ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಮಾತನಾಡಿದ್ದ ಕಾಂಗ್ರೆಸ್ ನಾಯಕ ಕೌಸ್ತವ್​ ಬಾಗ್ಚಿ ಅರೆಸ್ಟ್​​ - Vistara News

ದೇಶ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಮಾತನಾಡಿದ್ದ ಕಾಂಗ್ರೆಸ್ ನಾಯಕ ಕೌಸ್ತವ್​ ಬಾಗ್ಚಿ ಅರೆಸ್ಟ್​​

ಪಶ್ಚಿಮ ಬಂಗಾಳದ ಸಾಗರ್ದಿಘಿ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಪಡೆದಿದ್ದರು. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು. ಆ ಬಗ್ಗೆ ಕೌಸ್ತವ್​ ಟೀಕಿಸಿದ್ದರು.

VISTARANEWS.COM


on

Congress leader Koustav Bagchi Arrested by Kolkata police
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದಡಿ ಕಾಂಗ್ರೆಸ್ ನಾಯಕ, ವಕೀಲ ಕೌಸ್ತವ್​ ಬಾಗ್ಚಿ ಅವರನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದಾರೆ. ಸುದೀರ್ಘ ಸಮಯದಿಂದಲೂ ಕೌಸ್ತವ್​ ಬಾಗ್ಚಿ ಅವರು ಮಮತಾ ಬ್ಯಾನರ್ಜಿ ಮತ್ತು ಅವರ ಸರ್ಕಾರದ ಆಡಳಿತ ಕ್ರಮವನ್ನು ಪ್ರಶ್ನಿಸುತ್ತ, ವಿರೋಧಿಸುತ್ತಲೇ ಇದ್ದರು. ಇತ್ತೀಚೆಗೆ ಟಿವಿ ಶೋ ಒಂದರಲ್ಲಿ ಪಾಲ್ಗೊಂಡಿದ್ದ ಅವರು ಮಮತಾ ಬ್ಯಾನರ್ಜಿ ಬಗ್ಗೆ ಮಾತನಾಡಿದ್ದರು. ಅದರ ಬೆನ್ನಲ್ಲೇ ಬರ್ಟೊಲ್ಲಾ ಪೊಲೀಸ್ ಠಾಣೆಯಲ್ಲಿ ಬಾಗ್ಚಿ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಅವರ ಬಂಧನವಾಗಿದೆ.

ಕೋಲ್ಕತ್ತ ಪೊಲೀಸರು ಕೌಸ್ತವ್​ ಬಾಗ್ಚಿ ಮನೆಗೆ ಶನಿವಾರ ಮುಂಜಾನೆ 3ಗಂಟೆಯ ಹೊತ್ತಿಗೆ ತಲುಪಿದ್ದರು. ಪೊಲೀಸರು ಮತ್ತು ಬಾಗ್ಚಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಅದಾದ ಬಳಿಕ ಸುಮಾರು 7.30ರ ಹೊತ್ತಿಗೆ ಬಾಗ್ಚಿ ಅರೆಸ್ಟ್ ಆಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೌಸ್ತವ್​ ಬಾಗ್ವಿ ಪೋಸ್ಟ್ ಹಾಕಿ ‘ಕೊನೆಗೂ ನಾನು ಅರೆಸ್ಟ್ ಆದೆ’ ಎಂದಿದ್ದಾರೆ. ಇನ್ನು ಕೌಸ್ತವ್​ ಬಾಗ್ಚಿ ಬಂಧನದ ಸುದ್ದಿ ಕೇಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಬರ್ಟೊಲ್ಲಾ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕೋಲ್ಕತ್ತ ಪೊಲೀಸರು ಇಂದು ಕೌಸ್ತವ್​ ಅವರನ್ನು ಬ್ಯಾಂಕ್ಶಾಲ್ ನ್ಯಾಯಾಲಯದ ಎದುರು ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ.

ಪಶ್ಚಿಮ ಬಂಗಾಳದ ಸಾಗರ್ದಿಘಿ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಪಡೆದಿದ್ದರು. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು. ಅಷ್ಟೇ ಅಲ್ಲ , ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಂಜನ್​ ಅಧೀರ್ ಚೌಧರಿ ವಿರುದ್ಧ ಮಾತನಾಡಿದ್ದರು. ಅದೇ ವಿಷಯ ಇಟ್ಟುಕೊಂಡು ಕೌಸ್ತವ್ ಅವರು ಮಮತಾ ಬ್ಯಾನರ್ಜಿಯವರನ್ನು ಟೀಕಿಸಿದ್ದರು. ಹೀಗಾಗಿ ಅವರನ್ನು ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಮೈತ್ರಿಯಿಲ್ಲ, ಏಕಾಂಗಿ ಸ್ಪರ್ಧೆ; ಸ್ಪಷ್ಟಪಡಿಸಿದ ಮಮತಾ ಬ್ಯಾನರ್ಜಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Sebi Fines: ವಂಚನೆ ಪ್ರಕರಣ; ಟಿವಿ ನಿರೂಪಕ, ವಿಶ್ಲೇಷಕನಿಗೆ ತಲಾ 1 ಕೋಟಿ ರೂ. ದಂಡ ವಿಧಿಸಿದ ಸೆಬಿ

