Raja Marga Column : ಎಲಿಸ್‌ ಪೆರ‍್ರಿ RCBಗೆ ಅದೃಷ್ಟ ತಂದ ಸುಂದರಿ; ಕ್ರಿಕೆಟ್‌, ಫುಟ್ಬಾಲ್‌ ವಿಶ್ವಕಪ್‌ ಆಡಿದ ಏಕೈಕ ಮಹಿಳೆ! - Vistara News

ಸ್ಫೂರ್ತಿ ಕತೆ

Raja Marga Column : ಎಲಿಸ್‌ ಪೆರ‍್ರಿ RCBಗೆ ಅದೃಷ್ಟ ತಂದ ಸುಂದರಿ; ಕ್ರಿಕೆಟ್‌, ಫುಟ್ಬಾಲ್‌ ವಿಶ್ವಕಪ್‌ ಆಡಿದ ಏಕೈಕ ಮಹಿಳೆ!

Raja Marga Column : ಎಲಿಸ್‌ ಪೆರ‍್ರಿ ಇವರು ಆರ್‌ಸಿಬಿಯನ್ನು ಗೆಲ್ಲಿಸಿದ ಹೀರೊಯಿನ್.‌ ಈಕೆ ಅದೆಂಥಾ ಗಟ್ಟಿಗಿತ್ತಿ ಎಂದರೆ ಕ್ರಿಕೆಟ್‌ ಮತ್ತು ಫುಟ್ಬಾಲ್‌ನ ಎರಡೂ ವಿಶ್ವಕಪ್‌ಗಳಲ್ಲಿ ಆಡಿದ ಜಗತ್ತಿನ ಏಕೈಕ ಹೆಣ್ಮಗಳು. ಇಲ್ಲಿದೆ ಆಕೆಯ ರೋಚಕ ಕಹಾನಿ!

VISTARANEWS.COM


on

Raja Marga Column Elysse Perry
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RAJA MARGA COLUMN Rajendra Bhat

Raja Marga Column : ಮೊನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡವು ಮಹಿಳಾ ಪ್ರೀಮಿಯರ್ ಲೀಗ್ (WPL 2024) ಗೆದ್ದಾಗ ತಂಡದ ವಿಜಯಶಿಲ್ಪಿ ಯಾರು ಎಂದು ಪ್ರಶ್ನೆ ಬಂದಾಗ ಎಲ್ಲರೂ ಬೆರಳು ತೋರಿದ್ದು ಒಬ್ಬಳೇ ಕ್ರಿಕೆಟರ್ ಕಡೆಗೆ.

ಆಕೆ ಇಡೀ ಟೂರ್ನಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತನ್ನ ತಂಡವನ್ನು ಗೆಲ್ಲಿಸುತ್ತಾ ಹೋದ ರೀತಿಗೆ ಸಮಗ್ರ RCB ಅಭಿಮಾನಿಗಳು (RCB Fans) ಫಿದಾ ಆಗಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಆಕೆ ಆರು ವಿಕೆಟ್ ಪಡೆದು ಮಿಂಚಿದ್ದು ಅಭಿಮಾನಿಗಳಿಗೆ ಭಾರಿ ರೋಮಾಂಚನ ಉಂಟುಮಾಡಿತ್ತು. ಆಕೆ ಎಲಿಸ್‌ ಪೆರ‍್ರಿ (Ellyse Perry).

Raja Marga Column Elysse Perry

Raja Marga Column : ಆಕೆ ಆಸ್ಟ್ರೇಲಿಯಾದ ಮಹೋನ್ನತ ಕ್ರಿಕೆಟರ್

ಸಿಡ್ನಿ ಮಹಾನಗರದಲ್ಲಿ ಜನಿಸಿದ ಆಕೆ ಬಾಲ್ಯದಿಂದಲೂ ಕ್ರೀಡೆಯಲ್ಲಿ ಮುಳುಗಿ ಹೋಗಿದ್ದರು. ಒಂಬತ್ತು ವರ್ಷದವರೆಗೆ ಆಕೆ ಅಥ್ಲೆಟಿಕ್ಸ್, ಫುಟ್ಬಾಲ್, ಕ್ರಿಕೆಟ್, ಗಾಲ್ಫ್, ಟೆನ್ನಿಸ್ ಎಲ್ಲವನ್ನೂ ಆಡುತ್ತಾ ಬೆಳೆದವರು. ಮುಂದೆ ಆಕೆಯ ಸಹಪಾಠಿ (ಆಕೆ ಆಸ್ಟ್ರೇಲಿಯಾದ ಇನ್ನೊಬ್ಬ ಸ್ಟಾರ್ ಕ್ರಿಕೆಟರ್) ಎಲಿಸಾ ಹೀಲಿ ಆಕೆಗೆ ಒಂದೆರಡು ಕ್ರೀಡೆಗಳಲ್ಲಿ ಮಾತ್ರ ಫೋಕಸ್ ಮಾಡಲು ಹೇಳುತ್ತಾರೆ. ಅದರಂತೆ ಆಕೆ ಫುಟ್ಬಾಲ್ ಮತ್ತು ಕ್ರಿಕೆಟ್ ಎರಡು ಆಟಗಳಲ್ಲಿ ಮಾತ್ರ ಗಮನ ಕೊಡುತ್ತಾರೆ.

16ನೆಯ ವರ್ಷಕ್ಕೆ ಆಸ್ಟ್ರೇಲಿಯದ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಆಯ್ಕೆ ಆದವರು ಆಕೆ. ಐಸಿಸಿ
ವಿಶ್ವಕಪ್ ಮತ್ತು ಫಿಫಾ ಟೂರ್ನಿ ಎರಡನ್ನೂ ಆಡುತ್ತಾರೆ. ವಿಶ್ವಕಪ್ ಪಂದ್ಯದಲ್ಲಿ ಕೂಡ ಆಕ್ರಮಣಕಾರಿ ಆಟವನ್ನು ಆಡಿ ಗೋಲ್ ಹೊಡೆಯುತ್ತಾರೆ. ಆದರೆ ಮುಂದೆ ಆಕೆಗೆ ಆದ ದೈಹಿಕ ಗಾಯಗಳು ಫುಟ್ಬಾಲಿಗೆ ವಿದಾಯ ಹೇಳುವಂತೆ ಮಾಡಿ 2014ರಿಂದ ಆಕೆಯನ್ನು ಕ್ರಿಕೆಟ್ ಕಡೆಗೆ ಎಳೆದುಕೊಂಡು ಬರುತ್ತವೆ. ಇದು ವಿಶ್ವ ಕ್ರಿಕೆಟಿನ ಭಾಗ್ಯ ಎಂದೇ ಹೇಳಬಹುದು.

Raja Marga Column Elysse Perry bowler

ಕ್ರಿಕೆಟ್ ಜಗತ್ತಿನಲ್ಲಿ ಆಕೆ ಮಾಡಿದ್ದೆಲ್ಲವೂ ದಾಖಲೆಗಳು!

ಟೀಮ್ ಆಸ್ಟ್ರೇಲಿಯದ ಮೂರೂ ಫಾರ್ಮಾಟ್‌ಗಳ ನಿರ್ಣಾಯಕ ಆಲ್ರೌಂಡರ್ ಆಗಿ ಆಕೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ನೀಡಿದ ಕೊಡುಗೆ ಅದು ಅದ್ಭುತ. ಈಗ ಅವರಿಗೆ 33 ವರ್ಷ ಪ್ರಾಯ. ಈಗಲೂ ಗಂಟೆಗೆ 120-125 ಕಿಲೋಮೀಟರ್ ವೇಗದಲ್ಲಿ ಆಕೆಯು ಬೌಲಿಂಗ್ ಮಾಡುತ್ತಾರೆ. ಆಕೆಯ ಬ್ಯಾಟಿಂಗಿನಲ್ಲಿ ಒಂದು ಅದ್ಭುತ ನಿಖರತೆ ಮತ್ತು ಪಂಚಿಂಗ್ ಇವೆ. ಆಕೆಯ ಅಕ್ರೊಬ್ಯಾಟಿಕ್ ಫೀಲ್ಡಿಂಗ್ ನೋಡಿದರೆ ನೀವು ಖಂಡಿತ ಆಕೆಯ ಪ್ರಾಯ ಮರೆಯುತ್ತೀರಿ.

ಆಕೆಯ ದಾಖಲೆಗಳು ಮೂರೂ ಫಾರ್ಮಾಟ್‌ಗಳಲ್ಲಿ ಅದ್ಭುತವಾಗಿವೆ. ಟೆಸ್ಟ್ ಕ್ರಿಕೆಟಿನಲ್ಲಿ 13 ಪಂದ್ಯಗಳಲ್ಲಿ ಆಕೆ 928 ಸ್ಕೋರ್ ಮಾಡಿದ್ದಾರೆ. ಅದರಲ್ಲಿ ಒಂದು ಡಬಲ್ ಟನ್ (213) ಕೂಡ ಇದೆ. ಸರಾಸರಿ 61.86! ಅದರ ಜೊತೆಗೆ 39 ವಿಕೆಟ್ ಆಕೆ ಈಗಾಗಲೇ ಪಡೆದಾಗಿದೆ.

