ಭಿಣಿಯರಿಗೆ ಇದಕ್ಕಿಂತ ಸ್ಪಲ್ಪ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಯಾರಿಗೇ ಆದರೂ, ಒಂದು ಕೆ.ಜಿ. ದೇಹದ ತೂಕಕ್ಕೆ ೨ ಗ್ರಾಂ ಪ್ರೊಟೀನ್‌ ಮೀರಿದರೆ- ಪ್ರೊಟೀನ್‌ ಸೇವನೆ ಅತಿಯಾಯಿತು ಎಂದೇ ಭಾವಿಸಬೇಕು.

ಆಗೇನಾಗುತ್ತದೆ?

ಸಮಸ್ಯೆಗಳು ಬರಬಹುದು. ಒಳ್ಳೆಯ ಸತ್ವವನ್ನು ಹೆಚ್ಚು ತಿಂದರೆ ಒಳ್ಳೆಯದೇ ಎಂದು ಭಾವಿಸಿದರೆ- ತಪ್ಪು! ಎಲ್ಲೋ ಒಮ್ಮೊಮ್ಮೆ ತಿಂದ ಪ್ರೊಟೀನ್‌ ಪ್ರಮಾಣ ಹೆಚ್ಚಾದರೆ ಅದೇನು ಸಮಸ್ಯೆಯಲ್ಲ. ಆದರೆ ಹೆಚ್ಚು ಕಾಲದವರೆಗೆ ಇದನ್ನೇ ಮಾಡುತ್ತಾ ಇದ್ದರೆ ತೊಂದರೆ ತಪ್ಪಿದ್ದಲ್ಲ. ದೇಹಕ್ಕೆ ದೊರೆತ ಪ್ರೊಟೀನ್‌ ಹೆಚ್ಚಾದರೆ ಅದನ್ನು ವಿಘಟನೆ ಮಾಡಿ, ಹೊರಗೆ ರವಾನಿಸಬೇಕಾಗುತ್ತದೆ. ಇದರ ಹೊರೆಯೆಲ್ಲ ಬೀಳುವುದು ಯಕೃತ್ತು ಮತ್ತು ಮೂತ್ರಪಿಂಡದ ಮೇಲೆ. ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಬಹುದು. ಹೆಚ್ಚಿನ ಪ್ರಮಾಣದ ಯೂರಿಯ ಸಹ ರಕ್ತ ಸೇರುವುದರಿಂದ, ಮೂಳೆ ಟೊಳ್ಳಾಗುವ ಆಸ್ಟಿಯೊಪೊರೊಸಿಸ್‌ ಕ್ರಮೇಣ ಕಾಡಬಹುದು. ಕೆಲವರಿಗೆ ಯೂರಿಕ್‌ ಆಮ್ಲ ಹೆಚ್ಚಾದ್ದರಿಂದ ಗೌಟ್‌ ಆರ್ಥರೈಟಿಸ್‌ ತೊಂದರೆ ಕೊಡುವುದೂ ಇದೆ. ಅದರಲ್ಲೂ ಹೆಚ್ಚಿನ ಪ್ರಮಾಣದ ಪ್ರಾಣಿಜನ್ಯ ಪ್ರೊಟೀನ್‌ ಸೇವಿಸುತ್ತಿದ್ದರೆ ಕರುಳಿನ ಮೇಲೂ ಹೊರೆ ಹೆಚ್ಚುತ್ತದೆ. ಮಾತ್ರವಲ್ಲ, ಕರುಳಿನ ಕ್ಯಾನ್ಸರ್‌ಗೂ ದಾರಿ ಮಾಡಬಹುದು.

Protein Shake Weight Loss Drink

ಅಷ್ಟೇ ಅಲ್ಲ

ಹೆಚ್ಚುವರಿಯಾದ ಪ್ರೊಟೀನ್‌ ಹೊರಹಾಕುವುದಕ್ಕೆ ದೇಹಕ್ಕೆ ಹೆಚ್ಚಿನ ನೀರಿನ ಅಗತ್ಯವಿದೆ. ಈ ಬಗ್ಗೆ ಅರಿವಿಲ್ಲದಿದ್ದರೆ, ನಿರ್ಜಲೀಕರಣಕ್ಕೆ ತುತ್ತಾಗಬಹುದು. ಕೆಂಪು ಮಾಂಸ ಅತಿಯಾಗಿ ತಿಂದರೆ, ಪ್ರೊಟೀನ್‌ ಮಾತ್ರವಲ್ಲ, ಜೊತೆಗೆ ಕೊಬ್ಬೂ ಸೇರಿಕೊಂಡು ಇನ್ನಷ್ಟು ತೊಂದರೆ ತರುತ್ತದೆ. ದೇಹದಲ್ಲಿ ಅಮೈನೊ ಆಮ್ಲಗಳ ವಿಘಟನೆ ನಡೆಯುವ ಸಂದರ್ಭದಲ್ಲಿ ಬಾಯಿಯ ದುರ್ಗಂಧವೂ ಸಮಸ್ಯೆ ಕೊಡುತ್ತದೆ. ಪ್ರೊಟೀನ್‌ ಪ್ರಮಾಣ ಹೆಚ್ಚಾದರೆ ಹೊಟ್ಟೆ ಹಾಳಾಗುವ ಸಂಭವ ಹೆಚ್ಚು. ಅದರಲ್ಲೂ ಪ್ರೊಟೀನ್‌ಗೆ ಸೂಕ್ತ ಪ್ರಮಾಣದಲ್ಲಿ ನಾರಿನ ಅಂಶ ದೊರೆಯದೆ ಹೋದರೆ ಮಲಬದ್ಧತೆ ನಿಶ್ಚಿತ.

ಇದನ್ನೂ ಓದಿ: Ramphal Health Benefits: ರಾಮಫಲವೆಂಬ ಆರೋಗ್ಯಸೂತ್ರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips: ಒಂದೇ ಕಡೆ ಕೂತಿರುತ್ತೀರಾ? ಸಮಸ್ಯೆಗಳು ಒಂದೆರಡಲ್ಲ!

