Ugadi 2023: ಹಬ್ಬಗಳೆಂಬ ಸಂಭ್ರಮ: ಹೆಚ್ಚು ತಿನ್ನುವುದಕ್ಕೆ ಕಡಿವಾಣ ಹೇಗೆ? - Vistara News

ಆರೋಗ್ಯ

Ugadi 2023: ಹಬ್ಬಗಳೆಂಬ ಸಂಭ್ರಮ: ಹೆಚ್ಚು ತಿನ್ನುವುದಕ್ಕೆ ಕಡಿವಾಣ ಹೇಗೆ?

ಹಬ್ಬಗಳನ್ನು ಆಚರಿಸಿಕೊಂಡೂ, ಹೆಚ್ಚುವರಿ ತಿನಿಸುಗಳ ಕಡೆಗೆ ಮನಸ್ಸು ಚಂಚಲವಾಗದಂತೆ ನೋಡಿಕೊಳ್ಳುವುದು ಹೇಗೆ? ಕಣ್ಣಮುಂದೆ ಹಲವಾರು ಸಿಹಿತಿನಿಸುಗಳಿದ್ದರೂ, ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳುವುದು ಹೇಗೆ?

VISTARANEWS.COM


on

festive diet
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಬ್ಬಗಳು ಬಂದರೆ ಸಾಕು ಎಲ್ಲಿಲ್ಲದ ಸಡಗರ. ಹಬ್ಬಗಳ ಆಚರಣೆಗಳ ಜೊತೆಗೆ ಎಲ್ಲವ ಪ್ರಮುಖ ಆಕರ್ಷಣೆಯೆಂದರೆ ಅದು ಸಿಹಿತಿನಿಸು. ಎಲ್ಲರ ಮನೆಗಳಲ್ಲೂ ರಾಶಿ ರಾಶಿ ತಿಂಡಿ ಡಬ್ಬಗಳು, ಸಿಹಿತಿಂಡಿಗಳು ಇದ್ದೇ ಇರುತ್ತವೆ. ಮಂಗನ ಉಪವಾಸದ ಹಾಗೆ ನಮ್ಮೆಲ್ಲ ಡಯಟ್‌ ಯೋಜನೆಗಳು, ಯೋಚನೆಗಳು ಹಳ್ಳ ಹಿಡಿಯುತ್ತವೆ. ಇನ್ನೆರಡು ತಿಂಗಳಲ್ಲಿ ಇಂತಿಷ್ಟು ಕೆಜಿ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ನಮಗೆ ನಾವೇ ಹಾಕಿಕೊಂಡಿದ್ದ ಗುರಿಗಳು ಮರೆತುಹೋಗುತ್ತವೆ. ʻಹಬ್ಬ ಬರುವಾಗ ತಿನ್ನದೆ ಕೂರುವುದಾದರೂ ಹೇಗೆ? ಅಷ್ಟಕ್ಕೂ ಹಬ್ಬ ಇರುವುದಾದರೂ ಏತಕ್ಕೆ?ʼ ಎಂದು ನಮಗೆ ನಾವೇ ಸಮಜಾಯಿಶಿ ಕೊಟ್ಟುಕೊಂಡು ʻಈಗ ತಿನ್ನದೆ ಇನ್ಯಾವತ್ತು ತಿನ್ನುವುದು, ಇರುವುದೊಂದೇ ಜೀವನ ಎಂದುಕೊಂಡು ಬಾಯಿಗಿಟ್ಟು ಚಪ್ಪರಿಸುತ್ತೇವೆ. ಇನ್ನೂ ಬಹಳಷ್ಟು ಮನೆಗಳಲ್ಲಿ ಹಬ್ಬಕ್ಕೆಂದು ನೆಂಟರಿಷ್ಟರ, ಗೆಳೆಯರ ಮನೆಗಳಿಂದ ಬರುವ ಸಿಹಿತಿನಿಸಿನ ಡಬ್ಬಗಳು ಮನೆಯಲ್ಲಿ ಕಣ್ಣಮುಂದೆ ಕಾಣಿಸಿದಾಗಲೆಲ್ಲ ತಿನ್ನುವ ಬಯಕೆಯಾಗುತ್ತದೆ. ಕೈ ನಿರಾಯಾಸವಾಗಿ ತಿಂಡಿಡಬ್ಬವನ್ನು ಹುಡುಕುತ್ತದೆ. ಕೊನೆಗೆ ಕಷ್ಟಪಟ್ಟು ತಿಂಗಳಿಂದ ಇಳಿಸಿಕೊಂಡ ತೂಕ ದಿಢೀರ್‌ ಏರಿಕೆಯಾಗಿ, ತಿಂಗಳ ಹಿಂದಿಂದ ಪಾಲಿಸಿಕೊಂಡು ಬಂದ ಶ್ರಮ, ಗುರಿ ಎಲ್ಲವೂ ವ್ಯರ್ಥವಾಗುತ್ತದೆ. ಇದು ಬಹುತೇಕರ ಸಮಸ್ಯೆ!

ಒಂದು ನಿಗದಿತ ತೂಕಕ್ಕಿಂತ ಹೆಚ್ಚು ತೂಕವನ್ನು ಪಡೆಯಲು ಆರಂಭಿಸಿದಾಗಿನಿಂದಲೇ ಆರೋಗ್ಯ ಸಂಬಂಧೀ ತೊಂದರೆಗಳು ಒಂದೊಂದಾಗಿ ಆರಂಭವಾಗಲು ತೊಡಗುತ್ತವೆ. ಹೆಚ್ಚು ತಿನ್ನುವುದರಿಂದ ಎದೆಯುರಿ, ಹೊಟ್ಟೆಯುಬ್ಬರದಂತಹ ತಾತ್ಕಾಲಿಕ ತೊಂದರೆಗಳು ಕಾಣಿಸಿಕೊಳ್ಳುವುದಷ್ಟೇ ಅಲ್ಲ. ಬೊಜ್ಜು, ಕೊಲೆಸ್ಟೆರಾಲ್‌ ಸಮಸ್ಯೆಗಳೂ ತಲೆದೋರಲು ಆರಂಭವಾಗಿ ಒಂದರ ಹಿಂದೆ ಒಂದರಂತೆ ಆರೋಗ್ಯ ಸಮಸ್ಯೆಗಳೂ ಹಿಂಬಾಲಿಸುತ್ತವೆ.

ಹಾಗಾದರೆ, ಹಬ್ಬಗಳನ್ನು ಆಚರಿಸಿಕೊಂಡೂ, ಹೆಚ್ಚುವರಿ ತಿನಿಸುಗಳ ಕಡೆಗೆ ಮನಸ್ಸು ಚಂಚಲವಾಗದಂತೆ ನೋಡಿಕೊಳ್ಳುವುದು ಹೇಗೆ? ಕಣ್ಣಮುಂದೆ ಹಲವಾರು ಸಿಹಿತಿನಿಸುಗಳಿದ್ದರೂ, ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳುವುದು ಹೇಗೆ? ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿ ಕಾಡಲಾರಂಭಿಸಿದರೂ, ನಿಜವಾಗಿ ಪ್ರಯತ್ನಪಟ್ಟರೆ, ಸ್ವಲ್ಪ ಮಟ್ಟಿಗಾದರೂ ನಿಗ್ರಹ ಸಾಧ್ಯವಿದೆ. ಪ್ರಯತ್ನಿಸಿ ನೋಡಿ.

