Assam Police: ಅಸ್ಸಾಂ ಪೊಲೀಸರ ಭರ್ಜರಿ ಬೇಟೆ; 637 ಕೆ.ಜಿ. ಗಾಂಜಾ ವಶ - Vistara News

ಕ್ರೈಂ

Assam Police: ಅಸ್ಸಾಂ ಪೊಲೀಸರ ಭರ್ಜರಿ ಬೇಟೆ; 637 ಕೆ.ಜಿ. ಗಾಂಜಾ ವಶ

Assam Police: ಭರ್ಜರಿ ಬೇಟೆಯಾಡಿರುವ ಪೊಲೀಸರು ಟ್ರಕ್‌ನಿಂದ ಬರೋಬ್ಬರಿ 637 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಒಂದು ಕೋಟಿ ರೂ. ಎಂದು ಅಂದಾಜಿಸಲಾಗಿದೆ.

VISTARANEWS.COM


on

ganja
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದಿಸ್‌ಪುರ್‌: ಅಸ್ಸಾಂ ಪೊಲೀಸರು (Assam Police) ಶನಿವಾರ ಭರ್ಜರಿ ಬೇಟೆಯಾಡಿ ಬರೋಬ್ಬರಿ 637 ಕೆ.ಜಿ. ಗಾಂಜಾವನ್ನು (Ganja) ವಶಪಡಿಸಿಕೊಂಡಿದ್ದಾರೆ. ಸುಮಾರು 1 ಕೋಟಿ ರೂ. ಮೌಲ್ಯದ ಈ ಗಾಂಜಾವನ್ನು ತ್ರಿಪುರಾದಿಂದ ಅಕ್ರಮವಾಗಿ ಸಾಗಿಸಲಾಗುತಿತ್ತು ಎಂದು ಪೊಲೀಸರು ತಿಳಿದಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ವಿವರ

ಅಗರ್ತಲಾದಿಂದ ಆಗಮಿಸಿದ ಸರಕು ಸಾಗಣೆ ಲಾರಿಯೊಂದರ ರಹಸ್ಯ ಜಾಗದಲ್ಲಿ ಈ ಮಾದಕ ವಸ್ತುವನ್ನು ಅಡಗಿಸಿ ಇಡಲಾಗಿತ್ತು. ರಹಸ್ಯ , ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ಕಾರ್ಯಾಚರಣೆ ನಡೆಸಿ ಬೃಹತ್‌ ಪ್ರಮಾಣದ ಗಾಂಜಾ ವಶಕ್ಕೆ ಪಡೆದಿದ್ದಾರೆ. ʼʼರಹಸ್ಯ ಮಾಹಿತಿಯ ಆಧಾರದ ಮೇಲೆ ಶನಿವಾರ ಸಂಜೆ ಅಸ್ಸಾಂ-ತ್ರಿಪುರಾ ರಾಜ್ಯದ ಗಡಿ ಚೆಕ್ ಪೋಸ್ಟ್‌ನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆವು. ಚುರೈಬಾರಿ ಪ್ರದೇಶದಲ್ಲಿ ಟ್ರಕ್ ಅನ್ನು ತಡೆದು ಪರಿಶೀಲನೆ ನಡೆಸಿದಾಗ ಗಾಂಜಾ ಇರುವುದು ಪತ್ತೆಯಾಯ್ತುʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಶಯದ ಮೇರೆಗೆ ನಾಗಾಲ್ಯಾಂಡ್‌ ನೋಂದಣಿಯ(NL 02 Q 8170) ಟ್ರಕ್‌ ಅನ್ನು ಪರಿಶೀಲಿಸಿದಾಗ ರಹಸ್ಯ ಕ್ಯಾಬಿನ್‌ನಲ್ಲಿ ಅಡಗಿಸಿಟ್ಟಿದ್ದ 91 ಪ್ಯಾಕೆಟ್‌ಗಳ ಗಾಂಜಾ ಪತ್ತೆಯಾಗಿತ್ತು. ವಾಹನ ಪರಿಶೀಲನೆ ವೇಳೆ ಚಾಲಕ ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ತನಿಖೆ ನಡೆಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಶಪಡಿಸಿಕೊಂಡ ಗಾಂಜಾದ ಅಂದಾಜು ಮಾರುಕಟ್ಟೆ ಮೌಲ್ಯವು ಒಂದು ಕೋಟಿ ರೂ.ಗಿಂದ ಅಧಿಕ ಎಂದು ಕರೀಂಗಂಜ್ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥ ಪ್ರತಿಮ್ ದಾಸ್ ಭಾನುವಾರ ತಿಳಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಮಾಹಿತಿಯನ್ನು ಮೊದಲು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ʼʼಅಸ್ಸಾಂ-ತ್ರಿಪುರಾ ಗಡಿಯ ಚುರೈಬಾರಿ ಚೆಕ್ ಪೋಸ್ಟ್‌ನಲ್ಲಿ ಟ್ರಕ್‌ನಿಂದ 637 ಕೆಜಿ ಗಾಂಜಾವನ್ನು ಕರೀಂಗಂಜ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆʼʼ ಎಂದು ಅವರು ಬರೆದುಕೊಂಡಿದ್ದರು.