ಜಡ ಜೀವನವೆಂದರೆ (Health Tips) ಎಚ್ಚರವಿದ್ದಾಗ ಒಂದೆಡೆ ಕೂರುವ ಅಥವಾ ಮಲಗುವ ಮೂಲಕ ಅತಿ ಕಡಿಮೆ ಶಕ್ತಿಯನ್ನು ವ್ಯಯಿಸುವುದು- ಟಿವಿ ನೋಡುವುದರಿಂದ ಹಿಡಿದು, ಮೊಬೈಲು ಇಲ್ಲವೇ ಕಂಪ್ಯೂಟರ್‌ ಹಿಡಿದು ಕೂರುವುದು ಅಥವಾ ಬಿದ್ದುಕೊಂಡು ಓದುವವರೆಗೆ ಯಾವುದೇ ಕೆಲಸಗಳು ಇದರಲ್ಲಿ ಬರಬಹುದು. ಇದರಿಂದ ದೇಹದಲ್ಲಿ ರಕ್ತಸಂಚಾರ ಕಡಿಮೆಯಾಗಿ, ಸ್ನಾಯುಗಳಲ್ಲಿ ಸಂಚಲನ ಕುಂಠಿತವಾಗಿ, ಚಯಾಪಚಯ ಏರುಪೇರಾಗಿ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳು ಉಂಟಾಗುತ್ತವೆ. ಇದನ್ನು ಸರಿಪಡಿಸಲು ಕಠಿಣವಾದ ವ್ಯಾಯಾಮದಿಂದಲೂ ಕಷ್ಟಸಾಧ್ಯ ಎನ್ನುತ್ತಾರೆ ಅಧ್ಯಯನಕಾರರು.

VISTARANEWS.COM


on

Health Tips
Koo

ದೀರ್ಘಕಾಲ ಒಂದೇ ಕಡೆ ಕೂತು ಕೆಲಸ ಮಾಡುವವರೇ ನೀವು? (Health Tips) ಹಾಗಾದರೆ ನೀವಿದನ್ನು ಓದಲೇಬೇಕು. ಕಾರಣ ಯಾವುದೇ ಇರಲಿ, ಒಂದೆಡೆ ದೀರ್ಘ ಕಾಲ ಕೂತಿರುತ್ತೀರಿ ಎಂದಾದರೆ ಸಾವಿಗೆ ಬೇಗ ಹತ್ತಿರವಾಗುತ್ತೀರಿ ಎನ್ನುತ್ತಾರೆ ಹೃದಯ ತಜ್ಞರು. ಜಡ ಜೀವನದಿಂದ ಸಾವು ಬೇಗನೇ ಆಕ್ರಮಿಸುವ ಸಾಧ್ಯತೆ ಶೇ. ೩೦ರಷ್ಟು ಹೆಚ್ಚುತ್ತದೆ ಎನ್ನುವುದು ಅಧ್ಯಯನಗಳು ಕಂಡುಕೊಂಡ ಸತ್ಯ. ಏನು ಹೀಗೆಂದರೆ? ಅದು ಹೇಗೆ ಸಾಧ್ಯ?
ಜಡ ಜೀವನವೆಂದರೆ ಎಚ್ಚರವಿದ್ದಾಗ ಒಂದೆಡೆ ಕೂರುವ ಅಥವಾ ಮಲಗುವ ಮೂಲಕ ಅತಿ ಕಡಿಮೆ ಶಕ್ತಿಯನ್ನು ವ್ಯಯಿಸುವುದು- ಟಿವಿ ನೋಡುವುದರಿಂದ ಹಿಡಿದು, ಮೊಬೈಲು ಇಲ್ಲವೇ ಕಂಪ್ಯೂಟರ್‌ ಹಿಡಿದು ಕೂರುವುದು ಅಥವಾ ಬಿದ್ದುಕೊಂಡು ಓದುವವರೆಗೆ ಯಾವುದೇ ಕೆಲಸಗಳು ಇದರಲ್ಲಿ ಬರಬಹುದು. ಇದರಿಂದ ದೇಹದಲ್ಲಿ ರಕ್ತಸಂಚಾರ ಕಡಿಮೆಯಾಗಿ, ಸ್ನಾಯುಗಳಲ್ಲಿ ಸಂಚಲನ ಕುಂಠಿತವಾಗಿ, ಚಯಾಪಚಯ ಏರುಪೇರಾಗಿ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳು ಉಂಟಾಗುತ್ತವೆ. ಇದನ್ನು ಸರಿಪಡಿಸಲು ಕಠಿಣವಾದ ವ್ಯಾಯಾಮದಿಂದಲೂ ಕಷ್ಟಸಾಧ್ಯ ಎನ್ನುತ್ತಾರೆ ಅಧ್ಯಯನಕಾರರು. ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ದೀರ್ಘಕಾಲ ಒಂದೇ ಕಡೆ ಕೂತಿರುವುದರಿಂದ?

Belly Fat Reduction

ಕಿಣ್ವಗಳ ಕ್ಷಮತೆ ಕಡಿಮೆಯಾಗುತ್ತದೆ

ಬೊಜ್ಜು, ಮಧುಮೇಹ, ಬಿಪಿ: ಬಹಳ ಹೊತ್ತಿನವರೆಗೆ ಜಡವಾಗಿ ಕೂತಿರುವುದರಿಂದ, ನಮ್ಮ ದೇಹದಲ್ಲಿ ಕೊಬ್ಬಿನಾಂಶಗಳನ್ನು ವಿಘಟಿಸುವ ಲಿಪೊಪ್ರೊಟೀನ್‌ ಲಿಪೇಸ್‌ ಎಂಬ ಕಿಣ್ವಗಳ ಕ್ಷಮತೆ ಕಡಿಮೆಯಾಗುತ್ತದೆ. ಈ ಕಿಣ್ವಗಳ ಚಟುವಟಿಕೆ ಕಡಿಮೆಯಾದರೆ ಟ್ರೈಗ್ಲಿಸರೈಡ್‌ ಮಟ್ಟ ಏರಿ, ಬೊಜ್ಜು ಹೆಚ್ಚುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶ ಏರಿಕೆಯಾಗಿ ಕ್ರಮೇಣ ಮಧುಮೇಹಕ್ಕೆ ಆಹ್ವಾನ ನೀಡುತ್ತದೆ. ಬದಲಿಗೆ, ಪ್ರತಿ 30-60 ನಿಮಿಷಗಳಿಗೆ ಒಮ್ಮೆ ಎದ್ದು ನಾಲ್ಕಾರು ನಿಮಿಷಗಳ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಈ ಕಿಣ್ವಗಳ ಮಟ್ಟ ಕುಸಿಯದಂತೆ ನೋಡಿಕೊಳ್ಳಬಹುದು.

