Money Guide: ಎಲ್ಐಸಿಯ ಈ ಪಾಲಿಸಿಯಿಂದ ಜೀವನ ಪರ್ಯಂತ ಆದಾಯ; ಏನಿದರ ವೈಶಿಷ್ಟ್ಯ? - Vistara News

ಮನಿ-ಗೈಡ್

Money Guide: ಎಲ್ಐಸಿಯ ಈ ಪಾಲಿಸಿಯಿಂದ ಜೀವನ ಪರ್ಯಂತ ಆದಾಯ; ಏನಿದರ ವೈಶಿಷ್ಟ್ಯ?

Money Guide: ದೇಶದ ಅತಿದೊಡ್ಡ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ ಹೊಸ ಯೋಜನೆಯೊಂದನ್ನು ಪರಿಚಯಿಸಿದ್ದು, ಅದರ ವಿವರ ಇಲ್ಲಿದೆ.

VISTARANEWS.COM


on

insurence
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜೀವನದಲ್ಲಿ ಯಾವಾಗ ಏನು ಬೇಕಾದರೂ ಸಂಭವಿಸಬಹುದು. ಹೀಗಾಗಿ ವಿಮೆ ಮಾಡಿಸುವುದು ಪ್ರಸ್ತುತ ಆಯ್ಕೆಯಲ್ಲ, ಅನಿವಾರ್ಯ ಎಂದು ತಜ್ಞರು ಹೇಳುತ್ತಾರೆ. ಉದ್ಯೋಗಕ್ಕೆ ಸೇರಿದ ಆರಂಭದಿಂದಲೇ ಇನ್ಶೂರೆನ್ಸ್‌ ಮಾಡಿಸುವುದುನ್ನು ರೂಢಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡುತ್ತಾರೆ. ದೇಶದಲ್ಲಿ ಇಂದು ಬೇರೆ ಬೇರೆ ಕಂಪನಿಗಳು ಆಕರ್ಷಕ ಕೊಡುಗೆಗಳೊಂದಿಗೆ ಇನ್ಶೂರೆನ್ಸ್‌ ನೀಡುತ್ತವೆ. ಅದರಲ್ಲೂ ದೇಶದ ಅತಿದೊಡ್ಡ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ (LIC) ಕಾಲ ಕಾಲಕ್ಕೆ ಉತ್ತಮ ಯೋಜನೆಗಳನ್ನು ಪರಿಚಯಿಸುತ್ತಿದೆ. ಇದೀಗ ಅಂತಹ ಯೋಜನೆಯೊಂದನ್ನು ಜಾರಿಗೆ ತಂದಿದೆ. ಹೊಸ ಯೋಜನೆಗೆ ಜೀವನ್ ಉತ್ಸವ್ ಪ್ಲಾನ್ (LIC Jeevan Utsav) ಎಂಬ ಹೆಸರಿಡಲಾಗಿದ್ದು, ಅದರಲ್ಲಿನ ವೈಶಿಷ್ಟ್ಯಗಳ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಜೀವನ್ ಉತ್ಸವ್ ಪ್ಲಾನ್ ಅನ್ನು ನವೆಂಬರ್ 29ರಂದು ಬಿಡುಗಡೆ ಮಾಡಲಾಗಿದೆ. ಇದು ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್ ಯೋಜನೆ. ಆಯ್ದ ಪ್ರೀಮಿಯಂ ಪಾವತಿಸುವ ಅವಧಿಯ ಆಧಾರದ ಮೇಲೆ, ನಿರ್ದಿಷ್ಟ ವರ್ಷಗಳ ನಂತರ ವಾರ್ಷಿಕವಾಗಿ ವಿಮಾ ಮೊತ್ತದ 10% ಅನ್ನು ಮರುಪಾವತಿಸಲಾಗುತ್ತದೆ. ಈ ಯೋಜನೆಯು ಪಾಲಿಸಿದಾರರ ಜೀವಿತಾವಧಿಗೆ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ ಎಂಬುದು ಪ್ಲಸ್ ಪಾಯಿಂಟ್.

2 ಆಯ್ಕೆಗಳಿವೆ

ರೆಗ್ಯುಲರ್ ಇನ್‌ಕಮ್‌ ಬೆನಿಫಿಟ್‌ (Regular Income Benefit) ಮತ್ತು ಫ್ಲೆಕ್ಸಿ ಇನ್‌ಕಮ್‌ ಬೆನಿಫಿಟ್‌ (Flexi Income Benefit) ಎಂಬ ಎರಡು ಆಯ್ಕೆಗಳಲ್ಲಿ ಈ ಪಾಲಿಸಿ ಲಭ್ಯ. ಈ ಎರಡೂ ಆಯ್ಕೆಗಳಲ್ಲಿ ನಿರ್ದಿಷ್ಟ ಮೊತ್ತವನ್ನು ನಿಯಮಿತವಾಗಿ ನಿಮಗೆ ಲಭಿಸುತ್ತದೆ ಎಂದು ಸಂಸ್ಥೆ ಹೇಳಿದೆ.

ಕನಿಷ್ಠ, ಗರಿಷ್ಠ ಮೊತ್ತ

ಕನಿಷ್ಠ ಮೂಲ ವಿಮಾ ಮೊತ್ತ 5,00,000 ರೂ. ಗರಿಷ್ಠ ಮೂಲ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ ಎಂದು ಎಲ್‌ಐಸಿ ತಿಳಿಸಿದೆ. ಈ ಪಾಲಿಸಿಯು 5ರಿಂದ 16 ವರ್ಷಗಳ ಸೀಮಿತ ಪ್ರೀಮಿಯಂ ಪಾವತಿಸುವ ಅವಧಿಯನ್ನು ಹೊಂದಿದ್ದು, ಜೀವಿತಾವಧಿಯ ಆದಾಯವನ್ನು ನೀಡುತ್ತದೆ.

ಅನುಕೂಲಗಳೇನು?

