Lok Sabha Election 2024: ಯದುವೀರ್‌ ರೇಡಿಯೋ ಕಾರ್ಯಕ್ರಮ ʼರಾಜರ ಕತೆಗಳುʼ ನಿಲ್ಲಿಸ್ತಾರಾ? ಚುನಾವಣಾ ಆಯೋಗದ ಮುಂದಿದೆ ದೂರು - Vistara News

Lok Sabha Election 2024

Lok Sabha Election 2024: ಯದುವೀರ್‌ ರೇಡಿಯೋ ಕಾರ್ಯಕ್ರಮ ʼರಾಜರ ಕತೆಗಳುʼ ನಿಲ್ಲಿಸ್ತಾರಾ? ಚುನಾವಣಾ ಆಯೋಗದ ಮುಂದಿದೆ ದೂರು

Lok Sabha Election 2024: 104.8 ರೇಡಿಯೋ ಮಿರ್ಚಿ ಚಾನೆಲ್‌ನಲ್ಲಿ ಯದುವೀರ್ ಅವರ ʼರಾಜರ ಬಾಯಿಂದ ರಾಜರ ಕಥೆಗಳುʼ ಹೆಸರಿನಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ.

VISTARANEWS.COM


on

Yaduveer Krishnadatta Chamaraja Wadiyar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ಲೋಕಸಭೆ ಚುನಾವಣೆ (Lok Sabha Election 2024) ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ (Mysore BJP candidate) ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರ ರೇಡಿಯೋ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಕಾಂಗ್ರೆಸ್ ದೂರು ನೀಡಿದೆ.

ಕರ್ನಾಟಕ ಚುನಾವಣಾ ಆಯೋಗಕ್ಕೆ ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ದೂರು ನೀಡಿದ್ದಾರೆ. 104.8 ರೇಡಿಯೋ ಮಿರ್ಚಿ ಚಾನೆಲ್‌ನಲ್ಲಿ ಯದುವೀರ್ ಅವರ ʼರಾಜರ ಬಾಯಿಂದ ರಾಜರ ಕಥೆಗಳುʼ ಹೆಸರಿನಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಇದರಲ್ಲಿ ಮೈಸೂರಿನ ಹಿಂದಿನ ಮಹಾರಾಜರು ಸೇರಿದಂತೆ ಹಲವು ರಾಜರ ಬಗ್ಗೆ ಯದುವೀರ್‌ ಮಾತನಾಡುತ್ತಾರೆ.

ಯದುವೀರ್ ಮೈಸೂರು ಕೊಡಗು ಬಿಜೆಪಿ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸಬೇಕು. ಅವರು ರೇಡಿಯೋದಲ್ಲಿ ಮಾತನಾಡುವ ಬಗ್ಗೆ ಕ್ಷಣ ಕ್ಷಣಕ್ಕೂ ರೇಡಿಯೋದಲ್ಲಿ ಜಾಹೀರಾತು ಬರುತ್ತಿದೆ. ಒಬ್ಬ ವ್ಯಕ್ತಿಯಾಗಿ ರಾಜರ ಬಗ್ಗೆ ಮಾತನಾಡುವುದರಲ್ಲಿ ತಪ್ಪಿಲ್ಲ. ಆದರೆ ದಿನಾಂಕ 26.04.2024ರ ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ. ಯದುವೀರ್ ಅವರ ಮಾತುಗಳು ಮತದಾರರ ಮೇಲೆ ಪರಿಣಾಮ ಬೀರುತ್ತವೆ. ಈ ಕೂಡಲೇ ರೇಡಿಯೋದಲ್ಲಿ ಕಾರ್ಯಕ್ರಮ ಪ್ರಸಾರವಾಗದಂತೆ ನಿರ್ಬಂಧ ವಿಧಿಸಬೇಕು‌- ಎಂದು ಚುನಾವಣಾ ಆಯುಕ್ತರಿಗೆ ಕೆಪಿಸಿಸಿ ವಕ್ತಾರರು ಮನವಿ ಮಾಡಿದ್ದಾರೆ.

ಚುನಾವಣೆ ನೀತಿ ಸಂಹಿತೆಯ ಸಂದರ್ಭದಲ್ಲಿ ಅಭ್ಯರ್ಥಿಗಳು ರೇಡಿಯೋ- ಟಿವಿ ಸೇರಿದಂತೆ ಸಾರ್ವಜನಿಕ ಮಾಧ್ಯಮದಲ್ಲಿ ನೀಡುವ ಕಾರ್ಯಕ್ರಮಗಳನ್ನು ಜಾಹೀರಾತು ಎಂದು ಪರಿಗಣಿಸಬೇಕೇ ಬೇಡವೇ ಎಂಬ ಕುರಿತು ಚುನಾವಣಾ ಆಯೋಗ ನಿರ್ಧರಿಸಬೇಕಿದೆ. ಅಭ್ಯರ್ಥಿಗಳು ನೀಡುವ ಸಂದರ್ಶನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.

ಅರಸರಿಂದ ಅಭಿವೃದ್ಧಿ ಕಾರ್ಯ

ಮೈಸೂರಿನ ಆಳರಸರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ದೂರದೃಷ್ಟಿಯ ಫಲವಾಗಿ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಇದೆಲ್ಲವನ್ನೂ ಪರಿಗಣಿಸಿ ರಾಜಮನೆತನದ ಯದುವೀರ್‌ಗೆ ಬಿಜೆಪಿ ಟಿಕೆಟ್ ‌ನೀಡಿದ್ದೇವೆ. ಈ ಮೂಲಕ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ (Lok Sabha Election 2024) ಸಂಸದ ಪ್ರತಾಪ್ ಸಿಂಹಗಿಂತಲೂ ಉತ್ತಮ‌ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್‌ ಹೇಳಿದ್ದಾರೆ.

ಕಾಂಗ್ರೆಸ್‌ನವರು ಮಹಾರಾಜ ಹಾಗೂ ಸಾಮಾನ್ಯ ಅಭ್ಯರ್ಥಿ ನಡುವಿ‌ನ ಚುನಾವಣೆ ಎನ್ನುತ್ತಿರುವ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿರುವ ಅವರು, ನಮ್ಮ ಅಭ್ಯರ್ಥಿ ಕೂಡ ಜನಸಾಮಾನ್ಯ. ನಮ್ಮ ಅಭ್ಯರ್ಥಿ ಜನಸಾಮಾನ್ಯರ ಜೊತೆಯೇ ಇದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮಹಾರಾಜರು. ಆ ಮಹಾರಾಜರ ವಿರುದ್ಧ ನಮ್ಮ ಸಾಮಾನ್ಯ ಅಭ್ಯರ್ಥಿ ಹೋರಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Lok Sabha Election 2024: ಪ್ರತಾಪ್ ಸಿಂಹಗಿಂತಲೂ ಯದುವೀರ್‌ ಉತ್ತಮ‌ ಅಭ್ಯರ್ಥಿ ಎಂದ ರಾಧಾಮೋಹನ್ ದಾಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Lok Sabha Election 2024

PM Narendra Modi: ಡೀಪ್‌ ಫೇಕ್‌ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು? ವಿಡಿಯೊ ಕಂಡರೆ ನೀವೇನು ಮಾಡಬೇಕು?

