ಲೈಫ್‌ಸ್ಟೈಲ್
Lifestyle Tips: ಆರೋಗ್ಯಕರ ಒತ್ತಡರಹಿತ ಜೀವನಕ್ಕೆ ಸರಳ ಸಪ್ತಸೂತ್ರಗಳು!
ಉದ್ಯೋಗದ ಒತ್ತಡ, ಆಧುನಿಕ ಮನಸ್ಥಿತಿ ಸೇರಿದಂತೆ ಹಲವು ಸವಾಲುಗಳು ನಮ್ಮ ಎಷ್ಟೋ ದಿನಚರಿಯನ್ನು ಬದಲಾಯಿಸಿಬಿಟ್ಟಿದೆ. ಇದರಿಂದ ನಮಗೇ ಅರಿವಿಲ್ಲದಂತೆ ನಾವು ಹಲವಾರು ಸಮಸ್ಯೆಗಳಿಗೆ ಆಹ್ವಾನ ನೀಡುತ್ತಿದ್ದೇವೆ. ನಮ್ಮ ಬದುಕನ್ನೇ ಬದಲಾಯಿಸಬಲ್ಲ, ಆರೋಗ್ಯಕರ ಜೀವನದತ್ತ ಮತ್ತೆ ನಮ್ಮನ್ನು ಕೊಂಡೊಯ್ಯಬಲ್ಲ ಅಭ್ಯಾಸಗಳು ಯಾವುವು (Lifestyle Tips) ಎಂಬುದನ್ನು ನೋಡೋಣ.
ನಮ್ಮ ಕೆಲವು ಆರೋಗ್ಯಕರ ಶಿಸ್ತಿನ ನಿತ್ಯಾಭ್ಯಾಸಗಳೇ ನಮ್ಮ ಆರೋಗ್ಯದ ಕೀಲಿ ಕೈ. ಆದರೆ ಬದಲಾದ ಪ್ರಪಂಚ, ಬದಲಾದ ವ್ಯವಸ್ಥೆ, ಉದ್ಯೋಗದ ಒತ್ತಡ, ಆಧುನಿಕ ಮನಸ್ಥಿತಿ ಸೇರಿದಂತೆ ಹಲವು ಸವಾಲುಗಳು ನಮ್ಮ ಎಷ್ಟೋ ದಿನಚರಿಯನ್ನು ಬದಲಾಯಿಸಿಬಿಟ್ಟಿದೆ. ಇದರಿಂದ ನಮಗೇ ಅರಿವಿಲ್ಲದಂತೆ ನಾವು ಹಲವಾರು ಸಮಸ್ಯೆಗಳಿಗೆ ಆಹ್ವಾನ ನೀಡುತ್ತಿದ್ದೇವೆ. ಆದರೆ ಉತ್ತರ ನಮ್ಮ ಜೀವನಶೈಲಿಯಲ್ಲಿದೆ ಎಂಬ ಸತ್ಯ ಮಾತ್ರ ನಮಗೆ ಅರಿವಾಗುವುದಿಲ್ಲ. ಹಾಗೆ ನೋಡಿದರೆ, ನಮ್ಮ ಆರೋಗ್ಯದ ಗುಟ್ಟು ಇದರಲ್ಲೇ ಇದೆ. ನಾವು ಮಾತ್ರ ಬೇರೆಯದರ ಹುಡುಕಾಟದಲ್ಲಿ ಇವನ್ನು ಮರೆಯುತ್ತಿದ್ದೇವೆ. ಹಾಗಾದರೆ ಬನ್ನಿ, ನಮ್ಮ ಬದುಕನ್ನೇ ಬದಲಾಯಿಸಬಲ್ಲ, ಆರೋಗ್ಯಕರ ಜೀವನದತ್ತ ಮತ್ತೆ ನಮ್ಮನ್ನು ಕೊಂಡೊಯ್ಯಬಲ್ಲ ಅಭ್ಯಾಸಗಳು ಯಾವುವು (Lifestyle Tips) ಎಂಬುದನ್ನು ನೋಡೋಣ.
1. ಚೆನ್ನಾಗಿ ನಿದ್ದೆ ಮಾಡಿ: ಹೌದು. ಇಂದು ದೇಹಕ್ಕೆ ನಿಜವಾಗಿ ಅಗತ್ಯವಾಗಿ ಬೇಕಾಗಿರುವ ಗುಣಮಟ್ಟ್ದ ನಿದ್ದೆಯನ್ನು ನಾವು ನಮ್ಮ ದೇಹಕ್ಕೆ ನ್ಯಾಯವಾಗಿ ಕೊಡುತ್ತಿಲ್ಲ. ನಿತ್ಯವೂ ಏಳರಿಂದ ಎಂಟು ಗಂಟೆಗಳ ನಿದ್ದೆ ಸಾಮಾನ್ಯ ಆರೋಗ್ಯವಂತ ವಯಸ್ಕನಿಗೆ ಅಗತ್ಯವಿದೆ. ಕೆಲಸದ ಒತ್ತಡ, ಗ್ಯಾಜೆಟ್‌ಗಳ ಅಭ್ಯಾಸದಿಂದಾಗಿ ಇಂದು ಆ ನಿದ್ದೆ ಕಡಿಮೆಯಾಗಿದೆ. ಹಾಗಾಗಿ ಸರಿಯಾದ ಸಮಯದಲ್ಲಿ ಪ್ರತಿನಿತ್ಯ ಬೇಗ ನಿದ್ದೆ ಮಾಡಿ ಬೆಳಗ್ಗೆ ಬೇಗನೆ ಏಳುವ ಶಿಸ್ತುಬದ್ಧ ಅಭ್ಯಾಸ ರೂಢಿಸಿಕೊಳ್ಳಿ.
