Gujarat Election | ನಾನು ಈ ಗುಜರಾತನ್ನು ರೂಪಿಸಿದ್ದೇನೆ, ಬಿಜೆಪಿ ಅಭಿಯಾನ ಶುರು, 10 ಸಾವಿರ ಸೆಲ್ಫಿ ಪಾಯಿಂಟ್‌ ಸ್ಥಾಪನೆ - Vistara News

ದೇಶ

Gujarat Election | ನಾನು ಈ ಗುಜರಾತನ್ನು ರೂಪಿಸಿದ್ದೇನೆ, ಬಿಜೆಪಿ ಅಭಿಯಾನ ಶುರು, 10 ಸಾವಿರ ಸೆಲ್ಫಿ ಪಾಯಿಂಟ್‌ ಸ್ಥಾಪನೆ

ಗುಜರಾತ್‌ ಚುನಾವಣೆಗೆ (Gujarat Election) ರಣತಂತ್ರ ರೂಪಿಸುತ್ತಿರುವ ಬಿಜೆಪಿಯು ಮೋದಿ ಘೋಷಣೆಯಂತೆ, ‘ನಾನು ಈ ಗುಜರಾತನ್ನು ರೂಪಿಸಿದ್ದೇನೆ’ ಎಂಬ ಅಭಿಯಾನ ಆರಂಭಿಸಿದೆ.

VISTARANEWS.COM


on

Narendra Modi World's Most Popular Leader
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗಾಂಧಿನಗರ: ಗುಜರಾತ್‌ ವಿಧಾನಸಭೆ ಚುನಾವಣೆಗೆ (Gujarat Election) ಕೆಲವೇ ದಿನ ಬಾಕಿ ಇರುವುದರಿಂದ ಸರ್ವಪಕ್ಷಗಳು ಚುನಾವಣೆ ರಣತಂತ್ರ ರೂಪಿಸುತ್ತಿವೆ. ಇದರ ಭಾಗವಾಗಿಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ‘I Have Made This Gujarat’ (ನಾನು ಈ ಗುಜರಾತ್‌ಅನ್ನು ರೂಪಿಸಿದ್ದೇನೆ) ಎಂಬ ಚುನಾವಣೆ ಘೋಷಣೆ ಮಾಡಿದ್ದು, ಇದೇ ಘೋಷಣೆ ಅಡಿಯಲ್ಲಿ ಬಿಜೆಪಿಯು ಅಭಿಯಾನ ಆರಂಭಿಸಿದೆ.

ಚುನಾವಣೆ ಅಭಿಯಾನದ ಭಾಗವಾಗಿ ಬಿಜೆಪಿ ಗುಜರಾತ್‌ ಘಟಕದ ಅಧ್ಯಕ್ಷ ಸಿ.ಆರ್.ಪಾಟೀಲ್‌ ಅವರು ರಾಜ್ಯದಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿಯ ಕುರಿತು ಕಿರುಚಿತ್ರವೊಂದನ್ನು ಬಿಡುಗಡೆಗೊಳಿಸಿದರು. ಹಾಗೆಯೇ, ಸುಮಾರು 10 ಸಾವಿರ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲಿದ್ದು, ಜನ ಸೆಲ್ಫಿ ಅಪ್‌ಲೋಡ್‌ ಮಾಡಬಹುದಾಗಿದೆ. ಚುನಾವಣೆ ಅಭಿಯಾನದಲ್ಲಿ ಯುವಜನರೂ ಪಾಲ್ಗೊಳ್ಳುವಂತೆ ಮಾಡುವುದು ಬಿಜೆಪಿ ಉದ್ದೇಶವಾಗಿದೆ.

ಮತ್ತೊಂದೆಡೆ, “ನಾನು ಈ ಗುಜರಾತ್‌ಅನ್ನು ರೂಪಿಸಿದ್ದೇನೆ” (Aa Gujarat, mai banavyu chhe) ಎಂಬ ಅಭಿಯಾನವು ಪ್ರತಿಯೊಬ್ಬ ಗುಜರಾತಿಗೂ ಮಾಡಿದ ಅವಮಾನ ಎಂದು ಕಾಂಗ್ರೆಸ್‌ ಅಸಮಾಧಾನ ವ್ಯಕ್ತಪಡಿಸಿದೆ. ಗುಜರಾತನ್ನು ಯಾರೋ ಒಬ್ಬರು ರೂಪಿಸಿದ್ದಾರೆ ಎಂಬುದು ಜನರಿಗೆ ಮಾಡಿದ ಅಪಮಾನವಾಗಿದೆ. ಬಿಜೆಪಿಯು ಇನ್ನಾದರೂ ಕ್ರೆಡಿಟ್‌ ತೆಗೆದುಕೊಳ್ಳುವ ತಂತ್ರ ಬಿಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ರಾಜ್ಯದಲ್ಲಿ ಡಿಸೆಂಬರ್‌ 1 ಹಾಗೂ ಡಿಸೆಂಬರ್‌ 5ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್‌ 8ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ | Opinion Poll | ಗುಜರಾತ್‌, ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿಗೇ ಅಧಿಕಾರ? ಸಮೀಕ್ಷೆ ಹೇಳುವುದೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ವಧುವಿಗೆ ಹೂಮಾಲೆ ಹಾಕಲು ವರ ಮಾಡಿರುವ ಕಿತಾಪತಿ ಏನು ನೋಡಿ!

