Baba Siddique: ಕರಿಬೇವು ಸೊಪ್ಪಿನಂತೆ ಬಳಸಿ ಬಿಸಾಡಿದರು! ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಿದ್ದಿಕ್ - Vistara News

ದೇಶ

Baba Siddique: ಕರಿಬೇವು ಸೊಪ್ಪಿನಂತೆ ಬಳಸಿ ಬಿಸಾಡಿದರು! ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಿದ್ದಿಕ್

Baba Siddique: ಮುಂಬೈನ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಬಾಬಾ ಸಿದ್ಧಿಕ್ ಅವರು ಪಕ್ಷ ತೊರೆದು ಎನ್‌ಸಿಪಿ ಸೇರ್ಪಡೆಯಾಗಿದ್ದಾರೆ.

VISTARANEWS.COM


on

Congress Treated me Like Curry Leaves Says Baba Siddique
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ (Baba Siddique) ಅವರು ಕಾಂಗ್ರೆಸ್ (Congress party) ತೊರೆದ ಮಾರನೇ ದಿನವೇ ಶನಿವಾರ ಸಂಜೆ ಅಜಿತ್ ಪವಾರ್ ಅವರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷಕ್ಕೆ (NCP) ಸೇರ್ಪಡೆಯಾದರು. ಎನ್‌ಸಿಪಿಗೆ ಸೇರ್ಪಡೆಗೊಂಡ ನಂತರ, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್‌ನಲ್ಲಿ ನನ್ನ ಸ್ಥಿತಿಯು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸುವ ಕರಿಬೇವಿನ ಸೊಪ್ಪು (Curry Leaves) ರೀತಿಯಂತಿತ್ತು. ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಬಳಸಿಕೊಂಡು ಬಿಸಾಡಲಾಯಿತು” ಎಂದು ಆರೋಪಿಸಿದರು.

ಸಿದ್ದಿಕ್ ಅವರು ಕಳೆದ 48 ವರ್ಷಗಳಿಂದ ಕಾಂಗ್ರೆಸ್‌ನ ಭಾಗವಾಗಿದ್ದರು. ಅವರು ಗುರುವಾರ ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದಾಗ, “ಕೆಲವು ನಿರ್ಧಾರಗಳು ನೋವಿನಿಂದ ಕೂಡಿದೆ, ಆದರೆ ಅವುಗಳನ್ನು ತೆಗೆದುಕೊಳ್ಳಬೇಕು” ಎಂದು ಹೇಳಿದ್ದರು. ಅವರು ಮುಂಬೈ ಕಾಂಗ್ರೆಸ್‌ನ ಪ್ರಮುಖ ಮುಸ್ಲಿಂ ಮುಖವಾಗಿದ್ದರು ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ ಒಕ್ಕೂಟವು ಅಧಿಕಾರದಲ್ಲಿದ್ದಾಗ ಸಚಿವರಾಗಿ ಸೇವೆ ಸಲ್ಲಿಸಿದರು.

ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಅವರು ಜನವರಿಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ ನಂತರ ಕಳೆದ ಒಂದು ತಿಂಗಳಲ್ಲಿ ಪಕ್ಷವನ್ನು ತೊರೆದ ಎರಡನೇ ಹಿರಿಯ ಮುಂಬೈ ಕಾಂಗ್ರೆಸ್‌ನ ನಾಯಕರಾಗಿದ್ದಾರೆ.

ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯಲು ನಿರ್ಧರಿಸಿದಾಗ ಅಜಿತ್ ಪವಾರ್ ಅವರ ಪಕ್ಷದೊಂದಿಗೆ ಹೋಗಲು ನಿರ್ಧರಿಸಿದ್ದರು.”ನಾನು ಅಜಿತ್ ಪವಾರ್ ಗುಂಪಿನೊಂದಿಗೆ ಹೋಗುತ್ತೇನೆ. ನನ್ನ ಪ್ರಯಾಣವು ಕಾಂಗ್ರೆಸ್‌ನಿಂದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ” ಎಂದು ಅವರು ತಮ್ಮ ದೊಡ್ಡ ನಿರ್ಧಾರವನ್ನು ಎಕ್ಸ್ ವೇದಿಕೆಯಲ್ಲಿ ಘೋಷಣೆ ಮಾಡಿದ್ದರು.

ಸಿದ್ದಿಕ್ ಅವರು “ಕೆಲವು ದಿನಗಳ ಹಿಂದೆ ಪ್ರಫುಲ್ ಪಟೇಲ್ ಅವರನ್ನು ಭೇಟಿಯಾದ ನಂತರ ನಾನು ಅಜಿತ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿಯಲ್ಲಿ ಕೆಲಸ ಮಾಡಬೇಕೆಂದು ನಿರ್ಧರಿಸಿದ್ದೇನೆ” ಎಂದು ಹೇಳಿದ್ದರು. ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಅವರು ಅಜಿತ್ ಪವಾರ್ ಅವರ ಆಪ್ತರು ಮತ್ತು ಪ್ರಸ್ತುತ ಎನ್‌ಸಿಪಿಯ ಕಾರ್ಯಾಧ್ಯಕ್ಷರಾಗಿದ್ದಾರೆ.