Sebi Fines: ವಂಚನೆ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಮಂಗಳವಾರ ಸಿಎನ್‌ಬಿಸಿ ಅವಾಝ್‌ನ ಮಾಜಿ ಮಾರ್ಕೆಟ್‌ ಸಂಪಾದಕ, ನಿರೂಪಕ ಪ್ರದೀಪ್‌ ಪಾಂಡ್ಯ ಮತ್ತು ತಾಂತ್ರಿಕ ವಿಶ್ಲೇಷಕ ಅಲ್ಪೇಶ್ ಫುರಿಯಾ ಅವರಿಗೆ ತಲಾ 1 ಕೋಟಿ ರೂ.ಗಳ ದಂಡ ವಿಧಿಸಿದೆ. ಮಾತ್ರವಲ್ಲ ಇವರಿಬ್ಬರ ಜತೆಗೆ ಇತರ ಆರು ಘಟಕಗಳನ್ನು ಐದು ವರ್ಷಗಳ ಕಾಲ ಷೇರು ಮಾರುಕಟ್ಟೆಯಿಂದ ನಿಷೇಧಿಸಲಾಗಿದೆ.

VISTARANEWS.COM


on

Sebi Fines
Koo

ಮುಂಬೈ: ವಂಚನೆ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಮಂಗಳವಾರ ಸಿಎನ್‌ಬಿಸಿ ಅವಾಝ್‌ನ ಮಾಜಿ ಮಾರ್ಕೆಟ್‌ ಸಂಪಾದಕ, ನಿರೂಪಕ ಪ್ರದೀಪ್‌ ಪಾಂಡ್ಯ ಮತ್ತು ತಾಂತ್ರಿಕ ವಿಶ್ಲೇಷಕ ಅಲ್ಪೇಶ್ ಫುರಿಯಾ ಅವರಿಗೆ ತಲಾ 1 ಕೋಟಿ ರೂ.ಗಳ ದಂಡ ವಿಧಿಸಿದೆ (Sebi Fines). ಮಾತ್ರವಲ್ಲ ಇವರಿಬ್ಬರ ಜತೆಗೆ ಇತರ ಆರು ಘಟಕಗಳನ್ನು ಐದು ವರ್ಷಗಳ ಕಾಲ ಷೇರು ಮಾರುಕಟ್ಟೆಯಿಂದ ನಿಷೇಧಿಸಲಾಗಿದೆ. ಅಲ್ಪೇಶ್ ಫುರಿಯಾ (HUF), ಅಲ್ಪಾ ಫುರಿಯಾ, ಮನೀಶ್ ಫುರಿಯಾ, ಮನೀಶ್ ಫುರಿಯಾ (HUF), ಮಹಾನ್ ಇನ್ವೆಸ್ಟ್‌ಮೆಂಟ್‌ ಮತ್ತು ತೋಶೀ ಟ್ರೇಡ್‌ಗೆ ತಲಾ 10 ಲಕ್ಷ ರೂ. ದಂಡ ವಿಧಿಸಲಾಗಿದೆ.

ಸಿಎನ್‌ಬಿಸಿ ಅವಾಝ್‌ ಚಾನಲ್‌ನಲ್ಲಿ ಪ್ರದೀಪ್ ಪಾಂಡ್ಯ ಅಥವಾ ಅಲ್ಪೇಶ್ ಫುರಿಯಾ ನೀಡಿದ ಸ್ಟಾಕ್ ಶಿಫಾರಸುಗಳಿಗೆ ಅನುಗುಣವಾಗಿ ಅಲ್ಪೇಶ್ ಗ್ರೂಪ್ ಘಟಕಗಳು ಮೋಸದ ವಹಿವಾಟುಗಳನ್ನು ನಡೆಸಿದ್ದವು ಎಂದು ಮೂಲಗಳು ತಿಳಿಸಿದೆ.

“ವೈಯಕ್ತಿಕ ಲಾಭಕ್ಕಾಗಿ ಮಾಹಿತಿ ಮುಚ್ಚಿಟ್ಟುಕೊಂಡಿರುವುದು ಮತ್ತು ದುರುಪಯೋಗ ಪಡಿಸಿರುವುದು ತನಿಖೆ ವೇಳೆ ಕಂಡು ಬಂದಿದೆ” ಎಂದು ಸೆಬಿ ಹೇಳಿದೆ. “ಪ್ರಸ್ತುತ ಇದು ಕ್ಲಾಸಿಕಲ್ ಫ್ರಂಟ್ ರನ್ನಿಂಗ್ ಪ್ರಕರಣವನ್ನು ಹೋಲುತ್ತದೆʼʼ ಎಂದೂ ತಿಳಿಸಿದೆ.

ʼʼಪ್ರದೀಪ್ ಪಾಂಡ್ಯ, ಅಲ್ಪೇಶ್ ಫುರಿಯಾ ಮತ್ತು ಇತರ ಆರು ಸಂಸ್ಥೆಗಳು ಸೆಕ್ಯುರಿಟಿ ಮಾರುಕಟ್ಟೆಯನ್ನು ಪ್ರವೇಶಿಸದಂತೆ ಸೆಬಿ ನಿರ್ಬಂಧ ವಿಧಿಸಿದೆ ಮತ್ತು ಐದು ವರ್ಷಗಳ ಅವಧಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸೆಕ್ಯುರಿಟಿ ಖರೀದಿಸುವುದು, ಮಾರಾಟ ಮಾಡುವುದು ಅಥವಾ ವ್ಯವಹರಿಸುವುದನ್ನು ಅಥವಾ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದುವುದನ್ನು ನಿಷೇಧಿಸಿದೆʼʼ ಎಂದು ಮೂಲಗಳು ಹೇಳಿವೆ.

