Life Tips: ಹೇಗೇ ಇದ್ದರೂ ಬದುಕು ಸುಂದರವಾಗಿ ಕಾಣಬೇಕೆಂದರೆ ಇಲ್ಲಿದೆ ಕೀಲಿಕೈ! - Vistara News

ಲೈಫ್‌ಸ್ಟೈಲ್

Life Tips: ಹೇಗೇ ಇದ್ದರೂ ಬದುಕು ಸುಂದರವಾಗಿ ಕಾಣಬೇಕೆಂದರೆ ಇಲ್ಲಿದೆ ಕೀಲಿಕೈ!

ಬದುಕಿನ ಅಗಾಧತೆಯನ್ನು, ಅನನ್ಯತೆಯನ್ನು, ಸಂಪೂರ್ಣತೆಯನ್ನು ಸವಿಯುವ ಮನ ಬಂದಾಗ, ಕೃತಜ್ಞತೆಯನ್ನು ಪ್ರಾಕ್ಟೀಸ್‌ ಮಾಡಿದಾಗ ಬದುಕು ಹೇಗೇ ಇದ್ದರೂ ಖುಷಿಯಾಗಿರುತ್ತದೆ. ಇದೇ ಸಂತೋಷದ ಬದುಕಿನ ಸೀಕ್ರೆಟ್‌ (Life tips).

VISTARANEWS.COM


on

life tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೃತಜ್ಞತೆ (Gratitude) ಎಂಬುದು ಸಂತೋಷದ (happiness key) ಕೀಲಿಕೈಯಂತೆ! ಹೌದು. ಕೃತಜ್ಞರಾಗಿರುವುದನ್ನು ನಾವು ಕಲಿತುಕೊಂಡರೆ, ಆ ಅರಿವನ್ನು ನಾವು ಬೆಳೆಸಿಕೊಂಡರೆ, ಜೀವನ ಸುಗಮವಾಗಿ ಸಾಗುತ್ತದೆ ಎನ್ನುತ್ತಾರೆ ತಿಳಿದವರು. ಏಳುಬೀಳುಗಳಿದ್ದರೂ, ಬದುಕು ಎಷ್ಟು ಅದ್ಭುತ ಅನಿಸುತ್ತದೆ. ಬದುಕು ರಮ್ಯವಾಗಿ, ಸೊಗಸಾಗಿ ಕಾಣಬೇಕೆಂದರೆ ನಾವು ಬದುಕಿನ ಕೆಲವನ್ನು ಸರಳವಾಗಿ ತೆಗೆದುಕೊಳ್ಳುವುದನ್ನು ಕಲಿಯಬೇಕು. ಆಗ ನಾವು ಬದುಕಿನ ನಿಜವಾದ ಮರ್ಮವನ್ನು ಅರಿಯಲು ಸಾಧ್ಯವಾಗುತ್ತದೆ.

ಬದುಕಿನಲ್ಲಿ ಸಂತೋಷ ಹೊಂದಬೇಕಾದರೆ ಶ್ರೀಮಂತಿಕೆಯೇ ಬೇಕಾಗಿಲ್ಲ. ಅದಿಲ್ಲದೆಯೂ ಜೀವನ ಅದ್ಭುತವಾಗಿರಬಲ್ಲುದು. ಏಳುಬೀಳುಗಳ ಹೊರತಾಗಿಯೂ ಬದುಕೆಷ್ಟು ಚಂದ ಎಂದು ಅನಿಸಬೇಕಾದರೆ, ನೀವು ಬದುಕನ್ನು ದೂಷಿಸದೆ ಇರುವ ಗುಣವನ್ನು ಕಲಿಯಬೇಕಾದರೆ, ಈ ಕೆಲವು ವಿಚಾರಗಳನ್ನು ನೀವು ತಿಳಿಯಬೇಕು. ಆ ಅರಿವು ನಿಮ್ಮೊಳಗಿಂದ ಬಂದರೆ, ನೀವು ಬದುಕಿನ ಅಗಾಧತೆಯನ್ನು, ಅನನ್ಯತೆಯನ್ನು, ಸಂಪೂರ್ಣತೆಯನ್ನು ಸವಿಯುತ್ತೀರಿ. ಹಾಗಾಗಿ ತಮ್ಮ ಬದುಕು ಹೇಗೇ ಇದ್ದರೂ ಸಂತೋಷವಾಗಿರುವ ಮಂದಿಯ ಬದುಕಿನ ಸೀಕ್ರೆಟ್‌ (Life tips, life secret) ಇಲ್ಲಿದೆ.

1. ಮೊದಲು ಜೀವನಕ್ಕೇ ಕೃತಜ್ಞರಾಗಿರಿ. ಹೌದು ಕೇಳಲು ವಿಚಿತ್ರವಾಗಿ ಅನಿಸಬಹುದು. ಆದರೆ ಇದು ನಿಜ. ಯಾಕೆಂದರೆ ಈ ಜಗತ್ತಿನಲ್ಲಿ ನೀವು ಈ ಭೂಮಿಯಲ್ಲಿ ಜನ್ಮ ತಳೆಯಲು ೪೦೦ ಟ್ರಿಲಿಯನ್‌ನಲ್ಲಿ ಒಂದರಷ್ಟೇ ಅವಕಾಶವಿದ್ದುದು, ಹಾಗೂ ಆ ಅವಕಾಶ ನಿಮ್ಮದಾಗಿದೆ ಎಂದರೆ ಅದು ನಿಮ್ಮ ಭಾಗ್ಯವೇ ಸರಿ ಎಂಬುದನ್ನು ಮನಗಾಣಬೇಕು. ಆಗ ನಿಮ್ಮ ಜೀವನ ಎಷ್ಟು ಮುಖ್ಯವಾದುದೆಂದು ನಿಮಗೆ ಅರಿವಾದೀತು. ಹಾಗಾಗಿ ಜೀವನ ಎಂಬುದು ಅತ್ಯಂತ ಅಮೂಲ್ಯ.

2. ನಿಮ್ಮ ಜೀವನದಿಂದ ಹೊರಹೋದವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಖುಷಿಯಾಗಿರುವ ಮಂದಿ ಬೇರೆಯವರ ನಿರ್ಧಾರಗಳನ್ನೂ ಖಂಡಿತ ಗೌರವಿಸುತ್ತಾರೆ. ಹಾಗಾಗಿಯೇ, ನೀವು ಖುಷಿಯಾಗಿರಬೇಕೆಂದರೆ, ನೀವು ಯಾರಿಗೋ ಬಾಗಿಲು ಮುಚ್ಚಿದ್ದಕ್ಕೋ, ಬೇರೆಯವರ್ಯಾರೋ ನಿಮ್ಮೆದುರು ಬಾಗಿಲು ಮುಚ್ಚಿದ್ದಕ್ಕೋ ಚಿಂತಿಸಬೇಡಿ. ಒಂದು ಬಾಗಿಲು ಮುಚ್ಚಿದರೆ, ಇನ್ನೊಂದು ಬಾಗಿಲು ತೆರೆಯುತ್ತದೆ, ನೆನಪಿಡಿ. ಬದುಕನ್ನು ಬಂದ ಹಾಗೆ ಸ್ವೀಕರಿಸಿ. ಅಗತ್ಯವಿಲ್ಲದ ಮೆಸೇಜುಗಳು, ಕಸಿಕ್ಕದ ಕೆಲಸಗಳು, ಕೈತಪ್ಪಿಹೋದ ಅವಕಾಶಗಳು ನಿಜವಾಗಿಯೂ ನಿಮ್ಮದಲ್ಲ, ನಿಮಗಾಗಿ ಬಂದಿದ್ದಲ್ಲ ಎಂದು ಸಕಾರಾತ್ಮಕವಾಗಿ ಯೋಚಿಸಿ. ಹೋದುದಕ್ಕೆ ಚಿಂತಿಸಿ ನೆಮ್ಮದಿ ಕಳೆಯಬೇಡಿ.