Viral Video: ಮದುವೆ ಸಮಾರಂಭಗಳಲ್ಲಿ ಒಂದಲ್ಲ ಒಂದು ಎಡವಟ್ಟು ನಡೆದೇ ನಡೆಯುತ್ತೆ. ಇದರಲ್ಲಿ ಕೆಲವು ಗಂಭೀರ ರೂಪ ತಾಳಿದರೆ, ಇನ್ನು ಕೆಲವು ಎಲ್ಲರ ನಗೆಪಾಟಲಿಗೆ ಗುರಿಯಾಗುತ್ತದೆ. ಇಲ್ಲಿ ಸಿಕ್ಕಿರುವ ವಿಡಿಯೋವೊಂದು ಎಲ್ಲರೂ ನಗುವಂತೆ ಮಾಡಿದೆ.

VISTARANEWS.COM


on

By

Viral Video
Koo

ಮದುವೆ (wedding) ಮಂಟಪ ಸುಂದರವಾಗಿ ಅಲಂಕಾರಗೊಂಡಿತ್ತು. ವಧು ವರರು ಇಬ್ಬರೂ ವೇದಿಕೆಯಲ್ಲಿ ನಿಂತು ಒಂದೊಂದೇ ಶಾಸ್ತ್ರಗಳನ್ನು ಮಾಡುತ್ತಿದ್ದರು. ಇನ್ನೇನು ಹೂವಿನ ಮಾಲೆ (flower garland) ವಿನಿಮಯ ಮಾಡಿಕೊಳ್ಳಬೇಕಿತ್ತು. ವರನು (groom) ವಧುವಿಗೆ (bride) ಹೂವಿನ ಮಾಲೆ ಹಾಕಲು ಅವರಿಗೆ ಕುಳಿತು ಕೊಳ್ಳಲು ಇಟ್ಟಿದ್ದ ಸಿಂಹಾಸನದಿಂದ ಜಿಗಿದಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಎಲ್ಲರೂ ನಗುವಂತೆ ಮಾಡಿದೆ.

ಹಿಂದೂ ಸಂಪ್ರದಾಯದ ಮದುವೆಯಲ್ಲಿ ಹೂವಿನ ಮಾಲೆಯನ್ನು ಬದಲಾಯಿಸಿಕೊಳ್ಳುವ ಶಾಸ್ತ್ರವಿದೆ. ಈ ಸಂದರ್ಭದಲ್ಲಿ ವಧು ವರರು ಇಬ್ಬರಿಗೂ ಸಾಕಷ್ಟು ಸವಾಲುಗಳನ್ನು ಹತ್ತಿರದ ಸಂಬಂಧಿ, ಸ್ನೇಹಿತರು ತಂದೊಡ್ಡುತ್ತಾರೆ. ಅಂತೆಯೇ ಇಲ್ಲಿ ವಧು ಮತ್ತು ವರರು ಹೂವಿನ ಹಾರಗಳನ್ನು ವಿನಿಮಯ ಮಾಡಿಕೊಳ್ಳುವಾಗ ವಧುವಿನ ಕುಟುಂಬದವರು ವಧುವನ್ನು ಎತ್ತಿ ಹಿಡಿದು ವರನ ಮುಂದೆ ಸವಾಲು ಹಾಕಿದರು.

ಹಲವು ಬಾರಿ ವರ ಮಾಲೆ ಹಾಕಲು ಪ್ರಯತ್ನಿಸುತ್ತಾನೆ. ಆದರೆ ವಿಫಲನಾಗುತ್ತಾನೆ. ಕೊನೆಗೂ ವರನು ತನ್ನ ವಧುವನ್ನು ಗೆಲ್ಲುವ ಮಾರ್ಗವನ್ನು ಕಂಡುಕೊಂಡಿದ್ದಾನೆ. ಇದರ ವಿಡಿಯೋ ಎಕ್ಸ್ ನಲ್ಲಿ ಭಾರೀ ವೈರಲ್ ಆಗಿದ್ದು, ಇದಕ್ಕೆ ಸಾಕಷ್ಟು ಮಂದಿ ನೆಟ್ಟಿಗರು ಕಾಮೆಂಟ್ ಕೂಡ ಮಾಡಿದ್ದಾರೆ.

