ದೇಶ
Menstrual Leave: ಮುಟ್ಟಿನ ರಜೆ ನೀತಿ ಜಾರಿಗೆ ತನ್ನಿ, ಕೇಂದ್ರ ಸರ್ಕಾರಕ್ಕೆ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು
Menstrual Leave: ಮುಟ್ಟಿನ ರಜೆ ನೀಡುವುದರಿಂದ ಹೆಣ್ಣುಮಕ್ಕಳು ಕೆಲಸದಲ್ಲಿ ಹೆಚ್ಚಾಗಿ ತೊಡಗಿಕೊಳ್ಳಲಿದ್ದಾರೆ. ಹಾಗಾಗಿ, ಅವರಿಗೆ ರಜೆ ನೀಡುವ ಕುರಿತು ನೀತಿ ರೂಪಿಸಬೇಕು ಎಂದು ಸಂಸದೀಯ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ನವದೆಹಲಿ: ಉದ್ಯೋಗಸ್ಥ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ (Menstrual Leave) ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಇನ್ನು ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಿವೆ. ಇದರ ಬೆನ್ನಲ್ಲೇ, ದೇಶದಲ್ಲಿ ಹೆಣ್ಣುಮಕ್ಕಳಿಗೆ ಮುಟ್ಟಿನ ರಜೆ ನೀಡುವ ಕುರಿತು ಕೇಂದ್ರ ಸರ್ಕಾರ ನೀತಿ ರಚಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
“ವೈದ್ಯಕೀಯ ಪ್ರಮಾಣಪತ್ರ ಅಥವಾ ಯಾವುದೇ ಸ್ಪಷ್ಟನೆ ಇಲ್ಲದೆ ಹೆಣ್ಣುಮಕ್ಕಳಿಗೆ ಮುಟ್ಟಿನ ರಜೆ ಅಥವಾ ಅನಾರೋಗ್ಯ ರಜೆ ಅಥವಾ ಅರ್ಧ ವೇತನದ ರಜೆ ನೀಡಬೇಕು” ಎಂದು ಸಮಿತಿ ಶಿಫಾರಸು ಮಾಡಿದೆ. ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಹಾಗೂ ಪಿಂಚಣಿಗಳ ಸಚಿವಾಲಯವು ಇತ್ತೀಚೆಗೆ ಮುಟ್ಟಿನ ರಜೆ ನೀಡುವ ಕುರಿತು ಯಾವುದೇ ಪ್ರಸ್ತಾಪವಿಲ್ಲ ಎಂದು ತಿಳಿಸಿದ ಬೆನ್ನಲ್ಲೇ ಸಮಿತಿ ಶಿಫಾರಸು ಮಾಡಿದೆ.
“ಹೆಣ್ಣುಮಕ್ಕಳ ಮಾನಸಿಕ ಹಾಗೂ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಮುಟ್ಟಿನ ರಜೆ ನೀಡಬೇಕು. ಇದರಿಂದ ಅವರು ದಕ್ಷವಾಗಿ ಕಾರ್ಯನಿರ್ವಹಿಸಲು ಕೂಡ ಸಾಧ್ಯವಾಗಲಿದೆ. ರಜೆ ನೀಡುವುದರಿಂದ ಮಹಿಳಾ ಕಾರ್ಮಿಕರು ಕೆಲಸದಲ್ಲಿ ತೊಡಗಿಕೊಳ್ಳುವಿಕೆಯೂ ಹೆಚ್ಚಾಗಲಿದೆ” ಎಂದು ಬಿಜೆಪಿ ಹಿರಿಯ ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಮಿತಿಯು ಕೇಂದ್ರ ಸಿಬ್ಬಂದಿ ಹಾಗೂ ತರಬೇತಿ ಇಲಾಖೆಗೆ ಶಿಫಾರಸು ಮಾಡಿದೆ.
ಇದನ್ನೂ ಓದಿ: Women’s Day 2023: ಎರಡು-ಮೂರು ದಿನ ಮುಟ್ಟಿನ ರಜೆ ಕೊಡುವುದು ಅಗತ್ಯ
ದೇಶ
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ 25 ಸಾವಿರ ರೂ. ದಂಡ!
