Rahul Gandhi : ವಿದೇಶಿ ಮಹಿಳೆಗೆ ಹುಟ್ಟಿದವ ಭಾರತೀಯನಾಗಲಾರ, ರಾಹುಲ್ ಗಾಂಧಿ ವಿರುದ್ಧ ಪ್ರಜ್ಞಾ ಠಾಕೂರ್​ ಕಿಡಿ - Vistara News

ದೇಶ

Rahul Gandhi : ವಿದೇಶಿ ಮಹಿಳೆಗೆ ಹುಟ್ಟಿದವ ಭಾರತೀಯನಾಗಲಾರ, ರಾಹುಲ್ ಗಾಂಧಿ ವಿರುದ್ಧ ಪ್ರಜ್ಞಾ ಠಾಕೂರ್​ ಕಿಡಿ

ವಿದೇಶದಲ್ಲಿ ಕುಳಿತು ಭಾರತವನ್ನು ಟೀಕಿಸುವ ರಾಹುಲ್​ ಗಾಂಧಿಗೆ ಇಲ್ಲಿ ಇರುವುದಕ್ಕೆ ಅವಕಾಶ ಕೊಡಬಾರದು ಎಂಬುದಾಗಿ ಪ್ರಜ್ಞಾ ಸಿಂಗ್​ ಠಾಕೂರ್​ ಹೇಳಿದ್ದಾರೆ.

VISTARANEWS.COM


on

A person born to a foreign woman cannot be an Indian, Pragya Thakur sparks against Rahul Gandhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭೋಪಾಲ್​: ವಿದೇಶಿ ನೆಲದಲ್ಲಿ ನಿಂತು ಭಾರತದ ಬಗ್ಗೆ ಟೀಕೆ ಮಾಡುವ ವ್ಯಕ್ತಿಯನ್ನು ಇಲ್ಲಿಂದ ಹೊರಗಟ್ಟಬೇಕು ಎಂದು ರಾಹುಲ್​ ಗಾಂಧಿ (Rahul Gandhi) ವಿರುದ್ಧ ಭೋಪಾಲ್​ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್​ ಕಿಡಿಕಾರಿದ್ದಾರೆ. ಇತ್ತೀಚೆಗೆ ಬ್ರಿಟನ್​ನಲ್ಲಿ ಅಲ್ಲಿನ ಸಂಸದರ ನಿಯೋಗವನ್ನು ಉದ್ದೇಶಿಸಿ ಮಾತನಾಡುವ ವೇಳೆ ರಾಹುಲ್ ಗಾಂಧಿ, ನಮ್ಮ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಮೈಕ್​ಗಳನ್ನೇ ಆಫ್​ ಮಾಡಲಾಗುತ್ತದೆ. ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ರಾಹುಲ್​ ಗಾಂಧಿಯ ಈ ಹೇಳಿಕೆಗೆ ಸಾಧ್ವಿ ಪ್ರಜ್ಞಾ ಸಿಂಗ್​ ಮೇಲಿನಂತೆ ಪ್ರತಿಕ್ರಿಯೆಕೊಟ್ಟಿದ್ದಾರೆ.

ವಿದೇಶಿ ಮಹಿಳೆಯ ಪುತ್ರ ಎಂದಿಗೂ ದೇಶಪ್ರೇಮಿಯಾಗಿರಲಾರ ಎಂದು ಚಾಣಾಕ್ಯ ಹೇಳಿದ್ದರು. ಈ ಮಾತನ್ನು ರಾಹುಲ್ ಗಾಂಧಿ ಸಾಬೀತುಪಡಿಸಿದ್ದಾರೆ ಎಂದು ಸಾಧ್ವಿ ಪ್ರಜ್ಞಾ ಸಿಂಗ್​ ಲೇವಡಿ ಮಾಡಿದ್ದಾರೆ. ರಾಹುಲ್​ ಗಾಂಧಿ ಭಾರತದವರು ಅಲ್ಲ ಎಂಬುದನ್ನು ನಾವು ಮೊದಲೇ ಅಂದಾಜಿಸಿದ್ದೆವು. ಯಾಕೆಂದರೆ ಅವರ ತಾಯಿ ವಿದೇಶಿ ಮಹಿಳೆ ಎಂಬುದಾಗಿಯೂ ಪ್ರಜ್ಞಾ ಸಿಂಗ್ ಕಟಕಿಯಾಡಿದ್ದಾರೆ.

ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎಂಬುದಾಗಿ ನೀವು ವಿದೇಶದಲ್ಲಿ ಕುಳಿತು ಆರೋಪ ಮಾಡುತ್ತೀರಿ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ನಿಮಗೆ ರಾಜಕೀಯದಲ್ಲಿ ಬಿಡಿ, ದೇಶದಲ್ಲಿ ಇರುವುದಕ್ಕೂ ಅವಕಾಶ ಕೊಡಬಾರದು ಎಂಬುದಾಗಿ ಪ್ರಜ್ಞಾ ಸಿಂಗ್​ ಠಾಕೂರ್​ ಕಿಡಿಕಾರಿದ್ದಾರೆ.

ಸಂಸತ್ತಿನಲ್ಲಿ ಕಲಾಪಗಳು ನಡೆಯಲು ಕಾಂಗ್ರೆಸ್​ ಬಿಡುತ್ತಿಲ್ಲ. ಇದರಿಂದ ಹೆಚ್ಚಿನ ಕೆಲಸಗಳನ್ನು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಕೆಲಸ ಮಾಡಲು ಇನ್ನಷ್ಟು ಅವಕಾಶ ದೊರೆತರೆ ಕಾಂಗ್ರೆಸ್​ ನಿರ್ನಾಮವಾಗುತ್ತದೆ ಎಂಬುದಾಗಿಯೂ ಅವರು ಹೇಳಿದ್ದಾರೆ.

