Terrorists Killed: ಕಾಶ್ಮೀರದಲ್ಲಿ ಈ ವರ್ಷ 31 ಉಗ್ರರ ಹತ್ಯೆಗೈದ ಸೇನೆ; ಲಿಸ್ಟ್‌ನಲ್ಲಿ ಇನ್ನೆಷ್ಟು ಉಗ್ರರಿದ್ದಾರೆ? - Vistara News

ದೇಶ

Terrorists Killed: ಕಾಶ್ಮೀರದಲ್ಲಿ ಈ ವರ್ಷ 31 ಉಗ್ರರ ಹತ್ಯೆಗೈದ ಸೇನೆ; ಲಿಸ್ಟ್‌ನಲ್ಲಿ ಇನ್ನೆಷ್ಟು ಉಗ್ರರಿದ್ದಾರೆ?

Terrorists Killed: ಜಮ್ಮು-ಕಾಶ್ಮೀರದಲ್ಲಿ ಜನವರಿ 1ರಿಂದ ಸೆಪ್ಟೆಂಬರ್‌ 26ರವರೆಗೆ ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆಗಳ ಮಾಹಿತಿ ಲಭ್ಯವಾಗಿದೆ. ಅದರ ಸಂಪೂರ್ಣ ವರದಿ ಇಲ್ಲಿದೆ.

VISTARANEWS.COM


on

Kulgam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ನಿಗ್ರಹಕ್ಕಾಗಿ ಭಾರತೀಯ ಸೇನೆಯು ಸತತವಾಗಿ ಕಾರ್ಯಾಚರಣೆ ಕೈಗೊಳ್ಳುತ್ತಲೇ ಇರುತ್ತದೆ. ಅದರಲ್ಲೂ, ಪಾಕಿಸ್ತಾನವು ಗಡಿ ಮೂಲಕ ಉಗ್ರರನ್ನು ಕಳುಹಿಸುವ ಕಾರಣದಿಂದಾಗಿ ಗಡಿಯಲ್ಲಿ ಕಟ್ಟೆಚ್ಚರ, ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಎನ್‌ಕೌಂಟರ್‌, ಉಗ್ರರನ್ನು ಮಟ್ಟಹಾಕಲು ಡ್ರೋನ್‌ ಸೇರಿ ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತಾರೆ. ಜಮ್ಮು-ಕಾಶ್ಮೀರ ಪೊಲೀಸರೂ (Jammu Kashmir Police) ಸೈನಿಕರ ಕಾರ್ಯಾಚರಣೆಗಳಿಗೆ ನೆರವು ನೀಡುತ್ತಾರೆ. ಹೀಗೆ 2023ರ ಜನವರಿ 1ರಿಂದ ಸೆಪ್ಟೆಂಬರ್‌ 26ರವರೆಗೆ ಜಮ್ಮು-ಕಾಶ್ಮೀರದಲ್ಲಿ 31 ಉಗ್ರರನ್ನು ಸೇನೆ, ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ (Terrorists Killed) ಹತ್ಯೆಗೈದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜಮ್ಮು-ಕಾಶ್ಮೀರ ಪೊಲೀಸರು, ಇಂಡಿಯನ್‌ ಆರ್ಮಿ ಹಾಗೂ ಸಶಸ್ತ್ರ ಸೀಮಾ ದಳದ ಜಂಟಿ ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರ ಹತ್ಯೆಗೀಡಾಗಿದ್ದಾನೆ. ಹಾಗೆಯೇ, ಜಮ್ಮು-ಕಾಶ್ಮೀರ ಪೊಲೀಸರು, ಭಾರತೀಯ ಸೇನೆ ಹಾಗೂ ಬಿಎಸ್‌ಎಫ್‌ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು, ಜಮ್ಮು-ಕಾಶ್ಮೀರ ಪೊಲೀಸರು, ಭಾರತೀಯ ಸೇನೆ ಹಾಗೂ ಸಿಆರ್‌ಪಿಎಫ್‌ ಕಾರ್ಯಾಚರಣೆಯಲ್ಲಿ ಐವರು ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆ ಕಾರ್ಯಾಚರಣೆಯಲ್ಲಿ 23 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

204 ಉಗ್ರರ ಬಂಧನ

ಕಣಿವೆಯಲ್ಲಿ ಉಗ್ರರ ಬಂಧನದಲ್ಲೂ ಸೇನೆ ಮುಂದಿದೆ. ಕಳೆದ 9 ತಿಂಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ 204 ಉಗ್ರರನ್ನು ಬಂಧಿಸಲಾಗಿದೆ. ಕಳೆದ ತಿಂಗಳಲ್ಲಿಯೇ ನಾಲ್ವರು ಉಗ್ರರನ್ನು ಹತ್ಯೆ ಮಾಡಿದರೆ, 40 ಉಗ್ರರನ್ನು ಬಂಧಿಸಲಾಗಿದೆ. ಇವರಿಂದ ಎಕೆ 47 ಗನ್‌, ಮ್ಯಾಗಜಿನ್‌, ಪಿಸ್ತೂಲ್‌, ಗ್ರನೇಡ್ ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Terrorists Killed: ಬಾರಾಮುಲ್ಲಾದಲ್ಲಿ ಇಬ್ಬರು ಲಷ್ಕರೆ ತೊಯ್ಬಾ ಉಗ್ರರ ಹತ್ಯೆ; ಶಸ್ತ್ರಾಸ್ತ್ರ ವಶ

111 ಉಗ್ರರೇ ಸೇನೆಯ ಗುರಿ

ಜಮ್ಮು-ಕಾಶ್ಮೀರದಲ್ಲಿ 31 ಉಗ್ರರನ್ನು ಹತ್ಯೆಗೈದು, 204 ಉಗ್ರರನ್ನು ಬಂಧಿಸಿದರೂ ಇನ್ನೂ 111 ಉಗ್ರರು ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇವರಲ್ಲಿ 40 ಉಗ್ರರು ಸ್ಥಳೀಯರಾದರೆ, 71 ಉಗ್ರರು ವಿದೇಶದವರಾಗಿದ್ದಾರೆ. ಅಂದ ಹಾಗೆ 2022ರಲ್ಲಿ 137 ಉಗ್ರರು ಸಕ್ರಿಯರಾಗಿದ್ದರು. ಇದನ್ನು ಸೇನೆಯು 111ಕ್ಕೆ ಇಳಿಸಿದೆ. ಇವರೆಲ್ಲರನ್ನೂ ಎನ್‌ಕೌಂಟರ್‌ ಮಾಡುವುದು ಸೇನೆಯ ಗುರಿಯಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹತ್ಯೆ ಮಾಡಲಾದ ಉಗ್ರರ ಸಂಖ್ಯೆ ಕಡಿಮೆ ಇದೆ. ಕಳೆದ ವರ್ಷ ಕಣಿವೆಯಲ್ಲಿ 187 ಉಗ್ರರನ್ನು ಹತ್ಯೆ ಮಾಡಲಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Gurdaspur Attack: ಗುರುದಾಸಪುರ ಉಗ್ರ ದಾಳಿಯ ರೂವಾರಿ, ಐಎಸ್ಐ ಅಧಿಕಾರಿಯನ್ನು ಕರಾಚಿಯಲ್ಲಿ ಫಿನಿಷ್ ಮಾಡಿದ ‘ಅಪರಿಚಿತರು’!