PM Narendra Modi: ನನ್ನ ವಿರುದ್ಧವಾಗಿ ಫೇಕ್‌ ವಿಡಿಯೊ ಸಿದ್ಧಪಡಿಸಿ ಸೋಷಿಯಲ್‌ ಮೀಡಿಯಾಗಳಲ್ಲಿ ಬಿಡುತ್ತಾರೆ. ಮಾರ್ಫ್ ಮಾಡಿ ವಿಡಿಯೊ ಬಿಡುಗಡೆ ಮಾಡುತ್ತಾರೆ ಎಂದು ಡೀಪ್ ಫೇಕ್‌ ವಿಡಿಯೊ ಪ್ರಕರಣಗಳು ಹರಿದಾಡುತ್ತಿರುವ ಬಗ್ಗೆ ಗರಂ ಆದ ಪ್ರಧಾನಿ ನರೇಂದ್ರ ಮೋದಿ, ಅಮಿತಾಬ್‌ ಬಚ್ಚನ್ ಸೇರಿ ಹಲವು ಸ್ಟಾರ್‌ಗಳ ಡೀಪ್‌ ಫೇಕ್‌ ವಿಡಿಯೊ ಮಾಡಲಾಗಿದೆ. ನನ್ನ ಧ್ವನಿ ಹೋಲುವಂತೆ ನಕಲು ಮಾಡಿ ಸಾಮಾಜಿಕ ತಾಣದಲ್ಲಿ ಬಿಡುತ್ತಾರೆ. ಈ ರೀತಿಯ ಫೇಕ್ ವಿಡಿಯೊ ಬಿಡುವ ಸಂಚುಕೋರರ ಬಗ್ಗೆ ಜಾಗ್ರತೆ ಇರಲಿ ಎಂದು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

VISTARANEWS.COM


on

PM Narendra modi in Bagalakote and talk about DeepFake Video
Koo

ಬಾಗಲಕೋಟೆ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಮಾವೇಶ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಡೀಪ್‌ ಫೇಕ್‌ (Deep Fake) ಬಗ್ಗೆ ಮಾತನಾಡಿದ್ದಾರೆ. ತಮ್ಮ ಭಾಷಣದ ರೀತಿ ಮಾರ್ಫ್‌ ಮಾಡಿ ವಿಡಿಯೊವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿಬಿಡುತ್ತಿರುವ ಗ್ಯಾಂಗ್‌ ಸಕ್ರಿಯವಾಗಿದೆ. ಇಂಥ ವಿಡಿಯೊ ನಿಮಗೆ ಕಂಡುಬಂದಲ್ಲಿ ಆ ವಿಡಿಯೊ ಸಹಿತ ಪೊಲೀಸರಿಗೆ ದೂರು ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕರೆ ನೀಡಿದರು.

ಬಾಗಲಕೋಟೆಯಲ್ಲಿ ನಡೆದ ಬಿಜೆಪಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆಯಲ್ಲಿ ಸೋತು ಮೈದಾನ ಬಿಟ್ಟು ಹೋದವರಿಂದ ಫೇಕ್‌ ವಿಡಿಯೊ ಮಾಡಲಾಗುತ್ತಿದೆ. ಸಾಮಾಜಿಕ ತಾಣಗಳಲ್ಲಿ ಫೇಕ್ ವಿಡಿಯೋ ಬಿಡುವ ಕಾರ್ಯದಲ್ಲಿದ್ದಾರೆ ಅವರೆಲ್ಲರೂ ನಿರತರಾಗಿದ್ದಾರೆ. ಆ ರೀತಿ ಫೇಕ್ ವಿಡಿಯೊಗಳು ನಿಮ್ಮ ಗಮನಕ್ಕೆ ಬಂದರೆ ಪೊಲೀಸರಿಗೆ ಕೊಡಿ. ನಮ್ಮ ದೇಶದ ಕಾನೂನಿನಲ್ಲಿ ಫೇಕ್‌ ವಿಡಿಯೊ ಗ್ಯಾಂಗ್‌ಗೆ ಶಿಕ್ಷೆ ಮಾಡುತ್ತೇವೆ ಎಂದು ಹೇಳಿದರು.

ನನ್ನ ವಿರುದ್ಧವಾಗಿ ಫೇಕ್‌ ವಿಡಿಯೊ ಸಿದ್ಧಪಡಿಸಿ ಸೋಷಿಯಲ್‌ ಮೀಡಿಯಾಗಳಲ್ಲಿ ಬಿಡುತ್ತಾರೆ. ಮಾರ್ಫ್ ಮಾಡಿ ವಿಡಿಯೊ ಬಿಡುಗಡೆ ಮಾಡುತ್ತಾರೆ ಎಂದು ಡೀಪ್ ಫೇಕ್‌ ವಿಡಿಯೊ ಪ್ರಕರಣಗಳು ಹರಿದಾಡುತ್ತಿರುವ ಬಗ್ಗೆ ಗರಂ ಆದ ಪ್ರಧಾನಿ ನರೇಂದ್ರ ಮೋದಿ, ಅಮಿತಾಬ್‌ ಬಚ್ಚನ್ ಸೇರಿ ಹಲವು ಸ್ಟಾರ್‌ಗಳ ಡೀಪ್‌ ಫೇಕ್‌ ವಿಡಿಯೊ ಮಾಡಲಾಗಿದೆ. ನನ್ನ ಧ್ವನಿ ಹೋಲುವಂತೆ ನಕಲು ಮಾಡಿ ಸಾಮಾಜಿಕ ತಾಣದಲ್ಲಿ ಬಿಡುತ್ತಾರೆ. ಈ ರೀತಿಯ ಫೇಕ್ ವಿಡಿಯೊ ಬಿಡುವ ಸಂಚುಕೋರರ ಬಗ್ಗೆ ಜಾಗ್ರತೆ ಇರಲಿ ಎಂದು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ

ಒಬಿಸಿ ಸಮುದಾಯಗಳ ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್‌ ಸರ್ಕಾರ ಷಡ್ಯಂತ್ರ ರೂಪಿಸಿದೆ. ಹಿಂದುಳಿದ ವರ್ಗಗಳು ಹಾಗೂ ಎಸ್‌ಸಿ, ಎಸ್‌ಟಿ ಮೀಸಲಾತಿಗೂ ಕುತ್ತು ತರಲು ಕಾಂಗ್ರೆಸ್‌ ಹೊರಟಿದೆ. ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ತೆಗೆದು ಮುಸ್ಲಿಮರಿಗೆ ಹಂಚಿಕೆ ಮಾಡಲು ಕಾಂಗ್ರೆಸ್‌ ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಧರ್ಮದ ರಾಜಕಾರಣ ಮಾಡಲು ಕಾಂಗ್ರೆಸ್‌ನಿಂದ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ. ಎಸ್‌ಸಿ – ಎಸ್‌ಟಿ ಹಾಗೂ ಒಬಿಸಿ ಮೀಸಲಾತಿ ತೆಗೆದು ಮುಸ್ಲಿಮರಿಗೆ ನೀಡಲು ಸಂಚು ರೂಪಿಸಲಾಗಿದೆ. ಆದರೆ, ನಾನು ಕಾಂಗ್ರೆಸ್ ನಾಯಕರ ರಾಜಕಾರಣದ ಸಂಚು ಫಲಿಸಲು ನಾನು ಬಿಡುವುದಿಲ್ಲ. ಮುಸ್ಲಿಮರನ್ನು ಓಲೈಸುತ್ತಾ ಪರಿಶಿಷ್ಟ ಜಾತಿ, ಪಂಗಡ, ಒಬಿಸಿ ವಿರುದ್ಧ ಸಂಚು ಮಾಡುತ್ತಿದ್ದಾರೆ. ಮೀಸಲಾತಿ, ನಿಮ್ಮ ಹಕ್ಕು, ನಿಮ್ಮ ಅಧಿಕಾರವನ್ನು ಕಿತ್ತುಕೊಳ್ಳಲು ಈ ನಿಮ್ಮ ನರೇಂದ್ರ ಮೋದಿ ಬಿಡುವುದಿಲ್ಲ. ನಿಮ್ಮ ರಕ್ಷಣೆಗೋಸ್ಕರ ಮೋದಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಈ ವೇಳೆ ನಾನು ನಿಮಗೆ ಮಾತು ಕೊಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಬಾಗಲಕೋಟೆ ಕಾರ್ಯಕ್ರಮ

ಈ ಚುನಾವಣೆಯು ವಿಕಸಿತ ಭಾರತಕ್ಕೆ ನಡೆಯುತ್ತಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ದೇಶ ಆಗುತ್ತದೆ. ನಿಮ್ಮ ಒಂದು ವೋಟು ನಮಗೆ ಈ ಶಕ್ತಿಯನ್ನು ತಂದು ಕೊಡಲಿದೆ.