ಇದನ್ನೂ ಓದಿ : Rahul Gandhi: ರಾಹುಲ್‌ ಗಾಂಧಿಗೆ ಮಕ್ಕಳಾಗಲ್ಲ ಎಂದ ನಳಿನ್‌ ಕುಮಾರ್‌ ಕಟೀಲ್‌ಗೆ ಕಾಂಗ್ರೆಸ್‌ ಲೀಗಲ್‌ ನೋಟಿಸ್‌; 1 ಕೋಟಿ ರೂ. ಪಾವತಿಸಲು ಆಗ್ರಹ

ತಿರುಗೇಟು ಕೊಟ್ಟ ಕಾಂಗ್ರೆಸ್​

ಮಧ್ಯ ಪ್ರದೇಶ ಕಾಂಗ್ರೆಸ್​ ಮಾಧ್ಯಮ ವಿಭಾಗದ ಮುಖ್ಯಸ್ಥ ಕೆ. ಕೆ ಮಿಶ್ರಾ ಅವರು, ರಾಹುಲ್​ ಗಾಂಧಿಯನ್ನು ಟೀಕಿಸಿದ ಪ್ರಜ್ಞಾ ಸಿಂಗ್ ಠಾಕೂರ್​ಗೆ ತಿರುಗೇಟು ಕೊಟ್ಟಿದ್ದಾರೆ. ನೀವೊಬ್ಬರು ಬಾಂಬ್​ ಸ್ಫೋಟದ ಆರೋಪಿ. ನೀವು ಮಹಾರಾಷ್ಟ್ರದ ಮಾಲೆಗಾಂವ್​ನ ಮಸೀದಿ ಬಳಿ ಇಟ್ಟ ಬಾಂಬ್​ಗೆ 6 ಮಂದಿ ಮೃತಪಟ್ಟು 100 ಮಂದಿ ಗಾಯಗೊಂಡಿದ್ದಾರೆ ಎಂಬುದು ನೆನಪಿರಲಿ ಎಂದು ಅವರು ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Train Ticket Cancellation: ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಆರ್‌ಎಸಿ ಟಿಕೆಟ್‌ ರದ್ದು ಪಡಿಸಿದರೆ ಇನ್ನು ಮುಂದೆ ಕೇವಲ 60 ರೂ. ಕಡಿತ

Train Ticket Cancellation: ಐಆರ್‌ಟಿಸಿ (Indian Railway Catering and Tourism Corporation) ವೆಬ್‌ಸೈಟ್‌ನಿಂದ ಕಾಯ್ದಿರಿಸಿದ ಆರ್‌ಎಸಿ (Reservation Against Cancellation) ಟಿಕೆಟ್‌ಗಳನ್ನು ರದ್ದುಗೊಳಿಸಲು ಕನಿಷ್ಠ ಶುಲ್ಕವನ್ನು ವಿಧಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ (Train Ticket Cancellation). ಇನ್ನು ಮುಂದೆ ಟಿಕೆಟ್‌ ಕ್ಯಾನ್ಸಲ್‌ ಮಾಡಿದರೆ ಪ್ರತಿ ಪ್ರಯಾಣಿಕರಿಂದ ಕೇವಲ 60 ರೂ. ಕಡಿತವಾಗಲಿದೆ ಎಂದು ಮೂಲಗಳು ತಿಳಿಸಿವೆ. ಗಿರಿದಿಹ್‌ನ ಸಾಮಾಜಿಕ ಮತ್ತು ಆರ್‌ಟಿಐ ಕಾರ್ಯಕರ್ತ ಸುನಿಲ್ ಕುಮಾರ್ ಖಂಡೇಲ್ವಾಲ್ ಅವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ರೈಲ್ವೆ ಈ ನಿರ್ಧಾರ ಪ್ರಕಟಿಸಿದೆ.

VISTARANEWS.COM


on

Train Ticket Cancellation
Koo

ನವದೆಹಲಿ: ತನ್ನ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್‌ನ್ಯೂಸ್‌ ನೀಡಿದೆ. ಐಆರ್‌ಟಿಸಿ (Indian Railway Catering and Tourism Corporation) ವೆಬ್‌ಸೈಟ್‌ನಿಂದ ಕಾಯ್ದಿರಿಸಿದ ಆರ್‌ಎಸಿ (Reservation Against Cancellation) ಟಿಕೆಟ್‌ಗಳನ್ನು ರದ್ದುಗೊಳಿಸಲು ಕನಿಷ್ಠ ಶುಲ್ಕವನ್ನು ವಿಧಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ (Train Ticket Cancellation). ಇನ್ನು ಮುಂದೆ ಟಿಕೆಟ್‌ ಕ್ಯಾನ್ಸಲ್‌ ಮಾಡಿದರೆ ಪ್ರತಿ ಪ್ರಯಾಣಿಕರಿಂದ ಕೇವಲ 60 ರೂ. ಕಡಿತವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಗಿರಿದಿಹ್‌ನ ಸಾಮಾಜಿಕ ಮತ್ತು ಆರ್‌ಟಿಐ ಕಾರ್ಯಕರ್ತ ಸುನಿಲ್ ಕುಮಾರ್ ಖಂಡೇಲ್ವಾಲ್ ಅವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ರೈಲ್ವೆ ಈ ನಿರ್ಧಾರ ಪ್ರಕಟಿಸಿದೆ. ಟಿಕೆಟ್‌ ರದ್ದು ಪಡಿಸುವಾಗ ವಿಧಿಸಲಾಗುವ ಅನಿಯಂತ್ರಿತ ಶುಲ್ಕದ ಬಗ್ಗೆ ಖಂಡೇಲ್ವಾಲ್ ಏಪ್ರಿಲ್ 12ರಂದು ರೈಲ್ವೆ ಆಡಳಿತಕ್ಕೆ ಪತ್ರ ಬರೆದಿದ್ದರು. ಐಆರ್‌ಟಿಸಿ ವೆಬ್‌ಸೈಟ್‌ ಮುಖಾಂತರ ಬುಕ್‌ ಮಾಡಲಾದ ವೈಟಿಂಗ್‌ ಟಿಕೆಟ್‌ ಖಾತರಿಯಾಗದಿದ್ದರೆ ರೈಲ್ವೇ ಇಲಾಖೆಯೇ ಸ್ವತಃ ಅದನ್ನು ರದ್ದು ಪಡಿಸುತ್ತದೆ. ಈ ವೇಳೆ ಸೇವಾ ಶುಲ್ಕದ ಹೆಸರಿನಲ್ಲಿ ಪಾವತಿಯ ಬಹು ದೊಡ್ಡ ಮೊತ್ತವನ್ನು ಕಡಿತ ಮಾಡಲಾಗುತ್ತದೆ ಎಂದು ಸುನಿಲ್ ಕುಮಾರ್ ತಮ್ಮ ಪತ್ರದಲ್ಲಿ ವಿವರಿಸಿದ್ದರು.