1 ನಿಧಾನವಾಗಿ ತಿನ್ನಿ: ಹಬ್ಬದಡುಗೆ ರುಚಿಯಾಗಿದೆಯೆಂದು, ಬಕಬಕನೆ ಉಣ್ಣಲು ತೊಡಗಬೇಡಿ. ಊಟ ನಿಧಾನವಾಗಿ ಸಾಗಲಿ. ಬೇಡವೆಂದು ಖಡಾಖಂಡಿತವಾಗಿ ನಿರಾಕರಿಸಿದರೆ, ಮತ್ತಷ್ಟು ಬೇಕೆನಿಸುವ ಬಯಕೆ ಹೆಚ್ಚಾಗಿ ಹೆಚ್ಚು ತಿನ್ನುವ ಮೂಲಕ ಅಡ್ಡ ಪರಿಣಾಮಗಳೇ ಹೆಚ್ಚಾಗುವ ಸಂಭವ ಇದೆ. ಅದಕ್ಕಾಗಿ, ತಿನ್ನಬೇಕೆನಿಸಿದಾಗ ತಿನ್ನಿ. ಆದರೆ ಮಿತವಾಗಿರಲಿ. ನಿಧಾನವಾಗಿ ತಿನ್ನುವ ಮೂಲಕ ಮಿದುಳಿಗೆ ನಾವು ತಿನ್ನುವ ಪದಾರ್ಥದ ಬಗೆಗೆ ಜಾಗೃತಿಯೂ ಮೂಡುವುದಲ್ಲದೆ, ರುಚಿಯೂ ಸರಿಯಾಗಿ ಪ್ರಾಪ್ತವಾಗಿ ಸಂತೃಪ್ತಿಯ ಭಾವ ಬರುತ್ತದೆ. ನಮ್ಮ ದೇಹಕ್ಕೆ ನಿಜವಾಗಿ ಅಗತ್ಯವಿದ್ದಷ್ಟೇ ತಿನ್ನಲು ಸಹಾಯವಾಗುತ್ತದೆ.

ugadi 2023 know history significance celebrations and more about the festival in kannada

2. ಹಬ್ಬದ ರಜೆಯಾಗಿದ್ದರೂ ಒಂದು ಶಿಸ್ತನ್ನು ರೂಢಿಸಿಕೊಳ್ಳಿ. ತಿನ್ನುವ ಸಮಯ, ವ್ಯಾಯಾಮ, ಇತರ ಕೆಲಸಗಳು ಹೀಗೆ ಪ್ರತಿಯೊಂದೂ ಆಯಾ ಸಮಯಕ್ಕೆ ಸರಿಯಾಗಿ ಆಗಲಿ. ಹಬ್ಬದ ರಜೆಯೆಂದು ಬೆಳಗ್ಗೆ ಎಷ್ಟೋ ಹೊತ್ತಿಗೆ ಎದ್ದು ಸರಿಯಾದ ಸಮಯಕ್ಕೆ ಸರಿಯಾದ ಆಹಾರ ಸಿಗದಿದ್ದಾಗ, ಹೆಚ್ಚು ತಿನ್ನುವ ಚಾಳಿಗೆ ಬಲಿ ಬೀಳುತ್ತೇವೆ. ಇಂಥ ಸಂದರ್ಭವೇ ಅನಗತ್ಯ ಸಿಹಿ, ಕುರುಕಲು ತಿಂಡಿಗಳು ಹೊಟ್ಟೆಗೆ ಸೇರುವ ಸಂಭವ ಹೆಚ್ಚಿದೆ.

ಇದನ್ನೂ ಓದಿ: PM Modi: ಯುಗಾದಿ ಹಬ್ಬಕ್ಕೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ; ಕನ್ನಡಿಗರಿಗಾಗಿ ಕನ್ನಡದಲ್ಲೇ ಟ್ವೀಟ್​

3. ಯಾವುದು ಬೇಕೋ ಅದನ್ನು ಮಾತ್ರ ತಿನ್ನಿ. ಪಕ್ಕದ ಮನೆಯವರು ಕೊಟ್ಟರು, ನೆಂಟರು ತಂದರು, ಮುಗಿಸಬೇಕು ಎಂಬ ಕಾರಣಕ್ಕೆ ಹೆಚ್ಚುವರಿ ತಿನ್ನಬೇಡಿ. ಯಾಕೆ ಬೇಕು, ಎಷ್ಟು ಬೇಕು ಎಂಬುದು ನಿಮಗೆ ಸರಿಯಾಗಿ ಗೊತ್ತಿರುವುದರಿಂದ ಅಷ್ನ್ನು ಮಾತ್ರ ಹೊಟ್ಟೆಗಿಳಿಸಿ. ಮುಗಿಸಬೇಕು ಎಂಬ ಒತ್ತಡಕ್ಕೆ ಕಟ್ಟುಬೀಳುವುದನ್ನು ಮಾಡಬೇಡಿ.

4. ಆರೋಗ್ಯಕರವಲ್ಲದ ತಿನಿಸುಗಳನ್ನು ಕಣ್ಣಿಗೆ ಮೊದಲು ಕಾಣುವಂತೆ ಇಡಬೇಡಿ. ಕಣ್ಣಿಗೆ ಕಾಣುವ ತಿಂಡಿಗಳು ಎಷ್ಟು ಆಕರ್ಷಿಸುತ್ತವೆಯೆಂದರೆ, ಅಗತ್ಯವಿಲ್ಲದಿದ್ದರೂ, ಮನೆಯೊಳಗೆ ಅತ್ತಿಂದಿತ್ತ, ಇತ್ತಿದತ್ತ ಸಂಚರಿಸುವಾಗಲೂ ಸುಮ್ಮನೆ ತಿನ್ನಲು ತೊಡಗುತ್ತೇವೆ. ಇದರಿಂದ ಅಗತ್ಯವಿಲ್ಲದಿದ್ದರೂ ಹಾಳುಮೂಳು ತಿಂಡಿ ಹೊಟ್ಟೆ ಸೇರುತ್ತದೆ. ಹಾಗಾಗಿ ಈ ಬಗ್ಗೆ ಜಾಗ್ರತೆಯಿರಲಿ.

5. ಹಬ್ಬ ಮುಗಿದ ಮೇಲೆ ಸರಿ ಮಾಡಿಕೊಂಡರಾಯಿತು ಎಂಬ ಯೋಚನೆಯಿಂದ ತಿನ್ನಬೇಡಿ. ಹಬ್ಬ ಮುಗಿದ ಮೇಲೆ ಕಡಿಮೆ ತಿನ್ನುತ್ತೇನೆ, ಡಯಟ್‌ ಮಾಡುತ್ತೇನೆ ಎಂದುಕೊಂಡರೆ ಅದು ಆಗದ ಕೆಲಸ. ಅದಕ್ಕಾಗಿ ಮೊದಲೇ ನಿಮ್ಮ ಮೇಲೆ ಕಡಿವಾಣವಿಡಿ. ಹಬ್ಬವೆಂದು ಕೇವಲ ಜಂಕ್‌, ಸಿಹಿತಿನಿಸನ್ನು ತಿನ್ನುವ ಮೊದಲು ಯೋಚಿಸಿ. ಇವುಗಳ ಜೊತೆಗೆ ಆರೋಗ್ಯಕರ ಶಿಸ್ತಿನ ಊಟದ ಅಭ್ಯಾಸವನ್ನೂ ಇಟ್ಟುಕೊಳ್ಳಿ. ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿ. ಸ್ವಪ್ರಯತ್ನವಿದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ನೆನಪಿಡಿ.

ಇದನ್ನೂ ಓದಿ: Ugadi 2023: ಯುಗಾದಿಯಂದು ಬೆಲ್ಲ ಮಾತ್ರವಲ್ಲ, ಬೇವನ್ನೂ ತಿನ್ನಲೇಬೇಕು. ಯಾಕೆಂದರೆ..

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

medical negligence: ನವಜಾತ ಶಿಶುವನ್ನು ಬಿಸಿನೀರಲ್ಲಿ ಮುಳುಗಿಸಿ ಚರ್ಮ ಕಾಯಿಲೆ ಕಥೆ ಕಟ್ಟಿದ್ದ ಆಸ್ಪತ್ರೆಗೆ 10 ಲಕ್ಷ ದಂಡ!

