BYJU's Debt: ಹೆಚ್ಚಿದ ಸಾಲದ ಸುಳಿ; ಬೈಜೂಸ್‌ ಅಂಗಸಂಸ್ಥೆ ಈಗ ಸಾಲ ಕೊಟ್ಟವರ ಪಾಲು! - Vistara News

ದೇಶ

BYJU’s Debt: ಹೆಚ್ಚಿದ ಸಾಲದ ಸುಳಿ; ಬೈಜೂಸ್‌ ಅಂಗಸಂಸ್ಥೆ ಈಗ ಸಾಲ ಕೊಟ್ಟವರ ಪಾಲು!

BYJU’s Debt: ಕೊರೊನಾ ಬಿಕ್ಕಟ್ಟಿನ ಬಳಿಕ ಬೈಜೂಸ್‌ ಕಂಪನಿಯ ಸಾಲದ ಪ್ರಮಾಣವು ಜಾಸ್ತಿಯಾಗಿದೆ. ಸಾಲದ ಬಡ್ಡಿ ಕಟ್ಟಲು ಕೂಡ ಕಂಪನಿಗೆ ಕಷ್ಟವಾಗುತ್ತಿದೆ. ಇದರಿಂದಾಗಿ ಕಂಪನಿಯ ಘಟಕವೊಂದು ಸಾಲ ಕೊಟ್ಟವರ ಪಾಲಾಗಿದೆ.

VISTARANEWS.COM


on

Byjus CEO Raveendran
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದೇಶದ ಪ್ರಮುಖ ಎಡ್‌ಟೆಕ್‌ (EdTech) ಕಂಪನಿಯಾಗಿರುವ, ಒಂದು ಕಾಲದ ಬಹುಬೇಡಿಕೆಯ ಹಾಗೂ ಖ್ಯಾತಿಯ ಟೆಕ್ನಾಲಜಿ ಸ್ಟಾರ್ಟಪ್‌ ಆಗಿದ್ದ ಬೈಜೂಸ್‌ ಕಂಪನಿಯು ಸಾಲದ ಸುಳಿಗೆ (BYJU’s Debt) ಸಿಲುಕಿದೆ. ಇದೇ ಸಾಲದ ಸುಳಿಯಿಂದಾಗಿ ಬೈಜೂಸ್‌ ಕಂಪನಿ ಈಗ ತನ್ನ ಅಂಗಸಂಸ್ಥೆಯಾದ ಬೈಜೂಸ್‌ ಅಲ್ಫಾ ಕಂಪನಿಯನ್ನು ಸಾಲ ನೀಡಬೇಕಾಗಿದೆ. ಅಮೆರಿಕದ ಡೆಲಾವೇರ್‌ ಕೋರ್ಟ್‌ (Delaware Court) ಈ ಕುರಿತು ಆದೇಶ ಹೊರಡಿಸಿದೆ.

ಬೈಜೂಸ್‌ ಕಂಪನಿಯು 1.2 ಶತಕೋಟಿ ಡಾಲರ್‌ (ಸುಮಾರು 10 ಸಾವಿರ ಕೋಟಿ ರೂ.) ಸಾಲವನ್ನು ಹೊಂದಿದ್ದು, ಮೂರು ತಿಂಗಳಿಗೆ ಸುಮಾರು 33 ಕೋಟಿ ರೂ. ಬಡ್ಡಿಯನ್ನೇ ಕಟ್ಟಬೇಕಿದೆ. ಬಡ್ಡಿ ಕಟ್ಟಲು ಕೂಡ ಆಗದ ಪರಿಸ್ಥಿತಿ ಎದುರಾಗಿದೆ. ಇನ್ನು ಬೈಜೂಸ್‌ ಕಂಪನಿಗೆ ಸಾಲ ಕೊಟ್ಟಿರುವ ರೆಡ್‌ವುಡ್‌ ಇನ್ವೆಸ್ಟ್‌ಮೆಂಟ್ಸ್‌ ಎಲ್‌ಎಲ್‌ಸಿ ಹಾಗೂ ಸಿಲ್ವರ್‌ ಪಾಯಿಂಟ್‌ ಕ್ಯಾಪಿಎಲ್‌ ಎಲ್‌ಪಿ ಕಂಪನಿಗಳು ಕೋರ್ಟ್‌ ಮೊರೆ ಹೋಗಿದ್ದವು. ಈಗ ಅತಿಯಾದ ಸಾಲ ಇರುವ ಕಾರಣ ಬೈಜೂಸ್‌ ಅಲ್ಫಾ ಕಂಪನಿಯ ನಿಯಂತ್ರಣವನ್ನು ಸಾಲ ಕೊಟ್ಟವರಿಗೆ ನೀಡಿ ಡೆಲಾವೇರ್‌ ಚಾನ್ಸರಿ ಕೋರ್ಟ್‌ ನ್ಯಾಯಾಧೀಶ ಮಾರ್ಗನ್‌ ಜುರ್ನ್‌ ಆದೇಶ ಹೊರಡಿಸಿದ್ದಾರೆ.