3. ಸಂತೋಷವಾಗಿರುವ ಮಂದಿ ತಮ್ಮ ಸುತ್ತಮುತ್ತಲ ಪರಿಸರವನ್ನು ನೋಡುತ್ತಾರೆ. ಪ್ರಕೃತಿಯ ಖುಷಿಯಲ್ಲಿ ತಮ್ಮ ಖುಷಿಯನ್ನು ಕಾಣುತ್ತಾರೆ. ಹಕ್ಕಿಗಳಿಂಚರ, ಹೂಗಳ ಘಮ, ಗಾಳಿಯ ಜೋಗುಳ, ಮಳೆಯ ತಂಪು ಹೀಗೆ ಪ್ರತಿಯೊಂದರಲ್ಲೂ ಸಣ್ಣ ಸಣ್ಣ ಖುಷಿಗಳನ್ನು ಹೆಕ್ಕಿ. ಪ್ರಕೃತಿಯೊಂದಿಗೆ ಕಳೆವ ಅವಕಾಶವನ್ನೆಂದೂ ಬಿಡಬೇಡಿ. ಇದರಲ್ಲಿರುವಷ್ಟು ಖುಷಿ ಇನ್ಯಾವುದರಲ್ಲೂ ಸಿಗಲಾರದು.

happiness

4. ಸ್ವಾರ್ಥರಹಿತರಾಗಿರುವುದಕ್ಕೆ ಪ್ರಯತ್ನಿಸಿ. ಸುತ್ತಮುತ್ತಲಿನವರ ಜೊತೆ ಪ್ರೀತಿಯಿಂದ, ವಿಶ್ವಾಸದಿಂದ ಮಾತನಾಡಿಸಿ. ಮುಖದಲ್ಲಿನ ಒಂದು ಪುಟ್ಟ ನಗು ಮ್ಯಾಜಿಕ್ಕೇ ಮಾಡಬಲ್ಲುದು. ಕೆಲವೊಂದು ಕೆಲಸಗಳನ್ನು ಬೇರೆವರಿಗೆ ಮಾಡಿಕೊಡಲು ನಿಮ್ಮ ಸ್ವಾರ್ಥ ಅಡ್ಡ ಬರದಿರಲಿ. ಇನ್ನೊಬ್ಬರಿಗೆ ಪ್ರೀತಿಯಿಂದ ಕೊಡುವುದರಲ್ಲಿ ಖುಷಿಯನ್ನು ಕಾಣಿ.

ಇದನ್ನೂ ಓದಿ: Happiness Tips: ಒಬ್ಬರೇ ಇದ್ದಾಗ ಖುಷಿಯಾಗಿರುವುದು ಹೇಗೆ ಗೊತ್ತಾ? ಇಲ್ಲಿವೆ ಟಿಪ್ಸ್!

5. ಗೆಳೆಯರು ಜೀವನದ ಅಮೂಲ್ಯ ಆಸ್ತಿ. ಈ ಮಂತ್ರ ಎಂದಿಗೂ ನೆನಪಿಡಿ. ಸಂಬಂಧಿಕರು, ನೆರೆಹೊರೆಯ ಮಂದಿ ರಕ್ತ ಸಂಬಂಧಿಗಳೂ ಕಷ್ಟದ ಸಂದರ್ಭದಲ್ಲಿ ಕೈಕೊಟ್ಟಾರು. ಆದರೆ, ಗೆಳೆಯರು ಖಂಡಿತಾ ಕೊಡಲಾರರು. ಹಾಗಾಗಿ ಉತ್ತಮ ಗೆಳೆಯರನ್ನು ಸಂಪಾದಿಸಿ. ಅವರನ್ನು ಗೌರವಿಸಿ, ಪ್ರೀತಿ, ಅವರ ಜೊತೆಗೂ ಸಮಯ ಕಳೆಯಿರಿ.

6. ಸಂತೋಷವನ್ನು ಬರಮಾಡಿಕೊಂಡಷ್ಟೇ ಸಹಜವಾಗಿ ಸೋಲನ್ನೂ, ಕಷ್ಟವನ್ನೂ ದುಃಖವನ್ನೂ ಬರಮಾಡಿ. ಖುಷಿ ಯಾವಾಗಲೂ ಇರುವುದಿಲ್ಲ ಎಂಬ ಸತ್ಯವನ್ನು ಮೊದಲು ಒಪ್ಪಿಕೊಳ್ಳುವುದು ಜೀವನದಲ್ಲಿ ಮುಖ್ಯ. ಹಾಗಾಗಿ, ಸಂತೋಷ, ಖುಷಿಯ ಭಾವನೆಗಳ ಹೊರತಾಗಿಯೂ ಬೇರೆ ಭಾವನೆಗಳಿವೆ ಎಂಬುದನ್ನು ಒಪ್ಪಿಕೊಂಡು ಅಪ್ಪಿಕೊಳ್ಳಿ.

ಕೇವಲ ಖುಷಿಯಷ್ಟೇ ಜೀವನದಲ್ಲಿ ತುಂಬಿರಬೇಕು ಎಂದು ಅಂದುಕೊಳ್ಳುವುದೇ ಮೂರ್ಖತನ. ಜೀವನ ಎಂದರೆ ಏಳುಬೀಳುಗಳ ಸಮಾಗಮ. ಅಲ್ಲಿ ಎಲ್ಲವೂ ಇದೆ. ಬದುಕಿನ ಬಗೆಗೆ ಹೀಗೊಂದು ಮನೋಭಾವವನ್ನು ಮೊದಲೇ ಬೆಳೆಸಿಕೊಂಡಾತ ಹಾಗೂ ತನ್ನ ಅಸ್ತಿತ್ವದ ಬಗೆಗೆ ಕೃತಜ್ಞನಾಗಿರುವ ವ್ಯಕ್ತಿ ಬದುಕಿನಲ್ಲಿ ಎಂದಿಗೂ ಖುಷಿಯಾಗಿರುತ್ತಾನೆ/ಳೆ!

ಇದನ್ನೂ ಓದಿ: Happiness Tips: ಸದಾ ಸಂತಸದಿಂದ ಇರಲು ಬೇಕು ಈ 4 ಹಾರ್ಮೋನ್‌, ಹೆಚ್ಚಿಸಿಕೊಳ್ಳೋಕೆ ಇಲ್ಲಿದೆ ಟಿಪ್ಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Tears Of Joy: ಕಣ್ಣೀರು ಸುರಿಸುವುದರಿಂದಲೂ ಲಾಭವಿದೆ!

ಕಣ್ಣೀರಿನಿಂದ ಲಾಭವಿದೆ! ಅಂದರೆ ನಮ್ಮ ಕಿಸೆ ತುಂಬುತ್ತದೆ ಎಂದಲ್ಲ, ಮನಸ್ಸು ತುಂಬಿ ಬಂದು ಒಳಗಿನ ಒತ್ತಡ ಹೆಚ್ಚಾದಾಗ ಅದನ್ನು ಹೊರ ಹಾಕುವುದಕ್ಕೆ ನಮಗೆ ಕಣ್ಣೀರು ಬೇಕು. ಬೇಸರದಲ್ಲಿ ಅಳುವಷ್ಟೇ ಸಹಜ, ಖುಷಿಯಾದಾಗ ಆನಂದದ ಕಣ್ಣೀರು. ಇದರಿಂದ ದೇಹದಲ್ಲಿ ಪೇರಿಸಲ್ಪಟ್ಟ ಒತ್ತಡ, ಆತಂಕಗಳು ಕಣ್ಣೀರಾಗಿ ಕರಗಿ ಹರಿದು ಹೋಗುತ್ತವೆ. ಈ ಕುರಿತ (Tears Of Joy) ಮಾಹಿತಿ ಇಲ್ಲಿದೆ.

