Money Guide: ಗಮನಿಸಿ; ಈ ಮಾಸಾಂತ್ಯದೊಳಗೆ ಮುಗಿಸಲೇಬೇಕಾದ ಕೆಲಸಗಳಿವು... - Vistara News

ಮನಿ-ಗೈಡ್

Money Guide: ಗಮನಿಸಿ; ಈ ಮಾಸಾಂತ್ಯದೊಳಗೆ ಮುಗಿಸಲೇಬೇಕಾದ ಕೆಲಸಗಳಿವು…

Money Guide: ಈ ಆರ್ಥಿಕ ವರ್ಷದ ಕೊನೆಯಲ್ಲಿದ್ದೇವೆ. ಮಾರ್ಚ್‌ ಮುಗಿಯುವುದರೊಳಗೆ ಒಂದಷ್ಟು ಹಣಕಾಸಿನ ಕರ್ತವ್ಯಗಳನ್ನು ಮಾಡಿ ಮುಗಿಸಲೇ ಬೇಕಿದೆ. ಅವು ಯಾವುವು ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

tax
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಾಮಾನ್ಯವಾಗಿ ಮಾರ್ಚ್‌ ಎನ್ನುವುದು ಅತ್ಯಂತ ಬ್ಯುಸಿ ತಿಂಗಳು ಎನಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಿರತರಾದರೆ ಜನ ಸಾಮಾನ್ಯರು, ತೆರಿಗೆ ಪಾವತಿದಾರರು ತಮ್ಮ ವಿವಿಧ ಹಣಕಾಸು ಬಾಧ್ಯತೆಗಳನ್ನು ಈ ತಿಂಗಳೊಳಗೆ ಮುಗಿಸಬೇಕಾಗುತ್ತದೆ. ಮುಂದಿನ ಆರ್ಥಿಕ ವರ್ಷ ಏಪ್ರಿಲ್‌ ಆರಂಭವಾಗುವುದಕ್ಕಿಂತ ಮುಂಚಿತವಾಗಿ ಕೆಲವೊಂದಿಷ್ಟು ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇರುತ್ತದೆ. ಇಂದಿನ ಮನಿಗೈಡ್‌ (Money Guide) ಮಾರ್ಚ್ 31ರೊಳಗೆ ಮುಗಿಸಲೇ ಬೇಕಾದ ಅಂತಹ ಒಂದಿಷ್ಟು ಕೆಲಸಗಳ ಮಾಹಿತಿ ನೀಡಲಿದೆ. ಗೊಂದಲಗಳನ್ನು ತಪ್ಪಿಸಲು ಕೊನೆಯ ದಿನಾಂಕದವೆರೆಗೆ ಕಾಯದೇ ಕೂಡಲೆ ಇದರತ್ತ ಗಮನ ಹರಿಸಬೇಕು ಎನ್ನುವುದು ತಜ್ಞರ ಸಲಹೆ.

ಮಾರ್ಚ್‌ 30

  • ಫೆಬ್ರವರಿಯಲ್ಲಿ ಸೆಕ್ಷನ್ 194-ಐಎ ಅಡಿಯಲ್ಲಿ ಕಡಿತಗೊಳಿಸಿದ ತೆರಿಗೆಗೆ ಸಂಬಂಧಿಸಿದಂತೆ ಚಲನ್-ಕಮ್-ಸ್ಟೇಟ್‌ಮೆಂಟ್‌ ಸಲ್ಲಿಸಲು ಕೊನೆಯ ದಿನ.
  • ಫೆಬ್ರವರಿಯಲ್ಲಿ ಸೆಕ್ಷನ್ 194-ಐಬಿ ಅಡಿಯಲ್ಲಿ ಕಡಿತಗೊಳಿಸಿದ ತೆರಿಗೆಗೆ ಸಂಬಂಧಿಸಿದಂತೆ ಚಲನ್-ಕಮ್-ಸ್ಟೇಟ್‌ಮೆಂಟ್‌ ಸಲ್ಲಿಸಲು ಕೊನೆಯ ದಿನಾಂಕ
  • ಫೆಬ್ರವರಿಯಲ್ಲಿ ಸೆಕ್ಷನ್ 194-ಎಂ ಅಡಿಯಲ್ಲಿ ಕಡಿತಗೊಳಿಸಿದ ತೆರಿಗೆಗೆ ಸಂಬಂಧಿಸಿದಂತೆ ಚಲನ್-ಕಮ್-ಸ್ಟೇಟ್‌ಮೆಂಟ್‌ ಸಲ್ಲಿಸಲು ಕೊನೆಯ ದಿನಾಂಕ
  • ಫೆಬ್ರವರಿಯಲ್ಲಿ ಸೆಕ್ಷನ್ 194-ಎಸ್‌ ಅಡಿಯಲ್ಲಿ ಕಡಿತಗೊಳಿಸಿದ ತೆರಿಗೆಗೆ ಸಂಬಂಧಿಸಿದಂತೆ ಚಲನ್-ಕಮ್-ಸ್ಟೇಟ್‌ಮೆಂಟ್‌ ಸಲ್ಲಿಸಲು ಕೊನೆಯ ದಿನಾಂಕ

ಮಾರ್ಚ್‌ 31

  • ತೆರಿಗೆ ಉಳಿತಾಯ ಹೂಡಿಕೆಗಳು: 2023-2024ರ ಹಣಕಾಸು ವರ್ಷಕ್ಕೆ ತೆರಿಗೆ ಉಳಿಸಲು ಸಹಾಯ ಮಾಡುವ ಹೂಡಿಕೆಗಳನ್ನು ಮಾಡಲು ಇದು ಕೊನೆಯ ದಿನಾಂಕ.
  • 2021-22ರ ಹಣಕಾಸು ವರ್ಷ ಪರಿಷ್ಕೃತ ಐಟಿಆರ್ ಸಲ್ಲಿಸಲು ಮಾರ್ಚ್ 31 ಕೊನೆಯ ದಿನಾಂಕ. ಆ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ತಮ್ಮ ರಿಟರ್ನ್ಸ್ ಸಲ್ಲಿಸಲು ವಿಫಲವಾದ ಅಥವಾ ಯಾವುದೇ ಆದಾಯವನ್ನು ವರದಿ ಮಾಡುವುದನ್ನು ಕಡೆಗಣಿಸಿದ ತೆರಿಗೆದಾರರು ಪರಿಷ್ಕೃತ ಐಟಿಆರ್ ಅಥವಾ ಐಟಿಆರ್-ಯು (ITR or ITR-U) ಸಲ್ಲಿಸಲು ಅವಕಾಶವಿದೆ.

ಪ್ರಧಾನ ಮಂತ್ರಿ ವ್ಯಯ ವಂದನ ಯೋಜನೆ (Pradhan Mantri Vaya Vandana Yojana)

60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಪಿಎಂವಿವಿವೈ ಪಿಂಚಣಿ ಯೋಜನೆ ಆದಾಯದ ಭದ್ರತೆಯನ್ನು ಖಾತರಿಪಡಿಸುತ್ತಿದ್ದು, ಇದರ ನೋಂದಣಿಗೆ ಮಾರ್ಚ್ 31 ಕೊನೆಯ ದಿನ. 7.4% ವಾರ್ಷಿಕ ಬಡ್ಡಿದರದೊಂದಿಗೆ, ಈ ಯೋಜನೆಯು ತನ್ನ ಹತ್ತು ವರ್ಷಗಳ ಅವಧಿಯಲ್ಲಿ ಆರ್ಥಿಕ ಸ್ಥಿರತೆಯನ್ನು ನೀಡುತ್ತದೆ.