Gurdaspur Attack: 2015 ರಲ್ಲಿ ಭಾರತದಲ್ಲಿ ನಡೆದ ಗುರುದಾಸ್‌ಪುರ ಭಯೋತ್ಪಾದಕ ದಾಳಿಯಲ್ಲಿ ರಾಝಾ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ, ಇದರ ಪರಿಣಾಮವಾಗಿ ನಾಲ್ವರು ಭದ್ರತಾ ಸಿಬ್ಬಂದಿ ಸೇರಿದಂತೆ ಏಳು ಜನರ ಸಾವಿಗೆ ಕಾರಣವಾಯಿತು. ಈ ಘಟನೆಯು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

VISTARANEWS.COM


on

Gurdaspur attack
Koo

ಕರಾಚಿ: 2015ರಲ್ಲಿ ಗುರುದಾಸ್‌ಪುರ(Gurdaspur Attack)ದಲ್ಲಿ ನಡೆದ ಉಗ್ರ ದಾಳಿಯ ರೂವಾರಿ, ಐಎಸ್‌ಐ(ISI) ಅಧಿಕಾರಿಯನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಪಾಕಿಸ್ತಾನ ಗುಪ್ತಚರ ಇಲಾಖೆ ಅಧಿಕಾರಿ, ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯಾಗಿರುವ ಅಲಿ ರಾಝಾ ಅವರ ಮೇಲೆ ಭಾನುವಾರ ದುಷ್ಕರ್ಮಿಗಳು ಗುಂಡಿನ ಮಳೆಗೈದಿದ್ದಾರೆ. ಇನ್ನು ಹಂತಕರು ಯಾರೆಂಬುದು ಪತ್ತೆಯಾಗಿಲ್ಲ. ಪಾಕಿಸ್ತಾನಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.

2015 ರಲ್ಲಿ ಭಾರತದಲ್ಲಿ ನಡೆದ ಗುರುದಾಸ್‌ಪುರ ಭಯೋತ್ಪಾದಕ ದಾಳಿಯಲ್ಲಿ ರಾಝಾ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ, ಇದರ ಪರಿಣಾಮವಾಗಿ ನಾಲ್ವರು ಭದ್ರತಾ ಸಿಬ್ಬಂದಿ ಸೇರಿದಂತೆ ಏಳು ಜನರ ಸಾವಿಗೆ ಕಾರಣವಾಯಿತು. ಈ ಘಟನೆಯು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಗುರುದಾಸ್‌ಪುರ ದಾಳಿ ಹಿನ್ನೆಲೆ

27 ಜುಲೈ 2015 ರಂದು, ಪಾಕಿಸ್ತಾನದ ಸೇನಾ ಸಮವಸ್ತ್ರ ಧರಿಸಿದ್ದ ಮೂವರು ಉಗ್ರರು ದಿನಾನಗರದಲ್ಲಿ ಚಲಿಸುತ್ತಿದ್ದ ಬಸ್ಸೊಂದರ ಮೇಲೆ ಗುಂಡಿನ ಮಳೆ ಸುರಿಸಿ, ಬಳಿಕ ಪೊಲೀಸ್ ಠಾಣೆಯ ಮೇಲೆ ಮುಗಿಬಿದ್ದಿದ್ದರು. ಜಮ್ಮು-ಕಾಶ್ಮೀರದಲ್ಲಿ ದಾಳಿ ನಡೆಸುವುದು ಈ ಉಗ್ರರ ಟಾರ್ಗೆಟ್ ಆಗಿತ್ತಾದರೂ ಅಲ್ಲಿನ ಭಾರಿ ಭದ್ರತೆಯಿಂದ ಅವರು ತಮ್ಮ ಯೋಜನೆ ಬದಲಾಯಿಸಿಕೊಂಡು ಇತ್ತ ಪಂಜಾಬ್‌ನತ್ತ ಲಗ್ಗೆ ಇಟ್ಟರು ಎಂಬುದು ಜಿಪಿಎಸ್ ಟ್ರ್ಯಾಕ್ ಪರಿಶೀಲನೆಯಿಂದ ತಿಳಿದುಬಂದಿದೆ ಎಂದು ಮೂಲಗಳು ಹೇಳಿವೆ.

ಮೊದಲಿಗೆ ಪಾಕಿಸ್ತಾನದ ಶಕರ್‌ಗಢದಿಂದ ಹೊರಟ ಪಾತಕಿಗಳು ಜಮ್ಮು-ಕಾಶ್ಮೀರದ ಗಡಿಯಲ್ಲಿರುವ ಬಾಮಿಯಾಲ್ ಪಟ್ಟಣ ತಲುಪಿದ್ದರು. ಅಲ್ಲಿದ್ದ ಬಿಗಿಭದ್ರತೆಯನ್ನು ಗಮನಿಸಿ, ಅದನ್ನು ಬೇಧಿಸುವುದು ಅಸಾಧ್ಯವೆಂದು ಮನಗಂಡು ದಿನಾನಗರದ ಮಾರ್ಗ ಹಿಡಿದಿದ್ದರು. ಇವರು ‘ರಾವಿ’ ನದಿಯನ್ನು ದಾಟಿ ಪಂಜಾಬ್ ಪ್ರವೇಶಿಸಿದ್ದರು ಎಂದು ತನಿಖಾಧಿಕಾರಿಗಳ ತಂಡ ತಿಳಿಸಿದೆ.

‘ಅಮೃತಸರ-ಪಠಾಣ್‌ಕೋಟ್‌’ ರೈಲು ಹಳಿಯಲ್ಲಿ ಉಗ್ರರು ಅಳವಡಿಸಿದ್ದ ಐದು ಬಾಂಬ್‌ಗಳಲ್ಲಿ ಆರ್‌ಡಿಎಕ್ಸ್ ಬಳಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ. ಅಶ್ವನಿ ಎಂಬ ಟ್ರ್ಯಾಕ್‌ಮೆನ್ ನೀಡಿದ ಮಾಹಿತಿ ಮೇರೆಗೆ ಸೇನೆಯು ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಈ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿತ್ತು. ಒಂದೊಂದು ಬಾಂಬ್ ತಲಾ ಒಂದು ಕೆ.ಜಿ. ತೂಕವಿದ್ದವು. ದಿನಾನಗರದಿಂದ 5 ಕಿ.ಮೀ. ದೂರದಲ್ಲಿರುವ ಪರಮನಂದ ರೆಲ್ವೆ ನಿಲ್ದಾಣ ಸಮೀಪದ ಸೇತುವೆಯೊಂದರ ಬಳಿ ಈ ಬಾಂಬ್‌ಗಳನ್ನು ಅಳವಡಿಸಲಾಗಿತ್ತು.

