Kartavyapath | ಸದ್ದಿಲ್ಲದೇ ಬೆಳಗುತ್ತಿದೆ ಸಾಂಸ್ಕೃತಿಕ ಮೂಲಸೌಕರ್ಯ: ಪ್ರಧಾನಿ ಮೋದಿ ಹೆಮ್ಮೆಯ ನುಡಿ - Vistara News

ದೇಶ

Kartavyapath | ಸದ್ದಿಲ್ಲದೇ ಬೆಳಗುತ್ತಿದೆ ಸಾಂಸ್ಕೃತಿಕ ಮೂಲಸೌಕರ್ಯ: ಪ್ರಧಾನಿ ಮೋದಿ ಹೆಮ್ಮೆಯ ನುಡಿ

ನವ ಭಾರತದಲ್ಲಿ ಸದ್ದಿಲ್ಲದೇ ಸಾಂಸ್ಕೃತಿಕ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿದೆ. ಆದರೆ ಈ ಬಗ್ಗೆ ಬಹಳಷ್ಟು ಚರ್ಚೆಗಳಾಗುತ್ತಿಲ್ಲ ಎಂದ ಪ್ರಧಾನಿ ನರೇಂದ್ರ ಮೋದಿ.

VISTARANEWS.COM


on

ಕರ್ತವ್ಯಪಥ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ನಮ್ಮೆಲ್ಲ ವ್ಯವಹಾರಗಳು, ಸಾಧನೆಗಳು, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಆಧುನಿಕತೆಯ ಗುರಿಯಿದೆ. ಮೂಲಸೌಕರ್ಯ ಎಂದರೆ ಕೇವಲ ರಸ್ತೆ, ಫ್ಲೈಓವರ್ ನಿರ್ಮಾಣವಲ್ಲ. ಆಧುನಿಕ ಭಾರತದಲ್ಲಿ ಮೂಲಸೌಕರ್ಯಕ್ಕೆ ಹಿರಿದಾದ ಅರ್ಥವಿದೆ; ಬೇರೆ ಆಯಾಮವಿದೆ. ಸಾಮಾಜಿಕ ಮೂಲಸೌಕರ್ಯ, ಸಾರಿಗೆ ಮೂಲಸೌಕರ್ಯ, ಡಿಟಿಟಲ್ ಮೂಲಸೌಕರ್ಯಗಳಿವೆ. ಆದರೆ, ಬಹಳ ಜನರು ದೇಶದಲ್ಲಾಗುತ್ತಿರುವ ಸಾಂಸ್ಕೃತಿಕ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಗಮನಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಗುರುವಾರ ಸಂಜೆ ಕರ್ತವ್ಯಪಥ(ಈ ಮೊದಲು ರಾಜಪಥ)ವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಮೋದಿ ಅವರು, “ಸಾಮಾಜಿಕ ಮೂಲಸೌಕರ್ಯ ದೇಶದಲ್ಲಿ ಹೆಚ್ಚಾಗುತ್ತಿದೆ. ನಮ್ಮ ರಾಷ್ಟ್ರದಲ್ಲಿ ಈಗ ಏಮ್ಸ್‌ಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ; ಶೇ.50ರಷ್ಟು ಮೆಡಿಕಲ್ ಕಾಲೇಜುಗಳು ಹೆಚ್ಚಿವೆ. ಐಐಟಿಗಳ ಸಂಖ್ಯೆ ಅಧಿಕವಾಗುತ್ತಿದೆ. ಮೂರು ವರ್ಷಗಳಲ್ಲಿ 6.5 ಕೋಟಿ ಗ್ರಾಮೀಣ ಮನೆಗಳಿಗೆ ನೀರು ಪೂರೈಸಲಾಗಿದೆ. 75 ಅಮೃತ ಸರೋವರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದೆಲ್ಲವೂ ಸಾಮಾಜಿಕ ಮೂಲಸೌಕರ್ಯದ ಭಾಗವಾಗಿದೆ” ಎಂದು ಹೇಳಿದರು.

ಟಾನ್ಸ್‌ಪೋರ್ಟ್ ಇನ್ಫ್ರಾಸ್ಟ್ರಕ್ಚರ್
ಸಾರಿಗೆ ಸಂಪರ್ಕ ಮೂಲಸೌಕರ್ಯದಲ್ಲೂ ದೇಶ ದಾಪುಗಾಲು ಹಾಕುತ್ತಿದೆ. ದಾಖಲೆ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಹೇಗೆ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆಯೋ ಅಷ್ಟೇ ವೇಗದಲ್ಲಿ ಎಕ್ಸ್‌ಪ್ರೆಸ್ ವೇಗಳೂ ನಿರ್ಮಾಣವಾಗುತ್ತಿವೆ. ರೈಲು ಮಾರ್ಗಗಳು ವಿಸ್ತರಣೆಯಾಗುತ್ತಿರುವ ರೀತಿಯಲ್ಲಿ ಬೇರೆ ಬೇರೆ ನಗರಗಳಲ್ಲಿ ಮೆಟ್ರೋ ಕೂಡ ವಿಸ್ತಾರವಾಗುತ್ತಿದೆ. ಏರ್‌ಪೋರ್ಟ್‌ಗಳು ನಿರ್ಮಾಣ ಹೆಚ್ಚಾದಂತೆ, ಜಲಸಂಚಾರ ಮಾರ್ಗ ಕೂಡ ಅಭಿವೃದ್ಧಿ ಕಾಣುತ್ತಿದೆ ಎಂದರು.

ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್
ನಮ್ಮ ದೇಶದ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಸಾಧನೆಯ ಬಗ್ಗೆ ಇಡೀ ಜಗತ್ತಿಗೇ ತಿಳಿದಿದೆ. ದೇಶದ 1.5 ಕೋಟಿ ಗ್ರಾಮಪಂಚಾಯ್ತಿಗಳಿಗೆ ಆಪ್ಟಿಕಲ್ ಫೈಬರ್ ಅಳವಡಿಸಲಾಗಿದೆ. ಡಿಜಿಟಲ್ ಪೇಮೆಂಟ್‌ಗಳಲ್ಲಿ ದಾಖಲೆ ಬರೆಯುತ್ತಿದ್ದೇವೆ. ಭಾರತದಲ್ಲಿ ಡಿಜಿಟಲ್ ಕ್ರಾಂತಿಯೇ ಆಗುತ್ತಿದೆ ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿದರು.

ಕಲ್ಚರಲ್ ಇನ್ಫ್ರಾಸ್ಟ್ರಕ್ಚರ್
ಸಾಂಸ್ಕೃತಿಕ ಮೂಲಸೌಕರ್ಯ ಬಗ್ಗೆ ಹೆಚ್ಚೇನೂ ಚರ್ಚೆಯಾಗುತ್ತಿಲ್ಲ. ಆದರೆ, ಹೊಸ ಭಾರತದಲ್ಲಿ ಸಾಂಸ್ಕೃತಿಕ ಮೂಲಸೌಕರ್ಯವೂ ವೇಗದಲ್ಲಾಗುತ್ತಿದೆ. ಕಾಶಿ ವಿಶ್ವನಾಥ ಮಂದಿರ ಪುನರುತ್ಥಾನದಿಂದ ಹಿಡಿದು ಕೇದಾರನಾಥ, ಕರ್ತಾರಪುರ ಕ್ಷೇತ್ರದವರೆಗೂ ಅಭಿವೃದ್ಧಿಯಾಗುತ್ತಿದೆ. ಮಹಾನ್ ನಾಯಕರಿಗೆ ಅಭೂತಪೂರ್ವ ಗೌರವ ನೀಡಲಾಗುತ್ತಿದೆ. ಸರ್ದಾರ್ ಪಟೇಲ್ ಭವ್ಯ ಪ್ರತಿಮೆ, ಇಂಡಿಯಾಗೇಟ್ ಬಳಿ ನೇತಾಜಿ ಸುಭಾಶ್ ಚಂದ್ರ ಬೋಸ್ ಪ್ರತಿಮೆ ಪ್ರತಿಷ್ಠಾಪನೆ, ನ್ಯಾಷನಲ್ ಪೊಲೀಸ್ ಮೆಮೋರಿಯಲ್, ನ್ಯಾಷನಲ್ ವಾರ್ ಮೆಮೋರಿಯಲ್, ಪಿಎಂ ಮೆಮೋರಿಯಲ್ ಹೀಗೆ ಸಾಗುತ್ತದೆ ಪಟ್ಟಿ. ಅದಕ್ಕೀಗ ಕರ್ತವ್ಯಪಥ ಕೂಡ ಸೇರ್ಪಡೆಯಾಗಿದೆ ಎಂದು ಹೇಳಿದರು.

ಇಂಡಿಯಾ ಗೇಟ್‌ನಲ್ಲೀಗ ಬೋಸ್
ಇಂಡಿಯಾ ಗೇಟ್‌ನಲ್ಲಿ ರಾಷ್ಟ್ರ ನಾಯಕ ಸುಭಾಶ್ ಚಂದ್ರಬೋಸ್ ಅವರ ವಿಶಾಲ ಪ್ರತಿಮೆ ಸ್ಥಾಪಿಸಲಾಗಿದೆ. ಯಾವ ಜಾಗದಲ್ಲಿ ಬ್ರಿಟಿಷ್ ರಾಜನ ಪ್ರತಿಮೆ ಇತ್ತೋ ಅದೇ ಜಾಗದಲ್ಲೀಗ ಬೋಸ್ ಅವರ ಪ್ರತಿಮೆ ಇದೆ. ಇದು ಆಧುನಿಕ ಭಾರತ ಹಾಗೂ ಸಶಕ್ತ ಭಾರತದ ಪ್ರತೀಕವಾಗಿದೆ ಎಂದು ಪ್ರಧಾನಿ ಹೇಳಿದರು.

ಇಡೀ ವಿಶ್ವವೇ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರನ್ನು ನೇತಾಜಿ ಎಂದು ಕರೆಯುತ್ತಿತ್ತು. ನೇತಾಜಿ ಸಾಹಸ, ಸ್ವಾಭಿಮಾನ, ನಾಯಕತ್ವದ ಪ್ರತೀಕರಾಗಿದ್ದರು. ಅವರು ಪರಂಪರಗೆ ಗೌರವ ನೀಡುತ್ತಿದ್ದರು. ಭಾರತವನ್ನು ಆಧುನಿಕ ರಾಷ್ಟ್ರವನ್ನು ಮಾಡುವ ಕನಸು ಕಂಡಿದ್ದರು. ಸ್ವಾತಂತ್ರ್ಯ ಸಿಕ್ಕ ಬಳಿಕ ಭಾರತವೇನಾದರೂ ಬೋಸ್ ಅವರ ವಿಚಾರಗಳ ಅನುಸಾರ ನಡೆದುಕೊಂಡಿದ್ದರೆ ಇಷ್ಟೊತ್ತಿಗೆ ಭಾರತವು ಆಧುನಿಕ ರಾಷ್ಟ್ರವಾಗಿ ಬದಲಾಗುತ್ತಿತ್ತು ಎಂದು ಹೇಳಿದರು.