ಮೋಜು ಮಸ್ತಿ ಮಾಡುವವರಿಂದ, ರಜೆ ಹಾಕುವವರಿಂದ ದೇಶದ ಅಭಿವೃದ್ಧಿ ಅಸಾಧ್ಯ. ದೇಶದ ಪ್ರಗತಿಗಾಗಿ ಗುರಿ ಬೇಕು. ಅದಕ್ಕಾಗಿ ಕಷ್ಟಪಟ್ಟು ದುಡಿಯಬೇಕು. ನಿಮ್ಮ ಮೋದಿ ಈ ಕೆಲಸವನ್ನು ಮಾಡಲಿದ್ದಾರೆ. 24/7 ಮಾದರಿಯಲ್ಲಿ ನಿಮ್ಮ ಸೇವೆಗಾಗಿ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಾಂಗ್ರೆಸ್‌ ಈಗ ಏನು ಮಾಡುತ್ತಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿರುವುದು ಮಾತ್ರವಲ್ಲದೆ, ದೇಶವನ್ನು ಲೂಟಿ ಹೊಡೆಯುವ ಕೆಲಸಕ್ಕೆ ಕೈಹಾಕಿದೆ. ಇಂಥ ಕಾಂಗ್ರೆಸ್‌ ಸರ್ಕಾರ ನಿಮಗೆ ಬೇಕಾ? ಇದಲ್ಲದೆ ಕಾಂಗ್ರೆಸ್‌ ಹೈಕಮಾಂಡ್‌ನವರು ಕರ್ನಾಟಕ ಕಾಂಗ್ರೆಸ್‌ ಸರ್ಕಾರವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕ ಕಾಂಗ್ರೆಸ್‌ ನಾಯಕರು ಲೂಟಿ ಗ್ಯಾಂಗ್‌ ಅನ್ನು ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್‌ ಹಾಗೂ ಆ ಪಕ್ಷದ ನಾಯಕರೇ ಮೂಲ ಕಾರಣರಾಗಿದ್ದಾರೆ. ಇಂಥವರಿಗೆ ದೇಶದ ಜವಾಬ್ದಾರಿಯನ್ನು ಕೊಡುತ್ತೀರಾ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.

ಕಟ್ಟಕಡೆಯ ಹಳ್ಳಿಗಳಿಗೆ ವಿದ್ಯುತ್‌ ಸೌಕರ್ಯವನ್ನು ಒದಗಿಸಿಲ್ಲ. ಕೋಟ್ಯಂತರ ಜನ ಮೂಲ ಸೌಕರ್ಯದಿಂದ ವಂಚಿತರಾಗಿದ್ದರು. ಆದರೆ, ಹಳ್ಳಿ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಕೊಡಿಸಿದ್ದು, ನಮ್ಮ ಸರ್ಕಾರದಿಂದ ಎಂಬುದು ಮುಖ್ಯ. ಇನ್ನು ನೀರಿನ ಸಮಸ್ಯೆಯನ್ನು ಬಗೆಹರಿಸಲು ಜಲಜೀವನ್‌ ಮಿಷನ್‌ ಅನ್ನು ಪ್ರಾರಂಭ ಮಾಡಿದ್ದೇವೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಶೇ. 17ರಷ್ಟು ಮಂದಿಗೆ ಮಾತ್ರ ನೀರಿನ ಸಂಪರ್ಕ ಇತ್ತು. ಇಂದು ನಮ್ಮ ಆಡಳಿತದಲ್ಲಿ ಶೇ. 75ರಷ್ಟು ನೀರಿನ ಸಂಪರ್ಕ ಇದೆ. ಇನ್ನು ಕರ್ನಾಟಕದಲ್ಲಿ ಕುಡಿಯುವ ನೀರಿಲ್ಲದೆ ಜನರು ಕಷ್ಟಪಡುತ್ತಿದ್ದಾರೆ. ಕಾಂಗ್ರೆಸ್‌ನ ಭ್ರಷ್ಟಾಚಾರದ ಪಾಪಕ್ಕೆ ಶಿಕ್ಷೆ ಕೊಡಬೇಕೇ? ಬೇಡವೇ? ಹೀಗಾಗಿ ನೀವು ಈ ಮೇ 7ರಂದು ಮತ ಚಲಾವಣೆ ಮಾಡಿ ಬಿಜೆಪಿ ಜಯಕ್ಕೆ ಕಾರಣರಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬಾದಾಮಿ, ಐಹೊಳೆ, ಪಟ್ಟದಕಲ್ಲು ಪಾರಂಪರಿಕ ಸ್ಥಳಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ವಿಜಯಪುರದಲ್ಲೂ ಏರ್ಪೋರ್ಟ್‌ ನಿರ್ಮಾಣ ಮಾಡಲು ನಮ್ಮ ಸರ್ಕಾರ ಸಿದ್ಧವಾಗಿದೆ. ಇಳಕಲ್‌ ಸೀರೆಗಾಗಿ ಒಂದು ಗ್ರಾಮ ಒಂದು ಉತ್ಪನ್ನ ಎಂದು ಮಾಡಿದೆವು. ತಳವಾರ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದ್ದು ನಮ್ಮ ಸರ್ಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಾಂಗ್ರೆಸ್‌ನಿಂದ ತುಷ್ಟೀಕರಣ ರಾಜಕಾರಣ

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಏನಾಯಿತು? ಹುಬ್ಬಳ್ಳಿಯಲ್ಲಿ ನಮ್ಮ ಹೆಣ್ಣು ಮಗಳಿಗೆ ಏನಾಯಿತು? ನೇಹಾ ಮೇಲೆ ಒಂದಾದ ಮೇಲೆ ಒಂದರಂತೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದಿದ್ದಾನೆ. ಆದರೆ, ಕಾಂಗ್ರೆಸ್‌ ಏನು ಕ್ರಮ ಕೈಗೊಂಡಿದೆ. ತುಷ್ಟೀಕರಣಕ್ಕಾಗಿ ಇದು ಯಾವ ಹಂತಕ್ಕೆ ಬೇಕಾದರೂ ಹೋಗಲಿದೆ. ಇನ್ನು ಬೆಂಗಳೂರಿನಲ್ಲಿ ಹನುಮಾನ್‌ ಚಾಲೀಸಾವನ್ನು ಪಠಣ ಮಾಡಿದರೆ ಗಲಾಟೆ ಮಾಡುತ್ತಾರೆ, ಹಲ್ಲೆ ನಡೆಸುತ್ತಾರೆ. ಇದರ ಬಗ್ಗೆ ಏನು ಕ್ರಮ ಕೈಗೊಂಡರು? ಅಲ್ಲದೆ, ಬೆಂಗಳೂರು ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಬಗ್ಗೆ ಕಾಂಗ್ರೆಸ್‌ ಸರ್ಕಾರ ಹೇಳಿದ್ದು ಏನು? ಸಿಲಿಂಡರ್‌ ಬ್ಲಾಸ್ಟ್‌ ಎಂದು ಹೇಳಿಬಿಟ್ಟರು. ಕೊನೆಗೆ ಬ್ಯುಸಿನೆಸ್‌ ಶತ್ರುಗಳು ಮಾಡಿದ್ದು ಎಂದು ಹೇಳಿದರು. ಇದು ಕಾಂಗ್ರೆಸ್‌ನ ಆಡಳಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಶ್ರೀನಿವಾಸ್‌ ಪ್ರಸಾದ್‌ ನಿಧನಕ್ಕೆ ಕಂಬನಿ