ಇದನ್ನೂ ಓದಿ: Viral News: ಸೈಕಲ್‌ ಸವಾರನಿಗೆ ಡಿಕ್ಕಿ ಹೊಡೆದು 2 ಕಿ.ಮೀ. ಎಳೆದೊಯ್ದ ಪಿಕ್‌ಅಪ್‌; ಶಾಕಿಂಗ್‌ ವಿಡಿಯೊ ಇಲ್ಲಿದೆ

ಏನಿದೆ ವಿಡಿಯೋದಲ್ಲಿ?

ಈ ವಿಡಿಯೋದಲ್ಲಿ ಸೆರೆಯಾಗಿರುವಂತೆ ವಧು ಈಗಾಗಲೇ ತನ್ನ ಗಂಡನ ಕುತ್ತಿಗೆಗೆ ಹೂವಿನ ಹಾರವನ್ನು ಹಾಕಿದ್ದಳು. ಈಗ ವರನ ಸರದಿ. ವಧುವಿನ ಸಂಬಂಧಿಗಳು ಅವಳನ್ನು ಎತ್ತಿ ಹಿಡಿದು ವರನಿಗೆ ಹೂಮಾಲೆ ಹಾಕುವ ಸವಾಲು ಹಾಕುತ್ತಾರೆ.


ವರನು ಮದುವೆಯ ಸಿಂಹಾಸನದ ಮೇಲೇರಿ ಜಿಗಿದ ಯಶಸ್ವಿಯಾಗಿ ವಧುವಿನ ಕುತ್ತಿಗೆಗೆ ಹಾರವನ್ನು ಹಾಕಿದನು. ವಧುವಿನ ಜೊತೆಗೆ ಸಂಬಂಧಿಕರು ತಮ್ಮ ಸಮತೋಲನವನ್ನು ಕಳೆದುಕೊಳ್ಳುತ್ತಾರೆ. ಪರಿಣಾಮವಾಗಿ ಎಲ್ಲರೂ ವೇದಿಕೆಯ ಮೇಲೆ ಬಿದ್ದರು. ಕೊನೆಯಲ್ಲಿ, ವರನು ಹೆಮ್ಮೆಯಿಂದ ನಿಂತಿರುವಾಗ ವಧು ನಕ್ಕಳು.

ಸರಿತಾ ಸರವಾಗ್ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಕೂಡ ಮಾಡಿದ್ದು, ಸಾಕಷ್ಟು ಮಂದಿ ತಾವು ನೋಡಿರುವ, ಅನುಭವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಹೂವಿನ ಮಾಲೆ ಹಾಕುವಾಗ ವರನ ತಂಡದ ವ್ಯಕ್ತಿಯೊಬ್ಬರು ಅವನನ್ನು ಮೇಲೆತ್ತುತ್ತಾನೆ. ಆಗ ಆತ ವಧುವಿನ ಮೇಲೆ ಬೀಳುವುದರಲ್ಲಿದ್ದ. ಆದರೆ ವಧುವಿನ ಸಮಯಪ್ರಜ್ಞೆಯಿಂದ ಘಟನೆಯು ದುರಂತ ತಿರುವು ಪಡೆಯುವುದು ತಪ್ಪಿತ್ತು.

Continue Reading

ರಾಜಕೀಯ

Lok Sabha election 2024: ದಿಲ್ಲಿಯಲ್ಲಿ ಆಪ್‌-ಕಾಂಗ್ರೆಸ್‌ ಮೈತ್ರಿಯಲ್ಲಿ ಒಡಕು; ರಾಜ್ಯಾಧ್ಯಕ್ಷ ರಾಜೀನಾಮೆ

Lok Sabha election 2024: ಆಮ್‌ ಆದ್ಮಿ ಪಕ್ಷದ ಜೊತೆ ಪಕ್ಷದ ಮೈತ್ರಿಯಿಂದ ಬೇಸರಗೊಂಡಿರುವ ದಿಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಅರವಿಂದ್‌ ಸಿಂಗ್‌ ಲವ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ

VISTARANEWS.COM


on

By

Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha election 2024) ಹಿನ್ನೆಲೆ ಆಮ್‌ ಆದ್ಮಿ ಪಕ್ಷದ ಜೊತೆ ಪಕ್ಷ(AAP)ದ ಮೈತ್ರಿಯಿಂದ ಬೇಸರಗೊಂಡಿರುವ ದಿಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಅರವಿಂದ್‌ ಸಿಂಗ್‌ ಲವ್ಲಿ (Arvinder Singh Lovely) ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಈ ಕುರಿತು ಸವಿಸ್ತಾರವಾದ ಪತ್ರ ಬರೆದಿರುವ ಅರವಿಂದ್‌ ಸಿಂಗ್‌ ಲವ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು, ಕಪೋಲಕಲ್ಪಿತ ಮತ್ತು ದುರುದ್ದೇಶಪೂರಿತ ಭ್ರಷ್ಟಾಚಾರ ಆರೋಪಗಳನ್ನು ಹೊರಿಸುವ ಏಕೈಕ ಆಧಾರದ ಮೇಲೆ ರಚಿಸಲಾದ ಪಕ್ಷದೊಂದಿಗಿನ ಮೈತ್ರಿಗೆ ದೆಹಲಿ ಕಾಂಗ್ರೆಸ್ ಘಟಕ(Delhi Congress Unit)ವು ವಿರುದ್ಧವಾಗಿತ್ತು. ಅದರ ಹೊರತಾಗಿಯೂ, ದೆಹಲಿಯಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಪಕ್ಷವು ನಿರ್ಧರಿಸಿತು. ಇದರಿಂದ ತೀವ್ರ ಬೇಸರವಾಗಿದೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯ-ಗತಾಯ ಸೋಲಿಸಬೇಕು ಎಂಬ ದೃಷ್ಟಿಯಿಂದ ಪಕ್ಷದದಲ್ಲಿ ವಿರೋಧ ವ್ಯಕ್ತವಾಗಿದ್ದರೂ ಅದನ್ನು ಮೀರಿ ಕಾಂಗ್ರೆಸ್‌ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿತ್ತು. ಎರಡೂ ಪಕ್ಷಗಳ ನಡುವೆ ನಡುವಿನ ಸೀಟು ಹಂಚಿಕೆ ಮಾತುಕತೆಯು ಮುಕ್ತಾಯಗೊಂಡಿದೆ. ಆಪ್‌ 4 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್‌ 3 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಒಪ್ಪಂದದ ಪ್ರಕಾರ, ದೆಹಲಿಯ ಪೂರ್ವ, ಚಾಂದಿನಿ ಚೌಕ್‌ ಹಾಗೂ ಈಶಾನ್ಯ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದೆ. ಇನ್ನು, ನವದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ ಹಾಗೂ ವಾಯವ್ಯ ಲೋಕಸಭೆ ಕ್ಷೇತ್ರಗಳಲ್ಲಿ ಆಮ್‌ ಆದ್ಮಿ ಪಕ್ಷವು ಸ್ಪರ್ಧಿಸಲಿದೆ.

ಇದನ್ನೂ ಓದಿ: Sahil Khan: ಬೆಟ್ಟಿಂಗ್​ ಅಕ್ರಮದಲ್ಲಿ ಭಾಗಿ; ನಟ ಸಾಹಿಲ್ ಖಾನ್ ಅರೆಸ್ಟ್‌

2019ರ ಲೋಕಸಭೆ ಚುನಾವಣೆಯಲ್ಲಿ ದೆಹಲಿ ಎಲ್ಲ 7 ಲೋಕಸಭೆ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ ಹಾಗೂ ಆಪ್‌ ಒಂದು ಕ್ಷೇತ್ರದಲ್ಲಿ ಕೂಡ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಇಂಡಿಯಾ ಒಕ್ಕೂಟದ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಆಪ್‌ ಪರಸ್ಪರ ಬೆಂಬಲದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದು, ಕೆಲ ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ ಎಂದು ತಿಳಿದುಬಂದಿದೆ. ಇದರ ಮಧ್ಯೆಯೇ, ಬಿಹಾರ, ಪಂಜಾಬ್‌, ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಒಕ್ಕೂಟ ಛಿದ್ರವಾಗಿದ್ದು, ಆಯಾ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿವೆ.

Continue Reading

ಪ್ರಮುಖ ಸುದ್ದಿ

Girl Saved Mother: ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಯ ಜೀವ ಕಾಪಾಡಿತು ಪುತ್ರಿ ಶಾಲೆಯಲ್ಲಿ ಕಲಿತ ಪಾಠ!

ಅಲ್ಲಿನ ಅಭಯಂ 181 ಸಹಾಯವಾಣಿ ಅಧಿಕಾರಿಗಳ ಪ್ರಕಾರ, ಮಣಿಕಟ್ಟು ಸೀಳಿ ಬಿದ್ದಿರುವ ನಂತರ ತಾಯಿಗೆ ತೀವ್ರ ರಕ್ತಸ್ರಾವವಾಗುತ್ತಿದೆ ಎಂದು ಬಾಲಕಿಯೊಬ್ಬಳು ಕರೆ ಮಾಡಿದ್ದಾಳೆ. ತಕ್ಷಣ ಅವರ ಅಲ್ಲಿಗೆ ಹೋಗಿದ್ದಾಗ ಮಹಿಳೆ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಅವರು ಮಹಿಳೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದ್ದಾರೆ.