ಇದನ್ನೂ ಓದಿ: Mahadayi Water Dispute: ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ್ ತಂಡ ಭೇಟಿ; ನಾಲೆಗಳ ಪರಿಶೀಲನೆ

Continue Reading

ದೇಶ

Paris Olympics 2024: ಸರ್ಕಾರಿ, ಖಾಸಗಿ ವಲಯದ ಪಾಲುದಾರಿಕೆಯಿಂದ ಕ್ರೀಡೆಗಳ ಭವಿಷ್ಯ ನಿರ್ಧಾರ: ಪಾರ್ಥ್ ಜಿಂದಾಲ್

Paris Olympics 2024: ಮುಂಬೈನಲ್ಲಿ ಜೆಎಸ್‌ಡಬ್ಲ್ಯು ಗ್ರೂಪ್‌, ಏಷ್ಯಾ ಸೊಸೈಟಿ ಇಂಡಿಯಾ ಸೆಂಟರ್ ಮತ್ತು ಮುಂಬೈನಲ್ಲಿರುವ ಫ್ರಾನ್ಸ್‌ನ ಕಾನ್ಸುಲೇಟ್ ಜನರಲ್ ಸಹಯೋಗದಲ್ಲಿ ತಜ್ಞರ ಚರ್ಚಾಗೋಷ್ಠಿ ನಡೆಯಿತು. ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ನ ಸ್ಥಾಪಕ ಪಾರ್ಥ್ ಜಿಂದಾಲ್, ಸರ್ಕಾರ ಒದಗಿಸುವ ನೆರವು ಮತ್ತು ಹಣಕಾಸಿನ ಬೆಂಬಲ ಗಮನಾರ್ಹವಾಗಿದೆ. ಕ್ರೀಡೆಗೆ ಅಗತ್ಯವಾಗಿರುವ ಕ್ರೀಡಾ ವಿಜ್ಞಾನ, ಪೋಷಣೆ ಮತ್ತು ತಂತ್ರಜ್ಞಾನದಂತಹ ಅಗತ್ಯ ಸಂಗತಿಗಳನ್ನು ಖಾಸಗಿ ವಲಯವು ಒದಗಿಸುತ್ತಿದೆ. ಇದು ಸರ್ಕಾರದ ಪ್ರಯತ್ನಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ತಿಳಿಸಿದ್ದಾರೆ.

VISTARANEWS.COM


on

Paris Olympics 2024
Koo

ಮುಂಬೈ: ಸರ್ಕಾರಿ ಮತ್ತು ಖಾಸಗಿ ಸದೃಢ ಪಾಲುದಾರಿಕೆಯು ಭಾರತದ ಕ್ರೀಡೆಗಳ ಭವಿಷ್ಯ ನಿರ್ಧರಿಸಲಿದೆ ಎಂಬುದು ನನ್ನ ನಂಬಿಕೆಯಾಗಿದೆ ಎಂದು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ನ ಸ್ಥಾಪಕ ಪಾರ್ಥ್ ಜಿಂದಾಲ್ (Paris Olympics 2024) ತಿಳಿಸಿದರು.

ಮುಂಬೈನಲ್ಲಿ ಜೆಎಸ್‌ಡಬ್ಲ್ಯು ಗ್ರೂಪ್‌, ಏಷ್ಯಾ ಸೊಸೈಟಿ ಇಂಡಿಯಾ ಸೆಂಟರ್ ಮತ್ತು ಮುಂಬೈನಲ್ಲಿರುವ ಫ್ರಾನ್ಸ್‌ನ ಕಾನ್ಸುಲೇಟ್ ಜನರಲ್ ವತಿಯಿಂದ ಆಯೋಜಿಸಿದ್ದ ತಜ್ಞರ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರ ಒದಗಿಸುವ ನೆರವು ಮತ್ತು ಹಣಕಾಸಿನ ಬೆಂಬಲ ಗಮನಾರ್ಹವಾಗಿದೆ. ಕ್ರೀಡೆಗೆ ಅಗತ್ಯವಾಗಿರುವ ಕ್ರೀಡಾ ವಿಜ್ಞಾನ, ಪೋಷಣೆ ಮತ್ತು ತಂತ್ರಜ್ಞಾನದಂತಹ ಅಗತ್ಯ ಸಂಗತಿಗಳನ್ನು ಖಾಸಗಿ ವಲಯವು ಒದಗಿಸುತ್ತಿದೆ. ಇದು ಸರ್ಕಾರದ ಪ್ರಯತ್ನಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದರು.

ಈ ಸಹಯೋಗವು ಹಿಂದಿನ ದಶಕದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಿಒಪಿಎಸ್‌), ಮಿಷನ್ ಒಲಿಂಪಿಕ್ ಸೆಲ್ ಮತ್ತು ಖೇಲೊ ಇಂಡಿಯಾದಂತಹ ಉಪಕ್ರಮಗಳು ಖಾಸಗಿ ವಲಯದ ಜತೆಗೆ ಸಮಾಲೋಚಿಸಿ ಅಭಿವೃದ್ಧಿಪಡಿಸಿದ ಇಂತಹ ಸಹಯೋಗದ ಫಲಶ್ರುತಿಗಳಾಗಿವೆ ಎಂದು ತಿಳಿಸಿದರು.

ಇದನ್ನೂ ಓದಿ: Sourav Ganguly : ಸೌರವ್​ ಗಂಗೂಲಿಗೆ 52ನೇ ಜನ್ಮದಿನ; ದಾದಾನ ಅಭೂತಪೂರ್ವ ವೃತ್ತಿ ಜೀವನದ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ

ಈ ಪ್ರಗತಿಯ ಹೊರತಾಗಿಯೂ, ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಂತಹ (ಐಐಎಸ್‌) ಕೆಲವು ಗಮನಾರ್ಹ ಸಂಸ್ಥೆಗಳನ್ನು ಹೊರತುಪಡಿಸಿ ಖಾಸಗಿ ವಲಯವು ಮೂಲತಃ ಈಗಾಗಲೇ ಅಸ್ತಿತ್ವದಲ್ಲಿರುವ ಸರ್ಕಾರಿ ಮೂಲಸೌಕರ್ಯದ ನೆರವಿನಿಂದ ಕಾರ್ಯನಿರ್ವಹಿಸುತ್ತದೆ. ಭಾರತದ ಕ್ರೀಡೆಗಳನ್ನು ನಿಜವಾಗಿಯೂ ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮಗೆ ದೇಶದಾದ್ಯಂತ ಕನಿಷ್ಠ ಇಂತಹ 10 ಕೇಂದ್ರಗಳ ಅಗತ್ಯವಿದೆ. ಅದರಲ್ಲೂ ವಿಶೇಷವಾಗಿ ಪ್ರತಿಯೊಂದು ರಾಜ್ಯದಲ್ಲಿ ಇಂತಹ ಒಂದು ಕೇಂದ್ರ ಇರಬೇಕಾದ ಅಗತ್ಯ ಇದೆ. ಈ ಕೇಂದ್ರಗಳನ್ನು ನಿರ್ವಹಿಸಲು ಸರ್ಕಾರ ಈಗಾಗಲೇ ಖಾಸಗಿ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತಿದೆ, ಆದರೆ, ಇನ್ನೂ ಹೆಚ್ಚಿನ ಒಳಗೊಳ್ಳುವಿಕೆ ಅಗತ್ಯವಿದೆ ಎಂದರು.

