ದೇಶ
Anthony Albanese: ಆಗ ಮೋದಿಯನ್ನು ಬಾಸ್ ಎಂದಿದ್ದಕ್ಕೆ ಆಸ್ಟ್ರೇಲಿಯಾ ಪ್ರಧಾನಿಗೆ ಈಗ ವಿಷಾದ? ಅವರು ಹೇಳಿದ್ದೇನು?
Anthony Albanese: ನರೇಂದ್ರ ಮೋದಿ ಅವರು ನಾಲ್ಕು ತಿಂಗಳ ಹಿಂದೆ ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದರು. ಆಗ ಆಂಥೋನಿ ಅಲ್ಬನೀಸ್ ಅವರಿಂದ ಮೋದಿ ಅವರಿಗೆ ಅದ್ಧೂರಿ ಸ್ವಾಗತ ದೊರೆತಿತ್ತು. ಅನಿವಾಸಿ ಭಾರತೀಯರೂ ಮೋದಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದರು.
ಸಿಡ್ನಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ (Anthony Albanese) ಉತ್ತಮ ಸ್ನೇಹಿತರು. ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಮೋದಿ (Narendra Modi) ಅವರು ಆಂಥೋನಿ ಅಲ್ಬನೀಸ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದರು. ಅಲ್ಬನೀಸ್ ಅವರು ಮೋದಿ ಜತೆ ಸೆಲ್ಫಿ ತೆಗೆಸಿಕೊಂಡಿದ್ದರು. ಇದರ ಬೆನ್ನಲ್ಲೇ, ಆಂಥೋನಿ ಅಲ್ಬನೀಸ್ ಅವರಿಗೆ ಪತ್ರಕರ್ತನೊಬ್ಬ ತರ್ಲೆ ಪ್ರಶ್ನೆ ಕೇಳಿದ್ದಾನೆ. “ನೀವು ನರೇಂದ್ರ ಮೋದಿ ಅವರನ್ನು ದಿ ಬಾಸ್ (The Boss) ಎಂದು ಕರೆದಿರುವುದಕ್ಕೆ ಈಗ ಬೇಸರವಿದೆಯೇ” ಎಂದು ಪ್ರಶ್ನೆ ಕೇಳಿದ್ದಕ್ಕೆ. ಇದಕ್ಕೆ ಆಂಥೋನಿ ಅಲ್ಬನೀಸ್, “ಸ್ವಲ್ಪ ರಿಲ್ಯಾಕ್ಸ್ ಆಗು” ಎಂದು ಹೇಳುವ ಮೂಲಕ ಆತನ ಬಾಯಿ ಮುಚ್ಚಿಸಿದ್ದಾರೆ.
ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ ಅವರು, “ನಿಜವಾಗಿಯೂ ನಿನಗೆ ಹಾಗೆ ಅನಿಸುತ್ತದೆಯೇ? ಸ್ವಲ್ಪ ನಿರಾಳವಾಗಿರು. ಅಮೆರಿಕದ ರಾಕ್‌ಸ್ಟಾರ್ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಅವರು ಸಿಡ್ನಿಯ ಫುಟ್ಬಾಲ್ ಮೈದಾನದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಾಗ ನಾನೂ ಅಲ್ಲಿದ್ದೆ. ಅಲ್ಲಿ ಎಷ್ಟು ಜನ ಸೇರಿದ್ದರು ಎಂಬುದನ್ನು ಕಣ್ತುಂಬಿಕೊಂಡಿದ್ದೆ. ಅದೇ ರೀತಿ, ಮೋದಿ ಅವರು ಬಂದಾಗಲೂ ಅಷ್ಟು ಪ್ರಮಾಣದ ಜನ ಸೇರಿದ್ದರು. ಅದಕ್ಕೆ ಹಾಗೆ ಹೇಳಿದ್ದೆ. ನರೇಂದ್ರ ಮೋದಿ ಅವರು ನಮ್ಮ ದೇಶಕ್ಕೆ ಅತಿಥಿಯಾಗಿ ಬಂದಿದ್ದರು. ಅವರನ್ನು ಸ್ವಾಗತಿಸುವುದು ನನ್ನ ಕರ್ತವ್ಯ” ಎಂದು ಹೇಳಿದ್ದಾರೆ. ಭಾರತ ಹಾಗೂ ಕೆನಡಾ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಪತ್ರಕರ್ತನು ಅಲ್ಬನೀಸ್ ಅವರಿಗೆ ಹೀಗೆ ಪ್ರಶ್ನೆ ಕೇಳಿದ್ದಾನೆ ಎಂದು ತಿಳಿದುಬಂದಿದೆ.