VISTARANEWS.COM


on

Tears Of Joy
Koo

ಬೇಸಿಗೆಯಲ್ಲಿ ಶರೀರದ ಉಷ್ಣತೆ ಹೆಚ್ಚಾದರೆ ಅದನ್ನು ತಣಿಸಲು ನಾವು ಬೆವರುವುದಿಲ್ಲವೇ? ಹಾಗೆಯೇ, ದೇಹಕ್ಕೆ ಬೇಡದಿರುವಂಥ ಯಾವುದು ಹೆಚ್ಚಾದರೂ ಅದನ್ನು ಹೊರಗೆ ಹಾಕುವುದಕ್ಕೆ ಶರೀರಕ್ಕೊಂದು ವಿಸರ್ಜನಾ ಕ್ರಮವೆಂಬುದಿದೆ. ಹಾಗಿರುವುದರಿಂದಲೇ ನಮ್ಮ ದೇಹ ಆರೋಗ್ಯಪೂರ್ಣವಾಗಿ ಇರುವುದು. ಇದು ಶರೀರಕ್ಕೆ ಮಾತ್ರವೇ ಅಲ್ಲ, ಮನಸ್ಸಿನ ವಿಷಯದಲ್ಲೂ ಹೌದು. ಭಾವನೆಗಳ ಒತ್ತಡ ಅತಿಯಾದಾಗ ಅದನ್ನು ಹೊರಕ್ಕೆ ಹಾಕುವುದಕ್ಕೆ ಕಣ್ಣೀರು ನಮಗೆ ನೆರವಾಗುತ್ತದೆ (Tears Of Joy) ಎಂಬುದನ್ನು ಗಮನಿಸಿದ್ದೀರಾ? ದುಃಖ, ಬೇಸರವಾದಾಗ ಅಳುವಷ್ಟೇ ಸಹಜ, ಸಂತಸದಲ್ಲೂ ಅಳುವುದು. ಒಂದೊಮ್ಮೆ ಹೀಗೆ ಭಾವನೆಗಳ ಒತ್ತಡದಲ್ಲಿ ಕಣ್ಣೀರು ಬರುವುದನ್ನು ನಾಚಿಕೆ ಎಂದುಕೊಂಡರೆ- ತಪ್ಪು ತಿಳುವಳಿಕೆಯಿದು. ಸಂತೋಷದಲ್ಲಿ ಕಣ್ಣೀರು ಸುರಿಸುವುದರಲ್ಲೂ ಬಹಳಷ್ಟು ಪ್ರಯೋಜನಗಳಿವೆ. ಹಾಗಾಗಿ ಹೆಚ್ಚು ಯೋಚಿಸದೆ ಕಣ್ಣು, ಮೂಗು ಒರೆಸಿಕೊಳ್ಳುವುದಕ್ಕೆ ಕರವಸ್ತ್ರ ಇರಿಸಿಕೊಳ್ಳಿ.

happy Tears

ಖುಷಿಗೂ ಕಣ್ಣೀರೇ?

ನಮ್ಮ ಭಾವನೆಗಳ ಒತ್ತಡ ಅತಿಯಾದಾಗ ಅದನ್ನು ಹೊರಹಾಕುವಂಥ ನೈಸರ್ಗಿಕ ವ್ಯವಸ್ಥೆಯೆಂದರೆ ಕಣ್ಣೀರು ಹಾಕುವುದು. ಕಣ್ಣೀರು ಹಾಕುವುದಕ್ಕೆ ಖುಷಿ-ಬೇಸರ ಎಂಬ ಭೇದವಿಲ್ಲ. ಮನಸ್ಸಿನಲ್ಲಿ, ದೇಹದಲ್ಲಿ ಪೇರಿಸಲ್ಪಟ್ಟ ಒತ್ತಡ, ಆತಂಕಗಳು ಕಣ್ಣೀರಾಗಿ ಕರಗಿ ಹರಿದು ಹೋಗುವುದರಿಂದ ದೇಹ-ಮನಸ್ಸುಗಳ ಸ್ವಾಸ್ಥ್ಯಕ್ಕೆ ಬಹಳಷ್ಟು ಲಾಭವಿದೆ. ಕಣ್ಣು-ಮೂಗು ಒರೆಸಿಕೊಳ್ಳುತ್ತಿದ್ದಂತೆ ಮನಸ್ಸು ಶಾಂತವಾಗುವುದು, ದೇಹಾದ್ಯಂತ ಹರಡಿದ್ದ ಉದ್ವಿಗ್ನತೆ ಮಾಯವಾಗುವುದನ್ನು ಗಮನಿಸಬಹುದು. ಆನಂದಭಾಷ್ಪ ಸುರಿಸುವುದರಿಂದ ಆಗುವ ಲಾಭಗಳೇನು ಎಂದರೆ-

ಮನಸ್ಸು ಶಾಂತ

ಅತಿಯಾದ ಖುಷಿಯಲ್ಲಿ ಎಂಡಾರ್ಫಿನ್‌, ಆಕ್ಸಿಟೋಸಿನ್‌ ಮತ್ತು ಡೋಪಮಿನ್‌ ಮುಂತಾದ ಚೋದಕಗಳನ್ನು ದೇಹ ಸ್ರವಿಸುತ್ತದೆ. ಇಂಥ ಸಂದರ್ಭದಲ್ಲಿ ಭಾವನೆಗಳ ಹೊಳೆಯಿಂದ ಹೊರತಂದು ಮನಸ್ಸನ್ನು ಸ್ಥಿಮಿತಗೊಳಿಸುವುದಕ್ಕೆ ಸಂತೋಷದ ಕಣ್ಣೀರು ಸಹಾಯ ಮಾಡುತ್ತದೆ.

ಭಾವಗಳಿಗೆ ಕೋಡಿ

ನಿತ್ಯದ ಬದುಕಿನಲ್ಲಿ ಸುಪ್ತವಾಗಿ ಮನದಲ್ಲಿ ಅಡಗುವ ಭೀತಿ, ನೋವು, ಶೋಕ, ಖುಷಿ, ಸಂಭ್ರಮ ಮುಂತಾದ ಹತ್ತೆಂಟು ಭಾವನೆಗಳು ಸಹಿಸಲು ಅಸಾಧ್ಯವಾದ ಒತ್ತಡವನ್ನು ಉಂಟುಮಾಡುತ್ತವೆ. ಕಣ್ಣೀರು ಅವುಗಳಿಗೆ ಹೊರಹೋಗುವ ದಾರಿಯನ್ನು ತೋರಿಸುತ್ತದೆ. ಮಕ್ಕಳ ವಿವಾಹದಲ್ಲಿ ಹೆತ್ತವರು ಸುರಿಸುವ ಆನಂದಭಾಷ್ಪ ಇರಬಹುದು, ಹೊಸ ಕೆಲಸ ಸಿಕ್ಕ ಸಂಭ್ರಮ ಆದರೂ ಸರಿಯೇ- ಅಂತೂ ಹಳೆಯದೆಲ್ಲಾ ಸುಪ್ತ ಖಾತೆಗಳನ್ನು ಹೊರತೆಗೆದು ಕಣ್ಣೀರು ಕರೆಯುತ್ತದೆ ಮನಸ್ಸು. ಇದರಿಂದ ಜೀವಕ್ಕೆ ಬಹಳ ಆರಾಮ ಲಭಿಸುವುದು ಅನುಭವಕ್ಕೆ ಬರುತ್ತದೆ.

Daughter Wipes Away Mother's Tears of Joy

ಸಂವಹನದ ಮಾಧ್ಯಮ

ಮಾನವ ಸಂಘಜೀವಿ. ಜೊತೆಗಿರುವವರೊಡನೆ ಸಂವಹನ ನಡೆಸುತ್ತಲೇ ಬದುಕು ನಡೆಸಬೇಕು. ಇಷ್ಟಾಗಿಯೂ ಕೆಲವೊಮ್ಮೆ ಎಲ್ಲವನ್ನೂ ವಾಚ್ಯವಾಗಿಯೇ ಹೇಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಭಾವನೆಗಳು ಅತಿಯಾದ ಹೊತ್ತಿನಲ್ಲಿ ಮಾತು ಸೋಲುವುದು ಸಹಜ. ಎದುರಿನವರ ಕಣ್ಣೀರು ಕಂಡಾಕ್ಷಣವೇ ಅವರ ಪ್ರೀತಿ, ಕೃತಜ್ಞತೆಯಂಥ ಭಾವನೆಗಳು ಫಕ್ಕನೆ ಮನಸ್ಸಿಗೆ ನಾಟುತ್ತವೆ. ಮನಸ್ಸುಗಳನ್ನು ಹತ್ತಿರವಾಗಿಸುತ್ತವೆ. ಆಕ್ಸಿಟೋಸಿನ್‌ನಂಥ ಚೋದಕಗಳು ಸಾಮಾಜಿಕವಾಗಿ ಇನ್ನೊಬ್ಬರೊಂದಿಗೆ ಸಂಪರ್ಕ ಸಾಧಿಸಲು ಸಹ ನೆರವಾಗುತ್ತವೆ. ಮಾನಸಿಕ ಸ್ಥಿರತೆಯಿಂದ ಬದುಕು ಸ್ಥಿರವಾಗುವುದು ಹೌದು.

