ಏಕಸದಸ್ಯ ಪೀಠದ ತೀರ್ಪು ರದ್ದುಗೊಳಿಸಿದ ಮದ್ರಾಸ್​ ಹೈಕೋರ್ಟ್​ ದ್ವಿಸದಸ್ಯ ಪೀಠ; ಪಳನಿಸ್ವಾಮಿ ಬಾಸ್​​ - Vistara News

ದೇಶ

ಏಕಸದಸ್ಯ ಪೀಠದ ತೀರ್ಪು ರದ್ದುಗೊಳಿಸಿದ ಮದ್ರಾಸ್​ ಹೈಕೋರ್ಟ್​ ದ್ವಿಸದಸ್ಯ ಪೀಠ; ಪಳನಿಸ್ವಾಮಿ ಬಾಸ್​​

ಪನ್ನೀರಸೆಲ್ವಂ ಮತ್ತು ಪಳನಿಸ್ವಾಮಿ ನಡುವಿನ ಕಾನೂನು ಹೋರಾಟ ಮುಂದುವರಿದಿದೆ. ಅಂದು ಮದ್ರಾಸ್ ಹೈಕೋರ್ಟ್​​ನ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ದ್ವಿಸದಸ್ಯ ಪೀಠ ರದ್ದುಗೊಳಿಸಿದೆ.

VISTARANEWS.COM


on

Tamil Nadu
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಪಕ್ಷದ ನಾಯಕತ್ವ ವಿಚಾರಕ್ಕೆ (AIADMK Power Tussle)ಸಂಬಂಧಪಟ್ಟಂತೆ ಒ. ಪನ್ನೀರಸೆಲ್ವಂ ಮತ್ತು ಕೆ.ಪಳನಿಸ್ವಾಮಿ ನಡುವೆ ನಡೆಯುತ್ತಿರುವ ಕಾನೂನು ಹೋರಾಟದಲ್ಲಿ ಈಗ ಒ.ಪನ್ನೀರಸೆಲ್ವಂಗೆ ಹಿನ್ನಡೆಯಾಗಿದೆ. ಆಗಸ್ಟ್​ 17ರಂದು ಮದ್ರಾಸ್ ಹೈಕೋರ್ಟ್​, ಒ ಪನ್ನೀರಸೆಲ್ವಮ್​ ಪರ ತೀರ್ಪು ನೀಡಿತ್ತು. ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ಪ್ರಧಾನಕಾರ್ಯದರ್ಶಿಯನ್ನಾಗಿ ಕೆ.ಪಳನಿಸ್ವಾಮಿ ಆಯ್ಕೆ ಮಾಡಿದ್ದನ್ನು ಅಮಾನ್ಯಗೊಳಿಸಿ, ಹೈಕೋರ್ಟ್​ನ ನ್ಯಾ. ಜಯಚಂದ್ರನ್ ತೀರ್ಪು ನೀಡಿದ್ದರು. ಇದರಿಂದ ತೀವ್ರ ಹಿನ್ನಡೆ ಅನುಭವಿಸಿದ ಪಳನಿಸ್ವಾಮಿ, ಆದೇಶ ಮರುಪರಿಶೀಲಿಸುವಂತೆ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್​ನ ಎಂ.ದೊರೆಸ್ವಾಮಿ ಮತ್ತು ನ್ಯಾ.ಸುಂದರ್ ಮೋಹನ್​ ಅವರನ್ನೊಳಗೊಂಡ ಪೀಠ, ಅಂದು ನ್ಯಾ. ಜಯಚಂದ್ರನ್​ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ. ಅಲ್ಲಿಗೆ ಇ.ಕೆ.ಪಳನಿಸ್ವಾಮಿಯವರೇ ಎಐಎಡಿಎಂಕೆ ಬಾಸ್​ ಆಗಿದ್ದಾರೆ.