Anthony Albanese has told a reporter to “chill out” after he was asked about @dfat expressing concerns over killing of Khalistani Harjit Singh Nijjar.
— Geeta Mohan گیتا موہن गीता मोहन (@Geeta_Mohan) September 19, 2023
Australian and Canadian authorities share intelligence via the Five Eyes agreement, though the Australian government declined to… https://t.co/5BZcJG9QVS pic.twitter.com/ge3j5ZPUeO
ಬಾಸ್ ಎಂದು ಕರೆದಿದ್ದು ಯಾವಾಗ?
ನಾಲ್ಕು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾಗೆ ತೆರಳಿದ್ದರು. ಸಿಡ್ನಿಯ ಫುಟ್ಬಾಲ್ ಮೈದಾನದಲ್ಲಿ ಸುಮಾರು 20 ಸಾವಿರ ಅನಿವಾಸಿ ಭಾರತೀಯರು ಮೋದಿ ಅವರನ್ನು ಕಂಡು ಪುಳಕಿತರಾಗಿದ್ದರು. ಇದೇ ವೇಳೆ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ವೇದಿಕೆ ಮೇಲೆ ನಿಂತಿದ್ದರು. ಆಗ ಆಸ್ಟ್ರೇಲಿಯಾ ಪ್ರಧಾನಿ, ನರೇಂದ್ರ ಮೋದಿ ಅವರನ್ನು ಬಾಸ್ ಎಂದು ಕರೆದಿದ್ದರು.
"The last time I saw someone on this stage was Bruce Springsteen and he did not get the welcome that Prime Minister Modi has got. Prime Minister Modi is the boss," says Australian Prime Minister Anthony Albanese at the community event in Sydney. pic.twitter.com/eZRh7LcCzw
— Parshottam Rupala (@PRupala) May 23, 2023
ಇದನ್ನೂ ಓದಿ: Anthony Albanese: ಬೆಂಗಳೂರಲ್ಲಿ ಶೀಘ್ರ ಆಸ್ಟ್ರೇಲಿಯಾದ ಕಾನ್ಸುಲೇಟ್ ಜನರಲ್ ಆರಂಭ; ಪಿಎಂ ಆಂಥೋನಿ ಅಲ್ಬನೀಸ್
ಮೋದಿ ಅವರನ್ನು ಬಾಸ್ ಎಂದು ಕರೆಯಲು ಆಂಥೋನಿ ಅಲ್ಬನೀಸ್ ಅವರು ಕಾರಣವನ್ನೂ ಕೊಟ್ಟಿದ್ದರು. “ಅಮೆರಿಕದ ರಾಕ್‌ಸ್ಟಾರ್ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಅವರು ಇಲ್ಲಿಗೆ ಬಂದಾಗಲೂ ಇಷ್ಟೊಂದು ಅದ್ಧೂರಿ ಸ್ವಾಗತ ದೊರೆತಿರಲಿಲ್ಲ. ಹಾಗಾಗಿ, ನರೇಂದ್ರ ಮೋದಿ ಅವರೇ ಬಾಸ್” ಎಂದು ಆಂಥೋನಿ ಅಲ್ಬನೀಸ್ ಹೇಳಿದ್ದರು ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಅವರನ್ನು ಅವರ ಅಭಿಮಾನಿಗಳು ‘ದಿ ಬಾಸ್’ ಎಂದು ಕರೆಯುತ್ತಾರೆ. ಹಾಗಾಗಿ, ಅಲ್ಬನೀಸ್ ಅವರು ಮೋದಿ ಅವರನ್ನು ಬಾಸ್ ಎಂದು ಕರೆದಿದ್ದರು.
ದೇಶ
India Canada Row: ಆನೆ ಜತೆ ಇರುವೆ ಜಗಳವಾಡುತ್ತಿದೆ! ಕೆನಡಾಗೆ ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಗೇಲಿ!
India Canada Row: ಭಾರತ ಹಾಗೂ ಕೆನಡಾ ನಡುವಿನ ಬಿಕ್ಕಟ್ಟು ದಿನೇದಿನೆ ಜಾಸ್ತಿಯಾಗುತ್ತಿದೆ. ಅದರಲ್ಲೂ, ಹರ್ದೀಪ್ ಸಿಂಗ್ ನಿಜ್ಜರ್ ವಿಷಯದಲ್ಲಿ ಕೆನಡಾ ಭಾರತದ ವಿರುದ್ಧ ಆರೋಪ ಮಾಡಿರುವ ಕಾರಣ, ತನಿಖೆಗೆ ಭಾರತ ಸಹಕರಿಸಬೇಕು ಎಂದು ಅಮೆರಿಕ ಹೇಳಿದೆ. ಇದರ ಬೆನ್ನಲ್ಲೇ, ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿಯು ಕೆನಡಾವನ್ನು ಗೇಲಿ ಮಾಡಿದ್ದಾರೆ.
