Bilkis Bano: ಗೋಧ್ರಾ ಸಬ್‌ ಜೈಲಿಗೆ ಶರಣಾದ ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳು - Vistara News

ಕೋರ್ಟ್

Bilkis Bano: ಗೋಧ್ರಾ ಸಬ್‌ ಜೈಲಿಗೆ ಶರಣಾದ ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳು

Bilkis Bano: 2002ರ ಗೋದ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್‌ ಬಾನೊ ಅವರ ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದು, ಅವರ ಕುಟುಂಬಸ್ಥರನ್ನು ಹತ್ಯೆಗೈದ ಪ್ರಕರಣದ 11 ಅಪರಾಧಿಗಳು ಸುಪ್ರೀಂ ಕೋರ್ಟ್‌ ಭಾನುವಾರ (ಜನವರಿ 21) ಗುಜರಾತ್‌ನ ಪಂಚಮಹಲ್‌ ಜಿಲ್ಲೆಯ ಗೋಧ್ರಾ ಸಬ್‌ ಜೈಲಿಗೆ ಶರಣಾಗಿದ್ದಾರೆ.

VISTARANEWS.COM


on

bano
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: 2002ರ ಗೋಧ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್‌ ಬಾನೊ (Bilkis Bano) ಅವರ ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದು, ಅವರ ಕುಟುಂಬಸ್ಥರನ್ನು ಹತ್ಯೆಗೈದ ಪ್ರಕರಣದ 11 ಅಪರಾಧಿಗಳು ಸುಪ್ರೀಂ ಕೋರ್ಟ್‌ (Supreme Court) ನಿಗದಿಪಡಿಸಿದ ಗಡುವಿನ ಪ್ರಕಾರ ಭಾನುವಾರ (ಜನವರಿ 21) ಶರಣಾಗಿದ್ದಾರೆ. ಗುಜರಾತ್‌ನ ಪಂಚಮಹಲ್‌ ಜಿಲ್ಲೆಯ ಗೋಧ್ರಾ ಸಬ್‌ ಜೈಲಿಗೆ ಆಗಮಿಸಿ ಅಪರಾಧಿಗಳು ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಪರಾಧಿಗಳು ತಡರಾತ್ರಿ ಎರಡು ಖಾಸಗಿ ವಾಹನಗಳಲ್ಲಿ ಸಿಂಗ್ವಾಡ್‌ ರಂಧಿಕ್‌ಪುರದಿಂದ ಭಾನುವಾರ ರಾತ್ರಿ 11.30ಕ್ಕೆ ಗೋಧ್ರಾ ಸಬ್‌ ಜೈಲಿಗೆ ಆಗಮಿಸಿ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ಅಪರಾಧ ವಿಭಾಗದ ಇನ್ಸ್‌ಪೆಕ್ಟರ್‌ ಎನ್‌.ಎಲ್‌.ದೇಸಾಯಿ ಮಾಹಿತಿ ನೀಡಿದ್ದಾರೆ.

2022ರ ಸ್ವಾತಂತ್ರ್ಯ ದಿನದಂದು ಶಿಕ್ಷೆ ಅವಧಿ ಪೂರ್ವವೇ ಬಿಡುಗಡೆಯಾಗಿದ್ದ ಅಪರಾಧಿಗಳು ಜನವರಿ 21ರೊಳಗೆ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಜನವರಿ 8ರಂದು ತಿಳಿಸಿತ್ತು. ಶರಣಾಗಲು ಹೆಚ್ಚಿನ ಕಾಲಾವಕಾಶ ಕೋರಿ ಮೂವರು ನ್ಯಾಯಾಲಯದ ಕಡ ತಟ್ಟಿದ್ದರು. ಆದರೆ ಕೋರ್ಟ್‌ ಈ ಮನವಿಯನ್ನು ತಿರಸ್ಕರಿಸಿತ್ತು.

ಯಾರು ಈ 11 ಅಪರಾಧಿಗಳು?

ಬಕಾಭಾಯ್ ವೊಹಾನಿಯಾ, ಬಿಪಿನ್ ಚಂದ್ರ ಜೋಶಿ, ಕೇಸರ್ ಭಾಯ್ ವೊಹಾನಿಯಾ, ಗೋವಿಂದಭಾಯಿ ನಾಯ್, ಜಸ್ವಂತ್ ನಾಯ್, ಮಿತೇಶ್ ಚಿಮನ್ ಲಾಲ್ ಭಟ್, ಪ್ರದೀಪ್ ಮೊರ್ಧಿಯಾ, ರಾಧೇಶ್ಯಾಮ್ ಶಾ, ರಾಜುಭಾಯ್ ಸೋನಿ, ರಮೇಶ್ ರೂಪಾಭಾಯ್ ಚಂದನಾ ಮತ್ತು ಶೈಲೇಶ್ ಭಟ್ ಈಗ ಶರಣಾದ 11 ಅಪರಾಧಿಗಳು.

ಮೂವರು ಅಪರಾಧಿಗಳಾದ ಗೋವಿಂದಭಾಯಿ ನಾಯ್, ರಮೇಶ್ ರೂಪಾಭಾಯ್ ಚಂದನಾ ಮತ್ತು ಮಿತೇಶ್ ಚಿಮನ್ ಲಾಲ್ ಭಟ್ ಶರಣಾಗಲು ಸಮಯವನ್ನು ವಿಸ್ತರಿಸುವಂತೆ ಕೋರಿದ್ದರು. ಈ ಪೈಕಿ ಗೋವಿಂದಭಾಯಿ ನಾಯ್ ಶರಣಾಗಲು 4 ವಾರಗಳ ಸಮಯಾವಕಾಶ ಕೇಳಿದರೆ, ಮಿತೇಶ್‌ ಮತ್ತು ರಮೇಶ್‌ ರೂಪಭಾಯಿ 6 ವಾರಗಳ ಹೆಚ್ಚುವರಿ ಸಮಯ ನೀಡುವಂತೆ ಮನವಿ ಮಾಡಿದ್ದರು.

