ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ! Vistara News
Connect with us

ದೇಶ

ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!

ಸ್ಮೃತಿ ಇರಾನಿಯನ್ನು (Smriti Irani) ಡಾರ್ಲಿಂಗ್ ಎಂದು ಹೇಳಿ ಬೆಡ್‌ರೂಮ್‌ನಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ ಬಿ ವಿ ಶ್ರೀನಿವಾಸ್ (BV Srinivas) ಹೇಳಿದ್ದಾರೆ ಎನ್ನಲಾದ ವಿಡಿಯೋವನ್ನು ಬಿಜೆಪಿಯ ನಾಯಕರು ಷೇರ್ ಮಾಡುತ್ತಿದ್ದಾರೆ.

VISTARANEWS.COM


on

BJP leader tweets that Smriti is a darling congress leader sent the defamation notice
Koo

ನವದೆಹಲಿ: ಹಣದುಬ್ಬರಕ್ಕೆ ಸಂಬಂಧಿಸಿದಂತೆ ಬಳಸಿದ ಪದಗಳನ್ನು ಸಚಿವ ಸ್ಮೃತಿ ಇರಾನಿಗೆ (Smriti Irani) ಅನ್ವಯಿಸಿ ಟ್ವೀಟ್ ಮಾಡಿದ್ದ ಭಾರತೀಯ ಜನತಾ ಪಾರ್ಟಿ(BJP) ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ (Amit Malviya) ವಿರುದ್ಧ, ಕರ್ನಾಟಕದವರೇ ಆದ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ (BV Srinivas) ಅವರು ಮಾನಹಾನಿ ನೋಟಿಸ್ ಕಳುಹಿಸಿದ್ದಾರೆ. ಕಾಂಗ್ರೆಸ್ ಸಂಕಲ್ಪ ಸತ್ಯಾಗ್ರಹದ ವೇಳೆ ಶ್ರೀನಿವಾಸ್ ಅವರು ಮಾತನಾಡಿದ ವಿಡಿಯೋ ಕ್ಲಿಪ್ ಬಿಜೆಪಿ ನಾಯಕರು ಷೇರ್ ಮಾಡಿಕೊಂಡಿದ್ದರು. ಬಿಜೆಪಿಯ ಪ್ರಕಾರ, ಶ್ರೀನಿವಾಸ್ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಡಾರ್ಲಿಂಗ್ ಎಂದು ಸಂಬೋಧಿಸಿದ್ದಾರೆ. ಆದರೆ, ಈ ಆರೋಪವನ್ನು ಶ್ರೀನಿವಾಸ್ ತಳ್ಳಿ ಹಾಕಿದ್ದಾರೆ.

ಅಮಿತ್ ಮಾಳವೀಯ ಟ್ವೀಟ್

ಬಿ ವಿ ಶ್ರೀನಿವಾಸ್ ಅಸಭ್ಯ, ಕಾಮಪ್ರಚೋದಕ ವ್ಯಕ್ತಿ. ಡಾರ್ಲಿಂಗ್ ಮಾಡಿ ಅವರನ್ನು ಬೆಡ್‌ರೂಂನಲ್ಲಿ ಕುಳಿತುಕೊಳ್ಳುವ ಹಾಗೆ ಮಾಡಿದರು ಎಂದು ಸಚಿವೆ ಸ್ಮೃತಿ ಇರಾನಿಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ಅಮೇಠಿಯಿಂದ ರಾಹುಲ್ ಗಾಂಧಿ ಅವರನ್ನು ಸೋಲಿಸಿದರು ಎಂಬ ಕಾರಣಕ್ಕೆ ಇಷ್ಟು ಕೀಳು ಮಟ್ಟದ ಭಾಷಣ ಮಾಡಬೇಕೇ, ಕಾಂಗ್ರೆಸ್ ಅಪ್ರಸ್ತುತವಾಗುತ್ತಿದೆ ಎಂದು ಅಮಿತ್ ಮಾಳವೀಯ ಅವರು ಟ್ವೀಟ್ ಮಾರ್ಚ್ 27ರಂದು ಟ್ವೀಟ್ ಮಾಡಿದ್ದರು. ಬಳಿಕ ಬಿಜೆಪಿಯ ಎಲ್ಲ ನಾಯಕರು ಈ ಟ್ವೀಟ್ ಮಾಡಿದ್ದರಿಂದ ಭಾರೀ ವಿವಾದಕ್ಕೆ ಕಾರಣವಾಯಿತು.

ತಿದ್ದಿದ ವಿಡಿಯೋ ಹಂಚುತ್ತಿರುವ ಬಿಜೆಪಿ ನಾಯಕರು

ಅಮಿತ್ ಮಾಳವೀಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್, ಬಿಜೆಪಿ ನಾಯಕರು ತಮ್ಮ ಹಾಗೂ ತಮ್ಮ ಪಕ್ಷದ ಇಮೇಜ್ ಹಾಳು ಮಾಡುವುಕ್ಕಾಗಿ ತಿದ್ದಿದ ವಿಡಿಯೋ ಷೇರ್ ಮಾಡುತ್ತಿದ್ದಾರೆ. ಬಿಜೆಪಿ ಬೆಂಬಲಿಗರು ಮತ್ತು ಪದಾಧಿಕಾರಿಗಳು ನಡೆಸುತ್ತಿರುವ ತಪ್ಪು ಮಾಹಿತಿ ನೀಡುವ ಮತ್ತು ನಕಲಿ ಸುದ್ದಿ ಹರಡುವ ಕೆಲಸವಾಗಿದೆಯಷ್ಟೇ ಎಂದು ಅವರು ಹೇಳಿದ್ದಾರೆ.

ಬಿ ವಿ ಶ್ರೀನಿವಾಸ್ ಅವರ ಟ್ವೀಟ್

ಬಿಜೆಪಿ ಅಂದರೆ ಹಣದುಬ್ಬರ. ಇದೇ ಜನರು 2014ರಲ್ಲಿ ಹೇಳುತ್ತಿದ್ದರು. ಹಣದುಬ್ಬರ ಮಾಟಗಾತಿಯನ್ನು ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿದೆ. ಸ್ಮೃತಿ ಇರಾನಿ ಈಗ ಸ್ವಲ್ಪ ಬದಲಾಗಿದ್ದಾರೆ, ಅವರೀಗ ಕಿವುಡ ಮತ್ತು ಮೂಕರಾಗಿದ್ದಾರೆ. ಅದೇ ಹಣದುಬ್ಬರ ಮಾಟಗಾತಿಯನ್ನು ಇವರು(ಬಿಜೆಪಿ) ಡಾರ್ಲಿಂಗ್ ಮಾಡಿ, ಬೆಡ್‌ರೂಮ್‌ನಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದಾರೆ ಎಂದು ಬಿ ವಿ ಶ್ರೀನಿವಾಸ್ ಅವರು ಹಿಂದಿಯಲ್ಲಿ ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿವೆ.