ಇದನ್ನೂ ಓದಿ | Kartavyapath | ಹೊಸ ಸಂಸತ್ ಭವನದಲ್ಲಿ ಶ್ರಮಿಕರ ಗ್ಯಾಲರಿ: ಪ್ರಧಾನಿ ನರೇಂದ್ರ ಮೋದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024: ಮೊದಲ ಹಂತದ ಮತದಾನ ವೇಳೆ ಗುಂಡಿನ ದಾಳಿ ನಡೆಸಿದ್ದ ಮೂವರ ಬಂಧನ

Lok Sabha Election 2024: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ನಡೆದಿದೆ. ಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ. ಈ ಮಧ್ಯೆ ಮಣಿಪುರದ ಇಂಫಾಲದ ಪೂರ್ವ ಜಿಲ್ಲೆಯ ಮತದಾನ ಕೇಂದ್ರದ ಬಳಿ ಗುಂಡಿನ ದಾಳಿ ನಡೆಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂಫಾಲ್ ಪೂರ್ವ ಜಿಲ್ಲೆಯ ಮೊಯಿರಂಗ್ಕಂಪು ಸಜೆಬ್‌ನಲ್ಲಿ ಈ ಘಟನೆ ನಡೆದಿತ್ತು. ಗುಂಡಿನ ದಾಳಿಯ ನಂತರ ಮೂವರು ಸ್ಥಳದಿಂದ ಪರಾರಿಯಾಗಿದ್ದರು. ಅವರನ್ನು ಶುಕ್ರವಾರ ಸಂಜೆ ಘಟನಾ ಸ್ಥಳದಿಂದ 5 ಕಿ.ಮೀ. ದೂರದಲ್ಲಿ ಬಂಧಿಸಲಾಗಿದೆ.

VISTARANEWS.COM


on

Lok Sabha Election 2024
Koo

ಇಂಫಾಲ: ಶುಕ್ರವಾರ (ಏಪ್ರಿಲ್‌ 19) ಲೋಕಸಭಾ ಚುನಾವಣೆ (Lok Sabha Election 2024)ಯ ಮೊದಲ ಹಂತದ ಮತದಾನ ನಡೆದಿದೆ. ಕೆಲವೆಡೆ ನಡೆದ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ. ಈ ಮಧ್ಯೆ ಮಣಿಪುರದ ಇಂಫಾಲದ ಪೂರ್ವ ಜಿಲ್ಲೆಯ ಮತದಾನ ಕೇಂದ್ರದ ಬಳಿ ಗುಂಡಿನ ದಾಳಿ ನಡೆಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂಫಾಲ್ ಪೂರ್ವ ಜಿಲ್ಲೆಯ ಮೊಯಿರಂಗ್ಕಂಪು ಸಜೆಬ್‌ನಲ್ಲಿ ಈ ಘಟನೆ ನಡೆದಿತ್ತು.

ಗುಂಡಿನ ದಾಳಿಯ ನಂತರ ಮೂವರು ಸ್ಥಳದಿಂದ ಪರಾರಿಯಾಗಿದ್ದರು. ಅವರನ್ನು ಶುಕ್ರವಾರ ಸಂಜೆ ಘಟನಾ ಸ್ಥಳದಿಂದ 5 ಕಿ.ಮೀ. ದೂರದಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ಒಂದು ಪಿಸ್ತೂಲ್, ಮದ್ದುಗುಂಡು ಮತ್ತು 1.5 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ

ಗುಂಡಿನ ದಾಳಿ ಮತದಾನದ ಹಕ್ಕನ್ನು ಚಲಾಯಿಸಲು ಸಾಲುಗಟ್ಟಿ ನಿಂತಿದ್ದ ಮತದಾರರಲ್ಲಿ ಭೀತಿಯನ್ನುಂಟು ಮಾಡಿತ್ತು. ಮತದಾನ ಪ್ರದೇಶದಲ್ಲಿ ಸುಮಾರು 10 ಸೆಕೆಂಡುಗಳ ಕಾಲ ಗುಂಡಿನ ಚಕಮಕಿ ನಡೆಯಿತು. ಘಟನೆಯಲ್ಲಿ ಸಾವು ನೋವು ವರದಿಯಾಗಿಲ್ಲ. ಮಣಿಪುರದಲ್ಲಿ ಶೇ. 68ರಷ್ಟು ಮತದಾನವಾಗಿದೆ.

ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4ರಂದು ನಡೆಯಲಿದೆ. ಇಂದು ಮತದಾನ ನಡೆದ 102 ಕ್ಷೇತ್ರದ ಕಣದಲ್ಲಿ 1,625 ಅಭ್ಯರ್ಥಿಗಳು, 1,491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಇದ್ದಾರೆ. 41 ಹೆಲಿಕಾಪ್ಟರ್, 84 ವಿಶೇಷ ರೈಲು ಹಾಗೂ 1 ಲಕ್ಷ ವಾಹನಗಳು ಚುನಾವಣಾ ಕಾರ್ಯಕ್ಕೆ ಬಳಸಲಾಗಿದೆ.

ಮೊದಲ ಹಂತದಲ್ಲಿ ಶೇ. 60.3ರಷ್ಟು ಮತದಾನ

21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳನ್ನು ಒಳಗೊಂಡ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಸಂಜೆ 5 ಗಂಟೆಯವರೆಗೆ ಸುಮಾರು ಶೇ. 60ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಏಳು ಹಂತಗಳ ಚುನಾವಣೆಯ ಮೊದಲ ಮತ್ತು ಅತಿ ದೊಡ್ಡ ಹಂತದ ಮತದಾನ ಪ್ರಕ್ರಿಯೆ ಎಲ್ಲ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಯಿತು. ಹೆಚ್ಚಿನ ಸ್ಥಾನಗಳಲ್ಲಿ ಸಂಜೆ 6 ಗಂಟೆಗೆ ಕೊನೆಗೊಂಡಿತು. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಏಕಕಾಲದಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದೆ.

