Hindujas Family: ಶ್ರೀಮಂತ ಹಿಂದೂಜಾ ಮನೆ ಕೆಲಸದವರಿಗೆ ಸಂಬಳ ಎಷ್ಟು? ನಾಯಿ ಸಾಕುವ ಖರ್ಚಿಗಿಂತ ಕಡಿಮೆ! - Vistara News

Latest

Hindujas Family: ಶ್ರೀಮಂತ ಹಿಂದೂಜಾ ಮನೆ ಕೆಲಸದವರಿಗೆ ಸಂಬಳ ಎಷ್ಟು? ನಾಯಿ ಸಾಕುವ ಖರ್ಚಿಗಿಂತ ಕಡಿಮೆ!

Hindujas Family: ಹಿಂದೂಜಾ ಕುಟುಂಬ ಬ್ರಿಟನ್‌ನ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಂದು. ಇಂತಹ ಶ್ರೀಮಂತ ಕುಟುಂಬದಲ್ಲಿ ಮನೆಗೆಲಸ ಮಾಡುತ್ತಿದ್ದ ಮಹಿಳೆಗೆ ಅವರ ನಾಯಿಗೆ ಖರ್ಚು ಮಾಡುವುದಕ್ಕಿಂತ ಕಡಿಮೆ ಸಂಬಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಿಂದೂಜಾ ಕುಟುಂಬದ ಲೇಕ್ ಜಿನೀವಾ ವಿಲ್ಲಾದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮಹಿಳೆಗೆ ಕಡಿಮೆ ಸಂಬಳ ನೀಡುತ್ತಿದ್ದಾರೆ. ಆಕೆಯನ್ನು ವಾರದಲ್ಲಿ ಏಳು ದಿನಗಳ ಕಾಲ ಹಾಗೂ ಪ್ರತಿದಿನ 18 ಗಂಟೆಕಾಲ ಕೆಲಸ ಮಾಡಿದ್ದಕ್ಕೆ ಕೇವಲ ಏಳು ಸ್ವಿಸ್ ಅಂದರೆ 650ರೂ. ಸಂಬಳ ನೀಡುತ್ತಾರೆ. ಆದರೆ ಅವರು ಮನೆಯಲ್ಲಿ ಸಾಕಿದ ನಾಯಿಗೆ ಮಾತ್ರ ವಾರ್ಷಿಕವಾಗಿ 8,584 ಸ್ವಿಸ್ ಖರ್ಚು ಮಾಡುತ್ತಾರೆ ಎನ್ನಲಾಗಿದೆ.

VISTARANEWS.COM


on

Hindujas Family
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಣವಿದ್ದವರಿಗೆ ಶ್ರೀಮಂತರು ಎಂದು ಕರೆಯುತ್ತಾರೆ. ಆದರೆ ಶ್ರೀಮಂತಿಕೆ ಎನ್ನುವುದು ಹಣದಲ್ಲಿ ಮಾತ್ರವಲ್ಲ ಗುಣದಲ್ಲೂ ಇರಬೇಕಾಗುತ್ತದೆಯಲ್ಲವೆ? ಆದರೆ ಕೆಲವು ಶ್ರೀಮಂತರು ತಮ್ಮಲ್ಲಿ ಹಣವಿದೆ ಎಂಬ ದರ್ಪ ತೋರುತ್ತಾರೆ. ಅದಕ್ಕಾಗಿ ತಮ್ಮ ಮನೆಯ ಕೆಲಸದವರು, ಬಡವರನ್ನು ಕೀಳಾಗಿ ಕಾಣುತ್ತಾರೆ. ಬ್ರಿಟನ್‌ನಲ್ಲಿರುವ ಭಾರತೀಯ ಮೂಲದ ಅತಿ ಶ್ರೀಮಂತರಾದ ಹಿಂದೂಜಾ ಕುಟುಂಬದ್ದೂ ಇದೇ ಕತೆ. ಹಿಂದೂಜಾ ಕುಟುಂಬ (Hindujas Family) ಬ್ರಿಟನ್‌ನ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಂದು. ಇಂತಹ ಶ್ರೀಮಂತ ಕುಟುಂಬದಲ್ಲಿ ಮನೆಗೆಲಸ ಮಾಡುತ್ತಿದ್ದ ಮಹಿಳೆಗೆ ಅವರ ನಾಯಿಗೆ ಖರ್ಚು ಮಾಡುವುದಕ್ಕಿಂತ ಕಡಿಮೆ ಸಂಬಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಿಂದೂಜಾ ಕುಟುಂಬದ ನಾಲ್ವರಾದ ಪ್ರಕಾಶ್‌ ಹಿಂದೂಜಾ, ಅವರ ಪತ್ನಿ ಕಮಲ್, ಮಗ ಅಜಯ್ ಹಾಗೂ ಸೊಸೆ ನಮ್ರತಾ ಅವರ ಮೇಲೆ ಆರೋಪ ಮಾಡಲಾಗಿದೆ.

ಹಿಂದೂಜಾ ಕುಟುಂಬ ತಮ್ಮ ಲೇಕ್ ಜಿನೀವಾ ವಿಲ್ಲಾದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮಹಿಳೆಯೊಬ್ಬಳಿಗೆ ಕಡಿಮೆ ಸಂಬಳ ನೀಡುತ್ತಿದ್ದಾರೆ. ಆಕೆಯನ್ನು ವಾರದಲ್ಲಿ ಏಳು ದಿನಗಳ ಕಾಲ ಹಾಗೂ ಪ್ರತಿದಿನ 18 ಗಂಟೆಕಾಲ ಕೆಲಸ ಮಾಡಿದ್ದಕ್ಕೆ ಕೇವಲ ಏಳು ಸ್ವಿಸ್, ಅಂದರೆ ದಿನಕ್ಕೆ 650 ರೂ. ಸಂಬಳ ನೀಡುತ್ತಾರೆ. ಆದರೆ ಅವರು ಮನೆಯಲ್ಲಿ ಸಾಕಿದ ನಾಯಿಗೆ ಮಾತ್ರ ವಾರ್ಷಿಕವಾಗಿ 8,584 ಸ್ವಿಸ್ (ಸುಮಾರು 8 ಲಕ್ಷ ರೂ.) ಖರ್ಚು ಮಾಡುತ್ತಾರೆ. ಹಾಗಾಗಿ ಹಿಂದೂಜಾ ಕುಟುಂಬದವರು ತಮ್ಮ ಸೇವಕರಿಗಿಂತ ಸಾಕು ನಾಯಿಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ ಎಂದು ಸ್ವಿಟ್ಜರ್ಲ್ಯಾಂಡ್ ನ್ಯಾಯಾಲಯದ ಸರ್ಕಾರಿ ವಕೀಲ ಯವೆಸ್ ಬರ್ಟೋಸಾ ಹಿಂದೂಜಾ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Hindujas Family

ಅಷ್ಟೇ ಅಲ್ಲದೇ ಹಿಂದೂಜಾ ಕುಟುಂಬದವರು ಮನೆ ಕೆಲಸದ ಮಹಿಳೆಯ ಪಾಸ್‌ಪೋರ್ಟ್ ಕಿತ್ತುಕೊಂಡು ಅನುಮತಿಯಿಲ್ಲದೇ ಮನೆಯಿಂದ ಹೊರಬರದಂತೆ ನಿರ್ಬಂಧ ಹೇರಿದೆ. ಕೆಲಸದವರಿಗೆ ರಜೆ ಕೂಡ ನೀಡುತ್ತಿರಲಿಲ್ಲ. ಅಲ್ಲದೇ ಕರೆನ್ಸಿಯಲ್ಲಿ ಸಂಬಳ ನೀಡುತ್ತಿದ್ದ ಕಾರಣ ಅವರಿಗೆ ಸ್ವಿಟ್ಜರ್ಲ್ಯಾಂಡ್‌ನಲ್ಲಿ ಖರ್ಚು ಮಾಡಲು ಹಣವಿರುತ್ತಿರಲಿಲ್ಲ ಎಂದು ವಕೀಲರು ವಾದ ಮಂಡಿಸಿದ್ದಾರೆ.