ದೇಹಕ್ಕೂ ಲಾಭ

ಈವರೆಗಿನ ಉಪಯುಕ್ತತೆಗಳೆಲ್ಲಾ ಹೆಚ್ಚಿನವು ಮಾನಸಿಕ ಸ್ತರದಲ್ಲಿನವು. ಆದರೆ ಅಷ್ಟೇ ಅಲ್ಲ, ದೇಹಕ್ಕೂ ಉಪಯೋಗವಿದೆ. ಕಣ್ಣನ್ನು ಸ್ವಚ್ಚಗೊಳಿಸಲು ಕಣ್ಣೀರು ಸಾಧನ. ಇದರಿಂದ ಕಣ್ಣಿನ ಸೋಂಕನ್ನು ಸಹ ತಡೆಗಟ್ಟಬಹುದು. ಅಳುವುದರಿಂದ ಉಸಿರಾಟ ಮತ್ತು ಹೃದಯ ಬಡಿತವೂ ನಿಯಂತ್ರಣಕ್ಕೆ ಬರುತ್ತದೆ. ಈ ಎಲ್ಲವುಗಳಿಂದ ಒತ್ತಡವನ್ನು ನಿಭಾಯಿಸುವ ಕ್ಷಮತೆ ಹೆಚ್ಚುತ್ತದೆ. ಹಾಗಾಗಿ ಎಂದಾದರೂ ಭಾವನೆಗಳ ಮಹಾಪೂರದಲ್ಲಿ ತೇಲುತ್ತಿರುವಾಗ ಅಳು ಬಂತೋ, ನಾಚಿಕೆ ಪಡಬೇಡಿ. ಮನಸ್ಸು ತುಂಬುವಷ್ಟು ಕಣ್ಣೀರು ಸುರಿಸಿ, ಆರೋಗ್ಯವಂತರಾಗಿರಿ.

ಇದನ್ನೂ ಓದಿ: Home Remedy For Cracked Heels: ಒಡೆದ ಹಿಮ್ಮಡಿಗಳಿಗೆ ಕರ್ಪೂರದ ಎಣ್ಣೆ ಪರಿಣಾಮಕಾರಿ

Continue Reading

ಫ್ಯಾಷನ್

Season Hairstyle: ವೆಸ್ಟರ್ನ್‌ ಲುಕ್‌ಗೆ ಎಂಟ್ರಿ ಕೊಟ್ಟ ಟ್ರೆಡಿಷನಲ್‌ ಲುಕ್‌ನ ಎರಡು ಜಡೆಯ 3 ರೂಪ ಹೇಗಿದೆ ನೋಡಿ!

ಟ್ರೆಡಿಷನಲ್‌ ಹೇರ್‌ಸ್ಟೈಲ್‌ (Season Hairstyle) ಲಿಸ್ಟ್‌ನಲ್ಲಿದ್ದ ಎರಡು ಜಡೆಗಳು ಇದೀಗ ವೆಸ್ಟರ್ನ್‌ ಲುಕ್‌ಗೂ ಎಂಟ್ರಿ ನೀಡಿವೆ. ಯುವತಿಯರ ಕ್ಯಾಶುವಲ್‌ ಹಾಗೂ ವೆಸ್ಟರ್ನ್‌ ವೇರ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ. ಯಾವ್ಯಾವ ಶೈಲಿಯವು ಟ್ರೆಂಡಿಯಾಗಿವೆ? ಹೇಗೆಲ್ಲಾ ಹೆಣೆದುಕೊಳ್ಳಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Season Hairstyle
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟ್ರೆಡಿಷನಲ್‌ ಹೇರ್‌ಸ್ಟೈಲ್‌ (Season Hairstyle) ಲಿಸ್ಟ್‌ನಲ್ಲಿದ್ದ ಎರಡು ಜಡೆಗಳು ಇದೀಗ ವೆಸ್ಟರ್ನ್‌ ಲುಕ್‌ಗೂ ಎಂಟ್ರಿ ನೀಡಿವೆ. ಯುವತಿಯರ ವೀಕೆಂಡ್‌ ಔಟಿಂಗ್‌ ಕ್ಯಾಶುವಲ್‌ ಲುಕ್‌ನಲ್ಲಿ ಅದರಲ್ಲೂ ವೆಸ್ಟರ್ನ್‌ ವೇರ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ.

Season Hairstyle

ಜಡೆಯ ಮೂಲರೂಪ

“ಎರಡು ಜಡೆ ಹೇರ್‌ಸ್ಟೈಲ್‌ ನಿನ್ನೆ ಮೊನ್ನೆಯದೇನಲ್ಲ! ಹಿಂದಿನ ಕಾಲದಿಂದಲೂ ಇದೆ. ಅದರಲ್ಲೂ ನಮ್ಮಲ್ಲಿ ಹೆಣ್ಣುಮಕ್ಕಳು ಚಿಕ್ಕವರಿದ್ದಾಗ ಎರಡು ಜಡೆ ಹಾಕುವುದು ಈಗಲೂ ಇದೆ. ಇನ್ನು ಎಣ್ಣೆ ಹಚ್ಚಿ ಎರಡು ಜಡೆ ಹಾಕಿಕೊಳ್ಳುವ ಹೆಣ್ಣುಮಕ್ಕಳು ಈಗಲೂ ಗ್ರಾಮೀಣ ಪ್ರದೇಶದಲ್ಲಿ ಕಾಣ ಸಿಗುತ್ತಾರೆ. ಆ ಮಟ್ಟಿಗೆ ಈ ಎರಡು ಜಡೆ ತನ್ನ ಮೂಲತನವನ್ನು ಉಳಿಸಿಕೊಂಡಿದೆ. ಇದೀಗ ಇವಕ್ಕೆ ಹೇರ್‌ಸ್ಟೈಲಿಸ್ಟ್‌ಗಳು ಮತ್ತೆ ಮರು ಜೀವ ತುಂಬಿ ಒಂದಿಷ್ಟು ಹೊಸತನದಲ್ಲಿ ಪ್ರೆಸೆಂಟ್‌ ಮಾಡಿದ್ದಾರೆ. ಹಾಗಾಗಿ ಹೊಸ ಹೊಸ ರೂಪದಲ್ಲಿ ಎರಡು ಜಡೆಗಳು ಆಗಮಿಸಿವೆ. ನಾನಾ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ. ಅವುಗಳಲ್ಲಿ ಇದೀಗ 3 ಬಗೆಯವು ಹೆಚ್ಚು ಪ್ರಚಲಿದಲ್ಲಿವೆ” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ ದಿಗಂತ್‌.

ಫ್ರೆಂಚ್‌ ಫ್ಲಾಟ್‌ನಂತಹ ಎರಡು ಜಡೆ

ತಲೆಯ ಅಂದರೆ, ಹಣೆ ಮುಂಭಾಗದಿಂದಲೇ ಎರಡು ಜಡೆ ಹೆಣೆದು, ಕೆಳಗಿನ ಭಾಗದವರೆಗೂ ಜಡೆ ಕಂಟಿನ್ಯೂ ಮಾಡುವ ಈ ಹೇರ್‌ಸೈಲ್‌ ಇದೀಗ ಟೀನೇಜ್‌ ಹುಡುಗಿಯರನ್ನು ಆವರಿಸಿಕೊಂಡಿದೆ. ಇದರಲ್ಲೆ ನಾನಾ ಪ್ರಕಾರದ ಜಡೆಗಳು ಇನ್‌ಸ್ಟಾ ಬ್ಯೂಟಿ ಬ್ಲಾಗ್‌ಗಳಿಂದ ಚಾಲ್ತಿಗೆ ಬಂದಿವೆ.

