Narendra Modi: ಮೋದಿ ನಿಮ್ಮ ಕುಟುಂಬದ ಸದಸ್ಯ, ಚಿಂತೆ ಮಾಡದಿರಿ; ಜನರಿಗೆ ಪ್ರಧಾನಿ ಅಭಯ - Vistara News

ದೇಶ

Narendra Modi: ಮೋದಿ ನಿಮ್ಮ ಕುಟುಂಬದ ಸದಸ್ಯ, ಚಿಂತೆ ಮಾಡದಿರಿ; ಜನರಿಗೆ ಪ್ರಧಾನಿ ಅಭಯ

Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಯೋಜನೆಯ ಫಲಾನುಭವಿಗಳ ಜತೆಗೂ ಅವರು ಸಮಾಲೋಚನೆ ನಡೆಸಿದರು.

VISTARANEWS.COM


on

Narendra Modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: “ದೇಶಾದ್ಯಂತ ಸಹಕಾರಿ ಕ್ಷೇತ್ರದ (Cooperative Sector) ಏಳಿಗೆಯೇ ಕೇಂದ್ರ ಸರ್ಕಾರದ ಗುರಿಯಾಗಿದೆ. ಅದರಲ್ಲೂ, ಗ್ರಾಮೀಣ ಭಾಗದಲ್ಲಿ ಸಹಕಾರಿ ಕ್ಷೇತ್ರವು ಭದ್ರವಾಗಿ ನೆಲೆಯೂರುವಂತೆ ಮಾಡಲು ಆದ್ಯತೆ ನೀಡಲಾಗುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ವರ್ಚ್ಯುವಲ್‌ ವೇದಿಕೆ ಮೂಲಕ ಕರ್ನಾಟಕ ಸೇರಿ ದೇಶಾದ್ಯಂತ ಇರುವ ‘ವಿಕಸಿತ ಭಾರತ ಸಂಕಲ್ಪ ಯಾತ್ರಾ’ (Viksit Bharat Sankalp Yatra) ಯೋಜನೆಯ ಫಲಾನುಭವಿಗಳ ಜತೆ ಸಮಾಲೋಚನೆ ನಡೆಸುವ ವೇಳೆ ಸಹಕಾರಿ ಕ್ಷೇತ್ರದ ಏಳಿಗೆ ಕುರಿತು ನರೇಂದ್ರ ಮೋದಿ ಪ್ರಸ್ತಾಪಿಸಿದರು. ಹಾಗೆಯೇ, “ನಾನು ನಿಮ್ಮ ಕುಟುಂಬದ ಸದಸ್ಯ. ಸರ್ಕಾರದ ಯೋಜನೆಗಳು ಮನೆ ಬಾಗಿಲಿಗೆ ಬರಲಿವೆ” ಎಂದರು.

“ಸಹಕಾರಿ ಕ್ಷೇತ್ರದ ಏಳಿಗೆ ಮೂಲಕ ದೇಶದಲ್ಲಿ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮಾಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಕೃಷಿ, ಮೀನುಗಾರಿಕೆ, ಹೈನುಗಾರಿಕೆ ಹಾಗೂ ಸಕ್ಕರೆ ಉತ್ಪಾದನೆ ಸೇರಿ ಹತ್ತಾರು ವಲಯಗಳಿಗೆ ಸಹಕಾರಿ ಕ್ಷೇತ್ರವನ್ನು ಏಣಿಯಾಗಿ ಮಾಡಿಕೊಳ್ಳುವ ಮೂಲಕ ಗ್ರಾಮೀಣ ಭಾಗದ ಜನರ ಜೀವನ ಮಟ್ಟವನ್ನು ಸುಧಾರಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ” ಎಂದು ಹೇಳಿದರು.

