Budget 2024 : ರಕ್ಷಣೆ ಇಲಾಖೆಗೆ ಅತಿ ಹೆಚ್ಚು, ಕೃಷಿ ಕ್ಷೇತ್ರಕ್ಕೆ ಕಡಿಮೆ ಹಂಚಿಕೆ - Vistara News

ದೇಶ

Budget 2024 : ರಕ್ಷಣೆ ಇಲಾಖೆಗೆ ಅತಿ ಹೆಚ್ಚು, ಕೃಷಿ ಕ್ಷೇತ್ರಕ್ಕೆ ಕಡಿಮೆ ಹಂಚಿಕೆ

Budget 2024 : ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ ಅಭಿವೃದ್ದಿಗಾಗಿ ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

VISTARANEWS.COM


on

Nirmala Seetaraman
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: 2024ರ (Budget 2024) ಲೋಕಸಭಾ ಚುನಾವಣೆಗೆ ಮುಂಚಿತವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮಧ್ಯಂತರ ಬಜೆಟ್​ ಪ್ರಕಟಿಸಿದ್ದಾರೆ. 2024-25ನೇ ಸಾಲಿಗೆ ಭಾರತದ ಬಂಡವಾಳ ವೆಚ್ಚವನ್ನು ಶೇಕಡಾ 11 ರಷ್ಟು ಹೆಚ್ಚಿಸಿ 11.11 ಲಕ್ಷ ಕೋಟಿ ರೂ.ಗೆ ಅಥವಾ ಜಿಡಿಪಿಯ ಶೇಕಡಾ 3.4 ಕ್ಕೆ ಹೆಚ್ಚಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಇದೇ ವೇಳೆ ಅವರು ಇಲಾಖಾವಾರು ಬಜೆಟ್​ಗಳ ಹಂಚಿಕೆಯನ್ನು ಪ್ರಕಟಿಸಿದ್ದಾರೆ. ಮಧ್ಯಂತರ ಬಜೆಟ್​ನಲ್ಲಿ ರಕ್ಷಣಾ ಸಚಿವಾಲಯಕ್ಕೆ ಹೆಚ್ಚಿನ ಹಂಚಿಕೆ ನೀಡಿರುವುದು ಖಾತರಿಯಾಗಿದ್ದು, ಕೃಷಿ ಇಲಾಖೆ ಕನಿಷ್ಠ ಪಾಲು ಪಡೆದುಕೊಂಡಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ದ್ವಿಗುಣ ಪರಿಣಾಮ ಬೀರಿದೆ ಎಂಬುದಾಗಿ ವಿತ್ತ ಸಚಿವರು ಹೇಳಿದ್ದಾರೆ. ಭಾರತೀಯ ವಿಮಾನಯಾನ ಸಂಸ್ಥೆಗಳು 1,000 ಹೊಸ ವಿಮಾನಗಳಿಗೆ ಆರ್ಡರ್ ನೀಡಿವೆ ಎಂದು ಸಚಿವರು ಇದೇ ವೇಳೆ ಪ್ರಕಟಿಸಿದ್ದಾರೆ.

ರಕ್ಷಣಾ ಕ್ಷೇತ್ರದಲ್ಲಿನ ತಂತ್ರಜ್ಞಾನವನ್ನು ಬಲಪಡಿಸಲು ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯನ್ನು ಸರ್ಕಾರ ಉತ್ತೇಜಿಸುತ್ತದೆ ಎಂಬುದಾಗಿಯೂ ನುಡಿದಿದ್ದಾರೆ. ವಿವಿಧ ಬೆಳೆಗಳ ಮೇಲೆ ನ್ಯಾನೊ ಡಿಎಪಿಯ ಅನ್ವಯವನ್ನು ಕೃಷಿ-ಹವಾಮಾನ ವಲಯಗಳಲ್ಲಿ ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Budget 2024: ಆರ್ಥಿಕತೆಗೆ ಬೂಸ್ಟ್‌ ನೀಡಿದ ಮೋದಿ;‌ ಗಂಡನ ಹಣ ಕಿತ್ತು ಹೆಂಡ್ತಿಗೆ ಕೊಡ್ತಾರಾ ಸಿದ್ದರಾಮಯ್ಯ ಎಂದ ಬಿಜೆಪಿ!

ಸಿಮೆಂಟ್ ಸೇರಿದಂತೆ ಮೂರು ಪ್ರಮುಖ ರೈಲ್ವೆ ಕಾರಿಡಾರ್​ಗಳನ್ನು ನಿರ್ಮಿಸಲಾಗುವುದು. 40,000 ಸಾಮಾನ್ಯ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಮಾನದಂಡಕ್ಕೆ ಪರಿವರ್ತಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.