ಹಿಂದೂಜಾ ಕುಟುಂಬ ನ್ಯಾಯಾಲಯದ ವೆಚ್ಚಕ್ಕಾಗಿ 1 ಮಿಲಿಯನ್ ಸ್ವಿಸ್ ಫ್ರಾಂಕ್ ಹಾಗೂ ಉದ್ಯೋಗಿಗಳ ನಿಧಿಗೆ 3.5 ಮಿಲಿಯನ್ ಫ್ರಾಂಕ್ ನೀಡಬೇಕೆಂದು ಅವರು ವಾದಿಸಿದ್ದಾರೆ. ಆದರೆ ಹಿಂದೂಜಾ ಕುಟುಂಬ ಈ ಆರೋಪವನ್ನು ತಳ್ಳಿಹಾಕಿದ್ದು, ತಾವು ಸಿಬ್ಬಂದಿಯನ್ನು ಘನತೆ, ಗೌರವದಿಂದ ನೋಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಬೈಕ್‌ ಇಳಿದು ಓಡಿದರೂ ಮಹಿಳೆಯನ್ನು ಅಟ್ಟಾಡಿಸಿ ತಿವಿದ ಹಸು

ಮನೆ ಕೆಲಸದವರಿಗೆ ಸ್ವಾತಂತ್ರ್ಯ, ಊಟ, ವಸತಿ, ಉತ್ತಮ ಸಂಬಳವನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಅದಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳನ್ನು ನೀಡಿದ್ದಾರೆ. ಆದರೆ ಸರ್ಕಾರಿ ವಕೀಲರು ಈ ಯಾವುದೇ ಮಾಹಿತಿಯನ್ನು ಉಲ್ಲೇಖಿಸಿಲ್ಲ ಎಂದು ಅವರು ವಾದಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

ICC T20 Ranking : ಸೂರ್ಯಕುಮಾರ್​ ಯಾದವ್​ ಹಿಂದಿಕ್ಕಿ ರ್ಯಾಂಕಿಂಗ್​​ನಲ್ಲಿ ನಂಬರ್ 1 ಸ್ಥಾನ ಪಡೆದ ಹೆಡ್​​​

icc-t20-ranking : ಸೂರ್ಯಕುಮಾರ್ ಯಾದವ್ ಡಿಸೆಂಬರ್ 2023 ರಿಂದ ಟಿ 20 ಸ್ವರೂಪದಲ್ಲಿ ಪುರುಷರ ಅಗ್ರ ಶ್ರೇಯಾಂಕದ ಬ್ಯಾಟರ್​ ಆಗಿದ್ದರು. ಹಿಂದಿನ ಹಲವು ಸಂದರ್ಭಗಳಲ್ಲಿ ಸೂರ್ಯ ನಂ .1 ಸ್ಥಾನದಲ್ಲಿದ್ದರು. ಆದಾಗ್ಯೂ, ಇತ್ತೀಚೆಗೆ ನಡೆದ ಟಿ 20 ವಿಶ್ವಕಪ್ 2024 ರಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾದ ಸೋಲಿನ ನಡುವೆಯೂ ಅದ್ಭುತ 76 ರನ್ ಗಳಿಸಿದ ಟ್ರಾವಿಸ್ ಹೆಡ್ ಐಸಿಸಿ ಟಿ 20 ಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

VISTARANEWS.COM


on

icc-t20-ranking
Koo

ನವದೆಹಲಿ: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್​ ಟ್ರಾವಿಸ್ ಹೆಡ್ ಜೂನ್ 26, 2024 ರಂದು ಆಗಿರುವ ಐಸಿಸಿ ಶ್ರೇಯಾಂಕದ (ICC T20 Ranking) ಇತ್ತೀಚಿನ ಅಪ್​ಡೇಟ್ ಪ್ರಕಾರ ಟಿ 20 ಅಂತಾರಾಷ್ಟ್ರೀಯ ಕ್ರಿಕೆಟ್​​ನ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. ಅವರು ಸೂರ್ಯಕುಮಾರ್ ಯಾದವ್ ಅವರ ಸುದೀರ್ಘ ಆಳ್ವಿಕೆಯನ್ನು ಕೊನೆಗೊಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಡಿಸೆಂಬರ್ 2023 ರಿಂದ ಟಿ 20 ಸ್ವರೂಪದಲ್ಲಿ ಪುರುಷರ ಅಗ್ರ ಶ್ರೇಯಾಂಕದ ಬ್ಯಾಟರ್​ ಆಗಿದ್ದರು. ಹಿಂದಿನ ಹಲವು ಸಂದರ್ಭಗಳಲ್ಲಿ ಸೂರ್ಯ ನಂ .1 ಸ್ಥಾನದಲ್ಲಿದ್ದರು. ಆದಾಗ್ಯೂ, ಇತ್ತೀಚೆಗೆ ನಡೆದ ಟಿ 20 ವಿಶ್ವಕಪ್ 2024 ರಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾದ ಸೋಲಿನ ನಡುವೆಯೂ ಅದ್ಭುತ 76 ರನ್ ಗಳಿಸಿದ ಟ್ರಾವಿಸ್ ಹೆಡ್ ಐಸಿಸಿ ಟಿ 20 ಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಸೂರ್ಯಕುಮಾರ್, ಫಿಲ್ ಸಾಲ್ಟ್, ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ನಾಲ್ಕು ಸ್ಥಾನ ಜಿಗಿದು ಅಗ್ರ ಐದು ಸ್ಥಾನಗಳಲ್ಲಿದ್ದಾರೆ. ವಿಂಡೀಸ್​​ನ ಜಾನ್ಸನ್ ಚಾರ್ಲ್ಸ್ 10ರೊಳಗಿನ ಸ್ಥಾನಕ್ಕೇರಿದ ಹೊಸ ಆಟಗಾರ. ಅಫ್ಘಾನಿಸ್ತಾನದ ಸ್ಟಾರ್ ಆಟಗಾರ ರಹಮಾನುಲ್ಲಾ ಗುರ್ಬಾಜ್ 10ರಲ್ಲಿ ಕೊನೇ ಸ್ಥಾನದಲ್ಲಿದ್ದಾರೆ.

ಆಲ್​ರೌಂಡರ್ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. ವೆಸ್ಟ್ ಇಂಡೀಸ್​​ನ ರೋಸ್ಟನ್ ಚೇಸ್ 17 ಸ್ಥಾನ ಮೇಲಕ್ಕೇರಿ 12ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : Ollie Robinson: 6, 6nb, 4, 6, 4, 6nb, 4, 6nb, 1; ಒಂದೇ ಓವರ್‌ನಲ್ಲಿ 43 ರನ್‌ ಕೊಟ್ಟ ಇಂಗ್ಲೆಂಡ್‌ ಬೌಲರ್; Video ಇದೆ

ಬೌಲಿಂಗ್ ರ್ಯಾಂಕಿಂಗ್​​ನಲ್ಲಿ ಇಂಗ್ಲೆಂಡ್ನ ಆದಿಲ್ ರಶೀದ್ ಅಗ್ರಸ್ಥಾನದಲ್ಲಿದ್ದಾರೆ. ಆದಾಗ್ಯೂ, ಪ್ರಸ್ತುತ ನಡೆಯುತ್ತಿರುವ ಟಿ 20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ರಶೀದ್ ಖಾನ್ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಜೋಶ್ ಹೇಜಲ್ವುಡ್ ಮೂರು ಸ್ಥಾನ ಮೇಲಕ್ಕೇರಿ ಹಸರಂಗ ನಂತರ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಕುಲ್ದೀಪ್ ಯಾದವ್ 20 ಸ್ಥಾನ ಮೇಲಕ್ಕೇರಿ 11ನೇ ಸ್ಥಾನದಲ್ಲಿದ್ದರೆ, ಜಸ್ಪ್ರೀತ್ ಬುಮ್ರಾ 44 ಸ್ಥಾನ ಮೇಲಕ್ಕೇರಿ 24ನೇ ಸ್ಥಾನಕ್ಕೇರಿದರೆ, ಇಂಗ್ಲೆಂಡ್​​ನ ಜೋಫ್ರಾ ಆರ್ಚರ್ 19 ರಿಂದ 38ನೇ ಸ್ಥಾನದಲ್ಲಿದ್ದಾರೆ.

Continue Reading

ಧಾರ್ಮಿಕ

Vastu Tips: ಬಾತ್ ರೂಮ್‌ನಲ್ಲಿ ಈ ವಸ್ತುಗಳಿದ್ದರೆ ಕುಟುಂಬಕ್ಕೆ ಭಾರಿ ಸಂಕಷ್ಟ!