ಇಂದು ಬೆಳಗ್ಗೆ ಬಿಜೆಪಿ ನಾಯಕ ಹಾಗೂ ಸಾಮಾಜಿಕ ನ್ಯಾಯದ ಸಿಪಾಯಿ ವಿ. ಶ್ರೀನಿವಾಸ್‌ ಪ್ರಸಾದ್ ನಿಧನ ಸುದ್ದಿ ಕೇಳಿ ನನಗೆ ನೋವಾಯಿತು. ಚಾಮರಾಜನಗರದ ಸಂಸದರಾಗಿದ್ದ ಶ್ರೀನಿವಾಸ್‌ ಪ್ರಸಾದ್‌ ಜನರ ನಾಯಕನಾಗಿ ರಾಜಕೀಯದಲ್ಲಿ ಬೆಳೆದು ಹಲವು ದಶಕಗಳಿಂದ ಸಾಮಾಜಿಕ ಜೀವನದಲ್ಲಿದ್ದರು. ಬಡವರು, ಶೋಷಿತರು ಹಾಗೂ ವಂಚಿತರ ಸೇವೆಯಲ್ಲಿ ತೊಡಗಿಕೊಂಡಿದ್ದರು. ಕೇಂದ್ರ ಹಾಗೂ ರಾಜ್ಯದಲ್ಲಿ ಮಂತ್ರಿಯೂ ಆಗಿ ಜನಸೇವೆ ಮಾಡಿದ್ದನ್ನು ಯಾವಾಗಲೂ ಮರೆಯಲ್ಲ. ಶ್ರೀನಿವಾಸ್ ಪ್ರಸಾದ್ ಆತ್ಮಕ್ಕೆ ಸದ್ಗತಿ ಸಿಗಬೇಕು, ಪ್ರಸಾದ್ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥಿಸಿದರು.

ಇದನ್ನೂ ಓದಿ: Viral Video: ನಮಗೆ ಹಿಂದೂ ಮತಗಳ ಅಗತ್ಯವಿಲ್ಲ: ಕಾಂಗ್ರೆಸ್‌ ನಾಯಕನ ವಿಡಿಯೋ ವೈರಲ್‌

ಬಾಲಕಿಯ ಫೋಟೊ ತೆಗೆಯಲು ಹೇಳಿದ ಮೋದಿ!

ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ಫೋಟೊವನ್ನು ಬಾಲಕಿಯೊಬ್ಬಳು ಪ್ರದರ್ಶನ ಮಾಡುತ್ತಿದ್ದಳು. ಇದನ್ನು ಭಾಷಣದ ಮಧ್ಯೆಯೇ ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಸ್‌ಪಿಜಿ ಕಮಾಂಡೋಗಳಿಗೆ ಸೂಚಿಸಿ, ಆ ದೃಶ್ಯದ ಒಂದು ಫೋಟೊವನ್ನು ತೆಗೆದಿಟ್ಟುಕೊಳ್ಳಲು ಹೇಳಿದರು.

Continue Reading

ಪ್ರಮುಖ ಸುದ್ದಿ

Lok Sabha Election: ಇಂದೋರ್​ ಕಾಂಗ್ರೆಸ್​ ಅಭ್ಯರ್ಥಿ ಕಣದಿಂದ ಹಿಂದಕ್ಕೆ; ಚುನಾವಣೆಗೆ ಮೊದಲೇ ಬಿಜೆಪಿಗೆ ಮತ್ತೊಂದು ಸೀಟು!

Lok Sabha Election: ಬಾಮ್ ಕಣದಿಂದ ತಮ್ಮ ಉಮೇದುವಾರಿಕೆ ವಾಪಸ್​​ ಸ್ವಲ್ಪ ಸಮಯದ ನಂತ, ಮಧ್ಯಪ್ರದೇಶ ಹಿರಿಯ ಬಿಜೆಪಿ ಮುಖಂಡ ಮತ್ತು ಇಂದೋರ್​​ನ ಶಾಸಕ ಕೈಲಾಶ್ ವಿಜಯವರ್ಗಿಯಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ರಾಜ್ಯ ಅಧ್ಯಕ್ಷ ವಿ.ಡಿ.ಶರ್ಮಾ ಅವರ ನಾಯಕತ್ವ ನೆಚ್ಚಿ ಇಂದೋರ್​​ನ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಬಿಜೆಪಿ ಸೇರಿದ್ದಾರೆ ” ಎಂದು ಅವರು ಬರೆದಿದ್ದಾರೆ.

VISTARANEWS.COM


on

Lok Sabha Election
Koo

ಇಂದೋರ್: ಲೋಕಸಭಾ ಚುನಾವಣೆಯ (Lok Sabha Election) ನಾಲ್ಕನೇ ಹಂತದಲ್ಲಿ ಮತದಾನ ನಡೆಯಬೇಕಾಗಿದ್ದ ಮಧ್ಯಪ್ರದೇಶದ ಇಂದೋರ್​ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ (Akshay Kanti Bam) ತಮ್ಮ ಉಮೇದುವಾರಿಕೆ ವಾಪಸ್​ ಪಡೆದುಕೊಂಡಿದ್ದಾರೆ. ಆ ಬಳಿಕ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ತಾವು ಚುನಾವಣಾ ಕಣದಿಂದ ಹಿಂದಕ್ಕೆ ಸರಿದು ಮೋದಿ ನೇತೃತ್ವದ ಬಿಜೆಪಿ ಸೇರಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಮೇ 13ರಂದು ಇಂದೋರ್​ನಲ್ಲಿ ಮತದಾನ ನಡೆಯಬೇಕಾಗಿತ್ತು. ಹಾಲಿ ಬಿಜೆಪಿ ಸಂಸದ ಶಂಕರ್ ಲಾಲ್ವಾನಿ ವಿರುದ್ಧ ಕಾಂಗ್ರೆಸ್ ಬಾಮ್ ಅವರಿಗೆ ಟಿಕೆಟ್​ ನೀಡಿ ಇದೀಗ ಪರಿತಪಿಸುವಂತಾಗಿದೆ. ಈ ಕ್ಷೇತ್ರದಲ್ಲಿ ಈಗ ಬಿಜೆಪಿ ಪ್ರಬಲ ಸ್ಪರ್ಧೆಯೇ ಇಲ್ಲದಂತಾಗಿದೆ. ಹಾಗಾಗಿ ಬಹುತೇಕ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದಂತಾಗಿದೆ.

ಬಾಮ್ ಕಣದಿಂದ ತಮ್ಮ ಉಮೇದುವಾರಿಕೆ ವಾಪಸ್​​ ಸ್ವಲ್ಪ ಸಮಯದ ನಂತ, ಮಧ್ಯಪ್ರದೇಶ ಹಿರಿಯ ಬಿಜೆಪಿ ಮುಖಂಡ ಮತ್ತು ಇಂದೋರ್​​ನ ಶಾಸಕ ಕೈಲಾಶ್ ವಿಜಯವರ್ಗಿಯಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ರಾಜ್ಯ ಅಧ್ಯಕ್ಷ ವಿ.ಡಿ.ಶರ್ಮಾ ಅವರ ನಾಯಕತ್ವ ನೆಚ್ಚಿ ಇಂದೋರ್​​ನ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಬಿಜೆಪಿ ಸೇರಿದ್ದಾರೆ ” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

ಈ ತಿಂಗಳ ಆರಂಭದಲ್ಲಿ, ಗುಜರಾತ್​ನ ಸೂರತ್ ನ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರು ಇದೇ ರೀತಿ ಬಿಜೆಪಿ ಸೇರಿದ್ದರು. ಅನುಮೋದಕರ ಸಹಿಯಲ್ಲಿ ವ್ಯತ್ಯಾಸಗಳನ್ನು ಕಂಡುಕೊಂಡ ನಂತರ ಜಿಲ್ಲಾ ಚುನಾವಣಾಧಿಕಾರಿ ಅವರ ಉಮೇದುವಾರಿಕೆಯನ್ನು ತಿರಸ್ಕರಿಸಿದ್ದರು. ಅಲ್ಲದೆ ಈ ಸ್ಥಾನಕ್ಕೆ ಪಕ್ಷದ ಬದಲಿ ಅಭ್ಯರ್ಥಿ ಸುರೇಶ್ ಪಡ್ಸಾಲ ಅವರ ನಾಮಪತ್ರವನ್ನೂ ತಿರಸ್ಕರಿಸಲಾಗಿತ್ತು.

Fact Check: ಅಮಿತ್‌ ಶಾ ಎಸ್​​ಸಿ, ಎಸ್​ಟಿ ಮೀಸಲು ರದ್ದು ಮಾಡ್ತೀವಿ ಎಂದಿದ್ದು ನಿಜವೆ?​​

ನವ ದೆಹಲಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ (Fact Check) ನೀಡಲಾಗುತ್ತಿರುವ ಮಿಸಲಾತಿಯನ್ನು ತೆಗೆದು ಹಾಕಲಾಗುವುದು ಎಂದು ಅಮಿತ್ ಶಾ (Amit Shah) ಹೇಳಿದ್ದಾರೆ ಎಂದು ತಿರುಚಿದ ವಿಡಿಯೊ ಹರಿಬಿಟ್ಟ ಪ್ರಕರಣದಲ್ಲಿ ಡೆಲ್ಲಿ ಪೊಲೀಸರು (Delhi Police) ಎಫ್​ಐಆರ್​ ದಾಖಲಿಸಿದ್ದಾರೆ. ಇದೇ ವೇಳೆ ಪೊಲೀಸರು ವಿಡಿಯೊದ ಕುರಿತು ಮಾಹಿತಿ ನೀಡುವಂತೆ ಸೋಶಿಯಲ್ ಮೀಡಿಯಾ ಫ್ಲ್ಯಾಟ್​ಫಾರ್ಮ್​ ಎಕ್ಸ್​​ಗೆ (X) ಮನವಿ ಮಾಡಿದೆ. ಅದರ ಪ್ರಕಾರ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. ಇದು ನಕಲಿ ಸೃಷ್ಟಿ ಎಂದು ಅಮಿತ್‌ ಶಾ ಸ್ಪಷ್ಪಪಡಿಸಿದ್ದಾರೆ.

ನಕಲಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್​​ಫಾರ್ಮ್​ಗಳಲ್ಲಿ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಭಾನುವಾರ ಎಫ್ಐಆರ್ ದಾಖಲಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಗೃಹ ಸಚಿವಾಲಯ (ಎಂಎಚ್ಎ) ಈ ಸಂಬಂಧ ದೂರು ದಾಖಲಿಸಿದೆ. ಅದರ ಆಧಾರದ ಮೇಲೆ ದೆಹಲಿ ಪೊಲೀಸರ ವಿಶೇಷ ಸೆಲ್ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳು ಮತ್ತು ಐಟಿ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ.

Continue Reading

Lok Sabha Election 2024

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra Modi: ಧರ್ಮದ ರಾಜಕಾರಣ ಮಾಡಲು ಕಾಂಗ್ರೆಸ್‌ನಿಂದ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ. ಎಸ್‌ಸಿ – ಎಸ್‌ಟಿ ಹಾಗೂ ಒಬಿಸಿ ಮೀಸಲಾತಿ ತೆಗೆದು ಮುಸ್ಲಿಮರಿಗೆ ನೀಡಲು ಸಂಚು ರೂಪಿಸಲಾಗಿದೆ. ಆದರೆ, ನಾನು ಕಾಂಗ್ರೆಸ್ ನಾಯಕರ ರಾಜಕಾರಣದ ಸಂಚು ಫಲಿಸಲು ನಾನು ಬಿಡುವುದಿಲ್ಲ. ಮುಸ್ಲಿಮರನ್ನು ಓಲೈಸುತ್ತಾ ಪರಿಶಿಷ್ಟ ಜಾತಿ, ಪಂಗಡ, ಒಬಿಸಿ ವಿರುದ್ಧ ಸಂಚು ಮಾಡುತ್ತಿದ್ದಾರೆ. ಮೀಸಲಾತಿ, ನಿಮ್ಮ ಹಕ್ಕು, ನಿಮ್ಮ ಅಧಿಕಾರವನ್ನು ಕಿತ್ತುಕೊಳ್ಳಲು ಈ ನಿಮ್ಮ ನರೇಂದ್ರ ಮೋದಿ ಬಿಡುವುದಿಲ್ಲ. ನಿಮ್ಮ ರಕ್ಷಣೆಗೋಸ್ಕರ ಮೋದಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಈ ವೇಳೆ ನಾನು ನಿಮಗೆ ಮಾತು ಕೊಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ಮಾಡಿದ್ದಾರೆ.

VISTARANEWS.COM


on

PM Narendra modi in Bagalakote and Attack on Congress
Koo

ಬಾಗಲಕೋಟೆ: ಒಬಿಸಿ ಸಮುದಾಯಗಳ ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್‌ ಸರ್ಕಾರ ಷಡ್ಯಂತ್ರ ರೂಪಿಸಿದೆ. ಹಿಂದುಳಿದ ವರ್ಗಗಳು ಹಾಗೂ ಎಸ್‌ಸಿ, ಎಸ್‌ಟಿ ಮೀಸಲಾತಿಗೂ ಕುತ್ತು ತರಲು ಕಾಂಗ್ರೆಸ್‌ ಹೊರಟಿದೆ. ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ತೆಗೆದು ಮುಸ್ಲಿಮರಿಗೆ ಹಂಚಿಕೆ ಮಾಡಲು ಕಾಂಗ್ರೆಸ್‌ ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಾಗಲಕೋಟೆಯಲ್ಲಿ ನಡೆದ ಬಿಜೆಪಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಧರ್ಮದ ರಾಜಕಾರಣ ಮಾಡಲು ಕಾಂಗ್ರೆಸ್‌ನಿಂದ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ. ಎಸ್‌ಸಿ – ಎಸ್‌ಟಿ ಹಾಗೂ ಒಬಿಸಿ ಮೀಸಲಾತಿ ತೆಗೆದು ಮುಸ್ಲಿಮರಿಗೆ ನೀಡಲು ಸಂಚು ರೂಪಿಸಲಾಗಿದೆ. ಆದರೆ, ನಾನು ಕಾಂಗ್ರೆಸ್ ನಾಯಕರ ರಾಜಕಾರಣದ ಸಂಚು ಫಲಿಸಲು ನಾನು ಬಿಡುವುದಿಲ್ಲ. ಮುಸ್ಲಿಮರನ್ನು ಓಲೈಸುತ್ತಾ ಪರಿಶಿಷ್ಟ ಜಾತಿ, ಪಂಗಡ, ಒಬಿಸಿ ವಿರುದ್ಧ ಸಂಚು ಮಾಡುತ್ತಿದ್ದಾರೆ. ಮೀಸಲಾತಿ, ನಿಮ್ಮ ಹಕ್ಕು, ನಿಮ್ಮ ಅಧಿಕಾರವನ್ನು ಕಿತ್ತುಕೊಳ್ಳಲು ಈ ನಿಮ್ಮ ನರೇಂದ್ರ ಮೋದಿ ಬಿಡುವುದಿಲ್ಲ. ನಿಮ್ಮ ರಕ್ಷಣೆಗೋಸ್ಕರ ಮೋದಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಈ ವೇಳೆ ನಾನು ನಿಮಗೆ ಮಾತು ಕೊಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಬಾಗಲಕೋಟೆ ಕಾರ್ಯಕ್ರಮ

