ದೇಶ
Google Layoffs: ಗೂಗಲ್‌ನಿಂದ ವಜಾಗೊಂಡ ನೌಕರರಿಗೆ ಸಿಗಲಿದೆ 2.6 ಕೋಟಿ ರೂ., ಇವರಿಗೆ ಬೇರೆ ನೌಕರಿಯೇ ಬೇಕಿಲ್ಲ
Google Layoffs: ಐರ್ಲೆಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲ ನೌಕರರಿಗೆ ಮಾತ್ರ ಕೋಟ್ಯಂತರ ರೂಪಾಯಿ Severance Pay ಸಿಗಲಿದೆ. ಆದರೂ, ಗೂಗಲ್‌ನಿಂದ ವಜಾಗೊಂಡ ಯಾವ ನೌಕರನಿಗೂ ಕಂಪನಿಯು ಕಡಿಮೆ ಮೊತ್ತ ನೀಡಿ ಕಳುಹಿಸುತ್ತಿಲ್ಲ ಎಂಬುದು ಗಮನಾರ್ಹ.
ನವದೆಹಲಿ: ಟ್ವಿಟರ್, ಮೆಟಾ, ಮೈಕ್ರೋಸಾಫ್ಟ್, ಅಮೆಜಾನ್, ಆಕ್ಷೆಂಚರ್, ಫೋರ್ಡ್ ಸೇರಿ ಜಗತ್ತಿನ ಅಗ್ರ, ಬಹುರಾಷ್ಟ್ರೀಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಕೊರೊನಾ ಸಮಯದಲ್ಲಿ ಉಂಟಾದ ನಷ್ಟ ತೂಗಿಸುವಿಕೆ ಸೇರಿ ಹಲವು ಕಾರಣಗಳಿಂದಾಗಿ ಸಾಲು ಸಾಲಾಗಿ ಕಂಪನಿಗಳು ನೌಕರರನ್ನು ವಜಾಗೊಳಿಸುತ್ತಿವೆ. ಇದರಿಂದಾಗಿ ಜಾಗತಿಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರೂ ಭೀತಿಯಲ್ಲಿಯೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಆದರೆ, ಗೂಗಲ್ ಕಂಪನಿಯಿಂದ (Google Layoffs) ವಜಾಗೊಂಡವರು ಮಾತ್ರ ಹೆಚ್ಚು ಯೋಚನೆ ಮಾಡಬೇಕಿಲ್ಲ. ಏಕೆಂದರೆ, ಅವರಿಗೆ ಸಿಗುವ ಬೇರ್ಪಡಿಸುವಿಕೆ ಮೊತ್ತ ಅಥವಾ ಕಂಪನಿಯು ಉದ್ಯೋಗಿಯನ್ನು ವಜಾಗೊಳಿಸಿದ ಬಳಿಕ ನೀಡುವ ಹಣಕಾಸು ಪರಿಹಾರದ ಪ್ಯಾಕೇಜ್ (Severance Pay) ಅಷ್ಟರಮಟ್ಟಿಗೆ ಇದೆ.
ಹೌದು, ಗೂಗಲ್ ಇತ್ತೀಚೆಗೆ ಜಾಗತಿಕವಾಗಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಇವರಲ್ಲಿ ಐರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ 240 ಉದ್ಯೋಗಿಗಳು ಕೂಡ ಇದ್ದು, ಅವರಿಗೆ ವಜಾಗೊಳಿಸುವ ಕುರಿತು ಮಾಹಿತಿ ನೀಡಲಾಗಿದೆ. ಸೇಲ್ಸ್ ವಿಭಾಗದ 85, ಟೆಕ್ನಾಲಜಿ ವಿಭಾಗದ 80 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಆದರೆ, ಇವರಲ್ಲಿಯೇ ಕೆಲವು ಮಂದಿಗೆ ಹಣಕಾಸು ಪರಿಹಾರದ ಪ್ಯಾಕೇಜ್ 2.6 ಕೋಟಿ ರೂಪಾಯಿವರೆಗೆ ಸಿಗಲಿದೆ. ಹಾಗಾಗಿ, ವಜಾಗೊಂಡಿರುವ ನೌಕರರಿಗೆ ಸಿಗುವ ಮೊತ್ತವನ್ನು ನೋಡಿದರೆ ಅವರು ಬೇರೆ ಕೆಲಸ ಹುಡುಕುವ ಪ್ರಮೇಯವೇ ಬರುವುದಿಲ್ಲ ಎಂಬುದಾಗಿ ಅಭಿಪ್ರಾಯ ವ್ಯಕ್ತವಾಗಿದೆ.
