ಪ್ರಮುಖ ಸುದ್ದಿ
Motivation: ಎಸೆದ ಖಾಲಿ ಚಿಪ್ಸ್ ಪ್ಯಾಕೆಟ್ ಟ್ರೆಂಡೀ ಕನ್ನಡಕವಾಗಿ ಮಾರುಕಟ್ಟೆಗೆ: ಹೊಸ ಸಂಶೋಧನೆ!
ಚಿಪ್ಸ್ ಪ್ಯಾಕೆಟ್‌ನಿಂದ ಕನ್ನಡಕವೇ ಎಂದು ಹುಬ್ಬೇರಿಸಬೇಡಿ. ಇನ್ನು ಚಿಪ್ಸ್ ಪ್ಯಾಕೆಟ್ಟಿನ ಟ್ರೆಂಡೀ ಸನ್ ಗ್ಲಾಸನ್ನು ನೀವಿನ್ನು ದುಡ್ಡು ಕೊಟ್ಟು ಖರೀದಿಸಬಹುದು! ಪುಣೆ ಮೂಲದ ಆಶಯ ಎಂಬ ಸಂಸ್ಥೆಯೊಂದು ಚಿಪ್ಸ್ ಪ್ಯಾಕೆಟ್‌ನಿಂದ ವಿಶ್ವದಲ್ಲೇ ಮೊದಲ ಬಾರಿಗೆ ಕನ್ನಡಕ ತಯಾರಿಸಿದೆ.
ಇದೊಂದು ಸ್ಫೂರ್ತಿಯಾಗಬಹುದಾದ (Motivation) ನಡೆ. ಎಲ್ಲರೂ ಚಿಪ್ಸ್ ಪ್ಯಾಕೆಟ್ ಸಿಕ್ಕಿದರೆ, ಪ್ಯಾಕೆಟ್ ಹರಿದು ಒಳಗಿದ್ದ ಕರುಂಕುರುಂ ಚಿಪ್ಸನ್ನು ಖರೀದಿಸಿದಷ್ಟೇ ವೇಗವಾಗಿ ಖಾಲಿ ಮಾಡುವ ಬಗ್ಗೆ ಯೋಚಿಸುತ್ತಾರೆ. ನೂರರಲ್ಲಿ ತೊಂಬತ್ತೆಂಟು ಮಂದಿ ತಿಂದು ಬಿಟ್ಟು ಖಾಲಿಯಾದ ಪ್ಯಾಕೆಟ್ಟನ್ನು ಕಸದ ಬುಟ್ಟಿಗೆಸೆಯುವುದೇ ಹೆಚ್ಚು. ಮತ್ತಿದು ಕಸದ ರಾಶಿಯೊಂದಿಗೆ ಹೋಗಿ ಭೂಮಿಗೆ ಎಂದೆಂದಿಗೂ ಭಾರವೇ. ಆದರೆ ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಈ ಭೂಮಿಗೆ ಭಾರವಾಗಿರುವ ಚಿಪ್ಸ್ ಪ್ಯಾಕೆಟ್ ಎಂಬ ಕಸದ ಬಗ್ಗೆ ಗಂಭೀರವಾಗಿ ಯೋಚಿಸುತ್ತಾರೆ. ಇಂತಹ ಪ್ಲಾಸ್ಟಿಕ್ ವೇಸ್ಟನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದೆಂದು ಎಂದು ತಲೆಕೆಡಿಸಿಕೊಳ್ಳುತ್ತಾರೆ. ಇಲ್ಲೊಬ್ಬರು ನಡೆಸಿದ ಇಂತಹ ಸಂಶೋಧನೆಯ (innovation) ಫಲವಾಗಿ ಖಾಲಿ ಚಿಪ್ಸ್ ಪ್ಯಾಕೆಟ್ ಎಂಬ ಕಸ ಟ್ರೆಂಡೀ ಕನ್ನಡಕವಾಗಿ ಪರಿವರ್ತನೆಯಾಗಿ ಮರುಬಳಕೆಯಾಗಿದೆ!
ಹೌದು, ಚಿಪ್ಸ್ ಪ್ಯಾಕೆಟ್‌ನಿಂದ ಕನ್ನಡಕವೇ ಎಂದು ಹುಬ್ಬೇರಿಸಬೇಡಿ. ನೀವು ಏರಿಸಿದ ಹುಬ್ಬಿನ ನಡುವೆ ಕೂರಿಸಲು ಇನ್ನು ಚಿಪ್ಸ್ ಪ್ಯಾಕೆಟ್ಟಿನ ಟ್ರೆಂಡೀ ಸನ್ ಗ್ಲಾಸನ್ನು ನೀವಿನ್ನು ದುಡ್ಡು ಕೊಟ್ಟು ಖರೀದಿಸಬಹುದು!
ಪುಣೆ ಮೂಲದ ಆಶಯ ಎಂಬ ಸಂಸ್ಥೆಯೊಂದು ಚಿಪ್ಸ್ ಪ್ಯಾಕೆಟ್‌ನಿಂದ ವಿಶ್ವದಲ್ಲೇ ಮೊದಲ ಬಾರಿಗೆ ಕನ್ನಡಕವನ್ನು ತಯಾರಿಸಿದೆ. ಕಳೆದೆರಡು ವರ್ಷಗಳಿಂದ ತನ್ನದೇ ಆದ ಸಣ್ಣ ಪ್ರಯೋಗ ಶಾಲೆಯಲ್ಲಿ ಈ ಬಗ್ಗೆ ಸತತ ಸಂಶೋಧನೆಗಳನ್ನು ನಡೆಸುವ ಮೂಲಕ ಇದು ಕೊನೆಗೂ ತನ್ನ ಪರಿಶ್ರಮಕ್ಕೆ ತಕ್ಕ ಫಲ ಕಂಡಿದೆ. ಮಲ್ಟಿ ಲೇಯರ್ ಪ್ಲಾಸ್ಟಿಕ್ (ಎಂಎಲ್‌ಪಿ) ಹಾಗೂ ಚಿಪ್ಸ್ ಪ್ಯಾಕೆಟ್‌ಗಳನ್ನು ಸಂಸ್ಕರಿಸಿ ಯುವಿ- ಪೋಲೈಸ್ಡ್ ಕನ್ನಡಕವನ್ನು ತಯಾರಿಸುವಲ್ಲಿ ಯಶಸ್ವಿಯಾಗಿದೆ.