ಕಾಂಗ್ರೆಸ್‌ಗೆ ವಿದಾಯ ಹೇಳಿದ ಸಿದ್ಧಿಕ್ ಅವರು, “ನಾನು ಹದಿಹರೆಯದವನಾಗಿದ್ದಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದೆ. ಇದು 48 ವರ್ಷಗಳ ಮಹತ್ವದ ಪ್ರಯಾಣವಾಗಿದೆ. ಇಂದು ನಾನು ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: ಶ್ರೀ ಕೇಶವಾನಂದ ಭಾರತೀ vs ಕೇರಳ ಸರ್ಕಾರ ಕೇಸ್ ತೀರ್ಪು ಪ್ರಮುಖ ಅಧ್ಯಯನ ವಸ್ತು: ನ್ಯಾ. ಸಂತೋಷ್ ಹೆಗ್ಡೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Kerala Governor: ರಾಮಲಲ್ಲಾನಿಗೆ ಶಿರಬಾಗಿ ನಮಸ್ಕರಿಸಿದ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌; ವಿಡಿಯೋ ನೋಡಿ

Kerala Governor:ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರು ಅಯೋಧ್ಯೆಗೆ ತೆರಳಿ ರಾಮಲಲ್ಲಾ ದರ್ಶನ ಪಡೆಯುವ ಮೂಲಕ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಬುಧವಾರ ರಾಮಮಂದಿರಕ್ಕೆ ಭೇಟಿ ಕೊಟ್ಟ ಆರಿಫ್‌ ರಾಮಲಲ್ಲಾನ ಮೂರ್ತಿ ಎದುರು ತಲೆಬಾಗಿ ನಮಸ್ಕರಿಸಿದ್ದಾರೆ. ಅಲ್ಲದೇ ಹಿನ್ನೆಲೆಯಲ್ಲಿ ಜೈ ಶ್ರೀರಾಮ್‌ ಎಂಬ ನಾಮಸ್ಮರಣೆ ಕೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Kerala Governor
Koo

ಉತ್ತರಪ್ರದೇಶ: ಒಂದು ವರ್ಷದ ಹಿಂದೆ ತಮ್ಮನ್ನು ಹಿಂದೂ ಎಂದು ಕರೆಯರಿ ಎಂಬ ಹೇಳಿಕೆ ನೀಡಿ ಬಹಳ ಸುದಿಯಾಗಿದ್ದ ಕೇರಳ ರಾಜ್ಯಪಾಲ(Kerala Governor) ಆರಿಫ್‌ ಮೊಹಮ್ಮದ್‌ ಖಾನ್‌(Arif Mohammad Khan) ಅವರು ಅಯೋಧ್ಯೆ(Ayodhya)ಗೆ ತೆರಳಿ ರಾಮಲಲ್ಲಾ(Ramalalla)ನ ದರ್ಶನ ಪಡೆಯುವ ಮೂಲಕ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಬುಧವಾರ ರಾಮಮಂದಿರಕ್ಕೆ ಭೇಟಿ ಕೊಟ್ಟ ಆರಿಫ್‌ ರಾಮಲಲ್ಲಾನ ಮೂರ್ತಿ ಎದುರು ತಲೆಬಾಗಿ ನಮಸ್ಕರಿಸಿದ್ದಾರೆ. ಅಲ್ಲದೇ ಹಿನ್ನೆಲೆಯಲ್ಲಿ ಜೈ ಶ್ರೀರಾಮ್‌ ಎಂಬ ನಾಮಸ್ಮರಣೆ ಕೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ವಿಡಿಯೋವನ್ನು ಸ್ವತಃ ಆರಿಫ್‌ ಮೊಹಮ್ಮದ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ಜೈಶ್ರೀರಾಮ್‌ ನಾಮಸ್ಮರಣೆ ನಡೆವೆಯೇ ಅವರು ರಾಮಲಲ್ಲಾನ ಎದುದು ಮಂಡಿಯೂರಿ ನಮಸ್ಕರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನು ಅಯೋಧ್ಯೆ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನವರಿಯಲ್ಲಿನಾನು ಎರಡು ಬಾರಿ ಅಯೋಧ್ಯೆಗೆ ಭೇಟಿಕೊಟ್ಟಿದ್ದೇನೆ. ಅನೇಕ ಬಾರಿ ನಾನು ಇಲ್ಲಿಗೆ ಭೇಟಿಕೊಟ್ಟಿದ್ದೇನೆ. ಅಯೋಶ್ಯೆಗೆ ಬಂದು ಶ್ರೀರಾಮನನ್ನು ಪೂಜಿಸುವುದು ಇದು ಸಂತೋಷದ ವಿಚಾರ ಮಾತ್ರವಲ್ಲದೇ ಹೆಮ್ಮೆಯ ಸಂಗತಿ ಎಂದು ಬರೆದುಕೊಂಡಿದ್ದಾರೆ.