ಮನೆಯೊಳಗೆ ಅದರಲ್ಲೂ ವಿಶೇಷವಾಗಿ ಸ್ನಾನಗೃಹಗಳಂತಹ ಸ್ವಚ್ಛತೆ ಮತ್ತು ನೈರ್ಮಲ್ಯವು ಅತಿಮುಖ್ಯವಾಗಿರುವಂತಹ ಪ್ರದೇಶಗಳಲ್ಲಿ ಇರಿಸುವ ವಸ್ತುಗಳ ವಿಚಾರದಲ್ಲಿ ಗಮನ ಕೊಡುವುದು ಅತೀ ಅಗತ್ಯ ಎನ್ನುತ್ತದೆ ವಾಸ್ತು ಶಾಸ್ತ್ರ (Vastu Tips). ಸ್ನಾನಗೃಹದಲ್ಲಿ ಕೆಲವೊಂದು ವಸ್ತುಗಳನ್ನು ಇಡಲೇಬಾರದು. ಅವು ಯಾವುದು ಗೊತ್ತೇ? ಈ ಲೇಖನ ಓದಿ.

VISTARANEWS.COM


on

By

Vastu Tips
Koo

ಮನೆಯಲ್ಲಿರುವ (home) ಪ್ರತಿಯೊಂದು ವಸ್ತುವೂ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಮನೆಯಲ್ಲಿ ನಾವು ಯಾವ ವಸ್ತುವನ್ನು ಇಡಬೇಕು, ಯಾವುದನ್ನು ಇಡಬಾರದು ಎಂಬ ಸರಿಯಾದ ತಿಳಿವಳಿಕೆ ನಮಗಿರಲೇಬೇಕು. ಇಲ್ಲವಾದರೆ ನಕಾರಾತ್ಮಕತೆ (Negativity) ಮನೆಯೊಳಗೆ ವ್ಯಾಪಿಸಿ ನಮ್ಮ ಜೀವನದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ.

ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಮನೆಯಲ್ಲಿ ಇರಿಸುವ ಅದರಲ್ಲೂ ಮುಖ್ಯವಾಗಿ ಸ್ನಾನಗೃಹದಲ್ಲಿನ (Bathroom) ವಸ್ತುಗಳು ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತವೆ . ಮನೆಯ ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತವೆ ಮಾತ್ರವಲ್ಲ ಹಣಕಾಸಿನ ತೊಂದರೆಗಳನ್ನು ತರುತ್ತದೆ ಎನ್ನಲಾಗುತ್ತದೆ. ಅಂತಹ ವಸ್ತುಗಳ ಕುರಿತು ಇಲ್ಲಿದೆ ಮಾಹಿತಿ.


ಮುರಿದ ಕನ್ನಡಿಗಳು

ವಾಸ್ತು ಶಾಸ್ತ್ರದ ಪ್ರಕಾರ ಸ್ನಾನಗೃಹಗಳಲ್ಲಿ ಒಡೆದ ಕನ್ನಡಿಗಳನ್ನು ಇಡುವುದನ್ನು ಸರಿಯಲ್ಲ. ಇದು ಆರ್ಥಿಕ ಅಸ್ಥಿರತೆಯನ್ನು ಉಂಟುಮಾಡಬಹುದು. ಇದನ್ನು ನಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಒಡೆದ ಕನ್ನಡಿಗಳು ಬಡತನಕ್ಕೆ ಕಾರಣವಾಗಬಹುದು ಎಂದು ಜ್ಯೋತಿಷ್ಯವು ಸೂಚಿಸುತ್ತದೆ. ಆದ್ದರಿಂದ, ಬಾತ್ ರೂಮ್ ನಲ್ಲಿ ಮುರಿದ ಕನ್ನಡಿ ಇದ್ದರೆ ಅದನ್ನು ತಕ್ಷಣವೇ ಹೊಸದರೊಂದಿಗೆ ಬದಲಾಯಿಸಿಕೊಳ್ಳಿ.

ಮುರಿದ ಚಪ್ಪಲಿಗಳು

ಬಾತ್ ರೂಮ್‌ನಲ್ಲಿ ಮುರಿದ ಚಪ್ಪಲಿಗಳನ್ನು ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮುರಿದ ಚಪ್ಪಲಿಗಳು ಗ್ರಹಗಳ ಜೋಡಣೆಗೆ ಸಂಬಂಧಿಸಿದ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಇದು ಮನೆಯಲ್ಲಿ ದುರದೃಷ್ಟವನ್ನು ಉಂಟು ಮಾಡುತ್ತದೆ.


ಖಾಲಿ ಬಕೆಟ್‌ಗಳು

ವಾಸ್ತು ಶಾಸ್ತ್ರದ ಪ್ರಕಾರ ಸ್ನಾನಗೃಹದಲ್ಲಿ ಖಾಲಿ ಬಕೆಟ್‌ಗಳನ್ನು ಇಡುವುದು ಮನೆಗೆ ದುರದೃಷ್ಟವನ್ನು ಆಹ್ವಾನಿಸುತ್ತದೆ ಎಂದು ಹೇಳಲಾಗುತ್ತದೆ. ಖಾಲಿ ಬಕೆಟ್‌ಗಳು ಬಡತನ ಮತ್ತು ಆರ್ಥಿಕ ನಷ್ಟವನ್ನು ಸಂಕೇತಿಸುತ್ತವೆ. ಖಾಲಿ ಬಕೆಟ್ ಸಂಪತ್ತಿನ ಇಳಿಕೆಗೆ ಕಾರಣವಾಗಬಹುದು. ಆದ್ದರಿಂದ, ಯಾವಾಗಲೂ ಬಾತ್ ರೂಮ್ ನಲ್ಲಿ ತುಂಬಿದ ಬಕೆಟ್ ಗಳನ್ನು ಇರಿಸಿಕೊಳ್ಳಲು ಅಥವಾ ಅವುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಲಹೆ ನೀಡಲಾಗುತ್ತದೆ.

ಇದನ್ನೂ ಓದಿ: Last Rites: ಅಂತ್ಯಕ್ರಿಯೆ ಮುಗಿಸಿ ಬರುವಾಗ ಸ್ಮಶಾನದತ್ತ ಹಿಂತಿರುಗಿ ನೋಡಬಾರದು ಅನ್ನೋದು ಏಕೆ ಗೊತ್ತಾ?

ಒದ್ದೆಯಾದ ಬಟ್ಟೆಗಳು

ಬಾತ್ ರೂಮ್ ನಲ್ಲಿ ಬಟ್ಟೆ ಒದ್ದೆಯಾದರೆ ತಕ್ಷಣ ತೆಗೆದು ಮನೆಯ ಹೊರಗೆ ಒಣಗಿಸಬೇಕು. ಬಾತ್ ರೂಮ್ ನಲ್ಲಿ ಒದ್ದೆಯಾದ ಬಟ್ಟೆಗಳನ್ನು ಬಿಡುವುದು ಸೂರ್ಯನ ಶಕ್ತಿ ಮನೆಯೊಳಗೇ ಪ್ರವೇಶಿಸದಂತೆ ತಡೆಯುತ್ತದೆ. ಇದು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ, ಸಂಭಾವ್ಯವಾಗಿ ನಕಾರಾತ್ಮಕತೆ ಮತ್ತು ವಿವಾದಗಳನ್ನು ಹೆಚ್ಚಿಸುತ್ತವೆ.

ಗಿಡಗಳು

ವಾಸ್ತುಶಾಸ್ತ್ರದ ಪ್ರಕಾರ ಸ್ನಾನಗೃಹಗಳಲ್ಲಿ ಗಿಡಗಳನ್ನು ಇಡಬಾರದು. ಸ್ನಾನಗೃಹಗಳಲ್ಲಿ ಇರಿಸಲಾದ ಸಸ್ಯಗಳು ಬೇಗನೆ ಕೆಡುತ್ತವೆ ಮತ್ತು ಮನೆಯಲ್ಲಿ ವಾಸ್ತು ದೋಷಗಳನ್ನು ಹೆಚ್ಚಿಸುತ್ತವೆ. ಸಸ್ಯಗಳಿಗೆ ಸೂರ್ಯನ ಬೆಳಕು ಮತ್ತು ತಾಜಾ ಗಾಳಿಯ ಅಗತ್ಯವಿರುತ್ತದೆ. ಇದು ಯಾವಾಗಲೂ ಸ್ನಾನಗೃಹಗಳಲ್ಲಿ ಲಭ್ಯವಿರುವುದಿಲ್ಲ. ಆದ್ದರಿಂದ, ಸ್ನಾನಗೃಹಗಳಲ್ಲಿ ಸಸ್ಯಗಳನ್ನು ಇರಿಸಬಾರದು.