Gujarat High Court: ಪ್ರಧಾನಿ ಮೋದಿ ಅವರ ಶೈಕ್ಷಣಿಕ ಸರ್ಟಿಫಿಕೇಟ್‌ಗಳನ್ನು ಒದಗಿಸುವ ಅವಶ್ಯಕತೆ ಇಲ್ಲ ಎಂದು ಹೇಳಿರುವ ಗುಜರಾತ್ ಹೈಕೋರ್ಟ್, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ದಂಡ ವಿಧಿಸಿ, ಆದೇಶ ಹೊರಡಿಸಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶಿಕ್ಷಣ ಅರ್ಹತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಗುಜರಾತ್ ಹೈಕೋರ್ಟ್ (Gujarat High Court) 25 ಸಾವಿರ ದಂಡ ವಿಧಿಸಿದೆ. ಪ್ರಧಾನಿ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿ ಸರ್ಟಿಫಿಕೇಟ್‌ಗಳನ್ನು ಪ್ರಧಾನಿ ಕಾರ್ಯಾಲಯವು(PMO) ಒದಗಿಸುವ ಅಗತ್ಯವಿಲ್ಲ ಎಂದು ಹೇಳಿರುವ ಗುಜರಾತ್ ಹೈಕೋರ್ಟ್, ಆರ್‌ಟಿಐನಡಿ ಮಾಹಿತಿ ಕೇಳಿದ್ದ ಅರವಿಂದ್ ಕೇಜ್ರಿವಾಲ್‌ಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ವಿವರಗಳನ್ನು ಒದಗಿಸುವಂತೆ ಪ್ರಧಾನಿ ಕಾರ್ಯಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ(PIO) ಮತ್ತು ವಿಶ್ವವಿದ್ಯಾಲಯಗಳ ಸಾರ್ವಜನಿಕ ಮಾಹಿತಿ ಅಧಿಕಾರಿ(PIO)ಗಳಿಗೆ ಮಾಹಿತಿ ಆಯೋಗದ ಮುಸ್ಥರು(CIC) ಆದೇಶಿಸಿದ್ದರು. ಈ ಆದೇಶವನ್ನು ಗುಜರಾತ್‌ನ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರಿ ಪೀಠವು ರದ್ದು ಮಾಡಿದೆ. ಇದೇ ವೇಳೆ, ಪ್ರಧಾನಿ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಪದವಿಗಳನ್ನು ಪತ್ರಗಳನ್ನು ಪೂರೈಸುವಂತೆ ಮಾಹಿತಿ ಕೇಳಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ 25 ಸಾವಿರ ದಂಡ ವಿಧಿಸಿದೆ. ಸಿಐಸಿ ಆದೇಶವನ್ನು ಪ್ರಶ್ನಿಸಿ ಗುಜರಾತ್ ವಿಶ್ವವಿದ್ಯಾಲಯವು ಹೈಕೋರ್ಟ್ ಮೊರೆ ಹೋಗಿತ್ತು.
ತೀರ್ಪು ಕಾಯ್ದಿರಿಸಿದ್ದ ಗುಜರಾತ್ ಹೈಕೋರ್ಟ್
ಪ್ರಧಾನಿ ನರೇಂದ್ರ ಮೋದಿಯವರ ಪದವಿ ಪ್ರಮಾಣಪತ್ರವನ್ನು ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆರ್ಟಿಐ ಕಾಯ್ದೆಯಡಿ ಕೇಳಿದ್ದರು. ಅರವಿಂದ್ ಕೇಜ್ರಿವಾಲ್ ಕೇಳಿದ ದಾಖಲೆಯನ್ನು ನೀಡುವಂತೆ ಮುಖ್ಯ ಮಾಹಿತಿ ಆಯುಕ್ತರು (CIC) ಗುಜರಾತ್ ವಿಶ್ವವಿದ್ಯಾಲಯಕ್ಕೆ 2016ರಲ್ಲಿ ನಿರ್ದೇಶನ ನೀಡಿದ್ದರು. ಸಿಐಸಿಯ ಈ ನಿರ್ದೇಶನದ ವಿರುದ್ಧ ಗುಜರಾತ್ ಯೂನಿವರ್ಸಿಟಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತನ್ನ ತೀರ್ಪನ್ನು ಫೆಬ್ರವರಿ 10ರಂದು ಕಾಯ್ದಿರಿಸಿತ್ತು.
ಗುಜರಾತ್ ಯೂನಿವರ್ಸಿಟಿ ಪರ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಆರ್ಟಿಐ ಕಾಯ್ದೆಯ ದುರುಪಯೋಗ ಆಗುತ್ತಿದೆ’ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ಪದವಿ ಪ್ರಮಾಣ ಪತ್ರ ಪಡೆಯಲು ಆರ್ಟಿಐ ಕಾಯ್ದೆ ಅನ್ವಯ ಮಾಡಲು ಆಗುವುದಿಲ್ಲ. ಯಾರೋ ಒಬ್ಬರ ಬಾಲಿಶ ಕುತೂಹಲವೆಲ್ಲ ಸಾರ್ವಜನಿಕ ಹಿತಾಸಕ್ತಿ ಆಗುವುದಿಲ್ಲ ಎಂದು ಕೋರ್ಟ್‌ಗೆ ತಿಳಿಸಿದರು.