ಮೂಲತಃ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರೂ ಆರಿಫ್‌ ಹಿಂದೂ ಸಂಸ್ಕೃತಿ, ಪರಂಪರೆ ಬಗ್ಗೆ ಅತೀವ ನಂಬಿಕೆ ಮತ್ತು ಪ್ರೀತಿ ಇಟ್ಟುಕೊಂಡವರು. ಈ ಹಿಂದೆ ಆರ್ಯ ಸಮಾಜವು ತಮ್ಮನ್ನು ಹಿಂದೂ ಎಂದು ಕರೆಯಲೇಬೇಕು ಎಂದು ಆಗ್ರಹಿಸಿದ್ದರು. ಕೇರಳದ ತಿರುವನಂಥಪುರದ ಕೇರಳ ಹಿಂದೂಸ್ ಆಫ್ ನಾರ್ಥ್ ಅಮೆರಿಕ(ಕೆಎಚ್ಎನ್ಎ) ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ(ಆರ್ಯ ಸಮಾಜ) ನನ್ನದೊಂದು ಗಂಭೀರ ಆರೋಪವಿದೆ. ನೀವೇಕೆ ನನ್ನನ್ನು ಹಿಂದೂ ಎಂದು ಕರೆಯುವುದಿಲ್ಲ. ಹಿಂದೂ ಎಂಬುದನ್ನು ನಾನು ಧಾರ್ಮಿಕವಾಗಿ ಪರಿಗಣಿಸುವುದಿಲ್ಲ. ಅದೊಂದು ಭೌಗೋಳಿಕ ಸೂಚಕಪದವಾಗಿದೆ ಎಂದು ಹೇಳಿದರು.

ಭಾರತದಲ್ಲಿ ಹುಟ್ಟಿದವರು, ಇಲ್ಲೇ ವಾಸಿಸುವವರು, ಇಲ್ಲಿ ಹರಿಯುವ ನದಿಗಳು ನೀರು ಕುಡಿಯುವವರು ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳಬೇಕು. ಹಾಗಾಗಿ, ನೀವು ನನ್ನನ್ನೂ ಹಿಂದೂ ಎಂದೇ ಕರೆಯಬೇಕು ಎಂದು ಸೈಯರ್ ಸೈಯದ್ ಅಹ್ಮದ್ ಖಾನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಅಭಿಪ್ರಾಯಪಟ್ಟಿದ್ದರು. ವಸಾಹತುಶಾಹಿ ಯುಗದಲ್ಲಿ ಹಿಂದೂ, ಮುಸ್ಲಿಂ ಮತ್ತು ಸಿಖ್‌ನಂತಹ ಪರಿಭಾಷೆಗಳನ್ನು ಬಳಸುವುದು ಓಕೆ. ಏಕೆಂದರೆ ಬ್ರಿಟಿಷರು ನಾಗರಿಕರ ಸಾಮಾನ್ಯ ಹಕ್ಕುಗಳನ್ನು ನಿರ್ಧರಿಸಲು ಸಮುದಾಯಗಳನ್ನು ಆಧಾರವಾಗಿಸಿಕೊಂಡಿದ್ದರು. ಕೇರಳ ಸರ್ಕಾರದ ಜತೆಗಿನ ಸಂಘರ್ಷಕ್ಕೆ ಆಗಾಗ ಸುದ್ದಿಯಾಗುವ ಖಾನ್, ನಾನು ಹಿಂದೂ ಎಂದು ಹೇಳುವುದು ತಪ್ಪು ಎಂಬ ಭಾವನೆ ಮೂಡಿಸುವ ಷಡ್ಯಂತ್ರ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಹೇಳಿದ್ದರು.

ಇದನ್ನೂ ಓದಿ:Virat Kohli: ಪಂಜಾಬಿ ಮಾತನಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

ಕೇರಳ ಸರ್ಕಾರದ ಮತ್ತು ಆರಿಫ್‌ ನಡುವೆ ತೀವ್ರ ವೈಮನಸ್ಸು ಇದ್ದು, ವಿಶೇಷ ಬೆಳವಣಿಗೆಯೊಂದರಲ್ಲಿ ಅವರು ಸರ್ಕಾರದ ವಿರುದ್ಧ ನಡುರಸ್ತೆಯಲ್ಲಿ ಧರಣಿ ಕುಳಿತು ದೇಶದ ಗಮನ ಸೆಳೆದಿದ್ದರು.

Continue Reading

ದೇಶ

Air India Express: 30 ಸಿಬ್ಬಂದಿಯನ್ನು ವಜಾಗೊಳಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌; ಇಂದು 74 ವಿಮಾನಗಳ ಹಾರಾಟ ರದ್ದು

Air India Express: ಸಾಮೂಹಿಕ ಅನಾರೋಗ್ಯದ ರಜೆ ಹಾಕಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ನ 30 ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಬುಧವಾರ (ಮೇ 9)ದಿಂದ ಸುಮಾರು 300 ಸಿಬ್ಬಂದಿ ರಜೆ ಹಾಕಿರುವ ಹಿನ್ನೆಲೆಯಲ್ಲಿ ಹಲವು ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಹಾರಾಟ ರದ್ದಾಗಿವೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಅನೇಕ ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆ ಇದೆ. ಸಿಬ್ಬಂದಿ ಕೊರತೆಯಿಂದ ಗುರುವಾರ ಸುಮಾರು 74 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಬುಧವಾರ ಸುಮಾರು 86 ವಿಮಾನಗಳ ಹಾರಾಟ ರದ್ದಾಗಿತ್ತು.