ಆಶಯ ಸಂಸ್ಥೆಯ ಸಂಸ್ಥಾಪಕ ಅನೀಶ್ ಮಲ್ಪಾನಿ ಟ್ವಿಟರ್‌ನಲ್ಲಿ ತಮ್ಮ ಈ ಯಶೋಗಾಥೆಯನ್ನು ಹಂಚಿಕೊಂಡಿದ್ದು, ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ʻಈ ಸಂಶೋಧನೆ ಕಳೆದ ಎರಡು ವರ್ಷ ತಾನು ಸವೆಸಿದ ಅತ್ಯಂತ ಕ್ಲಿಷ್ಟಕರ ಹಾದಿಯಾಗಿದ್ದು, ಕೊನೆಗೂ ಈ ಕಷ್ಟಕ್ಕೆ ಫಲ ಸಿಕ್ಕಿದೆ ಎಂದು ಅತೀವ ಸಂತಸವಾಗುತ್ತಿದೆ. ವಿಶ್ವದ ಮೊತ್ತಮೊದಲ ಪ್ಲಾಸ್ಟಿಕ್ ಸಂಸ್ಕರಿತ ಸನ್‌ಗ್ಲಾಸ್ ಇದಾಗಿದ್ದು, ಭಾರತದಲ್ಲಿ ಇದು ನಮ್ಮಿಂದ ಸಾಧ್ಯವಾಗಿರುವುದಕ್ಕೆ ಬಹಳ ಸಂತೋಷವಾಗುತ್ತಿದೆʼ ಎಂದು ಸಂತಸ ಹಂಚಿಕೊಂಡಿದ್ದಾರೆ.
ಈ ತಂತ್ರಜ್ಞಾನದ ಬಗ್ಗೆ ವಿವರಗಳನ್ನೂ ಮಲ್ತಾನಿ ಅವರು ಹಂಚಿಕೊಂಡಿದ್ದು, ಕೇವಲ ಕನ್ನಡಕವಲ್ಲದೆ, ಚಿಪ್ಸ್ ಪ್ಯಾಕೆಟ್‌ನಿಂದ ತಯಾರಿಸಬಹುದಾದ ಅನೇಕ ಸಾಧ್ಯತೆಗಳನ್ನು ನಾವು ಕಂಡುಕೊಳ್ಳುತ್ತಿದ್ದೇವೆ. ಕೋಸ್ಟರ್‌ಗಳು, ಸರಳ ಪ್ಯಾಕೇಜಿಂಗ್ ವಸ್ತುಗಳು, ಸೇರಿದಂತೆ ಹಲವು ತಯಾರಿಕೆಯ ಬಗ್ಗೆ ಯೋಜನೆ ರೂಪಿಸಿದ್ದೇವೆ. ಆ ಮೂಲಕ, ಜಗತ್ತಿನಲ್ಲಿ ಸಂಗ್ರಹವಾಗುವ ಚಿಪ್ಸ್ ಪ್ಯಾಕೆಟ್‌ನ ಕಸಕ್ಕೂ ನಮ್ಮ ಕೈಲಾದಷ್ಟು ಮುಕ್ತಿ ನೀಡಿ ಭೂಮಿಯನ್ನು ಉಳಿಸುವೆಡೆ ನಮ್ಮ ಪುಟ್ಟ ಕಾಣಿಕೆ ನೀಡುತ್ತಿರುವ ಕನಸು ನನಸಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: Viral Video: ಮಗನ ಸವಾಲಿನಲ್ಲಿ ಗೆದ್ದ ತಾಯಿ; ಭೌತಶಾಸ್ತ್ರವಿದ್ದರೆ ಎಲ್ಲವೂ ಸಾಧ್ಯ ಎನ್ನುತ್ತಿದ್ದಾರೆ ನೆಟ್ಟಿಗರು
ಮಲ್ಟಿ ಲೇಯರ್ ಪ್ಲಾಸ್ಟಿಕ್ಕನ್ನು ಸಂಸ್ಕರಿಸುವುದು ಬಹಳ ಕಷ್ಟ ಹಾಗೂ ಸಾಧ್ಯವೇ ಇಲ್ಲ ಎಂಬ ನಂಬಿಕೆ ಮಾರುಕಟ್ಟೆಯಲ್ಲಿದೆ. ಈವರೆಗೆ ಅದಕ್ಕೆ ಯಾರೂ ಕೈ ಹಾಕಿಲ್ಲ. ಇದು ಜಗತ್ತಿನಲ್ಲಿ ಸಂಸ್ಕರಣೆಯಾಗದ ಪ್ಲಾಸ್ಟಿಕ್. ಶೇ.೮೦ರಷ್ಟು ಪ್ಲಾಸ್ಟಿಕ್ ಸಾಗರಕ್ಕೂ ಸೋರಿಕೆಯಾಗುತ್ತಿರುವುದು ಅತ್ಯಂತ ಖೇದಕರ. ಇದನ್ನು ನಾವು ಮೊದಲ ಬಾರಿಗೆ ಪ್ರಯತ್ನಿಸಿದ್ದೇವೆ. ಇದರಿಂದ ಕನ್ನಡಕದ ಫ್ರೇಮನ್ನು ತಯಾರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಈ ಕನ್ನಡಕದಲ್ಲಿರುವ ವಿಶೇಷವೆಂದರೆ, ಕನ್ನಡಕದಲ್ಲಿರುವ ಕ್ಯು ಆರ್ ಕೋಡ್ ಮೂಲಕ ನಾವು ಖರೀದಿಸಿದ ಕನ್ನಡಕಕ್ಕಾಗಿ ಯಾರೆಲ್ಲ ಶ್ರಮಿಸಿದ್ದಾರೆ, ಇದರಲ್ಲಿ ಬಳಸಲಾದ ಕಸ ಎಲ್ಲಿಂದ ಬಂದಿದೆ ಹಾಗೂ ಯಾರೆಲ್ಲ ಈ ಕಸ ಹೆಕ್ಕಿದ್ದಾರೆ ಎಂಬ ವಿವರಗಳನ್ನು ಓದಬಹುದಂತೆ! ಆ ಮೂಲಕ ನಾವು ಧರಿಸುವ ಕನ್ನಡಕದ ಹಿಂದಿರುವ ಶ್ರಮ ಹಾಗೂ ಕಥೆಯನ್ನೂ ತಿಳಿದುಕೊಳ್ಳಬಹುದು. ಈ ಕನ್ನಡಕವನ್ನು ಆರ್ಡರ್ ಮಾಡಿ ತರಿಸಿಕೊಂಡರೂ, ಪ್ಲಾಸ್ಟಿಕ್ ರಹಿತ ಪ್ಯಾಕೇಜಿಂಗ್ ಮೂಲಕವೇ ಈ ಸಂಸ್ಥೆ ಕನ್ನಡಕವನ್ನು ನಮ್ಮ ಮನೆ ಬಾಗಿಲಿಗೆ ಕಳಿಸುತ್ತದಂತೆ. ಒಟ್ಟಾರೆ, ಪ್ಲಾಸ್ಟಿಕ್ ಮುಕ್ತ ಹಾಗೂ ಸಂಸ್ಕರಣೆಯ ಮೂಲಕ ಭೂಮಿಗೆ ಒಳಿತನ್ನೇ ಮಾಡುವ ವಿಚಾರಕ್ಕೆ ಬದ್ಧವಾಗಿ ಈ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಗೆ ಲಿಪ್ ಕಿಸ್ ನೀಡಿದ ಯುವತಿ; ವಿಡಿಯೊ ವೈರಲ್
ಪ್ರಮುಖ ಸುದ್ದಿ
Price hike : ನಾಳೆಯಿಂದ ಯಾವುದು ದುಬಾರಿ, ಯಾವುದು ಅಗ್ಗ, ಹೊಸ ಬದಲಾವಣೆ ಏನು?
ಕೇಂದ್ರ ಸರ್ಕಾರ 2023-24ರ ಬಜೆಟ್‌ನಲ್ಲಿ ಘೋಷಿಸಿರುವ ತೆರಿಗೆ ಬದಲಾವಣೆಗಳು ಏಪ್ರಿಲ್ 1ರಿಂದ ಜಾರಿಯಾಗುತ್ತವೆ. ಇದರ ಪರಿಣಾಮ ಕೆಲ ವಸ್ತುಗಳು ದುಬಾರಿಯಾದರೆ, ಕೆಲವು ಅಗ್ಗವಾಗಲಿವೆ. (Price hike) ವಿವರ ಇಲ್ಲಿದೆ.
ನವ ದೆಹಲಿ: ಕೇಂದ್ರ ಸರ್ಕಾರ 2023-24ರ ಬಜೆಟ್‌ನಲ್ಲಿ ಘೋಷಿಸಿರುವ ತೆರಿಗೆ ಬದಲಾವಣೆಗಳು ಏಪ್ರಿಲ್ 1ರಿಂದ ಜಾರಿಯಾಗುತ್ತಿವೆ. ಇದರ ಪರಿಣಾಮ ಏಪ್ರಿಲ್ 1ರಿಂದ ಕೆಲವು ವಸ್ತುಗಳು ದುಬಾರಿಯಾಗುತ್ತವೆ. ( Price hike) ಮತ್ತೆ ಕೆಲವು ಅಗ್ಗವಾಗಲಿದೆ. ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ 2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಆಮದು ಸುಂಕವನ್ನು 2023-24ರ ಬಜೆಟ್‌ನಲ್ಲಿ ಹೆಚ್ಚಿಸಿದೆ. ಜತೆಗೆ ಹೊಸ ನಿಯಮಾವಳಿಗಳೂ ಜಾರಿಯಾಗಲಿವೆ. ಇವೆಲ್ಲವುಗಳ ವಿವರ ಇಲ್ಲಿದೆ.
ಯಾವುದು ದುಬಾರಿ?
ಎಲ್‌ಇಡಿ ಬಲ್ಬ್, ಸಿಗರೇಟ್, ಖಾಸಗಿ ಜೆಟ್, ಹೆಲಿಕಾಪ್ಟರ್, ಹೈ-ಎಂಡ್ ಎಲೆಕ್ಟ್ರಾನಿಕ್ ಉತ್ಪನ್ನಗಳು, ಪ್ಲಾಸ್ಟಿಕ್ ವಸ್ತುಗಳು, ಬೆಳ್ಳಿ, ಇಮಿಟೇಶನ್ ಜ್ಯುವೆಲ್ಲರಿ, ಚಿನ್ನದ ಗಟ್ಟಿ, ಪ್ಲಾಟಿನಮ್, ಹೈ-ಗ್ಲಾಸ್ ಪೇಪರ್, ಕಿಚನ್ ಚಿಮಿಣಿಗಳು, ವಿಟಮಿನ್‌ಗಳು ದುಬಾರಿಯಾಗಲಿವೆ. ದೇಶೀಯ ವಿಮಾನ ಪ್ರಯಾಣಕ್ಕೆ ಸಂಬಂಧಿಸಿ ಸೆಕ್ಯುರಿಟಿ ಶುಲ್ಕವು 160 ರೂ.ಗಳಿಂದ 200 ರೂ.ಗೆ ಏರಿಕೆಯಾಗಿದೆ.