ಇದನ್ನೂ ಓದಿ: Narendra Modi : ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಮೋದಿ; ಎನ್​ಡಿಎಗೆ ಮತ ನೀಡಿದ್ದಾರೆ ಎಂದ ಪ್ರಧಾನಿ

ತಮಿಳುನಾಡು (39), ಉತ್ತರಾಖಂಡ (5), ಅರುಣಾಚಲ ಪ್ರದೇಶ (2), ಮೇಘಾಲಯ (2), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1), ಮಿಜೋರಾಂ (1), ನಾಗಾಲ್ಯಾಂಡ್ (1), ಪುದುಚೇರಿ (1), ಸಿಕ್ಕಿಂ (1) ಮತ್ತು ಲಕ್ಷದ್ವೀಪ (1) ಸ್ಥಾನಗಳಿಗೆ ಮತದಾನ ನಡೆದಿದೆ. ರಾಜಸ್ಥಾನದ 12, ಉತ್ತರ ಪ್ರದೇಶದ 8, ಮಧ್ಯಪ್ರದೇಶದ 6, ಅಸ್ಸಾಂ ಮತ್ತು ಮಹಾರಾಷ್ಟ್ರದ ತಲಾ 5, ಬಿಹಾರದ 4, ಪಶ್ಚಿಮ ಬಂಗಾಳದ 3, ಮಣಿಪುರದ 2, ತ್ರಿಪುರಾ, ಜಮ್ಮು ಮತ್ತು ಕಾಶ್ಮೀರ ಮತ್ತು ಛತ್ತೀಸ್ ಗಢದ ತಲಾ 1 ಸ್ಥಾನಗಳಿಗೆ ಇಂದು ಮತದಾನ ನಡೆಯಿತು. ಅರುಣಾಚಲ ಪ್ರದೇಶ (60 ಸ್ಥಾನಗಳು) ಮತ್ತು ಸಿಕ್ಕಿಂ (32 ಸ್ಥಾನಗಳು) ವಿಧಾನಸಭಾ ಚುನಾವಣೆಗಳು ಇದೇ ವೇಳೆ ನಡೆದವು.

Continue Reading

ದೇಶ

CJI Chandrachud: ಹೊಸ ಕಾನೂನುಗಳ ಜಾರಿ ಐತಿಹಾಸಿಕ; ಸಿಜೆಐ ಡಿ.ವೈ.ಚಂದ್ರಚೂಡ್‌ ಬಣ್ಣನೆ

CJI Chandrachud: ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ವಿಧೇಯಕ-2023 ಎಂಬುದಾಗಿ ಮಾರ್ಪಡಿಸಲಾಗಿದೆ. ಹೊಸ ಕಾನೂನುಗಳು ಜುಲೈ 1ರಿಂದ ಜಾರಿಗೆ ಬರಲಿವೆ. ಈ ಕಾನೂನುಗಳ ಕುರಿತು ಸಿಜೆಐ ಡಿ.ವೈ.ಚಂದ್ರಚೂಡ್‌ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

VISTARANEWS.COM


on

CJI Chandrachud
Koo

ನವದೆಹಲಿ: ದೇಶದಲ್ಲಿ ವಸಾಹತು ಕಾಲದ ಕ್ರಿಮಿನಲ್‌ ಕಾನೂನುಗಳ (Criminal Laws) ಸಂಪೂರ್ಣ ತಿದ್ದುಪಡಿ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಭಾರತೀಯ ದಂಡ ಸಂಹಿತೆ (IPC-1860), ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC-1973) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು (Indian Evidence Act-1872) ತಿದ್ದುಪಡಿಗೊಳಿಸಲಾಗಿದೆ. ಇವುಗಳ ಬದಲಾಗಿ ಮೂರು ಹೊಸ ಕಾನೂನುಗಳು (New Laws) ಜುಲೈ 1ರಿಂದಲೇ ದೇಶಾದ್ಯಂತ ಜಾರಿಗೆ ಬರಲಿವೆ. ಇದರ ಬೆನ್ನಲ್ಲೇ, ಹೊಸ ಕಾನೂನುಗಳ ಜಾರಿಯ ಕುರಿತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಿಜೆಐ ಡಿ.ವೈ.ಚಂದ್ರಚೂಡ್‌ (CJI Chandrachud) ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಭಾರತವು ಬದಲಾಗುತ್ತಿದೆ ಎಂಬುದಕ್ಕೆ ಹೊಸ ಕಾನೂನುಗಳ ಜಾರಿಯೇ ಸಾಕ್ಷಿಯಾಗಿದೆ. ಭಾರತ ಹೊಸ ಹಾದಿಯತ್ತ ಸಾಗುತ್ತಿದೆ. ಆಧುನಿಕ ಭಾರತದ ಸವಾಲುಗಳನ್ನು ಎದುರಿಸಲು ಹಾಗೂ ಭವಿಷ್ಯದ ದೃಷ್ಟಿಯಿಂದ ಕಾನೂನುಗಳ ಬದಲಾವಣೆಯು ಪ್ರಮುಖವಾಗಿದೆ. ಇದರಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಆಗುತ್ತದೆ. ಹಾಗಾಗಿ, ಹೊಸ ಕಾನೂನುಗಳ ಜಾರಿಯು ಭಾರತವು ಬದಲಾಗುತ್ತಿದೆ ಎಂಬುದಕ್ಕೆ ಕುರುಹು” ಎಂದು ಹೊಸ ಕಾನೂನುಗಳನ್ನು ಶ್ಲಾಘಿಸಿದರು.