ಸಚಿವಾಲಯಗಳಿಗೆ ಬಜೆಟ್​ ಹಂಚಿಕೆಗಳ ಮಾಹಿತಿ ಇಲ್ಲಿದೆ

  • ರಕ್ಷಣಾ ಸಚಿವಾಲಯ: 6.1 ಲಕ್ಷ ಕೋಟಿ ರೂಪಾಯಿ
  • ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ: 2.78 ಲಕ್ಷ ಕೋಟಿ ರೂಪಾಯಿ
  • ರೈಲ್ವೆ ಸಚಿವಾಲಯ: 2.55 ಲಕ್ಷ ಕೋಟಿ ರೂಪಾಯಿ
  • ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ: 2.13 ಲಕ್ಷ ಕೋಟಿ ರೂಪಾಯಿ
  • ಗೃಹ ಸಚಿವಾಲಯ: 2.03 ಲಕ್ಷ ಕೋಟಿ ರೂಪಾಯಿ
  • ಗ್ರಾಮೀಣಾಭಿವೃದ್ಧಿ ಸಚಿವಾಲಯ: 1.77 ಲಕ್ಷ ಕೋಟಿ ರೂಪಾಯಿ
  • ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ: 1.68 ಲಕ್ಷ ಕೋಟಿ ರೂಪಾಯಿ
  • ಸಂವಹನ ಸಚಿವಾಲಯ: 1.37 ಲಕ್ಷ ಕೋಟಿ ರೂಪಾಯಿ
  • ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ: 1.27 ಲಕ್ಷ ಕೋಟಿ ರೂಪಾಯಿ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

BSP President: ತಮಿಳುನಾಡು ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಕೊಲೆ; ಹಂತಕನ ಎನ್‌ಕೌಂಟರ್‌- ಮತ್ತೊಂದೆಡೆ ಹತ್ಯೆಯ ಭೀಕರ ದೃಶ್ಯ ವೈರಲ್‌

BSP President: ತನಿಖೆಯ ಭಾಗವಾಗಿ ಉತ್ತರ ಚೆನ್ನೈನಲ್ಲಿರುವ ಘಟನಾ ಸ್ಥಳಕ್ಕೆ ತಿರುವೆಂಕಟಮ್‌ನನ್ನು ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆತ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದಾನೆ. ಆಗ ಪೊಲೀಸರು ಆತನಿಗೆ ಗುಂಡು ಹಾರಿಸಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ. ಇನ್ನು ಆರ್ಮ್‌ಸ್ಟ್ರಾಂಗ್‌ ಹತ್ಯೆ ಪ್ರಕರಣದ 11 ಜನ ಆರೋಪಿಗಳಲ್ಲಿ ತಿರುವೆಂಕಟಂ ಕೂಡ ಒಬ್ಬರು. ಕೆಲವು ದಿನಗಳ ಹಿಂದೆಯಷ್ಟೇ ಕೋರ್ಟ್‌ ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಿತ್ತು.

VISTARANEWS.COM


on

BSP President
Koo

ಚೆನ್ನೈ: ಇತ್ತೀಚೆಗೆ ಬಹುಜನ ಸಮಾಜ ಪಕ್ಷದ (BSP President) ತಮಿಳುನಾಡು ಘಟಕದ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್‌(K Armstrong) ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. ತಿರುವೆಂಕಟಮ್‌ ಎಂಬಾತ ಪೊಲೀಸ್‌ ಮಹಜರು ವೇಳೆ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

ತನಿಖೆಯ ಭಾಗವಾಗಿ ಉತ್ತರ ಚೆನ್ನೈನಲ್ಲಿರುವ ಘಟನಾ ಸ್ಥಳಕ್ಕೆ ತಿರುವೆಂಕಟಮ್‌ನನ್ನು ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆತ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದಾನೆ. ಆಗ ಪೊಲೀಸರು ಆತನಿಗೆ ಗುಂಡು ಹಾರಿಸಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ. ಇನ್ನು ಆರ್ಮ್‌ಸ್ಟ್ರಾಂಗ್‌ ಹತ್ಯೆ ಪ್ರಕರಣದ 11 ಜನ ಆರೋಪಿಗಳಲ್ಲಿ ತಿರುವೆಂಕಟಂ ಕೂಡ ಒಬ್ಬರು. ಕೆಲವು ದಿನಗಳ ಹಿಂದೆಯಷ್ಟೇ ಕೋರ್ಟ್‌ ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಿತ್ತು.

ಇನ್ನು ಆರ್ಮ್‌ಸ್ಟ್ರಾಂಗ್‌ ಹತ್ಯೆಯ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನೂ ಪೊಲೀಸರು ರಿಲೀಸ್‌ ಮಾಡಿದ್ದಾರೆ.

ರಾಜಕೀಯ ಹತ್ಯೆ, ಹಿಂಸಾಚಾರ, ಬೇರೆ ರಾಜಕೀಯ ಪಕ್ಷದ ನಾಯಕರ ಮೇಲೆ ಹಲ್ಲೆಗಳು ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಲೇ ಇರುತ್ತವೆ. ಈಗ ಇಂತಹ ರಾಜಕೀಯ ದ್ವೇಷದ ಹತ್ಯೆಗಳು ತಮಿಳುನಾಡಿಗೂ ಕಾಲಿಟ್ಟಿವೆ. ಇದಕ್ಕೆ ನಿದರ್ಶನ ಎಂಬಂತೆ, ಆರ್ಮ್‌ಸ್ಟ್ರಾಂಗ್‌ (Armstrong) ಅವರನ್ನು ಹತ್ಯೆ ಮಾಡಲಾಗಿತ್ತು. ಚೆನ್ನೈನಲ್ಲಿರುವ (Chennai) ಅವರ ನಿವಾಸದ ಬಳಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು.