ವಾಷಿಂಗ್ಟನ್: ಭಾರತ ಹಾಗೂ ಕೆನಡಾ ನಡುವಿನ ಬಿಕ್ಕಟ್ಟು (India Canada Row) ದಿನೇದಿನೆ ಉಲ್ಬಣವಾಗುತ್ತಿರುವ ಕಾರಣ ಅಮೆರಿಕ ಮಧ್ಯಪ್ರವೇಶಿಸಲು ಯತ್ನಿಸುತ್ತಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ತನಿಖೆ ವಿಚಾರದಲ್ಲಿ ಭಾರತ ಸಹಕರಿಸಬೇಕು ಎಂದೂ ಹೇಳಿದೆ. ಇದರ ಬೆನ್ನಲ್ಲೇ, ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಮೈಕಲ್ ರುಬಿನ್ (Michael Rubin) ಅವರು ಭಾರತದ ಪರ ಬ್ಯಾಟಿಂಗ್ ಮಾಡಿದ್ದಾರೆ. ಹಾಗೆಯೇ, “ಕೆನಡಾ ಭಾರತದ ಜತೆ ಸಂಘರ್ಷಕ್ಕೆ ಇಳಿದಿದೆ ಎಂದರೆ, ಅದು ಇರುವೆಯೊಂದು ಆನೆಯ ಜತೆ ಕಾಳಗಕ್ಕೆ ಇಳಿದಂತೆ” ಎಂದು ಗೇಲಿ ಮಾಡಿದ್ದಾರೆ.
“ಯಾವುದೇ ಎರಡು ದೇಶಗಳು ಸಂಘರ್ಷಕ್ಕೆ ಇಳಿದಾಗ, ರಾಜತಾಂತ್ರಿಕ ಬಿಕ್ಕಟ್ಟು ಆರಂಭವಾದಾಗ ಮೂರನೇ ದೇಶವು ಮಧ್ಯಸ್ಥಿಕೆ ವಹಿಸುವುದು ಸುಲಭ. ಆದರೆ, ಯಾವುದೇ ಒಂದು ದೇಶದ ಪರ ನಿಲ್ಲುವುದು ಕಷ್ಟ. ಈಗ ಭಾರತ ಹಾಗೂ ಕೆನಡಾ ವಿಚಾರದಲ್ಲಿ ಅಮೆರಿಕಕ್ಕೂ ಇದೇ ಆಗುತ್ತಿದೆ. ಆದರೂ, ದ್ವಿಪಕ್ಷೀಯ ಹಾಗೂ ವ್ಯೂಹಾತ್ಮಕ ಸಂಬಂಧದ ವಿಚಾರದಲ್ಲಿ ಅಮೆರಿಕಕ್ಕೆ ಭಾರತವೇ ಪ್ರಮುಖವಾಗಿದೆ. ಅಷ್ಟಕ್ಕೂ, ಕೆನಡಾದ ಪರಿಸ್ಥಿತಿಯು ಆನೆ (ಭಾರತ) ಜತೆ ಇರುವೆ ಕದನಕ್ಕೆ ಇಳಿದಿದೆ” ಎಂದು ಕೆನಡಾಗೆ ಗೇಲಿ ಮಾಡಿದ್ದಾರೆ.