ಔಷಧಗಳ ದರ ಏರಿಕೆ: ಏ.1ರಿಂದ ಗ್ರಾಹಕರು ಹಲವಾರು ಪೇನ್‌ಕಿಲ್ಲರ್ಸ್, ಆಂಟಿ ಬಯೋಟಿಕ್ಸ್ ಔಷಧಗಳ ದರ ಏರಿಕೆಯನ್ನು ಎದುರಿಸಲಿದ್ದಾರೆ. ಇವುಗಳ ದರದಲ್ಲಿ 12% ತನಕ ಹೆಚ್ಚಳ ನಿರೀಕ್ಷಿಸಲಾಗಿದೆ. ರಾಷ್ಟ್ರೀಯ ಔಷಧ ದರ ಪ್ರಾಧಿಕಾರವು ಸಗಟು ಹಣದುಬ್ಬರ ಸೂಚ್ಯಂಕವನ್ನು ಆಧರಿಸಿ ದರಗಳನ್ನು ನಿಯಂತ್ರಿಸುತ್ತದೆ.
ಕಾರುಗಳ ದರ ಹೆಚ್ಚಳ: ಟಾಟಾ ಮೋಟಾರ್ಸ್, ಹೋಂಡಾ ಕಾರ್ಸ್, ಹೀರೋಮೋಟೊಕಾರ್ಪ್ ಸೇರಿದಂತೆ ಆಟೊಮೊಬೈಲ್ ವಲಯದ ಕಂಪನಿಗಳು ಕಾರುಗಳ ದರಗಳನ್ನು ಏಪ್ರಿಲ್ 1 ರಿಂದ ಏರಿಸುತ್ತಿವೆ. BS6 ಮಾಲಿನ್ಯ ನಿಯಂತ್ರಣ ನಿಯಮಗಳ ಎರಡನೇ ಹಂತ ಏ.1ರಿಂದ ಜಾರಿಯಾಗುತ್ತಿದೆ. ಇದರಿಂದ ಎಲ್ಲ ಹೊಸ ವಾಹನಗಳು ಬಿಗಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹೀಗಾಗಿ ಹೊಸ ಕಾರುಗಳು ತುಟ್ಟಿಯಾಗಬಹುದು.
ಎಕ್ಸ್ -ರೇ ಮೆಶೀನ್ ದುಬಾರಿ: ಸರ್ಕಾರ ಎಕ್ಸ್ -ರೇ ಮೆಶೀನ್‌ಗಳ (X-ray machine) ಆಮದು ಸುಂಕದಲ್ಲಿ 2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ 15% ಏರಿಸಿದೆ. 2023ರ ಹಣಕಾಸು ವಿಧೇಯಕದ ತಿದ್ದುಪಡಿಗೆ ಅನುಸಾರವಾಗಿ ಕಸ್ಟಮ್ಸ್ ಸುಂಕದಲ್ಲಿ ಬದಲಾವಣೆ ತರಲಾಗಿದೆ. ಪ್ರಸ್ತುತ ಪೋರ್ಟಬಲ್ ಎಕ್ಸ್-ರೇ ಮೆಶೀನ್ ಮತ್ತು ನಾನ್-ಪೋರ್ಟೆಬಲ್ ಎಕ್ಸ್-ರೇ ಮೆಶೀನ್ 10% ಆಮದು ಸುಂಕವನ್ನು ಹೊಂದಿವೆ.
ಯಾವುದು ಅಗ್ಗ : ಮೊಬೈಲ್ ಫೋನ್, ಭಾರತದಲ್ಲಿ ಉತ್ಪಾದನೆಯಾಗುವ ಸ್ಮಾರ್ಟ್‌ಫೋನ್‌ನ ಬಿಡಿಭಾಗಗಳು, ಟಿ.ವಿ, ಆಟಿಕೆಗಳು, ಸೈಕಲ್, ಲಿಥಿಯಂ ಬ್ಯಾಟರಿ, ಎಲ್‌ಇಡಿ ಟಿವಿ, ಎಲೆಕ್ಟ್ರಿಕ್ ವಾಹನ, ಕ್ಯಾಮೆರಾ ಲೆನ್ಸ್ ಮೇಲಿನ ಸುಂಕ ಇಳಿಕೆಯ ಪರಿಣಾಮ ಇವುಗಳ ದರ ಇಳಿಕೆ ನಿರೀಕ್ಷಿಸಲಾಗಿದೆ.
ಪೇಮೆಂಟ್ ಬ್ಯಾಂಕ್ ಶುಲ್ಕ: ಅಂಚೆ ಇಲಾಖೆಯು ತನ್ನ ಪೇಮೆಂಟ್ ಬ್ಯಾಂಕ್‌ನಲ್ಲಿ 10,000 ರೂ.ಗಿಂತ ಹೆಚ್ಚಿನ ಠೇವಣಿ ಇಡಲು ಹಾಗೂ 25,000 ರೂ.ಗಿಂತ ಹೆಚ್ಚಿನ ವಿತ್ ಡ್ರಾವಲ್ಸ್‌ಗೆ ಶುಲ್ಕ ಅನ್ವಯವಾಗಲಿದೆ.