ಯಾವುದೇ ಸಾರ್ವಜನಿಕ ಆಡಳಿತ ಹುದ್ದೆಯಲ್ಲಿರುವ ಯಾರೇ ಆಗಿರಲಿ, ಅವರ ಸಾರ್ವಜನಿಕ ಚಟುವಟಿಕೆಗಳಿಗೆ ಸಂಬಂಧವಿಲ್ಲದೆ ಇರುವ, ಇನ್ನೊಬ್ಬರ ವೈಯಕ್ತಿಕ ವಿಷಯಗಳನ್ನೆಲ್ಲ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳುವಂತಿಲ್ಲ. ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿಯವರ ಪದವಿ ಬಗ್ಗೆ ಸಾರ್ವಜನಿಕ ಡೊಮೇನ್ನಲ್ಲಿ ಮಾಹಿತಿ ನೀಡಲಾಗಿದೆ. ಗುಜರಾತ್ ವಿಶ್ವವಿದ್ಯಾಲಯವೂ ಕೂಡ ಈ ಹಿಂದೆ ತನ್ನ ವೆಬ್ಸೈಟ್ನಲ್ಲಿ ಈ ಬಗ್ಗೆ ವಿವರವನ್ನು ನೀಡಿತ್ತು ಎಂದು ಸಾಲಿಸಿಟರ್ ಜನರಲ್ ವಾದಿಸಿದರು.
ಇನ್ನೊಂದೆಡೆ ಅರವಿಂದ್ ಕೇಜ್ರಿವಾಲ್ ಪರ ವಕೀಲರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಬೇಕು. ಪ್ರಧಾನಿ ಮೋದಿಯವರ ಪದವಿ ಬಗೆಗಿನ ಮಾಹಿತಿ ಯಾವುದೇ ಸಾರ್ವಜನಿಕ ಡೊಮೇನ್ನಲ್ಲಿ ಸಿಗುತ್ತಿಲ್ಲ ಎಂದು ವಾದಿಸಿದ್ದರು. ಎರಡೂ ಕಡೆಯವರ ವಾದವನ್ನು ಆಲಿಸಿದ ನ್ಯಾಯಮೂರ್ತಿ ಬಿರೆನ್ ವೈಷ್ಣವ್ ಅವರು ತೀರ್ಪು ಕಾಯ್ದಿರಿಸಿದ್ದರು.
ಏನಿದು ಪಿಎಂ ಮೋದಿ ಪದವಿ ವಿವಾದ?
ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾಗುತ್ತಿದ್ದಂತೆ ಪ್ರತಿಪಕ್ಷಗಳು ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಪ್ರಶ್ನಿಸಲಾರಂಭಿಸಿದವು. ಆಗ, ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ವಿವಿಯಿಂದ ಪದವಿ ಹಾಗೂ ದಿಲ್ಲಿ ವಿವಿಯಿಂದ ಎಂಎ ಪದವಿಯನ್ನು ಪಡೆದುಕೊಂಡಿದ್ದಾರೆಂದು ಹೇಳಿತ್ತು. ಅಲ್ಲದೇ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರದರ್ಶಿಸಿದ್ದರು. ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಹಾಗೂ ಸ್ನಾತಕೋತ್ತರ ಪದವಿ ಪತ್ರಗಳ ಬಹಿರಂಗ ಕೋರಿ, ಮಾಹಿತಿ ಹಕ್ಕಿನ ಕಾಯ್ದೆಯಡಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದರು. ಮಾಹಿತಿ ಹಕ್ಕು ಆಯೋಗವು, ಅರ್ಜಿದಾರರ ಮಾಹಿತಿಯನ್ನು ಪೂರೈಸುವಂತೆ ಪಿಎಂಒ ಹಾಗೂ ವಿಶ್ವವಿದ್ಯಾಲಯಗಳಿಗೆ ಆದೇಶಿಸಿತ್ತು. ಗುಜರಾತ್ ವಿವಿಯು ಆಯೋಗ ಈ ಆದೇಶವನ್ನು ಪ್ರಶ್ನಿಸಿ ಗುಜರಾತ್ ಹೈಕೋರ್ಟ್‌ಗೆ ಮೊರೆ ಹೋಗಿತ್ತು.