byjus

ಬೈಜೂಸ್‌ ಸಂಸ್ಥಾಪಕ ಬೈಜು ರವೀಂದ್ರನ್‌ ಅವರ ಸಹೋದರ ರಿಜು ರವೀಂದ್ರನ್‌ ಅವರು ಬೈಜೂಸ್‌ ಅಲ್ಫಾ ಮಂಡಳಿ ಸದಸ್ಯರಾಗಿದ್ದರು. ಆದರೆ, ಸಾಲ ಕೊಟ್ಟಿರುವ ಕಂಪನಿಗಳು ರಿಜು ರವೀಂದ್ರನ್‌ ಬದಲಾಗಿ ಟಿಮೋಥಿ ಪೋಹ್ಲ್‌ ಎಂಬುವರನ್ನು ಮಂಡಳಿ ಸದಸ್ಯರಾಗಿದ್ದರು. ಇದನ್ನು ಪ್ರಶ್ನಿಸಿ ಬೈಜೂಸ್‌ ಸಲ್ಲಿಸಿದ್ದ ಅರ್ಜಿಯನ್ನು ಡೆಲಾವೇರ್‌ ಕೋರ್ಟ್‌ ನಿರಾಕರಿಸಿದೆ. ಹಾಗೆಯೇ, ಸಾಲದ ಹಿನ್ನೆಲೆಯಲ್ಲಿ ಟಿಮೋಥಿ ಪೋಹ್ಲ್‌ ಅವರೇ ಈಗ ಬೈಜೂಸ್‌ ಅಲ್ಫಾದ ಏಕೈಕ ನಿರ್ದೇಶಕರಾಗಿದ್ದಾರೆ ಎಂದು ಆದೇಶಿಸಿದೆ.

ಇದನ್ನೂ ಓದಿ: BYJU’s Layoffs: ಮತ್ತೆ 5500 ಉದ್ಯೋಗ ಕಡಿತಕ್ಕೆ ಮುಂದಾದ ಬೈಜೂಸ್ ಕಂಪನಿ

ಸಾವಿರಾರು ಕೋಟಿ ರೂ. ಸಾಲದ ಸುಳಿಗೆ ಸಿಲುಕಿರುವ ಬೆಂಗಳೂರು ಮೂಲದ ಬೈಜೂಸ್‌ ಕಂಪನಿಯು ಈಗಾಗಲೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಲ್ಲದೆ, ಬೆಂಗಳೂರಿನಲ್ಲಿದ್ದ ಕಚೇರಿಯನ್ನೂ ತೆರವುಗೊಳಿಸಿದೆ. ಬೈಜೂಸ್‌ ಬೆಂಗಳೂರಿನ ಕಲ್ಯಾಣಿ ಟೆಕ್‌ ಪಾರ್ಕ್‌ನಲ್ಲಿರುವ 5.58 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ತೆರವುಗೊಳಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗಿಗಳನ್ನು ಕಡಿತಗೊಳಿಸುವ ಚಿಂತನೆಯೂ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

ಬಾಯಿ ಬಾರದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಗುದ ದ್ವಾರಕ್ಕೆ ಪೆನ್‌ ತುರುಕಿಸಿ ವಿಕೃತಿ ಮೆರೆದ ಸಂಬಂಧಿಕರು

Crime News: ಉತ್ತರ ಪ್ರದೇಶದ ಆಗ್ರಾದಲ್ಲಿ ಅಮಾನುಷ ಘಟನೆಯೊಂದು ನಡೆದಿದ್ದು, ಬಾಯಿ ಬಾರದ ಮತ್ತು ಶ್ರವಣದೋಷವುಳ್ಳ ಅಪ್ರಾಪ್ತ ಬಾಲಕನ ಮೇಲೆ ಸಂಬಂಧಿಕರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಜತೆಗೆ ಆತನ ಗುದ ದ್ವಾರಕ್ಕೆ ಪೆನ್‌ ತುರುಕಿಸಿ ವಿಕೃತಿ ಮೆರೆದಿದ್ದಾರೆ.