VISTARANEWS.COM


on

girl Saved Mother
Koo

ಅಹಮದಾಬಾದ್​​: ಅಪ್ಪನ ದೌರ್ಜನ್ಯಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತನ್ನ ತಾಯಿಯನ್ನು ಏಳು ವರ್ಷದ ಬಾಲಕಿಯೊಬ್ಬಳು ಸಮಯ ಪ್ರಜ್ಞೆ ಹಾಗೂ ಚಾತುರ್ಯದ (Girl Saved Mother ) ಮೂಲಕ ಬದುಕುಳಿಸಿದ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ. ಅಂದ ಹಾಗೆ ಬಾಲಕಿಗೆ ನೆರವಾಗಿದ್ದು ಆಕೆ ತರಗತಿಯಲ್ಲಿ ಕಲಿತ ಪಾಠ. ಅಂದರೆ ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿಗೆ ಕರೆ ಮಾಡಬೇಕು ಎಂಬ ಶಿಕ್ಷಕರ ಹಿತನುಡಿ. ಹಾಗೆಯೇ ಕೈಯ ರಕ್ತನಾಳ ಕತ್ತರಿಸಿಕೊಂಡು ಅಸ್ವಸ್ಥಗೊಂಡು ಬಿದ್ದಿದ್ದ ತಾಯಿಯನ್ನು ನೋಡಿಯೂ ಗಾಬರಿಯಾಗದ ಆಕೆ ಸಹಾಯವಾಣಿಗೆ ಕರೆ ಮಾಡಿ ಆಂಬ್ಯುಲೆನ್ಸ್ ಕರೆಸಿ ಪ್ರಾಣ ಉಳಿಸಿದ್ದಾಳೆ.

ಕಳೆದ ಗುರುವಾರ ರಾತ್ರಿ ಘಟನೆ ನಡೆದಿದೆ ಎಂದು ಗುಜರಾತ್​ನ ಅಭಯಂ 181 ಸಹಾಯವಾಣಿ ಅಧಿಕಾರಿಗಳು ಹೇಳಿದ್ದಾರೆ. ಮಣಿಕಟ್ಟು ಸೀಳಿ ಬಿದ್ದಿರುವ ತಾಯಿಗೆ ತೀವ್ರ ರಕ್ತಸ್ರಾವವಾಗುತ್ತಿದೆ ಎಂದು ಬಾಲಕಿಯೊಬ್ಬಳು ಕರೆ ಅವರಿಗೆ ಕರೆ ಮಾಡಿದ್ದರು ತಕ್ಷಣ ಅವರ ಅಲ್ಲಿಗೆ ಹೋಗಿದ್ದಾಗ ಮಹಿಳೆ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಅವರು ಮಹಿಳೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದ್ದಾರೆ.

ಆತ್ಮಹತ್ಯೆ ಮಾಡಲು ಮುಂದಾಗಿರುವ ಮಹಿಳೆಯ ಗಂಡ ಅಪರಾಧವೊಂದರಲ್ಲಿ ಜೈಲು ಸೇರಿದ್ದ. ಅಲ್ಲಿಂದ ಬಿಡುಗಡೆಯಾಗಿ ಬಂದ ಬಳಿಕವೂ ಸಣ್ಣ ವಿಷಯಗಳಿಗೆ ಜಗಳವಾಡಲು ಪ್ರಾರಂಭಿಸಿದ್ದ. ಆಗಾಗ್ಗೆ ನಡೆಯುವ ಜಗಳಗಳಿಂದ ಬೇಸತ್ತ ಮಹಿಳೆ ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದಳು. ಪುತ್ರಿಯ ಸಮಯೋಚಿತ ಕರೆಯಿಂದ ಅವರೀಗ ಬದುಕಿದ್ದರೆ. ಶಾಲೆಯಲ್ಲಿ ಪಡೆದ ತರಬೇತಿಯನ್ನು ನೆನಪು ಮಾಡಿಕೊಂಡ ಬಾಲಕಿ ನಮ್ಮ ಸಹಾಯವಾಣಿ ಮತ್ತು 108 ಆಂಬ್ಯುಲೆನ್ಸ್ ಸೇವೆಗಳ ತುರ್ತು ಸಂಖ್ಯೆಗಳನ್ನು ನೆನಪಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಲಿಬಿಲಿಗೊಳ್ಳದ ಬಾಲಕಿ

ಸಾಮಾನ್ಯವಾಗಿ ಸಣ್ಣ ಮಕ್ಕಳು ಕಠಿಣ ಪರಿಸ್ಥಿತಿಯಲ್ಲಿ ಹೆಚ್ಚು ಗಲಿಬಿಲಿಗೆ ಒಳಗಾಗುತ್ತಾರೆ. ಅವರಿಗೆ ಮುಂದೇನು ಮಾಡಬೇಕು ಎಂಬ ಯೋಚನೆಯೇ ಇರುವುದಿಲ್ಲ. ಅಲ್ಲದೆ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಜೋರಾಗಿ ಅಳುವುದಕ್ಕೆ ಆರಂಭಿಸುತ್ತಾರೆ. ಆದರೆ ಈ ಏಳು ವರ್ಷದ ಬಾಲಕಿ ಆ ರೀತಿ ಮಾಡಿಲ್ಲ. ತಾಯಿ ರಕ್ತ ಸಿಕ್ತ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿಯೂ ತಕ್ಷಣವೇ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಆಕೆಯ ಕರೆಯಿಂದಾಗಿ ಜೀವವೊಂದು ಉಳಿದಿದೆ.

