Bharat Jodo Yatra: ಭಾರತ ಜೋಡೋ ಯಾತ್ರೆಗೆ ತೆರೆ; ಬದಲಾಯ್ತಾ ರಾಹುಲ್ ಇಮೇಜ್? Vistara News

ದೇಶ

Bharat Jodo Yatra: ಭಾರತ ಜೋಡೋ ಯಾತ್ರೆಗೆ ತೆರೆ; ಬದಲಾಯ್ತಾ ರಾಹುಲ್ ಇಮೇಜ್?

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ಕಾಶ್ಮೀರದ ಶ್ರೀನಗರದಲ್ಲಿ ತೆರೆ ಬಿದ್ದಿದೆ. ಸುಮಾರು 3500 ಕಿ.ಮೀ. ಉದ್ದದ ಈ ಪಾದಯಾತ್ರೆ ಕಾಂಗ್ರೆಸ್ ಪಕ್ಷ ಹಾಗೂ ನಾಯಕನಾಗಿ ರಾಹುಲ್ ಗಾಂಧಿಗೆ (Rahul Gandhi) ಸಾಕಷ್ಟು ನೆರವು ಒದಗಿಸಿದೆ.

VISTARANEWS.COM


on

Bharat Jodo Yatra concluded, will it help to Rahul Gandhi as leader?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
vistara-vishleshane-

ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು

ದೇಶವನ್ನು ಒಂದುಗೂಡಿಸುವ ಧ್ಯೇಯದೊಂದಿಗೆ 2022ರ ಸೆಪ್ಟೆಂಬರ್ 7ರಂದು ಆರಂಭವಾದ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ಸೋಮವಾರ(ಜ.30) ತೆರೆ ಬಿದ್ದಿದೆ. ಸುಮಾರು 3500 ಕಿ.ಮೀ. ದಾರಿಯನ್ನು 136 ದಿನಗಳ ಕಾಲ ಕ್ರಮಿಸಿಸಿದೆ. ಹಿಮಪಾತದ ಮಧ್ಯೆ ಯಾತ್ರೆಯ ರೂವಾರಿ, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ(Rahul Gandhi), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಯಾತ್ರೆ ಯಶಸ್ವಿಯಾಗಿದೆ ಎಂದು ಘೋಷಿಸಿದ್ದಾರೆ. ದೇಶದ ಮೂಲಭೂತ ತತ್ವಗಳಾದ, ಉದಾರತೆ ಮತ್ತು ಜಾತ್ಯಾತೀತಗಳ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದಿಸುವ ಸಿದ್ಧಾಂತದ ವಿರುದ್ಧ ಜಯ ಸಿಕ್ಕಿದೆ ಎಂಬುದು ಯಾತ್ರೆಯ ಒಟ್ಟಾರೆ ತಿರುಳು.

ಶ್ರೀನಗರದ ಶೇರ್ ಇ ಕಾಶ್ಮೀರ್ ಸ್ಟೇಡಿಯಂ ಆಯೋಜಿಸಲಾಗಿದ್ದ ಸಮಾರೋಪ ಸಮಾರಂಭದಲ್ಲಿ ರಾಹುಲ್ ಗಾಂಧಿಯಾದಿಯಾಗಿ, ಭಾರತ್ ಜೋಡೋ ಯಾತ್ರೆಯನ್ನು ಚುನಾವಣಾ ದೃಷ್ಟಿಯಿಂದ ಮಾಡಿದ್ದಲ್ಲ ಎಂದು ಹೇಳಿದ್ದಾರೆ. ಆದರೆ, ರಾಜಕಾರಣದ ಸಾಮಾನ್ಯ ಜ್ಞಾನ ಇದ್ದವರಿಗೂ ಈ ಯಾತ್ರೆಯ ಹಿಂದೆ ರಾಹುಲ್ ಗಾಂಧಿ ಇಮೇಜ್ ರಿಬಿಲ್ಡ್ ಮಾಡುವ ತಂತ್ರ, ಸತತ ಚುನಾವಣೆಗಳ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಪಕ್ಷವನ್ನು ಮುಂಬರುವ 2024ರ ಚುನಾವಣೆಗೆ ಸಜ್ಜುಗೊಳಿಸುವುದೇ ಆಗಿತ್ತು ಎಂಬುದು ಗುಟ್ಟೇನಲ್ಲ.

ಬದಲಾದ ರಾಹುಲ್ ವ್ಯಕ್ತಿತ್ವ

ರಾಹುಲ್ ಗಾಂಧಿ ಅವರು 2004ರಲ್ಲಿ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟರು. ಅಂದಿನಿಂದ ಈತನಕವೂ ರಾಹುಲ್ ಅವರನ್ನು ಪರಿಪಕ್ವತೆ ಇಲ್ಲದ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ, ನಿರಾಸಕ್ತ ರಾಜಕಾರಣಿ ಎಂಬಂತೆ ಬಿಂಬಿಸುವ ಪ್ರಯತ್ನಗಳು ನಡೆದಿವೆ. ಈ ಆರೋಪಗಳು ಕೂಡ ತಕ್ಕಮಟ್ಟಗೆ ನಿಜವೂ ಹೌದು. ತೀರಾ ಇತ್ತೀಚಿನವರೆಗೂ ಭಾರತೀಯ ಸಂದರ್ಭಕ್ಕೆ ಒಗ್ಗುವ ರಾಜಕಾರಣದ ಗುಣಗಳನ್ನು ಅವರೆಂದಿಗೂ ಸಾರ್ವಜನಿಕವಾಗಿ ಪ್ರದರ್ಶಿಸಲಿಲ್ಲ. ಹಾಗಾಗಿ, ಅವರ ರಾಜಕೀಯ ವಿರೋಧಿಗಳಿಗೆ ಅವರೇ ಸ್ವತಃ ಟೀಕಾಸ್ತ್ರಗಳನ್ನು ಒದಗಿಸುತ್ತಾ ಬಂದರು. ಅದರಲ್ಲೂ ವಿಶೇಷವಾಗಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯಂತೂ ಅವರನ್ನು ಎಷ್ಟು ಸಾಧ್ಯವೋ ಅಷ್ಟು ಪಪ್ಪು ಎಂಬಂತೆ ಬಿಂಬಿಸುವಲ್ಲಿ ಯಶಸ್ವಿಯಾಯಿತು. ಈ ಅನ್ವರ್ಥದಿಂದ ಅವರು ಹೊರ ಬರಲು ಪ್ರಯತ್ನಿಸುತ್ತಲೇ ಇದ್ದಾರೆ.