ರೆಗ್ಯುಲರ್ ಇನ್‌ಕಮ್‌ ಬೆನಿಫಿಟ್‌: ಎಲ್ಲ ಪ್ರೀಮಿಯಂ ಪಾವತಿಸಿದ್ದರೆ ಪ್ರತಿ ಪಾಲಿಸಿ ವರ್ಷದ ಕೊನೆಯಲ್ಲಿ ಮೂಲ ವಿಮಾ ಮೊತ್ತದ ಶೇ. 10ಕ್ಕೆ ಸಮಾನವಾದ ನಿಯಮಿತ ಆದಾಯ ಲಭಿಸಲಿದೆ. ಉದಾಹರಣೆಗೆ 5 ವರ್ಷದ ಪ್ಲಾನ್‌ ಖರೀದಿಸಿದ್ದರೆ 11ನೇ ವರ್ಷದಿಂದ ಜೀವನ ಪರ್ಯಂತ (100 ವರ್ಷದವರೆಗೆ) ನಿಯಮಿತ ಆದಾಯ ಲಭಿಸಲಿದೆ.

ಫ್ಲೆಕ್ಸಿ ಇನ್‌ಕಮ್‌ ಬೆನಿಫಿಟ್‌: ಕನಿಷ್ಠ ಗ್ಯಾರಂಟಿ ಮೊತ್ತದ ಶೇ. 10ರಷ್ಟು ಹಣವನ್ನು ಪ್ರತೀ ಪಾಲಿಸಿ ವರ್ಷದ ಕೊನೆಗೆ ನಿಮಗೆ ಕೊಡಲಾಗುತ್ತದೆ. ಉದಾಹರಣೆಗೆ ನೀವು 30ನೇ ವಯಸ್ಸಿನಲ್ಲಿ 5 ವರ್ಷದ ಪ್ಲಾನ್‌ ಖರೀದಿಸಿದ್ದರೆ 41ನೇ ವಯಸ್ಸಿನಿಂದ ಆದಾಯ ಲಭಿಸಲು ಆರಂಭವಾಗುತ್ತದೆ. ಒಂದು ವೇಳೆ 41ನೇ ವಯಸ್ಸಿನಲ್ಲಿ ಆದಾಯ ಬೇಡ ಎಂದಿದ್ದರೆ ಆ ಮೊತ್ತಕ್ಕೆ ವಾರ್ಷಿಕ ಶೇ. 5.5 ಬಡ್ಡಿ ವಿಧಿಸಲಾಗುತ್ತದೆ. ಬಳಿಕ ಯಾವಾಗ ಬೇಕಾದರೂ ಹಿಂಪಡೆಯಬಹುದು.

ಕ್ರಿಟಿಕಲ್‌ ಇಲ್‌ನೆಸ್‌ ರೈಡರ್‌

ಈ ಆಪ್ಶನ್‌ ಆಯ್ಕೆ ಮಾಡಿಕೊಂಡರೆ ಎಲ್‌ಐಸಿ ಸೂಚಿಸಿದ 15 ಕಾಯಿಲೆಗೆ ಹಣ ಲಭಿಸಲಿದೆ. ಉದಾಹರಣೆಗೆ ಪಾಲಿಸಿದಾತನಿಗೆ ಕಾಯಿಲೆ ಕಾಣಿಸಿಕೊಂಡು 35 ವರ್ಷ ಅಥವಾ ಆತನಿಗೆ 70 ವರ್ಷ ತುಂಬುವವರೆಗೆ ಅನುಕೂಲ ಲಭಿಸಲಿದೆ.

ಇದನ್ನೂ ಓದಿ: Money Guide: ಪರ್ಸನಲ್‌ ಲೋನ್‌ ಬಿಡಿ, ಕಡಿಮೆ ಬಡ್ಡಿದರದ ಈ ಸಾಲಗಳಿವೆ ನೋಡಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಸಾಮಾನ್ಯ ವಿಮೆ v/s ಜೀವ ವಿಮೆ; ಯಾವುದು ಉತ್ತಮ? ನಿಮಗೆ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

Money Guide: ಪ್ರಸ್ತುತ ಪ್ರತಿಯೊಬ್ಬರೂ ವಿಮೆಯನ್ನು ಹೊಂದಿರಲೇಬೇಕು ಎಂದು ಆರ್ಥಿಕ ತಜ್ಞರು ಕರೆ ನೀಡುತ್ತಾರೆ. ಹಾಗಾದರೆ ಸಾಮಾನ್ಯ ವಿಮೆ ಮತ್ತು ಜೀವ ವಿಮೆಗಳ ಪೈಕಿ ಯಾವುದು ಉತ್ತಮ? ಯಾವುದನ್ನು ಹೊಂದಿರಬೇಕು? ಎರಡೂ ಇದ್ದರೆ ಪ್ರಯೋಜನವೇನು? ಮುಂತಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

VISTARANEWS.COM


on

insurance
Koo

ಬೆಂಗಳೂರು: ಆರ್ಥಿಕ ಸದೃಢತೆಗೆ ವಿಮೆ (Insurance) ಎನ್ನುವುದು ಬಹು ಮುಖ್ಯ. ಇದು ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ಆರ್ಥಿಕ ದೃಢತೆ ಮಾತ್ರವಲ್ಲದೆ ಮಾನಸಿಕ ನೆಮ್ಮದಿ ನೀಡುತ್ತದೆ, ಅನಿರೀಕ್ಷಿತ ಆರ್ಥಿಕ ಹೊರೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ನಿಮ್ಮ ದೀರ್ಘ ಕಾಲೀನ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ರೀತಿಯ ವಿಮೆ ಲಭ್ಯವಿದೆ. ಇವು ಪ್ರತಿಯೊಂದು ವ್ಯಕ್ತಿಯ ವಿಭಿನ್ನ ಆವಶ್ಯಕತೆಗಳು ಮತ್ತು ಅಗತ್ಯಗಳನ್ನು ಪೂರೈಸುತ್ತವೆ. ಇನ್ಶೂರೆನ್ಸ್‌ ಅನ್ನು ಸಾಮಾನ್ಯ ವಿಮೆ (General Insurance) ಮತ್ತು ಜೀವ ವಿಮೆ (Life Insurance) ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಎರಡು ವರ್ಗಗಳ ವಿಶೇಷತೆ, ಇವು ಹೇಗೆ ಪರಸ್ಪರ ಭಿನ್ನ ಮುಂತಾದ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಸಾಮಾನ್ಯ ವಿಮೆ (General Insurance)