ಫಾಸ್ಟ್‌ಟ್ಯಾಗ್‌ ಅಪ್‌ಡೇಟ್‌

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಫಾಸ್ಟ್‌ಟ್ಯಾಗ್‌ ಬಳಕೆದಾರರು ಎದುರಿಸುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ‘ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್‌’ ಯೋಜನೆಯ ಅವಧಿಯನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದೆ.

ಎಸ್‌ಬಿಐ ಅಮೃತ್‌ ಕಲಶ್‌ ವಿಶೇಷ ಎಫ್‌ಡಿ

ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐಯ ವಿಶೇಷ ಯೋಜನೆ ಅಮೃತ್‌ ಕಲಶ್‌ ಎಫ್‌ಡಿ ಡೆಪಾಸಿಟ್‌ ಸ್ಕೀಮ್‌ನ ಅವಧಿ ಮಾರ್ಚ್‌ 31ಕ್ಕೆ ಮುಕ್ತಾಯವಾಗಲಿದೆ. 400 ದಿನಗಳ ಈ ಯೋಜನೆಯಲ್ಲಿ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಅವಧಿಗೆ ನೀಡುವ ವ್ಯವಸ್ಥೆ ಇದೆ.‌ ದೇಶೀಯ ಹಾಗೂ ಅನಿವಾಸಿ ಭಾರತೀಯರು ಈ ಯೋಜನೆಯಲ್ಲಿ ಠೇವಣಿ ಇಡಬಹುದು. ರೆಗ್ಯುಲರ್‌ ಗ್ರಾಹಕರಿಗೆ 7.1% ಮತ್ತು ಹಿರಿಯ ಗ್ರಾಹಕರಿಗೆ 7.6% ಬಡ್ಡಿ ಸಿಗುತ್ತದೆ.

ಇದನ್ನೂ ಓದಿ: Money Guide: ಪಾಸ್‌ಪೋರ್ಟ್‌ ನವೀಕರಣ ಈಗ ಸುಲಭ; ಆನ್‌ಲೈನ್‌ನಲ್ಲಿ ರಿನೀವಲ್‌ ಮಾಡುವ ವಿಧಾನ ಇಲ್ಲಿದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಜಮೆ ಯಾವಾಗ?

Money Guide: ದೇಶದಲ್ಲಿನ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ 2೦19ರಲ್ಲಿ ಜಾರಿಗೆ ತಂದಿದೆ. ಅದರಂತೆ ಪ್ರತಿ ವರ್ಷ ರೈತರ ಖಾತೆಗೆ 3 ಕಂತುಗಳಲ್ಲಿ 6,000 ರೂ. ಜಮೆ ಮಾಡಲಾಗುತ್ತದೆ. ಸದ್ಯ 16 ಕಂತುಗಳನ್ನು ಯಶಸ್ವಿಯಾಗಿ ಜಮೆ ಮಾಡಲಾಗಿದೆ. ಮುಂದಿನ ತಿಂಗಳು 17ನೇ ಕಂತು ಬಿಡಿಗಡೆಯಾಗುವ ನಿರೀಕ್ಷೆ ಇದೆ. ಸದ್ಯ ದಿನಾಂಕ ನಿಗಡಿಪಡಿಸಿಲ್ಲ. ಯಾವುದೇ ಕ್ಷಣದಲ್ಲಿ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Money Guide
Koo

ನವದೆಹಲಿ: ದೇಶದ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ (PM Kisan Samman Nidhi Yojana)ಯನ್ನು 2೦19ರಲ್ಲಿ ಜಾರಿಗೆ ತಂದಿದೆ. ಈ ಯೋಜನೆ ಮೂಲಕ ಪ್ರತಿ ವರ್ಷ ರೈತರ ಖಾತೆಗೆ 3 ಕಂತುಗಳಲ್ಲಿ 6,000 ರೂ. ಜಮೆ ಮಾಡಲಾಗುತ್ತದೆ. ಸದ್ಯ ಈ ಯೋಜನೆಯ 17ನೇ ಕಂತು ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಹಾಗಾದರೆ ಯಾವಾಗ ಹಣ ಜಮೆ ಆಗಲಿದೆ ಎನ್ನುವ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಫೆಬ್ರವರಿ 28ರಂದು ಫಲಾನುಭವಿ ಕೃಷಿಕರ ಖಾತೆಗೆ ಕಿಸಾನ್‌ ಸಮ್ಮಾನ್‌ ಯೋಜನೆಯ 16ನೇ ಕಂತು ಬಿಡುಗಡೆ ಮಾಡಲಾಗಿತ್ತು. ದೇಶಾದ್ಯಂತದ 9 ಕೋಟಿಗಿಂತ ಅಧಿಕ ಫಲಾನುಭವಿಗಳ ಖಾತೆಗೆ ಅಂದು ಸುಮಾರು 21,000 ಕೋಟಿ ರೂ. ಜಮೆ ಮಾಡಲಾಗಿತ್ತು. ಸದ್ಯ 17ನೇ ಕಂತು ಬಿಡುಗಡೆಯಾಗಬೇಕಿದೆ.

17ನೇ ಕಂತು ಯಾವಾಗ?

17ನೇ ಕಂತು ಮೇಯಲ್ಲಿ ಬಿಡುಗಡೆಯಾಗಲಿದೆ. ಆದರೆ ದಿನಾಂಕ ನಿಗಡಿಪಡಿಸಿಲ್ಲ. ಯಾವುದೇ ಕ್ಷಣದಲ್ಲಿ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ.

3 ಕಂತುಗಳಲ್ಲಿ ಪಾವತಿ

ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 3 ಬಾರಿ ಪಾವತಿಸಲಾಗುತ್ತದೆ. ಎಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎಂಬ ಮೂರು ಕಂತುಗಳಲ್ಲಿ ಹಣವನ್ನು ಒದಗಿಸಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ಈ ಯೋಜನೆ ನೆರವಾಗುತ್ತಿದೆ.

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಹೆಸರು ನೋಂದಾಯಿಸುವ ವಿಧಾನ

  • ಅಧಿಕೃತ ವೆಬ್‌ಸೈಟ್‌ pmkisan.gov.in ಭೇಟಿ ನೀಡಿ
  • ‘New Farmer Registration’ ಆಯ್ಕೆ ಮೇಲೆ ಕ್ಲಿಕ್‌ ಮಾಡಿ ಮತ್ತು ಆಧಾರ್‌ ಕಾರ್ಡ್‌ ನಂಬರ್‌ ನಮೂದಿಸಿ ಕ್ಯಾಪ್ಚ ಕೋಡ್‌ ಭರ್ತಿ ಮಾಡಿ.
  • ಅಗತ್ಯ ಮಾಹಿತಿ ತುಂಬಿ ‘Yes’ ಬಟನ್‌ ಕ್ಲಿಕ್‌ ಮಾಡಿ.
  • ಅರ್ಜಿ ಫಾರಂ ತುಂಬಿ, ಸೇವ್‌ ಮಾಡಿ ಭವಿಷ್ಯದ ಅಗತ್ಯಗಳಿಗಾಗಿ ಪ್ರಿಂಟ್‌ ಔಟ್‌ ತೆಗೆದಿಡಿ.

ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವ ವಿಧಾನ

  • ಅಧಿಕೃತ ವೆಬ್‌ಸೈಟ್‌ www.pmkisan.gov.inಗೆ ಭೇಟಿ ನೀಡಿ.
  • ಆಗ ತೆರೆದುಕೊಳ್ಳುವ ಪುಟದಲ್ಲಿನ ‘Beneficiary list’ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.
  • ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್‌ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
  • ‘Get report’ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.

ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್‌ ನಂಬರ್‌ 155261 ಮತ್ತು 011-24300606 ಅನ್ನು ಸಂಪರ್ಕಿಸಿ.

ನಿಮ್ಮ ಹೆಸರು ಫಲಾನುಭವಿ ಪಟ್ಟಿಯಿಂದ ರದ್ದಾಗಲು ಕಾರಣ

  • ನಕಲಿ ಫಲಾನುಭವಿ ಸಂಖ್ಯೆ.
  • ಇ-ಕೆವೈಸಿ ಪೂರ್ಣವಾಗದಿರುವುದು.
  • ಅರ್ಜಿಯಲ್ಲಿನ ತಪ್ಪಾದ ಐಎಫ್‌ಎಸ್‌ಸಿ ಕೋಡ್‌.
  • ಅಮಾನ್ಯ, ವರ್ಗಾವಣೆಗೊಂಡ, ನಿರ್ಬಂಧಿಸಿದ ಅಥವಾ ಸ್ಥಗಿತಗೊಳಿಸಿದ ಬ್ಯಾಂಕ್ ಖಾತೆ.
  • ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಕಾರ್ಡ್‌ ನಂಬರ್‌ ಲಿಂಕ್‌ ಆಗದೇ ಇರುವುದು.
  • ಅಪೂರ್ಣ ಅಪ್ಲಿಕೇಷನ್‌ ಫಾರಂ.
  • ಅಮಾನ್ಯ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಹೆಸರು.
  • ಫಲಾನುಭವಿ ಖಾತೆ ಸಂಖ್ಯೆಯು ಫಲಾನುಭವಿ ಕೋಡ್ ಮತ್ತು ಯೋಜನೆಯೊಂದಿಗೆ ಹೋಲಿಕೆ ಆಗದಿರುವುದು.

ಇದನ್ನೂ ಓದಿ: Money Guide: ಮನೆ ಪೂರ್ತಿಯಾಗುವ ಮುನ್ನವೇ ಸಾಲದ ಹಣ ಖರ್ಚಾಯ್ತೆ? ಚಿಂತೆ ಬೇಡ; ಟಾಪ್‌ ಅಪ್‌ ಲೋನ್‌ಗೆ ಅಪ್ಲೈ ಮಾಡಿ

Continue Reading

ಮನಿ-ಗೈಡ್

Money Guide: ಮೇ 31ರೊಳಗೆ ಪ್ಯಾನ್‌-ಆಧಾರ್‌ ಲಿಂಕ್‌ ಆಗದಿದ್ದರೆ ಟಿಡಿಎಸ್ ದುಪ್ಪಟ್ಟು ಕಡಿತ; ಲಿಂಕ್‌ ಮಾಡುವ ವಿಧಾನ ಇಲ್ಲಿದೆ

Money Guide: ನಿಮ್ಮ ಪ್ಯಾನ್‌ ನಂಬರ್‌ ಇನ್ನೂ ಆಧಾರ್‌ನೊಂದಿಗೆ ಲಿಂಕ್‌ ಆಗಿಲ್ಲವೆ? ಹಾಗಾದರೆ ಮೇ 31ರೊಳಗೆ ಮಾಡಲೇಬೇಕು. ಯಾಕೆಂದರೆ ಮೇ 31ರೊಳಗೆ ಪ್ಯಾನ್‌ ನಂಬರ್‌ ಆಧಾರ್‌ನೊಂದಿಗೆ ಲಿಂಕ್‌ ಆಗದಿದ್ದರೆ ಟಿಡಿಎಸ್ ಅನ್ನು ದುಪ್ಪಟ್ಟು ಪ್ರಮಾಣದಲ್ಲಿ ಕಡಿತಗೊಳಿಸಲಾಗುತ್ತದೆ ಎಂದು ಆದಾಯ ತೆರಿಗೆ ತಿಳಿಸಿದೆ. ಹಾಗಾದರೆ ಆನ್‌ಲೈನ್‌, ಆಫ್‌ಲೈನ್‌ನಲ್ಲಿ ಆಧಾರ್‌ ಮತ್ತು ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ನಿಮ್ಮ ಪ್ಯಾನ್‌ ನಂಬರ್‌ (Permanent Account Number) ಅನ್ನು ಆಧಾರ್‌ (Aadhaar)ನೊಂದಿಗೆ ಇನ್ನೂ ಲಿಂಕ್‌ ಮಾಡಿಲ್ಲವೆ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಯಾಕೆಂದರೆ ಮೇ 31ರೊಳಗೆ ಪ್ಯಾನ್‌ ನಂಬರ್‌ ಆಧಾರ್‌ನೊಂದಿಗೆ ಲಿಂಕ್‌ ಆಗದಿದ್ದರೆ ಟಿಡಿಎಸ್ ಅನ್ನು ದುಪ್ಪಟ್ಟು ಪ್ರಮಾಣದಲ್ಲಿ ಕಡಿತಗೊಳಿಸಲಾಗುತ್ತದೆ ಎಂದು ಆದಾಯ ತೆರಿಗೆ (Income tax) ತಿಳಿಸಿದೆ. ಹಾಗಾದರೆ ಆನ್‌ಲೈನ್‌, ಆಫ್‌ಲೈನ್‌ನಲ್ಲಿ ಆಧಾರ್‌ ಮತ್ತು ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ ? ನಿಮ್ಮ ಗೊಂದಲಕ್ಕೆ ಇಂದಿನ ಮನಿಗೈಡ್‌ (Money Guide)ನಲ್ಲಿದೆ ಉತ್ತರ.

ಹೀಗೆ ಲಿಂಕ್‌ ಮಾಡಿ

ಪ್ಯಾನ್‌ ಮತ್ತು ಆಧಾರ್‌ ಅನ್ನು ಹಲವು ವಿಧಗಳ ಮೂಲಕ ಲಿಂಕ್‌ ಮಾಡಬಹುದು. ಮೊದಲೇ ಹೇಳಿದಂತೆ ಇದಕ್ಕಾಗಿ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾರ್ಗಗಳನ್ನು ಬಳಸಬಹುದು.

ಇನ್‌ಕಂ ಟ್ಯಾಕ್ಸ್‌ ಡಿಪಾರ್ಟ್‌ಮೆಂಟ್‌ ಪೋರ್ಟಲ್‌ ಮೂಲಕ

  • ಅದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ incometaxindiaefiling.gov.inಗೆ ಭೇಟಿ ನೀಡಿ.
  • ಈಗ ತೆರೆದುಕೊಳ್ಳುವ ಪುಟದ ಎಡಭಾಗದಲ್ಲಿ ಕಾಣಿಸುವ ‘Quick Links’ ವಿಭಾಗದ ‘Link Aadhaar’ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.
  • ಈಗ ಹೊಸ ಪುಟ ತೆರೆದುಕೊಳ್ಳಲಿದ್ದು, ಅಲ್ಲಿ ಪ್ಯಾನ್‌, ಆಧಾರ್‌ ನಂಬರ್‌ ನಮೂದಿಸಿ. ಜತೆಗೆ ಇತರ ಅಗತ್ಯ ಮಾಹಿತಿಯನ್ನು ನೀಡಿ.