#WATCH | Washington, DC | On allegations by Canada, Michael Rubin, former Pentagon official and a senior fellow at the American Enterprise Institute says "Canadian PM Justin Trudeau has made a huge mistake. He has made allegations in a manner which he has not been able to back.… pic.twitter.com/U5bb4XPUav
— ANI (@ANI) September 23, 2023
ಟ್ರುಡೋ ತುಂಬ ದಿನ ಅಧಿಕಾರದಲ್ಲಿ ಇರಲ್ಲ
ಭಾರತದ ಜತೆ ಏಕೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು ಎಂಬುದಕ್ಕೂ ಮೈಕಲ್ ರುಬಿನ್ ಕಾರಣ ನೀಡಿದ್ದಾರೆ. “ಜಸ್ಟಿನ್ ಟ್ರುಡೋ ಅವರು ತುಂಬ ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ. ಹಾಗಾಗಿ, ಅಮೆರಿಕವು ಭಾರತಕ್ಕೆ ಬೆಂಬಲ ನೀಡಿ, ಜಸ್ಟಿನ್ ಟ್ರುಡೋ ಅಧಿಕಾರದಿಂದ ಕೆಳಗಿಳಿದ ಬಳಿಕ ಉತ್ತಮ ಸಂಬಂಧ ಹೊಂದಬಹುದು” ಎಂದು ಹೇಳಿದ್ದಾರೆ. ಆ ಮೂಲಕ ಜಸ್ಟಿನ್ ಟ್ರುಡೋ ಅವರು ತುಂಬ ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
#WATCH | Washington, DC | On allegations by Canada, Michael Rubin, former Pentagon official and a senior fellow at the American Enterprise Institute says, "… I suspect that the United States doesn't want to be pinned in the corner to choose between 2 friends, but if we have to… pic.twitter.com/tlWr6C6p7e
— ANI (@ANI) September 23, 2023
ಕೆನಡಾ ಪ್ರಧಾನಿಯದ್ದೇ ತಪ್ಪು
ಖಲಿಸ್ತಾನಿ ಉಗ್ರನ ಹತ್ಯೆ ವಿಚಾರದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರದ್ದೇ ದೊಡ್ಡ ತಪ್ಪು ಎಂದು ಮೈಕಲ್ ರುಬಿನ್ ಹೇಳಿದ್ದಾರೆ. “ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಕುರಿತು ಜಸ್ಟಿನ್ ಟ್ರುಡೋ ಅವರಿಗೇ ಸ್ಪಷ್ಟತೆ ಇಲ್ಲ. ಅಷ್ಟಕ್ಕೂ, ಭಾರತದ ವಿರುದ್ಧ ಅವರು ಆರೋಪ ಮಾಡುವ ಮೊದಲು ಯೋಚಿಸಬೇಕಿತ್ತು. ಸಾಕ್ಷ್ಯಗಳೇ ಇಲ್ಲದೆ ಆರೋಪ ಮಾಡಬಾರದಿತ್ತು. ಅಷ್ಟಕ್ಕೂ ಹರ್ದೀಪ್ ಸಿಂಗ್ ನಿಜ್ಜರ್ ಒಬ್ಬ ಉಗ್ರ. ನಮಗೆ ಭಾರತ ಪ್ರಮುಖ, ನಮಗೆ ಭಾರತದ ಜತೆಗಿನ ಸಂಬಂಧ ಮುಖ್ಯವಾಗಬೇಕು” ಎಂದು ಎಂದಿದ್ದಾರೆ.
"Let's not fool ourselves, Nijjar was not simply a plumber any more than Laden was an Engineer. What US did to Laden is really no different than what India is alleged to have done in this case"
— BALA (@erbmjha) September 23, 2023
~ Michael Rubin, US expert . pic.twitter.com/4ebT3Kmc55
ಇದನ್ನೂ ಓದಿ: India Canada Row: ನಿಜ್ಜರ್ ಧಾರ್ಮಿಕ ನಾಯಕನಲ್ಲ, 200 ಜನರ ಕೊಲೆಗಾರ; ಕೆನಡಾಗೆ ಭಾರತ ಪ್ರತ್ಯುತ್ತರ
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ. ಭಾರತದ ಏಜೆಂಟ್‌ಗಳೇ ಹತ್ಯೆ ಮಾಡಿದ್ದಾರೆ ಎಂದು ಜಸ್ಟಿನ್ ಟ್ರುಡೋ ಆರೋಪ ಮಾಡಿರುವುದು ಹಾಗೂ ಇದಕ್ಕೆ ಯಾವುದೇ ಸಾಕ್ಷ್ಯ ಒದಗಿಸದಿರುವುದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ. ಭಾರತ ಕೂಡ ಸಾಕ್ಷ್ಯ ಕೊಡಿ ಎಂದು ಆಗ್ರಹಿಸುವ ಜತೆಗೆ ಕೆನಡಾ ನಾಗರಿಕರಿಗೆ ವೀಸಾ ರದ್ದು ಸೇರಿ ಹಲವು ಕ್ರಮ ತೆಗೆದುಕೊಂಡಿದೆ.
ದೇಶ
India At UNGA: ‘ನಿಮ್ಮ ದೇಶ ನೋಡಿಕೊಳ್ಳಿ’; ವಿಶ್ವಸಂಸ್ಥೆಯಲ್ಲಿ ‘ಕಾಶ್ಮೀರ’ ಪ್ರಸ್ತಾಪಿಸಿದ ಪಾಕ್‌ಗೆ ಭಾರತ ಚಾಟಿ
India At UNGA: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಅವರು ಕಾಶ್ಮೀರ ವಿಷಯ ಪ್ರಸ್ತಾಪಿಸಿದರು. ಕಾಶ್ಮೀರದಲ್ಲಿ ಮೇಲ್ವಿಚಾರಣಾ ತಂಡವನ್ನು ನಿಯೋಜಿಸಬೇಕು ಎಂದಿದ್ದರು. ಹಾಗಾಗಿ, ಭಾರತ ಸರಿಯಾಗಿಯೇ ಪ್ರತ್ಯುತ್ತರ ನೀಡಿದೆ.