ಬದುಕಿನ ಪಾಠ ಅಗತ್ಯ

ಆಧುನಿಕ ಜಗತ್ತಿನಲ್ಲಿ ಜನರಿಗೆ ತುರ್ತು ಪರಿಸ್ಥಿತಿಗಳು ಹೆಚ್ಚಾಗಿ ಎದುರಾಗುತ್ತವೆ. ಆದರೆ, ಬಹುತೇಕ ಸಂದರ್ಭದಲ್ಲಿ ಅವುಗಳನ್ನು ನಿರ್ವಹಿಸಲು ಸಾಧ್ಯವಾಗದೇ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತವೆ. ಹೀಗಾಗಿ ತುರ್ತು ಸಂದರ್ಭದಲ್ಲಿ ಪ್ರಾಣ ಉಳಿಸಲು ಅಥವಾ ಆ ಕ್ಷಣದಿಂದ ಬಚಾವಾಗಲು ಏನು ಮಾಡಬೇಕು ಎಂಬ ತರಬೇತಿ ಅಗತ್ಯವಾಗಿದೆ. ಅದರಲ್ಲೂ ಶಾಲಾ ಮಕ್ಕಳಿಗೆ ಈ ನಿಟ್ಟಿನಲ್ಲಿ ತರಬೇತಿ ಕಡ್ಡಾಯ.

ಇದನ್ನೂ ಓದಿ: Usman Ghani: ಪ್ರಧಾನಿ ಮೋದಿಯನ್ನು ಟೀಕಿಸಿದ್ದ ಬಿಜೆಪಿ ಉಚ್ಛಾಟಿತ ನಾಯಕ ಅರೆಸ್ಟ್‌

ಜನಜಂಗುಳಿ ತುಂಬಿರುವ ಪೇಟೆ ಮತ್ತು ಏಕಾಂಗಿಯಾಗಿರುವ ವೇಳೆ ನಾನಾ ಆತಂಕಗಳನ್ನು ಇಂದಿನ ಮಕ್ಕಳು ಎದುರಿಸುತ್ತಾರೆ. ಆದರೆ, ಅದನ್ನು ನಿಭಾಯಿಸಲು ಸಾಧ್ಯವಾಗದೇ ಮಕ್ಕಳು ದುರ್ಘಟನೆಗಳ ಬಲಿಪಶು ಆಗುತ್ತಾರೆ. ಹೀಗಾಗಿ ಶಾಲಾ ಹಂತದಲ್ಲಿಯೇ ಇಂಥ ಸಂದರ್ಭಗಳನ್ನು ನಿಭಾಯಿಸುವ ತಂತ್ರಗಳನ್ನು ಹೇಳಿಕೊಡಬೇಕಾಗುತ್ತದೆ.

ಶಾಲಾ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಈಗ ಲೈಂಗಿಕ ದೌರ್ಜನ್ಯದ ವಿರುದ್ಧ ಹೇಗೆ ಹೋರಾಡಬೇಕು ಎಂಬ ಪಾಠವನ್ನು ಹೇಳಿಕೊಡಲಾಗುತ್ತದೆ. ಅದು ಬಹುತೇಕ ಸಾಫಲ್ಯ ಕಾಣುತ್ತಿದೆ. ಆದರೆ, ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಕೆಲವು ತಂತ್ರಗಳನ್ನು ಕೆಲವೊಂದು ಶಾಲೆಗಳಲ್ಲಿ ಮಾತ್ರ ಕಲಿಸಲಾಗುತ್ತದೆ. ಇಲ್ಲಿ ಗಂಡು ಹಾಗೂ ಹೆಣ್ಣು ಎಂಬ ಭೇದವಿಲ್ಲದೇ ಎಲ್ಲ ಮಕ್ಕಳಿಗೂ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಪಾಠ ಹೇಳಿಕೊಡಬೇಕಾದ ಅಗತ್ಯವಿದೆ.

ಮೇಲಿನ ಪ್ರಕರಣದಲ್ಲಿ ಬಾಲಕಿಗೆ ಸಹಾಯವಾಣಿಗೆ ಕರೆ ಮಾಡಬೇಕು ಎಂದು ಶಾಲೆಯಲ್ಲಿ ಹೇಳಿಕೊಟ್ಟಿದ್ದ ಕಾರಣ ಆಕೆಯ ತಾಯಿಯ ಪ್ರಾಣ ಉಳಿದಿದೆ. ಒಂದು ವೇಳೆ ಆಕೆ ಅಂಥದ್ದೊಂದು ಪರಿಸ್ಥಿತಿಯನ್ನು ಎದುರಿಸಲು ಸಿದ್ಧಗೊಳ್ಳದೇ ಹೋಗಿದ್ದರೆ ತಬ್ಬಲಿಯಾಗಬೇಕಾಗಿತ್ತು.