Muscle weakness

ಸ್ನಾಯುಗಳ ಬಲಹೀನತೆ

ಮಾಂಸಖಂಡಗಳ ತತ್ವ ಒಂದೇ- ಬಳಸಿ ಇಲ್ಲವೇ ಕಳೆದುಕೊಳ್ಳಿ (ಯೂಸ್ ಇಟ್‌ ಆರ್‌ ಲೂಸ್‌ ಇಟ್‌) ಸ್ನಾಯುಗಳನ್ನು ಬಳಸದೆ, ಅವುಗಳಲ್ಲಿ ಸಂಕೋಚ-ವಿಕಾಸಗಳಿಲ್ಲದೆ ಜಡವಾಗಿದ್ದರೆ ಅವು ಕ್ರಮೇಣ ಬಲಹೀನಗೊಳ್ಳುತ್ತವೆ. ಸ್ನಾಯುಗಳಲ್ಲಿ ಹುದುಗಿರುವ ಪ್ರೊಟೀನ್‌ಗಳು ನಶಿಸಿ, ಉಬ್ಬಿರುವ ಮಾಂಸಪೇಶಿಗಳ ಬದಲಿಗೆ ಕೊಬ್ಬಿರುವ ಭಾಗಗಳು ಕಾಣತೊಡಗುತ್ತವೆ. ಆಗಾಗ ಸ್ನಾಯುಗಳಲ್ಲಿ ಸಂಚಲನವಿದ್ದರೆ, ಅವುಗಳು ದುರ್ಬಲವಾಗದಂತೆ ತಡೆಯಬಹುದು. ಹಾಗಾಗಿ ಆಗಾಗ ಎದ್ದು ಓಡಾಡಿ.

Improved Blood Circulation Health Benefits Of Hot Water Bath

ರಕ್ತಸಂಚಾರ ಕುಂಠಿತ

ಒಂದೇ ಕಡೆ ಕೂತಿದ್ದರೆ ರಕ್ತನಾಳಗಳಿಗೂ ತೊಂದರೆ. ನಾಳಗಳು ಬಿಗಿದಂತಾಗಿ ರಕ್ತಸಂಚಾರಕ್ಕೆ ತೊಡಕಾಗುತ್ತದೆ. ಪರಿಣಾಮವೆಂದರೆ ಉಬ್ಬಿದ ವೆರಿಕೋಸ್‌ ವೇನ್‌, ರಕ್ತ ಹೆಪ್ಪುಗಟ್ಟುವುದು, ರಕ್ತದೊತ್ತಡ ಏರುವುದು- ಇಂಥವು ಗಂಟುಬೀಳಬಹುದು. ಹಾಗಾಗಿ ಚಟುವಟಿಕೆಯನ್ನು ಆಗಾಗ ಇರಿಸಿಕೊಳ್ಳುವುದು, ಚುಟುಕು ವ್ಯಾಯಾಮಗಳು, ನೀರು ಕುಡಿಯಲೋ ಅಥವಾ ಬಾತ್‌ರೂಮಿಗಾಗಿಯೋ ಎದ್ದು ಓಡಾಡುವುದು ಹಲವು ರೀತಿಯಲ್ಲಿ ಉಪಯುಕ್ತ.

ಬೆನ್ನು, ಕುತ್ತಿಗೆ ನೋವು

ಸದಾ ಕಾಲ ಕೂತೇ ಇರುವುದರಿಂದ ಬೆನ್ನುಹುರಿ, ಕುತ್ತಿಗೆಯ ಸ್ನಾಯುಗಳು, ಸೊಂಟದ ಡಿಸ್ಕ್‌ ಮೇಲೆ ಅತಿ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದರಿಂದ ಬೆನ್ನಿನ ಕೆಳಭಾಗದಲ್ಲಿ ನೋವು, ಕುತ್ತಿಗೆ, ಭುಜ, ನಡು ಬೆನ್ನಲ್ಲೂ ತೀವ್ರ ನೋವು ಕಾಣಬಹುದು. ಜೊತೆಗೆ, ಕೆಲವೇ ಸ್ನಾಯುಗಳನ್ನು ವಿಪರೀತ ಉಪಯೋಗಿಸುವುದರಿಂದ, ಅಡ್ಡ ಪರಿಣಾಮಗಳು ಅಲ್ಲೂ ಕಾಣುತ್ತವೆ.

Cardiac Arrest

ಹೃದ್ರೋಗಗಳ ಭೀತಿ ಹೆಚ್ಚಳ

ಹೆಚ್ಚಿನ ಸಮಸ್ಯೆ ಇರುವುದು ಇಲ್ಲಿ. ಮೇಲ್ನೋಟಕ್ಕೆ ಬೊಜ್ಜಿಲ್ಲದಂತೆ ಕಾಣುವವರಲ್ಲೂ ಹೃದಯ ತೊಂದರೆ ಕೊಡುತ್ತಿದೆ. ಜಡಜೀವನದಿಂದ ಹೃದಯದ ತೊಂದರೆಗಳು ಶೇ.147ರಷ್ಟು ಹೆಚ್ಚುತ್ತವೆ ಎಂಬುದು ಅ‍ಧ್ಯಯನಗಳ ಮಾತು. ಇದರ ಬದಲಿಗೆ, ಆಗಾಗ ಚಲನೆಯಲ್ಲಿರುವುದು ಮತ್ತು ವಾರಕ್ಕೆ 150 ನಿಮಿಷಗಳ ಮಧ್ಯಮಗತಿಯ ವ್ಯಾಯಾಮದಿಂದ ಹೃದಯವನ್ನು ಆರೋಗ್ಯವಾಗಿ ಇರಿಸಬಹುದು.

Bone Health In Winter

ದುರ್ಬಲ ಮೂಳೆಗಳು

ಸ್ನಾಯುಗಳ ದೌರ್ಬಲ್ಯವು ಕ್ರಮೇಣ ಮೂಳೆಗಳನ್ನೂ ದುರ್ಬಲಗೊಳಿಸುತ್ತದೆ. ಇದರಿಂದ ಆಸ್ಟಿಯೊಪೊರೊಸಿಸ್‌ನಂಥ ತೊಂದರೆಗಳು ಅಮರಿಕೊಳ್ಳಬಹುದು. ಹಾಗಾಗಿ ಅಲ್ಪ ಪ್ರಮಾಣದ ತೂಕ ಎತ್ತುವುದು, ಪ್ರತಿರೋಧಕತೆಯ ತರಬೇತಿ, ಕಾರ್ಡಿಯೊ ಮಾದರಿಯ ವ್ಯಾಯಾಮಗಳು ಮೂಳೆಗಳ ಆರೋಗ್ಯಕ್ಕೆ ಒಳಿತನ್ನು ಮಾಡುತ್ತವೆ.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

Continue Reading

ದೇಶ

Everest Spices: ಸಿಂಗಾಪುರ ಬಳಿಕ ಹಾಂಕಾಂಗ್‌ನಲ್ಲೂ ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ ಬ್ಯಾನ್!

