Valentines Day Fashion: ವ್ಯಾಲೆಂಟೈನ್ಸ್‌ ಡೇ ಫ್ಯಾಷನ್‌ಗೆ ಲಗ್ಗೆ ಇಟ್ಟ ಹೃದಯಾಕಾರದ ಆಕ್ಸೆಸರೀಸ್‌ - Vistara News

ಪ್ರೇಮಿಗಳ ದಿನಾಚರಣೆ

Valentines Day Fashion: ವ್ಯಾಲೆಂಟೈನ್ಸ್‌ ಡೇ ಫ್ಯಾಷನ್‌ಗೆ ಲಗ್ಗೆ ಇಟ್ಟ ಹೃದಯಾಕಾರದ ಆಕ್ಸೆಸರೀಸ್‌

ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ನೋಡಲು ಆಕರ್ಷಕವೆನಿಸುವ ನಾನಾ ವಿನ್ಯಾಸದ ವೆರೈಟಿ ಹೃದಯಾಕಾರದ ಆಕ್ಸೆಸರೀಸ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಯಾವ್ಯಾವ ವಿನ್ಯಾಸದವು ಹೆಚ್ಚು ಟ್ರೆಂಡಿಯಾಗಿವೆ ಎಂಬುದರ ಬಗ್ಗೆ ಇಲ್ಲಿದೆ ವರದಿ.

VISTARANEWS.COM


on

Valentines Day Fashion
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ನಾನಾ ಬಗೆಯ ಆಕರ್ಷಕ ಹೃದಯಾಕಾರದ ಆಕ್ಸೆಸರೀಸ್‌ಗಳು ಫಂಕಿ ಫ್ಯಾಷನ್‌ ಹಾಗೂ ಜ್ಯುವೆಲರಿ ಲೋಕಕ್ಕೆ ಕಾಲಿಟ್ಟಿದ್ದು, ಪ್ರೇಮಿಗಳ ಮನ ಗೆದ್ದಿವೆ.

Valentines Day Fashion

ಯಾವ್ಯಾವ ಆಕ್ಸೆಸರೀಸ್‌ ಲಭ್ಯ

ಹೃದಯಾಕಾರದ ಚಿಕ್ಕ ಸೈಝಿನ ಪೆಂಡೆಂಟ್‌ನಿಂದಿಡಿದು ಅಂಗೈ ಅಗಲದ ಪೆಂಡೆಂಟ್ಸ್‌, ಅತ್ಯಾಕರ್ಷಕ ಕ್ರಿಸ್ಟಲ್‌ ಅಥವಾ ಜೆಮ್‌ ಸ್ಟೋನ್ಸ್ ಇರುವಂತಹ ಫಿಂಗರ್‌ ರಿಂಗ್ಸ್‌, ಇಯರಿಂಗ್ಸ್‌, ಚಿಕ್ಕ ಚಿಕ್ಕ ಹೃದಯಾಕಾರದ ಡಿಸೈನ್‌ ಹೊಂದಿರುವಂತಹ ಟಾಸೆಲ್ಸ್‌ ಇರುವಂತಹ ಬ್ರೆಸ್‌ಲೇಟ್ಸ್‌, ಫಂಕಿ ನೆಕ್‌ಪೀಸ್‌, ಹಾರ್ಟ್ ಶೇಪ್‌ ಬಕಲ್‌ನ ಡಿಸೈನರ್‌ ಬೆಲ್ಟ್ಸ್, ಗೋಲ್ಡನ್‌ ಪ್ಲೇಟೆಡ್‌ ಡಿಸೈನರ್‌ ಹೇರ್‌ ಆಕ್ಸೆಸರೀಸ್‌, ಸ್ಯಾರಿ ಜ್ಯುವೆಲ್‌ ಪಿನ್ಸ್, ಬ್ರೋಚ್‌ ಸೇರಿದಂತೆ ನಾನಾ ಬಗೆಬಗೆಯ ಆಕ್ಸೆಸರೀಸ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

Valentines Day Fashion

ಡೈಮಂಡ್‌ ಹಾಗೂ ಬಂಗಾರದ ಜ್ಯುವೆಲರಿಗಳು

ಇನ್ನು ಎಂದಿನಂತೆ ಬಂಗಾರ ಹಾಗೂ ಡೈಮಂಡ್‌ನ ಹಾರ್ಟ್ ಶೇಪ್‌ ಹೈಲೈಟಾದಂತಹ ಜ್ಯುವೆಲರಿಗಳು ಹೊಸ ರೂಪದಲ್ಲಿ ಈ ಪ್ರೇಮಿಗಳ ದಿನಾಚರಣೆಗೆಂದೇ ಮತ್ತೊಮ್ಮೆ ಬಿಡುಗಡೆಗೊಂಡಿವೆ. ಪ್ರತಿಷ್ಠಿತ ಜ್ಯುವೆಲರಿ ಬ್ರಾಂಡ್‌ಗಳು ವೆರೈಟಿ ಹಾರ್ಟ್ ಶೇಪ್‌ನ ಪದಕಗಳು, ಪೆಂಡೆಂಟ್ಸ್‌, ಬ್ಯಾಂಗಲ್ಸ್-ಬ್ರೇಸ್‌ಲೇಟ್ಸ್‌, ಇಯರಿಂಗ್ಸ್‌, ಫಿಂಗರ್‌ರಿಂಗ್ಸ್‌ ಅನಾವರಣಗೊಳಿಸಿವೆ. ಅಷ್ಟೇಕೆ! ವರ್ಕಿಂಗ್‌ ವುಮೆನ್‌ಗಳಿಗೆಂದೇ ಡೈಮಂಡ್‌ನ ಹಾರ್ಟ್ಶೇಪ್‌ನ ಪುಟ್ಟ ಪುಟ್ಟ ಪೆಂಡೆಂಟ್ಸ್‌ ಹಾಗೂ ಸ್ಟಡ್ಸ್ ಬಿಡುಗಡೆಗೊಳಿಸಿದ್ದು ವ್ಯಾಲೆಂಟೈನ್ಸ್‌ ಡೇಯಂದು ಕೊಂಡುಕೊಳ್ಳುವವರಿಗೆ ನಾನಾ ಆಫರ್‌ ಹಾಗೂ ದರದಲ್ಲಿ ಕಡಿತವನ್ನು ಪ್ರಕಟಿಸಿವೆ. ಇದಕ್ಕಿಂತ ಇನ್ನೇನು ಬೇಕು ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳು.