 • ಸಾಮಾನ್ಯ ವಿಮೆಯು ನಮ್ಮ ಸ್ವತ್ತುಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ. ಇದರಲ್ಲಿ ಆರೋಗ್ಯ ವಿಮೆ, ಮೋಟಾರು ವಿಮೆ, ಗೃಹ ವಿಮೆ, ಪ್ರಯಾಣ ವಿಮೆಯಂತಹ ವಿವಿಧ ರೀತಿಗಳಿವೆ.
 • ಸಾಮಾನ್ಯ ವಿಮಾ ಪಾಲಿಸಿಗಳು ಅಪಘಾತಗಳು, ನೈಸರ್ಗಿಕ ವಿಪತ್ತುಗಳು, ಕಳವು ಮತ್ತು ಚಿಕಿತ್ಸೆಯಂತಹ ಅನಿರೀಕ್ಷಿತ ವೆಚ್ಚಗಳಿಗೆ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.
 • ಸಾಮಾನ್ಯ ವಿಮೆಯ ಅಡಿಯಲ್ಲಿ ಕವರೇಜ್ ಸಾಮಾನ್ಯವಾಗಿ ಒಂದು ನಿರ್ದಿಷ್ಟ ಅವಧಿಗೆ ಇರುತ್ತದೆ ಮತ್ತು ಪಾಲಿಸಿದಾರರು ನಿಯಮಿತ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ.
 • ಈ ವಿಮಾ ಪಾಲಿಸಿ ಯಾವುದೇ ಆದಾಯ ಅಥವಾ ಉಳಿತಾಯ ಪ್ರಯೋಜನಗಳನ್ನು ನೀಡುವುದಿಲ್ಲ. ಅಪಾಯ ಸಂಭವಿಸಿದಾಗ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.

ಜನರಲ್‌ ಇನ್ಶೂರೆನ್ಸ್‌ನ ವಿಧಗಳು

 • ಆರೋಗ್ಯ ವಿಮೆ (Health Insurance): ವೈದ್ಯಕೀಯ ವೆಚ್ಚಗಳಾದ ಕಾಯಿಲೆಗಳಿಗೆ ಚಿಕಿತ್ಸೆ, ಅಡ್ಮಿಟ್‌ ವೆಚ್ಚ ಮತ್ತು ಅಪಘಾತ ಮುಂತಾದ ಸಂದರ್ಭದಲ್ಲಿ ಆರೋಗ್ಯ ವಿಮೆ ನೆರವಾಗುತ್ತದೆ.
 • ಮೋಟಾರು ವಿಮೆ (Motor Insurance): ಇದು ನಿಮ್ಮ ವಾಹನಕ್ಕೆ ಆಗುವ ಹಾನಿ, ಅಪಘಾತಗಳ ಸಂದರ್ಭದಲ್ಲಿ ಮೂರನೇ ವ್ಯಕ್ತಿಗಳಿಗೆ ನೀಡಬೇಕಾದ ಪರಿಹಾರಗಳನ್ನು ಒಳಗೊಂಡಿದೆ. ಮಾತ್ರವಲ್ಲ ವಾಹನ ಕಳವಾದಾಗ ನೆರವಿಗೆ ಬರುತ್ತದೆ. ಭಾರತದಲ್ಲಿ ಮೋಟಾರು ವಿಮೆ ಕಡ್ಡಾಯ.
 • ಪ್ರಯಾಣ ವಿಮೆ (Travel Insurance): ಈ ವಿಮೆ ನಿಮ್ಮ ಪ್ರಯಾಣದ ಸಮಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಗಳು, ಕಳೆದುಹೋದ ಬ್ಯಾಗ್‌, ಪ್ರವಾಸ ವಿಳಂಬ ಇತ್ಯಾದಿಗಳನ್ನು ಒಳಗೊಂಡಿದೆ.
 • ಗೃಹ ವಿಮೆ (Home Insurance): ಇದು ಬೆಂಕಿ, ನೈಸರ್ಗಿಕ ವಿಪತ್ತು, ಕಳವು ಇತ್ಯಾದಿಗಳಿಂದ ನಿಮ್ಮ ಮನೆಯನ್ನು ರಕ್ಷಿಸುತ್ತದೆ.

ಜೀವ ವಿಮೆ (Life Insurance)

 • ಜೀವ ವಿಮೆಯು ಪಾಲಿಸಿದಾರನ ಮರಣದ ನಂತರ ಕುಟುಂಬ ಅಥವಾ ಅವಲಂಬಿತರಿಗೆ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.
 • ಜೀವ ವಿಮಾ ಪಾಲಿಸಿಗಳು ಜೀವ ವಿಮೆಯ ಜತೆಗೆ ಉಳಿತಾಯ ಮತ್ತು ಹೂಡಿಕೆ ಪ್ರಯೋಜನಗಳನ್ನು ಸಹ ನೀಡುತ್ತವೆ. ಈ ಪಾಲಿಸಿಗಳಲ್ಲಿ ಎಂಡೋಮೆಂಟ್ ಯೋಜನೆಗಳು, ಸಂಪೂರ್ಣ ಜೀವ ಯೋಜನೆಗಳು, ಟರ್ಮ್ ಇನ್ಶೂರೆನ್ಸ್ ಯೋಜನೆಗಳು ಮತ್ತು ಯುನಿಟ್-ಲಿಂಕ್ಡ್ ಇನ್ಶೂರೆನ್ಸ್ ಯೋಜನೆಗಳು (ಯುಲಿಪ್) ಸೇರಿವೆ.
 • ಜೀವ ವಿಮಾ ಪಾಲಿಸಿಯ ಪ್ರಕಾರವನ್ನು ಅವಲಂಬಿಸಿ ಇದು ಡೆತ್ ಬೆನಿಫಿಟ್ ಜತೆಗೆ ಮೆಚ್ಯೂರಿಟಿ ಪ್ರಯೋಜನ ಮತ್ತು ಬೋನಸ್‌ಗಳನ್ನು ನೀಡಡುತ್ತದೆ.
 • ಜೀವ ವಿಮಾ ಪಾಲಿಸಿಯ ನಿರ್ದಿಷ್ಟ ಅವಧಿಯವರೆಗೆ ಪಾಲಿಸಿದಾರರು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಲೈಫ್‌ ಇನ್ಶೂರೆನ್ಸ್‌ನ ವಿಧಗಳು