ಈ ಪೈಕಿ ಗೋವಿಂದಭಾಯಿ ನಾಯ್ ತನ್ನ ಮನವಿಯಲ್ಲಿ, 88 ವರ್ಷದ ತಂದೆ ಮತ್ತು 75 ವರ್ಷದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ತನ್ನ ಮೇಲಿದೆ. ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಸದ್ಯದಲ್ಲೇ ಆಪರೇಷನ್‌ ನಡೆಸಬೇಕಿರುವುದರಿಂದ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಹೇಳಿದ್ದ. ಇನ್ನೊಬ್ಬ ಅಪರಾಧಿ ರಮೇಶ್‌ ರೂಪಭಾಯ್‌, ತನ್ನ ಮಗನ ಮದುವೆ ದಿನ ನಿಗದಿಯಾಗಿದೆ. ಮದುವೆ ಮುಗಿದ ತಕ್ಷಣ ಶರಣಾಗುವುದಾಗಿ ತಿಳಿಸಿದ್ದ. ಇನ್ನು ಮಿತೇಶ್‌ ಮನವಿ ಮಾಡಿ, ತಾನು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸದ್ಯದಲ್ಲೇ ಬೆಳೆ ಕೊಯ್ಲಿಗೆ ಬರಲಿದೆ. ಇದು ಮುಗಿದ ತಕ್ಷಣ ಹಾಜರಾಗುವುದಾಗಿ ಹೇಳಿದ್ದ. ಆದರೆ ಅಪರಾಧಿಗಳ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು.

ಇದನ್ನೂ ಓದಿ: ಬಿಲ್ಕಿಸ್‌ ಬಾನೊ ಕೇಸ್; ಅಪರಾಧಿಗಳ ಶರಣಾಗತಿಗೆ ಹೆಚ್ಚಿನ ಕಾಲಾವಕಾಶ ಕೊಡದ ಕೋರ್ಟ್

ಏನಿದು ಪ್ರಕರಣ?

2002ರ ಫೆಬ್ರವರಿ 27ರಂದು ಗುಜರಾತ್​​ನಲ್ಲಿ ಸಬರಮತಿ ಎಕ್ಸ್​ಪ್ರೆಸ್​ ರೈಲಿಗೆ ಗೋಧ್ರಾ ರೈಲು ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿತ್ತು. ಇದರಲ್ಲಿ 59 ಕರಸೇವಕರು ಸಜೀವ ದಹನಗೊಂಡಿದ್ದರು. ಇವರೆಲ್ಲ ಉತ್ತರ ಪ್ರದೇಶದ ಅಯೋಧ್ಯೆಯಿಂದ ಬರುತ್ತಿದ್ದರು. ಗೋಧ್ರಾದಲ್ಲಿ ಗಲಾಟೆ-ಹಿಂಸಾಚಾರ ಹೆಚ್ಚಾದ ಬೆನ್ನಲ್ಲೇ ಅಲ್ಲಿನ ಅನೇಕರು ಊರು ತೊರೆಯಲು ಪ್ರಾರಂಭಿಸಿದರು. ಅಂತೆಯೇ 20 ವರ್ಷದ ಬಿಲ್ಕಿಸ್​ ಬಾನೊ ಕೂಡ ಮಾರ್ಚ್​ 3ರಂದು ತನ್ನ ಪತಿ, ಪುಟ್ಟ ಮಗಳು ಮತ್ತು ಕುಟುಂಬದ ಇತರ 15 ಸದಸ್ಯರೊಂದಿಗೆ ಹಳ್ಳಿಯನ್ನು ಬಿಟ್ಟು ಹೊರಡುತ್ತಿದ್ದರು. ಆಗವರು ಐದು ತಿಂಗಳ ಗರ್ಭಿಣಿ. ಆಗಲೇ ದಾಳಿ ನಡೆಸಿದ 20-30 ಮಂದಿ ಶಸ್ತ್ರಾಸ್ತ್ರಧಾರಿಗಳು ಅವರನ್ನು ಮಾರ್ಗ ಮಧ್ಯೆಯೇ ತಡೆದರು. ಬಿಲ್ಕಿಸ್​ ಬಾನೊ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಕುಟುಂಬದ ಏಳು ಮಂದಿಯನ್ನು ಕೊಂದು ಹಾಕಿದರು.  2004ರಲ್ಲಿ ಸುಪ್ರೀಂಕೋರ್ಟ್​ ಈ ಕೇಸ್​​ನ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ನೀಡಿತು. 2004ರಲ್ಲಿ ಎಲ್ಲ ಆರೋಪಿಗಳೂ ಬಂಧಿತರಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Hookah Ban: ರಾಜ್ಯ ಸರ್ಕಾರದ ಹುಕ್ಕಾ ಬಾರ್‌ ನಿಷೇಧ ಆದೇಶ ಎತ್ತಿಹಿಡಿದ ಹೈಕೋರ್ಟ್