Continue Reading

ಪ್ರಮುಖ ಸುದ್ದಿ

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Narendra Modi: ಏಪ್ರಿಲ್‌ 28ರಂದು ಬೆಳಗಾವಿಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾವೇಶದಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಜಗದೀಶ್‌ ಶೆಟ್ಟರ್‌ ಪರ ಮತಯಾಚಿಸಲಿರುವ ಅವರು ಬಳಿಕ 12 ಗಂಟೆಗೆ ಉತ್ತರ ಕನ್ನಡದ ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತಯಾಚನೆ ಮಾಡಲಿದ್ದಾರೆ.

VISTARANEWS.COM


on

Modi in Karnataka stay in Belagavi tomorrow and Huge gatherings at five places
Koo

ಬೆಂಗಳೂರು: ಕರ್ನಾಟಕದ 14 ಕ್ಷೇತ್ರಗಳ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನವು ಮೇ 7ರಂದು ನಡೆಯಲಿದೆ. ಈ ಹಿನ್ನೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಭಾನುವಾರ (ಏಪ್ರಿಲ್‌ 28) ಹಾಗೂ ಸೋಮವಾರ (ಏಪ್ರಿಲ್‌ 29) ರಾಜ್ಯದಲ್ಲಿ ನರೇಂದ್ರ ಮೋದಿ (Narendra Modi) ಅವರು ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ. ಅಂತೆಯೇ ಮೊದಲು ಬೆಳಗಾಗಿಯಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ಮಾತನಾಡಿದ್ದಾರೆ. ಈ ಸಭೆಯ ನೇರ ಪ್ರಸಾರವನ್ನು (Narendra Modi Live) ಇಲ್ಲಿ ವೀಕ್ಷಿಸಿ.

ನರೇಂದ್ರ ಮೋದಿ ಅವರು ಶನಿವಾರ (ಏಪ್ರಿಲ್‌ 27) ರಾತ್ರಿ 10 ಗಂಟೆಗೆ ಬೆಳಗಾವಿಗೆ ಆಗಮಿಸಿದ್ದಾರೆ. ಕುಂದಾ ನಗರಿಯಲ್ಲಿಯೇ ಐಟಿಸಿ ವೆಲ್​ಕಮ್​ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶನಿವಾರ ರಾತ್ರಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 15 ಮಂದಿಗೆ ಸ್ವಾಗತ ಕೋರಲು ಅವಕಾಶ ನೀಡಲಾಗಿತ್ತು. ಬಾಳೇಶ್ ಚವ್ವನ್ನವರ್, ರಾಜೇಶ್ವರಿ ಒಡೆಯರ್, ಸುಭಾಷ್ ಸಣ್ಣ ವೀರಪ್ಪನವರ್ ಸೇರಿ ಬೆಳಗಾವಿಯ 15 ಹಲವು ಸಮುದಾಯಗಳ ಮುಖಂಡರಿಗೆ ಮೋದಿ ಅವರನ್ನು ಸ್ವಾಗತಿಸಲು ಅವಕಾಶ ಮಾಡಿಕೊಡಲಾತ್ತು.

ಏಪ್ರಿಲ್‌ 28ರಂದು ಎಲ್ಲೆಲ್ಲಿ ರ‍್ಯಾಲಿ?

ಏಪ್ರಿಲ್‌ 28ರಂದು ಬೆಳಗಾವಿಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾವೇಶದಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಜಗದೀಶ್‌ ಶೆಟ್ಟರ್‌ ಪರ ಮತಯಾಚಿಸಲಿರುವ ಅವರು ಬಳಿಕ 12 ಗಂಟೆಗೆ ಉತ್ತರ ಕನ್ನಡದ ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತಯಾಚನೆ ಮಾಡಲಿದ್ದಾರೆ. ಇನ್ನು ಮಧ್ಯಾಹ್ನ 2 ಗಂಟೆಗೆ ದಾವಣಗೆರೆಯ ಹೈಸ್ಕೂಲ್‌ ಗ್ರೌಂಡ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಸಂಜೆ 4 ಗಂಟೆಗೆ ಬಳ್ಳಾರಿಯ ಸಮಾವೇಶದ ಮೂಲಕ ಇಡೀ ದಿನದ ಪ್ರಚಾರಕ್ಕೆ ತೆರೆ ಎಳೆಯಲಿದ್ದಾರೆ.