144 ಏಕದಿನ ಪಂದ್ಯಗಳಲ್ಲಿ ಆಕೆ ಪೇರಿಸಿದ್ದು 3894 ರನ್ನುಗಳ ಪರ್ವತವನ್ನು. 163 ವಿಕೆಟ್ ಅವರ ಬತ್ತಳಿಕೆಯಲ್ಲಿ ಇವೆ. ಬ್ಯಾಟಿಂಗ್ ಸರಾಸರಿ 50.57! ಆಕೆ ದಿಟ್ಟವಾಗಿ ಹೋರಾಡಿ ಆಸ್ಟ್ರೇಲಿಯಾ ತಂಡಕ್ಕೆ 2 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ !

ಆಕೆ ಗೆದ್ದದ್ದು ಬರೊಬ್ಬರಿ ಆರು T20 ವಿಶ್ವಕಪ್ಪುಗಳನ್ನು!

ಆಕೆಯ T20 ದಾಖಲೆಗಳು ಇನ್ನೂ ಅದ್ಭುತವಾಗಿಯೇ ಇವೆ. 144 ಪಂದ್ಯಗಳಲ್ಲಿ 1841 ಸ್ಕೋರ್ ಮತ್ತು ಸರಾಸರಿ 31.74 ಹೊಂದಿರುವ ಆಕೆ 125 ವಿಕೆಟ್ ಕೂಡ ಪಡೆದಿದ್ದಾರೆ.

ಅದರ ಜೊತೆಗೆ ಆರು ಹೊಳೆಯುವ T20 ವಿಶ್ವಕಪ್‌ಗಳನ್ನು ಟೀಮ್ ಆಸ್ಟ್ರೇಲಿಯಾಕ್ಕೆ ಗೆಲ್ಲಿಸಿಕೊಟ್ಟ ಅಪೂರ್ವ ದಾಖಲೆ ಕೂಡ ಆಕೆಯ ಹೆಸರಿನಲ್ಲಿ ಇದೆ! ಅದರ ಜೊತೆಗೆ 2022ರ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕವೂ ಆಕೆಯ
ಶೋಕೇಸನಲ್ಲಿ ಇದೆ.

ವರ್ತಮಾನದ ಕ್ರಿಕೆಟ್ ಜಗತ್ತಿನಲ್ಲಿ ಬೇರೆ ಯಾವ ಮಹಿಳಾ ಕ್ರಿಕೆಟ್ ಆಟಗಾರರು ಈ ದಾಖಲೆಯ ಹತ್ತಿರದಲ್ಲಿಯೂ ಇಲ್ಲ ಅನ್ನುವುದು ಎಲಿಸ್‌ ಪೆರ‍್ರಿ ಸಾಧನೆ! ಅದಕ್ಕಾಗಿ ಆಕೆಯನ್ನು ‘ಜಗತ್ತಿನ ಮಹೋನ್ನತ ಮಹಿಳಾ ಕ್ರಿಕೆಟರ್’ ಎಂದು ಕ್ರಿಕೆಟ್ ಪಂಡಿತರು ಕರೆಯುತ್ತಿದ್ದಾರೆ. T20 ಕ್ರಿಕೆಟಿನಲ್ಲಿ 1000 ರನ್ ಮತ್ತು 100 ವಿಕೆಟ್ ಪಡೆದ ಮೊದಲ ಮಹಿಳಾ ಕ್ರಿಕೆಟರ್ ಅಂದರೆ ಅದು ಎಲಿಸ್‌ ಅನ್ನುವುದು ಇನ್ನೂ ಗ್ರೇಟ್.

ಇದನ್ನೂ ಓದಿ: Raja Marga Column : ಸೌಂದರ್ಯ, ಪ್ರತಿಭೆಗಳ ಸಂಗಮ ಸ್ಮೃತಿ ಮಂಧಾನಾ; ಆರ್‌ಸಿಬಿಗೆ ಕಪ್‌ ಕೊಡಿಸಿದ ಹುಡುಗಿ!

ಆಕೆಯು ಹುಟ್ಟು ಹೋರಾಟಗಾರ್ತಿ

2013ರ ಏಕದಿನದ ವಿಶ್ವಕಪ್ ಫೈನಲ್ ಪಂದ್ಯ ನೀವು ನೆನಪಿಸಿಕೊಂಡರೆ ನಿಮಗೆ ಆಕೆಯ ಗಟ್ಟಿತನವು ಅರ್ಥ ಆಗುತ್ತದೆ. ಟೀಮ್ ಆಸ್ಟ್ರೇಲಿಯಾ ಅಂದು ಫೈನಲಿಗೆ ಬಂದಿತ್ತು. ಎಲಿಸ್‌ಗೆ ಅಂದು ಮೊಣಕಾಲು ಎಲುಬು ಫ್ರ್ಯಾಕ್ಚರ್ ಆಗಿತ್ತು. ವೈದ್ಯರು ಆಕೆಗೆ ಆಡಲೇಬಾರದು ಎಂದು ಹೇಳಿದ್ದರು. ಆದರೆ ಕುಂಟುತ್ತಾ ಮೈದಾನಕ್ಕೆ ಬಂದು ಎಲಿಸ್‌ ಅಂದು ವೆಸ್ಟ್ಇಂಡೀಸ್ ವಿರುದ್ಧ ಹತ್ತು ಓವರ್ ಪೂರ್ತಿ ಬೌಲಿಂಗ್ ಮಾಡಿದ್ದರು, ಮಾತ್ರವಲ್ಲ 19 ರನ್ನಿಗೆ ಮೂರು ವಿಕೆಟ್‌ಗಳನ್ನು ಪಡೆದು ತನ್ನ ತಂಡವನ್ನು ಗೆಲ್ಲಿಸಿದ್ದರು.

Raja Marga Column Elysse Perry achievementRaja Marga Column Elysse Perry achievement

ಮೊನ್ನೆ ಕೂಡ ಹಾಗೆಯೇ ಆಯಿತು. ಮಹಿಳಾ ಪ್ರೀಮಿಯರ್ ಲೀಗಿನ ಸೆಮಿ ಮತ್ತು ಫೈನಲ್ ಪಂದ್ಯಗಳಲ್ಲಿ ಆಕೆ ಮಾಡಿದ ಹೋರಾಟದ ಇನಿಂಗ್ಸ್‌ಗಳನ್ನು RCB ಹುಚ್ಚು ಅಭಿಮಾನಿಗಳು ಬೆರಗು ಕಣ್ಣುಗಳಿಂದ ನೋಡಿದ್ದಾರೆ.

‘ಇನ್ನೂ ನನ್ನಲ್ಲಿ ಹಲವು ವರ್ಷಗಳ ಕ್ರಿಕೆಟ್ ಜೀವಂತ ಇದೆ’ ಎಂದಿದ್ದಾರೆ ಎಲಿಸ್‌ ಪೆರ‍್ರಿ. ಏನಿದ್ದರೂ ಆಕೆ ತೋರಿದ ಧೀರೋದಾತ್ತ ಕ್ರಿಕೆಟನ್ನು ಕನ್ನಡಿಗರಂತೂ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಮೊಂಡು ಕೈಗಳಿಂದ ಜಗತ್ತನ್ನು ಗೆಲ್ಲಲು ಹೊರಟ ಹೋರಾಟಗಾರನ ಕಥೆ

ರಾಜಮಾರ್ಗ ಅಂಕಣ: ‘ಈಸಬೇಕು ಇದ್ದು ಜೈಸಬೇಕು’ ಎಂಬ ದಾಸವಾಣಿಯಂತೆ ನೀರಿಗೆ ಧುಮುಕಿದಾಗ ತನಗೆ ಕೈಗಳು ಇಲ್ಲ ಎಂಬುದನ್ನು ಮರೆಯುವ ಅವರು ಈಗಾಗಲೇ ಅಂತಾರಾಷ್ಟ್ರೀಯ ಪಾರಾ ಈಜು ಸ್ಪರ್ಧೆಯಲ್ಲಿ ಎಂಟು ಪದಕಗಳನ್ನು ಗೆದ್ದಿದ್ದಾರೆ. ಏಳು ಸಾಗರಗಳನ್ನು ಈಜಿ ಬಂದಿದ್ದಾರೆ ವಿಶ್ವಾಸ್.

VISTARANEWS.COM


on

vishwas ks rajamarga
Koo

ಪಾರಾ ಸ್ವಿಮ್ಮರ್ ವಿಶ್ವಾಸ್ ಕೆ.ಎಸ್ ಅವರ ಹೃದಯ ಗೆಲ್ಲುವ ಕಥನ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಯು ಟ್ಯೂಬ್ (Youtube) ವೇದಿಕೆಗಳಲ್ಲಿ ಈ ವಿಶ್ವಾಸ್ ಕೆ.ಎಸ್ (Vishwas KS) ಅವರ ಟೆಡ್ ಟಾಕ್ (Ted Talk) ಕೇಳುತ್ತಾ ಹೋದಂತೆ ಕಣ್ಣು ತುಂಬಿ ಬಂದು ಗಲ್ಲ ಒದ್ದೆಯಾದ ಅನುಭವ ನನಗಾಗಿದೆ. ಅವರ ಬದುಕೇ ಒಂದು ರೋಚಕವಾದ ಯಶೋಗಾಥೆ.