ಇದನ್ನೂ ಓದಿ: ಗ್ಯಾಸ್​ ಸಿಲಿಂಡರ್ ಬೆಲೆ ಏರಿಕೆಯ ಬೆನ್ನಲ್ಲೇ ಸಚಿವೆ ಸ್ಮೃತಿ ಇರಾನಿಯವರ ಹಳೇ ಟ್ವೀಟ್ ವೈರಲ್​; ರಸ್ತೆಗಿಳಿಯಿರಿ ಎಂದ ಕಾಂಗ್ರೆಸ್​

ತಮ್ಮ ಭಾಷಣದ ಹೇಳಿಕೆಯನ್ನು ತಿದ್ದಿರುವ ವಿಡಿಯೋವನ್ನು ಅಮಿತ್ ಮಾಳವೀಯ ಷೇರ್ ಮಾಡಿದ್ದಾರೆ. ಹಾಗಾಗಿ, ಅವರು ಸಾರ್ವಜನಿಕವಾಗಿಯೂ ಈ ಬಗ್ಗೆ ಕ್ಷಮೆ ಕೋರಬೇಕೆಂದು ಶ್ರೀನಿವಾಸ್ ಕಳುಹಿಸಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ನೀವು(ಮಾಳವೀಯ) ಮಾಡಿರುವ ಹೇಳಿಕೆಯ ಕೀಳು ಮಟ್ಟದ್ದು ಮಾತ್ರವಲ್ಲದೇ, ತಪ್ಪು ಮಾಹಿತಿಯಿಂದ ಕೊಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ 66E, 66A, 67 ವಿಧಿಗಳು ಮತ್ತು ಐಪಿಸಿಯ ಸೆಕ್ಷನ್ 499, 34, 44, 120, 500 ರ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಅವರು ತಮ್ಮ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ದೇಶ

Mann Ki Baat : 101ನೇ ಮನ್‌ ಕಿ ಬಾತ್‌ನಲ್ಲಿ ವೀರ ಸಾವರ್ಕರ್‌ ವಿಚಾರಗಳ ಬಗ್ಗೆ ಮೋದಿ ಹೇಳಿದ್ದೇನು?

Mann Ki Baat ಪ್ರಧಾನಿ ನರೇಂದ್ರ ಮೋದಿ ಅವರು 101ನೇ ಮನ್‌ ಕಿ ಬಾತ್‌ನಲ್ಲಿ ವೀರ ಸಾವರ್ಕರ್‌, ಸಂತ ಕಬೀರ್‌ ದಾಸರು, ಎನ್‌ಟಿಆರ್‌ 100ನೇ ಜನ್ಮ ದಿನಾಚರಣೆ, ಯುವ ಸಂಗಮ, ಮ್ಯೂಸಿಯಂಗಳ ಮಹತ್ವ, ಕೆರೆಗಳ ಸಂರಕ್ಷಣೆ ಹೀಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.

VISTARANEWS.COM


on

Edited by

Prime minister Modi in 101th Mann ki Baat
Koo

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು 101ನೇ ಮನ್‌ ಕಿ ಬಾತ್‌ (Mann Ki Baat) ಬಾನುಲಿ ಕಾರ್ಯಕ್ರಮದಲ್ಲಿ ಭಾನುವಾರ, ವೀರ ಸಾವರ್ಕರ್‌ ಜನ್ಮದಿನದ ಪ್ರಯುಕ್ತ ಅವರ ಬದುಕು-ಸಾಧನೆಯನ್ನು ಸ್ಮರಿಸಿದರು.

ಇಂದು ಮೇ 28ರಂದು ಮಹಾನ್‌ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಜನ್ಮ ದಿನ. ಅವರ ತ್ಯಾಗ, ಸಾಹಸ, ಹೋರಾಟ, ವಿಶಾಲ ವ್ಯಕ್ತಿತ್ವ, ಸ್ವಾಭಿಮಾನ, ದೃಢತೆ, ಜೀವನದ ಆದರ್ಶಗಳು ಇಂದಿಗೂ ಭಾರತೀಯರನ್ನು ಪ್ರೇರೇಪಿಸುತ್ತವೆ. ನಾನು ಅಂಡಮಾನ್‌ ನಿಕೋಬಾರ್‌ಗೆ ಹೋಗಿದ್ದಾಗ ಸಾವರ್ಕರ್‌ ಕಾಲಾಪಾನಿ ಶಿಕ್ಷೆ ಎದುರಿಸಿದ್ದ ಕಾರಾಗೃಹದ ಕೊಠಡಿಗೆ ಭೇಟಿ ನೀಡಿದ್ದೆ. ಆ ದಿನವನ್ನು ಎಂದಿಗೂ ಮರೆಯಲಾರೆ. ಸ್ವಾತಂತ್ರ್ಯ ಆಂದೋಲನದ ಜತೆಗೆ ಸಾಮಾಜಿಕ ಪರಿವರ್ತನೆಗೆ ಅವರ ಕೊಡುಗೆ ಅಮೋಘ ಎಂದು ಪ್ರಧಾನಿ ಮೋದಿ ವಿವರಿಸಿದರು.

ಸಂತ ಕಬೀರ್‌ ದಾಸರ ಸ್ಮರಣೆ:

ಜೂನ್‌ 4ರಂದು ಸಂತ ಕಬೀರ್‌ ದಾಸರ ಜಯಂತಿ ನಡೆಯಲಿದೆ. ಅವರ ಸಂದೇಶಗಳು ಇಂದಿಗೂ ಪ್ರಸ್ತುತ. ಸಮಾಜದ ಎಲ್ಲ ವರ್ಗದ ಜನರೂ ನೀರಿಗಾಗಿ ಕೆರೆ, ಬಾವಿಯನ್ನು ಆಶ್ರಯಿಸುತ್ತಾರೆ. ಎಲ್ಲರಿಗೂ ನೀರು ಸಮಾನ. ಅದು ಬೇರೆ ಬೇರೆಯಾಗಿರುವುದಿಲ್ಲ. ಅದೇ ರೀತಿ ಎಲ್ಲರೂ ಮಾನವರೇ ಎಂಬ ಸಮಾನತೆಯ ಆದರ್ಶವನ್ನು ಸಾರಿದವರು ಕಬೀರರು ಎಂದರು.‌

ಎನ್‌ಟಿಆರ್‌ 100ನೇ ಜನ್ಮದಿನಾಚರಣೆ:

ರಾಜಕಾರಣ ಮತ್ತು ಸಿನಿಮಾರಂಗದಲ್ಲಿ ಅಗಾಧ ಸಾಧನೆ ಮಾಡಿರುವ ಎನ್‌ಟಿ ಆರ್‌ ಅವರ (ಎನ್‌ಟಿ ರಾಮರಾವ್) ನೂರನೇ ಜನ್ಮ ದಿನವನ್ನು ಇಂದು ಆಚರಿಸಲಾಗುತ್ತಿದೆ. ‌ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಐತಿಹಾಸಿಕ, ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಮ, ಕೃಷ್ಣರ ಪಾತ್ರಗಳಲ್ಲಿ ಮಿಂಚಿದ್ದಾರೆ. ರಾಜಕಾರಣದಲ್ಲೂ ಅಪಾರ ಸೇವೆ ನೀಡಿದ್ದಾರೆ. ಅವರಿಗೆ ನಮನಗಳು ಎಂದರು.

