Modi Birthday | ಇಲ್ಲಿವೆ ನರೇಂದ್ರ ಮೋದಿ ಕುರಿತ 20 ಅತ್ಯಂತ ಕುತೂಹಲಕರ ಸಂಗತಿಗಳು - Vistara News

ದೇಶ

Modi Birthday | ಇಲ್ಲಿವೆ ನರೇಂದ್ರ ಮೋದಿ ಕುರಿತ 20 ಅತ್ಯಂತ ಕುತೂಹಲಕರ ಸಂಗತಿಗಳು

ದೇಶಪ್ರೇಮಿ, ಪರಿಶ್ರಮಿ, ದೇಶ ಕಂಡ ಧೀಮಂತ ನಾಯಕ, ಟೀಕೆಗಳ ಆಚೆಯೂ ಜನರ ಮೆಚ್ಚುಗೆ ಗಳಿಸಿದವರು, ದೇಶದ ಆಲೋಚನೆಗೆ ಹೊಸ ಹೊಳಹು ನೀಡಿದವರು ನರೇಂದ್ರ ಮೋದಿ (Narendra Modi). ಪ್ರಧಾನಿಯ ಜನ್ಮದಿನದಂದು ಅವರ ಕುರಿತು ಇರುವ ಆಸಕ್ತಿದಾಯಕ ವಿಚಾರಗಳ ಸಂಕ್ಷಿಪ್ತ ಮಾಹಿತಿ ಹೀಗಿದೆ…

VISTARANEWS.COM


on

ಮಾನ್ಯ ಪ್ರಧಾನ ಮಂತ್ರಿ ಮೋದಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜವಾಹರ ಲಾಲ್‌ ನೆಹರು, ಇಂದಿರಾ ಗಾಂಧಿ, ಅಟಲ್‌ ಬಿಹಾರಿ ವಾಜಪೇಯಿ ಅವರಂತೆ ಒಂದಿಡೀ ದೇಶವನ್ನು ಯಾರಾದರೂ ಆವರಿಸಿಕೊಂಡಿದ್ದರೆ, ಮನೆ-ಮನಗಳನ್ನು ಪ್ರವೇಶಿಸಿದ ನಾಯಕನೆಂದರೆ ಅದು ಪ್ರಧಾನಿ ನರೇಂದ್ರ ಮೋದಿ (Narendra Modi). ಇಂತಹ ರಾಷ್ಟ್ರೀಯ ನಾಯಕನ ಕುರಿತು ಸಹಜವಾಗಿಯೇ ಜನರಲ್ಲಿ ಹಲವಾರು ಕುತೂಹಲಗಳು ಇರುತ್ತವೆ. ಮೋದಿ ಕುರಿತು ಇರುವ ಕುತೂಹಲ ತಣಿಸಲೆಂದೇ ಅವರ ಬಗೆಗೆ ಇರುವ ಆಸಕ್ತಿದಾಯಕ ಅಂಶಗಳನ್ನು ನೀಡಲಾಗಿದೆ. ಮೋದಿ ಜನ್ಮದಿನದಂದು ಅವರ ಜೀವನ, ಆಸಕ್ತಿದಾಯಕ ವಿಷಯಗಳ ಸುತ್ತ ಒಂದು ಸುತ್ತು ಹಾಕೋಣ ಬನ್ನಿ…

೧. ಆರೋಗ್ಯ ಕಾಳಜಿ ಹೆಚ್ಚಿನ ಮುತುವರ್ಜಿ

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅವರು ಒಂದು ದಿನವೂ ಅನಾರೋಗ್ಯಕ್ಕೀಡಾಗಿದ್ದು, ಸುಸ್ತಾಗಿದ್ದು, ಕನಿಷ್ಠ ನೆಗಡಿ-ಜ್ವರ ಬಂದ ಸುದ್ದಿಯನ್ನು ಯಾರೂ ಕೇಳಿಲ್ಲ. ಇದಕ್ಕೆ ನರೇಂದ್ರ ಮೋದಿ ಅವರು ಆರೋಗ್ಯಕ್ಕೆ ನೀಡುವ ಮಹತ್ವವೇ ಕಾರಣ. ನಿತ್ಯ ನಾಲ್ಕೈದು ಗಂಟೆ ಮಲಗಿದರೂ, ೧೮ಕ್ಕೂ ಹೆಚ್ಚು ತಾಸು ಕೆಲಸ ಮಾಡಿದರೂ, ವಿದೇಶ ಸುತ್ತಿ ಬಂದರೂ ಯೋಗ, ವ್ಯಾಯಾಮ, ಆಹಾರ ಪದ್ಧತಿಯಿಂದಾಗಿ ಮೋದಿ ಈಗಲೂ ಫಿಟ್‌ ಇದ್ದಾರೆ. ಬೆಳಗ್ಗೆ ಎದ್ದು, ಯೋಗ, ವ್ಯಾಯಾಮ, ವಾಕಿಂಗ್‌ ಹಾಗೂ ಧ್ಯಾನ ಮಾಡುತ್ತಾರೆ. ಗುಜರಾತಿ ಆಹಾರ, ಸ್ವಲ್ಪ ಕಿಚಡಿ ಸೇವಿಸುವ ಮೂಲಕ ಅವರು ಡಯಟ್‌ ಮೇಂಟೇನ್‌ ಮಾಡುತ್ತಾರೆ. ಅಷ್ಟರಮಟ್ಟಿಗೆ ಮೋದಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.

2. 42 ವರ್ಷದಿಂದ ನವರಾತ್ರಿ ವೇಳೆ ಉಪವಾಸ

ದೇಶಭಕ್ತಿಯ ಜತೆಗೆ ದೈವಭಕ್ತರೂ ಆಗಿರುವ ಮೋದಿ ಅವರು ನವರಾತ್ರಿ ವೇಳೆ ಪ್ರತಿ ವರ್ಷ ಉಪವಾಸ ಮಾಡುತ್ತಾರೆ. ಕಳೆದ ೪೨ ವರ್ಷಗಳಿಂದ ನವರಾತ್ರಿ ವೇಳೆ ಮೋದಿ ಅವರು ಒಂಬತ್ತು ದಿನ ಉಪವಾಸ ಆಚರಿಸುತ್ತಾರೆ. ಮೋದಿ ವಿದೇಶದಲ್ಲಿಯೇ ಇರಲಿ, ಬಿಡುವಿಲ್ಲದ ಕಾರ್ಯಕ್ರಮಗಳು, ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಲೇ ಉಪವಾಸ ಆಚರಿಸುತ್ತಾರೆ.

೩. ಮೋದಿ ಸಂವಹನದ ಹಿಂದಿದೆ ಕೋರ್ಸ್‌ ರಹಸ್ಯ

ನರೇಂದ್ರ ಮೋದಿ ಅವರು ಅರಳು ಹುರಿದಂತೆ ಮಾತನಾಡುತ್ತಾರೆ. ಅವರು ಜಾಗತಿಕ ಉದ್ಯಮಿಗಳೇ ಇರಲಿ, ರಾಜಕಾರಣಿಯೇ ಇರಲಿ, ಎಂತಹವರ ಜತೆಗೂ ಉತ್ತಮ ಸಂವಹನ ಸಾಧಿಸುತ್ತಾರೆ. ಅವರ ಜತೆ ಆತ್ಮೀಯವಾಗಿ ಬೆರೆಯುತ್ತಾರೆ. ಅಷ್ಟೇ ಏಕೆ, ವೇದಿಕೆ ಮೇಲೆ ನಿಂತು ವಾಗ್ಝರಿ ಹರಿಸಿದರೆ, ಗ್ರಾಮೀಣ ಭಾಗದ ಜನರೂ ತಲೆದೂಗುವಂತೆ ಮಾಡುತ್ತಾರೆ. ಇದರ ಹಿಂದೆ ಅವರು ಬಾಲ್ಯದಿಂದಲೂ ಜನರ ಜತೆ ಒಡನಾಡಿದ್ದು, ಆರೆಸ್ಸೆಸ್‌ನ ಬೈಠಕ್‌ಗಳಲ್ಲಿ ಭಾಗಿಯಾಗಿದ್ದರ ಜತೆಗೆ ಅವರು ಅಮೆರಿಕದಲ್ಲಿ ಇದಕ್ಕಾಗಿಯೇ ಕೋರ್ಸ್‌ ಸಹ ಮಾಡಿದ್ದಾರೆ. ಅಮೆರಿಕದಲ್ಲಿ “ಇಮೇಜ್‌ ಮ್ಯಾನೇಜ್‌ಮೆಂಟ್‌” ಹಾಗೂ ಸಾರ್ವಜನಿಕ ಸಂಪರ್ಕದಲ್ಲಿ ಮೋದಿ ಮೂರು ತಿಂಗಳ ಕೋರ್ಸ್‌ ಮುಗಿಸಿದ್ದಾರೆ.