Season Hairstyle

ಫಿಶ್‌ಟೈಲ್‌ ಜಡೆ

ಮೇಲಿನಿಂದ ಹೆಣೆದ ಜಡೆಯು ಕೊನೆಯಲ್ಲಿ ಫಿಶ್‌ ಟೈಲ್‌ನಂತೆ ಲುಕ್‌ ನೀಡಲಾಗುತ್ತದೆ. ಈ ಹೇರ್‌ಸ್ಟೈಲ್‌ ಕೂಡ ಸಾಕಷ್ಟು ಚಾಲ್ತಿಯಲ್ಲಿದೆ. ಮಾಡೆಲಿಂಗ್‌ ಶೋಗಳಲ್ಲಿ ಕೆಲಕಾಲ ಈ ಹೇರ್‌ಸ್ಟೈಲ್‌ ಪ್ರಚಲಿತದಲ್ಲಿತ್ತು. ಇನ್ನು ಕೆಲವು ಸೆಲೆಬ್ರೆಟಿಗಳ ಫೋಟೋ ಶೂಟ್‌ಗಳಲ್ಲೂ ಇವನ್ನು ಕಾಣಬಹುದು.

ಉಲ್ಟಾ ಜಡೆ

ಹಣೆಯ ಮುಂಭಾಗ ಇಲ್ಲವೇ ಕಿವಿಯ ಹಿಂಭಾಗದಿಂದ ಕಂಪ್ಲೀಟ್‌ ಉಲ್ಟಾ ಶೈಲಿಯಲ್ಲಿ ಹೆಣೆಯುವ ಈ ಉಲ್ಟಾ ಎರಡು ಜಡೆ ಕೂಡ ಫ್ಯಾಷೆನಬಲ್‌ ಹುಡುಗಿಯರನ್ನು ಆವರಿಸಿದೆ. ಇವು ನೋಡಲು ಡಿಫರೆಂಟ್‌ ಲುಕ್‌ ನೀಡುತ್ತವೆ. ಔಟಿಂಗ್‌ ಹೋದಾಗ ಹಾಕಿಕೊಂಡಲ್ಲಿ, ಕೂದಲು ಅಲ್ಲಾಡುವುದಿಲ್ಲ. ಕೆದರುವುದು ಇಲ್ಲ.

Season Hairstyle

ಎರಡು ಜಡೆ ಪ್ರಿಯರಿಗೆ ಒಂದಿಷ್ಟು ಟಿಪ್ಸ್‌

  • ಔಟಿಂಗ್‌ ಹೋಗುವಾಗ ಈ ಜಡೆಗಳನ್ನು ಹೆಣೆಯುವುದು ಸೂಕ್ತ.
  • ಜಡೆ ಹೆಣೆದ ಮಾರನೇ ದಿನ ಬಿಚ್ಚಿದಲ್ಲಿ ಕೂದಲು ಗುಂಗುರಾಗುತ್ತದೆ.
  • ಆದಷ್ಟೂ ಸಾಫ್ಟ್‌ ಹೇರ್‌ಬ್ಯಾಂಡ್‌ಗಳನ್ನು ಬಳಸಿ.
  • ಹೆಣ್ಣುಮಕ್ಕಳಿಗೆ ಕಲರ್‌ಫುಲ್‌ ಬ್ಯಾಂಡ್‌ಗಳಿಂದ ಮಲ್ಟಿ ಲೇಯರ್‌ ಜಡೆ ಲುಕ್‌ ನೀಡಬಹುದು.
  • ಎಣ್ಣೆ ಹಚ್ಚಿ ಜಡೆ ಹೆಣೆಯುವುದು ನಾಟ್‌ ಓಕೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಬೇಸಿಗೆಯಲ್ಲಿ ಕ್ರಾಪ್‌ ಟೀ ಶರ್ಟ್‌ ಸ್ಟೈಲಿಂಗ್‌ಗೆ 3 ಐಡಿಯಾ

Continue Reading

ಫ್ಯಾಷನ್

Star Saree Fashion: ಪಾಸ್ಟೆಲ್‌ ಅರ್ಗಾನ್ಜಾ ಸೀರೆಯಲ್ಲಿ ಮಿಂಚಬೇಕೆ? ನಟಿ ಮೋಕ್ಷಿತಾ ಪೈ ನೀಡಿದ್ದಾರೆ 5 ಸಿಂಪಲ್‌ ಐಡಿಯಾ

ಬೇಸಿಗೆ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಅರ್ಗಾನ್ಜಾ ಸೀರೆಯಲ್ಲಿ (Star Saree Fashion) ನೀವೂ ಕೂಡ ಪಾರು ಖ್ಯಾತಿಯ ನಟಿ ಮೋಕ್ಷಿತಾರಂತೆ ಮನಮೋಹಕವಾಗಿ ಕಾಣಬಹುದು. ಅದು ಹೇಗೆ ಅಂತಿರಾ? ಖುದ್ದು ಮೋಕ್ಷಿತಾ ಪೈ ಈ ಕುರಿತಂತೆ 5 ಸಿಂಪಲ್‌ ಐಡಿಯಾಗಳನ್ನು ನೀಡಿದ್ದಾರೆ. ಕಿರುತೆರೆಯಲ್ಲಿ ಪಾರೂ ಎಂದೇ ಖ್ಯಾತಿ ಗಳಿಸಿರುವ ಮೋಕ್ಷಿತಾ ಟಿಪ್ಸ್‌ಗಳನ್ನು ನೀವು ಜಸ್ಟ್‌ ಫಾಲೋ ಮಾಡಿ ನೋಡಿ.

VISTARANEWS.COM


on

Star Saree Fashion
ಚಿತ್ರಗಳು: ಮೋಕ್ಷಿತಾ ಪೈ, ಕಿರುತೆರೆ ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಿರುತೆರೆಯಲ್ಲಿ ಪಾರೂ ಎಂದೇ ಖ್ಯಾತಿ ಗಳಿಸಿರುವ ನಟಿ ಮೋಕ್ಷಿತಾ ಪೈ ಈ ಸೀಸನ್‌ನಲ್ಲಿ ಮಹಿಳೆಯರ ಪ್ರೀತಿಗೆ ಪಾತ್ರವಾಗಿರುವ ಟ್ರಾನ್ಸಪರೆಂಟ್‌ ಅರ್ಗಾನ್ಜಾ ಸೀರೆಯಲ್ಲಿ (Star Saree Fashion) ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಸೀರೆ ಪ್ರಿಯರ ಲಿಸ್ಟ್‌ನಲ್ಲಿರುವ ಈ ಅರ್ಗಾನ್ಜಾ ಪಾಸ್ಟೆಲ್‌ ಸೀರೆಗಳು ಈ ಸೀಸನ್‌ನಲ್ಲಿ ಯಾವ ಮಟ್ಟಿಗೆ ಟ್ರೆಂಡಿಯಾಗಿವೆ, ಎಂದರೇ ನೋಡಲು ಆಕರ್ಷಕವಾಗಿ ಕಾಣಿಸುವುದು ಮಾತ್ರವಲ್ಲ, ಜೊತೆಗೆ ಬ್ರಿಥೆಬಲ್‌ ಫ್ಯಾಬ್ರಿಕ್‌ನಲ್ಲಿ ಬಂದಿವೆ. ಹಾಗಾಗಿ ಮಾನಿನಿಯರನ್ನು, ಅದರಲ್ಲೂ ಸೀರೆ ಪ್ರಿಯರನ್ನು ಬರಸೆಳೆದಿವೆ.