ಭಾರತದ ಕ್ರೀಡೆಗಳಲ್ಲಿ ಎರಡು ಪ್ರಮುಖ ಸವಾಲುಗಳಿವೆ. ಅವುಗಳೆಂದರೆ, ಖಾಸಗಿ ವಲಯದ ಭಾಗವಹಿಸುವಿಕೆ ತೃಪ್ತಿದಾಯಕ ಮಟ್ಟದಲ್ಲಿ ಇಲ್ಲದಿರುವುದು ಮತ್ತು ಕ್ರೀಡಾ ಒಕ್ಕೂಟಗಳ ಒಳಗೆ ಇರುವ ನಿರಂತರ ಸಮಸ್ಯೆಗಳು. ಕ್ರೀಡಾ ಫೆಡರೇಷನ್‌ಗಳು ನಿರಂತರವಾಗಿ ರಾಜಕೀಯ ಹಸ್ತಕ್ಷೇಪದಿಂದ ಬಳಲುತ್ತಿದ್ದರೂ, ಪ್ರತಿ ವರ್ಷ ಅಲ್ಲಲ್ಲಿ ಕೆಲ ಸುಧಾರಣೆಗಳು ಕಣ್ಣಿಗೆ ಬೀಳುತ್ತವೆ. ಪ್ಯಾರಿಸ್ ಒಲಿಂಪಿಕ್ಸ್ ಸಮೀಪಿಸುತ್ತಿರುವಾಗ, ಸರ್ಕಾರ ಮತ್ತು ಖಾಸಗಿ ವಲಯದ ನಡುವಣ ಸಹಯೋಗದ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಈ ಮೊದಲಿಗಿಂತ ಹೆಚ್ಚಿನ ಸಹಯೋಗ ಕಂಡುಬರುತ್ತಿದೆ. ಇದರ ಫಲಶ್ರುತಿ ಬಗ್ಗೆ ನಾನು ಹೆಚ್ಚು ಆಶಾವಾದಿಯಾಗಿದ್ದೇನೆ.

ನಮ್ಮ ಕ್ರೀಡಾ ಪಯಣದ ಒಂದು ಮಹತ್ವದ ಬೆಳವಣಿಗೆ ಏನೆಂದರೆ, ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಕ್ರೀಡಾ ತಾರೆಯರು ಪ್ರವರ್ಧಮಾನಕ್ಕೆ ಬರುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ. 2008ರಲ್ಲಿ ಮೂವರು ಕ್ರೀಡಾ ತಾರೆಯರು ಗಮನ ಸೆಳೆದರೆ, 2012 ರಲ್ಲಿ ಇನ್ನೂ ಆರು ಕ್ರೀಡಾ ತಾರೆಯರು ಹೊಸದಾಗಿ ಹೊರಹೊಮ್ಮಿದ್ದಾರೆ. ನಂತರ 2016ರಲ್ಲಿ ಇಬ್ಬರು ಬೆಳಕಿಗೆ ಬಂದಿದ್ದಾರೆ. ಟೋಕಿಯೊದಲ್ಲಿ, ನಮ್ಮ ಹಾಕಿ ತಂಡ ಮತ್ತು ಇತರ ಆರು ಪದಕ ವಿಜೇತರು, ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ನೀರಜ್ ಚೋಪ್ರಾ ಅವರ ಜತೆಗೆ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಮಾಡಿದ ʻಕಲ್ಕಿ 2898 ಎಡಿʼಸಿನಿಮಾ!

ಬಾಕ್ಸಿಂಗ್‌ನಲ್ಲಿ ವಿಜೇಂದರ್ ಸಿಂಗ್ ಅಥವಾ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಅವರಂತೆ ಪ್ರತಿಯೊಬ್ಬ ಕ್ರೀಡಾ ತಾರೆ ತಮ್ಮ ತಮ್ಮ ಕ್ರೀಡೆಗಳಲ್ಲಿ ಕನಸುಗಳು ಮತ್ತು ಸಾಧ್ಯತೆಗಳನ್ನು ಬೆಳಗಿಸುತ್ತಾರೆ. ಜಾವೆಲಿನ್‌ನಲ್ಲಿ ನೀರಜ್ ಚೋಪ್ರಾ ಅವರ ಸಾಧನೆಗಳು, ಅವರ ವಿಶಿಷ್ಟ ಸಾಧನೆಯು ಭವಿಷ್ಯದ ಚಾಂಪಿಯನ್‌ಗಳಿಗೆ ದಾರಿ ಮಾಡಿಕೊಟ್ಟಿದೆ. ಈಗ, ಭಾರತದ ಪುರುಷರ ತಂಡದಲ್ಲಿ ಮೂವರು ಜಾವೆಲಿನ್ ಎಸೆತಗಾರರು ಪ್ಯಾರಿಸ್‌ಗೆ ಹೋಗುತ್ತಿದ್ದಾರೆ. ಇದು ನಮ್ಮ ಬದಲಾಗುತ್ತಿರುವ ಅಥ್ಲೆಟಿಕ್ ಪರಾಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಮಾತನಾಡಿ, ಒಲಿಂಪಿಕ್ ಕನಸು ಕೇವಲ ಒಬ್ಬ ಕ್ರೀಡಾಪಟುವಿನ ಕನಸು ಆಗಿರದೆ, ಅದು ಅವನ ಇಡೀ ಕುಟುಂಬದ ಕನಸಾಗಿರುತ್ತದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಅಥ್ಲೀಟ್‌ನ ಜೀವನವನ್ನು ಮಾತ್ರವಲ್ಲದೆ ಅವನ ಕುಟುಂಬ, ಸಮಾಜ ಮತ್ತು ಹಳ್ಳಿಯ ಜೀವನವನ್ನೂ ಬದಲಾಯಿಸುತ್ತದೆ. ನಾನು ಪದಕ ಪಡೆದ ನಂತರ ಗಮನಾರ್ಹ ಬದಲಾವಣೆಗಳು ಕಂಡು ಬಂದವು. ನಾನು ತರಬೇತಿ ಪಡೆದ ರೋಹ್ಟಕ್‌ನ ಛೋಟು ರಾಮ್‌ ಕ್ರೀಡಾಂಗಣವು ತಗಡಿನ ಚಾವಣಿಯಿಂದ ವಾತಾನುಕೂಲಿ ಸಭಾಂಗಣವಾಗಿ ಬದಲಾಯಿತು. ನಾನು ಹುಟ್ಟಿ ಬೆಳೆದ ನನ್ನ ಹಳ್ಳಿಯಲ್ಲಿ ಒಂದು ಕ್ರೀಡಾಂಗಣವನ್ನು ನನ್ನ ಹೆಸರಿನಲ್ಲಿ ನಿರ್ಮಿಸಲಾಯಿತು.