ಮನ್‌ ಕೀ ಬಾತ್‌ 101ನೇ ಸಂಚಿಕೆ:

ಮನ್‌ ಕೀ ಬಾತ್‌ 100ನೇ ಸಂಚಿಕೆಯನ್ನು ಪೂರ್ಣಗೊಳಿಸಿ 101ನೇ ಸಂಚಿಕೆಗೆ ಪದಾರ್ಪಣೆ ಮಾಡಿರುವ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದರು. ಜಗತ್ತಿನಾದ್ಯಂತ ಜನತೆ ಮನ್‌ ಕೀ ಬಾತ್‌ ಈ ಬಾನುಲಿ ಕಾರ್ಯಕ್ರಮವನ್ನು ಆಲಿಸಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ನೂರು ವರ್ಷದ ತಾಯಿಯೊಬ್ಬರು ಆಶೀರ್ವದಿಸಿದ ವಿಡಿಯೊ ಒಂದನ್ನೂ ನೋಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಯುವ ಸಂಗಮದ ಪ್ರಸ್ತಾಪ:

ಕಳೆದ ಸಲ ಮನ್‌ ಕಿ ಬಾತ್‌ನಲ್ಲಿ ಕಾಶಿ, ತಮಿಳು ಸಂಗಮದ ಬಗ್ಗೆ ಮಾತನಾಡಿದ್ದೆ. ವಾರಾಣಸಿಯಲ್ಲಿ ತಮಿಳು, ತೆಲುಗು ಸಂಗಮ ನಡೆದಿದೆ. ಇದು ಏಕ್‌ ಭಾರತ್‌, ಶ್ರೇಷ್ಠ ಭಾರತ್‌ ಭಾವನೆಯನ್ನು ಉದ್ದೀಪಿಸುತ್ತದೆ. ಈಗ ಯುವ ಸಂಗಮವೂ ನಡೆಯುತ್ತಿದೆ ಎಂದ ಪ್ರಧಾನಿ ಮೋದಿ, ಈ ಅಭಿಯಾನದಲ್ಲಿ ತೊಡಗಿಸಿರುವ ಇಬ್ಬರು ಯುವಕ-ಯುವತಿಯರನ್ನು ದೂರವಾಣಿ ಮೂಲಕ ಮಾತನಾಡಿಸಿದರು. ಅರುಣಾಚಲ ಪ್ರದೇಶದ ಗ್ಯಾಮರ್‌ ನುಕ್‌ಮ್‌ ಹಾಗೂ ಬಿಹಾರದ ವಿಶಾಖಾ ಸಿನ್ಹಾ ಜತೆ ಮಾತನಾಡಿದರು.

ಅರುಣಾಚಲಪ್ರದೇಶದ ಗ್ಯಾಮರ್‌ ನುಕುಮ್‌ ಅವರು ಎನ್‌ಐಟಿಯಲ್ಲಿ ಓದುತ್ತಿದ್ದಾರೆ. ಮೆಕಾನಿಕಲ್‌ ಎಂಜಿನಿಯರಿಂಗ್‌ ಕಲಿಯುತ್ತಿದ್ದಾರೆ. ತಂದೆ ಸಣ್ಣ ಪುಟ್ಟ ಬಿಸಿನೆಸ್‌, ಕೃಷಿ ಮಾಡುತ್ತಿದ್ದಾರೆ. ಯುವ ಸಂಗಮದ ಬಗ್ಗೆ ಇಂಟರ್‌ ನೆಟ್‌ನಲ್ಲಿ ತಿಳಿದ ಗ್ಯಾಮರ್‌ ಅವರು ಆಸಕ್ತಿ ಬೆಳೆಸಿದರು. ಯುವ ಸಂಗಮ ಅಡಿಯಲ್ಲಿ ರಾಜಸ್ಥಾನಕ್ಕೆ ತೆರಳಿದ್ದರು. ಅಲ್ಲಿನ ಅನುಭವ ಚೆನ್ನಾಗಿತ್ತು ಎಂದರು. ರಾಜಸ್ಥಾನದ ದೊಡ್ಡ ಸರೋವರಗಳನ್ನೂ ನೋಡಿದ್ದರಂತೆ. ಎರಡೂ ರಾಜ್ಯಗಳಲ್ಲಿ ದೇಶದ ಬಗ್ಗೆ ಪ್ರೀತಿ, ಅಭಿಮಾನ, ಗರ್ವವನ್ನು ನಾನು ಕಂಡೆ ಎಂದು ಪ್ರಧಾನಿ ಮೋದಿಯವರಿಗೆ ಗ್ಯಾಮರ್‌ ವಿವರಿಸಿದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೆ, ಬ್ಲಾಗ್‌ಗಳಲ್ಲಿ ಬರೆಯುವಂತೆ ಪ್ರಧಾನಿ ಸಲಹೆ ನೀಡಿದರು.

ಬಿಹಾರದ ವಿಶಾಖಾ ಸಿನ್ಹಾ ಅವರು ಯುವ ಸಂಗಮ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ತಮಿಳುನಾಡಿಗೆ ಭೇಟಿ ನೀಡಿದ್ದರು. ಯುವಜನತೆಗೆ ಇಂಥ ಉತ್ತಮ ಕಾರ್ಯಕ್ರಮ ನೀಡಿದ್ದಕ್ಕೆ ಪ್ರಧಾನಿಗೆ ಧನ್ಯವಾದ ಸಲ್ಲಿಸಿದರು. ತಮಿಳುನಾಡು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಭೇಟಿ ಖುಶಿಯಾಯಿತು. ಅಲ್ಲಿ ಅನೇಕ ಹೊಸ ಸ್ನೇಹಿತರ ಪರಿಚಯವಾಯಿತು. ಇಸ್ರೊ ಕಚೇರಿಗೆ ಭೇಟಿ ನೀಡುವ ಅವಕಾಶವೂ ಸಿಕ್ಕಿತ್ತು. ತಮಿಳುನಾಡಿನ ಇಡ್ಲಿ, ಉಪ್ಪಿಟ್ಟು, ದೋಸೆಯನ್ನು ಸವಿಯುವ ಅವಕಾಶ ಕೂಡ ಸಿಕ್ಕಿತು ಎಂದರು.