ಫಂಕಿ ಹಾರ್ಟ್ ವಿನ್ಯಾಸದ ಜ್ಯುವೆಲರಿಗಳ ಎಂಟ್ರಿ

ಇನ್ನು ಬಂಗಾರ ಹಾಗೂ ಡೈಮಂಡ್‌ನಿಂದ ನಾವು ದೂರ ಅಥವಾ ಅಷ್ಟೊಂದು ಬಜೆಟ್‌ ನಮ್ಮ ಬಳಿಯಿಲ್ಲ ಎನ್ನುವವರಿಗೆಂದೇ ಫಂಕಿ ಆಕ್ಸೆಸರೀಸ್‌ಗಳು ಲಭ್ಯ. ಇದಕ್ಕೆ ಪೂರಕ ಎಂಬಂತೆ, ಲೆಕ್ಕವಿಲ್ಲದಷ್ಟು ಜ್ಯುವೆಲರಿಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ವೆಸ್ಟರ್ನ್ ಔಟ್‌ಫಿಟ್‌ಗೆ ಸೂಟ್‌ ಆಗುವಂತಹ ಫಂಕಿ ಇಯರಿಂಗ್ಸ್‌, ಬ್ರೆಸ್‌ಲೇಟ್ಸ್‌, ಪೆಂಡೆಂಟ್ಸ್ಗಳು ನಾನಾ ಮೆಟಿರೀಯಲ್‌ನಲ್ಲಿ ದೊರೆಯುತ್ತಿವೆ. ಟಿನೇಜ್‌ ಹುಡುಗಿಯರನ್ನು ಬರಸೆಳೆದಿವೆ.

Valentines Day Fashion

ಹಾರ್ಟ್ ಶೇಪ್‌ ಹೇರ್‌ ಆಕ್ಸೆಸರೀಸ್‌

ಹೆಡ್‌ ಬ್ಯಾಂಡ್‌ನಿಂದಿಡಿದು ಡಿಸೈನರ್‌ ಸೈಡ್‌ , ಸೆಂಟರ್‌ ಕ್ರಿಸ್ಟಲ್‌ಸಹಿತ ಹೇರ್‌ಪಿನ್‌, ಹೇರ್‌ ಜ್ಯುವೆಲ್‌ ಕ್ಲಿಪ್ಸ್‌ ನಾನಾ ವಿನ್ಯಾಸದಲ್ಲಿ ಬಂದಿದ್ದು, ಕೈಗೆಟಕುವ ಬೆಲೆಯಲ್ಲಿ ದೊರಕುತ್ತಿವೆ.

Valentines Day Fashion

ಹಾರ್ಟ್ ಶೇಪ್‌ ಆಕ್ಸೆಸರೀಸ್‌ ಪ್ರಿಯರಿಗೆ ತಿಳಿದಿರಲಿ

ನಿಮ್ಮ ಬಜೆಟ್‌ಗೆ ತಕ್ಕಂತೆ ಹಾರ್ಟ್ ಶೇಪ್‌ ಆಕ್ಸೆಸರೀಸ್‌ ಖರೀದಿಸಬಹುದು.

ವೆಸ್ಟರ್ನ್ ಔಟ್‌ಫಿಟ್‌ಗೆ ಫಂಕಿ ಹಾರ್ಟ್ ಶೇಪ್‌ ಆಕ್ಸೆಸರೀಸ್‌ ಮ್ಯಾಚ್‌ ಆಗುತ್ತವೆ.

ನಿಮ್ಮ ಇಮೇಜ್‌ಗೆ ಮ್ಯಾಚ್‌ ಆಗುವ ಜ್ಯುವೆಲರಿಗಳನ್ನು ಖರೀದಿಸಿ.

ಈ ದಿನದಂದು ನೀಡುವ ಆಫರ್‌ಗಳನ್ನು ಸದುಪಯೋಗಪಡಿಸಿಕೊಳ್ಳಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Rose day Fashion: ವ್ಯಾಲೆಂಟೈನ್ಸ್ ವೀಕ್‌ನ ಆರಂಭದಲ್ಲೆ ಲಗ್ಗೆಯಿಟ್ಟ ರೋಸ್‌ ಪ್ರಿಂಟೆಡ್‌ ಡಿಸೈನರ್‌ವೇರ್ಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರೇಮಿಗಳ ದಿನಾಚರಣೆ

NEET UG : ನೀಟ್-ಯುಜಿ ಫಲಿತಾಂಶ ಹಿಂಪಡೆಯಲು ಕೋರಿ ಸುಪ್ರೀಂ ಕೋರ್ಟ್​​ಗೆ ಅರ್ಜಿ

NEET UG : ಒಂದು ನಿರ್ದಿಷ್ಟ ವಿದ್ಯಾಸಂಸ್ಥೆಯ 67 ವಿದ್ಯಾರ್ಥಿಗಳು ಪೂರ್ಣ 720 ಅಂಕಗಳನ್ನು ಪಡೆದಿದ್ದಾರೆ ಎಂಬ ಅಂಶದ ಬಗ್ಗೆ ಅರ್ಜಿದಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 29 ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿದ ತಾತ್ಕಾಲಿಕ ಕೀ ಉತ್ತರಗಳ ಬಗ್ಗೆಯೂ ಹಲವಾರು ದೂರುಗಳಿವೆ ಎಂದು ಗಮನಸೆಳೆಯಲಾಗಿದೆ.

VISTARANEWS.COM


on

NEET UG
Koo

ನವದೆಹಲಿ: ಪದವಿಪೂರ್ವ ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ಇತ್ತೀಚೆಗೆ ಫಲಿತಾಂಶ ಪ್ರಕಟಗೊಂಡಿರು ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (NEET UG) ಫಲಿತಾಂಶಗಳಲ್ಲಿ ವ್ಯಾಪಕ ವ್ಯತ್ಯಾಸಗಳಿವೆ ಎಂದು ಆರೋಪಿಸಿ, ನೀಟ್-ಯುಜಿ 2024 ಫಲಿತಾಂಶಗಳನ್ನು ಹಿಂಪಡೆಯಲು ಮತ್ತು ಹೊಸದಾಗಿ ಪರೀಕ್ಷೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಗ್ರೇಸ್ ಅಂಕಗಳನ್ನು ನೀಡುವಲ್ಲಿ ಏಕಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ, ಹಲವಾರು ವಿದ್ಯಾರ್ಥಿಗಳು ಗಳಿಸಿದ 720, 719 ಮತ್ತು 718 ಅಂಕಗಳು ಲೆಕ್ಕಾಚಾರ ಪ್ರಕಾರ ಅಸಾಧ್ಯ ಎಂದು ಅವರು ವಾದಿಸಿದ್ದಾರೆ.