ಈ ವಿಶ್ವಾಸ್ ಬಿಕಾಂ ಪದವೀಧರ. ಎರಡೂ ಕೈಗಳು ಇಲ್ಲದ ಅನೇಕ ವ್ಯಕ್ತಿಗಳು ಭಿಕ್ಷೆಯನ್ನು ಬೇಡಿ ಬದುಕುತ್ತಿರುವ ಇಂದಿನ ದಿನಗಳಲ್ಲಿ ಕೋಲಾರದ ಕಾಳಹಸ್ತಿಪುರದ ಯುವಕ ವಿಶ್ವಾಸ್ ತನ್ನ ಬದುಕನ್ನು ತಾನೇ ರೂಪಿಸಿಕೊಂಡಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡ ಕ್ಷೇತ್ರ ಅಂದರೆ ಈಜು. ‘ಈಸಬೇಕು ಇದ್ದು ಜೈಸಬೇಕು’ ಎಂಬ ದಾಸವಾಣಿಯಂತೆ ನೀರಿಗೆ ಧುಮುಕಿದಾಗ ತನಗೆ ಕೈಗಳು ಇಲ್ಲ ಎಂಬುದನ್ನು ಮರೆಯುವ ಅವರು ಈಗಾಗಲೇ ಅಂತಾರಾಷ್ಟ್ರೀಯ ಪಾರಾ ಈಜು ಸ್ಪರ್ಧೆಯಲ್ಲಿ ಎಂಟು ಪದಕಗಳನ್ನು ಗೆದ್ದಿದ್ದಾರೆ. ಏಳು ಸಾಗರಗಳನ್ನು ಈಜಿ ಬಂದಿದ್ದಾರೆ.

ಅದೇ ರೀತಿ ಮಾರ್ಷಿಯಲ್ ಆರ್ಟಿನಲ್ಲಿ ರೆಡ್ ಬೆಲ್ಟ್ ಪಡೆದಿದ್ದಾರೆ. ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಶೋʼದಲ್ಲಿ ನೃತ್ಯ ಮಾಡಿದ್ದಾರೆ. ಕಾಲಿನಲ್ಲಿಯೇ ಅಡುಗೆ ಮಾಡುತ್ತಾರೆ. ಕಾಲಿನ ಬೆರಳುಗಳ ನಡುವೆ ಪೆನ್ನು ಹಿಡಿದು ಬರೆಯುತ್ತಾರೆ. ಮೊಬೈಲ್ ಆಪರೇಟ್ ಮಾಡುತ್ತಾರೆ. ಬಟ್ಟೆ ಒಗೆಯುತ್ತಾರೆ. ತನ್ನ ಕೆಲಸವನ್ನು ತಾನೇ ಮಾಡುತ್ತಾರೆ. ವೇದಿಕೆಯಲ್ಲಿ ನಿಂತು ಮೋಟಿವೇಶನ್ ಮಾತು ಆಡುತ್ತಾರೆ. ಅವರಿಗೆ ತನಗೆ ಕೈಗಳು ಇಲ್ಲ ಅನ್ನುವುದು ಮರೆತೇ ಹೋಗಿದೆ ಎಂದು ನನ್ನ ಭಾವನೆ.

ಸಣ್ಣ ಪ್ರಾಯದಲ್ಲಿ ದುರಂತ

ನಾಲ್ಕನೇ ತರಗತಿಯಲ್ಲಿ ಆದ ದುರಂತ ಅದು. ವಿಶ್ವಾಸ್ ನಾಲ್ಕನೇ ತರಗತಿಯಲ್ಲಿ ಇರುವಾಗ ಕಾಂಕ್ರೀಟ್ ಆಗ್ತಾ ಇದ್ದ ಒಂದು ಕಟ್ಟಡವನ್ನು ಹತ್ತುತ್ತಿದ್ದಾಗ ಕಾಲು ಜಾರಿ ಬೀಳುತ್ತಾರೆ. ಆಗ ಹೈ ಟೆನ್ಶನ್ ಕೇಬಲ್ ಹಿಡಿದು ನೇತಾಡುವ ಪ್ರಸಂಗ ಬರುತ್ತದೆ. ಆಗ ಅವರನ್ನು ಬಿಡಿಸುವ ಪ್ರಯತ್ನ ಮಾಡಿದ ಅವರ ಅಪ್ಪ ವಿದ್ಯುತ್ ಆಘಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಹುಡುಗನು ಎರಡೂ ಕೈ ಸುಟ್ಟು ಹೋಗಿ ಈ ಸ್ಥಿತಿಗೆ ಬರುತ್ತಾರೆ.

ಆಸ್ಪತ್ರೆಯಲ್ಲಿ ಹಲವಾರು ತಿಂಗಳು ನೋವು ಪಟ್ಟು ಮಲಗಿ ಹೊರಬರುವಾಗ ಆತನ ಕೈಗೆ ಪ್ಲಾಸ್ಟಿಕ್ ಕೈ ಜೋಡಿಸಿರುತ್ತಾರೆ. ಅದು ಕೈಗಳ ಫೀಲ್ ಕೊಡದೆ ಹೋದಾಗ ಮತ್ತು ಯಾವ ಕೆಲಸಕ್ಕೂ ಬೇರೆಯವರನ್ನು ಅವಲಂಬನೆ ಮಾಡುವ ಪ್ರಸಂಗ ಬಂದಾಗ ಅದನ್ನು ಕಿತ್ತು ಬಿಸಾಡಿ ಮೊಂಡು ಕೈ ಹಿಡಿದೇ ಇಲ್ಲಿಯವರೆಗೆ ಬಂದಿದ್ದಾರೆ.

ಹಲವು ಕಡೆಯಲ್ಲಿ ಉದ್ಯೋಗ ಪ್ರಯತ್ನ ಪಟ್ಟು ಸೋತಾಗ ಡಿಪ್ರೆಸ್ ಆದದ್ದೂ ಇದೆ. ಹೊಟ್ಟೆಪಾಡಿಗಾಗಿ ಹಲವು ವೃತ್ತಿಗಳನ್ನು ಮಾಡಲು ಪ್ರಯತ್ನ ಪಟ್ಟು ಸೋತದ್ದು ಇದೆ. ಆದರೆ ಅವರ ಅದ್ಭುತವಾದ ಇಚ್ಛಾಶಕ್ತಿ ಅವರನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಈ ಹೋರಾಟದ ಪ್ರತೀ ಹಂತದಲ್ಲೂ ಅವರ ಅಮ್ಮ ಅವರ ಜೊತೆಗೆ ನಿಂತಿದ್ದಾರೆ. ಇತ್ತೀಚೆಗೆ ಒಬ್ಬರು ಶಿಕ್ಷಕಿ, ಲಕ್ಷ್ಮಿ ಎಂದು ಅವರ ಹೆಸರು, ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಆ ದಂಪತಿಗೆ ಒಬ್ಬ ಮಗನೂ ಇದ್ದಾನೆ. ಪತ್ನಿ ಲಕ್ಷ್ಮಿ ಈಗ ವಿಶ್ವಾಸ್ ಅವರ ಸಾಧನೆಗಳಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.

ಬದುಕಿನ ಕಥೆ ಸಿನೆಮಾ ಆಯಿತು.

ವಿಶ್ವಾಸ್ ಅವರ ಬದುಕಿನ ಕಥೆಯು ʻಅರಬ್ಬೀ’ ಎಂಬ ಸಿನೆಮಾ ಆಗಿ ಜನಪ್ರಿಯ ಆಗಿದೆ. ಮುಂದಿನ ಪಾರಾ ಒಲಿಂಪಿಕ್ಸನಲ್ಲಿ ಭಾಗವಹಿಸಬೇಕು ಎನ್ನುವ ಹಠದಲ್ಲಿ ವಿಶ್ವಾಸ್ ಬೆಂಗಳೂರಿನ ಬಸವನಗುಡಿಯ ಈಜುಕೊಳದಲ್ಲಿ ದಿನಕ್ಕೆ ಹಲವಾರು ಗಂಟೆ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಒಬ್ಬ ಒಳ್ಳೆಯ ಕೋಚ್ ಅವರ ನೆರವಿಗೆ ನಿಂತಿದ್ದಾರೆ.

ವಿಶ್ವಾಸದ ಕಡಲಲ್ಲಿ ಈಜುತ್ತಿರುವ ಈ ವಿಶ್ವಾಸ್ ಅವರಿಗೆ ನಿಮ್ಮ ಒಂದು ಶಾಭಾಷ್ ಹೇಳಿ ಮುಂದೆ ಹೋಗೋಣ ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತೀಯ ಸೇನೆಯ ಬಗ್ಗೆ ಎದೆ ಉಬ್ಬಿಸಿ ನಡೆಯಲು ಇನ್ನೊಂದು ಕಾರಣ

Continue Reading

ಸ್ಫೂರ್ತಿ ಕತೆ

Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

Raja marga Column : ಆ ಹೆಣ್ಮಗಳಿಗೆ ಕಣ್ಣೇ ಕಾಣಿಸುವುದಿಲ್ಲ. ಆದರೆ, ಛಲದಿಂದ ಆಕೆ ಒಳಗಿನ ಕಣ್ಣಿಂದ ಓದಿಗಳು. ಒಂದಲ್ಲ ಎರಡು ಬಾರಿ ಯುಪಿಎಸ್ಸಿ ಪಾಸ್‌ ಮಾಡಿದಳು. ಈಗ ಆಕೆ ಜಿಲ್ಲಾಧಿಕಾರಿ.