VISTARANEWS.COM


on

Air India Express
Koo

ನವದೆಹಲಿ: ಸಾಮೂಹಿಕ ಅನಾರೋಗ್ಯದ ರಜೆ (Sick Leave) ಹಾಕಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ (Air India Express) ವಿಮಾನದ 30 ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಬುಧವಾರ (ಮೇ 9)ದಿಂದ ಸುಮಾರು 300 ಸಿಬ್ಬಂದಿ ರಜೆ ಹಾಕಿರುವ ಹಿನ್ನೆಲೆಯಲ್ಲಿ ಹಲವು ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಹಾರಾಟ ರದ್ದಾಗಿವೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಅನೇಕ ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆ ಇದೆ. ಇಂದು ಸಂಜೆ 4 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಒಂದು ವೇಳೆ ಈ ಅವಧಿಯೊಳಗೆ ಆಗಮಿಸದಿದ್ದರೆ ಶಿಸ್ತು ಕ್ರಮ ನಡೆಸಲಾಗುವುದು ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಸಿಬ್ಬಂದಿ ಕೊರತೆಯಿಂದ ಗುರುವಾರ ಸುಮಾರು 74 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಬುಧವಾರ ಟಾಟಾ ಸಮೂಹದ ಒಡೆತನದಲ್ಲಿರುವ ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಸುಮಾರು 86 ವಿಮಾನಗಳ ಹಾರಾಟ ರದ್ದಾಗಿತ್ತು. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದರು.

30ಕ್ಕೂ ಹೆಚ್ಚು ಸಿಬ್ಬಂದಿಗೆ ನೀಡಲಾದ ವಜಾ ಪತ್ರದಲ್ಲಿ, ಸಾಮೂಹಿಕ ರಜೆಯು ʼಯಾವುದೇ ಸಮರ್ಥನೀಯ ಕಾರಣವಿಲ್ಲದೆ ಪೂರ್ವ ನಿಯೋಜಿತ ಮತ್ತು ಸಂಘಟಿತ ಕೆಲಸದಿಂದ ದೂರವಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆʼ ಎಂದು ಉಲ್ಲೇಖಿಸಲಾಗಿದೆ. “ನಿಮ್ಮ ಪ್ರತಿಭಟನೆ ಕಾರಣದಿಂದ ಹೆಚ್ಚಿನ ಸಂಖ್ಯೆಯ ವಿಮಾನಗಳನ್ನು ರದ್ದುಗೊಳಿಸಬೇಕಾಯಿತು. ಇದು ಕಂಪನಿಯ ಪ್ರಯಾಣಿಕರಿಗೆ ಭಾರಿ ಅನಾನುಕೂಲತೆಯನ್ನು ಉಂಟು ಮಾಡಿದೆ. ನಿಮ್ಮ ಕೃತ್ಯವು ಸಾರ್ವಜನಿಕ ಹಿತಾಸಕ್ತಿಯನ್ನು ವಿರುದ್ಧವಾಗಿದೆ. ಜತೆಗೆ ಕಂಪನಿಗೆ ಗಂಭೀರ ವಿತ್ತೀಯ ನಷ್ಟವನ್ನು ಉಂಟು ಮಾಡಿದೆʼʼ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಚೆನ್ನೈಯಿಂದ ಕೋಲ್ಕತ್ತಾ, ಚೆನ್ನೈಯಿಂದ ಸಿಂಗಾಪುರ, ತಿರುಚ್ಚಿಯಿಂದ ಸಿಂಗಾಪುರ ಮತ್ತು ಜೈಪುರದಿಂದ ಮುಂಬೈಗೆ ತೆರಳು ವಿಮಾನಗಳು ರದ್ದಾಗಿವೆ ಎಂದು ಮೂಲಗಳು ತಿಳಿಸಿವೆ.

ಪ್ರತಿಭಟನೆಗೆ ಕಾರಣವೇನು?