ಈ ಚುನಾವಣೆಯು ವಿಕಸಿತ ಭಾರತಕ್ಕೆ ನಡೆಯುತ್ತಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ದೇಶ ಆಗುತ್ತದೆ. ನಿಮ್ಮ ಒಂದು ವೋಟು ನಮಗೆ ಈ ಶಕ್ತಿಯನ್ನು ತಂದು ಕೊಡಲಿದೆ.

ಮೋಜು ಮಸ್ತಿ ಮಾಡುವವರಿಂದ, ರಜೆ ಹಾಕುವವರಿಂದ ದೇಶದ ಅಭಿವೃದ್ಧಿ ಅಸಾಧ್ಯ. ದೇಶದ ಪ್ರಗತಿಗಾಗಿ ಗುರಿ ಬೇಕು. ಅದಕ್ಕಾಗಿ ಕಷ್ಟಪಟ್ಟು ದುಡಿಯಬೇಕು. ನಿಮ್ಮ ಮೋದಿ ಈ ಕೆಲಸವನ್ನು ಮಾಡಲಿದ್ದಾರೆ. 24/7 ಮಾದರಿಯಲ್ಲಿ ನಿಮ್ಮ ಸೇವೆಗಾಗಿ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಾಂಗ್ರೆಸ್‌ ಈಗ ಏನು ಮಾಡುತ್ತಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿರುವುದು ಮಾತ್ರವಲ್ಲದೆ, ದೇಶವನ್ನು ಲೂಟಿ ಹೊಡೆಯುವ ಕೆಲಸಕ್ಕೆ ಕೈಹಾಕಿದೆ. ಇಂಥ ಕಾಂಗ್ರೆಸ್‌ ಸರ್ಕಾರ ನಿಮಗೆ ಬೇಕಾ? ಇದಲ್ಲದೆ ಕಾಂಗ್ರೆಸ್‌ ಹೈಕಮಾಂಡ್‌ನವರು ಕರ್ನಾಟಕ ಕಾಂಗ್ರೆಸ್‌ ಸರ್ಕಾರವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕ ಕಾಂಗ್ರೆಸ್‌ ನಾಯಕರು ಲೂಟಿ ಗ್ಯಾಂಗ್‌ ಅನ್ನು ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್‌ ಹಾಗೂ ಆ ಪಕ್ಷದ ನಾಯಕರೇ ಮೂಲ ಕಾರಣರಾಗಿದ್ದಾರೆ. ಇಂಥವರಿಗೆ ದೇಶದ ಜವಾಬ್ದಾರಿಯನ್ನು ಕೊಡುತ್ತೀರಾ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.

ಕಟ್ಟಕಡೆಯ ಹಳ್ಳಿಗಳಿಗೆ ವಿದ್ಯುತ್‌ ಸೌಕರ್ಯವನ್ನು ಒದಗಿಸಿಲ್ಲ. ಕೋಟ್ಯಂತರ ಜನ ಮೂಲ ಸೌಕರ್ಯದಿಂದ ವಂಚಿತರಾಗಿದ್ದರು. ಆದರೆ, ಹಳ್ಳಿ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಕೊಡಿಸಿದ್ದು, ನಮ್ಮ ಸರ್ಕಾರದಿಂದ ಎಂಬುದು ಮುಖ್ಯ. ಇನ್ನು ನೀರಿನ ಸಮಸ್ಯೆಯನ್ನು ಬಗೆಹರಿಸಲು ಜಲಜೀವನ್‌ ಮಿಷನ್‌ ಅನ್ನು ಪ್ರಾರಂಭ ಮಾಡಿದ್ದೇವೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಶೇ. 17ರಷ್ಟು ಮಂದಿಗೆ ಮಾತ್ರ ನೀರಿನ ಸಂಪರ್ಕ ಇತ್ತು. ಇಂದು ನಮ್ಮ ಆಡಳಿತದಲ್ಲಿ ಶೇ. 75ರಷ್ಟು ನೀರಿನ ಸಂಪರ್ಕ ಇದೆ. ಇನ್ನು ಕರ್ನಾಟಕದಲ್ಲಿ ಕುಡಿಯುವ ನೀರಿಲ್ಲದೆ ಜನರು ಕಷ್ಟಪಡುತ್ತಿದ್ದಾರೆ. ಕಾಂಗ್ರೆಸ್‌ನ ಭ್ರಷ್ಟಾಚಾರದ ಪಾಪಕ್ಕೆ ಶಿಕ್ಷೆ ಕೊಡಬೇಕೇ? ಬೇಡವೇ? ಹೀಗಾಗಿ ನೀವು ಈ ಮೇ 7ರಂದು ಮತ ಚಲಾವಣೆ ಮಾಡಿ ಬಿಜೆಪಿ ಜಯಕ್ಕೆ ಕಾರಣರಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬಾದಾಮಿ, ಐಹೊಳೆ, ಪಟ್ಟದಕಲ್ಲು ಪಾರಂಪರಿಕ ಸ್ಥಳಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ವಿಜಯಪುರದಲ್ಲೂ ಏರ್ಪೋರ್ಟ್‌ ನಿರ್ಮಾಣ ಮಾಡಲು ನಮ್ಮ ಸರ್ಕಾರ ಸಿದ್ಧವಾಗಿದೆ. ಇಳಕಲ್‌ ಸೀರೆಗಾಗಿ ಒಂದು ಗ್ರಾಮ ಒಂದು ಉತ್ಪನ್ನ ಎಂದು ಮಾಡಿದೆವು. ತಳವಾರ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದ್ದು ನಮ್ಮ ಸರ್ಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಾಂಗ್ರೆಸ್‌ನಿಂದ ತುಷ್ಟೀಕರಣ ರಾಜಕಾರಣ