ವಜಾಗೊಳ್ಳುತ್ತಿರುವ ನೌಕರರಿಗೆ ಕಂಪನಿಯು Severance Pay ನೀಡುವುದಾಗಿ ಭರವಸೆ ನೀಡಿದೆ. ಐರ್ಲೆಂಡ್‌ನಲ್ಲಿ 2003ರಲ್ಲಿ ಕಚೇರಿಯನ್ನು ತೆರೆದಿದ್ದು, ಕಚೇರಿ ಆರಂಭವಾದಾಗಿನಿಂದ ಇದುವರೆಗೆ ಕಾರ್ಯನಿರ್ವಹಿಸಿದ ನೌಕರರಿಗೆ ಇಷ್ಟು ಮೊತ್ತದ ಪ್ಯಾಕೇಜ್ ಸಿಗಲಿದೆ. ಹೀಗೆ, ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿದ ನೌಕರರಿಗೆ ಪ್ರತಿವರ್ಷದಂತೆ ಲೆಕ್ಕ ಹಾಕಿ ಆರು ವಾರಗಳ ಹೆಚ್ಚುವಳಿ ಸಂಬಳ, 30 ದಿನಗಳ ಗಳಿಕೆ ರಜೆ ಸೇರಿ ಅವರ ಫೈನಲ್ ಸೆಟಲ್‌ಮೆಂಟ್ ಮೊತ್ತವು 2.6 ಕೋಟಿ ಆಗಲಿದೆ ಎಂದು ತಿಳಿದುಬಂದಿದೆ.
ಅಮೆರಿಕದ ನೌಕರರಿಗೂ ಸಿಗಲಿದೆ ಹೆಚ್ಚಿನ ಮೊತ್ತ
ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೂಗಲ್ ಉದ್ಯೋಗಿಗಳಿಗೂ ಹೆಚ್ಚಿನ ಪ್ರಮಾಣದ Severance Pay ಪ್ಯಾಕೇಜ್ ಸಿಗಲಿದೆ. ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರಿಗೆ 16 ವಾರಗಳ ಸಂಬಳ, 16 ವಾರದ ಜಿಎಸ್‌ಯು ವೆಸ್ಟಿಂಗ್, 2022ರ ಬೋನಸ್, ಆರು ತಿಂಗಳವರೆಗೆ ವಿಮೆ ವಿಸ್ತರಣೆ, ವಲಸೆ ಬಂದವರು ಬೇರೆ ದೇಶಗಳಿಗೆ ತೆರಳಲು ಅಥವಾ ತಮ್ಮ ದೇಶಗಳಿಗೆ ಮರಳಲು ನೆರವು ಒದಗಿಸುವುದು ಸೇರಿ ಹತ್ತಾರು ಸೌಲಭ್ಯ ನೀಡಿದೆ. ಆದರೆ, ಐರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಮಾತ್ರ ಹೆಚ್ಚಿನ ಮೊತ್ತ ನೀಡಲಾಗಿದೆ.
ಕಳೆದ ಜನವರಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸುವ ಮೂಲಕ ಕೆಲಸದಿಂದ ವಜಾಗೊಳಿಸುತ್ತಿರುವ ತೀರ್ಮಾನವನ್ನು ಪ್ರಕಟಿಸಿದ್ದರು. ಹಾಗೆಯೇ, “ಇಂತಹ ಕಠಿಣ ತೀರ್ಮಾನದಿಂದ ನನ್ನ ಮನಸ್ಸಿಗೆ ನೋವಾಗಿದ್ದು, ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ” ಎಂದು ಹೇಳಿದ್ದರು. ಭಾರತದ 450 ಜನ ಗೂಗಲ್‌ನಿಂದ ವಜಾಗೊಂಡಿದ್ದಾರೆ.
ಇದನ್ನೂ ಓದಿ: xooglers: ಗೂಗಲ್‌ನಿಂದ ಕೆಲಸ ಕಳೆದುಕೊಂಡ 7 ಮಂದಿ ಹೊಸ ಕಂಪನಿಯನ್ನೇ ಆರಂಭಿಸಿದರು!