ಟಾಟಾ ಗ್ರೂಪ್‌ ಜತೆಗೆ ಏರ್‌ ಇಂಡಿಯಾ ವಿಲೀನಗೊಂಡ ಬಳಿಕ ಸಿಬ್ಬಂದಿ ನಡುವೆ ತಾರತಮ್ಯ ಸಮಸ್ಯೆ ಉಂಟಾಗಿತ್ತು. ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಕೆಲವೊಂದು ಸಿಬ್ಬಂದಿಗೆ ಕೆಲದರ್ಜೆಯ ನೌಕರಿಯನ್ನು ನೀಡಲಾಗುತ್ತಿದೆ. ಪರಿಹಾರ ಪ್ಯಾಕೇಜ್‌ನ ಪ್ರಮುಖ ಭಾಗಗಳನ್ನು ಮಾರ್ಪಡಿಸಲಾಗಿದೆ ಅಥವಾ ತೆಗೆದು ಹಾಕಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಬಲವಂತವಾಗಿ ಬಾಯಿಮುಚ್ಚಿಸಲಾಗುತ್ತಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ವಿಮಾನಯಾನ ಸಂಸ್ಥೆಯು ಪ್ರಸ್ತುತ ಎಐಎಕ್ಸ್ ಕನೆಕ್ಟ್ (ಹಿಂದಿನ ಏರ್ ಏಷ್ಯಾ ಇಂಡಿಯಾ) ಅನ್ನು ತನ್ನೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿದೆ. ಪೈಲಟ್ ಸಮಸ್ಯೆಗಳಿಂದಾಗಿ ಟಾಟಾ ಗ್ರೂಪ್ ಪೂರ್ಣ-ಸೇವಾ ವಾಹಕ ವಿಸ್ತಾರಾ ರದ್ದಾಗಿರುವ ಬೆನ್ನಲ್ಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಈ ಬಿಕ್ಕಟ್ಟು ಆರಂಭವಾಗಿದೆ. ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆ ಬಗ್ಗೆ ವಿಸ್ತಾರಾದಲ್ಲಿದ್ದ ಪೈಲಟ್‌ಗಳಲ್ಲೂ ಅಸಮಾಧಾನವು ಭುಗಿಲೆದ್ದಿತ್ತು. ಹೊಸ ಒಪ್ಪಂದಗಳನ್ನು ಅನುಸರಿಸಿ, ಪೈಲಟ್‌ಗಳು ವಿಮಾನಗಳನ್ನು ನಿರ್ವಹಿಸುವ ರೋಸ್ಟರ್‌ಗಳು ಮತ್ತು ಅವರ ವೇತನ ಪ್ಯಾಕೇಜ್‌ಗಳ ಅಂಶಗಳ ಬಗ್ಗೆ ಕಳವಳಗಳಿವೆ. ಈ ಎಲ್ಲ ಕಾರಣಗಳಿಂದ ಏರ್‌ ಇಂಡಿಯಾ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Air India | ಏರ್‌ ಇಂಡಿಯಾದಲ್ಲಿ ವಿಸ್ತಾರ, ಏರ್‌ ಏಷ್ಯಾ, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಲೀನ ಶೀಘ್ರ

Continue Reading

ಕ್ರೀಡೆ

Viral News: ಐಪಿಎಲ್ ಪಂದ್ಯದ ವೇಳೆ ಕೇಜ್ರಿವಾಲ್ ಪರ ಘೋಷಣೆ; 6 ಮಂದಿ ಬಂಧನ

Viral News: ಆಮ್ ಆದ್ಮಿ ಪಕ್ಷದ ವಿದ್ಯಾರ್ಥಿ ಘಟಕ ಛಾತ್ರ ಯುವ ಸಂಘರ್ಷ(AAP workers) ಸಮಿತಿಯ ಸದಸ್ಯರು ಕೇಜ್ರಿವಾಲ್ ಬಂಧನವನ್ನು ಪ್ರತಿಭಟಿಸಿ ‘ಜೈಲ್ ಕಾ ಜವಾಬ್ ವೋಟ್ ಸೆ’ (ಬಂಧನಕ್ಕೆ ಉತ್ತರವನ್ನು ಮತದಿಂದ ನೀಡಿ) ಎಂಬ ಘೋಷಣೆಯ ಟೀ ಶರ್ಟ್‌ಗಳನ್ನು ಧರಿಸಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಇದು ಮಾತ್ರವಲ್ಲದೆ ಪಂದ್ಯದ ಸಂದರ್ಭ ಕೇಜ್ರಿವಾಲ್ ಬಂಧನ ಖಂಡಿಸಿ ಘೋಷಣೆಗಳನ್ನು ಕೂಗಿದ್ದರು.

VISTARANEWS.COM


on

Viral News
Koo

ನವದೆಹಲಿ: ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಮಂಗಳವಾರ ನಡೆದಿದ್ದ(IPL 2024) ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ರಾಜಸ್ಥಾನ್ ರಾಯಲ್ಸ್​ ನಡುವಣ ಪಂದ್ಯದಲ್ಲಿ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಪರ ಘೋಷಣೆಗಳನ್ನು ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆಪ್ ಕಾರ್ಯಕರ್ತರನ್ನು ದಿಲ್ಲಿ ಪೊಲೀಸರು ಬಂಧಿಸಿರುವ ಘಟನೆ ತಡವಾಗಿ(Viral News) ಬೆಳಕಿಗೆ ಬಂದಿದೆ.