Medical Negligence: ಹುಬ್ಬಳ್ಳಿಯ ಖಾಸಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ನವಜಾತ ಶಿಶುವನ್ನು ಸ್ನಾನ ಮಾಡಿಸುವ ಸಂದರ್ಭದಲ್ಲಿ ಕುದಿಯುತ್ತಿದ್ದ ನೀರಿಗೆ ಅದ್ದಿದ್ದ ಪರಿಣಾಮ ಸುಟ್ಟ ಗಾಯಗಳಾಗಿತ್ತು. ಇದನ್ನು ಮರೆಮಾಚಲು ಆಸ್ಪತ್ರೆ ವೈದ್ಯರು ಚರ್ಮ ಕಾಯಿಲೆಯ ನೆಪ ಹೇಳಿದ್ದರು. ಈ ಪ್ರಕರಣ ಸಂಬಂಧ ಗ್ರಾಹಕರ ನ್ಯಾಯಾಲಯದಿಂದ ತೀರ್ಪು ಬಂದಿದ್ದು, ಆಸ್ಪತ್ರೆಗೆ 10 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ.

VISTARANEWS.COM


on

Medical negligence Hospital fined Rs 10 lakh for drowning newborn baby in hot water
Koo

ಧಾರವಾಡ: ನವಜಾತ ಶಿಶುವನ್ನು (Newborn baby in Hubballi) ಬಿಸಿನೀರಿನಲ್ಲಿ ಮುಳುಗಿಸಿದ ಪರಿಣಾಮ ತೀವ್ರ ಸುಟ್ಟ ಗಾಯಗಳಾಗಿದ್ದು, ಅದನ್ನು ಮರೆಮಾಚಲು ಚರ್ಮ ರೋಗದ (Skin disease) ಕಥೆ ಕಟ್ಟಿದ್ದ ಹುಬ್ಬಳ್ಳಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ (Multispeciality Hospital in Hubballi) ಗ್ರಾಹಕ ನ್ಯಾಯಾಲಯವು (Consumer Court) 10 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದೆ.

ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ.ಅಜಿತ್ ಎಸ್.ಜೋಶಿ, ಡಾ.ಪ್ರಕಾಶ್ ಮಾಡಲಗೇರಿ ಮತ್ತು ಡಾ.ವಿದ್ಯಾ ಜೋಶಿ ಅವರಿಗೆ ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರವನ್ನು ಪಾವತಿಸುವಂತೆ ಫೆಬ್ರವರಿ 15 ರಂದು ನಿರ್ದೇಶನ ನೀಡಿದೆ. ಕುಟುಂಬಕ್ಕೆ 7.5 ಲಕ್ಷ ರೂ.ಗಳನ್ನು ಪಾವತಿಸುವಂತೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ಗೆ ನಿರ್ದೇಶನ ನೀಡಿದೆ.

ಆಸ್ಪತ್ರೆಯ ಸಹಾಯಕಿ ನಾಲ್ಕು ದಿನದ ಮಗುವನ್ನು ಬಿಸಿನೀರಿನ ಟಬ್‌ನಲ್ಲಿ ಕೂರಿಸಿದ್ದ ಪರಿಣಾಮ ಶಿಶುವಿಗೆ ಸುಟ್ಟ ಗಾಯವಾಗಿತ್ತು. ಈ ತಪ್ಪನ್ನು ಮರೆಮಾಚಲು ಮಗುವಿಗೆ ಎಪಿಡರ್ಮೊಲಿಸಿಸ್‌ ಬುಲ್ಲೋಸಾ ಎಂಬ ಚರ್ಮ ರೋಗ ಇರಬಹುದು ಎಂದು ಆಸ್ಪತ್ರೆ ವೈದ್ಯರು ತಪ್ಪು ಮಾಹಿತಿಯನ್ನು ನೀಡಿದ್ದರು. ಇದನ್ನು ಪ್ರಶ್ನಿಸಿದ್ದ ಶಿಶುವಿನ ಪೋಷಕರು ಆಸ್ಪತ್ರೆ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗದ ಮೊರೆಹೋಗಿದ್ದರು. ಈಗ ಪ್ರಕರಣದ ತೀರ್ಪು ಬಂದಿದ್ದು 10 ಲಕ್ಷ ರೂಪಾಯಿಯನ್ನು ಪರಿಹಾರದ ರೂಪವಾಗಿ ನೀಡುವಂತೆ ಆದೇಶಿಸಿದೆ.

ದಂಡ ಪಾವತಿಸಲು ತಪ್ಪಿದರೆ ವಾರ್ಷಿಕ ಶೇ.8ರ ಬಡ್ಡಿ

ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ವಿಶಾಲಾಕ್ಷಿ ಅ. ಬೋಳಶೆಟ್ಟಿ ಹಾಗೂ ಪ್ರಭು ಸಿ.ಹಿರೇಮಠ ಅವರು ಆದೇಶ ನೀಡಿದ್ದಾರೆ. ಕೃತ್ಯ ನಡೆದ ಅವಧಿಯಲ್ಲಿ ವಿಮೆ ಚಾಲ್ತಿಯಲ್ಲಿ ಇದ್ದಿದ್ದರಿಂದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಯು ಪರಿಹಾರದ ಶೇ. 75 ಭಾಗ ಹಾಗೂ ಬಾಕಿ ಶೇ. 25 ಭಾಗವನ್ನು ಆಸ್ಪತ್ರೆಯವರು ಪಾವತಿಸಬೇಕು. ತೀರ್ಪು ನೀಡಿದ ದಿನದಿಂದ ತಿಂಗಳೊಳಗಾಗಿ 10 ಲಕ್ಷ ಪರಿಹಾರವನ್ನು ನೀಡಬೇಕು. ತಪ್ಪಿದ್ದಲ್ಲಿ ಪರಿಹಾರ ಮೊತ್ತಕ್ಕೆ ವಾರ್ಷಿಕ ಶೇ. 8ರ ಬಡ್ಡಿಯನ್ನು ಲೆಕ್ಕಹಾಕಿ ಕೊಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏನಿದು ಪ್ರಕರಣ?

ಹುಬ್ಬಳ್ಳಿಯ ಜೆ.ಪಿ.ನಗರ, ಗೋಕುಲ ರಸ್ತೆ ನಿವಾಸಿ ವಿನಯ ಹಂಜಿ ಎಂಬುವವರು 2019 ಡಿಸೆಂಬರ್‌ 10ರಂದು ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಪತ್ನಿ ರೇಖಾ ಅವರನ್ನು ದಾಖಲಿಸಿದ್ದರು. ಅಂದೇ ರೇಖಾ ಅವರಿಗೆ ಹೆರಿಗೆಯಾಗಿದ್ದು, ಹೆಣ್ಣು ಮಗು ಜನಿಸಿತ್ತು.

ಡಿ.14ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಬೇಕಿತ್ತು. ಆದರೆ, ಆ ವೇಳೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಬಿಸಿ ಬಿಸಿ ಕುದಿಯುವ ನೀರಿದ್ದ ಟಬ್‍ನಲ್ಲಿ ಮಗುವನ್ನು ಸ್ನಾನಕ್ಕೆ ಕೂರಿಸಿದ್ದರಿಂದ ಪೃಷ್ಠದ ಭಾಗ ಸುಟ್ಟು ಚರ್ಮ ಸುಲಿದಿತ್ತು. ಈ ವಿಷಯವನ್ನು ಮನಗಂಡ ಮಗುವಿನ ಪೋಷಕರು ಈ ಬಗ್ಗೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಅಜಿತ್ ಜೋಶಿ, ಡಾ. ವಿದ್ಯಾ ಜೋಶಿ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.

