ದೇಶ
Veerendra Heggade speech in Rajya Sabha: ಮೋದಿ ಸರ್ಕಾರದಿಂದ ದೇಶದ ಅಭಿವೃದ್ಧಿ, ರಾಜ್ಯಸಭೆಯಲ್ಲಿ ಡಾ. ವೀರೇಂದ್ರ ಹೆಗ್ಗಡೆ ಪ್ರಶಂಸೆ
ಮೋದಿ ಸರ್ಕಾರದಿಂದ ದೇಶದ ನಾನಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಯೋಜನೆಗಳು ನಡೆಯುತ್ತಿವೆ. ಜನತೆ ಮತ್ತಷ್ಟು ಪ್ರಗತಿಯನ್ನು ನಿರೀಕ್ಷಿಸುತ್ತಿದ್ದಾರೆ ಎಂದು (Veerendra Heggade speech in Rajya Sabha) ರಾಜ್ಯಸಭೆಯಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.
ನವ ದೆಹಲಿ: ಮೋದಿ ಸರ್ಕಾರದಿಂದ ದೇಶದಲ್ಲಿ ಮೂಲಸೌಕರ್ಯ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಸಾಮಾಜಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ನಾನಾ ಅಭಿವೃದ್ಧಿ ಯೋಜನೆಗಳು ನಡೆಯುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಯೋಗ, ಆಯುರ್ವೇದ ಈಗ ಆಕರ್ಷಣೀಯವಾಗಿದೆ ಎಂದು ರಾಜ್ಯಸಭೆಯ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ರಾಜ್ಯಸಭೆಯಲ್ಲಿ ಗುರುವಾರ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾನಿರ್ಣಯದ ಚರ್ಚೆಯ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ಭಾರತದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳು ಜನಪರವಾಗಿವೆ. ಅವರ ಜೀವನದ ಗುಣಮಟ್ಟ ವೃದ್ಧಿಗೆ ಸಹಕಾರಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಾಮಿತ್ವ ಯೋಜನೆಯ ಅಡಿಯಲ್ಲಿ ಕಂದಾಯ ಇಲಾಖೆಯು ತಂತ್ರಜ್ಞಾನದ ಸಹಕಾರದಿಂದ ಕೃಷಿ ಮತ್ತು ಭೂಮಿಯ ಮ್ಯಾಪಿಂಗ್ ಮಾಡುತ್ತಿರುವುದರಿಂದ ಭೂ ದಾಖಲೆಯು ವ್ಯವಸ್ಥಿತವಾಗುತ್ತಿದೆ. ರೈತರಿಗೆ ಇದರಿಂದ ಅನುಕೂಲವಾಗುತ್ತಿದೆ ಎಂದರು.
ಪುಣ್ಯಕ್ಷೇತ್ರ ಕಾಶಿಗೆ ಮೊನ್ನೆ ಹೋಗಿದ್ದೆ. ಅಲ್ಲಿ ಆಗಿರುವ ಅಭಿವೃದ್ಧಿ ನೋಡಿ ನನಗೆ ವಿಸ್ಮಯವಾಯಿತು. ಮೋದಿಯವರ ಸರ್ಕಾರ ಅಭಿವೃದ್ಧಿ ಮಂತ್ರ ಪಠಿಸುತ್ತಿದೆ. ಭಾಷೆಗಳು ನಮ್ಮನ್ನು ಒಂದುಗೂಡಿಸುತ್ತಿವೆ ಹೊರತು ಬೇರೆ ಮಾಡಲ್ಲ. ಎಲ್ಲ ಪ್ರಾದೇಶಿಕ ಭಾಷೆಗಳ ಸಂರಕ್ಷಣೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಏಕ್ ಭಾರತ್ ಶ್ರೇಷ್ಠ ಭಾರತ್ ಕಲ್ಪನೆಯನ್ನು ಪ್ರಧಾನಿ ನಮಗೆ ಕಟ್ಟಿಕೊಟ್ಟಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಕಾರ್ಯವೈಖರಿಗಳಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಎರಡನ್ನೂ ಕಾಣಬಹುದು. ಹೀಗಾಗಿ ಭವಿಷ್ಯದಲ್ಲಿ ಭಾರತಕ್ಕೆ ಒಳ್ಳೆಯ ಭವಿಷ್ಯ ಇದೆ. ಸರ್ಕಾರದಿಂದ ಮತ್ತಷ್ಟು ಅಭಿವೃದ್ಧಿಪರ ಯೋಜನೆಗಳು ಆಗಲಿ ಎಂದು ದೇಶದ ಜನತೆ ಹಾರೈಸುತ್ತಿದ್ದಾರೆ ಎಂದು ಹೆಗ್ಗಡೆಯವರು ವಿವರಿಸಿದರು.