VISTARANEWS.COM


on

no abuse
Koo

ಲಕ್ನೋ: ಉತ್ತರ ಪ್ರದೇಶದ ಆಗ್ರಾದಲ್ಲಿ ಅಮಾನುಷ ಘಟನೆಯೊಂದು ನಡೆದಿದ್ದು, ಬಾಯಿ ಬಾರದ ಮತ್ತು ಶ್ರವಣದೋಷವುಳ್ಳ ಅಪ್ರಾಪ್ತ ಬಾಲಕನ ಮೇಲೆ ಸಂಬಂಧಿಕರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಜತೆಗೆ ಆತನ ಗುದ ದ್ವಾರಕ್ಕೆ ಪೆನ್‌ ತುರುಕಿಸಿ ವಿಕೃತಿ ಮೆರೆದಿದ್ದಾರೆ. ಇದರಿಂದ ಸುಮಾರು ಮೂರು ವಾರಗಳ ಕಾಲ ಬಾಲಕ ನೋವು ಅನುಭವಿಸಿದ್ದು, ಕೊನೆಗೂ ಗುದ ದ್ವಾರದಿಂದ ಪೆನ್‌ ಹೊರಕ್ಕೆ ತೆಗೆಯಲಾಗಿದೆ (Crime News).

ಬಾಯಿ ಬಾರದ ಹಿನ್ನೆಲೆಯಲ್ಲಿ ಈ 16 ವರ್ಷದ ಬಾಲಕನಿಗೆ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಮನೆಯವರ ಬಳಿ ಹೇಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆತ ಮೂರು ವಾರಗಳ ಕಾಲ ನೋವು ಸಹಿಸಿಕೊಂಡಿದ್ದ. ಲೈಂಗಿಕ ಕಿರುಕುಳ ನೀಡಿದ ಬಳಿಕ ಪಾಪಿಗಳು ಬಾಲಕನ ಗುದ ದ್ವಾರಕ್ಕೆ ಪೆನ್‌ ತುರುಕಿಸಿದ್ದರು. ಈ ಘಟನೆ ಫೆಬ್ರವರಿ 5ರಂದು ನಡೆದಿದ್ದು, ಫೆಬ್ರವರಿ 25ರ ವರೆಗೆ ಬೆಳಕಿಗೆ ಬಂದಿರಲಿಲ್ಲ. ನೋವು ಮತ್ತು ನಿದ್ದೆಯ ಸಮಸ್ಯೆಯಿಂದ ಬಾಲಕ ಒದ್ದಾಡುತ್ತಿರುವುದನ್ನು ಗಮನಿಸಿದ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಘಟನೆ ಬೆಳಕಿಗೆ ಬಂದಿತ್ತು.

ಘಟನೆಯ ವಿವರ

ಮನೆಯಿಂದ ಹೊರ ಹೋಗಿದ್ದ ಬಾಲಕ ಅಳುತ್ತಾ ಹಿಂದಿರುಗಿದ್ದ. ಆರಂಭದಲ್ಲಿ ಪೋಷಕರು ಬೀದಿ ನಾಯಿ ಅಟ್ಟಿಸಿಕೊಂಡು ಬಂದಿರಬೇಕು. ಈ ಭಯದಲ್ಲಿ ಅಳುತ್ತಿದ್ದಾನೆ ಎಂದೇ ಭಾವಿಸಿದ್ದರು. ಆದರೆ ಬಳಿಕವೂ ಅಳು ಮಂದುವರಿಸಿದ್ದ ಆತ ತನ್ನ ಗುದ ದ್ವಾರ ಮತ್ತು ಹೊಟ್ಟೆಯತ್ತ ಕೈ ತೋರಿ ವಿಪರೀತ ನೋವು ಎಂದು ತಿಳಿಸಿದ್ದ. ಬಳಿಕ ಆತನಿಗೆ ಆಹಾರ ಸೇವಿಸಲು, ನಿದ್ದೆ ಮಾಡಲು ಸಾಧ್ಯವಾಗಿರಲಿಲ್ಲ.

ಕೂಡಲೇ ಬಾಲಕನ್ನು ಶಹೀದ್ ನಗರದ ಮಾರಿಗೋಲ್ಡ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರಿಶೀಲನೆ ವೇಳೆ ಆತನ ಗುದ ದ್ವಾರದಲ್ಲಿ ಹುದುಗಿಸಿದ್ದ ಪೆನ್‌ ಕಂಡು ಬಂದಿತ್ತು. ಬಳಿಕ ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯಲಾಯಿತು. ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಎಫ್‌ಐಆರ್‌ ದಾಖಲು

ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ 377 (ಸಲಿಂಗಕಾಮ) ಸೆಕ್ಷನ್‌ ಸೇರಿದಂತೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಮತ್ತು ಪೋಕ್ಸೊ ಕಾಯ್ದೆಯಡಿ ಪೊಲೀಸರು 5 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಬಾಲಕನ ತಂದೆ ಮತ್ತು ಅವರ ಸೋದರ ಸಂಬಂಧಿಗಳ ನಡುವಿನ ಭೂ ವಿವಾದದ ಹಿನ್ನೆಲೆಯಲ್ಲಿ ಆತನನ್ನು ಗುರಿಯಾಗಿಸಿ ಈ ಕೃತ್ಯ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: Jharkhand shocker: ಪ್ರವಾಸಕ್ಕೆ ಬಂದ ಸ್ಪೇನ್‌ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 10 ಕಿರಾತಕರು

ಇನ್ನೊಂದು ಪ್ರಕರಣ

ನವೀ ಮುಂಬೈನಲ್ಲಿ ಎಂಟು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ 38 ವರ್ಷದ ವ್ಯಕ್ತಿಯನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಮುಂಬೈಯ ಮಸ್ಜಿದ್ ಬಂದರ್ ನಿವಾಸಿ ಸನೌಲ್ ಹಕೀಮ್ ಶೇಖ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಐಪಿಸಿಯ ಸಂಬಂಧಿತ ವಿಭಾಗಗಳಾದ 377 (ಅಸ್ವಾಭಾವಿಕ ಅಪರಾಧಗಳು) ಮತ್ತು 506 (2) (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಖಂಡೇಶ್ವರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Jharkhand shocker: ಪ್ರವಾಸಕ್ಕೆ ಬಂದ ಸ್ಪೇನ್‌ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 10 ಕಿರಾತಕರು

Jharkhand shocker: ಸ್ಪೇನ್ ಮಹಿಳೆ ಮತ್ತು ಆಕೆಯ ಪತಿ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದರು. ಅವರು ಏಷ್ಯಾದಾದ್ಯಂತ ಮೆಗಾ ಟ್ರಿಪ್‌ನಲ್ಲಿದ್ದರು.

VISTARANEWS.COM


on

physical abuse
Koo

ದುಮ್ಕಾ: ಶುಕ್ರವಾರ ತಡರಾತ್ರಿ ಜಾರ್ಖಂಡ್‌ನ (Jharkhand shocker) ದುಮ್ಕಾದಲ್ಲಿ ಸ್ಪೇನ್‌ ಮೂಲದ ಮಹಿಳೆಯೊಬ್ಬರ ಮೇಲೆ ಎಂಟರಿಂದ ಹತ್ತು ಮಂದಿ ಪಾತಕಿಗಳು ಸಾಮೂಹಿಕ ಅತ್ಯಾಚಾರ (physical abuse) ಎಸಗಿದ್ದಾರೆ. ಮಾಹಿತಿಯ ಪ್ರಕಾರ, ಮಹಿಳೆ ಮತ್ತು ಆಕೆಯ ಪತಿ ಬೈಕ್ ರೈಡ್‌ ಮಾಡುತ್ತಾ ಭಾರತ ಪ್ರವಾಸ (India tour) ಮಾಡುತ್ತಿದ್ದವರು.

ಹಂಸದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಮಹತ್‌ನಲ್ಲಿ ಈ ಘಟನೆ ನಡೆದಿದೆ. ಬೈಕ್‌ ಸವಾರಿ ಮಾಡುತ್ತ ಬಂದ ದಂಪತಿ ದುಮ್ಕಾದ ಕುಂಜಿ ಗ್ರಾಮದಲ್ಲಿ ಹಾಕಿದ ಟೆಂಟ್‌ನಲ್ಲಿ ಬಿಡಾರ ಹೂಡಿದ್ದರು. ಘಟನೆ ವೇಳೆ ದಂಪತಿ ಬೈಕ್‌ನಲ್ಲಿ ಬಿಹಾರದ ಭಾಗಲ್‌ಪುರಕ್ಕೆ ಹೊರಟಿದ್ದರು.

ಸುಮಾರು 8 ರಿಂದ 10 ಪುರುಷರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ವಿಧಿವಿಜ್ಞಾನ ತಜ್ಞರನ್ನೂ ನಿಯೋಜಿಸಲಾಗಿದೆ.

ಮಹಿಳೆ ಮತ್ತು ಆಕೆಯ ಪತಿ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದರು. ಅವರು ಏಷ್ಯಾದಾದ್ಯಂತ ಮೆಗಾ ಟ್ರಿಪ್‌ನಲ್ಲಿದ್ದರು. ದಂಪತಿಗಳು ಮೊದಲು ಪಾಕಿಸ್ತಾನಕ್ಕೆ, ನಂತರ ಅಲ್ಲಿಂದ ಬಾಂಗ್ಲಾದೇಶಕ್ಕೆ ಹೋಗಿದ್ದರು. ಅಲ್ಲಿಂದ ದುಮ್ಕಾ ಬಂದಿದ್ದು, ಇಲ್ಲಿಂದ ನೇಪಾಳಕ್ಕೆ ಹೋಗಲು ಯೋಜಿಸಿದ್ದರು.