ಪ್ರದೀಪ್ ಪಾಂಡ್ಯ 2021ರ ಆಗಸ್ಟ್‌ವರೆಗೆ ಸಿಎನ್‌ಬಿಸಿ ಅವಾಝ್‌ನಲ್ಲಿ ವಿವಿಧ ಕಾರ್ಯಕ್ರಮಗಳ ನಿರೂಪಕ / ಸಹ-ನಿರೂಪಕರಾಗಿದ್ದರು. ಅಲ್ಪೇಶ್ ಫುರಿಯಾ ಚಾನಲ್‌ನಲ್ಲಿ ಅತಿಥಿ ತಜ್ಞರಾಗಿ ಕಾಣಿಸಿಕೊಂಡಿದ್ದರು ಮತ್ತು ಅವರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸ್ಟಾಕ್ ಶಿಫಾರಸು ಮಾಡುತ್ತಿದ್ದರು.

ಸೆಬಿ ಪ್ರಕಾರ, ಅಲ್ಪೇಶ್ ಫುರಿಯಾ ಮತ್ತು ಸಂಬಂಧಿತ ಖಾತೆಗಳು 10.73 ಕೋಟಿ ರೂ.ಗಳ ಕಾನೂನುಬಾಹಿರ ಲಾಭವನ್ನು ಗಳಿಸಿವೆ ಮತ್ತು ಇದರಲ್ಲಿ 8.4 ಕೋಟಿ ರೂ.ಗಳನ್ನು ಈಗಾಗಲೇ ಸೆಬಿ ಮುಟ್ಟುಗೋಲು ಹಾಕಿಕೊಂಡಿದೆ ಮತ್ತು ಈಗ ಉಳಿದ 2.34 ಕೋಟಿ ರೂ.ಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: SEBI : ಹೂಡಿಕೆದಾರರ ಪರ ಸೆಬಿ ಕೈಗೊಂಡ ಮಹತ್ವದ ನಿರ್ಧಾರಗಳು ಯಾವುದು?

“ಪ್ರದೀಪ್ ಪಾಂಡ್ಯ ಸಿಎನ್ಬಿಸಿ ಆವಾಝ್‌ನಲ್ಲಿ ನಿರೂಪಕರಾಗಿದ್ದಾಗ ಮುಂಬರುವ ಸ್ಟಾಕ್ ಶಿಫಾರಸುಗಳ ಬಗ್ಗೆ ಗೌಪ್ಯ ಮಾಹಿತಿಯನ್ನು ಅಲ್ಪೇಶ್ ಫುರಿಯಾ ಅವರೊಂದಿಗೆ ಹಂಚಿಕೊಂಡಿದ್ದರು. ಅಲ್ಪೇಶ್ ಫುರಿಯಾ ಈ ವಿಶೇಷ ಮಾಹಿತಿಯನ್ನು ಬಂಡವಾಳ ಮಾಡಿಕೊಂಡು, ತಮ್ಮ ಸ್ವಂತ ಖಾತೆಗಳು ಮತ್ತು ಸಂಬಂಧಿತ ಸಂಸ್ಥೆಗಳ ಮೂಲಕ ವಹಿವಾಟುಗಳನ್ನು ನಿರ್ವಹಿಸಿದ್ದರು. ಈ ಶಿಫಾರಸುಗಳನ್ನು ಸಾರ್ವಜನಿಕವಾಗಿ ಪ್ರಸಾರ ಮಾಡುವ ಮೊದಲು ಲಾಭ ಗಳಿಸಿಕೊಂಡಿದ್ದರುʼʼ ಎಂದು ಸೆಬಿ ವರದಿಯಲ್ಲಿ ವಿವರಿಸಿದೆ.

Continue Reading

ಪ್ರಮುಖ ಸುದ್ದಿ

Lok Sabha Election : ಇನ್ನಿಬ್ಬರು ಸದಸ್ಯರು ಕಡಿಮೆಯಾದರೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಗೆ ಪ್ರತಿಪಕ್ಷ ಹುದ್ದೆಯೂ ನಷ್ಟ!

Lok Sabha Election :ಪ್ರಸ್ತುತ ಲೆಕ್ಕಾಚಾರದ ಪ್ರಕಾರ 90 ಸದಸ್ಯರನ್ನು ಹೊಂದಿರುವ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್ 26, ತೃಣಮೂಲ ಕಾಂಗ್ರೆಸ್ 13 ಮತ್ತು ವೈಎಸ್ಆರ್ ಕಾಂಗ್ರೆಸ್ 11 ಸದಸ್ಯರನ್ನು ಹೊಂದಿದೆ. ಯಾವುದೇ ಪಕ್ಷವು ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಅಲಂಕರಿಸಲು ಕನಿಷ್ಠ 25 ಸದಸ್ಯರನ್ನು ಹೊಂದಿರಬೇಕು.