ಗೃಹ ಸಾಲ, ಹಿರಿಯ ನಾಗರಿಕರ ಎಫ್‌ಡಿ ದರದಲ್ಲಿ ಬದಲಾವಣೆ
ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ತಮ್ಮ ಗ್ರಾಹಕರಿಗೆ ನೀಡುವ ಗೃಹ ಸಾಲದ ದರದಲ್ಲಿ ಏರಿಕೆಯಾಗಲಿದೆ. ಹಲವು ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ನೀಡುತ್ತಿರುವ ಹಿರಿಯ ನಾಗರಿಕರ ಠೇವಣಿ ಯೋಜನೆಗಳನ್ನು ಹಿಂತೆಗೆದುಕೊಳ್ಳುತ್ತಿವೆ. ಉದಾಹರಣೆಗೆ ಎಸ್‌ಬಿಐನ ವಿ ಕೇರ್ ಡೆಪಾಸಿಟ್ ಸ್ಕೀಮ್ ಯೋಜನೆ ಸ್ಥಗಿತವಾಗಲಿದೆ.
ಆದಾಯ ತೆರಿಗೆ ಇಲಾಖೆಯು ಬುಧವಾರ 2023-24 ಸಾಲಿಗೆ ( ಮೌಲ್ಯ ಮಾಪನಾ ವರ್ಷ-Assessment year 2023-24) ಆದಾಯ ತೆರಿಗೆ ರಿಟರ್ನ್ (Income Tax Return -ITR) ಫಾರ್ಮ್‌ಗಳನ್ನು ಬಿಡುಗಡೆಗೊಳಿಸಿದೆ. ಏಪ್ರಿಲ್ 1ರಿಂದ ಇದು ಜಾರಿಗೆ ಬರಲಿದೆ. ತೆರಿಗೆದಾರರ ಅನುಕೂಲಕ್ಕಾಗಿ ಎರಡು ತಿಂಗಳು ಮೊದಲೇ ಅಧಿಸೂಚನೆಗೊಳಿಸಲಾಗಿದೆ.
ಐಟಿಆರ್ ಫಾರ್ಮ್‌ಗಳಲ್ಲಿ ಬದಲಾವಣೆ:
ತೆರಿಗೆದಾರರಿಗೆ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಅನ್ನು ಸುಲಭವಾಗಿಸಲು ಐಟಿಆರ್ ಫಾರ್ಮ್‌ಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಗಣನೀಯ ಬದಲಾವಣೆ ಮಾಡಿಲ್ಲ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (Central Board Direct Taxes) ಕಳೆದ ಫೆಬ್ರವರಿ 10ರಂದು ಐಟಿಆರ್ ಫಾರ್ಮ್‌ಗಳ (1-6) ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ವೈಯಕ್ತಿಕ ತೆರಿಗೆದಾರರು, ವೃತ್ತಿಪರರು, ಬಿಸಿನೆಸ್ ನಡೆಸುವವರಿಗೆ ಐಟಿಆರ್ ಅರ್ಜಿ ನಮೂನೆಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಅರ್ಜಿ ನಮೂನೆಗಳು 2023ರ ಏಪ್ರಿಲ್ 1ರಿಂದ ಲಭಿಸಲಿವೆ.
ಐಟಿಆರ್ ಫಾರ್ಮ್ 1 (ಸಹಜ್) ಮತ್ತು ಐಟಿಆರ್ ಫಾರ್ಮ್ 4 (ಸುಗಮ್) ಭಾರಿ ಸಂಖ್ಯೆಯಲ್ಲಿ ಸಣ್ಣ ಮತ್ತು ಮಧ್ಯಮ ತೆರಿಗೆದಾರರಿಗೆ ಅನ್ವಯವಾಗುತ್ತದೆ. 50 ಲಕ್ಷ ರೂ. ತನಕ ಆದಾಯ ಇರುವವರು (ವೇತನ, ಒಂದು ವಸತಿ ಪ್ರಾಪರ್ಟಿ, 5,000 ರೂ. ತನಕ ಕೃಷಿ ಮೂಲದ ಆದಾಯ ಇರುವವರು, ಬಡ್ಡಿ ಮತ್ತು ಇತರ ಮೂಲಗಳಿಂದ ಆದಾಯ) ಐಟಿಆರ್-1 ಅನ್ನು ಭರ್ತಿ ಮಾಡಬೇಕು. 50 ಲಕ್ಷ ರೂ. ತನಕ ಆದಾಯ ಇರುವ ಕಂಪನಿಗಳು ಐಟಿಆರ್-4 ಅನ್ನು ಬಳಸಬೇಕು. ವಸತಿ ಆಸ್ತಿಗಳ ಮೂಲಕ ಆದಾಯ ಗಳಿಸುವವರು ಐಟಿಆರ್-2 ಅನ್ನು ಬಳಸಬೇಕು. ವೃತ್ತಿಪರರು ಐಟಿಆರ್-3 ಅನ್ನು ಭರ್ತಿಗೊಳಿಸಬೇಕು. ಐಟಿಆರ್-5, ಐಟಿಆರ್-6 ಅನ್ನು ಎಲ್‌ಎಲ್‌ಪಿಗಳು (ಲಿಮಿಟೆಡ್ ಲಾಯಬಿಲಿಟಿ ಪಾರ್ಟನರ್‌ಶಿಪ್) ಮತ್ತು ಬಿಸಿನೆಸ್ ನಡೆಸುವವರು ಬಳಸಬಹುದು. ಟ್ರಸ್ಟ್‌ಗಳು, ರಾಜಕೀಯ ಪಕ್ಷಗಳು, ಚಾರಿಟೆಬಲ್ ಸಂಸ್ಥೆಗಳು ಐಟಿಆರ್ ಫಾರ್ಮ್ 7 ಅನ್ನು ಬಳಸಬಹುದು.