ಪರೀಕ್ಷೆಯ ವಿಳಂಬದಿಂದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಗ್ರೇಸ್ ಅಂಕಗಳನ್ನು ನೀಡಿದೆ. ಇದು ಕೆಲವು ವಿದ್ಯಾರ್ಥಿಗಳಿಗೆ ಹಿಂಬಾಗಿಲ ಪ್ರವೇಶ ಕಲ್ಪಿಸುವಂಥ ದುರುದ್ದೇಶಪೂರಿತ ಅಭ್ಯಾಸ ಎಂದು ಆರೋಪಿಸಲಾಗಿದೆ.

ಒಂದು ನಿರ್ದಿಷ್ಟ ವಿದ್ಯಾಸಂಸ್ಥೆಯ 67 ವಿದ್ಯಾರ್ಥಿಗಳು ಪೂರ್ಣ 720 ಅಂಕಗಳನ್ನು ಪಡೆದಿದ್ದಾರೆ ಎಂಬ ಅಂಶದ ಬಗ್ಗೆ ಅರ್ಜಿದಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 29 ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿದ ತಾತ್ಕಾಲಿಕ ಕೀ ಉತ್ತರಗಳ ಬಗ್ಗೆಯೂ ಹಲವಾರು ದೂರುಗಳಿವೆ ಎಂದು ಗಮನಸೆಳೆಯಲಾಗಿದೆ.

ಹಲವಾರು ದೂರುಗಳು ದಾಖಲು

ಮೇ 5 ರಂದು ನಡೆದ ನೀಟ್​​ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ವ್ಯಾಪಕ ದೂರುಗಳನ್ನು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅಕ್ರಮದ ಆಧಾರದ ಮೇಲೆ ಇಡೀ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ 2 ಅರ್ಜಿಗಳನ್ನು ಸಲ್ಲಿಸಲಾಗಿದೆ. ಮೇ 17 ರಂದು ಸುಪ್ರೀಂ ಕೋರ್ಟ್ ಅಂತಹ ಒಂದು ಅರ್ಜಿಯ ಬಗ್ಗೆ ನೋಟಿಸ್ ನೀಡಿತ್ತು. ಆದರೆ ಫಲಿತಾಂಶಗಳ ಘೋಷಣೆಗೆ ತಡೆ ನೀಡಲು ಸಮ್ಮತಿಸಿರಲಿಲ್ಲ.

ಇದನ್ನೂ ಓದಿ: Narendra Modi: ಪ್ರಧಾನಿ ಮೋದಿಗೆ ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಮಹಾಪೂರ !

ತೆಲಂಗಾಣ ಮತ್ತು ಆಂಧ್ರಪ್ರದೇಶ ಮೂಲದ ಅಬ್ದುಲ್ಲಾ ಮೊಹಮ್ಮದ್ ಫೈಜ್ ಮತ್ತು ಡಾ.ಶೇಖ್ ರೋಷನ್ ಮೊಹಿದ್ದೀನ್ ಅವರು ಪ್ರಸ್ತುತ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆಯ ತನಿಖೆ ಪೂರ್ಣಗೊಳ್ಳುವವರೆಗೆ ನೀಟ್-ಯುಜಿ 2024 ಪ್ರವೇಶಕ್ಕಾಗಿ ನಡೆಸಬೇಕಾದ ಕೌನ್ಸೆಲಿಂಗ್​ಗೆ ತಡೆ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ. ಇದಲ್ಲದೆ, ಪರೀಕ್ಷೆಯ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸುವಂತೆಯೂ ಕೋರಲಾಗಿದೆ.

ಈ ವರ್ಷದ ನೀಟ್ (ಪದವಿಪೂರ್ವ) ಪರೀಕ್ಷೆಗೆ ಹಾಜರಾಗುವಾಗ ತಡವಾಗಿದ್ದ ಸಮಯದ ನಷ್ಟವನ್ನು ಸರಿದೂಗಿಸಲು “ಗ್ರೇಸ್ ಅಂಕಗಳನ್ನು” ಪಡೆದ 1,500 ಕ್ಕೂ ಹೆಚ್ಚು ಅಭ್ಯರ್ಥಿಗಳ ಫಲಿತಾಂಶಗಳನ್ನು ಪರಿಶೀಲಿಸಲು ನಾಲ್ಕು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಮತ್ತು ಕೇಂದ್ರ ಶಿಕ್ಷಣ ಸಚಿವಾಲಯ ಶನಿವಾರ ಪ್ರಕಟಿಸಿದೆ.

Continue Reading

ಲೈಫ್‌ಸ್ಟೈಲ್

Valentine’s Day 2024 : ಫೆಬ್ರುವರಿ 14 ರಂದೇ ಪ್ರೇಮಿಗಳ ದಿನ ಆಚರಿಸುವುದು ಯಾಕೆ? ಅದರ ಮಹತ್ವವೇನು?

Valentine’s Day : ಒಂದು ವಾರದ ಕಾಲ ನಡೆಯುವ ಪ್ರೇಮಿಗಳ ದಿನದ ಬಗ್ಗೆ ಹಲವಾರು ದಂತಕತೆಗಳಿವೆ. ಒಬ್ಬೊಬ್ಬರು ಒಂದೊಂದು ಕತೆಯನ್ನು ಹೇಳುತ್ತಾರೆ.

VISTARANEWS.COM


on

Valentine's Day
Koo

ಬೆಂಗಳೂರು: ವ್ಯಾಲೆಂಟೈನ್ಸ್ ಡೇ ಅಥವಾ ಸೇಂಟ್ ವ್ಯಾಲೆಂಟೈನ್ ಹಬ್ಬ ಎಂದೂ ಕರೆಯಲ್ಪಡುವ ಪ್ರೇಮಿಗಳ ದಿನವನ್ನು ಪ್ರತಿವರ್ಷ ಫೆಬ್ರವರಿ 14ರಂದು (Valentine’s Day 2024 ) ಆಚರಿಸಲಾಗುತ್ತದೆ. ಆದರೆ ಪ್ರೀತಿಯ ಹಬ್ಬ ಫೆಬ್ರವರಿ 7ಕ್ಕೆ ಅಂದರೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಈ ಎಲ್ಲ ದಿನಗಳಂದು ಪ್ರೇಮಿಗಳು ಶುಭಾಶಯ ಗ್ರೀಟಿಂಗ್ಸ್​​ ಕಾರ್ಡ್ ಗಳು (Greeting Cards) ಮತ್ತು ಗುಲಾಬಿ ಹೂವುಗಳನ್ನು (Roses) ಪರಸ್ಪರ ಹಂಚಿಕೊಳ್ಳುತ್ತಾರೆ. ಅಲ್ಲದೆ, ಪರಸ್ಪರ ಪ್ರೀತಿಯನ್ನು ಅಭಿವ್ಯಕ್ತಿಸಲು ವಿಶೇಷ ಸಮಯವನ್ನು ಮೀಸಲಿಡುತ್ತಾರೆ.