ಆದರೆ, ಭಾರತ್ ಜೋಡೋ ಯಾತ್ರೆ ಅವರಲ್ಲಿ ಬದಲಾವಣೆಗೆ ಕಾರಣವಾಗಿದೆಯಾ? ಯಾತ್ರೆಯುದ್ದಕ್ಕೂ ಅವರು ನಡೆದುಕೊಂಡ ರೀತಿಯನ್ನು ನೋಡಿದರೆ ಹೌದು ಎಂದು ಹೇಳಬಹುದು. ರಾಜಕಾರಣಿಯಾಗಿ ಅವರು ತಮ್ಮ ವ್ಯಕ್ತಿತ್ವದಲ್ಲಿ ಎಷ್ಟು ಬದಲಾವಣೆ ಮಾಡಿಕೊಂಡಿದ್ದಾರೆಂಬುದು ಮುಂದಿನ ವರ್ಷದ ಹೊತ್ತಿಗೆ ಕಾಣಲಿದೆ. ಆದರೆ, ಒಬ್ಬ ಮನುಷ್ಯನಾಗಿ, ಸಾಮೂಹಿಕ ಸ್ಪಂದನೆಗೆ ಸ್ಪಂದಿಸಬಲ್ಲ ಗುಣಗಳನ್ನು ಅವರು ಪ್ರದರ್ಶಿಸುತ್ತಾ ಬಂದಿದ್ದಾರೆ. ಯಾತ್ರೆಯುದ್ಧಕ್ಕೂ ನಾನಾ ವರ್ಗದ ಜನರನ್ನುಭೇಟಿಯಾಗುವ ಮೂಲಕ, ಅವರ ಕಷ್ಟು ಸುಖಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಈ ಮೂಲಕ ಅವರು ತಮ್ಮನ್ನು ತಾವು ಹೊಸ ರಾಹುಲ್ ಗಾಂಧಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಮತ್ತು ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ಪಕ್ಷವಾಗಲೀ, ಅದರ ನಾಯಕರಾಗಲೀ ಎಷ್ಟೇ ನಿರಾಕರಿಸಿದರೂ ಭಾರತ್ ಜೋಡೋ ಯಾತ್ರೆಯು Rebuild Rahul Gandhi Brand ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿಯ ಬಲಿಷ್ಠ ನಾಯಕ ನರೇಂದ್ರ ಮೋದಿ ಅವರಿಗೆ ಪರ್ಯಾಯ ನಾಯಕನೊಬ್ಬನಿದ್ದಾನೆ ಎಂಬುದನ್ನು ತೋರಿಸುವ ಪ್ರಯತ್ನವಂತೂ ಹೌದು. ಜತೆಗೆ, ಮುಂಬರುವ ಸಾರ್ವತ್ರಿಕ ಚುನಾವಣೆಗೆ ಈಗನಿಂದಲೇ ಕಾಂಗ್ರೆಸ್ ಸಜ್ಜುಗೊಳಿಸುವ ಪ್ರಯತ್ನವೂ ಹೌದು

ಕಾಂಗ್ರೆಸ್ ಪಕ್ಷಕ್ಕೆ ಲಾಭ ಆಗುತ್ತಾ?

ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತಾ ಎಂಬ ಪ್ರಶ್ನೆ ಸಾಕಷ್ಟು ಜನರು ಕೇಳುತ್ತಿದ್ದಾರೆ. ಆದರೆ, ಈ ಪ್ರಶ್ನೆಗೆ ಉತ್ತರ ಕಷ್ಟ. ಯಾಕೆಂದರೆ, ಜನರ ಮನಸ್ಸು ಯಾವಾಗ ಹೇಗೆ ಬದಲಾಗುತ್ತದೆ ಎಂದು ಹೇಳಲಾಗುವುದಿಲ್ಲ. ಚುನಾವಣೆ ಇನ್ನಾರು ತಿಂಗಳು ಇರುವಾಗ ಜನಾಭಿಪ್ರಾಯ ಬದಲಾಗಬಹುದು. ಆದರೆ, ನಾಲ್ಕೈದು ದಶಕಗಳ ಆಡಳಿತದಲ್ಲಿದ್ದ ಪಕ್ಷವೊಂದು ಕಳೆದ ಎರಡು ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿತ್ತು. ಜನರೊಂದಿಗೆ, ಜನರ ಬಳಿಗೆ ಪಕ್ಷವನ್ನು ಕೊಂಡೊಯ್ಯಲು ಅದಕ್ಕೊಂದು ನೆಪ ಬೇಕಿತ್ತು. ಈ ಯಾತ್ರೆಯು ಆ ದಾರಿಯನ್ನು ಹುಡುಕಿಕೊಟ್ಟಿದೆ. ಚುನಾವಣೆಯಲ್ಲಿ ಒಂಚೂರು ಈ ಯಾತ್ರೆಯ ಉಪಯೋಗವಾಗುವುದಿಲ್ಲ ಎನ್ನುವುದು ಮತ್ತು ಯಾತ್ರೆಯಿಂದ ಸಾಕಷ್ಟು ಲಾಭವಾಗಲಿದೆ ಎಂದು ಹೇಳುವುದು ಎರಡೂ ಒಂದೇ!