ಚೆನ್ನೈನ ಪೆರಂಬೂರ್‌ನಲ್ಲಿರುವ ಸದಯಪ್ಪನ್‌ ಸ್ಟ್ರೀಟ್‌ನಲ್ಲಿರುವ ಅವರ ನಿವಾಸದ ಬಳಿ ಜುಲೈ 5ರಂದು ಸಂಜೆ 7.30ರ ವೇಳೆಗೆ ಸುಮಾರು 6 ಜನರ ಗ್ಯಾಂಗ್‌ ದಾಳಿ ಮಾಡಿದೆ. ಮಾರಕಾಸ್ತ್ರಗಳ ಸಮೇತ ಆಗಮಿಸಿದ ಅವರು ದಾಳಿ ನಡೆಸಿ, ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆರ್ಮ್‌ಸ್ಟ್ರಾಂಗ್‌ ಅವರನ್ನು ನಗರದಲ್ಲಿರುವ ಥೌಸಂಡ್‌ ಲ್ಯಾಂಪ್ಸ್‌ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು

ತಮಿಳುನಾಡು ಬಿಎಸ್‌ಪಿ ಘಟಕದ ಅಧ್ಯಕ್ಷರಾಗಿದ್ದ ಆರ್ಮ್‌ಸ್ಟ್ರಾಂಗ್‌ ಅವರು ಇದಕ್ಕೂ ಮೊದಲು ಗ್ರೇಟರ್‌ ಚೆನ್ನೈ ಕಾರ್ಪೊರೇಷನ್‌ನ ಕೌನ್ಸಿಲರ್‌ ಆಗಿದ್ದರು. ಚುನಾವಣಾ ರಾಜಕೀಯದಲ್ಲಿ ಹೆಚ್ಚು ತೊಡಗಿಸಿಕೊಳ್ಳದ ಆರ್ಮ್‌ಸ್ಟ್ರಾಂಗ್‌ ಅವರು ರಾಜ್ಯದಲ್ಲಿ ದಲಿತರ ಪರ ಚಿಂತಕ, ಅಂಬೇಡ್ಕರ್‌ವಾದಿ ಎಂಬುದಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದರು. ಹಾಗಾಗಿ, ಆರ್ಮ್‌ಸ್ಟ್ರಾಂಗ್‌ ಅವರು ರಾಜಕೀಯದಲ್ಲಿ ಹೆಚ್ಚಿನ ಶತ್ರುಗಳನ್ನು ಹೊಂದಿರಲಿಲ್ಲ. ಇಷ್ಟಾದರೂ ಅವರ ಮೇಲೆ ಹಲ್ಲೆ ನಡೆಸಿ, ಹತ್ಯೆಗೈಯಲಾಗಿದೆ.

ಆರ್ಮ್‌ಸ್ಟ್ರಾಂಗ್‌ ಜತೆಗೆ ಇನ್ನಿಬ್ಬರ ಮೇಲೆಯೂ ಹಲ್ಲೆ ನಡೆದಿದ್ದು, ಅವರು ಗಾಯಗೊಂಡಿದ್ದಾರೆ. ದಾಳಿ ಮಾಡಿದ ಆರು ಮಂದಿಯ ಕುರಿತು ಇದುವರೆಗೆ ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದಾಗ್ಯೂ, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂನ ಓದಿ: World Record: ಒಂದೇ ದಿನ ಬರೋಬ್ಬರಿ 11 ಲಕ್ಷ ಗಿಡ ನೆಟ್ಟು ವಿಶ್ವ ದಾಖಲೆ ಬರೆದ ಇಂದೋರ್‌; ದೇಶದ ಸ್ವಚ್ಛ ನಗರಕ್ಕೆ ಇನ್ನೊಂದು ಗರಿ

Continue Reading

ದೇಶ

World Record: ಒಂದೇ ದಿನ ಬರೋಬ್ಬರಿ 11 ಲಕ್ಷ ಗಿಡ ನೆಟ್ಟು ವಿಶ್ವ ದಾಖಲೆ ಬರೆದ ಇಂದೋರ್‌; ದೇಶದ ಸ್ವಚ್ಛ ನಗರಕ್ಕೆ ಇನ್ನೊಂದು ಗರಿ

World Record: ಮಧ್ಯಪ್ರದೇಶದ ಇಂದೋರ್‌ನಲ್ಲಿ ಒಂದೇ ದಿನ ಬರೋಬ್ಬರಿ 11 ಲಕ್ಷ ಗಿಡಗಳನ್ನು ನೆಡಲಾಗಿದೆ. ಈ ಮೂಲಕ ವಿನೂತನ ವಿಶ್ವ ದಾಖಲೆ ಸೃಷ್ಟಿಯಾಗಿದೆ. ಈ ಸಾಧನೆಯು ದೇಶದ ಸ್ವಚ್ಛ ನಗರ ಎಂಬ ಖ್ಯಾತಿಯ ಇಂದೋರ್‌ನ ಮುಕುಟಕ್ಕೆ ದೊರೆತ ಇನ್ನೊಂದು ಗರಿ ಎನಿಸಿಕೊಂಡಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav) ಅವರು ಈ ದಾಖಲೆಗಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಿಂದ ಅಧಿಕೃತ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ.