2. ಸ್ಮಾರ್ಟ್ ಉಪವಾಸ: ಉಪವಾಸದ ಅಭ್ಯಾಸ ಇಂದು ಬಹಳಷ್ಟು ಕಡಿಮೆಯಾಗಿದೆ. ಪುಟ್ಟ ಅವಧಿಗೆ ಹಸಿವಿನಿಂದಿರುವುದು, ಲಘುವಾಗಿ ಉಣ್ಣುವುದು ನಮ್ಮ ಎರಡು ಮುಖ್ಯ ವಂಶವಾಹಿನಿಗಳಿಗೆ ಒಳ್ಳೆಯದು. ಈ ವಂಶವಾಹಿನಿಯಲ್ಲಿ ನಮ್ಮ ಒತ್ತಡ, ಕ್ಯಾನ್ಸರ್, ವಯಸ್ಸಾದಂತೆ ಬರುವ ರೋಗಗಳು ಇವೆಲ್ಲವುಗಳ ವಿರುದ್ಧ ಹೋರಾಡುತ್ತವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಹೊಟ್ಟೆ ತುಂಬ ಅತಿಯಾಗಿ ಉಣ್ಣುವುದನ್ನು ಕಡಿಮೆ ಮಾಡಿ. ಹೊಟ್ಟೆಯಲ್ಲಿ ಕೊಂಚ ಜಾಗ ಉಳಿಸಿಕೊಂಡು ಲಘುವಾಗಿ ಉಣ್ಣಿ.
3. ಮಾಂಸಖಂಡಗಳ ಬಲವರ್ಧನೆ ಮಾಡಿ: ಉತ್ತಮ ಮಾಂಸಖಂಡಗಳನ್ನು ವೃದ್ಧಿಸಿಕೊಳ್ಳುವುದು ಒಳ್ಳೆಯದು. ವ್ಯಾಯಾಮ, ವೈಟ್ ಟ್ರೈನಿಂಗ್, ಪುಶ್ ಅಪ್, ಯೋಗ ಇತ್ಯಾದಿಗಳು ಒಳ್ಳೆಯದು. ಸೂರ್ಯ ನಮಸ್ಕಾರದಂತಹ ಸಾಮಾನ್ಯ ಯೋಗಾಭ್ಯಾಸವಾದರೂ ಮಾಡುವುದು ಒಳ್ಳೆಯದು.
4. ಸ್ನ್ಯಾಕ್ ತಿನ್ನುವುದು ಕಡಿಮೆ ಮಾಡಿ: ಏನಾದರೊಂದು ಬಾಯಲ್ಲಿ ಹಾಕಿ ಮೆಲ್ಲುತ್ತಲೇ ಇರುವುದು ಹಲವರಿಗೆ ಅಭ್ಯಾಸ. ಇದು ಅತಿಯಾಗಿ ತಿನ್ನುವುದರ ಲಕ್ಷಣ. ಆದಷ್ಟೂ ಈ ಅಭ್ಯಾಸವನ್ನು ಕಡಿಮೆ ಮಾಡಿ.
ಇದನ್ನೂ ಓದಿ: Chia Seeds Day: ಇಂದು ಚಿಯಾ ಸೀಡ್ಸ್ ದಿನ! ಇದರ ಬಳಕೆ ಹೇಗೆ? ಏನು ಪ್ರಯೋಜನ?
5. ಧ್ಯಾನ: ಸಾಕಷ್ಟು ಸಂಶೋಧನೆಗಳು ಇಂದು ಧ್ಯಾನವು ಮಾನಸಿಕ ಆರೋಗ್ಯವನ್ನು ಸರಿಯಾದ ದಿಕ್ಕಿನತ್ತ ಕೊಂಡೊಯ್ಯುವುದನ್ನು ಒಪ್ಪಿಕೊಂಡಿವೆ. ಮಾನಸಿಕ ಒತ್ತಡದಂತಹ ಹಲವು ಸಮಸ್ಯೆಗಳನ್ನು ಧ್ಯಾನವು ದೂರವಿರಿಸುತ್ತದೆ.
6 ಒಳ್ಳೆಯ ಆಹಾರ ಸೇವನೆ: ಉತ್ತಮ ಆರೋಗ್ಯಕರ ಜೀವನಕ್ಕೆ ನಾವು ಏನು ತಿನ್ನುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ಸತ್ವಾಹಾರ ಸೇವನೆ, ಸರಿಯಾದ ಸಮಯಕ್ಕೆ ಆಹಾರ ಸೇವನೆ ಹಾಗೂ ಜಂಕ್‌ನಿಂದ ದೂರವಿರುವುದರ ಅಭ್ಯಾಸ ಮಾಡಿಕೊಂಡರೆ, ಎಷ್ಟೋ ಸಮಸ್ಯೆಗಳಿಂದ ನಾವು ದೂರವಿರಬಹುದು.
7. ಇತರ ಆರೋಗ್ಯಕರ ಚಟುವಟಿಕೆಗಳು: ಓದುವುದು, ಬರವಣಿಗೆ, ಇನ್‌ಡೋರ್ ಗೇಮ್‌ಗಳು, ಮಕ್ಕಳೊಂದಿಗೆ ಆಡುವುದು, ಹೊಸ ಕಲಿಕೆಗಳು, ಹೊಸ ಭಾಷಾ ಕಲಿಕೆ, ಸಂಗೀತ, ನೃತ್ಯ, ಚಿತ್ರಕಲೆ, ಸಾಹಿತ್ಯದಂತಹ ಕ್ರಿಯಾಶೀಲ ಚಟುವಟಿಕೆಗಳು ಇತ್ಯಾದಿ ಮನೋಲ್ಲಾಸ ನೀಡುವ ಚಟುವಟಿಕೆಗಳೂ ಕೂಡಾ ನಮ್ಮನ್ನು ಆರೋಗ್ಯವಾಗಿರಿಸುತ್ತದೆ. ಮಾನಸಿಕವಾಗಿ, ದೈಹಿಕವಾಗಿ ಒತ್ತಡರಹಿತರನ್ನಾಗಿ ಮಾಡುತ್ತದೆ.