VISTARANEWS.COM


on

Lok Sabha Election
Koo

ಬೆಂಗಳೂರು: ಲೋಕಸಭೆಯಲ್ಲಿ (Lok Sabha Election ) ಕಾಂಗ್ರೆಸ್​ ಪಡೆದಿರುವ ಯಶಸ್ಸು ಆ ಪಕ್ಷಕ್ಕೆ ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸ್ಥಾನಕ್ಕೆ ಕುತ್ತು ತರುವ ಅಪಾಯನ್ನು ಒಡ್ಡಿದೆ. ಕಾಂಗ್ರೆಸ್ ತನ್ನ ಇಬ್ಬರು ರಾಜ್ಯಸಭೆ ಸದಸ್ಯರಾದ ಕೆ.ಸಿ.ವೇಣುಗೋಪಾಲ್ ಮತ್ತು ದೀಪೇಂದರ್ ಹೂಡಾ ಲೋಕಸಭೆಗೆ ಆಯ್ಕೆಯಾದ ಬಳಿಕ ಆ ಪಕ್ಷದ ರಾಜ್ಯಸಭಾ ಸದಸ್ಯರ ಸಂಖ್ಯೆ 26 ಸದಸ್ಯರಿಗೆ ಇಳಿದಿದೆ. ಯಾವುದೇ ಪಕ್ಷವು ವಿರೋಧ ಪಕ್ಷದ ನಾಯಕನ ಸ್ಥಾನ ಅಲಂಕರಿಸಲು ಕನಿಷ್ಠ 25 ಸದಸ್ಯರನ್ನು ಹೊಂದಿರಬೇಕು. ಹೀಗಾಗಿ ಇನ್ನಿಬ್ಬರು ಸದಸ್ಯರು ಸ್ಥಾನ ಕಳೆದುಕೊಂಡರೆ ಕಾಂಗ್ರೆಸ್ ಪ್ರಮುಖ ಸ್ಥಾನವನ್ನು ನಷ್ಟ ಮಾಡಿಕೊಳ್ಳಲಿದೆ.

ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರದಿಂದ ತಲಾ ಎರಡು, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಮತ್ತು ತ್ರಿಪುರಾದಿಂದ ತಲಾ ಒಂದು ಸೇರಿದಂತೆ ರಾಜ್ಯಸಭೆಯಲ್ಲಿ ಒಟ್ಟು 10 ಸ್ಥಾನಗಳು ಖಾಲಿ ಇವೆ. ಈ ಪೈಕಿ ಏಳು ಸಂಸದರು ಬಿಜೆಪಿಗೆ ಸೇರಿದವರು. ಇಬ್ಬರು ಕಾಂಗ್ರೆಸ್ ಮತ್ತು ಒಬ್ಬರು ರಾಷ್ಟ್ರೀಯ ಜನತಾ ದಳದವರಾಗಿದ್ದಾರೆ. ಬಿಜೆಪಿ ಎಲ್ಲಾ ಏಳು ಸ್ಥಾನಗಳನ್ನು ಉಳಿಸಿಕೊಳ್ಳಲಿದೆ. ಕಾಂಗ್ರೆಸ್ ಮತ್ತು ಆರ್​ಜೆಡಿಯಿಂದ ಮೂರು ಹೆಚ್ಚುವರಿ ಸ್ಥಾನಗಳನ್ನೂ ಪಡೆದುಕೊಳ್ಳಲಿದೆ.

ಏಕೈಕ ಅತಿದೊಡ್ಡ ಪಕ್ಷ

ಪ್ರಸ್ತುತ ಲೆಕ್ಕಾಚಾರದ ಪ್ರಕಾರ 90 ಸದಸ್ಯರನ್ನು ಹೊಂದಿರುವ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್ 26, ತೃಣಮೂಲ ಕಾಂಗ್ರೆಸ್ 13 ಮತ್ತು ವೈಎಸ್ಆರ್ ಕಾಂಗ್ರೆಸ್ 11 ಸದಸ್ಯರನ್ನು ಹೊಂದಿದೆ. ಯಾವುದೇ ಪಕ್ಷವು ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಅಲಂಕರಿಸಲು ಕನಿಷ್ಠ 25 ಸದಸ್ಯರನ್ನು ಹೊಂದಿರಬೇಕು. ಪ್ರಸ್ತುತ ಈ ಹುದ್ದೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ok Sabha Election : ಬಿಜೆಪಿ-ಜೆಡಿಎಸ್ ಜತೆಯಾಗಿ ಸ್ಪರ್ಧಿಸಿದರೆ ವಿಧಾನಸಭೆ ಚುನಾವಣೆಯಲ್ಲಿ 142 ಸ್ಥಾನ!