ಜಯಲಲಿತಾ ಮೃತಪಟ್ಟ ಮೇಲೆ ಅವರ ಆಪ್ತೆ ಶಶಿಕಲಾ ಪಕ್ಷದ ಮೇಲೆ ಸಂಪೂರ್ಣ ಅಧಿಪತ್ಯ ಸ್ಥಾಪಿಸಲು ಮುಂದಾದ ಹೊತ್ತಲ್ಲಿ, ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಒಟ್ಟಾಗಿದ್ದರು. ಪಕ್ಷದಲ್ಲಿ ದ್ವಿನಾಯಕತ್ವ ಅಸ್ತಿತ್ವಕ್ಕೆ ಬಂದಿತ್ತು. ಆದರೆ 2021ರ ತಮಿಳುನಾಡಿನ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷಕ್ಕೆ ಸೋಲಾಗಿ, ಜನರು ಡಿಎಂಕೆಯನ್ನು ಅಧಿಕಾರಕ್ಕೆ ಏರಿಸಿದ ಬೆನ್ನಲ್ಲೇ, ಪಕ್ಷದಲ್ಲಿ ದ್ವಿನಾಯಕತ್ವದ ಬಗ್ಗೆ ಅಸಮಾಧಾನ ಶುರುವಾಯಿತು. ಇಬ್ಬರು ನಾಯಕರಿದ್ದರೆ ಎಲ್ಲ ವಿಷಯದಲ್ಲೂ ಗೊಂದಲ ಉಂಟಾಗುತ್ತದೆ. ಒಂದು ಪಕ್ಷ, ಒಬ್ಬ ನಾಯಕ ನಿಯಮ ಇರಬೇಕು ಪಕ್ಷದ ಅನೇಕರು ದುಂಬಾಲುಬಿದ್ದರು. ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಇಬ್ಬರಲ್ಲಿ ಪಳನಿಸ್ವಾಮಿ ಬೆಂಬಲಿಗರ ಸಂಖ್ಯೆ ಪಕ್ಷದಲ್ಲಿ ಜಾಸ್ತಿ ಇದ್ದಿದ್ದರಿಂದ ಅವರೇ ನಾಯಕರಾಗಲಿ ಎಂಬ ಮಾತೇ ಕೇಳಿಬಂತು. ಇದು ಒಪಿಎಸ್​-ಇಪಿಎಸ್​ ಕಾಳಗಕ್ಕೆ ಕಾರಣವಾಗಿದೆ.

ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಇಬ್ಬರಲ್ಲಿ ನಾಯಕತ್ವ ಯಾರಿಗೆ? ಎಂಬುದನ್ನು ಚರ್ಚಿಸಲು ಇದೇ ವರ್ಷ ಜೂನ್​ ತಿಂಗಳಲ್ಲಿ ಪಕ್ಷದ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಆದರೆ ಅಲ್ಲಿ ಏನೂ ತೀರ್ಮಾನ ಆಗಿರಲಿಲ್ಲ. ಜುಲೈ 11ಕ್ಕೆ ಮತ್ತೆ ಎಐಎಡಿಎಂಕೆ ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆಸಿದ್ದರು. ಅದರಲ್ಲಿ ಪಳನಿಸ್ವಾಮಿ ಪಕ್ಷದ ಪ್ರಧಾನಕಾರ್ಯದರ್ಶಿಯಾಗಿ ನೇಮಕಗೊಂಡು, ಪನ್ನೀರಸೆಲ್ವಂರನ್ನು ಉಚ್ಚಾಟನೆ ಮಾಡಲಾಗಿತ್ತು. ತನ್ನನ್ನು ಉಚ್ಚಾಟನೆ ಮಾಡಿದ್ದನ್ನು ಪ್ರಶ್ನಿಸಿ ಪನ್ನೀರಸೆಲ್ವಂ ಮದ್ರಾಸ್ ಹೈಕೋರ್ಟ್​ಗೆ ಹೋಗಿದ್ದರು. ಮೊದಲ ಸಲ ಏಕಸದಸ್ಯ ಪೀಠದಲ್ಲಿ ಅವರಿಗೆ ಗೆಲುವಾದಂತೆ ಕಂಡರೂ, ಇದೀಗ ದ್ವಿಸದಸ್ಯ ಪೀಠದ ತೀರ್ಪಿನಿಂದ ಮತ್ತೆ ಹಿನ್ನಡೆಯಾಗಿದೆ.