ಇದನ್ನೂ ಓದಿ: ವಿಸ್ತಾರ Explainer | killer stress | ಒತ್ತಡ ಏರುತ್ತಿದೆ, ಹೃದಯ ಕುಸಿಯುತ್ತಿದೆ!
ಆರೋಗ್ಯ
Ripponpet News: ಗ್ರಾಮೀಣ ಜನರ ಆರೋಗ್ಯದ ತಪಾಸಣೆ ಮುಖ್ಯ: ಉಜ್ಜಯನಿ ಪೀಠದ ಜಗದ್ಗುರು
Ripponpet News: ರಿಪ್ಪನ್‌ಪೇಟೆಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸಿರುವುದು ಪ್ರಶಂಸನೀಯ ಎಂದು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಹೇಳಿದ್ದಾರೆ.
ರಿಪ್ಪನ್‌ಪೇಟೆ: “ಹಳ್ಳಿಯಲ್ಲಿನ ಸಾಮಾನ್ಯ ಜನರು ಇಂದಿನ ದುಬಾರಿ ಖರ್ಚು ಮಾಡಿಕೊಂಡು ದೂರದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಮನೆಯ ಬಾಗಿಲಿನಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಪಡೆಯುವಂತಾಗಲು ನಂದಿ ಆಸ್ಪತ್ರೆ ಸಹಕಾರಿಯಾಗಲಿ” ಎಂದು ಉಜ್ಜಯನಿ ಪೀಠದ ಜಗದ್ಗುರುಗಳು ಹೇಳಿದರು.
ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿನಂದಿ ಆಸ್ಪತ್ರೆ ‘’ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಉಜ್ಜಯನಿ ಪೀಠದ ಜಗದ್ಗುರುಗಳು, ಆಸ್ಪತ್ರೆಯ ಸದುಪಯೋಗವನ್ನು ಸ್ಥಳೀಯ ಜನತೆ ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದ ಜನರ ಆರೋಗ್ಯ ತಪಾಸಣೆ ಬಹಳ ಮುಖ್ಯವಾಗುತ್ತದೆ ಎಂದು ಕರೆ ನೀಡಿದರು.
ಆನಂದಪುರದ ಮುರುಘಾರಾಜೇಂದ್ರ ಸಂಸ್ಥಾನ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿ, “ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾರಕ ರೋಗಗಳಿಂದ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ದೂರದ ಆಸ್ಪತ್ರೆಗಳಿಗೆ ಹೋಗಿ ಬರುವುದೇ ಕಷ್ಟವಾಗಿರುವಾಗ ರಿಪ್ಪನ್‌ಪೇಟೆಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸುವುದರೊಂದಿಗೆ ಸಾಕಷ್ಟು ವೈದ್ಯರಿಗೆ ಮತ್ತು ಆರೋಗ್ಯ ಶೂಶ್ರೂಷಿಕಿಯರಿಗೆ, ಔಷಧ ಅಂಗಡಿಯವರಿಗೆ ಸ್ವಾವಲಂಬಿ ಬದುಕಿಗೆ ಮಾರ್ಗದರ್ಶಿಯಾಗಿರುವುದು ಪ್ರಶಂಸನೀಯ” ಎಂದರು.
ಇದನ್ನೂ ಓದಿ: Kannada New Movie: ʻದಿಲ್ ದಾರ್’ ಎಂದ ಕೆ.ಮಂಜು ಪುತ್ರ: ಶ್ರೇಯಸ್ ಹೊಸ ಸಿನಿಮಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸಾಥ್!
ಇದೇ ಕಟ್ಟಡದಲ್ಲಿರುವ ಐಶ್ವರ್ಯ ಕೃಷಿ ಉಪಕರಣಗಳ ಅಂಗಡಿಗೂ ಭೇಟಿ ನೀಡಿ ಗುರು ವಿರಕ್ತ ಪೂಜ್ಯರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮೀಜಿ, ನಾರಾಯಣ ಗುರು ಪೀಠದ ರೇಣುಕಾನಂದ ಮಹಾಸ್ವಾಮೀಜಿ, ಶಾಸಕ ಹರತಾಳು ಹಾಲಪ್ಪ ಮಾಲೀಕರಾದ ಸಚ್ಚಿನ ಗೌಡ, ಜೆ.ಎ.ಶಾಂತ ಕುಮಾರ್, ಹುಗುಡಿ ರಾಜು, ಬೆಳಕೋಡು ಹಾಲಸ್ವಾಮಿಗೌಡ ಇನ್ನಿತರರು ಹಾಜರಿದ್ದರು.