ಆದರೆ, ಇದನ್ನು ಒಪ್ಪದ ಆಸ್ಪತ್ರೆಯವರು ಚರ್ಮ ರೋಗ ಎಂದು ಹೇಳಿತ್ತು. ಚರ್ಮರೋಗ ತಜ್ಞ ಡಾ. ರಂಜನ್ ಜೀವನ್ನವರ ಮಗುವನ್ನು ತಪಾಸಣೆ ಮಾಡಿ ಅದಕ್ಕೆ ಎಪಿಡರ್ಮೊಲೀಸಿಸ್ ಬುಲ್ಲೋಸಾ(ಇ.ಬಿ) ಚರ್ಮ ರೋಗ ಇರಬಹುದು ಎಂದು ಹೇಳಿ, ಬೆಂಗಳೂರಿನ ಹ್ಯೂಮನ್‍ಜೆನಟಿಕ್ ಸೆಂಟರ್‌ನಲ್ಲಿ ಜೆನಟಿಕ್ ಪರೀಕ್ಷೆಗೆ ಒಳಪಡಿಸಲು ಸೂಚಿಸಿದರು ಎನ್ನಲಾಗಿದೆ.

ವಿನಯ ಹಂಜಿ ಅವರು ಪತ್ನಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿಸಿಕೊಂಡು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಿದ್ದರು. ಎಸ್‌ಡಿಎಂ ಆಸ್ಪತ್ರೆಯಲ್ಲಿ ಇದು ಚರ್ಮ ರೋಗ ಅಲ್ಲ, ಸುಟ್ಟ ಗಾಯ ಎಂದು ದೃಢಪಡಿಸಿದ್ದಲ್ಲದೆ, ಮಗುವಿನ ಚರ್ಮದ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಿದ್ದರು. ಬಳಿಕ ಮಗು ಗುಣಮುಖವಾಗಿತ್ತು.

ಗ್ರಾಹಕರ ಆಯೋಗದ ಮೊರೆ ಹೋಗಿದ್ದ ವಿನಯ್

ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದ ಸಲಹೆ ಬಗ್ಗೆ ಬೇಸರಗೊಂಡ ವಿನಯ ಹಂಜಿ, ಹುಬ್ಬಳ್ಳಿಯ ಸಿಟಿ ಕ್ಲಿನಿಕ್, ಏಳು ವೈದ್ಯರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆಸ್ಪತ್ರೆಗೆ ವಿಮೆ ನೀಡಿದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಯನ್ನು ಒಂಬತ್ತನೇ ಪ್ರತಿವಾದಿಯನ್ನಾಗಿ ಮಾಡಲಾಗಿತ್ತು.

ಇದನ್ನೂ ಓದಿ: BBMP Tax: ಏಪ್ರಿಲ್ 1ರಿಂದ ಬೆಂಗಳೂರಲ್ಲಿ ಹೊಸ ಆಸ್ತಿ ತೆರಿಗೆ; ಎಲ್ಲೆಲ್ಲಿ ದುಪ್ಪಟ್ಟು ಟ್ಯಾಕ್ಸ್? ಬಾಡಿಗೆದಾರರಿಗೆ ಭಾರಿ ಬರೆ!

ವಿಚಾರಣೆಯಲ್ಲಿ ಆಸ್ಪತ್ರೆ ನಿರ್ಲಕ್ಷ್ಯ ಸಾಬೀತು

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಗ್ರಾಹಕರ ಆಯೋಗಕ್ಕೆ ಎಪಿಡರ್ಮೊಲಿಸಿಸ್‌ ಬುಲ್ಲೋಸಾ ಚರ್ಮ ಕಾಯಿಲೆ ಇರಬಹುದು ಎಂದು ಸುಳ್ಳು ಹೇಳಿರುವುದು ಗೊತ್ತಾಗಿದೆ. “ಇದು ಆಸ್ಪತ್ರೆ ಸಿಬ್ಬಂದಿಯ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಉತ್ತಮ ಉದಾಹರಣೆಯಾಗಿದೆ. ಇಂತಹ ಸ್ಪಷ್ಟ ನಿರ್ಲಕ್ಷ್ಯ ಮತ್ತು ತಪ್ಪುಗಳ ಹೊರತಾಗಿಯೂ, ಆಸ್ಪತ್ರೆ ವೈದ್ಯರು, ಸುಟ್ಟ ಗಾಯಗಳಿಗೆ ಸರಿಯಾದ ಚಿಕಿತ್ಸೆ ನೀಡುವ ಮೂಲಕ ಸಂತ್ರಸ್ತ ಮಗುವಿನ ಪೋಷಕರಾದ ದೂರುದಾರ, ಅವರ ಪತ್ನಿಯನ್ನು ಸಮಾಧಾನಪಡಿಸಬೇಕಾಗಿತ್ತು. ಹಾಗೆ ಮಾಡುವ ಬದಲು ಅವರು ಎಪಿಡರ್ಮೊಲಿಸಿಸ್‌ ಬುಲ್ಲೋಸಾ ಚರ್ಮ ಕಾಯಿಲೆ ಎಂದು ಬಣ್ಣಿಸಲು ಪ್ರಯತ್ನಿಸಿದ್ದಾರೆ. ಇದು ಅಕ್ಷಮ್ಯವಾಗಿದೆ. ಇದರಿಂದ ಮಗುವಿನ ಪೋಷಕರು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಬಳಲುವಂತೆ ಆಗಿದೆ. ಈ ಹಿನ್ನೆಲೆಯಲ್ಲಿ 10ಲಕ್ಷ ರೂಪಾಯಿ ದಂಡವನ್ನು ಪಾವತಿ ಮಾಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Continue Reading

ಆರೋಗ್ಯ

Health Tips: 40 ವರ್ಷ ದಾಟಿದ ಮಹಿಳೆಯರು ಆರೋಗ್ಯ ವಿಚಾರದಲ್ಲಿ ಏಕೆ ಎಚ್ಚರ ವಹಿಸಬೇಕೆಂದರೆ…

40 ವರ್ಷ ದಾಟಿದ ಮಹಿಳೆ ತನ್ನ ಆರೋಗ್ಯದ (Health Tips) ಯಾವ ವಿಚಾರಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಿಕೊಳ್ಳಬೇಕು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

40 year old woman
Koo

ಮಹಿಳೆಯ ದೇಹ ಮಾಗುತ್ತಾ ಮಾಗುತ್ತಾ ಬಹಳಷ್ಟು ಬದಲಾವಣೆಗಳಿಗೆ ಒಳಗಾಗುವುದರಿಂದ 40 ವರ್ಷ ದಾಟುತ್ತಿದ್ದ ಹಾಗೆಯೇ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನೂ ಆಕೆ ಅನುಭವಿಸಬೇಕಾಗುತ್ತದೆ. ವಯಸ್ಸಾಗುವಿಕೆಯಿಂದ ಆರಂಭವಾಗುವ ಈ ಸಮಸ್ಯೆಗಳಿಗೆ ಬೇರೆ ವಿಚಾರಗಳ ಪ್ರಭಾವವೂ ಇರುತ್ತದೆ. ಉದಾಹರಣೆಗೆ ಆಕೆಯ ಜೀವನಶೈಲಿ, ಆಹಾರಕ್ರಮ, ಆಕೆಯ ಅಭ್ಯಾಸಗಳು ಇತ್ಯಾದಿ ಇತ್ಯಾದಿಗಳು ಆರೋಗ್ಯದ ಮೇಲೆ ನಲವತ್ತರ ನಂತರ (Health Tips) ಪರಿಣಾಮ ಬೀರಲಾರಂಭಿಸುತ್ತದೆ. 40 ದಾಟಿದ ತಕ್ಷಣ ಮಹಿಳೆ ತನ್ನ ಆರೋಗ್ಯದ ಕಾಳಜಿಯನ್ನು (Health Tips) ತುಸು ಹೆಚ್ಚೇ ಮಾಡಬೇಕು. ಮುಖ್ಯವಾಗಿ ಮಹಿಳೆಯ ಹಾರ್ಮೋನಿನಲ್ಲಿ ಈ ಸಂದರ್ಭ ಬದಲಾವಣೆಗಳಾಗುವುದರಿಂದ, ಮೆನೋಪಾಸ್‌ ಅಥವಾ ಋತುಬಂಧದ ಆರಂಭವಾಗುವ ಸನಿಹಕ್ಕೆ ಬರುವುದರಿಂದ ದೇಹದ ಶಕ್ತಿ ಕುಗ್ಗುತ್ತದೆ. ಹಾಗಾಗಿ ಮಹಿಳೆ ತನ್ನ ಆರೋಗ್ಯದತ್ತ ಈ ಸಂದರ್ಭ ಗಮನ ಹರಿಸುವುದು ಒಳಿತು. ಬನ್ನಿ, ಪ್ರತಿ 40 ದಾಟಿದ ಮಹಿಳೆ ತನ್ನ ಆರೋಗ್ಯದ ಯಾವ ವಿಚಾರಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಿಕೊಳ್ಳಬೇಕು ಎಂಬುದನ್ನು ನೋಡೋಣ.

