How To Look Younger: ನಲವತ್ತು ದಾಟಿದರೂ ʼಯಂಗ್‌ʼ ಆಗಿ ಇರಬೇಕಾ? ಈ ಟಿಪ್ಸ್‌ ಫಾಲೋ ಮಾಡಿ! Vistara News

ಆರೋಗ್ಯ

How To Look Younger: ನಲವತ್ತು ದಾಟಿದರೂ ʼಯಂಗ್‌ʼ ಆಗಿ ಇರಬೇಕಾ? ಈ ಟಿಪ್ಸ್‌ ಫಾಲೋ ಮಾಡಿ!

ಜೀವನದ ಜವಾಬ್ದಾರಿಗಳನ್ನು ನಿರ್ವಹಿಸುವ ಗಡಿಬಿಡಿಯಲ್ಲಿ, ಎಡೆಬಿಡದ ಕೆಲಸದ ನಡುವೆ ವಯಸ್ಸು ನಲವತ್ತು ಬಿಡಿ, ಐವತ್ತು ದಾಟುವುದೂ (how to look younger) ಕೂಡಾ ಗೊತ್ತಾಗದು. ಅಷ್ಟರಲ್ಲಿ ಸಮಯ ಮೀರಿರುತ್ತದೆ ಅಷ್ಟೆ. ಹಾಗಾಗಿ ಮೊದಲೇ ಎಚ್ಚೆತ್ತುಕೊಳ್ಳಿ.

VISTARANEWS.COM


on

Group of Men
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಲವತ್ತು ವರ್ಷ ಹತ್ತಿರ ಬರುತ್ತಿದ್ದಂತೆ, ಇಷ್ಟರವರೆಗೆ ಖುಲ್ಲಂಖುಲ್ಲಾ ಇದ್ದವರಿಗೆಲ್ಲ ವಯಸ್ಸಾಗುತ್ತಿರುವ ಸೂಚನೆ ಕಾಣಿಸತೊಡಗುತ್ತದೆ. ಚರ್ಮದಲ್ಲಿ ನಿರಿಗೆ, ಚರ್ಮದಲ್ಲಿ ಕಪ್ಪು ಚುಕ್ಕೆಗಳು, ಎಷ್ಟೇ ಪ್ರಯತ್ನ ಪಟ್ಟರೂ ತೂಕ ಇಳಿಸಲು ಸಾಧ್ಯವಾಗದಿರುವುದು, ಹಾರ್ಮೋನಿನ ಸಮಸ್ಯೆಗಳು ಇತ್ಯಾದಿ ಇತ್ಯಾದಿ. ಹೆಣ್ಣುಮಕ್ಕಳಿಗೆ ಕೆಲವು ಸಮಸ್ಯೆಗಳಾದರೆ, ಗಂಡು ಮಕ್ಕಳ ಸಮಸ್ಯೆ ಮತ್ತೊಂದು ಬಗೆಯದು. ಜೀವನದ ಜವಾಬ್ದಾರಿಗಳನ್ನು ನಿರ್ವಹಿಸುವ ಗಡಿಬಿಡಿಯಲ್ಲಿ, ಎಡೆಬಿಡದ ಕೆಲಸದ ನಡುವೆ ವಯಸ್ಸು ನಲವತ್ತು ಬಿಡಿ, ಐವತ್ತು ದಾಟುವುದೂ ಕೂಡಾ ಗೊತ್ತಾಗದು. ಅಷ್ಟರಲ್ಲಿ ಸಮಯ ಮೀರಿರುತ್ತದೆ ಅಷ್ಟೆ. ಯಾರೋ ಕಾಲೇಜು ಗೆಳೆಯನೋ ಗೆಳತಿಯೋ ಅಚಾನಕ್ಕಾಗಿ ಎಷ್ಟೋ ವರ್ಷಗಳ ನಂತರ ಸಿಕ್ಕಿ, ಅರೆ, ಈತ/ಈಕೆ ಈಗಲೂ ಅದ್ಹೇಗೆ ಕಾಲೇಜಿನಲ್ಲಿದ್ದ ಹಾಗೇ ಇದ್ದಾನಲ್ಲಾ/ಳಲ್ಲಾ, ನಾನ್ಯಾಕೆ ಸಂಸಾರ ಸಾಗರದದಲ್ಲಿ ಮುಳುಗಿ ಹೀಗಾಗಿಬಿಟ್ಟೆ ಎಂದೂ ಅನಿಸುವ ಸನ್ನಿವೇಶವೂ ಬರುವುದುಂಟು. ಅದಕ್ಕಾಗಿಯೇ, ಇಂಥ ಸನ್ನಿವೇಶ ಬರುವ ಮೊದಲೇ ಎಚ್ಚೆತ್ತುಕೊಂಡು ನಲುವತ್ತಾಗುವಾಗಲೇ ನಮ್ಮ ದೇಹ, ಆರೋಗ್ಯವನ್ನು ಕಾಳಜಿ ಮಾಡಿಕೊಂಡರೆ (how to look younger), ಖಂಡಿತವಾಗಿಯೂ ವಯಸ್ಸಾಗಿರುವುದು ಗೊತ್ತೇ ಆಗದು! ಲವಲವಿಕೆಯ ದೇಹ, ನಳನಳಿಸುವ ಚರ್ಮ, ನಲವತ್ತರ ನಂತರವೂ ನಿಮ್ಮದಾಗಬೇಕಿದ್ದರೆ ಇವಿಷ್ಟು ನೆನಪಿಡಿ ಸಾಕು.

Pretty Asian Women

ಏನು ತಿನ್ನುತ್ತಿದ್ದೀರಿ ಎಂಬ ಗಮನ ಇರಲಿ

ಚೆನ್ನಾಗಿ ಹಣ್ಣು ಹಂಪಲು, ತರಕಾರಿ, ಸೊಪ್ಪು ಎಲ್ಲವನ್ನೂ ನಿತ್ಯದ ಆಹಾರದಲ್ಲಿ ಬಳಸಿ. ಧಾನ್ಯಗಳು, ಬೇಳೆಕಾಳುಗಳೂ ಇರಲಿ. ಪ್ರೊಟೀನ್‌ ಸರಿಯಾಗಿ ಸೇವಿಸುತ್ತಿದ್ದೀರಾ ಗಮನಿಸಿ. ಆಂಟಿ ಆಕ್ಸಿಡೆಂಟ್‌ ಹೇರಳವಾಗಿರುವ ಆಹಾರ ಸೇವಿಸಿ.

Woman drinking water.

ಚೆನ್ನಾಗಿ ನೀರು ಕುಡಿಯಿರಿ

ಪ್ರತಿದಿನವೂ ಆಗಾಗ ನೀರು ಕುಡಿಯುತ್ತಿರಿ. ಒಂದು ಬಾಟಲಿಯಲ್ಲಿ ನೀರು ತುಂಬಿಸಿಕೊಂಡು ಪಕ್ಕದಲ್ಲೇ ಇಟ್ಟುಕೊಂಡು ಕುಡಿಯಿರಿ. ಆಗ ಚರ್ಮಕ್ಕೂ ಸರಿಯಾಗಿ ನೀರು ದೊರಕಿ, ಚರ್ಮದಲ್ಲಿ ಸುಕ್ಕು, ನಿರಿಗೆಗಳು ಬೇಗ ಉಂಟಾಗುವುದಿಲ್ಲ. ಚರ್ಮ ಕಳೆಕಳೆಯಾಗಿ ಇರುತ್ತದೆ.