ಇದನ್ನೂ ಓದಿ: Kasapa: ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ವಿರುದ್ಧ ಪ್ರಕಾಶಮೂರ್ತಿ ಗರಂ; ನಡೆ-ನುಡಿ ಬದಲಿಸಿಕೊಳ್ಳಲು ಬಹಿರಂಗ ಪತ್ರ
ಫ್ಯಾಷನ್
Wedding Fashion: ಗ್ರ್ಯಾಂಡ್ ವೆಡ್ಡಿಂಗ್ ಫ್ಯಾಷನ್‌ವೇರ್‌ಗೆ ಡಿಸೈನರ್ ಕ್ಲಚ್ ಸಾಥ್
ವೆಡ್ಡಿಂಗ್ ಸೀಸನ್‌ನಲ್ಲಿ ಗ್ರ್ಯಾಂಡ್‌ಲುಕ್ ನೀಡುವ ಡಿಸೈನರ್ ಕ್ಲಚ್‌ಗಳು ಕಾಲಿಟ್ಟಿವೆ. ಮದುವೆಯ ಸಂಭ್ರಮಕ್ಕೆ (Wedding Fashion) ಧರಿಸುವ ಎಥ್ನಿಕ್‌ವೇರ್‌ಗೆ ಈ ಕ್ಲಚ್‌ಗಳು ಸಾಥ್ ನೀಡುತ್ತಿವೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಡ್ಡಿಂಗ್ ಸೀಸನ್‌ನಲ್ಲಿ ಧರಿಸುವ ಗ್ರ್ಯಾಂಡ್ ಎಥ್ನಿಕ್‌ವೇರ್‌ಗಳಿಗೆ ಮ್ಯಾಚ್ ಆಗುವಂತಹ ಬಗೆಬಗೆಯ ಡಿಸೈನರ್ ಕ್ಲಚ್‌ಗಳು ಮಾರುಕಟ್ಟೆಗೆ (Wedding Fashion) ಕಾಲಿಟ್ಟಿವೆ. ನೋಡಿದರೇ ಕೊಳ್ಳಬೇಕೆನಿಸುವ ಡಿಸೈನ್‌ಗಳಲ್ಲಿ ಲಭ್ಯವಿರುವ ಈ ಕ್ಲಚ್‌ಗಳು ಇಂದು ಎಥ್ನಿಕ್ ಪ್ರಿಯರನ್ನು ಸೆಳೆದಿವೆ.
ವೆಡ್ಡಿಂಗ್‌ವೇರ್‌ಗೆ ಕ್ಲಚ್ ಸಾಥ್
ಗ್ರ್ಯಾಂಡ್ ಉಡುಪು ಧರಿಸಿ ಮದುವೆಯಲ್ಲಿ ಭಾಗವಹಿಸುವವರಿಗೆ ಈ ಕ್ಲಚ್ ಸಾಥ್ ನೀಡುತ್ತಿವೆ. ರೇಷ್ಮೆ ಸೀರೆ ಮಾತ್ರವಲ್ಲ, ಡಿಸೈನರ್ ಲೆಹೆಂಗಾ, ದಾವಣಿ-ಲಂಗ, ಗಾಗ್ರ, ಸಲ್ವಾರ್, ಕಮೀಝ್ ಹೀಗೆ ನಾನಾ ಬಗೆಯ ಡಿಸೈನರ್ ಉಡುಪುಗಳಿಗೆ ಮ್ಯಾಚ್ ಆಗುವ ವಿನ್ಯಾಸದಲ್ಲಿ ದೊರೆಯುತ್ತಿವೆ.
ಯಾವ್ಯಾವ ಬಗೆಯ ಕ್ಲಚ್‌ಗಳು ಲಭ್ಯ
ಕುಂದನ್ ಡಿಸೈನ್‌ನವು, ನಾನಾ ವರ್ಣಗಳ ಅಮೆರಿಕನ್ ಡೈಮಂಡ್ ಇಮಿಟೇಟ್ ಮಾಡುವಂತಹ ಕ್ರಿಸ್ಟಲ್ ಕ್ಲಚ್‌ಗಳು, ಬೀಡ್ಸ್ ಕ್ಲಚ್, ಪರ್ಲ್ ಕ್ಲಚ್, ವೆಲ್ವೆಟ್ ಕ್ಲಚ್, ಪರ್ಸ್ ಶೈಲಿಯವು, ಸ್ವಿಂಗ್ ಶೈಲಿಯ ಚೈನ್ ಇರುವಂತಹ ಕ್ಲಚ್‌ಗಳು ಹೆಚ್ಚು ಚಾಲ್ತಿಯಲ್ಲಿವೆ. ಡಿಸೈನರ್ ವೇರ್‌ಗಳೊಂದಿಗೆ ಹಾಕಿಕೊಂಡಾಗ ಆಕರ್ಷಕವಾಗಿ ಕಾಣುತ್ತವೆ. ಈ ಸೀಸನ್‌ನಲ್ಲಿ ಬೇಸಿಕ್ ಮೇಕಪ್ ಆಕ್ಸೆಸರೀಸ್ ಹಾಗೂ ಮೊಬೈಲ್ ಇರಿಸಿಕೊಳ್ಳುವಂತಹ ಕ್ಲಚ್‌ಗಳಿಗೆ ಇಂದು ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಡಿಸೈನರ್ಸ್. ಇನ್ನು ಕ್ಲಚ್‌ಗಳಲ್ಲಿಕುಂದನ್ ವರ್ಕ್, ಮಿರರ್ ವರ್ಕ್, ಪ್ಯಾಚ್ ವರ್ಕ್, ಮಿಕ್ಸ್ ಮ್ಯಾಚ್ ಕ್ಲಚ್‌ಗಳು ಹೆಚ್ಚು ಬೇಡಿಕೆ ಸೃಷ್ಠಿಸಿಕೊಂಡಿವೆ.
ಕ್ಲಚ್‌ಗಳ ಬಗ್ಗೆ ತಿಳಿದಿರಿ
ಕ್ಲಚ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಷ್ಟು ಕಂಪಾರ್ಟ್‌ಮೆಂಟ್‌ಗಳು ಇವೆ ಎಂದು ಪರೀಕ್ಷಿಸಿ. ಶಾಪಿಂಗ್‌ಗೆ ಹೋಗುವಾಗ ಕ್ಲಚ್ ಬೇಡ. ವ್ಯಾನಿಟಿ ಬ್ಯಾಗ್ ಸೂಕ್ತ. ಕ್ಲಚ್‌ಗಳನ್ನು ಪ್ರವಾಸಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಎಂಬುದು ನೆನಪಿರಲಿ. ಯಾಕೆಂದರೆ, ಅದರಲ್ಲಿಹೆಚ್ಚಿನ ವಸ್ತುಗಳನ್ನು ಇಡಲಾಗದು.