ಇದನ್ನೂ ಓದಿ: Bharat Jodo Yatra | ಭಾರತ್ ಜೋಡೋ ಯಾತ್ರೆ ರಾಷ್ಟ್ರೀಯ ಕಾಂಗ್ರೆಸ್, ದೇಶಕ್ಕೆ ಐತಿಹಾಸಿಕ ಘಟನೆ

ಆದರೆ, ಕಾಂಗ್ರೆಸ್ ಪಕ್ಷವು ಈ ಯಾತ್ರೆಯಿಂದ ಸಾಕಷ್ಟು ಉಬ್ಬಿ ಹೋಗಿದೆ. ಹಾಗಾಗಿ, ಪೂರ್ವ ಭಾರತಿಂದ ಪಶ್ಚಿಮ ಭಾರತದದ್ದಕ್ಕೂ ಯಾತ್ರೆ ಕೈಗೊಳ್ಳುವ ಮಾತಗಳನ್ನಾಡುತ್ತಿದೆ. ಖಂಡಿತವಾಗಿಯ ಭಾರತ್ ಜೋಡೋ ಯಾತ್ರೆ, ಪಕ್ಷಕ್ಕೆ ಟಾನಿಕ್ ಒದಗಿಸಿದೆ. ಅದರ ಪರಿಣಾಮ ಎಷ್ಟಿದೆ ಎಂಬುದನ್ನು ನೋಡಲು ನಾವು 2024ರ ಚುನಾವಣೆಗೆ ಕಾದು ನೋಡಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

EXPLAINER

ಚುನಾವಣೆಯಲ್ಲಿ ಹೆಣ್ಣುಮಕ್ಕಳ ಮತಗಳನ್ನು ಸೆಳೆದ ಬಿಜೆಪಿ; ‘ಕ್ವೀನ್ಸ್’‌ ಕಿಂಗ್‌ಮೇಕರ್ಸ್‌ ಆಗಿದ್ದು ಹೇಗೆ?

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲು ಚುನಾವಣೆಗೂ ಮುನ್ನ ಘೋಷಿಸಿದ ಮಹಿಳಾ ಕೇಂದ್ರಿತ ಯೋಜನೆಗಳ ಪಾಲು ಕೂಡ ಜಾಸ್ತಿ ಇದೆ. ಇದರಿಂದ ಹೆಣ್ಣುಮಕ್ಕಳು ಬಿಜೆಪಿ ಪರ ವಾಲಲು ಸಾಧ್ಯವಾಯಿತು ಎಂದು ವಿಶ್ಲೇಷಿಸಲಾಗಿದೆ.

VISTARANEWS.COM


on

Narendra Modi With Women
ಸಾಂದರ್ಭಿಕ ಚಿತ್ರ.
Koo

ನವದೆಹಲಿ: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ (Assembly Election Results 2023) ಪ್ರಕಟವಾಗಿದ್ದು, ತೆಲಂಗಾಣ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಭರಪೂರ ಉಚಿತ ಕೊಡುಗೆಗಳ ‘ಗ್ಯಾರಂಟಿ’ ನೀಡಿದ್ದರೂ ಜನ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಬಿಜೆಪಿ ಮೂರೂ ರಾಜ್ಯಗಳಲ್ಲಿ ಗೆಲುವು ಸಾಧಿಸಲು ನಾನಾ ಕಾರಣಗಳಿದ್ದರೂ, ಹೆಣ್ಣುಮಕ್ಕಳ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿರುವುದು ಪ್ರಮುಖ ಕಾರಣವಾಗಿದೆ. ವಿಶೇಷವಾಗಿ ಗೃಹಿಣಿಯರು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಮತ ನೀಡಿದ್ದು ಚುನಾವಣೆಯಲ್ಲಿ ಟರ್ನಿಂಗ್‌ ಪಾಯಿಂಟ್‌ ಆಗಿದೆ ಎಂದು ವಿಶ್ಲೇಷಿಸಲಾಗಿದೆ. ಹಾಗಾದರೆ, ಮೂರೂ ರಾಜ್ಯಗಳಲ್ಲಿ ಬಿಜೆಪಿಯು ಹೆಣ್ಣುಮಕ್ಕಳನ್ನು ಸೆಳೆದಿದ್ದು ಹೇಗೆ? ಯಾವ ಯೋಜನೆಗಳು ಸ್ತ್ರೀಯರ ಮತಗಳನ್ನು ವಾಲಿಸಿದವು ಎಂಬುದರ ಕಿರು ಮಾಹಿತಿ ಇಲ್ಲಿದೆ.

ಲಾಡ್ಲಿ ಬೆಹ್ನಾ ಯೋಜನೆ

ಮಧ್ಯಪ್ರದೇಶದಲ್ಲಿ ಬಡ ಹೆಣ್ಣುಮಕ್ಕಳಿಗೆ ಮಾಸಿಕ 1 ಸಾವಿರ ರೂ. ಸಹಾಯ ಧನ ನೀಡುವುದೇ ಲಾಡ್ಲಿ ಬೆಹನಾ ಯೋಜನೆಯಾಗಿದೆ. ಕಾಂಗ್ರೆಸ್‌ ಉಚಿತ ಕೊಡುಗೆಗಳ ಘೋಷಣೆಯನ್ನು ಮೊದಲೇ ಅರಿತಿದ್ದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು 2023ರ ಮಾರ್ಚ್‌ನಲ್ಲಿಯೇ ಲಾಡ್ಲಿ ಬೆಹನಾ ಯೋಜನೆಯನ್ನು ಜಾರಿಗೆ ತಂದರು. ಯೋಜನೆ ಜಾರಿಗೆ ತಂದು, ಬಡ ಹೆಣ್ಣುಮಕ್ಕಳ ಖಾತೆಗಳಿಗೆ ಮಾಸಿಕ 1 ಸಾವಿರ ರೂ. ಜಮೆ ಮಾಡಿಸಿದರು. ಆ ಮೂಲಕ ಸರ್ಕಾರವು ಮಹಿಳೆಯರ ಪರ ಇದೆ ಎಂಬ ಸಂದೇಶ ರವಾನಿಸಿದರು. ಅಲ್ಲದೆ, ಹೆಣ್ಣುಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.35ರಷ್ಟು ಮೀಸಲಾತಿ ಘೋಷಿಸಿದರು. 450 ರೂ.ಗೆ ಅಡುಗೆ ಅನಿಲ ಸಿಲಿಂಡರ್‌ ನೀಡಿದರು. ಇದು ಮಧ್ಯಪ್ರದೇಶದಲ್ಲಿ ಹೆಣ್ಣುಮಕ್ಕಳು ಬಜೆಪಿ ಪರ ವಾಲಲು ಸಾಧ್ಯವಾಯಿತು ಎಂದು ವಿಶ್ಲೇಷಿಸಲಾಗಿದೆ.