ಎಸ್‌ಎಂಎಸ್‌ ಮೂಲಕ

  • UIDPAN 10-ಅಂಕಿಗಳ ಪ್ಯಾನ್‌ ಕಾರ್ಡ್‌ ನಂಬರ್‌, 12-ಅಂಕಿಗಳ ಆಧಾರ್‌ ಕಾರ್ಡ್‌ ನಂಬರ್‌ ನಮೂದಿಸಿ ಒಂದು ಸ್ಪೇಸ್‌ ಕೊಟ್ಟು 567678 ಅಥವಾ 56161ಗೆ ಎಸ್‌ಎಂಎಸ್‌ ಕಳುಹಿಸಿ.
  • ಬಳಿಕ ಪ್ಯಾನ್-ಆಧಾರ್ ಲಿಂಕ್ ಸ್ಥಿತಿಯನ್ನು ಎಸ್ಎಂಎಸ್ ನಿಮಗೆ ತಿಳಿಸಲಾಗುತ್ತದೆ. ಗಮನಿಸಿ ಜನ್ಮ ದಿನಾಂಕವು ಎರಡೂ ದಾಖಲೆಗಳಲ್ಲಿ ಹೊಂದಿಕೆಯಾದರೆ ಮಾತ್ರ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲಾಗುತ್ತದೆ.

ಆಧಾರ್-ಪ್ಯಾನ್‌ ಲಿಂಕ್‌ ಆಗಿದ್ಯಾ ಎನ್ನುವುದನ್ನು ಪರಿಶೀಲಿಸುವ ವಿಧಾನ

  • ಅದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ incometaxindiaefiling.gov.inಗೆ ಭೇಟಿ ನೀಡಿ.
  • ಈಗ ತೆರೆದುಕೊಳ್ಳುವ ಪುಟದ ಎಡಭಾಗದಲ್ಲಿ ಕಾಣಿಸುವ ‘Quick Links’ ವಿಭಾಗದ ‘Link Aadhaar Status’ ಆಪ್ಶನ್‌ ಮೇಲೆ ಕ್ಲಿಕ್‌ ಮಾಡಿ.
  • ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಪ್ಯಾನ್‌ ಮತ್ತು ಆಧಾರ್‌ ನಂಬರ್‌ ನಮೂದಿಸಿ.
  • ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ ಬಳಿಕ ‘View Link Aadhaar Status’ ಆಪ್ಶನ್‌ ಸೆಲೆಕ್ಟ್‌ ಮಾಡಿ.
  • ಆಗ ಒಂದು ವೇಳೆ ಲಿಂಕ್‌ ಆಗಿದ್ದರೆ ನಿಮ್ಮ ಪ್ಯಾನ್‌ (ಪ್ಯಾನ್‌ ನಂಬರ್‌) ಆಧಾರ್‌ ನಂಬರ್‌ (ಆಧಾರ್‌ ನಂಬರ್‌ನ ಅಂಕಿ)ನೊಂದಿಗೆ ಲಿಂಕ್‌ ಆಗಿದೆ ಎನ್ನುವ ಸಂದೇಶ ಮೂಡುತ್ತದೆ.

ಕಡ್ಡಾಯ ಯಾಕೆ?

ನಕಲಿ ಪ್ಯಾನ್‌ ಕಾರ್ಡ್‌ಗಳನ್ನು ತಡೆಗಟ್ಟಲು, ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಜಾರಿಗೆ ತರುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯು ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್‌ ಮಾಡುವುದನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ಇದುವರೆಗೆ ಲಿಂಕ್‌ ಮಾಡದಿದ್ದರೆ ಕೂಡಲೇ ಮಾಡಿಸಿ. ಕೊನೆಯ ಕ್ಷಣದ ಗೊಂದಲಗಳನ್ನು ತಪ್ಪಿಸಲು ಅಂತಿಮ ದಿನಾಂಕದವರೆಗೆ ಕಾಯುವ ಬದಲು ಕೂಡಲೇ ಲಿಂಕ್‌ ಮಾಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: Money Guide: ಮನೆ ಪೂರ್ತಿಯಾಗುವ ಮುನ್ನವೇ ಸಾಲದ ಹಣ ಖರ್ಚಾಯ್ತೆ? ಚಿಂತೆ ಬೇಡ; ಟಾಪ್‌ ಅಪ್‌ ಲೋನ್‌ಗೆ ಅಪ್ಲೈ ಮಾಡಿ

Continue Reading

ಮನಿ-ಗೈಡ್

Money Guide: ಕ್ರೆಡಿಟ್‌ ಕಾರ್ಡ್‌ ಹೊಂದಿದ್ದೀರಾ? ವಂಚಕರ ಬಲೆಗೆ ಬೀಳದಿರಲು ಈ ಟಿಪ್ಸ್‌ ಫಾಲೋ ಮಾಡಿ

Money Guide: ನಗರ, ಹಳ್ಳಿ ಎನ್ನುವ ಬೇಧವಿಲ್ಲದೆ ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ಪೇಮೆಂಟ್‌ ವಿಧಾನ ಜನಪ್ರಿಯಗೊಳ್ಳುತ್ತಿದೆ. ಆನ್‌ಲೈನ್‌ ಪಾವತಿ ಲಭ್ಯವಿಲ್ಲದ ಕಡೆ ಕ್ರೆಡಿಟ್‌ ಕಾರ್ಡ್‌ ಬಳಕೆ ವ್ಯಾಪಕವಾಗಿದೆ. ಇದಕ್ಕೆ ತಕ್ಕಂತೆ ವಂಚನೆಯ ಪ್ರಕರಣವೂ ವೃದ್ಧಿಸುತ್ತಿದೆ. ಕ್ರೆಡಿಟ್ ಕಾರ್ಡ್ ವಂಚನೆ ಇಂದು ಎದುರಾಗುವ ಬಹು ದೊಡ್ಡ ಸವಾಲು ಎನಿಸಿಕೊಂಡಿದೆ. ಹಾಗಂತ ಗಾಬರಿಯಾಗಬೇಕಾಗಿಲ್ಲ. ಒಂದಷ್ಟು ಮುಂಜಾಗ್ರತಾ ಕ್ರಮ ಕೈಗೊಂಡರೆ ಕ್ರೆಡಿಟ್‌ ಕಾರ್ಡ್‌ ಅನ್ನು ಸುರಕ್ಷಿತವಾಗಿಸಿಕೊಳ್ಳಬಹುದು. ಅದು ಹೇಗೆ ಎನ್ನುವುದನ್ನು ತಿಳಿಸುಕೊಳ್ಳಲು ಇಂದಿನ ಮನಿಗೈಡ್‌ ಓದಿ.