೪. ಅವಿರತ ಪರಿಶ್ರಮಿ, ಅಪ್ರತಿಮ ದೇಶಪ್ರೇಮಿ

ನರೇಂದ್ರ ಮೋದಿ ಕುರಿತ ಟೀಕೆ ಟಿಪ್ಪಣಿಗಳು ಏನೇ ಇರಲಿ. ಆದರೆ, ಅವರೊಬ್ಬ ಅವಿರತ ಪರಿಶ್ರಮಿ ಹಾಗೂ ಅಪ್ರತಿಮ ದೇಶಪ್ರೇಮಿ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ಇಳಿಕೆಯಾದ ಉಗ್ರರ ದಾಳಿಗಳೇ ಸಾಕ್ಷಿಯಾಗಿದೆ. ಇಂದಿಗೂ ಉಗ್ರರ ಉಪಟಳ ಗಡಿಗೆ ಸೀಮಿತವಾಗಿದ್ದರೆ ಅದಕ್ಕೆ ಮೋದಿ ಅವರು ದೇಶದ ಭದ್ರತೆಗೆ ನೀಡಿದ ಆದ್ಯತೆಯೇ ಕಾರಣ. ಉರಿ ಮೇಲಿನ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್‌ ಸ್ಟ್ರೈಕ್‌ ಮಾಡಿಸಿದ್ದು, ಸರ್ಜಿಕಲ್‌ ಸ್ಟ್ರೈಕ್‌ ಯಶಸ್ವಿಯಾಗಿದೆ ಎಂದು ಕರೆ ಬರುವತನಕ ರಾತ್ರಿ ಎದ್ದು ಕುಳಿತಿದ್ದು, ಅಮೆರಿಕದ ಬೆದರಿಕೆಗೆ ಬಗ್ಗದೆ ರಷ್ಯಾ ಜತೆ ಎಸ್‌-೪೦೦ ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದ ಮಾಡಿಕೊಂಡಿದ್ದು, ಚೀನಾದ ಒಆರ್‌ಒಪಿ, ಸಿಪಿಐಸಿ ಬಲೆಗೆ ಬೀಳದ್ದು, ಪುಲ್ವಾಮ ದಾಳಿಗೆ ತಿರುಗೇಟಾಗಿ ಬಾಲಾಕೋಟ್‌ ವಾಯುದಾಳಿ ನಡೆಸಿದ್ದು, ಉಕ್ರೇನ್‌ ಮೇಲೆ ಆಕ್ರಮಣ ಮಾಡಿದ ಬಳಿಕ ವಿಶ್ವವೇ ರಷ್ಯಾ ವಿರುದ್ಧ ನಿಂತರೂ ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿಸಿದ್ದು ಇದಕ್ಕೆ ಸಾಕ್ಷಿಯಾಗಿದೆ. ಮೋದಿ ಅವರು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ೨೦೧೪ರಲ್ಲಿ ಎಂಟು ತಿಂಗಳಲ್ಲಿ ದೇಶಾದ್ಯಂತ ೩ ಲಕ್ಷ ಕಿ.ಮೀ ಸಂಚರಿಸಿ, ೨೫ ರಾಜ್ಯಗಳಲ್ಲಿ ಪ್ರಚಾರ ಮಾಡಿ ಜನರ ಮನಸ್ಸು ಗೆದ್ದಿದ್ದರು. ಈಗಲೂ ಮೋದಿ ನಾಲ್ಕಾರು ದೇಶಗಳನ್ನು ಸುತ್ತಿ, ಬೆಳಗ್ಗೆ ಎದ್ದೇಳುತ್ತಲೇ ಯಾವುದೋ ಯೋಜನೆಗೆ ಚಾಲನೆ ನೀಡುತ್ತಿರುತ್ತಾರೆ. ರಾಜಕೀಯ ವೈರಿಗಳೂ ಮೋದಿ ಅವರನ್ನು ಕಾಯಕಯೋಗಿ ಎಂಬುದನ್ನು ಒಪ್ಪುತ್ತಾರೆ.

೫. ರಾಜಕೀಯದ ಹೊರತಾಗಿ ಸಂಬಂಧಕ್ಕೆ ಆದ್ಯತೆ

ಕೆಲವೊಮ್ಮೆ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ, ಆರೋಪ, ಟೀಕೆ, ಖಂಡನೆ, ವಿಡಂಬನೆ, ವ್ಯಂಗ್ಯವು ಗಂಭೀರ ಸ್ವರೂಪದ್ದಾಗಿರುತ್ತದೆ. ಆಡಳಿತ ಪಕ್ಷದವರೇ ಹೀಗೆ ಪ್ರತಿಪಕ್ಷಗಳನ್ನು ಹೀಗಳಿಯಬಹುದೇ ಎನ್ನುವಷ್ಟರಮಟ್ಟಿಗೆ ದಾಳಿ ನಡೆಸುತ್ತಾರೆ. ಹೀಗಿದ್ದರೂ ಮೋದಿ ಅವರು ರಾಜಕೀಯದ ಹೊರತಾಗಿ ಉತ್ತಮ ಸಂಬಂಧ ಹೊಂದಿದ್ದಾರೆ. ರಾಜಕೀಯದಲ್ಲಿ ಬದ್ಧವೈರಿಯಾಗಿರುವ ಮಮತಾ ಬ್ಯಾನರ್ಜಿಯವರು ಪ್ರತಿ ವರ್ಷ ಮೋದಿ ಅವರಿಗೆ ಕುರ್ತಾ, ಸಿಹಿ ತಿಂಡಿಗಳನ್ನು ಕಳುಹಿಸುತ್ತಾರೆ. ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರೂ ಮೋದಿಗೆ ಸಿಹಿ ಕಳುಹಿಸುತ್ತಾರೆ. ದೆಹಲಿಗೆ ಹೋದಾಗ ಮಾಜಿ ಪ್ರಧಾನಿ ದೇವೇಗೌಡರನ್ನು ಮೋದಿ ಆದರಿಸಿದ ರೀತಿಗೆ ಗೌಡರೇ ವಿಸ್ಮಿತರಾಗಿದ್ದರು. ಇನ್ನು ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್‌ ಅವರಿಗೆ ಮೋದಿ ಗೌರವ ಸೂಚಿಸಿದ್ದು, ಅವರನ್ನು ಹೊಗಳಿದ್ದು, ಪಕ್ಷದ ಹಂಗಿಲ್ಲದೆ ಪ್ರಣಬ್‌ ಮುಖರ್ಜಿ ಅವರಿಗೆ ಭಾರತ ರತ್ನ ನೀಡಿದ್ದು ಮೋದಿ ಅವರು ರಾಜಕೀಯದ ಹೊರತಾಗಿ ಹೊಂದಿರುವ ವಿಶಾಲ ಮನೋಭಾವ, ಸಂಬಂಧಕ್ಕೆ ನೀಡುವ ಆದ್ಯತೆಗೆ ನಿದರ್ಶನವಾಗಿದೆ.

ಮೋದಿ ಜತೆ ದೀದಿ.

೬. ಯೋಜನೆಗಳಿಗೆ ವಿಶಿಷ್ಟ ಹೆಸರು ನೀಡುವ ಕಲೆ

ಮೋದಿ ಅವರ ಆಡಳಿತದಲ್ಲಿ ಯಾವುದೇ ಯೋಜನೆ ಜಾರಿಗೊಳಿಸಲಿ, ಅದಕ್ಕೊಂದು ವಿಶಿಷ್ಟ ಹೆಸರು ನೀಡಲಾಗುತ್ತದೆ. ಯೋಜನೆಗಳಿಗೆ ಕುಟುಂಬಸ್ಥರ ಹೆಸರಿಡುವುದಕ್ಕೆ ವಿದಾಯ ಹಾಕಿದ ಮೋದಿ ವಿಶಿಷ್ಟ ಹೆಸರುಗಳ ಮೂಲಕ ಗಮನ ಸೆಳೆಯುತ್ತಾರೆ. ಸಿಎಂ ಎಂದರೆ ಕಾಮನ್‌ ಮ್ಯಾನ್‌, ಐಟಿ ಎಂದರೆ ಇಂಡಿಯನ್‌ ಟೆಕ್ನಾಲಜಿ, ಬಿಟಿ ಎಂದರೆ ಭಾರತ್‌ ಟುಮಾರೊ ಎಂಬ ಪದಗಳನ್ನು ಪರಿಚಯಿಸಿದ್ದೇ ಮೋದಿ. ಅದೂ ಗುಜರಾತ್‌ ಸಿಎಂ ಆಗಿದ್ದಾಗಲೇ ಮೋದಿ ಯೋಜನೆಗಳಿಗೆ ಹೆಸರಿಡುವ ಕಲೆ ಹೊಂದಿದ್ದರು. ಗುಜರಾತ್‌ ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ನರ್ಮದಾ ನೀರಾವರಿ ಯೋಜನೆಗೆ “ಸುಜಲಾಂ ಸುಫಲಾಂ”, ಹೆಣ್ಣುಮಕ್ಕಳನ್ನು ಶಾಲೆಗೆ ಕರೆತರುವ ಯೋಜನೆಗೆ “ವಿದ್ಯಾಲಕ್ಷ್ಮೀ”, ಗುಜರಾತ್‌ ಅಭಿವೃದ್ಧಿಗೆ ರಚಿಸಿದ ಪರಿಣತರ ಸಮಿತಿಗೆ “ಬುದ್ಧಿಸಾಗರ್‌ ಪರಿಷದ್‌” ಎಂದು ಹೆಸರಿಟ್ಟಿದ್ದರು. ಇನ್ನು ಕಳೆದ ಎಂಟು ವರ್ಷಗಳಲ್ಲಿ ಮೋದಿ ಅವರು ಪ್ರಧಾನಿಯಾಗಿ, ಆತ್ಮನಿರ್ಭರ ಭಾರತ್‌, ಮೇಕ್‌ ಇನ್‌ ಇಂಡಿಯಾ, ಆಯುಷ್ಮಾನ್‌ ಭಾರತ್‌, ಜನಧನ್‌, ಕಿಸಾನ್‌ ಸಮ್ಮಾನ್‌, ಅಗ್ನಿಪಥ, ಉಜ್ವಲ ಸೇರಿ ಹಲವು ವಿಶಿಷ್ಟ ಹೆಸರುಗಳಲ್ಲಿ ಯೋಜನೆಗಳು ಜಾರಿಯಾಗಿವೆ.