ಚರ್ಮದ ರಕ್ಷಣೆಗ ಕಡೆ ಗಮನ ಕೊಡಿ

ನಿತ್ಯವೂ ಮುಖವನ್ನು ಚೆನ್ನಾಗಿ ತೊಳೆಯುವುದು, ಮಾಯ್‌ಶ್ಚರೈಸರ್‌ ಹಚ್ಚುವುದು ಹಾಗೂ ಹಗಲು ಹೊತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸಿಕೊಳ್ಳಲು ಸನ್‌ಸ್ಕ್ರೀನ್‌ ಲೋಶನ್‌ ಹಚ್ಚುವುದು ಇತ್ಯಾದಿಗಳನ್ನು ತಪ್ಪದೆ ಮಾಡಿ. ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದು ಬಹಳ ಮುಖ್ಯ. ಯಾಕೆಂದರೆ, ಮುಖದ ಮೇಲಿನ ಕಪ್ಪು ಕಲೆಗಳು, ನಿರಿಗೆಗಳು ಸೂರ್ಯನ ಹಾನಿಕಾರಕ ಕಿರಣಗಳಿಂದ ಹೆಚ್ಚಾಗುತ್ತದೆ. ಹಾಗಾಗಿ ಎಸ್‌ಪಿಎಫ್‌ ೩೦ಕ್ಕಿಂತ ಹೆಚ್ಚು ಸಾಮರ್ಥ್ಯದ ಕ್ರೀಂನ್ನು ಹೊರಗೆ ಹೋಗುವ ಸ್ವಲ್ಪ ಸಮಯಕ್ಕೂ ಮೊದಲು ಹಚ್ಚಿಕೊಳ್ಳಿ.

Woman Applying Facial Cream

ನಿಮ್ಮ ಚರ್ಮಕ್ಕೆ ಸೂಕ್ತವಾಗಿ ಹೊಂದಿಕೊಳ್ಳುವ ಕ್ರೀಂ, ಸೀರಂಗಳನ್ನು ಬಳಸಿ

ಮುಖದಲ್ಲಿರುವ ಸಮಸ್ಯೆಗಳಿಗೆ ಅನುಗುಣವಾಗಿ ರೆಟಿನಾಲ್‌, ಹ್ಯಲುರಾನಿಕ್‌ ಆಸಿಡ್‌ ಅಥವಾ ವಿಟಮಿನ್‌ ಸಿ ಸೀರಂ, ಪೆಪ್ಟೈಡ್‌ ಗಳಿರುವ ಕ್ರೀಂ, ಸೀರಂ ಬಳಸಿ.

ಚೆನ್ನಾಗಿ ವ್ಯಾಯಾಮ ಮಾಡಿ

ಎಷ್ಟೇ ಕೆಲಸಗಳಿರಲಿ, ನಿಮಗಾಗಿ ನೀವು ಸಮಯ ತೆಗೆದಿರಿಸುವುದನ್ನು ಮರೆಯಬೇಡಿ. ನಿಮ್ಮ ವ್ಯಾಯಾಮಕ್ಕೆ, ನಿಮ್ಮ ಆರೋಗ್ಯಕ್ಕೆ ದಿನಕ್ಕೆ ಒಂದು ಗಂಟೆಯಾದರೂ ತೆಗೆದಿರಿಸಲು ಅಭ್ಯಾಸ ಮಾಡಿ. ವ್ಯಾಯಾಮ, ಯೋಗ, ನಡಿಗೆ, ಓಡುವುದು, ಸೈಕ್ಲಿಂಗ್‌, ಈಜು ಹೀಗೆ ಏನೇ ಇರಲಿ, ನಿಮ್ಮಿಷ್ಟದ ವ್ಯಾಯಾಮಕ್ಕೆ ನಿತ್ಯವೂ ಸಮಯ ಕೊಡಿ.

Young Woman Sleeping In Bed.

ಚೆನ್ನಾಗಿ ನಿದ್ದೆ ಮಾಡಿ

ರಾತ್ರಿ ಬೇಗ ಮಲಗಿ ಬೇಗ ಏಳುವುದನ್ನು ಅಭ್ಯಾಸ ಮಾಡಿ. ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ನಿದ್ದೆ ಮಾಡಿ. ನಿದ್ದೆ ನಿಮ್ಮನ್ನು ರಿಲ್ಯಾಕ್ಸ್‌ ಅಷ್ಟೇ ಮಾಡಿಸುತ್ತದೆ ಅಂದುಕೊಂಡರೆ ಅದು ನಿಮ್ಮ ಮೂರ್ಖತನ. ನಿದ್ದೆ ಹೊಸ ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ, ನಮ್ಮನ್ನು ಹೆಚ್ಚು ಉಲ್ಲಾಸದಾಯಕವಾಗಿ, ಯಂಗ್‌ ಆಗಿ ಕಾಣಿಸುವಂತೆ ಮಾಡುತ್ತದೆ.

ಕೆಟ್ಟ ಅಭ್ಯಾಸಗಳನ್ನು ಆದಷ್ಟೂ ಕಡಿಮೆ ಮಾಡಿ

ಧೂಮಪಾನ, ಮದ್ಯಪಾನದಂತಹ ಚಟುವಟಿಕೆಗಳಿಂದ ದೂರವಿರಿ. ಡಿಜಿಟಲ್‌ ದಾಸರಾಗಿದ್ದರೆ, ಅದರಿಂದ ಹೊರಗೆ ಬರಲು ಪ್ರಯತ್ನಿಸಿ.

No Junk Food Concept

ಕುರುಕಲು, ಜಂಕ್‌ ತಿನ್ನುವುದರಿಂದ ದೂರವಿರಿ

ಆದಷ್ಟೂ ಆರೋಗ್ಯಕರ ಆಹಾರ ಸೇವಿಸಿ. ಆರೋಗ್ಯಕರ ಆಹಾರದಿಂದ ಚರ್ಮವೂ ಆರೋಗ್ಯವಾಗಿರುತ್ತದೆ, ನೀವು ನಿಮ್ಮ ವಯಸ್ಸಿಗಿಂತಲೂ ಯಂಗ್‌ ಆಗಿ ಕಾಣಿಸುವಿರಿ ಎಂಬುದರಲ್ಲಿ ಡೌಟೇ ಇಲ್ಲ!

ಇದನ್ನೂ ಓದಿ: Bone Health: 40ರ ನಂತರ ಮೂಳೆಗಳನ್ನು ಕಾಪಾಡಿಕೊಳ್ಳುವುದು ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Hormonal Imbalance: ಹಾರ್ಮೋನು ಏರುಪೇರಿನ ಸಮಸ್ಯೆಗೆ ಯಾವ ಆಹಾರಗಳು ಸೂಕ್ತ?

ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿದರೆ, ಸಮಸ್ಯೆಯ ನಿವಾರಣೆ ಸುಲಭ. ಬನ್ನಿ, ಹಾರ್ಮೋನಿನ ಏರುಪೇರಿನ (Hormonal Imbalance) ಸಮಸ್ಯೆಗೆ ಯಾವೆಲ್ಲ ಆಹಾರವನ್ನು ಸೇವಿಸುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯುವತ್ತ ಹೆಜ್ಜೆಯಿಡಬಹುದು ಎಂಬುದನ್ನು ನೋಡೋಣ.

VISTARANEWS.COM


on

Hormonal Imbalance
Koo

ಹಾರ್ಮೋನಿನ ಏರುಪೇರು (Hormonal Imbalance) ಎಂಬುದು ನೋಡಲು ಸಾಮಾನ್ಯ ಸಮಸ್ಯೆಯಾಗಿ ಕಂಡರೂ ಆರೋಗ್ಯವನ್ನು ಬಹಳವಾಗಿ ಬಾಧಿಸುವಂಥದ್ದು. ತೂಕದಲ್ಲಿ ಏರಿಕೆ, ಭುಜದ ಬಳಿ ಕೊಬ್ಬು ಶೇಖರವಾಗುವುದು, ಇದ್ದಕ್ಕಿದ್ದ ಹಾಗೆ ತೂಕ ಇಳಿಯುವುದು, ತಲೆ ಸುತ್ತುವಿಕೆ, ಮಾಂಸಖಂಡಗಳಲ್ಲಿ ನಿತ್ರಾಣ, ಸೆಳೆತ, ನೋವು ಇತ್ಯಾದಿ, ಗಂಟುಗಳಲ್ಲಿ ನೋವು, ಉರಿಯೂತ ಇತ್ಯಾದಿ ಇತ್ಯಾದಿ ಸಮಸ್ಯೆಗಳು ಬಾಧಿಸುತ್ತವೆ. ಈ ಎಲ್ಲ ಸಮಸ್ಯೆಗಳೂ, ಮಾರಣಾಂತಿಕವಲ್ಲದಿದ್ದರೂ, ಇವು ಸಾಕಷ್ಟು ತೊಂದರೆಯನ್ನು ತಂದೊಡ್ಡುವಂಥವು. ಈ ಎಲ್ಲ ಸಮಸ್ಯೆಗಳಿಗೂ ಹಾರ್ಮೋನಿನ ಏರುಪೇರಿಗೂ ಮೇಲ್ನೋಟಕ್ಕೆ ಸಂಬಂಧ ಕಾಣಿಸದಿದ್ದರೂ ಮೂಲ ಕಾರಣ ಹಾರ್ಮೋನಿನ ಅಸಮತೋಲನವೇ ಕಾರಣವಾಗಿರಬಹುದು. ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿದರೆ, ಸಮಸ್ಯೆಯ ನಿವಾರಣೆ ಸುಲಭ. ಬನ್ನಿ, ಹಾರ್ಮೋನಿನ ಏರುಪೇರಿನ ಸಮಸ್ಯೆಗೆ ಯಾವೆಲ್ಲ ಆಹಾರವನ್ನು ಸೇವಿಸುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯುವತ್ತ ಹೆಜ್ಜೆಯಿಡಬಹುದು ಎಂಬುದನ್ನು ನೋಡೋಣ.

Mackerel fish on ice

ಕೆಲವು ಬಗೆಯ ಮೀನುಗಳು

ಸಾಲ್ಮನ್‌, ಮೆಕೆರಲ್‌, ಸಾರ್ಡಿನ್‌ ಮೊದಲಾದ ಮೀನುಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ಗಳು ಹೇರಳವಾಗಿದ್ದು, ಇವುಗಳು ಒಳ್ಳೆಯ ಕೊಬ್ಬನ್ನು ಹೊಂದಿವೆ. ಇದರಿಂದ ಹಾರ್ಮೋನ್‌ ಉತ್ಪಾದನೆ ಹಾಗೂ ಸಮತೋಲನಕ್ಕೆ ಸಹಾಯವಾಗುತ್ತದೆ. ಒಮೆಗಾ ೩ ಫ್ಯಾಟಿ ಆಸಿಡ್‌ ಹೇರಳವಾಗಿರುವ ಆಹಾರಗಳು ದೇಹದಲ್ಲಿ ಹಾರ್ಮೋನಿನ ಸಮತೋಲನೆ ಮಾಡುವ ಜೊತೆಗೆ ಉರಿಯೂತವನ್ನು ತಡೆಯುತ್ತದೆ.

Malabar spinach and spinach

ಬಸಳೆ, ಪಾಲಕ್ ಇತ್ಯಾದಿ

ವಿಟಮಿನ್‌ಗಳು, ಖನಿಜಾಂಶಗಳು ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿರುವ ಬಸಳೆ, ಪಾಲಕ್‌ ಮತ್ತಿತರ ಸೊಪ್ಪು ತರಕಾರಿಗಳು ಹಾರ್ಮೋನು ಸಮತೋಲನಕ್ಕೆ ಸಹಕಾರಿ. ಅಷ್ಟೇ ಅಲ್ಲ, ಇವು ದೇಹದ ಕಶ್ಮಲಗಳನ್ನು ಹೊರ ಹಾಕುವಲ್ಲಿ ಸಹಾಯ ಮಾಡಿ ಡಿಟಾಕ್ಸ್‌ ಮಾಡುತ್ತವೆ.

Avocado slices

ಬೆಣ್ಣೆಹಣ್ಣು

ಅವಕಾಡೋ ಅಥವಾ ಬೆಣ್ಣೆಹಣ್ಣಿನಲ್ಲಿ ಆರೋಗ್ಯಕರ ಕೊಬ್ಬು ಎಂದೇ ಹೆಸರಾದ ಮೋನೋ ಸ್ಯಾಚುರೇಟೆಡ್‌ ಕೊಬ್ಬು ಹೇರಳವಾಗಿದ್ದು, ಇದು ಹಾರ್ಮೋನಿನ ಸಮತೋಲನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ವಿಟಮಿನ್‌ ಬಿ, ಇ ಹಾಗೂ ಪೊಟಾಶಿಯಂ ಕೂಡಾ ಇದರಲ್ಲಿ ಶ್ರೀಮಂತವಾಗಿವೆ.

Seeds Assortment

ಕೆಲವು ಬಗೆಯ ಬೀಜಗಳು

ಅಗಸೆ ಬೀಜ (ಫ್ಲ್ಯಾಕ್‌ ಸೀಡ್‌), ಚಿಯಾ ಬೀಜಗಳು ಹಾಗೂ ಕುಂಬಳಕಾಯಿ ಬೀಜಗಳಲ್ಲಿ ನಾರಿನಂಶ ಹಾಗೂ ಫ್ಯಾಟಿ ಆಸಿಡ್‌ಗಳು ಹೇರಳವಾಗಿವೆ. ಸ್ತ್ರೀಯರ ಹಾರ್ಮೋನು ಇಸ್ಟ್ರೋಜನ್‌ನ ಮಟ್ಟವನ್ನು ಸಮತೋಲಗೊಳಿಸುವಲ್ಲಿ ಇವು ಸಹಾಯ ಮಾಡುತ್ತವೆ. ಉರಿಯೂತವನ್ನೂ ಕಡಿಮೆ ಮಾಡುತ್ತವೆ.