VISTARANEWS.COM


on

World Record
Koo

ಭೋಪಾಲ್‌: ವರ್ಷದಿಂದ ವರ್ಷಕ್ಕೆ ಜಾಗತಿಕ ತಾಪಮಾನ ಏರುತ್ತಲೇ ಇದೆ. ಇದಕ್ಕೆ ಮುಖ್ಯ ಕಾರಣ ಕಾಡುಗಳ ನಾಶ. ಗಿಡಗಳನ್ನು ನೆಡುವುದೊಂದೇ ಪರಿಹಾರ ಎಂದು ತಜ್ಞರು ಎಚ್ಚರಿಸುತ್ತಲೇ ಇರುತ್ತಾರೆ. ಇದನ್ನು ಪಾಲಿಸುವವರು ಮಾತ್ರ ವಿರಳ. ಆದರೆ ಅದಕ್ಕೆ ಅಪವಾದ ಎಂಬಂತೆ ಮಧ್ಯಪ್ರದೇಶದ ಇಂದೋರ್‌ (Indore)ನಲ್ಲಿ ಒಂದೇ ದಿನ ಬರೋಬ್ಬರಿ 11 ಲಕ್ಷ ಗಿಡಗಳನ್ನು ನೆಡಲಾಗಿದೆ. ಈ ಮೂಲಕ ವಿನೂತನ ವಿಶ್ವ ದಾಖಲೆ (World Record) ಸೃಷ್ಟಿಯಾಗಿದೆ. ಈ ಸಾಧನೆಯು ದೇಶದ ಸ್ವಚ್ಛ ನಗರ ಎಂಬ ಖ್ಯಾತಿಯ ಇಂದೋರ್‌ನ ಮುಕುಟಕ್ಕೆ ದೊರೆತ ಇನ್ನೊಂದು ಗರಿ ಎನಿಸಿಕೊಂಡಿದೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav) ಅವರು ಈ ದಾಖಲೆಗಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಿಂದ ಅಧಿಕೃತ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ.

ʼʼಇಂದೋರ್ ಈಗ ವಿಶ್ವದ ನಂಬರ್ ಒನ್ ಸ್ಥಾನದಲ್ಲಿದೆ. ಸ್ವಚ್ಛತೆ ವಿಚಾರದಲ್ಲಿ ಮಾದರಿಯಾದ ಇಲ್ಲಿನ ಜನತೆ ಇನ್ನೊಂದು ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇದಕ್ಕೆ ಕಾರಣಕರ್ತರಾದ ಇಂದೋರ್‌ನ ನನ್ನ ಸಹೋದರ- ಸಹೋದರಿಯರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಮಧ್ಯಪ್ರದೇಶದ ಆರ್ಥಿಕ ರಾಜಧಾನಿ ಮತ್ತು ನಮ್ಮ ದೇಶದ ಸ್ವಚ್ಛ ನಗರವಾದ ಇಂದೋರ್ ಒಂದೇ ದಿನದಲ್ಲಿ 11 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದೆ” ಎಂದು ಮೋಹನ್ ಯಾದವ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ಫೂರ್ತಿಗೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉಪಸ್ಥಿತಿಯೊಂದಿಗೆ ಮಧ್ಯಪ್ರದೇಶವು ಈ ಗಮನಾರ್ಹ ಸಾಧನೆಯನ್ನು ಮಾಡಿದೆ. ಇದು ಪ್ರಕೃತಿ ಸಂರಕ್ಷಣೆಯ ಸಂದೇಶವನ್ನು ದೇಶದ ಜನತೆಗೆ ನೀಡಲಿದೆ” ಎಂದು ಅವರು ಹೇಳಿದ್ದಾರೆ.

ಹಿಂದಿನ ದಾಖಲೆ

ಗಿನ್ನಿಸ್ ವಿಶ್ವ ದಾಖಲೆಯ ಸಲಹೆಗಾರ ನಿಶ್ಚಲ್ ಬರೋಟ್ ಮಾಹಿತಿ ನೀಡಿ, ಈ ಹಿಂದೆ (2023ರಲ್ಲಿ) ಅಸ್ಸಾಂನಲ್ಲಿ ಒಂದೇ ದಿನ 9,26000 ಸಸಿಗಳನ್ನು ನಾಟಿ ಮಾಡಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಮಧ್ಯಪ್ರದೇಶ ಮುರಿದಿದೆ ಎಂದಿದ್ದಾರೆ.

“ತಂಡವೊಂದು 24 ಗಂಟೆಗಳಲ್ಲಿ ಅತಿ ಹೆಚ್ಚು ಗಿಡಗಳನ್ನು ನೆಟ್ಟ ಅಪರೂಪದ ದಾಖಲೆಗೆ ಇಂದೋರ್‌ ಪಾತ್ರವಾಗಿದೆ. ಜುಲೈ 13ರ ಸಂಜೆ 7:03ಕ್ಕೆ ಆರಂಭವಾದ ಗಿಡ ನೆಡುವ ಕಾರ್ಯ ಜುಲೈ 14ರ ಸಂಜೆ 7:03ಕ್ಕೆ ಮುಕ್ತಾಯವಾಯಿತು. ವಿಶೇಷ ಎಂದರೆ ಇಂದೋರ್ ಸಂಜೆ 5 ಗಂಟೆಯ ವೇಳೆಗೆ ಹಳೆಯ ದಾಖಲೆಯನ್ನು ಮುರಿದಿದೆ. ಅಸ್ಸಾಂ 24 ಗಂಟೆಗಳಲ್ಲಿ 9,26,000 ಸಸಿಗಳನ್ನು ನೆಡುವ ಮೂಲಕ ಈ ಹಿಂದೆ ದಾಖಲೆ ನಿರ್ಮಿಸಿತ್ತು. ಅಷ್ಟು ಗಿಡಗಳನ್ನು ಸಂಜೆ 5 ಗಂಟೆ ವೇಳೆಗೇ ನೆಡಲಾಗಿತ್ತು. ಮುಂದಿನ 2 ಗಂಟೆ ವೇಳೆಯಲ್ಲಿ ಸುಮಾರು 2 ಲಕ್ಷ ಗಿಡ ನಾಟಿ ಮಾಡಲಾಯಿತು. ನಿಖರ ಸಂಖ್ಯೆಗಳನ್ನು ನಂತರ ಬಿಡುಗಡೆ ಮಾಡಲಾಗುವುದು. ನಾವು ಹೊಸ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ಸಿಎಂ ಮೋಹನ್ ಯಾದವ್ ಅವರಿಗೆ ಹಸ್ತಾಂತರಿಸಿದ್ದೇವೆ” ಎಂದು ನಿಶ್ಚಲ್ ಬರೋಟ್ ಹೇಳಿದ್ದಾರೆ.