ನ್ಯೂಯಾರ್ಕ್: ವಿಶ್ವಸಂಸ್ಥೆ ಸಾಮಾನ್ಯ ಸಭೆಯ (UNGA) 78ನೇ ಅಧಿವೇಶನದಲ್ಲಿ ಜಮ್ಮು-ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ ಪಾಕಿಸ್ತಾನ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಅವರಿಗೆ ಭಾರತ ತಿರುಗೇಟು ನೀಡಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆ ಭಾರತದ (India At UNGA) ಕಾರ್ಯದರ್ಶಿ ಪೆತಲ್ ಗೆಹ್ಲೋಟ್, “ಪಾಕಿಸ್ತಾನವು ಭಾರತದ ಅವಿಭಾಜ್ಯ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಹಾಗೂ ಲಡಾಕ್ ವಿಷಯದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ” ಎಂದು ಚಾಟಿ ಬೀಸಿದ್ದಾರೆ.
“ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಚಾಳಿಯನ್ನು ಪಾಕಿಸ್ತಾನ ಬಿಡಬೇಕು. ಪಾಕಿಸ್ತಾನವು ತನ್ನ ದೇಶದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ದಮನದ ವಿಷಯವನ್ನು ಜಗತ್ತಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಯಾವಾಗಲೂ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಜಮ್ಮು-ಕಾಶ್ಮೀರ ವಿಷಯ ಪ್ರಸ್ತಾಪಿಸಿದೆ. ಆದರೆ, ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಹಾಗಾಗಿ, ನೆರೆರಾಷ್ಟ್ರವು ಮೊದಲು ತನ್ನ ದೇಶದ ಹುಳುಕನ್ನು ಸರಿಪಡಿಸಿಕೊಳ್ಳಬೇಕು” ಎಂದು ಪೆತಲ್ ಗೆಹ್ಲೋಟ್ ಹೇಳಿದ್ದಾರೆ.
#WATCH | First Secretary at United Nations for 2nd Committee of UNGA, Petal Gahlot says "Pakistan has become a habitual offender when it comes to misusing this August forum to peddle baseless and malicious propaganda against India. Member states of the United Nations and other… pic.twitter.com/eIyynFFa1Q
— ANI (@ANI) September 23, 2023
“ಪಾಕಿಸ್ತಾನವು ಭಾರತದ ವಿಚಾರದಲ್ಲಿ ಮೂಗು ತೂರಿಸುವ ಬದಲು ಗಡಿ ಭಯೋತ್ಪಾದನೆ ನಿಗ್ರಹಕ್ಕೆ ಕ್ರಮ ತೆಗೆದುಕೊಳ್ಳಬೇಕು. ಉಗ್ರರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಬಿಡಬೇಕು. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಮಾನವ ಹಕ್ಕುಗಳು ಜಗತ್ತಿನಲ್ಲೇ ಕೆಟ್ಟದಾಗಿದ್ದರೆ, ಅದು ಪಾಕಿಸ್ತಾನದಲ್ಲಿ ಮಾತ್ರ. ಪ್ರತಿ ವರ್ಷ ಪಾಕಿಸ್ತಾನದಲ್ಲಿ ಒಂದು ಸಾವಿರ ಅಲ್ಪಸಂಖ್ಯಾತ ಮಹಿಳೆಯರನ್ನು ಅಪಹರಿಸಿ, ಅವರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಇಂತಹ ಅನಿಷ್ಟಗಳನ್ನು ಪಾಕಿಸ್ತಾನ ನಿರ್ಮೂಲನೆ ಮಾಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: India retaliates to Pak | ಪ್ರಧಾನಿ ಮೋದಿ ಕಟುಕ ಎಂದ ಭುಟ್ಟೋಗೆ 1971ರ ನರಮೇಧ ನೆನಪಿಸಿ, ತಿರುಗೇಟು ನೀಡಿದ ಭಾರತ!
ಪಾಕ್ ಪ್ರಧಾನಿ ಹೇಳಿದ್ದೇನು?