ಕರ್ನಾಟಕ
VISTARA TOP 10 NEWS: ನಾಳೆ ಬೆಂಗಳೂರು ಬಂದ್, ಶುಕ್ರವಾರ ಕರ್ನಾಟಕ ಬಂದ್, ಎಐಎಡಿಎಂಕೆ-ಬಿಜೆಪಿ ಮೈತ್ರಿಯೂ ಬಂದ್
VISTARA TOP 10 NEWS : ನಾಳೆ ಬೆಂಗಳೂರು ಬಂದ್, ಶುಕ್ರವಾರ ಕರ್ನಾಟಕ ಬಂದ್, ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಬಂದ್! ಇನ್ನು ಪ್ರಧಾನಿ ಮೋದಿ ಅವರು ಅ. 1ರಂದು ಎಲ್ಲರೂ ಸೇರಿ ಕಸ ಗುಡಿಸೋಣ ಅಂದಿದ್ದಾರೆ. ಹೀಗೆ ಪ್ರಮುಖ ಸುದ್ದಿಗಳ ಗುಚ್ಛವೇ ವಿಸ್ತಾರ ಟಾಪ್ 10 ನ್ಯೂಸ್.
1. ಕಾವೇರಿ ಕಿಚ್ಚು: ರಾಜ್ಯಕ್ಕೆ ಡಬಲ್ ಬಂದ್ ಶಾಕ್; ನಾಳೆ ಬೆಂಗಳೂರು, ಸೆ. 29 ಕರ್ನಾಟಕ ಬಂದ್
ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಕರೆ ನೀಡಲಾಗಿರುವ ಸೆ. 26ರ ಬೆಂಗಳೂರು ಬಂದ್ ಬೆನ್ನಿಗೇ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಸೆ. 29ರಂದು ಅಖಿಲ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಹೀಗಾಗಿ ವಾರದಲ್ಲಿ ಎರಡು ಬಂದ್ ನಡೆಯಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ : ನಾಯಕರ ಪ್ರತಿಷ್ಠೆಯಿಂದ ಬೆಂಗಳೂರಿಗೆ ಡಬಲ್ ಬಂದ್ ಬಿಸಿ, ಬೇಕಿತ್ತಾ ಎರಡೆರಡು ಬಂದ್?
2. ನಾಳೆ ಬೆಂಗಳೂರು ಬಂದ್: ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ; ಏನಿರುತ್ತೆ? ಏನಿರಲ್ಲ?
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery water Dispute) ಮಾಡಬಾರದು ಎಂದು ಆಗ್ರಹಿಸಿ ಜಲ ಸಂರಕ್ಷಣಾ ಸಮಿತಿ ಕರೆ ನೀಡಿರುವ ಸೆ. 26ರ ಬೆಂಗಳೂರು ಬಂದ್ (Bangalore bandh) ಮೊದಲು ಪ್ರಕಟಿಸಿದಂತೆ ಯಥಾವತ್ತಾಗಿ ನಡೆಯಲಿದೆ. ಹಾಗಿದ್ದರೆ ಏನಿರುತ್ತೆ? ಏನಿರಲ್ಲ? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ1: ಬಲವಂತದಿಂದ ಬಂದ್ ಮಾಡಿಸುವಂತಿಲ್ಲ; ಮೆರವಣಿಗೆಗೆ ಅವಕಾಶವಿಲ್ಲ ಎಂದ ಕಮಿಷನರ್
ಪೂರಕ ಸುದ್ದಿ2: ಬಂದ್ ಯಶಸ್ವಿ ಆಗಬೇಕು; ಹೋಟೆಲ್ ಓಪನ್ ಮಾಡ್ಬೇಡಿ, ಸಮಸ್ಯೆಗೆ ನೀವೇ ಹೊಣೆ: ಬಿಎಸ್‌ವೈ
ಪೂರಕ ಸುದ್ದಿ3: ಯಾವ ಬಂದ್‌ಗೂ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಇಲ್ಲ; ನಾರಾಯಣ ಗೌಡ ಘೋಷಣೆ
3 .ಜಲಶಕ್ತಿ ಇಲಾಖೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಲಿ, ಮೋದಿ ಮಧ್ಯಪ್ರವೇಶಿಸಲಿ: ದೇವೇಗೌಡ
ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿರುವುದಕ್ಕೆ ರಾಜ್ಯ ಸರ್ಕಾರದ ವೈಫಲ್ಯ ಎಂದು ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಈ ಸಂಬಂಧ ಜಲ ಶಕ್ತಿ ಇಲಾಖೆಯಿಂದ ಅರ್ಜಿ ಸಲ್ಲಿಕೆ ಮಾಡಬೇಕು. ಇದಕ್ಕೆ ಪ್ರಧಾನಿ ಮೋದಿ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಕಾವೇರಿ ನೆಪದಲ್ಲಿ ಬಿಜೆಪಿ-ಜೆಡಿಎಸ್‌ನಿಂದ ರಾಜಕೀಯ: ಸಿದ್ದರಾಮಯ್ಯ ಆರೋಪ
4. ಏಕಕಾಲಕ್ಕೆ ರಾಜ್ಯಾದ್ಯಂತ ದಾಖಲೆ ಬರೆದ ಜನತಾ ದರ್ಶನ: ಸಿದ್ದರಾಮಯ್ಯ ಚಿಂತನೆ ಕ್ಲಿಕ್
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ಅವರ ಸೂಚನೆಯಂತೆ ಇದೇ ಮೊಟ್ಟ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲಾ ಜಿಲ್ಲೆಗಳಲ್ಲಿ ಜನತಾ ದರ್ಶನ (Janata Darshana) ಕಾರ್ಯಕ್ರಮ ನಡೆದಿದ್ದು, ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆ ಮತ್ತು ಪ್ರಶಂಸೆ ವ್ಯಕ್ತವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಏಷ್ಯನ್ ಗೇಮ್ಸ್: ಐತಿಹಾಸಿಕ ಚಿನ್ನ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡ; ಲಂಕಾ ವಿರುದ್ಧ ರೋಚಕ ಜಯ
ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್(Asian Games 2023) ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡ ಮೊದಲ ಪ್ರಯತ್ನದಲ್ಲೇ ಐತಿಹಾಸಿಕ ಚಿನ್ನದ ಪದಕ ಜಯಿಸಿ ಮರೆದಾಡಿದೆ. ಅಲ್ಪ ಮೊತ್ತದ ಪಂದ್ಯದಲ್ಲಿ ಲಂಕಾ ವಿರುದ್ಧ ರೋಚಕ 19 ರನ್ಗಳ ಗೆಲುವು ಸಾಧಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ದೇಶಾದ್ಯಂತ ಅ.1ರಂದು 1 ಗಂಟೆ ಸ್ವಚ್ಛತಾ ಅಭಿಯಾನ: ಎಲ್ಲರೂ ಬನ್ನಿ ಎಂದು ಆಹ್ವಾನಿಸಿದ ಪ್ರಧಾನಿ ಮೋದಿ
ಗಾಂಧಿ ಜಯಂತಿಗೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 1ರಂದು ದೇಶಾದ್ಯಂತ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಂದು ಒಂದು ಗಂಟೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಎಲ್ಲ ಗ್ಯಾರಂಟಿಗಳಿಗಳ ಜಾರಿಗೂ ಮೋದಿಯೇ ಗ್ಯಾರಂಟಿ; ಪ್ರಧಾನಿ ಅಬ್ಬರದ ಭಾಷಣ
7. ಭಾರತ ವಿಭಜಿಸಿ ಹಲವು ದೇಶ ಸೃಷ್ಟಿಸುವುದು ಖಲಿಸ್ತಾನಿ ಉಗ್ರ ಪನ್ನುನ್ ಗುರಿ; ಷಡ್ಯಂತ್ರ ಬಯಲು