 • ಟರ್ಮ್ ಇನ್ಶೂರೆನ್ಸ್ (Term Insurance): ಇದು ಒಂದು ನಿರ್ದಿಷ್ಟ ಅವಧಿಗೆ (ಉದಾಹರಣೆ 20 ವರ್ಷಗಳು) ರಿಸ್ಕ್ ಕವರ್ ಅನ್ನು ಒಳಗೊಂಡಿದೆ.
 • ಎಂಡೋಮೆಂಟ್‌ ಪ್ಲ್ಯಾನ್ಸ್‌ (Endowment Plans): ವಿಮೆಯನ್ನು ಉಳಿತಾಯದೊಂದಿಗೆ ಸಂಯೋಜಿಸುತ್ತದೆ. ಪಾಲಿಸಿದಾರ ಪಾಲಿಸಿಯ ಅಂತ್ಯದವರೆಗೆ ಬದುಕುಳಿದರೆ ಅಥವಾ ಪಾಲಿಸಿ ಅವಧಿಯಲ್ಲಿ ಮರಣ ಹೊಂದಿದರೆ ಪಾವತಿಯನ್ನು ದೊರೆಯುತ್ತದೆ.
 • ಯುಲಿಪ್ (ULIPs): ಇವು ಕೂಡ ಇವು ಎಂಡೋಮೆಂಟ್ ಯೋಜನೆಗಳ ರೀತಿಯೇ ಕಾರ್ಯ ನಿರ್ವಹಿಸುತ್ತದೆ. ಆದರೆ ನಿಮ್ಮ ಹಣದ ಒಂದು ಭಾಗವನ್ನು ಮಾರುಕಟ್ಟೆ-ಲಿಂಕ್ಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಯಾವುದು ಉತ್ತಮ?

ಸಾಮಾನ್ಯ ವಿಮೆ: ನಿಮ್ಮ ಸ್ವತ್ತುಗಳನ್ನು ರಕ್ಷಿಸಲು ಮತ್ತು ಅನಿರೀಕ್ಷಿತ ಘಟನೆಗಳಿಗೆ ಸಂಬಂಧಿಸಿದ ಆರ್ಥಿಕ ಅಪಾಯಗಳನ್ನು ತಗ್ಗಿಸಲು ಸಾಮಾನ್ಯ ವಿಮೆಯನ್ನು ಹೊಂದಿರುವುದು ಅತ್ಯಗತ್ಯ. ಉದಾಹರಣೆಗೆ: ಆರೋಗ್ಯ ವಿಮೆಯು ವೈದ್ಯಕೀಯ ವೆಚ್ಚಗಳ ಸಂದರ್ಭದಲ್ಲಿ ನೆರವಾಗುತ್ತದೆ, ಮೋಟಾರು ವಿಮೆಯು ನಿಮ್ಮ ವಾಹನವನ್ನು ರಕ್ಷಿಸುತ್ತದೆ ಮತ್ತು ಗೃಹ ವಿಮೆಯು ನೈಸರ್ಗಿಕ ವಿಪತ್ತುಗಳು ಅಥವಾ ಇತರ ಅಪಾಯಗಳಿಂದ ಉಂಟಾಗುವ ಹಾನಿಗಳ ವಿರುದ್ಧ ನಿಮ್ಮ ಮನೆಯನ್ನು ರಕ್ಷಿಸುತ್ತದೆ.

ಜೀವ ವಿಮೆ: ಪಾಲಿಸಿದಾರನ ಆದಾಯವನ್ನು ಅವಲಂಬಿಸಿರುವ ಕುಟುಂಬ ಸದಸ್ಯರಿಗೆ ಪಾಲಿಸಿದಾರನ ಅಕಾಲಿಕ ಮರಣದ ನಂತರವೂ ನೆರವಾಗಬೇಕು ಎಂದಿದ್ದರೆ ಜೀವ ವಿಮೆ ಉತ್ತಮ ಆಯ್ಕೆ. ಜೀವ ವಿಮೆಯು ನಿಮ್ಮ ಕುಟುಂಬಕ್ಕೆ ದೊಡ್ಡ ಮೊತ್ತವನ್ನು ಒದಗಿಸುತ್ತದೆ. ಇದು ಅವರ ಜೀವನ ಮಟ್ಟವನ್ನು ಕಾಪಾಡಿಕೊಳ್ಳಲು, ಸಾಲಗಳನ್ನು ತೀರಿಸಲು ಅಥವಾ ಶಿಕ್ಷಣ ಮತ್ತು ಮದುವೆಯಂತಹ ಭವಿಷ್ಯದ ವೆಚ್ಚಗಳನ್ನು ಭರಿಸಲು ಅನುವು ಮಾಡಿಕೊಡುತ್ತದೆ.

ಒಟ್ಟಿನಲ್ಲಿ ಎರಡು ವಿಮೆಗಳೂ ಮುಖ್ಯ. ಸಾಮಾನ್ಯ ವಿಮೆ ಮತ್ತು ಜೀವ ವಿಮೆ ವಿಭಿನ್ನ ಉದ್ದೇಶಗಳನ್ನು ಪೂರೈಸುತ್ತವೆ. ಹೀಗಾಗಿ ಎರಡೂ ರೀತಿಯ ವಿಮೆಯನ್ನು ಹೊಂದಿರುವುದು ಉತ್ತಮ. ಇದು ಸಮಗ್ರ ಆರ್ಥಿಕ ರಕ್ಷಣೆ ಮತ್ತು ಮಾನಸಿಕ ನೆಮ್ಮದಿಯನ್ನು ಒದಗಿಸುತ್ತದೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Money Guide: ಗುಡ್‌ನ್ಯೂಸ್‌: ಕಿಸಾನ್‌ ಸಮ್ಮಾನ್‌ ನಿಧಿಯ 16ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಯಾವಾಗ ಸಿಗಲಿದೆ?

Continue Reading

ಮನಿ-ಗೈಡ್

Money Guide: ಗುಡ್‌ನ್ಯೂಸ್‌: ಕಿಸಾನ್‌ ಸಮ್ಮಾನ್‌ ನಿಧಿಯ 16ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಯಾವಾಗ ಸಿಗಲಿದೆ?