3 ಅಂತಾರಾಜ್ಯ ಆರೋಪಿಗಳ ಬಂಧನ

ಕೆಲವು ದಿನಗಳ ಹಿಂದೆ ತುಮಕೂರಿನಲ್ಲಿ ಗಾಂಜಾ ಅಕ್ರಮ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಮೂವರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿ, ಅಕ್ರಮ ಗಾಂಜಾ ವಶಪಡಿಸಿಕೊಂಡಿದ್ದರು. ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಕ್ರಾಸಿಂಗ್‌ ಬಳಿ ಈ ಘಟನೆ ನಡೆದಿತ್ತು. ಆಂಧ್ರಪ್ರದೇಶದ ಹೆಂಜಾರಪ್ಪ, ಕರಿಯಪ್ಪ, ಚಂದ್ರಶೇಖರ್‌ ಎಂಬುವವರೇ ಬಂಧಿತ ಆರೋಪಿಗಳು. ಖಚಿತ ಮಾಹಿತಿಯ ಮೇರೆಗೆ ಪಟ್ಟನಾಯಕನಹಳ್ಳಿ ಠಾಣೆಯ ಪೊಲೀಸರು ದಾಳಿ ನಡೆಸಿ, ಸುಮಾರು 65 ಸಾವಿರ ರೂ ಬೆಲೆಬಾಳುವ 1 ಕೆ.ಜಿ. 144 ಗ್ರಾಂ ಕಡ್ಡಿ ಬೀಜ ಮಿಶ್ರಿತ ಗಾಂಜಾ ಸೊಪ್ಪು ಹಾಗೂ ಸುಮಾರು 30 ಸಾವಿರ ರೂ. ಬೆಲೆ ಬಾಳುವ 1 ಕೆಜಿ 600 ಗ್ರಾಂ ಹಸಿ ಗಾಂಜಾ ಗಿಡ ಹಾಗೂ ಮೋಟಾರ್‌ ಸೈಕಲ್‌ ಅನ್ನು ವಶ ಪಡಿಸಿಕೊಂಡಿದ್ದರು. ಈ ಕುರಿತು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Cyber Crime: ಪಾರ್ಟ್‌ ಟೈಂ ಜಾಬ್‌ ಆಮಿಷ; ಲಿಂಕ್‌ ಕ್ಲಿಕ್ಕಿಸಿ ಕಾಸು ಲೂಟಿ, ಹೋಯಿತು ಕೋಟಿ ಕೋಟಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

Bengaluru News : ಚಲಿಸುತ್ತಿದ್ದ ರೈಲಿನಿಂದ ರಸ್ತೆಗೆ ಬಿದ್ದು ಯುವಕ ಸಾವು;

Bengaluru News : ಚಲಿಸುತ್ತಿದ್ದ ಕಾರಿನ ಮೇಲೆ ವಿಲನ್ಸ್ ಮ್ಯಾನರ್ ಬ್ರಿಡ್ಜ್‌ನಿಂದ ಜಿಗಿದು ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

VISTARANEWS.COM


on

By

Man dies after falling off Villain's Manor bridge
Koo

ಬೆಂಗಳೂರು: ಯುವಕನೊಬ್ಬ ವಿಲನ್ಸ್ ಮ್ಯಾನರ್ ಬ್ರಿಡ್ಜ್‌ನಿಂದ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು (Bengaluru News) ಮೃತಪಟ್ಟಿದ್ದಾನೆ. ಯುವಕ ಬಿದ್ದ ರಭಸಕ್ಕೆ ಕಾರಿನ ಗಾಜು ಪುಡಿ ಪುಡಿಯಾಗಿದೆ. ಜತೆಗೆ ಕಾರಿನ ಎಡಬದಿ ನಜ್ಜುಗುಜ್ಜಾಗಿದೆ. ತಮಿಳುನಾಡಿನ ವೆಲ್ಲೂರು ಮೂಲದ ಯುವಕ ಗೌರೀಶ್ (21) ಮೃತ ದುರ್ದೈವಿ.

ಚಲಿಸುತ್ತಿದ್ದ ರೈಲಿನಿಂದ ಅಚಾನಕ್‌ ಆಗಿ ಬಿದ್ದಿರಬಹುದಾ? ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದನ್ನಾ ಎಂಬ ಅನುಮಾನ ಮೂಡಿದೆ. ಕಿಯಾ ಸೊನೆಟ್ ಕಾರನ್ನು ಓಡಿಸಿಕೊಂಡು ಯುವತಿ ಬರುತ್ತಿದ್ದಾಗ ವಿಲನ್ಸ್ ಮ್ಯಾನರ್ ಬ್ರಿಡ್ಜ್‌ನಿಂದ ಬಿದ್ದಿದ್ದಾನೆ. ಗೌರೀಶ್‌ ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದರು.