Shivraj Singh Chouhan

ರಾಜಸ್ಥಾನದಲ್ಲಿ ಕೈ ಹಿಡಿದ ಭರವಸೆ

ರಾಜಸ್ಥಾನದಲ್ಲಿ ಹೆಣ್ಣುಮಕ್ಕಳ ಸಮಸ್ಯೆಗಳನ್ನು, ಆ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ವಿಫಲವಾಗಿದ್ದನ್ನು ಪ್ರಚಾರದ ಅಸ್ತ್ರವಾಗಿಸಿಕೊಂಡ ಬಿಜೆಪಿಯು, ಚುನಾವಣೆ ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನೂ ನೀಡಿತು. ಇದು ಚುನಾವಣೆಯಲ್ಲಿ ಹೆಣ್ಣುಮಕ್ಕಳು ಬಿಜೆಪಿಗೆ ಮತ ಹಾಕಲು ಸಾಧ್ಯವಾಯಿತು. ಪ್ರಣಾಳಿಕೆಯಲ್ಲಿ ಬಿಜೆಪಿಯು, ಹೆಣ್ಣು ಮಕ್ಕಳಿಗಾಗಿ ಲಾಡೋ ಪ್ರೋತ್ಸಾಹ್ ಯೋಜನೆಯನ್ನು ಪರಿಚಯಿಸುವುದಾಗಿ ತಿಳಿಸಿತು. ಇದರ ಅಡಿಯಲ್ಲಿ ಮಧ್ಯಪ್ರದೇಶದ ಲಾಡ್ಲಿ ಲಕ್ಷ್ಮಿ ಯೋಜನೆಯಂತೆಯೇ ಪ್ರತಿ ಹೆಣ್ಣು ಮಗುವಿನ ಹೆಸರಿನಲ್ಲಿ 2 ಲಕ್ಷ ರೂ. ಉಳಿತಾಯ ಬಾಂಡ್ ನೀಡಲಾಗುವುದು ಎಂದು ಹೇಳಿತು.

ಇನ್ನು ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಸ್ವಾವಲಂಬಿ ಮಾಡುವುದಕ್ಕಾಗಿ ಬಿಜೆಪಿಯು ಸುಮಾರು 6 ಲಕ್ಷ ಮಹಿಳೆಯರಿಗೆ ಲಕಪತಿ ದೀದಿ ಸ್ಕೀಮ್‌ನಲ್ಲಿ ತರಬೇತಿ ಮತ್ತು ಆರ್ಥಿಕ ಬೆಂಬಲ ನೀಡುವುದಾಗಿ ಘೋಷಿಸಿತು. ಅಲ್ಲದೆ, ಉಜ್ವಲಾ ಫಲಾನುಭವಿಗಳಿಗೆ ಪ್ರತಿ ಗ್ಯಾಸ್ ಮೇಲೆ 450 ರೂ. ಸಬ್ಸಿಡಿ ನೀಡಲಾಗುವುದು. ಮಾತೃ ವಂದನಾ ಯೋಜನೆಯ ಮೊತ್ತವನ್ನು 5000 ರೂ.ನಿಂದ 8000 ರೂ.ವರೆಗೆ ಹೆಚ್ಚಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಬಿಜೆಪಿಗೆ ವರದಾನವಾಯಿತು. ಕಾಂಗ್ರೆಸ್‌ ಕೂಡ ಇಂತಹ ಉಚಿತ ಕೊಡುಗೆಗಳ ಭರವಸೆ ನೀಡಿದರೂ ಆಡಳಿತ ವಿರೋಧಿ ಅಲೆಯು ಆ ಪಕ್ಷಕ್ಕೆ ಮುಳುವಾಯಿತು.

ಛತ್ತೀಸ್‌ಗಢದಲ್ಲೂ ನಾರಿ ಶಕ್ತಿ ಬಲ

ಕರ್ನಾಟಕದಲ್ಲಿ ಹೆಣ್ಣುಮಕ್ಕಳಿಗೆ ಭರವಸೆ ನೀಡಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದ್ದನ್ನು ಮನಗಂಡಿದ್ದ ಬಿಜೆಪಿಯು ಛತ್ತೀಸ್‌ಗಢದಲ್ಲೂ ಮಹಿಳಾ ಕೇಂದ್ರಿತವಾಗಿಯೇ ಭರವಸೆಗಳನ್ನು ನೀಡಿತು. ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ 12 ಸಾವಿರ ರೂ. ಆರ್ಥಿಕ ನೆರವು, ಗ್ಯಾಸ್‌ ಸಬ್ಸಿಡಿ ಸೇರಿ ಹಲವು ಘೋಷಣೆ ಮಾಡಲಾಯಿತು. ಚುನಾವಣೆಯಲ್ಲಿ ಇವುಗಳ ಕುರಿತು ಭಾರಿ ಪ್ರಚಾರ ನಡೆಸಲಾಯಿತು. ಸಾಮಾಜಿಕ ಜಾಲತಾಣಗಳನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು. ಇದು ಬಿಜೆಪಿಯು ಹೆಣ್ಣುಮಕ್ಕಳ ಮತಗಳನ್ನು ಪಡೆಯುವಲ್ಲಿ, ಆ ಮೂಲಕ ರಾಜ್ಯದಲ್ಲಿ ಪಕ್ಷವು ಅಧಿಕಾರಕ್ಕೆ ಬರುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿತು.