ಇದನ್ನೂ ಓದಿ:ವಿಸ್ತಾರ Explainer: ಎಐಎಡಿಎಂಕೆ ಬಿರುಕು, ಅಣ್ಣಾ ದ್ರಾವಿಡ ಕಳಗಂನಲ್ಲಿ ಅಣ್ಣಂದಿರ ಕಾಳಗವೇಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Latest

ಮೋದಿ-ಸಿದ್ದರಾಮಯ್ಯ ಗುಸುಗುಸು: ಇಬ್ಬರೂ ಮಾತನಾಡಿದ ವಿಷಯ ಬಹಿರಂಗ

VISTARANEWS.COM


on

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದಾಗ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದು ಸರಿಯಷ್ಟೇ. ಈ ಸಂದರ್ಭದಲ್ಲಿ ಮೋದಿ ಅವರು ಸಿದ್ದರಾಮಯ್ಯ ಅವರ ಕಿವಿಯಲ್ಲಿ ಪಿಸುಗುಟ್ಟಿದ ಫೋಟೋ ಭಾರಿ ವೈರಲ್‌ ಆಗಿದ್ದು, ತೀವ್ರ ಕುತೂಹಲ ಮೂಡಿಸಿತ್ತು. ಮೋದಿ ಅವರು ಸಿದ್ದರಾಮಯ್ಯ ಅವರ ಕಿವಿಯಲ್ಲಿ ಏನು ಹೇಳಿರಬಹುದು ಎಂದು ಕುತೂಹಲ ಮೂಡಿದ್ದು ಮಾತ್ರವಲ್ಲದೆ, ಊಹಾಪೋಹಗಳಿಗೂ ಕಾರಣವಾಗಿತ್ತು.
ಇದೀಗ ಮೋದಿ-ಸಿದ್ದರಾಮಯ್ಯ ಅವರ ಮಾತಿನ ರಹಸ್ಯ ಬಹಿರಂಗವಾಗಿದೆ. ಸ್ವತಃ ಸಿದ್ದರಾಮಯ್ಯ ಅವರೇ ಗುಟ್ಟನ್ನು ಬಹಿರಂಗಗೊಳಿಸಿದ್ದಾರೆ.
ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಮೋದಿ ಇಬ್ಬರು ಗುಟ್ಟಾಗಿ ಏನನ್ನೂ ಮಾತನಾಡಿಲ್ಲ. ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳೀದರು. ನಾನು ಮಹಿಳಾ ಮೀಸಲಾತಿ ಪರವಾಗಿದ್ದೇನೆ ಎಂದು ಉತ್ತರಿಸಿದೆ. ಇಷ್ಟು ವಿಚಾರ ಬಿಟ್ಟು ಬೇರೆ ಏನೂ ಇಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

Continue Reading

Latest

ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಪರವಾಗಿಲ್ಲ: ಸಿಎಂ ಸಿದ್ದರಾಮಯ್ಯ ಟೀಕೆ