ಪ್ರಸ್ತಕ ವರ್ಷ ಪ್ರೇಮಿಗಳ ದಿನ ಫೆಬ್ರವರಿ 14ರ ಪ್ರೇಮಿಗಳ ದಿನ ಬುಧವಾರದಂದು ಬರುತ್ತದೆ. ಆದಾಗ್ಯೂ, ಪ್ರೇಮಿಗಳ ದಿನವನ್ನು ಕೇವಲ ಒಂದು ದಿನಕ್ಕೆ ಸೀಮಿತವಾಗಿಲ್ಲ. “ವ್ಯಾಲೆಂಟೈನ್ಸ್ ಡೇ ವೀಕ್” (Valentine’s Day week) ಎಂದು ಇಡೀ ವಾರದವರೆಗೆ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ, “ಲವ್ ವೀಕ್” ಅಥವಾ ” ರೊಮ್ಯಾನ್ಸ್​ ವೀಕ್​” ಎಂದೂ ಕರೆಯಲ್ಪಡುವ ವ್ಯಾಲೆಂಟೈನ್ಸ್ ವೀಕ್ ಫೆಬ್ರವರಿ 7ರಂದು ಪ್ರಾರಂಭಗೊಂಡಿದೆ. ಇದನ್ನು ಫೆಬ್ರವರಿ 14 ರ ಕೊನೆಯ ವ್ಯಾಲೆಂಟೈನ್ ಡೇ ತನಕ ಆಚರಿಸಲಾಗುತ್ತಿದೆ. ಅದಕ್ಕೂ ಮೊದಲು ರೋಸ್ ಡೇ, ಪ್ರಪೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ ಮತ್ತು ಕಿಸ್ ಡೇ ಅನ್ನು ಆಚರಿಸಿದ್ದಾರೆ.

ಫೆಬ್ರವರಿ 14ರಂದೇ ಪ್ರೇಮಿಗಳ ದಿನವನ್ನು ಏಕೆ ಆಚರಿಸಲಾಗುತ್ತದೆ?

ಪ್ರತಿ ವರ್ಷ ಪ್ರೇಮಿಗಳ ದಿನವನ್ನು ಬಹಳ ಪ್ರೀತಿಯಿಂದ ಆಚರಿಸಲಾಗುತ್ತದೆ. ಈ ವಿಶೇಷ ದಿನವು ವ್ಯಕ್ತಿಯಿಂದ ವ್ಯಕ್ತಿಗೆ ಹಂಚಿಕೊಳ್ಳುವ ಅತ್ಯಂತ ಸುಂದರವಾದ ಭಾವನೆಯಾದ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ಅನುಭವಿಸಲು ಮೀಸಲಾಗಿದೆ. ಪ್ರೀತಿಯನ್ನು ಹಂಚಿಕೊಳ್ಳುವುದಕ್ಕೆ ಇದೇ ದಿನ ಯಾಕೆ ಎಂಬುದು ಎಲ್ಲರ ಪ್ರಶ್ನೆ. ಆದರೆ ಅದಕ್ಕೊಂದು ಹಿನ್ನೆಲೆಯಿದೆ. ಆದರೆ, ಈ ಬಗ್ಗೆ ಹಲವಾರು ಕತೆಗಳನ್ನು ಹೇಳಲಾಗುತ್ತದೆ.

ಕ್ರಿ.ಶ. 14, 270 ರಂದು ನಿಧನರಾದ ಮೂರನೇ ಶತಮಾನದ ರೋಮನ್ ಕ್ಯಾಥೊಲಿಕ್ ಪಾದ್ರಿ ಸೇಂಟ್ ವ್ಯಾಲೆಂಟೈನ್ ಅವರ ಗೌರವಾರ್ಥವಾಗಿ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ ಎಂದು ನಂಬಲಾಗಿದೆ. ಇನ್ನೊಂದು ನಂಬಿಕೆ ಪ್ರಕಾರ ರೋಮ್​ನಲ್ಲಿ ಲುಪರ್ಕಾಲಿಯಾ ಎಂಬ ಆಚರಣೆಯೊಂದಿತ್ತು. ಇಲ್ಲಿ ಪುರುಷ ಮತ್ತು ಮಹಿಳೆಯನ್ನು ಲಾಟರಿ ಎತ್ತುವ ಮೂಲಕ ಜೋಡಿ ಮಾಡಲಾಗುತ್ತಿತ್ತು. ಇವುಗಳಲ್ಲಿ ಕೆಲವು ಮದುವೆಯಲ್ಲಿ ಕೊನೆಗೊಳ್ಳುತ್ತಿತ್ತು. ಪೋಪ್‌ ಗೆಲಾಸಿಯಸ್‌ 1 ಈ ಹಬ್ಬವನ್ನು ವ್ಯಾಲೆಂಟೈನ್ಸ್‌ ಆಗಿ ಬದಲಿಸಿದರು ಎಂದು ಹೇಳಲಾಗುತ್ತದೆ. ಈ ಕಥೆಯ ಪ್ರಕಾರ 14ನೇ ಶತಮಾನದ ಅವಧಿಯಲ್ಲಿ ವ್ಯಾಲೆಂಟೈನ್ಸ್‌ ಡೇ ಆಚರಣೆ ಶುರುವಾಯಿತು.

ಇನ್ನೊಂದು ಕತೆಯ ಪ್ರಕಾರ ರೋಮ್‌ ದೇಶದ ದೊರೆ ಕ್ಲಾಡಿಯಸ್ II ತನ್ನ ಸೈನಿಕರು ಯಾರೂ ಮದುವೆಯಾಗಬಾರದು ಎಂಬ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದ. ಅಂತಹ ಸಮಯದಲ್ಲಿ ರಾಜನನ್ನೇ ಎದುರು ಹಾಕಿಕೊಂಡ ಸೇಂಟ್‌ ವ್ಯಾಲೆಂಟೈನ್‌ ಗುಟ್ಟಾಗಿ ಸೈನಿಕರಿಗೆ ಮದುವೆ ಮಾಡಿಸುತ್ತಿದ್ದರು. ಸೈನಿಕರ ಬದುಕಿನಲ್ಲೂ ಪ್ರೇಮ ಮೂಡುವಂತೆ ಮಾಡುತ್ತಿದ್ದರು. ಇದನ್ನು ತಿಳಿದ ರಾಜ ಕ್ಲಾಡಿಯಸ್‌ ವಾಲೈಂಟೈನ್‌ ಅವರನ್ನು ಫೆ. 14 ರಂದು ಗಲ್ಲಿಗೇರಿಸುತ್ತಾನೆ. ಆ ದಿನದಿಂದ ಪ್ರೇಮಿಗಳ ದಿನ ಆಚರಣೆಗೆ ಬಂತು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : Valentines Day: ಕೇಳಿ ಪ್ರೇಮಿಗಳೇ, ಇಲ್ಲಿದೆ ಗುಡ್‌ನ್ಯೂಸ್! ಈ ವಾರ ಪ್ರತಿದಿನವೂ ಪ್ರೇಮಿಗಳ ಹಬ್ಬವೇ!