ದೇಶ
ಹೊಸ ಸಂಸತ್ ಭವನ ಉದ್ಘಾಟನೆ; ಈ ಕಟ್ಟಡ ಸಬಲೀಕರಣಕ್ಕೆ ತೊಟ್ಟಿಲಾಗಲಿ ಎಂದ ಪ್ರಧಾನಿ ಮೋದಿ
ತಮಿಳು ಸಂಸ್ಕೃತಿಯಲ್ಲಿ ಮಹತ್ವ ಪಡೆದ ಸೆಂಗೋಲ್ (ರಾಜದಂಡ)ನ್ನು ಪ್ರಧಾನಿ ಮೋದಿ ಇಂದು ಲೋಕಸಭೆಯಲ್ಲಿ ಪ್ರತಿಷ್ಠಾಪಿಸಿದ್ದು ಒಂದು ಐತಿಹಾಸಿಕ ಕ್ಷಣ ಎನ್ನಿಸಿಕೊಂಡಿದೆ. ಇದು ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡಿದ್ದರ ಸಂಕೇತ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ(PM Modi)ಯವರು ಇಂದು ಬೆಳಗ್ಗೆ ನೂತನ ಸಂಸತ್ ಭವನ (New Parliament Building)ವನ್ನು ಉದ್ಘಾಟನೆ ಮಾಡಿದರು. ಮುಂಜಾನೆ ಗಣಪತಿ ಹೋಮ ಶುರುವಾಗಿ, ಬಳಿಕ ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ರಾಜದಂಡ ಪ್ರತಿಷ್ಠಾಪನೆ ಮಾಡಿದರು. ಅದಾದ ಮೇಲೆ ಫಲಕ ಅನಾವರಣಗೊಳಿಸುವ ಮೂಲಕ ಸಂಸತ್ ಭವನವನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ಧಾರ್ಮಿಕ ಮಂತ್ರಘೋಷಗಳು ಪಠಿಸಲ್ಪಟ್ಟವು. ಬಳಿಕ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಹೋಮಕ್ಕೆ ಪೂರ್ಣಾಹುತಿ ಹಾಕಿದ ಬಳಿಕ ಪ್ರಧಾನಿ ಮೋದಿ, ನೇರವಾಗಿ ರಾಜದಂಡ (ಸೆಂಗೋಲ್) ಇದ್ದಲ್ಲಿಗೆ ಬಂದು, ಅದಕ್ಕೆ ದೀರ್ಘದಂಡ ನಮಸ್ಕಾರ ಹಾಕಿದ್ದು ವಿಶೇಷವಾಗಿತ್ತು.
ನೂತನ ಸಂಸತ್ ಭವನ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಸಾರ್ಥಕ ಭಾವದಿಂದ ಟ್ವೀಟ್ವೊಂದನ್ನು ಮಾಡಿದ್ದಾರೆ. ನಾಲ್ಕು ಫೋಟೋಗಳನ್ನು ಹಂಚಿಕೊಂಡ ಅವರು ‘ಭಾರತದ ಹೊಸ ಸಂಸತ್ ಭವನ ಉದ್ಘಾಟನೆಗೊಂಡಿತು. ನಮ್ಮೆಲ್ಲರ ಮನಸು-ಹೃದಯದಲ್ಲಿ ಹೆಮ್ಮೆ, ಆಶಯ, ಭರವಸೆಗಳು ತುಂಬಿ ಬಂದವು. ನಮ್ಮ ಸಬಲೀಕರಣಕ್ಕೆ ಈ ಐಕಾನಿಕ್ ಕಟ್ಟಡ ತೊಟ್ಟಿಲಾಗಲಿ. ನಮ್ಮೊಳಗೆ ಕನಸು ಹೊತ್ತಿಸಿ, ಅವುಗಳನ್ನು ಸಾಕಾರಗೊಳಿಸಿಕೊಳ್ಳಲು ನೂತನ ಸಂಸತ್ ಭವನ ಸ್ಫೂರ್ತಿಯಾಗಲಿ. ನಮ್ಮ ಮಹಾನ್ ರಾಷ್ಟ್ರವನ್ನು ಅಭಿವೃದ್ಧಿಯ ಉನ್ನತಿಗೆ ಕರೆದೊಯ್ಯಲಿ’ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
As the new building of India’s Parliament is inaugurated, our hearts and minds are filled with pride, hope and promise. May this iconic building be a cradle of empowerment, igniting dreams and nurturing them into reality. May it propel our great nation to new heights of progress. pic.twitter.com/zzGuRoHrUS
— Narendra Modi (@narendramodi) May 28, 2023
ತಮಿಳು ಸಂಸ್ಕೃತಿಯಲ್ಲಿ ಮಹತ್ವ ಪಡೆದ ಸೆಂಗೋಲ್ (ರಾಜದಂಡ)ನ್ನು ಪ್ರಧಾನಿ ಮೋದಿ ಇಂದು ಲೋಕಸಭೆಯಲ್ಲಿ ಪ್ರತಿಷ್ಠಾಪಿಸಿದ್ದು ಒಂದು ಐತಿಹಾಸಿಕ ಕ್ಷಣ ಎನ್ನಿಸಿಕೊಂಡಿದೆ. ಇದು ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡಿದ್ದರ ಸಂಕೇತ ಎಂದು ಹೇಳಲಾಗಿದೆ. ತಮಿಳುನಾಡಿನ ಅಧೀನಂ ಮಠದ ಪುರೋಹಿತರು ಈ ಸೆಂಗೋಲ್‌ನ್ನು ಪ್ರಧಾನಿ ಮೋದಿಯವರಿಗೆ ಹಸ್ತಾಂತರ ಮಾಡಿದ್ದರು. ಇಂದು ರಾಜದಂಡ ಪ್ರತಿಷ್ಠಾಪನೆ ವೇಳೆ ತಮಿಳುನಾಡಿನ ವಿವಿಧ ಅಧೀನಂ ಮಠಗಳ ಬಹುತೇಕ ಸಾಧು-ಸಂತರು ಪಾಲ್ಗೊಂಡಿದ್ದರು. ಪ್ರಧಾನಿ ಮೋದಿಯವರು ಅವರೆಲ್ಲರ ಆಶೀರ್ವಾದ ಪಡೆದಿದ್ದಾರೆ.
ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ ಸೆಂಗೋಲ್ ಪ್ರತಿಷ್ಠಾಪನೆ; ಕೈಮುಗಿದುಕೊಂಡು ರಾಜದಂಡ ಹಿಡಿದು ಬಂದ ಪ್ರಧಾನಿ ಮೋದಿ
ದೇಶ
ಪ್ರಧಾನಿ ಮೋದಿ ಮನವಿಗೆ ಸ್ಪಂದನೆ; ಸಂಸತ್ ಭವನದ ವಿಡಿಯೊಕ್ಕೆ ಧ್ವನಿ ಕೊಟ್ಟ ಶಾರುಖ್ ಖಾನ್, ಅಕ್ಷಯ್ ಕುಮಾರ್
ನಮ್ಮ ಸಂವಿಧಾನವನ್ನು ಎತ್ತಿ ಹಿಡಿಯುವ, ಮಹಾನ್ ರಾಷ್ಟ್ರ ಭಾರತದ ನಾಗರಿಕರನ್ನು ಪ್ರತಿನಿಧಿಸುವವರಿಗಾಗಿ ಎಂಥ ಭವ್ಯವಾದ ಮನೆ ನಿರ್ಮಾಣವಾಗಿದೆ ಎಂದು ಶಾರುಖ್ ಖಾನ್ ಹೇಳಿದ್ದಾರೆ.
ನೂತನ ಸಂಸತ್ ಭವನ (New Parliament Building) ಉದ್ಘಾಟನೆಗೆ ಎರಡು ದಿನ ಮೊದಲು ಅಂದರೆ ಮೇ 26ರಂದು ಪ್ರಧಾನಿ ನರೇಂದ್ರ ಮೋದಿಯವರು ಒಂದು ಟ್ವೀಟ್ ಮಾಡಿದ್ದರು. ಭವ್ಯವಾದ ಹೊಸ ಸಂಸತ್ ಭವನದ ವಿಡಿಯೊ (New Parliament Building Inauguration) ಶೇರ್ ಮಾಡಿಕೊಂಡು ದೇಶದ ಜನರಲ್ಲಿ ಒಂದು ವಿಶೇಷ ಮನವಿ ಮಾಡಿದ್ದರು. ‘ನೀವೆಲ್ಲ ಈ ವಿಡಿಯೊವನ್ನು ನಿಮ್ಮದೇ ವೈಸ್ ಓವರ್ನೊಂದಿಗೆ ಹಂಚಿಕೊಳ್ಳಿ. ನಾನೂ ರೀಟ್ವೀಟ್ ಮಾಡುತ್ತೇನೆ. #MyParliamentMyPride ಹ್ಯಾಷ್ಟ್ಯಾಗ್ ಕೊಡಲು ಮರೆಯಬೇಡಿ ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಈ ಕರೆಗೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್, ವಿವಿಧ ಸಚಿವರು, ಪತ್ರಕರ್ತರು, ಬಿಜೆಪಿ ನಾಯಕರ ಸ್ಪಂದಿಸಿದ್ದಾರೆ. ಶಾರುಖ್ ಖಾನ್, ಅಕ್ಷಯ್ ಕುಮಾರ್ ಸೇರಿ ಹಲವರು ಸಂಸತ್ ಭವನ, ಭಾರತ, ಲಾಂಛನ ಮತ್ತಿತರ ವಿಷಯಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿ, ನೂತನ ಸಂಸತ್ ಭವನದ ವಿಡಿಯೊ ಹಂಚಿಕೊಂಡಿದ್ದಾರೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ರೀಟ್ವೀಟ್ ಮಾಡಿಕೊಂಡಿದ್ದಾರೆ.