VISTARANEWS.COM


on

ಮೈಸೂರು: ಕ್ಷೇತ್ರ ಮರುವಿಂಗಡನೆಯನ್ನು ಹೊಸ ಜನಗಣತಿಯಾದ ನಂತರ ಮಾಡುವುದು ಸೂಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಎರಡು ದಿನಗಳ ಪ್ರವಾಸ ನಿಮಿತ್ತ ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.
ನಾವು ಅದಕ್ಕಾಗಿಯೇ ಕ್ಷೇತ್ರ ಮರು ವಿಂಗಡಣೆಯನ್ನು ವಿರೋಧ ಮಾಡಿದೆವು. ನಾವು ಎಂದಿಗೂ ಮಹಿಳಾ ಮೀಸಲಾತಿಯ ಪರವಾಗಿಯೇ ಇದ್ದೇವೆ. ಸಂವಿಧಾನಕ್ಕೆ 73, 74ನೇ ತಿದ್ದುಪಡಿಯನ್ನು ತಂದಿದ್ದು ಕಾಂಗ್ರೆಸ್ ಪಕ್ಷ. ಸ್ಥಳೀಯ ಸಂಸ್ಥೆಗಳಲ್ಲಿ 50% ಮಹಿಳಾ ಮೀಸಲಾತಿ ತಂದಿದ್ದು ಕೂಡ ಕಾಂಗ್ರೆಸ್ ಪಕ್ಷವೇ. 2023 ರಲ್ಲಿಯೇ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದ್ದು ಆಗಲೇ ಅದನ್ನು ಜಾರಿ ಮಾಡಬೇಕಿತ್ತು, ಇಲ್ಲಿಯವರೆಗೆ ಏಕೆ ಕಾಯಬೇಕಿತ್ತು ಎಂದರು.
ಗ್ಯಾರಂಟಿಗಳನ್ನು ಎಲ್ಲಾ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿರುವ ಬಗ್ಗೆ ಮಾತನಾಡಿ 2023 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿರೋಧಿಸಿದ್ದರು. ಈಗ ಅವರೇ ಯೋಜನೆಗಳನ್ನು ಘೋಷಿಸುತ್ತಿದ್ದಾರೆ ಎಂದರು.
ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಪರವಾಗಿಲ್ಲ:
ಮಹಿಳಾ ಮೀಸಲಾತಿ ಮಸೂದೆಯನ್ನು ತಿರಸ್ಕರಿಸುವ ಮೂಲಕ ಕಾಂಗ್ರೆಸ್ ಭ್ರೂಣ ಹತ್ಯೆ ಮಾಡಿದೆ ಎಂದು ಪ್ರಧಾನಿಗಳು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಪ್ರಧಾನಿಗಳದ್ದು ತಾರತಮ್ಯದ ಧೋರಣೆಯಾಗಿದ್ದು, ಅವರು ಸಾಮಾಜಿಕ ನ್ಯಾಯದ ಪರವಾಗಿಲ್ಲ ಎಂದರು.
ಅವರು ಅಧಿಕಾರಕ್ಕೆ ಬಂದು 12 ವರ್ಷಗಳಲ್ಲಿ ಮಹಿಳಾ ಮೀಸಲಾತಿ ಏಕೆ ಜಾರಿಮಾಡಲಿಲ್ಲ ಎಂದು ಪ್ರಶ್ನಿಸಿದರು. ಈಗಲೂ 2023ರ ಪ್ರಕಾರ ಜಾರಿ ಮಾಡಲಿ. ಕ್ಷೇತ್ರ ಮರು ವಿಂಗಡನೆಯನ್ನು ಜನಗಣತಿಯಾದ ನಂತರ ಮಾಡಿದರೆ ಸೂಕ್ತ ಎಂದರು. ಲೋಕಸಭಾ ಸ್ಥಾನಗಳನ್ನು ಶೇಕಡ 50% ರಷ್ಟು ಹೆಚ್ಚು ಮಾಡುವುದಾಗಿ ಹೇಳಿದ್ದು, ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಜನಗಣತಿ ಮಾಡಿ ಎಲ್ಲರಿಗೂ ಸಮಾನವಾಗಿ ಸ್ಥಾನಗಳನ್ನು ಕೊಡಬೇಕು ಎಂದರು.
ಕ್ಷೇತ್ರ ಮರು ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ:
ಜನಸಂಖ್ಯೆ ನಿಯಂತ್ರಣವನ್ನು ದಕ್ಷಿಣ ಭಾರತದ ರಾಜ್ಯಗಳು ಉತ್ತಮವಾಗಿ ಮಾಡಿದ್ದು, ಉತ್ತರ ಭಾರತದ ರಾಜ್ಯಗಳು ಮಾಡಿಲ್ಲ. ಸಹಜವಾಗಿಯೇ ಅವರಿಗೆ ಅನುಕೂಲ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಅನಾನುಕೂಲವಾಗಲಿದೆ ಎಂದರು. ಬಹುಮತ ವಿಲ್ಲ ಎಂದು ಗೊತ್ತಿದ್ದು ಮಸೂದೆಯನ್ನು ಮಂಡಿಸಬಾರದಿತ್ತು
ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ಜನ ಪಾಠ ಕಲಿಸಲಿದ್ದಾರೆ ಎಂಬ ಪ್ರಧಾನಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಪ್ರಧಾನಿಗಳು ರಾಜಕೀಯ ಮಾಡುತ್ತಿದ್ದಾರೆ. ಮೂರನೇ ಎರಡರಷ್ಟು ಬಹುಮತವಿಲ್ಲ ಎಂದು ಗೊತ್ತಿದ್ದೂ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡಣೆಯನ್ನು ಒಟ್ಟಿಗೆ ತರಬೇಕಾದ ಅಗತ್ಯವಿರಲಿಲ್ಲ ಎಂದು ಹೇಳಿದರು.
ಶಾಸಕ ಎನ್.ಎ ಹ್ಯಾರೀಸ್ ಅವರ ಮನೆಯ ಮೇಲೆ ಇಡಿ ದಾಳಿಯಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಈ ಬಗ್ಗೆ ನನಗೆ ತಿಳಿದಿಲ್ಲ ಎಂದರು.
ಮೂಲಗಳ ಪ್ರಕಾರ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಮಿತ್ರ ಪಕ್ಷಗಳು ಗೆಲ್ಲಲಿದ್ದು ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