ಮೊಸರು, ಮಜ್ಜಿಗೆ

ಮೊಸರು, ಮಜ್ಜಿಗೆ ಹಾಗೂ ಇತರ ಪ್ರೊಬಯಾಟಿಕ್‌ ಆಹಾರಗಳು ಕೂಡಾ ರೋಗ ನಿರೋಧಕತೆಯನ್ನು ಹೆಚ್ಚಿಸುವುದರ ಜೊತೆಗೆ ಹಾರ್ಮೋನಿನ ಸಮತೋಲನೆಯಲ್ಲೂ ಮುಖ್ಯ ಪಾತ್ರ ವಹಿಸುತ್ತದೆ.

ಮೊಳಕೆ ಕಾಳುಗಳು

ಮಹಿಳೆಯರ ಹಾರ್ಮೋನು ಇಸ್ಟ್ರೋಜನ್‌ನ ಏರುಪೇರಾಗದಂತೆ ತಡೆಗಟ್ಟಲು, ಸಮತೋಲನ ಕಾಪಾಡಲು ಬ್ರೊಕೋಲಿ, ಕ್ಯಾಬೇಜ್‌, ಹೂಕೋಸು ಹಾಗೂ ಮೊಳಕೆ ಕಾಳುಗಳು ಬಹಳಷ್ಟು ಸಹಾಯ ಮಾಡುತ್ತವೆ. ಹಾಗಾಗಿ ಮಹಿಳೆಯರಿಗೆ ಈ ತರಕಾರಿಗಳು ಅತ್ಯಂತ ಒಳ್ಳೆಯದು. ಅದರಲ್ಲೂ ನಲುವತ್ತು ದಾಟಿದ ಮಹಿಳೆಯರು ಹಾರ್ಮೋನಿನ ಏರುಪೇರು ಮತ್ತಿತರ ಸಮಸ್ಯೆಗಳಿಂದ ಪಾರಾಗಲು ಹಾಗೂ ಆದಷ್ಟೂ ತಮ್ಮ ಆರೋಗ್ಯವನ್ನು ಕಾಪಾಡಲು ಇಂತಹ ತರಕಾರಿಗಳ ಸೇವನೆ ಮಾಡಬೇಕು.

ಈ ಹಣ್ಣುಗಳು ಸೂಕ್ತ

ಆಂಟಿ ಆಕ್ಸಿಡೆಂಟ್‌ ಹಾಗೂ ವಿಟಮಿನ್‌ಗಳಿಂದ ಸಂಪದ್ಭರಿತವಾದ ಬೆರ್ರಿ ಜಾತಿಗೆ ಸೇರಿದ ಹಣ್ಣುಗಳಾದ ಸ್ಟ್ರಾಬೆರಿ, ರಸ್‌ಬೆರ್ರಿ, ಬ್ಲೂಬೆರ್ರಿ, ಬ್ಲ್ಯಾಕ್‌ಬೆರ್ರಿ ಮೊದಲಾದುವುಗಳು ಒಟ್ಟು ಆರೋಗ್ಯದ ದೃಷ್ಟಿಯಿಂದ ದೇಹಕ್ಕೆ ಒಳ್ಳೆಯದು. ಅಷ್ಟೇ ಅಲ್ಲ, ಇವುಗಳು ಹಾರ್ಮೋನುಗಳ ಸಮತೋಲನದಲ್ಲಿ ತಮ್ಮ ನ್ಯಾಯವನ್ನೂ ಒದಗಿಸುತ್ತವೆ.

ಇದನ್ನೂ ಓದಿ: Health Tips: ಅತಿಯಾಗಿ ಕೈತೊಳೆಯುತ್ತೀರಾ? ಹಾಗಾದರೆ ಎಚ್ಚರ, ಎಕ್ಸಿಮಾ ಕೂಡಾ ಬರಬಹುದು!

Continue Reading

ಆರೋಗ್ಯ

Heart Attack: ಬಸ್ಸು ಓಡಿಸುತ್ತಿದ್ದಾಗಲೇ ಹಾರ್ಟ್‌ ಅಟ್ಯಾಕ್‌; ಕೆಎಸ್‌ಆರ್‌ಟಿಸಿ ಚಾಲಕ ಸಾವು

Heart Attack : ಬಸ್ಸು ಓಡಿಸುತ್ತಿದ್ದಾಗಲೇ ಹೃದಯಾಘಾತವಾಗಿ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರು (KSRTC Driver) ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

VISTARANEWS.COM


on

By

ksrtc Driver die in heart attack
Koo

ಚಿಕ್ಕಮಗಳೂರು: ಹೃದಯಾಘಾತದಿಂದ (Heart Attack) ಕರ್ತವ್ಯನಿರತ ಕೆಎಸ್ಆರ್‌ಟಿಸಿ ಬಸ್ ಚಾಲಕ (Ksrtc Bus Driver) ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹೆಸಗೊಡ್ ಗ್ರಾಮದ ಬಳಿ ಘಟನೆ ನಡೆದಿದೆ. ಚಾಲಕ ರವಿ ಲಮಾಣಿ (46) ಮೃತ ದುರ್ದೈವಿ.

ಹೃದಯವು ಯಾವ ಕ್ಷಣದಲ್ಲಿ ಆಘಾತಕ್ಕೆ (Heart Attack) ಒಳಗಾಗುತ್ತದೆ ಎಂದು ಅಂದಾಜಿಸಲೂ ಸಾಧ್ಯವಿಲ್ಲ. ನಿಂತ ನಿಲುವಿನಲ್ಲೇ ಬದುಕನ್ನು ಸ್ತಬ್ಧಗೊಳಿಸುವ ನಿರ್ನಾಮ ಶಕ್ತಿಯನ್ನು ಅದು ಹೊಂದಿದೆ. ಕುಳಿತಲ್ಲೇ ಕುಸಿಯುವುದು, ನಿಂತಲ್ಲೇ ಉರುಳಿ ಬೀಳುವುದು, ಮಲಗಿದಲ್ಲೇ ಮರಣಿಸುವುದು, ನೃತ್ಯ ಮಾಡುತ್ತಲೇ ಹೃದಯ ಸ್ತಬ್ಧವಾಗುವುದು. ಹೀಗೆ ಸಾವಿನ ಹತ್ತಾರು ಭಯಾನಕ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಇದೀಗ ಕರ್ತವ್ಯದಲ್ಲಿರುವಾಗಲೇ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಮೂಡಿಗೆರೆ, ಗುತ್ತಿಹಳ್ಳಿ, ಹೆಸ್ಗೋಡ್ ಗ್ರಾಮಕ್ಕೆ ಹೋಗುವ ದಾರಿ ಮಧ್ಯೆ ಈ ಘಟನೆ ನಡೆದಿದೆ. ಬಸ್ ಚಾಲನೆ ಮಾಡುವಾಗ ಚಾಲಕ ರವಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ಒಂದು ಕೈಯಲ್ಲಿ ಸ್ಟೇರಿಂಗ್‌ ಹಿಡಿದು ಮತ್ತೊಂದು ಕೈಯಲ್ಲಿ ಎದೆಗೆ ಸವರಿಕೊಂಡು ಕೂಗಳತೆ ದೂರದವರೆಗೆ ಬಸ್‌ ಚಲಾಯಿಸಿದ್ದಾರೆ. ಆದರೆ ನೋವು ಸಹಿಸಲು ಆಗದೇ ಕೂಡಲೇ ರಸ್ತೆ ಮಧ್ಯೆಯೇ ಬ್ರೇಕ್‌ ಹಾಕಿ ಬಸ್ ನಿಲ್ಲಿಸಿದ್ದಾರೆ.