ಕೂಡಲೇ ಅಲ್ಲಿದ್ದ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆತ ಆಸ್ಪತ್ರೆಗೆ ಸೇರುವ ಮೊದಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೈಗ್ರೌಂಡ್‌ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆತನ ಬಳಿಯಿದ್ದ ಮೊಬೈಲ್‌ ಜಖಂ ಆಗಿದೆ. ಸದ್ಯ ಬೇರೆ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ. ರೈಲಿನಿಂದ ರಸ್ತೆಗೆ ಬಿದ್ದಿರುವುದು ಖಚಿತವಾಗಿದೆ. ಆದರೆ ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎಂಬುದು ತಿಳಿದು ಬಂದಿಲ್ಲ. ಈ ಸಂಬಂಧ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Baby Girl : ಹೆಣ್ಣು ಮಗುವೆಂದು ಗಂಡನ ತಾತ್ಸಾರ; ದಾನ ಮಾಡಲು ಮುಂದಾದ ನತದೃಷ್ಟ ತಾಯಿ

ಧಾರವಾಡದಲ್ಲಿ ಕಾರು- ಟ್ರ್ಯಾಕ್ಟರ್ ಡಿಕ್ಕಿ; ಸವಾರ ಸಾವು

ಕಾರು ಹಾಗೂ ಟ್ರ್ಯಾಕ್ಟರ್‌ ನಡುವೆ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧಾರವಾಡ ತಾಲೂಕಿನ ಸವದತ್ತಿ ರಸ್ತೆಯ ಅಮ್ಮಿನಬಾವಿ ಗ್ರಾಮದ ಬಳಿ ಸೋಮವಾರ ರಾತ್ರಿ ಘಟನೆ ನಡೆದಿದೆ. ಟ್ರ್ಯಾಕ್ಟರ್‌ನಲ್ಲಿದ್ದ ಪ್ರಯಾಣಿಕರು ಧಾರವಾಡ ಕಡೆಯಿಂದ ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ದರ್ಶನಕ್ಕೆ ಹೊರಟಿದ್ದರು. ಸವದತ್ತಿ ಕಡೆಯಿಂದ ಕಾರು ಧಾರವಾಡ ಕಡೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್‌ನಲ್ಲಿದ್ದ ಮೂವರಿಗೆ ಹಾಗೂ ಕಾರಿನಲ್ಲಿದ್ದ ಓರ್ವನಿಗೆ ಗಾಯವಾಗಿದೆ. ಗಾಯಾಳುಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಉದ್ಘಾಟನೆಗೊಂಡ ಹತ್ತೇ ದಿನಕ್ಕೆ ಸೇತುವೆಗೆ ಲಾರಿ ಡಿಕ್ಕಿ

ಉದ್ಘಾಟನೆಯಾಗಿ ಹತ್ತೇ ದಿನಕ್ಕೆ ವಿದ್ಯಾನಗರ ವೃತ್ತಾಕಾರದ ಸೇತುವೆಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಶಿವಮೊಗ್ಗದ ವಿದ್ಯಾನಗರ ಮೇಲ್ಸೇತುವೆ ಮೇಲೆ ಅಪಘಾತ ಸಂಭವಿಸಿದೆ. ಹೊಳೆಹೊನ್ನೂರು ದಿಕ್ಕಿನಿಂದ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮೇಲ್ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಲಾರಿ ಮುಂಭಾಗ ಜಖಂಗೊಂಡಿದೆ. ವೇಗವಾಗಿ ಬಂದಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಪೂರ್ವ ಸಂಚಾರಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಯಾದಗಿರಿ

Death Threat to Modi: ಮೋದಿ, ಯೋಗಿಗೆ ಜೀವ ಬೆದರಿಕೆ ಹಾಕಿದ್ದ ನಾಸಿರ್;‌ ಕ್ಷಮೆ ಕೋರಿದ ಸಹೋದರ ಖಾಜಾ

Death Threat to Modi: ಅತ್ತ ಅಣ್ಣನಾದವನು ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಮಾತನಾಡಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಿದ್ದ. ಇತ್ತ ಕಿರಿಯ ಸಹೋದರ ಖಾಜಾ ಪಿಎಂ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯ ನಾಥ್‌ ಅಭಿಮಾನಿಯಾಗಿದ್ದಾರೆ. ಅವರು ಸುರಪುರದ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಅವರೀಗ ನಾಡಿನ ಜನತೆಯ ಕ್ಷಮೆಯನ್ನೂ ಕೋರಿದ್ದಾರೆ.

VISTARANEWS.COM


on

Death Threat to Modi threatens to kill PM Nrendra Modi and Yogi Adityanath and Nasir Brother Khaja apologises
Koo

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)​​ ಅವರಿಗೆ ಸೋಷಿಯಲ್‌ ಮೀಡಿಯಾ ಮೂಲಕ ಜೀವ ಬೆದರಿಕೆ (Death Threat to Modi) ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಸುರಪುರ ಠಾಣೆ ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ. ಈಗ ಅಣ್ಣ ಮಾಡಿರುವ ತಪ್ಪಿಗೆ ತಮ್ಮ ಕ್ಷಮೆ ಕೋರಿದ್ದಾನೆ.