Continue Reading

ಫ್ಯಾಷನ್

ದೇಶದ ಗಮನ ಸೆಳೆದ ಕಾರವಾರದ ಪ್ರತಿಭೆ: ಶಾಸಕ ಸತೀಶ್ ಸೈಲ್ ಪುತ್ರಿಗೆ ‘ಮಿಸ್ ಇಂಡಿಯಾ’ ಕಿರೀಟದ ಗರಿ.

VISTARANEWS.COM


on

ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಕಾರವಾರದ ಸುಂದರಿ: ವಿಶ್ವ ಸುಂದರಿ ಸ್ಪರ್ಧೆಗೆ ಸಜ್ಜಾದ ಸಾಧ್ವಿ ಸೈಲ್‌!

ಭುವನೇಶ್ವರ: ಒಡಿಶಾದ ಭುವನೇಶ್ವರದಲ್ಲಿ ನಡೆದ 61ನೇ ಆವೃತ್ತಿಯ ‘ಫೆಮಿನಾ ಮಿಸ್ ಇಂಡಿಯಾ-2026’ ಸೌಂದರ್ಯ ಸ್ಪರ್ಧೆಯಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸತೀಶ್ ಸೈಲ್ ಐತಿಹಾಸಿಕ ಜಯ ದಾಖಲಿಸಿದ್ದಾರೆ. ದೇಶದ ವಿವಿಧ ರಾಜ್ಯಗಳ 30 ಸ್ಪರ್ಧಿಗಳನ್ನು ಹಿಂದಿಕ್ಕಿ ಮಿಸ್ ಇಂಡಿಯಾ ಪಟ್ಟ ಅಲಂಕರಿಸಿರುವ ಸಾಧ್ವಿ, ಈ ಮೂಲಕ ಗೋವಾ ರಾಜ್ಯಕ್ಕೆ ಮೊದಲ ಬಾರಿಗೆ ಈ ಪ್ರತಿಷ್ಠಿತ ಗೌರವವನ್ನು ತಂದುಕೊಟ್ಟಿದ್ದಾರೆ. ಕನ್ನಡಿಗರಿಗೆ ಮತ್ತು ಕರಾವಳಿ ಭಾಗಕ್ಕೆ ಸಾಧ್ವಿ ಅವರ ಈ ಸಾಧನೆ ಅಪಾರ ಹೆಮ್ಮೆ ತಂದಿದೆ.