Money Guide: ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಫಲಾನುಭವಿಗಳಿಗೆ ಇಲ್ಲಿದೆ ಗುಡ್‌ನ್ಯೂಸ್‌. ಯೋಜನೆಯ 16ನೇ ಕಂತನ್ನು ನಾಳೆ (ಫೆಬ್ರವರಿ 28) ಪ್ರಧಾನ ಮಂತ್ರಿ ನರೇಂದ್ರ ಮೋದಿ ರಿಲೀಸ್‌ ಮಾಡಲಿದ್ದಾರೆ.

VISTARANEWS.COM


on

farmer
Koo

ನವದೆಹಲಿ: ದೇಶದ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ (PM Kisan Samman Nidhi Yojana)ಯನ್ನು 2೦19ರಲ್ಲಿ ಜಾರಿಗೆ ತಂದಿದೆ. ಈ ಯೋಜನೆ ಮೂಲಕ ಪ್ರತಿ ವರ್ಷ ರೈತರ ಖಾತೆಗೆ 6,000 ರೂ. ಜಮೆ ಮಾಡಲಾಗುತ್ತದೆ. ಸದ್ಯ ಈ ಯೋಜನೆಯ 16ನೇ ಕಂತು ಬಿಡುಗಡೆ ದಿನ ನಿಗದಿ ಪಡಿಸಲಾಗಿದೆ. ಹಾಗಾದರೆ ಯಾವಾಗ ಹಣ ಜಮೆ ಆಗಲಿದೆ ಎನ್ನುವ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಸದ್ಯ ಫಲಾನುಭವಿ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 16ನೇ ಕಂತು ದೊರೆಯಬೇಕಿದೆ. ಮೂಲಗಳ ಪ್ರಕಾರ ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆಯ 16ನೇ ಕಂತನ್ನು ನಾಳೆ (ಫೆಬ್ರವರಿ 28) ಪ್ರಧಾನ ಮಂತ್ರಿ ನರೇಂದ್ರ ಮೋದಿ ರಿಲೀಸ್‌ ಮಾಡಲಿದ್ದಾರೆ.

3 ಕಂತುಗಳಲ್ಲಿ ಪಾವತಿ

ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 3 ಬಾರಿ ಪಾವತಿಸಲಾಗುತ್ತದೆ. ಎಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎಂಬ ಮೂರು ಕಂತುಗಳಲ್ಲಿ ಹಣವನ್ನು ಒದಗಿಸಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಯೋಜನೆ ಆರಂಭವಾಗಿ 4 ವರ್ಷಗಳಲ್ಲಿ ಕೇಂದ್ರ ಇಲ್ಲಿಯವರೆಗೆ ಸುಮಾರು 2.50 ಲಕ್ಷ ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸಿದೆ. ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ಈ ಯೋಜನೆ ನೆರವಾಗುತ್ತಿದೆ.

ಹೀಗೆ ಚೆಕ್‌ ಮಾಡಿ

ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ, ಹಣ ನಿಮ್ಮ ಖಾತೆಗೆ ಜಮೆ ಆಗಿದೆಯೇ ಎನ್ನುವುದನ್ನು ಆನ್‌ಲೈನ್‌ ಮೂಲಕ ನಿಮಗೇ ಪರಿಶೀಲಿಸಲು ಸಾಧ್ಯವಿದೆ. ಅದಕ್ಕಾಗಿ ಮಾಡಬೇಕಾದುದು ಇಷ್ಟೆ.

 • ಅಧಿಕೃತ ವೆಬ್‌ಸೈಟ್‌ pmkisan.gov.in ಭೇಟಿ ನೀಡಿ
 • ಆಗ ಓಪನ್‌ ಆಗುವ ಪೇಜ್‌ನ ಬಲ ಬದಿಯಲ್ಲಿರುವ ‘Know Your Status’ ಆಯ್ಕೆ ಮೇಲೆ ಕ್ಲಿಕ್‌ ಮಾಡಿ
 • ರಿಜಿಸ್ಟ್ರೇಷನ್‌ ನಂಬರ್‌ ನಮೂದಿಸಿ, ಕ್ಯಾಪ್ಚ ಕೋಡ್‌ ಭರ್ತಿ ಮಾಡಿ ‘Get Data’ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ
 • ಈಗ ಫಲಾನುಭವಿಯ ವಿವರ, ಹಣ ಜಮೆಯಾದ ಮಾಹಿತಿ ಸ್ಕ್ರೀನ್‌ ಮೇಲೆ ಮೂಡುತ್ತದೆ.

ಗಮನಿಸಿ: ಪಿಎಂ ಕಿಸಾನ್ ಸಮ್ಮಾನ್‌ ಯೋಜನೆಯ ಪ್ರಯೋಜನವನ್ನು ಪಡೆಯಲು ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯ.

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಹೆಸರು ನೋಂದಾಯಿಸುವ ವಿಧಾನ

 • ಅಧಿಕೃತ ವೆಬ್‌ಸೈಟ್‌ pmkisan.gov.in ಭೇಟಿ ನೀಡಿ
 •  ‘New Farmer Registration’ ಆಯ್ಕೆ ಮೇಲೆ ಕಲಿಕ್‌ ಮಾಡಿ ಮತ್ತು ಆಧಾರ್‌ ಕಾರ್ಡ್‌ ನಂಬರ್‌ ನಮೂದಿಸಿ ಕ್ಯಾಪ್ಚ ಕೋಡ್‌ ಭರ್ತಿ ಮಾಡಿ
 • ಅಗತ್ಯ ಮಾಹಿತಿ ತುಂಬಿ ‘Yes’ ಬಟನ್‌ ಕ್ಲಿಕ್‌ ಮಾಡಿ
 • ಅರ್ಜಿ ಫಾರಂ ತುಂಬಿ, ಸೇವ್‌ ಮಾಡಿ ಭವಿಷ್ಯದ ಅಗತ್ಯಗಳಿಗಾಗಿ ಪ್ರಿಂಟ್‌ ಔಟ್‌ ತೆಗೆದಿಡಿ.

ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವ ವಿಧಾನ

 • ಅಧಿಕೃತ ವೆಬ್‌ಸೈಟ್‌ www.pmkisan.gov.inಗೆ ಭೇಟಿ ನೀಡಿ
 • ಆಗ ತೆರೆದುಕೊಳ್ಳುವ ಪುಟದಲ್ಲಿನ ‘Beneficiary list’ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ
 • ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್‌ ಮತ್ತು ಗ್ರಾಮವನ್ನು ಆಯ್ಕೆ ಮಾಡಿ
 • ‘Get report’ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ

ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್‌ ನಂಬರ್‌ 155261 ಮತ್ತು 011-24300606 ಅನ್ನು ಸಂಪರ್ಕಿಸಿ.

ಇದನ್ನೂ ಓದಿ: Money Guide: ಮನೆ ಖರೀದಿಗೆ ಮುಂದಾಗಿದ್ದೀರಾ? ಹಾಗಾದರೆ ಈ ವಿಚಾರ ನಿಮಗೆ ತಿಳಿದಿರಲೇ ಬೇಕು

Continue Reading

ಮನಿ-ಗೈಡ್

Money Guide : ಸೈಬರ್‌ ವಂಚಕರಿಂದ ನಿಮ್ಮ ಹಣ ರಕ್ಷಿಸಿಕೊಳ್ಳೋದು ಹೇಗೆ?

ಸೈಬರ್‌ ವಂಚನೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ನಿಮ್ಮ ಹಣವನ್ನು ರಕ್ಷಿಸುವುದು ಹೇಗೆ ( Money Guide) ಎಂಬುದನ್ನು ವಿವರಿಸಿದ್ದಾರೆ ಸೈಬರ್‌ ತಜ್ಞ ಸತೀಶ್‌ ವೆಂಕಟಸುಬ್ಬು

VISTARANEWS.COM


on

Cyber fraud cases on the rise in Bengaluru
Koo

ಸೈಬರ್‌ ವಂಚನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಬೆಂಗಳೂರಿನಲ್ಲಂತೂ ( Money Guide) ದಿನೇದಿನೆ ಸೈಬರ್‌ ವಂಚನೆಯ ಪ್ರಕರಣಗಳು ನಡೆಯುತ್ತಿವೆ. ಖ್ಯಾತ ಸೈಬರ್‌ ತಜ್ಞ ಸತೀಶ್‌ ವೆಂಕಟಸುಬ್ಬು ಅವರು ಸೈಬರ್‌ ಕ್ರೈಮ್‌ ಎಂಬ ಪುಸ್ತಕವನ್ನು ಬರೆದಿದ್ದಾರೆ. ವಿಸ್ತಾರ ಮನಿಪ್ಲಸ್‌ನಲ್ಲಿ ಸೈಬರ್‌ ವಂಚನೆಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಸತೀಶ್‌ ವೆಂಕಟಸುಬ್ಬು ಅವರು ನೀಡಿದ್ದಾರೆ.

ಸೈಬರ್‌ ಕ್ರೈಮ್‌ ಪುಸ್ತಕದಲ್ಲಿ 26 ಸೈಬರ್‌ ಕ್ರೈಮ್‌ಗಳ ಬಗ್ಗೆ ನಾನು ಬರೆದಿದ್ದೇನೆ. ಈ ಪ್ರತಿಯೊಂದು ಪ್ರಕರಣದಲ್ಲೂ ಅದರದ್ದೇ ಆದ ವಿಧಾನಗಳಿವೆ. ಆದರೆ ಎಲ್ಲ ಡಿಜಿಟಲ್‌ ಟ್ರಾನ್ಸಕ್ಷನ್‌ಗಳ ಸಂದರ್ಭ ಅಪರಿಚಿತ ಸಂದೇಶಗಳಿಗೆ ಮಾರು ಹೋಗಬಾರದು ಎನ್ನುವ ಸೂತ್ರ ಎಲ್ಲ ಪ್ರಕರಣಗಳಿಗೂ ಅನ್ವಯ. ಸಂದೇಶಗಳು ಎಲ್ಲಿಂದ ಬಂದಿವೆ ಎಂಬುದನ್ನು ತಾಳ್ಮೆಯಿಂದ ತಿಳಿದುಕೊಳ್ಳಬೇಕು. ದೃಢೀಕರಣವಾದ ಬಳಿಕವಷ್ಟೇ ಸಂದೇಶಗಳಿಗೆ ಸ್ಪಂದಿಸಬೇಕು. ಯಾವುದೇ ಅಪರಿಚಿತ ಕರೆ ಅಥವಾ ಮೆಸೇಜ್‌ ಬಂದರೆ ಎಚ್ಚೆತ್ತುಕೊಳ್ಳಬೇಕು. ಅವುಗಳಿಗೆ ಒಟಿಪಿ ನೀಡಬಾರದು. ಇಷ್ಟು ಮಾಡಿದರೆ 70-80% ಸೈಬರ್‌ ಕ್ರೈಮ್‌ ನಿಂದ ಪಾರಾಗಬಹುದು.

ಆಧಾರ್‌ ಕಾರ್ಡ್‌ ಮತ್ತು ಪ್ಯಾನ್‌ ಕಾರ್ಡ್‌ ಅನ್ನು ಅನವಶ್ಯಕವಾಗಿ ಯಾರಿಗೂ ಕೊಡಬೇಡಿ. ಭಾರತ ಈಗ ಡಿಜಿಟಲ್‌ ವರ್ಗಾವಣೆಗಳಿಗೆ ಮುಂಚೂಣಿಯಲ್ಲಿದೆ. ಹೀಗಾಗಿ ವ್ಯವಹರಿಸುವಾಗ ಸಾಕಷ್ಟು ಜಾಗರೂಕತೆಯಿಂದಿರಿ. ನಿಮ್ಮ ಪರ್ಸಲ್ಲಿ ನೀವು ನಿಮ್ಮೆಲ್ಲ ಹಣ ಇಡುವುದಿಲ್ಲ ಅಲ್ಲವೇ. ಅದೇ ರೀತಿ ಮುಖ್ಯವಾದ ಬ್ಯಾಂಕ್‌ ಅಕೌಂಟ್‌ ಅನ್ನು ಪ್ರತ್ಯೇಕವಾಗಿಟ್ಟು ಇಡಿ. ಡಿಜಿಟಲ್‌ ಟ್ರಾನ್ಸಕ್ಷನ್‌ಗಳಿಗೆ ಬೇರೆ ಬ್ಯಾಂಕ್‌ ಅಕೌಂಟ್‌ ಇಡಿ. ಇದರಿಂದ ಒಂದು ವೇಳೇ ಸೈಬರ್‌ ದಾಳಿಗೆ ಗುರಿಯಾದರೂ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ.