ಸ್ಪ್ಯಾನಿಷ್ ಮಹಿಳೆ ಪ್ರಸ್ತುತ ಸರೈಯಾಹತ್ ಸಮುದಾಯ ಆರೋಗ್ಯ ಕೇಂದ್ರದ (CHC) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಮ್ಕಾ ಪೊಲೀಸ್ ಅಧೀಕ್ಷಕರು ಶುಕ್ರವಾರ ರಾತ್ರಿ ಅಪರಾಧ ಸ್ಥಳಕ್ಕೆ ಹೋಗಿದ್ದು, ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ರಾಜ್ಯ ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರು, ಕಾನೂನಿನ ಪ್ರಕಾರ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಅಪರಾಧ ನಡೆದ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್‌ನಲ್ಲಿದ್ದರು. ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದರು. ರಾಜ್ಯ ಬಿಜೆಪಿ ಈ ಕೃತ್ಯವನ್ನು ʼʼರಾಜ್ಯಕ್ಕೆ ಒಂದು ಕಪ್ಪು ಚುಕ್ಕೆʼʼ ಎಂದು ಬಣ್ಣಿಸಿದೆ. “ಅಪರಾಧಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದೆ.

ಇದನ್ನೂ ಓದಿ: Asaram Bapu: ಬಾಲಕಿ ಮೇಲೆ ಅತ್ಯಾಚಾರ; ಅಸಾರಾಂ ಬಾಪುಗೆ ಜೈಲೇ ಗತಿ

Continue Reading

ದೇಶ

Gautam Gambhir: ರಾಜಕೀಯಕ್ಕೆ ಗುಡ್‌ಬೈ ಹೇಳಿದ ಗೌತಮ್‌ ಗಂಭೀರ್‌; ಮಾಜಿ ಕ್ರಿಕೆಟಿಗನ ಈ ನಿರ್ಧಾರಕ್ಕೆ ಕಾರಣವೇನು?

Gautam Gambhir: ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.

VISTARANEWS.COM


on

gambhir
Koo

ನವದೆಹಲಿ: ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಅಚ್ಚರಿಯ ಬೆಳವಣಿಗೆಯೊಂದ ನಡೆದಿದ್ದು, ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ (Gautam Gambhir) ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಶನಿವಾರ (ಮಾರ್ಚ್‌ 2) ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ʼʼರಾಜಕೀಯ ಕರ್ತವ್ಯಗಳಿಂದ ಬಿಡುಗಡೆ ಮಾಡುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬಳಿ ಮನವಿ ಮಾಡಿರುವುದಾಗಿʼʼ ತಿಳಿಸಿದ್ದಾರೆ. ಮೈದಾನದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಿದ್ದ ಗಂಭೀರ್‌ 2019ರಲ್ಲಿ ರಾಜಕೀಯಕ್ಕೆ ಧುಮಿಕ್ಕಿದ್ದರು. ಆ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಪೂರ್ವ ದೆಹಲಿಯಿಂದ ಆಯ್ಕೆಯಾಗಿದ್ದರು.

ಕಾರಣವೇನು?

ʼʼರಾಜಕೀಯ ಚಟುವಟಿಕೆಗಳಿಂದ ಬಿಡುಗಡೆ ಮಾಡುವಂತೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಮನವಿ ಮಾಡುತ್ತಿದ್ದೇನೆ. ಇದರಿಂದಾಗಿ ನಾನು ಮುಂಬರುವ ದಿನಗಳಲ್ಲಿ ಕ್ರಿಕೆಟ್ ಬಗ್ಗೆ ಹೆಚ್ಚು ಗಮನಹರಿಸಬಹುದಾಗಿದೆ. ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಜೈ ಹಿಂದ್!ʼʼ ಎಂದು ಗಂಭೀರ್ ಬರೆದುಕೊಂಡಿದ್ದಾರೆ.

2019ರ ಮಾರ್ಚ್‌ನಲ್ಲಿ ಗಂಭೀರ್‌ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಳಿಕ ದೆಹಲಿ ಬಿಜೆಪಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿಯಿಂದ ಕಣಕ್ಕಿಳಿದು ಕಾಂಗ್ರೆಸ್ ಅಭ್ಯರ್ಥಿ ಅರವಿಂದರ್ ಸಿಂಗ್ ಲವ್ಲಿ ವಿರುದ್ಧ ಜಯಗಳಿಸಿದ್ದರು. ಮುಂದಿನ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಸಿಗುವುದಿಲ್ಲ ಎನ್ನುವ ವರದಿ ಹಿನ್ನಲೆಯಲ್ಲಿ ಅವರು ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ ಎನ್ನಲಾಗುತ್ತಿದೆ.