ದೇಶ
Ram Navami Violence: ಗುಜರಾತ್, ಬಂಗಾಳದಲ್ಲಿ ರಾಮನವಮಿ ಹಿಂಸಾಚಾರ; 60 ಜನರ ಬಂಧನ, ರಾಜಕೀಯ ಮೇಲಾಟ
Ram Navami Violence: ರಾಮನವಮಿ ಹಿನ್ನೆಲೆಯಲ್ಲಿ ರಾಮನ ಮೂರ್ತಿಯ ಮೆರವಣಿಗೆ ಮಾಡುವಾಗ ಪಶ್ಚಿಮ ಬಂಗಾಳ, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಹಿಂಸಾಚಾರ ನಡೆದಿದೆ. ಕಲ್ಲುತೂರಾಟ ಕೂಡ ನಡೆದಿದ್ದು, ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲ್ಕೊತಾ/ಗಾಂಧಿನಗರ: ಪಶ್ಚಿಮ ಬಂಗಾಳ ಹಾಗೂ ಗುಜರಾತ್‌ನಲ್ಲಿ ರಾಮನವಮಿ ದಿನವೇ ಭಾರಿ ಹಿಂಸಾಚಾರ (Ram Navami Violence) ನಡೆದಿದ್ದು, ಗುಜರಾತ್‌ನಲ್ಲಿ 24 ಮಂದಿಯನ್ನು ಬಂಧಿಸಲಾಗಿದೆ. ಬಂಗಾಳದಲ್ಲೂ 36 ಜನರನ್ನು ಬಂಧಿಸಲಾಗಿದೆ. ಹಾಗೆಯೇ, ನೂರಾರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬಂಗಾಳದ ಹೌರಾದಲ್ಲಂತೂ ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಗುಜರಾತ್‌ನ ವಡೋದರಾದಲ್ಲೂ ಹಿಂಸಾಚಾರ ನಡೆದಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹಾಗೆಯೇ, ಇದು ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. ಅತ್ತ, ಮಹಾರಾಷ್ಟ್ರದ ಹಲವೆಡೆಯೂ ಹಿಂಸಾಚಾರದ ಪ್ರಕರಣಗಳು ವರದಿಯಾಗಿವೆ.
ಬಂಗಾಳದಲ್ಲಿ ಶುಕ್ರವಾರವೂ ಗಲಭೆ
ಹೌರಾದ ಶಿಬ್‌ಪುರದಲ್ಲಿ ಶುಕ್ರವಾರವೂ ಗಲಾಟೆ ಮುಂದುವರಿದಿದ್ದು, ಪೊಲೀಸ್ ವಾಹನಗಳಿಗೇ ಬೆಂಕಿ ಹಚ್ಚಲಾಗಿದೆ. ಕಲ್ಲು ತೂರಾಟ, ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ಸೇರಿ ಹಲವು ರೀತಿಯಲ್ಲಿ ಹಿಂಸಾಚಾರ ನಡೆಸಲಾಗಿದೆ. ಶಿಬ್‌ಪುರವೊಂದರಲ್ಲಿಯೇ ಪೊಲೀಸರು 36 ಜನರನ್ನು ಬಂಧಿಸಿದ್ದು, ನೂರಾರು ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ರಾಮನವಮಿ ಮೆರವಣಿಗೆ ವೇಳೆ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಬಳಿಕ ಗಲಭೆ ಉಂಟಾಗಿದೆ ಎಂದು ತಿಳಿದುಬಂದಿದೆ. ಇದಾದ ಬಳಿಕ ಪೊಲೀಸರಿಗೂ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದಷ್ಟು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.