ಹಿರೋಷಿಮಾ ಮ್ಯೂಸಿಯಂ ಬಗ್ಗೆ ಮಾತನಾಡಿದ ಮೋದಿ: ಪ್ರಧಾನಿ ಮೋದಿ ಅವರು ಇತ್ತೀಚೆಗೆ ಜಪಾನಿನ ಹಿರೋಷಿಮಾಗೆ ಭೇಟಿ ನೀಡಿದ್ದರು. ಅಲ್ಲಿ ನಿರ್ಮಿಸಿರುವ ಯುದ್ಧ ಸ್ಮಾರಕ ಮತ್ತು ಮ್ಯೂಸಿಯಂ ಬಗ್ಗೆ ಪ್ರಸ್ತಾಪಿಸಿದರು. ದೇಶದಲ್ಲೂ ಭಿನ್ನ ಮ್ಯೂಸಿಯಂ ನಿರ್ಮಾಣವಾಗುತ್ತಿದೆ. ದೇಶದ ಸಂಸ್ಕೃತಿ, ಇತಿಹಾಸ, ರಾಷ್ಟ್ರೀಯತೆಯನ್ನು ಅರಿತುಕೊಳ್ಳಲು ಎಲ್ಲರೂ ಮ್ಯೂಸಿಯಂಗಳಿಗೆ ಭೇಟಿ ನೀಡಬೇಕು. ಮಕ್ಕಳನ್ನು ಕರೆದುಕೊಂಡು ಹೋಗಬೇಕು ಎಂದರು.

50,000 ಅಮೃತ ಸರೋವರಗಳ ನಿರ್ಮಾಣ: ದೇಶದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ 75 ಸರೋವರಗಳನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ನಿಮಗೆ ಅಚ್ಚರಿಯಾಗಬಹುದು, ಇದುವರೆಗೆ 50,000ಕ್ಕೂ ಹೆಚ್ಚು ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ. ಇದು ಜಲ ಸಂರಕ್ಷಣೆ ದೃಷ್ಟಿಯಿಂದ ದೊಡ್ಡ ನಡೆಯಾಗಿದೆ ಎಂದರು. ಫ್ಲೋಕ್ಸ್‌ ಜೆನ್‌, ಲಿವ್‌ ಎನ್‌ ಸೈನ್ಸ್ ಎಂಬ ಜಲ ಸಂರಕ್ಷಣೆ ಕುರಿತ ಸ್ಟಾರ್ಟಪ್‌‌ಗಳ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು.

ಇದನ್ನೂ ಓದಿ: Mann Ki Baat: ಮೋದಿಯವರ ಮನ್​ ಕೀ ಬಾತ್​ ಒಂದು ಎಪಿಸೋಡ್​ಗೆ 8.3 ಕೋಟಿ ರೂ.ವೆಚ್ಚ?; ವೈರಲ್​ ಸಂದೇಶ ನಿಜವೇ?

Continue Reading

ದೇಶ

ಹೊಸ ಸಂಸತ್​ ಭವನ ಉದ್ಘಾಟನೆ; ಈ ಕಟ್ಟಡ ಸಬಲೀಕರಣಕ್ಕೆ ತೊಟ್ಟಿಲಾಗಲಿ ಎಂದ ಪ್ರಧಾನಿ ಮೋದಿ

ತಮಿಳು ಸಂಸ್ಕೃತಿಯಲ್ಲಿ ಮಹತ್ವ ಪಡೆದ ಸೆಂಗೋಲ್​ (ರಾಜದಂಡ)ನ್ನು ಪ್ರಧಾನಿ ಮೋದಿ ಇಂದು ಲೋಕಸಭೆಯಲ್ಲಿ ಪ್ರತಿಷ್ಠಾಪಿಸಿದ್ದು ಒಂದು ಐತಿಹಾಸಿಕ ಕ್ಷಣ ಎನ್ನಿಸಿಕೊಂಡಿದೆ. ಇದು ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡಿದ್ದರ ಸಂಕೇತ ಎಂದು ಹೇಳಲಾಗಿದೆ.

VISTARANEWS.COM


on

Edited by

PM Modi Tweet After inaugurates new Parliament building
Koo

ಪ್ರಧಾನಿ ನರೇಂದ್ರ ಮೋದಿ(PM Modi)ಯವರು ಇಂದು ಬೆಳಗ್ಗೆ ನೂತನ ಸಂಸತ್ ಭವನ (New Parliament Building)ವನ್ನು ಉದ್ಘಾಟನೆ ಮಾಡಿದರು. ಮುಂಜಾನೆ ಗಣಪತಿ ಹೋಮ ಶುರುವಾಗಿ, ಬಳಿಕ ಸ್ಪೀಕರ್​ ಕುರ್ಚಿಯ ಬಲಭಾಗದಲ್ಲಿ ರಾಜದಂಡ ಪ್ರತಿಷ್ಠಾಪನೆ ಮಾಡಿದರು. ಅದಾದ ಮೇಲೆ ಫಲಕ ಅನಾವರಣಗೊಳಿಸುವ ಮೂಲಕ ಸಂಸತ್ ಭವನವನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ಧಾರ್ಮಿಕ ಮಂತ್ರಘೋಷಗಳು ಪಠಿಸಲ್ಪಟ್ಟವು. ಬಳಿಕ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಹೋಮಕ್ಕೆ ಪೂರ್ಣಾಹುತಿ ಹಾಕಿದ ಬಳಿಕ ಪ್ರಧಾನಿ ಮೋದಿ, ನೇರವಾಗಿ ರಾಜದಂಡ (ಸೆಂಗೋಲ್​) ಇದ್ದಲ್ಲಿಗೆ ಬಂದು, ಅದಕ್ಕೆ ದೀರ್ಘದಂಡ ನಮಸ್ಕಾರ ಹಾಕಿದ್ದು ವಿಶೇಷವಾಗಿತ್ತು.