೭. ಸುರಂಗ ಮಾರ್ಗ ಬಳಸಿದ ಮೊದಲ ಪ್ರಧಾನಿ

ನರೇಂದ್ರ ಮೋದಿ ಅವರ ನಿವಾಸವಿರುವ ಲೋಕಕಲ್ಯಾಣ ಮಾರ್ಗದಿಂದ ಸಫ್ದರ್‌ಜಂಗ್‌ ಏರ್‌ಪೋರ್ಟ್‌ಗೆ ಎರಡು ಕಿ.ಮೀ. ದೂರದ ಸುರಂಗ ಕೊರೆಯಲಾಗಿದೆ. ಗಾಲ್ಫ್‌ ಕೋ ಮಾರ್ಗವಾಗಿ ಸುರಂಗ ಕೊರೆಯಲಾಗಿದ್ದು, ಸಂಚಾರ ದಟ್ಟಣೆ ತಡೆಯಲು ೨೦೧೦ರಲ್ಲಿ ಆರಂಭಿಸಿ, ೨೦೧೪ರಲ್ಲಿ ಸುರಂಗ ಕಾಮಗಾರಿ ಮುಗಿದಿದೆ. ಈ ಸುರಂಗವನ್ನು ಬಳಸಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಎನಿಸಿದ್ದಾರೆ. ಸುರಂಗದಲ್ಲಿ ಹೋದರೆ ವಿಮಾನ ನಿಲ್ದಾಣ, ವಿಐಪಿ ಹೆಲಿಕಾಪ್ಟರ್‌ಗಳು ಲ್ಯಾಂಡ್‌ ಆಗುವ ಹೆಲಿಪ್ಯಾಡ್‌ ತಲುಪಬಹುದಾಗಿದೆ.

೮. ಮೋದಿಗೆ ಸ್ಕೂಟರ್‌ ಓಡಿಸಲು ಬರುತ್ತಿರಲಿಲ್ಲ

ನರೇಂದ್ರ ಮೋದಿ ಅವರು ಚಿಕ್ಕ ವಯಸ್ಸಿನಲ್ಲಿಯೇ ಆರ್‌ಎಸ್‌ಎಸ್‌ ಸೇರಿ, ಸಂಘದ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಭೆ-ಸಮಾರಂಭಗಳನ್ನು ಆಚರಿಸುವುದು, ಕಚೇರಿಯ ಸ್ವಚ್ಛತೆ ಸೇರಿ ಎಲ್ಲ ಉಸ್ತುವಾರಿಯನ್ನು ಅವರೇ ನೋಡಿಕೊಳ್ಳುತ್ತಿದ್ದರು. ಸಂಘದಲ್ಲಿ ಅವರು ಪ್ರಚಾರಕರಾಗಿ ಆಯ್ಕೆಯಾಗುವರೆಗೂ ಸ್ಕೂಟರ್‌ ಓಡಿಸಲು ಬರುತ್ತಿರಲಿಲ್ಲ. ಶಂಕರಸಿಂಗ್‌ ವಘೇಲಾ (ಗುಜರಾತ್‌ ಮಾಜಿ ಮುಖ್ಯಮಂತ್ರಿ) ಅವರೇ ಮೋದಿ ಅವರನ್ನು ಸ್ಕೂಟರ್‌ನಲ್ಲಿ ಕರೆದುಕೊಂಡು ತಿರುಗಾಡುತ್ತಿದ್ದರು.

೯. ಕಟ್ಟಾ ವಿರೋಧಿಯೊಬ್ಬ ಖಾಸಾ ಸ್ನೇಹಿತನಾದ ಕತೆ

ಗುಜರಾತ್‌ನಲ್ಲಿ ಗೋಧ್ರಾ ಹತ್ಯಾಕಾಂಡ ನಡೆದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ನರೇಂದ್ರ ಮೋದಿ ಅವರ ಕಟ್ಟಾ ವಿರೋಧಿಗಳಾದರು. ಇದೇ ರೀತಿ ಹತ್ಯಾಕಾಂಡದ ವೇಳೆ ಕೋಟ್ಯಂತರ ರೂ. ನಷ್ಟ ಅನುಭವಿಸಿದ ಜಾಫರ್‌ ಸರೇಶ್‌ವಾಲಾ ಎಂಬ ಉದ್ಯಮಿಯೂ ಮೋದಿ ವಿರೋಧಿಯಾಗಿದ್ದರು. ಮೋದಿ ವಿರುದ್ಧ ಲಂಡನ್‌ನಲ್ಲಿಯೂ ಸರೇಶ್‌ವಾಲಾ ಅಪಪ್ರಚಾರ ಮಾಡಿದ್ದರು. ಆದರೆ, ಸರೇಶ್‌ವಾಲಾ ೨೦೦೫ರಲ್ಲಿ ಲಂಡನ್‌ನಲ್ಲಿ ವಾಸಿಸಲು ತೀರ್ಮಾನಿಸಿದಾಗ ಕರೆ ಮಾಡಿದ ಮೋದಿ, “ಎಷ್ಟು ದಿನ ಬ್ರಿಟಿಷರ ಸೇವೆ ಮಾಡುತ್ತೀರಿ? ನಿಮ್ಮ ಅಗತ್ಯ ದೇಶಕ್ಕಿದೆ” ಎಂದರು. ಇದಾದ ಬಳಿಕ ಸರೇಶ್‌ವಾಲಾ ಮೋದಿ ಅವರಿಗೆ ಆಪ್ತರಾದರು. ಯಾರು ಮೋದಿ ವಿರುದ್ಧ ಮಾತನಾಡಿದರೋ, ಅದೇ ಸರೇಶ್‌ವಾಲಾ ಮೋದಿ ಪರ ಮಾತನಾಡಿದರು.

೧೦. ಮೋದಿ ಕುರಿತು ೨ ತಿಂಗಳಲ್ಲಿ ೪೦ ಪುಸ್ತಕ

ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ದೇಶಾದ್ಯಂತ ಖ್ಯಾತಿ ಗಳಿಸಿದರೂ ಅವರ ಜೀವನ ಚಿತ್ರಣ ಹರವುವ ಪುಸ್ತಕಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದವು. ಆದರೆ, ೨೦೧೪ರಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ, ಪ್ರಧಾನಿಯಾದರೋ, ಆಗ ಸಾಲು ಸಾಲು ಪುಸ್ತಕಗಳು ಬಿಡುಗಡೆಯಾದವು. ಒಂದು ವರದಿ ಪ್ರಕಾರ, ಮೋದಿ ಪ್ರಧಾನಿಯಾಗಿ ಎರಡು ತಿಂಗಳು ಆಗುವಷ್ಟರಲ್ಲಿಯೇ ಅವರ ಜೀವನ ಚರಿತ್ರೆ ಕುರಿತು ೪೦ ಪುಸ್ತಕಗಳು ಪ್ರಕಟವಾದವು ಎಂದು ತಿಳಿದುಬಂದಿದೆ. ಎಂಟು ವರ್ಷದಲ್ಲಂತೂ ಮೋದಿ ಕುರಿತು ನೂರಾರು ಪುಸ್ತಕಗಳು ಪ್ರಕಟವಾಗಿವೆ.

೧೧. ಕುಗ್ಗದ ಚುಂಬಕಶಕ್ತಿ, ಹಿಗ್ಗಿದ ಜನಪ್ರಿಯತೆ

ಜನಾಕ್ರೋಶವನ್ನು ಎದುರಿಸದೆ ಯಾವ ಸರ್ಕಾರವೂ ಆಡಳಿತ ನಡೆಸುವುದಿಲ್ಲ. ಅದರಂತೆ, ಮೋದಿ ಅವಧಿಯಲ್ಲಿ ಬೆಲೆಯೇರಿಕೆ, ಕೊರೊನಾ ಬಿಕ್ಕಟ್ಟು, ಆರ್ಥಿಕ ಹಿಂಜರಿತ, ಆಪರೇಷನ್‌ ಕಮಲ, ಕೃಷಿ ಕಾಯಿದೆಗೆ ವಿರೋಧ, ಸಿಎಎ ವಿರುದ್ಧ ಪ್ರತಿಭಟನೆ ಸೇರಿ ಹಲವು ರೀತಿಯಲ್ಲಿ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಈಗಲೂ ಬೆಲೆಯೇರಿಕೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹೀಗಿದ್ದರೂ, ಮೋದಿ ಅವರ ಜನಪ್ರಿಯತೆ, ಚುಂಬಕ ಶಕ್ತಿ ಕುಗ್ಗಿಲ್ಲ. ಈಗ ಚುನಾವಣೆ ನಡೆದರೂ ಮೋದಿ ಮತ್ತೆ ಜನರ ಮನಸ್ಸು ಗೆಲ್ಲಬಹುದು ಎನ್ನುವಷ್ಟರಮಟ್ಟಿಗೆ ಅವರು ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದಾರೆ. ಅಷ್ಟೇ ಏಕೆ, ಇತ್ತೀಚೆಗೆ ಮಾರ್ನಿಂಗ್‌ ಕನ್ಸಲ್ಟ್‌ ಎಂಬ ಜಾಗತಿಕ ಸಂಸ್ಥೆ ನಡೆಸಿದ ಸಮೀಕ್ಷೆಯು ಮೋದಿಯೇ ಜಗತ್ತಿನ ಜನಪ್ರಿಯ ನಾಯಕ ಎಂದು ತಿಳಿಸಿದೆ.

೧೨. ಬಾಲ್ಯದಲ್ಲಿ ಮೋದಿಗಿದ್ದ ಪೆಟ್‌ನೇಮ್‌ ಏನು?

ತುಂಬು ಕುಟುಂಬ, ಬಡತನದಲ್ಲಿ ಜನಿಸಿದ ಮೋದಿಗೆ ಬಾಲ್ಯದಲ್ಲಿ ಗೆಳೆಯರ ದೊಡ್ಡ ಬಳಗವೇ ಇತ್ತು. ಶಾಲೆಯಲ್ಲಂತೂ ಮೋದಿ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಹಾಗಾಗಿ, ಸಹಪಾಠಿಗಳು ಅವರನ್ನು “ಎನ್‌ಡಿ” (ನರೇಂದ್ರ ದಾಮೋದರ ದಾಸ್) ಎಂದು ಕರೆಯುತ್ತಿದ್ದರು. ಇನ್ನೂ ಕೆಲವರು ಪ್ರೀತಿಯಿಂದ “ನರಿಯಾ” ಎಂದೂ ಕರೆಯುತ್ತಿದ್ದರು.