ನೋವಿನಿಂದ ನರಳಾಡುತ್ತಿದ್ದ ರವಿಯನ್ನು ಕೂಡಲೇ ಬಸ್‌ ನಿರ್ವಾಹಕ ಪ್ರಯಾಣಿಕರ ಸಹಾಯದೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ದಾರಿ ಮಧ್ಯೆಯೇ ರವಿ ಮೃತಪಟ್ಟಿದ್ದಾರೆ. ಚಾಲಕ ರವಿ ಕೊಪ್ಪಳದ ಕೂಕ್ನೂರ್ ಗ್ರಾಮದವರಾಗಿದ್ದು, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Cholesterol: ಕೊಲೆಸ್ಟೆರಾಲ್‌ ನಿಜಕ್ಕೂ ಕೆಟ್ಟದ್ದೇ? ಇದಕ್ಕೂ ಹೃದಯಾಘಾತಕ್ಕೂ ನೇರಾನೇರ ಸಂಬಂಧ ಇದೆಯೇ?

ಹೃದಯಾಘಾತಕ್ಕೆ 6 ತಿಂಗಳಲ್ಲಿ 1,052 ಜನ ಬಲಿ; 80% ಮಂದಿ 11-25 ವರ್ಷದವರೇ!

ಗಾಂಧಿನಗರ: ದೇಶದಲ್ಲಿ ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಹೃದಯಾಘಾತ ಪ್ರಕರಣಗಳ (Heart Attack) ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿದೆ. ಅದರಲ್ಲೂ, ಯುವಕರೇ ಹೆಚ್ಚು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದವರು, ಐಸಿಯುನಲ್ಲಿ ಚಿಕಿತ್ಸೆ ಪಡೆದವರಿಗೇ ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತ ಆಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇನ್ನು, ಹೃದಯಾಘಾತ ಹೆಚ್ಚಾಗಲು ಕೊರೊನಾ ನಿರೋಧಕ ಲಸಿಕೆಯೇ ಕಾರಣ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ, ಕಳೆದ ಆರು ತಿಂಗಳಲ್ಲಿ ಗುಜರಾತ್‌ನಲ್ಲಿ ಹೃದಯಾಘಾತದಿಂದ 1,052 ಜನ ಮೃತಪಟ್ಟಿದ್ದಾರೆ ಎಂದು ಸರ್ಕಾರವೇ ತಿಳಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ಆತಂಕ ಮನೆಮಾಡಿದೆ.

“ಕಳೆದ ಆರು ತಿಂಗಳಲ್ಲಿ ಹೃದಯಾಘಾತದಿಂದ 1,052 ಜನ ಮೃತಪಟ್ಟಿದ್ದಾರೆ. ಇವರಲ್ಲಿ ಶೇ.80ರಷ್ಟು ಮಂದಿ 11-25 ವರ್ಷದವರೇ ಆಗಿದ್ದಾರೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಹಾಗಾಗಿ, ಎರಡು ಲಕ್ಷ ಶಾಲಾ ಶಿಕ್ಷಕರು ಹಾಗೂ ಕಾಲೇಜುಗಳ ಪ್ರೊಫೆಸರ್‌ಗಳಿಗೆ ಹೃದಯಾಘಾತ ಉಂಟಾದಾಗ ತಕ್ಷಣೆ ಮಾಡುವ ಕಾರ್ಡಿಯೋಪಲ್ಮನರಿ ರಿಸಸಿಟೇಷನ್‌ (CPR) ಪ್ರಕ್ರಿಯೆಯ ಕುರಿತು ತರಬೇತಿ ನೀಡಲಾಗಿದೆ” ಎಂದು ರಾಜ್ಯ ಶಿಕ್ಷಣ ಸಚಿವ ಕುಬೇರ್‌ ದಿಂಡೋರ್‌ ಮಾಹಿತಿ ನೀಡಿದ್ದಾರೆ.

Heart Attack

“ಯುವಕರು, ಅದರಲ್ಲೂ ಶಾಲೆ, ಕಾಲೇಜುಗಳ ಯುವಕರಿಗೆ ಹೃದಯಾಘಾತ ಉಂಟಾಗಿದೆ. ಕ್ರಿಕೆಟ್‌ ಆಡುವಾಗ, ಗರ್ಬಾ ಸಾಂಪ್ರದಾಯಿಕ ನೃತ್ಯ ಮಾಡುವಾಗ ಹೆಚ್ಚಿನ ಜನರಿಗೆ ಹೃದಯಾಘಾತ ಉಂಟಾಗಿದೆ. ಆರು ತಿಂಗಳಲ್ಲಿ ನಿತ್ಯ ಸರಾಸರಿ 173 ಜನ ಹೃದಯಾಘಾತ ಉಂಟಾಗಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಜನರಿಗೆ ಅನುಕೂಲವಾಗುವ, ಹೃದಯಾಘಾತ ಪ್ರಕರಣಗಳನ್ನು ತಡೆಯಲು ಹತ್ತಾರು ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಕಠಿಣ ಕೆಲಸ ಮಾಡದಂತೆ ಕೇಂದ್ರ ಸೂಚನೆ

“ಕೊರೊನಾ ಸೋಂಕು ತಗುಲಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುವುದು ಸೇರಿ ಆರೋಗ್ಯ ಸ್ಥಿತಿ ಗಂಭೀರವಾಗಿ, ಬದುಕಿ ಬಂದವರು ಯಾವುದೇ ಕಾರಣಕ್ಕೂ ಹೆಚ್ಚು ಕೆಲಸ ಮಾಡಬಾರದು. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಅಧ್ಯಯನ ವರದಿ ಪ್ರಕಾರ, ಹೃದಯಾಘಾತದ ಭೀತಿ ಇರುವ ಕಾರಣ ಒಂದಷ್ಟು ಸಮಯದವರೆಗೆ ಕೊರೊನಾ ಸೋಂಕಿತರು ಹೆಚ್ಚು ಸಮಯದವರೆಗೆ ಅಥವಾ ಹೆಚ್ಚು ಭಾರ ಹೊರುವ ಕೆಲಸ ಮಾಡಬಾರದು. ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇಂತಹ ವ್ಯಕ್ತಿಗಳು ಅತಿಯಾದ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್‌ ಕೂಡ ಮಾಡಬಾರದು” ಎಂದು ಅಧ್ಯಯನ ವರದಿ ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯ ತಿಳಿಸಿದ್ದಾರೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಆರೋಗ್ಯ

Health Tips: ಅತಿಯಾಗಿ ಕೈತೊಳೆಯುತ್ತೀರಾ? ಹಾಗಾದರೆ ಎಚ್ಚರ, ಎಕ್ಸಿಮಾ ಕೂಡಾ ಬರಬಹುದು!