ನೂತನ ಸಂಸತ್ ಭವನ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಸಾರ್ಥಕ ಭಾವದಿಂದ ಟ್ವೀಟ್​ವೊಂದನ್ನು ಮಾಡಿದ್ದಾರೆ. ನಾಲ್ಕು ಫೋಟೋಗಳನ್ನು ಹಂಚಿಕೊಂಡ ಅವರು ‘ಭಾರತದ ಹೊಸ ಸಂಸತ್ ಭವನ ಉದ್ಘಾಟನೆಗೊಂಡಿತು. ನಮ್ಮೆಲ್ಲರ ಮನಸು-ಹೃದಯದಲ್ಲಿ ಹೆಮ್ಮೆ, ಆಶಯ, ಭರವಸೆಗಳು ತುಂಬಿ ಬಂದವು. ನಮ್ಮ ಸಬಲೀಕರಣಕ್ಕೆ ಈ ಐಕಾನಿಕ್​ ಕಟ್ಟಡ ತೊಟ್ಟಿಲಾಗಲಿ. ನಮ್ಮೊಳಗೆ ಕನಸು ಹೊತ್ತಿಸಿ, ಅವುಗಳನ್ನು ಸಾಕಾರಗೊಳಿಸಿಕೊಳ್ಳಲು ನೂತನ ಸಂಸತ್​ ಭವನ ಸ್ಫೂರ್ತಿಯಾಗಲಿ. ನಮ್ಮ ಮಹಾನ್ ರಾಷ್ಟ್ರವನ್ನು ಅಭಿವೃದ್ಧಿಯ ಉನ್ನತಿಗೆ ಕರೆದೊಯ್ಯಲಿ’ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ತಮಿಳು ಸಂಸ್ಕೃತಿಯಲ್ಲಿ ಮಹತ್ವ ಪಡೆದ ಸೆಂಗೋಲ್​ (ರಾಜದಂಡ)ನ್ನು ಪ್ರಧಾನಿ ಮೋದಿ ಇಂದು ಲೋಕಸಭೆಯಲ್ಲಿ ಪ್ರತಿಷ್ಠಾಪಿಸಿದ್ದು ಒಂದು ಐತಿಹಾಸಿಕ ಕ್ಷಣ ಎನ್ನಿಸಿಕೊಂಡಿದೆ. ಇದು ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡಿದ್ದರ ಸಂಕೇತ ಎಂದು ಹೇಳಲಾಗಿದೆ. ತಮಿಳುನಾಡಿನ ಅಧೀನಂ ಮಠದ ಪುರೋಹಿತರು ಈ ಸೆಂಗೋಲ್​ನ್ನು ಪ್ರಧಾನಿ ಮೋದಿಯವರಿಗೆ ಹಸ್ತಾಂತರ ಮಾಡಿದ್ದರು. ಇಂದು ರಾಜದಂಡ ಪ್ರತಿಷ್ಠಾಪನೆ ವೇಳೆ ತಮಿಳುನಾಡಿನ ವಿವಿಧ ಅಧೀನಂ ಮಠಗಳ ಬಹುತೇಕ ಸಾಧು-ಸಂತರು ಪಾಲ್ಗೊಂಡಿದ್ದರು. ಪ್ರಧಾನಿ ಮೋದಿಯವರು ಅವರೆಲ್ಲರ ಆಶೀರ್ವಾದ ಪಡೆದಿದ್ದಾರೆ.

ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ ಸೆಂಗೋಲ್​ ಪ್ರತಿಷ್ಠಾಪನೆ; ಕೈಮುಗಿದುಕೊಂಡು ರಾಜದಂಡ ಹಿಡಿದು ಬಂದ ಪ್ರಧಾನಿ ಮೋದಿ

Continue Reading

ದೇಶ

ಪ್ರಧಾನಿ ಮೋದಿ ಮನವಿಗೆ ಸ್ಪಂದನೆ; ಸಂಸತ್​ ಭವನದ ವಿಡಿಯೊಕ್ಕೆ ಧ್ವನಿ ಕೊಟ್ಟ ಶಾರುಖ್​ ಖಾನ್​, ಅಕ್ಷಯ್​ ಕುಮಾರ್​

ನಮ್ಮ ಸಂವಿಧಾನವನ್ನು ಎತ್ತಿ ಹಿಡಿಯುವ, ಮಹಾನ್​ ರಾಷ್ಟ್ರ ಭಾರತದ ನಾಗರಿಕರನ್ನು ಪ್ರತಿನಿಧಿಸುವವರಿಗಾಗಿ ಎಂಥ ಭವ್ಯವಾದ ಮನೆ ನಿರ್ಮಾಣವಾಗಿದೆ ಎಂದು ಶಾರುಖ್ ಖಾನ್ ಹೇಳಿದ್ದಾರೆ.

VISTARANEWS.COM


on

Edited by

Shah Rukh Khan And Akshay kumar Voice Over to New parliament building Video
Koo

ನೂತನ ಸಂಸತ್​ ಭವನ (New Parliament Building) ಉದ್ಘಾಟನೆಗೆ ಎರಡು ದಿನ ಮೊದಲು ಅಂದರೆ ಮೇ 26ರಂದು ಪ್ರಧಾನಿ ನರೇಂದ್ರ ಮೋದಿಯವರು ಒಂದು ಟ್ವೀಟ್ ಮಾಡಿದ್ದರು. ಭವ್ಯವಾದ ಹೊಸ ಸಂಸತ್ ಭವನದ ವಿಡಿಯೊ (New Parliament Building Inauguration) ಶೇರ್ ಮಾಡಿಕೊಂಡು ದೇಶದ ಜನರಲ್ಲಿ ಒಂದು ವಿಶೇಷ ಮನವಿ ಮಾಡಿದ್ದರು. ‘ನೀವೆಲ್ಲ ಈ ವಿಡಿಯೊವನ್ನು ನಿಮ್ಮದೇ ವೈಸ್​ ಓವರ್​ನೊಂದಿಗೆ ಹಂಚಿಕೊಳ್ಳಿ. ನಾನೂ ರೀಟ್ವೀಟ್ ಮಾಡುತ್ತೇನೆ. #MyParliamentMyPride ಹ್ಯಾಷ್​ಟ್ಯಾಗ್ ಕೊಡಲು ಮರೆಯಬೇಡಿ ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಈ ಕರೆಗೆ ಬಾಲಿವುಡ್​ ನಟರಾದ ಶಾರುಖ್​ ಖಾನ್​, ಅಕ್ಷಯ್​ ಕುಮಾರ್​, ವಿವಿಧ ಸಚಿವರು, ಪತ್ರಕರ್ತರು, ಬಿಜೆಪಿ ನಾಯಕರ ಸ್ಪಂದಿಸಿದ್ದಾರೆ. ಶಾರುಖ್ ಖಾನ್, ಅಕ್ಷಯ್ ಕುಮಾರ್ ಸೇರಿ ಹಲವರು ಸಂಸತ್​ ಭವನ, ಭಾರತ, ಲಾಂಛನ ಮತ್ತಿತರ ವಿಷಯಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿ, ನೂತನ ಸಂಸತ್ ಭವನದ ವಿಡಿಯೊ ಹಂಚಿಕೊಂಡಿದ್ದಾರೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ರೀಟ್ವೀಟ್ ಮಾಡಿಕೊಂಡಿದ್ದಾರೆ.