ವೇಣುಗೋಪಾಲ್ ಮತ್ತು ಹೂಡಾ ಅವರಲ್ಲದೆ, ಬಿಜೆಪಿಯ ಪಿಯೂಷ್ ಗೋಯಲ್, ಬಿಪ್ಲಬ್ ಕುಮಾರ್ ದೇಬ್, ಜ್ಯೋತಿರಾದಿತ್ಯ ಎಂ ಸಿಂಧಿಯಾ, ವಿವೇಕ್ ಠಾಕೂರ್, ಸರ್ಬಾನಂದ ಸೋನೊವಾಲ್, ಕಾಮಾಕ್ಯ ಪ್ರಸಾದ್ ತಾಸಾ ಮತ್ತು ಉದಯನ್ ರಾಜೆ ಭೋಂಸ್ಲೆ ಸದಸ್ಯರು. ಗೋಯಲ್ ಅವರ ನಿರ್ಗಮನದೊಂದಿಗೆ, ಬಿಜೆಪಿ ಕೂಡ ಸದನದ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾಗುತ್ತದೆ. ಪಾಟಲೀಪುತ್ರ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಆರ್​ಜೆಡಿ ನಾಯಕಿ ಮಿಸಾ ಭಾರತಿ ಕೂಡ ಮೇಲ್ಮನೆಯ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ.

Continue Reading

ದೇಶ

Chandrababu Naidu: ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪದಗ್ರಹಣ

Chandrababu Naidu: ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಟಿಡಿಪಿ ಮುಖ್ಯಸ್ಥ ಎನ್.​ ಚಂದ್ರಬಾಬು ನಾಯ್ಡು ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬುಧವಾರ (ಜೂನ್‌ 12) ರಾಜ್ಯಪಾಲ ಅಬ್ದುಲ್ ನಜೀರ್ ಅವರು ಪ್ರಮಾಣ ವಚನ ಬೋಧಿಸಿದರು. ಜನಸೇನಾ ಪಾರ್ಟಿಯ ಪವನ್‌ ಕಲ್ಯಾಣ್‌ ಕೂಡ ಈ ವೇಳೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

VISTARANEWS.COM


on

Chandrababu Naidu
Koo

ವಿಜಯವಾಡ: ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಟಿಡಿಪಿ ಮುಖ್ಯಸ್ಥ ಎನ್.​ ಚಂದ್ರಬಾಬು ನಾಯ್ಡು (Chandrababu Naidu) ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬುಧವಾರ (ಜೂನ್‌ 12) ರಾಜ್ಯಪಾಲ ಅಬ್ದುಲ್ ನಜೀರ್ ಅವರು ಪ್ರಮಾಣ ವಚನ ಬೋಧಿಸಿದರು. ಜನಸೇನಾ ಪಾರ್ಟಿಯ ಪವನ್‌ ಕಲ್ಯಾಣ್‌ ಕೂಡ ಈ ವೇಳೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವಿಜಯವಾಡದ ಗನ್ನವರಂ ವಿಮಾನ ನಿಲ್ದಾಣದ ಬಳಿಯ ಕೇಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಪ್ರಮಾಣ ವಚನ ಸಮಾರಂಭ ನಡೆದಿದ್ದು, ಎನ್‌ಡಿಎ ಒಕ್ಕೂಟದ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಚಂದ್ರಬಾಬು ನಾಯ್ಡು ಅವರ ಪುತ್ರ ಮತ್ತು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್, ಟಿಡಿಪಿಯ ಆಂಧ್ರಪ್ರದೇಶ ಘಟಕದ ಅಧ್ಯಕ್ಷ ಕೆ.ಅಚ್ಚಣ್ಣ ನಾಯ್ಡು ಮತ್ತು ಜನಸೇನಾ ಪಾರ್ಟಿಯ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ನಾದೆಂಡ್ಲಾ ಮನೋಹರ್ ಮತ್ತಿತರರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಮುಖರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅಮಿತ್‌ ಶಾ, ಜೆ.ಪಿ.ನಡ್ಡಾ, ನಿತಿನ್‌ ಗಡ್ಕರಿ, ರಾಮ್‌ದಾಸ್‌ ಅಥವಾಳೆ, ಅನುಪ್ರಿಯಾ ಪಟೇಲ್‌, ಚಿರಾಗ್‌ ಪಾಸ್ವಾನ್‌, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂದೆ, ಎನ್‌ಚಿಪಿ ನಾಯಕರಾದ ಪ್ರಫುಲ್‌ ಪಟೇಲ್‌, ಮಾಜಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತಿತರರು ಪಾಲ್ಗೊಂಡಿದ್ದರು.

ಆಂಧ್ರ ಪ್ರದೇಶ ವಿಧಾನ ಸಭೆಯ 175 ಸೀಟುಗಳ ಪೈಕಿ ಎನ್‌ಡಿಎ 164 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಈ ಪೈಕಿ ಟಿಡಿಪಿ 135, ಜನಸೇನಾ ಪಾರ್ಟಿ 21 ಮತ್ತು ಬಿಜೆಪಿ 8 ಕಡೆ ಗೆದ್ದಿದೆ. ಮಂಗಳವಾರ ತಡರಾತ್ರಿ ಅಮರಾವತಿಯ ತಮ್ಮ ನಿವಾಸದಲ್ಲಿ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರೊಂದಿಗೆ ಸಭೆ ನಡೆಸಿದ ನಂತರ ಚಂದ್ರಬಾಬು ನಾಯ್ಡು ತಮ್ಮ ಸಚಿವರ ತಂಡವನ್ನು ಅಂತಿಮಗೊಳಿಸಿದ್ದರು. ಸತ್ಯ ಕುಮಾರ್ ಯಾದವ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿಯ ಏಕೈಕ ಶಾಸಕ. ಜನಸೇನಾ ಪಾರ್ಟಿಯಿಂದ ಪವನ್ ಕಲ್ಯಾಣ್, ನಾದೆಂಡ್ಲಾ ಮನೋಹರ್ ಮತ್ತು ಕಂದುಲಾ ದುರ್ಗೇಶ್ ಮೂವರು ಸಚಿವರಾಗಿ ಆಯ್ಕೆಯಾಗಿದ್ದಾರೆ. ಈ ಸಚಿವ ಸಂಪುಟದಲ್ಲಿ 17 ಹೊಸ ಮುಖಗಳಿವೆ. ಸಂಪುಟದಲ್ಲಿ ಮೂವರು ಮಹಿಳೆಯರಿದ್ದಾರೆ.