ಈ ಅಭಿಯಾನಕ್ಕಾಗಿ ಮೊದಲು ನೆಡುತೋಪು ತಾಣವಾದ ರೇವತಿ ರೇಂಜ್‌ ಅನ್ನು 9 ವಲಯಗಳು ಮತ್ತು 100 ಉಪ-ವಲಯಗಳಾಗಿ ವಿಂಗಡಿಸಲಾಗಿತ್ತು. 100 ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ ಮಾಡಲಾಯಿತು. ಈ ಅಭಿಯಾನದ ಯಶಸ್ಸಿಗಾಗಿ ರಾಜ್ಯ ಸರ್ಕಾರ ಸುಮಾರು 46 ದಿನಗಳ ತಯಾರಿ ನಡೆಸಿದೆ.

ಇದನ್ನೂ ಓದಿ: Mohan Yadav: ಯಾರಿವರು ಮಧ್ಯ ಪ್ರದೇಶದ ನೂತನ ಸಿಎಂ ಡಾ. ಮೋಹನ್ ಯಾದವ್?

2,000 ಬಿಎಸ್‌ಎಫ್ ಜವಾನರಲ್ಲದೆ, 100ಕ್ಕೂ ಹೆಚ್ಚು ಎನ್‌ಆರ್‌ಐಗಳು, 50 ಶಾಲೆಗಳ ಎನ್‌ಸಿಸಿ ಕೆಡೆಟ್‌ಗಳು, ನೂರಾರು ಸಾರ್ವಜನಿಕರು, ವಿವಿಧ ಸಾಮಾಜಿಕ ಸಂಘಟನೆಗಳ ಸದಸ್ಯರು ಈ ನೆಡುತೋಪು ಅಭಿಯಾನದಲ್ಲಿ ಭಾಗವಹಿಸಿದ್ದರು.

Continue Reading

ಬಾಲಿವುಡ್

Anant Ambani Wedding: ರಾಧಿಕಾ-ಅನಂತ್ ಅಂಬಾನಿ ಆರತಕ್ಷತೆ; ಮನಸೂರೆಗೊಂಡ ಗಾಯಕಿ ಶ್ರೇಯಾ ಘೋಷಾಲ್, ಎಆರ್ ರೆಹಮಾನ್ ಗಾಯನ!

Anant Ambani Wedding: ಗುರುʼ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸಿರುವ ʻಬರ್ಸೋ ರೇʼ ಸಾಂಗ್‌ವನ್ನು ಶ್ರೇಯಾ ಹಾಡಿದರು. ಚಿತ್ರದ ಸಂಯೋಜಕ ಎಆರ್ ರೆಹಮಾನ್ ಕೂಡ ವೇದಿಕೆಯಲ್ಲಿ ಅವರೊಂದಿಗೆ ಸೇರಿಕೊಂಡರು. ಸಂಗೀತ ಸಂಯೋಜಕ ಎಆರ್ ರೆಹಮಾನ್ (Anant Ambani Wedding) ಮತ್ತು ಗಾಯಕಿ ಶ್ರೇಯಾ ಘೋಷಾಲ್ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ಆರತಕ್ಷತೆಯಲ್ಲಿ ಪ್ರದರ್ಶನ ನೀಡಿದರು. ಶ್ರೇಯಾ ಘೋಷಾಲ್ ತಮ್ಮ ಅನೇಕ ಹಿಟ್‌ ಹಾಡುಗಳನ್ನು ಹಾಡಿ ರಂಜಿಸಿದರು.

VISTARANEWS.COM


on

Anant Ambani Wedding AR Rahman Shreya Ghoshal sings wedding reception
Koo

ಬೆಂಗಳೂರು: ಆಸ್ಕರ್-ವಿಜೇತ ಸಂಗೀತ ಸಂಯೋಜಕ ಎಆರ್ ರೆಹಮಾನ್ (Anant Ambani Wedding) ಮತ್ತು ಗಾಯಕಿ ಶ್ರೇಯಾ ಘೋಷಾಲ್ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ಆರತಕ್ಷತೆಯಲ್ಲಿ ಪ್ರದರ್ಶನ ನೀಡಿದರು. ಶ್ರೇಯಾ ಘೋಷಾಲ್ ತಮ್ಮ ಅನೇಕ ಹಿಟ್‌ ಹಾಡುಗಳನ್ನು ಹಾಡಿ ರಂಜಿಸಿದರು.

ʻಗುರುʼ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸಿರುವ ʻಬರ್ಸೋ ರೇʼ ಸಾಂಗ್‌ವನ್ನು ಶ್ರೇಯಾ ಹಾಡಿದರು. ಚಿತ್ರದ ಸಂಯೋಜಕ ಎಆರ್ ರೆಹಮಾನ್ ಕೂಡ ವೇದಿಕೆಯಲ್ಲಿ ಅವರೊಂದಿಗೆ ಸೇರಿಕೊಂಡರು.