ಕೆನಡಾದಲ್ಲಿ ಕುಳಿತು ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಆಸ್ತಿಗಳನ್ನು ಎನ್‌ಐಎ ಜಪ್ತಿ ಮಾಡಿದ ಬೆನ್ನಲ್ಲೇ ಉಗ್ರನ ಕುರಿತು ಸ್ಫೋಟಕ ಮಾಹಿತಿ ಲಭ್ಯವಾಗಿದೆ. “ಭಾರತವನ್ನು ವಿಭಜಿಸಿ, ಹಲವು ದೇಶಗಳನ್ನಾಗಿ ಸೃಷ್ಟಿಸುವುದು ಗುರುಪತ್ವಂತ್ ಸಿಂಗ್ ಪನ್ನುನ್ ಗುರಿಯಾಗಿದೆ” ಎನ್ನುವುದೇ ಆ ಮಾಹಿತಿ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಬಿಜೆಪಿ ಜತೆ ಮೈತ್ರಿ ಇಲ್ಲ; ಎಐಎಡಿಎಂಕೆ ಅಧಿಕೃತ ಘೋಷಣೆ! ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ
ತಮ್ಮ ಪಕ್ಷದ ನಾಯಕರನ್ನು ಅವಮಾನಿಸುತ್ತಿರುವ ಬಿಜೆಪಿ ಜತೆಗೆ ಸಖ್ಯವನ್ನು ಕಡಿದುಕೊಂಡಿರುವುದಾಗಿ ಇತ್ತೀಚೆಗಷ್ಟೇ ಎಐಎಡಿಎಂಕೆ ನಾಯಕರೊಬ್ಬರು ಹೇಳಿದ್ದರು. ಇದೀಗ, ಬಿಜೆಪಿ ಜತೆಗಿನ ಮೈತ್ರಿಯನ್ನು ಮುರಿದುಕೊಂಡಿರುವುದಾಗಿ ಎಐಎಡಿಎಂಕೆ ಅಧಿಕೃತವಾಗಿ ಘೋಷಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. 9 ತಿಂಗಳೊಳಗೆ 2000 ಕೋಟಿ ರೂ. ಕೊಳ್ಳೆ ಹೊಡೆದ ಶಾರುಖ್; ಜವಾನ್ ಹೊಸ ದಾಖಲೆ
ಶಾರುಖ್ ಖಾನ್ ಪ್ರಧಾನ ಪಾತ್ರದಲ್ಲಿರುವ ಜವಾನ್, ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂ. ಗಳಿಸಿದೆ (Jawan box office collection).ಪಠಾಣ್ ಸಿನಿಮಾವೂ 1000 ಕೋಟಿ ದಾಟಿತ್ತು. ಹೀಗಾಗಿ ಒಂಬತ್ತು ತಿಂಗಳ ಅವಧಿಯಲ್ಲಿ ಶಾರುಖ್ 2000 ಕೋಟಿ ಕೊಳ್ಳೆ ಹೊಡೆದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. 100 ಫ್ಯಾನ್‌ಗಳಲ್ಲಿ ಅರಳಿದ ಗಣಪ; ಹ್ಯಾವಲ್ಸ್ ಕಂಪನಿಯ ಕ್ರಿಯೆಟಿವಿಟಿಗೆ ನೆಟ್ಟಿಗರ ಮೆಚ್ಚುಗೆ
ದೇಶಾದ್ಯಂತ ಅದ್ಧೂರಿಯಾಗಿ ಆಚರಿಸುವ ಗಣೇಶ ಚತುರ್ಥಿ(Ganesh Chaturthi) ಹಬ್ಬವನ್ನು ಹ್ಯಾವಲ್ಸ್ ಕಂಪೆನಿ(Havells) ಕ್ರಿಯಾತ್ಮಕವಾಗಿ ಬರಮಾಡಿಕೊಂಡಿದೆ. 100 ಫ್ಯಾನ್‌ಗಳನ್ನು ಬಳಸಿಕೊಂಡು ಗಣೇಶನನ್ನು ರಚಿಸಿ ಗಮನ ಸೆಳೆದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ದೇಶ
Sanatan Dharma row: ತಮಿಳುನಾಡು ಸಿಎಂ ಪುತ್ರ ಉದಯನಿಧಿ ವಿರುದ್ಧ ದಿಲ್ಲಿಯಲ್ಲಿ ಸಂತರ ಪ್ರತಿಭಟನೆ, ಕ್ರಮಕ್ಕೆ ಆಗ್ರಹ
Sanatan Dharma row: ತಮಿಳುನಾಡು ಸಚಿವರೂ ಆಗಿರುವ, ಮುಖ್ಯಮಂತ್ರಿ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ, ವಿವಾದಕ್ಕೆ ಕಾರಣರಾಗಿದ್ದಾರೆ.