ಚಂದ್ರಬಾಬು ನಾಯ್ಡು 2014ರಲ್ಲಿ ವಿಭಜಿತ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದರು. ಅವರು 2019ರ ಚುನಾವಣೆಯಲ್ಲಿ ಸೋತು 2024ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು. ಇದೀಗ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಮರಳಿದ್ದಾರೆ. ಮಂಗಳವಾರ ವಿಜಯವಾಡದ ಎ-ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಟಿಡಿಪಿ, ಬಿಜೆಪಿ ಮತ್ತು ಪವನ್‌ ಕಲ್ಯಾಣ ನೇತೃತ್ವದ ಜನಸೇನಾ ಪಾರ್ಟಿ(JSP)ಯ ಶಾಸಕರು ಪಾಲ್ಗೊಂಡಿದ್ದರು. ಈ ವೇಳೆ ಮುಖ್ಯಮಂತ್ರಿ ಹುದ್ದೆಗೆ ಚಂದ್ರಬಾಬು ನಾಯ್ಡು ಅವರ ಹೆಸರನ್ನು ಪವನ್‌ ಕಲ್ಯಾಣ ಪ್ರಸ್ತಾಪಿಸಿದ್ದರು. ಇದಕ್ಕೆ ಬಿಜೆಪಿಯ ಡಿ.ಪುರಂದರೇಶ್ವರಿ ಬೆಂಬಲ ಸೂಚಿಸಿದರು. ಬಳಿಕ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: Chandrababu Naidu: ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ; ಚಂದ್ರಬಾಬು ನಾಯ್ಡು ಘೋಷಣೆ

Continue Reading

ರಾಜಕೀಯ

Viral News: ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯಿದೆ ಜಾರಿ?

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಜಾರಿಗೊಳಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದೆ. ವೈರಲ್ (Viral News) ಆಗಿರುವ ಈ ಸುದ್ದಿ ಸತ್ಯವೇ ಸುಳ್ಳೇ ಎಂಬ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಆದರೆ ಈ ಸುದ್ದಿ ಹುಟ್ಟಿಕೊಳ್ಳಲು ಕಾರಣ ಏನು? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Viral News
Koo

ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು (Population Control Bill) ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ ಉತ್ತರಪ್ರದೇಶದಲ್ಲಿ (uttarpradesh) ಜಾರಿಗೊಳಿಸಿದೆ ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ (Viral News) ಭಾರಿ ಚರ್ಚೆ ನಡೆಯುತ್ತಿದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಎಲ್ಲ ಸರ್ಕಾರಿ ಸಬ್ಸಿಡಿಗಳು ಮತ್ತು ಸೌಲಭ್ಯಗಳನ್ನು ಸರ್ಕಾರ ತೆಗೆದುಹಾಕಿದೆ. ಮಾತ್ರವಲ್ಲದೇ ಸ್ಥಳೀಯ ಚುನಾವಣೆಯಲ್ಲೂ ಭಾಗವಹಿಸುವಂತಿಲ್ಲ ಎಂದು ಎಕ್ಸ್ (x) ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿರುವ ಈ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ ಇದು ಸುಳ್ಳು. ಉತ್ತರಪ್ರದೇಶದಲ್ಲಿ ಅಂತಹ ಯಾವುದೇ ಕಾನೂನು ಜಾರಿಯಾಗಿಲ್ಲ ಎಂಬುದು ಮಾಧ್ಯಮಗಳು ನಡೆಸಿದ ತನಿಖೆಯಿಂದ ತಿಳಿದು ಬಂದಿದೆ.

ಉತ್ತರಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆಯ ಕರಡನ್ನು 2021ರಲ್ಲಿ ಬಿಡುಗಡೆ ಮಾಡಲಾಯಿತಾದರೂ ಅದನ್ನು ಇದುವರೆಗೆ ಶಾಸಕಾಂಗ ಸಭೆಯಲ್ಲಿ ಮಂಡಿಸಲಾಗಿಲ್ಲ.