ಬಂಗಾಳದಲ್ಲಿ ಹಿಂಸಾಚಾರದ ದೃಶ್ಯ
ಬಿಜೆಪಿ-ಟಿಎಂಸಿ ಮಧ್ಯೆ ವಾಕ್ಸಮರ
ಪಶ್ಚಿಮ ಬಂಗಾಳದಲ್ಲಿ ಭಾರಿ ಕಲ್ಲುತೂರಾಟದಿಂದಾಗಿ ಅಂಗಡಿ-ಮುಂಗಟ್ಟು, ಜನರ ಆಸ್ತಿಪಾಸ್ತಿಗೆ ಹಾನಿಯಾಗಿರುವ ಪ್ರಕರಣವೀಗ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಹೌರಾದಲ್ಲಿ ನಡೆದ ಹಿಂಸಾಚಾರಕ್ಕೆ ಹಿಂದುಗಳೂ ಕಾರಣವಲ್ಲ, ಮುಸ್ಲಿಮರೂ ಕಾರಣವಲ್ಲ. ಬಿಜೆಪಿ ಹಾಗೂ ಬಜರಂಗದಳದ ಕಾರ್ಯಕರ್ತರು ರಾಮನವಮಿ ಮೆರವಣಿಗೆ ವೇಳೆ ಪ್ರಚೋದನೆ ನೀಡಿದ ಕಾರಣ ಹಿಂಸಾಚಾರ ನಡೆದಿದೆ. ಗಲಭೆ ವೇಳೆ ಯಾರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆಯೋ, ಅವರಿಗೆ ನೆರವು ನೀಡಲಾಗುತ್ತದೆ” ಎಂದು ತಿಳಿಸಿದರು. ಅತ್ತ, ಬಿಜೆಪಿಯು ಗಲಭೆಗೆ ಟಿಎಂಸಿಯ ದುರಾಡಳಿತವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಚಾವಣಿ ಮೇಲೆ ನಿಂತು ಕಲ್ಲು ತೂರಾಟ
ಗುಜರಾತ್‌ನ ವಡೋದರ ನಗರದಲ್ಲಿ ರಾಮನ ಮೂರ್ತಿಯ ಮೆರವಣಿಗೆ ವೇಳೆ ಚಾವಣಿ ಮೇಲೆ ನಿಂತು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಫತೇಪುರ ಪ್ರದೇಶದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಶ್ರೀರಾಮ ಮೂರ್ತಿಯ ಮೆರವಣಿಗೆ ಆಯೋಜಿಸಿದ್ದರು. ಇದೇ ವೇಳೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ ಕಾರಣ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗಲಭೆಯಿಂದಾಗಿ ಹಲವರು ಗಾಯಗೊಂಡಿದ್ದು, ಇನ್ನೂ ಹಲವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದಕ್ಕೂ ಮೊದಲು ನಡೆದ ಮೆರವಣಿಗೆ ವೇಳೆಯೂ ಪಿತೂರಿ ನಡೆಸಿ ಕಲ್ಲು ತೂರಾಟ ಮಾಡಲಾಗುತ್ತಿತ್ತು. ಈಗಲೂ ಪಿತೂರಿ ನಡೆಸಲಾಗಿದೆ ಎಂದು ಬಜರಂಗದಳದ ಮುಖಂಡರು ಆರೋಪಿಸಿದ್ದಾರೆ.
ಇದನ್ನೂ ಓದಿ: Karnataka Elections: ನನ್ನ ರಾಮ ಅಂತಃಕರಣ ಸ್ವರೂಪಿ, ನಿಮಗೆ ರಾಮ ಚುನಾವಣೆ ಸರಕು: ಸಿದ್ದು, ಬಿಜೆಪಿ ನಡುವೆ ರಾಮನವಮಿ ಫೈಟ್
ದೇಶ
ಏ.1ರಂದು ಜೈಲಿಂದ ಬಿಡುಗಡೆಯಾಗಲಿದ್ದಾರೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು; ಪತ್ನಿ ಟ್ವೀಟ್ ಬೆನ್ನಲ್ಲೇ ಸಿಧು ಟ್ವೀಟ್
ಪಂಜಾಬ್ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ನವಜೋತ್ ಸಿಂಗ್ ಸಿಧು ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಕಾಂಗ್ರೆಸ್ ಸೋತ ಬಳಿಕ, ಅಂದರೆ 2022ರ ಮಾರ್ಚ್ ತಿಂಗಳಲ್ಲಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೇ ತಿಂಗಳಲ್ಲಿ ಶಿಕ್ಷೆಯಾಗಿತ್ತು.