Continue Reading

ಶಿಕ್ಷಣ

ECE v/s CSE: ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಷನ್; ಯಾವುದು ಉತ್ತಮ ಆಯ್ಕೆ?

ECE V/S CSE: ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ (ECE) ಮತ್ತು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ (CSE) ಈ ಎರಡರಲ್ಲಿ ಯಾವುದರ ಆಯ್ಕೆ ಉತ್ತಮ, ಯಾವ ಕೋರ್ಸ್ ತೆಗೆದುಕೊಂಡರೆ ಯಾವ ಉದ್ಯೋಗ (career guidance) ಪಡೆಯಬಹುದು? ಈ ಎರಡೂ ಕೋರ್ಸ್‌ಗಳ ವ್ಯತ್ಯಾಸ ಏನು? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

ECE V/S CSE
Koo

ಸಿಇಟಿ ಕೌನ್ಸೆಲಿಂಗ್‌ಗೆ ದಿನಗಣನೆ (career guidance) ಆರಂಭವಾಗಿದೆ. ಪಿಯುಸಿ ಮುಗಿಸಿ ಸಿಇಟಿ ರ‍್ಯಾಂಕ್‌ ಪಡೆದಿರುವ ವಿದ್ಯಾರ್ಥಿಗಳು ಯಾವ ಕೋರ್ಸ್‌ ತೆಗೆದುಕೊಳ್ಳಬೇಕು ಎಂಬ ಯೋಚನೆಯಲ್ಲಿ ತೊಡಗಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ (ECE) ಹಾಗೂ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ (CSE) ಈ ಎರಡರಲ್ಲಿ ಯಾವುದು ಆಯ್ಕೆ (ECE V/S CSE) ಮಾಡಬೇಕು ಎನ್ನುವ ಗೊಂದಲವಿದೆಯೇ? ಯಾವ ಕೋರ್ಸ್ ನಮಗೆ ಉತ್ತಮ ಭವಿಷ್ಯಕ್ಕೆ ದಾರಿ ಮಾಡಿ ಕೊಡಬಹುದು ಎನ್ನುವ ಚಿಂತೆಯೇ? ಹಾಗಿದ್ದರೆ ಇಲ್ಲಿದೆ ಈ ಕುರಿತ ಸಂಪೂರ್ಣ ಮಾಹಿತಿ.

ಎಂಜಿನಿಯರಿಂಗ್ ಕೋರ್ಸ್ ಗಳಲ್ಲಿ (Engineering course) ಇಂದು ಆಯ್ಕೆಗಳು ಸಾಕಷ್ಟಿವೆ. ಅಸಂಖ್ಯಾತ ವಿದ್ಯಾರ್ಥಿಗಳು ತಾವು ಯಾವ ಕೋರ್ಸ್ ಪಡೆಯಬೇಕು ಎನ್ನುವ ಗೊಂದಲದಲ್ಲಿ ಕೊನೆಗೆ ಯಾವುದಾದರೊಂದು ಪಡೆದು ಬಿಡುತ್ತಾರೆ. ಸರಿಯಾದ ಆಯ್ಕೆ ಮಾಡಿದರೆ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

ಇಸಿಇ ಅಥವಾ ಸಿಎಸ್‌ಇ

ಇಸಿಇ ಎಲೆಕ್ಟ್ರಾನಿಕ್ಸ್, ಸಂವಹನ ವ್ಯವಸ್ಥೆಗಳು ಮತ್ತು ಸಿಗ್ನಲ್ ಪ್ರೊಸೆಸಿಂಗ್ ಮೇಲೆ ಕೇಂದ್ರೀಕರಿಸುತ್ತದೆ. ಇದು ಸರ್ಕ್ಯೂಟ್‌ಗಳು, ಮೈಕ್ರೊಪ್ರೊಸೆಸರ್‌ ಮತ್ತು ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಕಲಿಸುತ್ತದೆ. ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಸ್ಮಾರ್ಟ್ ಹೋಮ್‌ಗಳವರೆಗೆ ಇಸಿಇ ಪದವೀಧರರು ನಮ್ಮೆಲ್ಲರನ್ನೂ ಸಂಪರ್ಕಿಸುವ ವೈರ್‌ಲೆಸ್ ಸಂವಹನ ಜಾಲದ ಬಗ್ಗೆ ಕಲಿಯುತ್ತಾರೆ.

ಸಿಎಸ್‌ಇ ವಿಭಾಗವು ಕಂಪ್ಯೂಟರ್ ವಿಜ್ಞಾನದ ತತ್ತ್ವಗಳು, ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಕಂಪ್ಯೂಟಿಂಗ್ ಮೇಲೆ ಕೇಂದ್ರೀಕರಿಸುತ್ತದೆ. ಇದು ಅಲ್ಗಾರಿದಮ್‌ಗಳು, ಡೇಟಾ ರಚನೆಗಳು ಮತ್ತು ಸಾಫ್ಟ್‌ವೇರ್ ಸಿಸ್ಟಮ್‌ಗಳನ್ನು ವಿನ್ಯಾಸಗೊಳಿಸುವುದು, ಕಾರ್ಯಗತಗೊಳಿಸುವುದು ಮತ್ತು ವಿಶ್ಲೇಷಿಸುವುದನ್ನು ಒಳಗೊಂಡಿರುತ್ತದೆ. ವಿಡಿಯೋ ಗೇಮ್‌ಗಳಿಂದ ಕೃತಕ ಬುದ್ಧಿಮತ್ತೆಯವರೆಗೆ ಸಿಎಸ್‌ಇ ಪದವೀಧರರು ತಮ್ಮ ಕೋಡಿಂಗ್ ಪರಿಣತಿಯೊಂದಿಗೆ ಉದ್ಯಮಗಳನ್ನು ಕ್ರಾಂತಿಗೊಳಿಸುವುದರ ಬಗ್ಗೆ ಕಲಿಯುತ್ತಾರೆ.


ಇಸಿಇ ಮತ್ತು ಸಿಎಸ್‌ಇ ನಡುವಿನ ಪ್ರಮುಖ ವ್ಯತ್ಯಾಸಗಳೇನು?

ಇಸಿಇ ಎನ್ನುವುದು ಹಾರ್ಡ್‌ವೇರ್ ಆಧಾರಿತವಾಗಿದ್ದು, ಸಿಎಸ್‌ಇ ಸಾಫ್ಟ್‌ವೇರ್ ಆಧಾರಿತವಾಗಿದೆ.

ಇಸಿಇ ಎಲೆಕ್ಟ್ರಾನಿಕ್ಸ್, ಸಂವಹನ ವ್ಯವಸ್ಥೆ ಮತ್ತು ಸಿಗ್ನಲ್ ಪ್ರೊಸೆಸಿಂಗ್ ಅಧ್ಯಯನವಾಗಿದ್ದು, ಸಿಎಸ್‌ಇ ಎನ್ನುವುದು ಸಾಫ್ಟ್‌ವೇರ್ ಅಭಿವೃದ್ಧಿ, ಅಲ್ಗಾರಿದಮ್‌ಗಳು ಮತ್ತು ಸಮಸ್ಯೆ ಪರಿಹರಿಸುವ ಅಧ್ಯಯನವಾಗಿದೆ.

ಇಸಿಇ ಎಲೆಕ್ಟ್ರಾನಿಕ್ ಸಾಧನಗಳನ್ನು ವಿನ್ಯಾಸಗೊಳಿಸುತ್ತದೆ ಮತ್ತು ಅಭಿವೃದ್ಧಿಪಡಿಸುತ್ತದೆ ಮತ್ತು ಸಿಎಸ್‌ಇ ಸಾಫ್ಟ್ ವೇರ್ ಸಿಸ್ಟಮ್, ಅಲ್ಗಾರಿದಮ್‌ಗಳು ಮತ್ತು ಡೇಟಾ ರಚನೆಗಳನ್ನು ವಿನ್ಯಾಸ ಮತ್ತು ಅಳವಡಿಕೆ ಮಾಡುವ ಕೌಶಲವನ್ನು ಕಲಿಸುತ್ತದೆ.