VISTARANEWS.COM


on

Raja Marga Column Pranjal pateel
Koo
RAJAMARGA

Raja Marga Column : ಭಾರತದ ಅತ್ಯಂತ ಕ್ಲಿಷ್ಟವಾದ ಪರೀಕ್ಷೆ ಅಂದರೆ ಐಎಎಸ್. ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ UPSC ನಡೆಸುವ ಈ ಪರೀಕ್ಷೆಯಲ್ಲಿ‌ (UPSC Exam) ಪ್ರತೀ ವರ್ಷ 7ರಿಂದ 8 ಲಕ್ಷ ಯುವಕ – ಯುವತಿಯರು ತಮ್ಮ ಪ್ರತಿಭೆಯನ್ನು ನಿಕಷಕ್ಕೆ ಒಡ್ಡುತ್ತಿದ್ದು ತೇರ್ಗಡೆ ಆಗುವವರ ಪ್ರಮಾಣ 2-3% ಮಾತ್ರ! ಅಂತಹ ಪರೀಕ್ಷೆಯಲ್ಲಿ ಪೂರ್ಣ ಕುರುಡುತನ ಇರುವ ಪ್ರಾಂಜಲ್‌ ಪಾಟೀಲ್‌ (Pranjal Patil) ಎಂಬ ಹುಡುಗಿಯೊಬ್ಬಳು ಎರಡು ಬಾರಿ ತೇರ್ಗಡೆಯಾದರು (IAS officer) ಅಂದರೆ ನಂಬೋದು ಹೇಗೆ? ಇಲ್ಲಿದೆ ಅವರ ಕತೆ,

Raja Marga Column: ಆಕೆ ಮಹಾರಾಷ್ಟ್ರದವರು

ಪ್ರಾಂಜಲ್‌ ಪಾಟೀಲ್ ಮಹಾರಾಷ್ಟ್ರದ ಉಲ್ಲಾಸ ನಗರದವರು. ಹುಟ್ಟುವಾಗ ಆಕೆಗೆ ಮಸುಕು ಮಸುಕಾಗಿ ಕಾಣುತ್ತಿತ್ತು. ಆರು ವರ್ಷ ಪ್ರಾಯ ಆದಾಗ ಪೂರ್ತಿಯಾಗಿ ಕುರುಡುತನ ಆವರಿಸಿತ್ತು. ಸಣ್ಣ ಪ್ರಾಯದಲ್ಲಿಯೇ ಆಕೆಯ ದೊಡ್ಡ ಕನಸುಗಳಿಗೆ ಕೊಳ್ಳಿ ಇಟ್ಟ ಅನುಭವ ಆಗಿತ್ತು. ಆದರೆ ಮನೆಯವರು ಮತ್ತು ಹೆತ್ತವರು ಆಕೆಯ ಮನೋಸ್ಥೈರ್ಯವನ್ನು ಕುಸಿಯಲು ಬಿಡಲಿಲ್ಲ.

ಆಕೆ ಮಹಾ ಪ್ರತಿಭಾವಂತೆ. ದಾದರ್ ನಗರದ ಕಮಲ ಮೆಹ್ತಾ ಕುರುಡು ಮಕ್ಕಳ ಶಾಲೆಗೆ ಸೇರಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಾರೆ. ಬ್ರೈಲ್ ಲಿಪಿಯಲ್ಲಿ ಓದಲು ಮತ್ತು ಬರೆಯಲು ಕಲಿಯುತ್ತಾರೆ. ಮುಂದೆ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ರಾಜನೀತಿ ಶಾಸ್ತ್ರದಲ್ಲಿ ಪದವಿ ಪಡೆಯುತ್ತಾರೆ.

Raja Marga Column Pranjal Pateel
ತಂದೆ ಮತ್ತು ತಾಯಿ ಜತೆ ಪ್ರಾಂಜಲ್‌ ಪಾಟೀಲ್‌

ಆಗ ಏನೂ ಕಾಣದಿದ್ದರೂ ಉಲ್ಲಾಸ ನಗರದ ಮನೆಯಿಂದ ಹೊರಟು ಒಬ್ಬಳೇ ಛತ್ರಪತಿ ಶಿವಾಜಿ ಟರ್ಮಿನಲ್ ನವರೆಗೆ ಹೋಗಿ ಹಿಂದೆ ಬರುತ್ತಿದ್ದರು. ಮುಂಬೈ ನಗರದ ಜನರು ತನ್ನ ಬಗ್ಗೆ ತುಂಬಾನೇ ಅನುಕಂಪವನ್ನು ಹೊಂದಿದ್ದರು ಅನ್ನುತ್ತಾರೆ ಆಕೆ.

Raja Marga Column: ಆಕೆಯ ಕನಸುಗಳಿಗೆ ಆಕಾಶವೂ ಮಿತಿ ಅಲ್ಲ!

ಮುಂದೆ ಪ್ರಾಂಜಲ್ ಹೊರಟದ್ದು ದೆಹಲಿಗೆ. ಜವಾಹರಲಾಲ್ ನೆಹರು ವಿವಿಯ ಮೂಲಕ ಆಕೆ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿ ಪಡೆಯುತ್ತಾರೆ. ಅದೇ ಹೊತ್ತಿಗೆ ವಿದುಷಿ ಎಂಬ ಗೆಳತಿಯ ಮಾತಿನಿಂದ ಆಕೆ ಪ್ರಭಾವಿತರಾಗುತ್ತಾರೆ. ಐಎಎಸ್ ಪರೀಕ್ಷೆಗೆ ಗಂಭೀರವಾದ ಸಿದ್ಧತೆ ನಡೆಸುವಂತೆ ವಿದುಷಿ ಆಕೆಗೆ ಸಲಹೆ ಕೊಡುತ್ತಾರೆ.

Raja Marga Column Pranjal Pateel

ಆಗ ಆಕೆಗೆ JAWS (Job Access With Speech) ಎಂಬ ಸಾಫ್ಟವೇರ್ ನೆರವಿಗೆ ಬರುತ್ತದೆ. ಅದು ಯಾವುದೇ ಪುಸ್ತಕವನ್ನು ಗಟ್ಟಿಯಾಗಿ ಓದಿ ಹೇಳುವ ಸಾಫ್ಟ್‌ವೇರ್. ತನ್ನ ಆಲಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಆಕೆ ದಿನಕ್ಕೆ 10-12 ಗಂಟೆ ಪುಸ್ತಕಗಳನ್ನು ಓದುತ್ತಾರೆ. ವಿಡಿಯೋ ಪಾಠಗಳನ್ನು ಕೇಳುತ್ತಾರೆ. ತನ್ನ ಗೆಳತಿಯ ನೆರವನ್ನು ಪಡೆಯುತ್ತಾರೆ.

ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಿಸುತ್ತದೆ

2016ರಲ್ಲೀ ಅವರು ಭಾರತೀಯ ರೈಲ್ವೇ ಸೇವೆಗೆ ಅರ್ಜಿ ಹಾಕುತ್ತಾರೆ. ಆದರೆ ಆಕೆ ಕುರುಡಿ ಎಂಬ ಕಾರಣಕ್ಕೆ ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಣೆ ಮಾಡುತ್ತದೆ. ಆಗ ಸಿಟ್ಟಿಗೆದ್ದ ಆಕೆ ಪ್ರಧಾನಿ ನರೇಂದ್ರ ಮೋದಿಗೆ ಮತ್ತು ರೈಲ್ವೇ ಮಂತ್ರಿ ಸುರೇಶ್ ಪ್ರಭು ಅವರಿಗೆ ನೇರವಾಗಿ ಪತ್ರ ಬರೆಯುತ್ತಾರೆ. ಆಗ ಸುರೇಶ್ ಪ್ರಭು ಅವರು ಆಕೆಯನ್ನು ಸಂಪರ್ಕ ಮಾಡಿ ನಿಮ್ಮ ವಿದ್ಯೆಗೆ ತಕ್ಕದಾದ ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಆದರೆ ಆಗಲೇ ಐಎಎಸ್ ಪರೀಕ್ಷೆಯ ತಯಾರಿಯಲ್ಲಿ ಮುಳುಗಿದ್ದ ಪ್ರಾಂಜಲ್ ಆ ಪ್ರಸ್ತಾಪವನ್ನು ಸ್ವೀಕಾರ ಮಾಡುವುದಿಲ್ಲ.

Raja Marga Column Pranjal Pateel
ಸೀರೆ ಉಟ್ಟಾಗ ಹೀಗಿದ್ದಾರೆ ನೋಡಿ ಪ್ರಾಂಜಲ್‌ ಪಾಟೀಲ್

ಆಕೆ ಎರಡು ಬಾರಿ ಐಎಎಸ್ ಪರೀಕ್ಷೆ ತೇರ್ಗಡೆ ಆದರು!