“ದೇಶದ ಕಾನೂನು ವ್ಯವಸ್ಥೆ, ಕ್ರಿಮಿನಲ್‌ ಕಾನೂನುಗಳ ಬದಲಾವಣೆಯು ಅತ್ಯಗತ್ಯವಾಗಿತ್ತು. ಇದರ ದಿಸೆಯಲ್ಲಿ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಿರುವುದು, ಮಹತ್ವದ ಬದಲಾವಣೆ ಮಾಡುತ್ತಿರುವುದು ಸಂತಸವಾಗಿದೆ. ಅದರಲ್ಲೂ, ಸಂತ್ರಸ್ತರನ್ನು ರಕ್ಷಿಸಿ, ಅಪರಾಧ ಎಸಗುವವರ ವಿರುದ್ಧ ಕೂಲಂಕಷ ತನಿಖೆಗೆ ಹೊಸ ಕಾನೂನುಗಳು ಸಹಕಾರಿಯಾಗಿವೆ” ಎಂದು ಬಣ್ಣಿಸಿದರು.

ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ವಿಧೇಯಕ-2023 ಎಂಬುದಾಗಿ ಮಾರ್ಪಡಿಸಲಾಗಿದೆ. ಹೊಸ ಕಾನೂನುಗಳು ಜುಲೈ 1ರಿಂದ ಜಾರಿಗೆ ಬರಲಿವೆ.

ಈಗಿರುವ ಭಾರತೀಯ ದಂಡ ಸಂಹಿತೆಯಲ್ಲಿ 420 ಸೆಕ್ಷನ್ ಅನ್ನು ವಂಚನೆ ಅಪರಾಧಕ್ಕೆ ಅನ್ವಯಿಸಲಾಗುತ್ತದೆ. ಆದರೆ, ಭಾರತೀಯ ನ್ಯಾಯ ಸಂಹಿತೆಯ ಈ ಅಪರಾಧಕ್ಕೆ 316(2), (3) ಮತ್ತು (4) ಸೆಕ್ಷನ್‌ಗಳು ಇರಲಿವೆ. ವಂಚನೆ ಅಪರಾಧಕ್ಕಾಗಿ ಈ ಸೆಕ್ಷನ್‌ಗಳಡಿ ಅಪರಾಧಿಗೆ ಮೂರು ವರ್ಷ, ಐದು ವರ್ಷ ಅಥವಾ ಏಳು ವರ್ಷಗಳವರೆಗೆ ದಂಡ ಸಹಿತ ಜೈಲು ಶಿಕ್ಷೆಯನ್ನು ವಿಸ್ತರಿಸಬಹುದಾಗಿದೆ.

ದೇಶದ್ರೋಹ ಕಾನೂನು ಬದಲು

ಬ್ರಿಟಿಷರ ಕಾಲದಲ್ಲಿ ಜಾರಿಗೆ ತಂದ ದೇಶದ್ರೋಹದ ಕಾನೂನು ನೂತನ ಕ್ರಿಮಿನಲ್‌ ಕಾನೂನಿನಲ್ಲಿ ಇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾಹಿತಿ ನೀಡಿದ್ದಾರೆ. ದೇಶದ್ರೋಹ ಕಾನೂನಿನಲ್ಲಿ ಬಂಧಿತರಾದವರಿಗೆ ಮೂರು ವರ್ಷದಿಂದ ಜೀವಾವಧಿ ಶಿಕ್ಷೆ ನೀಡಬಹುದಾಗಿದ್ದು, ಈ ಕಾನೂನು ರದ್ದುಗೊಳಿಸಲಾಗುತ್ತದೆ ಎಂದು ಹೇಳಿದರು. ಇದರ ಬದಲಾಗಿ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ಕೂಡ ತಿಳಿಸಿದರು.

ಅತ್ಯಾಚಾರಿಗಳಿಗೆ 20 ವರ್ಷ ಜೈಲು

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದು ನೂತನ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. “ಹೊಸ ಕಾನೂನುಗಳ ಅಡಿಯಲ್ಲಿ ಅತ್ಯಾಚಾರಿಗಳಿಗೆ ಗರಿಷ್ಠ 20 ವರ್ಷ ಅಥವಾ ಅವರು ಜೀವಿತಾವಧಿವರೆಗೆ ಜೈಲಿನಲ್ಲಿ ಕಾಲ ಕಳೆಯುವ ರೀತಿ ಶಿಕ್ಷೆ ವಿಧಿಸಲಾಗುತ್ತದೆ. ಹಾಗೆಯೇ, ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸುವ, ಅತ್ಯಾಚಾರ ಸಂತ್ರಸ್ತೆಯರ ಮಾಹಿತಿ ಬಹಿರಂಗಪಡಿಸಿದವರಿಗೂ ಶಿಕ್ಷೆ ವಿಧಿಸುವ ಕಾನೂನು ಇರಲಿದೆ” ಎಂದು ಅಮಿತ್‌ ಶಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Parliament Session: ಅಪರಾಧ ಎಸಗಿ ದೇಶ ಬಿಟ್ಟು ಹೋದವರಿಗೆ ಇನ್ನಿಲ್ಲ ನೆಮ್ಮದಿ; ಬರ್ತಿದೆ ಹೊಸ ಕಾನೂನು!