Star Saree Fashion

ನಟಿ ಮೋಕ್ಷಿತಾ ಸೀರೆ ಲವ್‌

ಪಾರೂ ಸೀರಿಯಲ್‌ನಲ್ಲಿ ಕರಾರುವಕ್ಕಾಗಿ ಸೀರೆಗಳನ್ನು ಉಟ್ಟು ಕಾಣಿಸಿಕೊಳ್ಳುತ್ತಿದ್ದ, ನಟಿ ಪಾರು ಅಲಿಯಾಸ್‌ ಮೋಕ್ಷಿತಾಗೆ ಸಾಕಷ್ಟು ಮಂದಿ ಯಾವ ಸೀರೆ ಉಟ್ಟಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಹುಟ್ಟಿಕೊಂಡಿದ್ದರಂತೆ. ಅದರಲ್ಲೂ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಇವರ ಸೀರೆಗಳ ಡ್ರೇಪಿಂಗ್‌ ಹಾಗೂ ಅವುಗಳ ಸ್ಟೈಲಿಂಗ್‌ಗನ್ನು ಗಮನಿಸುತ್ತಿದ್ದರಂತೆ. ಆ ಮಟ್ಟಿಗೆ ರೂರಲ್‌ ಹೆಣ್ಣುಮಕ್ಕಳು ಇವರ ಸೀರೆಗಳ ಅಭಿಮಾನಿಯಾಗಿದ್ದರಂತೆ. ಹಾಗೆಂದು ಟೆಲಿವಿಷನ್‌ ಸ್ಟೈಲಿಸ್ಟ್‌ಗಳೇ ಹೇಳುತ್ತಾರೆ. ಇನ್ನು, ಮೋಕ್ಷಿತಾ ಕೂಡ ಕೇವಲ ಧಾರವಾಹಿಯಲ್ಲಿ ಮಾತ್ರವಲ್ಲ, ಸಾಕಷ್ಟು ಬಾರಿ ಸೋಷಿಯಲ್‌ ಮೀಡಿಯಾದಲ್ಲಿ ಸೀರೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ನನಗಂತೂ ಸೀರೆಗಳೆಂದರೇ ಸಖತ್‌ ಇಷ್ಟ. ಇವು ನಮ್ಮ ಸಂಸ್ಕೃತಿಯ ಧ್ಯೋತಕ ಎನ್ನುತ್ತಾರೆ ಮೋಕ್ಷಿತಾ. ಡಿಫರೆಂಟ್‌ ಸೀರೆಗಳನ್ನು ಉಡುವುದು, ವಿಭಿನ್ನವಾದ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಳ್ಳುವುದು ತುಂಬಾ ಇಷ್ಟ ಎನ್ನುತ್ತಾರೆ ಮೋಕ್ಷಿತಾ.
ಈ ಪಾಸ್ಟೆಲ್‌ ಸೀರೆ ಪ್ರಿಯರಿಗೆ ಆಕರ್ಷಕವಾಗಿ ಕಾಣಿಸಿಕೊಳ್ಳಲು ಒಂದಿಷ್ಟು ಸಿಂಪಲ್‌ ಐಡಿಯಾಗಳನ್ನು ನೀಡಿದ್ದಾರೆ.

ಪಾಸ್ಟೆಲ್‌ ಸೀರೆಗಿರಲಿ ಕಾಂಟ್ರಾಸ್ಟ್‌ ಬ್ಲೌಸ್‌

ಧರಿಸುವ ಅರ್ಗಾನ್ಜಾ ಸೀರೆ ಹಾಗೂ ಅದಕ್ಕೆ ಧರಿಸುವ ಬ್ಲೌಸ್‌ ಮ್ಯಾಚಿಂಗ್ ಕಾಂಟ್ರಾಸ್ಟ್‌ ಆಗಿದ್ದರೇ ಉತ್ತಮ. ಆಗ ಸೀರೆ ನೋಡಲು ಎದ್ದು ಕಾಣುತ್ತದೆ. ಪಾಸ್ಟೆಲ್‌ ಶೇಡ್‌ನ ಸೀರೆ ಹೈಲೈಟಾಗುತ್ತದೆ.

ಸಿಂಪಲ್‌ ಮೇಕಪ್‌ ಹಾಗೂ ಹೇರ್‌ಸ್ಟೈಲ್‌

ಅರ್ಗಾನ್ಜಾ ಸೀರೆಗೆ ಸಿಂಪಲ್‌ ಮೇಕಪ್‌ ಮಾಡಿದರೂ ಸಾಕು. ಡಾರ್ಕ್‌ ಮೇಕಪ್‌ ಸೂಟ್‌ ಆಗದು. ಹಾಗಾಗಿ ಮೇಕಪ್‌ ಹಿತಮಿತವಾಗಿರಲಿ. ಇನ್ನು ಹೇರ್‌ಸ್ಟೈಲ್‌ ಕೂಡ ಅಷ್ಟೇ, ತೀರಾ ಕಾಂಪ್ಲಿಕೇಟೆಡ್‌ ಹೇರ್‌ಸ್ಟೈಲ್‌ ಮಾಡಕೂಡದು.

Star Saree Fashion

ಜ್ಯುವೆಲರಿ ಮಿನಿಮಲ್‌ ಆಗಿರಲಿ

ಈ ಪಾಸ್ಟೆಲ್‌ ಸೀರೆ ಎದ್ದು ಕಾಣಬೇಕಾದಲ್ಲಿ ಆದಷ್ಟೂ ಕಡಿಮೆ ಜ್ಯುವೆಲರಿ ಧರಿಸುವುದು ಉತ್ತಮ. ಅದರಲ್ಲೂ ಸಿಂಪಲ್‌ ನೆಕ್‌ಪೀಸ್‌ ಹಾಗೂ ಕಡ, ಇಯರಿಂಗ್ಸ್‌ ಹಾಕಿದರೇ ಸಾಕು. ಇನ್ನು ಬ್ಲೌಸ್‌ ಹೈ ನೆಕ್‌ ಅಥವಾ ಫುಲ್‌ ನೆಕ್‌ ಇದ್ದಲ್ಲಿ, ಎಂಬ್ರಾಯ್ಡರಿ ಡಿಸೈನ್‌ ಮಾಡಿಸಿದ್ದಲ್ಲಿ ನೋಡಿಕೊಂಡು ಆಭರಣಗಳನ್ನು ಧರಿಸುವುದು ಉತ್ತಮ. ಹೆಚ್ಚು ಆಭರಣಗಳ ಅಗತ್ಯವಿರುವುದಿಲ್ಲ.

ಅರ್ಗಾನ್ಜಾ ಸೀರೆ ಪಾಸ್ಟೆಲ್‌ ಶೇಡ್‌ನದ್ದಾಗಿರಲಿ

ನೀವು ಆಯ್ಕೆ ಮಾಡುವ ಅರ್ಗಾನ್ಜಾ ಸೀರೆ ಪಾಸ್ಟೆಲ್‌ ಶೇಡ್‌ನದ್ದಾಗಿರಲಿ. ಸೀರೆಯು ಡಿಸೈನರ್‌ ಡಿಸೈನ್‌ ಹೊಂದಿದ್ದಲ್ಲಿ ಅದಕ್ಕೆ ತಕ್ಕಂತೆ ಮೇಕೋವರ್‌ ಮಾಡುವುದು ಅಗತ್ಯ. ಇನ್ನು ಪಾಸ್ಟೆಲ್‌ ಶೇಡ್‌ಗಳು ಸಮ್ಮರ್‌ನಲ್ಲಿ ಫ್ರೆಶ್‌ ಲುಕ್‌ ನೀಡುವುದರೊಂದಿಗೆ ಮನಸ್ಸನ್ನು ಉಲ್ಲಾಸಿತಗೊಳಿಸುತ್ತವೆ.

Star Saree Fashion

ಡ್ರೇಪಿಂಗ್‌ ಹೀಗಿರಲಿ

ಅರ್ಗಾನ್ಜಾ ಸೀರೆಗಳನ್ನು ಆದಷ್ಟೂ ಒಟ್ಟೊಟ್ಟಿಗೆ ಪಿನ್‌ ಮಾಡುವುದಕ್ಕಿಂತ, ಸಿಂಗಲ್‌ ಪಿನ್‌ ಮಾಡುವುದು ಉತ್ತಮ. ಯಾಕೆಂದರೇ ಅದರ ಡಿಸೈನ್‌ ಹಾಗೂ ಲುಕ್‌ ಹೈ ಲೈಟಾಗುವುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಬೇಸಿಗೆಯಲ್ಲಿ ಕ್ರಾಪ್‌ ಟೀ ಶರ್ಟ್‌ ಸ್ಟೈಲಿಂಗ್‌ಗೆ 3 ಐಡಿಯಾ

Continue Reading

ಆರೋಗ್ಯ

Sleeping Tips: ದಿನಕ್ಕೆಷ್ಟು ತಾಸು ನಿದ್ದೆ ಮಾಡುತ್ತೀರಿ ನೀವು? ಇದು ಗಂಭೀರ ವಿಷಯ!