ಇದನ್ನೂ ಓದಿ: ತೆಲಂಗಾಣದಲ್ಲಿ ಹಾಲಿ, ಭಾವಿ ಸಿಎಂಗಳನ್ನೇ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ; ಯಾರಿವರು?

ಛತ್ತೀಸ್‌ಗಢದಲ್ಲಿ ಮೋದಿ ಸರ್ಕಾರ ಬುಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ ತೆಗೆದುಕೊಂಡ ಕ್ರಮಗಳು ಕೂಡ ಅವರ ಒಲವು ಗಳಿಸಲು ನೆರವಾಗಿವೆ. ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ (ನ.15ರಂದು) ಪ್ರಧಾನಿ ಮೋದಿ, ʼವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳʼ (particularly vulnerable tribal groups – PVTG) ಅಭಿವೃದ್ಧಿಗಾಗಿ ನೂತನ ಕಾರ್ಯಕ್ರಮವೊಂದನ್ನು ಘೋಷಿಸಿದ್ದರು. ಈ ಯೋಜನೆಯು 24,000 ಕೋಟಿ ರೂ. ವೆಚ್ಚದಲ್ಲಿ ಅಂಚಿನಲ್ಲಿರುವ ಬುಡಕಟ್ಟು ಸಮುದಾಯಗಳವರಿಗೆ ತಲುಪುವಂಥ ರಸ್ತೆ, ಟೆಲಿಕಾಂ ಸಂಪರ್ಕ, ಶಿಕ್ಷಣ, ಆರೋಗಹ್ಯ ಸೇವೆ, ಪೌಷ್ಟಿಕತೆಯ ಮತ್ತಿತ ಸೌಲಭ್ಯಗಳನ್ನು ತಲುಪಿಸುವ ಕಾರ್ಯಕ್ರಮವಾಗಿದೆ. ಇದು ಕೂಡ ಚುನಾವಣೆಯಲ್ಲಿ ಮತಗಳನ್ನು ಸೆಳೆಯಲು ಸಾಧ್ಯವಾಯಿತು ಎಂದು ಹೇಳಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

ಮೈಚಾಂಗ್‌ ಚಂಡಮಾರುತ; ಭಾರಿ ಮಳೆಗೆ ತಮಿಳುನಾಡಿನಲ್ಲಿ ಇಬ್ಬರ ಸಾವು, ಬೆಂಗಳೂರಿಗೂ ಎಫೆಕ್ಟ್?

ತಮಿಳುನಾಡಿನಲ್ಲಿ ಮೈಚಾಂಗ್‌ ಚಂಡಮಾರುತದ ಅಬ್ಬರ ಜೋರಾಗಿದ್ದು, ಮಳೆ ಸಂಬಂಧಿತ ಅವಘಡದಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. ಒಬ್ಬ ಗಾಯಗೊಂಡಿದ್ದು, ಇನ್ನೂ 24 ಗಂಟೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.

VISTARANEWS.COM


on

Michaung Cyclone
Koo

ಚೆನ್ನೈ: ಮೈಚಾಂಗ್‌ ಚಂಡಮಾರುತಕ್ಕೆ ತಮಿಳುನಾಡು ತತ್ತರಿಸಿ ಹೋಗಿದೆ. ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ (Tamil Nadu) ಭಾರಿ ಮಳೆಯಾಗಿದ್ದು, ಚೆನ್ನೈ ಜಲಾವೃತಗೊಂಡಿದೆ. ಅದರಲ್ಲೂ, ಚನ್ನೈನ ಕಣತೂರ್‌ನಲ್ಲಿ ಭಾರಿ ಮಳೆಗೆ ಇತ್ತೀಚೆಗಷ್ಟೇ ಕಟ್ಟಿದ ಗೋಡೆ ಕುಸಿದು ಇಬ್ಬರು ಮೃತಪಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಇಬ್ಬರೂ ಜಾರ್ಖಂಡ್‌ನವರು ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಮೈಚಾಂಗ್‌ ಚಂಡಮಾರುತದ (Maichaung Cyclone) ಅಬ್ಬರ ಜೋರಾಗಿರುವುದರಿಂದ ಬೆಂಗಳೂರಿನಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಬಂಗಾಳ ಕೊಲ್ಲಿಯಲ್ಲಿ ಮೈಚಾಂಗ್‌ ಚಂಡಮಾರುತ ರೂಪುಗೊಂಡಿರುವ ಕಾರಣ ತಮಿಳುನಾಡಿನ ಬಹುತೇಕ ಕಡೆ ಭಾರಿ ಮಳೆಯಾಗುತ್ತಿದೆ. ಆಂಧ್ರಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿರುವ ಕಾರಣ ಎರಡೂ ರಾಜ್ಯಗಳಲ್ಲಿ ಸೋಮವಾರ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡು ಕರ್ನಾಟಕದ ನೆರೆಯ ರಾಜ್ಯಗಳಾಗಿರುವ ಕಾರಣ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಈಗಾಗಲೇ ಮೋಡ ಕವಿದ ವಾತಾವರಣ ಇದೆ.