ಆಮ್ ಆದ್ಮಿ ಪಕ್ಷದ ವಿದ್ಯಾರ್ಥಿ ಘಟಕ ಛಾತ್ರ ಯುವ ಸಂಘರ್ಷ(AAP workers) ಸಮಿತಿಯ ಸದಸ್ಯರು ಕೇಜ್ರಿವಾಲ್ ಬಂಧನವನ್ನು ಪ್ರತಿಭಟಿಸಿ ‘ಜೈಲ್ ಕಾ ಜವಾಬ್ ವೋಟ್ ಸೆ’ (ಬಂಧನಕ್ಕೆ ಉತ್ತರವನ್ನು ಮತದಿಂದ ನೀಡಿ) ಎಂಬ ಘೋಷಣೆಯ ಟೀ ಶರ್ಟ್‌ಗಳನ್ನು ಧರಿಸಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಇದು ಮಾತ್ರವಲ್ಲದೆ ಪಂದ್ಯದ ಸಂದರ್ಭ ಕೇಜ್ರಿವಾಲ್ ಬಂಧನ ಖಂಡಿಸಿ ಘೋಷಣೆಗಳನ್ನು ಕೂಗಿದ್ದರು. ಇದೀಗ ಇವರ ವಿರುದ್ಧ ಸಾರ್ವಜನಿಕವಾಗಿ ಗದ್ದಲವನ್ನು ಸೃಷ್ಟಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಸೂಕ್ತ ಕಾನೂನಾತ್ಮಕ ವಿಧಿವಿಧಾನಗಳು ಪೂರ್ಣಗೊಂಡ ಬಳಿಕವಷ್ಟೇ ಬಂಧಿತರನ್ನು ಬಿಡುಗಡೆಗೊಳಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಜಾರಿ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿದ್ದು, ತಿಹಾರ ಜೈಲಿನಲ್ಲಿದ್ದಾರೆ. ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಅರವಿಂದ್‌ ಕೇಜ್ರಿವಾಲ್‌ ಮಾತ್ರವಲ್ಲ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ IPL 2024 Points Table: ಸನ್​ರೈಸರ್ಸ್​ಗೆ 10 ವಿಕೆಟ್​ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಚೆನ್ನೈ

ಅಷ್ಟೇ ಅಲ್ಲ, ದೆಹಲಿ ಜಲ ಮಂಡಳಿ ಗುತ್ತಿಗೆ ಮಂಜೂರು ಮಾಡುವಾಗ ಕೂಡ ಅಕ್ರಮ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಜಾರಿ ನಿರ್ದೇಶನಾಲಯವು ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಿದೆ. ಮತ್ತೊಂದೆಡೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇ.ಡಿ ಸಲ್ಲಿಸಿದ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಇದರಿಂದ ಅವರು ತಾತ್ಕಾಲಿಕವಾಗಿ ರಿಲೀಫ್‌ ಪಡೆದಿದ್ದರು. ಆದರೆ, ಈಗ ಬಂಧನದಿಂದ ರಕ್ಷಣೆಗೆ ನೀಡದ ಕಾರಣ ಅವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ನ್ಯಾಯಾಂಗ ಬಂಧನವನ್ನು (Judicial custody) ದೆಹಲಿ ನ್ಯಾಯಾಲಯ ಮೇ 20ರವರೆಗೆ ವಿಸ್ತರಿಸಿದ್ದು, ಅವರು ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಆದೇಶವನ್ನೂ ಕಾಯ್ದಿರಿಸಿದೆ.

Continue Reading

ಕ್ರೈಂ

Crime News: ಮಕ್ಕಳನ್ನು ಕೊಂದ ಬಳಿಕ ಕಟ್ಟಡದಿಂದ ಜಿಗಿದು ಮಹಿಳೆ ಆತ್ಮಹತ್ಯೆ; ಡೆತ್‌ನೋಟ್‌ನಲ್ಲಿ ಏನಿದೆ?

Crime News: ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ತನ್ನಿಬ್ಬರು ಮಕ್ಕಳನ್ನು ಕೊಂದು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತರನ್ನು ಅಶ್ವಿನಿ ನಿಕುಂಭ್‌ (30) ಮತ್ತು ಮಕ್ಕಳಾದ ಆರಾಧ್ಯಾ (8) ಹಾಗೂ ಅಗಸ್ತ್ಯ (2) ಎಂದು ಗುರುತಿಸಲಾಗಿದೆ. ಪತಿಯ ಕಿರುಕುಳದಿಂದ ಮಹಿಳೆ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

VISTARANEWS.COM


on

Crime News
Koo

ಮುಂಬೈ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ತನ್ನಿಬ್ಬರು ಮಕ್ಕಳನ್ನು ಕೊಂದು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೆ ಮುನ್ನ ವಿಡಿಯೊ ಮೆಸೇಜ್‌ ಮಾಡಿರುವ ಮಹಿಳೆ, ಪತಿಯ ಕಿರುಕುಳದಿಂದ ತಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಆರೋಪಿಸಿದ್ದಾಳೆ. ಮೃತರನ್ನು ಅಶ್ವಿನಿ ನಿಕುಂಭ್‌ (30) ಮತ್ತು ಮಕ್ಕಳಾದ ಆರಾಧ್ಯಾ (8) ಹಾಗೂ ಅಗಸ್ತ್ಯ (2) ಎಂದು ಗುರುತಿಸಲಾಗಿದೆ (Crime News).