ಒಲಿಂಪಿಕ್ ಪದಕವು ವಿಶೇಷವಾಗಿ ಮಕ್ಕಳಿಗೆ ಉತ್ತಮ ತರಬೇತಿ ನೀಡುವುದು ಸೇರಿದಂತೆ ಹಲವಾರು ಅವಕಾಶಗಳನ್ನು ಸೃಷ್ಟಿಸುತ್ತದೆ. ಮಕ್ಕಳಿಗೆ ಉತ್ತಮ ತರಬೇತಿ ಸೌಲಭ್ಯಗಳು ದೊರೆಯುತ್ತವೆ ಎಂದು ಹೇಳಿದರು.

ಹರಿಯಾಣದಲ್ಲಿ ಕುಸ್ತಿಯ ಬಗೆಗಿನ ಅಭಿಮಾನ ಈಗ ಬಹಳಷ್ಟು ಹೆಚ್ಚಿದೆ. ಪ್ರತಿ ಹತ್ತು ನಿಮಿಷದ ಪ್ರಯಾಣದ ನಂತರ ಒಂದು ಕ್ರೀಡಾಂಗಣ ನಿಮಗೆ ಎದುರಾಗುತ್ತದೆ. ಪ್ರತಿಯೊಂದು ಕ್ರೀಡಾಂಗಣದಲ್ಲಿ ಬಾಲಕಿಯರು ಕುಸ್ತಿ ತರಬೇತಿ ಪಡೆಯುತ್ತಿರುವುದನ್ನು ಕಾಣಬಹುದು.

ಹೆಣ್ಣುಮಕ್ಕಳು ಕುಸ್ತಿಯಾಡಲು ಸಾಧ್ಯವಿಲ್ಲ ಎಂದು ಜನರು ನಂಬುತ್ತಿದ್ದ ಒಂದು ಕಾಲವಿತ್ತು. ಆದರೆ, ಇಂದು ಅಂತಹ ಮನಸ್ಥಿತಿ ಬದಲಾಗಿದೆ. ಮೊದಲ ಬಾರಿಗೆ, ಐವರು ಹೆಣ್ಣುಮಕ್ಕಳು ಕುಸ್ತಿಗಾಗಿ ಒಲಿಂಪಿಕ್ಸ್‌ಗೆ ಹೋಗುತ್ತಿದ್ದಾರೆ. ಒಂದು ಕಾಲದಲ್ಲಿ ದಮನಕ್ಕೊಳಗಾಗಿದ್ದ ಹೆಣ್ಣುಮಕ್ಕಳು ಈಗ ದಿಟ್ಟತನದಿಂದ ಮುನ್ನುಗ್ಗಿ ಕುಸ್ತಿಯಲ್ಲಿ ಮಿಂಚುತ್ತಿದ್ದಾರೆ ಎಂದ ಅವರು, ನಾನು ಪದಕ ಗೆದ್ದ ನಂತರ, ಯಾರೊಬ್ಬರೂ ಕೇವಲ ಉದ್ಯೋಗ ಅಥವಾ ಲಾಭದ ಬಗ್ಗೆ ಯೋಚಿಸುತ್ತಾ ಕುಸ್ತಿಗೆ ಪ್ರವೇಶಿಸುವುದಿಲ್ಲ. ಅವರು ಈಗ ಒಲಿಂಪಿಕ್ ಪದಕ ಗೆಲ್ಲುವ ಗುರಿಯೊಂದಿಗೆ ತಮ್ಮ ಕುಸ್ತಿ ಅಭ್ಯಾಸ ಪ್ರಾರಂಭಿಸುತ್ತಾರೆ. ಹೆಣ್ಣುಮಕ್ಕಳ ಮನಸ್ಥಿತಿಯಲ್ಲಿನ ಈ ಬದಲಾವಣೆಯು ನಂಬಲಾಗದಷ್ಟು ಸ್ಪೂರ್ತಿದಾಯಕವಾಗಿದೆ ಎಂದು ಅವರು ತಿಳಿಸಿದರು.

ಭಾರತದ ಜಿಮ್ನ್ಯಾಸ್ಟಿಕ್‌ ಪಟು ದೀಪಾ ಕರ್ಮಾಕರ್ ಮಾತನಾಡಿ, ಯಾವುದೇ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆಯುವುದು ಯಾವುದೇ ಕ್ರೀಡಾಪಟುವಿನ ಸಾಧನೆ ಹಾದಿಯಲ್ಲಿನ ಕೆಟ್ಟ ಗಳಿಗೆಯಾಗಿರುತ್ತದೆ. ನನಗೆ ಮಾತ್ರವಲ್ಲ, ನಾಲ್ಕನೇ ಸ್ಥಾನ ತಲುಪುವ ಯಾವುದೇ ಕ್ರೀಡಾಪಟುವಿಗೆ ಅದು ನಿರಂತರವಾಗಿ ದುಃಸ್ವಪ್ನವಾಗಿ ಕಾಡುತ್ತಲೇ ಇರುತ್ತದೆ. ನಿದ್ದೆಯೇ ಬರುವುದಿಲ್ಲ. ಒಲಿಂಪಿಕ್ಸ್ ನೋಡುತ್ತ ಬಂದಿರುವ ನನಗೆ ಅಲ್ಲಿ ನಾಲ್ಕನೇ ಸ್ಥಾನಕ್ಕೆ ಬರುವ ಕ್ರೀಡಾಪಟುಗಳು ರೋದಿಸುವುದನ್ನು ಕಾಣುತ್ತಲೇ ಬಂದಿರುವೆ.

ನಾಲ್ಕನೇ ಸ್ಥಾನವು, ನಾಲ್ಕನೇ ಸ್ಥಾನವಾಗಿಯೇ ಇರುತ್ತದೆ. ಏಕೆಂದರೆ ನೀವು ಅದನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ಯಾವುದೇ ಪದಕ ಗೆಲ್ಲುವ ಕ್ರೀಡಾಪಟು ಸದಾ ಕಾಲವು ಪದಕ ಗೆದ್ದ ಕ್ರೀಡಾಪಟು ಆಗಿಯೇ ಉಳಿಯುತ್ತಾನೆ. ಹೀಗಾಗಿ ಉತ್ತಮ ಸಾಧನೆ ಮಾಡಲು ಏನು ಮಾಡಬೇಕು ಎನ್ನುವುದನ್ನು ಇಲ್ಲಿ ಚಿಂತಿಸಲು ಇದು ಹೆಚ್ಚು ಸೂಕ್ತವಾಗಿದೆ. ನಾಲ್ಕನೇ ಸ್ಥಾನ ತಲುಪಿರುವ ಕ್ರೀಡಾಪಟುಗಳು ಮಾತ್ರ ಅದರ ನೋವನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ತ್ರಿಪುರಾ ರಾಜ್ಯದಲ್ಲಿನ ಜಿಮ್ನ್ಯಾಸ್ಟಿಕ್ಸ್ ಸಂಸ್ಕೃತಿಯ ಕುರಿತು ಮಾತನಾಡಿದ ದೀಪಾ ಕರ್ಮಾಕರ್, “2016 ರ ರಿಯೊ ಒಲಿಂಪಿಕ್ಸ್ ನಂತರ, ತ್ರಿಪುರಾದಲ್ಲಿ ಬಹಳಷ್ಟು ಸಂಗತಿಗಳು ಬದಲಾಗಿವೆ. ಜಿಮ್ನ್ಯಾಸ್ಟಿಕ್‌ಗೆ ಹೋಗಬಾರದು ಎಂಬ ಮನಸ್ಥಿತಿಯು ಸ್ಥಳೀಯರಲ್ಲಿ ಮನೆ ಮಾಡಿತ್ತು. ಈಗ ತ್ರಿಪುರಾದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಉದಾಹರಣೆಗೆ ಹೇಳುವುದಾದರೆ, ಮೂಲಸೌಕರ್ಯಗಳು ಸುಧಾರಣೆಗೊಂಡಿವೆ. ನೀವು ನೋಡುವ ವಾಲ್ಟ್‌ಗೆ ನಿಮಗೆ ಅತಿ ಹೆಚ್ಚಿನ ಫೋಮ್ ಪಿಟ್ಸ್‌ಗಳು ಬೇಕಾಗುತ್ತವೆ. ಇವುಗಳು ಮೊದಲು ತ್ರಿಪುರಾದಲ್ಲಿ ಇದ್ದಿರಲಿಲ್ಲ. 2016ರ ಒಲಿಂಪಿಕ್ಸ್ ನಂತರ ಫೋಮ್ ಪಿಟ್ಸ್‌ಗಳನ್ನು ನಿರ್ಮಿಸಿದರು.