ಚಿನ್ನಾಭರಣ ಮಾರಾಟಕ್ಕೆ ಹಾಲ್ ಮಾರ್ಕ್ ಕಡ್ಡಾಯ
ಏಪ್ರಿಲ್ 1ರಿಂದ ಹಾಲ್ ಮಾರ್ಕ್ ಇಲ್ಲದ (Hallmark Unique Identification- HUID) ಆಭರಣಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ತಿಳಿಸಿದೆ. ಗ್ರಾಹಕರ ಹಿತದೃಷ್ಟಿಯಿಂದ ಮಾರ್ಚ್ 31ರ ಬಳಿಕ ಹಾಲ್ ಮಾರ್ಕ್ ರಹಿತ ಚಿನ್ನಾಭರಣಗಳ ಮಾರಾಟಕ್ಕೆ ಅನುಮತಿ ಇರುವುದಿಲ್ಲ ಎಂದು ಇಲಾಖೆ ಹೇಳಿದೆ. ಹೀಗಾಗಿ ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಉಪಯುಕ್ತ ಮಾಹಿತಿ ಇಲ್ಲಿದೆ. ಈ ಹಿಂದೆ 4 ಅಂಕಿಗಳ ಎಚ್‌ಯುಐಡಿ ಬಳಸಲಾಗುತ್ತಿತ್ತು. ಈಗ 4 ಮತ್ತು 6 ಅಂಕಿಗಳನ್ನು ಬಳಸಲಾಗುತ್ತಿದೆ. ಆದರೆ ಮಾರ್ಚ್ 31ರ ಬಳಿಕ 6 ಅಂಕಿಗಳ ಕೋಡ್ ಮಾತ್ರ ಬಳಕೆಯಾಗಲಿದೆ.
ದೇಶ
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ 25 ಸಾವಿರ ರೂ. ದಂಡ!
Gujarat High Court: ಪ್ರಧಾನಿ ಮೋದಿ ಅವರ ಶೈಕ್ಷಣಿಕ ಸರ್ಟಿಫಿಕೇಟ್‌ಗಳನ್ನು ಒದಗಿಸುವ ಅವಶ್ಯಕತೆ ಇಲ್ಲ ಎಂದು ಹೇಳಿರುವ ಗುಜರಾತ್ ಹೈಕೋರ್ಟ್, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ದಂಡ ವಿಧಿಸಿ, ಆದೇಶ ಹೊರಡಿಸಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶಿಕ್ಷಣ ಅರ್ಹತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಗುಜರಾತ್ ಹೈಕೋರ್ಟ್ (Gujarat High Court) 25 ಸಾವಿರ ದಂಡ ವಿಧಿಸಿದೆ. ಪ್ರಧಾನಿ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿ ಸರ್ಟಿಫಿಕೇಟ್‌ಗಳನ್ನು ಪ್ರಧಾನಿ ಕಾರ್ಯಾಲಯವು(PMO) ಒದಗಿಸುವ ಅಗತ್ಯವಿಲ್ಲ ಎಂದು ಹೇಳಿರುವ ಗುಜರಾತ್ ಹೈಕೋರ್ಟ್, ಆರ್‌ಟಿಐನಡಿ ಮಾಹಿತಿ ಕೇಳಿದ್ದ ಅರವಿಂದ್ ಕೇಜ್ರಿವಾಲ್‌ಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ವಿವರಗಳನ್ನು ಒದಗಿಸುವಂತೆ ಪ್ರಧಾನಿ ಕಾರ್ಯಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ(PIO) ಮತ್ತು ವಿಶ್ವವಿದ್ಯಾಲಯಗಳ ಸಾರ್ವಜನಿಕ ಮಾಹಿತಿ ಅಧಿಕಾರಿ(PIO)ಗಳಿಗೆ ಮಾಹಿತಿ ಆಯೋಗದ ಮುಸ್ಥರು(CIC) ಆದೇಶಿಸಿದ್ದರು. ಈ ಆದೇಶವನ್ನು ಗುಜರಾತ್‌ನ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರಿ ಪೀಠವು ರದ್ದು ಮಾಡಿದೆ. ಇದೇ ವೇಳೆ, ಪ್ರಧಾನಿ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಪದವಿಗಳನ್ನು ಪತ್ರಗಳನ್ನು ಪೂರೈಸುವಂತೆ ಮಾಹಿತಿ ಕೇಳಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ 25 ಸಾವಿರ ದಂಡ ವಿಧಿಸಿದೆ.
ಸಿಐಸಿ ಆದೇಶವನ್ನು ಪ್ರಶ್ನಿಸಿ ಗುಜರಾತ್ ವಿಶ್ವವಿದ್ಯಾಲಯವು ಹೈಕೋರ್ಟ್ ಮೊರೆ ಹೋಗಿತ್ತು.