ಸಂಸತ್​ ಭವನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡ ಶಾರುಖ್​ ಖಾನ್​ ಆ ವಿಡಿಯೊವನ್ನು ಟ್ವೀಟ್ ಮಾಡಿ, ‘ನಮ್ಮ ಸಂವಿಧಾನವನ್ನು ಎತ್ತಿ ಹಿಡಿಯುವ, ಮಹಾನ್​ ರಾಷ್ಟ್ರ ಭಾರತದ ನಾಗರಿಕರನ್ನು ಪ್ರತಿನಿಧಿಸುವವರಿಗಾಗಿ ಎಂಥ ಭವ್ಯವಾದ ಮನೆ ನಿರ್ಮಾಣವಾಗಿದೆ ! ಎಂದು ಹೇಳಿದ್ದಾರೆ. ಹಾಗೇ, ಭಾರತಕ್ಕೊಂದು ಹೊಸ ಸಂಸತ್​ ಭವನ ಬೇಕು ಎಂಬ ಹಳೇ ಕನಸು ಸಾಕಾರವಾಯಿತು. ಇದು ಭಾರತದ ವೈಭವ, ಜೈ ಹಿಂದ್​’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಶಾರುಖ್ ಖಾನ್ ಟ್ವೀಟ್​ನ್ನು ರೀಟ್ವೀಟ್ ಮಾಡಿದ ಪ್ರಧಾನಿ ಮೋದಿ, ‘ಸಂಸತ್ ಭವನದ ಬಗ್ಗೆ ನೀವು ಅತ್ಯಂತ ಸುಂದರವಾಗಿ ವರ್ಣಿಸಿದ್ದೀರಿ. ಸಂಸತ್ ಭವನವು ಪ್ರಜಾಪ್ರಭುತ್ವದ ಶಕ್ತಿ ಮತ್ತು ಬೆಳವಣಿಗೆಯ ಸಂಕೇತ. ಸಂಪ್ರದಾಯ ಮತ್ತು ಆಧುನಿಕತೆ ಎರಡನ್ನೂ ಒಳಗೊಂಡಿದೆ’ ಎಂದು ಹೇಳಿದ್ದಾರೆ.

ಧ್ವನಿಯಾದ ಅಕ್ಷಯ್​ ಕುಮಾರ್

ಬಾಲಿವುಡ್​ನ ಇನ್ನೊಬ್ಬ ಖ್ಯಾತ ನಟ ಅಕ್ಷಯ್ ಕುಮಾರ್ ಅವರೂ ಕೂಡ ಪ್ರಧಾನಿ ನರೇಂದ್ರ ಮೋದಿ ಮನವಿಯನ್ನು ಗೌರವಿಸಿದ್ದಾರೆ. ನೂತನ ಸಂಸತ್​ ಭವನದ ವಿಡಿಯೊಕ್ಕೆ ತಮ್ಮ ಧ್ವನಿ ಕೊಟ್ಟಿದ್ದಾರೆ. ಅಂದರೆ ಭವ್ಯ ಭವನವನ್ನು ಅವರು ವಿವರಿಸಿದ್ದಾರೆ. ವಿಡಿಯೊ ಶೇರ್ ಮಾಡಿಕೊಂಡ ಅಕ್ಷಯ್ ಕುಮಾರ್ ಅವರು ‘ಸಂಸತ್​ ಭವನದ ವೈಭವಯುತ ಕಟ್ಟಡ ನೋಡಲು ಸಿಕ್ಕಾಪಟೆ ಖುಷಿಯಾಗುತ್ತದೆ. ಭಾರತದ ಅಭಿವೃದ್ಧಿ ಎಂಬ ಕಥೆಯಲ್ಲಿ ಒಂದು ಐತಿಹಾಸಿಕ ಗುರುತಾಗಿ ಇದು ಸದಾ ಉಳಿಯಲಿದೆ’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಅಕ್ಷಯ್ ಕುಮಾರ್ ಅವರ ಟ್ವೀಟ್​ನ್ನು ರೀಟ್ವೀಟ್ ಮಾಡಿದ ಪ್ರಧಾನಿ ಮೋದಿ ‘ ನೀವು ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವಿವರಿಸಿದ್ದೀರಿ. ನಮ್ಮ ನೂತನ ಸಂಸತ್ತು, ನಮ್ಮ ಪ್ರಜಾಪ್ರಭುತ್ವಕ್ಕೆ ದಾರಿದೀಪವಾಗಿದೆ. ಇದು ದೇಶದ ಪರಂಪರೆ ಮತ್ತು ಈ ದೇಶದ ಜನರ ಭವಿಷ್ಯಕ್ಕೆ ಪೂರಕವಾದ ಆಕಾಂಕ್ಷೆಗಳಿಗೆ ಸ್ಪಂದನೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದ್ದಾರೆ.

ತಮಿಳಿಗರಿಗೆ ಹೆಮ್ಮೆ ಎಂದ ನಟ ರಜಿನಿಕಾಂತ್​!

ನಟ ರಜಿನಿಕಾಂತ್​ ಅವರು ಟ್ವೀಟ್ ಮಾಡಿ ಸೆಂಗೋಲ್ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಇವರು ವಿಡಿಯೊ ಶೇರ್ ಮಾಡಲಿಲ್ಲ. ‘ತಮಿಳಿಗರ ಸಾಂಪ್ರದಾಯಿಕ ಚಿಹ್ನೆ ರಾಜದಂಡ (ಸೆಂಗೋಲ್​) ಇನ್ನು ಮುಂದೆ ಭಾರತದ ಹೊಸ ಸಂಸತ್ತಿನ ಕಟ್ಟಡದಲ್ಲಿ ಇರಲಿದೆ. ತಮಿಳಿಗರಿಗೆ ಗೌರವ ತಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದಿದ್ದಾರೆ. ಈ ಟ್ವೀಟ್ ರೀಟ್ವೀಟ್ ಮಾಡಿದ ಪ್ರಧಾನಿ ಮೋದಿ, ‘ತಮಿಳುನಾಡಿನ ವೈಭವೋಪೇತ ಸಂಸ್ಕೃತಿ ಬಗ್ಗೆ ಇಡೀ ರಾಷ್ಟ್ರಕ್ಕೇ ಹೆಮ್ಮೆಯಿದೆ. ಇಂಥ ಮಹಾನ್ ರಾಜ್ಯದ ಸಂಸ್ಕೃತಿಯು ನೂತನ ಸಂಸತ್ ಭವನದೊಳಗೆ ಕಂಗೊಳಿಸುತ್ತಿರುವುದು ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

Continue Reading

ದೇಶ

New Parliament Building: ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಲಾಲು ಪ್ರಸಾದ್ ಯಾದವರ ಆರ್‌ಜೆಡಿ ಪಕ್ಷ!

New Parliament Building: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸೆಂಗೋಲ್‌ನ್ನು ಲೋಕಸಭೆಯಲ್ಲಿ ಪ್ರತಿಷ್ಠಾಪಿಸುವ ಮೂಲಕ ಹೊಸ ಸಂಸತ್ ಭವನವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ 20 ಪ್ರತಿಪಕ್ಷಗಳು ಬಹಿಷ್ಕಾರ ಹಾಕಿವೆ.