ನಿರ್ವಹಣೆ ಹೀಗೆ ಮಾಡಿ
ಕುಂದನ್ ವರ್ಕ್ ಅಥವಾ ಇನ್ಯಾವುದೇ ಡಿಸೈನರ್ ವರ್ಕ್ ಇರುವ ಕ್ಲಚ್‌ಗಳನ್ನು ವೈಟ್ ಕಾಟನ್ ಬಟ್ಟೆಯಲ್ಲಿಸುತ್ತಿ ಇಟ್ಟರೆ ತುಂಬ ದಿನ ಬಾಳಿಕೆ ಬರುತ್ತದೆ. ಮದುವೆ ಸಮಾರಂಭದಿಂದ ಬಂದ ತಕ್ಷ ಣ ಕ್ಲಚ್‌ನಲ್ಲಿ ಏನಾದರೂ ಇದ್ದರೆ ಖಾಲಿ ಮಾಡಿ ಇಡಿ. ಕ್ಲಚ್‌ಗಳನ್ನು ತೊಳೆಯಬೇಡಿ. ಚಿಕ್ಕ ಟಿಶ್ಯೂ ಪೇಪರ್‌ನಿಂದ ನಿಧಾನವಾಗಿ ಕ್ಲೀನ್ ಮಾಡಿ ಪ್ಯಾಕ್ ಮಾಡಿ ಇಡಿ.
ಆಕರ್ಷಕವಾಗಿ ಕಾಣಿಸಲು ಕ್ಲಚ್
- ಗ್ರ್ಯಾಂಡ್ ಸೀರೆಗಳಿಗೆ ಹಾಗೂ ಡಿಸೈನರ್ ವೇರ್‌ಗೆ ಅಂದವಾದ ಕ್ಲಚ್ ಕೈಯಲ್ಲಿಹಿಡಿಯುವುದು ಇಂದಿನ ಟ್ರೆಂಡ್.
- ಕ್ಲಚ್ ಆದಷ್ಟೂ ಕಾಂಪಾಕ್ಟ್ ಆಗಿದ್ದಷ್ಟೂ ಚೆನ್ನಾಗಿ ಕಾಣುತ್ತದೆ.
- ಗೋಲ್ಡ್, ಸಿಲ್ವರ್ ಕ್ಲಚ್‌ಗಳು ಎಲ್ಲಾ ಡಿಸೈನರ್‌ವೇರ್‌ಗೂ ಸೂಟ್ ಆಗುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Fashion: ಮದುವೆಯ ಟ್ರೆಂಡಿ ಆಕರ್ಷಕ ಬ್ರೈಡಲ್‌ವೇರ್ ಆಯ್ಕೆಗೆ ಪಾಲಿಸಬೇಕಾದ 7 ರೂಲ್ಸ್ ಯಾವವು?
ಫ್ಯಾಷನ್
Dior Pre Fall Fashion Show: ಭಾರತದಲ್ಲಿ ಮೊಟ್ಟ ಮೊದಲ ಬಾರಿ ನಡೆದ ಡಿಯೊರ್ ಪ್ರಿ ಫಾಲ್ ಫ್ಯಾಷನ್ ಶೋ
ಮೊದಲ ಬಾರಿ ಭಾರತದಲ್ಲಿ ನಡೆದ ಡಿಯೋರ್ ಪ್ರಿ ಫಾಲ್ ಫ್ಯಾಷನ್ ಶೋನಲ್ಲಿ (Dior Pre Fall Fashion Show), ವೈಬ್ರೆಂಟ್ ಶೇಡ್ ಡಿಸೈನರ್‌ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ರ‍್ಯಾಂಪ್ ವಾಕ್ ಮಾಡಿದರು. ಈ ಬಗ್ಗೆ ಇಲ್ಲಿದೆ ವರದಿ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಣ್ಣಿಗೆ ಎದ್ದು ಕಾಣಿಸುವಂತಹ ಬಣ್ಣಬಣ್ಣದ ಡಿಸೈನರ್ ವೇರ್‌ಗಳು, ಬ್ರೈಟ್ ಡ್ರೆಸ್‌ಗಳು, ಈ ಕಲರ್‌ಗಳಲ್ಲೂ ಉಡುಗೆಗಳೂ ಇದ್ದವಾ! ಎಂದುಕೊಳ್ಳುವಷ್ಟರ ಮಟ್ಟಿಗೆ ಡಿಸೈನರ್ ವೇರ್‌ಗಳು ರ್ಯಾಂಪ್ ಮೇಲೆ ಅನಾವರಣಗೊಂಡವು. ನೋಡಲು (Dior Pre Fall Fashion Show) ಕಣ್ಮನ ಸೆಳೆಯುವಂತಹ ಡ್ರೆಸ್‌ಗಳು ನೆರೆದಿದ್ದ ಗಣ್ಯರನ್ನು ಸೆಳೆದವು.