Hookah Ban: ಹುಕ್ಕಾ ಸೇವನೆ, ಸಂಗ್ರಹ, ಮಾರಾಟವನ್ನು ರಾಜ್ಯ ಸರ್ಕಾರ ನಿಷೇಧಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ

VISTARANEWS.COM


on

Hookah Ban
Koo

ಬೆಂಗಳೂರು: ರಾಜ್ಯದಲ್ಲಿ ಹುಕ್ಕಾ ಬಾರ್‌ ನಿಷೇಧ (ban hookah bars) ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಹುಕ್ಕಾ ನಿಷೇಧ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಹುಕ್ಕಾ ಸೇವನೆ, ಸಂಗ್ರಹ, ಮಾರಾಟವನ್ನು ರಾಜ್ಯ ಸರ್ಕಾರ ನಿಷೇಧಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಹಲವರು ಹೈಕೋರ್ಟ್‌ ರಿಟ್ ‌ಸಲ್ಲಿಸಿದ್ದರು. ಆದರೆ, ಇದೀಗ ರಿಟ್ ಅರ್ಜಿಯನ್ನು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಸೋಮವಾರ ವಜಾಗೊಳಿಸಿದೆ.

ಬೆಂಗಳೂರಿನ ಆರ್‌. ಭರತ್‌ ಮತ್ತಿತರರು ಸಲ್ಲಿಸಿದ ಅರ್ಜಿ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ಇಂದು ಆದೇಶ ಪ್ರಕಟಿಸಿದೆ. ಈ ಬಗ್ಗೆ ಮಾರ್ಚ್‌ 11ರಂದು ನ್ಯಾಯಾಲಯವು ವಿಸ್ತೃತವಾಗಿ ವಾದ ಆಲಿಸಿ, ಆದೇಶ ಕಾಯ್ದಿರಿಸಿತ್ತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ.ಸುಮನ್‌ ಅವರು, ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಮತ್ತು ವ್ಯಾಪಾರ, ವಹಿವಾಟು, ಉತ್ಪಾದನೆ, ಪೂರೈಕೆ ಮತ್ತು ಹಂಚಿಕೆ ಕಾಯ್ದೆ 2003 (ಸಿಒಟಿಪಿಎ) ಕೇಂದ್ರ ಸರ್ಕಾರದ ಕಾನೂನಾಗಿದ್ದು, ಇಲ್ಲಿ ಹುಕ್ಕಾ ನಿಷೇಧಕ್ಕೆ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಆಹಾರ ಪೂರೈಸದ ನಿರ್ದಿಷ್ಟ ಸ್ಥಳಗಳಲ್ಲಿ ಹುಕ್ಕಾ ಸೇದಲು ಅವಕಾಶವಿದೆ ಎಂದು ವಾದಿಸಿದ್ದರು.

ಇದಕ್ಕೆ ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ ಅವರು, ಸಿಒಟಿಪಿಎ ಸಿಗರೇಟುಗಳಿಗೆ ಸಂಬಂಧಿಸಿದ್ದು, ಹುಕ್ಕಾಗೂ ಇದಕ್ಕೂ ಸಂಬಂಧವಿಲ್ಲ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಹುಕ್ಕಾಗೆ ನಿಷೇಧ ವಿಧಿಸಲು ಸರ್ಕಾರಕ್ಕೆ ಅಧಿಕಾರವಿದೆ. ಸಂವಿಧಾನದ 47ನೇ ವಿಧಿಯ ಅನ್ವಯ ಸಾರ್ವಜನಿಕ ಆರೋಗ್ಯ ಸುಧಾರಿಸಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳುವ ಹೊಣೆಗಾರಿಕೆ ಹೊಂದಿದೆ ಎಂದಿದ್ದರು.

ಇದನ್ನೂ ಓದಿ | Hookah Bar : ಹುಕ್ಕಾ, ಹುಕ್ಕಾಬಾರ್‌ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ? ತೀರ್ಪು ಕಾಯ್ದಿರಿಸಿದ ಕೋರ್ಟ್‌

ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಹುಕ್ಕಾ ನಿಷೇಧಿಸಲಾಗಿದೆ. ಹುಕ್ಕಾ ನಿಷೇಧ ಕುರಿತಾದ ಅಧಿಸೂಚನೆಯ ಜೊತೆಗೆ ಮಸೂದೆಯನ್ನೂ ಸದನದಲ್ಲಿ ಮಂಡಿಸಲಾಗಿದೆ. ಹುಕ್ಕಾ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗೆಂದು ನಾವು ಸಿಗರೇಟು ಬಳಕೆಗೆ ಆದ್ಯತೆ ನೀಡುತ್ತಿಲ್ಲ ಎಂದು ಹೇಳಿದ್ದರು. ವಾದ-ಪ್ರತಿವಾದ ಅಲಿಸಿ ಅಂತಿಮವಾಗಿ ರಿಟ್ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದ್ದು, ಹುಕ್ಕಾ ನಿಷೇಧದ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ.

ಸರ್ಕಾರ ಹುಕ್ಕಾ ಬಾರ್‌ ನಿಷೇಧಿಸಿದ್ದು ಯಾಕೆ?