ಇಸಿಇನಲ್ಲಿ ಸರ್ಕ್ಯೂಟ್ ಡಿಸೈನ್, ಸಿಗ್ನಲ್ ಪ್ರೊಸೆಸಿಂಗ್, ಸಂವಹನ ಕೌಶಲವನ್ನು ಕಲಿತರೆ, ಸಿಎಸ್ ಇ ನಲ್ಲಿ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್, ಅಲ್ಗಾರಿದಮ್‌, ಸಾಫ್ಟ್ ವೇರ್ ಅಭಿವೃದ್ಧಿಯನ್ನು ಕಲಿಯಬಹುದು.

ಇಸಿಇನಲ್ಲಿ ಗಣಿತ, ಮತ್ತು ಭೌತಶಾಸ್ತ್ರ ಪಠ್ಯಕ್ರಮವನ್ನು ಒಳಗೊಂಡಿದ್ದರೆ ಸಿಎಸ್ ಇ ಪಠ್ಯಕ್ರಮವು ಗಣಿತ ಮತ್ತು ಅಲ್ಗಾರಿದಮ್‌ಗಳನ್ನು ಒಳಗೊಂಡಿದೆ.

ಇಸಿಇನಲ್ಲಿ ಸರ್ಕ್ಯೂಟ್ ಥಿಯರಿ ಮತ್ತು ನೆಟ್ವರ್ಕ್ಸ್, ಸಂಕೇತಗಳು ಮತ್ತು ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಸರ್ಕ್ಯೂಟ್‌ಗಳು.

ಯಾವುದರಲ್ಲಿ ಏನು ಕಲಿಯಬಹುದು?

ಡಿಜಿಟಲ್ ಎಲೆಕ್ಟ್ರಾನಿಕ್ಸ್, ವಿದ್ಯುತ್ಕಾಂತೀಯ ಕ್ಷೇತ್ರಗಳು ಮತ್ತು ಅಲೆಗಳ ಕುರಿತು ಅಧ್ಯಯನಕ್ಕೆ ಅವಕಾಶವಿದ್ದು, ಸಿಎಸ್‌ಇನಲ್ಲಿ ಡೇಟಾ ರಚನೆಗಳು ಮತ್ತು ಕ್ರಮಾವಳಿಗಳು, ಆಪರೇಟಿಂಗ್ ಸಿಸ್ಟಮ್ಸ್, ಡೇಟಾಬೇಸ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್, ಕಂಪ್ಯೂಟರ್ ನೆಟ್ವರ್ಕ್ಸ್, ವೆಬ್ ತಂತ್ರಜ್ಞಾನಗಳ ಕುರಿತು ಕಲಿಯಬಹುದು.

ತಂತ್ರಜ್ಞಾನ ಕ್ಷೇತ್ರದಲ್ಲಿ ಇಸಿಇಯಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ (IoT), ಎಡ್ಜ್ ಕಂಪ್ಯೂಟಿಂಗ್, ರೊಬೊಟಿಕ್ಸ್ ಮತ್ತು ಆಟೊಮೇಷನ್., ನವೀಕರಿಸಬಹುದಾದ ಶಕ್ತಿ, 5 ಜಿ ಇತ್ಯಾದಿಗಳನ್ನು ಕಲಿಸಿದರೆ, ಸಿಎಸ್ಇ ನಲ್ಲಿ ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ (ML), ಕ್ಲೌಡ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಾಲಿಟಿಕ್ಸ್, ವರ್ಧಿತ ರಿಯಾಲಿಟಿ (AR), ವರ್ಚುವಲ್ ರಿಯಾಲಿಟಿ (ವಿಆರ್) ಬಗ್ಗೆ ಕಲಿಯಬಹುದು.

ಇದನ್ನೂ ಓದಿ: NTA Website: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಎನ್‌ಟಿಎ ವೆಬ್‌ಸೈಟ್‌ ಹ್ಯಾಕ್‌? ಸಂಸ್ಥೆ ಹೇಳೋದಿಷ್ಟು

ಉದ್ಯೋಗವಕಾಶ

ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಷನ್

ಇಸಿಇ ಕಲಿತವರಿಗೆ ದೂರಸಂಪರ್ಕ, ಎಂಬೆಡೆಡ್ ಸಿಸ್ಟಮ್ಸ್, ಸೆಮಿಕಂಡಕ್ಟರ್ ಉದ್ಯಮ, ಪವರ್ ಆಂಡ್ ಎನರ್ಜಿ, ರಕ್ಷಣಾ ಮತ್ತು ಏರೋಸ್ಪೇಸ್‌ನಲ್ಲಿ ಉದ್ಯೋಗಾವಕಾಶ ಲಭ್ಯವಿದೆ. ಈ ವಿಭಾಗದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದವರು ಖಾಸಗಿ ಮಾತ್ರವಲ್ಲ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರಿಯನ್ನೂ ಹೆಚ್ಚಿನ ಪ್ರಮಾಣದಲ್ಲಿ ಪಡೆಯಬಹುದು. ಮುಂಬರುವ ದಿನಗಳಲ್ಲಿ ಸೆಮಿ ಕಂಡಕ್ಟರ್‌ ಉದ್ಯಮ ಭಾರತದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದಲಿದೆ. ಹಾಗಾಗಿ ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಷನ್ ಓದಿದವರಿಗೆ ಸಾಕಷ್ಟು ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಈ ವಿಭಾಗದಲ್ಲಿ ಓದಿದವರು ಪೂರಕ ಕೋರ್ಸ್‌ಗಳನ್ನು ಮಾಡುವ ಮೂಲಕ ಸಾಫ್ಟ್‌ವೇರ್‌ ಉದ್ಯಮದಲ್ಲೂ ಉದ್ಯೋಗ ಗಿಟ್ಟಿಸಲು ಅವಕಾಶ ಇರುತ್ತದೆ. ಈ ವಿಭಾಗದಲ್ಲಿ ಕಂಪ್ಯೂಟರ್‌ ಸೈನ್ಸ್‌ಗೆ ಹೋಲಿಸಿದರೆ ವೇತನ ಪ್ಯಾಕೇಜ್‌ ಸದ್ಯ ಸ್ವಲ್ಪ ಕಡಿಮೆ ಇದೆ. ಆದರೆ ಆರ್ಥಿಕ ಕುಸಿತ ಇತ್ಯಾದಿ ಸಂದರ್ಭಗಳಲ್ಲಿ ದಿಢೀರ್‌ ಉದ್ಯೋಗ ಕುಸಿತ ಆಗುವ ಅಪಾಯ ಕಡಿಮೆ. ಕ್ರಿಯಾಶೀಲ ಮನಸ್ಸಿನ ಮತ್ತು ಸ್ವಂತ ಉದ್ದಿಮೆ ಸ್ಥಾಪಿಸುವ ಕನಸಿರುವ ಯುವ ಜನತೆಗೆ ಈ ವಿಭಾಗ ಸೂಕ್ತ.