Continue Reading

ವಿದೇಶ

Elon Musk: ಮೋದಿ ಭೇಟಿಗಾಗಿ ಈ ತಿಂಗಳು ಭಾರತಕ್ಕೆ ಬರಲ್ಲ ಎಲಾನ್‌ ಮಸ್ಕ್;‌ ಕೊಟ್ಟ ಕಾರಣ ಇದು

Elon Musk: ಭಾರತಕ್ಕೆ ಎಲಾನ್‌ ಮಸ್ಕ್‌ ಅವರು ಏಪ್ರಿಲ್‌ 21 ಹಾಗೂ 22ರಂದು ಆಗಮಿಸಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಬೇಕಿತ್ತು. ಆದರೆ, ಕೊನೆಯಲ್ಲಿ ಕ್ಷಣದಲ್ಲಿ ಅವರು ಭಾರತದ ಭೇಟಿಯನ್ನು ಮುಂದೂಡಿದ್ದಾರೆ. ಆದರೆ, ಇದೇ ವರ್ಷ ಭಾರತಕ್ಕೆ ಭೇಟಿ ನೀಡುವುದು ಖಚಿತ ಎಂಬುದಾಗಿ ಅವರು ಹೇಳಿದ್ದಾರೆ.

VISTARANEWS.COM


on

Elon Musk
Koo

ವಾಷಿಂಗ್ಟನ್‌: ಎಲೆಕ್ಟ್ರಾನಿಕ್‌ ಕಾರುಗಳ ಉತ್ಪಾದನೆಯ ದೈತ್ಯ ಟೆಸ್ಲಾ ಕಂಪನಿ ಸಿಇಒ ಎಲಾನ್‌ ಮಸ್ಕ್‌ (Elon Musk) ಅವರು ಭಾರತಕ್ಕೆ ಭೇಟಿ ನೀಡುವುದನ್ನು ಮುಂದೂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಭೇಟಿಗಾಗಿ ಭಾರತಕ್ಕೆ ಎಲಾನ್‌ ಮಸ್ಕ್‌ ಅವರು ಏಪ್ರಿಲ್‌ 21 ಹಾಗೂ 22ರಂದು ಆಗಮಿಸಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಎಲಾನ್‌ ಮಸ್ಕ್‌ ಅವರು ಭಾರತದ ಭೇಟಿಯನ್ನು ಮುಂದೂಡಿಕೆ ಮಾಡಿದ್ದಾರೆ.

ಭಾರತದ ಭೇಟಿಯನ್ನು ಮುಂದೂಡಿರುವ ಕುರಿತು ಎಲಾನ್‌ ಮಸ್ಕ್‌ ಅವರೇ ಮಾಹಿತಿ ನೀಡಿದ್ದಾರೆ. “ಟೆಸ್ಲಾ ಕಂಪನಿಯ ಅತಿ ಹೆಚ್ಚು ಜವಾಬ್ದಾರಿಗಳಿರುವ ಕಾರಣ ಭಾರತದ ಭೇಟಿಯನ್ನು ಮುಂದೂಡಲು ಬೇಸರವಾಗುತ್ತಿದೆ. ಆದರೆ, ಇದೇ ವರ್ಷದಲ್ಲಿಯೇ ಭಾರತಕ್ಕೆ ನಾನು ಭೇಟಿ ನೀಡುವುದು ನಿಶ್ಚಿತ” ಎಂದು ಎಲಾನ್‌ ಮಸ್ಕ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

ಎಲಾನ್‌ ಮಸ್ಕ್‌ ಅವರು ಅಮೆರಿಕದಲ್ಲಿ ಏಪ್ರಿಲ್‌ 23ರಂದು ನಡೆಯುವ ಮಹತ್ವದ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲಿದ್ದಾರೆ. ಅವರು ಟೆಸ್ಲಾ ಕಂಪನಿಯ ಮೊದಲ ತ್ರೈಮಾಸಿದಲ್ಲಿ ನಡೆಸಿದ ವಹಿವಾಟು ಕುರಿತು ಮಾಹಿತಿ ಒದಗಿಸಲಿದ್ದಾರೆ. ಇದರ ಜತೆಗೆ ಹಲವು ಸಭೆಗಳು ಕೂಡ ಇರುವುದರಿಂದ ಅವರು ಭಾರತದ ಭೇಟಿಯನ್ನು ಮುಂದೂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮೋದಿ ಭೇಟಿಯ ಅಜೆಂಡಾ ಏನು?

ಭಾರತದಲ್ಲಿ ಟೆಸ್ಲಾ ಕಾರು ಉತ್ಪಾದನೆ ಘಟಕ ಸ್ಥಾಪಿಸಲು ಟೆಸ್ಲಾ ಕಂಪನಿಯು ಹಲವು ವರ್ಷಗಳಿಂದ ಮಾತುಕತೆ ನಡೆಸುತ್ತಲೇ ಇದೆ. ಭಾರತದ ಷರತ್ತುಗಳು, ಟೆಸ್ಲಾ ಘಟಕ ಸ್ಥಾಪಿಸಲು ಮಸ್ಕ್‌ ಹಾಕಿಕೊಂಡಿರುವ ನಿಯಮಗಳಿಂದಾಗಿ ಘಟಕ ಸ್ಥಾಪನೆ ಮುಂದೂಡಿಕೆಯಾಗುತ್ತಲೇ ಇದೆ. ಆದರೆ, ಈ ಬಾರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಮೂಲಕ ಘಟಕ ಸ್ಥಾಪನೆಯ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದೇ ಹೇಳಲಾಗುತ್ತಿದೆ. ಹಾಗಾಗಿ, ಎಲಾನ್‌ ಮಸ್ಕ್‌ ಅವರು ಭಾರತಕ್ಕೆ ಭೇಟಿ ನೀಡುರುವುದು ಮಹತ್ವ ಪಡೆದಿದೆ.