ವ್ಯಾಲೆಂಟೈನ್ಸ್‌ ಡೇ ಎಂಬುದು ಪ್ರೀತಿಯ ದೇವತೆ ಕ್ಯುಪಿಡ್‌ನಿಂದಲೂ ಬಂದಿದೆ ಎನ್ನಲಾಗುತ್ತದೆ. ರೋಮನ್‌ ಪುರಾಣದ ಪ್ರಕಾರ ಕ್ಯುಪಿಡ್‌ ಶುಕ್ರನ ಮಗ. ಇವನು ಪ್ರೀತಿ ಹಾಗೂ ಸೌಂದರ್ಯದ ದೇವತೆ . ಕ್ಯುಪಿಡ್‌ ಬಿಡುವ ಬಾಣ ಹೃದಯಕ್ಕೆ ನಾಟಿದರೆ ಪ್ರೀತಿ ಬಿತ್ತುತ್ತದೆಹೀಗಾಗಿ ಈ ದೇವತೆಯ ಹೆಸರಿನಲ್ಲಿ ವ್ಯಾಲೆಂಟೈನ್ ಡೇ ಆಚರಿಸಲಾಗುತ್ತದೆ.

ಟೀಕೆಯೂ ಎದುರಾಗುತ್ತದೆ

ಕೃಷಿಯ ದೇವರಾದ ಫೌನಸ್, ರೋಮುಲಸ್ ಮತ್ತು ರೋಮ್​​ನ ಸ್ಥಾಪಕರಾದ ರೆಮಸ್​​ಗೆ ಸಮರ್ಪಿತವಾದ ರೋಮನ್ ಹಬ್ಬವಾದ ಲುಪರ್ಕಾಲಿಯಾ ರಜಾದಿನವನ್ನು ‘ಕ್ರಿಶ್ಚಿಯನೀಕರಣ’ ಮಾಡುವ ಚರ್ಚ್​​ನ ಪ್ರಯತ್ನವಾಗಿ ಈ ಆಚರಣೆ ಹುಟ್ಟಿಕೊಂಡವು ಎಂಬ ವಾದವೂ ಇದೆ. ಇದು ಪಾಶ್ಚಿಮಾತ್ಯ ಸಂಸ್ಕೃತಿ ಎಂದೂ ಆರೋಪಿಸುತ್ತಾರೆ.

ಪ್ರೇಮಿಗಳ ದಿನ ಯುವ ಜೋಡಿಗೆ ಮಾತ್ರ ಸೀಮಿತವೇ?

ಜನಪ್ರಿಯ ಸಂಸ್ಕೃತಿಯು ಪ್ರೇಮಿಗಳ ದಿನವು ಪ್ರೀತಿಯಲ್ಲಿ ಬಿದ್ದಿರುವ ಯುವ ಜೋಡಿಗೆ ಮಾತ್ರ ಎಂದು ನಂಬುವಂತೆ ಮಾಡುತ್ತದೆ. ಇದು ಪ್ರೀತಿಯ ದಿನ ಮತ್ತು ಆ ಪ್ರೀತಿ ಯಾರೊಂದಿಗ ಇದ್ದರೂ ವ್ಯಕ್ತಪಡಿಸಬಹುದು. ಎಲ್ಲಾ ರೀತಿಯ ಪ್ರೀತಿಯನ್ನು ಆಚರಿಸಬೇಕು; ಅದು ನಿಮ್ಮ ಹೆತ್ತವರು, ನಿಮ್ಮ ಒಡಹುಟ್ಟಿದವರು ಅಥವಾ ನಿಮ್ಮ ಮಕ್ಕಳು ಯಾರೂ ಇರಬಹುದು ಎಂದು ಹೇಳಲಾಗುತ್ತದೆ.

ಪ್ರೇಮಿಗಳ ವಾರದ ವಿವರ ಇಲ್ಲಿದೆ

ದಿನ 1: ರೋಸ್ ಡೇ, ಫೆಬ್ರವರಿ 7
ರೋಸ್ ಡೇ ವ್ಯಾಲೆಂಟೈನ್ಸ್ ವೀಕ್ ನ ಮೊದಲ ದಿನವಾಗಿದ್ದು ಫೆಬ್ರವರಿ 7ರಂದು ಆಚರಿಸಲಾಗುತ್ತದೆ. ಈ ದಿನ ಇಬ್ಬರು ಪ್ರೇಮಿಗಳು ಪರಸ್ಪರ ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ದಿನ 2: ಪ್ರಪೋಸ್ ಡೇ, ಫೆಬ್ರವರಿ 8
ಪ್ರಪೋಸ್ ಡೇ ವ್ಯಾಲೆಂಟೈನ್ಸ್ ವೀಕ್ ನ ಎರಡನೇ ದಿನವಾಗಿದೆ. ಇದನ್ನು ಅತ್ಯಂತ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಪ್ರೇಮಿಗಳು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಪ್ರೀತಿಯನ್ನು ನಿವೇದಿಸುತ್ತಾರೆ.

ದಿನ 3: ಚಾಕೊಲೇಟ್ ಡೇ, ಫೆಬ್ರವರಿ 9
ಚಾಕೊಲೇಟ್ ಡೇ ವ್ಯಾಲೆಂಟೈನ್ಸ್ ವೀಕ್ ನ ಮೂರನೇ ದಿನ. ಪ್ರೀತಿ ನಿವೇದನೆಯಲ್ಲಿ ಯಶಸ್ವಿ ಆದರೂ ಆಗದಿದ್ದರೂ ಪ್ರೇಮಿಗಳು ಚಾಕೊಲೆಟ್ ಪೆಟ್ಟಿಯೊಂದಿಗೆ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಸುತ್ತಾರೆ.