ಇದನ್ನು ಅವರು ಉದಾಹರಣೆ ಸಹಿತ ವಿವರಿಸಿದ್ದರು. ಪ್ರಯಾಣಿಕರೊಬ್ಬರು 190 ರೂ. ಪಾವತಿಸಿ ವೈಟಿಂಗ್‌ ಟಿಕೆಟ್ ಅನ್ನು ಕಾಯ್ದಿರಿಸಿದ್ದಾರೆ ಎಂದಿಟ್ಟುಕೊಳ್ಳೋಣ. ಈ ಟಿಕೆಟ್‌ ಖಾತರಿಯಾಗದಿದ್ದರೆ ರೈಲ್ವೇ ಕೇವಲ 95 ರೂ.ಗಳನ್ನು ಮಾತ್ರ ಮರು ಪಾವತಿಸುತ್ತದೆ. ಅಂದರೆ ಸುಮಾರು 100 ರೂ. ಕಡಿತವಾಗುತ್ತದೆ ಎಂದು ಸುನಿಲ್ ಕುಮಾರ್ ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ಐಆರ್‌ಟಿಸಿ ಇದೀಗ ಈ ಮಹತ್ವದ ಕ್ರಮ ಕೈಗೊಂಡಿದೆ.

ಐಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಏಪ್ರಿಲ್ 18ರಂದು ಸುನಿಲ್ ಕುಮಾರ್ ಅವರಿಗೆ ಈ ಹೊಸ ಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ರೈಲ್ವೇ ನಿಗದಿಪಡಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ಐಆರ್‌ಟಿಸಿ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ʼʼಭಾರತೀಯ ರೈಲ್ವೆ ಸೂಚನೆಯ ಪ್ರಕಾರ ಇನ್ನು ಮುಂದೆ ವೈಟಿಂಗ್‌ ಟಿಕೆಟ್‌ ಕ್ಯಾನ್ಸಲ್‌ ಮಾಡಿದಾಗ ಕೇವಲ 60 ರೂ. ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆʼʼ ಎಂದು ಅವರು ವಿವರಿಸಿದ್ದಾರೆ. ದೂರನ್ನು ಪರಿಶೀಲಿಸಿ ತ್ವರಿತ ಕ್ರಮ ಕೈಗೊಂಡಿದ್ದಕ್ಕಾಗಿ ರೈಲ್ವೆ ಆಡಳಿತ ಮಂಡಳಿಗೆ ಸುನಿಲ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: Bullet Train: ಬುಲೆಟ್‌ ರೈಲು ಓಡೋದು ಯಾವಾಗ? ರೈಲ್ವೆ ಸಚಿವ ಹೇಳೋದಿಷ್ಟು

1230 ಕೋಟಿ ರೂ. ಆದಾಯ!

ಕಳೆದ ಮೂರು ವರ್ಷಗಳಲ್ಲಿ ರೈಲ್ವೇಯು ವೈಟಿಂಗ್‌ ಟಿಕೆಟ್‌ಗಳ ರದ್ದತಿಯಿಂದ ಬರೋಬ್ಬರಿ 1,230 ಕೋಟಿ ರೂ. ಆದಾಯ ಗಳಿಸಿದೆ ಎನ್ನುವ ವಿಚಾರ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

Continue Reading

ಪ್ರಮುಖ ಸುದ್ದಿ

Wealth Redistribution: ಸಂಪತ್ತು ಮರು ಹಂಚಿಕೆ ವಿವಾದದ ಬೆಂಕಿಗೆ ತುಪ್ಪ ಸುರಿದ ಸ್ಯಾಮ್ ಪಿತ್ರೊಡಾ; ಕಾಂಗ್ರೆಸ್‌ಗೆ ಫಜೀತಿ!

Wealth Redistribution: ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಸಂಪತ್ತು ಮರುಹಂಚಿಕೆಗೆ ಯೋಜನೆ ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು. ಇದಾದ ಬಳಿಕ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನಾಯಕ ಸ್ಯಾಮ್ ಪಿತ್ರೋಡಾ, ಅಮೆರಿಕದಲ್ಲಿ ವಿಧಿಸಲಾಗುತ್ತಿರುವ ಪಿತ್ರಾರ್ಜಿತ ತೆರಿಗೆಯ ಉದಾಹರಣೆಯನ್ನು ಎತ್ತಿದ್ದರು.

VISTARANEWS.COM


on

sam pitroda narendra modi
Koo

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ನೀಡಿರುವ ಒಂದು ಟಕ್ಕರ್‌ಗೆ ಕಾಂಗ್ರೆಸ್‌ ಪಕ್ಷ ವಿಲವಿಲ ಅನ್ನುತ್ತಿದೆ. ʼಸಂಪತ್ತು ಮರು ಹಂಚಿಕೆ (Wealth Redistribution) ಯೋಜನೆʼ ಬಗ್ಗೆ ಕಾಂಗ್ರೆಸ್‌ (Congress) ನಾಯಕ ನೀಡಿದ ಹೇಳಿಕೆಯಿಂದ ಸ್ವತಃ ಆ ಪಕ್ಷ ನಾಲಿಗೆ ಕಚ್ಚಿಕೊಳ್ಳುವಂತಾಗಿದೆ. ಕಾಂಗ್ರೆಸ್ ಸಂಪತ್ತಿನ ಮರುಹಂಚಿಕೆಗೆ ಯೋಜಿಸುತ್ತಿದೆ ಎಂಬ ಬಿಜೆಪಿ (BJP) ಆರೋಪಗಳ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ (Sam Pitroda) ನೀಡಿರುವ ಹೇಳಿಕೆ ವಿವಾದದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಿದೆ.