ನವದೆಹಲಿ: ಸನಾತನ ಧರ್ಮವನ್ನು (Sanatan Dharma row) ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದ ತಮಿಳುನಾಡಿನ ಸಚಿವರೂ ಆಗಿರುವ, ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ (Udhayanidhi Stalin) ವಿರುದ್ಧ ಸೋಮವಾರ ದಿಲ್ಲಿಯ ತಮಿಳುನಾಡು ಭವನದ ಬಳಿ ಸಾಧು, ಸಂತರು ಪ್ರತಿಭಟನೆ ನಡೆಸಿದರು(Hindu Saints protest). ಬಳಿಕ, ಉದಯನಿಧಿ ಸ್ಟಾಲಿನ್ ಸೇರಿದಂತೆ ಇತರ ನಾಯಕರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ದೆಹಲಿ ಸಂತ ಮಹಾಮಂಡಲದ ಬ್ಯಾನರ್ ಅಡಿಯಲ್ಲಿ ಪ್ರತಿಭಟನಾಕಾರರು ಉದಯನಿಧಿ ಸ್ಟಾಲಿನ್ ಮತ್ತು ಇತರ ನಾಯಕರನ್ನು ಖಂಡಿಸುವ ಫಲಕಗಳನ್ನು ಹಿಡಿದು ಸರೋಜಿನಿ ನಗರದ ದೇವಸ್ಥಾನದಿಂದ ತಮಿಳುನಾಡು ಭವನದ ಕಡೆಗೆ ಮೆರವಣಿಗೆ ನಡೆಸಿದರು. ತಮಿಳು ನಾಡು ಭವನದತ್ತ ಹೋಗುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು, ಆಫ್ರಿಕಾ ಅವೆನ್ಯೂದಲ್ಲಿ ತಡೆದರು. ಹಾಗಾಗಿ, ಅದೇ ಪ್ರದೇಶದಲ್ಲಿ ಪ್ರತಿಭಟನಾ ನಿರತ ಸಂದತರು, ತಮಿಳುನಾಡು ಸಚಿವ ಉದಯನಿಧಿ ಮತ್ತು ಇತರರ ಪ್ರತಿಕೃತಿಗಳನ್ನು ಸುಟ್ಟುಹಾಕಿ, ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಸನಾತನ ಧರ್ಮದ ವಿರುದ್ಧ ಹೇಳಿಕೆಗಳನ್ನು ನೀಡುವುದರಿಂದ ವಿವಿಧ ರಾಜಕೀಯ ಪಕ್ಷಗಳ ನಾಯಕರು ತಮ್ಮ ಮುಖಂಡರನ್ನು ನಿರ್ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಲ್ಲದೇ, ಸನಾತನ ಧರ್ಮದ ನಿರ್ಮೂಲನೆ ಅಗತ್ಯ ಎಂದು ಹೇಳಿದ್ದ ಪುತ್ರ ಉದಯನಿಧಿಯ ಪರವಾಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿಯನ್ನೂ ಓದಿ: Udhayanidhi Stalin: ಸನಾತನ ಧರ್ಮ; ಉದಯನಿಧಿ ಸ್ಟಾಲಿನ್‌ಗೆ ಸುಪ್ರೀಂ ನೋಟಿಸ್, ಎದುರಾಯ್ತು ಸಂಕಷ್ಟ
ಈ ವೇಳೆ ಮಾತನಾಡಿದ ದೆಹಲಿ ಸಂತ ಮಹಾಮಂಡಲ್ ಅಧ್ಯಕ್ಷ ನಾರಾಯಣ ಗಿರಿ ಮಹಾರಾಜ್ ಅವರು ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಗಳು ಯಾಕೆ ಮೌನವಾಗಿವೆ ಎಂದು ಪ್ರಶ್ನಿಸಿದರು. ಸನಾತನ ಧರ್ಮದ ವಿರುದ್ಧ ರಾಜಕಾರಣಿಗಳ ದ್ವೇಷದ ಮಾತುಗಳನ್ನು ಸುಪ್ರೀಂ ಕೋರ್ಟ್ ಕೂಡ ಗುರುತಿಸಿದೆ, ಸನಾತನ ಧರ್ಮದ ವಿರುದ್ಧ ರಾಜಕಾರಣಿಗಳು ಬಳಸುತ್ತಿರುವ ಭಾಷೆಯು ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುತ್ತದೆ ಮತ್ತು ಅಂತಹ ರಾಜಕೀಯ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇಶ
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
Swara Bhasker: ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ ಹಾಗೂ ಸಮಾಜವಾದಿ ಪಕ್ಷದ ಯುವ ನಾಯಕ ಫಹಾದ್ ಅಹ್ಮದ್ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ ಮದುವೆಯಾಗಿದ್ದರು.