ಅತ್ತ ಅಣ್ಣನಾದವನು ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಮಾತನಾಡಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಿದ್ದ. ಇತ್ತ ಕಿರಿಯ ಸಹೋದರ ಖಾಜಾ ಪಿಎಂ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯ ನಾಥ್‌ ಅಭಿಮಾನಿಯಾಗಿದ್ದಾರೆ. ಅವರು ಸುರಪುರದ ಬಿಜೆಪಿ ಕಾರ್ಯಕರ್ತರಾಗಿದ್ದಾರೆ.

ಅಣ್ಣನ ಪರವಾಗಿ ಕ್ಷಮಾಪಣೆ ಕೋರಿದ ಖಾಜಾ; ಇಲ್ಲಿದೆ ಆಡಿಯೊ!

ಆಡಿಯೊದಲ್ಲಿ ಕ್ಷಮೆ ಕೇಳಿದ ಖಾಜಾ

ಅಣ್ಣ ಮಾಡಿರುವ ತಪ್ಪಿಗೆ ತಮ್ಮ ಖಾಜಾ ಕ್ಷಮೆ ಕೋರಿದ್ದು, ಈ ಬಗ್ಗೆ ಆಡಿಯೊವನ್ನು ಹರಿಬಿಟ್ಟಿದ್ದಾರೆ. “ನಮ್ಮ ಅಣ್ಣ ತಪ್ಪು ಮಾಡಿರುವ ಹಿನ್ನೆಲೆಯಲ್ಲಿ ನಾನು ಆತನನ್ನು ಕರೆಸಿ ಪೊಲೀಸರಿಗೆ ಒಪ್ಪಿಸಿದ್ದೇನೆ. ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್‌ ಮತ್ತು ರಾಜನಾಥ್‌ ಸಿಂಗ್ ಅವರಿಗೆ ಕ್ಷಮೆ ಕೋರುತ್ತೇನೆ. ನಮ್ಮ ಅಣ್ಣ ಕುಡಿದ ಮತ್ತಿನಲ್ಲಿ ಈ ತರಹ ಮಾತನಾಡಿದ್ದಾನೆ. ಎಲ್ಲ ಬಿಜೆಪಿ ಕಾರ್ಯಕರ್ತರಿಗೂ ನಾನು ಈ ಸಂದರ್ಭದಲ್ಲಿ ಕ್ಷಮೆ ಕೋರುತ್ತೇನೆ” ಎಂದು ಹೇಳಿದ್ದಾರೆ.

ಜೀವ ಬೆದರಿಕೆ ಒಡ್ಡಿದ್ದ ನಾಸಿರ್‌ ಸೆರೆ

ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)​​ ಅವರಿಗೆ ಸೋಷಿಯಲ್‌ ಮೀಡಿಯಾ ಮೂಲಕ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಸುರಪುರ ಠಾಣೆ ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ.

ಮೊಹಮ್ಮದ್ ರಸೂಲ್ ಕಡ್ದಾರೆ (45) ಬಂಧಿತ ಆರೋಪಿಯಾಗಿದ್ದಾನೆ. ಯಾದಗಿರಿ ಜಿಲ್ಲೆ ಸುರಪುರದ ರಂಗಂಪೇಟೆ ನಿವಾಸಿಯಾಗಿರುವ ರಸೂಲ್ ಹೈದರಾಬಾದ್​ನಲ್ಲಿ ಕೂಲಿ ಕೆಸಲ ಮಾಡಿಕೊಂಡಿದ್ದ. ಈಗ ಕೈಯಲ್ಲಿ ತಲ್ವಾರ್ ಹಿಡಿದು ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆ ಹಾಕಿದ್ದ. ಈಗ ಈ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ರಸೂಲ್‌ ಹೇಳಿದ್ದೇನು?

ಕೈಯಲ್ಲಿ ತಲ್ವಾರ್ ಹಿಡಿದಿದ್ದ ರಸೂಲ್‌ ಕಡ್ಡಾರೆ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ನಿಂದನೆ ಮಾಡಿದ್ದಾನೆ. “ಕಾಂಗ್ರೆಸ್ ಹೀಗೆಲ್ಲ ಆಡಳಿತ ಮಾಡಿಲ್ಲ. ನರೇಂದ್ರ ಮೋದಿ ಪ್ರಧಾನಿ ಆಗಿದ್ದೇನೆ ಎಂದು ನಾಟಕ ಮಾಡುತ್ತಿದ್ದಿಯಾ? ಆಡಳಿತ ಸರಿಯಾಗಿ ಮಾಡುತ್ತಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ನಿಮ್ಮಂತಹ ಕೆಟ್ಟ ಆಡಳಿತ ಮಾಡಿಲ್ಲ. ನೀನು ಟೀ ಮಾರಾಟ ಮಾಡುತ್ತಿದ್ದೆ. ಪಕ್ಷ ಬಿಟ್ಟು ನನ್ನ ಜತೆ ಜಗಳಕ್ಕೆ ಬಾ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಪ್ರಧಾನಿ ಮೋದಿ ನಿನ್ನ ದೇಹದ ನರಗಳು ಕಟ್ ಮಾಡುತ್ತೇನೆ. ಕಾಂಗ್ರೆಸ್ ಜಿಂದಾಬಾದ್​” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಫೇಸ್​ಬುಕ್​ನಲ್ಲಿ ವಿಡಿಯೊವನ್ನು ಅಪ್ಲೋಡ್ ಮಾಡಿದ್ದ.

ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್

ರಸೂಲ್​ ಈ ವಿಡಿಯೊವನ್ನು ಅಪ್ಲೋಡ್‌ ಮಾಡುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್​​ ಆಗಿತ್ತು. ಈ ವಿಡಿಯೊ ಕಂಡ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಶರಣು ನಾಯಕ ಸುರುಪುರ ಎಂಬುವವರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐಪಿಸಿ 505(1) (ಬಿ), 25(1)(ಬಿ) ಹಾಗೂ ಆರ್ಮ್ಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲು ಮಾಡಲಾಗಿತ್ತು.

ಇದನ್ನೂ ಓದಿ: JP Nadda: ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಜೆ.ಪಿ. ನಡ್ಡಾ ರಾಜೀನಾಮೆ; ಚುನಾವಣೆ ಸ್ಪರ್ಧೆ ಫಿಕ್ಸ್?

ಕುಡಿದ ಮತ್ತಿನಲ್ಲಿ ಹೀಗೆ ಮಾಡಿದ್ದೇನೆಂದ ರಸೂಲ್!

ಪ್ರಕರಣವನ್ನು ದಾಖಲು ಮಾಡಿಕೊಂಡ ಪೊಲೀಸರು ಆರೋಪಿ ರಸೂಲ್‌ ಪತ್ತೆಗೆ ಮುಂದಾಗಿದ್ದರು. ಸೋಮವಾರ (ಮಾ. 4) ರಂದು ರಸೂಲ್​ ಯಾದಗಿರಿಗೆ ಬಂದಿದ್ದ. ಈ ವಿಚಾರ ತಿಳಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣ ನಡೆಸಿ ಆತನನ್ನು ಬಂಧಿಸಿದ್ದಾರೆ. ಕುಡಿದ ಅಮಲಿನಲ್ಲಿ ತಾನು ಹೀಗೆ ಮಾಡಿದ್ದಾಗಿ ವಿಚಾರಣೆ ವೇಳೆ ರಸೂಲ್‌ ತಪ್ಪೊಪ್ಪಿಕೊಂಡಿದ್ದಾನೆ.

Continue Reading

ಬೆಂಗಳೂರು

Bomb threat : ಸಿಎಂ, ಡಿಸಿಎಂ, ಸಚಿವರಿಗೇ ಬಾಂಬ್‌ ಬೆದರಿಕೆ;‌ ಬಸ್‌, ದೇವಾಲಯದಲ್ಲೂ ಸ್ಫೋಟ?

Bomb Threat : ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ಬಳಿಕ ಮತ್ತೊಂದು ಬಾಂಬ್‌ ಬಿದ್ದಿದೆ. ರಾಜ್ಯದ ಸಿಎಂ, ಡಿಸಿಎಂ ಮತ್ತು ಸಚಿವರಿಗೇ ಬಾಂಬ್‌ ಬೆದರಿಕೆ ಈಮೇಲ್‌ ಬಂದಿದೆ.

VISTARANEWS.COM


on

Bomb Threat Bangalore
Koo

ಬೆಂಗಳೂರು: ಬೆಂಗಳೂರಿನ ವೈಟ್‌ ಫೀಲ್ಡ್‌ ಸಮೀಪದ ಬ್ರೂಕ್‌ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್‌ ಸ್ಫೋಟ (Blast in bengaluru) ಸಂಭವಿಸಿ ಆತಂಕದ ಅಲೆಗಳನ್ನು ಸೃಷ್ಟಿಸಿದೆ. ಈ ಪ್ರಕರಣದ ರೂವಾರಿ ಯಾರು ಎನ್ನುವ ಬಗ್ಗೆ ವಿಡಿಯೋ ಸಾಕ್ಷ್ಯಗಳು ಸಿಕ್ಕಿ 100 ಗಂಟೆಗಳೇ ಸಮೀಪಿಸಿದರೂ ಆತನನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ನಡುವೆ, ದುಷ್ಕರ್ಮಿಗಳು ರಾಜ್ಯ ಸರ್ಕಾರಕ್ಕೇ ಬಾಂಬಿಡುವ ಎಚ್ಚರಿಕೆ (Bomb Threat) ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಮಾರ್‌, ಗೃಹ ಸಚಿವ ಪರಮೇಶ್ವರ್‌ ಸೇರಿದಂತೆ ಹಲವು ನಾಯಕರಿಗೆ ಈಮೇಲ್‌ ಬಾಂಬ್‌ ಬೆದರಿಕೆ ಹಾಕಲಾಗಿದೆ.