Kidney Stones Signs

ಕಿಡ್ನಿಯಲ್ಲಿ ಕಲ್ಲು

ಮೂತ್ರನಾಳ ಅಥವಾ ಕೋಶದಲ್ಲಿ ಖನಿಜಲವಣಗಳು ಕಲ್ಲಿನ ರೂಪದಲ್ಲಿ ಸಂಗ್ರಹವಾಗುವ ಸಮಸ್ಯೆ. ಇದು ಅತ್ಯಂತ ನೋವನ್ನು ನೀಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಸಾಮಾನ್ಯವಾಗಿ ಕಿಡ್ನಿಯಲ್ಲಿ ಕಲ್ಲು ಅಥವಾ ಸ್ಟೋನ್‌ ಪುರುಷರಲ್ಲಿ ಹೆಚ್ಚೆಂದು ಹೇಳಿದರೂ, ಮಹಿಳೆಯರಲ್ಲೂ ಇದು ಕಾಣಿಸಿಕೊಳ್ಳುತ್ತದೆ. ಸೊಂಟದ ಸಮೀಪ ತೀವ್ರ ನೋವು, ಕಿಬ್ಬೊಟ್ಟೆಯಲ್ಲಿ ವಿಪರೀತ ನೋವು, ಮೂತ್ರದಲ್ಲಿ ರಕ್ತ, ವಾಂತಿ, ಕೆಟ್ಟ ವಾಸನೆಯ ಮೂತ್ರ ಇತ್ಯಾದಿ ಕಿಡ್ನಿಸ್ಟೋನ್‌ನ ಸಾಮಾನ್ಯ ಲಕ್ಷಣಗಳು. ಹೆಚ್ಚು ನೀರು ಕುಡಿಯುವುದು ಇಲ್ಲಿ ಬಹಳ ಮುಖ್ಯ.

Image Of Anti Infective Foods

ಸಂಧಿವಾತ

ಮಹಿಳೆಯರಲ್ಲಿ ನಲುವತ್ತು ದಾಟಿದ ಮೇಲೆ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆಗಳಲ್ಲಿ ಇದೂ ಒಂದು. ಮೂಳೆಯ ಸಾಂದ್ರತೆ ಕುಸಿಯುವುದರಿಂದ ಆಗುವ ನಿಃಶಕ್ತಿ, ಮೂಳೆಗಳಲ್ಲಿ ನೋವು, ಗಂಟುಗಳ ಬಿಗಿತ, ಸಂದಿಗಳಲ್ಲಿ ನೋವು ಇತ್ಯಾದಿ ಇತ್ಯಾದಿ ಸಮಸ್ಯೆಗಳು ಇದರಲ್ಲಿ ಕಾಣಿಸಿಕೊಳ್ಳುತ್ತವೆ.

Diabetes control

ಮಧುಮೇಹ

ಮಹಿಳೆಗೆ ನಲುವತ್ತು ದಾಟಿದ ಕೂಡಲೇ ಮಧುಮೇಹದ ಅಪಾಯವೂ ಇರುತ್ತದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಏರಿಕೆ, ಇದರೆಂದಾಗಿ ತಲೆಸುತ್ತು, ಕೈಕಾಲು ನಡುಕ, ನಿಃಶಕ್ತಿ, ಕಣ್ಣು ಮಂಜಾಗುವುದು, ತೂಕ ಇಳಿಕೆ, ಒಸಡುಗಳು ಮೆದುವಾಗುವುದು ಇತ್ಯಾದಿ ಸಮಸ್ಯೆಗಳು ಆರಂಭವಾಗುತ್ತದೆ.

Bone Health In Winter

ಮೂಳೆ ಸವೆತ

40ರ ನಂತರ ಮೂಳೆಗಳ ಸಮಸ್ಯೆ ಮಹಿಳೆಯರಲ್ಲಿ ಸಾಮಾನ್ಯವಾಗುತ್ತದೆ. ಮೂಳೆಯ ಸಾಂದ್ರತೆ ಕಡಿಮೆಯಾಗುವುದಲ್ಲದೆ, ಸವೆತವೂ ಕೆಲವರಲ್ಲಿ ಆರಂಭವಾಗುತ್ತದೆ. ಸಂದಿಗಳಲ್ಲಿ ವಿಪರೀತ ನೋವು ಹಾಗೂ ಸೆಳೆತ, ಸೊಂಟ ನೋವು, ಬೆನ್ನು ನೋವು, ಕಾಲು ನೋವುಗಳು ಹೆಚ್ಚಾಗುತ್ತವೆ. ಮೂಳೆ ಮುರಿತದಂತಹ ಸಮಸ್ಯೆಯೂ ಕೆಲವರಿಗೆ ಬರಬಹುದು. ಹಾಗಾಗಿ 40 ದಾಟಿದ ಮಹಿಳೆ ವೈದ್ಯರನ್ನು ಸಂಪರ್ಕಿಸಿ, ಸಲಹೆ ಸ್ವೀಕರಿಸಿ, ಕ್ಯಾಲ್ಶಿಯಂ ಹಾಗೂ ವಿಟಮಿನ್‌ ಡಿ ಸಪ್ಲಿಮೆಂಟ್‌ ಸೇವಿಸಬೇಕು.

Urinary problem

ಮೂತ್ರ ಸಮಸ್ಯೆ

ವಯಸ್ಸಾಗುತ್ತಾ ಆಗುತ್ತಾ, ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕೆಲವು ಮಹಿಳೆಯರಲ್ಲಿ ಕಡಿಮೆಯಾಗುತ್ತದೆ. ವಯಸ್ಸಾಗುತ್ತಾ ಆಗುತ್ತಾ ಆ ಭಾಗದ ಮಾಂಸಖಂಡಗಳ ಶಕ್ತಿಗುಂದುವುದೂ ಇದಕ್ಕೆ ಕಾರಣ. ಇಂಥ ಸಂದರ್ಭ ಹೆಚ್ಚು ಹೊತ್ತು ಮೂತ್ರ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದಿರುವಂಥ ಸಮಸ್ಯೆಗಳೂ ಬರಬಹುದು. ಸಣ್ಣ ಕೆಮ್ಮು, ಸೀನು ಇತ್ಯಾದಿಗಳಿಗೆ ಮೂತ್ರ ಚಿಮ್ಮುವುದು ಇತ್ಯಾದಿಗಳಿಗೂ ಇದೇ ಕಾರಣ.

Blood pressure Benefits Of Saffron

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ ವಯಸ್ಸಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆಯಾದರೂ, ಇದು ಅತ್ಯಂತ ಅಪಾಯಕಾರಿ ಕೂಡಾ. ಈ ಸಮಸ್ಯೆ ಹೃದಯದ ತೊಂದರೆ, ಕಿಡ್ನಿ ತೊಂದರೆ, ಪಾರ್ಶ್ವವಾಯು ಮತ್ತಿತರ ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತದೆ.