1988ರ ರಸ್ತೆ ಜಗಳ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನಿಂದ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿ, ಪಟಿಯಾಲಾ ಜೈಲಿನಲ್ಲಿರುವ ಮಾಜಿ ಕ್ರಿಕೆಟರ್, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ನಾಳೆ (ಏಪ್ರಿಲ್ 1) ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಈ ಬಗ್ಗೆ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ಮಾಡಿದ್ದಾರೆ. ‘ಸರ್ದಾರ್ ನವಜೋತ್ ಸಿಂಗ್ ಸಿಧು ಅವರು (ತಮ್ಮನ್ನು ತಾವು ಹೀಗೆ ಉಲ್ಲೇಖಿಸಿಕೊಂಡಿದ್ದಾರೆ) ನಾಳೆ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೇ ಮಾಹಿತಿ ಕೊಟ್ಟಿದ್ದಾರೆ’ ಎಂದು ಸಿಧು ಬರೆದುಕೊಂಡಿದ್ದಾರೆ. ನವಜೋತ್ ಸಿಂಗ್ ಸಿಧು ಬಿಡುಗಡೆಯನ್ನು ಅವರ ಪರ ವಕೀಲರಾದ ಎಚ್ಪಿಎಸ್ ವರ್ಮಾ ಕೂಡ ದೃಢಪಡಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ನವಜೋತ್ ಸಿಂಗ್ ಸಿಧು ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಕಾಂಗ್ರೆಸ್ ಸೋತ ಬಳಿಕ, ಅಂದರೆ 2022ರ ಮಾರ್ಚ್ ತಿಂಗಳಲ್ಲಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷಕ್ಕೆ ನನ್ನ ಸೇವೆಯನ್ನು ಮುಂದುವರಿಸುತ್ತೇನೆ, ಆದರೆ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದೇನೆ ಎಂದು ಸೋನಿಯಾ ಗಾಂಧಿಯವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದರು. ಅದಾಗಿ ಎರಡು ತಿಂಗಳ ನಂತರ ಅಂದರೆ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್ನಿಂದ ಶಿಕ್ಷೆಯಾಗಿತ್ತು.
ಏನಿದು ರಸ್ತೆ ರಗಳೆ?
1988ರ ಡಿಸೆಂಬರ್‌ನಲ್ಲಿ ಪಟಿಯಾಲಾದ ಪಾರ್ಕಿಂಗ್ ಸ್ಥಳವೊಂದರಲ್ಲಿ ನವಜೋತ್ ಸಿಂಗ್ ಸಿಧು ಮತ್ತು ಅವರ ಸಹಚರ ರೂಪಿಂದರ್ ಸಿಂಗ್ ಸಂಧು ಸೇರಿ, ಹಿರಿಯ ನಾಗರಿಕ ಗುರ್ನಾಮ್ ಸಿಂಗ್‌ರಿಗೆ ಬೈದಿದ್ದಲ್ಲದೆ, ಅವರನ್ನು ಕಾರಿನಿಂದ ಕೆಳಗೆ ಇಳಿದು ತಲೆಗೆ ಹೊಡೆದಿದ್ದರು. ಅದಾದ ಕೆಲವು ದಿನಗಳಲ್ಲಿ ಗುರ್ನಾಮ್ ಸಿಂಗ್ ಮೃತಪಟ್ಟಿದ್ದರು. ಬಳಿಕ ಗುರ್ನಾಮ್ ಸಿಂಗ್ ಕುಟುಂಬದವರು ಕೋರ್ಟ್ ಮೆಟ್ಟಿಲೇರಿದ್ದರು. ಮೊದಲು ಸೆಷನ್ಸ್ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಅರ್ಜಿ, ಯಾವುದೇ ಸೂಕ್ತ ದಾಖಲೆಯಿಲ್ಲ ಎಂಬ ಕಾರಣಕ್ಕೆ ವಜಾಗೊಂಡಿತ್ತು. ನಂತರ ಕುಟುಂಬದವರು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಇದೊಂದು ಶಿಕ್ಷಾರ್ಹ ನರಹತ್ಯೆ ಎಂದು ತೀರ್ಪುಕೊಟ್ಟಿದ್ದಲ್ಲದೆ, ಸಿಧುಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಹೈಕೋರ್ಟ್ ತೀರ್ಪಿನ ವಿರುದ್ಧ ನವಜೋತ್ ಸಿಂಗ್ ಸಿಧು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. 2018ರಲ್ಲಿ ತೀರ್ಪು ನೀಡಿದ್ದ ಸರ್ವೋಚ್ಛ ನ್ಯಾಯಾಲಯ, ಗುರ್ನಾಮ್ ಸಿಂಗ್ ಮೃತಪಟ್ಟಿದ್ದು ಸಿಧು ನೀಡಿದ ಏಟಿನಿಂದಲೇ ಎಂಬುದಕ್ಕೆ ಸಾಕ್ಷಿಯಿಲ್ಲ ಎಂದು ಹೇಳಿ ಸಿಧು ವಿರುದ್ಧ ದಾಖಲಾಗಿದ್ದ ನರಹತ್ಯೆ ಕೇಸ್‌ನ್ನು ಖುಲಾಸೆಗೊಳಿಸಿತ್ತು. ಆದರೆ ಹಿರಿಯ ನಾಗರಿಕರ ಮೇಲೆ ಹಲ್ಲೆ ಮಾಡಿದ್ದು ತಪ್ಪು ಎಂದು ಹೇಳಿ, ಒಂದು ಸಾವಿರ ರೂಪಾಯಿ ದಂಡ ವಿಧಿಸಿತ್ತು. ಆದರೆ ಸುಪ್ರೀಂಕೋರ್ಟ್‌ನ ಈ ತೀರ್ಪು ತೃಪ್ತಿ ತಂದಿಲ್ಲವೆಂದು ಗುರ್ನಾಮ್ ಕುಟುಂಬ ಮತ್ತೆ ಸುಪ್ರೀಂಕೋರ್ಟ್‌ಗೇ ಮೇಲ್ಮನವಿ ಸಲ್ಲಿಸಿತ್ತು. ಅದರ ಆದೇಶ 2022ರ ಮೇ 19ರಂದು ಹೊರಬಿದ್ದಿತ್ತು. ಸಿಧುಗೆ ಜೈಲಾಗಿತ್ತು.