ಶಾಹಿದ್‌ ಖಾನ್‌ ಎಂಬ ಹೆಸರಿನ ವ್ಯಕ್ತಿ ಕಳುಹಿಸಿದ್ದಾನೆ ಎಂದು ಹೇಳಲಾದ ಬೆದರಿಕೆ ಈಮೇಲ್‌ನಲ್ಲಿ ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟಗಳು ಸಂಭವಿಸಲಿವೆ ಎಂದು ಎಚ್ಚರಿಕೆ ನೀಡಲಾಗಿದೆ. ಶನಿವಾರ 2.48ಕ್ಕೆ ನಗರದ ಹಲವು ಕಡೆ ಬಾಂಬ್‌ಗಳು ಸ್ಫೋಟಿಸಲಿವೆ ಎಂದು ಈಮೇಲ್‌ ಸಂದೇಶದಲ್ಲಿ ತಿಳಿಸಲಾಗಿದೆ.

ಕೇವಲ ಸಿಎಂ, ಡಿಸಿಎಂ, ಸಚಿವರು ಮಾತ್ರವಲ್ಲ, ಬಸ್‌, ರೈಲು, ದೇವಾಲಯಗಳು, ಹೋಟೆಲ್‌ಗಳು ಹಾಗೂ ಉತ್ಸವಗಳಲ್ಲಿ ಕೂಡಾ ಬಾಂಬ್‌ ಸ್ಫೋಟ ಸಂಘಟಿಸಲಾಗುವುದು ಎಂದು ಈಮೇಲ್‌ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : Blast in Bengaluru : ರಾಮೇಶ್ವರಂ ಕೆಫೆ ಸ್ಫೋಟ; ಚೆನ್ನೈಯಲ್ಲಿ NIA ದಾಳಿ, ಐವರು ಕ್ರಿಮಿಗಳ ಸೆರೆ

ಅಧಿಕಾರಿಗಳಿಂದ ತನಿಖೆ ಆರಂಭ

ಬೆಂಗಳೂರಿನಲ್ಲಿ ತಿಂಗಳ ಹಿಂದೆ ಕೆಲವೊಂದು ಪ್ರಮುಖ ಶಾಲೆಗಳಿಗೆ ಈ ಮೇಲ್‌ ಮೂಲಕ ಬೆದರಿಕೆ ಒಡ್ಡಲಾಗಿತ್ತು. ಬೆಳ್ಳಂಬೆಳಗ್ಗೆ ಬಂದ ಈಮೇಲ್‌ನಿಂದ ಶಾಲೆಗಳು ಆತಂಕಕ್ಕೊಳಗಾಗಿದ್ದವು. ಅಧಿಕಾರಿಗಳು ತನಿಖೆ ನಡೆಸಿದಾಗ ಇದು ಸುಳ್ಳು ಬೆದರಿಕೆ ಎನ್ನುವುದು ಸಾಬೀತಾಯಿತು. ಹಾಗಂತ ಯಾವುದೇ ಬೆದರಿಕೆ ಕರೆ ಬಂದರೂ ಸಂಪೂರ್ಣ ತಪಾಸಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಅದರಂತೆಯೇ ಈಗ ಸಿಎಂ, ಡಿಸಿಎಂ ಸೇರಿದಂತೆ ಪ್ರಮುಖ ನಾಯಕರಿಗೆ ಬಂದಿರುವ ಬೆದರಿಕೆ ಸಂದೇಶದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈಮೇಲ್‌ನಲ್ಲಿ ಎಲ್ಲೆಲ್ಲಿ ಸ್ಫೋಟ ನಡೆಸಲಾಗುತ್ತದೆ. ಯಾವ ಯಾವ ಸ್ಫೋಟಕಗಳ ಬಳಕೆಯಾಗುತ್ತದೆ ಎಂಬ ವಿವರ ನೀಡಲಾಗಿದೆ ಎನ್ನಲಾಗಿದೆ. ಇದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಬೆಂಗಳೂರು ಸೇಫಾ ಎಂಬ ಪ್ರಶ್ನೆ

ಈ ನಡುವೆ ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಹಾಗೂ ಸಿಎಂ,ಡಿಸಿಎಂಗೇ ಬೆದರಿಕೆ ಕರೆ ಬಂದಿರುವುದು ಬೆಂಗಳೂರು ಸೇಫಾ ಎನ್ನುವ ಪ್ರಶ್ನೆಯನ್ನು ಮತ್ತೆ ಹುಟ್ಟು ಹಾಕಿದೆ. ಸಾರ್ವಜನಿಕವಾಗಿ ಇಷ್ಟೊಂದು ಧೈರ್ಯವಾಗಿ ಬಾಂಬ್‌ ಸ್ಫೋಟಿಸುವ, ಬೆದರಿಕೆ ಹಾಕುವುದು ನಡೆಯುತ್ತಿದೆ. ಈ ಪ್ರಕರಣಗಳನ್ನು ಬಿಟ್ಟುಬಿಡಬಾರದು. ಯಾರು ಈ ರೀತಿ ಬೆದರಿಕೆ ಹಾಕುತ್ತಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದು ಬೇರೆಯವರಿಗೆ ಪಾಠವಾಗಬೇಕು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