ಕಂಪ್ಯೂಟರ್‌ ಸೈನ್ಸ್‌

ಸಿಎಸ್‌ಇ ಕಲಿತವರಿಗೆ ಸಾಫ್ಟ್‌ವೇರ್ ಅಭಿವೃದ್ಧಿ, ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್, ಕೃತಕ ಬುದ್ಧಿಮತ್ತೆ (AL) ಮತ್ತು ಯಂತ್ರ ಕಲಿಕೆ (ML), ಸೈಬರ್ ಭದ್ರತೆ, ವೆಬ್ ಅಭಿವೃದ್ಧಿ ಮತ್ತು ಇ-ಕಾಮರ್ಸ್ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ಲಭ್ಯವಾಗಲಿದೆ. ಪಿಯುಸಿ ಮುಗಿಸಿದ ಬಹುತೇಕ ವಿದ್ಯಾರ್ಥಿಗಳ ಮೊದಲ ಆಯ್ಕೆ ಕಂಪ್ಯೂಟರ್‌ ಸೈನ್ಸ್‌ ಆಗಿರುತ್ತದೆ. ಸಾಫ್ಟ್‌ವೇರ್‌ ಉದ್ಯಮ ಅತ್ಯಂತ ವಿಶಾಲವಾಗಿದೆ. ಹಾಗಾಗಿ ಲಕ್ಷಾಂತರ ಉದ್ಯೋಗವಕಾಶ ಇಲ್ಲಿದೆ. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಐ, ರೊಬಾಟಿಕ್‌, ಡೇಟಾ ಸೈನ್ಸ್‌ ಇತ್ಯಾದಿ ಹಲವಾರು ವಿಭಾಗಗಳಿವೆ. ಖ್ಯಾತನಾಮ ಸಾಫ್ಟ್‌ವೇರ್‌ ಬ್ರಾಂಡ್‌ನ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿದರೆ ಕೈತುಂಬ ಸಂಬಳ ಸಂಪಾದಿಸಬಹುದು. ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಷನ್ ವಿಭಾಗಕ್ಕೆ ಹೋಲಿಸಿದರೆ ಇಲ್ಲಿ ಸಂಬಳದ ಪ್ಯಾಕೇಜ್‌ ತುಸು ಹೆಚ್ಚೇ ಇರುತ್ತದೆ. ಆದರೆ ಇಲ್ಲಿ ಪೈಪೋಟಿಯೂ ವಿಪರೀತ ಹೆಚ್ಚಿದೆ. ತಂತ್ರಜ್ಞಾನ ಆಗಾಗ ಅಪ್‌ಡೇಟ್‌ ಆಗುತ್ತ ಇರುತ್ತದೆ. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಓದಿದರೂ ಪೂರಕವಾಗಿ ಹೊಸ ಹೊಸ ತಂತ್ರಜ್ಞಾನದ ಕೋರ್ಸ್‌ ಕಲಿಯಲೇಬೇಕಾಗುತ್ತದೆ. ಇಲ್ಲಿ ಉದ್ಯೋಗವಕಾಶ ಹೆಚ್ಚಿದೆ, ಸಂಬಳವೂ ಹೆಚ್ಚಿದೆ. ಆದರೆ ಆಗಾಗ ಉಂಟಾಗುವ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಉದ್ಯೋಗ ಅಭದ್ರತೆಯ ಅಪಾಯವೂ ಇರತ್ತದೆ.

ಅಂತಿಮವಾಗಿ ಹೇಳಬೇಕೆಂದರೆ: ಪೋಷಕರ ಒತ್ತಾಯಕ್ಕೆ ಅಥವಾ ಯಾರೋ ಈ ಕೋರ್ಸ್‌ ಮಾಡಿದ್ದಾರೆ ಎಂಬ ಪ್ರಭಾವಕ್ಕೆ ಒಳಗಾಗದೆ ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಆ ಕೋರ್ಸನ್ನೇ ಆಯ್ಕೆ ಮಾಡುವುದು ಉತ್ತಮ. ಏಕೆಂದರೆ ಬಿಇ ಅಥವಾ ಬಿಟೆಕ್‌ ಮುಗಿದ ಮೇಲೆ ಈ ಪದವಿಗಿಂತ ಹೆಚ್ಚಾಗಿ ನಿಮ್ಮ ಆಸಕ್ತಿ ಮತ್ತು ಕ್ರಿಯಾಶೀಲತೆಯ ಮೇಲೆ ನಿಮ್ಮ ಉದ್ಯೋಗದ ಉಜ್ವಲ ಭವಿಷ್ಯ ನಿಂತಿರುತ್ತದೆ.

Continue Reading

ಬೆಂಗಳೂರು

Essay on Kempegowda in Kannada: ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ!

Essay on Kempegowda in Kannada: ವೇಗವಾಗಿ ಬೆಳೆಯುತ್ತಿರುವ ರಾಜ್ಯ ರಾಜ್ಯಧಾನಿ ಬೆಂಗಳೂರು ಇವತ್ತು ಕೋಟ್ಯಂತರ ಜನರ ಆಶ್ರಯತಾಣವಾಗಿದೆ. ಇಲ್ಲಿನವರಿಗಿಂತ ಹೆಚ್ಚು ಮಂದಿ ಹೊರಗಿನಿಂದ ಬಂದು ಇಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅತ್ಯಂತ ಸುರಕ್ಷಿತ, ಸುಂದರ ಮತ್ತು ಸುಸಜ್ಜಿತ ನಗರವಾಗಿ ಬೆಂಗಳೂರು ಬೆಳೆಯಲು ಕೆಂಪೇಗೌಡ (kempegowda jayanthi) ಅವರ ವಿವೇಚನೆ ಮತ್ತು ದೂರದೃಷ್ಟಿಯೇ ಮುಖ್ಯಕಾರಣ. ಇಂದು ನಾಡಪ್ರಭು ಕೆಂಪೇಗೌಡ ಜಯಂತಿ. ಈ ಹಿನ್ನೆಲೆಯಲ್ಲಿ ಅವರ ಜೀವನ ಮತ್ತು ಸಾಧನೆಯ ಚಿತ್ರಣ ಇಲ್ಲಿದೆ.

VISTARANEWS.COM


on

By

Nadaprabhu Kempegowda
Koo

ಬೆಂಗಳೂರು (bengaluru) ಹೆಸರೆತ್ತಿದ್ದ ತಕ್ಷಣ ನೆನಪಾಗುವುದು (Essay on Kempegowda in Kannada) ನಾಡಪ್ರಭು ಕೆಂಪೇಗೌಡರು ಆಧುನಿಕ (kempegowda jayanthi) ಬೆಂಗಳೂರಿನ ಮೂಲ ಶಿಲ್ಪಿ! ನಾಡಪ್ರಭು ಕೆಂಪೇಗೌಡ (Nadaprabhu Kempegowda). ಬೆಂಗಳೂರಿನ ನಿರ್ಮಾತೃ ಆಗಿರುವ ಇವರು ವಿಜಯನಗರ ಸಾಮ್ರಾಜ್ಯದಲ್ಲಿ (vijayanagara empire) ಮುಖ್ಯಸ್ಥರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಗೌಡ ವಂಶಸ್ಥರಾದ ಇವರು ಆ ಕಾಲದಲ್ಲಿ ಅತ್ಯಂತ ವಿದ್ಯಾವಂತ ಯಶಸ್ವಿ ಆಡಳಿತಗಾರರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದರು.

ವೇಗವಾಗಿ ಬೆಳೆಯುತ್ತಿರುವ ರಾಜ್ಯ ರಾಜ್ಯಧಾನಿ ಬೆಂಗಳೂರು ಇವತ್ತು ಕೋಟ್ಯಂತರ ಜನರ ಆಶ್ರಯತಾಣವಾಗಿದೆ. ಇಲ್ಲಿನವರಿಗಿಂತ ಹೆಚ್ಚು ಮಂದಿ ಹೊರಗಿನಿಂದ ಬಂದು ಇಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅತ್ಯಂತ ಸುರಕ್ಷಿತ, ಸುಂದರ ಮತ್ತು ಸುಸಜ್ಜಿತ ನಗರವಾಗಿ ಬೆಂಗಳೂರು ಬೆಳೆಯಲು ಕೆಂಪೇಗೌಡ ಅವರ ವಿವೇಚನೆ ಮತ್ತು ದೂರದೃಷ್ಟಿಯೇ ಮುಖ್ಯಕಾರಣ.

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡ ಅವರು 1537ರಲ್ಲೇ ಬೆಂಗಳೂರು ನಗರವನ್ನು ಕಟ್ಟಿದರು. ಬಳಿಕ ಕೆಂಪೇಗೌಡರ ರಾಜಧಾನಿಯನ್ನು ಯಲಹಂಕದಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಎಲ್ಲ ಕುಲ ಕಸುಬುದಾರರಿಗೂ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಟ್ಟ ಅವರು, ಬೆಂಗಳೂರು ನಗರವನ್ನು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯಲು ಕಾರಣರಾದರು.

ಕೆಂಪೇಗೌಡ ಅವರ ಹಿನ್ನೆಲೆ ಏನು?

ಶಾಸನಗಳ ಪ್ರಕಾರ ನಾಡಪ್ರಭು ಕೆಂಪೇಗೌಡರ ಪೂರ್ವಜರು ತಮಿಳುನಾಡಿನಿಂದ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮಕ್ಕೆ ವಲಸೆ ಬಂದಿದ್ದರು ಎನ್ನಲಾಗುತ್ತದೆ. ರಣಭೈರೇಗೌಡ ಅವರು ಏಳು ತಮ್ಮಂದಿರಾದ ಮಲ್ಲಭೈರೇಗೌಡ, ಸಣ್ಣ ಭೈರೇಗೌಡ, ವೀರೇಗೌಡ, ಮರೀಗೌಡ, ಗಿಡ್ಡೇಗೌಡ, ತಮ್ಮೇಗೌಡ ಮತ್ತು ಗಿಟ್ಟಪ್ಪಗೌಡ ಅವರೊಂದಿಗೆ ಮಕ್ಕಳು ಜಯಗೌಡ, ಸಣ್ಣ ಭೈರೇಗೌಡ, ಹಾವಳಿ ಬೈರೇಗೌಡ ಅವರೊಂದಿಗೆ ಬಂದು ಇಲ್ಲಿ ನೆಲೆಯಾದರು. ತಮ್ಮ ಒಬ್ಬಳೇ ಮಗಳು ದೊಡ್ಡಮ್ಮಳನ್ನು ಆ ಪ್ರಾಂತ್ಯದ ಯಾಕಿಲ ದೊರೆ ಸೆಲ್ವ ನಾಯಕ ಸೊಸೆ ಮಾಡಿಕೊಂಡಿದ್ದರಿಂದ ಅವರೆಲ್ಲ ಇಲ್ಲಿಗೆ ಬಂದರು ಎನ್ನಲಾಗುತ್ತದೆ.