ಶ್ರೇಯಾ ಮೋಹಿತ್ ಚೌಹಾಣ್ ಜತೆಗೆ ಯಶ್ ಚೋಪ್ರಾ ಅವರ 2012 ರ ರೋಮ್ಯಾಂಟಿಕ್ ಡ್ರಾಮಾ ʻಜಬ್ ತಕ್ ಹೈ ಜಾನ್‌ʼನ ರೆಹಮಾನ್ ಸಂಯೋಜನೆಯ ಹಾಡನ್ನು ಹಾಡಿದರು. ಮೂಲ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದಾರೆ. ಸಾರಾ ಅಲಿ ಖಾನ್‌ ನಟನೆಯ ಆನಂದ್ ಎಲ್ ರೈ ಅವರ 202 ರ ಚಿತ್ರ ʻಅತ್ರಾಂಗಿ ರೇʼ ಯಿಂದ ರೆಹಮಾನ್ ಸಂಯೋಜನೆಯ ʻಚಕಾ ಚಕ್ʼ ಹಾಡನ್ನೂ ಶ್ರೇಯಾ ಹಾಡಿದ್ದಾರೆ. ಶ್ರೇಯಾ ಮತ್ತು ಮೋಹಿತ್ ಅವರು ಮುಕೇಶ್ ಛಾಬ್ರಾ ಅವರ 2020 ರ ಚೊಚ್ಚಲ ನಿರ್ದೇಶನದ ʻದಿಲ್ ಬೇಚಾರʼದಿಂದ ರೆಹಮಾನ್ ಅವರ ಸಂಯೋಜನೆಯ ʻತಾರೆ ಗಿನ್ʼ ಸಾಂಗ್‌ ಕೂಡ ಹಾಡಿದರು. ಮೂಲತಃ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಮತ್ತು ಸಂಜನಾ ಸಂಘಿ ನಟನೆಯ ಸಿನಿಮಾ ಇದು.

ಇದನ್ನೂ ಓದಿ: Anant Ambani Wedding: ಅನಂತ್ ಅಂಬಾನಿ ಆರತಕ್ಷತೆಯಲ್ಲಿ ದುಬಾರಿ ಲೆಹೆಂಗಾ ಧರಿಸಿ ಅಪ್ಸರೆಯಂತೆ ಕಂಡ ತಮನ್ನಾ ಭಾಟಿಯಾ!

ಅನಂತ್ ಮತ್ತು ರಾಧಿಕಾ ಅವರ ಮದುವೆಯ ಆರತಕ್ಷತೆಯಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸೇರಿದ್ದರು. ಗೋವಿಂದ, ಸನ್ನಿ ಡಿಯೋಲ್, ಬಾಬಿ ಡಿಯೋಲ್, ಮಧುರ್ ಭಂಡಾರ್ಕರ್, ಸುಭಾಷ್ ಘಾಯ್, ರಾಜ್‌ಕುಮಾರ್ ರಾವ್-ಪತ್ರಲೇಖಾ, ಬಿಪಾಶಾ ಬಸು-ಕರಣ್ ಸಿಂಗ್ ಗ್ರೋವರ್, ಅರ್ಜುನ್ ಕಪೂರ್, ಡಯಾನಾ ಪೆಂಟಿ, ಅಟ್ಲೀ, ಜಾಕಿ ಭಗ್ನಾನಿ-ರಾಕುಲ್ ಪ್ರೀತ್ ಸಿಂಗ್ ಮತ್ತು ಆಯುಷ್ಮಾನ್ ಖುರಾನಾ ಸೇರಿದಂತೆ ಇತರರು ಭಾಗವಹಿಸಿದ್ದರು.

ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರು ಸಾವಿರಾರು ಗಣ್ಯರು (Anant Ambani Wedding), ಸೆಲೆಬ್ರಿಟಿಗಳ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Continue Reading

ದೇಶ

SBI: ದುಬಾರಿಯಾಗಲಿದೆ ಎಸ್‌ಬಿಐ ಸಾಲ; ಲೆಂಡಿಂಗ್‌ ದರದಲ್ಲಿ ಭಾರೀ ಏರಿಕೆ

SBI: ಭಾರತದ ಅತಿದೊಡ್ಡ ಬ್ಯಾಂಕ್, ಎಸ್‌ಬಿಐ, 1 ವರ್ಷದ ಅವಧಿಯ ಸಾಲದ ಮೇಲಿನ ಎಂಸಿಎಲ್‌ಆರ್ ಅನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಮಾಡಿದ್ದು, ಶೇಕಡಾ 8.85 ಕ್ಕೆ ಏರಿಕೆ ಆಗಿದೆ. ಅಂತೆಯೇ, 3-ತಿಂಗಳು, 6-ತಿಂಗಳು ಮತ್ತು 2-ವರ್ಷದ ಸಾಲದ ಅವಧಿಗೆ MCLR ಅನ್ನು ತಲಾ 10 ಮೂಲ ಅಂಕಗಳನ್ನು ಹೆಚ್ಚಿಸಲಾಗಿದೆ, ಕ್ರಮವಾಗಿ 8.4 ಶೇಕಡಾ, 8.75 ಶೇಕಡಾ ಮತ್ತು 8.95 ಶೇಕಡಾವನ್ನು ತಲುಪಿದೆ.