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಸಂಪತ್ತು ಮರುಹಂಚಿಕೆಗೆ ಯೋಜನೆ ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು. ಇದಾದ ಬಳಿಕ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನಾಯಕ ಸ್ಯಾಮ್ ಪಿತ್ರೋಡಾ, ಅಮೆರಿಕದಲ್ಲಿ ವಿಧಿಸಲಾಗುತ್ತಿರುವ ಪಿತ್ರಾರ್ಜಿತ ತೆರಿಗೆಯ ಉದಾಹರಣೆಯನ್ನು ಎತ್ತಿದ್ದರು.

“ನಾನು ಟಿವಿಯಲ್ಲಿನ ನನ್ನ ಸಾಮಾನ್ಯ ಸಂಭಾಷಣೆಯಲ್ಲಿ ಕೇವಲ ಉದಾಹರಣೆಯಾಗಿ US ನಲ್ಲಿ ಪಿತ್ರಾರ್ಜಿತ ತೆರಿಗೆಯನ್ನು ಪ್ರಸ್ತಾಪಿಸಿದ್ದೇನೆ. ನಾನು ಸತ್ಯಗಳನ್ನು ಉಲ್ಲೇಖಿಸಲು ಸಾಧ್ಯವಿಲ್ಲವೇ? ಜನರು ಚರ್ಚಿಸಲು ಮತ್ತು ಚರ್ಚಿಸಬೇಕಾದ ರೀತಿಯ ಸಮಸ್ಯೆಗಳೆಂದು ನಾನು ಹೇಳಿದೆ. ಇದು ಯಾವುದೇ ನೀತಿಯೊಂದಿಗೆ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಸೇರಿದಂತೆ ಪಕ್ಷ,” ಎಂದು ಅವರು ಹೇಳಿದರು. “55% ತೆಗೆದುಕೊಳ್ಳುವುದಾಗಿ ಯಾರು ಹೇಳಿದರು? ಭಾರತದಲ್ಲಿ ಇಂತಹದನ್ನು ಮಾಡಬೇಕು ಎಂದು ಯಾರು ಹೇಳಿದರು? ಬಿಜೆಪಿ ಮತ್ತು ಮಾಧ್ಯಮಗಳು ಏಕೆ ಗಾಬರಿಗೊಂಡಿವೆ?”

ಪ್ರಧಾನಿ ಹೇಳಿದ್ದೇನು?

ಪ್ರಧಾನಿಯವರು ತಮ್ಮ ಚುನಾವಣಾ ಭಾಷಣದಲ್ಲಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜನತೆಯ ಸಂಪತ್ತನ್ನು ಮುಸ್ಲಿಮರಿಗೆ ಮರು ಹಂಚಿಕೆ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಮುಸ್ಲಿಮರು ಈ ದೇಶದ ಆಸ್ತಿಯ ಮೇಲೆ ಪ್ರಥಮ ಆದ್ಯತೆ ಹೊಂದಿದ್ದಾರೆ ಎಂದು ಹೇಳಿದ್ದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಹೇಳಿಕೆಯನ್ನು ಅವರು ಉಲ್ಲೇಖಿಸಿದ್ದರು. ದಲಿತರ ಮೀಸಲಾತಿ ಕೋಟಾದಿಂದ ಒಂದಷ್ಟು ಭಾಗವನ್ನು ಮುಸ್ಲಿಮರಿಗಾಗಿ ಕಸಿಯುವ ಯೋಜನೆಯನ್ನು ಕಾಂಗ್ರೆಸ್‌ ಹೊಂದಿತ್ತು ಎಂದು ಅವರು ಆರೋಪಿಸಿದ್ದರು. ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿದ್ದ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿಯ ಬಗ್ಗೆ ಗುರಿಯಾಗಿಸಿದ್ದರು. ಇದಾದ ಬಳಿಕ ದೇಶದಲ್ಲಿ ವಾದವಿವಾದ ಹುಟ್ಟಿಕೊಂಡಿದ್ದು, ಕಾಂಗ್ರೆಸ್‌ ಇದು ಸುಳ್ಳು ಆರೋಪ ಎಂದು ಪ್ರಧಾನಿಯನ್ನು ಟೀಕಿಸಿತ್ತು.

ಸ್ಯಾಮ್ ಪಿತ್ರೋಡಾ ಹೇಳಿದ್ದೇನು?

ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರಾದ ಪಿತ್ರೋಡಾ, ಮೋದಿ ಹೇಳಿಕೆಯನ್ನು ಟೀಕಿಸಿದ್ದಾರೆ. “ಯಾವ ಪ್ರಧಾನಿಯೂ ಈ ರೀತಿ ಮಾತನಾಡುವುದಿಲ್ಲ. ಮೊದಲು ಇದು AI ರಚಿತವಾದ ವೀಡಿಯೊ ಎಂದು ನಾನು ಭಾವಿಸಿದೆವು. ಪ್ರಧಾನಿ ಭಾರತೀಯ ಪ್ರೇಕ್ಷಕರನ್ನು ಮೂರ್ಖರೆಂದು ಭಾವಿಸಿದ್ದಾರೆ. ಅವರು ಕಾನೂನಿಗಿಂತ ಮೇಲಲ್ಲ. ಕಾಂಗ್ರೆಸ್‌ನ ಪ್ರಣಾಳಿಕೆಯು ತುಂಬಾ ಚೆನ್ನಾಗಿ ರಚಿಸಲ್ಪಟ್ಟಿದೆ. ಅವರು ನಿಮ್ಮ ಚಿನ್ನ ಮತ್ತು ಮಂಗಳಸೂತ್ರವನ್ನು ಕದಿಯುತ್ತಾರೆ ಎಂದು ಹೇಳುವುದು ಅವರು ಕಟ್ಟಿದ ಕಥೆ. ಅವರು ಭಯಗೊಂಡಿದ್ದಾರೆ” ಎಂದು ಪಿತ್ರೋಡಾ ಹೇಳಿದ್ದಾರೆ.