ನವದೆಹಲಿ: ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ (Swara Bhasker) ಅವರು ಸೆಪ್ಟೆಂಬರ್ 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ(Baby Girl). ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ (Fahad Ahmad) ಅವರು ಸ್ವರಾ ಅವರ ಪತಿಯಾಗಿದ್ದಾರೆ. ತಮಗೆ ಹೆಣ್ಣು ಮಗು ಜನಿಸಿದ ಮಾಹಿತಿಯನ್ನು ದಂಪತಿಯು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಮಗುವಿನ ಮೊದಲ ಫೋಟೋ ಕೂಡ ಷೇರ್ ಮಾಡಿದ್ದಾರೆ. ಮಗುವಿಗೆ ‘ರಾಬಿಯಾ’ (Raabiyaa) ಎಂದು ನಾಮಕರಣ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಜಂಟಿಯಾಗಿ ಪೋಸ್ಟ್ ಮಾಡಿರುವ ಸ್ವರಾ ಮತ್ತು ಫಹಾದ್ ಅವರು, ನಮ್ಮ ಪ್ರಾರ್ಥನೆ ಫಲಿಸಿತು. ಆಶೀರ್ವಾದ ಲಭಿಸಿತು. ಹಾಡು ಪಿಸುಗುಟ್ಟಿದೆ… ಅದು ಅತೀಂದ್ರಿಯ ಸತ್ಯ…. ಸೆಪ್ಟೆಂಬರ್ 23ರಂದು ನಮಗೆ ಹೆಣ್ಣು ಮಗು ಜನಿಸಿದೆ. ಕೃತಜ್ಞತೆಯ ಮತ್ತು ಸಂತೋಷದ ಹೃದಯಗಳೊಂದಿಗೆ, ನಿಮ್ಮ ಪ್ರೀತಿಗೆ ಧನ್ಯವಾದಗಳು! ಇದು ಸಂಪೂರ್ಣ ಹೊಸ ಜಗತ್ತು ಎಂದು ಬರೆದುಕೊಂಡಿದ್ದಾರೆ.
ಸ್ವರಾ-ಫಹಾದ್ ದಂಪತಿ ಫೋಟೋ ಷೇರ್ ಮಾಡಿದ್ದಾರೆ. ಈ ಪೈಕಿ ಮೊದಲನೆಯ ಫೋಟೋದಲ್ಲಿ ಕೂಸು ರಾಬಿಯಾ ಜತೆ ಸ್ವರ ಭಾಸ್ಕರ್ ಇದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಮಯದಲ್ಲಿ, ತೊಟ್ಟಿಲಲ್ಲಿ ಮಗುವಿನ ಪಕ್ಕದಲ್ಲಿ ಸ್ವರಾ ಮತ್ತು ಫಹಾದ್ ಇದ್ದಾರೆ. ಆಸ್ಪತ್ರೆಯ ಹಾಸಿಗೆಯ ಮೇಲೆ ತನ್ನ ನವಜಾತ ಮಗಳೊಂದಿಗೆ ಸ್ವರಾ ಇರುವ ಮತ್ತೊಂದು ಫೋಟೋ ಇದೆ. ಇನ್ನೂ ಒಂದು, ಫಹಾದ್ ಮಗುವನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡಿರುವ ಹಾಗೂ ಕೊನೆಯದು ಮೂವರು ಇರುವ ಕುಟುಂಬದ ಮತ್ತೊಂದು ಫೋಟೋವನ್ನು ಕಾಣಬಹುದಾಗಿದೆ.
ಈ ಸುದ್ದಿಯನ್ನೂ ಓದಿ: Swara Bhaskar: ನಟಿ ಸ್ವರಾ ಭಾಸ್ಕರ್ ಆರತಕ್ಷತೆಯಲ್ಲಿ ರಾಹುಲ್ ಗಾಂಧಿ ಭಾಗಿ
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ತಾಯಿ, ತಂದೆಯಾದ ಸ್ವರಾ ಮತ್ತು ಫಹಾದ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅಭಿಮಾನಿಗಳಿಂದ ಸೆಲೆಬ್ರಿಟಿಗಳವರೆಗೆ ಹಲವಾರು ಜನರು ಈಗ ದಂಪತಿಗಳಿಗೆ ಶುಭಾಶಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ತಿಲೋತಮಾ ಶೋಮ್, ಗುನೀತ್ ಮೊಂಗಾ ಮತ್ತು ಪಾರ್ವತಿ ಕಾಮೆಂಟ್‌ಗಳಲ್ಲಿ ದಂಪತಿಗಳನ್ನು ಅಭಿನಂದಿಸಿದ್ದಾರೆ.