ಹುಕ್ಕಾ, ತಂಬಾಕು ಅಥವಾ ನಿಕೋಟಿನ್‌ ಒಳಗೊಂಡ ನಿಕೋಟಿನ್‌ ರಹಿತ, ತಂಬಾಕು ರಹಿತ, ಸ್ವಾದಭರಿತ, ಸ್ವಾದರಹಿತ ಹುಕ್ಕಾ ಮೊಲಾಸಸ್‌ ಇದೇ ಮಾದರಿಯ ಇನ್ನಿತರ ಹೆಸರುಗಳಿಂದ ಕರೆಯಲ್ಪಡುವ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಜಾಹೀರಾತು, ಪ್ರಚೋದನೆ, ಸಂಗ್ರಹಣೆ, ವ್ಯಾಪಾರವನ್ನು ರಾಜ್ಯದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ಸಿಒಟಿಪಿಎ, ಮಕ್ಕಳ ಆರೈಕೆ ಮತ್ತು ರಕ್ಷಣೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಗಳು, ಭಾರತೀಯ ದಂಡ ಸಂಹಿತೆ ಹಾಗೂ ಅಗ್ನಿ ನಿಯಂತ್ರಣ ಹಾಗೂ ಅಗ್ನಿಸುರಕ್ಷತೆ ಕಾಯಿದೆ ಪ್ರಕಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಫೆಬ್ರವರಿ 7ರಂದು ಅಧಿಸೂಚನೆ ಹೊರಡಿಸಿತ್ತು.

Continue Reading

ಪ್ರಮುಖ ಸುದ್ದಿ

Abortion: 14 ವರ್ಷದ ಅತ್ಯಾಚಾರ ಸಂತ್ರಸ್ತ ಬಾಲಕಿಯ ಅಬಾರ್ಷನ್‌ಗೆ ಸುಪ್ರೀಂ ಕೋರ್ಟ್‌ ಅಸ್ತು

Abortion: “ಇದು ಬಹಳ ಅಸಾಧಾರಣವಾದ ಪ್ರಕರಣ. ಇಲ್ಲಿ ನಾವು ಮಕ್ಕಳನ್ನು ರಕ್ಷಿಸಬೇಕಾಗಿದೆ. ಈಗಿನ ಪ್ರತಿಯೊಂದು ಗಂಟೆಯೂ ಆಕೆಗೆ ಬಹಳ ನಿರ್ಣಾಯಕವಾಗಿದೆ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (CJI DY Chandrachud) ನೇತೃತ್ವದ ಪೀಠವು ನಿರ್ದೇಶನ ನೀಡಿದೆ.

VISTARANEWS.COM


on

Supreme Corut
Koo

ಹೊಸದಿಲ್ಲಿ: ಅತ್ಯಾಚಾರಕ್ಕೆ (Physical Abuse) ಒಳಗಾಗಿ ಗರ್ಭಿಣಿಯಾದ (Pregnant) 14 ವರ್ಷದ ಬಾಲಕಿಯ 29 ವಾರ ತುಂಬಿದ ಗರ್ಭಪಾತ (Abortion) ಮಾಡಿಸಲು ಸುಪ್ರೀಂ ಕೋರ್ಟ್ (Supreme Court) ಸೋಮವಾರ ಅನುಮತಿ ನೀಡಿದೆ.

ಗರ್ಭಾವಸ್ಥೆಯನ್ನು ಮುಂದುವರಿಸುವುದರಿಂದ ಬಾಲಕಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ಕೋರ್ಟ್‌ ಒತ್ತಿ ಹೇಳಿದೆ. “ಇದು ಬಹಳ ಅಸಾಧಾರಣವಾದ ಪ್ರಕರಣ. ಇಲ್ಲಿ ನಾವು ಮಕ್ಕಳನ್ನು ರಕ್ಷಿಸಬೇಕಾಗಿದೆ. ಈಗಿನ ಪ್ರತಿಯೊಂದು ಗಂಟೆಯೂ ಆಕೆಗೆ ಬಹಳ ನಿರ್ಣಾಯಕವಾಗಿದೆ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (CJI DY Chandrachud) ನೇತೃತ್ವದ ಪೀಠವು ನಿರ್ದೇಶನ ನೀಡಿದೆ.

ನಿಯಮಿತ ನ್ಯಾಯಾಲಯದ ಸಮಯವನ್ನು ಮೀರಿ ಶುಕ್ರವಾರ ಸಂಜೆ ನಡೆಸಿದ ವಿಚಾರಣೆಯಲ್ಲಿ, ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠವು, ಈ ಗರ್ಭಾವಸ್ಥೆಯನ್ನು ಮುಂದುವರಿಸುವುದು ಯುವತಿ ಅಥವಾ ಭ್ರೂಣದ ದೈಹಿಕ ಅಥವಾ ಮಾನಸಿಕ ಆರೋಗ್ಯಕ್ಕೆ ಅಪಾಯವನ್ನುಂಟುಮಾಡಬಹುದೇ ಎಂದು ತಕ್ಷಣವೇ ನಿರ್ಧರಿಸಲು ಮತ್ತು ವರದಿ ಮಾಡಲು ಮುಂಬೈನ ಸಿಯಾನ್ ಆಸ್ಪತ್ರೆಗೆ ನಿರ್ದೇಶಿಸಿತು.

ಅಬಾರ್ಷನ್‌ಗೆ ಅನುಮತಿ ನೀಡಲು ಬಾಲಕಿಯ ತಾಯಿ ಮಾಡಿದ್ದ ಮನವಿಯನ್ನು ಎಪ್ರಿಲ್ 4ರಂದು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ನಂತರ ಬಾಲಕಿಯ ತಾಯಿ ಸುಪ್ರೀಂ ಕೋರ್ಟ್‌ಗೆ ಧಾವಿಸಿದ್ದರು.