“ಕಾಂಗ್ರೆಸ್ ಯಾವಾಗಲೂ ಆರ್ಥಿಕ ಪಿರಮಿಡ್‌ನ ಕೆಳಭಾಗದಲ್ಲಿರುವ ಜನರ ಮೇಲೆ ಕೇಂದ್ರೀಕರಿಸಿದೆ. ಅವರು ಒಬಿಸಿ, ಮುಸ್ಲಿಮರು, ದಲಿತರು ಅಥವಾ ಬುಡಕಟ್ಟು ಜನಾಂಗದವರು ಇರಬಹುದು. ಕೋಟ್ಯಧಿಪತಿಗಳಿಗೆ ನಮ್ಮ ಸಹಾಯ ಬೇಕಾಗಿಲ್ಲ. ಬಡವರಿಗೆ ನಮ್ಮ ಸಹಾಯ ಬೇಕು. ಕಳೆದ 10 ವರ್ಷಗಳಲ್ಲಿ ಅಸಮಾನತೆ ಗಣನೀಯವಾಗಿ ಹೆಚ್ಚಾಗಿದೆ” ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಅವರು ಅಮೆರಿಕದಲ್ಲಿರುವ ಸಂಪತ್ತಿನ ಮರುಹಂಚಿಕೆಯ ನಿಯಮವನ್ನು ಉಲ್ಲೇಖಿಸಿದ್ದರು. “ಅಮೆರಿಕದಲ್ಲಿ ಪಿತ್ರಾರ್ಜಿತ ತೆರಿಗೆ ಇದೆ. ಒಬ್ಬನು 100 ಮಿಲಿಯನ್ USD ಮೌಲ್ಯದ ಸಂಪತ್ತನ್ನು ಹೊಂದಿದ್ದರೆ ಅವನು ಸತ್ತಾಗ ಕೇವಲ 45 ಪ್ರತಿಶತವನ್ನು ತನ್ನ ಮಕ್ಕಳಿಗೆ ವರ್ಗಾಯಿಸಬಹುದು. 55 ಪ್ರತಿಶತವನ್ನು ಸರ್ಕಾರವು ಹೊಂದುತ್ತದೆ. ಅದು ಆಸಕ್ತಿದಾಯಕ ಕಾನೂನು. ನಿಮ್ಮ ಪೀಳಿಗೆಯಲ್ಲಿ ನೀವು ಸಂಪತ್ತನ್ನು ಸಂಪಾದಿಸಿದ್ದೀರಿ. ಮತ್ತು ನೀವು ಈಗ ಹೋಗುವಾಗ, ನಿಮ್ಮ ಸಂಪತ್ತನ್ನು ಸಾರ್ವಜನಿಕರಿಗೆ ಬಿಡಬೇಕು. ಎಲ್ಲವನ್ನೂ ಅಲ್ಲ, ಅದರಲ್ಲಿ ಅರ್ಧದಷ್ಟು, ಇದು ನ್ಯಾಯೋಚಿತವಾಗಿದೆ” ಎಂದು ಪಿತ್ರೋಡಾ ಹೇಳಿದ್ದರು.

ಪಿತ್ರೋಡಾ ಹೇಳಿಕೆಗಳಿಂದ ಕಾಂಗ್ರೆಸ್‌ ಪಕ್ಷ ದೂರ ಉಳಿದಿದೆ. “ಅದು ಪಕ್ಷದ ನೀತಿಯನ್ನು ಪ್ರತಿಬಿಂಬಿಸುವುದಿಲ್ಲ” ಎಂದು ಹೇಳಿದೆ. ಪಿತ್ರೋಡಾ ಅವರ ಕಾಮೆಂಟ್‌ಗಳು “ಸಂವೇದನಾಶೀಲವಾಗಿವೆ” ಹಾಗೂ “ಪ್ರಧಾನಿ ನರೇಂದ್ರ ಮೋದಿಯವರ ದುರುದ್ದೇಶಪೂರಿತ ಮತ್ತು ಚೇಷ್ಟೆಯ ಚುನಾವಣಾ ಪ್ರಚಾರದಿಂದ ಗಮನವನ್ನು ಬೇರೆಡೆ ಸೆಳೆಯುವ ಗುರಿಯನ್ನು ಹೊಂದಿವೆ” ಎಂದು ಕಾಂಗ್ರೆಸ್‌ ಮುಖಂಡ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Narendra Modi: ಕಾಂಗ್ರೆಸ್‌ ರಾಜ್ಯದಲ್ಲಿ ಹನುಮಾನ್‌ ಚಾಲೀಸಾ ಹೇಳುವುದೂ ಮಹಾಪರಾಧ; ರಾಜಸ್ಥಾನದಲ್ಲಿ ಮೋದಿಯಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ತರಾಟೆ

Continue Reading

ದೇಶ

VVPAT Verification: ಇವಿಯಂ-ವಿವಿಪ್ಯಾಟ್‌ ತಾಳೆ ಪ್ರಕರಣ; ಇಂದು ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