Image Of Abdominal Obesity

ಬೊಜ್ಜು

40 ದಾಟುವ ಮಹಿಳೆಯ ಪ್ರಮುಖ ಸಮಸ್ಯೆ ಎಂದರೆ ಬೊಜ್ಜು. ಬದಲಾದ ಜೀವನಕ್ರಮ, ಮೆನೋಪಾಸ್‌ನಿಂದಾಗಿ ಹಾರ್ಮೋನಿನ ಏರುಪೇರು, ಅನಾರೋಗ್ಯಕರ ಆಹಾರಕ್ರಮ ಇವೆಲ್ಲವೂ ಇಂದಿನ ಮಹಿಳೆಯರ ಬಹುದೊಡ್ಡ ಸಮಸ್ಯೆಯಾದ ಬೊಜ್ಜಿಗೆ ಕಾರಣ. ಉತ್ತಮ ಆಹಾರ ಸೇವನೆ, ವೈದ್ಯರನ್ನು ಸಂಪರ್ಕಿಸಿ ಹಾರ್ಮೋನಿನ ವೈಪರೀತ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು, ನಿಯಮಿತ ವ್ಯಾಯಾಮ, ಕ್ರಿಯಾಶೀಲರಾಗಿರುವುದು ಇತ್ಯಾದಿಗಳಿಂದ ಈ ಸಮಸ್ಯೆಯಿಂದ ಹೊರಬರಬಹುದು. ತಮ್ಮನ್ನು ತಾವು ಫಿಟ್‌ ಆಗಿಟ್ಟು ಕೊಳ್ಳಬಹುದು.

ಇದನ್ನೂ ಓದಿ: Best Times To Drink Water: ದಿನದ ಯಾವ ಸಮಯದಲ್ಲಿ ನಾವು ನೀರು ಕುಡಿಯಬೇಕು?

Continue Reading

ಆರೋಗ್ಯ

NIMHANS Hospital: ಉತ್ತರ ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಎರಡನೇ ಹೈಟೆಕ್ ನಿಮ್ಹಾನ್ಸ್ ಆಸ್ಪತ್ರೆ!

NIMHANS Hospital: ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ ಆಸ್ಪತ್ರೆಯ ಮೇಲೆ ಸಾಕಷ್ಟು ಒತ್ತಡ ಹೆಚ್ಚಾಗಿದೆ. ಸಾಕಷ್ಟು ಬೆಡ್ ಸಮಸ್ಯೆಗಳು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ದೇಶದ ಅತ್ಯಂತ ಪ್ರತಿಷ್ಠಿತ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಾಗಿರುವ ನಿಮ್ಹಾನ್ಸ್‌ನ ಎರಡನೇ ಘಟಕವನ್ನು ನಿರ್ಮಾಣ ಮಾಡಲು ಮುಂದಾಗಲಾಗಿದೆ.

VISTARANEWS.COM


on

Second hitech NIMHANS hospital to come up in North Bengaluru
Koo

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು (Department of Medical Education) ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಉತ್ತರ ಬೆಂಗಳೂರಿನಲ್ಲಿ ಎರಡನೇ ಹೈಟೆಕ್ ನಿಮ್ಹಾನ್ಸ್ ಆಸ್ಪತ್ರೆ (NIMHANS Hospital) ನಿರ್ಮಾಣಕ್ಕೆ ಮುಂದಾಗಲಾಗಿದೆ. 40 ಎಕರೆ ಜಾಗದಲ್ಲಿ ಮಲ್ಟಿ ಸೂಪರ್ ಸ್ಪೆಷಾಲಿಟಿ ನಿಮ್ಹಾನ್ಸ್ ಆಸ್ಪತ್ರೆ (Multi Super Speciality NIMHANS Hospital) ನಿರ್ಮಾಣ ಮಾಡುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಬೆಂಗಳೂರು ಸೇರಿದಂತೆ ಹಲವು ಕಡೆ ರಸ್ತೆ ಅಪಘಾತದಿಂದ ನರ ಹಾಗೂ ಬ್ರೈನ್ ಸಮಸ್ಯೆಯಿಂದ ಸಾವಿರಾರು ಜನರು ಮೃತಪಡುತ್ತಿದ್ದಾರೆ. ಮಾನಸಿಕ ಆರೋಗ್ಯ ಮತ್ತು ನರ ಸಮಸ್ಯೆಗಳಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ದೇಶದ ಅತ್ಯಂತ ಪ್ರತಿಷ್ಠಿತ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಾಗಿರುವ ನಿಮ್ಹಾನ್ಸ್‌ನ ಎರಡನೇ ಘಟಕವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾಗಿ ಹೇಳಿದ್ದಾರೆ.

ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ ಆಸ್ಪತ್ರೆಯ ಮೇಲೆ ಸಾಕಷ್ಟು ಒತ್ತಡ ಹೆಚ್ಚಾಗಿದೆ. ಸಾಕಷ್ಟು ಬೆಡ್ ಸಮಸ್ಯೆಗಳು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿವೆ. ಇದರಿಂದ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಜತೆಗೆ ರೋಗಿಗಳ ಒತ್ತಡವೂ ಹೆಚ್ಚಿದೆ. ಅಲ್ಲದೆ, ನಿಮ್ಹಾನ್ಸ್ ಆಸ್ಪತ್ರೆಗೆ ರಾಜ್ಯದ ಜನರ ಒತ್ತಡದ ಜತೆಗೆ ಕೇರಳ ಆಂಧ್ರಪ್ರದೇಶ, ತಮಿಳನಾಡಿನ ಜನರ ಒತ್ತಡವೂ ಹೆಚ್ಚಾಗಿ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಅದರಲ್ಲೂ ಉತ್ತರ ಬೆಂಗಳೂರಿನ ಜನರಿಗೆ ಆ ಭಾಗದಲ್ಲಿ ಯಾವುದೇ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆಯಿದೆ ಎಂದು ಸಮಸ್ಯೆಯ ತೀವ್ರತೆಯನ್ನು ಶರಣ ಪ್ರಕಾಶ್‌ ಪಾಟೀಲ್‌ ತೆರೆದಿಟ್ಟಿದ್ದಾರೆ.

ರಾಜ್ಯ ಸರ್ಕಾರದಿಂದ 40 ಎಕರೆ ಜಾಗ ಮಂಜೂರು

ಬೆಂಗಳೂರಿನಲ್ಲಿ ರೋಗಿಗಳಿಗೆ ಪರದಾಟ ಎದುರಾಗಿದೆ. ಹೀಗಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಯು ನಿಮ್ಹಾನ್ಸ್ ಎರಡನೇ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆಗೆ ಡಿಮ್ಯಾಂಡ್ ಮಾಡಿತ್ತು. ಇದಕ್ಕೆ ಕೇಂದ್ರ ಆರೋಗ್ಯ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ 40 ಎಕರೆ ಪ್ರದೇಶದಲ್ಲಿ ಬೆಂಗಳೂರಿನ ಕ್ಯಾನ್ಸನಹಳ್ಳಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆಯ ಎರಡನೇ ಘಟಕವನ್ನು ತೆರೆಯಲು ನಿರ್ಧಾರ ಮಾಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: Kannada signboard rules: ಕನ್ನಡ ಬೋರ್ಡ್‌ ಕಡ್ಡಾಯ; ಡೆಡ್‌ಲೈನ್‌ವರೆಗೆ ದಾಳಿಗೆ ಅವಕಾಶ ಕೊಡಬೇಡಿ: ಬಿಬಿಎಂಪಿಗೆ ವ್ಯಾಪಾರಿಗಳ ಒತ್ತಾಯ

ಇಲ್ಲಿದ್ದಾರೆ ನುರಿತ ವೈದ್ಯರು

ಈಗಾಗಲೇ ರಾಜ್ಯ ಸರ್ಕಾರ ಇದಕ್ಕೆ ಭೂಮಿಯನ್ನು ನೀಡಿದೆ. ನಿಮ್ಹಾನ್ಸ್ ಆಸ್ಪತ್ರೆ ದೇಶದಲ್ಲಿಯೇ ಸಾಕಷ್ಟು ಹೊಸ ಹೊಸ ತಂತ್ರಜ್ಞಾನಗಳನ್ನೊಳಗೊಂಡ ವಿಶೇಷ ಆಸ್ಪತ್ರೆಯಾಗಿದೆ. ಮನುಷ್ಯನ ನರ ವಿಭಾಗದ ಕುರಿತು ಹಾಗೂ ಬ್ರೈನ್ ಸರ್ಜರಿ ಕುರಿತು ನುರಿತ ತಜ್ಞ ವೈದ್ಯರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ನಿಮ್ಹಾನ್ಸ್ ಆಸ್ಪತ್ರೆಯ ಎರಡನೇ ಘಟಕ ತಲೆ ಎತ್ತುತ್ತಿರುವುದು ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನವರಿಗೆ ವರದಾನವಾಗಿದೆ.