VISTARANEWS.COM


on

Edited by

new Parliament building and coffin box
Koo

ನವದೆಹಲಿ: ಹೊಸ ಸಂಸತ್‌ ಭವನ ಸಂಬಂಧ ವಿವಾದಗಳು ಇನ್ನೂ ನಿಂತಿಲ್ಲ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇತ್ತ ಹೊಸ ಸಂಸತ್ ಭವನ (New Parliament Building) ಉದ್ಘಾಟನೆ ಮಾಡುತ್ತಿದ್ದಂತೆ ಅತ್ತ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ರಾಷ್ಟ್ರೀಯ ಜನತಾ ದಳ(RJD), ಸಂಸತ್ ಭವನವನ್ನು ಶವಪೆಟ್ಟಿಗೆಗೆ (Coffin) ಹೋಲಿಕೆ ಮಾಡಿ, ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ನಾಂದಿ ಹಾಡಿದೆ. ಆರ್‌ಜೆಡಿ ಟ್ವೀಟ್ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಇಂದು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡಲಾಯಿತು ಎಂಬುದನ್ನು ಸಾಂಕೇತಿವಾಗಿ ಹೇಳಲು ಶವಪೆಟ್ಟಿಗೆಗೆ ಹೋಲಿಸಲಾಗಿದೆ ಎಂದು ಆರ್‌ಜೆಡಿ ಹೇಳಿದೆ.

ಟ್ವೀಟ್ ಬಗ್ಗೆ ವಿವರಿಸಿದ ಪಕ್ಷದ ನಾಯಕ ಶಕ್ತಿ ಸಿಂಗ್ ಯಾದವ್ ಅವರು, ನಾವು ಮಾಡಿರುವ ಟ್ವೀಟ್‌ನಲ್ಲಿರುವ ಶವಪೆಟ್ಟಿಗೆಯು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡುತ್ತಿರುವುದನ್ನು ಸಂಕೇತಿಸುತ್ತಿದೆ. ದೇಶವು ಇದನ್ನು ಒಪ್ಪಿಕೊಳ್ಳುವುದಿಲ್ಲ. ಸಂಸತ್ತು ಪ್ರಜಾಪ್ರಭುತ್ವದ ದೇವಾಲಯವಾಗಿದೆ ಮತ್ತು ಇದು ಚರ್ಚೆಯ ಸ್ಥಳವಾಗಿದೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಜನತಾ ದಳ ಮಾಡಿರುವ ಟ್ವೀಟ್

ಆರ್‌ಜೆಡಿ ವರ್ತನೆಯ ವಿರುದ್ಧ ಕೆಂಡಕಾರಿರುವ ಬಿಜೆಪಿಯ ನಾಯಕ ಸುಶೀಲ್ ಮೋದಿ ಅವರು, ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆ ಹೋಲಿಕೆ ಮಾಡಿರುವವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಆರ್‌ಜೆಡಿ ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಕೆ ಮಾಡಿರುವುದು ದುರದೃಷ್ಟಕರ. ಅವರು ಇಂದು ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಕೆ ಮಾಡುತ್ತಿದ್ದಾರೆ. ಹಳೆ ಸಂಸತ್ ಭವನವನ್ನು ಅವರು ಶೂನ್ಯದೊಂದಿಗೆ ಹೋಲಿಕೆ ಮಾಡುತ್ತಾರೆಯೇ? ನಾವು ಈ ಮೊದಲು ಸೊನ್ನೆಯಲ್ಲಿ ಕುಳಿತುಕೊಳುತ್ತಿದ್ದೇವು ಎಂದು ಹೇಳಿಕೊಂಡಿದ್ದಾರೆ. ಈ ಮಧ್ಯೆ, ಸಂಯುಕ್ತ ಜನತಾ ದಳ ಕೂಡ ಈ ರೇಸ್‌ನಲ್ಲಿ ನುಗ್ಗಿದ್ದು, ಹೊಸ ಸಂಸತ್ ಭವನದ ಉದ್ಘಾಟನೆಯೊಂದಿಗೆ ಅಪಮಾನ ಇತಿಹಾಸವನ್ನು ಬರೆಯಲಾಗಿದೆ ಎಂದು ಹೇಳಿದೆ.

New Parliament Building: ಕಾರ್ಮಿಕರನ್ನು ಸನ್ಮಾನಿಸಿದ ಪ್ರಧಾನಿ ನೇರಂದ್ರ ಮೋದಿ

ನೂತನ ಸಂಸತ್ ಭವನ ಉದ್ಘಾಟನೆ (New Parliament Building Inauguration) ನಿಮಿತ್ತ ಮುಂಜಾನೆ 7.30ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರಧಾನಿ ಮೋದಿ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಎಲ್ಲ ಪೂಜೆಗಳಲ್ಲೂ ಪಾಲ್ಗೊಂಡರು. ಗಣಪತಿ ಹೋಮ ಮುಕ್ತಾಯವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ಸೆಂಗೋಲ್​​ನ್ನು ಹಿಡಿದು, ನೂತನ ಸಂಸತ್ ಭವನ ಪ್ರವೇಶಿಸಿ, ಅಲ್ಲಿ ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ಪ್ರತಿಷ್ಠಾಪಿಸಿದರು. ಈ ವೇಳೆ ತಮಿಳುನಾಡಿನ ಅಧೀನಂ ಮಠದ ಪುರೋಹಿತರು, ಸಂತರು, ಮಠಾಧೀಶರು ಇದ್ದರು. ಮಂತ್ರಘೋಷ ಮೊಳಗುತ್ತಿತ್ತು.

ಇದನ್ನೂ ಓದಿ: New Parliament Building: ನೂತನ ಸಂಸತ್​ ಭವನದ ಉದ್ಘಾಟನೆ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ

ಇಷ್ಟಾದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಮಿಕರನ್ನು ಸನ್ಮಾನಿಸಿದರು. ನೂತನ ಸಂಸತ್ ಭವನ ನಿರ್ಮಾಣ ಮಾಡಿದ ಈ ಕೆಲಸಗಾರರಿಗೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಅದಕ್ಕೂ ಮೊದಲು ನರೇಂದ್ರ ಮೋದಿಯವರು ಸಂಸತ್ ಭವನದ ಫಲಕ ಅನಾವರಣಗೊಳಿಸಿದರು. ನಂತರ ಅಲ್ಲಿ ಸರ್ವಧರ್ಮಗಳ ಪ್ರಾರ್ಥನೆ ನಡೆಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಗೃಹ ಸಚಿವ ಅಮಿತ್​ ಶಾ, ಇನ್ನಿತರ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಅನುರಾಗ್ ಠಾಕೂರ್​, ರಾಜನಾಥ್ ಸಿಂಗ್​ ಮತ್ತಿತರ ಹಲವು ಗಣ್ಯರು ಇದ್ದರು. ಇವರಲ್ಲಿ ಸ್ಪೀಕರ್ ಓಂ ಬಿರ್ಲಾ ಪ್ರತಿ ಕಾರ್ಯದಲ್ಲೂ ಪ್ರಧಾನಿ ಮೋದಿಗೆ ಜತೆಯಾದರು.