“ವಿಕಸಿತ ಭಾರತ ಸಂಕಲ್ಪ ಯಾತ್ರಾದ ಭಾಗವಾಗಿ ಕೇಂದ್ರ ಸರ್ಕಾರವು ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಗೆ ತಂದಿದೆ. ಯೋಜನೆ ಅಡಿಯಲ್ಲಿ ಇದುವರೆಗೆ ಒಂದು ಕೋಟಿ ಜನರಿಗೆ ಆಯುಷ್ಮಾನ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಸುಮಾರು 1.25 ಕೋಟಿ ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಹಾಗೆಯೇ, 70 ಲಕ್ಷ ಜನರ ಕ್ಷಯರೋಗವನ್ನು ಪತ್ತೆ ಹಚ್ಚಲಾಗಿದೆ” ನರೇಂದ್ರ ಮೋದಿ ತಿಳಿಸಿದರು.

“ಸರ್ಕಾರದ ಯೋಜನೆಗಳನ್ನು ಪಡೆಯಲು ಜನ ಕಚೇರಿಗಳಿಗೆ ಪದೇಪದೆ ಅಲೆದಾಡುವಂತಹ ಪರಿಸ್ಥಿತಿ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ದೇಶದ ಜನರ ಖಾತೆಗೆ ಯೋಜನೆಗಳ ಹಣವು ಜಮೆಯಾಗುತ್ತದೆ. ಇದರಿಂದಾಗಿ ಫಲಾನುಭವಿಗಳ ಕಣ್ಣಿನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಜನರಲ್ಲಿರುವ ಆತ್ಮವಿಶ್ವಾಸವನ್ನು ನೋಡುವುದೇ ನನಗೆ ಖುಷಿಯಾಗಿದೆ. ಲಂಚ, ಸ್ವಜನ ಪಕ್ಷಪಾತ ಇಲ್ಲದೆ ಜನರಿಗೆ ಯೋಜನೆಯ ಲಾಭ ನೀಡಲಾಗುತ್ತಿದೆ. ಮೋದಿ ನಿಮ್ಮ ಕುಟುಂಬದ ಸದಸ್ಯ. ನಿಮಗೆ ಯಾವುದೇ ಅಡೆತಡೆ ಇಲ್ಲ” ಎಂದು ಹೇಳಿದರು.

ಇದನ್ನೂ ಓದಿ: PM Narendra Modi: 2 ಕೋಟಿ ಚಂದಾದಾರರನ್ನು ದಾಟಿದ ಮೋದಿ ಯುಟ್ಯೂಬ್ ಚಾನೆಲ್!

“ಕಳೆದ 10 ವರ್ಷದಲ್ಲಿ ದೇಶಾದ್ಯಂತ 10 ಕೋಟಿ ಮಹಿಳೆಯರು ಸ್ವಸಹಾಯ ಸಂಘಗಳನ್ನು ಸೇರ್ಪಡೆಗೊಂಡಿದ್ದಾರೆ. ಬ್ಯಾಂಕ್‌ ಮೂಲಕ ಸುಮಾರು 7.5 ಲಕ್ಷ ಕೋಟಿ ರೂ. ವರ್ಗಾಯಿಸಲಾಗಿದೆ. ದೇಶಧ ಎರಡು ಕೋಟಿ ಮಹಿಳೆಯರನ್ನು ಲಕ್ಷಾಧೀಶೆಯರನ್ನಾಗಿ ರೂಪಿಸುವ ಗುರಿಯೊಂದಿಗೆ ಇದೆಲ್ಲ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ದಾಸ್ತಾನಿಗೆ ಹೆಚ್ಚಿನ ಮೂಲ ಸೌಕರ್ಯ ಒದಗಿಸುವುದು ಸರ್ಕಾರ ಉದ್ದೇಶ” ಎಂದು ಮಾಹಿತಿ ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

CBSE 12th Results 2024: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ, 87.98% ಪಾಸ್‌

CBSE 12th Results 2024: ಮಂಡಳಿಯು ಎರಡೂ ತರಗತಿಗಳ ಫಲಿತಾಂಶಗಳನ್ನು ಏಕಕಾಲದಲ್ಲಿ ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ CBSE ತರಗತಿ 12 ಫಲಿತಾಂಶ 2024 ಅನ್ನು cbse.gov.in ನಲ್ಲಿ ಅಧಿಕೃತ CBSE ವೆಬ್‌ಸೈಟ್ ಮೂಲಕ ಪ್ರವೇಶಿಸಬಹುದು. ಹೆಚ್ಚುವರಿಯಾಗಿ, cbse.nic.in, cbseresults.nic.in ಮತ್ತು results.cbse.nic.in ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸಬಹುದು.