VISTARANEWS.COM


on

Money Guide
Koo

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಗದು ವಹಿವಾಟು ಗಣನೀಯವಾಗಿ ಕುಸಿಯುತ್ತಿದೆ ಮತ್ತು ಬಹುತೇಕರು ಡಿಜಿಟಲ್ ಪಾವತಿಯತ್ತ (Digital payments) ಮುಖ ಮಾಡುತ್ತಿದ್ದಾರೆ. ನಗರ ಮಾತ್ರವಲ್ಲ ಗ್ರಾಮಾಂತರ ಪ್ರದೇಶಗಳಲ್ಲಿಯೂ ಡಿಜಿಟಲ್‌ ಪೇಮೆಂಟ್‌ ಜನಪ್ರಿಯವಾಗುತ್ತಿದೆ. ಆನ್‌ಲೈನ್‌ ಪಾವತಿ ಲಭ್ಯವಿಲ್ಲದ ಕಡೆ ಕ್ರೆಡಿಟ್‌ ಕಾರ್ಡ್‌ (Credit card) ನೆರವಿಗೆ ಬರುತ್ತದೆ. ಹೀಗಾಗಿ ಹೆಚ್ಚಿನ ವ್ಯಾಪಾರಿಗಳು ಈಗ ಕ್ರೆಡಿಟ್ ಕಾರ್ಡ್ ಪಾವತಿಯನ್ನು ಸ್ವೀಕರಿಸುತ್ತಿದ್ದಾರೆ. ದೊಡ್ಡ ಮೊತ್ತದ ಖರೀದಿಗೆ ಇದು ಹೆಚ್ಚು ಸೂಕ್ತ. ಆದರೆ ಕೆಲವೊಮ್ಮೆ ವಂಚಕರು ಕ್ರೆಡಿಟ್‌ ಕಾರ್ಡ್‌ ಮೂಲಕ ನಿಮ್ಮನ್ನು ಮೋಸಗೊಳಿಸಲು ಮುಂದಾಗಬಹುದು. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಅದು ಹೇಗೆ ಎನ್ನುವ ವಿವರ ಇಲ್ಲಿದೆ (Money Guide).

ಅನೇಕ ಕ್ರೆಡಿಟ್ ಕಾರ್ಡ್‌ಗಳು ಆಕರ್ಷಕ ಕೊಡುಗೆಗಳನ್ನೂ ನೀಡುತ್ತವೆ. ರಿವಾರ್ಡ್, ಕ್ಯಾಶ್ ಬ್ಯಾಕ್, ಪ್ರಯಾಣ ವಿಮೆ ಅಥವಾ ಲಾಂಜ್ ಪ್ರವೇಶದಂತಹ ಇತರ ಪ್ರಯೋಜನಗಳನ್ನು ನೀಡುವ ಮೂಲಕ ಗಮನ ಸೆಳೆಯುತ್ತವೆ. ಈ ಎಲ್ಲ ಕಾರಣಗಳಿಂದ ಕ್ರೆಡಿಟ್‌ ಕಾರ್ಡ್‌ ಬಳಕೆ ಇನ್ನಷ್ಟು ಹೆಚ್ಚಿದೆ. ಆದಾಗ್ಯೂ ಕ್ರೆಡಿಟ್ ಕಾರ್ಡ್ ವಂಚನೆ ಇಂದು ಎದುರಾಗುವ ಬಹು ದೊಡ್ಡ ಸವಾಲು ಎನಿಸಿಕೊಂಡಿದೆ. ಹಾಗಂತ ಗಾಬರಿಯಾಗಬೇಕಾಗಿಲ್ಲ. ಒಂದಷ್ಟು ಮುಂಜಾಗ್ರತಾ ಕ್ರಮ ಕೈಗೊಂಡರೆ ಕ್ರೆಡಿಟ್‌ ಕಾರ್ಡ್‌ ಅನ್ನು ಸುರಕ್ಷಿತವಾಗಿಸಿಕೊಳ್ಳಬಹುದು. ವೈಯಕ್ತಿಕ ಜಾಗರೂಕತೆ, ತಾಂತ್ರಿಕ ಕ್ರಮಗಳು ಮತ್ತು ಸುರಕ್ಷತಾ ಕ್ರಮಗಳ ಸಂಯೋಜನೆಯ ಮೂಲಕ ನೀವು ವಂಚಕರ ಕಾಟದಿಂದ ಪಾರಾಗಬಹುದು. ಅದಕ್ಕಾಗಿ ನೀವು ಅನುಸರಿಸಬೇಕಾದ ಕ್ರಮಗಳ ಮಾಹಿತಿ ಇಂತಿದೆ.

ರಹಸ್ಯ ಕಾಪಾಡಿ

ನಿಮ್ಮ ಕಾರ್ಡ್‌ ಪಿನ್, ಸಿವಿವಿ ಕೋಡ್ ಅಥವಾ ಪೂರ್ಣ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ನೇರವಾಗಿ, ಇಮೇಲ್ ಅಥವಾ ಫೋನ್ ಮೂಲಕ ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದು ಸುರಕ್ಷತೆಗಾಗಿ ನೀವು ಅನುಸರಿಸಬಹುದಾದ ಅತಿ ಮುಖ್ಯ ಹೆಜ್ಜೆ. ಅಲ್ಲದೆ ಬ್ಯಾಂಕ್‌ಗಳು ಈ ಮಾಹಿತಿಯನ್ನು ಯಾವ ಕಾರಣಕ್ಕೂ, ಯಾರ ಬಳಿಯೂ ಕೇಳುವುದಿಲ್ಲ. ವಂಚಕರು ಬ್ಯಾಂಕ್‌ ಹೆಸರಲ್ಲಿ ಕರೆ ಮಾಡಿ ಅಥವಾ ಎಸ್‌ಎಂಎಸ್‌ ಮಾಡಿ ಈ ಬಗ್ಗೆ ನಿಮ್ಮ ಬಾಯಿ ಬಿಡಿಸಲು ನೋಡಬಹುದು. ಯಾವ ಕಾರಣಕ್ಕೂ ಇದನ್ನು ಹಂಚಿಕೊಳ್ಳಬೇಡಿ.

ಕ್ರೆಡಿಟ್ ಕಾರ್ಡ್ ವಹಿವಾಟು ಮೇಲೆ ಗಮನ ಹರಿಸಿ

ಆನ್‌ಲೈನ್‌ ಬ್ಯಾಂಕಿಂಗ್ ಆಯ್ಕೆ ಅಥವಾ ಮೊಬೈಲ್ ಅಪ್ಲಿಕೇಶನ್‌ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ. ಯಾವುದೇ ಅನಧಿಕೃತ ವಹಿವಾಟು ಕಂಡು ಬಂದರೆ ತಕ್ಷಣ ನಿಮ್ಮ ಬ್ಯಾಂಕಿಗೆ ವರದಿ ಮಾಡಿ. ಕಾರ್ಡ್ ರೀಡರ್‌ಗಳನ್ನು ಬಳಸುವಾಗ ಜಾಗರೂಕರಾಗಿರಿ. ಅವು ಕಾನೂನುಬದ್ಧವಾಗಿವೆ ಮತ್ತು ತಿರುಚಲಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಪಾಯಿಂಟ್ ಆಫ್ ಸೇಲ್ ಟರ್ಮಿನಲ್‌ಗಳಲ್ಲಿ ನಮೂದಿಸುವಾಗ ನಿಮ್ಮ ಪಿನ್ ಅನ್ನು ಗೌಪ್ಯವಾಗಿಡಿ.