ದಿನ 4: ಟೆಡ್ಡಿ ಡೇ, ಫೆಬ್ರವರಿ 10
ಟೆಡ್ಡಿ ಡೇ ವ್ಯಾಲೆಂಟೈನ್ಸ್ ಡೇ ವಾರದ ನಾಲ್ಕನೇ ದಿನ; ಇದನ್ನು ಫೆಬ್ರವರಿ 10ರಂದು ಆಚರಿಸಲಾಗುತ್ತದೆ. ಪ್ರಿಯತಮ ಟೆಡ್ಡಿಯನ್ನು (ಬೊಂಬೆಯನ್ನು) ಪ್ರಿಯತಮೆಗೆ ನೀಡುವ ದಿನ. ಅದನ್ನು ಆಕೆ ಜೀವನಪರ್ಯಂತ ಇಟ್ಟುಕೊಳ್ಳುವಂತೆ ಕೇಳಿಕೊಳ್ಳಬಹುದು.

ದಿನ 5: ಪ್ರಾಮಿಸ್ ಡೇ, ಫೆಬ್ರವರಿ 11
ಫೆಬ್ರವರಿ 11ರಂದು, ಪ್ರೇಮಿಗಳು ಕಷ್ಟ ಮತ್ತು ಸುಖದ ಕಾಲದಲ್ಲಿ ಜತೆಯಾಗಿಯೇ ಇರುತ್ತೇವೆ ಎಂಬುದನ್ನು ಪರಸ್ಪರ ಪ್ರಮಾಣ ಮಾಡುತ್ತಾರೆ.

ದಿನ 6: ಅಪ್ಪುಗೆ ದಿನ, ಫೆಬ್ರವರಿ 12
ವ್ಯಾಲೆಂಟೈನ್ಸ್ ವೀಕ್ ನ ಆರನೇ ದಿನ ಅಪ್ಪುಗೆ ದಿನ. ಈ ದಿನ, ಜನರು ತಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಳ್ಳುವ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಾರೆ. ಪ್ರೀತಿಸುವವರನ್ನು ತಬ್ಬಿಕೊಳ್ಳುವುದು ತುಂಬಾ ಸಂತೋಷದ ಕ್ಷಣವೆಂದು ಹೇಳಲಾಗುತ್ತದೆ.

ದಿನ 7: ಕಿಸ್ ಡೇ, ಫೆಬ್ರವರಿ 13
ವ್ಯಾಲೆಂಟೈನ್ಸ್ ವೀಕ್ ನ ಏಳನೇ ದಿನವನ್ನು “ಕಿಸ್ ಡೇ” ಎಂದು ಆಚರಿಸಲಾಗುತ್ತದೆ. ಕಿಸ್ ಡೇ ದಿನ ಪ್ರೀಮಿಗಳು ಪರಸ್ಪರ ಚುಂಬಿಸುತ್ತಾರೆ.

Continue Reading

ಸಿನಿಮಾ

Arshad Warsi: 25 ವರ್ಷದ ಬಳಿಕ ಮತ್ತೆ ಮದುವೆಯಾದ ಅರ್ಷದ್ ವಾರ್ಸಿ-ಮಾರಿಯಾ ದಂಪತಿ!

Arshad Warsi: ಅರ್ಷದ್ ವಾರ್ಸಿ ಮತ್ತು ಮಾರಿಯಾ ಅವರು 1999 ಫೆಬ್ರವರಿ 14, ಪ್ರೇಮಿಗಳ ದಿನದಂದು ವಿವಾಹವಾಗಿದ್ದರು.

VISTARANEWS.COM


on

Arshad Warsi-Maria couple registered marriage after 25 years!
Koo

ಮುಂಬೈ: 25 ವರ್ಷಗಳ ದಾಂಪತ್ಯವನ್ನು ಪೂರೈಸಿರುವ ಬಾಲಿವುಡ್ ನಟ ಅರ್ಷದ್ ವಾರ್ಸಿ (Arshad Warsi) ಅವರು ತಮ್ಮ ಪತ್ನಿ ಮಾರಿಯಾ ಗೊರೆಟ್ಟಿ (Maria Goretti) ಅವರನ್ನು ಫೆ.14, ವ್ಯಾಲೆಂಟೈನ್ಸ್ (Valentine’s Day) ಮತ್ತೊಮ್ಮೆ ವಿವಾಹವಾಗಲಿದ್ದಾರೆ. ಅರ್ಷದ್ ವಾರ್ಸಿ ಮಾರಿಯಾ ಅವರು 1999 ಫೆ.14ರಂದು ಮದುವೆಯಾಗಿದ್ದರು. ಆದರೆ, ಆಗ ವಿವಾಹವನ್ನು ನೋಂದಣಿ ಮಾಡಿರಲಿಲ್ಲ. ಹಾಗಾಗಿ, ಅವರು ವಿವಾಹವನ್ನು 2024ರ ಜನವರಿ 23ರಂದು ನೋಂದಣಿ ಮಾಡಿಸಿದ್ದಾರೆ(Registered Marriage).

ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಅರ್ಷದ್ ಅವರು, ಮದುವೆಯನ್ನು ನೋಂದಣಿ ಮಾಡಿಸಬೇಕು ಎಂಬ ವಿಚಾರ ನಮ್ಮ ಮನಸ್ಸಿಗೆ ಬರಲೇ ಇಲ್ಲ. ಅದು ನಿಜವಾಗಿ ಮಹತ್ವದ್ದು ಅನಿಸಲಿಲ್ಲ. ಆದರೆ, ಬಳಿಕ ವಿವಾಹವನ್ನು ನೋಂದಣಿ ಮಾಡುವುದರ ಮಹತ್ವ ತಿಳಿಯಿತು. ಒಬ್ಬರ ಮರಣದ ನಂತರ ವಿಶೇಷವಾಗಿ ಆಸ್ತಿ ವ್ಯವಹಾರಗಳನ್ನು ನಿರ್ವಹಿಸುವಾಗ ಮದುವೆ ನೋಂದಣಿ ಬೇಕಾಗುತ್ತದೆ ಎಂದು ಹೇಳಿದರು.