Continue Reading

ಕ್ರೈಂ

Death Threat to Modi: ತಲ್ವಾರ್‌ ಹಿಡಿದು ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿಗೆ ಜೀವ ಬೆದರಿಕೆ ಒಡ್ಡಿದ್ದ ನಾಸಿರ್‌ ಸೆರೆ

Death Threat to Modi: ಕೈಯಲ್ಲಿ ತಲ್ವಾರ್ ಹಿಡಿದಿದ್ದ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ನಿಂದನೆ ಮಾಡಿದ್ದ. ಈ ವಿಡಿಯೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದ. ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈಗ ಆತ ತಾನು ಏಕೆ ಹಾಗೆ ಮಾಡಿದ್ದು ಎಂಬ ಬಗ್ಗೆ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ.

VISTARANEWS.COM


on

Death threat to Modi and Yogi Adityanath and Man arrested for threatening
Koo

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)​​ ಅವರಿಗೆ ಸೋಷಿಯಲ್‌ ಮೀಡಿಯಾ ಮೂಲಕ ಜೀವ ಬೆದರಿಕೆ (Death Threat to Modi) ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಸುರಪುರ ಠಾಣೆ ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ.

ಮೊಹಮ್ಮದ್ ರಸೂಲ್ ಕಡ್ದಾರೆ (45) ಬಂಧಿತ ಆರೋಪಿಯಾಗಿದ್ದಾನೆ. ಯಾದಗಿರಿ ಜಿಲ್ಲೆ ಸುರಪುರದ ರಂಗಂಪೇಟೆ ನಿವಾಸಿಯಾಗಿರುವ ರಸೂಲ್ ಹೈದರಾಬಾದ್​ನಲ್ಲಿ ಕೂಲಿ ಕೆಸಲ ಮಾಡಿಕೊಂಡಿದ್ದ. ಈಗ ಕೈಯಲ್ಲಿ ತಲ್ವಾರ್ ಹಿಡಿದು ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆ ಹಾಕಿದ್ದ. ಈಗ ಈ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ರಸೂಲ್‌ ಹೇಳಿದ್ದೇನು?

ಕೈಯಲ್ಲಿ ತಲ್ವಾರ್ ಹಿಡಿದಿದ್ದ ರಸೂಲ್‌ ಕಡ್ಡಾರೆ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ನಿಂದನೆ ಮಾಡಿದ್ದಾನೆ. “ಕಾಂಗ್ರೆಸ್ ಹೀಗೆಲ್ಲ ಆಡಳಿತ ಮಾಡಿಲ್ಲ. ನರೇಂದ್ರ ಮೋದಿ ಪ್ರಧಾನಿ ಆಗಿದ್ದೇನೆ ಎಂದು ನಾಟಕ ಮಾಡುತ್ತಿದ್ದಿಯಾ? ಆಡಳಿತ ಸರಿಯಾಗಿ ಮಾಡುತ್ತಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ನಿಮ್ಮಂತಹ ಕೆಟ್ಟ ಆಡಳಿತ ಮಾಡಿಲ್ಲ. ನೀನು ಟೀ ಮಾರಾಟ ಮಾಡುತ್ತಿದ್ದೆ. ಪಕ್ಷ ಬಿಟ್ಟು ನನ್ನ ಜತೆ ಜಗಳಕ್ಕೆ ಬಾ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಪ್ರಧಾನಿ ಮೋದಿ ನಿನ್ನ ದೇಹದ ನರಗಳು ಕಟ್ ಮಾಡುತ್ತೇನೆ. ಕಾಂಗ್ರೆಸ್ ಜಿಂದಾಬಾದ್​” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಫೇಸ್​ಬುಕ್​ನಲ್ಲಿ ವಿಡಿಯೊವನ್ನು ಅಪ್ಲೋಡ್ ಮಾಡಿದ್ದ.

ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್

ರಸೂಲ್​ ಈ ವಿಡಿಯೊವನ್ನು ಅಪ್ಲೋಡ್‌ ಮಾಡುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್​​ ಆಗಿತ್ತು. ಈ ವಿಡಿಯೊ ಕಂಡ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಶರಣು ನಾಯಕ ಸುರುಪುರ ಎಂಬುವವರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐಪಿಸಿ 505(1) (ಬಿ), 25(1)(ಬಿ) ಹಾಗೂ ಆರ್ಮ್ಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲು ಮಾಡಲಾಗಿತ್ತು.

ಇದನ್ನೂ ಓದಿ: JP Nadda: ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಜೆ.ಪಿ. ನಡ್ಡಾ ರಾಜೀನಾಮೆ; ಚುನಾವಣೆ ಸ್ಪರ್ಧೆ ಫಿಕ್ಸ್?

ಕುಡಿದ ಮತ್ತಿನಲ್ಲಿ ಹೀಗೆ ಮಾಡಿದ್ದೇನೆಂದ ರಸೂಲ್!

ಪ್ರಕರಣವನ್ನು ದಾಖಲು ಮಾಡಿಕೊಂಡ ಪೊಲೀಸರು ಆರೋಪಿ ರಸೂಲ್‌ ಪತ್ತೆಗೆ ಮುಂದಾಗಿದ್ದರು. ಸೋಮವಾರ (ಮಾ. 4) ರಂದು ರಸೂಲ್​ ಯಾದಗಿರಿಗೆ ಬಂದಿದ್ದ. ಈ ವಿಚಾರ ತಿಳಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣ ನಡೆಸಿ ಆತನನ್ನು ಬಂಧಿಸಿದ್ದಾರೆ. ಕುಡಿದ ಅಮಲಿನಲ್ಲಿ ತಾನು ಹೀಗೆ ಮಾಡಿದ್ದಾಗಿ ವಿಚಾರಣೆ ವೇಳೆ ರಸೂಲ್‌ ತಪ್ಪೊಪ್ಪಿಕೊಂಡಿದ್ದಾನೆ.

Continue Reading
Advertisement
Man dies after falling off Villain's Manor bridge
ಬೆಂಗಳೂರು45 seconds ago

Bengaluru News : ಚಲಿಸುತ್ತಿದ್ದ ರೈಲಿನಿಂದ ರಸ್ತೆಗೆ ಬಿದ್ದು ಯುವಕ ಸಾವು;

Ravichandran Ashwin, Jonny Bairstow
ಕ್ರೀಡೆ7 mins ago

IND Vs ENG 5th Test: 100ನೇ ಟೆಸ್ಟ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ಬೇರ್‌ ಸ್ಟೊ, ಅಶ್ವಿನ್

KPSC Secretary
ನೌಕರರ ಕಾರ್ನರ್19 mins ago

KPSC Transfer : ಕೆಪಿಎಸ್ಸಿ ಕಾರ್ಯದರ್ಶಿಯಾಗಿ ಡಾ. ರಾಕೇಶ್‌ ಕುಮಾರ್‌ ನೇಮಕ; ಲತಾ ಕುಮಾರಿ ವರ್ಗ

Adi Shankara
ಪ್ರಮುಖ ಸುದ್ದಿ21 mins ago

ತತ್ತ್ವ ಶಂಕರ: ಶಂಕರ; ಲೋಕ ಕಲ್ಯಾಣಕ್ಕಾಗಿ ಬಂದ ಅವತಾರ ಪುರುಷ

Death Threat to Modi threatens to kill PM Nrendra Modi and Yogi Adityanath and Nasir Brother Khaja apologises
ಯಾದಗಿರಿ27 mins ago

Death Threat to Modi: ಮೋದಿ, ಯೋಗಿಗೆ ಜೀವ ಬೆದರಿಕೆ ಹಾಕಿದ್ದ ನಾಸಿರ್;‌ ಕ್ಷಮೆ ಕೋರಿದ ಸಹೋದರ ಖಾಜಾ

tpl
ಕಿರುತೆರೆ32 mins ago

TPL Seson 3: ಟಿಪಿಎಲ್ ಸೀಸನ್-3ಕ್ಕೆ ತೆರೆ; ಕಿರುತೆರೆ ಕ್ರಿಕೆಟ್ ಲೀಗ್‌ನ ಚಾಂಪಿಯನ್‌ ಪಟ್ಟ ಯಾರಿಗೆ?

Rohit Sharma
ಕ್ರೀಡೆ36 mins ago

IND vs ENG 5th Test: ವಿಶ್ವ ಟೆಸ್ಟ್​ನಲ್ಲಿ ದಾಖಲೆ ಬರೆಯಲು ರೋಹಿತ್​ಗೆ ಬೇಕು ಕೇವಲ ಒಂದು ಸಿಕ್ಸರ್​

Neetha Ambani Jewel Love
ಫ್ಯಾಷನ್36 mins ago

Neetha Ambani Jewel Love: ನೀತಾ ಅಂಬಾನಿಯ ದುಬಾರಿ ಜ್ಯುವೆಲರಿ ಪ್ರೇಮ!

Rahul Gandhi
ದೇಶ37 mins ago

Rahul Gandhi: ಇಡೀ ಭಾರತದ ಎಕ್ಸ್‌ರೇ ತೆಗೆಯಬೇಕು ಎಂದ ರಾಹುಲ್‌ ಗಾಂಧಿ; ಹೀಗೆ ಹೇಳಿದ್ದೇಕೆ?

ram charan
ಸಿನಿಮಾ57 mins ago

Ram Charan: ದಕ್ಷಿಣ ಭಾರತದ ಸ್ಟಾರ್‌ ರಾಮ್‌ ಚರಣ್‌ಗೆ ಶಾರುಖ್‌ ಖಾನ್‌ನಿಂದ ಅವಮಾನ? ಫ್ಯಾನ್ಸ್‌ ಗರಂ ಆಗಿದ್ದೇಕೆ?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ1 day ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ1 day ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ3 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