Continue Reading

ಆರೋಗ್ಯ

Best Times To Drink Water: ದಿನದ ಯಾವ ಸಮಯದಲ್ಲಿ ನಾವು ನೀರು ಕುಡಿಯಬೇಕು?

ಬಹಳಷ್ಟು ಮಂದಿಯಲ್ಲಿ ನೀರು ಕುಡಿಯುವ ಬಗೆಗೆ ಹಲವು ಗೊಂದಲಗಳಿವೆ. ಯಾವಾಗ ನೀರು ಕುಡಿದರೆ ಒಳ್ಳೆಯದು, ಯಾವಾಗ ಕುಡಿಯಬಾರದು (Best Times To Drink Water) ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Water Bottle
Koo

ಮಳೆಗಾಲ, ಚಳಿಗಾಲ, ಬೇಸಿಗೆಯೇ ಇರಲಿ, ನೀರು ಮಾತ್ರ ಕುಡಿಯುವುದು ಬಹಳ ಮುಖ್ಯ ಎಂಬ ಆರೋಗ್ಯ ಸಲಹೆಯನ್ನು ಎಲ್ಲರೂ ಕೇಳಿಯೇ ಇರುತೀರಿ. ನೀರು ಕುಡಿಯದಿದ್ದರೆ ನಮ್ಮ ದೇಹ ಅದನ್ನು ಬೇಡುತ್ತದೆ. ನೀರು ಕುಡಿದಿಲ್ಲ ಎಂಬುದನ್ನು ದೇಹ ನಾನಾ ವಿಧದಲ್ಲಿ ನಮಗೆ ಹೇಳಿ ತೋರಿಸುತ್ತದೆ. ದೇಹ ಸಮರ್ಪಕವಾಗಿ ಎಲ್ಲ ಕೆಲಸವನ್ನೂ ಮಾಡಲು ನೀರು ಬೇಕೇ ಬೇಕು. ಇಲ್ಲವಾದರೆ, ಏನಾದರೊಂದು ಆರೋಗ್ಯ ವ್ಯತ್ಯಯ ಕಾಣಿಸುತ್ತದೆ. ಹಾಗಂತ ಅತಿಯಾಗಿ ನೀರು ಕುಡಿಯುವುದೂ ಕೂಡಾ ಒಳ್ಳೆಯದಲ್ಲ. ಹಿತಮಿತವಾದ ಪ್ರಮಾಣದಲ್ಲಿ ನೀರು ಕುಡಿಯಲೇಬೇಕು. ಆದರೆ, ಬಹಳಷ್ಟು ಮಂದಿಯಲ್ಲಿ, ನೀರು ಕುಡಿಯುವ ಬಗೆಗೆ ಹಲವು ಗೊಂದಲಗಳಿವೆ. ಯಾವಾಗ ಕುಡಿದರೆ ಒಳ್ಳೆಯದು, ಯಾವಾಗ ಕುಡಿಯಬಾರದು ಎಂಬಿತ್ಯಾದಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ದೊರಕುವುದಿಲ್ಲ. ಬನ್ನಿ, ನೀರು ಯಾವೆಲ್ಲ ಸಮಯದಲ್ಲಿ ಕುಡಿಯುವುದು ಒಳ್ಳೆಯದು (Best Times To Drink Water) ಎಂಬುದನ್ನು ನೋಡೋಣ.

drink water

ಬೆಳಗ್ಗೆ ನೀರು ಕುಡಿಯುವುದು ಸೂಕ್ತ

ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದು ಒಳ್ಳೆಯದು. ನಮ್ಮ ಹೊಟ್ಟೆ ರಾತ್ರಿಯಿಡೀ ಖಾಲಿಯಿದ್ದು, ಮತ್ತೆ ಜೀರ್ಣಕ್ರಿಯೆಯನ್ನು ಚುರುಕಾಗಿಸಬೇಕೆಂದರೆ ಮೊದಲು ನೀರು ಕುಡಿಯುವುದು ಒಳ್ಳೆಯದು. ಹದ ಬಿಸಿಯಾದ ನೀರು ಕುಡಿಯುವುದು ಇನ್ನೂ ಒಳ್ಳೆಯದು. ಅಥವಾ, ಬಿಸಿನೀರಿಗೆ ಒಂದು ಚಮಚ ತುಪ್ಪ ಹಾಕಿ ಕುಡಿಯಬಹುದು. ಅಥವಾ ನಿಂಬೆಹಣ್ಣು ಹಿಂಡಿ ಕುಡಿಯಬಹುದು. ಜೀರಿಗೆ ಹಾಕಿದ ನೀರು, ಜೇನುತುಪ್ಪ ಹಾಕಿದ ನೀರು ಹೀಗೆ ಬಗೆಬಗೆಯ ನೀರನ್ನು ಬೆಳಗ್ಗೆ ಸೇವಿಸಬಹುದು. ಚಕ್ಕೆ ಪುಡಿ ಸೇರಿಸಿದ ನೀರು ಕುಡಿಯುವುದೂ ಕೂಡಾ ಒಳ್ಳೆಯದೇ. ಎದ್ದ ಕೂಡಲೇ ಚಹಾ ಕುಡಿಯುವ ಮೊದಲು ಹೀಗೆ ನೀರು ಕುಡಿಯುವ ಮೂಲಕ ಜೀರ್ಣಕ್ರಿಯೆ ಚುರುಕಾಗಿಸಿ, ಮಲವಿಸರ್ಜನೆ ಸರಾಗವಾಗಿ ಆಗುವಂತೆ ಮಾಡಬಹುದು.

Pure water Rules of Drinking Water for a Healthier You

ಊಟಕ್ಕೆ ಮೊದಲು ನೀರು ಕುಡಿಯಿರಿ

ಊಟಕ್ಕೆ ಮೊದಲು ಅಂದರೆ ಸುಮಾರು ಅರ್ಧ ಗಂಟೆ ಮೊದಲು ನೀರು ಕುಡಿಯುವುದು ಒಳ್ಳೆಯದು. ಇದು ಜೀರ್ಣಾಂಗವ್ಯೂಹವನ್ನು ಮುಂದಿನ ಜೀರ್ಣಕ್ರಿಯೆಗೆ ತಯಾರು ಮಾಡುತ್ತದೆ. ಆದರೆ, ಊಟಕ್ಕೆ ತಕ್ಷಣ ಮೊದಲು ನೀರು ಕುಡಿಯಬೇಡಿ. ಊಟಕ್ಕೆ ಕನಿಷ್ಟ 30 ನಿಮಿಷ ಮೊದಲು ನೀರು ಕುಡಿದು ಆಮೇಲೆ ಖಾಲಿ ಬಿಡಿ. ಕೆಲವು ಸಂಶೋಧನೆಗಳ ಪ್ರಕಾರ ಊಟಕ್ಕೆ ಸುಮಾರು ಅರ್ಧ ಗಂಟೆ ಮೊದಲು ಅರ್ಧ ಲೀಟರ್‌ ನೀರನ್ನು ಸುಮಾರು 12 ವಾರಗಳ ಕಾಲ ಸತತವಾಗಿ ಮಾಡಿದ ಮಂದಿಗೆ ತಮ್ಮ ತೂಕದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆಯಂತೆ. ಕೊಬ್ಬು ಕರಗಿಸಲು ಇದು ಅತ್ಯುತ್ತಮ ವಿಧಾನ.