ಇದೇ ವರ್ಷದ ಫೆಬ್ರವರಿಯಲ್ಲಿ ಸ್ವರಾ ಭಾಸ್ಕರ್ ಮ್ತತು ಫಹಾದ್ ಅಹ್ಮದ್ ಅವರು ಕೋರ್ಟ್‌ನಲ್ಲಿ ವಿವಾಹವಾಗಿದ್ದರು. ಬಳಿಕ ಮಾರ್ಚ್ ತಿಂಗಳಲ್ಲಿ ಹಳದಿ, ಸಂಗೀತ, ವೆಡ್ಡಿಂಗ್ ರಿಸೆಪ್ಷನ್ ಸೇರಿದಂತೆ ಅನೇಕ ಮದುವೆಯ ಕಾರ್ಯಕ್ರಮಗಳನ್ನು ನಡೆಸಿದ್ದರು. ಜೂನ್ ತಿಂಗಳಲ್ಲಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹ್ಮದ್ ಅವರು ಘೋಷಿಸಿದ್ದರು. ಈಗ ಮುದ್ದಾದ ಹೆಣ್ಣುಮಗಳ ತಂದೆತಾಯಿಯಾಗಿದ್ದಾರೆ.
ಸಿನಿಮಾದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
Weather Update: ಜೂನ್ 1ರಿಂದ ಆರಂಭವಾಗುವ ಮುಂಗಾರು, ಸಾಮಾನ್ಯವಾಗಿ ಸೆಪ್ಟೆಂಬರ್ 17ರಿಂದ ಕ್ಷೀಣಿಸಲಾರಂಭಿಸುತ್ತದೆ. ಆದರೆ, ಬಾರಿ ಸೆಪ್ಟೆಂಬರ್ 25ರಿಂದ ಮಳೆ ಹಿಂತೆಗೆಯುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ನವದೆಹಲಿ: ವಾಡಿಕೆಗಿಂತ ಎಂಟು ದಿನಗಳಷ್ಟು ತಡವಾಗಿ ಭಾರತದಲ್ಲಿ (India) ಮುಂಗಾರು ಕ್ಷೀಣಿಸುತ್ತಿದೆ (Monsoon Withdrawing) ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ಸೋಮವಾರ ಹೇಳಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಾಡಿಕೆಯಂತೆ ಸೆಪ್ಟೆಂಬರ್ 17ರಿಂದಲೇ ಮುಂಗಾರು ದುರ್ಬಲವಾಗಬೇಕಿತ್ತು. ಆದರೆ, ಸೆಪ್ಟೆಂಬರ್ 25ರಿಂದ ಮುಂಗಾರು ಕ್ಷೀಣವಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ(Weather Update).
ನೈಋತ್ಯ ರಾಜಸ್ಥಾನದ ಭಾಗಗಳಿಂದ ನೈಋತ್ಯ ಮಾನ್ಸೂನ್ ಸೆಪ್ಟೆಂಬರ್ 25ರಿಂದಲೇ ಕ್ಷೀಣಿಸಲಾರಂಭಿಸಿದೆ. ರಾಜಸ್ಥಾನದಲ್ಲಿ ಸಾಮಾನ್ಯವವಾಗಿ ಸೆಪ್ಟೆಂಬರ್ 17ರಿಂದಲೇ ಮುಂಗಾರು ಹಿಂತೆಗೆಯಲಾರಂಭಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವಾಯುವ್ಯ ಭಾರತದಲ್ಲಿ ಮುಂಗಾರು ಕ್ಷೀಣವಾಗಲಾರಂಭಿಸಿದರೆ ಭಾರತದಲ್ಲಿ ಒಟ್ಟಾರೆ ಮಳೆಗಾಲ ಅಂತ್ಯವಾಗುವ ಕಾಲ ಸನ್ನಿಹಿತವಾದಂತೆಯೇ ಎನ್ನಲಾಗುತ್ತದೆ. ಪ್ರಸಕ್ತ ಮುಂಗಾರಿನಲ್ಲಿ ಭಾರತದಲ್ಲಿ 780.3 ಮಿಲಿ ಮೀಟರ್ ಮಳೆಯಾಗಿದೆ. ಆದರೆ, ವಾಡಿಕೆಯಂತೆ 832.4 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಅಂದರೆ, ಈ ವರ್ಷ ಮಳೆ ಕೊರತೆಯಾಗಿದೆ.