ಭಾರತದಲ್ಲಿ ಡಿಯೋರ್‌ನ ಮೊದಲ ಫ್ಯಾಷನ್ ಶೋ
ಮುಂಬಯಿಯ ಗೇಟ್ ವೇ ಆಫ್ ಇಂಡಿಯಾ ಬಳಿ ನಡೆದ ಡಿಯೋರ್‌ನ ಮೊಟ್ಟ ಮೊದಲ ಫ್ಯಾಷನ್ ಶೋ ಕಲ್ಚರ್ ಹಾಗೂ ವಿನ್ಯಾಸದ ಸಮಾಗಮವಾಗಿತ್ತು. ಡಿಯೋರ್ ನಿರ್ದೇಶಕಿ ಮಾರಿಯಾ ಗ್ರಾಝಿಯಾ ಅವರ ಐಡಿಯಾದಂತೆ ಈ ಫ್ಯಾಷನ್ ಶೋವನ್ನು ಆಯೋಜಿಸಲಾಗಿತ್ತು.
ರ್ಯಾಂಪ್‌ನಲ್ಲಿ ಕ್ಲಾಸಿಕಲ್ ಮ್ಯೂಸಿಕ್
ಎಲ್ಲಾ ಫ್ಯಾಷನ್ ಶೋಗಳಲ್ಲಿ ಹಿಟ್ ರ್ಯಾಪ್ ಅಥವಾ ಶೋಗೆ ಸೂಟ್ ಆಗುವಂತಹ ಮ್ಯೂಸಿಕ್ ಹಾಕುವುದು ಕಾಮನ್. ಆದರೆ ಈ ಡಿಯೋರ್ ಶೋನಲ್ಲಿ ಮಾತ್ರ ಡೈರೆಕ್ಟರ್ ಮಾರಿಯಾ ಅವರ ಅಭಿಲಾಷೆಯಂತೆ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ರ್ಯಾಂಪ್ ವಾಕ್‌ನ ಹಿನ್ನೆಲೆ ಸಂಗೀತವಾಗಿ ಬಳಸಲಾಯಿತು. ಎಲ್ಲರಿಗೂ ಆಶ್ಚರ್ಯ ಮೂಡಿಸಿದ ವಿಷಯವೆಂದರೇ, ರ್ಯಾಂಪ್‌ನಲ್ಲಿ ಮೊದಲ ಮಹಿಳಾ ತಬಲಾ ವಾದಕಿ ಅನುರಾಧ ಪಾಲ್ ಅವರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇಂಡಿಯನ್ ಮಾಡೆಲ್‌ಗಳಿಗಿಂತ ಹೊರಗಡೆಯವರೇ ಹೆಚ್ಚು
ಡಿಯೋರ್ ಫ್ಯಾನ್ ಶೋನಲ್ಲಿ ಕೇವಲ ಬೆರಳೆಣಿಕೆಯಷ್ಟರ ಮಟ್ಟಿಗೆ ಮಾತ್ರ ಭಾರತೀಯ ಮಾಡೆರಲ್‌ಗಳು ಕಣ್ಣಿಗೆ ಬಿದ್ದರು. ಇನ್ನುಳಿದಂತೆ ಎಲ್ಲರೂ ಹೊರಗಡೆಯವರಾಗಿದ್ದರು. ಈ ವಿಷಯ ಅಸಮಾಧಾನ ತರಿಸಿತು ಎನ್ನುತ್ತಾರೆ ಹೆಸರನ್ನು ಹೇಳಲು ಇಚ್ಛಿಸದ ಸ್ಟೈಲಿಸ್ಟ್. ಭಾರತೀಯ ಸಂಸ್ಕೃತಿಯನ್ನು ಪ್ರತಿಯೊಂದರಲ್ಲೂ ಎತ್ತಿ ಹಿಡಿದು ಕೊನೆಗೆ ರ್ಯಾಂಪ್ ಶೋನಲ್ಲಿ ಮಾತ್ರ ವಿದೇಶಿಯರಿಗೆ ಮಣೆ ಹಾಕಿದ್ದು ಸ್ಥಳಿಯರಲ್ಲಿ ಕೊಂಚ ಅಸಮಾಧಾನ ವ್ಯಕ್ತಪಡಿಸಿತು.
ಬಾಲಿವುಡ್ ಸೆಲೆಬ್ರೆಟಿಗಳ ದಂಡು
ಕ್ರಿಕೆಟಿಗ ವಿರಾಟ್ ಕೋಹ್ಲಿ, ನಟಿ ಅನುಷ್ಕಾ ಶರ್ಮಾ ಜೋಡಿ, ಅನನ್ಯಾ ಪಾಂಡೇ, ಸೋನಂ ಕಪೂರ್, ಅಭಿಷೇಕ್ ಬಚ್ಚನ್. ಅಥಿಯಾ ಶೆಟ್ಟಿ ಸೇರಿದಂತೆ ನಾನಾ ತಾರೆಯರು ಈ ಫ್ಯಾಷನ್ ಶೋನಲ್ಲಿ ಗೆಸ್ಟ್ ಲಿಸ್ಟ್‌ನಲ್ಲಿದ್ದರು. ಟ್ರೆಂಡಿ ವೈಬ್ರೆಂಟ್ ಶೇಡ್‌ಗಳಲ್ಲಿ ಕಾಣಿಸಿಕೊಂಡರು. ಬೇಸಿಗೆ ಬಂದರೂ ಇನ್ನೂ ಸಾಟೀನ್ ಫ್ಯಾಬ್ರಿಕ್‌ನ ಲೆಯರ್ ಔಟ್‌ಫಿಟ್‌ನಲ್ಲೆ ಕಾಣಿಸಿಕೊಂಡದ್ದು ಬಹುತೇಕರಲ್ಲಿ ಅಚ್ಚರಿ ಮೂಡಿಸಿತು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Photoshoot: ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾದ ಕಪಲ್ ಎಂಗೇಜ್‌ಮೆಂಟ್ ಫ್ಯಾಷನ್ ಫೋಟೊಶೂಟ್
ಆರೋಗ್ಯ
Grapes Benefits: ದ್ರಾಕ್ಷಿ ಸೇವಿಸಿದ್ರೆ ಸನಿಹಕ್ಕೂ ಬರಲ್ಲ ಕ್ಯಾನ್ಸರ್! ಅಬ್ಬಾ ಎಷ್ಟೊಂದು ಲಾಭಗಳು?