೧೩. ಸನ್ಯಾಸಿ ನುಡಿದ ಭವಿಷ್ಯ ನಿಜವಾಯಿತು

ನರೇಂದ್ರ ಮೋದಿ ಅವರು ಚಿಕ್ಕವರಾಗಿದ್ದಾಗ ಅವರ ಮನೆಗೆ ಸನ್ಯಾಸಿಯೊಬ್ಬರು ಬಂದಿದ್ದರು. ಆಗ, ಮೋದಿ ಸಹೋದರ ಸೋಮ್‌ಭಾಯ್‌ ಅವರ ಜಾತಕ ನೋಡಿದ ಸಾಧು, “ಈತ ಎಲ್ಲರಂತೆ ಸಾಮಾನ್ಯ ಜೀವನ ಸಾಗಿಸುತ್ತಾನೆ” ಎಂದು ಹೇಳುತ್ತಾರೆ. ನಂತರ ಮೋದಿ ಜಾತಕ ನೋಡಿದ ಸನ್ಯಾಸಿ, “ಒಂದೋ ಈತ ಸನ್ಯಾಸಿಯಾಗುತ್ತಾನೆ, ಇಲ್ಲವೇ ದೊಡ್ಡ ರಾಜಕಾರಣಿಯಾಗುತ್ತಾನೆ” ಎಂದಿದ್ದರು. ಸನ್ಯಾಸಿಯಾಗುವ ದಿಸೆಯಲ್ಲಿ ಮೋದಿ ಬಂಗಾಳದ ಒಂದು ಆಶ್ರಮಕ್ಕೆ ಹೋಗಿದ್ದರು. ಹಿಮಾಲಯದಲ್ಲೂ ಒಂದಷ್ಟು ದಿನ ಕಳೆದರು. ಆದರೆ, ಕೊನೆಗೆ ಅವರು ರಾಜಕಾರಣಿಯಾದರು. ಜಗತ್ತೇ ಮೆಚ್ಚುವ ನಾಯಕನಾಗಿಯೂ ಹೊರಹೊಮ್ಮಿದರು.

೧೪. ಕವಿ, ಛಾಯಾಗ್ರಾಹಕ, ಗಾಳಿಪಟ ಪ್ರೇಮಿ

ರಾಜಕೀಯ, ಭಾಷಣ, ಯೋಜನೆ, ವಿದೇಶ ಪ್ರವಾಸ ಎಂದು ಬ್ಯುಸಿಯಾಗಿರುವ ನರೇಂದ್ರ ಮೋದಿ ಅವರು ಕವಿ ಎಂಬುದು ತುಂಬ ಜನರಿಗೆ ಗೊತ್ತಿರಲಿಕ್ಕಿಲ್ಲ. ಗುಜರಾತಿ ಭಾಷೆಯಲ್ಲಿ ಮೋದಿ ಅವರು ಬರೆದ ಕವನ ಸಂಕಲನಗಳು, ಲೇಖನಗಳು ಪ್ರಕಟವಾಗಿವೆ. ಬಿಡುವಿದ್ದಾಗ ಅವರು ಫೋಟೊಗ್ರಫಿಯನ್ನೂ ಮಾಡುತ್ತಾರೆ. ಹಾಗೆಯೇ, ಬಾಲ್ಯದಲ್ಲಿ ಗಾಳಿಪಟ ಹಾರಿಸುವುದು ನರೇಂದ್ರ ಮೋದಿ ಅವರಿಗೆ ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು. ಶಾಲಾ ಮಟ್ಟದ ನಾಟಕಗಳಲ್ಲೂ ಮೋದಿ ಅಭಿನಯಿಸಿದ್ದಾರೆ.

೧೫. ಮೋದಿ ಜಾಕೆಟ್‌ಗೂ ಜಾಗತಿಕ ಮನ್ನಣೆ

ನರೇಂದ್ರ ಮೋದಿ ಅವರು ಸೂಟು-ಬೂಟು ಹಾಕಿಕೊಂಡು ವಿದೇಶಕ್ಕೆ ತೆರಳಿದ್ದು ಟೀಕೆಗೊಳಗಾಯಿತು. ಪ್ರತಿಪಕ್ಷಗಳು ಇದು ಸೂಟು ಬೂಟಿನ ಸರ್ಕಾರ ಎಂದು ಟೀಕಿಸಿದವು. ಆದರೆ, ಮೋದಿ ಅವರು ಜಾಕೆಟ್‌ ಧರಿಸುವ ಮೂಲಕ, ಆ ಜಾಕೆಟ್‌ಗಳು “ಮೋದಿ ಜಾಕೆಟ್”‌ ಎಂದೇ ಖ್ಯಾತಿಯಾಗುವಂತೆ ಮಾಡಿದರು. ೧೯೬೦ರ ದಶಕದಲ್ಲಿ “ನೆಹರು ಜಾಕೆಟ್”‌ ಎಷ್ಟು ಖ್ಯಾತಿ ಗಳಿಸಿದ್ದವೋ, ಮೋದಿ ಅವಧಿಯಲ್ಲಿ ದೇಶಾದ್ಯಂತ “ಮೋದಿ ಜಾಕೆಟ್‌”ಗಳು ಖ್ಯಾತಿ ಗಳಿಸಿದವು. ಈ ಕ್ರೇಜ್‌ ಎಷ್ಟರಮಟ್ಟಿಗೆ ಹೆಚ್ಚಾಯಿತೆಂದರೆ, ದಕ್ಷಿಣ ಕೊರಿಯಾದ ಆಗಿನ ಅಧ್ಯಕ್ಷ ಮೂನ್‌ ಜೇ ಇನ್‌ ಅವರು ಭಾರತಕ್ಕೆ ಆಗಮಿಸಿದ್ದಾಗ ಮೋದಿ ಜಾಕೆಟ್‌ ಧರಿಸಿದ್ದರು.

ಮೋದಿ ಜಾಕೆಟ್‌ನಲ್ಲಿ ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಮೂನ್‌ ಜೇ ಇನ್.

೧೬. ಯುದ್ಧದ ವೇಳೆ ಸೈನಿಕರಿಗೆ “ಚಹಾ” ನೆರವು

ನರೇಂದ್ರ ಮೋದಿ ಅವರ ತಂದೆ ದಾಮೋದಾರ ದಾಸ್‌ ಅವರು ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದರು. ೧೯೬೫ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ನಡೆದಾಗ ಮೋದಿ ಅವರೂ ರೈಲು ನಿಲ್ದಾಣದಲ್ಲಿ ಯೋಧರಿಗೆ ಚಹಾ ನೀಡುತ್ತಿದ್ದರು. ರಣರಂಗದಿಂದ ಬರುವ ಹಾಗೂ ರಣರಂಗಕ್ಕೆ ಹೊರಡುವ ಯೋಧರಿಗೆ ಮಸಾಲ ಚಹಾ ನೀಡುವ ಮೂಲಕ ಮೋದಿ ದೇಶಪ್ರೇಮೆ ಮೆರೆದಿದ್ದರು.

೧೭. ವೀಸಾ ನಿರಾಕರಿಸಿದವರೇ ಆಮಂತ್ರಿಸಿದರು

ಹೀಗಳೆದವರು, ತುಚ್ಚವಾಗಿ ನೋಡಿದವರು, ಟೀಕಿಸಿದವರೇ ತಿರುಗಿ ನೋಡುವಂತೆ, ಬಂದು ಕೈಕುಲುಕುವಂತೆ ಮಾಡುವುದು ನರೇಂದ್ರ ಮೋದಿ ಅವರ ವ್ಯಕ್ತಿತ್ವದ ಭಾಗವೇ ಆಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮೋದಿ ಗುಜರಾತ್‌ ಪ್ರಧಾನಿಯಾಗಿದ್ದಾಗ ಗೋಧ್ರಾ ಹತ್ಯಾಕಾಂಡದ ಹೆಸರಿನಲ್ಲಿ ಅವರಿಗೆ ವೀಸಾ ನೀಡದಿರುವುದು ಹಾಗೂ ಪ್ರಧಾನಿಯಾಗುತ್ತಲೇ ಅವರನ್ನು ಅಪ್ಪಿ ಸ್ವಾಗತಿಸಿರುವುದು. ಅಷ್ಟೇ ಅಲ್ಲ, ೨೦೧೫ರಲ್ಲಿ ಆಗ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮ ಅವರು ಮೋದಿ ಕರೆಗೆ ಓಗೊಟ್ಟು ಭಾರತಕ್ಕೂ ಬರುತ್ತಾರೆ. ಆ ಮೂಲಕ ಅಧಿಕಾರದಲ್ಲಿದ್ದಾಗಲೇ ಭಾರತಕ್ಕೆ ಭೇಟಿ ನೀಡಿದ ಅಮೆರಿಕದ ಮೊದಲ ಅಧ್ಯಕ್ಷ ಎಂಬ ಖ್ಯಾತಿಗೆ ಭಾಜನರಾಗುತ್ತಾರೆ.