ಪತ್ನಿಗೆ ಕ್ಯಾನ್ಸರ್
ವಾರದ ಹಿಂದೆ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಟ್ವೀಟ್ ಮಾಡಿ, ತಮಗೆ ಸ್ತನ ಕ್ಯಾನ್ಸರ್ ಇರುವುದಾಗಿ ಪತ್ತೆಯಾಗಿದೆ. ಈ ಹೊತ್ತಲ್ಲಿ ಪತಿ ನವಜೋತ್ ಸಿಂಗ್ ಸಿಧು ತುಂಬ ನೆನಪಾಗುತ್ತಾರೆ ಎಂದು ಭಾವನಾತ್ಮಕವಾಗಿ ಹೇಳಿದ್ದರು. ನಾನು ನಿಮಗಾಗಿ ಕಾಯುತ್ತಲೇ ಇದ್ದೇನೆ. ಆದರೆ, ಸತ್ಯ ಯಾವಾಗಲೂ ತುಂಬ ಪ್ರಬಲವಾಗಿರುತ್ತದೆ. ಹಾಗಾಗಿ ನಿಮಗೆ ಅಷ್ಟೊಂದು ಅಗ್ನಿಪರೀಕ್ಷೆಗಳು ಎದುರಾಗಿವೆ. ಅಷ್ಟಕ್ಕೂ ಇದು ಕಲಿಯುಗ. ಆದರೆ, ನಾವು ಯಾರನ್ನೂ ದೂರುವಂತಿಲ್ಲ. ಏಕೆಂದರೆ, ಇದು ದೇವರ ಆಟ ಎಂದಿದ್ದರು. ಪತ್ನಿಯ ಈ ಭಾವನಾತ್ಮಕ ಟ್ವೀಟ್ ಬೆನ್ನಲ್ಲೇ, ನವಜೋತ್ ಸಿಂಗ್ ಸಿಧು ಬಿಡುಗಡೆಯ ಸುದ್ದಿಯೂ ಹೊರಬಿದ್ದಿದೆ.
ಆರೋಗ್ಯ
New Virus: ಕೊರೊನಾ ಬೆನ್ನಲ್ಲೇ ಪತ್ತೆಯಾಯ್ತು ಮತ್ತೊಂಡು ಡೆಡ್ಲಿ ವೈರಸ್! ಭಾರತದಲ್ಲೇ ಮೊದಲ ಕೇಸ್!