ದ್ರಾಕ್ಷಿ (Grapes benefits) ತಿನ್ನುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಉಪಯುಕ್ತ ಮಾಹಿತಿ.
ನರಿಯೊಂದು ದ್ರಾಕ್ಷಿ (Grapes benefits) ಹಣ್ಣಿಗೆ ಆಸೆಪಟ್ಟು, ಎಷ್ಟು ಪ್ರಯತ್ನಿಸಿದರೂ ದೊರೆಯದೆ, ʻಸಾಯಲತ್ಲಾಗೆ, ಹುಳಿ ದ್ರಾಕ್ಷಿಯಿದುʼ ಎಂದು ಹೊರಟುಹೋದ ಕಥೆಯನ್ನು ಸಾಮಾನ್ಯವಾಗಿ ಎಲ್ಲರೂ ಬಾಲ್ಯದಲ್ಲಿ ಕೇಳಿಯೇ ಇರುತ್ತೇವೆ. ಅದು ನರಿಯ ಕಥೆಯಾಯಿತು, ಈಗ ನಮಗೆ ದ್ರಾಕ್ಷಿ ಹಣ್ಣು ಬೇಕೆಂದರೆ ದ್ರಾಕ್ಷಿಯ ತೋಟಕ್ಕೆ ಹೋಗಿ ಹಾರಾಡಬೇಕೆಂದಿಲ್ಲ, ಅಂಗಡಿಗೆ ಹೋಗಿ ಬೇಕಾದಷ್ಟನ್ನು ಖರೀದಿಸಿ ತಂದರಾಯಿತು. ಗೊಂಚಲಲ್ಲಿ ತೂಗುವ ಈ ರಸಭರಿತ ಹಣ್ಣುಗಳು ಕಣ್ಣಿಗೆ ಮಾತ್ರ ತಂಪಲ್ಲ, ಬಾಯಿ, ಹೊಟ್ಟೆಗೂ ಹಿತ. ಒಂದಿಷ್ಟು ಹುಳಿ, ಕೆಲವೊಮ್ಮೆ ಚಿಟಿಕೆಯಷ್ಟು ಒಗರು, ಬಹಳಷ್ಟು ಸಿಹಿ ರುಚಿಯ ಮಿಶ್ರಣದ ಹಣ್ಣುಗಳಿವು.
ಇದರ ಬಣ್ಣಗಳೇ ಕೆಲವೊಮ್ಮೆ ಬಾಯಲ್ಲಿ ನೀರೂರಿಸಿಬಿಡುತ್ತವೆ. ತಿಳಿ ಹಸಿರು, ಅಚ್ಚ ಹಸಿರು, ನಸುಗೆಂಪು, ತುಸು ಹೆಚ್ಚೇ ಕೆಂಪು, ಕಪ್ಪು, ನಸು ನೀಲಿ, ನೇರಳೆ- ಹೀಗೆ ಹಲವಾರು ಬಣ್ಣಗಳಲ್ಲಿ ದ್ರಾಕ್ಷಿಯನ್ನು ಕಾಣಬಹುದು. ಹೊರಮೈ ಮಾಟಗಳೂ ಅಷ್ಟೇ, ಸಣ್ಣದು, ದೊಡ್ಡದು, ಉರುಟಾದ್ದು, ಮೊಟ್ಟೆಯಾಕಾರದ್ದು, ಉದ್ದ ಮಾಟದ್ದು- ಎಷ್ಟೊಂದು ಬಗೆಗಳಿವೆ. ಹಾಗೆಂದು ಈ ಯಾವ ಬಣ್ಣ, ಮಾಟಗಳ ದ್ರಾಕ್ಷಿ ತಿಂದರೂ, ರುಚಿ ಮತ್ತು ಪೋಷಕತತ್ವಗಳಿಗೆ ಏನೂ ಮೋಸವಿಲ್ಲ. ಹಾಗಾದರೆ ಏನೆಲ್ಲ ಲಾಭಗಳಿವೆ ದ್ರಾಕ್ಷಿ ತಿನ್ನುವುದರಲ್ಲಿ?
ಕ್ಯಾನ್ಸರ್ ದೂರ
ಪಾಲಿಫೆನಾಲ್ ಮತ್ತು ರೆಸ್ವೆರಾಟ್ರೋಲ್‌ನಂಥ ಪ್ರಮುಖ ಆಂಟಿ ಆಕ್ಸಿಡೆಂಟ್‌ಗಳು ದ್ರಾಕ್ಷಿಯಲ್ಲಿವೆ. ಕ್ಯಾನ್ಸರ್ ಅಥವಾ ಯಾವುದೇ ರೀತಿಯ ಗಡ್ಡೆಗಳು ಬೆಳೆಯದಂತೆ ತಡೆಯುವ ಸಾಮರ್ಥ್ಯ ಇವುಗಳಿಗಿರುವುದಾಗಿ ಅಧ್ಯಯನಗಳು ಹೇಳುತ್ತವೆ. ಯಕೃತ್, ಕರುಳು, ಸ್ತನ, ಜಠರ, ಚರ್ಮ ಮುಂತಾದ ಕಡೆಗಳಲ್ಲಿ ಕ್ಯಾನ್ಸರ್ ಗಡ್ಡೆಗಳು ಬಾರದಂತೆ ಕಾಪಾಡುತ್ತದೆ, ಇದರಲ್ಲಿನ ಕ್ವಾರ್ಸೆಂಟೀನ್ ಎಂಬ ಫ್ಲವನಾಯ್ಡ್‌ನಿಂದ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಕುಂಠಿತಗೊಳ್ಳುವುದು ಪತ್ತೆಯಾಗಿದೆ.