Everest Spices: ಮಸಾಲಾ ಉತ್ಪನ್ನಗಳಿಗಾಗಿ ಜಾಗತಿಕವಾಗಿ ಹೆಸರು ಗಳಿಸಿರುವ ಭಾರತದ ಎಂಡಿಎಚ್‌ ಹಾಗೂ ಎವರೆಸ್ಟ್‌ ಕಂಪನಿಗಳು ಈಗ ನಕಾರಾತ್ಮಕವಾಗಿ ಸುದ್ದಿಯಾಗುತ್ತಿವೆ. ಸಿಂಗಾಪುರ ಬಳಿಕ ಹಾಂಕಾಂಗ್‌ಲ್ಲೂ ಎವರೆಸ್ಟ್‌ ಹಾಗೂ ಎಂಡಿಎಚ್‌ ಕಂಪನಿಯ ನಾಲ್ಕು ಮಸಾಲಾ ಪದಾರ್ಥಗಳ ಮಾರಾಟ ನಿಷೇಧಿಸಿದ್ದು, ಕಂಪನಿಗಳು ಈಗ ಸಂಕಷ್ಟಕ್ಕೆ ಸಿಲುಕಿವೆ.

VISTARANEWS.COM


on

Everest Spices
Koo

ಸಿಟಿ ಆಫ್‌ ವಿಕ್ಟೋರಿಯಾ: ಸಿಂಗಾಪುರದಲ್ಲಿ ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ (Spices) ತಯಾರಕ ಎವರೆಸ್ಟ್‌ನ (Everest Spices) ಫಿಶ್ ಕರಿ ಮಸಾಲಾ (Fish Curry Masala) ಮಾರಾಟ ನಿಷೇಧಗೊಳಿಸಿದ ಬೆನ್ನಲ್ಲೇ, ಹಾಂಕಾಂಗ್‌ನಲ್ಲೂ (Hong Kong) ಭಾರತದ ಎಂಡಿಎಚ್‌ ಹಾಗೂ ಎವರೆಸ್ಟ್‌ ಮಸಾಲಾ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿದೆ. ಹಾಗಾಗಿ, ಜಾಗತಿಕವಾಗಿ ಭಾರತದ ಎರಡು ಮಸಾಲಾ ಬ್ರ್ಯಾಂಡ್‌ಗಳು ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾಗಿವೆ. ಇದರ ಪರಿಣಾಮ ಭಾರತದ ಉತ್ಪನ್ನಗಳ ಮೇಲೂ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.

ಭಾರತ ಸೇರಿ ಜಗತ್ತಿನೆಲ್ಲೆಡೆ ಖ್ಯಾತಿ ಗಳಿಸಿರುವ ಎಂಡಿಎಚ್‌ನ ಮೂರು ಮಸಾಲಾ ಪದಾರ್ಥಗಳು ಹಾಗೂ ಎವರೆಸ್ಟ್‌ನ ಒಂದು ಮಸಾಲಾ ಪದಾರ್ಥದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಕಾರ್ಸಿನೋಜೆನಿಕ್‌ ರಾಸಾಯನಿಕ ಇರುವ ಕಾರಣ ಹಾಂಕಾಂಗ್‌ ಆಹಾರ ನಿಯಂತ್ರಣ ಪ್ರಾಧಿಕಾರವು ನಾಲ್ಕೂ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ. ಎಂಡಿಎಚ್‌ನ ಕರಿ ಪೌಡರ್‌, ಮಿಕ್ಸ್ಡ್‌ ಮಸಾಲಾ ಪೌಡರ್‌ ಹಾಗೂ ಸಾಂಬಾರ್‌ ಮಸಾಲಾ ಮತ್ತು ಎವರೆಸ್ಟ್‌ನ ಫಿಶ್‌ ಕರಿ ಮಸಾಲಾವನ್ನು ನಿಷೇಧಿಸಲಾಗಿದೆ.

“ಎಂಡಿಎಚ್‌ನ ಮೂರು ಹಾಗೂ ಎವರೆಸ್ಟ್‌ನ ಒಂದು ಉತ್ಪನ್ನದ ಸ್ಯಾಂಪಲ್‌ ಪಡೆದು ಪರಿಶೀಲನೆ ನಡೆಸಲಾಗಿದೆ. ಇವುಗಳಲ್ಲಿ ಪೆಸ್ಟಿಸೈಡ್‌ ಎಥಿಲೀನ್‌ ಆಕ್ಸೈಡ್‌ ಪತ್ತೆಯಾಗಿದೆ. ಈ ಆಕ್ಸೈಡ್‌ ಮನುಷ್ಯನು ಸೇವಿಸಲು ಅಪಾಯಕಾರಿಯಾಗಿದೆ. ಕ್ಯಾನ್ಸರ್‌ ಕಾರಕ ಕಾರ್ಸಿನೋಜೆನಿಕ್‌ ರಾಸಾಯನಿಕವೂ ಪತ್ತೆಯಾಗಿದೆ. ಹಾಗಾಗಿ, ದೇಶದ ಮಾರಾಟಗಾರರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡದಂತೆ, ಮಳಿಗೆಗಳಲ್ಲಿ ಇರಿಸದಂತೆ ಸೂಚಿಸಲಾಗಿದೆ” ಎಂಬುದಾಗಿ ಹಾಂಕಾಂಗ್‌ನ ಸೆಂಟರ್‌ ಫಾರ್‌ ಫುಡ್‌ ಸೇಫ್ಟಿ ತಿಳಿಸಿದೆ. ಇವುಗಳನ್ನು ನಿಷೇಧಿಸಿ ಏಪ್ರಿಲ್‌ 5ರಂದೇ ಆದೇಶ ಹೊರಡಿಸಿದೆ.

ಕ್ಯಾನ್ಸರ್‌ ಕುರಿತು ಸಂಶೋಧನೆ ಮಾಡುವ ಅಂತಾರಾಷ್ಟ್ರೀಯ ಸಂಸ್ಥೆಯೇ ಎಥಿಲೀನ್‌ ಆಕ್ಸೈಡ್‌ನ ಅಪಾಯದ ಕುರಿತು ವರದಿ ನೀಡಿದೆ. ಇದು ಕ್ಯಾನ್ಸರ್‌ ಕಾರಕ ಎಂಬುದಾಗಿ ಜಾಗತಿಕ ಸಂಸ್ಥೆ ತಿಳಿಸಿದೆ. ಹಾಗಾಗಿ, ನಾಲ್ಕೂ ಉತ್ಪನ್ನಗಳ ಸಂಗ್ರಹ, ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಹಾಂಕಾಗ್‌ ತಿಳಿಸಿದೆ. ಅನುಮತಿ ನೀಡಿದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿ ಇಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು ಸಿಂಗಾಪುರ ಕೂಡ ಎವರೆಸ್ಟ್‌ ಫಿಶ್‌ ಕರಿ ಮಸಾಲಾ ನಿಷೇಧಿಸುವಾಗ ತಿಳಿಸಿತ್ತು.