ಅರ್ಷದ್ ವಾರ್ಸಿ ಅವರು ತಮ್ಮ ಮದುವೆ ದಿನಾಂಕವನ್ನು ಹಂಚಿಕೊಳ್ಳಲು ತುಸು ಮಜುಗಪಟ್ಟಿರುವ ಹಾಗಿತ್ತು. ಕೆಲಸದ ಒತ್ತಡದ ನಡುವೆ ಸರಿಯಾದ ದಿನಾಂಕಗಳನ್ನು ಹೊಂದಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಫೆಬ್ರವರಿ 14ರಂದೇ ಮದುವೆಗೆ ಆಯ್ಕೆ ಮಾಡಿಕೊಂಡರು. ಹಾಗಾಗಿ, ಪ್ರೇಮಿಗಳ ದಿನ ಬಂದಾಗಲೆಲ್ಲ, ತಮ್ಮ ಮದುವೆ ಕೂಡ ಅದೇ ದಿನ ನಡೆದಿದ್ದು ಎಂದು ವಾರ್ಸಿ ನೆನಪಿಸಿಕೊಳ್ಳುತ್ತಾರೆ. ”ನನ್ನ ಪಾಲಿಗೆ ಪ್ರೇಮಿಗಳ ದಿನ ಭಯಾನಕವಾಗಿದೆ, ಯಾಕೆಂದರೆ, ಅದೇ ದಿನ ಮದುವೆಯಾಗಿದ್ದೇನೆ” ಎಂದು ವಾರ್ಸಿ ತಮಾಷೆಯಾಗಿ ಹೇಳಿದರು.

ಮಾರಿಯಾ ಹಾಗೂ ಅರ್ಷದ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗನ ಹೆಸರು ಝೀಕ್ ಮತ್ತು ಪುತ್ರಿಯ ಹೆಸರು ಝೀನ್. ಅರ್ಷದ್ ವಾರ್ಸಿ ಅವರು ಅಸುರ್ 2ರಲ್ಲಿ ಕಾಣಿಸಿಕೊಂಡಿದ್ದಾರೆ. ಮಲ್ಟಿ ಸ್ಟಾರರ್ ವೆಲ್ ಕಮ್ ಟು ಜಂಗಲ್ ಚಿತ್ರದಲ್ಲಿ ನಟಿಸಿದ್ದು, ಶೀಘ್ರವೇ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನೂ ಓದಿ: Arshad Warsi: ಯೂಟ್ಯೂಬ್ ಮೂಲಕ ತಪ್ಪು ಮಾಹಿತಿ ನೀಡಿ ಷೇರು ಮಾರುಕಟ್ಟೆಯಲ್ಲಿ ವಂಚನೆ; ಅರ್ಷದ್‌ ವಾರ್ಸಿ ದಂಪತಿಗೆ ದಂಡ

Continue Reading

ದೇಶ

Valentine’s Day: ಪ್ರೇಮಿಗಳ ದಿನಕ್ಕೆ ರಿಲಯನ್ಸ್ ಜ್ಯುವೆಲ್ಸ್‌‌ನ ಹೊಸ ಸಂಗ್ರಹ

Valentine’s Day: ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಜ್ಯುವೆಲರಿ ಬ್ರ್ಯಾಂಡ್ ಆಗಿರುವ ರಿಲಯನ್ಸ್ ಜ್ಯುವೆಲ್ಸ್ ಪ್ರೇಮಿಗಳ ದಿನಕ್ಕೆ ಹೊಸ ಕಲೆಕ್ಷನ್ ಲಾಂಚ್ ಮಾಡಿದೆ.

VISTARANEWS.COM


on

New collection of Reliance Jewels for Valentines Day
Koo

ಮುಂಬೈ: ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಮತ್ತು ಭಾರತದ ವಿಶ್ವಾಸಾರ್ಹ ಜ್ಯುವೆಲರಿ ಬ್ರ್ಯಾಂಡ್ (Jewelery Brand) ಆಗಿರುವ ರಿಲಯನ್ಸ್ ಜ್ಯುವೆಲ್ಸ್(reliance jewels), ಪ್ರೀತಿ ಮತ್ತು ಒಡನಾಟದ ಪ್ರತೀಕವಾದ ಪ್ರೇಮಿಗಳ ದಿನಕ್ಕೆಂದು ವಿಶೇಷವಾದ ‘ವ್ಯಾಲೆಂಟೈನ್ಸ್ ಡೇ ಜ್ಯುವೆಲರಿ ಕಲೆಕ್ಷನ್'(Valentine’s Day) ಬಿಡುಗಡೆ ಮಾಡಿದೆ. ಈ ಸಂಗ್ರಹವು ಸೊಗಸಾದ ಕೆತ್ತನೆಯ ಉಂಗುರಗಳು, ಜೋಡಿ ಬ್ಯಾಂಡ್‌ಗಳು ಮತ್ತು 14 ಕ್ಯಾರಟ್ (ಕೆಟಿ) ಹಳದಿ ಚಿನ್ನ, ಗುಲಾಬಿ ಚಿನ್ನ ಮತ್ತು ವಜ್ರಗಳಿಂದ ಮಾಡಿದ ಪೆಂಡೆಂಟ್‌ಗಳನ್ನು ಒಳಗೊಂಡಿದೆ.

ದೈನಂದಿನದ ಉಡುಗೆಗಳಿಗಾಗಿ ವಿನ್ಯಾಸಗೊಳಿಸಲಾದ ಈ ಸಂಗ್ರಹವು ದಂಪತಿ ನಡುವಿನ ಪ್ರೀತಿಯನ್ನು ಸದಾ ನೆನಪಿನಲ್ಲಿ ಇರುವಂತೆ ಮಾಡುತ್ತದೆ. ಈ ಸಂಗ್ರಹದಲ್ಲಿರುವ ರಿಲಯನ್ಸ್ ಜುವೆಲ್ಸ್‌ನ ವಿಶಿಷ್ಟ ವಿನ್ಯಾಸಗಳು ದೈನಂದಿನ ನೋಟವನ್ನು ಹೆಚ್ಚಿಸುತ್ತದೆ.

ವ್ಯಾಲೆಂಟೈನ್ಸ್ ಡೇ ಸಂಗ್ರಹವು ಮಹಿಳೆಯರು ಸಂಬಂಧಗಳಲ್ಲಿ ತರುವ ಮೆರಗು ಮತ್ತು ಸೌಂದರ್ಯದ ಚೈತನ್ಯವನ್ನು ಸೆರೆಹಿಡಿಯಲು ಮತ್ತು ಸಂಭ್ರಮಿಸಲು ಪೂರಕವಾಗಿವೆ. ಅತ್ಯಾಧುನಿಕ ಮತ್ತು ಸಂಕೀರ್ಣವಾಗಿ ವಿನ್ಯಾಸಗೊಳಿಸಲಾದ ಸಂಗ್ರಹವು ಮಹಿಳೆಯರು ಸಂಬಂಧದಲ್ಲಿ ತುಂಬುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಇದು ರಿಲಯನ್ಸ್ ಜ್ಯುವೆಲ್ಸ್‌ನ ಹೊಸ ಅಭಿಯಾನ #MyStrongerHalf ಗೆ ಪೂರಕವಾಗಿದೆ. ಈ ಅಭಿಯಾನವು ಮಹಿಳೆಯರು ಜೀವನದ ಏರಿಳಿತಗಳಲ್ಲಿ ತಮ್ಮ ಸಂಗಾತಿಯನ್ನು ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ಕ್ಷಣಗಳನ್ನು ಉತ್ತೇಜಿಸುತ್ತದೆ.