ಇದನ್ನೂ ಓದಿ: Kundapura Kannada:  ಅರಮನೆ ಮೈದಾನದಲ್ಲಿ ಈ ಬಾರಿ `ವಿಶ್ವ ಕುಂದಾಪುರ ಕನ್ನಡ ಹಬ್ಬ’; ಕಾರ್ಯಕ್ರಮದ ವಿವರ ಪಟ್ಟಿ ಇಲ್ಲಿದೆ!

ಇದರಿಂದ ಮಕ್ಕಳಲ್ಲಿ ಜಿಮ್ನ್ಯಾಸ್ಟಿಕ್ ಬಗೆಗಿನ ಆಸಕ್ತಿಯ ಮಟ್ಟವು ಗಮನಾರ್ಹವಾಗಿ ಹೆಚ್ಚಾಯಿತು. ಈಗ ಅದು ಸರ್ಕಾರಿ ಅಥವಾ ಖಾಸಗಿಯಾಗಿರಲಿ ಜಿಮ್ನ್ಯಾಸ್ಟಿಕ್‌ ತರಬೇತಿ ಕೇಂದ್ರಗಳ ಸಂಖ್ಯೆಯು ಗಮನಾರ್ಹವಾಗಿ ಹೆಚ್ಚಿದೆ. ನನ್ನ ಪ್ರಕಾರ, 2016 ರ ರಿಯೊ ಒಲಿಂಪಿಕ್ಸ್ ನಂತರ, ಬಹಳಷ್ಟು ಜನರ ಮನಸ್ಥಿತಿಯು ಮೊದಲೆಂದೂ ಕಾಣದ ರೀತಿಯಲ್ಲಿ ಬದಲಾಗಿರುವುದು ಬಹಳ ಮುಖ್ಯವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

Continue Reading

ದೇಶ

Mumbai Hit And Run: ಮುಂಬೈ ಹಿಟ್‌ ಆ್ಯಂಡ್‌ ರನ್‌ ಕೇಸ್‌; ಘಟನೆಗೂ ಮುನ್ನ ಬಾರ್‌ಗೆ ಹೋಗಿದ್ದ ಆರೋಪಿ, 18 ಸಾವಿರ ಬಿಲ್‌!

Mumbai Hit And Run: ಈ ಬಗ್ಗೆ ಬಾರ್‌ ಮಾಲಿಕ ಕರಣ್‌ ಶಾ ಮಾಹಿತಿ ನೀಡಿದ್ದು, ಮಿಹಿರ್‌ ಶಾ ತನ್ನ ನಾಲ್ವರು ಸ್ನೇಹಿತರೊಂದಿಗೆ ಬಾರ್‌ಗೆ ಬಂದಿದ್ದ. ಈ ವೇಳೆ ಆತನ ಜೊತೆ ಯಾರೂ ಮಹಿಳೆಯರು ಇರಲಿಲ್ಲ. ಅವರು 18,730 ಬಿಲ್‌ ಪಾವತಿಸಿ ತಮ್ಮ ಮರ್ಸಿಡಿಸ್‌ ಬೆನ್ಸ್‌ ಕಾರಿನಲ್ಲಿ ತೆರಳಿದ್ದರು. ಮಿಹಿರ್‌ನ ಹೊರತಾಗಿ ಉಳಿದವರೆಲ್ಲವರೂ ಒಂದೊಂದು ಬಿಯರ್‌ ಕುಡಿದಿದ್ದರು. ಮಿಹಿರ್‌ ಮಾತ್ರ ರೆಡ್‌ ಬುಲ್‌ ಸೇವಿಸಿದ್ದ. ಬಾರ್‌ಗೆ ಅವರು ಪ್ರವೇಶಿಸುವ ಮುನ್ನ ಅವರ ಗುರುತಿನ ಚೀಟಿ ಪರಿಶೀಲನೆ ಮಾಡಲಾಗಿತ್ತು. ಪೊಲೀಸರಿಗೆ ಅಗತ್ಯವಿರವ ಎಲ್ಲಾ ಮಾಹಿತಿಯನ್ನು ನಾವು ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

VISTARANEWS.COM


on

Mumbai hit and run
Koo

ಮುಂಬೈ: ನಿನ್ನೆ ಮುಂಬೈನಲ್ಲಿ ನಡೆದ ಡ್ರಂಕ್‌ ಆಂಡ್‌ ಡ್ರೈವ್‌(Mumbai Hit And Run) ಕೇಸ್‌ನ ಪ್ರಮುಖ ಆರೋಪಿ ಶಿವಸೇನೆ ಮುಖಂಡ(ShivSena Leader)ನ ಪುತ್ರ ಘಟನೆಗೂ ಮುನ್ನ ಆರೋಪಿ ಮಿಹಿರ್‌ ಶಾ(Mihir Shah) ಮತ್ತು ಆತನ ಸ್ನೇಹಿತರು ಬಾರ್‌ಗೆ ತೆರಳಿದ್ದು, ಬರೋಬ್ಬರಿ 18 ಸಾವಿರಕ್ಕೂ ಅಧಿಕ ಬಿಲ್‌ ಆಗಿತ್ತು ಎಂಬ ವಿಚಾರ ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ. ಮಿಹಿರ್‌ ಹಾಗೂ ಆತನ ಸೇಹಿತರು ಜೂಹೂನಲ್ಲಿರುವ ಗ್ಲೋಬಲ್‌ ತಾಪಸ್‌ ಬಾರ್‌ಗೆ ತೆರಳಿದ್ದರು ಎನ್ನಲಾಗಿದೆ.