ಸಂಸತ್ ಭವನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡ ಶಾರುಖ್ ಖಾನ್ ಆ ವಿಡಿಯೊವನ್ನು ಟ್ವೀಟ್ ಮಾಡಿ, ‘ನಮ್ಮ ಸಂವಿಧಾನವನ್ನು ಎತ್ತಿ ಹಿಡಿಯುವ, ಮಹಾನ್ ರಾಷ್ಟ್ರ ಭಾರತದ ನಾಗರಿಕರನ್ನು ಪ್ರತಿನಿಧಿಸುವವರಿಗಾಗಿ ಎಂಥ ಭವ್ಯವಾದ ಮನೆ ನಿರ್ಮಾಣವಾಗಿದೆ ! ಎಂದು ಹೇಳಿದ್ದಾರೆ. ಹಾಗೇ, ಭಾರತಕ್ಕೊಂದು ಹೊಸ ಸಂಸತ್ ಭವನ ಬೇಕು ಎಂಬ ಹಳೇ ಕನಸು ಸಾಕಾರವಾಯಿತು. ಇದು ಭಾರತದ ವೈಭವ, ಜೈ ಹಿಂದ್’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಶಾರುಖ್ ಖಾನ್ ಟ್ವೀಟ್ನ್ನು ರೀಟ್ವೀಟ್ ಮಾಡಿದ ಪ್ರಧಾನಿ ಮೋದಿ, ‘ಸಂಸತ್ ಭವನದ ಬಗ್ಗೆ ನೀವು ಅತ್ಯಂತ ಸುಂದರವಾಗಿ ವರ್ಣಿಸಿದ್ದೀರಿ. ಸಂಸತ್ ಭವನವು ಪ್ರಜಾಪ್ರಭುತ್ವದ ಶಕ್ತಿ ಮತ್ತು ಬೆಳವಣಿಗೆಯ ಸಂಕೇತ. ಸಂಪ್ರದಾಯ ಮತ್ತು ಆಧುನಿಕತೆ ಎರಡನ್ನೂ ಒಳಗೊಂಡಿದೆ’ ಎಂದು ಹೇಳಿದ್ದಾರೆ.
Beautifully expressed!
— Narendra Modi (@narendramodi) May 27, 2023
The new Parliament building is a symbol of democratic strength and progress. It blends tradition with modernity. #MyParliamentMyPride https://t.co/Z1K1nyjA1X
ಧ್ವನಿಯಾದ ಅಕ್ಷಯ್ ಕುಮಾರ್
ಬಾಲಿವುಡ್ನ ಇನ್ನೊಬ್ಬ ಖ್ಯಾತ ನಟ ಅಕ್ಷಯ್ ಕುಮಾರ್ ಅವರೂ ಕೂಡ ಪ್ರಧಾನಿ ನರೇಂದ್ರ ಮೋದಿ ಮನವಿಯನ್ನು ಗೌರವಿಸಿದ್ದಾರೆ. ನೂತನ ಸಂಸತ್ ಭವನದ ವಿಡಿಯೊಕ್ಕೆ ತಮ್ಮ ಧ್ವನಿ ಕೊಟ್ಟಿದ್ದಾರೆ. ಅಂದರೆ ಭವ್ಯ ಭವನವನ್ನು ಅವರು ವಿವರಿಸಿದ್ದಾರೆ. ವಿಡಿಯೊ ಶೇರ್ ಮಾಡಿಕೊಂಡ ಅಕ್ಷಯ್ ಕುಮಾರ್ ಅವರು ‘ಸಂಸತ್ ಭವನದ ವೈಭವಯುತ ಕಟ್ಟಡ ನೋಡಲು ಸಿಕ್ಕಾಪಟೆ ಖುಷಿಯಾಗುತ್ತದೆ. ಭಾರತದ ಅಭಿವೃದ್ಧಿ ಎಂಬ ಕಥೆಯಲ್ಲಿ ಒಂದು ಐತಿಹಾಸಿಕ ಗುರುತಾಗಿ ಇದು ಸದಾ ಉಳಿಯಲಿದೆ’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಅಕ್ಷಯ್ ಕುಮಾರ್ ಅವರ ಟ್ವೀಟ್ನ್ನು ರೀಟ್ವೀಟ್ ಮಾಡಿದ ಪ್ರಧಾನಿ ಮೋದಿ ‘ ನೀವು ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವಿವರಿಸಿದ್ದೀರಿ. ನಮ್ಮ ನೂತನ ಸಂಸತ್ತು, ನಮ್ಮ ಪ್ರಜಾಪ್ರಭುತ್ವಕ್ಕೆ ದಾರಿದೀಪವಾಗಿದೆ. ಇದು ದೇಶದ ಪರಂಪರೆ ಮತ್ತು ಈ ದೇಶದ ಜನರ ಭವಿಷ್ಯಕ್ಕೆ ಪೂರಕವಾದ ಆಕಾಂಕ್ಷೆಗಳಿಗೆ ಸ್ಪಂದನೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದ್ದಾರೆ.