ದೇಶ
Ram Navami Violence: ಗುಜರಾತ್, ಬಂಗಾಳದಲ್ಲಿ ರಾಮನವಮಿ ಹಿಂಸಾಚಾರ; 60 ಜನರ ಬಂಧನ, ರಾಜಕೀಯ ಮೇಲಾಟ
Ram Navami Violence: ರಾಮನವಮಿ ಹಿನ್ನೆಲೆಯಲ್ಲಿ ರಾಮನ ಮೂರ್ತಿಯ ಮೆರವಣಿಗೆ ಮಾಡುವಾಗ ಪಶ್ಚಿಮ ಬಂಗಾಳ, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಹಿಂಸಾಚಾರ ನಡೆದಿದೆ. ಕಲ್ಲುತೂರಾಟ ಕೂಡ ನಡೆದಿದ್ದು, ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲ್ಕೊತಾ/ಗಾಂಧಿನಗರ: ಪಶ್ಚಿಮ ಬಂಗಾಳ ಹಾಗೂ ಗುಜರಾತ್‌ನಲ್ಲಿ ರಾಮನವಮಿ ದಿನವೇ ಭಾರಿ ಹಿಂಸಾಚಾರ (Ram Navami Violence) ನಡೆದಿದ್ದು, ಗುಜರಾತ್‌ನಲ್ಲಿ 24 ಮಂದಿಯನ್ನು ಬಂಧಿಸಲಾಗಿದೆ. ಬಂಗಾಳದಲ್ಲೂ 36 ಜನರನ್ನು ಬಂಧಿಸಲಾಗಿದೆ. ಹಾಗೆಯೇ, ನೂರಾರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬಂಗಾಳದ ಹೌರಾದಲ್ಲಂತೂ ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಗುಜರಾತ್‌ನ ವಡೋದರಾದಲ್ಲೂ ಹಿಂಸಾಚಾರ ನಡೆದಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹಾಗೆಯೇ, ಇದು ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. ಅತ್ತ, ಮಹಾರಾಷ್ಟ್ರದ ಹಲವೆಡೆಯೂ ಹಿಂಸಾಚಾರದ ಪ್ರಕರಣಗಳು ವರದಿಯಾಗಿವೆ.
ಬಂಗಾಳದಲ್ಲಿ ಶುಕ್ರವಾರವೂ ಗಲಭೆ
ಹೌರಾದ ಶಿಬ್‌ಪುರದಲ್ಲಿ ಶುಕ್ರವಾರವೂ ಗಲಾಟೆ ಮುಂದುವರಿದಿದ್ದು, ಪೊಲೀಸ್ ವಾಹನಗಳಿಗೇ ಬೆಂಕಿ ಹಚ್ಚಲಾಗಿದೆ. ಕಲ್ಲು ತೂರಾಟ, ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ಸೇರಿ ಹಲವು ರೀತಿಯಲ್ಲಿ ಹಿಂಸಾಚಾರ ನಡೆಸಲಾಗಿದೆ. ಶಿಬ್‌ಪುರವೊಂದರಲ್ಲಿಯೇ ಪೊಲೀಸರು 36 ಜನರನ್ನು ಬಂಧಿಸಿದ್ದು, ನೂರಾರು ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ರಾಮನವಮಿ ಮೆರವಣಿಗೆ ವೇಳೆ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಬಳಿಕ ಗಲಭೆ ಉಂಟಾಗಿದೆ ಎಂದು ತಿಳಿದುಬಂದಿದೆ. ಇದಾದ ಬಳಿಕ ಪೊಲೀಸರಿಗೂ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದಷ್ಟು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.
ಬಂಗಾಳದಲ್ಲಿ ಹಿಂಸಾಚಾರದ ದೃಶ್ಯ
ಬಿಜೆಪಿ-ಟಿಎಂಸಿ ಮಧ್ಯೆ ವಾಕ್ಸಮರ
ಪಶ್ಚಿಮ ಬಂಗಾಳದಲ್ಲಿ ಭಾರಿ ಕಲ್ಲುತೂರಾಟದಿಂದಾಗಿ ಅಂಗಡಿ-ಮುಂಗಟ್ಟು, ಜನರ ಆಸ್ತಿಪಾಸ್ತಿಗೆ ಹಾನಿಯಾಗಿರುವ ಪ್ರಕರಣವೀಗ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಹೌರಾದಲ್ಲಿ ನಡೆದ ಹಿಂಸಾಚಾರಕ್ಕೆ ಹಿಂದುಗಳೂ ಕಾರಣವಲ್ಲ, ಮುಸ್ಲಿಮರೂ ಕಾರಣವಲ್ಲ. ಬಿಜೆಪಿ ಹಾಗೂ ಬಜರಂಗದಳದ ಕಾರ್ಯಕರ್ತರು ರಾಮನವಮಿ ಮೆರವಣಿಗೆ ವೇಳೆ ಪ್ರಚೋದನೆ ನೀಡಿದ ಕಾರಣ ಹಿಂಸಾಚಾರ ನಡೆದಿದೆ. ಗಲಭೆ ವೇಳೆ ಯಾರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆಯೋ, ಅವರಿಗೆ ನೆರವು ನೀಡಲಾಗುತ್ತದೆ” ಎಂದು ತಿಳಿಸಿದರು. ಅತ್ತ, ಬಿಜೆಪಿಯು ಗಲಭೆಗೆ ಟಿಎಂಸಿಯ ದುರಾಡಳಿತವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಚಾವಣಿ ಮೇಲೆ ನಿಂತು ಕಲ್ಲು ತೂರಾಟ
ಗುಜರಾತ್‌ನ ವಡೋದರ ನಗರದಲ್ಲಿ ರಾಮನ ಮೂರ್ತಿಯ ಮೆರವಣಿಗೆ ವೇಳೆ ಚಾವಣಿ ಮೇಲೆ ನಿಂತು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಫತೇಪುರ ಪ್ರದೇಶದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಶ್ರೀರಾಮ ಮೂರ್ತಿಯ ಮೆರವಣಿಗೆ ಆಯೋಜಿಸಿದ್ದರು. ಇದೇ ವೇಳೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ ಕಾರಣ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗಲಭೆಯಿಂದಾಗಿ ಹಲವರು ಗಾಯಗೊಂಡಿದ್ದು, ಇನ್ನೂ ಹಲವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದಕ್ಕೂ ಮೊದಲು ನಡೆದ ಮೆರವಣಿಗೆ ವೇಳೆಯೂ ಪಿತೂರಿ ನಡೆಸಿ ಕಲ್ಲು ತೂರಾಟ ಮಾಡಲಾಗುತ್ತಿತ್ತು. ಈಗಲೂ ಪಿತೂರಿ ನಡೆಸಲಾಗಿದೆ ಎಂದು ಬಜರಂಗದಳದ ಮುಖಂಡರು ಆರೋಪಿಸಿದ್ದಾರೆ.