ಇನ್ನು ಈ ಬಗ್ಗೆ ಬಾರ್‌ ಮಾಲಿಕ ಕರಣ್‌ ಶಾ ಮಾಹಿತಿ ನೀಡಿದ್ದು, ಮಿಹಿರ್‌ ಶಾ ತನ್ನ ನಾಲ್ವರು ಸ್ನೇಹಿತರೊಂದಿಗೆ ಬಾರ್‌ಗೆ ಬಂದಿದ್ದ. ಈ ವೇಳೆ ಆತನ ಜೊತೆ ಯಾರೂ ಮಹಿಳೆಯರು ಇರಲಿಲ್ಲ. ಅವರು 18,730 ಬಿಲ್‌ ಪಾವತಿಸಿ ತಮ್ಮ ಮರ್ಸಿಡಿಸ್‌ ಬೆನ್ಸ್‌ ಕಾರಿನಲ್ಲಿ ತೆರಳಿದ್ದರು. ಮಿಹಿರ್‌ನ ಹೊರತಾಗಿ ಉಳಿದವರೆಲ್ಲವರೂ ಒಂದೊಂದು ಬಿಯರ್‌ ಕುಡಿದಿದ್ದರು. ಮಿಹಿರ್‌ ಮಾತ್ರ ರೆಡ್‌ ಬುಲ್‌ ಸೇವಿಸಿದ್ದ. ಬಾರ್‌ಗೆ ಅವರು ಪ್ರವೇಶಿಸುವ ಮುನ್ನ ಅವರ ಗುರುತಿನ ಚೀಟಿ ಪರಿಶೀಲನೆ ಮಾಡಲಾಗಿತ್ತು. ಪೊಲೀಸರಿಗೆ ಅಗತ್ಯವಿರವ ಎಲ್ಲಾ ಮಾಹಿತಿಯನ್ನು ನಾವು ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಆರೋಪಿಯ ತಂದೆ ಅರೆಸ್ಟ್‌

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಹಿರ್‌ನ ತಂದೆ, ಶಿವಸೇನೆ ನಾಯಕ ನಾಯಕ ರಾಜೇಶ್‌ ಶಾ ಅವರನ್ನು ಪಾಲ್ಘರ್‌ ಜಿಲ್ಲೆಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರು ರಾಜೇಶ್‌ ಶಾ ಅವರ ಹೆಸರಿನಲ್ಲಿ ನೋಂದಣಿಯಾಗಿರುವ ಕಾರಣ ಅವರನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಕಾರು ಚಾಲಕ ರಾಜಋಷಿ ಬಿದಾವತ್‌ ಎಂಬುವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ ಮುಂಬೈನ ವೊರ್ಲಿಯಲ್ಲಿ ರಾಜೇಶ್‌ ಶಾ (Rajesh Shah) ಅವರ ಪುತ್ರ ಮಿಹಿರ್‌ ಶಾ (Mihir Shah) ಕುಡಿದು ವಾಹನ ಚಲಾಸುವಾಗ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು, ಮಹಿಳೆ ಮೃತಪಟ್ಟಿದ್ದಾರೆ. ಆಕೆಯ ಪತಿಯು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ 24 ವರ್ಷದ ಮಿಹಿರ್‌ ಶಾ ಪರಾರಿಯಾಗಿದ್ದ, ಬಳಿಕ ಪೊಲೀಸರು ಅವನ ತಂದೆಯನ್ನು ವಶಪಡಿಸಿಕೊಂಡಿದ್ದಾರೆ.

ಕಾವೇರಿ ನಖ್ವಾ ಮತ್ತು ಪ್ರದೀಕ್‌ ನಖ್ವಾ ಎಂಬ ದಂಪತಿ ಹೋಗುತ್ತಿದ್ದ ಬೈಕ್‌ಗೆ BMW ಕಾರು ಡಿಕ್ಕಿ ಹೊಡೆದಿದ್ದು, ಕೂಡಲೇ ಮಿಹಿರ್‌ ಶಾ ಎಸ್ಕೇಪ್‌ ಆಗಿದ್ದಾನೆ. ಬೆಳಗ್ಗೆ 5:30ರ ಸಮಯದಲ್ಲಿ ದಂಪತಿ ಸಾಸಾನ್‌ ಡಾಕ್‌ ಮಾರುಕಟ್ಟೆಯಿಂದ ಮೀನು ಖರೀದಿಸಿ ವಾಪಾಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನು ದಂಪತಿ ಪ್ರದೀಕ್‌ ನಖ್ವಾ ಮಾರುಕಟ್ಟೆಯಲ್ಲಿ ಮೀನಿನ ವ್ಯಾಪಾರಿಯಾಗಿದ್ದಾರೆ. ಕಾರು ಡಿಕ್ಕಿಯಗುತ್ತಿದ್ದಂತೆ ರಸ್ತೆಗೆ ಬಿದ್ದಿದ್ದ ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು. ಕಾವೇರಿ ಮತ್ತು ಪ್ರದೀಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಾವೇರಿ ಕೊನೆಯುಸಿರೆಳೆದಿದ್ದಾರೆ.

ಘಟನೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮಿಹಿರ್‌ ಶಾ ನಾಪತ್ತೆಯಾಗಿದ್ದ. ಮಿಹಿರ್‌ ಶಾ ತನ್ನ ಫೋನನ್ನೂ ಸ್ವಿಚ್‌ ಆಫ್‌ ಮಾಡಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದರು. ಮಿಹಿರ್‌ ಪೊಲೀಸರಿಗೆ ಹೆದರಿ ತನ್ನ ಪ್ರೇಯಸಿ ಮನೆಯಲ್ಲಿ ಅವಿತಿದ್ದ. ಪೊಲೀಸರು ಆತನನ್ನು ಅರೆಸ್ಟ್‌ ಮಾಡಿದ್ದಾರೆ. ಪೊಲೀಸರ ಪ್ರಕಾರ ಮಿಹಿರ್‌ ಕಳೆದ ರಾತ್ರಿ ಜೂಹೂ ಪ್ರದೇಶದಲ್ಲಿರುವ ಬಾರ್‌ನಲ್ಲಿ ಕಂಠಪೂರ್ತಿ ಕುಡಿದಿದ್ದು. ತನ್ನ ಮನೆಗೆ ಹಿಂದಿರುಗುವ ವೇಳೆ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗುವಂತೆ ಡ್ರೈವರ್‌ಗೆ ಹೇಳಿದ್ದಾನೆ. ವರ್ಲಿಗೆ ತಲುಪುತ್ತಿದ್ದಂತೆ ತಾನು ಕಾರು ಚಲಾಯಿಸುವುದಕ್ಕೆ ಮುಂದಾಗಿದ್ದಾನೆ. ಆಗ ಅತ್ಯಂತ ವೇಗವಾಗಿ ಕಾರು ಚಲಾಯಿಸಿದ ಮಿಹಿರ್, ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಇದನ್ನೂ ಓದಿ: Mumbai Rain : ಭಾನುವಾರ ರಾತ್ರಿ ಪೂರ್ತಿ ಸುರಿದ ಮಳೆಗೆ ಮುಂಬೈ ನಗರದ ಹಲವು ಪ್ರದೇಶಗಳು ಜಲಾವೃತ