ಉತ್ತರಪ್ರದೇಶದ ಜನಸಂಖ್ಯಾ ನಿಯಂತ್ರಣ ಮಸೂದೆಯ ಕರಡನ್ನು ರಾಜ್ಯ ಕಾನೂನು ಆಯೋಗವು ರಚಿಸಿದ್ದು, 2021ರ ಜುಲೈ 10ರಂದು ಅದರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸಾರ್ವಜನಿಕರು ತಮ್ಮ ಸಲಹೆಗಳನ್ನು ಕಳುಹಿಸಲು ಹೇಳಲಾಗಿದೆ. ಈ ಕರಡು ಮಸೂದೆಯು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರನ್ನು ಸರ್ಕಾರದ ಯೋಜನೆಗಳು ಮತ್ತು ಸವಲತ್ತುಗಳಿಂದ ದೂರವಿಡುವ ನಿಬಂಧನೆಗಳನ್ನು ಹೊಂದಿದೆ. ಆಆದರೂ ಉತ್ತರಪ್ರದೇಶ ವಿಧಾನಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಲಾಗಿಲ್ಲ.

ಈ ಕುರಿತು 2021ರ ಸೆಪ್ಟೆಂಬರ್ ನಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿಕ್ರಿಯಿಸಿ, ಎಲ್ಲದಕ್ಕೂ ಒಂದು ಸಮಯವಿದೆ. ನೀವು ಈ ಹಿಂದೆ ಮಂದಿರ ವಹೀಂ ಬನೇಂಗೆ, ತಾರೀಖ್ ನಹೀಂ ಬತಾಯೇಂಗೆ ಎಂದು ಹೇಳುತ್ತಿದ್ದೀರಿ. ಆದರೆ ಮಂದಿರದ ನಿರ್ಮಾಣ ಪ್ರಾರಂಭವಾಗಿದೆ. ಆರ್ಟಿಕಲ್ 370 ಅನ್ನು ಸಹ ತೆಗೆದುಹಾಕಲಾಗಿದೆ ಎಂದು ಹೇಳಿದ್ದರು.

ಬಿಜೆಪಿ ಯುಪಿ ವಕ್ತಾರ ಮನೀಶ್ ಶುಕ್ಲಾ ಮಾತನಾಡಿ, ಮಸೂದೆಯನ್ನು ಇನ್ನೂ ವಿಧಾನಸಭೆಯಲ್ಲಿ ಮಂಡಿಸಿಲ್ಲ. ಕರಡನ್ನು 2021 ರಲ್ಲಿ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರಿಂದ ಸಲಹೆಗಳನ್ನು ಕೇಳಲಾಗಿದೆ. ಆದರೆ ಅದನ್ನು ವಿಧಾನಸಭೆಯಲ್ಲಿ ತೆಗೆದುಕೊಳ್ಳಲೇ ಇಲ್ಲ ಎಂದು ತಿಳಿಸಿದ್ದಾರೆ.


2021ರ ಜುಲೈ 11ರ ಬಳಿಕ ಟಿವಿ ಚಾನೆಲ್ ಒಂದರ ತುಣುಕನ್ನು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಅದು ವೈರಲ್ ಆಗುತ್ತಲೇ ಇದೆ.

ರಿಪಬ್ಲಿಕ್ ಭಾರತ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ವಿಡಿಯೋದಿಂದಲೇ ಈ ಸುಳ್ಳು ಸುದ್ದಿ ಹುಟ್ಟಿಕೊಂಡಿರುವುದು ದೃಢಪಟ್ಟಿದೆ. ಇದರಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗೋರಖ್‌ಪುರ ಮೃಗಾಲಯಕ್ಕೆ ಭೇಟಿ ನೀಡಿ ಘೇಂಡಾಮೃಗಗಳಾದ ‘ಹರ್’ ಮತ್ತು ‘ಗೌರಿ’ಗೆ ಆಹಾರ ನೀಡುತ್ತಾರೆ. ಇದರೊಂದಿಗೆ ಉತ್ತರ ಪ್ರದೇಶ ಕಾನೂನು ಆಯೋಗವು ಜನಸಂಖ್ಯೆ ನಿಯಂತ್ರಣದ ಕರಡು ಮಸೂದೆಯನ್ನು ರಾಜ್ಯಕ್ಕೆ ರವಾನಿಸಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Odisha chief minister : ಬಿಜೆಪಿಯ ಮೋಹನ್ ಚರಣ್ ಮಾಝಿ ಒಡಿಶಾದ ನೂತನ ಮುಖ್ಯಮಂತ್ರಿ; ಇಬ್ಬರು ಉಪಮುಖ್ಯಮಂತ್ರಿಗಳ ಆಯ್ಕೆ

ಈ ಕರಡಿನ ಪ್ರಕಾರ ಸರ್ಕಾರ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗೆ ಸರ್ಕಾರಿ ಉದ್ಯೋಗಗಳು ಮತ್ತು ಕಲ್ಯಾಣಕ್ಕಾಗಿ ಅನರ್ಹತೆಯಂತಹ ದಂಡವನ್ನು ಸೂಚಿಸುತ್ತದೆ ಅಸ್ಸಾಂನಂತಹ ರಾಜ್ಯಗಳಲ್ಲಿ ಇದೇ ರೀತಿಯ ನೀತಿಗಳಿವೆ. 2024ರ ಜೂನ್ 7ರಿಂದ ಉತ್ತರ ಪ್ರದೇಶ ಸರ್ಕಾರದ ಈ ಹಕ್ಕು ಜಾರಿಗೊಳಿಸುತ್ತದೆ ಎಂದು ಹೇಳಲಾಗಿದೆ.