You have conveyed your thoughts very well.
— Narendra Modi (@narendramodi) May 27, 2023
Our new Parliament is truly a beacon of our democracy. It reflects the nation's rich heritage and the vibrant aspirations for the future. #MyParliamentMyPride https://t.co/oHgwsdLLli
ತಮಿಳಿಗರಿಗೆ ಹೆಮ್ಮೆ ಎಂದ ನಟ ರಜಿನಿಕಾಂತ್!
ನಟ ರಜಿನಿಕಾಂತ್ ಅವರು ಟ್ವೀಟ್ ಮಾಡಿ ಸೆಂಗೋಲ್ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಇವರು ವಿಡಿಯೊ ಶೇರ್ ಮಾಡಲಿಲ್ಲ. ‘ತಮಿಳಿಗರ ಸಾಂಪ್ರದಾಯಿಕ ಚಿಹ್ನೆ ರಾಜದಂಡ (ಸೆಂಗೋಲ್) ಇನ್ನು ಮುಂದೆ ಭಾರತದ ಹೊಸ ಸಂಸತ್ತಿನ ಕಟ್ಟಡದಲ್ಲಿ ಇರಲಿದೆ. ತಮಿಳಿಗರಿಗೆ ಗೌರವ ತಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದಿದ್ದಾರೆ. ಈ ಟ್ವೀಟ್ ರೀಟ್ವೀಟ್ ಮಾಡಿದ ಪ್ರಧಾನಿ ಮೋದಿ, ‘ತಮಿಳುನಾಡಿನ ವೈಭವೋಪೇತ ಸಂಸ್ಕೃತಿ ಬಗ್ಗೆ ಇಡೀ ರಾಷ್ಟ್ರಕ್ಕೇ ಹೆಮ್ಮೆಯಿದೆ. ಇಂಥ ಮಹಾನ್ ರಾಜ್ಯದ ಸಂಸ್ಕೃತಿಯು ನೂತನ ಸಂಸತ್ ಭವನದೊಳಗೆ ಕಂಗೊಳಿಸುತ್ತಿರುವುದು ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.
தமிழ்நாட்டின் புகழ்பெற்ற கலாச்சாரத்தில் ஒட்டுமொத்த தேசமும் பெருமை கொள்கிறது. புதிய நாடாளுமன்றக் கட்டிடத்தில் இந்த தலைசிறந்த மாநிலத்தின் கலாச்சாரம் பெருமைக்குரிய இடத்தைப் பெறுவது உண்மையிலேயே மகிழ்ச்சி அளிக்கிறது. #MyParliamentMyPride https://t.co/h0apJAnQ3j
— Narendra Modi (@narendramodi) May 27, 2023
ದೇಶ
New Parliament Building: ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಲಾಲು ಪ್ರಸಾದ್ ಯಾದವರ ಆರ್‌ಜೆಡಿ ಪಕ್ಷ!
New Parliament Building: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸೆಂಗೋಲ್‌ನ್ನು ಲೋಕಸಭೆಯಲ್ಲಿ ಪ್ರತಿಷ್ಠಾಪಿಸುವ ಮೂಲಕ ಹೊಸ ಸಂಸತ್ ಭವನವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ 20 ಪ್ರತಿಪಕ್ಷಗಳು ಬಹಿಷ್ಕಾರ ಹಾಕಿವೆ.