ನಿದ್ದೆ ಹಾಳಾಗುವುದಕ್ಕೆ ಕಾರಣಗಳು (Sleeping Tips) ಸಾವಿರ ಇರಬಹುದು. ಆದರೆ ಅದನ್ನು ಸರಿ ಮಾಡಿಕೊಳ್ಳುವುದು ಅಸಾಧ್ಯವಲ್ಲ. ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ರಾತ್ರಿ ಕಣ್ತುಂಬಾ ನಿದ್ರಿಸಬಹುದು. ನಿದ್ದೆ ಹಾಳಾಗುವುದಕ್ಕೆ ಕಾರಣಗಳು ಸಾವಿರ ಇರಬಹುದು. ಅದನ್ನು ಸರಿ ಮಾಡಿಕೊಳ್ಳುವುದು ಅಸಾಧ್ಯವಲ್ಲ. ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ರಾತ್ರಿ ಕಣ್ತುಂಬಾ ನಿದ್ರಿಸಬಹುದು, ದೇಹ-ಮನಸ್ಸುಗಳನ್ನು ಸ್ವಸ್ಥವಾಗಿ ಇರಿಸಿಕೊಳ್ಳಬಹುದು.

VISTARANEWS.COM


on

Sleeping Tips
Koo

ಕುಂಭಕರ್ಣನ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಅವನನ್ನು ಎಬ್ಬಿಸುವದಕ್ಕೆ ರಾವಣನ ಸೈನ್ಯವೇ ಒದ್ದಾಡಿದರೂ ತಬ್ಬಿದ ನಿದ್ರಾಂಗನೆಯನ್ನು ಆತ ಬಿಡುತ್ತಿರಲಿಲ್ಲವಂತೆ. ಈಗಿನವರೂ ಒಂಥರಾ ಕುಂಭಕರ್ಣರೇ! ಆದರೆ ಎಬ್ಬಿಸಲಿಕ್ಕಲ್ಲ, ನಿದ್ರಿಸುವುದಕ್ಕೇ ಹರಸಾಹಸ ಪಡಬೇಕು. ಲೋಕವೆಲ್ಲಾ ಬಂದು ಲಾಲಿ ಹಾಡಿದರೂ ನಿದ್ದೆ ಮಾತ್ರ ಸಾಧ್ಯವಿಲ್ಲ (Sleeping Tips) ಇಂದಿನವರಿಗೆ. ದಿಂಬಿಗೆ ತಲೆ ಕೊಡುವ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಬೇಗನೇ ʻಹಾಸಿಗೆ ಹಿಡಿಯುವುದುʼ ಸತ್ಯ ಎನ್ನುತ್ತಾರೆ ಆರೋಗ್ಯ ತಜ್ಞರು. ಭಾರತೀಯರಲ್ಲಿ ದಿನಕ್ಕೆ 6 ತಾಸುಗಳ ಗಾಢ ನಿದ್ರೆಗೂ ಗತಿಯಿಲ್ಲದವರು ಶೇ. 61 ಮಂದಿ ಎನ್ನುತ್ತದೆ ಇತ್ತೀಚಿನ ಸಮೀಕ್ಷೆಯೊಂದು. ಶೇ. 34ರಷ್ಟು ಜನ 4 ತಾಸುಗಳ ಗಾಢ ನಿದ್ದೆ ಮಾಡುತ್ತೇವೆ ಎಂದಿದ್ದರೆ ಉಳಿದವರಿಗೆ ಅದೂ ಅಲಭ್ಯವಾಗಿದೆ. ಇದಕ್ಕಿಂತ ಆತಂಕಕಾರಿ ಸಂಗತಿಯೆಂದರೆ 2022ಕ್ಕೆ ಹೋಲಿಸಿದರೆ, 2023ರಲ್ಲಿ ನಿದ್ದೆಬಿಡುವವರು, ನಿದ್ದೆಗೆಡುವವರ ಸಂಖ್ಯೆ ಶೇ. 50ರಷ್ಟು ಹೆಚ್ಚಾಗಿರುವುದು. ಈ ಪ್ರಮಾಣ 2024ಕ್ಕೆ ಮತ್ತೂ ಏರುತ್ತಿರುವುದಂತೂ ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ. ನಿದ್ದೆಗೆಟ್ಯೊ ಬುದ್ಧಿಗೆಟ್ಯೊ ಎನ್ನುವ ಹಳೆಯ ಜನರ ಮಾತನ್ನು ಮರೆಯುವಂತಿಲ್ಲ ಈಗ. ನಿದ್ದೆ ಹಾಳಾಗುವುದಕ್ಕೆ ಕಾರಣಗಳು ಸಾವಿರ ಇರಬಹುದು. ಅದನ್ನು ಸರಿ ಮಾಡಿಕೊಳ್ಳುವುದು ಅಸಾಧ್ಯವಲ್ಲ. ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ರಾತ್ರಿ ಕಣ್ತುಂಬಾ ನಿದ್ರಿಸಬಹುದು, ದೇಹ-ಮನಸ್ಸುಗಳನ್ನು ಸ್ವಸ್ಥವಾಗಿ ಇರಿಸಿಕೊಳ್ಳಬಹುದು. ಯಾವುದು ಆ ಬದಲಾವಣೆಗಳು? ಏನನ್ನು ಬದಲಿಸಿಕೊಳ್ಳಬೇಕು?

Sleeping alaram

ನಿದ್ದೆಗೊಂದು ಅಲರಾಂ

ಅಂದರೆ ಬೆಳಗ್ಗೆ ಏಳುವುದಕ್ಕೆ ಅಲರಾಂ ಇಡುವುದರ ಬಗ್ಗೆ ಅಲ್ಲ. ರಾತ್ರಿ ಮಲಗುವುದಕ್ಕೆ ಅಲರಾಂ ಇಡುವ ಬಗ್ಗೆ ಇಲ್ಲಿ ಹೇಳುತ್ತಿರುವುದು. ಹೌದು. ಒಂದೊಂದು ದಿನ ಒಂದೊಂದು ಸಮಯಕ್ಕೆ ಮಲಗುವುದಲ್ಲ, ಸಾಧ್ಯವಾದಷ್ಟೂ ನಿಗದಿತ ಸಮಯಕ್ಕೆ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ. ರಾತ್ರಿ ತೀರಾ ತಡವಾಗಿ ಮಲಗುವುದು, ಇದಕ್ಕೆ ಬದಲಿಗೆ ಹಗಲಿಗೆ ಒಂದೆರಡು ತಾಸು ನಿದ್ರಿಸುವುದು ಸರಿಯಲ್ಲ. 7 ತಾಸುಗಳ ಗಾಢ ನಿದ್ರೆ ರಾತ್ರಿಯೇ ದೊರೆಯುವಂತೆ ನಿಮ್‌ ಕೆಲಸಗಳನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿ. ಇದರಿಂದ ದೇಹದ ಸರ್ಕೇಡಿಯನ್‌ ಲಯಕ್ಕೆ ತೊಂದರೆಯಾಗದೆ, ಸ್ವಾಸ್ಥ್ಯ ಸುಧಾರಿಸುತ್ತದೆ.

Savasana Yoga Asanas For Best Sleep

ರಿಲ್ಯಾಕ್ಸ್‌ ಪ್ಲೀಸ್!

ಮಲಗುವ ಮುನ್ನ ಭಯಾನಕ ಸಿನೆಮಾಗಳನ್ನು ನೋಡುವುದು, ಮನಸ್ಸನ್ನು ಅಶಾಂತಗೊಳಿಸುವ ಸುದ್ದಿಗಳನ್ನು ಹೇಳಿ-ಕೇಳುವುದು- ಇಂಥ ಯಾವುದೇ ಸಂಗತಿಗಳನ್ನು ನಿದಿರೆಯನ್ನು ಹಾಳು ಮಾಡಬಲ್ಲವು. ಹಾಗಾಗಿ ಮಲಗುವ ಮುನ್ನ ದೇಹವನ್ನು ಮಾತ್ರವೇ ಅಲ್ಲ, ಮನಸ್ಸನ್ನು ವಿಶ್ರಾಂತಿಗೆ ದೂಡಿ. ಬೆವರು ಹರಿಸಿ ವ್ಯಾಯಾಮ ಮಾಡುವುದು ಸಹ ಮಲಗುವ ಮೊದಲು ಬೇಡ. ಬದಲಿಗೆ, ಹಗಲು ಹೊತ್ತಿನಲ್ಲಿ ಚೆನ್ನಾಗಿ ವ್ಯಾಯಾಮ ಮಾಡಿ. ಮಲಗುವ ಮುನ್ನ ಹದವಾದ ಬಿಸಿ ನೀರಿನ ಸ್ನಾನ, ದೀರ್ಘ ಉಸಿರಾಟ, ಸಂಗೀತ ಕೇಳುವುದು, ಏನನ್ನಾದರು ಓದುವುದು, ತಂಗಾಳಿಯಲ್ಲಿ ಹತ್ತಾರು ನಿಮಿಷ ಲಘುವಾಗಿ ಓಡಾಡುವುದು ಇತ್ಯಾದಿಗಳು ನಿದ್ದೆಗೆ ಪೂರಕ.