ಪ್ರೇಮಿಗಳ ದಿನವು ದೀರ್ಘಕಾಲದಿಂದ ನಿಜವಾದ ಪ್ರೀತಿಯ ಸಾರವನ್ನು ಸಂಕೇತಿಸುತ್ತದೆ. ದಂಪತಿಗಳ ನಡುವಿನ ಪರಸ್ಪರ ಪ್ರೀತಿ ಮತ್ತು ಮೆಚ್ಚುಗೆಯನ್ನು ಪ್ರತಿನಿಧಿಸುತ್ತದೆ. ‘ರಿಲಯನ್ಸ್ ಜ್ಯುವೆಲ್ಸ್ ವ್ಯಾಲೆಂಟೈನ್ ಡೇ’ ಸಂಗ್ರಹವು ಮಹಿಳೆಯರ ಶಕ್ತಿ ಮತ್ತು ಸಾಧನೆಗಳನ್ನು ಆಚರಿಸುವುದಲ್ಲದೆ ಇಂದಿನ ವೇಗದ ಜಗತ್ತಿನಲ್ಲಿ ಅವರು ನಿರ್ವಹಿಸುವ ಅನೇಕ ಪಾತ್ರಗಳಿಗಾಗಿ ಅವರನ್ನು ಗೌರವಿಸುತ್ತದೆ. ಆನ್‌ಲೈನ್ ಮತ್ತು ಆಯ್ದ ರಿಲಯನ್ಸ್ ಜ್ಯುವೆಲ್ಸ್ ಮಳಿಗೆಗಳಲ್ಲಿ ಲಭ್ಯವಿರುವ ಈ ಸಂಗ್ರಹವನ್ನು ಅನ್ವೇಷಿಸಲು ಎಲ್ಲ ಗ್ರಾಹಕರನ್ನೂ ರಿಲಯನ್ಸ್ ಜ್ಯುವೆಲ್ಸ್ ಆಹ್ವಾನಿಸುತ್ತದೆ.

ಈ ಸುದ್ದಿಯನ್ನೂ ಓದಿ: Reliance Jio: ಜಿಯೋ ಬ್ರೈನ್ ಎಐ ಪ್ಲಾಟ್ ಫಾರ್ಮ್ ಆರಂಭಿಸಿದ ಜಿಯೋ ಪ್ಲಾಟ್ ಫಾರ್ಮ್ಸ್

Continue Reading
Advertisement
Petrol Diesel Price
ಕರ್ನಾಟಕ32 mins ago

Petrol Diesel Price: ಪೆಟ್ರೋಲ್ ದರ ಹೆಚ್ಚಳ ಆದೇಶ‌ ವಾಪಸ್ ಪಡೆಯದಿದ್ದರೆ ಉಗ್ರ ಪ್ರತಿಭಟನೆ: ವಿಜಯೇಂದ್ರ ಎಚ್ಚರಿಕೆ

Siddaramaiah
ಕರ್ನಾಟಕ56 mins ago

ಗ್ಯಾರಂಟಿ ಉಚಿತ, ಬೆಲೆಯೇರಿಕೆ ಖಚಿತ; ಪೆಟ್ರೋಲ್‌ ಬೆಲೆ ಏರಿಕೆಯಿಂದ ರಾಜ್ಯ ಸರ್ಕಾರಕ್ಕೆ ಎಷ್ಟು ಆದಾಯ?

Amazon India
ದೇಶ1 hour ago

Amazon India: ನೀರು ಕುಡಿಯುವಂತಿಲ್ಲ, ವಾಶ್ ರೂಮ್ ಗೆ ಹೋಗುವಂತಿಲ್ಲ; ಸಿಬ್ಬಂದಿಗೆ ಅಮೆಜಾನ್ ಕಂಪನಿ ತಾಕೀತು!

HD Kumaraswamy
ಕರ್ನಾಟಕ2 hours ago

HD Kumaraswamy: ಚನ್ನಪಟ್ಟಣ ಜನರನ್ನು ಯಾರೂ ಭಯಪಡಿಸಲು ಆಗಲ್ಲ; ಡಿಕೆ ಬ್ರದರ್ಸ್‌ ವಿರುದ್ಧ ಎಚ್‌ಡಿಕೆ ವಾಗ್ದಾಳಿ

Father's Day Fashion
ಫ್ಯಾಷನ್2 hours ago

Father’s Day Fashion: ಅಪ್ಪಂದಿರ ದಿನಕ್ಕೂ ಉಂಟು ಫ್ಯಾಷನ್‌ ಸ್ಟೇಟ್‌ಮೆಂಟ್ಸ್!

Kendra Sahitya Akademi Award
ಪ್ರಮುಖ ಸುದ್ದಿ2 hours ago

ಕರ್ನಾಟಕದ ಶ್ರುತಿ ಬಿ.ಆರ್, ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗರಿ

Period Pain Relief Food
ಆರೋಗ್ಯ2 hours ago

Period Pain Relief Food: ಪೀರಿಯಡ್‌ನ ನೋವು ನಿವಾರಣೆಗೆ ಈ ಆಹಾರಗಳು ಸೂಕ್ತ

karnataka Weather Forecast
ಮಳೆ2 hours ago

Karnataka Weather : ದಕ್ಷಿಣ ಒಳನಾಡು, ಮಲೆನಾಡಲ್ಲಿ ತಗ್ಗಿದ ಮಳೆ; ಕರಾವಳಿಯಲ್ಲಿ ಮುಂದುವರಿಯಲಿದೆ ಅಬ್ಬರ

Actor Darshan
ಕರ್ನಾಟಕ2 hours ago

Actor Darshan: ದರ್ಶನ್‌ ಗ್ಯಾಂಗ್‌ಗೆ ಮತ್ತೆ 5 ದಿನ ಪೊಲೀಸ್‌ ಕಸ್ಟಡಿ; ಜಡ್ಜ್‌ ಮುಂದೆ ಪವಿತ್ರಾ ಗೌಡ ಕಣ್ಣೀರು!

Kendra Sahitya Akademi Award
ಪ್ರಮುಖ ಸುದ್ದಿ2 hours ago

Kendra Sahitya Akademi Award: ಇಬ್ಬರು ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ; ಯಾರಿವರು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ6 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 day ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು1 day ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು1 day ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ1 day ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