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಏನಾಯಿತು? ಹುಬ್ಬಳ್ಳಿಯಲ್ಲಿ ನಮ್ಮ ಹೆಣ್ಣು ಮಗಳಿಗೆ ಏನಾಯಿತು? ನೇಹಾ ಮೇಲೆ ಒಂದಾದ ಮೇಲೆ ಒಂದರಂತೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದಿದ್ದಾನೆ. ಆದರೆ, ಕಾಂಗ್ರೆಸ್‌ ಏನು ಕ್ರಮ ಕೈಗೊಂಡಿದೆ. ತುಷ್ಟೀಕರಣಕ್ಕಾಗಿ ಇದು ಯಾವ ಹಂತಕ್ಕೆ ಬೇಕಾದರೂ ಹೋಗಲಿದೆ. ಇನ್ನು ಬೆಂಗಳೂರಿನಲ್ಲಿ ಹನುಮಾನ್‌ ಚಾಲೀಸಾವನ್ನು ಪಠಣ ಮಾಡಿದರೆ ಗಲಾಟೆ ಮಾಡುತ್ತಾರೆ, ಹಲ್ಲೆ ನಡೆಸುತ್ತಾರೆ. ಇದರ ಬಗ್ಗೆ ಏನು ಕ್ರಮ ಕೈಗೊಂಡರು? ಅಲ್ಲದೆ, ಬೆಂಗಳೂರು ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಬಗ್ಗೆ ಕಾಂಗ್ರೆಸ್‌ ಸರ್ಕಾರ ಹೇಳಿದ್ದು ಏನು? ಸಿಲಿಂಡರ್‌ ಬ್ಲಾಸ್ಟ್‌ ಎಂದು ಹೇಳಿಬಿಟ್ಟರು. ಕೊನೆಗೆ ಬ್ಯುಸಿನೆಸ್‌ ಶತ್ರುಗಳು ಮಾಡಿದ್ದು ಎಂದು ಹೇಳಿದರು. ಇದು ಕಾಂಗ್ರೆಸ್‌ನ ಆಡಳಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ನನ್ನ ಬಗ್ಗೆ ಫೇಕ್‌ ವಿಡಿಯೊ ಕಂಡರೆ ದೂರು ಕೊಡಿ

ಇನ್ನು ನನ್ನ ಬಗ್ಗೆಯೇ ಕಾಂಗ್ರೆಸ್‌ ನಕಲಿ ವಿಡಿಯೊ ಮಾಡಿದೆ. ಚುನಾವಣೆಯಲ್ಲಿ ಸೋತು ಮೈದಾನ ಬಿಟ್ಟು ಹೋದವರಿಂದ ಫೇಕ್‌ ವಿಡಿಯೊ ಹೊರಗೆ ಬರುತ್ತಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಅಂಥ ವಿಡಿಯೊಗಳನ್ನು ಅಪ್ಲೋಡ್‌ ಮಾಡುತ್ತಾ ಬರುತ್ತಿದ್ದಾರೆ. ಆ ರೀತಿಯ ಫೇಕ್‌ ವಿಡಿಯೊಗಳು ನಿಮ್ಮ ಗಮನಕ್ಕೆ ಬಂದರೆ ಪೊಲೀಸರಿಗೆ ದೂರು ಕೊಡಿ. ನಮ್ಮ ದೇಶದ ಕಾನೂನಿನಲ್ಲಿ ಫೇಕ್‌ ವಿಡಿಯೊ ಗ್ಯಾಂಗ್‌ಗೆ ತಕ್ಕ ಶಿಕ್ಷೆಯನ್ನು ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಶ್ರೀನಿವಾಸ್‌ ಪ್ರಸಾದ್‌ ನಿಧನಕ್ಕೆ ಕಂಬನಿ

ಇಂದು ಬೆಳಗ್ಗೆ ಬಿಜೆಪಿ ನಾಯಕ ಹಾಗೂ ಸಾಮಾಜಿಕ ನ್ಯಾಯದ ಸಿಪಾಯಿ ವಿ. ಶ್ರೀನಿವಾಸ್‌ ಪ್ರಸಾದ್ ನಿಧನ ಸುದ್ದಿ ಕೇಳಿ ನನಗೆ ನೋವಾಯಿತು. ಚಾಮರಾಜನಗರದ ಸಂಸದರಾಗಿದ್ದ ಶ್ರೀನಿವಾಸ್‌ ಪ್ರಸಾದ್‌ ಜನರ ನಾಯಕನಾಗಿ ರಾಜಕೀಯದಲ್ಲಿ ಬೆಳೆದು ಹಲವು ದಶಕಗಳಿಂದ ಸಾಮಾಜಿಕ ಜೀವನದಲ್ಲಿದ್ದರು. ಬಡವರು, ಶೋಷಿತರು ಹಾಗೂ ವಂಚಿತರ ಸೇವೆಯಲ್ಲಿ ತೊಡಗಿಕೊಂಡಿದ್ದರು. ಕೇಂದ್ರ ಹಾಗೂ ರಾಜ್ಯದಲ್ಲಿ ಮಂತ್ರಿಯೂ ಆಗಿ ಜನಸೇವೆ ಮಾಡಿದ್ದನ್ನು ಯಾವಾಗಲೂ ಮರೆಯಲ್ಲ. ಶ್ರೀನಿವಾಸ್ ಪ್ರಸಾದ್ ಆತ್ಮಕ್ಕೆ ಸದ್ಗತಿ ಸಿಗಬೇಕು, ಪ್ರಸಾದ್ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥಿಸಿದರು.

ಇದನ್ನೂ ಓದಿ: Viral Video: ನಮಗೆ ಹಿಂದೂ ಮತಗಳ ಅಗತ್ಯವಿಲ್ಲ: ಕಾಂಗ್ರೆಸ್‌ ನಾಯಕನ ವಿಡಿಯೋ ವೈರಲ್‌

ಬಾಲಕಿಯ ಫೋಟೊ ತೆಗೆಯಲು ಹೇಳಿದ ಮೋದಿ!

ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ಫೋಟೊವನ್ನು ಬಾಲಕಿಯೊಬ್ಬಳು ಪ್ರದರ್ಶನ ಮಾಡುತ್ತಿದ್ದಳು. ಇದನ್ನು ಭಾಷಣದ ಮಧ್ಯೆಯೇ ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಸ್‌ಪಿಜಿ ಕಮಾಂಡೋಗಳಿಗೆ ಸೂಚಿಸಿ, ಆ ದೃಶ್ಯದ ಒಂದು ಫೋಟೊವನ್ನು ತೆಗೆದಿಟ್ಟುಕೊಳ್ಳಲು ಹೇಳಿದರು.

Continue Reading

Lok Sabha Election 2024

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

PM Narendra Modi Live: ಮೋದಿ ಸಮಾವೇಶದ ಹಿನ್ನೆಲೆಯಲ್ಲಿ ಬಾಗಲಕೋಟೆಯ ನವನಗರದಲ್ಲಿ 100 ಎಕರೆ ಪ್ರದೇಶದಲ್ಲಿ ಬೃಹತ್‌ ವೇದಿಕೆ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇನ್ನು ಕೆಲವೇ ನಿಮಿಷಗಳಲ್ಲಿ ಮೋದಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಭಾನುವಾರ ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ಮಾಡಿದ ನರೇಂದ್ರ ಮೋದಿ ಅವರು ಹೊಸಪೇಟೆಯಲ್ಲಿಯೇ ನಿನ್ನೆ ವಾಸ್ತವ್ಯ ಹೂಡಿದ್ದರು. ಪ್ರಚಾರದುದ್ದಕ್ಕೂ ಕೇಂದ್ರ ಸರ್ಕಾರದ ಸಾಧನೆ ಜತೆಗೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇಂದು ಯಾವ ವಿಷಯವನ್ನು ಪ್ರಸ್ತಾಪ ಮಾಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

VISTARANEWS.COM


on

PM Narendra modi in Bagalakote for Election Campaign and here is Live telecast
Koo