ಅಧ್ಯಯನವೊಂದರ ಪ್ರಕಾರ, ಅತಿಯಾಗಿ ಯಾರು ತಮ್ಮ ಕೈಗಳನ್ನು ತೊಳೆಯುತ್ತಲೇ ಇರುತ್ತಾರೋ (Hand hygiene, health tips) ಅಂಥವರ ಕೈಗಳು ಅತಿಯಾಗಿ ಒಣಗುತ್ತವೆ. ಎಕ್ಸಿಮಾದಂತಹ ಚರ್ಮದ ತೊಂದರೆಗಳೂ (Skin disease) ಬರುವ ಸಂಭವ ಇವೆ.

VISTARANEWS.COM


on

wash hand
Koo

ಕೋವಿಡ್‌ 19 ಪ್ರಪಂಚದಾದ್ಯಂತ ಹರಡಿದ ಮೇಲೆ ಜಗತ್ತಿನಲ್ಲಿ ಶುಚಿತ್ವದ ಬಗ್ಗೆ ಹೆಚ್ಚು ಅರಿವು ಮೂಡಿದೆ. ಜನ ಸಾಮಾನ್ಯರು ಕೈಗಳನ್ನು ತಿಕ್ಕಿ ತಿಕ್ಕಿ ತೊಳೆಯುವ (washing hands) ಅಭ್ಯಾಸ, ಸೋಪು, ಹ್ಯಾಂಡ್‌ವಾಷ್‌ಗಳ ಬಳಕೆ, ಮುಖ್ಯವಾಗಿ ಸ್ಯಾನಿಟೈಸರ್‌ಗಳನ್ನು (sanitizers) ಬಳಸುವ ಪ್ರಮಾಣ ಬಹಳವೇ ಹೆಚ್ಚಾಗಿತ್ತು. ಈಗಲೂ ಹಲವೆಡೆ ಅದು ಮುಂದುವರಿದಿದ್ದರೂ, ತಕ್ಕಮಟ್ಟಿಗೆ ಸ್ಯಾನಿಟೈಸರ್‌ಗಳ ಬಳಕೆ ಮತ್ತೆ ಕಡಿಮೆಯಾಗಿದ್ದು, ಜನರು ಯಥಾ ಸ್ಥಿತಿಗೆ ಮರಳಿದ್ದಾರೆ. ಯಾವುದೂ ಅತಿಯಾಗಬಾರದು ಎಂಬ ಮಾತಿದೆ. ಅತಿಯಾದ ಶುಚಿತ್ವವೂ (hand hygiene practice) ಕೂಡಾ ಕೆಲವೊಮ್ಮೆ ಸಮಸ್ಯೆಯನ್ನೇ ತಂದೊಡ್ಡುತ್ತದೆ. ಕೈಗಳನ್ನು ಅತಿಯಾಗಿ ತೊಳೆಯುವುದರಿಂದಲೂ ಕೂಡಾ ಚರ್ಮದ ಸಮಸ್ಯೆಗಳು (Skin diseases) ಬರುವ ಅಪಾಯವಿದೆ ಎಂಬ ಸಂಗತಿಯೂ ಅಧ್ಯಯನಗಳಿಂದ ತಿಳಿದುಬಂದಿವೆ.

ಅಧ್ಯಯನವೊಂದರ ಪ್ರಕಾರ, ಅತಿಯಾಗಿ ಯಾರು ತಮ್ಮ ಕೈಗಳನ್ನು ತೊಳೆಯುತ್ತಲೇ ಇರುತ್ತಾರೋ ಅಂಥವರ ಕೈಗಳು ಅತಿಯಾಗಿ ಒಣಗುತ್ತವೆ. ಚರ್ಮಕ್ಕೆ ಅಗತ್ಯವಾಗಿ ಬೇಕಾದ ತೇವಾಂಶ, ಎಣ್ಣೆಯಂಶವೂ ಕೈಯಿಂದ ತೊಳೆದು ಹೋಗಲ್ಪಟ್ಟು ಚರ್ಮ ಒಡೆಯುತ್ತದೆ. ಬಿರುಕು ಬಿರುಕಾಗುತ್ತದೆ. ಒಣ ಚರ್ಮ ಪಕಳೆಗಳಂತೆ ಎದ್ದು ಬರುವಂತಹ ಸಮಸ್ಯೆಗಳೂ ಬರಬಹುದು ಎನ್ನಲಾಗಿದೆ. ತುರಿಕೆ, ಕಜ್ಜಿ, ಚರ್ಮದಲ್ಲಿ ಅಲ್ಲಲ್ಲಿ ಬಣ್ಣ ಬದಲಾಗುವುದು, ಹಾಗೂ ಎಕ್ಸಿಮಾದಂತಹ ಚರ್ಮದ ತೊಂದರೆಗಳೂ ಬರುವ ಸಂಭವ ಇವೆ ಎಂದು ಚರ್ಮವೈದ್ಯರು ತಮ್ಮ ಅಧ್ಯಯನದಲ್ಲಿ ಹೇಳಿದ್ದಾರೆ.

Maintain personal hygiene Wash your hands and feet with soap as soon as you come from outside Gastric Problem

ಎಕ್ಸಿಮಾ (Eczema) ಎಂಬ ಚರ್ಮದ ಸಮಸ್ಯೆ ಬಹಳಷ್ಟು ಮಂದಿಯನ್ನು ಈಗಾಗಲೇ ಕಾಡುತ್ತಿರುವ ಬಹಳ ಸಾರಿ ಮಾರಣಾಂತಿಕವೂ ಆಗಬಲ್ಲ ಸಮಸ್ಯೆ. ಚರ್ಮದಲ್ಲಿ ಕೆಂಪಗಾಗಿ, ಕಜ್ಜಿ ತುರಿಕೆಗಳಾಗಿ ಅಲ್ಲಲ್ಲಿ ದದ್ದುಗಳಾದಂತೆ ಚರ್ಮ ಪಕಳೆ ಪಕಳೆಯಾಗಿ ಎದ್ದು ಹೋಗುವ ಈ ಕಾಯಿಲೆ, ಒಮ್ಮೆ ಬಂದರೆ ಜೀವನಪೂರ್ತಿ ಕಾಡುತ್ತದೆ. ತುರಿಕೆ, ಅಲರ್ಜಿ ಇದರಲ್ಲಿ ಹೆಚ್ಚು. ಹಲವು ಆಹಾರ ಪದಾರ್ಥಗಳೂ ಕೂಡಾ ಇದಕ್ಕೆ ಆಗಿ ಬರುವುದಿಲ್ಲ. ಶಿಸ್ತಾಗಿ ಚರ್ಮದ ರಕ್ಷಣೆಯನ್ನು ಮಾಡಬೇಕಾಗುವುದರಿಂದ ಈ ಸಮಸ್ಯೆಯನ್ನು ಹೊಂದಿರುವ ಮಂದಿ ಅನುಭವಿಸುವ ಕಷ್ಟ ಒಂದೆರಡಲ್ಲ.