ಸುರಕ್ಷಿತ ಆನ್‌ಲೈನ್ ವಹಿವಾಟುಗಳು

ಈಗಂತೂ ಆನ್‌ಲೈನ್‌ ಶಾಪಿಂಗ್‌ ಹೆಸರಿನಲ್ಲಿ ಸಾಕಷ್ಟು ವಂಚನೆ ನಡೆಯುತ್ತಿದೆ. ಉತ್ತಮ ಕೊಡುಗೆ ಪ್ರದರ್ಶಿಸಿ ನಿಮ್ಮ ಗಮನ ಸೆಳೆದು ವಂಚನೆ ನಡೆಸುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಹೀಗಾಗಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ವೆಬ್ ಸೈಟ್ ಕಾನೂನುಬದ್ಧವಾಗಿದೆ ಮತ್ತು ಸುರಕ್ಷಿತ ಸಂಪರ್ಕವನ್ನು ಬಳಸುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕ್ಯಾಶ್‌ ಆನ್‌ ಡೆಲಿವರಿ ಆಯ್ಕೆಯನ್ನೇ ಬಳಸಿ. ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಸಾರ್ವಜನಿಕ ವೈ-ಫೈ ಬಳಸುವುದನ್ನು ತಪ್ಪಿಸಿ. ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ನಿಮ್ಮ ಬ್ಯಾಂಕ್ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ. ಯಾವುದೇ ಕಾರಣಕ್ಕೂ ಅನುಮಾನಾಸ್ಪದ ವೆಬ್‌ಸೈಟ್‌ಗಳಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ನಮೂದಿಸಬೇಡಿ. ನಿಮ್ಮ ಕಾರ್ಡ್ ಮಾಹಿತಿಯನ್ನು ವಿನಂತಿಸುವ ಇಮೇಲ್ ಅಥವಾ ಕರೆಗಳಿಗೆ ಪ್ರತಿಕ್ರಿಯಿಸಬೇಡಿ.

ಸುರಕ್ಷಿತ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳಿ

ನಿಮ್ಮ ಬ್ಯಾಂಕ್ ನೀಡುವ ಭದ್ರತಾ ವೈಶಿಷ್ಟ್ಯಗಳ ಲಾಭ ಪಡೆಯಿರಿ. ವೆಚ್ಚದ ಮಿತಿಗಳನ್ನು ನಿಗದಿಪಡಿಸುವುದು, ಎರಡು-ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸುವುದು ಅಥವಾ ನಿಮ್ಮ ನಿಜವಾದ ಕಾರ್ಡ್ ವಿವರಗಳನ್ನು ಹಂಚಿಕೊಳ್ಳುವ ಅಗತ್ಯವಿಲ್ಲದ ಮೊಬೈಲ್ ವ್ಯಾಲೆಟ್‌ಗಳನ್ನು ಬಳಸಿಕೊಳ್ಳಿ. ನಿಮ್ಮ ಕ್ರೆಡಿಟ್ ಕಾರ್ಡ್‌ನೊಂದಿಗೆ ಮಾಡಿದ ಪ್ರತಿಯೊಂದು ವಹಿವಾಟಿನ ಅಧಿಸೂಚನೆಗಳನ್ನು ಎಸ್‌ಎಂಎಸ್‌ / ಇಮೇಲ್‌ ಮೂಲಕ ಸ್ವೀಕರಿಸುವ ಎಚ್ಚರಿಕೆಗಳನ್ನು ಸಕ್ರಿಯಗೊಳಿಸಿ. ಸಾಂಪ್ರದಾಯಿಕ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ (Magnetic stripe cards)ಗಳಿಗೆ ಹೋಲಿಸಿದರೆ ಹೆಚ್ಚುವರಿ ಭದ್ರತೆಯನ್ನು ಒದಗಿಸುವ ಇಎಂವಿ ಚಿಪ್ ತಂತ್ರಜ್ಞಾನ ಅಳವಡಿಸಿರುವ ಕಾರ್ಡ್‌ ಅಥವಾ ನಿಮ್ಮ ಬ್ಯಾಂಕಿನಲ್ಲಿ ಲಭ್ಯವಿರುವ ಇತ್ತೀಚಿನ ಕಾರ್ಡ್‌ ಮಾದರಿಯನ್ನು ಆಯ್ಕೆ ಮಾಡಿ.

ಕಾರ್ಡ್ ಬಗ್ಗೆ ಸ್ಮಾರ್ಟ್ ಆಗಿರಿ

ನಿಮ್ಮ ಕಾರ್ಡ್‌ಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ ಮತ್ತು ಅಂಗಡಿಗಳು ಅಥವಾ ರೆಸ್ಟೋರೆಂಟ್‌ಗಳಲ್ಲಿ ನಿಮ್ಮ ಕಣ್ಣೆದುರೇ ಸ್ವೈಪ್‌ ಮಾಡಿ. ನಿಮ್ಮ ಕಾರ್ಡ್ ಮಾಹಿತಿಯನ್ನು ಕದಿಯುವ ಸ್ಕಿಮ್ಮಿಂಗ್ ಸಾಧನಗಳ ಬಗ್ಗೆ ಜಾಗರೂಕರಾಗಿರಿ. ಹಳೆಯ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌ ಮತ್ತು ರಸೀದಿಗಳನ್ನು ಹಾಗೆಯೇ ಎಸೆಯುವ ಮೊದಲು ಅವುಗಳನ್ನು ಚೂರು ಚೂರು ಮಾಡಿ. ಒಂದು ವೇಳೆ ವಂಚನೆಯ ಸುಳಿವು ಸಿಕ್ಕರೆ ತಕ್ಷಣ ಕಸ್ಟಮರ್‌ ಕೇರ್‌ ನಂಬರ್‌ಗೆ ಕರೆ ಮಾಡಿ ಬ್ಲಾಕ್‌ ಮಾಡುವುದನ್ನು ಮರೆಯಬೇಡಿ.

ಇದನ್ನೂ ಓದಿ: Money Guide: ಮಕ್ಕಳಿಗೆ ಉಡುಗೊರೆ ಕೊಡಬೇಕೆ? ಅವರ ಹೆಸರಿನಲ್ಲಿ ಪಿಪಿಎಫ್‌ ಖಾತೆ ಆರಂಭಿಸಿ; ಇಲ್ಲಿದೆ ಸಂಪೂರ್ಣ ವಿವರ

Continue Reading

ಮನಿ-ಗೈಡ್

Money Guide: ಮನೆ ಪೂರ್ತಿಯಾಗುವ ಮುನ್ನವೇ ಸಾಲದ ಹಣ ಖರ್ಚಾಯ್ತೆ? ಚಿಂತೆ ಬೇಡ; ಟಾಪ್‌ ಅಪ್‌ ಲೋನ್‌ಗೆ ಅಪ್ಲೈ ಮಾಡಿ