ಬಾಗಲಕೋಟೆ: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಭಾನುವಾರ (ಏಪ್ರಿಲ್‌ 28) ಕರ್ನಾಟಕದ (Karnataka) ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಅಬ್ಬರದ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರವೂ (ಏಪ್ರಿಲ್‌ 29) ಬಾಗಲಕೋಟೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಮೋದಿ ಸಮಾವೇಶದ ಹಿನ್ನೆಲೆಯಲ್ಲಿ ಬಾಗಲಕೋಟೆಯ ನವನಗರದಲ್ಲಿ 100 ಎಕರೆ ಪ್ರದೇಶದಲ್ಲಿ ಬೃಹತ್‌ ವೇದಿಕೆ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇನ್ನು ಕೆಲವೇ ನಿಮಿಷಗಳಲ್ಲಿ ಮೋದಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಸೋಮವಾರ ಮಧ್ಯಾಹ್ನ 12 ಗಂಟೆಗೆ ನರೇಂದ್ರ ಮೋದಿ ಅವರು ಬಾಗಲಕೋಟೆಗೆ ಆಗಮಿಸಲಿದ್ದಾರೆ. ಮೋದಿ ಭಾಷಣಕ್ಕಾಗಿ 90/100 ಅಡಿ ಮುಖ್ಯ ವೇದಿಕೆ ಪೆಂಡಾಲು ಹಾಕಲಾಗಿದೆ. 60/40 ಅಡಿಯ ಮುಖ್ಯ ವೇದಿಕೆಯಲ್ಲಿ, 32 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಬಿಸಿಲು ಹೆಚ್ಚಾದ ಕಾರಣ ವೇದಿಕೆ ಹವಾನಿಯಂತ್ರಿತವಾಗಿ ಇರಲಿದೆ. ಇನ್ನು ಸಾರ್ವಜನಿಕರಿಗೆ 400 ಅಡಿ ಅಗಲ, 600 ಅಡಿ ಉದ್ದದ ಬೃಹತ್ ಪೆಂಡಾಲ್ ವೇದಿಕೆ ನಿರ್ಮಿಸಲಾಗಿದೆ. ಜರ್ಮನ್ ಮಾದರಿಯಲ್ಲಿ ವೇದಿಕೆ ನಿರ್ಮಿಸಲಾಗಿದೆ.

ಬಾಗಲಕೋಟೆಯಲ್ಲಿ ಮೋದಿ ಸಮಾವೇಶದ ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್‌ ಹಾಗೂ ವಿಜಯಪುರ ಅಭ್ಯರ್ಥಿ ರಮೇಶ್‌ ಜಿಗಜಿಣಗಿ ಪರವಾಗಿ ಪ್ರಧಾನಿ ಮತಯಾಚನೆ ಮಾಡಲಿದ್ದಾರೆ. ಒಟ್ಟು 70 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗೆ 1,100ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಮೂವರು ಎಸ್‌ಪಿ, ನಾಲ್ವರು ಎಎಸ್‌ಪಿ, 12 ಡಿಎಸ್‌ಪಿ, 32 ಸಿಪಿಐ, 88 ಪಿಎಸ್‌ಐ, 1,049 ಪೊಲೀಸ್‌ ಪೇದೆಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ವೇದಿಕೆ ಬಲಭಾಗ ಮೂರು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: PM Narendra Modi: ಪುಕ್ಕಲ ನಾಯಕ ದೇಶ ಆಳಬಲ್ಲನೇ? ರಾಹುಲ್‌ ಗಾಂಧಿಗೆ ಮೋದಿ ಟಾಂಗ್!

ಪ್ರಧಾನಿ ನರೇಂದ್ರ ಮೋದಿ ಅವರ ಈ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಎರಡೂ ಕ್ಷೇತ್ರಗಳ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಸುಮಾರು 2 ಲಕ್ಷ ಜನ ಸೇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಭಾನುವಾರ ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ಮಾಡಿದ ನರೇಂದ್ರ ಮೋದಿ ಅವರು ಹೊಸಪೇಟೆಯಲ್ಲಿಯೇ ನಿನ್ನೆ ವಾಸ್ತವ್ಯ ಹೂಡಿದ್ದರು. ಪ್ರಚಾರದುದ್ದಕ್ಕೂ ಕೇಂದ್ರ ಸರ್ಕಾರದ ಸಾಧನೆ ಜತೆಗೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು.

Continue Reading
Advertisement
Drown in Mekedatu
ಕರ್ನಾಟಕ8 mins ago

Drown in Mekedatu: ಮೇಕೆದಾಟು ಬಳಿ ಈಜಲು ಹೋಗಿದ್ದ ಐವರು ಪ್ರವಾಸಿಗರ ಸಾವು

T20 World Cup 2024
ಕ್ರೀಡೆ15 mins ago

T20 World Cup 2024: ವಿಶ್ವಕಪ್​ಗೆ ಪಂತ್​ ಮೊದಲ ಆಯ್ಕೆಯ ಕೀಪರ್​​ ಅಲ್ಲ; ಮತ್ಯಾರು?

S M Krishna
ಕರ್ನಾಟಕ28 mins ago

S M Krishna: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ವೈರಲ್ ನ್ಯೂಸ್32 mins ago

Viral Video: ಪಾಪಿ ಮಗನಿಂದ ತಂದೆ ಮೇಲೆ ಇದೆಂಥಾ ಕ್ರೌರ್ಯ! ವಿಡಿಯೋ ನೋಡಿ

facebook whatsapp instagram
ಪ್ರಮುಖ ಸುದ್ದಿ35 mins ago

WhatsApp Exit India: ವಾಟ್ಸ್ಯಾಪ್‌ ಜೊತೆಗೇ ಭಾರತ ತೊರೆಯಲಿವೆಯೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ?

Dubai Airport
EXPLAINER45 mins ago

Dubai Airport : ದುಬೈನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಏರ್​ಪೋರ್ಟ್​​; ಏನಿದರ ವಿಶೇಷತೆ? ಎಲ್ಲ ಮಾಹಿತಿ ಇಲ್ಲಿದೆ

IPL 2024 Points Table
ಕ್ರೀಡೆ56 mins ago

IPL 2024 Points Table: ಚೆನ್ನೈ ಗೆಲುವಿನಿಂದ ಅಂಕಪಟ್ಟಿಯಲ್ಲಿ 3 ತಂಡಗಳಿಗೆ ಭಾರೀ ಹೊಡೆತ

Minister Lakshmi hebbalkar Latest statement in Belagavi
ಬೆಳಗಾವಿ1 hour ago

Lakshmi Hebbalkar: ಪ್ರಜ್ವಲ್ ಹಗರಣದ ಬಗ್ಗೆ ಬಿಜೆಪಿ ನಾಯಕರ ಮೌನವೇಕೆ? ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ

Sahil Khan Travelled 1,800 km In 4 Days To Avoid Arrest
ಬಾಲಿವುಡ್1 hour ago

Sahil Khan: ಪೊಲೀಸರಿಂದ ತಪ್ಪಿಸಿಕೊಳ್ಳಲು 1,800 ಕಿ.ಮೀ ಪ್ರಯಾಣಿಸಿದ್ದ ನಟ ಸಾಹಿಲ್ ಖಾನ್!

Hassan Pen Drive Case Deve Gowda refuses to expel Prajwal and What is the reason
ಕರ್ನಾಟಕ1 hour ago

Hassan Pen Drive Case: ಪ್ರಜ್ವಲ್‌ ಉಚ್ಚಾಟನೆಗೆ ದೇವೇಗೌಡರ ಹಿಂದೇಟು; ದೊಡ್ಡ ಗೌಡರ ಭಯಕ್ಕೆ ಏನು ಕಾರಣ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 20243 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ11 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202423 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