ಕೈ ತೊಳೆಯುವುದು ಹೇಗೆ?: ಹಾಗಾದರೆ, ಕೈ ತೊಳೆಯುವುದೂ ಕೂಡಾ ತಪ್ಪೇ ಎಂಬ ಸಂದೇಹ ನಿಮಗೆ ಬರಬಹುದು. ನಿಜ ಕೂಡಾ. ನಿತ್ಯವೂ ಏನಾದರೊಂದು ಕೆಲಸ ಮಾಡಿದ ಮೇಲೆ, ಅಥವಾ, ಎಲ್ಲೋ ಹೊರಗೆ ಹೋಗಿ ಬಂದು, ಅಥವಾ ಪ್ರತಿಯೊಂದು ಕೆಲಸದ ನಂತರ ದಿನಕ್ಕೆ ಹತ್ತಾರು ಬಾರಿ ಕೈ ತೊಳೆಯುವ ಅಭ್ಯಾಸ ನಮ್ಮಲ್ಲನೇಕರಿಗೆ ಇದೆ. ಆದರೆ, ಕೈ ತೊಳೆಯುವುದರಲ್ಲೂ ಸಾಕಷ್ಟು ಬಗೆಗಳಿವೆ. ನೀರಿಗೆ ಕೈಯೊಡ್ಡಿ ತೊಳೆದುಕೊಳ್ಳುವುದು, ಬೆಚ್ಚಗಿನ ನೀರಿನಲ್ಲಿ ಕೈತೊಳೆಯುವುದು, ಸೋಪು ಹಾಕಿ ತಿಕ್ಕಿ ತಿಕ್ಕಿ ಕೈತೊಳೆಯುವುದು, ಅಥವಾ ಸ್ಯಾನಿಟೈಸರ್‌ ಮಾಡಿಕೊಳ್ಳುವುದು ಹೀಗೆ ತೊಳೆಯುವುದರಲ್ಲೂ ಹಲವು ವಿಧ. ಆದರೆ, ಪ್ರತಿ ಬಾರಿಯೂ ಒಂದೇ ಬಗೆಯಲ್ಲಿ ತೊಳೆಯಬೇಕಿಲ್ಲ. ಜೊತೆಗೆ ಆದಷ್ಟೂ ಬಹಳ ಮೆದುವಾದ ಸೋಪು ಅಥವಾ ಹ್ಯಾಂಡ್‌ವಾಷ್‌ ಬಳಸಿ. ಬಿಸಿಬಿಸಿಯಾದ ನೀರನಲ್ಲಿ ಕೈ ತೊಳೆಯಬೇಡಿ. ಉಗುರು ಬೆಚ್ಚಗಿನ ಅಥವಾ ತಣ್ಣಿರಿನಲ್ಲಿ ಕೈತೊಳೆಯಿರಿ. ಪ್ರತಿ ಬಾರಿಯೂ, ಅಗತ್ಯವಿಲ್ಲದಿದ್ದರೆ, ಸೋಪು ಬಳಸಬೇಡಿ. ಕೈಗಳನ್ನು ಒಂದಕ್ಕೊಂದು ರಪರಪನೆ ಗಡುಸಾಗಿ ಉಜ್ಜಿಕೊಂಡು ಕೈತೊಳೆಯಬೇಡಿ. ಬೆರಳುಗಳನ್ನು ಬಳಸಿಕೊಂಡು ಸಂದಿಗಳ ಮೂಲಕ ಮೆದುವಾಗಿ ಉಜ್ಜಿಕೊಂಡು ಕೈತೊಳೆದರೆ ಸಾಕು. ನೀರಿನಿಂದ ಚೆನ್ನಾಗಿ ಸೋಪಿನ ಅಂಶಗಳು ಉಳಿಯದಂತೆ ತೊಳೆದುಕೊಂಡು ಮೆತ್ತಗಿನ ಬಟ್ಟೆಯಲ್ಲಿ ಕೈಗಳನ್ನು ಹಗುರವಾಗಿ ಉಜ್ಜಿಕೊಳ್ಳಿ.

ಎಕ್ಸಿಮಾದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಎಕ್ಸಿಮಾ ಸುಲಭವಾಗಿ ಹೋಗದಾದರೂ, ಅದು ಹೆಚ್ಚಾಗದಂತೆ, ಯಾವ ತೊಂದರೆಯನ್ನೂ ಮಾಡದಂತೆ ಅದನ್ನು ಸಮತೋಲನದಲ್ಲಿ ಇಡಲು ಸಾಧ್ಯವಿದೆ. ಸರಿಯಾಗಿ ವೈದ್ಯರು ಕೊಡುವ ಮುಲಾಮುಗಳನ್ನು ಹಚ್ಚುತ್ತಾ, ಎಣ್ಣೆತಿಂಡಿಗಳಿಂದ ದೂರವಿದ್ದುಕೊಂಡು ಸಮತೋಲನದ ಆಹಾರಗಳನ್ನು ತಿನ್ನುತ್ತಾ ಇದರ ಲಕ್ಷಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಕೇವಲ ಎಕ್ಸಿಮಾ ಮಾತ್ರವಲ್ಲ, ಯಾವುದೇ ಚರ್ಮದ ಸಮಸ್ಯೆಗಳು ಕಾಣಿಸಿಕೊಂಡರೂ ವೈದ್ಯರ ಸಲಹೆ ಪಡೆಯಲು ಮರೆಯಬೇಡಿ.

ಇದನ್ನೂ ಓದಿ: Skin Care Tips: ಹೊಳಪಿನ ಚರ್ಮಕ್ಕೆ ಈ ಐದು ಬೀಜಗಳನ್ನು ಸೇವಿಸಿ!

Continue Reading

ಆರೋಗ್ಯ

Heart Attack: ಹೃದಯಾಘಾತಕ್ಕೆ 6 ತಿಂಗಳಲ್ಲಿ 1,052 ಜನ ಬಲಿ; 80% ಮಂದಿ 11-25 ವರ್ಷದವರೇ!

Heart Attack: ಗುಜರಾತ್‌ನಲ್ಲಿ ಕಳೆದ ಆರು ತಿಂಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ, ಹೃದಯಾಘಾತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಬಲಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ.

VISTARANEWS.COM


on

Heart Attack
Koo

ಗಾಂಧಿನಗರ: ದೇಶದಲ್ಲಿ ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಹೃದಯಾಘಾತ ಪ್ರಕರಣಗಳ (Heart Attack) ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿದೆ. ಅದರಲ್ಲೂ, ಯುವಕರೇ ಹೆಚ್ಚು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದವರು, ಐಸಿಯುನಲ್ಲಿ ಚಿಕಿತ್ಸೆ ಪಡೆದವರಿಗೇ ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತ ಆಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇನ್ನು, ಹೃದಯಾಘಾತ ಹೆಚ್ಚಾಗಲು ಕೊರೊನಾ ನಿರೋಧಕ ಲಸಿಕೆಯೇ ಕಾರಣ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ, ಕಳೆದ ಆರು ತಿಂಗಳಲ್ಲಿ ಗುಜರಾತ್‌ನಲ್ಲಿ ಹೃದಯಾಘಾತದಿಂದ 1,052 ಜನ ಮೃತಪಟ್ಟಿದ್ದಾರೆ ಎಂದು ಸರ್ಕಾರವೇ ತಿಳಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ಆತಂಕ ಮನೆಮಾಡಿದೆ.