ಮೊದಲ ಪಟ್ಟಿ ಶೀಘ್ರ

2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಶೀಘ್ರದಲ್ಲೇ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಂತಹ ಪ್ರಮುಖರ ಹೆಸರಿರುವ ಸಾಧ್ಯತೆ ಇದೆ. ಹಲವು ಹಾಲಿ ಸಂಸದರಿಗೆ ಈ ಬಾರಿ ಟಿಕೆಟ್‌ ಲಭಿಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Gautam Gambhir : ಪಾಕಿಸ್ತಾನ ವಿರುದ್ಧ ಸೋತರೆ… ಗಮನ ಸೆಳೆದ ಗಂಭೀರ್ ಹೇಳಿಕೆ

ಕ್ರಿಕೆಟ್‌ನಲ್ಲಿ ಛಾಪು

42 ವರ್ಷದ ಗಂಭೀರ್‌ ಭಾರತೀಯ ಕ್ರಿಕೆಟ್‌ ತಂಡದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು 147 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 39.68 ಸರಾಸರಿಯಲ್ಲಿ 5,238 ರನ್ ಗಳಿಸಿದ್ದಾರೆ. ಏಕದಿನದಲ್ಲಿ 11 ಶತಕ ದಾಖಲಿಸಿದ್ದಾರೆ. 2011ರ ವಿಶ್ವಕಪ್ ಫೈನಲ್‌ನಲ್ಲಿ 97 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಅನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಇನ್ನು ಟೆಸ್ಟ್‌ ಪಂದ್ಯದಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಅವರು 58 ಟೆಸ್ಟ್ ಪಂದ್ಯಗಳಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದಾರೆ ಮತ್ತು 41.95 ರ ಸರಾಸರಿಯಲ್ಲಿ 4,154 ರನ್​​ ಗಳಿಸಿದ್ದಾರೆ. ಇದರಲ್ಲಿ ಒಂಬತ್ತು ಶತಕಗಳಿವೆ. ಮಾತ್ರವಲ್ಲ 2007ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿಯೂ ಗಂಭೀರ್‌ ಇದ್ದರು. ಐಪಿಎಲ್‌ನಲ್ಲಿಯೂ ಆಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

PM Narendra Modi: ಪ್ರಮುಖ ಹುದ್ದೆಗಳಿಗೆ 25 ಖಾಸಗಿ ವಲಯದ ತಜ್ಞರ ನೇಮಕಕ್ಕೆ ಮುಂದಾದ ಮೋದಿ ಸರ್ಕಾರ

PM Narendra Modi: ಇಪ್ಪತ್ತೈದು ಖಾಸಗಿ ವಲಯಗಳ ತಜ್ಞರು ಶೀಘ್ರದಲ್ಲೇ ಕೇಂದ್ರದ ಪ್ರಮುಖ ಹುದ್ದೆಗಳಿಗೆ ಸೇರಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

VISTARANEWS.COM


on

pm narendra modi with IAS
Koo

ಹೊಸದಿಲ್ಲಿ: ಆಡಳಿತವನ್ನು ಇನ್ನಷ್ಟು ಸುಧಾರಿಸಲು ಹೆಚ್ಚಿನ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಇಪ್ಪತ್ತೈದು ಖಾಸಗಿ ವಲಯಗಳ ತಜ್ಞರು (private sector experts) ಶೀಘ್ರದಲ್ಲೇ ಕೇಂದ್ರದ (central government) ಪ್ರಮುಖ ಹುದ್ದೆಗಳಿಗೆ ಸೇರಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ನೇಮಕಾತಿ ಸಮಿತಿ (ಎಸಿಸಿ) ಮೂರು ಜಂಟಿ ಕಾರ್ಯದರ್ಶಿಗಳು ಮತ್ತು 22 ನಿರ್ದೇಶಕರು/ಉಪ ಕಾರ್ಯದರ್ಶಿಗಳನ್ನು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕ ಮಾಡಲು ಅನುಮೋದಿಸಿದೆ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳ ಹುದ್ದೆಗಳನ್ನು ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ (IPS) ಮತ್ತು ಭಾರತೀಯ ಅರಣ್ಯ ಸೇವೆ (IFoS) ಅಧಿಕಾರಿಗಳು ಹೊಂದಿರುತ್ತಾರೆ.