ʼʼಅಶ್ವಿನಿ ಆತ್ಮಹತ್ಯೆ ಮಾಡುವ ಮುನ್ನ ಮಕ್ಕಳಿಗೆ ವಿಷ ನೀಡಿದ್ದಾರೆʼʼ ಎಂದು ಪೊಲೀಸರು ತಿಳಿಸಿದ್ದು, ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಬುಧವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಅಶ್ವಿನಿ ಕೋನಾರ್ಕ್‌ ನಗರದ ಅಪಾರ್ಟ್‌ಮೆಂಟ್‌ನ ಟೆರೇಸ್‌ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು. ಘಟನೆ ಸ್ಥಳಕ್ಕೆ ತಲುಪಿದ ಪೊಲೀಸರಿಗೆ ಬಳಿಕ ಆಕೆಯ ಮಕ್ಕಳ ಶವವೂ ಕಂಡು ಬಂದಿತ್ತು. ಈ ವೇಳೆ ಆಕೆಯ ಪತಿ ಊರಿನಲ್ಲಿ ಇರಲಿಲ್ಲ. ಹೀಗಾಗಿ ಆಕೆಯೇ ಮಕ್ಕಳಿಗೆ ವಿಷ ಉಣಿಸಿ ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಊಹಿಸಿದ್ದಾರೆ.

ಡೆತ್‌ನೋಟ್‌ ಪತ್ತೆ

ಪರಿಶೀಲನೆ ವೇಳೆ ಪೊಲೀಸರಿಗೆ ಅಶ್ವಿನಿ ಬರೆದಿದ್ದಾಳೆ ಎನ್ನಲಾದ ಡೆತ್‌ನೋಟ್‌ ಪತ್ತೆಯಾಗಿದೆ. ಇದರಲ್ಲಿ ಆಕೆ ಪತಿ ಸ್ವಪ್ನಿಲ್‌ ಕಿರುಕುಳ ನೀಡುತ್ತಿರುವ ಬಗ್ಗೆ ಉಲ್ಲೇಖಿಸಿದ್ದಾಳೆ.‌ ಜತೆಗೆ ಸಾಯುವ ಮುನ್ನ ವಿಡಿಯೊವನ್ನು ರೆಕಾರ್ಡ್‌ ಮಾಡಿದ್ದಾಳೆ. ಸ್ವಪ್ನಿಲ್‌ ನಿರಂತರ ಹಿಂಸೆ ನೀಡುತ್ತಿರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಆಕೆ ತನ್ನ ಸಂಬಂಧಿಕರಿಗೆ ಕಳುಹಿಸಿದ ವಿಡಿಯೊದಲ್ಲಿ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಕೃತ್ಯ ನಡೆಯುವ ವೇಳೆ ಸ್ವಪ್ನಿಲ್‌ ಕೆಲಸದ ನಿಮಿತ್ತ ಪುಣೆಗೆ ತೆರಳಿದ್ದರು. ಸದ್ಯ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಇದನ್ನೂ ಓದಿ: ಶಾಲೆಗೆ ಹೋಗದ್ದಕ್ಕೆ ಬೈದ ತಾಯಿ, ಬಾಲಕ ಆತ್ಮಹತ್ಯೆ

ನೆಚ್ಚಿನ ಶ್ವಾನ ಮರಿ ನಾಪತ್ತೆಯಾದ ಕೊರಗಿನಿಂದ ಆತ್ಮಹತ್ಯೆ

ತನ್ನ ಪ್ರೀತಿಯ ಶ್ವಾನ ನಾಪತ್ತೆಯಾದ ಹಿನ್ನೆಲೆಯಲ್ಲಿ ಕೊರಗಿನಿಂದ 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಏಪ್ರಿಲ್‌ 27ರಂದು ಹರಿಯಾಣದಲ್ಲಿ ನಡೆದಿತ್ತು. ʼʼಐದು ದಿನಗಳ ಹಿಂದೆ ನಮ್ಮ ಸಾಕು ನಾಯಿ ಕಾಣೆಯಾಗಿತ್ತು. ಈ ಶ್ವಾನ ಮತ್ತು ಬಾಲಕಿಯ ಮಧ್ಯೆ ಸುಮಾರು 3 ತಿಂಗಳಿಂದ ಉತ್ತಮ ಬಾಂಧವ್ಯ ರೂಪುಗೊಂಡಿತ್ತುʼʼ ಎಂದು ಘಟನೆಯ ಬಗ್ಗೆ ಮನೆಯವರು ತಿಳಿಸಿದ್ದರು. ʼʼಶ್ವಾನ ಕಾಣೆಯಾದಾಗಿನಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು. ಬಳಿಕ ತೀವ್ರ ಚಿಂತೆಗೆ ಒಳಗಾಗಿದ್ದ ಅವಳು ಸರಿಯಾಗಿ ಆಹಾರವನ್ನೂ ಸೇವಿಸುತ್ತಿರಲಿಲ್ಲʼʼ ಎಂದು ಅವರು ಹೇಳಿದ್ದರು. ಕುಟುಂಬಸ್ಥರು ಆಕೆಯನ್ನು ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ ನಾಯಿಮರಿಯನ್ನು ಕಳೆದುಕೊಂಡ 6ನೇ ತರಗತಿಯ ವಿದ್ಯಾರ್ಥಿನಿಯ ದುಃಖವನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಬಾಲಕಿಯ ತಾಯಿ ಮತ್ತು ಸಹೋದರಿ ದಿನಸಿ ಖರೀದಿಗಾಗಿ ಮನೆಯಿಂದ ಹೊರ ಹೋಗಿದ್ದರು. ಮನೆಯಲ್ಲಿ ಒಬ್ಬಳೇ ಇದ್ದ ಬಾಲಕಿ ಈ ವೇಳೆ ಶಾಕಿಂಗ್‌ ನಿರ್ಧಾರ ಕೈಗೊಂಡಿದ್ದಳು. ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಳು.