ನಿಮಗೆ ಅಪರಿಚಿತರಿಂದ ಸಾಮಾಜಿಕ ಜಾಲತಾಣಗಳಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಬಂದಿದ್ದರೆ, ಹುಷಾರಾಗಿರಿ. ಮ್ಯೂಚುವಲ್‌ ಫ್ರೆಂಡ್ಸ್‌ ಇರದಿದ್ದರೆ ಸ್ವೀಕರಿಸದಿರಿ. ಸ್ಮಾರ್ಟ್‌ ಫೋನ್‌ ಒಂದು ರೀತಿಯಲ್ಲಿ ಕಂಪ್ಯೂಟರ್‌ ಇದ್ದ ಹಾಗೆ ಇರುತ್ತದೆ. ನಿಮಗೇ ಗೊತ್ತಿಲ್ಲದಂತೆ ನಿಮ್ಮ ಫೋಟೊಗಳನ್ನು ಯಾರಾದರೂ ತೆಗೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದಾದರೂ ಅಪ್ಲಿಕೇಶನ್‌ ಅನ್ನು ಡೌನ್‌ ಲೋಡ್‌ ಮಾಡುವುದಿದ್ದರೆ ಎಚ್ಚರಿಕೆ ಇರಲಿ.

Continue Reading

ವಾಣಿಜ್ಯ

Money Guide : SWP ಎಂದರೇನು? ಫಿಕ್ಸೆಡ್‌ ಡೆಪಾಸಿಟ್‌ಗಿಂತ ಇದು ಹೆಚ್ಚು ಲಾಭದಾಯಕವೇ?

ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲಿ ( Money Guide ) ಎಸ್‌ ಡಬ್ಲ್ಯುಪಿ (ಸಿಸ್ಟಮ್ಯಾಟಕ್‌ ವಿತ್‌ ಡ್ರಾವಲ್‌ ಪ್ಲಾನ್)‌ ಕೂಡ ಚಾಲ್ತಿಯಲ್ಲಿದೆ. ಇದರ ವಿಶೇಷತೆ ಬಗ್ಗೆ ಮನಿ ಪ್ಲಸ್‌ನಲ್ಲಿ ತಜ್ಞ ವಿನೋದ್‌ ತಂತ್ರಿ ಅವರು ವಿವರಿಸಿದ್ದಾರೆ.

VISTARANEWS.COM


on

mutual fund
Koo

ಬೆಂಗಳೂರು: ಮ್ಯೂಚುವಲ್‌ ಫಂಡ್‌ಗಳಲ್ಲಿ ಸಿಪ್‌ ಅಥವಾ (Money Guide) ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ ಮೆಂಟ್‌ ಪ್ಲಾನ್‌ ಎನ್ನುವುದು ಜನಜನಿತ. ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುತ್ತಾ ಹೋಗುವುದು ಹಾಗೂ ಕೊನೆಯಲ್ಲಿ ಹೂಡಿಕೆಯನ್ನು ಹಿಂತೆಗೆದುಕೊಳ್ಳುವುದು. ಆದರೆ ಎಸ್‌ ಡಬ್ಲ್ಯು ಪಿ ಎನ್ನುವುದೂ ಇದೆ. ಎಸ್‌ಡಬ್ಲ್ಯುಪಿ ಎಂದರೆ ಸಿಸ್ಟಮ್ಯಾಟಿಕ್‌ ವಿತ್‌ ಡ್ರಾವಲ್‌ ಪ್ಲಾನ್‌ ( Systematic Withdrawal Plan) ಮೂಲಕ ಮ್ಯೂಚುವಲ್‌ ಫಂಡ್‌. ಹಾಗಾದರೆ ಇದರ ಲಾಭವೇನು ಎನ್ನುತ್ತೀರಾ? ಇದಕ್ಕಾಗಿ ವಿಸ್ತಾರ ಮನಿ ಪ್ಲಸ್‌ನಲ್ಲಿ ನಾಲೆಡ್ಜ್‌ ಬೆಲ್‌ ಸಿಇಒ ವಿನೋದ್‌ ತಂತ್ರಿ ಅವರು ವಿವರಿಸಿದ್ದಾರೆ.

ನಿಮ್ಮಲ್ಲಿ ಇಡಿಯಾಗಿ ಹೂಡಿಕೆ ಮಾಡಲು ಹಣ ಇದ್ದರೆ ಅದನ್ನು ಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿ ಹೂಡಿಕೆ ಮಾಡಿ, ನಿಯಮಿತವಾಗಿ ಪ್ರತಿ ತಿಂಗಳು ಹಣ ಪಡೆಯಬಹುದು. ಯೋಜನೆಯ ಮುಕ್ತಾಯಕ್ಕೆ ಇಡಿಯಾಗಿ ಮೊತ್ತವೂ ಸಿಗುತ್ತದೆ. ಅಂದರೆ ಇಲ್ಲಿ ಒಂದು ಕಡೆ ಪ್ರತಿ ತಿಂಗಳು ಹಣ ವಿತ್‌ ಡ್ರಾವಲ್‌ ಮಾಡುತ್ತೀರಿ. ಮತ್ತೊಂದು ಕಡೆ ನಿಮ್ಮ ಹೂಡಿಕೆ ಕೂಡ ಬೆಳೆಯುತ್ತಾ ಇರುತ್ತದೆ. ಆದ್ದರಿಂದ ಇದು ಲಾಭದಾಯಕ ಎನ್ನುತ್ತಾರೆ ವಿನೋದ್‌ ತಂತ್ರಿ.