27 ವರ್ಷದ ಸಾಧ್ವಿ ಸೈಲ್ ಸೌಂದರ್ಯದ ಜೊತೆಗೆ ಅಪ್ರತಿಮ ಬುದ್ಧಿವಂತಿಕೆಯನ್ನೂ ಹೊಂದಿದ್ದಾರೆ. ಇವರು ಕೆನಡಾದ ಪ್ರತಿಷ್ಠಿತ ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾದಲ್ಲಿ ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಡಬಲ್ ಮೇಜರ್ ಪದವಿ ಪಡೆದಿದ್ದಾರೆ. ವಿಶೇಷವೆಂದರೆ ಸಾಧ್ವಿ ಅವರಿಗೆ ಕನ್ನಡ, ಕೊಂಕಣಿ ಸೇರಿ ಒಟ್ಟು ಏಳು ಭಾಷೆಗಳಲ್ಲಿ ಮಾತನಾಡಲು ತಿಳಿದಿದೆ. ಜೇನು ಕೃಷಿ, ಫೋಟೋಗ್ರಫಿ ಮತ್ತು ಬ್ಯಾಡ್ಮಿಂಟನ್‌ನಂತಹ ವಿಭಿನ್ನ ಹವ್ಯಾಸಗಳನ್ನು ಹೊಂದಿರುವ ಇವರು, ‘ಬ್ಯೂಟಿ ವಿತ್ ಬ್ರೈನ್ಸ್’ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.

ಕೇವಲ ಮಾಡೆಲಿಂಗ್ ಕ್ಷೇತ್ರವಷ್ಟೇ ಅಲ್ಲದೆ, ಉದ್ಯಮಿಯಾಗಿಯೂ ಸಾಧ್ವಿ ಸೈಲ್ ಗುರುತಿಸಿಕೊಂಡಿದ್ದಾರೆ. ಕನ್‌ಸ್ಟ್ರಕ್ಷನ್ ಕಂಪನಿಯೊಂದರ ಸಹ-ಸಂಸ್ಥಾಪಕಿಯಾಗಿರುವ ಇವರು, ಪ್ರಸ್ತುತ ಪ್ರಖ್ಯಾತ ಬ್ರ್ಯಾಂಡ್‌ಗಳ ರಾಯಭಾರಿಯಾಗಿಯೂ ಮಿಂಚುತ್ತಿದ್ದಾರೆ. ಮಿಸ್ ಇಂಡಿಯಾ ಕಿರೀಟ ಗೆದ್ದಿರುವ ಇವರು 2027ರ ಕೊನೆಯಲ್ಲಿ ನಡೆಯಲಿರುವ ‘ಮಿಸ್ ವರ್ಲ್ಡ್’ (ವಿಶ್ವ ಸುಂದರಿ) ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದು, ಜಾಗತಿಕ ವೇದಿಕೆಯ ಮೇಲೆ ದೇಶದ ಧ್ವಜವನ್ನು ಹಾರಿಸಲು ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ.

Continue Reading

ಕರ್ನಾಟಕ

ಮಹಿಳಾ ಮೀಸಲಾತಿಗೆ ವಿರೋಧವಿಲ್ಲ: ಸಿಎಂ ಸಿದ್ದರಾಮಯ್ಯ

VISTARANEWS.COM


on

ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಅವರು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
2023ರಲ್ಲಿಯೇ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಅಂಗೀಕಾರವಾಗಿದೆ. ಸಾಂವಿಧಾನಿಕ ತಿದ್ದುಪಡಿ ತಂದಿದ್ದರಿಂದ ಅದು ವಿಫಲವಾಯಿತು. ಕ್ಷೇತ್ರ ಮರುವಿಂಗಡನೆ ಮಾಡದೆಯೇ ಮಹಿಳಾ ಮೀಸಲಾತಿ ಒಂದೇ ಮಂಡನೆಯಾಗಿದ್ದರೆ ಅಂಗೀಕಾರವಾಗುತ್ತಿತು. ರಾಜಕೀಯಕ್ಕಾಗಿ ಕ್ಷೇತ್ರ ಮರುವಿಂಗಡನೆ ಮತ್ತು ಮಹಿಳಾ ಮೀಸಲಾತಿಯನ್ನು ಒಟ್ಟಿಗೆ ತಂದಿದ್ದರಿಂದ ಮಹಿಳಾ ಮೀಸಲಾತಿ ಮಸೂದೆ ವಿಫಲವಾಗಿದೆ ಎಂದರು. ಕೇಂದ್ರ ಸರ್ಕಾರ ಇದರಲ್ಲಿ ರಾಜಕೀಯ ಮಾಡಿದ್ದಾರೆ ಎಂದು ದೂರಿದರು.