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪಾಕ್ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್, “ಭಾರತ ಹಾಗೂ ಪಾಕಿಸ್ತಾನದಲ್ಲಿ ಶಾಂತಿ ನೆಲೆಸಲು ಜಮ್ಮು-ಕಾಶ್ಮೀರವೇ ನಿರ್ಣಾಯಕವಾಗಿದೆ. ಇದರಿಂದ ಉಭಯ ದೇಶಗಳ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಹಾಗೆಯೇ, ಜಮ್ಮು-ಕಾಶ್ಮೀರದಲ್ಲಿ ವಿಶ್ವಸಂಸ್ಥೆ ಮಿಲಿಟರಿ ಮೇಲ್ವಿಚಾರಣಾ ತಂಡವನ್ನು ನಿಯೋಜಿಸಬೇಕು. ಹಾಗೆಯೇ, ಭಾರತ ಹಾಗೂ ಪಾಕಿಸ್ತಾನ ಮಾತುಕತೆಗೆ ಸಂಬಂಧಿಸಿದಂತೆ ಜಗತ್ತಿನ ರಾಷ್ಟ್ರಗಳು ಭಾರತಕ್ಕೆ ಮನವರಿಕೆ ಮಾಡಬೇಕು” ಎಂದು ಹೇಳಿದ್ದರು.
ದೇಶ
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
Kamal Haasan: ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಬಳಿಕ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ನಟ ಕಮಲ್ ಹಾಸನ್ ಅವರು ಉದಯನಿಧಿ ಸ್ಟಾಲಿನ್ ಪರ ನಿಂತಿದ್ದಾರೆ.
ಚೆನ್ನೈ: “ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದ ಹಾಗೆ. ಅದನ್ನು ನಿರ್ಮೂಲನೆ ಮಾಡಬೇಕು” ಎಂಬ ಹೇಳಿಕೆ ನೀಡಿ ಭಾರಿ ಟೀಕೆಗೆ ಗುರಿಯಾಗಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರಿಗೆ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೂಡ ನೋಟಿಸ್ ನೀಡಿದೆ. ಇದರ ಬೆನ್ನಲ್ಲೇ, ನಟ, ಮಕ್ಕಳ್ ನೀಧಿ ಮೈಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರು ಉದಯನಿಧಿ ಸ್ಟಾಲಿನ್ ಪರ ನಿಂತಿದ್ದಾರೆ. “ಸನಾತನ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ‘ಚಿಕ್ಕ ಮಗು’ ಉದಯನಿಧಿ ಸ್ಟಾಲಿನ್ ಮೇಲೆ ದಾಳಿ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.
“ಸನಾತನ ಧರ್ಮದ ಕುರಿತಂತೆ ಇನ್ನೂ ಚಿಕ್ಕವನಾಗಿರುವ (Young Kid) ಉದಯನಿಧಿ ಸ್ಟಾಲಿನ್ ಅವರ ಮೇಲೆ ದಾಳಿ ನಡೆಸಲಾಗುತ್ತಿದೆ. ಎಲ್ಲರೂ ಅವನ ಮೇಲೆ ಮುಗಿಬಿದ್ದಿದ್ದಾರೆ” ಎಂದು ಕಮಲ್ ಹಾಸನ್ ಹೇಳಿದ್ದಾರೆ. ಆದರೆ, ಅವರು ಯಾವುದೇ ಪಕ್ಷ ಅಥವಾ ಸಂಘಟನೆಯ ಹೆಸರು ಹೇಳಿಲ್ಲ. ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ ಬಳಿಕ ಉದಯನಿಧಿ ಸ್ಟಾಲಿನ್ ವಿರುದ್ಧ ಕೇಳಿಬರುತ್ತಿರುವ ಆಕ್ರೋಶದ ಕುರಿತು ಕಮಲ್ ಹಾಸನ್ ಅವರು ಸಮಾರಂಭವೊಂದರಲ್ಲಿ ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"Young child is being targeted…," Kamal Haasan on 'Sanatana Dharma' row
— ANI Digital (@ani_digital) September 23, 2023
Read @ANI Story | https://t.co/4uFyHSXVep#SanatanaDharma #KamalHaasan #UdhayanidhiStalin pic.twitter.com/ylMZdZ0X8Z
ಸನಾತನ ಕುರಿತೂ ಕಮಲ್ ಹಾಸನ್ ಪ್ರತಿಕ್ರಿಯೆ
ಸನಾತನ ಧರ್ಮದ ಕುರಿತು ಕೂಡ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ. “ನಾವೆಲ್ಲ ಪೆರಿಯಾರ್ ಅವರಿಂದ ಸನಾತನ ಎಂಬ ಪದವನ್ನು ಕೇಳಿದ್ದೇವೆ. ಪೆರಿಯಾರ್ ಅವರು ವಾರಾಣಸಿಯ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ತಿಲಕ ಇಟ್ಟುಕೊಂಡು ಪೂಜೆ ಮಾಡುತ್ತಿದ್ದರು. ಅಂತಹವರು ಎಲ್ಲವನ್ನೂ ಬಿಟ್ಟು ಸಮಾಜ ಸುಧಾರಣೆಗೆ ಇಳಿದರು. ಹಾಗಂತ, ಪೆರಿಯಾರ್ ಅವರನ್ನು ಡಿಎಂಕೆ ಸೇರಿ ಯಾವುದೇ ಪಕ್ಷವು ಸ್ವಂತ ಮಾಡಿಕೊಳ್ಳುವ ಹಾಗಿಲ್ಲ. ಅವರನ್ನು ಇಡೀ ತಮಿಳುನಾಡು ಸ್ವಂತ ಮಾಡಿಕೊಂಡಿದೆ” ಎಂದರು.