ಎಲಾನ್‌ ಮಸ್ಕ್‌ ಅವರು ಕೆಲ ತಿಂಗಳ ಹಿಂದಷ್ಟೇ ಭಾರತದ ಪರವಾಗಿ ಮಾತನಾಡಿದ್ದರು. “ವಿಶ್ವಸಂಸ್ಥೆಯು ಬದಲಾವಣೆ ತರಲು ಹಿಂಜರಿಯುತ್ತಿದೆ. ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವ ಪಡೆದಿರುವ ಬಲಿಷ್ಠ ರಾಷ್ಟ್ರಗಳು ತಾವು ಹೊಂದಿರುವ ಹೆಚ್ಚಿನ ಅಧಿಕಾರವನ್ನು ಬಳಸಿಕೊಳ್ಳಲು ಬಯಸುತ್ತಿವೆ. ಇದೇ ಕಾರಣಕ್ಕಾಗಿ ಆಫ್ರಿಕಾ ಹಾಗೂ ಭಾರತಕ್ಕೆ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಕ್ಕಿಲ್ಲ. ಹಾಗಾಗಿ, ವಿಶ್ವಸಂಸ್ಥೆಯು ನಿಯಮಗಳನ್ನು ಬದಲಿಸಬೇಕು. ಜಗತ್ತಿನಲ್ಲೇ ಭಾರತ ಜನಪ್ರಿಯ ದೇಶವಾದರೂ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಗದಿರುವುದು ಅಸಂಬದ್ಧವಾಗಿದೆ. ಭಾರತ ಹಾಗೂ ಆಫ್ರಿಕಾಗೆ ಕಾಯಂ ಸದಸ್ಯತ್ವ ನೀಡಬೇಕು” ಎಂದು ಎಲಾನ್‌ ಮಸ್ಕ್‌ ಅವರು ಕಳೆದ ಜನವರಿಯಲ್ಲಿ ಆಗ್ರಹಿಸಿದ್ದರು.

ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಿ ಎಂಬ ಮಸ್ಕ್‌ ಆಗ್ರಹಕ್ಕೆ ಅಮೆರಿಕವೂ ಸಾಥ್, ಶೀಘ್ರವೇ ಗುಡ್‌ ನ್ಯೂಸ್?

Continue Reading

ಪ್ರಮುಖ ಸುದ್ದಿ

Surabhi Jain : 30 ವರ್ಷಕ್ಕೆ ಮೃತಪಟ್ಟ ಫ್ಯಾಷನ್ ಐಕಾನ್​ ಸುರಭಿ ಜೈನ್

VISTARANEWS.COM


on

Surabhi Jain
Koo

ನವದೆಹಲಿ: ಜನಪ್ರಿಯ ಫ್ಯಾಷನ್ ಐಕಾನ್​ ಸುರಭಿ ಜೈನ್ ಕ್ಯಾನ್ಸರ್​ನೊಂದಿಗಿನ ದೀರ್ಘಕಾಲದ ಹೋರಾಟದ ನಂತರ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಅವರಿಗೆ 30 ವರ್ಷ ವಯಸ್ಸಾಗಿತ್ತು. ಇನ್​ಸ್ಟಾಗ್ರಾಮ್​ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರೆ. ಜೈನ್ ಅಂಡಾಶಯದ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಎಂಟು ವಾರಗಳ ಹಿಂದೆ ಇನ್ಸ್ಟಾಗ್ರಾಮ್​ನಲ್ಲಿ ಹಾಕಿದ ತನ್ನ ಕೊನೆಯ ಪೋಸ್ಟ್​ನಲ್ಲಿ ಸುರಭಿ ಜೈನ್ ಆಸ್ಪತ್ರೆಯಲ್ಲಿ ತನ್ನ ಚಿತ್ರ ಹಂಚಿಕೊಂಡಿದ್ದರು.

“ನನ್ನ ಆರೋಗ್ಯದ ಬಗ್ಗೆ ನಾನು ನಿಮಗೆ ಅಪ್ಡೇಟ್ ಮಾಡಿಲ್ಲ ಎಂದು ನನಗೆ ತಿಳಿದಿದೆ. ಅದರ ಬಗ್ಗೆ ನಾನು ಪ್ರತಿದಿನ ಪಡೆಯುತ್ತಿರುವ ಸಂದೇಶಗಳ ಸಂಖ್ಯೆಯನ್ನು ನೋಡಿದರೆ ಭಯವಾಗುತ್ತಿದೆ. ವಿಷಯಗಳು ಉತ್ತಮವಾಗಿ ನಡೆಯುತ್ತಿಲ್ಲ. ಆದ್ದರಿಂದ ಹಂಚಿಕೊಳ್ಳಲು ಹೆಚ್ಚು ಇಲ್ಲ. ಕಳೆದ 2 ತಿಂಗಳುಗಳಲ್ಲಿ ನಾನು ಹೆಚ್ಚಾಗಿ ಆಸ್ಪತ್ರೆಯಲ್ಲಿ ಕಳೆದಿದ್ದೇನೆ. ಚಿಕಿತ್ಸೆ ನಡೆಯುತ್ತಿದೆ. ಕಷ್ಟ ಮತ್ತು ಇದೆಲ್ಲವೂ ಕೊನೆಗೊಳ್ಳಬೇಕೆಂದು ನಾನು ಬಯಸುತ್ತೇನೆ” ಎಂದು ಅವರು ಬರೆದುಕೊಂಡಿದ್ದರು.