೧೮. ಸಣ್ಣ ವಿಷಯಗಳಿಗೂ ಆದ್ಯತೆ

ನರೇಂದ್ರ ಮೋದಿ ಧೀಮಂತ ನಾಯಕರಾದರೂ ಸಣ್ಣ ಸಣ್ಣ ವಿಷಯಗಳಿಗೂ ಆದ್ಯತೆ ನೀಡುವುದು, ಚಿಕ್ಕ ಚಿಕ್ಕ ಸಂಗತಿಗಳನ್ನು ಗಮನಿಸುವುದು, ಪ್ರತಿಯೊಬ್ಬರ ಹೆಸರನ್ನೂ ನೆನಪಿಟ್ಟುಕೊಳ್ಳುವುದು ಮೋದಿ ಅವರಿಗೆ ಕರಗತವಾಗಿದೆ. ಅವರು ಮಕ್ಕಳ ಜತೆ ಮಾತನಾಡುವಾಗ ಪಬ್ಜಿ ಉದಾಹರಣೆ ನೀಡುತ್ತಾರೆ, ವೇದಿಕೆಗಳ ಭಾಷಣದ ವೇಳೆ ಗಣ್ಯರ ಹೇಳಿಕೆ ಕೋಟ್‌ ಮಾಡುತ್ತಾರೆ, ವಿಶೇಷ ಸಂದರ್ಭಗಳನ್ನು ನೆನಪಿಸುತ್ತಾರೆ, ದೇವೇಗೌಡರ ಮಂಡಿನೋವು ಅವರಿಗೆ ನೆನಪಿರುತ್ತದೆ. ಇನ್ನು ಅವರು ಹೋಗುವ ಯಾವುದೇ ಕಾರ್ಯಕ್ರಮದ ಫೋಟೊ, ವಿಡಿಯೊ ಮಿಸ್‌ ಆಗುವುದಿಲ್ಲ. ವಿರೋಧಿಗಳು ಟೀಕಿಸಿದರೂ ಅವರು ಫೋಟೊಗೆ ಪೋಸ್‌ ನೀಡುವುದು ಬಿಡುವುದಿಲ್ಲ.

೧೯. ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿ

ಭಾರತ ಸ್ವಾತಂತ್ರ್ಯ ಗಳಿಸಿದ ಬಳಿಕ ಜನಿಸಿದವರಲ್ಲಿ ಪ್ರಧಾನಿಯಾದ ಮೊದಲ ವ್ಯಕ್ತಿ ಎಂಬ ಖ್ಯಾತಿಗೆ ಮೋದಿ ಭಾಜನರಾಗಿದ್ದಾರೆ. ಇದುವರೆಗೆ ದೇಶದ ಪ್ರಧಾನಿಯಾದವರೆಲ್ಲ ಸ್ವಾತಂತ್ರ್ಯ ಸಿಗುವುದಕ್ಕಿಂತ ಮೊದಲು ಜನಿಸಿದ್ದರು. ಆದರೆ, ಮೋದಿ ಅವರು ೧೯೫೦ ಸೆಪ್ಟೆಂಬರ್‌ ೧೭ರಂದು ಜನಿಸಿದರು. ಹೀಗೆ ಸ್ವಾತಂತ್ರ್ಯೋತ್ತರದಲ್ಲಿ ಜನಿಸಿ, ಪ್ರಧಾನಿ ಹುದ್ದೆಗೇರಿದ ಮೊದಲ ವ್ಯಕ್ತಿ ಎಂಬ ಖ್ಯಾತಿ ಮೋದಿ ಅವರದ್ದಾಗಿದೆ.

೨೦. ಊಟದ ವೆಚ್ಚ ಅವರೇ ಭರಿಸುತ್ತಾರೆ

ನರೇಂದ್ರ ಮೋದಿ ಅವರು ಅಣಬೆ (ಮಶ್ರೂಮ್)‌ ತಿನ್ನುತ್ತಾರೆ, ಅದಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತದೆ ಎಂಬ ಆರೋಪವಿದೆ. ಆದರೆ, ನರೇಂದ್ರ ಮೋದಿ ಅವರು ತಮ್ಮ ಊಟದ ವೆಚ್ಚವನ್ನು ತಾವೇ ಭರಿಸುತ್ತಾರೆ. ಇದಕ್ಕಾಗಿ ಸರ್ಕಾರದ ಒಂದು ರೂಪಾಯಿಯನ್ನೂ ಪಡೆಯುವುದಿಲ್ಲ ಎಂದು ಆರ್‌ಟಿಇ ಅಡಿಯಲ್ಲಿ ಇತ್ತೀಚೆಗೆ ಕೇಳಿದ ಪ್ರಶ್ನೆಗೆ ಪಿಎಂಒ ಉತ್ತರಿಸಿದೆ. “ನರೇಂದ್ರ ಮೋದಿ ಅವರು ತಮ್ಮ ಆಹಾರದ ವೆಚ್ಚವನ್ನು ತಾವೇ ಭರಿಸುತ್ತಾರೆ. ಇದಕ್ಕೆ ಸರ್ಕಾರದ ಬಜೆಟ್‌ನಿಂದ ಒಂದು ರೂಪಾಯಿಯೂ ಖರ್ಚಾಗುವುದಿಲ್ಲ” ಎಂದು ಪಿಎಂಒ ಪ್ರತಿಕ್ರಿಯಿಸಿದೆ.

ಇದನ್ನೂ ಓದಿ | National Logistics policy | ಹುಟ್ಟು ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಕೊಡುಗೆ: ರಾಷ್ಟ್ರೀಯ ಲಾಜಿಸ್ಟಿಕ್ಸ್‌ ನೀತಿಗೆ ಚಾಲನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ರಾಮಲಲ್ಲಾನಿಗೆ ಮೋದಿ ಸಾಷ್ಟಾಂಗ ನಮಸ್ಕಾರ; ಇಲ್ಲಿವೆ ಅಯೋಧ್ಯೆ ಭೇಟಿ Photos

Narendra Modi: Narendra Modi: ರಾಮಲಲ್ಲಾ ದರ್ಶನ ಪಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್‌ ಶೋ ಕೈಗೊಳ್ಳುತ್ತಿದ್ದಾರೆ. ಸುಗ್ರೀವ ಕೋಟೆಯಿಂದ ಪ್ರಾರಂಭವಾಗಿ ಲತಾ ಚೌಕ್‌ವರೆಗೆ ಮೋದಿ ರೋಡ್‌ ಶೋ ಕೈಗೊಂಡರು. ನರೇಂದ್ರ ಮೋದಿ ಅವರು ಸಾಗುವ ದಾರಿಯುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲ್ಲೆಡೆ ಜೈಶ್ರೀರಾಮ್‌ ಎಂಬ ಘೋಷಣೆಗಳು ಮೊಳಗಿದವು.

VISTARANEWS.COM


on

Narendra Modi
Koo

ಅಯೋಧ್ಯೆ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ, ದೇಶಾದ್ಯಂತ ಸಾಲು ರ‍್ಯಾಲಿಗಳ ಭರಾಟೆಯ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಯೋಧ್ಯೆಗೆ ತೆರಳಿ, ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಕಳೆದ ಜನವರಿ 22ರಂದು ರಾಮಮಂದಿರದಲ್ಲಿ (Ram Mandir) ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ್ದ ನರೇಂದ್ರ ಮೋದಿ ಅವರೀಗ ಮತ್ತೆ ಅಯೋಧ್ಯೆಗೆ ತೆರಳಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಇದೇ ವೇಳೆ ಅವರು ರಾಮಲಲ್ಲಾನಿಗೆ ವಿಶೇಷ ಪೂಜೆ ಸಲ್ಲಿಸುವ ಜತೆಗೆ ದೀರ್ಘದಂಡ ನಮಸ್ಕಾರ ಹಾಕಿದರು.

ಕಳೆದ ಜನವರಿ 22ರಂದು ನರೇಂದ್ರ ಮೋದಿ ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ಮಾಡಿದ ಬಳಿಕ ಮಾಡಿದ ಬಳಿಕ ರಾಮಮಂದಿರಕ್ಕೆ ಮೊದಲ ಬಾರಿ ಭೇಟಿ ನೀಡಿದರು.

ರಾಮನಗರಿ ಅಯೋಧ್ಯೆಯಲ್ಲಿ ಭರ್ಜರಿ ರೋಡ್‌ ಶೋ ಕೈಗೊಳ್ಳುವ ಮೊದಲು ಮೋದಿ ಅವರು ರಾಮಲಲ್ಲಾನಿಗೆ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಮೋದಿ ಭೇಟಿ ಹಿನ್ನೆಲೆಯಲ್ಲಿ ರಾಮಮಂದಿರದ ಸುತ್ತ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಅಯೋಧ್ಯೆ ಭೇಟಿ ನೀಡುವ ಮೊದಲು ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ದೌರಾಹ್ರ ಲೋಕಸಭೆ ಕ್ಷೇತ್ರದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡರು.

ರಾಮಲಲ್ಲಾ ದರ್ಶನದ ಬಳಿಕ ಮೋದಿ ಅವರು ಅಯೋಧ್ಯೆಯಲ್ಲಿ ಸುಮಾರು ಎರಡು ಕಿಲೋಮೀಟರ್‌ವರೆಗೆ ರೋಡ್‌ ಶೋ ನಡೆಸಿದರು. ಮಾರ್ಗದುದ್ದಕ್ಕೂ ನೆರೆದಿದ್ದ ಜನ ಹೂಮಳೆ ಸುರಿಸಿ ಅಭಿಮಾನ ಮೆರೆದರು.

ರೋಡ್‌ ಶೋಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಕೂಡ ಸಾಥ್‌ ನೀಡಿದ್ದಾರೆ. ಇನ್ನು, ರೋಡ್‌ ಶೋ ಉದ್ದಕ್ಕೂ ಜನ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರು.

ಉತ್ತರ ಪ್ರದೇಶದಲ್ಲಿ ಮೂರನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, 10 ಲೋಕಸಭಾ ಕ್ಷೇತ್ರದಲ್ಲಿ ಮೇ 7 ಮತದಾನ ನಡೆಯಲಿದೆ. ಅಯೋಧ್ಯೆಯಲ್ಲಿ ಮೇ 20ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ.

ಇದನ್ನೂ ಓದಿ: Narendra Modi: ಮತಬ್ಯಾಂಕ್‌ ಗುತ್ತಿಗೆದಾರರ ಸ್ನೇಹಕ್ಕೆ ಮುಸ್ಲಿಮರು ವಿದಾಯ; ಕಾಂಗ್ರೆಸ್‌ಗೆ ಮೋದಿ ಟಾಂಗ್!