ಇದನ್ನೂ ಓದಿ: Udhayanidhi Stalin: ಸನಾತನ ಧರ್ಮ; ಉದಯನಿಧಿ ಸ್ಟಾಲಿನ್‌ಗೆ ಸುಪ್ರೀಂ ನೋಟಿಸ್, ಎದುರಾಯ್ತು ಸಂಕಷ್ಟ
ಏನು ಹೇಳಿದ್ದರು ಉದಯನಿಧಿ ಸ್ಟಾಲಿನ್?
ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಉಲ್ಲೇಖ ಮಾಡಿದ್ದರು. “ ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದ್ದರು.
ದೇಶ
India Canada Row: ನಿಜ್ಜರ್ ಹತ್ಯೆ ಕುರಿತು ಭಾರತಕ್ಕೆ ನಂಬಲರ್ಹ ಮಾಹಿತಿ ನೀಡಿದ್ದೇವೆ; ಕೆನಡಾ ಹೊಸ ರಾಗ
India Canada Row: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಮಾಡಿದ ಆರೋಪಕ್ಕೆ ಸಾಕ್ಷ್ಯ ನೀಡದ ಜಸ್ಟಿನ್ ಟ್ರುಡೋ ಈಗ ಹೊಸ ರಾಗ ತೆಗೆದಿದ್ದಾರೆ. ಭಾರತಕ್ಕೆ ಮೊದಲೇ ಈ ಕುರಿತು ಮಾಹಿತಿ ನೀಡಿದ್ದೇವೆ ಎಂದಿದ್ದಾರೆ. ಆದರೆ, ಯಾವ ಸಾಕ್ಷ್ಯ ನೀಡಲಾಗಿದೆ ಎಂಬುದನ್ನು ಅವರು ಹೇಳಿಲ್ಲ. ಹಾಗಾಗಿ, ಇದು ಬಿಕ್ಕಟ್ಟು ಬಿಗಡಾಯಿಸಲು ಕಾರಣವಾಗಿದೆ.
ಒಟ್ಟಾವ: ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರದಲ್ಲಿ ಸಾಕ್ಷ್ಯಾಧಾರಗಳನ್ನೂ ಕೊಡದೆ ಸುಖಾಸುಮ್ಮನೆ ಭಾರತದ ವಿರುದ್ಧ ಆರೋಪ (India Canada Row) ಮಾಡುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಈಗ ಹೊಸ ರಾಗ ತೆಗೆದಿದ್ದಾರೆ. “ನಿಜ್ಜರ್ ಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಹಲವು ವಾರಗಳ ಹಿಂದೆಯೇ ‘ನಂಬಲರ್ಹ ಆರೋಪಗಳ’ ಕುರಿತು (Credible Allegations) ಮಾಹಿತಿ ನೀಡಿದ್ದೇವೆ” ಎಂದು ಹೇಳಿರುವುದು ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟನ್ನು ಮತ್ತಷ್ಟು ಬಿಗಿಗೊಳಿಸಿದೆ.
“ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತು ನಾನು ಸೋಮವಾರ ಮಾತನಾಡಿದ್ದೇನೆ. ಆದರೆ, ಆತನ ಹತ್ಯೆಯ ಕುರಿತು ಭಾರತಕ್ಕೆ ತುಂಬ ವಾರಗಳ ಹಿಂದೆಯೇ ನಂಬಲರ್ಹ ಆರೋಪಗಳ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ. ತುಂಬ ಗಂಭೀರವಾದ ವಿಚಾರದ ಕುರಿತು ಭಾರತ ಹಾಗೂ ಕೆನಡಾ ಒಗ್ಗೂಡಿ ಕಾರ್ಯನಿರ್ವಹಿಸುವ ಕುರಿತು ಕೂಡ ಮನವರಿಕೆ ಮಾಡಲಾಗಿದೆ. ಗಂಭೀರ ಹತ್ಯೆಯ ವಿಚಾರದಲ್ಲಿ ಭಾರತವು ನಮ್ಮ ಜತೆ ಕೈಗೂಡಿಸುತ್ತದೆ ಎಂಬ ಆಶಾಭಾವನೆಯಲ್ಲಿ ಇದ್ದೇವೆ” ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಜತೆ ಜಂಟಿ ಸುದ್ದಿಗೋಷ್ಠಿ ನಡೆಸುವ ವೇಳೆ ಜಸ್ಟಿನ್ ಟ್ರುಡೋ ಹೇಳಿದ್ದಾರೆ.