ಇದನ್ನೂ ಓದಿ: Pesticide: ಎವರೆಸ್ಟ್‌ ಫಿಶ್‌ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್‌ ಮಾಡಿದ ಸಿಂಗಾಪುರ

Continue Reading

ಲೈಫ್‌ಸ್ಟೈಲ್

Infertility Problem: ಇನ್ನೂ ಮಕ್ಕಳಾಗಿಲ್ಲವೆ? ಈ ಸರಳ ಸಲಹೆಗಳನ್ನು ಪಾಲಿಸಿ

Infertility Problem: ಸಂತಾನಕ್ಕೆ ಸಂಬಂಧಪಟ್ಟ ಪ್ರಶ್ನೆ ಬಂದಾಗ ಮೊದಲು ತಲೆಬಾಗಿಸುವುದೇ ಹೆಣ್ಣುಮಕ್ಕಳು. ಅಲ್ಲಿ ಗಂಡುಮಕ್ಕಳ ಸಮಸ್ಯೆ ಇದ್ದರೂ ಸಮಾಜ ಕೈ ತೋರಿಸುವುದು, ಬಂಜೆ ಎಂದು ಆಡಿಕೊಳ್ಳುವುದು ಹೆಣ್ಣನ್ನೇ. ಈ ಸಮಸ್ಯೆಗೆ ಕಾರಣ ಹಾಗೂ ಪಾಲಿಸಬೇಕಾದ ಕಾಳಜಿಯ ಬಗ್ಗೆ ತಜ್ಞರು ಇಲ್ಲಿ ತಿಳಿಸಿದ್ದಾರೆ. ಈ ಸರಳ ಸಲಹೆಗಳನ್ನು ಪಾಲಿಸಿ, ಮಕ್ಕಳಾಗದ ಸಮಸ್ಯೆಯಿಂದ ಪಾರಾಗಿ.

VISTARANEWS.COM


on

Reproductive Issues
Koo

ಹೆಣ್ಣುಮಕ್ಕಳು ಮದುವೆಯಾದ ಕೆಲ ತಿಂಗಳ ಬಳಿಕ ಪ್ರತಿಯೊಬ್ಬರೂ ಗುಡ್ ನ್ಯೂಸ್ ಇಲ್ಲವೇ ಎಂದು ಕೇಳುತ್ತಾರೆ. ಈ ಸವಾಲನ್ನು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ಎದುರಿಸುತ್ತಾರೆ. ಮದುವೆಯಾದ ಮೂರು ತಿಂಗಳೊಳಗೆ ಸಿಹಿ ಸುದ್ದಿ ನೀಡಿದರೆ ಎಲ್ಲರಿಗೂ ಸಂತೋಷ. ಆದರೆ ಮದುವೆಯಾಗಿ ವರುಷವಾದರೂ ಗರ್ಭ ಧರಿಸದಿದ್ದರೆ (Infertility Problem) ಜನರು ಆಕೆಯನ್ನು ತುಂಬಾ ತಾತ್ಸಾರದಿಂದ ನೋಡುತ್ತಾರೆ. ಯಾವುದೇ ಸಭೆ ಸಮಾರಂಭಗಳಲ್ಲಿ ಆಕೆಯನ್ನು ಮುಂದಕ್ಕೆ ಬರಲು ಬಿಡುವುದಿಲ್ಲ. ಬಂಜೆ ಎಂಬ ಪಟ್ಟವನ್ನು ಕಟ್ಟುತ್ತಾರೆ. ಹಾಗಾಗಿ ಸಂತಾನ ಹೆಣ್ಣುಮಕ್ಕಳ ಜೀವನದಲ್ಲಿ ಅತಿ ಮುಖ್ಯ ಅಂಶ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಬಂಜೆತನದ ಸಮಸ್ಯೆಯಿಂದ ನರಳುತ್ತಿದ್ದಾರೆ. ಮಹಿಳೆಯ ಸಂತಾನೋತ್ಪತ್ತಿ (Reproductive Issues) ವ್ಯವಸ್ಥೆಯಲ್ಲಿ ಕಂಡುಬರುವಂತಹ ಸಮಸ್ಯೆಗಳು ಇದಕ್ಕೆ ಕಾರಣವಾಗಿದೆ. ಅನಿಯಮಿತ ಮುಟ್ಟಿನ ಸಮಸ್ಯೆ, ಗರ್ಭಕೋಶದಲ್ಲಿ ಗಡ್ಡೆಗಳ ಬೆಳವಣಿಗೆ, ಹಾರ್ಮೋನ್ ಅಸಮತೋಲನ ಮುಂತಾದವುಗಳಿಂದ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಕಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಹಾಗಾಗಿ ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಆರೋಗ್ಯವಾಗಿರಿಸಲು ತಜ್ಞರು ತಿಳಿಸಿದ ಈ ಸಲಹೆಗಳನ್ನು ಪಾಲಿಸಿ.