ಮಲಗುವ ಸ್ಥಳ

ಇದು ಸಹ ಮುಖ್ಯವಾಗುತ್ತದೆ. ಸ್ವಚ್ಛವಾದ, ಗಾಳಿಯಾಡುವ ಸ್ಥಳದಲ್ಲಿ ಮಲಗುವುದು ಒಳ್ಳೆಯದು. ಸೊಳ್ಳೆಗಳ ಉಪದ್ರವಿದ್ದರೆ ಪರದೆ ಬಳಸಿ. ಗಲಾಟೆಯಿಲ್ಲದ ಮಂದ ಬೆಳಕಿನ ವಾತಾವರಣ ಏರ್ಪಡಿಸಿಕೊಳ್ಳಿ. ಹಾಸಿಗೆ ಮತ್ತು ದಿಂಬುಗಳು ಕೂಡಾ ಆರಾಮದಾಯಕವಾಗಿರಲಿ. ಒಂದೊಮ್ಮೆ ಹೊರಗಿನ ಗಲಾಟೆಗೆ ನಿದ್ದೆ ಬರುತ್ತಿದ್ದ ಎಂದಾದರೆ, ಅದನ್ನು ಮರೆಮಾಚುವುದಕ್ಕೆ ನಿಮ್ಮಿಷ್ಟದ ಮೆಲು ಸಂಗೀತ ಹಾಕಿಕೊಳ್ಳಿ. ಅದು ಬೇಡದಿದ್ದರೆ, ಇಯರ್‌ ಪ್ಲಗ್‌ ಬಳಕೆ ಸಾಧ್ಯವೇ ನೋಡಿ.

Sleeping Tips

ನೀಲಿ ಬೆಳಕು ಬೇಡ

ಯಾವುದೇ ಎಲೆಕ್ಟ್ರಾನಿಕ್‌ ಉಪಕರಣದಿಂದ ಸೂಸುವ ನೀಲಿ ಬೆಳಕು ನಿದ್ದೆಯ ಶತ್ರುವಿದ್ದಂತೆ. ಮಲಗುವ ಒಂದು ತಾಸು ಮೊದಲೇ ಇವುಗಳಿಂದ ಸನ್ಯಾಸ ತೆಗೆದುಕೊಳ್ಳಿ. ಸ್ಮಾರ್ಟ್‌ ಫೋನ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌ ಮುಂತಾದವು ದೇಹದ ಆಂತರಿಕ ಗಡಿಯಾರಕ್ಕೆ ತೊಂದರೆ ನೀಡುತ್ತವೆ. ಮಲಗುವ ಹಾಸಿಗೆಯಲ್ಲಿ ಫೋನ್‌ ಇರಿಸಿಕೊಳ್ಳುವ ತಪ್ಪನ್ನಂತೂ ಮಾಡಲೇಬೇಡಿ.

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ಆಹಾರ

ಊಟ ಮಾಡಿ ಕೈ ತೊಳೆಯುತ್ತಿದ್ದಂತೆ ಹಾಸಿಗೆ ಸೇರಿದರೆ ನಿದ್ದೆಯೂ ಹಾಳು, ಹೊಟ್ಟೆಗೂ ಗೋಳು! ರಾತ್ರಿಯೂಟವನ್ನು ಆದಷ್ಟೂ ಸರಳವಾಗಿಡಿ, ಕೊಬ್ಬು, ಖಾರದ ವಸ್ತುಗಳನ್ನು ರಾತ್ರಿ ಕಡಿಮೆ ಮಾಡಿ. ರಾತ್ರಿ ಮಲಗುವ ಮೂರು ತಾಸುಗಳ ಮುನ್ನ ಊಟ ಮಾಡುವುದು ಸರಿಯಾದ ಕ್ರಮ. ಆನಂತರ ಕಾಫಿ, ಚಹಾ ಸೇರಿದಂತೆ ಯಾವುದೇ ಕೆಫೇನ್‌ ಸೇವನೆ ಸಲ್ಲದು. ಆಲ್ಕೋಹಾಲ್‌ ಸೇವನೆಯನ್ನು ರೂಢಿಸಿಕೊಂಡರೆ ಕ್ರಮೇಣ ನಿದ್ದೆ ಹಾಳಾಗುತ್ತದೆ.

Continue Reading
Advertisement
Karnataka Weather
ಕರ್ನಾಟಕ16 mins ago

Karnataka Weather: ರಾಯಚೂರಿನಲ್ಲಿ ರಾಜ್ಯದಲ್ಲೇ ಗರಿಷ್ಠ ಉಷ್ಣಾಂಶ ದಾಖಲು; ಇನ್ನೂ 4 ದಿನ ಶಾಖದ ಅಲೆ ಎಚ್ಚರಿಕೆ

Lok Sabha Election
ದೇಶ17 mins ago

3ನೇ ಹಂತದಲ್ಲಿ ಕಣಕ್ಕಿಳಿದ 1,352 ಅಭ್ಯರ್ಥಿಗಳ ಪೈಕಿ 244 ಜನರ ವಿರುದ್ಧ ಕ್ರಿಮಿನಲ್‌ ಕೇಸ್!

Thomas Cup 2024
ಕ್ರೀಡೆ41 mins ago

Thomas Cup 2024: ಕ್ವಾರ್ಟರ್‌ ಫೈನಲ್​ಗೆ ಲಗ್ಗೆಯಿಟ್ಟ ಹಾಲಿ ಚಾಂಪಿಯನ್​ ಭಾರತ

Rameshwaram Cafe blast
ಕರ್ನಾಟಕ1 hour ago

Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌; ಇಬ್ಬರು ಶಂಕಿತ ಉಗ್ರರಿಗೆ 14 ದಿನ ನ್ಯಾಯಾಂಗ ಬಂಧನ

IPL 2024
ಕ್ರೀಡೆ1 hour ago

IPL 2024: ರಿಂಕು ಸಿಂಗ್​ಗೆ ಬೌಲಿಂಗ್​ ಮಾಡಿದ ಶಾರುಖ್‌ ಪುತ್ರ ಅಬ್ರಾಮ್; ವಿಡಿಯೊ ವೈರಲ್​

Narendra Modi
ದೇಶ1 hour ago

Narendra Modi: ತಾಕತ್ತಿದ್ದವರು 370ನೇ ವಿಧಿ ಜಾರಿಗೆ ತರಲಿ; ಪ್ರತಿಪಕ್ಷಗಳಿಗೆ ಮೋದಿ ಸವಾಲು!

International Labor Day-2024
ಉದ್ಯೋಗ2 hours ago

Labour Day 2024: ಮೇ 1ರ ಕಾರ್ಮಿಕ ದಿನಾಚರಣೆಯ ಹಿನ್ನೆಲೆ ಏನು? ಏನಿದರ ಸಂದೇಶ?

car crossed the divider and collided with a lorry Driver death
ತುಮಕೂರು2 hours ago

Road Accident: ಡಿವೈಡರ್ ದಾಟಿ ಲಾರಿಗೆ ಡಿಕ್ಕಿ ಹೊಡೆದ ಕಾರು; ಚಾಲಕ ಸ್ಥಳದಲ್ಲೇ ಸಾವು

Hassan Pen Drive Case
ಕರ್ನಾಟಕ2 hours ago

Hassan Pen Drive Case: ವಿಚಾರಣೆಗೆ ಕರೆದಾಗ ವಿದೇಶದಿಂದ ಪ್ರಜ್ವಲ್ ಬರುತ್ತಾನೆ ಎಂದ ಎಚ್‌.ಡಿ.ರೇವಣ್ಣ

PF Balance Check
ಮನಿ ಗೈಡ್2 hours ago

PF Balance Check: ಬಡ್ಡಿ ಬಂದಿದೆಯೋ ಇಲ್ಲವೋ… ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 20248 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20249 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ16 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20241 day ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