ಕೆರೆಯಂತಾದ ಚೆನ್ನೈ ಏರ್‌ಪೋರ್ಟ್‌

ನಿರಂತರವಾಗಿ ಸುರಿದ ಮಳೆಯಿಂದಾಗಿ ಚೆನ್ನೈ ವಿಮಾನ ನಿಲ್ದಾಣವು ಜಲಾವೃತಗೊಂಡಿದೆ. ವಿಮಾನ ನಿಲ್ದಾಣದ ರನ್‌ವೇ, ಪಾರ್ಕಿಂಗ್‌ ಜಾಗವು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಮತ್ತೊಂದೆಡೆ, ಚೆನ್ನೈ ವಿಮಾನ ನಿಲ್ದಾಣಕ್ಕೆ ತೆರಳಬೇಕಿದ್ದ 11 ವಿಮಾನಗಳನ್ನು ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಲಾಗಿದೆ. ಮುಂದಿನ 24 ಗಂಟೆಗಳವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ವಿಮಾನಗಳ ಹಾರಾಟ ಕಷ್ಟ ಸಾಧ್ಯ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Karnataka Weather : ನಾಳೆಯಿಂದ ಡಿ. 9ರ ವರೆಗೆ ಸಾಧಾರಣದಿಂದ ಭಾರಿ ಮಳೆ ಸಾಧ್ಯತೆ

ವರ್ಕ್‌ ಫ್ರಂ ಹೋಮ್‌ಗೆ ಸೂಚನೆ

ತಮಿಳುನಾಡಿನಲ್ಲಿ ಗಂಟೆಗೆ 90-100 ಕಿಲೋ ಮೀಟರ್‌ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮಳೆಯೂ ಅಷ್ಟೇ ಜೋರಾಗಿದೆ. ಇದರಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿರುವ ಜತೆಗೆ ಚೆನ್ನೈ, ತಿರುವಳ್ಳೂರ್‌, ಕಾಂಚಿಪುರಂ ಹಾಗೂ ಚೆಂಗಲ್‌ಪಟ್ಟು ನಗರಗಳಲ್ಲಿ ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ (ವರ್ಕ್‌ ಫ್ರಂ ಹೋಮ್)‌ ಮಾಡುವಂತೆ ಸೂಚಿಸಿವೆ. ಭಾರಿ ಮಳೆಯಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

ಬಿಜೆಪಿ ಜಯಭೇರಿ ಬೆನ್ನಲ್ಲೇ ನಿಫ್ಟಿ, ಸೆನ್ಸೆಕ್ಸ್‌ ನೆಗೆತ, ಸುಧಾರಿಸಿದ ರೂಪಾಯಿ ಮೌಲ್ಯ!

ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸೋಮವಾರ ಷೇರು ಮಾರುಕಟ್ಟೆಯಲ್ಲಿ ಹೊಸ ಲವಲವಿಕೆ ಕಾಣಿಸಿದೆ. ಬಿಜೆಪಿ ಗೆಲುವಿಗೂ, ಷೇರು ಮಾರುಕಟ್ಟೆಗೆ ಏನು ಸಂಬಂಧ ಎಂಬುದಕ್ಕೆ ಉತ್ತರ ಇಲ್ಲಿದೆ.

VISTARANEWS.COM


on

Narendra Modi And Share Market
Koo

ಮುಂಬೈ: ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಗೆಲುವು ಸಾಧಿಸಿದ (Assembly Election Results 2023) ಬೆನ್ನಲ್ಲೇ ದೇಶದ ಷೇರುಪೇಟೆಯಲ್ಲಿ (Stock Market) ಹೊಸ ಉತ್ಸಾಹ ಮೂಡಿದೆ. ಸೋಮವಾರ ನಿಫ್ಟಿ, ಸೆನ್ಸೆಕ್ಸ್‌ ದಾಖಲೆಯ ಏರಿಕೆ ಕಂಡಿದ್ದು, ಚುನಾವಣೆ ಫಲಿತಾಂಶವೇ ಇದಕ್ಕೆ ಕಾರಣ ಎಂದು ಷೇರುಪೇಟೆ ತಜ್ಞರು ತಿಳಿಸಿದ್ದಾರೆ. ಮತ್ತೊಂದೆಡೆ ಡಾಲರ್‌ ಎದುರು ರೂಪಾಯಿ ಮೌಲ್ಯವೂ ಸುಧಾರಿಸಿಕೊಂಡಿದೆ.

ಷೇರು ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ಭಾರಿ ಲವಲವಿಕೆ ಕಂಡುಬಂದಿದೆ. ಬಿಎಸ್‌ಇ ಸೆನ್ಸೆಕ್ಸ್‌ 877.43 ಪಾಯಿಂಟ್‌ಗಳ ಏರಿಕೆಯೊಂದಿಗೆ (ಶೇ.1.3%) 68,358.52 ಅಂಕಗಳೊಂದಿಗೆ ಸಾರ್ವಕಾಲಿಕ ಸಾಧನೆ ಮಾಡಿತು. ಇನ್ನು ನಿಫ್ಟಿಯೂ 284.80 ಅಂಕಗಳ ಏರಿಕೆಯೊಂದಿಗೆ (ಶೇ.1.41) 20,552.70 ಅಂಕಗಳನ್ನು ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ಪಾಯಿಂಟ್‌ಗಳ ದಾಖಲೆ ಬರೆಯಿತು.

ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಡಾಲರ್‌ ಎದುರು ರೂಪಾಯಿ ಮೌಲ್ಯವು 6 ಪೈಸೆ ಸುಧಾರಣೆಯಾಗಿದೆ. ಇನ್ನು ಷೇರು ಮಾರುಕಟ್ಟೆಯಲ್ಲ ವಹಿವಾಟು ಆರಂಭವಾದ ಕೆಲವೇ ನಿಮಿಷಗಳಲ್ಲಿ ಹಲವು ಕಂಪನಿಗಳ ಮಾರುಕಟ್ಟೆ ಬಂಡವಾಳವು 4.09 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಬೆಳಗ್ಗೆಯ ಟ್ರೇಡಿಂಗ್‌ನಲ್ಲಿ ಅದಾನಿ ಗ್ರೂಪ್‌ ಕಂಪನಿಗಳು ಹೆಚ್ಚು ಲಾಭ ಗಳಿಸಿವೆ. ಹಾಗೆಯೇ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಎನ್‌ಟಿಪಿಸಿ ಹಾಗೂ ಲಾರ್ಸೆನ್‌ & ಟರ್ಬೊ ಕೂಡ ಹೆಚ್ಚಿನ ಲಾಭ ಗಳಿಸಿದವು.

ಷೇರು ಪೇಟೆಗೂ, ಚುನಾವಣೆಗೂ ಏನು ಸಂಬಂಧ?