 1. – ಮಹಿಳೆಯರು ನಿಯಮಿತವಾಗಿ ಸ್ಕ್ಯಾನಿಂಗ್ ಮತ್ತು ವೈದ್ಯರ ಬಳಿ ಚೆಕ್ ಅಪ್ ಗಳನ್ನು ಮಾಡಿಸುವುದು. ಇದರಿಂದ ರೋಗಗಳನ್ನು ಗುರುತಿಸಿ ಚಿಕಿತ್ಸೆ ಪಡೆಯಬಹುದು.
 2. – ಮಹಿಳೆಯರು ಆರೋಗ್ಯಕರವಾದ ಜೀವನಶೈಲಿಯನ್ನು ಹೊಂದಬೇಕು. ಅದಕ್ಕಾಗಿ ಪೌಷ್ಟಿಕ ಆಹಾರ ಸೇವನೆ, ನಿಯಮಿತವಾಗಿ ವ್ಯಾಯಾಮ, ಆರೋಗ್ಯಕರವಾದ ನಿದ್ರೆಯ ದಿನಚರಿಯನ್ನು ಹೊಂದಬೇಕು. ಇದರಿಂದ ಮಹಿಳೆಯ ಸಂತಾನೋತ್ಪತ್ತಿ ವ್ಯವಸ್ಥೆ ಉತ್ತಮವಾಗಿರುತ್ತದೆಯಂತೆ.
 3. – ಸಂತಾನೋತ್ಪತ್ತಿ ಭಾಗದಲ್ಲಿ ಯಾವುದೇ ರೀತಿಯ ಅಸ್ವಸ್ಥತೆ, ನೋವು, ಅಸಮಾನ್ಯ ವಿಸರ್ಜನೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
 4. – ಧೂಮಪಾನ ಮತ್ತು ಮದ್ಯಪಾನ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಇದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ಇವುಗಳನ್ನು ತ್ಯಜಿಸಿ.
 5. – ಸಂಗಾತಿಯೊಂದಿಗೆ ಉತ್ತಮ ಸುರಕ್ಷಿತ ಲೈಂಗಿಕ ಸಂಪರ್ಕವನ್ನು ಹೊಂದಿ. ಇದರಿಂದ ಲೈಂಗಿಕವಾಗಿ ಹರಡುವಂತಹ ರೋಗಗಳಿಂದ ರಕ್ಷಿಸಿಕೊಳ್ಳಬಹುದು.
 6. – ಸಂತಾನೋತ್ಪತ್ತಿ ವ್ಯವಸ್ಥೆಯ ತೊಂದರೆಗಳನ್ನು ತಡೆಯುವಂತಹ ಲಸಿಕೆಗಳನ್ನು ವೈದ್ಯರ ಸಲಹೆಯಿಂದ ಪಡೆಯಿರಿ.
 7. – ಮುಟ್ಟಿನ ಸಮಯದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ, ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸಿ. ಅವುಗಳನ್ನು 6 ಗಂಟೆಯೊಳಗೆ ಬದಲಾಯಿಸುತ್ತೀರಿ.

ಸಂತಾನೋತ್ಪತ್ತಿ ಸಮಸ್ಯೆಗೆ ಪ್ರಮುಖ ಕಾರಣಗಳು:

 • ಹಾರ್ಮೋನ್ ಗಳ ಅಸಮತೋಲನ : ಹಾರ್ಮೋನ್ ಅಸಮತೋಲನದಿಂದ ಪಿಸಿಓಎಸ್ ಸಮಸ್ಯೆ ಉಂಟಾಗುತ್ತದೆ. ಇದು ಅನಿಯಮಿತ ಮುಟ್ಟಿನ ಸಮಸ್ಯೆ ಮತ್ತು ಫಲವತ್ತೆತಯ ಮೇಲೆ ಪರಿಣಾಮ ಬೀರುತ್ತದೆ.
 • ಸೋಂಕುಗಳು : ಲೈಂಗಿಕವಾಗಿ ಹರಡುವಂತಹ ಸೋಂಕುಗಳಾದ ಕ್ಲಮೈಡಿಯ ಮತ್ತು ಗೊನೊರಿಯಾದಂತಹ ಸೋಂಕುಗಳಿಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅದರಿಂದ ಬಂಜೆತನದ ಸಮಸ್ಯೆ ಕಾಡುತ್ತದೆ.
 • ಅಸಹಜ ರಚನೆಗಳು : ಗರ್ಭಾಶಯದ ಒಳಗೆ ಹಾಗೂ ಹೊರಗಿನ ಭಾಗದಲ್ಲಿ ಗಡ್ಡೆಗಳು, ಫೈಬ್ರಾಯ್ಡ್ ಗಳು, ಮತ್ತು ಹಾನಿಕಾರಕ ಬೆಳವಣಿಗೆಗಳು, ಭಾರೀ ರಕ್ತಸ್ರಾವ ಫಲವತ್ತತೆ ಸಮಸ್ಯೆಗೆ ಕಾರಣವಾಗುತ್ತದೆ.
 • ಜೀವನಶೈಲಿಯ ಅಂಶಗಳು : ನೀವು ಧೂಮಪಾನ, ಮದ್ಯಪಾನ, ಒತ್ತಡ, ಮಾಲಿನ್ಯಕಾರಕ ಪರಿಸರವನ್ನುಹೊಂದಿದ್ದರೆ ಅದು ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

 • ಅನುವಂಶಿಕ ಪ್ರವೃತ್ತಿ : ಹೆಚ್ಚಿನ ಮಹಿಳೆಯರು ಅನುವಂಶಿಕವಾಗಿ ಬಂಜೆತನದ ಸಮಸ್ಯೆಗೆ ಒಳಗಾಗುತ್ತಾರೆ. ಮಹಿಳೆಯ ಕುಟುಂಬದಲ್ಲಿ ಪಿಸಿಓಎಸ್ ಸಮಸ್ಯೆ ಇದ್ದರೆ ಇದು ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
Continue Reading

ಆರೋಗ್ಯ

Prevent Heart Attack: ಹೃದಯಾಘಾತದಿಂದ ಪಾರಾಗಲು ಈ 10 ಸರಳ ಟಿಪ್ಸ್ ಪಾಲಿಸಿ

Prevent Heart Attack: ನೋಡಲು ಸದೃಢವಾಗಿದ್ದು,, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವವರು ಸಣ್ಣ ವಯಸ್ಸಿನಲ್ಲೇ ಹೃದಯಾಘಾತವಾಗಿ ಸಾವನ್ನಪ್ಪಿದ ಬಗ್ಗೆ ಕೇಳಿದ್ದೇವೆ. ಇದಕ್ಕೆ ಕಾರಣ ಏನು ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಆದರೆ ಕೆಲವು ವಿಷಯಗಳನ್ನು ನಾವು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡರೆ ಹೃದಯಾಘಾತದ ಅಪಾಯದಿಂದ ನಾವು ದೂರವಾಗಬಹುದು. ಅದು ಏನು ಗೊತ್ತೇ? ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

By

Prevent Heart Attack
Koo

ಒಂದು ಕಾಲವಿತ್ತು, ಹೃದಯಾಘಾತ (heart attack) 60 ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ಕಾಣಿಸುತ್ತಿತ್ತು. ಆದರೆ ಈಗ ಸಣ್ಣ ಮಕ್ಕಳಿಂದ ಹಿಡಿದು ಎಲ್ಲರೂ ಹೃದಯಾಘಾತಕ್ಕೆ ಒಳಗುತ್ತಿದ್ದಾರೆ. ಇದಕ್ಕೆ ನಮ್ಮ ಬದಲಾದ ಜೀವನ ಶೈಲಿ (life style), ಆಹಾರ (food) ಮುಖ್ಯ ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ನಾವು ನಮ್ಮ ಹೃದಯದ ಬಗ್ಗೆ ಹೆಚ್ಚಿನ ಕಾಳಜಿ (Prevent Heart Attack) ತೋರಿಸುವ ಅಗತ್ಯ ಇಂದು ಎಲ್ಲರಿಗೂ ಇದೆ.