ಬಿಜೆಪಿ ನಾಯಕ ಸುಶೀಲ್ ಮೋದಿ ಆಕ್ರೋಶ

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading
Advertisement
Prime minister Modi in 101th Mann ki Baat
ದೇಶ24 mins ago

Mann Ki Baat : 101ನೇ ಮನ್‌ ಕಿ ಬಾತ್‌ನಲ್ಲಿ ವೀರ ಸಾವರ್ಕರ್‌ ವಿಚಾರಗಳ ಬಗ್ಗೆ ಮೋದಿ ಹೇಳಿದ್ದೇನು?

Vinayak damodar savarkar
ಅಂಕಣ24 mins ago

Savarkar Jayanti: ಭಾರತೀಯರನ್ನು ಸ್ವಸ್ವರೂಪದ ಅರಿವಿನೆಡೆಗೆ ನಡೆಸಿದ ವೀರ ಸಾವರ್ಕರ್‌

kapil dev 1983 world cup captain
ಕ್ರಿಕೆಟ್39 mins ago

IPL 2023: ಗಿಲ್​ ಕ್ರಿಕೆಟ್​ ಭವಿಷ್ಯ ನುಡಿದ ಕಪಿಲ್ ದೇವ್​

daredevil mustafa Running successful
South Cinema41 mins ago

Kannada New Movie: ʻಡೇರ್‌ಡೆವಿಲ್‌ ಮುಸ್ತಾಫಾ‌ʼ ಅಮೋಘ ಪ್ರದರ್ಶನ; ಹೊರದೇಶದಲ್ಲಿ ತೆರೆಕಾಣಲಿದೆ ಸಿನಿಮಾ

somana kunitha
ಕಲೆ/ಸಾಹಿತ್ಯ41 mins ago

ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ

Ram Charan presents The India House Film
South Cinema42 mins ago

Ram Charan: ವೀರ್ ಸಾವರ್ಕರ್ ಜನುಮದಿನದಂದೇ ʻವಿ ಮೆಗಾ ಪಿಕ್ಚರ್ಸ್ʼ ಹೊಸ ಸಿನಿಮಾ ಅನೌನ್ಸ್‌; ವಿಡಿಯೊ ಹಂಚಿಕೊಂಡ ರಾಮ್‌ಚರಣ್‌!

PM Modi Tweet After inaugurates new Parliament building
ದೇಶ45 mins ago

ಹೊಸ ಸಂಸತ್​ ಭವನ ಉದ್ಘಾಟನೆ; ಈ ಕಟ್ಟಡ ಸಬಲೀಕರಣಕ್ಕೆ ತೊಟ್ಟಿಲಾಗಲಿ ಎಂದ ಪ್ರಧಾನಿ ಮೋದಿ

Bandipur National Park PM Narendra modi visit
ಕರ್ನಾಟಕ46 mins ago

Bandipur National Park: ಬಂಡೀಪುರವೀಗ ಫುಲ್‌ ರಶ್, ದಿನಕ್ಕೆ 8 ಲಕ್ಷ ರೂ. ಆದಾಯ; ಇದು ಮೋದಿ ಎಫೆಕ್ಟ್‌!

CM Siddaramaiah and B Nagendra and DK Shivakumar
ಕರ್ನಾಟಕ52 mins ago

Karnataka Cabinet: 34 ಸಚಿವರ ಪೈಕಿ 16 ಸಚಿವರ ವಿರುದ್ಧ ಕ್ರಿಮಿನಲ್ ಕೇಸ್, ನಂ.1 ಸ್ಥಾನದಲ್ಲಿ ಯಾರಿದ್ದಾರೆ?

Rain alert
ಉಡುಪಿ1 hour ago

Weather Report: ಭಾನುವಾರ ಈ ಜಿಲ್ಲೆಗಳಲ್ಲಿ ವರುಣನ ಅಬ್ಬರ; ಗಾಳಿ ವೇಗವೂ ಹೆಚ್ಚಲಿದೆ ಎಂದ ಹವಾಮಾನ ಇಲಾಖೆ

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ3 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ5 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್7 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Land Surveyor Recruitment
ಉದ್ಯೋಗ4 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

New Parliament building inauguration Live Video Here
ದೇಶ2 hours ago

New Parliament Building: ನೂತನ ಸಂಸತ್​ ಭವನದ ಉದ್ಘಾಟನೆ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ

horoscope today
ಪ್ರಮುಖ ಸುದ್ದಿ8 hours ago

Horoscope Today : ವಾರದ ರಜೆಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ

Laxmi Hebbalkar oath taking as a minister
ಕರ್ನಾಟಕ19 hours ago

Laxmi Hebbalkar: ಸಚಿವೆಯಾಗುವುದರ ಜತೆಗೆ ಅಜ್ಜಿಯೂ ಆದ ಲಕ್ಷ್ಮಿ ಹೆಬ್ಬಾಳ್ಕರ್‌; ಒಂದೇ ದಿನ 2 ಸಿಹಿ ಸುದ್ದಿ!

HD Kumaraswamy in JDS Meeting
ಕರ್ನಾಟಕ2 days ago

H.D. Kumaraswamy: ಜೆಡಿಎಸ್‌ ವಿಸರ್ಜನೆ ಹೇಳಿಕೆಗೆ ಬದ್ಧ ಎಂದ ಎಚ್‌.ಡಿ. ಕುಮಾರಸ್ವಾಮಿ!

induction stoves
ಕರ್ನಾಟಕ2 days ago

Congress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ

Viral Video, Teacher and Principal are quarrel in front of School children
ದೇಶ2 days ago

Viral Video: ಶಾಲಾ ಮಕ್ಕಳ ಎದುರೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಟೀಚರ್! ಇಲ್ಲಿದೆ ನೋಡಿ ವಿಡಿಯೋ

Horoscope Today
ಪ್ರಮುಖ ಸುದ್ದಿ2 days ago

Horoscope Today : ಮಕರ ರಾಶಿಯವರಿಗೆ ಕೌಟುಂಬಿಕವಾಗಿ ಶುಭ ಫಲ; ಇಂದಿನ ಭವಿಷ್ಯ ಇಲ್ಲಿದೆ

HD Kumaraswamy said he will take up the issue of congress guarantee
ಕರ್ನಾಟಕ3 days ago

Congress Guarantee: ನಾವು ಕಡುಬು ತಿನ್ನೋಕ ರಾಜಕಾರಣ ಮಾಡ್ತಿರೋದು?: ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ

Beware if the Congress Guarantee card is conditioned and Pratap Simha says he will fight from June 1
ಕರ್ನಾಟಕ3 days ago

Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ

Electricity bill man hit bescom staff
ಕರ್ನಾಟಕ4 days ago

Electricity Bill: ಕರೆಂಟ್‌ ಬಿಲ್‌ ಕಿರಿಕ್‌; ಬಾಕಿ ಬಿಲ್‌ ಕಟ್ಟು ಎಂದಿದ್ದಕ್ಕೆ ಚಪ್ಪಲಿಯಿಂದಲೇ ಹೊಡೆದವ ಅರೆಸ್ಟ್‌

ಟ್ರೆಂಡಿಂಗ್‌

error: Content is protected !!