ಇದನ್ನೂ ಓದಿ: Karnataka Elections: ನನ್ನ ರಾಮ ಅಂತಃಕರಣ ಸ್ವರೂಪಿ, ನಿಮಗೆ ರಾಮ ಚುನಾವಣೆ ಸರಕು: ಸಿದ್ದು, ಬಿಜೆಪಿ ನಡುವೆ ರಾಮನವಮಿ ಫೈಟ್
ಕರ್ನಾಟಕ
Siddaramaiah: ಕೋಲಾರದಿಂದಲೂ ಸಿದ್ದರಾಮಯ್ಯ ಸ್ಪರ್ಧೆ: ರಾಹುಲ್ ಗಾಂಧಿಯಿಂದಲೇ ಘೋಷಣೆಗೆ ಮುಹೂರ್ತ?
ಕೋಲಾರದಿಂದ ಮಾತ್ರ ಸ್ಪರ್ಧೆ ಎನ್ನುತ್ತಿದ್ದ ಸಿದ್ದರಾಮಯ್ಯ, ವರುಣಾ ಕ್ಷೇತ್ರದಲ್ಲಿ ಸ್ಪರ್ಧೆಯನ್ನು ಈಗಾಗೆಲ ಖಚಿತಪಡಿಸಿದ್ದಾರೆ.
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದ ಜತೆಗೆ ಕೋಲಾರದಿಂದಲೂ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ರಾಹುಲ್ ಗಾಂಧಿಯವರಿಂದಲೇ ಈ ಘೋಷಣೆಯಾಗುವ ಸಾಧ್ಯತೆಯಿದೆ.
ಈ ಬಗ್ಗೆ ಈಗಾಗಲೇ ಸುರ್ಜೇವಾಲಾ ಜತೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಟೀಮ್ ಈಗಾಗಲೆ ಕೋಲಾರದಲ್ಲಿ ಕಾರ್ಯ ನಡೆಸುತ್ತಿದೆ. ಬಗೆಹರಿಯದ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣ ಜಗಳದ ಕಾರಣಕ್ಕೆ ಕೋಲಾರದಿಂದ ಸ್ಪರ್ಧೆ ಬೇಡ ಎಂದು ಸಿದ್ದರಾಮಯ್ಯ ನಿರ್ಧರಿಸಿದ್ದರು.
ಆದರೆ ನಂತರದಲ್ಲಿ ದೇವನಹಳ್ಳಿಯಿಂದ ಮುನಿಯಪ್ಪ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಟಿಕೆಟ್ ಘೋಷಣೆ ನಂತರ ದೇವನಹಳ್ಳಿಯಲ್ಲೇ ಮುನಿಯಪ್ಪ ಠಿಕಾಣಿ ಹೂಡಿದ್ದು, ಅವರ ಸಂಪೂರ್ಣ ತಂಡ ಸಹ ಅಲ್ಲಿಗೇ ತೆರಳಿದೆ. ಈ ಕಾರಣಕ್ಕೆ ಕೋಲಾರದಿಂದಲೂ ಸ್ಪರ್ಧೆಗೆ ಸಿದ್ದರಾಮಯ್ಯ ಒಲವು ತೋರಿದ್ದಾರೆ.
ಆದರೆ ಸಿದ್ದರಾಮಯ್ಯಗೆ ಎರಡು ಕ್ಷೇತ್ರ ಕೊಡುವ ಬಗ್ಗೆ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಅಪಸ್ವರ ಎತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೀಸೋದರಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಅನುಕೂಲ ಎನ್ನುವ ವಾದವನ್ನು ಅನೇಕರು ಮುಂದೆ ಇಟ್ಟಿದ್ದಾರೆ.
ಏಪ್ರಿಲ್ ಮೊದಲ ವಾರದಲ್ಲಿ ರಾಹುಲ್ ಗಾಂಧಿ ಕೋಲಾರಕ್ಕೆ ಆಗಮಿಸಲಿದ್ದಾರೆ. 2019ರಲ್ಲಿ ಕೋಲಾರದಲ್ಲಿ ಮೋದಿ ಕುರಿತು ಮಾಡಿದ ಭಾಷಣಕ್ಕೆ ಇತ್ತೀಚೆಗೆ ಲೋಕಸಭೆ ಸ್ಥಾನದಿಂದ ಅನರ್ಹರಾಗಿರುವ ರಾಹುಲ್ ಗಾಂಧಿ, ಕೋಲಾರದಲ್ಲೇ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲೇ ಸಿದ್ದರಾಮಯ್ಯ ಅವರ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Congress ticket : ವರುಣಾ ಜತೆ ಕೋಲಾರದಲ್ಲೂ ಸ್ಪರ್ಧೆ ಮಾಡ್ತೀನಿ; ಖಚಿತಪಡಿಸಿದ ಸಿದ್ದರಾಮಯ್ಯ
-
ಸುವಚನ11 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ8 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ17 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ9 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ವೈರಲ್ ನ್ಯೂಸ್24 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ20 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್20 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ
-
ಕರ್ನಾಟಕ24 hours ago
Karnataka Election 2023: ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ; ತಪ್ಪಿದರೆ ಸದಾನಂದ?