ಚುನಾವಣೆ ಫಲಿತಾಂಶಕ್ಕೂ, ಷೇರುಪೇಟೆ ವಹಿವಾಟಿಗೂ ಸಂಬಂಧವಿದೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. “ಷೇರುಪೇಟೆಯು ಸ್ಥಿರ ಹಾಗೂ ಸುಧಾರಣೆ ಪರವಾಗಿರುವ ರಾಜಕಾರಣವನ್ನು ಬಯಸುತ್ತದೆ. ಮಾರುಕಟ್ಟೆ ದೃಷ್ಟಿಯಿಂದ ಚುನಾವಣೆ ಫಲಿತಾಂಶವು ನಿರೀಕ್ಷೆಗಿಂತ ಹೆಚ್ಚಾಗಿದೆ. ಬಿಜೆಪಿ ಗೆಲುವು ಸಾಧಿಸಿದ ಕಾರಣ ಷೇರು ಮಾರುಕಟ್ಟೆಯಲ್ಲಿ 500 ಪಾಯಿಂಟ್‌ಗಳ ಏರಿಕೆಯಾಗಿದೆ. ಇದೇ ಬೆಳವಣಿಗೆ ಮುಂದುವರಿಯಲಿದೆ” ಎಂದು ಹೂಡಿಕೆ ತಜ್ಞ ವಿ.ಕೆ. ವಿಜಯ್‌ಕುಮಾರ್‌ ಅವರು ಪಿಟಿಐಗೆ ತಿಳಿಸಿದ್ದಾರೆ.

Rajastan BJP Win

ಇದನ್ನೂ ಓದಿ: PM Narendra Modi: 3 ರಾಜ್ಯದ ಗೆಲುವು 2024ರ ಹ್ಯಾಟ್ರಿಕ್ ಜಯದ ಮುನ್ಸೂಚನೆ; ಮೋದಿ ಬಣ್ಣನೆ

ಮಧ್ಯಪ್ರದೇಶದಲ್ಲಿ ಒಟ್ಟು 230 ಕ್ಷೇತ್ರಗಳ ಪೈಕಿ ಬಿಜೆಪಿ 163, ಕಾಂಗ್ರೆಸ್‌ 66 ಹಾಗೂ ಒಬ್ಬ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ರಾಜಸ್ಥಾನದ 199 ಕ್ಷೇತ್ರಗಳ ಪೈಕಿ ಬಿಜೆಪಿ 115, ಕಾಂಗ್ರೆಸ್‌ 69 ಹಾಗೂ 18 ಕ್ಷೇತ್ರಗಳು ಇತರೆ ಪಕ್ಷಗಳ ಪಾಲಾಗಿವೆ. ಛತ್ತೀಸ್‌ಗಢದಲ್ಲಿರುವ ಒಟ್ಟು 90 ಕ್ಷೇತ್ರಗಳ ಪೈಕಿ ಬಿಜೆಪಿ 54, ಕಾಂಗ್ರೆಸ್‌ 35 ಹಾಗೂ ಒಬ್ಬ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಮೂರೂ ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Aircraft Crash: ತೆಲಂಗಾಣದಲ್ಲಿ ವಾಯುಪಡೆ ವಿಮಾನ ಪತನ, ಇಬ್ಬರು ಪೈಲಟ್‌ಗಳ ಸಾವು

Aircraft Crash: ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ವಾಯುಪಡೆಯ ತರಬೇತಿ ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

VISTARANEWS.COM


on

Aircraft Crash
Koo

ಹೈದರಾಬಾದ್:‌ ತೆಲಂಗಾಣದ ಮೇಡಕ್‌ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ (IAF) ತರಬೇತಿ ವಿಮಾನವೊಂದು ಪತನಗೊಂಡಿದ್ದು (Aircraft Crash), ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಟೂಪ್ರಾನ್‌ ಪಟ್ಟಣದ ರಾವೆಳ್ಳಿ ಗ್ರಾಮದ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಸೋಮವಾರ (ಡಿಸೆಂಬರ್‌ 4) ವಿಮಾನ ಪತನಗೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದು ಇಬ್ಬರು ಪೈಲಟ್‌ಗಳು (Two Pilots Dead) ಮೃತಪಟ್ಟಿದ್ದಾರೆ ಎಂದು ವಾಯುಪಡೆ ಮಾಹಿತಿ ನೀಡಿದೆ.

ದುಂಡಿಗಲ್‌ ಏರ್‌ಫೋರ್ಸ್‌ ಅಕಾಡೆಮಿಯಿಂದ ಹಾರಾಟ ಆರಂಭಿಸಿದ ಪೈಲಟಸ್‌ ಪಿಸಿ 7 ಎಂಕೆ-II ವಿಮಾನವು ರಾವೆಳ್ಳಿ ಗ್ರಾಮದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಒಬ್ಬ ಇನ್‌ಸ್ಟ್ರಕ್ಟರ್‌ ಪೈಲಟ್‌ ಹಾಗೂ ಒಬ್ಬ ಕೆಡೆಟ್‌ ಮೃತಪಟ್ಟಿದ್ದಾರೆ. “ದಿನ ನಿತ್ಯದ ಹಾರಾಟದ ಭಾಗವಾಗಿ ತರಬೇತಿ ವಿಮಾನವು ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಇಬ್ಬರೂ ಪೈಲಟ್‌ಗಳು ಮೃತಪಟ್ಟಿದ್ದಾರೆ. ಯಾವುದೇ ಸಾರ್ವಜನಿಕರು ಮೃತಪಟ್ಟಿಲ್ಲ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟಾಗಿಲ್ಲ” ಎಂದು ವಾಯುಪಡೆ ಮಾಹಿತಿ ನೀಡಿದೆ.