ಚಿಕ್ಕ ವಯಸ್ಸಿನಲ್ಲೇ (young age) ಹೆಚ್ಚಿನವರು ಇತ್ತೀಚಿನ ದಿನಗಳಲ್ಲಿ ಹೃದ್ರೋಗಿಗಳಾಗುತ್ತಿದ್ದಾರೆ. ಅದರಲ್ಲೂ 30 ರಿಂದ 35 ವರ್ಷ ವಯಸ್ಸಿನ ಹೆಚ್ಚಿನ ಜನರಲ್ಲಿ ಹೃದಯಾಘಾತ ಅಥವಾ ಹೃದಯ ಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪುತ್ತಿದ್ದಾರೆ. ಸದೃಢ ಮತ್ತು ಆರೋಗ್ಯವಂತರಾಗಿ ಕಾಣುವ ವ್ಯಕ್ತಿಗಳೂ ಹೃದಯಾಘಾತಕ್ಕೆ ಒಳಗಾಗಿದ್ದಾರೆ.

ಹೆಚ್ಚಿನವರು ಹೃದಯ ತಪಾಸಣೆಯನ್ನು ನಿರ್ಲಕ್ಷಿಸುತ್ತಾರೆ. ಏನಾದರೂ ಸಮಸ್ಯೆಯಾದಾಗ ಮಾತ್ರ ವೈದ್ಯರ ಬಳಿಗೆ ಓಡುತ್ತಾರೆ. ಬೆಳಗ್ಗೆ ಮತ್ತು ಸಂಜೆ ವ್ಯಾಯಾಮ ಮಾಡುವವರು, ಜಿಮ್‌ಗೆ ಹೋಗಿ ಫಿಟ್‌ ಆಗಿ ಬೆವರು ಹರಿಸುವವರು ಕೂಡ ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಒಳಗಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದು ಯಾಕಾಗಿ ಇರಬಹುದು ಎಂಬುದನ್ನು ಎಲ್ಲರೂ ಯೋಚಿಸಬೇಕಿದೆ ಮಾತ್ರವಲ್ಲ ಪ್ರತಿ 6 ತಿಂಗಳಿಗೊಮ್ಮೆ ದೇಹ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎನ್ನುತ್ತಾರೆ ಅರೋಗ್ಯ ತಜ್ಞರು.

ಇದನ್ನೂ ಓದಿ: Body Weight: ಈ ತಪ್ಪುಗಳೇ ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು ಎಚ್ಚರ!

ತಪಾಸಣೆ ಯಾಕೆ?

ಹೃದಯದೊಳಗೆ ಏನೆಲ್ಲಾ ಸಮಸ್ಯೆ ಇದೆ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದೆಯೇ ಎಂಬುದನ್ನು ತಿಳಿಯಲು ಹೃದಯ ತಪಾಸಣೆ ನಡೆಸುವುದು ಅಗತ್ಯ. ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಯಾವುದೇ ಅಪಧಮನಿಗಳಲ್ಲಿ ಅಡಚಣೆ ಇದೆಯೇ ಎಂಬುದನ್ನು ಪರೀಕ್ಷಿಸಲು ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇಂತಹ ಪರಿಸ್ಥಿತಿಯಲ್ಲಿ, ನಮ್ಮ ಹೃದಯವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿಡಲು ಮತ್ತು ಎಲ್ಲಾ ರೀತಿಯ ಹೃದ್ರೋಗಗಳನ್ನು ತಡೆಗಟ್ಟಲು ನಮ್ಮ ದಿನಚರಿಯಲ್ಲಿ ಕೆಲವೊಂದು ವಿಷಯಗಳನ್ನು ಪಾಲಿಸುವುದು ಉತ್ತಮ.


ಹೃದಯದ ಆರೋಗ್ಯಕ್ಕಾಗಿ ಹತ್ತು ಟಿಪ್ಸ್

1. ಹೃದಯವನ್ನು ಆರೋಗ್ಯವಾಗಿಡಲು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ಮತ್ತು ಅಗಸೆ ಬೀಜಗಳನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

2. 30 ವರ್ಷಗಳ ಬಳಿಕ ಜನರು ತಮ್ಮ ಲಿಪಿಡ್ ಪ್ರೊಫೈಲ್ ಮತ್ತು ಹೆಚ್ ಎಸ್ -ಸಿಆರ್ ಪಿ ಅನ್ನು ಪ್ರತಿ ವರ್ಷ ಪರೀಕ್ಷಿಸಬೇಕು.

3. ದಾಳಿಂಬೆ, ವಾಲ್‌ನಟ್ಸ್, ಬಾದಾಮಿ, ಕಿತ್ತಳೆ, ಬೆರ್ರಿ ಹಣ್ಣುಗಳು, ಹಸಿರು ಎಲೆಗಳ ತರಕಾರಿಗಳಂತಹ ಆಹಾರ ಪದಾರ್ಥಗಳನ್ನು ಊಟದಲ್ಲಿ ನಿಯಮಿತವಾಗಿ ಸೇರಿಸಬೇಕು.

4. ಆಹಾರದಲ್ಲಿ ದಾಲ್ಚಿನ್ನಿ, ಕರಿಮೆಣಸು, ಅರಿಶಿನ, ಶುಂಠಿ, ಮೆಂತೆಕಾಳು, ಏಲಕ್ಕಿ, ಕೊತ್ತಂಬರಿ ಮೊದಲಾದ ಮಸಾಲೆಗಳನ್ನು ಸೇರಿಸಿ.

5. 40 ವರ್ಷ ವಯಸ್ಸಿನ ನಂತರ, ಅರ್ಜುನ ಗಿಡಮೂಲಿಕೆಯಿಂದ ತಯಾರಿಸಿದ ಗಿಡಮೂಲಿಕೆ ಚಹಾವನ್ನು ಸೇವಿಸಲು ಪ್ರಾರಂಭಿಸಿ. ಇದು ಹೃದಯವನ್ನು ಆರೋಗ್ಯವಾಗಿರಿಸುತ್ತದೆ.


6. ನಡೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ದಿನವಿಡೀ ಕುಳಿತುಕೊಳ್ಳುವ ಅಭ್ಯಾಸವನ್ನು ತಪ್ಪಿಸಿ. ದೇಹದಲ್ಲಿ ರಕ್ತ ಪರಿಚಲನೆಯಾಗುವುದು ಮುಖ್ಯ. ಕುಳಿತುಕೊಳ್ಳುವುದು ಧೂಮಪಾನದಷ್ಟೇ ಹೃದಯಕ್ಕೆ ಹಾನಿಕರ. ಪ್ರತಿದಿನ ಕನಿಷ್ಠ 45 ನಿಮಿಷಗಳ ಕಾಲ ವ್ಯಾಯಾಮ ಮಾಡಿ.

7. ಒತ್ತಡವು ರಕ್ತದೊತ್ತಡ, ಟ್ರೈಗ್ಲಿಸರೈಡ್‌ಗಳು ಮತ್ತು ಎಲ್‌ಡಿಎಲ್/ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದರಿಂದ ಹೃದಯಾಘಾತಕ್ಕೆ ಪ್ರಮುಖವಾಗಿ ಕಾರಣವಾಗುತ್ತದೆ. ಹೀಗಾಗಿ ಒತ್ತಡವನ್ನು ನಿಯಂತ್ರಿಸಿ.

8. ಯಾವಾಗಲೂ ಕರಿದ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಜಂಕ್ ಫುಡ್ ಅನ್ನು ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಮಿತಿಗೊಳಿಸಿ. ಧೂಮಪಾನ ನಿಲ್ಲಿಸಿ. ಇದರಿಂದ ಹೃದಯಕ್ಕೆ ಯಾವುದೇ ಹಾನಿಯಾಗುವುದಿಲ್ಲ.

9. ಮಧ್ಯಾಹ್ನ 2 ಗಂಟೆಯ ಅನಂತರ ಕೆಫೀನ್ ಅಂಶವುಳ್ಳ ಆಹಾರ, ಪಾನೀಯ ಸೇವಿಸುವುದನ್ನು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಲಗುವ ಸಮಯದಿಂದ 10 ಗಂಟೆಗಳ ಒಳಗೆ ಕೆಫೀನ್ ಸೇವನೆಯು ನಿದ್ರೆಯ ಸಮಸ್ಯೆಗಳನ್ನು ಉಂಟುಮಾಡಬಹುದು.

10. ನಿಮ್ಮ ತೂಕ ಮತ್ತು ಸಕ್ಕರೆ ಮಟ್ಟವನ್ನು ಸಾಮಾನ್ಯ ಮಿತಿಯಲ್ಲಿ ಇರಿಸಿ. ಸ್ಥೂಲಕಾಯತೆ ಮತ್ತು ಹೆಚ್ಚಿನ ಸಕ್ಕರೆ ಮಟ್ಟ ಹೊಂದಿರುವವರಿಗೆ ಹೃದಯಾಘಾತದ ಅಪಾಯವಿರುತ್ತದೆ.

Continue Reading
Advertisement
Shakti Scheme
ಕರ್ನಾಟಕ3 hours ago

Shakti Scheme: ಸಿಎಂ ಸಿದ್ದರಾಮಯ್ಯಗೆ ಫ್ರೀ ಟಿಕೆಟ್ ಹಾರ ಅರ್ಪಣೆ; ಕಾನೂನು‌ ವಿದ್ಯಾರ್ಥಿನಿಯಿಂದ ವಿಭಿನ್ನವಾಗಿ ಕೃತಜ್ಞತೆ

IPL 2024
ಕ್ರೀಡೆ4 hours ago

IPL 2024 : ಮುಂಬೈ ವಿರುದ್ಧ ರಾಜಸ್ಥಾನ್​ ತಂಡಕ್ಕೆ 9 ವಿಕೆಟ್​ ಅಮೋಘ​ ಗೆಲುವು

Gurulinga Shivacharya Swamiji
ಕರ್ನಾಟಕ4 hours ago

Gurulinga Shivacharya Swamiji: ಕಾರು ಅಪಘಾತದಲ್ಲಿ ಬಂಗರಗಾ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

Actor Darshan election campaign for Mandya Lok Sabha constituency Congress candidate star Chandru
ಮಂಡ್ಯ4 hours ago

Lok Sabha Election 2024: ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಮತ ನೀಡಿ, ಗೆಲ್ಲಿಸಿ: ನಟ ದರ್ಶನ್ ಮನವಿ

Tulsi Gowda
ಪ್ರಮುಖ ಸುದ್ದಿ4 hours ago

Tulsi Gowda: ಮನೆಯಲ್ಲಿ ಕಾಲು ಜಾರಿ ಬಿದ್ದು ಪದ್ಮಶ್ರೀ ತುಳಸಿ ಗೌಡ ಅಸ್ವಸ್ಥ

IPL 2024
ಪ್ರಮುಖ ಸುದ್ದಿ4 hours ago

ವಿಸ್ತಾರ ಸಂಪಾದಕೀಯ: ತಂತ್ರಜ್ಞಾನ ಕಾಲದಲ್ಲೂ ಐಪಿಎಲ್​ ಅಂಪೈರ್ ಗಳ ಸೋಮಾರಿತನ ಆಕ್ಷೇಪಾರ್ಹ

Terrorist Attack
ದೇಶ4 hours ago

Terrorist Attack: ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು; ಉಗ್ರನ ದಾಳಿಗೆ ಸರ್ಕಾರಿ ನೌಕರ ಬಲಿ

Reliance Industries net profit of Rs 18,951 crore, declares interim dividend of Rs 10 per share
ದೇಶ4 hours ago

Reliance Industries: ರಿಲಯನ್ಸ್ ಇಂಡಸ್ಟ್ರೀಸ್‌ಗೆ 18,951 ಕೋಟಿ ರೂ. ನಿವ್ವಳ ಲಾಭ; ಷೇರಿಗೆ 10 ರೂ. ಮಧ್ಯಂತರ ಲಾಭಾಂಶ

Hardik Pandya
ಪ್ರಮುಖ ಸುದ್ದಿ5 hours ago

Hardik Pandya : ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್​​ನಲ್ಲಿ ಮತ್ತೆ ವಿಫಲ; ಬೆಂಡೆತ್ತಿದ ಅಭಿಮಾನಿಗಳು

Rain News
ಕರ್ನಾಟಕ5 hours ago

Rain News: ಪ್ರತ್ಯೇಕ ಮಳೆ ಅವಘಡ; ಬೀದರ್‌ನಲ್ಲಿ ಸಿಡಿಲು ಬಡಿದು ಇಬ್ಬರು ಯುವಕರ ದುರ್ಮರಣ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru karaga 2024
ಬೆಂಗಳೂರು10 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ11 hours ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು14 hours ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು16 hours ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ23 hours ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ2 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20242 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ3 days ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

ಟ್ರೆಂಡಿಂಗ್‌