Continue Reading
Advertisement
Latest39 ಸೆಕೆಂಡುಗಳು ago

ಗ್ಯಾಂಗ್‌ಸ್ಟರ್ ಸಿನಿಮಾ ಎಂಬ ಭ್ರಮೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಯಶ್; ‘ಟಾಕ್ಸಿಕ್’ ಹಿಂದಿದೆ ಬೇರೆಯದೇ ಪ್ಲ್ಯಾನ್‌!

ಅವಿಭಾಗೀಕೃತ7 ನಿಮಿಷಗಳು ago

ಅಹಿಂದ ರಕ್ಷಣೆ ಹೊಣೆ ಹೊತ್ತ ಸಚಿವ ಜಾರಕಿಹೊಳಿ: ಇದರ ಮರ್ಮವೇನು?

Latest58 ನಿಮಿಷಗಳು ago

ಸಾಧ್ವಿ ಸೈಲ್ ಮಿಸ್ ವರ್ಲ್ಡ್ ಪ್ರಶಸ್ತಿ ಗೆಲ್ಲಲಿ: ಸಿಎಂ ಸಿದ್ದರಾಮಯ್ಯ ಆಶಯ

Latest1 ಗಂಟೆ ago

ಮೋದಿ-ಸಿದ್ದರಾಮಯ್ಯ ಗುಸುಗುಸು: ಇಬ್ಬರೂ ಮಾತನಾಡಿದ ವಿಷಯ ಬಹಿರಂಗ

Latest2 ಗಂಟೆಗಳು ago

ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಪರವಾಗಿಲ್ಲ: ಸಿಎಂ ಸಿದ್ದರಾಮಯ್ಯ ಟೀಕೆ

Latest3 ಗಂಟೆಗಳು ago

ಬಸವಣ್ಣನವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು: ಸಚಿವ ಸತೀಶ್‌ ಜಾರಕಿಹೊಳಿ

Latest3 ಗಂಟೆಗಳು ago

ಇಡಿ ದಾಳಿ; ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಸಚಿವೆ ಶೋಭಾ ಕರಂದ್ಲಾಜೆ

ರಾಜಕೀಯ3 ಗಂಟೆಗಳು ago

ಟ್ವಿಟರ್ ನಲ್ಲಿ ಶೂರ, ಕೆಲಸದಲ್ಲಿ ಶೂನ್ಯ!: ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್‌ ವಾಗ್ದಾಳಿ

Latest3 ಗಂಟೆಗಳು ago

ಪಿಎನ್‌ಎಸ್‌ ವಿಸ್ತಾರ ಮುಂಚೂಣಿ ಸುದ್ದಿವಾಹಿನಿಯಾಗಲಿ: ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ವಿಶ್ವಾಸ

ಫ್ಯಾಷನ್3 ಗಂಟೆಗಳು ago

ದೇಶದ ಗಮನ ಸೆಳೆದ ಕಾರವಾರದ ಪ್ರತಿಭೆ: ಶಾಸಕ ಸತೀಶ್ ಸೈಲ್ ಪುತ್ರಿಗೆ ‘ಮಿಸ್ ಇಂಡಿಯಾ’ ಕಿರೀಟದ ಗರಿ.

galipata neetu
ಕಿರುತೆರೆ2 ವರ್ಷಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 ವರ್ಷಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 ವರ್ಷಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 ವರ್ಷಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 ವರ್ಷಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವರ್ಷಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ವರ್ಷಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ವರ್ಷಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ವರ್ಷಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ವರ್ಷಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ವರ್ಷಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ವರ್ಷಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ವರ್ಷಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ವರ್ಷಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ವರ್ಷಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