ಇದನ್ನೂ ಓದಿ: Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

ಅವರ ಸಾವಿನ ಸುದ್ದಿಯನ್ನು ಅವರ ಕುಟುಂಬವು ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದೆ. ಅವರು ಗುರುವಾರ ನಿಧನರಾದರು ಮತ್ತು ಏಪ್ರಿಲ್ 19 ರಂದು ಗಾಜಿಯಾಬಾದ್​ನಲ್ಲಿ ಅಂತ್ಯಕ್ರಿಯೆ ಮಾಡಲಾಯಿತು ಎಂದು ಅವರು ಹೇಳಿದರು.

ಸುರಭಿ ಜೈನ್ ಅವರಿಗೆ ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆಯುತ್ತಿರುವುದು ಇದು ಎರಡನೇ ಬಾರಿ. 27 ನೇ ವಯಸ್ಸಿನಲ್ಲಿ, ಅವರು ತಮ್ಮ ಮೊದಲ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. “ಶಸ್ತ್ರಚಿಕಿತ್ಸೆಯಿಂದ ನನಗೆ 149 ಹೊಲಿಗೆಗಳು ಮತ್ತು ಸಾಕಷ್ಟು ನೋವು ಕಾಣಿಸಿಕೊಂಡಿತು. ನಾನು ಹೆಚ್ಚು ಚಟವಟಿಕೆಯಿಂದ ಇರಲು ಹಾಗೂ ನಗು ಮೂಡಿಸಲು ಶ್ರಮ ವಹಿಸುತ್ತಿದ್ದೇನೆ ಎಂದು ಅವರು ಆ ವೇಳೆ ಬರೆದುಕೊಂಡಿದ್ದರು.

ಅಂಡಾಶಯದ ಕ್ಯಾನ್ಸರ್ ಅಂಡಾಶಯಗಳಲ್ಲಿ ಹುಟ್ಟುತ್ತದೆ ಮತ್ತು ಇದು ಮಹಿಳೆಯರಿಗೆ ಗಮನಾರ್ಹ ಆರೋಗ್ಯ ಕಾಳಜಿಯಾಗಿದೆ. ಈ ರೋಗವು ಅಂಡಾಶಯಗಳಲ್ಲಿ ಮಾರಣಾಂತಿಕ ಗೆಡ್ಡೆಯಿಂದ ಆರಂಭವಾಗುತ್ತದೆ. ಇದು ಆರೋಗ್ಯಕರ ಅಂಗಾಂಶಗಳನ್ನು ನಾಶಪಡಿಸುತ್ತದೆ. ಇದು ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ನಂತರ ಭಾರತದಲ್ಲಿ ಮಹಿಳೆಯರಲ್ಲಿ ಮೂರನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ.

Continue Reading
Advertisement
Lok Sabha Election 2024
ಕರ್ನಾಟಕ2 mins ago

Lok Sabha Election 2024: ನಾಚಿಗೆ ಇಲ್ಲದೆ 3 ಸೀಟಿಗಾಗಿ ಬಿಜೆಪಿ ಜತೆ ಹೋಗಿದ್ದಾರೆ: ದೇವೇಗೌಡರ ವಿರುದ್ಧ ಸಿಎಂ ವಾಗ್ದಾಳಿ

Lok Sabha Election 2024
Lok Sabha Election 202414 mins ago

Lok Sabha Election 2024: ಮೊದಲ ಹಂತದ ಮತದಾನ ವೇಳೆ ಗುಂಡಿನ ದಾಳಿ ನಡೆಸಿದ್ದ ಮೂವರ ಬಂಧನ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ21 mins ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

tiger attack
ಚಾಮರಾಜನಗರ21 mins ago

Tiger Attack : ಮರಿಯಾನೆ ಕೊಂದ ಹುಲಿ; ಶವ ಬಿಟ್ಟು ಕದಲದ ತಾಯಿ ಆನೆ ರೋಧನೆ

PBKS vs GT
ಕ್ರೀಡೆ41 mins ago

PBKS vs GT: ಗುಜರಾತ್​ ವಿರುದ್ಧವಾದರೂ ಪಂಜಾಬ್​ಗೆ ಒಲಿದೀತೇ ಗೆಲುವಿನ ಅದೃಷ್ಟ?

CJI Chandrachud
ದೇಶ52 mins ago

CJI Chandrachud: ಹೊಸ ಕಾನೂನುಗಳ ಜಾರಿ ಐತಿಹಾಸಿಕ; ಸಿಜೆಐ ಡಿ.ವೈ.ಚಂದ್ರಚೂಡ್‌ ಬಣ್ಣನೆ

Forest bathing activity begins at Cubbon Park
ಬೆಂಗಳೂರು55 mins ago

Forest Bathing: ಬೆಂಗಳೂರಲ್ಲೂ ಶುರು ಫಾರೆಸ್ಟ್‌ ಬಾಥಿಂಗ್‌; ಕಬ್ಬನ್ ಪಾರ್ಕ್‌ನಲ್ಲಿ ಮರ ಅಪ್ಪಲು ಕೊಡಬೇಕು 1500 ರೂ.!

Modi in Karnataka HD Deve Gowda attack on Congess
Lok Sabha Election 202455 mins ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Lok Sabha Election 2024
ಕರ್ನಾಟಕ58 mins ago

Lok Sabha Election 2024: ದಾರಿ ತಪ್ಪಿದ್ದಾರೆ ಎಂದ ಕುಮಾರಸ್ವಾಮಿಗೆ ಹೆಣ್ಣು ಮಕ್ಕಳು ತಕ್ಕ ಉತ್ತರ ಕೊಡಬೇಕು: ಡಿಕೆಶಿ

Job Alert
ಉದ್ಯೋಗ60 mins ago

Job Alert: ಉದ್ಯೋಗ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಬಿಬಿಎಂಪಿಯಿಂದ ಬರೋಬ್ಬರಿ 11,307 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ21 mins ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 202455 mins ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ5 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ5 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ12 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