Continue Reading
Advertisement
Sunita Williams
ವಿದೇಶ25 seconds ago

Sunita Williams: ನಾಳೆಯೂ ನಡೆಯಲ್ಲ ಸುನೀತಾ ವಿಲಿಯಮ್ಸ್‌ ಗಗನಯಾತ್ರೆ; ಮೇ 17ಕ್ಕೆ ಮುಂದೂಡಿಕೆ

Ananya Panday Aditya Roy Kapur parties with Sara Ali Khan
ಬಾಲಿವುಡ್2 mins ago

Ananya Panday: ಅನನ್ಯಾ ಪಾಂಡೆ ಜತೆ ಆದಿತ್ಯ ರಾಯ್ ಕಪೂರ್ ಬ್ರೇಕಪ್‌? ಸೈಫ್‌ ಪುತ್ರಿ ಜತೆ ಲವ್‌ ಸ್ಟಾರ್ಟ್‌!

SSLC Result 2024 secret behind 20 percent grace marks
ಕರ್ನಾಟಕ13 mins ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

gold rate today sreeleela
ಚಿನ್ನದ ದರ26 mins ago

Gold Rate Today: ಚಿನ್ನದ ಮಾರುಕಟ್ಟೆ ಇಳಿಮುಖ; 22 ಮತ್ತು 24 ಕ್ಯಾರಟ್‌ ಬಂಗಾರದ ದರಗಳಲ್ಲಿ ಇಳಿಕೆ

SSLC Result 2024 78 schools get zero results in SSLC exams
ಬೆಂಗಳೂರು30 mins ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

Viral video
ವೈರಲ್ ನ್ಯೂಸ್31 mins ago

Viral Video: ಬಸ್‌, ರೈಲಿನಲ್ಲಿ ಮಾತ್ರ ಅಲ್ಲ.. ಫ್ಲೈಟ್‌ನಲ್ಲೂ ನಡೆಯುತ್ತೆ ಸೀಟಿಗಾಗಿ ಮಾರಾಮಾರಿ

SSLC Result 2024 SSLC students get 20 percent grace marks but result is very poor
ಶಿಕ್ಷಣ48 mins ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

Andre Russell
ಕ್ರೀಡೆ54 mins ago

Andre Russell: ಸ್ಟಾರ್​​ ನಟಿಯೊಂದಿಗೆ ಕೇಸರಿ ಲುಂಗಿಯಲ್ಲಿ ಮಸ್ತ್​ ಸ್ಟೆಪ್ಸ್ ಹಾಕಿದ ಆಂಡ್ರೆ ರಸೆಲ್

Deepika Padukone pushes away fan camera at airport
ಬಾಲಿವುಡ್55 mins ago

Deepika Padukone: ಕ್ಯಾಮೆರಾ ತಳ್ಳಿ ಮುಂದೆ ನಡೆದ ದೀಪಿಕಾ! ನಾಚಿಕೆಗೇಡಿನ ವರ್ತನೆ ಅಂದ್ರು ನೆಟ್ಟಿಗರು!

Kendasampige Serial Madhumitha Entry
ಕಿರುತೆರೆ57 mins ago

Kendasampige Serial: `ಕೆಂಡಸಂಪಿಗೆ’ ಧಾರಾವಾಹಿಗೆ ಕಾವ್ಯ ಶೈವ ಗುಡ್‌ ಬೈ; ಬದಲಾದ ಸುಮನಾ ಪಾತ್ರಧಾರಿ ಯಾರು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

SSLC Result 2024 secret behind 20 percent grace marks
ಕರ್ನಾಟಕ13 mins ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 SSLC students get 20 percent grace marks but result is very poor
ಶಿಕ್ಷಣ48 mins ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು2 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ3 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ3 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ3 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

ಟ್ರೆಂಡಿಂಗ್‌