Money Guide: ಮನೆ ನಿರ್ಮಾಣಕ್ಕೆ ಬ್ಯಾಂಕ್‌ನಿಂದ ಸಾಲ ಪಡೆದುಕೊಂಡಿದ್ದೀರಿ. ಆದರೆ ಮನೆ ಪೂರ್ತಿಯಾಗುವ ಮುನ್ನವೇ ಹಣವೆಲ್ಲ ಖಾಲಿಯಾಯ್ತು ಎಂದಿಟ್ಟುಕೊಳ್ಳೋಣ. ಆಗ ಸಹಜವಾಗಿ ಆತಂಕ ಎದುರಾಗುತ್ತದೆ. ಚಿಂತೆ ಮೂಡುತ್ತದೆ. ಆದರೆ ಈ ಬಗ್ಗೆ ಹೆಚ್ಚು ಯೋಚಿಸಬೇಕಾಗಿಲ್ಲ. ಯಾಕೆಂದರೆ ಇಂತಹ ಸಂದರ್ಭದಲ್ಲಿ ನೆರವಾಗಲೆಂದೇ ಟಾಪ್‌ ಅಪ್‌ ಲೋನ್‌ ಯೋಜನೆಯನ್ನು ರೂಪಿಸಲಾಗಿದೆ. ಟಾಪ್‌ ಅಪ್‌ ಲೋನ್‌ ಎಂದರೇನು? ಇದರ ವಿಧ ಯಾವುದು? ಯಾರೆಲ್ಲ ಅಪ್ಲೈ ಮಾಡಬಹುದು? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ಮನೆ ನಿರ್ಮಾಣಕ್ಕೆ ಸಾಲ ಪಡೆದುಕೊಂಡಿದ್ದೀರಿ ಅಥವಾ ತುರ್ತು ಅಗತ್ಯಕ್ಕಾಗಿ ಪರ್ನನಲ್‌ ಲೋನ್‌ಗೆ ಅಪ್ಲೈ ಮಾಡಿ ಅದು ಮಂಜೂರಾಗಿದೆ. ಆದರೆ ನೀವು ಉದ್ದೇಶಿಸಿದ ಕಾರ್ಯ ಪೂರ್ಣಗೊಳ್ಳುವ ಮೊದಲೇ ಹಣ ಖಾಲಿಯಾಗಿದೆ. ಇನ್ನೂ ಸ್ವಲ್ಪ ದುಡ್ಡಿನ ಅಗತ್ಯ ಇದೆ. ಈ ಸಂದರ್ಭದಲ್ಲಿ ಗೊಂದಲ ಉಂಟಾಗುತ್ತದೆ. ಅರ್ಧದಲ್ಲೇ ಮುಗಿದ ಕಾರ್ಯವನ್ನೂ ಹೇಗೆಪ್ಪ ಪೂರ್ತಿಗೊಳಿಸವುದು ಎನ್ನುವ ಚಿಂತೆ ಕಾಡುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ನೆರವಿಗೆ ಬರುವುದೇ ಟಾಪ್‌ ಅಪ್‌ ಲೋನ್‌ (Top-Up Loan). ಜನ ಸಾಮಾನ್ಯರ ಆಪತ್ಬಾಂಧವ ಎನಿಸಿಕೊಂಡಿರುವ ಟಾಪ್‌ ಅಪ್‌ ಲೋನ್‌ ಎಂದರೇನು? ಇದನ್ನು ಪಡೆಯುವುದು ಹೇಗೆ? ನಿಮ್ಮೆಲ್ಲ ಪ್ರಶ್ನೆಗಳಿಗೆ ಇಂದಿನ ಮನಿಗೈಡ್‌ (Money Guide) ಉತ್ತರಿಸಲಿದೆ.

ಟಾಪ್‌ ಅಪ್‌ ಲೋನ್‌ ಎಂದರೇನು?

ಮೊದಲಿಗೆ ಟಾಪ್‌ ಅಪ್‌ ಲೋನ್‌ ಎಂದರೇನು ಎನ್ನುವುದನ್ನು ನೋಡೋಣ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಅಸ್ತಿತ್ವದಲ್ಲಿರುವ ಸಾಲದ ಮೇಲೆ ನಿಮಗೆ ಹೆಚ್ಚುವರಿ ಮೊತ್ತವನ್ನು ನೀಡುವುದನ್ನು ಟಾಪ್ ಅಪ್ ಲೋನ್ ಎಂದು ಕರೆಯಲಾಗುತ್ತದೆ. ಈ ಆಯ್ಕೆಯು ಸಾಮಾನ್ಯವಾಗಿ ಗೃಹ ಸಾಲಗಳು, ವೈಯಕ್ತಿಕ ಸಾಲಗಳು ಮತ್ತು ಕಾರು ಸಾಲಗಳಂತಹ ವಿವಿಧ ರೀತಿಯ ಸಾಲಗಳಿಗೆ ಲಭ್ಯ. ಉದಾಹರಣೆಗೆ ನೀವು ಮನೆ ನಿರ್ಮಾಣಕ್ಕೆ ಸಾಲ ಪಡೆದುಕೊಂಡಿದ್ದೀರಿ ಎಂದಿಟ್ಟುಕೊಳ್ಳೋಣ. ಮನೆ ಅರ್ಧವಾಗುವಷ್ಟರಲ್ಲಿ ಸಾಲದ ಮೊತ್ತ ಖಾಲಿಯಾಯಿತು. ಪೂರ್ಣಗೊಳಿಸಲು ಇನ್ನೊಂದಿಷ್ಟು ಹಣ ಬೇಕು. ಆಗ ಟಾಪ್‌ ಅಪ್‌ ಲೋನ್‌ ಸೌಲಭ್ಯದ ಮೂಲಕ ಮತ್ತೊಮ್ಮೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ನಿಯಮಿತವಾಗಿ ಇಎಂಐ ಕಟ್ಟುವವರಿಗೆ ಟಾಪ್‌ ಅಪ್‌ ಲೋನ್‌ ಸುಲಭವಾಗಿ ಲಭಿಸುತ್ತದೆ.

ವೈಶಿಷ್ಟ್ಯ

  • ಉದ್ದೇಶ: ಟಾಪ್‌ ಅಪ್‌ ಲೋನ್‌ಗಳನ್ನು ಮನೆ ನವೀಕರಣಕ್ಕೆ, ಉನ್ನತ ಶಿಕ್ಷಣ ಹೊಂದಲು, ವೈದ್ಯಕೀಯ ವೆಚ್ಚಗಳನ್ನು ಪೂರೈಸಲು ಅಥವಾ ಇತರ ಯಾವುದೇ ಹಣಕಾಸಿನ ಅಗತ್ಯಗಳಿಗೆ ಬಳಸಬಹುದು.
  • ಅರ್ಹತೆ: ಟಾಪ್‌ ಅಪ್ ಲೋನ್‌ಗೆ ಅರ್ಹರಾಗಲು ಗ್ರಾಹಕರು ತಮ್ಮ ಅಸ್ತಿತ್ವದಲ್ಲಿರುವ ಸಾಲದ ಮೇಲೆ ಉತ್ತಮ ಮರುಪಾವತಿಯ ಟ್ರ್ಯಾಕ್ ರೆಕಾರ್ಡ್ ಹೊಂದಿರಬೇಕು. ಟಾಪ್-ಅಪ್ ಲೋನ್ ಅನುಮೋದಿಸುವ ಮೊದಲು ಬ್ಯಾಂಕ್‌ಗಳು ಸಾಲಗಾರನ ಮರುಪಾವತಿ ಇತಿಹಾಸ, ಕ್ರೆಡಿಟ್ ಸ್ಕೋರ್, ಆದಾಯ ಸ್ಥಿರತೆ ಮತ್ತು ಇತರ ಅಂಶಗಳನ್ನು ಪರಿಶೀಲಿಸುತ್ತದೆ.
  • ಸಾಲದ ಮೊತ್ತ: ಟಾಪ್‌ ಅಪ್ ಲೋನ್‌ಗೆ ಲಭ್ಯವಿರುವ ಗರಿಷ್ಠ ಸಾಲದ ಮೊತ್ತವು ಅಸ್ತಿತ್ವದಲ್ಲಿರುವ ಸಾಲದ ಬಾಕಿ ಮೊತ್ತ, ಸಾಲಗಾರನ ಮರುಪಾವತಿ ಸಾಮರ್ಥ್ಯ ಮತ್ತು ಬ್ಯಾಂಕ್‌ನ ನೀತಿಯಂತಹ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ.
  • ಬಡ್ಡಿ ದರ: ಈ ಮಾದರಿ ಸಾಲದ ಬಡ್ಡಿದರಗಳು ಸಾಮಾನ್ಯವಾಗಿ ಮೂಲ ಸಾಲದ ಮೇಲಿನ ಬಡ್ಡಿದರಗಳಿಗಿಂತ ಸ್ವಲ್ಪ ಹೆಚ್ಚಾಗಿರುತ್ತವೆ. ಆದಾಗ್ಯೂ ಈ ದರಗಳು ಸಾಮಾನ್ಯವಾಗಿ ಪರ್ಸನಲ್‌ ಲೋನ್‌ನ ಬಡ್ಡಿದರಗಳಿಗಿಂತ ಕಡಿಮೆಯಿರುತ್ತವೆ.