Continue Reading

ಪ್ರಮುಖ ಸುದ್ದಿ

Bus Accident : ಶಾಲಾ ಬಸ್​ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ

Bus Accident: ಪೊಲೀಸರ ಪ್ರಕಾರ, ಬಸ್ ಚಾಲಕನ ಅತಿಯಾದ ವೇಗದಿಂದಾಗಿ ಅಪಘಾತ ಸಂಭವಿಸಿದೆ. ಇದರೊಂದಿಗೆ, ಬಸ್ ತನ್ನ ಸಾಮರ್ಥ್ಯವನ್ನು ಮೀರಿ ಪ್ರಯಾಣಿಕರಿಂದ ತುಂಬಿಕೊಂಡಿತ್ತು ಎನ್ನಲಾಗಿದೆ. ಓವರ್ಲೋಡ್ ಮತ್ತು ಕಳಪೆ ರಸ್ತೆ ಪರಿಸ್ಥಿತಿಗಳು ಸಹ ಅಪಘಾತಕ್ಕೆ ಹೆಚ್ಚುವರಿ ಕಾರಣಗಳಾಗಿವೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

VISTARANEWS.COM


on

Bus Accident
Koo

ನವದೆಹಲಿ: ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ಶಾಲಾ ಬಸ್ ಒಂದು ಪಲ್ಟಿಯಾದ ಪರಿಣಾಮ (Bus Accident ) ಹಲವಾರು ಶಾಲಾ ಮಕ್ಕಳು ಸೇರಿದಂತೆ ಕನಿಷ್ಠ 40 ಜನರು ಗಾಯಗೊಂಡಿದ್ದಾರೆ. ಪಿಂಜೋರ್ ಪಟ್ಟಣದ ನೌಲತಾ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ಮಕ್ಕಳ ನಿಖರ ಸಂಖ್ಯೆಯನ್ನು ಇನ್ನೂ ಗುರುತಿಸಲಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಸ್ ಅಪಘಾತದಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಪಂಚಕುಲದ ಪಿಂಜೋರ್ ಆಸ್ಪತ್ರೆ ಮತ್ತು ಸೆಕ್ಟರ್ 6 ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ಗಾಯಗೊಂಡ ಹಲವಾರು ಶಾಲಾ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: Pakistan: ಛೇ..ಇವನೆಂಥಾ ಪಾಪಿ ತಂದೆ! ಚಿಕಿತ್ಸೆಗೆ ಹಣ ಇಲ್ಲವೆಂದು 15 ದಿನದ ಹಸುಳೆಯ ಜೀವಂತ ಸಮಾಧಿ

ಪೊಲೀಸರ ಪ್ರಕಾರ, ಬಸ್ ಚಾಲಕನ ಅತಿಯಾದ ವೇಗದಿಂದಾಗಿ ಅಪಘಾತ ಸಂಭವಿಸಿದೆ. ಇದರೊಂದಿಗೆ, ಬಸ್ ತನ್ನ ಸಾಮರ್ಥ್ಯವನ್ನು ಮೀರಿ ಪ್ರಯಾಣಿಕರಿಂದ ತುಂಬಿಕೊಂಡಿತ್ತು ಎನ್ನಲಾಗಿದೆ. ಓವರ್​ಲೋಡ್ ಮತ್ತು ಕಳಪೆ ರಸ್ತೆ ಪರಿಸ್ಥಿತಿಗಳು ಸಹ ಅಪಘಾತಕ್ಕೆ ಹೆಚ್ಚುವರಿ ಕಾರಣಗಳಾಗಿವೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಮಾಧ್ಯಮ ವರದಿಗಳ ಪ್ರಕಾರ, ಗಂಭೀರ ಗಾಯಗೊಂಡ ಮಹಿಳೆಯರೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಿಜಿಐ ಚಂಡೀಗಢಕ್ಕೆ ಕಳುಹಿಸಲಾಗಿದೆ. ಬಸ್ ಚಾಲಕನ ಅತಿಯಾದ ವೇಗದಿಂದ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಪೊಲೀಸ್ ವರದಿಗಳು ಸೂಚಿಸುತ್ತವೆ.

ಪಂಚಕುಲದ ಕಲ್ಕಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಚೌಧರಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

Continue Reading
Advertisement
steel flyover bridge shivananda circle
ಪ್ರಮುಖ ಸುದ್ದಿ4 mins ago

Steel Flyover: ಬೆಂಗಳೂರಿನ ಮೊದಲ ಸ್ಟೀಲ್‌ ಫ್ಲೈಓವರ್‌ ಸೇತುವೆಯಲ್ಲಿ ಬಿರುಕು

Gurdaspur attack
ವಿದೇಶ5 mins ago

Gurdaspur Attack: ಗುರುದಾಸಪುರ ಉಗ್ರ ದಾಳಿಯ ರೂವಾರಿ, ಐಎಸ್ಐ ಅಧಿಕಾರಿಯನ್ನು ಕರಾಚಿಯಲ್ಲಿ ಫಿನಿಷ್ ಮಾಡಿದ ‘ಅಪರಿಚಿತರು’!

Karnataka Rain
ಮಳೆ6 mins ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Haveri accident Shivanna couple helped the money to families
ಸ್ಯಾಂಡಲ್ ವುಡ್15 mins ago

Shiva Rajkumar: ಹಾವೇರಿ ಅಪಘಾತ; ಮೃತಪಟ್ಟ ಕುಟುಂಬಗಳಿಗೆ ಧನ ಸಹಾಯ ಮಾಡಿದ ಶಿವಣ್ಣ ದಂಪತಿ

Mumbai Cricket Association
ಪ್ರಮುಖ ಸುದ್ದಿ20 mins ago

Mumbai Cricket Association : ಮುಂಬೈನಲ್ಲಿ ನಿರ್ಮಾಣವಾಗಲಿದೆ 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ಕ್ರಿಕೆಟ್​ ಸ್ಟೇಡಿಯಮ್​

Paris Olympics 2024
ದೇಶ34 mins ago

Paris Olympics 2024: ಸರ್ಕಾರಿ, ಖಾಸಗಿ ವಲಯದ ಪಾಲುದಾರಿಕೆಯಿಂದ ಕ್ರೀಡೆಗಳ ಭವಿಷ್ಯ ನಿರ್ಧಾರ: ಪಾರ್ಥ್ ಜಿಂದಾಲ್

gold rate today
ಕರ್ನಾಟಕ38 mins ago

Gold Rate Today: ಬಂಗಾರ ಖರೀದಿಸುವ ಪ್ಲ್ಯಾನ್‌ ಇದೆಯೇ? ಚಿನ್ನದ ದರ ಹೀಗಿದೆ ನೋಡಿ

Self Harming
ಕ್ರೈಂ41 mins ago

Self Harming: ನವೋದಯ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು

Karnataka weather Forecast
ಮಳೆ52 mins ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜುಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Deepika Padukone
Latest54 mins ago

Deepika Padukone: 1.92 ಲಕ್ಷ ರೂ. ಬೆಲೆಯ ʼಹುಕುಮ್‌ ಕಿ ರಾಣಿʼ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ6 mins ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ52 mins ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜುಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

karnataka weather Forecast
ಮಳೆ18 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ20 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ21 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಟ್ರೆಂಡಿಂಗ್‌