VVPAT Verification: ವಿದ್ಯುನ್ಮಾನ ಮತಯಂತ್ರಗಳಲ್ಲಿ ಚಲಾವಣೆಯಾಗುವ ಪ್ರತಿಯೊಂದು ಮತಗಳನ್ನೂ ವಿವಿಪ್ಯಾಟ್‌ನಲ್ಲಿ ದಾಖಲಾಗುವ ಮುದ್ರಿತ ಪ್ರತಿಯೊಂದಿಗೆ ತಾಳೆ ಹಾಕಬೇಕು ಎಂದು ಕೋರಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ ಇಂದು ತನ್ನ ತೀರ್ಪು ಪ್ರಕಟಿಸಲಿದೆ. ಮತ ಎಣಿಕೆ ವೇಳೆ ಪ್ರತಿ ಕ್ಷೇತ್ರದ ಆಯ್ದ ಬೂತ್‌ಗಳಲ್ಲಿ ಮಾತ್ರವೇ ಚಲಾವಣೆಯಾದ ಮತ ಮತ್ತು ವಿವಿಪ್ಯಾಟ್‌ನಲ್ಲಿ ದಾಖಲಾದ ಮುದ್ರಿತ ಪ್ರತಿಗಳೊಂದಿಗೆ ತಾಳೆ ಹಾಕಲಾಗುತ್ತದೆ. ಆದರೆ ಎಲ್ಲ ಮತಗಳನ್ನೂ ತಾಳೆ ಹಾಕಬೇಕು ಎಂದು ಅರ್ಜಿದಾರರು ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು.

VISTARANEWS.COM


on

VVPAT Verification
Koo

ನವದಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿ (EVM) ಚಲಾವಣೆಯಾಗುವ ಪ್ರತಿಯೊಂದು ಮತಗಳನ್ನೂ ವಿವಿಪ್ಯಾಟ್‌ನಲ್ಲಿ ದಾಖಲಾಗುವ ಮುದ್ರಿತ ಪ್ರತಿಯೊಂದಿಗೆ ತಾಳೆ ಹಾಕಬೇಕು (VVPAT Verification) ಎಂದು ಕೋರಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ (Supreme Court) ಇಂದು (ಏಪ್ರಿಲ್‌ 24) ತನ್ನ ತೀರ್ಪು ಪ್ರಕಟಿಸಲಿದೆ.

ಮತದಾರ ಇವಿಎಂನಲ್ಲಿ ಮತ ಚಲಾಯಿಸಿದ ಕೂಡಲೇ ಆತ ಯಾವ ಪಕ್ಷಕ್ಕೆ ಮತ ಹಾಕಿದ್ದಾನೆ ಎನ್ನುವ ವಿವರ ಆ ಪಕ್ಷದ ಅಭ್ಯರ್ಥಿಯ ಚಿಹ್ನೆಯೊಂದಿಗೆ ವಿವಿಪ್ಯಾಟ್‌ ಯಂತ್ರದಲ್ಲಿ ಕಾಣಿಸಿಕೊಂಡು ಬಳಿಕ ಮುದ್ರಿತ ರೂಪದಲ್ಲಿ ಒಳ ಸೇರಿಕೊಳ್ಳುತ್ತದೆ. ಆದರೆ ಮತ ಎಣಿಕೆ ವೇಳೆ ಪ್ರತಿ ಕ್ಷೇತ್ರದ ಆಯ್ದ ಬೂತ್‌ಗಳಲ್ಲಿ ಮಾತ್ರವೇ ಚಲಾವಣೆಯಾದ ಮತ ಮತ್ತು ವಿವಿಪ್ಯಾಟ್‌ನಲ್ಲಿ ದಾಖಲಾದ ಮುದ್ರಿತ ಪ್ರತಿಗಳೊಂದಿಗೆ ತಾಳೆ ಹಾಕಲಾಗುತ್ತದೆ. ಆದರೆ ಎಲ್ಲ ಮತಗಳನ್ನೂ ತಾಳೆ ಹಾಕಬೇಕು ಎಂದು ಅರ್ಜಿದಾರರು ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ನ್ಯಾಯಪೀಠವು ಎರಡು ದಿನಗಳ ವಿಚಾರಣೆಯ ನಂತರ ಏಪ್ರಿಲ್ 18ರಂದು ಅರ್ಜಿಗಳ ಮೇಲಿನ ತೀರ್ಪನ್ನು ಕಾಯ್ದಿರಿಸಿತ್ತು. ವಿಚಾರಣೆ ಚುನಾವಣಾ ಆಯೋಗದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಮಣಿಂದರ್ ಸಿಂಗ್, ʼʼಇವಿಎಂಗಳು ಸ್ವತಂತ್ರ ಯಂತ್ರಗಳಾಗಿವೆ ಮತ್ತು ಅವುಗಳನ್ನು ತಿರುಚಲು ಸಾಧ್ಯವಿಲ್ಲ. ಆದರೆ ಮಾನವ ದೋಷದ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲʼʼ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯವನ್ನು ಕಾಪಾಡಬೇಕು ಎಂದು ಒತ್ತಿ ಹೇಳಿದ ನ್ಯಾಯಮೂರ್ತಿ ದತ್ತಾ, “ನೀವು ನ್ಯಾಯಾಲಯದ ಒಳಗೆ ಮತ್ತು ನ್ಯಾಯಾಲಯದ ಹೊರಗೆ ಆತಂಕಗಳನ್ನು ನಿವಾರಿಸಬೇಕು. ನಿರೀಕ್ಷಿಸಿದ ಕೆಲಸವನ್ನು ಮಾಡಲಾಗುತ್ತಿಲ್ಲ ಎಂಬ ಆತಂಕ ಯಾರಿಗೂ ಇರಬಾರದು” ಎಂದು ಹೇಳಿದ್ದರು. ಜತೆಗೆ “ಎಲ್ಲವನ್ನೂ ಅನುಮಾನಿಸಲು ಸಾಧ್ಯವಿಲ್ಲ. ಚುನಾವಣಾ ಆಯೋಗ ಏನಾದರೂ ಒಳ್ಳೆಯದನ್ನು ಮಾಡಿದ್ದರೆ ನೀವು ಅದನ್ನು ಪ್ರಶಂಸಿಸಬೇಕು. ನೀವು ಎಲ್ಲವನ್ನೂ ಟೀಕಿಸಬೇಕಾಗಿಲ್ಲ” ಎಂದು ನ್ಯಾಯಪೀಠವು ಅರ್ಜಿದಾರರಿಗೆ ತಿಳಿಸಿತ್ತು.