ನವದೆಹಲಿ: ಹೊಸ ಸಂಸತ್ ಭವನ ಸಂಬಂಧ ವಿವಾದಗಳು ಇನ್ನೂ ನಿಂತಿಲ್ಲ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇತ್ತ ಹೊಸ ಸಂಸತ್ ಭವನ (New Parliament Building) ಉದ್ಘಾಟನೆ ಮಾಡುತ್ತಿದ್ದಂತೆ ಅತ್ತ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ರಾಷ್ಟ್ರೀಯ ಜನತಾ ದಳ(RJD), ಸಂಸತ್ ಭವನವನ್ನು ಶವಪೆಟ್ಟಿಗೆಗೆ (Coffin) ಹೋಲಿಕೆ ಮಾಡಿ, ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ನಾಂದಿ ಹಾಡಿದೆ. ಆರ್‌ಜೆಡಿ ಟ್ವೀಟ್ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಇಂದು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡಲಾಯಿತು ಎಂಬುದನ್ನು ಸಾಂಕೇತಿವಾಗಿ ಹೇಳಲು ಶವಪೆಟ್ಟಿಗೆಗೆ ಹೋಲಿಸಲಾಗಿದೆ ಎಂದು ಆರ್‌ಜೆಡಿ ಹೇಳಿದೆ.
ಟ್ವೀಟ್ ಬಗ್ಗೆ ವಿವರಿಸಿದ ಪಕ್ಷದ ನಾಯಕ ಶಕ್ತಿ ಸಿಂಗ್ ಯಾದವ್ ಅವರು, ನಾವು ಮಾಡಿರುವ ಟ್ವೀಟ್‌ನಲ್ಲಿರುವ ಶವಪೆಟ್ಟಿಗೆಯು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡುತ್ತಿರುವುದನ್ನು ಸಂಕೇತಿಸುತ್ತಿದೆ. ದೇಶವು ಇದನ್ನು ಒಪ್ಪಿಕೊಳ್ಳುವುದಿಲ್ಲ. ಸಂಸತ್ತು ಪ್ರಜಾಪ್ರಭುತ್ವದ ದೇವಾಲಯವಾಗಿದೆ ಮತ್ತು ಇದು ಚರ್ಚೆಯ ಸ್ಥಳವಾಗಿದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಜನತಾ ದಳ ಮಾಡಿರುವ ಟ್ವೀಟ್
ये क्या है? pic.twitter.com/9NF9iSqh4L
— Rashtriya Janata Dal (@RJDforIndia) May 28, 2023
ಆರ್‌ಜೆಡಿ ವರ್ತನೆಯ ವಿರುದ್ಧ ಕೆಂಡಕಾರಿರುವ ಬಿಜೆಪಿಯ ನಾಯಕ ಸುಶೀಲ್ ಮೋದಿ ಅವರು, ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆ ಹೋಲಿಕೆ ಮಾಡಿರುವವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಆರ್‌ಜೆಡಿ ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಕೆ ಮಾಡಿರುವುದು ದುರದೃಷ್ಟಕರ. ಅವರು ಇಂದು ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಕೆ ಮಾಡುತ್ತಿದ್ದಾರೆ. ಹಳೆ ಸಂಸತ್ ಭವನವನ್ನು ಅವರು ಶೂನ್ಯದೊಂದಿಗೆ ಹೋಲಿಕೆ ಮಾಡುತ್ತಾರೆಯೇ? ನಾವು ಈ ಮೊದಲು ಸೊನ್ನೆಯಲ್ಲಿ ಕುಳಿತುಕೊಳುತ್ತಿದ್ದೇವು ಎಂದು ಹೇಳಿಕೊಂಡಿದ್ದಾರೆ. ಈ ಮಧ್ಯೆ, ಸಂಯುಕ್ತ ಜನತಾ ದಳ ಕೂಡ ಈ ರೇಸ್‌ನಲ್ಲಿ ನುಗ್ಗಿದ್ದು, ಹೊಸ ಸಂಸತ್ ಭವನದ ಉದ್ಘಾಟನೆಯೊಂದಿಗೆ ಅಪಮಾನ ಇತಿಹಾಸವನ್ನು ಬರೆಯಲಾಗಿದೆ ಎಂದು ಹೇಳಿದೆ.