ಅತ್ಯಂತ ಪ್ರಬಲ ಇಚ್ಛಾಶಕ್ತಿ, ನಿರಂತರ ಪ್ರಯತ್ನ, ಎಂದಿಗೂ ಬತ್ತಿ ಹೋಗದ ಸ್ಫೂರ್ತಿ, ಬೆಟ್ಟದಷ್ಟು ಆತ್ಮವಿಶ್ವಾಸ ಇವುಗಳ ಜೊತೆಗೆ 2016ರಲ್ಲಿ ಅವರು ಮೊದಲ ಬಾರಿಗೆ ಐಎಎಸ್ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾದರು! ಅದೂ ಯಾವ ಕೋಚಿಂಗ್ ಇಲ್ಲದೆ! ಆದರೆ ಆಲ್ ಇಂಡಿಯಾ ರ‍್ಯಾಂಕಿಂಗ್ 744 ಬಂದಿತ್ತು. ಅದು ಅವರಿಗೆ ತೃಪ್ತಿ ತರಲಿಲ್ಲ. ಯಾವುದೋ ಒಂದು ಅಜ್ಞಾತ ಇಲಾಖೆಯಲ್ಲಿ ಸಾಮಾನ್ಯ ಅಧಿಕಾರಿಯಾಗಿ ಕೆಲಸ ಮಾಡಲು ಆಕೆ ರೆಡಿ ಇರಲಿಲ್ಲ. ಅದಕ್ಕೋಸ್ಕರ ಎರಡನೇ ಬಾರಿಗೆ ಅಷ್ಟೇ ಪ್ರಯತ್ನ ಮಾಡಿ 2017ರಲ್ಲಿ ಮತ್ತೆ ಐಎಎಸ್ ಪರೀಕ್ಷೆ ಬರೆದರು. ಈ ಬಾರಿ ಕೂಡ ತೇರ್ಗಡೆ ಆದರು. ಈ ಬಾರಿ ರ‍್ಯಾಂಕಿಂಗ್ 124 ಬಂದಿತ್ತು!

Visually impaired IAS officer Pranjal pateel

ಅವರ ಕನಸಿನ ರೆಕ್ಕೆಗೆ ಸಾವಿರ ಗರಿಗಳು!

ಭಾರತದ ಮೊಟ್ಟ ಮೊದಲ ದೃಷ್ಟಿ ವಿಕಲತೆಯ ಸಾಧಕಿಯಾಗಿ ಆಕೆ ಐಎಎಸ್ ಪರೀಕ್ಷೆ ತೇರ್ಗಡೆ ಆಗಿದ್ದರು! ಲಿಖಿತ ಪರೀಕ್ಷೆಯಲ್ಲಿ ಆಕೆ ಪಡೆದ ಅಂಕಗಳು 854! ಹಾಗೂ ಸಂದರ್ಶನದಲ್ಲಿ ಆಕೆ ಪಡೆದ ಅಂಕಗಳು 179! ಒಟ್ಟು 1033 ಅನ್ನುವುದು ಕೂಡ ನಿಜವಾದ ಕ್ರೆಡಿಟ್. ತರಬೇತಿಯನ್ನು ಮುಗಿಸಿ ಮೇ 28, 2018ರಂದು ಅವರು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಅಸಿಸ್ಟಂಟ್ ಕಲೆಕ್ಟರ್ ಆಗಿ ನೇಮಕ ಪಡೆಯುತ್ತಾರೆ. ಮುಂದೆ ಅಕ್ಟೋಬರ್ 14, 2019ರಂದು ಸಬ್ ಕಲೆಕ್ಟರ್ ಆಗಿ ತಿರುವನಂತಪುರಂ ಜಿಲ್ಲೆಗೆ ನೇಮಕ ಪಡೆಯುತ್ತಾರೆ!

Pranjal pateel with Komal sing pateel
ಕೋಮಲ್‌ ಸಿಂಗ್‌ ಪಾಟೀಲ್‌ ಜತೆ ಮದುವೆಯಾದ ಕ್ಷಣ

ಯಾರ ಸಹಾಯ ಇಲ್ಲದೆ ತನ್ನ ಕೆಲಸಗಳನ್ನು ತಾನೇ ಮಾಡುವ, ಅದ್ಭುತವಾದ ಮೆಮೊರಿ ಪವರ್ ಹೊಂದಿರುವ, ಸಮಾಜ ಸೇವೆಯ ತೀವ್ರವಾದ ತುಡಿತ ಹೊಂದಿರುವ, ಬೆಟ್ಟವನ್ನು ಕರಗಿಸುವ ಧೈರ್ಯ ಮತ್ತು ಆತ್ಮವಿಶ್ವಾಸಗಳನ್ನು ಹೊಂದಿರುವ ಪ್ರಾಂಜಲ್ ಪಾಟೀಲ್ ಮತ್ತು ಆಕೆಯ ಗಂಡ ಕೋಮಲ್ ಸಿಂಗ್ ಪಾಟೀಲ್ ಅವರು ಇತ್ತೀಚೆಗೆ ತಮ್ಮ ಅಂಗದಾನಕ್ಕೆ ಜೊತೆಯಾಗಿ ಸಹಿ ಹಾಕಿ ಸುದ್ದಿ ಆಗಿದ್ದಾರೆ.

ಆಕೆಯ ಒಂದು ಮಾತು ನನಗೆ ಭಾರೀ ಕನೆಕ್ಟ್ ಆಗಿದ್ದು ಅದನ್ನು ಇಲ್ಲಿ ಉಲ್ಲೇಖ ಮಾಡುತ್ತೇನೆ.

SUCCESS doesn’t give us INSPIRATION. But the STRUGGLE behind the SUCCESS gives us the INSPIRATION. ಹೌದು ತಾನೇ?

ಇದನ್ನೂ ಓದಿ : Raja Marga Column : ಈ ಶಾರ್ಪ್‌ ಶೂಟರ್‌ ಅಜ್ಜಿ ಮೊದಲ ಬಾರಿ ಗನ್‌ ಹಿಡಿದದ್ದು 67ನೇ ವಯಸ್ಸಲ್ಲಿ!

Continue Reading

ಅಂಕಣ

Raja Marga Column : ಈ ಶಾರ್ಪ್‌ ಶೂಟರ್‌ ಅಜ್ಜಿ ಮೊದಲ ಬಾರಿ ಗನ್‌ ಹಿಡಿದದ್ದು 67ನೇ ವಯಸ್ಸಲ್ಲಿ!

Raja Marga Column : ಅವರೊಬ್ಬರು ಶೂಟರ್‌ ಅಜ್ಜಿ. ವಿಶ್ವದ ಮಟ್ಟದ ಸ್ಪರ್ಧೆಯಲ್ಲಿ ಮಿಂಚಿದವರು. ಅವರು ಶಾರ್ಪ್‌ ಶೂಟಿಂಗ್‌ಗಾಗಿ ಗನ್‌ ಕೈಯಲ್ಲಿ ಹಿಡಿದಾಗ ವಯಸ್ಸು 67.

VISTARANEWS.COM


on

Raja Marga Column Chandro Tomar Sharp Shooter
Koo
RAJAMARGA

Raja Marga Column : ಉತ್ತರ ಪ್ರದೇಶದ ಭಾಗಪಥ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯು ಜೋಹ್ಹರಿ. ಅಲ್ಲಿಯ ಒಬ್ಬರು ಅಜ್ಜಿ ಶೂಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಹೆಸರು ಮಾಡಿದ್ದರು. ಆಕೆ ಬದುಕಿದ್ದಾಗ ಜಗತ್ತಿನ ಅತ್ಯಂತ ಹಿರಿಯ ಶಾರ್ಪ್‌ ಶೂಟರ್ (Worlds oldest Sharp Shooter) ತಪ್ಪಿದ್ದೆ ಇಲ್ಲ ಅನ್ನೋದು ಅವರ ಹಿರಿಮೆ! ವಯಸ್ಸು ಆಕೆಯ ಮಟ್ಟಿಗೆ ಬರೇ ಒಂದು ನಂಬರ್ ಆಗಿ ಬಿಟ್ಟಿದೆ! ಅವರ ಹೆಸರು ಚಂದ್ರಾ ತೋಮರ್‌ (Chandro tomar) ಜನ ಅವರನ್ನು ಪ್ರೀತಿಯಿಂದ ‘ಶೂಟರ್ ಅಜ್ಜಿ’ (Shooter Ajji) ಎಂದು ಕರೆಯುತ್ತಾರೆ! ಏಕೆಂದರೆ ಎಂಬತ್ತರ ಹರೆಯದಲ್ಲಿ ಕೂಡ ಅವರು ಚಾಂಪಿಯನ್‌ಷಿಪ್ ಸೋತವರಲ್ಲ!

ಆಕೆ ತುಂಬಿದ ಮನೆಯ ಅಜ್ಜಿ!