ಮಾಗಡಿ ಕೆಂಪೇಗೌಡ, ಯಲಹಂಕ ಕೆಂಪೇಗೌಡ, ನಾಡಪ್ರಭು ಕೆಂಪೇಗೌಡರು ಬೇರೆ ಬೇರೆಯೇ ಅಥವಾ ಎಲ್ಲರೂ ಒಬ್ಬರೇ ಎನ್ನುವ ಪ್ರಶ್ನೆಗಳು ಈಗಲೂ ಇವೆ. ಕ್ರಿ.ಶ.1420ರಲ್ಲಿ ಅಧಿಕಾರಕ್ಕೆ ಏರಿದ ಯಲಹಂಕ ಕೆಂಪೇಗೌಡ ರಣಭೈರೇಗೌಡ ಅವರ ಹಿರಿಯ ಮಗ ಜಯಗೌಡ ಎನ್ನಲಾಗುತ್ತದೆ. 13 ವರ್ಷಗಳ ಕಾಲ ಆಡಳಿತ ನಡೆಸಿ 1433ರಲ್ಲಿ ಮೃತಪಟ್ಟಿದ್ದರು. ಅವರಿಗೆ ಇಬ್ಬರು ಮಕ್ಕಳು. ಗಿಡ್ಡೇಗೌಡ ಮತ್ತು ಮಾಚಯ್ಯಗೌಡ. ಹಿರಿಯನಾದ ಗಿಡ್ಡೇಗೌಡ, ತಂದೆಯ ಅನಂತರ ಅಧಿಕಾರಕ್ಕೆ ಏರಿದರು.

ಮನೆದೇವರು ಕರಗದಮ್ಮನಿಗೆ ಕೆಂಪಮ್ಮಹರಕೆ ಹೊತ್ತಿದ್ದರಿಂದ ಹಲವು ವರ್ಷಗಳ ಅನಂತರ ಅವರಿಗೆ ಗಂಡು ಮಗು ಹುಟ್ಟಿದ್ದು, ಆ ಮಗುವಿಗೆ ಕೆಂಪನಂಜೇಗೌಡ ಎಂದು ನಾಮಕರಣ ಮಾಡಲಾಯಿತು. 10 ವರ್ಷಗಳ ಕಾಲ ಆಡಳಿತ ನಡೆಸಿದ ಗಿಡ್ಡೇಗೌಡ ಅವರ ಬಳಿಕ ಅಧಿಕಾರಕ್ಕೆ ಬಂದವರು ಕೆಂಪನಂಜೇಗೌಡ. ಇವರು 70 ವರ್ಷಗಳ ಕಾಲ ಯಲಹಂಕವನ್ನು ಆಳಿದ್ದರು. ಇವರ ಹಿರಿಯ ಪುತ್ರ ನಾಡಪ್ರಭು ಕೆಂಪೇಗೌಡ. ಕೆಂಪೇಗೌಡ ಅವರು ಹೆಸರಘಟ್ಟ ಸಮೀಪದ ಐವರುಕಂದಪುರದ (ಐಗೊಂಡಾಪುರ) ಗುರುಕುಲದಲ್ಲಿದ್ದಾಗ ತಮ್ಮ ನಾಯಕತ್ವದ ಕೌಶಲ್ಯವನ್ನು ಪ್ರದರ್ಶಿಸಿದರು.

ವಿಜಯನಗರದೊಂದಿಗೆ ಸಂಬಂಧ

ಕೆಂಪೇಗೌಡರಿಗೆ 1513ರಲ್ಲಿ ಪಟ್ಟಾಭಿಷೇಕ ನಡೆದಿತ್ತು. ಇವರ ಅಧಿಕಾರ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಶ್ರೀಕೃಷ್ಣದೇವರಾಯ ಮತ್ತು ಅಚ್ಯುತರಾಯ ಆಳಿದರು. ಸಣ್ಣ ಗ್ರಾಮವಾಗಿದ್ದ ಬೆಂಗಳೂರನ್ನು ಕೆಂಪೇಗೌಡರು ವಿಸ್ತರಿಸುತ್ತಾ ಬೆಳೆಸಿದರು. ಕ್ರಿ.ಶ.1537ರ ವೇಳೆಗೆ ಬೆಂಗಳೂರಿಗೆ ಕೋಟೆ ಕಟ್ಟಿಸಿ ಅದನ್ನು ರಾಜಧಾನಿಯನ್ನಾಗಿ ಮಾಡಿದರು.

ಬೆಂಗಳೂರಿನ ಕಲ್ಪನೆ

ಕೆಂಪೇಗೌಡ ಅವರು ತಮ್ಮ ಮಂತ್ರಿ ವೀರಣ್ಣ ಮತ್ತು ಸಲಹೆಗಾರ ಗಿಡ್ಡೆ ಗೌಡ ಅವರೊಂದಿಗೆ ಶಿವನಸಮುದ್ರದ ಕಡೆಗೆ ಬೇಟೆಯಾಡಲು ಹೋಗಿದ್ದಾಗ ಬೆಂಗಳೂರನ್ನು ಸುಂದರ ನಗರವನ್ನಾಗಿ ನಿರ್ಮಿಸುವ ಯೋಜನೆ ಮಾಡಿಕೊಂಡರು ಎನ್ನಲಾಗುತ್ತದೆ.

ಹೇಗಿತ್ತು ಪ್ರಾರಂಭ?

ಪ್ರಾರಂಭದಲ್ಲಿ ಕೆಂಪೇಗೌಡ ಅವರು ಬೆಂಗಳೂರು ನಗರದಲ್ಲಿ ಕೋಟೆ, ಕಂಟೋನ್ಮೆಂಟ್, ನೀರಿನ ಜಲಾಶಯಗಳು, ದೇವಾಲಯಗಳು ಮತ್ತು ಎಲ್ಲಾ ವ್ಯಾಪಾರ ಮತ್ತು ವೃತ್ತಿಯ ಜನರು ವಾಸಿಸಲು ಇರಬೇಕು ಎಂದು ಬಯಸಿ ಬೆಂಗಳೂರು- ಪುಣೆ ಹೆದ್ದಾರಿಯಲ್ಲಿ ಬೆಂಗಳೂರಿನಿಂದ 48 ಕಿಲೋಮೀಟರ್ ದೂರದಲ್ಲಿರುವ ಶಿವಗಂಗಾ ಸಂಸ್ಥಾನವನ್ನು ವಶಪಡಿಸಿಕೊಂಡರು. ವಿಜಯನಗರ ಚಕ್ರವರ್ತಿ ಅಚ್ಯುತರಾಯರ ಅನುಮತಿ ಪಡೆದು ಕ್ರಿ.ಶ. 1537ರಲ್ಲಿ ಬೆಂಗಳೂರು ಕೋಟೆ ಮತ್ತು ಪಟ್ಟಣವನ್ನು ನಿರ್ಮಿಸಿದ ಅವರು ಬಳಿಕ ತಮ್ಮ ರಾಜಧಾನಿಯನ್ನು ಯಲಹಂಕದಿಂದ ಹೊಸ ಬೆಂಗಳೂರು ಪೇಟೆಗೆ ಸ್ಥಳಾಂತರಿಸಿದರು.