“ಕಳೆದ ಆರು ತಿಂಗಳಲ್ಲಿ ಹೃದಯಾಘಾತದಿಂದ 1,052 ಜನ ಮೃತಪಟ್ಟಿದ್ದಾರೆ. ಇವರಲ್ಲಿ ಶೇ.80ರಷ್ಟು ಮಂದಿ 11-25 ವರ್ಷದವರೇ ಆಗಿದ್ದಾರೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಹಾಗಾಗಿ, ಎರಡು ಲಕ್ಷ ಶಾಲಾ ಶಿಕ್ಷಕರು ಹಾಗೂ ಕಾಲೇಜುಗಳ ಪ್ರೊಫೆಸರ್‌ಗಳಿಗೆ ಹೃದಯಾಘಾತ ಉಂಟಾದಾಗ ತಕ್ಷಣೆ ಮಾಡುವ ಕಾರ್ಡಿಯೋಪಲ್ಮನರಿ ರಿಸಸಿಟೇಷನ್‌ (CPR) ಪ್ರಕ್ರಿಯೆಯ ಕುರಿತು ತರಬೇತಿ ನೀಡಲಾಗಿದೆ” ಎಂದು ರಾಜ್ಯ ಶಿಕ್ಷಣ ಸಚಿವ ಕುಬೇರ್‌ ದಿಂಡೋರ್‌ ಮಾಹಿತಿ ನೀಡಿದ್ದಾರೆ.

Heart Attack

“ಯುವಕರು, ಅದರಲ್ಲೂ ಶಾಲೆ, ಕಾಲೇಜುಗಳ ಯುವಕರಿಗೆ ಹೃದಯಾಘಾತ ಉಂಟಾಗಿದೆ. ಕ್ರಿಕೆಟ್‌ ಆಡುವಾಗ, ಗರ್ಬಾ ಸಾಂಪ್ರದಾಯಿಕ ನೃತ್ಯ ಮಾಡುವಾಗ ಹೆಚ್ಚಿನ ಜನರಿಗೆ ಹೃದಯಾಘಾತ ಉಂಟಾಗಿದೆ. ಆರು ತಿಂಗಳಲ್ಲಿ ನಿತ್ಯ ಸರಾಸರಿ 173 ಜನ ಹೃದಯಾಘಾತ ಉಂಟಾಗಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಜನರಿಗೆ ಅನುಕೂಲವಾಗುವ, ಹೃದಯಾಘಾತ ಪ್ರಕರಣಗಳನ್ನು ತಡೆಯಲು ಹತ್ತಾರು ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Cholesterol: ಕೊಲೆಸ್ಟೆರಾಲ್‌ ನಿಜಕ್ಕೂ ಕೆಟ್ಟದ್ದೇ? ಇದಕ್ಕೂ ಹೃದಯಾಘಾತಕ್ಕೂ ನೇರಾನೇರ ಸಂಬಂಧ ಇದೆಯೇ?

ಕಠಿಣ ಕೆಲಸ ಮಾಡದಂತೆ ಕೇಂದ್ರ ಸೂಚನೆ

“ಕೊರೊನಾ ಸೋಂಕು ತಗುಲಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುವುದು ಸೇರಿ ಆರೋಗ್ಯ ಸ್ಥಿತಿ ಗಂಭೀರವಾಗಿ, ಬದುಕಿ ಬಂದವರು ಯಾವುದೇ ಕಾರಣಕ್ಕೂ ಹೆಚ್ಚು ಕೆಲಸ ಮಾಡಬಾರದು. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಅಧ್ಯಯನ ವರದಿ ಪ್ರಕಾರ, ಹೃದಯಾಘಾತದ ಭೀತಿ ಇರುವ ಕಾರಣ ಒಂದಷ್ಟು ಸಮಯದವರೆಗೆ ಕೊರೊನಾ ಸೋಂಕಿತರು ಹೆಚ್ಚು ಸಮಯದವರೆಗೆ ಅಥವಾ ಹೆಚ್ಚು ಭಾರ ಹೊರುವ ಕೆಲಸ ಮಾಡಬಾರದು. ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇಂತಹ ವ್ಯಕ್ತಿಗಳು ಅತಿಯಾದ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್‌ ಕೂಡ ಮಾಡಬಾರದು” ಎಂದು ಅಧ್ಯಯನ ವರದಿ ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Ishwar Sahu
ದೇಶ32 mins ago

ಮುಸ್ಲಿಮರಿಂದ ಹತ್ಯೆಗೀಡಾದ ಯುವಕನ ತಂದೆ 7 ಬಾರಿಯ ಕಾಂಗ್ರೆಸ್ ಶಾಸಕನನ್ನು ಸೋಲಿಸಿದರು!

Jyothi Reddy CEO of American Company
ಅಂಕಣ35 mins ago

Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್‌ ಕಂಪನಿ ಸಿಇಓ!

Venkataramana Reddy
ದೇಶ1 hour ago

ತೆಲಂಗಾಣದಲ್ಲಿ ಹಾಲಿ, ಭಾವಿ ಸಿಎಂಗಳನ್ನೇ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ; ಯಾರಿವರು?

Complaint to CM Siddaramaiah
ಕರ್ನಾಟಕ1 hour ago

Complaint to CM : ಸಿಎಂಗೆ ದೂರು ನೀಡಬೇಕೇ? ಈ ನಂಬರ್‌ಗೆ ಕರೆ ಮಾಡಿ!

women enjoying in rain
ಉಡುಪಿ1 hour ago

Karnataka Weather : ಮಳೆಯೊಂದಿಗೆ 30 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ

Mizoram Election Result
ದೇಶ2 hours ago

Mizoram Election Result: ಮಿಜೋರಾಂ ಫಲಿತಾಂಶಕ್ಕೆ ಕ್ಷಣಗಣನೆ; ಯಾರಿಗೆ ಗೆಲುವು?

4 state election results shows us that, freebies are not the way for win elections
ದೇಶ2 hours ago

ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

ead your daily horoscope predictions for december 4th 2023
ಪ್ರಮುಖ ಸುದ್ದಿ3 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Sphoorti Salu
ಸುವಚನ3 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Mizoram Election Result will be announced on December 4, 2023
ದೇಶ7 hours ago

Mizoram Election Result: ಇಂದು ಮಿಜೋರಾಂ ಎಲೆಕ್ಷನ್ ರಿಸಲ್ಟ್; ಮತ ಎಣಿಕೆ ಒಂದು ದಿನ ಮುಂದೂಡಿದ್ದೇಕೆ?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ3 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ20 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