ಆಕೆ ಹಳ್ಳಿಯ ಹೆಂಗಸು. ಶಾಲೆಗೆ ಹೋದವರಲ್ಲ. ತುಂಬಿದ ಮನೆಗೆ ಸೊಸೆಯಾಗಿ ಬಂದವರು. ಪ್ರೀತಿಸುವ ಗಂಡ, 5 ಮಕ್ಕಳು, 12 ಮೊಮ್ಮಕ್ಕಳು ಇರುವ ಸಂಸಾರದಲ್ಲಿ ಅವರು ಮುಳುಗಿ ಬಿಟ್ಟಿದ್ದರು. ಮನೆ ವಾರ್ತೆ, ಮನೆಯವರ ಕ್ಷೇಮ, ಅಡುಗೆ ಮಾಡುವುದು, ದನಗಳ ಚಾಕರಿ ಇಷ್ಟೆ ಗೊತ್ತು ಅವರಿಗೆ. ಶೂಟಿಂಗ್ ಬಗ್ಗೆ ಯೋಚನೆಯನ್ನು ಕೂಡ ಮಾಡಿದವರಲ್ಲ.

Raja Marga Column Chandro Tomar Sharp Shooter1

ಅವರ ಬದುಕಿನಲ್ಲಿ ತಿರುವು ಬಂದಾಗ ವಯಸ್ಸು 67!

ಅವರ ಹಳ್ಳಿಯಲ್ಲಿ ಒಂದು ಶಾರ್ಪ್ ಶೂಟರ್ ಕ್ಲಬ್ ಇತ್ತು. ಅದಕ್ಕೆ ಅವರ ಮೊಮ್ಮಗಳು ಶಿಫಾಲಿ ಆಸಕ್ತಿಯಿಂದ ಹೋಗಿ ಸೇರಿದ್ದರು. ಅಲ್ಲಿ ಹುಡುಗರೇ ಹೆಚ್ಚು ಬರುತ್ತಿದ್ದ ಕಾರಣ ಮೊಮ್ಮಗಳಿಗೆ ಜೊತೆಯಾಗಿ ಅಜ್ಜಿ ಹೋಗುತ್ತಿದ್ದರು. ದೂರದಲ್ಲಿ ನಿಂತು ಶೂಟಿಂಗ್ ನೋಡುವುದು ಮಾತ್ರ ಅಜ್ಜಿಯ ಕೆಲಸ. ಒಂದು ದಿನ ಮೊಮ್ಮಗಳು ಗನ್ ಲೋಡ್ ಆಗದೆ ಕಷ್ಟ ಪಡುತ್ತಿದ್ದಳು. ಹತ್ತಿರ ಬಂದ ಅಜ್ಜಿ ಯಾವುದೋ ಒಂದು ಮಾಯೆಯಿಂದ ಗನ್ ಲೋಡ್ ಮಾಡಿದ್ದು ಮಾತ್ರವಲ್ಲ ಬುಲ್ ಐಗೆ ಗುರಿಯಿಟ್ಟು ಶೂಟ್ ಮಾಡಿಬಿಟ್ಟರು. ಅದು ಪರ್ಫೆಕ್ಟ್ ಶೂಟ್ ಆಗಿತ್ತು! ಆ ಕ್ಲಬ್ಬಿನ ಕೋಚ್ ಫಾರೂಕ್ ಪಠಾಣ್ ಮತ್ತು ಎಲ್ಲಾ ಹುಡುಗರು ಬಿಟ್ಟ ಕಣ್ಣು ಬಿಟ್ಟು ಬೆರಗಾಗಿ ನಿಂತರು! ಅದು ಅಜ್ಜಿಯ ಜೀವನದ ಮೊದಲ ಶೂಟ್ ಆಗಿತ್ತು ಮತ್ತು ಆಗ ಅವರ ವಯಸ್ಸು ಕೇವಲ 67 ಆಗಿತ್ತು!

ಶೂಟ್ ಮಾಡಲು ಸ್ಪಷ್ಟವಾದ ದೃಷ್ಟಿ ಮತ್ತು ಕೈಗಳ ನಿಯಂತ್ರಣಗಳು ಇರಬೇಕು. ಅದು ಆ ವಯಸ್ಸಲ್ಲಿ ಅಜ್ಜಿಗೆ ಹೇಗೆ ಸಾಧ್ಯವಾಯಿತು? ನನಗಂತೂ ಅರ್ಥವಾಗದ ಪ್ರಶ್ನೆ!

Raja Marga Column : ಅಜ್ಜಿ ಮತ್ತು ಮೊಮ್ಮಗಳ ಶೂಟಿಂಗ್ ತರಬೇತಿ!

ಮುಂದೆ ಅಜ್ಜಿ ಮೊಮ್ಮಗಳ ಜೊತೆಗೆ ಶೂಟರ್ ಕ್ಲಬ್ಬಿಗೆ ಸೇರಿದರು. 1200 ಡಾಲರ್ ಬೆಲೆಯ ಪಿಸ್ತೂಲನ್ನು ಹಠ ಹಿಡಿದು ತರಿಸಿಕೊಂಡರು. ಮನೆಯ ಅಂಗಳದಲ್ಲಿ ಪ್ರೈವೇಟ್ ಶೂಟರ್ ರೇಂಜ್ ಸಿದ್ಧವಾಯಿತು. ಅಜ್ಜಿಯ ಉತ್ಸಾಹ ದಿನದಿಂದ ದಿನಕ್ಕೆ ಅಧಿಕವಾಯಿತು. ಮನೆಕೆಲಸ ಮುಗಿಸಿಕೊಂಡು ಮಧ್ಯಾಹ್ನ ಅಜ್ಜಿ ಗನ್ ಹಿಡಿದು ತರಬೇತಿಗೆ ಇಳಿದರೆ ಜಗತ್ತನ್ನೇ ಮರೆತು ಬಿಡುತ್ತಿದ್ದರು. ಮನೆಯ ಎಲ್ಲರ ಪೂರ್ಣ ಬೆಂಬಲವು ಅವರಿಗೆ ದೊರೆಯಿತು ಮತ್ತು ಸಾಧನೆಗಳ ಮೆರವಣಿಗೆಯು ಆಗಲೇ ಶುರುವಾಗಿ ಬಿಟ್ಟಿತು!
1999ರಿಂದ ನಿರಂತರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಂದಿರುವ ಅಜ್ಜಿಗೆ ಈವರೆಗೆ 30 ರಾಷ್ಟ್ರಮಟ್ಟದ ಸ್ವರ್ಣ ಪದಕಗಳು ದೊರೆತಿವೆ!

Raja Marga Column Chandro Tomar Sharp Shooter1Raja Marga Column Chandro Tomar Sharp Shooter1

ಅಜ್ಜಿ ಜಗತ್ತಿನ ಅತ್ಯಂತ ಹಿರಿಯ ಶೂಟರ್ ಆದರು!

2010ರಲ್ಲಿ ವಿಶ್ವ ಹಿರಿಯರ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ರೈಫಲ್ ಮತ್ತು ಪಿಸ್ತೂಲ್ ಎರಡೂ ವಿಭಾಗಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆದ್ದಿರುವ ಅಜ್ಜಿ ಮುಂದೆ ಜಗತ್ತಿನ ಅತ್ಯಂತ ಹಿರಿಯ ಶೂಟರ್ ಆದರು. ಅವರು ಗೆದ್ದಿರುವ ಒಟ್ಟು 146 ಶೂಟಿಂಗ್ ಪದಕಗಳು ಅವರ ಶೋಕೇಸಲ್ಲಿ ಇವೆ! ಅದರಲ್ಲಿ ರಾಷ್ಟ್ರಮಟ್ಟದ ಪದಕಗಳು ಮೂವತ್ತಕ್ಕೂ ಹೆಚ್ಚು! 88ರ ಹರೆಯದಲ್ಲಿ ಕೂಡ ರಾಷ್ಟ್ರ ಮತ್ತು ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಂದಿರುವ ಆಕೆ ಪದಕದ ಮೇಲೆ ಪದಕಗಳನ್ನು ಗೆದ್ದಿದ್ದಾರೆ. ಮುಂದೆ ಅದೇ ಜೋಹರಿ ಶೂಟಿಂಗ್ ಕ್ಲಬ್ಬಿನ ಮುಖ್ಯ ಕೋಚ್ ಆಗಿ ಅಜ್ಜಿ ದೀರ್ಘಕಾಲ ದುಡಿದರು.

Raja Marga Column Chanra tomar with Tapsi Pannu
ತಾಪ್ಸಿ ಪನ್ನು ಜತೆ ಚಂದ್ರಾ ತೋಮರ್‌

ಇಡೀ ಕುಟುಂಬವೇ ಶೂಟರ್ ಕುಟುಂಬ ಆಯಿತು!