ಹೃದಯಾರೋಗ್ಯ ವೃದ್ಧಿ
ಇದರ ಪಾಲಿಫೆನಾಲ್‌ಗಳು ದೇಹದಲ್ಲಿನ ಉರಿಯೂತ ತಗ್ಗಿಸಿ, ಹೃದಯದ ಆಯಸ್ಸು ಹೆಚ್ಚಿಸುತ್ತವೆ. ರಕ್ತದ ಪರಿಚಲನೆಯನ್ನು ವೃದ್ಧಿಸಿ, ಹೃದಯಕ್ಕೆ ಬಾಧೆಯಾಗದಂತೆ ನೋಡಿಕೊಳ್ಳುತ್ತವೆ. ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುವಂತೆ ಮಾಡುವ ಬಗ್ಗೆಯೂ ಅಧ್ಯಯನಗಳು ಹೇಳುತ್ತವೆ.
ದೃಷ್ಟಿ ಚುರುಕು
ನಿಯಮಿತವಾಗಿ ದ್ರಾಕ್ಷಿ ಹಣ್ಣು ತಿನ್ನುವುದರಿಂದ ಕಣ್ಣಿನ ದೃಷ್ಟಿ ಮಂದವಾಗುವ ಸಾಧ್ಯತೆಯನ್ನು ಶೇ. ೩೬ರಷ್ಟು ತಗ್ಗಿಸಬಹುದು ಎನ್ನುತ್ತವೆ ಅಧ್ಯಯನಗಳು. ಅದರಲ್ಲೂ ಕೆಂಪು ದ್ರಾಕ್ಷಿಯನ್ನು ಪ್ರತಿದಿನ ಸೇವಿಸುವುದರಿಂದ ವೃದ್ಧಾಪ್ಯದಲ್ಲಿ ಕಾಡುವ ದೃಷ್ಟಿದೋಷದ ಸಾಧ್ಯತೆ ಕ್ಷೀಣವಾಗುತ್ತದೆ.
ಪ್ರತಿರೋಧಕ ಶಕ್ತಿ ವೃದ್ಧಿ
ಹಲವು ಫ್ಲವನಾಯ್ಡ್‌ಗಳು, ವಿಟಮಿನ್ ಎ, ಸಿ ಮತ್ತು ಕೆ ಜೀವಸತ್ವಗಳು, ಕಬ್ಬಿಣ ಮತ್ತು ಮೆಗ್ನೀಶಿಯಂನಂಥ ಖನಿಜಗಳಿಂದ ಸಮೃದ್ಧವಾಗಿರುವ ದ್ರಾಕ್ಷಿ ಹಣ್ಣುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲವು. ಅದರಲ್ಲೂ ದೈನಂದಿನ ಆಹಾರದಲ್ಲಿ ಬೊಗಸೆ ದ್ರಾಕ್ಷಿಗೆ ಸ್ಥಾನ ನೀಡಿದರೆ ಋತು ಬದಲಾವಣೆಯ ಹೊತ್ತಿಗೆ ಬರುವಂಥ ನೆಗಡಿ, ಜ್ವರದಂಥ ಕಿರಕಿರಿಗಳನ್ನು ತಡೆಯಬಹುದು
ಮೂಳೆಗಳ ಬಲವರ್ಧನೆ
ತಾಮ್ರ, ಕಬ್ಬಿಣ, ಮ್ಯಾಂಗನೀಸ್‌ನಂಥ ಅಗತ್ಯ ಖನಿಜಗಳನ್ನು ಹೊಂದಿರುವ ದ್ರಾಕ್ಷಿಯ ಸೇವನೆಯಿಂದ ಮೂಳೆಗಳ ಶಕ್ತಿಯನ್ನು ಹೆಚ್ಚಿಸಬಹುದು. ಆಸ್ಟಿಯೊ ಆರ್ಥರೈಟಿಸ್‌ನಿಂದ ಉಂಟಾಗುವ ಮಂಡಿ ನೋವಿನ ಉಪಟಳವನ್ನು ದ್ರಾಕ್ಷಿಗಳು ಶಮನ ಮಾಡಬಲ್ಲವು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕೀಲುಗಳಲ್ಲಿ ಶಕ್ತಿ ಸಂಚಯಿಸಿ, ಅವುಗಳ ಕ್ಷಮತೆಯನ್ನು ಹೆಚ್ಚಿಸುತ್ತವೆ.
ಮಧುಮೇಹಿಗಳಿಗೂ ಕ್ಷೇಮ
ಹೌದು, ಸಿಹಿ ರುಚಿಯ ಹಣ್ಣುಗಳನ್ನು ತಿನ್ನುವಾಗ ಇದು ಮಧುಮೇಹಿಗಳಿಗೆ ಸುರಕ್ಷಿತವೇ ಎಂಬ ಸಂಶಯ ಕಾಡುವುದು ಸಹಜ. ಇದರ ಗ್ಲೈಸೆಮಿಕ್ ಇಂಡೆಕ್ಸ್ ಮಧ್ಯಮ ಪ್ರಮಾಣದಲ್ಲಿದ್ದು, ಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಮಧುಮೇಹಿಗಳಿಗೂ ಅಪಥ್ಯವಾಗುವುದಿಲ್ಲ.
ಇದನ್ನೂ ಓದಿ: Bone Health: ಮೂಳೆಗಳ ಬಲವರ್ಧನೆಗೆ ಏನು ಮಾಡಬೇಕು?
-
ದೇಶ19 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ20 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್9 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ20 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ21 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ10 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ12 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ14 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್