ಇತ್ತೀಚಿನ ನೇಮಕಗಳನ್ನು ಲ್ಯಾಟರಲ್ ಎಂಟ್ರಿ ಮೋಡ್ (Lateral entry mode) ಮೂಲಕ ಮಾಡಲಾಗುತ್ತಿದೆ. ಇದನ್ನು ಸರ್ಕಾರಿ ಇಲಾಖೆಗಳಲ್ಲಿ ಖಾಸಗಿ ವಲಯದ ತಜ್ಞರ ನೇಮಕಾತಿ ಎಂದು ಉಲ್ಲೇಖಿಸಲಾಗುತ್ತದೆ. ಸರ್ಕಾರಕ್ಕೆ ಹೊಸ ಪ್ರತಿಭೆ ಮತ್ತು ದೃಷ್ಟಿಕೋನವನ್ನು ತರುವ ಗುರಿಯನ್ನು ಇದು ಹೊಂದಿದೆ.

2018ರಲ್ಲಿ ಪ್ರಾರಂಭವಾದ ಲ್ಯಾಟರಲ್ ಎಂಟ್ರಿ ಯೋಜನೆಯಡಿ, ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪ ಕಾರ್ಯದರ್ಶಿ ಮಟ್ಟದಲ್ಲಿ ನೇಮಕಾತಿಗಳನ್ನು ಮಾಡಲಾಗುತ್ತದೆ. ಈ ಹಂತದ ಅಧಿಕಾರಿಗಳು ನೀತಿ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಲ್ಯಾಟರಲ್ ಎಂಟ್ರಿ ಪ್ರಕ್ರಿಯೆಯ ಮೂಲಕ ಬರುವ ಅಧಿಕಾರಿಗಳು ಸರ್ಕಾರಿ ವ್ಯವಸ್ಥೆಯ ಭಾಗವಾಗುತ್ತಾರೆ.

ಸಿಬ್ಬಂದಿ ಸಚಿವಾಲಯವು ಜೂನ್ 2018ರಲ್ಲಿ ಮೊದಲ ಬಾರಿಗೆ ಲ್ಯಾಟರಲ್ ಎಂಟ್ರಿ ಮೋಡ್ ಮೂಲಕ 10 ಜಂಟಿ ಕಾರ್ಯದರ್ಶಿ-ಶ್ರೇಣಿಯ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ನೇಮಕಾತಿಯನ್ನು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಮಾಡಿದೆ.

ಆಯೋಗವು ಅಕ್ಟೋಬರ್ 2021ರಲ್ಲಿ ಮತ್ತೆ 31 ಅಭ್ಯರ್ಥಿಗಳನ್ನು ಜಂಟಿ ಕಾರ್ಯದರ್ಶಿಗಳು (3), ನಿರ್ದೇಶಕರು (19), ಮತ್ತು ಉಪ ಕಾರ್ಯದರ್ಶಿಗಳು (9) ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕ ಮಾಡಲು ಶಿಫಾರಸು ಮಾಡಿದೆ. 10 ಜಂಟಿ ಕಾರ್ಯದರ್ಶಿಗಳು ಮತ್ತು 28 ನಿರ್ದೇಶಕರು/ಉಪ ಕಾರ್ಯದರ್ಶಿಗಳು ಸೇರಿದಂತೆ ಒಟ್ಟು 38 ಖಾಸಗಿ ವಲಯದ ತಜ್ಞರು ಇದುವರೆಗೆ ಸರ್ಕಾರಕ್ಕೆ ಸೇರ್ಪಡೆಗೊಂಡಿದ್ದಾರೆ.

ಪ್ರಸ್ತುತ ಎಂಟು ಜಂಟಿ ಕಾರ್ಯದರ್ಶಿಗಳು, 16 ನಿರ್ದೇಶಕರು ಮತ್ತು ಒಂಬತ್ತು ಉಪ ಕಾರ್ಯದರ್ಶಿಗಳು ಸೇರಿದಂತೆ 33 ಅಂತಹ ತಜ್ಞರು ಪ್ರಮುಖ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಜಂಟಿ ಕಾರ್ಯದರ್ಶಿಗಳು ತಮ್ಮ ಪೂರ್ಣ ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ.

ಲ್ಯಾಟರಲ್ ಎಂಟ್ರಿ ಸ್ಕೀಮ್ ಅಡಿಯಲ್ಲಿ, ಖಾಸಗಿ ವಲಯದಿಂದ ಅಥವಾ ರಾಜ್ಯ ಸರ್ಕಾರ/ಸ್ವಾಯತ್ತ ಸಂಸ್ಥೆಗಳು/ಸಾರ್ವಜನಿಕ ವಲಯದ ಉದ್ಯಮಗಳು ಇತ್ಯಾದಿಗಳಿಂದ ವಿಶೇಷ ಅಗತ್ಯವಿರುವ ಪೋಸ್ಟ್‌ಗಳಿಗೆ ನೇಮಕಾತಿಗಳನ್ನು ಮಾಡಲಾಗುತ್ತದೆ.