ಅವರಿಂದ ಸ್ಫೂರ್ತಿ ಪಡೆದು ಅವರ ಸೊಸೆ ಸೀಮಾ ತೋಮರ್, ಮೊಮ್ಮಗಳು ಶಿಫಾಲಿ ಇಬ್ಬರು ಕೂಡ ವಿಶ್ವ ಮಟ್ಟದ ಶೂಟರ್ ಆಗಿ ಬೆಳೆದಿದ್ದಾರೆ. ಅವರ ತಂಗಿ ಪ್ರಕಾಶಿ ತೋಮರ್ ಕೂಡ ಇಂದು ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆಲ್ಲುತ್ತಿದ್ದಾರೆ. ಅಜ್ಜಿಯ ಸ್ಫೂರ್ತಿಯಿಂದ ಮುಂದೆ ಇಡೀ ತೋಮರ್ ಕುಟುಂಬ ಶೂಟರ್ ಕುಟುಂಬವೇ ಆಗಿಬಿಟ್ಟಿದೆ! ನಾನು ಸಾಯುವ ತನಕ ಶೂಟಿಂಗ್ ಬಿಡುವುದಿಲ್ಲ ಎಂದು ಅಜ್ಜಿ ಗನ್ನು ಹಿಡಿದು ನುಡಿದರೆ ಅವರ ಕಂಗಳಲ್ಲಿ ಗೆದ್ದ ನಗು ಕಾಣುತ್ತಿತ್ತು!

ಇದನ್ನೂ ಓದಿ : Raja Marga Column : ಲಸಿಕೆ ಪ್ರಯೋಗಕ್ಕಾಗಿ ಮಗನ ಪ್ರಾಣವನ್ನೇ ಒತ್ತೆ ಇಟ್ಟ ಎಡ್ವರ್ಡ್‌ ಜೆನ್ನರ್‌!

ಅಜ್ಜಿಯ ಸಾಧನೆ ಜನಪ್ರಿಯ ಸಿನೆಮಾ ಆಯಿತು!

ಅಂದ ಹಾಗೆ ಅಜ್ಜಿಯ ಬದುಕು ಮತ್ತು ಸಾಧನೆಯಿಂದ ಸ್ಫೂರ್ತಿ ಪಡೆದು ಹಿಂದಿಯಲ್ಲಿ ‘ಸಾಂಡ ಕಿ ಆಂಖ್ ‘ಎಂಬ ಸಿನಿಮಾ(2019) ಕೂಡ ಬಂದಿದ್ದು ಅದರಲ್ಲಿ ಪ್ರಖ್ಯಾತ ನಟಿಯರಾದ ತಾಪ್ಸಿ ಪನ್ನು ಮತ್ತು ಭೂಮಿ ಪೆಡ್ನೇಕರ್ ಅವರು ಪ್ರಮುಖವಾದ ಪಾತ್ರಗಳನ್ನು ಮಾಡಿದ್ದರು.

ಅಂತಹ ಅಜ್ಜಿ ಚಂದ್ರೋ ತೋಮರ್ 2021ನೆಯ ಇಸವಿಯಲ್ಲಿ ತನ್ನ 89ನೇ ವಯಸ್ಸಿಗೆ ನಿಧನರಾದರು. ಅತ್ಯಂತ ಬಡ ಕುಟುಂಬದಿಂದ ಬಂದ, ಶಾಲೆಗೆ ಹೋಗದೆ ಈ ಸಾಧನೆ ಮಾಡಿದ ಶೂಟರ್ ದಾದಿ ನಿಜಕ್ಕೂ ಗ್ರೇಟ್ ಅಲ್ವಾ?

Raja Marga Column Chandra tomar
#image_title
Continue Reading

ಸ್ಫೂರ್ತಿ ಕತೆ

Raja Marga Column : ಲಸಿಕೆ ಪ್ರಯೋಗಕ್ಕಾಗಿ ಮಗನ ಪ್ರಾಣವನ್ನೇ ಒತ್ತೆ ಇಟ್ಟ ಎಡ್ವರ್ಡ್‌ ಜೆನ್ನರ್‌!

Raja Marga Column : 1980ರ ನಂತರ ಜಗತ್ತಿನಲ್ಲಿ ಒಂದೇ ಒಂದು ಸಿಡುಬು ರೋಗಿ ಪತ್ತೆ ಆಗಲಿಲ್ಲ ಎಂದರೆ ಅದಕ್ಕೆ ಅವರು ಕಾರಣ. ಅವರು ಎಂದರೆ ಲಸಿಕೆ ವಿಜ್ಞಾನದ ಪಿತಾಮಹ ಡಾ. ಎಡ್ವರ್ಡ್‌ ಜೆನ್ನರ್‌. ಅವರು ತಮ್ಮ ಮೊದಲ ಲಸಿಕೆ ಪ್ರಯೋಗವನ್ನು ತನ್ನದೇ ಮಗನ ಮೇಲೆ ನಡೆಸಿದರು!

VISTARANEWS.COM


on

Raja Marga Column
Koo
RAJA MARGA COLUMN Rajendra Bhat

Raja Marga Column : ಇಡೀ ಜಗತ್ತು ಎರಡು ವರ್ಷಗಳ ಕಾಲ ಕೊರೋನಾ ಪೀಡಿತವಾಗಿ ತತ್ತರಿಸುವ ಸಂದರ್ಭದಲ್ಲಿ ಯಾರಾದರೂ ಅದಕ್ಕೆ ಲಸಿಕೆ ಕಂಡುಹಿಡಿಯಲಿ ದೇವರೇ ಎಂದು ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದದ್ದು ನಮಗೆ ಮರೆಯಲು ಸಾಧ್ಯವೇ ಇಲ್ಲ. ಇಡೀ ಜಗತ್ತಿನಲ್ಲಿ ಆ ಮಹಾಮಾರಿ ಉಂಟುಮಾಡಿದ ತಲ್ಲಣವನ್ನು ನಾವು ಮರೆಯೋದಾದರೂ ಹೇಗೆ?

ಅದೇ ರೀತಿ ಲಂಡನ್‌ನಲ್ಲಿ 1750ರ ಹೊತ್ತಿಗೆ ಸಿಡುಬು ರೋಗವು (smallpox disease) ಸ್ಫೋಟ ಆಗಿತ್ತು. ಆಗ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಆಗ ತನ್ನ ಮತ್ತು ತನ್ನ ಮಗನ ಪ್ರಾಣ ಒತ್ತೆಯಿಟ್ಟು ಸಿಡುಬು ಎಂಬ ಮಹಾವೈರಸ್ ರೋಗಕ್ಕೆ ಲಸಿಕೆ (smallpox vaccine) ಕಂಡು ಹಿಡಿದ ಎಡ್ವರ್ಡ್ ಜೆನ್ನರ್- Edward Jenner (1749-1823) ಎಂಬ ಮಹಾ ವಿಜ್ಞಾನಿಯನ್ನು (English physician and scientist) ಜಗತ್ತು ಮರೆಯಲು ಸಾಧ್ಯವೇ?

Raja Marga Column Edward

Raja Marga Column : ಕಲಿಕೆಯಲ್ಲಿ ಸಾಮಾನ್ಯ ಬುದ್ಧಿಮತ್ತೆಯ ಹುಡುಗ

ಇಂಗ್ಲೆಂಡ್ ದೇಶದ ಗ್ಲಾಸೆಷ್ಟರ್‌ಶೈರ್‌ ಎಂಬ ಪುಟ್ಟ ಗ್ರಾಮದಲ್ಲಿ ಎಡ್ವರ್ಡ್ ಜನಿಸಿದರು. 5ನೆಯ ವಯಸ್ಸಿಗೆ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡರು. ಶಾಲೆಯಲ್ಲಿ ಕಲಿಯುವುದರಲ್ಲಿ ಸಾಧಾರಣ ಬುದ್ಧಿಮತ್ತೆ. ಆದರೆ ವೀಕ್ಷಣಾ ಸಾಮರ್ಥ್ಯವು ಅದ್ಭುತ.

ಬಾಲ್ಯದಲ್ಲಿ ಒಮ್ಮೆ ಅವರಿಗೂ ಸಿಡುಬು ರೋಗ ಬಂದಿತ್ತು. ಅದಕ್ಕೆ ಲಸಿಕೆಯನ್ನು ಹುಡುಕಬೇಕು ಎನ್ನುವ ತೀವ್ರವಾದ ಪ್ರಯತ್ನ ಅವರು ಆರಂಭ ಮಾಡಿದ್ದರು. ಆ ಕಾಯಿಲೆಯಲ್ಲಿ ಇಡೀ ಇಂಗ್ಲೆಂಡ್ ನರಳುತ್ತಿತ್ತು. ಸಿಡುಬು ರೋಗ ಬಂದವರು ಯಾರೂ ಬದುಕುವ ಸಾಧ್ಯತೆ ಇರಲಿಲ್ಲ.

Raja Marga Column Edward Jennar Smallpox Vaccine2

Raja Marga Column : ಎಡ್ವರ್ಡ್ ಜೆನ್ನರನ ಅದ್ಭುತ ವೀಕ್ಷಣೆ

ಆಗ ಮನುಷ್ಯರಿಗೆ ಸಿಡುಬು ಬಂದ ಹಾಗೆ ದನ, ಹಂದಿ, ಕುದುರೆಗಳಿಗೆ ಕೂಡ ಸಿಡುಬು ಬರುತ್ತಿತ್ತು. ಸಿಡುಬು ಬಂದ ದನಗಳ ಹಾಲು ಕರೆಯುವ ಹೆಂಗಸರಿಗೆ ದನದ ಸಿಡುಬಿನ ಗುಳ್ಳೆಗಳು ಕಾಣಿಸಿಕೊಂಡು ಮುಂದೆ ನಿಧಾನವಾಗಿ ಗುಣವಾಗಿ ಬಿಡುತ್ತಿದ್ದವು. ಆದರೆ ಅವರಿಗೆ ಮಾನವರ ಸಿಡುಬು ಬರುತ್ತಲೇ ಇರಲಿಲ್ಲ!