ಕೇಂದ್ರವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು, ಪ್ರಕರಣದಲ್ಲಿ ಸಂಪೂರ್ಣ ನ್ಯಾಯವನ್ನು ನೀಡಲು ಆರ್ಟಿಕಲ್ 142ರ ಅಡಿಯಲ್ಲಿ ಅದರ ಅಸಾಮಾನ್ಯ ಅಧಿಕಾರವನ್ನು ಕೋರಬೇಕೆಂದು ಒತ್ತಾಯಿಸಿದರು. ವೈದ್ಯಕೀಯ ವರದಿಯನ್ನು ಉಲ್ಲೇಖಿಸಿ, ಗರ್ಭಾವಸ್ಥೆಯನ್ನು ಮುಂದುವರೆಸುವುದು ಅಪ್ರಾಪ್ತ ವಯಸ್ಕಳ ಯೋಗಕ್ಷೇಮದ ಮೇಲೆ ಪರಿಣಾಮ ಬೀರಬಹುದು ಎಂದರು.

ಮನವಿಯನ್ನು ಅಂಗೀಕರಿಸಿದ ನ್ಯಾಯಾಲಯವು, 142ನೇ ವಿಧಿಯ ಅಡಿಯಲ್ಲಿ ಅಪ್ರಾಪ್ತ ವಯಸ್ಸಿನ ಗರ್ಭಾವಸ್ಥೆಯನ್ನು ತಕ್ಷಣವೇ ಮುಕ್ತಾಯಗೊಳಿಸಲು ಆದೇಶಿಸಿತು. “ಸನ್ನಿವೇಶದ ಅಗತ್ಯ ಮತ್ತು ಅಪ್ರಾಪ್ತ ವಯಸ್ಕಳ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ನಾವು ಬಾಂಬೆ ಉಚ್ಚ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ್ದೇವೆ” ಎಂದು ಪೀಠವು ನಿರ್ದೇಶನ ನೀಡಿತು. ಮುಂಬೈನ ಸಿಯಾನ್‌ನ ಲೋಕಮಾನ್ಯ ತಿಲಕ್ ಮುನ್ಸಿಪಲ್ ಮೆಡಿಕಲ್ ಕಾಲೇಜು ಮತ್ತು ಜನರಲ್ ಆಸ್ಪತ್ರೆಯ ವೈದ್ಯರ ಸಮಿತಿಗೆ ಅಬಾರ್ಷನ್‌ಗೆ ನಿರ್ದೇಶನ ನೀಡಿದೆ.

ಮಹಾರಾಷ್ಟ್ರ ಸರ್ಕಾರದ ಪರ ಹಾಜರಾದ ವಕೀಲರು, ಈ ಕುರಿತ ವೈದ್ಯಕೀಯ ವೆಚ್ಚವನ್ನು ಭರಿಸಲು ಮುಂದಾದರು. ವೈದ್ಯಕೀಯ ವರದಿಗಳಲ್ಲಿ ಬಾಲಕಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಯ ವಿವರವಾದ ಮೌಲ್ಯಮಾಪನದ ಅನುಪಸ್ಥಿತಿಯನ್ನು ಪೀಠವು ಗಮನಿಸಿದೆ. ಆಕೆಯ ಗರ್ಭಧಾರಣೆಯ ಆಘಾತಕಾರಿ ಸಂದರ್ಭಗಳನ್ನು ಪರಿಗಣಿಸಿ ಅಂತಹ ಪರಿಗಣನೆಯ ಅಗತ್ಯವನ್ನು ಪೀಠ ಒತ್ತಿಹೇಳಿತು.

ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (MTP) ಆಕ್ಟ್ ಅಡಿಯಲ್ಲಿ, ಗರ್ಭಾವಸ್ಥೆಯು ಮಹಿಳೆಯ ಜೀವಕ್ಕೆ ತೀವ್ರವಾದ ಬೆದರಿಕೆಯನ್ನು ಉಂಟುಮಾಡದಿದ್ದರೆ ಅಥವಾ ಗಣನೀಯ ಪ್ರಮಾಣದ ಭ್ರೂಣದ ಅಸಹಜತೆಗಳನ್ನು ಒಳಗೊಂಡಿರದಿದ್ದರೆ, 24 ವಾರಗಳ ನಂತರ ಗರ್ಭಪಾತಗಳನ್ನು ಸಾಮಾನ್ಯವಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: KC Cariyappa Love Case : ಮದುವೆ ಆಗುವುದಾಗಿ ಅಬಾರ್ಷನ್‌ ಮಾಡಿಸಿ ಕೈಕೊಟ್ರಾ ಕ್ರಿಕೆಟರ್‌ ಕಾರಿಯಪ್ಪ!

Continue Reading

ದೇಶ

Arvind Kejriwal: ಕೇಜ್ರಿವಾಲ್‌ಗೆ ʼಅಸಾಮಾನ್ಯ ಮಧ್ಯಂತರ ಜಾಮೀನುʼ ಕೋರಿದ ಅರ್ಜಿ ವಜಾ, ₹75,000 ದಂಡ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಅಧಿಕಾರಾವಧಿ ಪೂರ್ಣಗೊಳ್ಳುವವರೆಗೆ ಜಾರಿ ನಿರ್ದೇಶನಾಲಯ ಮತ್ತು ರಾಜ್ಯವು ದಾಖಲಿಸಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳಲ್ಲಿ “ಅಸಾಧಾರಣ ಮಧ್ಯಂತರ ಜಾಮೀನು” ಮೇಲೆ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