ವಿವಿಪ್ಯಾಟ್ ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಮತ್ತು ಮತದಾರ ತಾವು ಬೆಂಬಲಿಸುವ ಅಭ್ಯರ್ಥಿಗೆ ಮತ ಚಲಾವಣೆ ಆಗಿದೆಯೇ ಎನ್ನುವುದನ್ನು ಖಾತರಿಪಡಿಸಲು ಅನುವು ಮಾಡಿಕೊಡುತ್ತದೆ. ವಿವಿಪ್ಯಾಟ್ ಮುದ್ರಿತ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಲಾಗುತ್ತದೆ ಮತ್ತು ವಿವಾದವಿದ್ದರೆ ಅದನ್ನು ತೆರೆಯಬಹುದಾಗಿದೆ. ಪ್ರಸ್ತುತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಇವಿಎಂಗಳ ವಿವಿಪ್ಯಾಟ್ ಸ್ಲಿಪ್‌ಗಳನ್ನು ಪರಿಶೀಲಿಸಲಾಗುತ್ತದೆ.

ಇದನ್ನೂ ಓದಿ: VVPAT Verification: ಇವಿಎಂ-ವಿವಿಪ್ಯಾಟ್‌ ತಾಳೆಯ ಪ್ರಕ್ರಿಯೆ ತಿಳಿಸಿ; ಆಯೋಗಕ್ಕೆ ಸುಪ್ರೀಂ ಸೂಚನೆ

ಅರ್ಜಿದಾರರ ಆತಂಕವೇನು?

ಇವಿಎಂ ಮತದಾನದ ವ್ಯವಸ್ಥೆಯ ಬಗ್ಗೆ ಪ್ರತಿಪಕ್ಷಗಳ ಪ್ರಶ್ನೆಗಳು ಮತ್ತು ಆತಂಕಗಳ ನಡುವೆ, ಕೋರ್ಟ್‌ಗೆ ಸಲ್ಲಿಸಿದ ಅರ್ಜಿಗಳು ಪ್ರತಿ ಮತದ ಪರಿಶೀಲನೆ ನಡೆಸಬೇಕು ಎಂದು ಮನವಿ ಸಲ್ಲಿಸಿವೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ಕಾರ್ಯಕರ್ತ ಅರುಣ್ ಕುಮಾರ್ ಅಗರ್ವಾಲ್ ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅಗರ್ವಾಲ್ ಅವರು ಎಲ್ಲಾ ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಕೆ ಮಾಡಲು ಕೋರಿದ್ದಾರೆ. ಹೀಗಾಗಿ ಇಂದಿನ ತೀರ್ಪು ಕುತೂಹಲ ಮೂಡಿಸಿದೆ.

Continue Reading

ವೈರಲ್ ನ್ಯೂಸ್

Board Exam Result: 93.5% ಫಲಿತಾಂಶ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ! ಐಸಿಯುಗೆ ದಾಖಲು

Board Exam Result: ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಸಂತೋಷದಿಂದ ಜಿಗಿಯುವುದು ಸ್ವಾಭಾವಿಕ. ವಿಶೇಷವಾಗಿ, 90%ಕ್ಕಿಂತ ಹೆಚ್ಚಿರುವಾಗ ಇನ್ನಷ್ಟು ಸಂತಸವಾಗುತ್ತದೆ. ಆದರೆ ಮೀರತ್‌ನ 10ನೇ ತರಗತಿಯ ವಿದ್ಯಾರ್ಥಿ ತನ್ನ ಫಲಿತಾಂಶಗಳನ್ನು ನೋಡಿದ ನಂತರ ಮೂರ್ಛೆ ಹೋದ.

VISTARANEWS.COM


on

board exam tension viral news
Koo

ಲಖನೌ: ತನ್ನ ಯುಪಿ ಬೋರ್ಡ್ (UP Board Exam, Public Exam) 10ನೇ ತರಗತಿಯ ಪರೀಕ್ಷೆಯಲ್ಲಿ 93.5% ಅಂಕಗಳನ್ನು ಪಡೆದ ಪಾಸಾದ ವಿದ್ಯಾರ್ಥಿಯೊಬ್ಬ (Student), ಫಲಿತಾಂಶ ನೋಡಿದ ಕ್ಷಣವೇ ನಂಬಲಾಗದೆ ಮೂರ್ಛೆ ಹೋಗಿದ್ದಾನೆ. ನಂತರ ಈತನನ್ನು ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಯಿತು.

ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಸಂತೋಷದಿಂದ ಜಿಗಿಯುವುದು ಸ್ವಾಭಾವಿಕ. ವಿಶೇಷವಾಗಿ, 90%ಕ್ಕಿಂತ ಹೆಚ್ಚಿರುವಾಗ ಇನ್ನಷ್ಟು ಸಂತಸವಾಗುತ್ತದೆ. ಆದರೆ ಮೀರತ್‌ನ 10ನೇ ತರಗತಿಯ ವಿದ್ಯಾರ್ಥಿ ತನ್ನ ಫಲಿತಾಂಶಗಳನ್ನು ನೋಡಿದ ನಂತರ ಮೂರ್ಛೆ ಹೋದ. ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ ವಿದ್ಯಾರ್ಥಿಗಳು ಅನುಭವಿಸುವ ಒತ್ತಡವನ್ನು ಇದು ಎತ್ತಿ ತೋರಿಸಿದೆ.