ಈ ಸೂಕ್ಷ್ಮ ವೀಕ್ಷಣೆಯು ಮುಂದೆ ಸಿಡುಬಿನ ಲಸಿಕೆ ಸಂಶೋಧನೆಗೆ ದಾರಿ ಆಯಿತು. ದನದ ಸಿಡುಬಿನ ಗುಳ್ಳೆಯ ಕೀವು ತೆಗೆದು ಮನುಷ್ಯರಿಗೆ ಚುಚ್ಚಿದಾಗ ದೇಹದಲ್ಲಿ ಮಾನವ ಸಿಡುಬಿನ ವಿರುದ್ಧ ರಕ್ಷಣೆ ದೊರೆಯುವುದು ಖಾತ್ರಿಯಾಯಿತು. ನಿರಂತರ ಪ್ರಯೋಗ ನಡೆದು ಫಲಿತಾಂಶ ದೊರೆಯಿತು. ಲಸಿಕೆ ಸಂಶೋಧನೆ ಆಯಿತು.

Raja Marga Column Edward Jennar Smallpox Vaccine2

ಆದರೆ ಲಸಿಕೆಯ ಪ್ರಯೋಗ ಮಾಡುವುದು ಯಾರ ಮೇಲೆ? ಇಬ್ಬರು ಹೆಂಗಸರು ಮುಂದೆ ಬಂದರಾದರೂ ಅಪನಂಬಿಕೆಯ ಮಾತಾಡಿದರು. ಆಗ ಮೊದಲು ಎಡ್ವರ್ಡ್ ಜೆನ್ನರ್ ತನ್ನ ಮುದ್ದಿನ ಮಗನ ಮೇಲೆ ಆ ಲಸಿಕೆ ಪ್ರಯೋಗ ಮಾಡಿದನು. ಲಸಿಕೆ ವರ್ಕ್ ಆಗದೆ ಇದ್ದರೆ ತನ್ನ ಮಗನ ಪ್ರಾಣಕ್ಕೆ ಅಪಾಯ ಇದೆ ಎಂದು ಜೆನ್ನರ್‌ಗೆ ಗೊತ್ತಿತ್ತು. ಆದರೆ ಲೋಕಕಲ್ಯಾಣದ ಸಂಕಲ್ಪದ ಮುಂದೆ ಸ್ವಾರ್ಥದ ಲವಲೇಶವೂ ಆತನಿಗೆ ಇರಲಿಲ್ಲ. ಯಶಸ್ಸು ದೊರೆತ ನಂತರ ಆ ಮಹಿಳೆಯರ ಮೇಲೆ ಲಸಿಕೆಯ ಪ್ರಯೋಗ ಮಾಡಿದನು. ಯಶಸ್ಸು ದೊರೆತಾಗ ಸ್ವರ್ಗಕ್ಕೆ ಮೂರೇ ಗೇಣು!

ಇದನ್ನೂ ಓದಿ : Raja Marga Column : ಅವರು ಕೇವಲ ಟಿ.ಎನ್‌ ಸೇಷನ್‌ ಅಲ್ಲ, ಪ್ರಜಾಪ್ರಭುತ್ವದ ಆಲ್ಸೇಷನ್‌!

ಮುಂದೆ ಜೇಮ್ಸ್ ಫೀಫ್ ಎಂಬ ಹುಡುಗನ ಮೇಲೆ ಈ ಲಸಿಕೆಯು 100% ಕೆಲಸ ಮಾಡಿದಾಗ( ಮೇ 14, 1796) ಇಡೀ ವೈದ್ಯ ಜಗತ್ತು ಆತನಿಗೆ ಜಯಕಾರ ಹಾಕಿತು. ಆತನ ದೂರದೃಷ್ಟಿ ಹಾಗೂ ಮುಂದೆ ವಿಶ್ವ ಆರೋಗ್ಯ ಸಂಸ್ಥೆಯ ಅವಿರತ ಪ್ರಯತ್ನಗಳ ಫಲವಾಗಿ ಜಗತ್ತಿನಾದ್ಯಂತ ಹುಟ್ಟಿದ ಪ್ರತೀ ಮಗುವಿಗೆ ಸಿಡುಬು ಲಸಿಕೆ ಕಡ್ಡಾಯವಾಗಿ ಹಾಕಲಾಯಿತು. ಜಗತ್ತಿನಲ್ಲಿ 1980ರ ನಂತರ ಸಿಡುಬಿನ ಯಾವ ಪ್ರಕರಣವೂ ದಾಖಲಾಗಿಲ್ಲ ಎನ್ನುವುದು ಎಡ್ವರ್ಡ್ ಜೆನ್ನರ್‌ಗೆ ದೊರೆತ ಮಹಾ ಪ್ರಶಸ್ತಿ ಅಲ್ವಾ?

ಸಿಡುಬು ರೋಗಕ್ಕೆ ಲಸಿಕೆ ಕಂಡುಹಿಡಿದು ಜಗತ್ತಿಗೆ ಮಹದುಪಕಾರ ಮಾಡಿದ ಎಡ್ವರ್ಡ್ ಜೆನ್ನರ್ ಒಬ್ಬ ಲೆಜೆಂಡ್ ಅಲ್ವಾ?

ವ್ಯಾಕ್ಸಿನ್‌ಗಳ ಒಂದು ಪುಟ್ಟ ಇತಿಹಾಸ ಇಲ್ಲಿದೆ

Continue Reading
Advertisement
mobile blast woman death
ಕ್ರೈಂ10 mins ago

Mobile Blast: ಬೈಕ್‌ ಚಲಾಯಿಸುತ್ತಿದ್ದಾಗ ಮೊಬೈಲ್‌ ಸ್ಫೋಟ, ಡಿವೈಡರ್‌ಗೆ ಗುದ್ದಿ ಮಹಿಳೆ ಸಾವು

Randeep Surjewala
ಕರ್ನಾಟಕ39 mins ago

Randeep Surjewala: ಕನ್ನಡಿಗರ ತೆರಿಗೆ ಹಣದಲ್ಲಿ ಸುರ್ಜೇವಾಲಾ ಟ್ರಿಪ್;‌ ಕೆರಳಿ ಕೆಂಡವಾದ ಬಿಜೆಪಿ!

Murder case in dharwad
ಕ್ರೈಂ46 mins ago

Murder case: ಹೆಂಡ್ತಿ ಮೇಲೆ ಸಂಶಯ; ಕುಡಿದು ಬಂದು ಕೊಡಲಿಯಿಂದ ಕೊಚ್ಚಿ ಕೊಂದ

miss universe Buenos Aires
ವಿದೇಶ50 mins ago

Miss Universe Buenos Aires: ಈಕೆ ಬ್ಯೂನಸ್‌ ಐರಿಸ್‌ ವಿಶ್ವ ಸುಂದರಿ; ಇವಳ ವಯಸ್ಸು ನೀವೇ ಊಹಿಸಿ!

Gurucharan Singh Taarak Mehta Ka Ooltah Chashmah actor missing
ಕಿರುತೆರೆ1 hour ago

Gurucharan Singh: ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಖ್ಯಾತಿಯ ನಟ ನಿಗೂಢ ನಾಪತ್ತೆ

snake bite
ಬೆಂಗಳೂರು ಗ್ರಾಮಾಂತರ1 hour ago

Snake Bite: ತೋಟದ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಕಚ್ಚಿದ ಹಾವು; ಕ್ಷಣಾರ್ಧದಲ್ಲೆ ಹಾರಿಹೋಯ್ತು ಪ್ರಾಣ

MDH, Everest Spices
ದೇಶ1 hour ago

MDH, Everest Spices: ಭಾರತದ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಕೆಮಿಕಲ್‌ ಪತ್ತೆ

Neha Murder Case neha And fayas
ಹುಬ್ಬಳ್ಳಿ2 hours ago

Neha Murder case : ನ್ಯಾಯಾಧೀಶರ ಎದುರೆ ನೇಹಾ ಕೊಲೆ ಆರೋಪಿ ಫಯಾಜ್‌ನ DNA ಮಾದರಿ ಸಂಗ್ರಹ!

Lok Sabha Election-2024
Lok Sabha Election 20242 hours ago

Lok Sabha Election 2024: ಜೈಲಿನಲ್ಲಿರುವ ಅಮೃತಪಾಲ್ ಚುನಾವಣೆಗೆ ಸ್ಪರ್ಧಿಸಬಹುದು, ಕೇಜ್ರಿವಾಲ್ ಮತ ಚಲಾಯಿಸುವಂತಿಲ್ಲ! ಏನಿದು ನಿಯಮ?

gold rate today beauty
ಚಿನ್ನದ ದರ2 hours ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಚಿನ್ನದ ಬೆಲೆ ಇಂದು ಹೀಗಿವೆ; ತುಸುವೇ ಏರಿಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

road Accident in kolar evm
ಕೋಲಾರ2 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ9 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ1 day ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20241 day ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ1 day ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 days ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

ಟ್ರೆಂಡಿಂಗ್‌