VISTARANEWS.COM


on

SBI
Koo

ಹೊಸದಿಲ್ಲಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(SBI) ತನ್ನ ಗ್ರಾಹಕರಿಗೆ ಬಿಗ್‌ ಶಾಕ್‌ ಕೊಟ್ಟಿದೆ. ಇನ್ನು ಮುಂದೆ ಎಸ್‌ಬಿಐನ ಸಾಲ ದುಬಾರಿಯಾಗಲಿದೆ. ಅಂದರೆ ಎಸ್‌ಬಿಐ ತಮ್ಮ ಮಾರ್ಜಿನಲ್‌ ಕಾಸ್ಟ್‌ ಆಫ್‌ ಲೆಂಡಿಂಗ್‌ ರೇಟ್‌(MCLR) ಅನ್ನು 5-10 ಪಾಯಿಂಟ್‌ ಹೆಚ್ಚಿಸಿದೆ. ಹೀಗಾಗಿ ಸಾಲದ ಮೇಲಿನ ದರ ಏರಿಕೆ ಆಗಲಿದ್ದು, ಇದು ನೇರವಾಗಿ ತಿಂಗಳ EMI ಮೇಲೆ ಬೀಳಲಿದೆ.

ಭಾರತದ ಅತಿದೊಡ್ಡ ಬ್ಯಾಂಕ್, ಎಸ್‌ಬಿಐ, 1 ವರ್ಷದ ಅವಧಿಯ ಸಾಲದ ಮೇಲಿನ ಎಂಸಿಎಲ್‌ಆರ್ ಅನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಮಾಡಿದ್ದು, ಶೇಕಡಾ 8.85 ಕ್ಕೆ ಏರಿಕೆ ಆಗಿದೆ. ಅಂತೆಯೇ, 3-ತಿಂಗಳು, 6-ತಿಂಗಳು ಮತ್ತು 2-ವರ್ಷದ ಸಾಲದ ಅವಧಿಗೆ MCLR ಅನ್ನು ತಲಾ 10 ಮೂಲ ಅಂಕಗಳನ್ನು ಹೆಚ್ಚಿಸಲಾಗಿದೆ, ಕ್ರಮವಾಗಿ 8.4 ಶೇಕಡಾ, 8.75 ಶೇಕಡಾ ಮತ್ತು 8.95 ಶೇಕಡಾವನ್ನು ತಲುಪಿದೆ.

ಇದಕ್ಕೂ ಮೊದಲು, ಜೂನ್ ಮಧ್ಯದಲ್ಲಿ ಎಸ್‌ಬಿಐ ವಿವಿಧ ಅವಧಿಗಳಿಗೆ ಎಂಸಿಎಲ್‌ಆರ್ ಅನ್ನು 10 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿತ್ತು, ಆ ಸಮಯದಲ್ಲಿ 1 ವರ್ಷದ ಸಾಲಗಳಿಗೆ ಬೆಂಚ್‌ಮಾರ್ಕ್ ದರವನ್ನು ಶೇಕಡಾ 8.75ಕ್ಕೆ ಏರಿಕೆ ಮಾಡಿತ್ತು.

2024-25ನೇ ಹಣಕಾಸು ವರ್ಷದಲ್ಲಿ ದೇಶಾದ್ಯಂತ ಗ್ರಾಮೀಣ ಭಾಗಗಳೂ ಸೇರಿ 400 ಹೊಸ ಶಾಖೆಗಳನ್ನು ತೆರೆಯಲು ಎಸ್‌ಬಿಐ ತೀರ್ಮಾನಿಸಿದೆ. ಇದರಿಂದಾಗಿ, ಗ್ರಾಮೀಣ ಪ್ರದೇಶಗಳಲ್ಲೂ ಜನ ಬ್ಯಾಂಕ್‌ಗಳನ್ನು ಹೊಂದಬಹುದಾಗಿದೆ. ಹೊಸ ಶಾಖೆಗಳನ್ನು ತೆರೆಯುವ ಕುರಿತು ಎಸ್‌ಬಿಐ ಚೇರ್ಮನ್‌ ದಿನೇಶ್‌ ಕುಮಾರ್‌ ಖಾರಾ ಅವರು ಮಾಹಿತಿ ನೀಡಿದ್ದರು.

ದೇಶದಲ್ಲಿ ಶೇ.89ರಷ್ಟು ವಹಿವಾಟುಗಳು ಡಿಜಿಟಲ್‌ ಮೂಲಕ ಹಾಗೂ ಶೇ.98ರಷ್ಟು ವಹಿವಾಟು ಬ್ಯಾಂಕ್‌ ಹೊರತಾಗಿ ನಡೆಯುತ್ತಿವೆ. ಹೀಗಿರುವಾಗ ಬ್ಯಾಂಕ್‌ಗಳ ಬ್ರ್ಯಾಂಚ್‌ಗಳು ಏಕೆ ಬೇಕು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ, ದೇಶದ ಪ್ರತಿಯೊಂದು ಭಾಗದಲ್ಲೂ, ಹೊಸ ಹೊಸ ಪಟ್ಟಣ, ಗ್ರಾಮಗಳಿಗೂ ಬ್ಯಾಂಕ್‌ ಬ್ರ್ಯಾಂಚ್‌ಗಳ ಅವಶ್ಯಕತೆ ಇದೆ. ಇದೇ ಕಾರಣಕ್ಕಾಗಿಯೇ 2024-25ನೇ ಹಣಕಾಸು ವರ್ಷದಲ್ಲಿ ದೇಶದ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಬ್ರ್ಯಾಂಚ್‌ಗಳನ್ನು ತೆರೆಯಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.