Sip dont gulp Rules of Drinking Water for a Healthier You

ಮಲಗುವ ಮೊದಲು ನೀರು ಕುಡಿಯಿರಿ

ಮಲಗುವ ಮೊದಲು ನೀರು ಕುಡಿಯಿರಿ. ಮಲಗುವ ಸಂದರ್ಭ ನೀರು ಕುಡಿದರೆ, ಇಡೀ ರಾತ್ರಿ ದೇಹದ ಚಯಾಪಚಯ ಕ್ರಿಯೆಗೆ ಬೇಕಾದ ನೀರು ಸಿಗುತ್ತದೆ. ಇದರಿಂದ ಹೃದಯಾಘಾತದಂತಹ ಅಪಾಯವೂ ತಪ್ಪುವ ಸಾಧ್ಯತೆಗಳಿವೆ. ಇದು ರಾತ್ರಯಿಡೀ ದೇಹಕ್ಕೆ ಬೇಕಾದ ತೇವಾಂಶವನ್ನು ನೀಡುವುದಲ್ಲದೆ, ದೇಹಕ್ಕೆ ಬೇಡವಾದ ಕಶ್ಮಲಗಳನ್ನು ಹೊರಕ್ಕೆ ಕಳಿಸುತ್ತದೆ.

drink water

ಸ್ನಾನಕ್ಕೆ ಮೊದಲು ನೀರು ಕುಡಿಯಿರಿ

ಸ್ನಾನಕ್ಕೆ ಮೊದಲು ಬಿಸಿನೀರು ಕುಡಿಯುವುದು ಅತ್ಯಂತ ಒಳ್ಳೆಯದು. ತಮಾಷೆಯಾಗಿ ಕಂಡರೂ ಇದು ಸತ್ಯ. ವೈದ್ಯರು ಹೇಳುವಂತೆ, ಸ್ನಾನದ ಸಮಯದಲ್ಲಿ ದೇಹದಲ್ಲಿ ರಕ್ತದೊತ್ತಡ ಇಳಿಯುತ್ತದೆ. ಬಿಸಿನೀರು ಕುಡಿದರೆ ದೇಹದ ಒಳಗೆ ಬೆಚ್ಚಗೆ ಇರುತ್ತದೆ. ಇದರಿಂದ ಇದೇ ಉಷ್ಣತೆಯು ಚರ್ಮದ ಮೇಲೂ ಇರಲು ಸಹಾಯವಾಗುತ್ತದೆ. ಹೀಗಾಗಿ ರಕ್ತದೊತ್ತಡದ ಅಸಮತೋಲನದಂತಹ ಸಮಸ್ಯೆ ಬರುವುದಿಲ್ಲ.

ಇದನ್ನೂ ಓದಿ: Happiness Formulas: ಈ ಎಂಟು ಸೂತ್ರಗಳನ್ನು ನಂಬಿದ್ದರೆ ನೀವು ಸಂತೋಷವಾಗಿದ್ದೀರಿ ಎಂದರ್ಥ!

Continue Reading
Advertisement
40 percent commission Court summons CM No defamation if advertised says Siddaramaiah
ರಾಜಕೀಯ4 mins ago

40 percent commission: ಸಿಎಂಗೆ ಕೋರ್ಟ್‌ ಸಮನ್ಸ್;‌ ಜಾಹೀರಾತು ಕೊಟ್ಟರೆ ಮಾನನಷ್ಟ ಆಗಲ್ಲ: ವಕೀಲರು ಉತ್ತರಿಸುತ್ತಾರೆಂದ ಸಿದ್ದರಾಮಯ್ಯ

Shah Rukh Kahan
ಪ್ರಮುಖ ಸುದ್ದಿ12 mins ago

Shah rukh Khan : ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಶಾರುಖ್​ ಖಾನ್​

PM Narendra Modi is determined to make India a developing country by 2047 says Pralhad Joshi
ರಾಜಕೀಯ45 mins ago

PM Narendra Modi: ಮೋದಿ ಚಿಂತೆ ಮಾಡುವವರಲ್ಲ, ಚಿಂತನೆ ಮಾಡುವ ಪ್ರಧಾನಿ: ಪ್ರಲ್ಹಾದ್‌ ಜೋಶಿ

Idli
ವೈರಲ್ ನ್ಯೂಸ್51 mins ago

Biodiversity: ದಿನಾ ಇಡ್ಲಿ ತಿಂತೀರಾ? ಹಾಗಾದ್ರೆ ಜೀವವೈವಿಧ್ಯ ಹಾನಿಗೆ ನಿಮ್ಮದೇ ಹೆಚ್ಚಿನ ಕೊಡುಗೆ!

Anil John Sequeira youngest judge in Karnataka
ದಕ್ಷಿಣ ಕನ್ನಡ54 mins ago

Anil John Sequeira : ಬಂಟ್ವಾಳ ಯುವಕನ ಅಪರೂಪದ ಸಾಧನೆ; 25ನೇ ವಯಸ್ಸಿಗೆ ನ್ಯಾಯಾಧೀಶರಾಗಿ ಆಯ್ಕೆ

Sachin Tendulkar
ಪ್ರಮುಖ ಸುದ್ದಿ1 hour ago

Sachin Tenulkar : ಒಡಿಐನಲ್ಲಿ ಸಚಿನ್​ ಮೊದಲ ದ್ವಿಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ದಿನವಿದು

Medical negligence Hospital fined Rs 10 lakh for drowning newborn baby in hot water
ಪ್ರಮುಖ ಸುದ್ದಿ1 hour ago

medical negligence: ನವಜಾತ ಶಿಶುವನ್ನು ಬಿಸಿನೀರಲ್ಲಿ ಮುಳುಗಿಸಿ ಚರ್ಮ ಕಾಯಿಲೆ ಕಥೆ ಕಟ್ಟಿದ್ದ ಆಸ್ಪತ್ರೆಗೆ 10 ಲಕ್ಷ ದಂಡ!

Woman offers namaz inside mosque boycott from the village
ಕೊಡಗು1 hour ago

Kodagu News : ಮಸೀದಿಯಲ್ಲಿ ನಮಾಜ್‌ ಮಾಡಿದ ಮಹಿಳೆಗೆ ಗ್ರಾಮದಿಂದಲೇ ಬಹಿಷ್ಕಾರ; ಪತಿ ಅಂತ್ಯಕ್ರಿಯೆಗೂ ನಕಾರ

Don't wait for OTT, come to the theatre , said actor Shakhahaari Movie Rangayana Raghu
ಸ್ಯಾಂಡಲ್ ವುಡ್2 hours ago

Shakhahaari Movie: ಒಟಿಟಿಗೆ ಕಾಯ್ಬೇಡಿ, ಚಿತ್ರಮಂದಿರಕ್ಕೆ ಬನ್ನಿ ಎಂದ ʻಶಾಖಾಹಾರಿʼ ನಟ ರಂಗಾಯಣ ರಘು!

accident in up
ದೇಶ2 hours ago

Major Accident: ಭೀಕರ ಅಪಘಾತ; ಟ್ರ್ಯಾಕ್ಟರ್-ಟ್ರಾಲಿ ಕೊಳಕ್ಕೆ ಬಿದ್ದು 15 ಮಂದಿ ಸಾವು

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Varthur Santhosh
ಮಂಡ್ಯ3 hours ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ10 hours ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ22 hours ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು1 day ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ1 day ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು2 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ2 days ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ4 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

ಟ್ರೆಂಡಿಂಗ್‌