VISTARANEWS.COM


on

Aravind Kejriwal
Koo

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ (Delhi CM) ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ‘ಅಸಾಮಾನ್ಯ ಮಧ್ಯಂತರ ಜಾಮೀನು’ (extraordinary interim bail) ಮೇಲೆ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ದೆಹಲಿ ಹೈಕೋರ್ಟ್ (Dehli High Court) ತಿರಸ್ಕರಿಸಿದೆ. ಜೊತೆಗೆ ಅರ್ಜಿದಾರರಿಗೆ ₹75,000 ಕೋರ್ಟ್‌ ಖರ್ಚುವೆಚ್ಚವನ್ನು ವಿಧಿಸಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕಾರಾವಧಿ ಪೂರ್ಣಗೊಳ್ಳುವವರೆಗೆ ಜಾರಿ ನಿರ್ದೇಶನಾಲಯ ಮತ್ತು ರಾಜ್ಯವು ದಾಖಲಿಸಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳಲ್ಲಿ “ಅಸಾಧಾರಣ ಮಧ್ಯಂತರ ಜಾಮೀನು” ಮೇಲೆ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ನ್ಯಾಯಾಲಯವು ಅರ್ಜಿದಾರರ ಮೇಲೆ ₹75,000 ವೆಚ್ಚವನ್ನು ವಿಧಿಸಿದೆ.

ನ್ಯಾಯಾಲಯದ ಆದೇಶದ ಮೇರೆಗೆ ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ‌ʼವೀ ದಿ ಪೀಪಲ್ ಆಫ್ ಇಂಡಿಯಾ’ ಎಂಬ ಹೆಸರಿನಲ್ಲಿ ನಾಲ್ಕನೇ ವರ್ಷದ ಕಾನೂನು ವಿದ್ಯಾರ್ಥಿಯೊಬ್ಬರು ಅವರ ಜಾಮೀನಿಗೆ ಮನವಿಯನ್ನು ಸಲ್ಲಿಸಿದ್ದರು. ಇದನ್ನು ನಿರ್ವಹಿಸಲಾಗುವುದಿಲ್ಲ. ಏಕೆಂದರೆ ನ್ಯಾಯಾಲಯವು ತನ್ನ ರಿಟ್ ಅಧಿಕಾರ ವ್ಯಾಪ್ತಿಯಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಅಸಾಮಾನ್ಯ ಮಧ್ಯಂತರ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಹುಲ್ ಮೆಹ್ರಾ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಂಪೂರ್ಣವಾಗಿ ಒಪ್ಪಲಾಗದಂಥದ್ದು ಹಾಗೂ ತಪ್ಪುದಾರಿಗೆಳೆಯುವಂಥದ್ದು ಎಂದು ಕರೆದಿದ್ದಾರೆ. ಅರ್ಜಿದಾರರು ನ್ಯಾಯಾಲಯವನ್ನು ರಾಜಕೀಯ ವೇದಿಕೆಯನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.

“ಅವರು (ಅರ್ಜಿದಾರರು) ಕಾಲೇಜಿನಲ್ಲಿ ತರಗತಿಗಳಿಗೆ ಹಾಜರಾಗುತ್ತಾರೆಯೇ? ಅವರು ಕಾನೂನಿನ ತತ್ವಗಳನ್ನು ಅನುಸರಿಸುತ್ತಿಲ್ಲ ಎಂದು ತೋರುತ್ತದೆ” ಎಂದು ನ್ಯಾಯಮೂರ್ತಿ ಮನ್ಮೀತ್ ಪಿಎಸ್ ಅರೋರಾ ಅವರನ್ನೊಳಗೊಂಡ ಪೀಠ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ. ಎಎಪಿ ನಾಯಕನಿಗೆ ತನ್ನ ಕಾನೂನು ಪರಿಹಾರಗಳನ್ನು ಪಡೆಯಲು ಸಾಕಷ್ಟು ವಿಧಾನವಿದೆ. ಮತ್ತು ಈ ಅರ್ಜಿದಾರನು ಅವರ ಪರವಾಗಿ ಅರ್ಜಿ ಸಲ್ಲಿಕೆ ಮಾಡಲು ಯಾವುದೇ ಅಧಿಕಾರವನ್ನು ಹೊಂದಿಲ್ಲ ಎಂದು ನ್ಯಾಯಾಲಯವು ಟೀಕಿಸಿತು.

“ಆ ವ್ಯಕ್ತಿಯು ಕಾನೂನಿನ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ನೀವು ಯಾರು? ನಿಮ್ಮ ಬಗ್ಗೆ ನಿಮಗೆ ಕೆಲವು ಉತ್ಪ್ರೇಕ್ಷಿತ ಕಲ್ಪನೆಗಳಿವೆ” ಎಂದು ನ್ಯಾಯಾಲಯ ಟೀಕಿಸಿದೆ.

ಇದನ್ನೂ ಓದಿ: Drought Relief: ಒಂದು ವಾರದಲ್ಲಿ ಕರ್ನಾಟಕಕ್ಕೆ ಬರ ಪರಿಹಾರ; ಸುಪ್ರೀಂಗೆ ಕೇಂದ್ರ ಮಹತ್ವದ ಮಾಹಿತಿ

Continue Reading

Latest

Divorce case: ಆರತಕ್ಷತೆಯು ಮದುವೆಯ ಭಾಗವಲ್ಲ: ಮಹತ್ವದ ತೀರ್ಪು ನೀಡಿದ ಬಾಂಬೆ ಹೈಕೋರ್ಟ್ ಹೇಳಿದ್ದೇನು?