Continue Reading

ದೇಶ

Narendra Modi: ಮತಬ್ಯಾಂಕ್‌ ಗುತ್ತಿಗೆದಾರರ ಸ್ನೇಹಕ್ಕೆ ಮುಸ್ಲಿಮರು ವಿದಾಯ; ಕಾಂಗ್ರೆಸ್‌ಗೆ ಮೋದಿ ಟಾಂಗ್!

Narendra Modi: ಉತ್ತರ ಪ್ರದೇಶದ ದೌರಾಹ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರ‍್ಯಾಲಿ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, “ದೇಶದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಯಾವುದೇ ಜಾತಿ, ಧರ್ಮದ ತಾರತಮ್ಯ ಇಲ್ಲದೆ ಜನರಿಗೆ ತಲುಪುತ್ತಿವೆ. ಮುಸ್ಲಿಂ ಸಹೋದರ-ಸಹೋದರಿಯರು ಕೂಡ ನೋಡುತ್ತಿದ್ದಾರೆ. ಪಿಎಂ ಆವಾಸ್‌ ಯೋಜನೆ, ಉಜ್ವಲ ಯೋಜನೆ ಸೇರಿ ಎಲ್ಲ ಯೋಜನೆಗಳ ಸೌಲಭ್ಯಗಳು ಮುಸ್ಲಿಮರಿಗೂ ತಲುಪುತ್ತಿವೆ” ಎಂದು ತಿಳಿಸಿದರು.

VISTARANEWS.COM


on

Narendra Modi
Koo

ಲಖನೌ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಮೇ 5) ಉತ್ತರ ಪ್ರದೇಶದಲ್ಲಿ (Uttar Pradesh) ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ದೌರಾಹ್ರದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಅದರಲ್ಲೂ, “ಮುಸ್ಲಿಮರು ಈಗ ಮತಬ್ಯಾಂಕ್‌ನ ಗುತ್ತಿಗೆದಾರರಿಂದ ಪ್ರತ್ಯೇಕವಾಗಿದ್ದಾರೆ. ಅವರು ಅಭಿವೃದ್ಧಿಯ ಪರವಾಗಿದ್ದಾರೆ” ಎಂದು ಕಾಂಗ್ರೆಸ್‌ಗೆ ಮೋದಿ ಟಾಂಗ್‌ ಕೊಟ್ಟರು.

“ದೇಶದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಯಾವುದೇ ಜಾತಿ, ಧರ್ಮದ ತಾರತಮ್ಯ ಇಲ್ಲದೆ ಜನರಿಗೆ ತಲುಪುತ್ತಿವೆ. ಮುಸ್ಲಿಂ ಸಹೋದರ-ಸಹೋದರಿಯರು ಕೂಡ ನೋಡುತ್ತಿದ್ದಾರೆ. ಪಿಎಂ ಆವಾಸ್‌ ಯೋಜನೆ, ಉಜ್ವಲ ಯೋಜನೆ ಸೇರಿ ಎಲ್ಲ ಯೋಜನೆಗಳ ಸೌಲಭ್ಯಗಳು ಮುಸ್ಲಿಮರಿಗೂ ತಲುಪುತ್ತಿವೆ. ಯಾವುದೇ ಭೇದ-ಭಾವ ಇಲ್ಲದೆ, ಪ್ರತಿಯೊಬ್ಬರಿಗೂ ಯೋಜನೆಗಳು ತಲುಪುತ್ತವೆ. ಹಾಗಾಗಿ, ಮುಸ್ಲಿಮರು ಕೂಡ ಮತಬ್ಯಾಂಕ್‌ನ ಗುತ್ತಿಗೆದಾರರ ಸಹವಾಸ ಬಿಟ್ಟಿದ್ದಾರೆ” ಎಂದು ಹೇಳಿದರು.

“ಮುಸ್ಲಿಮರನ್ನು ಕಾಂಗ್ರೆಸ್‌ ಸೇರಿ ಇಂಡಿಯಾ ಒಕ್ಕೂಟದ ಪಕ್ಷಗಳು ಮತಬ್ಯಾಂಕ್‌ಗಾಗಿ ಬಳಸಿಕೊಂಡವು. ಆದರೆ, ಈಗ ಮುಸ್ಲಿಮರು ಅಂತ ತುಷ್ಟೀಕರಣದ ಕುತಂತ್ರದಿಂದ ಹೊರಬಂದಿದ್ದಾರೆ. ಆದರೆ, ಕಾಂಗ್ರೆಸ್‌ ಸೇರಿ ಇಂಡಿಯಾ ಒಕ್ಕೂಟದ ಪಕ್ಷಗಳು ಮಾತ್ರ ಈಗಲೂ ಓಲೈಕೆಯಲ್ಲಿಯೇ ತೊಡಗಿವೆ. ಮುಸ್ಲಿಮರನ್ನು ಮತ ಬ್ಯಾಂಕ್‌ಗಾಗಿಯೇ ಬಳಸಿಕೊಳ್ಳಲು ಯತ್ನಿಸುತ್ತಿವೆ. ಇದೇ ಕಾರಣಕ್ಕಾಗಿಯೇ, ಮುಸ್ಲಿಂ ಲೀಗ್‌ನ ಪ್ರತಿರೂಪದಂತಿರುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ” ಎಂಬುದಾಗಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

“2014ಕ್ಕಿಂತ ಮೊದಲು ದೇಶದಲ್ಲಿ ತುಷ್ಟೀಕರಣದ ಆಡಳಿತ ನಡೆಯುತ್ತಿತ್ತು. ಉಗ್ರವಾದದ ವಿರುದ್ಧ ಕ್ರಮ ತೆಗೆದುಕೊಳ್ಳಲು ತನಿಖಾ ಸಂಸ್ಥೆಗಳಿಗೆ ಅಧಿಕಾರವೇ ಇರಲಿಲ್ಲ. ಇನ್ನು, ಸಮಾಜವಾದಿ ಪಕ್ಷವಂತೂ ಉಗ್ರರ ವಿರುದ್ಧದ ಪ್ರಕರಣಗಳನ್ನು ವಾಪಸ್‌ ಪಡೆಯುತ್ತಿತ್ತು. ಆದರೀಗ ಉಗ್ರರನ್ನು ಹೆಡೆಮುರಿ ಕಟ್ಟಲಾಗುತ್ತಿದೆ. ನನಗೆ ಕುಟುಂಬ ಇಲ್ಲ. ಆದರೆ, ದೇಶದ ಜನರೇ ನನ್ನ ಕುಟುಂಬ. ಜನರ ಏಳಿಗೆಗಾಗಿ, ವಿಕಸಿತ ಭಾರತದ ನಿರ್ಮಾಣಕ್ಕಾಗಿ ನಾನು ನಿರಂತರವಾಗಿ ಶ್ರಮಿಸುತ್ತೇನೆ” ಎಂದರು.

ಇದನ್ನೂ ಓದಿ: Pralhad Joshi: ಕಾಂಗ್ರೆಸ್‌ನಿಂದ ಮೋದಿ ಎಂಬ ಆಕಾಶಕ್ಕೆ ಉಗುಳೋ ಕೃತ್ಯ: ಪ್ರಲ್ಹಾದ್ ಜೋಶಿ

Continue Reading

ದೇಶ

ಪಿಒಕೆ ನಮ್ಮದು ಎಂದಿದ್ದಕ್ಕೆ ಪಾಕ್ ಬಳೆ ತೊಟ್ಟಿಲ್ಲ ಎಂದ ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ!‌ ಇವರ ಬೆಂಬಲ ಯಾರಿಗೆ?

ಪಿಒಕೆ ನಾಗರಿಕರೇ ಭಾರತದೊಂದಿಗೆ ವಿಲೀನವಾಗಲು ಬಯಸುತ್ತಿದ್ದಾರೆ. ಪಿಒಕೆ ಮೊದಲು ಕೂಡ ನಮ್ಮದಾಗಿತ್ತು. ಮುಂದೆಯೂ ನಮ್ಮದಾಗಿ ಇರಲಿದೆ. ಹಾಗಂತ, ಪಿಒಕೆಗೆ ಸೈನಿಕರನ್ನೇ ಕಳುಹಿಸಬೇಕಾಗಿಲ್ಲ. ಅಲ್ಲಿನ ಜನರೇ, ಭಾರತದೊಂದಿಗೆ ವಿಲೀನವಾಗಲು ಬಯಸುತ್ತಿದ್ದಾರೆ ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಫಾರೂಕ್‌ ಅಬ್ದುಲ್ಲಾ, ಪಾಕಿಸ್ತಾನವೇನೂ ಬಳೆ ತೊಟ್ಟುಕೊಂಡು ಕೂತಿಲ್ಲ ಎಂದು ಹೇಳಿದ್ದಾರೆ.

VISTARANEWS.COM


on

Farooq Abdullah
Koo

ಶ್ರೀನಗರ: ಲೋಕಸಭೆ ಚುನಾವಣೆ (Lok Sabha Election 2024) ಹೊತ್ತಿನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರ (PoK) ಕುರಿತು ಮಹತ್ವದ ಚರ್ಚೆಯೊಂದು ಶುರುವಾಗಿದೆ. “ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತ ವಶಪಡಿಸಿಕೊಳ್ಳುವುದು, ಸೇನೆಯನ್ನು ನುಗ್ಗಿಸಿ ವಾಪಸ್‌ ಪಡೆಯುವುದು ಬೇಕಾಗಿಲ್ಲ. ಅಲ್ಲಿನ ಜನರೇ ಭಾರತದ ಜತೆ ವಿಲೀನವಾಗಲು ಬಯಸುತ್ತಿದ್ದಾರೆ” ಎಂಬುದಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಹೇಳಿದ್ದಾರೆ. ಇನ್ನು ಇದಕ್ಕೆ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ (Farooq Abdullah) ಪ್ರತಿಕ್ರಿಯಿಸಿದ್ದು, “ಭಾರತ ಆಕ್ರಮಣ ಮಾಡುವುದು ಬೇಕಾಗಿಲ್ಲ. ಪಾಕಿಸ್ತಾನವೇನೂ ಬಳೆ ತೊಟ್ಟಿಲ್ಲ” ಎಂದು ಹೇಳಿದ್ದಾರೆ. ಇದು ಈಗ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.