ಜನ ರಿಯಲ್‌ ಎಸ್ಟೇಟ್‌ನಲ್ಲಿ ಸಾಮಾನ್ಯವಾಗಿ ಹೂಡಿಕೆ ಮಾಡುತ್ತಾರೆ. ಆದರೆ ಇದರಲ್ಲಿ ಲಿಕ್ವಿಡಿಟಿ ಕಡಿಮೆ. ಆದರೆ ಎಸ್‌ ಡಬ್ಲ್ಯುಪಿನಲ್ಲಿ ಒಂದು ಸಲ ಒಟ್ಟಿಗೆ ಹೂಡಿಕೆ ಮಾಡಲು ಅನುಕೂಲ ಇರುವವರು ಇನ್ವೆಸ್ಟ್‌ ಮಾಡಬಹುದು. 10-20-30 ಲಕ್ಷ ರೂ. ಇದೆ ಎನ್ನುವವರು ಇದರಲ್ಲಿ ಹೂಡಿಕೆ ಮಾಡಬಹುದು. ಬಳಿಕ ಪ್ರತಿ ತಿಂಗಳೂ ಮೊದಲೇ ನಿಗದಿತವಾದ ಹಣವನ್ನು ಪಡೆಯಬಹುದು. ಇದರಿಂದ ಮಾಸಿಕ ಆದಾಯ ಸಿಗುತ್ತದೆ. ಇದು ಮಾತ್ರವಲ್ಲದೆ ಪ್ರತಿ ತಿಂಗಳೂ ನಿಮ್ಮ ಹೂಡಿಕೆ ಕೂಡ ಬೆಳೆಯುತ್ತಿರುತ್ತದೆ. ಆ ಹಣ ಕೊನೆಯಲ್ಲಿ ನಿಮಗೆ ಸಿಗುತ್ತದೆ. ಇಲ್ಲಿ ನೀವು ಎಷ್ಟು ಹಣವನ್ನು ವಿತ್‌ ಡ್ರಾವಲ್‌ ಮಾಡುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ.

ಚಾರಿತ್ರಿಕ ದಾಖಲೆಗಳನ್ನು ಗಮನಿಸಿದರೆ, ಎಸ್‌ಡಬ್ಲ್ಯುಪಿನಲ್ಲಿ ಹೂಡಿಕೆ ಮಾಡಿದವರಿಗೆ ಪ್ರತಿ ತಿಂಗಳಿನ ಆದಾಯದ ಜತೆಗೆ ಕೊನೆಯಲ್ಲಿ ಅವರ ಅಸಲು ಮೊತ್ತವು ಇಮ್ಮಡಿಯಾಗಿದೆ ಎನ್ನುತ್ತಾರೆ ವಿನೋದ್‌ ತಂತ್ರಿ.

Continue Reading
Advertisement
Jet Suit Race
ವಿದೇಶ1 min ago

Jet Suit Race: ವಿಶ್ವದ ಮೊದಲ ಜೆಟ್‌ ಸೂಟ್‌ ರೇಸ್‌ಗೆ ದುಬೈ ಸಾಕ್ಷಿ; ಏನಿದು ಅದ್ಭುತ ರೇಸ್?‌

Kannada New Movie line man song out now
ಸ್ಯಾಂಡಲ್ ವುಡ್6 mins ago

Kannada New Movie: ಲೈನ್ ಮ್ಯಾನ್ ಸಿನಿಮಾದಿಂದ ಬಂತು ಮೊದಲ ಹಾಡು!

Road collapse
ಬೆಂಗಳೂರು21 mins ago

Road Collapse: ರಸ್ತೆ ಕುಸಿದು ಸಿಲುಕಿದ ಲಾರಿ; ಜಲಮಂಡಳಿ ಬೇಕಾಬಿಟ್ಟಿ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ

team India
ಪ್ರಮುಖ ಸುದ್ದಿ21 mins ago

T20 World Cup : ಟಿ20 ವಿಶ್ವ ಕಪ್​ಗೆ ಭಾರತ ತಂಡ ಪ್ರಕಟವಾಗುವ ದಿನಾಂಕ ಬಹಿರಂಗ

Pre-wedding of Anand Ambani
ಕ್ರೀಡೆ34 mins ago

ಅನಂತ್‌ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸ್ಟಾರ್​ ಕ್ರಿಕೆಟಿಗರು

rameshwaram cafe bengaluru incident
ಬೆಂಗಳೂರು36 mins ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Janhvi Kapoor Takes A Leap Forward In Spreading HPV Awareness
ಬಾಲಿವುಡ್43 mins ago

Janhvi Kapoor: ‘ಲೀಪ್, ಲಾಫ್‌ & ಲರ್ನ್‌’ ಸ್ಟಾಂಡ್ ಅಪ್ ಸ್ಪೆಷಲ್‌ನಲ್ಲಿ ಜಾನ್ವಿ ಕಪೂರ್‌ರಿಂದ ಎಚ್‌ಪಿವಿ ಜಾಗೃತಿ!

Sudden drop in arecanut price illegal transportation is reason for prices fall
ವಾಣಿಜ್ಯ44 mins ago

Arecanut Price: ಅಡಿಕೆ ಧಾರಣೆಯಲ್ಲಿ ದಿಢೀರ್‌ ಕುಸಿತ; ಬೆಲೆ ಇಳಿಕೆಗೆ ಅಕ್ರಮ ಸಾಗಣೆ ಕಾರಣವೇ?

Navanandi School Decade Celebration Programme at yadgiri
ಯಾದಗಿರಿ46 mins ago

Yadgiri News: ಮಕ್ಕಳು ಶ್ರದ್ಧೆಯಿಂದ ಓದಿದರೆ ಗುರಿ ಸಾಧನೆ: ಶಾಂತಮಲ್ಲಿಕಾರ್ಜುನ ಸ್ವಾಮೀಜಿ

Yuva Rajkumar First single song
ಸ್ಯಾಂಡಲ್ ವುಡ್51 mins ago

Yuva Rajkumar: ನಾಳೆ ಚಾಮರಾಜನಗರದಲ್ಲಿ ‘ಯುವ’ ಚಿತ್ರದ ಮೊದಲ ಹಾಡು ಬಿಡುಗಡೆ!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

rameshwaram cafe bengaluru incident
ಬೆಂಗಳೂರು36 mins ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ1 hour ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ12 hours ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ1 day ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ3 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ3 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ3 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ3 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ4 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

ಟ್ರೆಂಡಿಂಗ್‌