ಕೊರೊನಾ ಸೋಂಕಿನ ಬೆನ್ನಲ್ಲೇ ಮತ್ತೊಂದು ಸೋಂಕಿನ (New Virus) ಸುದ್ದಿ ಎಲ್ಲೆಡೆ ಹರಿದಾಡಿದೆ. ಸಿಲ್ವರ್ ಲೀಫ್ ಡಿಸೀಸ್ ಹೆಸರಿನ ಕಾಯಿಲೆ ಭಾರತದಲ್ಲಿ ಮೊದಲನೆಯದಾಗಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ನವದೆಹಲಿ: ಕೊರೊನಾ ಸೋಂಕು ವಿಶ್ವಾದ್ಯಂತ ಭಾರೀ ತಲ್ಲಣವನ್ನೇ ಉಂಟುಮಾಡಿತ್ತು. ಲಕ್ಷಾಂತರ ಜೀವಗಳು ಈ ಸೋಂಕಿನಿಂದಾಗಿ ಸಾವನ್ನಪ್ಪಿವೆ. ಅದರ ಬೆನ್ನಲ್ಲೇ ಇದೀಗ ಮತ್ತೊಂದು ವೈರಸ್ (New Virus) ಬಂದಿರುವ ಬಗ್ಗೆ ಸುದ್ದಿ ಹರಿದಾಡಲಾರಂಭಿಸಿದೆ. ಅದರಲ್ಲೂ ಭಾರತದಲ್ಲಿಯೇ ಮೊದಲನೆಯದಾಗಿ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Covid-19 Cases: ಕೊರೊನಾ ಸೋಂಕಿನ ಕೇಸ್ನಲ್ಲಿ 24ಗಂಟೆಯಲ್ಲಿ ಶೇ.40 ಏರಿಕೆ; ಇಂದು 3ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು
ಹೌದು. ಭಾರತದಲ್ಲಿ ಸಸ್ಯಗಳಿಗೆ ಹೆಚ್ಚಾಗಿ ಕಾಡುವ ರೋಗವೆಂದರೆ ಅದು ಸಿಲ್ವರ್ ಲೀಫ್ ರೋಗ. ಈ ರೋಗದ ವೈರಸ್ ಇದೀಗ ಮಾನವನ ದೇಹಕ್ಕೂ ಹೊಗ್ಗಿರುವುದಾಗಿ ವರದಿಯಾಗಿದೆ. ಭಾರತದ ರೈತನೊಬ್ಬನಿಗೆ ಈ ಸೋಂಕು ತಗುಲಿದ್ದು, ಆತನಲ್ಲಿ ಜ್ವರ, ಕೆಮ್ಮುವಿನಂತಹ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ. ಇದುವರೆಗೆ ಈ ಸೋಂಕು ಯಾವುದೇ ದೇಶದಲ್ಲಿಯೂ ಮನುಷ್ಯರಿಗೆ ಹಬ್ಬಿರಲಿಲ್ಲ. ಇದೇ ಮೊದಲನೇ ಬಾರಿಗೆ ಇಂತದ್ದೊಂದು ಪ್ರಕರಣ ವರದಿಯಾಗಿದೆ.
ಅಂದ ಹಾಗೆ ಈ ಸೋಂಕು ಯಾವಾಗ ರೈತನಿಗೆ ತಗುಲಿದ್ದು ಎನ್ನುವ ವಿಚಾರದಲ್ಲಿ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಈ ಕುರಿತಾದ ವರದಿಯೊಂದು ʼಮೆಡಿಕಲ್ ಮೈಕೋಲಜಿ ಕೇಸ್ ರಿಪೋರ್ಟ್ಸ್ʼ ಜರ್ನಲ್‌ನಲ್ಲಿ ದಾಖಲಾಗಿದೆ.
ಇದನ್ನೂ ಓದಿ: Coronavirus: ಇಂದು 1800ಕ್ಕೂ ಅಧಿಕ ಕೊರೊನಾ ಕೇಸ್ಗಳು ಪತ್ತೆ; ಏಪ್ರಿಲ್ನಲ್ಲಿ 2 ದಿನ ಆಸ್ಪತ್ರೆಗಳಲ್ಲಿ ಅಣುಕು ಕಾರ್ಯಾಚರಣೆ
ಇತ್ತೀಚೆಗೆ ಅಮೆರಿಕದ ಆರೋಗ್ಯ ಅಧಿಕಾರಿಗಳು ವೈರಸ್ ಒಂದರ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು. ಕ್ಯಾಂಡಿಡಾ ಔರಿಸ್ ಫಂಗಸ್ ಹೆಸರಿನ ಸೋಂಕು ಇತ್ತೀಚಿನ ದಿನಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದರು. ಹಾಗೆಯೇ ಈ ಸೋಂಕಿಗೆ ತುತ್ತಾಗುವವರಲ್ಲಿ ಶೇ.60 ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆ ಎಂದೂ ಅವರು ತಿಳಿಸಿದ್ದರು. ಅದರ ಬೆನ್ನಲ್ಲೇ ಇದೀಗ ಭಾರತದಲ್ಲಿ ಮತ್ತೊಂದು ಸೋಂಕಿನ ವಿಚಾರ ಸುದ್ದಿಯಾಗಿದೆ. ಇದರ ಬಗ್ಗೆ ಭಾರತೀಯ ಆರೋಗ್ಯ ಇಲಾಖೆಯಿಂದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ.
-
ಸುವಚನ11 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ8 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ17 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ9 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ವೈರಲ್ ನ್ಯೂಸ್24 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ20 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್21 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ
-
ಕರ್ನಾಟಕ24 hours ago
Karnataka Election 2023: ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ; ತಪ್ಪಿದರೆ ಸದಾನಂದ?