ರಾಜನಾಥ್‌ ಸಿಂಗ್‌ ಹೇಳಿದ್ದೇನು?

ಪಿಟಿಐಗೆ ಸಂದರ್ಶನ ನೀಡುವ ವೇಳೆ ರಾಜನಾಥ್‌ ಸಿಂಗ್‌ ಹೇಳಿಕೆ ನೀಡಿದ್ದರು. “ಪಿಒಕೆ ವಿಚಾರದಲ್ಲಿ ಭಾರತ ಏನೂ ಮಾಡಬೇಕಿಲ್ಲ. ಜಮ್ಮು-ಕಾಶ್ಮೀರದ ಪರಿಸ್ಥಿತಿ ಬದಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸುವ ಜತೆಗೆ ಆರ್ಥಿಕ ಪ್ರಗತಿಯಾಗುತ್ತಿದೆ. ಇದರಿಂದಾಗಿ ನಾವು ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಬೇಕಿಲ್ಲ. ಪಿಒಕೆ ನಾಗರಿಕರೇ ಭಾರತದೊಂದಿಗೆ ವಿಲೀನವಾಗಲು ಬಯಸುತ್ತಿದ್ದಾರೆ. ಪಿಒಕೆ ಮೊದಲು ಕೂಡ ನಮ್ಮದಾಗಿತ್ತು. ಮುಂದೆಯೂ ನಮ್ಮದಾಗಿ ಇರಲಿದೆ. ಹಾಗಂತ, ಪಿಒಕೆಗೆ ಸೈನಿಕರನ್ನೇ ಕಳುಹಿಸಬೇಕಾಗಿಲ್ಲ. ಅಲ್ಲಿನ ಜನರೇ, ಭಾರತದೊಂದಿಗೆ ವಿಲೀನವಾಗಲು ಬಯಸುತ್ತಿದ್ದಾರೆ” ಎಂಬುದಾಗಿ ರಾಜನಾಥ್‌ ಸಿಂಗ್‌ ಹೇಳಿದ್ದರು.

ಫಾರೂಕ್‌ ಅಬ್ದುಲ್ಲಾ ಪ್ರತಿಕ್ರಿಯೆ ಏನು?

ಸುದ್ದಿಗೋಷ್ಠಿ ನಡೆಸಿದ ಜಮ್ಮು-ಕಾಶ್ಮೀರ ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ, ರಾಜನಾಥ್‌ ಸಿಂಗ್‌ ಹೇಳಿಕೆಗೆ ಪ್ರತಿಕ್ರಿಯಿಸಿದರು. “ದೇಶದ ರಕ್ಷಣಾ ಸಚಿವರು ಪಿಒಕೆ ಮೇಲೆ ದಾಳಿ ಮಾಡಿ ಎಂಬುದಾಗಿ ಹೇಳಿದರೆ, ಅದನ್ನು ತಡೆಯಲು ನಾವು ಯಾರು? ಆದರೆ, ಒಂದು ನೆನಪಿರಲಿ. ಪಾಕಿಸ್ತಾನವೇನೂ ಬಳೆ ತೊಟ್ಟುಕೊಂಡು ಕೂತಿಲ್ಲ. ಅವರ ಬಳಿಯೂ ಪರಮಾಣು ಬಾಂಬ್‌ಗಳಿವೆ. ಆ ಪರಮಾಣು ಬಾಂಬ್‌ಗಳು ನಮ್ಮ ಮೇಲೆ ಬಂದು ಬೀಳುತ್ತವೆ” ಎಂಬುದಾಗಿ ಫಾರೂಕ್‌ ಅಬ್ದುಲ್ಲಾ ಎಚ್ಚರಿಸಿದ್ದಾರೆ.

ಜೈಶಂಕರ್‌ ಕೂಡ ಮಹತ್ವದ ಹೇಳಿಕೆ

ಪಿಒಕೆ ಕುರಿತು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಕೂಡ ಹೇಳಿಕೆ ನೀಡಿದ್ದಾರೆ. “ಪಿಒಕೆ ಭಾರತದ ಭಾಗವಾಗಿದೆ. ಪಿಒಕೆ ಭಾರತದ ಭಾಗ ಎಂಬುದಾಗಿ ಸಂಸತ್ತಿನಲ್ಲೂ ನಿರ್ಣಯ ತೆಗೆದುಕೊಳ್ಳಲಾಗಿದೆ. ಪಿಒಕೆ ಮೊದಲು ಕೂಡ ನಮ್ಮದಾಗಿತ್ತು. ಆದರೆ, ಅದನ್ನು ಅತಿಕ್ರಮಣ ಮಾಡಿಕೊಳ್ಳಲು ಕಾರಣರಾದವರು ಯಾರು? ಅದರ ಮೇಲೆ ಬೇರೆಯವರು ನಿಯಂತ್ರಣ ಸಾಧಿಸಲು ಯಾರು ಕಾರಣ” ಎಂಬುದಾಗಿ ಪರೋಕ್ಷವಾಗಿ ಕಾಂಗ್ರೆಸ್‌ಗೆ ಕುಟುಕಿದರು. ಇದಕ್ಕೂ ಮೊದಲು ಕೂಡ, ಅಮಿತ್‌ ಶಾ ಅವರು ಪಿಒಕೆ ನಮ್ಮದೇ ಎಂದು ಹೇಳಿದ್ದರು.

ಇದನ್ನೂ ಓದಿ: ಚೀನಾ ದಯೆಯಿಂದ ಮೊದಲ ಚಂದ್ರಯಾನ ಕೈಗೊಂಡ ಪಾಕಿಸ್ತಾನ; ಆದರೂ ಭಾರತಕ್ಕಿಂತ 16 ವರ್ಷ ಹಿಂದೆ!

Continue Reading

ದೇಶ

Air India: ವಿಮಾನ ಪ್ರಯಾಣಿಕರೇ ಗಮನಿಸಿ, ಚೆಕ್-ಇನ್ ಬ್ಯಾಗೇಜ್ ಭಾರದ ಮಿತಿ ಇಳಿಕೆ!

ಏರ್ ಇಂಡಿಯಾವು ದೇಶೀಯ ವಿಮಾನಗಳಲ್ಲಿ ಉಚಿತ ಚೆಕ್-ಇನ್ ಬ್ಯಾಗೇಜ್ ಭತ್ಯೆಯನ್ನು 20 ಕೆ.ಜಿ.ಯಿಂದ 15 ಕೆ.ಜಿ.ಗೆ ಇಳಿಕೆ (Air India) ಮಾಡಲಾಗಿದೆ. ಮೇ 2ರಿಂದಲೇ ಈ ಹೊಸ ನೀತಿ ಜಾರಿಯಾಗಿದೆ.

VISTARANEWS.COM


on

By

Air India
Koo

ವಿಮಾನ ಪ್ರಯಾಣದ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ ಗಮನಿಸಿ. ಏರ್ ಇಂಡಿಯಾವು (Air India) ದೇಶೀಯ ವಿಮಾನಗಳಲ್ಲಿ (domestic flights) ಲಗೇಜ್ ಭಾರವನ್ನು (check-in baggage) 20 ಕೆ.ಜಿ.ಯಿಂದ 15 ಕೆ.ಜಿ.ಗೆ ಇಳಿಕೆ ಮಾಡಿದೆ. ಇನ್ನು ಮುಂದೆ 15 ಕೆ.ಜಿ.ಗಿಂತ ಹೆಚ್ಚು ಸಾಮಗ್ರಿ ಒಯ್ಯುವುದಾದರೆ ಅದಕ್ಕೆ ಶುಲ್ಕ ಪಾವತಿ ಮಾಡಲೇಬೇಕು.


ದೇಶೀಯ ವಿಮಾನಗಳಲ್ಲಿ ಕಡಿಮೆ ಆರ್ಥಿಕ ದರದ ವಿಭಾಗದಲ್ಲಿ ಉಚಿತ ಚೆಕ್-ಇನ್ ಬ್ಯಾಗೇಜ್ ಭತ್ಯೆಯನ್ನು 20 ಕೆ.ಜಿ.ಯಿಂದ 15 ಕೆ.ಜಿ.ಗೆ ಇಳಿಕೆ ಮಾಡಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಟಾಟಾ ಗ್ರೂಪ್ (Tata Group) ಮಾಲೀಕತ್ವದ ಏರ್ ಇಂಡಿಯಾ ಪರಿಚಯಿಸಿದ ಮೆನು-ಆಧಾರಿತ ಬೆಲೆ ಮಾದರಿಯ ದರದ ಭಾಗವಾಗಿ ಈ ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಈ ಮೊದಲು ಏರ್ ಇಂಡಿಯಾದ ದೇಶೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 25 ಕೆ.ಜಿ. ಚೆಕ್-ಇನ್ ಬ್ಯಾಗೇಜ್ ಅನ್ನು ಸಾಗಿಸಲು ಅನುಮತಿಸಲಾಗಿತ್ತು. ಆದರೆ ಇತರ ದೇಶೀಯ ವಾಹಕಗಳಾದ ಇಂಡಿಗೊ, ವಿಸ್ತಾರಾ ಮತ್ತು ಸ್ಪೈಸ್ ಜೆಟ್ 15 ಕೆ.ಜಿ. ಚೆಕ್-ಇನ್ ಬ್ಯಾಗೇಜ್ ಅನ್ನು ನೀಡುತ್ತವೆ. ಬಳಿಕ ಹೆಚ್ಚುವರಿ ಶುಲ್ಕ ವಿಧಿಸುತ್ತಿದೆ.