ಜಸ್ಟಿನ್ ಟ್ರುಡೋ ಆರೋಪ
#WATCH | On the India-Canada row, Canadian PM Justin Trudeau says, "In regards to India, Canada has shared the credible allegations with India. We did that many weeks ago. We are there to work constructively with India and we hope that they engage with us so that we can get to… pic.twitter.com/lpgAwKfSdN
— ANI (@ANI) September 22, 2023
ಇದರೊಂದಿಗೆ ಭಾರತಕ್ಕೆ ನಾವು ಈಗಾಗಲೇ ಸಾಕ್ಷ್ಯ ನೀಡಿದ್ದೇವೆ, ಆದರೆ ಭಾರತ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬಂತೆ ಜಸ್ಟಿನ್ ಟ್ರುಡೋ ಬಿಂಬಿಸಿದ್ದಾರೆ. ಆದರೆ, ಅವರು ಬೇರೊಂದು ಸುದ್ದಿಗೋಷ್ಠಿ ನಡೆಸುವ ವೇಳೆ ಭಾರತದ ವಿರುದ್ಧದ ಆರೋಪಗಳಿಗೆ ಸಾಕ್ಷ್ಯ ಇದೆಯೇ ಎಂಬ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದಾರೆ. “ಭಾರತದ ವಿರುದ್ಧ ಆರೋಪ ಮಾಡಲು ಬಲವಾದ ಹಾಗೂ ವಿಶ್ವಾಸಾರ್ಹ ಕಾರಣಗಳಿವೆ” ಎಂದು ಜಸ್ಟಿನ್ ಟ್ರುಡೋ ಹೇಳಿದ್ದಾರೆ. ಆದರೆ, ಅವರು ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ ಹಾಗೂ ಇವೆ ಎಂದು ಕೂಡ ಉತ್ತರಿಸಿಲ್ಲ.
ಇದನ್ನೂ ಓದಿ: India Canada Row: ನಿಜ್ಜರ್ ಧಾರ್ಮಿಕ ನಾಯಕನಲ್ಲ, 200 ಜನರ ಕೊಲೆಗಾರ; ಕೆನಡಾಗೆ ಭಾರತ ಪ್ರತ್ಯುತ್ತರ
ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಕೆನಡಾದ ನಾಗರಿಕ ಎಂದು ಪರಿಗಣಿಸಿ ಜಸ್ಟಿನ್ ಟ್ರುಡೋ ಭಾರತದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. “ಕೆನಡಾ ನಾಗರಿಕರ ಹಕ್ಕುಗಳನ್ನು ಹಾಗೂ ದೇಶದ ಮೌಲ್ಯಗಳನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿದೆ” ಎಂದು ಅವರು ಹೇಳಿದ್ದಾರೆ. ಆದರೆ, ಅವರು ಭಾರತಕ್ಕೆ ಪ್ರಚೋದನೆ ನೀಡುವುದಿಲ್ಲ ಎಂದು ಹೇಳುತ್ತಲೇ ಇಂತಹ ಆರೋಪ ಮಾಡಿದ್ದಾರೆ. ಮತ್ತೊಂದೆಡೆ, ಜಸ್ಟಿನ್ ಟ್ರುಡೋ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅಮೆರಿಕ, ತನಿಖೆಗೆ ಭಾರತ ಸಹಕಾರ ನೀಡಬೇಕು ಎಂದಿದೆ. ಆದರೆ, ಸರಿಯಾದ ಸಾಕ್ಷ್ಯಾಧಾರ ಬೇಕು ಎಂದು ಭಾರತ ಸ್ಪಷ್ಟಪಡಿಸಿದೆ.
-
ಪ್ರಮುಖ ಸುದ್ದಿ17 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ23 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ7 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಗ್ಯಾಜೆಟ್ಸ್20 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ದೇಶ19 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಕ್ರೈಂ18 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ಕರ್ನಾಟಕ13 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಉಡುಪಿ16 hours ago
Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