ಇದನ್ನೂ ಓದಿ: Bill Gates India Visit: “ಯಾವಾಗಲೂ ಸ್ಫೂರ್ತಿದಾಯಕ… ” ಮೋದಿ ಭೇಟಿ ಬಳಿಕ ಬಿಲ್‌ ಗೇಟ್ಸ್‌ ಹೇಳಿದ್ದೇನು?

Continue Reading
Advertisement
Blast in Bengaluru NIA to take over probe into Rameswaram Cafe bomb blast case
ಕ್ರೈಂ51 seconds ago

Blast in Bengaluru: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್ ಕೇಸ್‌ ತನಿಖೆ NIA ಹೆಗಲಿಗೆ? ಇಂದೇ ಹಸ್ತಾಂತರ!

no abuse
ಕ್ರೈಂ2 mins ago

ಬಾಯಿ ಬಾರದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಗುದ ದ್ವಾರಕ್ಕೆ ಪೆನ್‌ ತುರುಕಿಸಿ ವಿಕೃತಿ ಮೆರೆದ ಸಂಬಂಧಿಕರು

ಕ್ರೀಡೆ19 mins ago

BCCI Annual Contract: ಅಯ್ಯರ್, ಇಶಾನ್​ಗೆ ಗುತ್ತಿಗೆ ಪಟ್ಟಿ ಸೇರಲು ಇನ್ನೂ ಇದೆ ಅವಕಾಶ; ಈ ಷರತ್ತು ಅನ್ವಯ!

Minister MB Patil important meeting with senior officers of Lulu Group
ಕರ್ನಾಟಕ45 mins ago

Bengaluru News: ವಿಜಯಪುರದಲ್ಲಿ ರಫ್ತು ಆಧಾರಿತ ಆಹಾರ ಸಂಸ್ಕರಣ ಘಟಕ, ಸಚಿವ ಎಂ.ಬಿ.ಪಾಟೀಲ್ ಮಹತ್ವದ ಸಭೆ

Rameswaram Cafe blast sketched for 3 months without using a mobile phone
ಬೆಂಗಳೂರು1 hour ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ 3 ತಿಂಗಳಿಂದಲೇ ಸ್ಕೆಚ್‌? ಮೊಬೈಲ್‌ ಬಳಸದೇ ಕೃತ್ಯ!

Bjp Karnataka Former minister Manohar Tahsildar join BJP Is Haveri stronger
ರಾಜಕೀಯ1 hour ago

‌BJP Karnataka: ಬಿಜೆಪಿ ಸೇರಿದ ಮಾಜಿ ಸಚಿವ ಮನೋಹರ್‌ ತಹಸೀಲ್ದಾರ್; ಹಾವೇರಿ ಮತ್ತಷ್ಟು ಸ್ಟ್ರಾಂಗ್?

Unleashing the rage of Yuva The First Single
ಸ್ಯಾಂಡಲ್ ವುಡ್1 hour ago

Yuva Rajkumar: ಇಂದು ಚಾಮರಾಜನಗರದಲ್ಲಿ ‘ಯುವ’ ಪರ್ವ; ಅತಿಥಿಯಾಗಿ ಬರುವ ನಟ ಯಾರು?

Blast in Bengaluru Experimental preparation for serial blasts says CT Ravi
ರಾಜಕೀಯ2 hours ago

Blast in Bengaluru: ಸರಣಿ ಸ್ಫೋಟದ ಪ್ರಯೋಗಾರ್ಥ ರಾಮೇಶ್ವರಂ ಕೆಫೆ ಬ್ಲಾಸ್ಟ್? ಸರ್ಕಾರದ ವಿರುದ್ಧ ಗುಡುಗಿದ ಸಿ.ಟಿ.ರವಿ

mumbai attack
ವಿದೇಶ2 hours ago

Azam Cheema: 2008ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್‌ ಮೈಂಡ್‌ ಅಜಮ್‌ ಚೀಮಾ ಸಾವು

Rameswaram Cafe Blast Suspected travels in BMTC Volvo bus
ಬೆಂಗಳೂರು2 hours ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameswaram Cafe Blast Suspected travels in BMTC Volvo bus
ಬೆಂಗಳೂರು2 hours ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು21 hours ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು23 hours ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ24 hours ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ1 day ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ2 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ4 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ4 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ4 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

ಟ್ರೆಂಡಿಂಗ್‌