ಟಾಪ್‌ ಅಪ್ ಲೋನ್‌ನ ವಿಧಗಳು

  • ಹೋಮ್ ಲೋನ್ ಟಾಪ್‌ ಅಪ್‌: ಇದು ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ ವಿಧ. ಅಸ್ತಿತ್ವದಲ್ಲಿರುವ ಗೃಹ ಸಾಲವನ್ನು ಹೊಂದಿರುವವರು ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲದೆ ತಮ್ಮ ಹೆಚ್ಚಿನ ಹಣಕಾಸು ಅಗತ್ಯಗಳನ್ನು ಪೂರೈಸಲು ಟಾಪ್ ಅಪ್‌ಗೆ ಅರ್ಜಿ ಸಲ್ಲಿಸಬಹುದು.
  • ಪರ್ಸನಲ್ ಲೋನ್ ಟಾಪ್‌ ಅಪ್‌: ಕೆಲವು ಬ್ಯಾಂಕ್‌ಗಳು ಅಸ್ತಿತ್ವದಲ್ಲಿರುವ ವೈಯಕ್ತಿಕ ಸಾಲಗಳ ಮೇಲೆ ಟಾಪ್ ಅಪ್‌ಗಳನ್ನು ನೀಡುತ್ತವೆ. ಬ್ಯಾಂಕ್‌ಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಗ್ರಾಹಕರು ಇದನ್ನು ಪಡೆಯಬಹುದು.
  • ಕಾರು ಲೋನ್ ಟಾಪ್‌ ಅಪ್‌: ಕಾರು ಸಾಲ ತೆಗೆದುಕೊಂಡ ವ್ಯಕ್ತಿಗಳಿಗೆ ಕೆಲವು ಬ್ಯಾಂಕ್‌ಗಳು ತಮ್ಮ ವಾಹನ ಅಥವಾ ಇತರ ಹಣಕಾಸು ಅಗತ್ಯಗಳಿಗೆ ಹೆಚ್ಚುವರಿ ಲೋನ್ ಹೊಂದುವ ಆಯ್ಕೆ ನೀಡುತ್ತವೆ.

ಬಡ್ಡಿದರ, ನಿಬಂಧನೆಗಳು ಆಯಾ ಬ್ಯಾಂಕ್‌, ಹಣಕಾಸು ಸಂಸ್ಥೆಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಹೀಗಾಗಿ ಅರ್ಜಿ ಸಲ್ಲಿಸಲುವ ಮುನ್ನ ಎಲ್ಲ ವಿವರಗಳಲ್ಲಿ ತಿಳಿದುಕೊಳ್ಳಿ.

Continue Reading
Advertisement
IPL 2024 Points Table
ಕ್ರೀಡೆ2 mins ago

IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

PM Narendra Modi proposing arecanut millets and fisheries
Lok Sabha Election 202411 mins ago

PM Narendra Modi: ಅಡಿಕೆ, ಸಿರಿಧಾನ್ಯ, ಮೀನುಗಾರಿಕೆ ಪ್ರಸ್ತಾಪಿಸಿ ಕೃಷಿಕರ ಮನ ಗೆದ್ದ ಮೋದಿ

PM Narendra Modi in Sirsi
Lok Sabha Election 202429 mins ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ವೈರಲ್ ನ್ಯೂಸ್1 hour ago

Viral Video: ಹೆಂಡತಿಯನ್ನ ಥಳಿಸಿ ಫ್ಲೈ ಓವರ್‌ನಿಂದ ತಳ್ಳೋಕೆ ಯತ್ನಿಸಿದ ಪಾಪಿ ಗಂಡ; ಆಮೇಲೆ ಆಗಿದ್ದೇನು?

Lok sabaha election
ದೇಶ1 hour ago

Lok Sabha Election: ಮತದಾನ ಪ್ರಮಾಣ ಕುಸಿತ; ಬಿಜೆಪಿಗೆ ಆತಂಕ!

PM Narendra Modi Live in Sirsi campaign meeting here
Lok Sabha Election 20241 hour ago

PM Narendra Modi Live : ಪ್ರಧಾನಿ ಮೋದಿಯ ಶಿರಸಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Samantha Ruth Prabhu shocking secrets
ಟಾಲಿವುಡ್1 hour ago

Samantha Ruth Prabhu: ಸಮಂತಾಗೆ ಜನುಮ ದಿನದ ಸಂಭ್ರಮ! ಈ ನಟಿಯ ಸೀಕ್ರೆಟ್‌ ಸಂಗತಿಗಳಿವು!

PM Narendra Modi Cm Siddaramaiah many questions to PM Modi Challenge for answer
Lok Sabha Election 20242 hours ago

PM Narendra Modi: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಕೇಳಿದ 10 ಪ್ರಶ್ನೆ; ಉತ್ತರಕ್ಕಾಗಿ ಸವಾಲು!

Priyanka Gandhi Rahul Gandhi
ದೇಶ2 hours ago

Lok Sabha Election 2024: ಅಮೇಥಿ, ರಾಯ್‌ಬರೇಲಿಗೆ ರಾಹುಲ್‌, ಪ್ರಿಯಾಂಕಾ ಫಿಕ್ಸ್‌? ಖರ್ಗೆ ನಿರ್ಧಾರ ಫೈನಲ್‌

Ranbir Kapoor stunned as photographer abuses in front of him
ಬಾಲಿವುಡ್2 hours ago

Ranbir Kapoor: ರಣಬೀರ್​ ಕಪೂರ್‌ಗೆ​ ಅಶ್ಲೀಲವಾಗಿ ಬೈಯ್ದ್ರಾ ಫೋಟೋಗ್ರಾಫರ್‌? ವಿಡಿಯೊದಲ್ಲಿ ಏನಿದೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra Modi in Sirsi
Lok Sabha Election 202429 mins ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ6 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 202422 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ1 day ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

ಟ್ರೆಂಡಿಂಗ್‌