ದೇಶಾದ್ಯಂತ ಹೊಸ ಹೊಸ ಪ್ರದೇಶಗಳಲ್ಲಿ ಬ್ಯಾಂಕ್‌ ಶಾಖೆಗಳನ್ನು ಸ್ಥಳಗಳ ಹುಡುಕಾಟ ನಡೆಯುತ್ತಿದೆ. ಜನರಿಗೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕ್‌ ಸೇವೆಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಸ್ಥಳಗಳನ್ನು ನಿರ್ಧರಿಸುವ ಕೆಲಸ ನಡೆಯುತ್ತಿದೆ. ದೇಶದ ಜನರಿಗೆ ಬ್ಯಾಂಕ್‌ಗಳ ಅವಶ್ಯಕತೆ ಹೆಚ್ಚಿಲ್ಲ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ದೇಶದ ಪ್ರತಿಯೊಂದು ಭಾಗದಲ್ಲಿ ಬ್ಯಾಂಕ್‌ ಬ್ರ್ಯಾಂಚ್‌ಗಳ ಅವಶ್ಯಕತೆ ಇದೆ. ಆ ಅವಶ್ಯಕತೆಯನ್ನು ಪೂರೈಸುವುದು ನಮ್ಮ ಆದ್ಯತೆಯಾಗಿದೆ” ಎಂದು ಪಿಟಿಐಗೆ ವಿವರಿಸಿದರು

ಇದನ್ನೂ ಓದಿ: Actor Darshan:  ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟ ಚಲನಚಿತ್ರ ವಾಣಿಜ್ಯ ಮಂಡಳಿ

Continue Reading
Advertisement
Karnataka Rain
ಮಳೆ3 mins ago

Karnataka Rain : ರಾಜ್ಯಾದ್ಯಂತ ಅಬ್ಬರದ ಮಳೆಗೆ ತತ್ತರಿಸಿದ ಜನತೆ; ಮನೆ ನೆಲಸಮ, ಉರುಳಿ ಬಿದ್ದ ಮರಗಳು

karnataka assembly Live basanagouda daddal
ಪ್ರಮುಖ ಸುದ್ದಿ5 mins ago

Karnataka Assembly Live: ವಿಧಾನಸಭೆ ಕಲಾಪಕ್ಕೆ ಹಾಜರಾಗಿ ಸೇಫ್‌ ಆದ ಬಸವನಗೌಡ ದದ್ದಲ್‌! ವಿಧಾನ ಮಂಡಲ ಕಲಾಪ ಲೈವ್‌ ಇಲ್ಲಿದೆ

Salman Khan and Iulia Vantur spotted at Anant-Radhika wedding
ಬಾಲಿವುಡ್9 mins ago

Salman Khan: ಅಂಬಾನಿ ಮದುವೆಯಲ್ಲಿ ಮಾಜಿ ಗೆಳತಿ ಜತೆ ಸಲ್ಮಾನ್‌ ಡ್ಯಾನ್ಸ್‌; ರಿಲೇಶನ್​ಶಿಪ್​ನಲ್ಲಿದ್ದಾರಾ ಹೇಗೆ?

BSP President
ದೇಶ23 mins ago

BSP President: ತಮಿಳುನಾಡು ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಕೊಲೆ; ಹಂತಕನ ಎನ್‌ಕೌಂಟರ್‌- ಮತ್ತೊಂದೆಡೆ ಹತ್ಯೆಯ ಭೀಕರ ದೃಶ್ಯ ವೈರಲ್‌

Copa America Final
ಕ್ರೀಡೆ41 mins ago

Copa America Final: ದಾಖಲೆಯ ಕೊಪಾ ಅಮೆರಿಕ ಪ್ರಶಸ್ತಿ ಗೆದ್ದ ಅರ್ಜೆಂಟೀನಾ

World Record
ದೇಶ43 mins ago

World Record: ಒಂದೇ ದಿನ ಬರೋಬ್ಬರಿ 11 ಲಕ್ಷ ಗಿಡ ನೆಟ್ಟು ವಿಶ್ವ ದಾಖಲೆ ಬರೆದ ಇಂದೋರ್‌; ದೇಶದ ಸ್ವಚ್ಛ ನಗರಕ್ಕೆ ಇನ್ನೊಂದು ಗರಿ

karnataka Rain
ಮಳೆ45 mins ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

Anant Ambani Wedding AR Rahman Shreya Ghoshal sings wedding reception
ಬಾಲಿವುಡ್52 mins ago

Anant Ambani Wedding: ರಾಧಿಕಾ-ಅನಂತ್ ಅಂಬಾನಿ ಆರತಕ್ಷತೆ; ಮನಸೂರೆಗೊಂಡ ಗಾಯಕಿ ಶ್ರೇಯಾ ಘೋಷಾಲ್, ಎಆರ್ ರೆಹಮಾನ್ ಗಾಯನ!

karnataka assembly live CM Siddaramaiah and Vidhanasoudha
ಪ್ರಮುಖ ಸುದ್ದಿ1 hour ago

Karnataka Assembly Live: ವಿಧಾನ ಮಂಡಲ ಮಳೆಗಾಲದ ಅಧಿವೇಶನ ಆರಂಭ; ಇಲ್ಲಿದೆ ‌ಕ್ಷಣಕ್ಷಣದ ಲೈವ್‌

assault case udupi
ಕ್ರೈಂ1 hour ago

Assault Case: ಆಪದ್ಬಾಂಧವನಲ್ಲ ವಿಕೃತ! ಮಗಳ ಅಶ್ಲೀಲ ವಿಡಿಯೋ ಮಾಡಿದ ಆಸೀಫ್‌ನ ಇನ್ನೊಂದು ವಿಕೃತಿ ಬಯಲು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ45 mins ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ18 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ19 hours ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ23 hours ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

ಟ್ರೆಂಡಿಂಗ್‌