ಜೈಲು ಸೇರಿದ್ದರು

ಅವಿವಾಹಿತ ಮಹಿಳೆಯರ ಎಡಗೈಯ ಕೊನೆಯ ಎರಡು ಬೆರಳುಗಳನ್ನು ಕತ್ತರಿಸುವ ಪದ್ಧತಿಯನ್ನು ನಿಷೇಧಿಸಿದ ಕೀರ್ತಿ ಇವರದ್ದು. ಬಹುಭಾಷಾ ಮತ್ತು ತೆಲುಗು ಭಾಷೆಯಲ್ಲಿ ಯಕ್ಷಗಾನ ನಾಟಕವಾದ ಗಂಗಾಗೌರಿ ವಿಲಾಸದ ರಚನೆ ಮಾಡಿರುವ ಕೆಂಪೇಗೌಡ ಅವರನ್ನು ನೆರೆಯ ಪಾಳೇಗಾರರ ದೂರಿನ ಬಳಿಕ ಜೈಲಿಗೆ ಹಾಕಲಾಯಿತು ಎನ್ನಲಾಗುತ್ತದೆ. ಐದು ವರ್ಷಗಳ ಕಾಲ ಜೈಲಿನಲ್ಲಿದ್ದ ಅವರು ಬಳಿಕ ಸುಮಾರು 56 ವರ್ಷಗಳ ಕಾಲ ಆಳ್ವಿಕೆ ನಡೆಸಿ 1569ರಲ್ಲಿ ನಿಧನರಾದರು.


54 ಪೇಟೆಗಳ ನಗರ ಬೆಂಗಳೂರು

ಇವತ್ತು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಐಟಿ ಬಿಟಿ ಕಂಪನಿಗಳ ತವರಾಗಿರುವ ಬೆಂಗಳೂರಿನಲ್ಲಿ ಕೆಂಪೇಗೌಡರು 54 ಪೇಟೆಗಳು ನಿರ್ಮಿಸಿದ್ದರೆಂದು ಹೇಳಲಾಗುತ್ತದೆ. ಎಲ್ಲ ಜಾತಿ, ಸಮುದಾಯದವರಿಗೆ ವಾಸಿಸಲು ಯೋಗ್ಯವಾದ ನಗರವನ್ನು ನಿರ್ಮಿಸಿದ ಅವರ ಸರ್ವಧರ್ಮ ಸಹಿಷ್ಣುತೆಯು ಪ್ರಜೆಗಳ ಮನಗೆದ್ದಿತ್ತು.

ಇದನ್ನೂ ಓದಿ: Bengaluru News: ಗೋ ಶಾಲೆಗಳಿಗೆ 51 ಲಕ್ಷ ರೂ. ದೇಣಿಗೆ ನೀಡಿದ ಗೋಪ್ರೇಮಿ ಮಹೇಂದ್ರ ಮುನ್ನೋತ್

ಕೆರೆಗಳ ನಿರ್ಮಾಣ

ನದಿ ಮೂಲಗಳೇ ಇರದ ಬೆಂಗಳೂರಿನ ಜನರ ಕೃಷಿ ಮತ್ತು ಕುಡಿಯುವ ನೀರಿಗಾಗಿ ಧರ್ಮಾಂಬುಧಿ ಕೆರೆ, ಕೆಂಪಾಂಬುಧಿ ಕೆರೆ, ಹಲಸೂರು, ಸಂಪಂಗಿ ಕೆರೆ, ಕಾರಂಜಿ ಕೆರೆ, ಸಿದ್ಧಿಕಟ್ಟೆ, ಕೆಂಪಾಪುರ ಅಗ್ರಹಾರ ಕೆರೆ, ಜಕ್ಕರಾಯನಕೆರೆ ಸೇರಿದಂತೆ ನೂರಾರು ಕೆರೆ-ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಇವರ ಕಾಲದಲ್ಲಿ 347 ದೊಡ್ಡ ಕೆರೆಗಳು, 1200ಕ್ಕೂ ಅಧಿಕ ಸಣ್ಣ ಕೆರೆ-ಕಟ್ಟೆಗಳಿದ್ದವು ಎನ್ನಲಾಗಿದೆ.

ದೇವಾಲಯ ನಿರ್ಮಾಣ

ಕೆಂಪೇಗೌಡರು ಬೆಂಗಳೂರಿನಲ್ಲಿ ಹಲಸೂರಿನ ಸೋಮೇಶ್ವರ, ಗವಿಪುರದ ಗವಿಗಂಗಾಧರೇಶ್ವರ, ಕಾಡು ಮಲ್ಲೇಶ್ವರ, ದೊಡ್ಡ ಗಣಪತಿ, ಧರ್ಮರಾಯಸ್ವಾಮಿ ದೇವಾಲಯಗಳನ್ನು ನಿರ್ಮಿಸಿದ್ದರು ಎನ್ನಲಾಗುತ್ತದೆ. ಕೇಂಪೇಗೌಡರು ಬೆಂಗಳೂರಿನ ಶಿಲ್ಪಿ ಎಂದು ಇಂದಿಗೂ ಜನಜನಿತರಾಗಿದ್ದಾರೆ.

Continue Reading
Advertisement
icc-t20-ranking
ಕ್ರೀಡೆ4 mins ago

ICC T20 Ranking : ಸೂರ್ಯಕುಮಾರ್​ ಯಾದವ್​ ಹಿಂದಿಕ್ಕಿ ರ್ಯಾಂಕಿಂಗ್​​ನಲ್ಲಿ ನಂಬರ್ 1 ಸ್ಥಾನ ಪಡೆದ ಹೆಡ್​​​

murder case anekal
ಕ್ರೈಂ27 mins ago

Murder Case: ಬಾರ್‌ನಲ್ಲಿ ಗುರಾಯಿಸಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

lk advani
ಪ್ರಮುಖ ಸುದ್ದಿ49 mins ago

LK Advani: ಮಾಜಿ ಉಪ ಪ್ರಧಾನಿ ಎಲ್‌ ಕೆ ಆಡ್ವಾಣಿ ಅಸ್ವಸ್ಥ, ಏಮ್ಸ್‌ಗೆ ದಾಖಲು

Smoking Effects
ಆರೋಗ್ಯ59 mins ago

Smoking Effects: ಮಹಿಳೆಯರೇ, ಧೂಮಪಾನದಿಂದ ನಿಮ್ಮ ಆರೋಗ್ಯದ ಮೇಲಾಗುವ ಪರಿಣಾಮದ ಅರಿವಿದೆಯೇ?

Vastu Tips
ಧಾರ್ಮಿಕ1 hour ago

Vastu Tips: ಬಾತ್ ರೂಮ್‌ನಲ್ಲಿ ಈ ವಸ್ತುಗಳಿದ್ದರೆ ಕುಟುಂಬಕ್ಕೆ ಭಾರಿ ಸಂಕಷ್ಟ!

Karnataka Weather
ಕರ್ನಾಟಕ2 hours ago

Karnataka Weather: ಇಂದು ಕೊಡಗು, ಹಾಸನ, ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸಲಿದ್ದಾನೆ ವರುಣ; ಹಲವೆಡೆ ಶಾಲೆಗಳಿಗೆ ರಜೆ!

Dina Bhavishya
ಪ್ರಮುಖ ಸುದ್ದಿ3 hours ago

Dina Bhavishya: ಈ ರಾಶಿಯವರು ತಮಗೆ ಸಂಬಂಧಪಡದ ವಿಷಯದಲ್ಲಿ ಮೂಗು ತೂರಿಸುವುದು ಬೇಡ!

ollie robinson
ಪ್ರಮುಖ ಸುದ್ದಿ8 hours ago

Ollie Robinson: 6, 6nb, 4, 6, 4, 6nb, 4, 6nb, 1; ಒಂದೇ ಓವರ್‌ನಲ್ಲಿ 43 ರನ್‌ ಕೊಟ್ಟ ಇಂಗ್ಲೆಂಡ್‌ ಬೌಲರ್; Video ಇದೆ

Serial Bride
ದೇಶ9 hours ago

Serial Bride: ಹಲವು ಜನರನ್ನು ಮದುವೆಯಾಗಿ ವಂಚಿಸಿದ್ದ ಮಹಿಳೆಗೆ ಎಚ್‌ಐವಿ; ಮಾಜಿ ವರಗಳಿಗಾಗಿ ಶೋಧ!

Demand to provide job reservation for Kannadigas; Massive Dharani sathyagraha on July 1 from Karave
ಕರ್ನಾಟಕ9 hours ago

Bengaluru News: ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ; ಕರವೇಯಿಂದ ಜು.1ರಂದು ಬೃಹತ್ ಧರಣಿ ಸತ್ಯಾಗ್ರಹ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ7 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 weeks ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 weeks ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 weeks ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