Divorce case: ಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಬಾಂದ್ರಾ ಕೌಟುಂಬಿಕ ನ್ಯಾಯಾಲಯದ ವಿರುದ್ಧ ಮಹಿಳೆ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಮಹಿಳೆಯ ವಾದವನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ.

VISTARANEWS.COM


on

By

Divorce case
Koo

ಮುಂಬೈ: ಮದುವೆ (Wedding) ಆರತಕ್ಷತೆಯು (Reception) ಮದುವೆಯ ಭಾಗವಲ್ಲ. ಈ ಕುರಿತು ಕೌಟುಂಬಿಕ ನ್ಯಾಯಾಲಯದಲ್ಲಿ (Familya court) ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂಬುದಾಗಿ 2015ರಲ್ಲಿ ನಡೆದ ವಿವಾಹ ಪ್ರಕರಣಕ್ಕೆ ಸಂಬಂಧಿಸಿ ವಿಚ್ಛೇದನ ಅರ್ಜಿ ವಿಚಾರಣೆ (Divorce case) ನಡೆಸಿದ ಬಾಂಬೆ ಹೈಕೋರ್ಟ್ (Bombay high court) ತಿಳಿಸಿದೆ.

2015ರ ಜೂನ್ ನಲ್ಲಿ ಜೋಧ್‌ಪುರದಲ್ಲಿ (Jodhpur) ವಿವಾಹವಾದ ಜೋಡಿಯ ಅರತಕ್ಷತೆ ಕಾರ್ಯಕ್ರಮ ನಾಲ್ಕು ದಿನಗಳ ಬಳಿಕ ಮುಂಬೈಯಲ್ಲಿ (Mumbai) ನಡೆದಿತ್ತು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಮುಂಬೈಯಲ್ಲಿ ನಡೆದ ವಿವಾಹದ ಆರತಕ್ಷತೆಯ ಬಳಿಕ ಉಂಟಾದ ಪತಿ-ಪತ್ನಿಯರ ನಡುವಿನ ವೈವಾಹಿಕ ವಿವಾದಗಳನ್ನು ಬಗೆಹರಿಸುವ ಅಧಿಕಾರವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಬಾಂದ್ರಾ ಕೌಟುಂಬಿಕ ನ್ಯಾಯಾಲಯದ ವಿರುದ್ಧ ಮಹಿಳೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸೋಮವಾರ ಮಹಿಳೆಯ ವಾದವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಇದನ್ನೂ ಓದಿ: Divorce Case : ಶುಭ ಸುದ್ದಿ! ಕಾರಣ ಸರಿಯಾಗಿದ್ದರೆ ಕೂಲಿಂಗ್‌ ಪೀರಿಯೆಡ್‌ ಇಲ್ಲದೆಯೇ ತಕ್ಷಣ ಡೈವೋರ್ಸ್ ಸಿಗುತ್ತೆ!

ಮದುವೆಯ ಆರತಕ್ಷತೆಯು ಮದುವೆಯ ಆಚರಣೆಯ ಭಾಗವಾಗಿರಲು ಸಾಧ್ಯವಿಲ್ಲ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು 38 ವರ್ಷದ ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮಹಿಳೆಯ ವಾದವನ್ನು ಆಲಿಸಿದ ನ್ಯಾಯಮೂರ್ತಿ ರಾಜೇಶ್ ಪಾಟೀಲ್ ತಮ್ಮ ತೀರ್ಪು ನೀಡಿದ್ದಾರೆ.

ಮದುವೆ ಬಳಿಕ ಏನಾಗಿತ್ತು ?

2015ರ ಜೂನ್‌ನಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದ ದಂಪತಿ ಮದುವೆಯಾದ ನಾಲ್ಕು ದಿನಗಳ ಬಳಿಕ ಮುಂಬೈಯಲ್ಲಿ ಮದುವೆಯ ಆರತಕ್ಷತೆ ನಡೆಸಿದ್ದರು. ಆರತಕ್ಷತೆಯ ಬಳಿಕ ಪತ್ನಿ ಸುಮಾರು 10 ದಿನಗಳ ಕಾಲ ಪತಿಯ ಮನೆಯಲ್ಲಿ ಇದ್ದರು. ಬಳಿಕ ಯುನೈಟೆಡ್ ಸ್ಟೇಟ್ಸ್‌ಗೆ ಹೋಗಿ ವಾಸವಾಗಿದ್ದಾರೆ. ಸುಮಾರು ನಾಲ್ಕು ವರ್ಷಗಳ ಕಾಲ ಒಟ್ಟಿಗೆ ಇದ್ದ ಅವರು 2019ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ವಿಚ್ಛೇದನಕ್ಕಾಗಿ ಅರ್ಜಿ