ತನ್ನ ಯುಪಿ ಬೋರ್ಡ್ 10ನೇ ತರಗತಿಯ ಪರೀಕ್ಷೆಯಲ್ಲಿ 93.5% ಪಡೆದ ನಂತರ, ಐಸಿಯುಗೆ ದಾಖಲಾದ ವಿದ್ಯಾರ್ಥಿ ನಂತರ ಚೇತರಿಸಿಕೊಂಡಿದ್ದಾನೆ. ಮೀರತ್‌ನ ಮೋದಿಪುರಂನಲ್ಲಿರುವ ಮಹರ್ಷಿ ದಯಾನಂದ ಇಂಟರ್ ಕಾಲೇಜಿನ 16 ವರ್ಷದ ಅನ್ಶುಲ್ ಕುಮಾರ್ ತನ್ನ ಪರೀಕ್ಷೆಗಳಲ್ಲಿ 93.5% ಅಂಕಗಳನ್ನು ಗಳಿಸಿದ್ದಾನೆ. ಆದರೆ ಸಂತೋಷದ ಕ್ಷಣವೇ ಆತನ ಕುಟುಂಬಕ್ಕೆ ದುಃಖದಾಯಕವಾಯಿತು. ಆತನ ಸ್ಥಿತಿ ಸುಧಾರಿಸದ ಕಾರಣ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ಕುಮಾರ್ ಬೇಗನೆ ಪ್ರಜ್ಞೆಯನ್ನು ಪಡೆದ.

ಉತ್ತರ ಪ್ರದೇಶದಲ್ಲಿ 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಏಪ್ರಿಲ್ 20, 2024ರಂದು ಬಿಡುಗಡೆ ಮಾಡಲಾಯಿತು. 10 ನೇ ತರಗತಿಯಲ್ಲಿ 89.55% ಮತ್ತು 12 ನೇ ತರಗತಿಯಲ್ಲಿ 82.60% ಮಂದಿ ಉತ್ತೀರ್ಣರಾಗಿದ್ದಾರೆ. ಶುಭಂ ವರ್ಮಾ ಮತ್ತು ಪ್ರಾಚಿ ನಿಗಮ್ ಯುಪಿಎಂಎಸ್‌ಪಿ 10 ಮತ್ತು 12 ನೇ ತರಗತಿಯಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು.

ಇದನ್ನೂ ಓದಿ: Drought Relief: ಒಂದು ವಾರದಲ್ಲಿ ಕರ್ನಾಟಕಕ್ಕೆ ಬರ ಪರಿಹಾರ; ಸುಪ್ರೀಂಗೆ ಕೇಂದ್ರ ಮಹತ್ವದ ಮಾಹಿತಿ

Continue Reading
Advertisement
Sachin Tendulkar Net Worth Assets Owned
ಕ್ರಿಕೆಟ್14 mins ago

Sachin Birthday: ಸಚಿನ್ ತೆಂಡೂಲ್ಕರ್ ಬಳಿ ಇರುವ ಅತ್ಯಂತ ದುಬಾರಿ ಆಸ್ತಿಗಳಿವು!

gold model
ಚಿನ್ನದ ದರ15 mins ago

Gold Rate Today: ಚಿನ್ನದ ಬೆಲೆ ಇಂದು ತುಸು ಏರಿಕೆ; 22K, 24K ಬಂಗಾರದ ಬೆಲೆಗಳನ್ನು ಇಲ್ಲಿ ಖಚಿತಪಡಿಸಿಕೊಳ್ಳಿ

Lok Sabha Election 2024 ID raid in Bengaluru South Lok Sabha constituency 21.15 crore Gold ornaments seized in 2 days
ಕರ್ನಾಟಕ29 mins ago

Lok Sabha Election 2024: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಐಡಿ ರೇಡ್;‌ 2 ದಿನದಲ್ಲಿ 21.15 ಕೋಟಿ ರೂ. ಚಿನ್ನಾಭರಣ ವಶ!

Train Ticket Cancellation
ದೇಶ38 mins ago

Train Ticket Cancellation: ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಆರ್‌ಎಸಿ ಟಿಕೆಟ್‌ ರದ್ದು ಪಡಿಸಿದರೆ ಇನ್ನು ಮುಂದೆ ಕೇವಲ 60 ರೂ. ಕಡಿತ

sam pitroda narendra modi
ಪ್ರಮುಖ ಸುದ್ದಿ44 mins ago

Wealth Redistribution: ಸಂಪತ್ತು ಮರು ಹಂಚಿಕೆ ವಿವಾದದ ಬೆಂಕಿಗೆ ತುಪ್ಪ ಸುರಿದ ಸ್ಯಾಮ್ ಪಿತ್ರೊಡಾ; ಕಾಂಗ್ರೆಸ್‌ಗೆ ಫಜೀತಿ!

Rajkumar Birth Anniversary Dodmane family visited Rajkumar Samadhi
ಸಿನಿಮಾ1 hour ago

Rajkumar Birth Anniversary: ರಾಜ್ ಕುಮಾರ್ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ

Zero Shadow Day
ವಿಜ್ಞಾನ2 hours ago

Zero Shadow Day: ಇಂದು ಬೆಂಗಳೂರಿನಲ್ಲಿ ನೆರಳೇ ಮೂಡುವುದಿಲ್ಲ; ಅದ್ಯಾಕೆ? ಏನಿದು ʼಶೂನ್ಯ ನೆರಳಿನ ದಿನʼ ?

Karan Johar receives Director of the Year award from Vice President of India
ಬಾಲಿವುಡ್2 hours ago

Karan Johar: ಉಪ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ ಕರಣ್ ಜೋಹರ್

VVPAT Verification
ದೇಶ2 hours ago

VVPAT Verification: ಇವಿಯಂ-ವಿವಿಪ್ಯಾಟ್‌ ತಾಳೆ ಪ್ರಕರಣ; ಇಂದು ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

board exam tension viral news
ವೈರಲ್ ನ್ಯೂಸ್3 hours ago

Board Exam Result: 93.5% ಫಲಿತಾಂಶ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ! ಐಸಿಯುಗೆ ದಾಖಲು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