ಟಿವಿ ಚಾನೆಲ್ ವೊಂದರ ಯೂಟ್ಯೂಬ್ ಚಾನೆಲ್‌ನಲ್ಲಿನ ಇದರ ಸಂಪೂರ್ಣ ವಿಡಿಯೋ ವರದಿಯಲ್ಲಿ ನಿರೂಪಕಿ ಕರಡು ಕುರಿತು ಮಾತನಾಡುತ್ತಿದ್ದಾರೆಯೇ ಹೊರತು ಅದರ ಅನುಷ್ಠಾನದ ಬಗ್ಗೆ ಅಲ್ಲ ಎಂಬುದು ಸ್ಪಷ್ಟವಾಗಿದೆ.
ಹೀಗಾಗಿ ವೈರಲ್ ಪೋಸ್ಟ್‌ ಗಳು ಸುಳ್ಳು. ಉತ್ತರಪ್ರದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ಜಾರಿಗೆ ತರಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

Continue Reading
Advertisement
AUS vs NAM
ಕ್ರೀಡೆ1 min ago

AUS vs NAM: 17 ವರ್ಷಗಳ ಹಿಂದಿನ ಅನಗತ್ಯ ಟಿ20 ದಾಖಲೆ ಮುರಿದ ಗೆರ್ಹಾರ್ಡ್ ಎರಾಸ್ಮಸ್

Actor Darshan Arrested
ಪ್ರಮುಖ ಸುದ್ದಿ22 mins ago

Actor Darshan Arrested: ರೇಣುಕಾಸ್ವಾಮಿಗೆ ದರ್ಶನ್‌ ಗ್ಯಾಂಗ್‌ನಿಂದ ಕ್ರೂರ ಹಿಂಸೆ; ಪೋಸ್ಟ್‌ಮಾರ್ಟಂ ವರದಿಯಲ್ಲಿದೆ ಭಯಾನಕ ಡಿಟೇಲ್ಸ್‌

Actor Darshan
ಕರ್ನಾಟಕ27 mins ago

Actor Darshan: ದರ್ಶನ್‌ ಹೀರೋ ಅಲ್ಲ ಖಳನಾಯಕ, ಆತನಿಗೆ ಶಿಕ್ಷೆ ಆಗಲೇಬೇಕು: ರೇಣುಕಾ ಸ್ವಾಮಿ ತಂದೆ ಕಿಡಿ

KKRDB Chairman Dr Ajay Singh pressmeet in Kalaburagi
ಕರ್ನಾಟಕ35 mins ago

Kalaburagi News: ಜೂ.14ರಂದು ಸಿಎಂ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ

Actor Darshan Ban From Sandalwood If Murder Allegation
ಸ್ಯಾಂಡಲ್ ವುಡ್39 mins ago

Actor Darshan: ಚಿತ್ರರಂಗದಿಂದ ಬ್ಯಾನ್‌ ಆಗ್ತಾರಾ ದರ್ಶನ್? ಫಿಲ್ಮ್ ಚೇಂಬರ್ ಅಧ್ಯಕ್ಷರು ಹೇಳಿದ್ದೇನು?

IND vs USA
ಕ್ರೀಡೆ42 mins ago

IND vs USA: ಪಂದ್ಯಕ್ಕೆ ಮಳೆ ಭೀತಿ; ಪಂದ್ಯ ರದ್ದಾದರೆ ಉಭಯ ತಂಡಗಳು ಸೂಪರ್​-8 ಪ್ರವೇಶ

Sebi Fines
ವಾಣಿಜ್ಯ48 mins ago

Sebi Fines: ವಂಚನೆ ಪ್ರಕರಣ; ಟಿವಿ ನಿರೂಪಕ, ವಿಶ್ಲೇಷಕನಿಗೆ ತಲಾ 1 ಕೋಟಿ ರೂ. ದಂಡ ವಿಧಿಸಿದ ಸೆಬಿ

Viral News
ಪ್ರಮುಖ ಸುದ್ದಿ56 mins ago

Viral News: ರೈಲಿನಲ್ಲಿ ಜನಿಸಿದ ತಮ್ಮ ಮಗುವಿಗೆ ʼಮಹಾಲಕ್ಷ್ಮಿʼ ಎಂದು ಹೆಸರಿಟ್ಟಿದ್ದೇಕೆ ಮುಸ್ಲಿಂ ದಂಪತಿ?

Actor Darshan The murder was done by team in the style movie
ಸ್ಯಾಂಡಲ್ ವುಡ್1 hour ago

Actor Darshan: ಲಾರಿಗೆ ತಲೆಯನ್ನು ಬಡಿದು ಸಿನಿಮಾ ಶೈಲಿಯಲ್ಲೇ ರೇಣುಕಾ ಸ್ವಾಮಿ ಕೊಲೆ ಮಾಡಿದ್ದ ದರ್ಶನ್ ಗ್ಯಾಂಗ್​!

Renukaswamy murder case
ಕರ್ನಾಟಕ1 hour ago

Renuka Swamy Murder Case: ಚಿತ್ರದುರ್ಗದಲ್ಲಿ ಮೌನ ಪ್ರತಿಭಟನೆ; ದರ್ಶನ್‌ ಸೇರಿ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆಗೆ ಆಗ್ರಹ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ22 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ23 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ24 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