ಹಿಂಸೆಯ ಆಧಾರದ ಮೇಲೆ 2020ರಲ್ಲಿ ಪತಿ ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದರು. ನಾಲ್ಕು ತಿಂಗಳ ಅನಂತರ ಪತ್ನಿ ಯುಎಸ್‌ನಲ್ಲಿ ಪ್ರತ್ಯೇಕ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. 2021ರ ಆಗಸ್ಟ್ ನಲ್ಲಿ ಪತ್ನಿ ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ ತನ್ನ ವಿಚ್ಛೇದಿತ ಪತಿಯ ವಿಚ್ಛೇದನ ಅರ್ಜಿಯ ವಿಚಾರಣೆಯನ್ನು ಪ್ರಶ್ನಿಸಿ ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 19ರ ಅಡಿಯಲ್ಲಿ ಮುಂಬೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ದಂಪತಿ ಬಹುಕಾಲವನ್ನು ಒಟ್ಟಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಳೆದಿದ್ದಾರೆ. ಮದುವೆಯಾದ ಬಳಿಕ ಕೇವಲ 10 ದಿನಗಳಿಗಿಂತಲೂ ಕಡಿಮೆ ಕಾಲ ಅವರು ಮುಂಬೈಯಲ್ಲಿ ಪತಿಯ ಮನೆಯಲ್ಲಿ ಇದ್ದರು. ಹೀಗಾಗಿ ಮುಂಬೈಯ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಅರ್ಜಿಯನ್ನು ಪರಿಗಣಿಸಲು ಹಿಂದೂ ವಿವಾಹ ಕಾಯ್ದೆಯ 19ರ ಉಪ-ವಿಭಾಗ (iii) ಅಡಿಯಲ್ಲಿ ಯಾವುದೇ ಅಧಿಕಾರ ಹೊಂದಿರುವುದಿಲ್ಲ ಎಂದು ನ್ಯಾಯಮೂರ್ತಿ ಪಾಟೀಲ್ ಹೇಳಿದರು.

ಮಹಿಳೆಯ ಗಂಡನ ಮನೆ ಮುಂಬಯಿ ನಲ್ಲಿರುವುದರಿಂದ ಮುಂಬೈ ನಗರವನ್ನು ಅವರು ಒಟ್ಟಿಗೆ ವಾಸಿಸುವ ಸ್ಥಳವೆಂದು ಪರಿಗಣಿಸಬೇಕು ಎಂಬ ಪತಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.

Continue Reading
Advertisement
Shakti Scheme
ಕರ್ನಾಟಕ4 hours ago

Shakti Scheme: ಸಿಎಂ ಸಿದ್ದರಾಮಯ್ಯಗೆ ಫ್ರೀ ಟಿಕೆಟ್ ಹಾರ ಅರ್ಪಣೆ; ಕಾನೂನು‌ ವಿದ್ಯಾರ್ಥಿನಿಯಿಂದ ವಿಭಿನ್ನವಾಗಿ ಕೃತಜ್ಞತೆ

IPL 2024
ಕ್ರೀಡೆ4 hours ago

IPL 2024 : ಮುಂಬೈ ವಿರುದ್ಧ ರಾಜಸ್ಥಾನ್​ ತಂಡಕ್ಕೆ 9 ವಿಕೆಟ್​ ಅಮೋಘ​ ಗೆಲುವು

Gurulinga Shivacharya Swamiji
ಕರ್ನಾಟಕ5 hours ago

Gurulinga Shivacharya Swamiji: ಕಾರು ಅಪಘಾತದಲ್ಲಿ ಬಂಗರಗಾ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

Actor Darshan election campaign for Mandya Lok Sabha constituency Congress candidate star Chandru
ಮಂಡ್ಯ5 hours ago

Lok Sabha Election 2024: ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಮತ ನೀಡಿ, ಗೆಲ್ಲಿಸಿ: ನಟ ದರ್ಶನ್ ಮನವಿ

Tulsi Gowda
ಪ್ರಮುಖ ಸುದ್ದಿ5 hours ago

Tulsi Gowda: ಮನೆಯಲ್ಲಿ ಕಾಲು ಜಾರಿ ಬಿದ್ದು ಪದ್ಮಶ್ರೀ ತುಳಸಿ ಗೌಡ ಅಸ್ವಸ್ಥ

IPL 2024
ಪ್ರಮುಖ ಸುದ್ದಿ5 hours ago

ವಿಸ್ತಾರ ಸಂಪಾದಕೀಯ: ತಂತ್ರಜ್ಞಾನ ಕಾಲದಲ್ಲೂ ಐಪಿಎಲ್​ ಅಂಪೈರ್ ಗಳ ಸೋಮಾರಿತನ ಆಕ್ಷೇಪಾರ್ಹ

Terrorist Attack
ದೇಶ5 hours ago

Terrorist Attack: ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು; ಉಗ್ರನ ದಾಳಿಗೆ ಸರ್ಕಾರಿ ನೌಕರ ಬಲಿ

Reliance Industries net profit of Rs 18,951 crore, declares interim dividend of Rs 10 per share
ದೇಶ5 hours ago

Reliance Industries: ರಿಲಯನ್ಸ್ ಇಂಡಸ್ಟ್ರೀಸ್‌ಗೆ 18,951 ಕೋಟಿ ರೂ. ನಿವ್ವಳ ಲಾಭ; ಷೇರಿಗೆ 10 ರೂ. ಮಧ್ಯಂತರ ಲಾಭಾಂಶ

Hardik Pandya
ಪ್ರಮುಖ ಸುದ್ದಿ5 hours ago

Hardik Pandya : ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್​​ನಲ್ಲಿ ಮತ್ತೆ ವಿಫಲ; ಬೆಂಡೆತ್ತಿದ ಅಭಿಮಾನಿಗಳು

Rain News
ಕರ್ನಾಟಕ6 hours ago

Rain News: ಪ್ರತ್ಯೇಕ ಮಳೆ ಅವಘಡ; ಬೀದರ್‌ನಲ್ಲಿ ಸಿಡಿಲು ಬಡಿದು ಇಬ್ಬರು ಯುವಕರ ದುರ್ಮರಣ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru karaga 2024
ಬೆಂಗಳೂರು11 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ12 hours ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು15 hours ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು17 hours ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ24 hours ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ2 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ3 days ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

ಟ್ರೆಂಡಿಂಗ್‌