ಗುಡ್ಡಗಾಡು ಪ್ರದೇಶದಲ್ಲಿ ವಾಯುಪಡೆ ವಿಮಾನ ಪತನವಾಗುತ್ತಲೇ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ. ಇದಾದ ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ವಿಮಾನ ಪತನವಾಗಲು ನಿಖರ ಕಾರಣ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾಯುಪಡೆಯು ತನಿಖೆಗೆ ಆದೇಶಿಸಿದೆ. ವಿಮಾನದಲ್ಲಿ ಇಬ್ಬರು ಪೈಲಟ್‌ಗಳಷ್ಟೇ ಇದ್ದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅಮೆಜಾನ್​ ದಟ್ಟಾರಣ್ಯದಲ್ಲಿ ವಿಮಾನ ಪತನ; 4 ಮಕ್ಕಳ 40 ದಿನಗಳ ಹೋರಾಟ, ಹಸುಳೆಯೂ ಜೀವಂತ

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಆಗಸ್ಟ್‌ನಲ್ಲಿ ಡಿಆರ್‌ಡಿಒ ವಿಮಾನವೊಂದು ಪತನಗೊಂಡಿತ್ತು. ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ ಭಾನುವಾರ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಾನವರಹಿತ ಲಘುವಿಮಾನ ಪತನಗೊಂಡಿತ್ತು. ಪ್ರಾಯೋಗಿಕ ಹಾರಾಟದ ವೇಳೆ ತಪಸ್‌ 07A-14 ವಿಮಾನವು ಜಮೀನಿನಲ್ಲಿ ಪತನಗೊಂಡಿತ್ತು. ಗ್ರಾಮದ ಸಿದ್ದಪ್ಪ ಎಂಬುವರ ಜಮೀನಿನಲ್ಲಿ ಲಘು ವಿಮಾನ ಬಿದ್ದಿತ್ತು. 2019ರ ಸೆಪ್ಟೆಂಬರ್‌ನಲ್ಲಿ ಕೂಡ ಡಿಆರ್‌ಡಿಒದ ರುಸ್ತುಂ 2 ಎಂಬ ಮಾನವರಹಿತ ಲಘು ವಿಮಾನ ಕೂಡ ಚಿತ್ರದುರ್ಗ ಜಿಲ್ಲೆದಲ್ಲಿ ಪತನವಾಗಿತ್ತು.

Continue Reading
Advertisement
Kenda teaser kannada
South Cinema9 seconds ago

Kannada New Movie: ಟೀಸರ್ ಮೂಲಕ ಕೌತುಕದ ಕಿಡಿ ಹೊತ್ತಿಸಿದ `ಕೆಂಡ’!

CP Yogeshwar brother in law Mahadevaiah
ಕರ್ನಾಟಕ11 mins ago

Murder Case: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಭಾವ ಮಹದೇವಯ್ಯ ಕೊಲೆ!

Foeticide case and pair of pink bunny figurines
ಕರ್ನಾಟಕ32 mins ago

Belagavi Winter Session: ಭ್ರೂಣ ಹತ್ಯೆ ಕೇಸ್‌; ಕೋರ್ಟ್‌ನಲ್ಲಿ ಕೇಸ್‌ ದಾಖಲಿಸಲು ಸದನದಲ್ಲಿ ಒತ್ತಾಯ

Narendra Modi With Women
EXPLAINER34 mins ago

ಚುನಾವಣೆಯಲ್ಲಿ ಹೆಣ್ಣುಮಕ್ಕಳ ಮತಗಳನ್ನು ಸೆಳೆದ ಬಿಜೆಪಿ; ‘ಕ್ವೀನ್ಸ್’‌ ಕಿಂಗ್‌ಮೇಕರ್ಸ್‌ ಆಗಿದ್ದು ಹೇಗೆ?

Foeticide arrest
ಕರ್ನಾಟಕ52 mins ago

Foeticide Case : ಮೈಸೂರಿನ ಮತ್ತೊಂದು ಆಸ್ಪತ್ರೆಯಲ್ಲೂ ಭ್ರೂಣ ಹತ್ಯೆ; ಹೆಡ್‌ ನರ್ಸ್‌ ಉಷಾರಾಣಿ ಬಂಧನ

Tukali imitate sangeetha sringeri
ಬಿಗ್ ಬಾಸ್58 mins ago

BBK SEASON 10: ನಾಯಿಯಾದ ಸಂಗೀತಾ; ಅನುಕರಣೆ ಮಾಡೋದ್ರಲ್ಲಿ ತುಕಾಲಿ ಎತ್ತಿದ ಕೈ!

Revenue Minister Krishna Byre Gowda making coffee
ಕರ್ನಾಟಕ1 hour ago

Belagavi Winter Session: ಕಾವೇರಿದ ಚರ್ಚೆ ನಡುವೆ ಬಿಸಿ ಬಿಸಿ ಕಾಫಿ ಮಾಡಿಕೊಂಡು ಕುಡಿದ ಕೃಷ್ಣ ಬೈರೇಗೌಡ

Car catches fire after hitting bus
ಕರ್ನಾಟಕ2 hours ago

Video Viral : ಬಸ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಪ್ರಾಣ ಉಳಿಸಿದ ಡ್ರೈವರ್‌; ವಿಡಿಯೊ ಇದೆ!

Michaung Cyclone
ಕರ್ನಾಟಕ2 hours ago

ಮೈಚಾಂಗ್‌ ಚಂಡಮಾರುತ; ಭಾರಿ ಮಳೆಗೆ ತಮಿಳುನಾಡಿನಲ್ಲಿ ಇಬ್ಬರ ಸಾವು, ಬೆಂಗಳೂರಿಗೂ ಎಫೆಕ್ಟ್?

Rishab rashmika
South Cinema2 hours ago

Rishab Shetty: ಪರೋಕ್ಷವಾಗಿ ರಶ್ಮಿಕಾ, ಪ್ರಶಾಂತ್‌ ನೀಲ್‌ಗೆ ತಿರುಗೇಟು ಕೊಟ್ರಾ ರಿಷಬ್‌! ಸ್ಪಷ್ಟನೆ ಏನು?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ11 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ1 day ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