New Parliament Building: ಕಾರ್ಮಿಕರನ್ನು ಸನ್ಮಾನಿಸಿದ ಪ್ರಧಾನಿ ನೇರಂದ್ರ ಮೋದಿ
ನೂತನ ಸಂಸತ್ ಭವನ ಉದ್ಘಾಟನೆ (New Parliament Building Inauguration) ನಿಮಿತ್ತ ಮುಂಜಾನೆ 7.30ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರಧಾನಿ ಮೋದಿ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಎಲ್ಲ ಪೂಜೆಗಳಲ್ಲೂ ಪಾಲ್ಗೊಂಡರು. ಗಣಪತಿ ಹೋಮ ಮುಕ್ತಾಯವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ಸೆಂಗೋಲ್‌ನ್ನು ಹಿಡಿದು, ನೂತನ ಸಂಸತ್ ಭವನ ಪ್ರವೇಶಿಸಿ, ಅಲ್ಲಿ ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ಪ್ರತಿಷ್ಠಾಪಿಸಿದರು. ಈ ವೇಳೆ ತಮಿಳುನಾಡಿನ ಅಧೀನಂ ಮಠದ ಪುರೋಹಿತರು, ಸಂತರು, ಮಠಾಧೀಶರು ಇದ್ದರು. ಮಂತ್ರಘೋಷ ಮೊಳಗುತ್ತಿತ್ತು.
ಇದನ್ನೂ ಓದಿ: New Parliament Building: ನೂತನ ಸಂಸತ್ ಭವನದ ಉದ್ಘಾಟನೆ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಇಷ್ಟಾದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಮಿಕರನ್ನು ಸನ್ಮಾನಿಸಿದರು. ನೂತನ ಸಂಸತ್ ಭವನ ನಿರ್ಮಾಣ ಮಾಡಿದ ಈ ಕೆಲಸಗಾರರಿಗೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಅದಕ್ಕೂ ಮೊದಲು ನರೇಂದ್ರ ಮೋದಿಯವರು ಸಂಸತ್ ಭವನದ ಫಲಕ ಅನಾವರಣಗೊಳಿಸಿದರು. ನಂತರ ಅಲ್ಲಿ ಸರ್ವಧರ್ಮಗಳ ಪ್ರಾರ್ಥನೆ ನಡೆಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಗೃಹ ಸಚಿವ ಅಮಿತ್ ಶಾ, ಇನ್ನಿತರ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಅನುರಾಗ್ ಠಾಕೂರ್, ರಾಜನಾಥ್ ಸಿಂಗ್ ಮತ್ತಿತರ ಹಲವು ಗಣ್ಯರು ಇದ್ದರು. ಇವರಲ್ಲಿ ಸ್ಪೀಕರ್ ಓಂ ಬಿರ್ಲಾ ಪ್ರತಿ ಕಾರ್ಯದಲ್ಲೂ ಪ್ರಧಾನಿ ಮೋದಿಗೆ ಜತೆಯಾದರು.
ಬಿಜೆಪಿ ನಾಯಕ ಸುಶೀಲ್ ಮೋದಿ ಆಕ್ರೋಶ
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
New Parliament Building: ನೂತನ ಸಂಸತ್ ಭವನದ ಉದ್ಘಾಟನೆ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಹೊಸ ಸಂಸತ್ ಭವನದ ಉದ್ಘಾಟನೆ ನಿಮಿತ್ತ ಕಾರ್ಯಕ್ರಮಗಳು ಇಂದು ಮುಂಜಾನೆ 7.30ರಿಂದಲೇ ಪ್ರಾರಂಭಗೊಂಡಿವೆ. ಎರಡನೇ ಹಂತದ ಕಾರ್ಯಕ್ರಮಗಳು ಕೆಲವೇ ಹೊತ್ತಲ್ಲಿ ಶುರುವಾಗಲಿದ್ದು, ನಾವಿಲ್ಲಿ ಕೆಳಗೆ ಕೊಟ್ಟಿರುವ ಲಿಂಕ್ ಮೂಲಕ ನೇರಪ್ರಸಾರ ವೀಕ್ಷಿಸಬಹುದು.
ಇಂದು ದೆಹಲಿಯಲ್ಲಿ ನೂತನ ಸಂಸತ್ ಭವನ (New Parliament Building)ದ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿದೆ (New Parliament Building Inauguration). ಬೆಳಗ್ಗೆ 7.30ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ಪ್ರಧಾನಿ ನರೇಂದ್ರ ಮೋದಿಯವರು ಸೆಂಗೋಲ್ ಪ್ರತಿಷ್ಠಾಪನೆ ಮಾಡಿದ್ದಾರೆ. ಇಂದು ಮಧ್ಯಾಹ್ನ 2.30ರವರೆಗೂ ಸಂಸತ್ ಭವನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ನೀವು ಈ ಕೆಳಗಿನ ಲಿಂಕ್ ಮೂಲಕ ನೇರಪ್ರಸಾರ ವೀಕ್ಷಿಸಬಹುದಾಗಿದೆ.
-
ಕರ್ನಾಟಕ23 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ23 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ22 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ17 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕ್ರಿಕೆಟ್13 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ದೇಶ6 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ14 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
EXPLAINER4 hours ago
ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?