ವಾಯುವ್ಯ ಭಾರತದಿಂದ ಮಾನ್ಸೂನ್ ಹಿಂದೆ ಸರಿಯುವ ಪ್ರಕ್ರಿಯೆಯು ಭಾರತೀಯ ಉಪಖಂಡದಿಂದ ಮಳೆಗಾಲ ಅಂತ್ಯವಾಗುವುದನ್ನು ಸೂಚಿಸುತ್ತದೆ. ಮಾನ್ಸೂನ್ ಹಿಂದೆ ಸರಿಯುವುದು ಯಾವುದೇ ವಿಳಂಬವು ದೀರ್ಘವಾದ ಮಳೆಗಾಲವನ್ನು ಅರ್ಥೈಸುತ್ತದೆ. ಇದು ಕೃಷಿ ಉತ್ಪಾದನೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಲಿದೆ. ವಿಶೇಷವಾಗಿ ವಾಯುವ್ಯ ಭಾರತದಲ್ಲಿ ಮಾನ್ಸೂನ್ ಮಳೆಯು ರಾಬಿ ಬೆಳೆ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಈ ಸುದ್ದಿಯನ್ನೂ ಓದಿ: Weather Report : ಮಾಸಾಂತ್ಯದವರೆಗೂ ಮಳೆ; 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಭಾರತದಲ್ಲಿ ಮುಂಗಾರು ಮಳೆಯ ಜೂನ್ 1ರಂದು ಕೇರಳದ ಮೂಲಕ ಪ್ರವೇಶಿಸುತ್ತದೆ. ಜುಲೈ 8ರ ವೇಳೆಗೆ ಇಡೀ ದೇಶವನ್ನು ಮುಂಗಾರು ಆವರಿಸುತ್ತದೆ. ಸೆಪ್ಟೆಂಬರ್ 17ರ ಹೊತ್ತಿಗೆ ಕ್ಷೀಣವಾಗಲಾರಂಭಿಸುತ್ತದೆ. ಅಕ್ಟೋಬರ್ 15ರ ವೇಳೆ ಮಾನ್ಸೂನ್ ಸಂಪೂರ್ಣವಾಗಿ ದೇಶದಿಂದ ಮಾಯವಾಗುತ್ತದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
ಮುಂಗಾರಿನಲ್ಲಿ ಭಾರತವು ಇಲ್ಲಿಯವರೆಗೆ 796.4 ಮಿಮೀ ಮಳೆಯನ್ನು ಪಡೆದಿದೆ. ಇದು, ವಾಡಿಕೆ ಮಳೆ 843.2 ಮಿಮೀಗೆ ಹೋಲಿಸಿದರೆ, ಶೇ.6ರಷ್ಟು ಕೊರತೆಯಾಗಿದೆ. ಸಾಮಾನ್ಯವಾಗಿ, ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ ದೇಶವು ಸರಾಸರಿ 870 ಮಿಮೀ ಮಳೆಯನ್ನು ಪಡೆಯುತ್ತದೆ. ಆದರೆ, ಪ್ರಸಕ್ತ ಮಳೆಗಾಲದಲ್ಲಿ ಕೊರತೆ ಎದುರಾಗಿದ್ದು, ಬರಗಾಲದ ಛಾಯೆ ಆವರಿಸಿದೆ. ಈಗಾಗಲೇ, ಕರ್ನಾಟಕದಲ್ಲಿ ಬರಗಾಲಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ಸುವಚನ18 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ವಿದೇಶ9 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ7 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ24 hours ago
Viral News: ಎಲ್ಕೆಜಿ ಬಾಲಕನಿಗೆ ಕಾಲು ಮುರಿಯುವ ಹಾಗೆ ಬಡಿದ ಮೇಷ್ಟ್ರು , ಗಾಯಗಳನ್ನು ನೋಡಿ ಬೆಚ್ಚಿದ ಅಮ್ಮ
-
ದೇಶ23 hours ago
India Canada Row : ಖಲಿಸ್ತಾನಿ ಉಗ್ರರ ಕಡೆಗೆ ಮೃದು ಧೋರಣೆ; ಟ್ರುಡೊ ವಿರುದ್ಧ ಆರ್ಯ ಮತ್ತೆ ವಾಗ್ದಾಳಿ
-
ಅಂಕಣ9 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ದೇಶ7 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ಕರ್ನಾಟಕ14 hours ago
BJP-JDS Alliance: ಬಿಜೆಪಿ- ಜೆಡಿಎಸ್ ಮೈತ್ರಿ; ಮುಸ್ಲಿಂ ನಾಯಕರು ಜೆಡಿಎಸ್ಗೆ ಗುಡ್ಬೈ?