VISTARANEWS.COM


on

CBSE 12th results 2024
Koo

ಹೊಸದಿಲ್ಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 12ನೇ ತರಗತಿ ಫಲಿತಾಂಶ (CBSE 12th Results 2024) ಇಂದು ಪ್ರಕಟವಾಗಿದೆ. ಈ ವರ್ಷದ ತೇರ್ಗಡೆ (Pass) ಪ್ರಮಾಣ ಶೇ.87.98ರಷ್ಟಿದೆ. 16,33,730 ಮಂದಿ ನೋಂದಾಯಿಸಿಕೊಂಡಿದ್ದು, ಅದರಲ್ಲಿ 16,21,224 ಮಂದಿ ಪರೀಕ್ಷೆ ಬರೆದು, 14,26,420 ಮಂದಿ ಪಾಸ್‌ ಆಗಿದ್ದಾರೆ. ಬೆಂಗಳೂರಿನಲ್ಲಿ (Bangalore CBSE 12th Results 2024) ಫಲಿತಾಂಶದ ಪ್ರಮಾಣ ಶೇ.96.95ರಷ್ಟಿದೆ.

ಮಂಡಳಿಯು ಎರಡೂ ತರಗತಿಗಳ ಫಲಿತಾಂಶಗಳನ್ನು ಏಕಕಾಲದಲ್ಲಿ ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ CBSE ತರಗತಿ 12 ಫಲಿತಾಂಶ 2024 ಅನ್ನು cbse.gov.in ನಲ್ಲಿ ಅಧಿಕೃತ CBSE ವೆಬ್‌ಸೈಟ್ ಮೂಲಕ ಪ್ರವೇಶಿಸಬಹುದು. ಹೆಚ್ಚುವರಿಯಾಗಿ, cbse.nic.in, cbseresults.nic.in ಮತ್ತು results.cbse.nic.in ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸಬಹುದು. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು digilocker.gov.in ಮತ್ತು results.gov.in ಮೂಲಕ ತ್ವರಿತವಾಗಿ ಪರಿಶೀಲಿಸಬಹುದು. ಆನ್‌ಲೈನ್‌ನಲ್ಲಿ ಫಲಿತಾಂಶಗಳನ್ನು ಪ್ರವೇಶಿಸಲು, ವಿದ್ಯಾರ್ಥಿಗಳಿಗೆ ಅವರ ರೋಲ್ ಸಂಖ್ಯೆ, ಶಾಲಾ ಸಂಖ್ಯೆ ಮತ್ತು ಪ್ರವೇಶ ಕಾರ್ಡ್ ಐಡಿ ಅಗತ್ಯವಿರುತ್ತದೆ.

CBSE 10ನೇ ತರಗತಿ ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳ ಟಾಪರ್‌ಗಳ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಆದರೆ ಮಂಡಳಿಯು ಪ್ರತಿ ತರಗತಿಯಲ್ಲಿನ ಅಭ್ಯರ್ಥಿಗಳ ಸಂಖ್ಯೆ, ಉತ್ತೀರ್ಣ ಶೇಕಡಾವಾರು, ಲಿಂಗವಾರು ಫಲಿತಾಂಶಗಳು ಮತ್ತು ಇತರ ಸಂಬಂಧಿತ ವಿವರಗಳನ್ನು ತನ್ನ ಅಧಿಸೂಚನೆಯಲ್ಲಿ ಬಿಡುಗಡೆ ಮಾಡುತ್ತದೆ.

CBSE ಬೋರ್ಡ್ ಫಲಿತಾಂಶ 2024 ಅನ್ನು ಹೇಗೆ ಪರಿಶೀಲಿಸುವುದು?