ಹೇಗಿದೆ?

ಚೆಕ್-ಇನ್ ಬ್ಯಾಗೇಜ್ ನಲ್ಲಿ ಮೂರು ದರದ ಗುಂಪುಗಳಿವೆ. ಒಂದು ಕಂಫರ್ಟ್, ಎರಡನೆದ್ದು ಕಂಫರ್ಟ್ ಪ್ಲಸ್ ಮತ್ತು ಮೂರನೆಯದ್ದು ಫ್ಲೆಕ್ಸ್ . ಈ ಮೂರು ವಿಭಾಗಳಿಗೆ ಪ್ರತ್ಯೇಕ ದರ ನಿಗದಿ ಪಡಿಸಿರುವುದಾಗಿ ಏರ್ ಇಂಡಿಯಾ ವಕ್ತಾರರು ಶನಿವಾರ ತಿಳಿಸಿದ್ದಾರೆ. ವಿವಿಧ ಬೆಲೆಗಳಲ್ಲಿ ವಿಭಿನ್ನ ಮಟ್ಟದ ಪ್ರಯೋಜನಗಳನ್ನು ಗ್ರಾಹಕರು ಪಡೆಯಬಹುದಾಗಿದೆ.

ಈಗಾಗಲೇ ಜಾರಿ

ಚೆಕ್-ಇನ್ ಬ್ಯಾಗೇಜ್ ಮಿತಿಯನ್ನು ಮೇ 2ರಿಂದ ಈ ಜಾರಿಗೆ ಬರುವಂತೆ ಕ್ರಮಕೈಗೊಳ್ಳಲಾಗಿದೆ. ಏರ್‌ಲೈನ್ಸ್ ಹೇಳಿಕೆಯ ಪ್ರಕಾರ, ಕಂಫರ್ಟ್ ಮತ್ತು ಕಂಫರ್ಟ್ ಪ್ಲಸ್ ವರ್ಗಗಳಿಗೆ ಉಚಿತ ಚೆಕ್-ಇನ್ ಬ್ಯಾಗೇಜ್ ಭತ್ಯೆಯನ್ನು ಕ್ರಮವಾಗಿ 20 ಮತ್ತು 25 ಕೆ.ಜಿ.ಯಿಂದ 15 ಕೆ.ಜಿ.ಗೆ ಇಳಿಸಲಾಗಿದೆ.

ಬದಲಾವಣೆ

ಎಕಾನಮಿ ಕ್ಲಾಸ್‌ನಲ್ಲಿ ದೇಶೀಯ ಮಾರ್ಗಗಳಲ್ಲಿ ಕಂಫರ್ಟ್ ಮತ್ತು ಕಂಫರ್ಟ್ ಪ್ಲಸ್ ದರಗಳು ಈಗ 15 ಕೆ.ಜಿ. ಲಗೇಜ್ ಭತ್ಯೆಯನ್ನು ನೀಡುತ್ತವೆ. ಆದರೆ ಫ್ಲೆಕ್ಸ್ 25 ಕೆ.ಜಿ.ವರೆಗೆ ಭತ್ಯೆಯನ್ನು ಒದಗಿಸುತ್ತದೆ. ದೇಶೀಯ ಮಾರ್ಗಗಳಲ್ಲಿ ವ್ಯಾಪಾರ ವರ್ಗದ ಬ್ಯಾಗೇಜ್ ಭತ್ಯೆ 25 ಕೆ.ಜಿ.ಯಿಂದ 35 ಕೆ.ಜಿ. ವರೆಗೆ ಇರುತ್ತದೆ. ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಉಚಿತ ಲಗೇಜ್ ಭತ್ಯೆಯು ಮಾರುಕಟ್ಟೆಯಿಂದ ಮಾರುಕಟ್ಟೆಗೆ ಬದಲಾಗುತ್ತದೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.

ಪ್ರಯಾಣಿಕರ ವೈವಿಧ್ಯಮಯ ಆದ್ಯತೆಗಳನ್ನು ಪರಿಗಣಿಸಿ,ಅವಶ್ಯಕತೆಗಳಿಗೆ ಸೂಕ್ತವಾದ ದರ ಮತ್ತು ಸೇವೆಗಳನ್ನು ಆಯ್ಕೆ ಮಾಡಲು ಪ್ರಯಾಣಿಕರಿಗೆ ಅವಕಾಶ ನೀಡಲು ಶುಲ್ಕದಲ್ಲಿ ವ್ಯತ್ಯಾಸಗಳನ್ನು ಮಾಡಲಾಗಿದೆ ಎಂದು ಏರ್ ಲೈನ್ಸ್ ತಿಳಿಸಿದೆ.

ಇದನ್ನೂ ಓದಿ: Dubai Airport : ದುಬೈನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಏರ್​ಪೋರ್ಟ್​​; ಏನಿದರ ವಿಶೇಷತೆ? ಎಲ್ಲ ಮಾಹಿತಿ ಇಲ್ಲಿದೆ

ಹೇಗಿದೆ ದರ?

ಕಂಫರ್ಟ್ ಪ್ಲಸ್ ಮತ್ತು ಫ್ಲೆಕ್ಸ್ ದರಗಳ ನಡುವಿನ ಬೆಲೆ ವ್ಯತ್ಯಾಸವು ದೆಹಲಿ- ಮುಂಬಯಿನಂತಹ ದೇಶೀಯ ವಲಯದಲ್ಲಿ ಸಾಮಾನ್ಯವಾಗಿ 1,000 ರೂ. ಆಗಿರುತ್ತದೆ. 10 ಕೆ.ಜಿ. ಹೆಚ್ಚುವರಿ ಬ್ಯಾಗೇಜ್ ಮತ್ತು ಶೂನ್ಯ ಬದಲಾವಣೆ ಅಥವಾ ರದ್ದತಿ ಶುಲ್ಕ ಸೇರಿದಂತೆ 9,000 ರೂ.ವರೆಗೆ ಇರುತ್ತದೆ. ಗ್ರಾಹಕರ ಅಭಿಪ್ರಾಯವನ್ನು ಪಡೆದೇ ಈ ದರವನ್ನು ನಿಗದಿ ಪಡಿಸಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

Continue Reading
Advertisement
Ramanagara News
ಕರ್ನಾಟಕ4 hours ago

Channapatna News: ಮದುವೆಯಲ್ಲಿ ಐಸ್ ಕ್ರೀಂ ತಿಂದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Narendra Modi
ದೇಶ4 hours ago

Narendra Modi: ರಾಮಲಲ್ಲಾನಿಗೆ ಮೋದಿ ಸಾಷ್ಟಾಂಗ ನಮಸ್ಕಾರ; ಇಲ್ಲಿವೆ ಅಯೋಧ್ಯೆ ಭೇಟಿ Photos

IPL 2024
ಪ್ರಮುಖ ಸುದ್ದಿ4 hours ago

IPL 2024 : ಇವರೇ ನೋಡಿ ಐಪಿಎಲ್​ 2024ರ ಮೊದಲ ಕನ್​ಕಷನ್​ ಬದಲಿ ಆಟಗಾರ

Prajwal Revanna Case
ಪ್ರಮುಖ ಸುದ್ದಿ4 hours ago

Prajwal Revanna Case: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಶೇರ್‌ ಮಾಡಿದ್ರೆ ಕೇಸ್‌ ಗ್ಯಾರಂಟಿ; ಎಸ್‌ಐಟಿ ಎಚ್ಚರಿಕೆ

IPL 2024
ಕ್ರೀಡೆ4 hours ago

IPL 2024 : ಲಕ್ನೊ ವಿರುದ್ಧ ಕೆಕೆಆರ್​​ಗೆ 98 ರನ್​ಗಳ ಬೃಹತ್​ ಜಯ

Narendra Modi
ದೇಶ4 hours ago

Narendra Modi: ಮತಬ್ಯಾಂಕ್‌ ಗುತ್ತಿಗೆದಾರರ ಸ್ನೇಹಕ್ಕೆ ಮುಸ್ಲಿಮರು ವಿದಾಯ; ಕಾಂಗ್ರೆಸ್‌ಗೆ ಮೋದಿ ಟಾಂಗ್!

Prajwal Revanna Case
ಕರ್ನಾಟಕ5 hours ago

Prajwal Revanna Case: ಜಡ್ಜ್‌ ಮುಂದೆಯೂ ನಿಂಬೆ ಹಣ್ಣು ಹಿಡಿದುಕೊಂಡಿದ್ದ ಎಚ್‌.ಡಿ.ರೇವಣ್ಣ!

IPL 2024
ಪ್ರಮುಖ ಸುದ್ದಿ5 hours ago

IPL 2024 : ಐಪಿಎಲ್ ಸ್ಟೇಡಿಯಮ್​ಗಳ ಗಾತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಆರ್​ ಅಶ್ವಿನ್​

Farooq Abdullah
ದೇಶ5 hours ago

ಪಿಒಕೆ ನಮ್ಮದು ಎಂದಿದ್ದಕ್ಕೆ ಪಾಕ್ ಬಳೆ ತೊಟ್ಟಿಲ್ಲ ಎಂದ ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ!‌ ಇವರ ಬೆಂಬಲ ಯಾರಿಗೆ?

Champions Trophy
Latest5 hours ago

Champions Trophy : ಚಾಂಪಿಯನ್ಸ್​ ಟ್ರೋಫಿ ಮೂಲಕ ಐಪಿಎಲ್​ಗೆ ತೊಂದರೆ ಕೊಡಲು ಪಾಕಿಸ್ತಾನ ಸಂಚು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ8 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ10 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ10 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ23 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ6 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

ಟ್ರೆಂಡಿಂಗ್‌