ಇದನ್ನೂ ಓದಿ: Narendra Modi : ಪ್ರಧಾನಿ ವಿಮಾನ ಹಾರಾಟ ಹಿನ್ನೆಲೆ; ಸಿಎಂ ವಿಮಾನಕ್ಕೆ ಬೆಳಗಾವಿಯಲ್ಲಿ ಅನುಮತಿ ನಿರಾಕರಣೆ

ಏಪ್ರಿಲ್‌ 29ರಂದು ಒಂದೇ ಸಮಾವೇಶ

ಬಳ್ಳಾರಿಯಲ್ಲಿ ಪ್ರಚಾರ ಮುಗಿಸುವ ನರೇಂದ್ರ ಮೋದಿ ಅವರು ಏಪ್ರಿಲ್‌ 29ರಂದು ಬಾಗಲಕೋಟೆಯಲ್ಲಿ ನಡೆಯುವ ಒಂದೇ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಅವರು ಮಹಾರಾಷ್ಟ್ರಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದಲ್ಲಿ 2ನೇ ಹಂತದ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಮೂಲಕ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಬಿಜೆಪಿ ಇಷ್ಟೆಲ್ಲ ಪ್ಲಾನ್‌ ಮಾಡಿದೆ. ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ಮೋದಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಯುವ ಸಮುದಾಯಕ್ಕೆ ಮೋದಿ ಅಚ್ಚುಮೆಚ್ಚು. ಇಂತಹ ಯುವ ವರ್ಗದ ಮತಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸೆಳೆಯಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ.

Continue Reading
Advertisement
Varalaxmi Sarathkumar negative comments on fiance
ಕಾಲಿವುಡ್34 seconds ago

Varalaxmi Sarathkumar: ನನ್ನ ತಂದೆ ಎರಡು ಮದುವೆಯಾದರು, ಹಾಗೇ ನಾನೂ ಕೂಡ ಎಂದ ನಟ ಶರತ್‌ಕುಮಾರ್ ಪುತ್ರಿ!

Viral Video
ವೈರಲ್ ನ್ಯೂಸ್5 mins ago

Viral Video: ವಧುವಿಗೆ ಹೂಮಾಲೆ ಹಾಕಲು ವರ ಮಾಡಿರುವ ಕಿತಾಪತಿ ಏನು ನೋಡಿ!

Outdoor Exercise
ಆರೋಗ್ಯ9 mins ago

Outdoor Exercise: ಹೊರಾಂಗಣ ವ್ಯಾಯಾಮ ಖಿನ್ನತೆಯನ್ನು ದೂರ ಮಾಡುವುದೇ?

Has Karnataka Congress government suggested PM Narendra Modi programme should not be success Kageri question to police
Lok Sabha Election 202413 mins ago

PM Narendra Modi: ಮೋದಿ ಕಾರ್ಯಕ್ರಮ ಯಶವಾಗದಿರಲು ರಾಜ್ಯ ಸರ್ಕಾರ ಸೂಚಿಸಿದೆಯೇ? ಪೊಲೀಸರಿಗೆ ಕಾಗೇರಿ ಪ್ರಶ್ನೆ

Congress MLA
ಪ್ರಮುಖ ಸುದ್ದಿ28 mins ago

Congress MLA : ಕಾಂಗ್ರೆಸ್​ ಶಾಸಕರಿಗೆ ಘೇರಾವ್ ಕೂಗಿದ ಬಿಜೆಪಿ ಕಾರ್ಯಕರ್ತರು; ಮಾತಿನ ಚಕಮಕಿ

Prajwal Revanna Pen Drive Case Prajwal Revanna accused of sex scandal No interference in SIT probe says Parameshwara
Lok Sabha Election 202443 mins ago

Prajwal Revanna Pen Drive: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಆರೋಪ​; ಎಸ್​​ಐಟಿ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ: ಪರಮೇಶ್ವರ್

ರಾಜಕೀಯ55 mins ago

Lok Sabha election 2024: ದಿಲ್ಲಿಯಲ್ಲಿ ಆಪ್‌-ಕಾಂಗ್ರೆಸ್‌ ಮೈತ್ರಿಯಲ್ಲಿ ಒಡಕು; ರಾಜ್ಯಾಧ್ಯಕ್ಷ ರಾಜೀನಾಮೆ

777 Charlie
ಸ್ಯಾಂಡಲ್ ವುಡ್57 mins ago

777 Charlie: ಜಪಾನಿನಲ್ಲಿ `777 ಚಾರ್ಲಿ ಹವಾ’: ವರ್ಲ್ಡ್​​ ಟೂರ್‌ಗೆ ಧರ್ಮ ಹಾಗೂ ಚಾರ್ಲಿ ರೆಡಿ!

Food Poisoning
ಪ್ರಮುಖ ಸುದ್ದಿ1 hour ago

Food Poisoning : ಹೃದಯ ವಿದ್ರಾವಕ ಘಟನೆ; ವಿಷ ಆಹಾರ ಸೇವಿಸಿ ಇಬ್ಬರು ಮಕ್ಕಳ ಸಾವು, ಮೂವರು ಅಸ್ವಸ್ಥ

Manjummel Boys
ಮಾಲಿವುಡ್2 hours ago

Manjummel Boys: ‘ಮಂಜುಮ್ಮೆಲ್ ಬಾಯ್ಸ್’ ಒಟಿಟಿ ಡೇಟ್ ಅನೌನ್ಸ್ ಮಾಡಿದ ಡಿಸ್ನಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ3 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ7 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 202419 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ24 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20242 days ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ3 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

ಟ್ರೆಂಡಿಂಗ್‌