ನಿಮ್ಮ CBSE ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸಲು, ಈ ಹಂತಗಳನ್ನು ಅನುಸರಿಸಿ:
ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ: cbse.gov.in ನಲ್ಲಿ ಅಧಿಕೃತ CBSE ವೆಬ್‌ಸೈಟ್‌ಗೆ ಹೋಗಿ ಅಥವಾ ಕೆಳಗಿನ ಯಾವುದೇ ವೆಬ್‌ಸೈಟ್‌ಗಳಿಗೆ ಹೋಗಿ: cbse.nic.in, cbseresults.nic.in, ಅಥವಾ results.cbse.nic.in.
ಪ್ರವೇಶ ಫಲಿತಾಂಶಗಳ ವಿಭಾಗ: ವೆಬ್‌ಸೈಟ್‌ನ ಮುಖಪುಟದಲ್ಲಿ “ಫಲಿತಾಂಶಗಳು” ಅಥವಾ “ಫಲಿತಾಂಶ” ವಿಭಾಗವನ್ನು ನೋಡಿ.
ವರ್ಗ ಮತ್ತು ವರ್ಷವನ್ನು ಆಯ್ಕೆಮಾಡಿ: ನಿಮ್ಮ ತರಗತಿಗೆ ಸೂಕ್ತವಾದ ಆಯ್ಕೆಯನ್ನು ಆರಿಸಿ.
ವಿವರಗಳನ್ನು ನಮೂದಿಸಿ: ನಿಮ್ಮ ರೋಲ್ ಸಂಖ್ಯೆ, ಶಾಲಾ ಸಂಖ್ಯೆ ಮತ್ತು ಪ್ರವೇಶ ಕಾರ್ಡ್ ಐಡಿಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ಈ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
ಫಲಿತಾಂಶಗಳನ್ನು ಸಲ್ಲಿಸಿ ಮತ್ತು ವೀಕ್ಷಿಸಿ: ನಿಮ್ಮ ವಿವರಗಳನ್ನು ನಮೂದಿಸಿದ ನಂತರ, ಫಾರ್ಮ್ ಅನ್ನು ಸಲ್ಲಿಸಿ. ಆಯ್ಕೆಮಾಡಿದ ವರ್ಗ ಮತ್ತು ವರ್ಷಕ್ಕೆ ನಿಮ್ಮ CBSE ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
ಉಳಿಸಿ ಅಥವಾ ಮುದ್ರಿಸಿ: ನಿಮ್ಮ ಫಲಿತಾಂಶಗಳನ್ನು ಪ್ರದರ್ಶಿಸಿದ ನಂತರ, ನೀವು ಡಿಜಿಟಲ್ ನಕಲನ್ನು ಉಳಿಸಬಹುದು ಅಥವಾ ಭವಿಷ್ಯದ ಉಲ್ಲೇಖಕ್ಕಾಗಿ ಅದನ್ನು ಮುದ್ರಿಸಬಹುದು.

CBSE ಬೋರ್ಡ್ ಫಲಿತಾಂಶ 2024 ಅನ್ನು ಪರಿಶೀಲಿಸಲು ನೇರ ಲಿಂಕ್

ಹೆಚ್ಚುವರಿಯಾಗಿ, ವಿದ್ಯಾರ್ಥಿಗಳು ನಿಮ್ಮ ಫಲಿತಾಂಶಗಳನ್ನು ಡಿಜಿಲಾಕರ್ (digilocker.gov.in) ಮತ್ತು results.gov.in ಮೂಲಕ ಅದೇ ರೋಲ್ ಸಂಖ್ಯೆ, ಶಾಲೆಯ ಸಂಖ್ಯೆ ಮತ್ತು ಪ್ರವೇಶ ಕಾರ್ಡ್ ಐಡಿಯನ್ನು ಬಳಸಿಕೊಂಡು ಪರಿಶೀಲಿಸಬಹುದು.

ನಿಮ್ಮ ಫಲಿತಾಂಶಗಳನ್ನು ಸರಾಗವಾಗಿ ಪಡೆಯಲು, ನಿಮ್ಮ ಡಾಕ್ಯುಮೆಂಟ್‌ಗಳನ್ನು ಕೈಯಲ್ಲಿ ಇರಿಸಿಕೊಳ್ಳಲು ಮತ್ತು ಅವುಗಳನ್ನು ಸರಿಯಾಗಿ ನಮೂದಿಸಲು ಮರೆಯದಿರಿ. ನೀವು ಯಾವುದೇ ಸಮಸ್ಯೆ ಎದುರಿಸಿದರೆ ಸಹಾಯಕ್ಕಾಗಿ CBSE ಸಹಾಯವಾಣಿ ಅಥವಾ ನಿಮ್ಮ ಶಾಲಾ ಅಧಿಕಾರಿಗಳನ್ನು ಸಂಪರ್ಕಿಸಬಹುದು.

10ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು CBSEಯಿಂದ ಫೆಬ್ರವರಿ 15ರಿಂದ ಮಾರ್ಚ್ 13, 2024 ರವರೆಗೆ ನಡೆಸಲಾಯಿತು. 12ನೇ ತರಗತಿ ಪರೀಕ್ಷೆಗಳನ್ನು ಫೆಬ್ರವರಿ 15ರಿಂದ ಏಪ್ರಿಲ್ 2, 2024ರವರೆಗೆ ರಾಷ್ಟ್ರವ್ಯಾಪಿ ನಡೆಸಲಾಯಿತು. ಎರಡೂ ತರಗತಿಗಳಿಗೆ ಪರೀಕ್ಷೆಗಳನ್ನು ಒಂದೇ ಪಾಳಿಯಲ್ಲಿ 10:30ರಿಂದ ನಡೆಸಲಾಯಿತು. ಈ ವರ್ಷ, ಸರಿಸುಮಾರು 39 ಲಕ್ಷ ಅಭ್ಯರ್ಥಿಗಳು ಎರಡೂ ತರಗತಿಗಳಿಗೆ CBSE ಬೋರ್ಡ್ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ: Public Exam: ಇನ್ನು ಮುಂದೆ ವರ್ಷಕ್ಕೆರಡು ಬಾರಿ ಬೋರ್ಡ್‌ ಪರೀಕ್ಷೆ ? ಪರಿಶೀಲನೆಗೆ ಸಿಬಿಎಸ್‌ಇಗೆ ಸೂಚನೆ

Continue Reading

ದೇಶ

Lok Sabha election 2024: 4ನೇ ಹಂತದ ಮತದಾನ..ಮೈತ್ರಿಕೂಟದಲ್ಲಿ ಬಿಕ್ಕಟ್ಟು ನೂರು.. ಗೆಲುವಿನ ಲೆಕ್ಕಾಚಾರದಲ್ಲಿ ಎನ್‌ಡಿಎ ಮತ್ತು ಇಂಡಿಯಾ

Lok Sabha election 2024: ಇಂದು ದೇಶಾದ್ಯಂತ ಒಟ್ಟು 96 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಎನ್‌ಡಿಎ ಒಟ್ಟು 97 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಆಂತರಿಕ ಬಿಕ್ಕಟ್ಟು ಎದುರಿಸುತ್ತಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಒಂದೊಂದು ಕ್ಷೇತ್ರಗಳಲ್ಲಿ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ(ಅಠಾವಳೆ) ಪಕ್ಷ ಮಿತ್ರ ಪಕ್ಷ ತೆಲುಗು ದೇಶಂ ಪಾರ್ಟಿ ಮತ್ತು ಬಿಜೆಪಿ ವಿರುದ್ಧ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಮೈತ್ರಿಕೂಟಕ್ಕೆ ಸವಾಲೊಡ್ಡಿದೆ. ಇನ್ನು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಎನ್‌ಡಿಎ ಮೈತ್ರಿಕೂಟ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

VISTARANEWS.COM


on

Lok Sabha Election 2024
Koo

ನವದೆಹಲಿ: ಲೋಕಸಭಾ ಚುನಾವಣೆಯ(Lok Sabha election 2024) ನಾಲ್ಕನೇ ಹಂತದ ಮತದಾನ ಇಂದು ನಡೆಯುತ್ತಿದೆ. ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ(INDIA) ಇದು ಬಹಳ ಸವಾಲಿನ ಹಂತವಾಗಿದ್ದು, ಆಂತರಿಕ ಬಿಕ್ಕಟ್ಟು ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಕಳೆದ ಹಂತಗಳಿಗೆ ಹೋಲಿಸಿದರೆ ಬಿಜೆಪಿ ನೇತೃತ್ವದ (NDA) ಒಕ್ಕೂಟದಲ್ಲಿ ಈ ಬಾರಿ ಸಣ್ಣಪುಟ್ಟ ಬಿಕ್ಕಟ್ಟನ್ನು ಹೊರತುಪಡಿಸಿದರೆ ಬೇರೆ ಏನು ಸಮಸ್ಯೆ ಇಲ್ಲದಂತೆ ಭಾಸವಾಗುತ್ತಿದೆ. ಪಶ್ಚಿಮ ಬಂಗಾಳ(West Bengal)ದ ಎಂಟು ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟ ಬಿಕ್ಕಟ್ಟು ಎದುರಿಸುತ್ತಿದ್ದು, ಕಾಂಗ್ರೆಸ್‌ ಮತ್ತು ಸಿಎಐ(ಎಂ) ಜೊತೆ ಮೈತ್ರಿಯಲ್ಲಿ ಸಾಗಲು ತೃಣಮೂಲ ಕಾಂಗ್ರೆಸ್‌ (TMC) ಹಿಂದೇಟು ಹಾಕಿದೆ.

ಇಂದು ದೇಶಾದ್ಯಂತ ಒಟ್ಟು 96 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಎನ್‌ಡಿಎ ಒಟ್ಟು 97 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಆಂತರಿಕ ಬಿಕ್ಕಟ್ಟು ಎದುರಿಸುತ್ತಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಒಂದೊಂದು ಕ್ಷೇತ್ರಗಳಲ್ಲಿ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ(ಅಠಾವಳೆ) ಪಕ್ಷ ಮಿತ್ರ ಪಕ್ಷ ತೆಲುಗು ದೇಶಂ ಪಾರ್ಟಿ ಮತ್ತು ಬಿಜೆಪಿ ವಿರುದ್ಧ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಮೈತ್ರಿಕೂಟಕ್ಕೆ ಸವಾಲೊಡ್ಡಿದೆ. ಇನ್ನು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಎನ್‌ಡಿಎ ಮೈತ್ರಿಕೂಟ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಇನ್ನು ಈ ಹಂತದಲ್ಲಿ ಮತ್ತೊಂದು ಆಸಕ್ತಿಕರ ವಿಚಾರವೇನೆಂದರೆ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಅತಿ ದೊಡ್ಡ ಪಾಲುದಾರ ಪಕ್ಷವಾಗಿದ್ದು, ಕಳೆದ ಹಂತಗಳಿಗೆ ಹೋಲಿಸಿದರೆ ಈ ಬಾರಿ ಅತ್ಯಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಆಂಧ್ರಪ್ರದೇಶದಲ್ಲಿ ಬಿಜೆಪಿ ಒಟ್ಟು 25ಕ್ಷೇತ್ರಗಳಲ್ಲಿ 17 ಕ್ಷೇತ್ರಗಳನ್ನು ಮಿತ್ರ ಪಕ್ಷ ಟಿಡಿಪಿಗೆ ಬಿಟ್ಟುಕೊಟ್ಟಿದೆ. ಇನ್ನು ಎನ್‌ಡಿಎ ಯ ಇತರೆ ಸದಸ್ಯ ಪಕ್ಷಗಳು ಈ ಹಂತದಲ್ಲಿ ಮೂರು ಅಥವಾ ಅದಕ್ಕಿಂತಲೂ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಇದೇ ರೀತಿಯ ಸೀಟು ಹಂಚಿಕೆಯನ್ನು ಐದನೇ ಮತ್ತು ಏಳನೇ ಹಂತದಲ್ಲಿ ಚುನಾವಣೆ ಎದುರಿಸುತ್ತಿರುವ ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಕಾಣಬಹುದಾಗಿದೆ.

ಕಾಂಗ್ರೆಸ್‌ಗಿರುವ ಸವಾಲುಗಳೇನು?

ಎನ್‌ಡಿಎಗೆ ವಿರುದ್ಧ ನೇರಾನೇರ ಹಣಾಹಣಿಯಲ್ಲಿರುವ ಇಂಡಿಯಾ ಒಕ್ಕೂಟದಲ್ಲೂ ಈ ಹಂತದ ಚುನಾವಣೆಯಲ್ಲಿ ಭಾರೀ ಬಿಕ್ಕಟ್ಟು ಭುಗಿಲೆದ್ದಿರುವುದನ್ನು ಕಾಣಬಹುದಾಗಿದೆ. ಇಂಡಿಯಾ ಒಕ್ಕೂಟ ಈ ಬಾರಿ 95 ಕ್ಷೇತ್ರಗಳಲ್ಲಿ 148 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬರೋಬ್ಬರಿ 48 ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂಧೋರ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ತನ್ನ ನಾಮಪತ್ರ ಹಿಂಪಡೆದಿರುವ ಕಾರಣ ಆ ಕ್ಷೇತ್ರದಲ್ಲಿ ಇಂಡಿಯಾ ಒಕ್ಕೂಟದ ಅಭ್ಯರ್ಥಿ ಕಣದಲ್ಲಿಲ್ಲ. ಈ ಹಂತದ ಚುನಾವಣೆಯಲ್ಲಿ 96 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 61 ಕ್ಷೇತ್ರಗಳಲ್ಲಿ(63.5%) ಸ್ಪರ್ಧಿಸುತ್ತಿದೆ. ಮೊಲದ ಮೂರು ಹಂತಗಳಲ್ಲಿ 54.9%, 79.5%, ಮತ್ತು 73.1% ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸಿತ್ತು.

ಇದನ್ನೂ ಓದಿ:Lok Sabha Election 2024: ಲೋಕಸಭಾ ಪ್ರಚಾರಕ್ಕೆ 26 ಸಾವಿರ ಕಿಲೋ ಮೀಟರ್ ಸಂಚಾರ, ದಿನಕ್ಕೆ ಸರಾಸರಿ 14-18 ಗಂಟೆ ಸಿಎಂ ಪ್ರಚಾರ!

ಪಕ್ಷವು ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಸಣ್ಣ ಪಾಲುದಾರನಾಗಿರುವುದರಿಂದ ಹೆಚ್ಚಿನ ಪ್ರಮಾಣದ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿಲ್ಲ; ಪ್ರಸ್ತುತ ಹಂತದಲ್ಲಿ ಚುನಾವಣೆ ನಡೆಯಲಿರುವ ಈ ರಾಜ್ಯಗಳ 41 ಸ್ಥಾನಗಳಲ್ಲಿ ಕೇವಲ 10 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇನ್ನು ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಒಕ್ಕೂಟದ ವಿರುದ್ಧವೇ ಎಲ್ಲಾ ಎಂಟು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

Continue Reading

Lok Sabha Election 2024

PM Nanrendra Modi: ನಾಳೆ ವಾರಾಣಸಿಯಲ್ಲಿ ಮೋದಿ 3ನೇ ಬಾರಿ ನಾಮಪತ್ರ ಸಲ್ಲಿಕೆ, ಇಂದು ವೈಭವದ ರೋಡ್‌ ಶೋ

PM Nanrendra Modi: ನಾಳೆ ನಾಳೆ ಬೆಳಿಗ್ಗೆ 11:40ಕ್ಕೆ ಪ್ರಧಾನಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಕಾಶಿಯ ಕಾಲ ಭೈರವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಯ ಮುಹೂರ್ತವು ಹಿಂದೂ ಪಂಚಾಂಗದ ಪ್ರಕಾರ ʼಅಭಿಜಿತ್ ಮಹೂರ್ತ’ವಾಗಿದ್ದು, ʼಆನಂದ ಯೋಗ’ದ ಅಡಿಯಲ್ಲಿ ಬರುತ್ತಿದ್ದು ಅತ್ಯಂತ ಮಂಗಳಕರ ಅವಧಿ ಎನ್ನಲಾಗಿದೆ.

VISTARANEWS.COM


on

pm narendra Modi Varanasi road show
Koo

ವಾರಾಣಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Nanrendra Modi) ನಾಳೆ ಬೆಳಿಗ್ಗೆ ವಾರಾಣಸಿಯಲ್ಲಿ (Varanasi) ಲೋಕಸಭೆ ಚುನಾವಣೆ (Lok Sabha Election 2024) ಬಿಜೆಪಿ (BJP) ಸ್ಪರ್ಧಿಯಾಗಿ ನಾಮಪತ್ರ (nomination) ಸಲ್ಲಿಸಲಿದ್ದಾರೆ. ಇದಕ್ಕೆ ಒಂದು ದಿನ ಮೊದಲು, ಅಂದರೆ ಇಂದು ಸಂಜೆ ಭವ್ಯವಾದ ರೋಡ್‌ ಶೋ ನಡೆಯಲಿದೆ.

ರೋಡ್ ಶೋ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಗೇಟ್‌ನಿಂದ ಸಂಜೆ 4 ಗಂಟೆಗೆ ಪ್ರಾರಂಭವಾಗಲಿದ್ದು, ಅಲ್ಲಿ ಮೋದಿ ಅವರು ಬಿಎಚ್‌ಯು ಸಂಸ್ಥಾಪಕ ಮಹಾಮಾನ ಪಂ. ಮದನ್ ಮೋಹನ್ ಮಾಳವೀಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಕಾಶಿ ವಿಶ್ವನಾಥ ಧಾಮದ ಗೇಟ್ ಸಂಖ್ಯೆ 4ರಲ್ಲಿ ರೋಡ್‌ ಶೋ ಮುಕ್ತಾಯಗೊಳ್ಳಲಿದೆ. ಮೋದಿ ರೋಡ್ ಶೋನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಧಾನಿ ಜೊತೆಗೆ ಸಾಥ್ ನೀಡಲಿದ್ದಾರೆ. ವಾರಣಾಸಿ ಲೋಕಸಭಾ ಕ್ಷೇತ್ರದ ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಕಾಶಿ ನಿವಾಸಿಗಳು, ಕ್ರೀಡಾಪಟುಗಳು, ಕಲಾವಿದರು ಮತ್ತು ಸ್ಥಳೀಯರಲ್ಲದೆ ಇತರ ಪ್ರಮುಖರು ಭಾಗವಹಿಸಲಿದ್ದಾರೆ.

ಮರಾಠಿ, ಗುಜರಾತಿ, ಬೆಂಗಾಲಿ, ಮಾಹೇಶ್ವರಿ, ಮಾರ್ವಾಡಿ, ತಮಿಳು ಮತ್ತು ಪಂಜಾಬಿ ಸಮುದಾಯಗಳ ಗುಂಪುಗಳು ಪ್ರಧಾನಿ ಮೋದಿಯನ್ನು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸಲಿವೆ. ಐದು ಕಿಲೋಮೀಟರ್ ಉದ್ದದ ರೋಡ್ ಶೋ ಮಿನಿ ಇಂಡಿಯಾ ಮತ್ತು ಉತ್ತರ ಪ್ರದೇಶದ ಸಂಸ್ಕೃತಿಗಳ ಒಂದು ನೋಟವನ್ನು ನೀಡಲಿದೆ.

ಭಾರತ ರತ್ನ, ಶಹನಾಯ್‌ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಕುಟುಂಬ ಸದಸ್ಯರು ಮದನಪುರ ಬಳಿ ಶೆಹನಾಯಿ ಬಾರಿಸುವ ಮೂಲಕ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ರೋಡ್ ಶೋನಲ್ಲಿ 5,000ಕ್ಕೂ ಹೆಚ್ಚು ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ಭಾಗಿಯಾಗಲಿದ್ದು, 100 ಕಡೆ ಪುಷ್ಪವೃಷ್ಟಿ ಮಾಡಲಾಗುವುದು. ