Election Results 2023: ವಿಧಾನಸಭೆ ಚುನಾವಣೆಗಳು ಲೋಕಸಭೆಯ ಸೆಮಿಫೈನಲ್‌ ಏಕೆ? - Vistara News

ದೇಶ

Election Results 2023: ವಿಧಾನಸಭೆ ಚುನಾವಣೆಗಳು ಲೋಕಸಭೆಯ ಸೆಮಿಫೈನಲ್‌ ಏಕೆ?

Election Results 2023: ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂ ವಿಧಾನಸಭೆ ಚುನಾವಣೆಯನ್ನು ಲೋಕಸಭೆ ಚನಾವಣೆಯ ಸೆಮಿಫೈನಲ್‌ ಎಂದೇ ಪರಿಗಣಿಸಲಾಗಿದೆ.

VISTARANEWS.COM


on

Narendra Modi And Rahul Gandhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: 2023ರ ಲೋಕಸಭೆ ಚುನಾವಣೆಗೆ (Lok Sabha Election 2024) ಐದೂ ರಾಜ್ಯಗಳ ವಿಧಾನಸಭೆ ಚುನಾವಣೆಯು ಸೆಮಿಫೈನಲ್‌ ಎಂದೇ ಹೇಳಲಾಗುತ್ತಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶವು (Election Results 2023) ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಮುನ್ನಡೆ ಸಿಗಬಹುದು, ಯಾರ ಪರ ಜನರ ಒಲವಿದೆ ಎಂಬುದರ ದಿಕ್ಸೂಚಿ ಎಂದೇ ಹೇಳಲಾಗುತ್ತಿದೆ.

ಛತ್ತೀಸ್‌ಗಢ 11, ಮಧ್ಯಪ್ರದೇಶ 29, ಮಿಜೋರಾಂ 1, ರಾಜಸ್ಥಾನ 25 ಹಾಗೂ ತೆಲಂಗಾಣದ 17 ಲೋಕಸಭೆ ಕ್ಷೇತ್ರ ಸೇರಿ ಐದೂ ರಾಜ್ಯಗಳಲ್ಲಿ ಒಟ್ಟು 83 ಲೋಕಸಭೆ ಕ್ಷೇತ್ರಗಳಿವೆ. ಈ ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ, ಆ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರ ಗೆಲ್ಲಲು ಸಾಧ್ಯವಾಗಲಿದೆ. ಹಾಗೆಯೇ, ಜನರ ಒಲವು ಯಾವ ಪಕ್ಷದ ಕಡೆ ಇದೆ ಎಂಬುದರ ಮುನ್ಸೂಚನೆಯು ವಿಧಾನಸಭೆ ಚುನಾವಣೆಯಲ್ಲಿಯೇ ತಿಳಿಯಲಿದೆ. ಲೋಕಸಭೆ ಚುನಾವಣೆಯ ಪ್ರಚಾರಕ್ಕೂ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮುನ್ನುಡಿ ಬರೆಯಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಐದೂ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶವು ಪ್ರತಿಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ಹಾಗೂ ಆಡಳಿತಾರೂಢ ಮೈತ್ರಿಕೂಟಗಳ ಆಂತರಿಕ ಒಗ್ಗಟ್ಟು, ಲೋಕಸಭೆ ಚುನಾವಣೆಗೆ ಭರ್ಜರಿಯಾಗಿ ತಯಾರಾಗಲು ಬಲ ತುಂಬಲಿದೆ. ಇಂಡಿಯಾ ಒಕ್ಕೂಟದ ಪಕ್ಷಗಳಲ್ಲಿ ಸೀಟು ಹಂಚಿಕೆಯನ್ನೂ ವಿಧಾನಸಭೆ ಚುನಾವಣೆ ಫಲಿತಾಂಶ ನಿರ್ಧರಿಸಲಿದೆ. ಆಯಾ ರಾಜ್ಯಗಳಲ್ಲಿ, ಆಯಾ ಪಕ್ಷಗಳ ಆತ್ಮವಿಶ್ವಾಸವು ಹಿಮ್ಮಡಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಹಾಗಾಗಿಯೇ, ಎಲ್ಲರ ಗಮನವು ವಿಧಾನಸಭೆ ಚುನಾವಣೆಗಳ ಫಲಿತಾಂಶದ ಮೇಲಿದೆ.

ಆಯಾ ರಾಜ್ಯಗಳ ಲೆಕ್ಕಾಚಾರ ಹೀಗಿದೆ…

ರಾಜಸ್ಥಾನದಲ್ಲಿ ಜಾತಿ ಮತಗಳ ಲೆಕ್ಕಾಚಾರ

ರಾಜಸ್ಥಾನದಲ್ಲಿ ಜಾತಿವಾರು ಮತಗಳ ಲೆಕ್ಕಾಚಾರ ಜೋರಾಗಿದೆ. ಕಳೆದ ಬಾರಿ ಸಚಿನ್‌ ಪೈಲಟ್‌ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಬಿಂಬಿಸಿದ ಕಾರಣ ಪೂರ್ವ ರಾಜಸ್ಥಾನದಲ್ಲಿ ಪ್ರಾಬಲ್ಯ ಹೊಂದಿರುವ ಗುಜ್ಜರ್‌ ಸಮುದಾಯದ ಮತದಾರರು ಸಚಿನ್‌ ಪೈಲಟ್‌ ಅವರನ್ನು ಬೆಂಬಲಿಸಿದರು. ಇದರಿಂದಾಗಿ ಗುಜ್ಜರ್‌ ಸಮುದಾಯದವರು ಹೆಚ್ಚಿರುವ ಮೂರು ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿತು. ಈ ಬಾರಿಯೂ ಗುಜ್ಜರ್‌ ಸಮುದಾಯದ ಮತಗಳು ಕಾಂಗ್ರೆಸ್‌ಗೆ ನಿರ್ಣಾಯಕ ಎಂದೇ ಹೇಳಲಾಗುತ್ತಿದೆ.

ಗುಜ್ಜರ್‌ ಸಮುದಾಯದ ಜತೆಗೆ ಅಶೋಕ್‌ ಗೆಹ್ಲೋಟ್‌ ಅವರ ಮಾಲಿ ಸಮುದಾಯದ ಮತಗಳು ಕೂಡ ಪ್ರಮುಖವಾಗಿವೆ. ಹಾಗಾಗಿಯೇ, ಅಶೋಕ್‌ ಗೆಹ್ಲೋಟ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸುವ, ಸಚಿನ್‌ ಪೈಲಟ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಘೋಷಿಸುವ ಗೋಜಿಗೆ ಕಾಂಗ್ರೆಸ್‌ ಹೋಗಿಲ್ಲ. ಈ ಎರಡೂ ಸಮುದಾಯದವರು ಸೇರಿ ಬಹುತೇಕ ಸಮುದಾಯಗಳು ಉಚಿತ ಗ್ಯಾರಂಟಿಗಳಿಗಿಂತ ಜಾತಿಗೆ ಹೆಚ್ಚು ಆದ್ಯತೆ ನೀಡುತ್ತಾರೆ ಎನ್ನಲಾಗುತ್ತಿದೆ.

ಮಧ್ಯಪ್ರದೇಶದಲ್ಲಿ ಒಬಿಸಿ ಮತಗಳೇ ನಿರ್ಣಾಯಕ

ಮಧ್ಯಪ್ರದೇಶದಲ್ಲಿ ಇತರೆ ಹಿಂದುಳಿದ ವರ್ಗಗಳ ಮತಗಳು ಯಾವುದೇ ಪಕ್ಷಕ್ಕೆ ಅಧಿಕಾರ ನೀಡುವಷ್ಟಿವೆ ಅಥವಾ ಒಬಿಸಿ ಮತಗಳು ಜಾಸ್ತಿ ಪಡೆದವರು ಅಧಿಕಾರಕ್ಕೇರುತ್ತಾರೆ ಎಂಬ ಮಾತಿದೆ. ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದ್ದರೆ, ಅದಕ್ಕೆ ಒಬಿಸಿ ಮತಗಳು ಅವರ ಪರವಾಗಿರುವುದೇ ಕಾರಣವಾಗಿದೆ. ಸಿದ್ಧಿಯಲ್ಲಿ ಬುಡಕಟ್ಟು ಸಮುದಾಯದವರ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಬಳಿಕ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕೂಡಲೇ ಸಿದ್ಧಿಗೆ ತೆರಳಿ, ಬುಡಕಟ್ಟು ಸಮುದಾಯದ ವ್ಯಕ್ತಿಯ ಪಾದ ತೊಳೆದಿದ್ದರ ಹಿಂದೆ ಇದೇ ಒಬಿಸಿ ರಣತಂತ್ರವಾಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: Election Results 2023: ನಾಲ್ಕೂ ರಾಜ್ಯಗಳಲ್ಲಿ ಪೈಪೋಟಿ ಹೇಗಿದೆ? ಯಾರಿಗೆ ವಿಜಯಮಾಲೆ?

ತೆಲಂಗಾಣದಲ್ಲಿ ಮೋಡಿ ಮಾಡುವುದೇ ಮೋದಿ ಭರವಸೆ?

ತೆಲಂಗಾಣದಲ್ಲೂ ಗ್ಯಾರಂಟಿಗಳಿಗಿಂತ ಜಾತಿ ಮತಗಳೇ ಪ್ರಾಮುಖ್ಯತೆ ಪಡೆದಿವೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ (SC Quota) ಮಾದಿಗ ಸಮುದಾಯದವರಿಗೆ ಒಳ ಮೀಸಲಾತಿ ಕಲ್ಪಿಸಲಾಗುವುದು ಎಂದು ಘೋಷಿಸಿದ್ದಾರೆ. ಇದು ಹಿಂದುಳಿದ ವರ್ಗಗಳ ಮತಗಳನ್ನು ಕ್ರೋಡೀಕರಣಗೊಳಿಸುವ ತಂತ್ರವೇ ಆಗಿದೆ. ಛತ್ತೀಸ್‌ಗಢದಲ್ಲೂ ಇದೇ ಪರಿಸ್ಥಿತಿ ಇದೆ. ಹಾಗಾಗಿಯೇ, ಪ್ರತಿಯೊಂದು ರಾಜ್ಯದಲ್ಲೂ ಕಾಂಗ್ರೆಸ್‌, ಬಿಜೆಪಿ ಸೇರಿ ಎಲ್ಲ ಪ್ರಮುಖ ಪಕ್ಷಗಳು ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಹೆಚ್ಚಿನ ಸಬ್ಸಿಡಿ ಘೋಷಿಸಿವೆ. ಹಾಗಾಗಿ, ನಾಲ್ಕೂ ರಾಜ್ಯಗಳಲ್ಲಿ ಜಾತಿ ಹಾಗೂ ಗ್ಯಾರಂಟಿಗಳು ಜನರಲ್ಲಿ ಮೋಡಿ ಮಾಡುತ್ತವೆ ಎಂದು ಹೇಳಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Google Gemini: ಮೋದಿ ವಿರುದ್ದ ಗೂಗಲ್ ಎಐ ಟೂಲ್ ಜೆಮಿನಿ ಪಕ್ಷಪಾತಿ; ಕ್ರಮ ಎಂದ ಸಚಿವ ರಾಜೀವ್ ಚಂದ್ರಶೇಖರ್

Google Gemini: ಗೂಗಲ್‌ನ ಎಐ ಟೂಲ್‌ ಪ್ರಧಾನಿ ಮೋದಿ ವಿರುದ್ದ ಪಕ್ಷಪಾತಿಯಾಗಿದೆ ಎಂದು ಬಳಕೆದಾರರೊಬ್ಬರು ಆರೋಪಿಸಿದ್ದರು. ಇದು ಕಾನೂನು ಉಲ್ಲಂಘನೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಅಲ್ಲದೇ ಕ್ರಮದ ಭರವಸೆ ನೀಡಿದ್ದಾರೆ.

VISTARANEWS.COM


on

Google Gemini ai bias against modi and Minister assured action
Koo

ನವದೆಹಲಿ: ಗೂಗಲ್‌ನ ಎಐ ಟೂಲ್‌ ಜೆಮಿನಿಯು (Google Gemini) ಪ್ರಧಾನಿ ನರೇಂದ್ರ ಮೋದಿ (PM Narendra Modi)) ಅವರ ವಿರುದ್ದ ಪಕ್ಷಪಾತಿಯಾಗಿದೆ. ಇದು ಸ್ಪಷ್ಟವಾಗಿ ದೇಶದ ಐಟಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ (IT Rules) ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Union Minister Rajeev Chandrashekhar) ಅವರು ಆರೋಪಿಸಿದ್ದಾರೆ. ಟ್ವಿಟರ್‌ ಬಳಕೆದಾರರೊಬ್ಬರು, ಫ್ಯಾಸಿಸಮ್ ಬಗ್ಗೆ ಕೇಳಿದಾಗ ಜೆಮಿನಿ ಉತ್ತರ ಪ್ರದರ್ಶಿಸಿತು. ಆದರೆ, ಡೋನಾಲ್ಡ್ ಟ್ರಂಪ್ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಲು ನಿರಾಕರಿಸಿತು ಎಂದು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು, ಗೂಗಲ್‌ನ ಎಐ ಟೂಲ್ ಜೆಮಿನಿಯು ಭಾರತದ ಅನೇಕ ಕ್ರಿಮಿನಲ್‌ ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಇವು ನೇರವಾಗಿ ಅಪರಾಧ ಸಂಹಿತೆಯ ಅನೇಕ ವಿಧಿಗಳು ಮತ್ತು ಐಟಿ ಕಾಯ್ದೆಯ ಮಧ್ಯಸ್ಥಿಕೆಗಾರರ(ಐಟಿ ನಿಯಮಗಳು)ಗಳ 3(1)(b) ನಿಯಮದ ಉಲ್ಲಂಘನೆಯಾಗಿದೆ ಎಂದು ರಾಜೀವ್ ಚಂದ್ರಶೇಖರ್ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಸಚಿವರು ಗೂಗಲ್ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ, ಗೂಗಲ್ ಇಂಡಿಯಾ ಹಾಗೂ ಗೂಗಲ್‌ಎಐಗೂ ತಮ್ಮ ಪ್ರತಿಕ್ರಿಯೆಯನ್ನು ಟ್ಯಾಗ್ ಮಾಡಿ, ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬಳಕೆದಾರರ ಆರೋಪ ಏನು?

ಗೂಗಲ್‌ನ ಎಐ ಟೂಲ್‌ ಜೆಮಿನಿ ಪ್ರಧಾನಿ ಮೋದಿ ವಿರುದ್ಧ ಪಕ್ಷಪಾತಿಯಾಗಿದೆ ಎಂದು ಆರೋಪಿಸಿದ್ದಾರೆ. ಗೂಗಲ್‌ನಿಂದ ಈ ಜೆಮಿನಿ ಎಐ ಟೂಲ್‌ ಕೇವಲ ಜನಾಂಗೀಯ ಪೂರ್ವಗ್ರಹ ಮಾತ್ರವಲ್ಲದೇ ದುರುದ್ದೇಶಪೂರಿತವೂ ಆಗಿದೆ. ಈ ಬಗ್ಗೆ ಭಾರತ ಸರ್ಕಾರವು ಗಮನಿಸಬೇಕು ಎಂದು ಅವರು ಬರೆದುಕೊಂಡಿದ್ದಾರೆ.

ಜೆಮಿನಿ ಎಐ-ಚಾಲಿತ ಚಾಟ್‌ಬಾಟ್ ಆಗಿದ್ದು ಅದು ಪ್ರಶ್ನೆಗಳಿಗೆ ಉತ್ತರಿಸಬಹುದು, ವಿಷಯವನ್ನು ಬರೆಯಬಹುದು ಮತ್ತು ಪ್ರಾಂಪ್ಟ್ ಮಾಡಿದಾಗ ಮಾಹಿತಿಯನ್ನು ಪ್ರದರ್ಶಿಸಬಹುದು. ಇದನ್ನು ಗೂಗಲ್‌ ಡೀಪ್‌ಮೈಂಡ್ ಅಭಿವೃದ್ಧಿಪಡಿಸಿದೆ. ಈ ಟೂಲ್ ಅನ್ನು 2023 ಡಿಸೆಂಬರ್ 6ರಂದು ಘೋಷಿಸಲಾಯಿತು. ಓಪನ್ ಐಎ‌ನ ಚಾಟ್ ಜಿಪಿಟಿಗೆ ಪೈಪೋಟಿ ನೀಡುತ್ತಿದೆ.

ಗೂಗಲ್‌ನ ಎಐ ಇಮೇಜ್ ಜನರೇಷನ್ ಎಂಜಿನ್ ಜನಾಂಗೀಯ ಪೂರ್ವಗ್ರಹಪೀಡಿತವಾಗಿದೆ ಎಂದು ಉದ್ಯಮಿ ಎಲಾನ್ ಮಸ್ಕ್ ಆರೋಪಿಸಿದ ಕೆಲವೇ ಗಂಟೆಗಳಲ್ಲಿ ಈ ಆರೋಪ ಕೇಳಿ ಬಂದಿದೆ. ಗೂಗಲ್ ತಮ್ಮ ಎಐ ಇಮೇಜ್ ಜನರೇಷನ್‌ನೊಂದಿಗೆ ಅತಿಯಾದ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದೆ. ಏಕೆಂದರೆ ಅದು ಅವರ ಹುಚ್ಚು ಜನಾಂಗೀಯ ನೀತಿಯಾಗಿದೆ. ತನ್ನದು ನಾಗರಿಕ ವಿರೋಧಿ ಪ್ರೋಗ್ರಾಮಿಂಗ್ ಅನ್ನು ಎಲ್ಲರಿಗೂ ಸ್ಪಷ್ಟಪಡಿಸಿದೆ ಎಕ್ಸ್ ವೇದಿಕೆಯಲ್ಲಿ ಅವರು ಬರೆದುಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: ಚಾಟ್‌ಜಿಪಿಟಿಯ ಎಲ್ಲ ಬಳಕೆದಾರರಿಗೂ ವಾಯ್ಸ್ ಫೀಚರ್ ಲಭ್ಯ; ಓಪನ್ಎಐ ಘೋಷಣೆ

Continue Reading

ದೇಶ

Narendra Modi: ಗುಜರಾತ್‌ನವನಾದರೂ ನಾನೀಗ ಬನಾರಸಿ ಎಂದ ಪ್ರಧಾನಿ ಮೋದಿ

Narendra Modi: ವಾರಾಣಸಿಯಲ್ಲಿ ಸುಮಾರು 13 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇದೇ ವೇಳೆ ಅವರು, ನಾನು ಕಳೆದ 10 ವರ್ಷದಲ್ಲಿ ಬನಾರಸಿಯವನೇ ಆಗಿದ್ದೇನೆ ಎಂದು ಹೇಳಿದರು.

VISTARANEWS.COM


on

Narendra Modi
Koo

ವಾರಾಣಸಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಲೋಕಸಭೆ ಕ್ಷೇತ್ರವಾದ ವಾರಾಣಸಿಗೆ (Varanasi) ಭೇಟಿ ನೀಡಿದ್ದಾರೆ. ಬನಾರಸ್‌ ಹಿಂದು ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ, ರೋಡ್‌ ಶೋ ಹಾಗೂ 13 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದಾದ ಬಳಿಕ ಮಾತನಾಡಿದ ಅವರು, “ನಾನು ಕಳೆದ 10 ವರ್ಷದಲ್ಲಿ ವಾರಾಣಸಿಗೆ ಬಂದು, ಇಲ್ಲಿನ ಜನರ ಜತೆಗೂಡಿ ಬನಾರಸಿಯೇ (Banarasi) ಆಗಿದ್ದೇನೆ” ಎಂದು ತಿಳಿಸಿದರು.

“ಕಳೆದ 10 ವರ್ಷಗಳಲ್ಲಿ ಹಲವು ಬಾರಿ ನಾನು ವಾರಾಣಸಿಗೆ ಆಗಮಿಸಿದ್ದೇನೆ. ವಾರಾಣಸಿಯೊಂದಿಗೆ ನನ್ನ ನಂಟು ಅತ್ಯುತ್ತಮವಾಗಿದೆ. ಹಾಗೆಯೇ, ದೇವಾಲಯ, ಭವನಗಳನ್ನು ನಿರ್ಮಿಸುವ ಜತೆಗೆ ವಾರಾಣಸಿಯಲ್ಲಿ ರಸ್ತೆ, ಸಂಪರ್ಕ ಸೇರಿ ಹಲವು ರೀತಿಯಲ್ಲಿ ಅಭಿವೃದ್ಧಿಗೊಳಿಸಿದ್ದೇನೆ. ಯುವಕರಿಗೆ ಉದ್ಯೋಗಗಳು ಲಭಿಸಿವೆ. ವಿಶ್ವನಾಥ ಧಾಮ ಲೋಕಾರ್ಪಣೆ ಬಳಿಕ ಕಾಶಿಗೆ 12 ಕೋಟಿಗೂ ಅಧಿಕ ಜನ ಭೇಟಿ ನೀಡಿದ್ದಾರೆ. ಇದರಿಂದಾಗಿ ಕಾಶಿಯ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಆಟೋ ಚಾಲಕರು ಸೇರಿ ಎಲ್ಲರಿಗೂ ವ್ಯಾಪಾರ, ಉದ್ಯೋಗ ಸಿಕ್ಕಿದೆ” ಎಂದು ತಿಳಿಸಿದರು.

ಪ್ರತಿಪಕ್ಷಗಳಿಗೆ ತಿರುಗೇಟು

ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳು ಸೇರಿ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದರು. “ಪರಿವಾರವಾದ, ತುಷ್ಟೀಕರಣದ ನೀತಿಯ ಪರಿಣಾಮವಾಗಿ ಉತ್ತರ ಪ್ರದೇಶದಲ್ಲಿ ಹಲವು ವರ್ಷಗಳವರೆಗೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿತ್ತು. ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ಉತ್ತರ ಪ್ರದೇಶವನ್ನು ಹಾಳು ಮಾಡಿದ್ದವು. ಆದರೆ, ಕಳೆದ 10 ವರ್ಷದಲ್ಲಿ ಉತ್ತರ ಪ್ರದೇಶವು ಸಂಪೂರ್ಣವಾಗಿ ಅಭಿವೃದ್ಧಿಯಾಗಿದೆ. ಯುವಕರು ಸೇರಿ ಎಲ್ಲರೂ ಉದ್ಯೋಗ ಪಡೆಯುತ್ತಿದ್ದಾರೆ” ಎಂದು ತಿಳಿಸಿದರು.

ಇದನ್ನೂ ಓದಿ: Narendra Modi:‌ ಕಾಶಿಯಲ್ಲಿ ಕೃತಕ ಬುದ್ಧಿಮತ್ತೆ ಮ್ಯಾಜಿಕ್; ಮಕ್ಕಳಿಗೆ ಮೋದಿ ಮೇಷ್ಟ್ರ ಪಾಠ

“ಇದುವರೆಗೆ ಪರಿವಾರದಿಗಳು ನರೇಂದ್ರ ಮೋದಿಯನ್ನು ತೆಗಳುತ್ತಿದ್ದರು. ಈಗ ಉತ್ತರ ಪ್ರದೇಶದ ನಾಗರಿಕರನ್ನೂ ಪರಿವಾರವಾದಿಗಳು ತೆಗಳುತ್ತಿದ್ದಾರೆ. ಅವರಿಗೆ ಉತ್ತರ ಪ್ರದೇಶದ ಅಭಿವೃದ್ಧಿ ಬೇಕಾಗಿಲ್ಲ. ಕಾಶಿ, ಅಯೋಧ್ಯೆಯ ಮಂದಿರಗಳು ಬೇಕಾಗಿಲ್ಲ. ಹಾಗಾಗಿ, ಅವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಪರಿವಾರವಾದಿಯೊಬ್ಬ ಕಾಶಿ ಹಾಗೂ ಉತ್ತರ ಪ್ರದೇಶದ ಯುವಕರು ನಶೆಯಲ್ಲಿರುತ್ತಾರೆ ಎಂದು ಹತಾಶೆಯಲ್ಲಿ ಹೇಳಿದ್ದಾರೆ. ಇದು ಪ್ರತಿಪಕ್ಷಗಳು, ಪರಿವಾರವಾದಿಗಳ ಮನಸ್ಥಿತಿ” ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಸುಲ್ತಾನ್‌ಪುರ-ವಾರಾಣಸಿ ಚತುಷ್ಪಥ, ರೈಲ್ವೆ ಮೇಲ್ಸೇತುವೆ ನಿರ್ಮಾಣ, ವಾರಾಣಸಿ-ರಾಂಚಿ-ಕೋಲ್ಕೊತಾ ಎಕ್ಸ್‌ಪ್ರೆಸ್‌ ವೇ ಸೇರಿ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ, ಚಾಲನೆ ನೀಡಿದ ಬಳಿಕ ಮಾತನಾಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

S Jaishankar: ವಿಶ್ವ ಸಂಸ್ಥೆಯಲ್ಲಿ ಸುಧಾರಣೆ ಅಗತ್ಯ: ವಿದೇಶಾಂಗ ಸಚಿವ ಜೈಶಂಕರ್‌ ಪ್ರತಿಪಾದನೆ

ಹೊಸದಿಲ್ಲಿಯಲ್ಲಿ ನಡೆದ ರೈಸಿನಾ ಮಾತುಕತೆಯಲ್ಲಿ (Raisian Dialogue 2024) ವಿದೇಶಾಂಗ ಸಚಿವ ಎಸ್.‌ ಜೈಶಂಕರ್‌ (S Jaishankar) ವಿಶ್ವಸಂಸ್ಥೆಯ ಸಮಗ್ರ ಸುಧಾರಣೆಯನ್ನು ಪ್ರತಿಪಾದಿಸಿದ್ದಾರೆ.

VISTARANEWS.COM


on

s jaishankar raisina dialogue
Koo

ಹೊಸದಿಲ್ಲಿ: ವಿಶ್ವ ವ್ಯಾಪಾರ ನಿಯಮಾವಳಿಗಳಲ್ಲಿ ತಾರತಮ್ಯವಿದೆ. ಇದಕ್ಕೆ ಸರ್ವಸಮ್ಮತ ಪರಿಹಾರ ಕಂಡಕೊಳ್ಳಲು ವಿಶ್ವಸಂಸ್ಥೆ ವಿಫಲವಾಗಿದ್ದು, ವಿಶ್ವಸಂಸ್ಥೆಯಲ್ಲಿ (UN) ಸುಧಾರಣೆ ಅಗತ್ಯವಿದೆ ಎಂದು ವಿದೇಶಾಂಗ ಸಚಿವ ಎಸ್.‌ ಜೈಶಂಕರ್‌ (S Jaishankar) ಪ್ರತಿಪಾದಿಸಿದ್ದಾರೆ.

ಹೊಸದಿಲ್ಲಿಯಲ್ಲಿ ನಡೆದ ರೈಸಿನಾ ಮಾತುಕತೆ- 2024 (Raisian Dialogue 2024) ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ವ್ಯಾಪಾರ ನಿಯಮಗಳಲ್ಲಿ ತಾರತಮ್ಯದಂಥ ಸಮಸ್ಯೆಗಳಿಗೆ ಬಹುಪಕ್ಷೀಯ, ಸರ್ವಸಮ್ಮತ ಪರಿಹಾರಗಳನ್ನು ಕಂಡುಕೊಳ್ಳಲು ವಿಶ್ವಸಂಸ್ಥೆ ವಿಫಲವಾಗಿದೆ. ವಿಶ್ವಸಂಸ್ಥೆಯನ್ನು ರೂಪಿಸಿದಾಗ ಅದು ಕೇವಲ 50 ಸದಸ್ಯರನ್ನು ಹೊಂದಿತ್ತು. ಇಂದು ಸಂಸ್ಥೆ ಅದರ ನಾಲ್ಕು ಪಟ್ಟು ಸದಸ್ಯರನ್ನು ಹೊಂದಿದೆ. ಮೂಲಕ್ಕಿಂತ ನಾಲ್ಕು ಪಟ್ಟು ಸದಸ್ಯರಿದ್ದಾಗ ನಾವು ಅಂದಿನದೇ ರೀತಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದು ಸಾಮಾನ್ಯ ಜ್ಞಾನ. ನೀವು ಕಳೆದ ಐದು ವರ್ಷಗಳನ್ನು ನೋಡಿದರೆ, ದೊಡ್ಡ ಸಮಸ್ಯೆಗಳಿಗೆ ನಾವು ಬಹುಪಕ್ಷೀಯ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಫಲಿತಾಂಶಗಳ ಕೊರತೆಯಿಂದ ಸುಧಾರಣೆಯ ಅಗತ್ಯ ಎದ್ದು ಕಾಣುತ್ತಿದೆ” ಎಂದು ಜೈಶಂಕರ್ ಹೇಳಿದರು.

“ಹಲವು ಸಂದರ್ಭಗಳಲ್ಲಿ ವ್ಯಾಪಾರ ನಿಯಮಗಳಲ್ಲಿ ತಾರತಮ್ಯದ ಆಟವಾಡಲಾಗಿದೆ. ನಾವು ಜಾಗತೀಕರಣದ ಬಗ್ಗೆ ಮಾತನಾಡುತ್ತೇವೆ. ವಾಸ್ತವವೆಂದರೆ ಕೆಲವು ದೇಶಗಳು ಜಾಗತೀಕರಣವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಕು ವಿಶ್ವ ವ್ಯಾಪಾರ ನಿಯಮಗಳನ್ನು ಬಳಸಿಕೊಂಡಿವೆ” ಎಂದು ಜೈಶಂಕರ್ ಹೇಳಿದರು.

ವಿವಿಧ ಸಂಕೀರ್ಣ ಭೌಗೋಳಿಕ ರಾಜಕೀಯ ಸವಾಲುಗಳು, ಅಮೆರಿಕ- ಇಸ್ರೇಲ್‌ ಸ್ನೇಹ, ಉಕ್ರೇನ್‌ ಯುದ್ಧದ ಹಿನ್ನೆಲೆಯಲ್ಲಿ ಭಾರತ- ರಷ್ಯಾ ನಡುವಿನ ಸಂಬಂಧ ಇತ್ಯಾದಿಗಳ ಕುರಿತ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು: “ಅನೇಕ ಸಂದರ್ಭಗಳಲ್ಲಿ ನಾವು ಮಧ್ಯಮ ಮಾರ್ಗವನ್ನು ಕಂಡುಕೊಳ್ಳಬೇಕಿರುತ್ತದೆ. ಹಳೆಯ ಸಮಸ್ಯೆಗಳ ಜೊತೆಗೆ ಹೊಸ ಸಮಸ್ಯೆಗಳೂ ಇವೆ. ಇಂದಿನ ದೊಡ್ಡ ಚರ್ಚೆಗಳು, ಸಂಪರ್ಕ, ಸಾಲ, ವ್ಯಾಪಾರ ಇತ್ಯಾದಿಗಳೆಲ್ಲವೂ
ಇಂದು ಪಶ್ಚಿಮದ ಹತೋಟಿಯಲ್ಲಿದೆ. ಎಲ್ಲವೂ ಪಶ್ಚಿಮದಿಂದ ಬರುವ ಅಗತ್ಯವಿಲ್ಲ. ಆದರೆ ಬಲಿಷ್ಠವಾಗಿರುವ ಪಾಶ್ಚಾತ್ಯ ಶಕ್ತಿಗಳೇ ಇಂದಿನ ಈ ಸ್ಥಿತಿಗೆ ಕಾರಣ” ಎಂದು ಜೈಶಂಕರ್ ಹೇಳಿದರು.

ಇದೇ ವೇಳೆ ಅವರು ವಿಶ್ವಸಂಸ್ಥೆ ಭದ್ರತಾ ಸಮಿತಿ ಸದಸ್ಯತ್ವಕ್ಕೆ ಭಾರತಕ್ಕೆ ಅಡ್ಡಗಾಲು ಹಾಕಿದ ಚೀನಾಕ್ಕೆ ಮುಸುಕಿನ ಗುದ್ದು ನೀಡಿದರು. “ನೀವು ವಿಶ್ವಸಂಸ್ಥೆ ಭದ್ರತಾ ಸಮಿತಿ ಸುಧಾರಣೆಯನ್ನು ತೆಗೆದುಕೊಂಡರೆ, ನಮಗೆ ದೊಡ್ಡ ವಿರೋಧಿಯಾಗಿರುವುದು ಪಾಶ್ಚಿಮಾತ್ಯ ದೇಶ ಅಲ್ಲ. ಆದ್ದರಿಂದ ಸಮಸ್ಯೆಯ ಸಂಪೂರ್ಣ ಅರಿವನ್ನು ಸರಿಯಾಗಿ ಪಡೆಯೋಣ. ಬದಲಾವಣೆಯನ್ನು ಬಯಸುವ ದೇಶಗಳು ಅವರವರಿಗೆ ಬೇಕಾದ ದೇಶಗಳ ಗುಂಪುಗಳನ್ನು ರಚಿಸಿಕೊಂಡು ವಿವಿಧ ಸಂಯೋಜನೆಗಳನ್ನು ರೂಪಿಸಿವೆ” ಎಂದು ಜೈಶಂಕರ್ ಹೇಳಿದರು.

ಕಳೆದ ವಾರ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ರಾಯಭಾರಿಯಾಗಿರುವ ರುಚಿರಾ ಕಾಂಬೋಜ್‌ ಅವರು, ಎಲ್ಲಾ ಐದು ಕ್ಲಸ್ಟರ್‌ಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ಅಗತ್ಯವನ್ನು ಎತ್ತಿ ತೋರಿಸಿದ್ದರು.

ರೈಸಿನಾ ಮಾತುಕತೆಯಲ್ಲಿ ಹಲವು ಜಾಗತಿಕ ವಿಚಾರಗಳು ಚರ್ಚೆಗೊಳಗಾಗಿವೆ. ಈ ಸಂವಾದದಲ್ಲಿ ನೆದರ್ಲ್ಯಾಂಡ್ಸ್ ವಿದೇಶಾಂಗ ವ್ಯವಹಾರಗಳ ಮಂತ್ರಿ ಹಾಂಕೆ ಬ್ರೂಯಿನ್ಸ್ ಸ್ಲಾಟ್, ತಾಂಜಾನಿಯಾದ ವಿದೇಶಾಂಗ ವ್ಯವಹಾರಗಳ ಮತ್ತು ಪೂರ್ವ ಆಫ್ರಿಕಾ ವ್ಯವಹಾರಗಳ ಸಚಿವ ಜನುವರಿ ಯೂಸುಫ್‌ ಮಕಾಂಬಾ, ಬೊಲಿವಿಯಾ ಮಾಜಿ ಅಧ್ಯಕ್ಷ ಜಾರ್ಜ್ ಕ್ವಿರೋಗಾ, ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಅನ್ವರ್ ಬಿನ್ ಮೊಹಮ್ಮದ್ ಗರ್ಗಾಶ್ ಭಾಗವಹಿಸಿದ್ದರು.

ಇದನ್ನೂ ಓದಿ: India Canada Row: ತನಿಖೆ ಓಕೆ, ಕೆನಡಾ ಮೊದಲು ಸಾಕ್ಷ್ಯ ಕೊಡಲಿ; ಜೈಶಂಕರ್‌ ತಿರುಗೇಟು

Continue Reading

ದೇಶ

ಶಾ ವಿರುದ್ಧ ಹೇಳಿಕೆ; ಮಾನಹಾನಿ ಕೇಸ್‌ ರದ್ದು ಕೋರಿ ರಾಹುಲ್‌ ಗಾಂಧಿ ಸಲ್ಲಿಸಿದ ಅರ್ಜಿ ವಜಾ, ಮತ್ತೆ ಸಂಕಷ್ಟ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಅಮಿತ್‌ ಶಾ ಅವರ ಬಗ್ಗೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಜೆಪಿ ನಾಯಕ ನಾಯಕ ನವೀನ್‌ ಝಾ ಅವರು ಮಾನಹಾನಿ ಪ್ರಕರಣ ದಾಖಲಿಸಿದ್ದು, ಇದನ್ನು ರದ್ದುಗೊಳಿಸಬೇಕು ಎಂದು ರಾಹುಲ್‌ ಗಾಂಧಿ ಕೋರಿದ್ದರು.

VISTARANEWS.COM


on

Rahul Gandhi
Koo

ರಾಂಚಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರಿಗೆ ಹಿನ್ನಡೆಯಾಗಿದೆ. ಅಮಿತ್‌ ಶಾ ಕುರಿತು ಹೇಳಿಕೆ ನೀಡಿದ ಬಳಿಕ ಬಿಜೆಪಿ ನಾಯಕ ನವೀನ್‌ ಝಾ ಸಲ್ಲಿಸಿದ ಮಾನಹಾನಿ ಪ್ರಕರಣದ (Defamation Case) ರದ್ದುಗೊಳಿಸಬೇಕು ಎಂದು ಕೋರಿ ರಾಹುಲ್‌ ಗಾಂಧಿ ಅವರು ಸಲ್ಲಿಸಿದ ಅರ್ಜಿಯನ್ನು ಜಾರ್ಖಂಡ್‌ ಹೈಕೋರ್ಟ್‌ (Jharkhand High Court) ತಿರಸ್ಕರಿಸಿದೆ. ಇದರಿಂದಾಗಿ ರಾಹುಲ್‌ ಗಾಂಧಿ ಅವರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ರಾಹುಲ್‌ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದ್ದು, ಸೆಷನ್ಸ್‌ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಬೇಕು” ಎಂದು ರಾಹುಲ್‌ ಗಾಂಧಿ ಪರ ವಕೀಲರಾದ ಪಿಯೂಷ್‌ ಚಿತ್ರೇಶ್‌ ಹಾಗೂ ದಿಪಾಂಕರ್‌ ರೈ ಅವರು ರಾಂಚಿ ಹೈಕೋರ್ಟ್‌ಗೆ ಮನವಿ ಮಾಡಿದರು. ಆದರೆ, ನ್ಯಾಯಮೂರ್ತಿ ಅಂಬುಜ್‌ಕಾಂತ್‌ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯನ್ನು ತಿರಸ್ಕರಿಸಿತು. ಇದರಿಂದಾಗಿ ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅವರಿಗೆ ಭಾರಿ ಹಿನ್ನಡೆಯಾದಂತಾಗಿದೆ.

ಏನಿದು ಪ್ರಕರಣ?

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ವಿರುದ್ಧ ರಾಹುಲ್‌ ಗಾಂಧಿ ನೀಡಿದ ಹೇಳಿಕೆಯನ್ನು ಖಂಡಿಸಿ ನವೀನ್‌ ಝಾ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. “2018ರ ಮಾರ್ಚ್‌ 18ರಂದು ಮಾತನಾಡಿದ್ದ ರಾಹುಲ್‌ ಗಾಂಧಿ, ಅಮಿತ್‌ ಶಾ ಅವರನ್ನು ಕೊಲೆ ಆರೋಪಿ ಎಂದು ಕರೆದಿದ್ದಾರೆ. ಕಾಂಗ್ರೆಸ್‌ ಸಭೆಯಲ್ಲಿಯೇ ರಾಹುಲ್‌ ಗಾಂಧಿ ಅವರು ಅಮಿತ್‌ ಶಾ ಅವರನ್ನು ಕೊಲೆ ಆರೋಪಿ ಎಂದಿದ್ದಾರೆ. ಇದರಿಂದಾಗಿ ಅಮಿತ್‌ ಶಾ ಅವರಿಗೆ ಮಾನಹಾನಿಯಾಗಿದೆ” ಎಂಬುದಾಗಿ ನವೀನ್‌ ಝಾ ಅವರು ಸಲ್ಲಿಸಿದ ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Rahul Gandhi: ʼರಾಹುಲ್‌ ಗಾಂಧಿ ಭೇಟಿ ಮಾಡ್ಬೇಕಾ? ಹಾಗಾದ್ರೆ 10 ಕಿಲೋ ತೂಕ ಇಳಿಸು!ʼ

“ರಾಹಲ್‌ ಗಾಂಧಿ ಅವರು ಕೊಲೆ ಆರೋಪಿ ಎಂದು ಕರೆದು ಅಮಿತ್‌ ಶಾ (ಆಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು) ಅವರನ್ನು ಮಾತ್ರ ಅಪಮಾನ ಮಾಡಿದಂತಾಗಿಲ್ಲ. ಬಿಜೆಪಿಯ ಎಲ್ಲ ಕಾರ್ಯಕರ್ತರಿಗೂ ರಾಹುಲ್‌ ಗಾಂಧಿ ಹೇಳಿಕೆಯಿಂದ ಅವಮಾನವಾಗಿದೆ” ಎಂಬುದಾಗಿ ನವೀನ್‌ ಝಾ ಉಲ್ಲೇಖಿಸಿದ್ದರು. ರಾಹುಲ್‌ ಗಾಂಧಿ ವಿರುದ್ಧ ಹಲವು ಕೇಸ್‌ಗಳು ದಾಖಲಾಗಿವೆ. ಅದರಲ್ಲೂ, “ಮೋದಿ ಎಂಬ ಉಪನಾಮ ಹೊಂದಿರುವ ಎಲ್ಲರೂ ಏಕೆ ಕಳ್ಳರಾಗಿದ್ದಾರೆ” ಎಂದು ಹೇಳಿದ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರು ಸಂಸತ್‌ ಸದಸ್ಯತ್ವದಿಂದಲೇ ಅನರ್ಹಗೊಂಡಿದ್ದರು. ಸುಪ್ರೀಂ ಕೋರ್ಟ್‌ ಇದಕ್ಕೆ ತಡೆ ನೀಡಿದ ಕಾರಣ ರಾಹುಲ್‌ ಗಾಂಧಿ ಅವರು ಸದಸ್ಯತ್ವವನ್ನು ಮರಳಿ ಪಡೆದಿದ್ದಾರೆ. ಈಗ ಮತ್ತೊಂದು ಪ್ರಕರಣದಲ್ಲಿ ಅವರಿಗೆ ಸಂಕಷ್ಟ ಎದುರಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
TPL 3
ಪ್ರಮುಖ ಸುದ್ದಿ7 mins ago

TPL 3 : ಫೆ.28ರಿಂದ ಶುರು ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ

Joe Root
ಕ್ರೀಡೆ21 mins ago

Joe Root : ಅಲೆಸ್ಟರ್​ ಕುಕ್​ ದಾಖಲೆ ಮುರಿದು ಇಂಗ್ಲೆಂಡ್​​ ಪರ ಹೊಸ ದಾಖಲೆ ಬರೆದ ಜೊ ರೂಟ್​​

Shafi Apologizes To Challenging Star Darshan
ಸಿನಿಮಾ27 mins ago

Actor Darshan: ದರ್ಶನ್ ವಿರುದ್ಧ ದೂರು ವಾಪಸ್ ಪಡೆದು ಕ್ಷಮೆ ಕೇಳಿದ ಕನ್ನಡ ಶಫಿ!

Google Gemini ai bias against modi and Minister assured action
ದೇಶ30 mins ago

Google Gemini: ಮೋದಿ ವಿರುದ್ದ ಗೂಗಲ್ ಎಐ ಟೂಲ್ ಜೆಮಿನಿ ಪಕ್ಷಪಾತಿ; ಕ್ರಮ ಎಂದ ಸಚಿವ ರಾಜೀವ್ ಚಂದ್ರಶೇಖರ್

Woman from Ullal dies in car accident in Dubai
ದಕ್ಷಿಣ ಕನ್ನಡ33 mins ago

Road Accident : ಡಿವೈಡರ್‌ಗೆ ಕಾರು ಡಿಕ್ಕಿ; ದುಬೈನಲ್ಲಿ ನಡೆದ ಅಪಘಾತದಲ್ಲಿ ಉಳ್ಳಾಲದ ಯುವತಿ ಮೃತ್ಯು

police constable
ಉದ್ಯೋಗ40 mins ago

Job Alert: ಫೆ. 25ರಂದು ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕಾತಿ ಪರೀಕ್ಷೆ; ಪ್ರವೇಶ ಪತ್ರ ಹೀಗೆ ಡೌನ್‌ಲೋಡ್‌ ಮಾಡಿ

pralhad joshi
ಕರ್ನಾಟಕ43 mins ago

Ram Mandir: ಅಯೋಧ್ಯೆ ಯಾತ್ರಿಕರಿಗೆ ಬೆದರಿಕೆ ಹಾಕಿದವರನ್ನು ಒದ್ದು ಒಳಗೆ ಹಾಕಿ: ಪ್ರಲ್ಹಾದ್‌ ಜೋಶಿ ಆಗ್ರಹ

Narendra Modi
ದೇಶ45 mins ago

Narendra Modi: ಗುಜರಾತ್‌ನವನಾದರೂ ನಾನೀಗ ಬನಾರಸಿ ಎಂದ ಪ್ರಧಾನಿ ಮೋದಿ

BY Vijayendra calls on BJP workers to make 100 votes 200 Attack on CM Siddaramaiah
ರಾಜಕೀಯ48 mins ago

BY Vijayendra: 100 ಮತವನ್ನು 200 ಮಾಡಿ; ಬಿಜೆಪಿ ಕಾರ್ಯಕರ್ತರಿಗೆ ವಿಜಯೇಂದ್ರ ಟಾಸ್ಕ್‌; ಸಿಎಂ ವಿರುದ್ಧ ವಾಗ್ದಾಳಿ

R Ashwin
ಪ್ರಮುಖ ಸುದ್ದಿ49 mins ago

R Ashwin : ಕ್ರಿಕೆಟ್​ ದಂತಕತೆಗಳ ಎಲೈಟ್​ ಪಟ್ಟಿ ಸೇರಿದ ಆರ್​ ಅಶ್ವಿನ್​; ಏನಿದು ಸಾಧನೆ?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Fire breaks out in auto shed Burnt autos
ಬೆಂಗಳೂರು3 hours ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

read your daily horoscope predictions for february 23 2024
ಭವಿಷ್ಯ12 hours ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು1 day ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ1 day ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ3 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ4 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ6 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ6 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

ಟ್ರೆಂಡಿಂಗ್‌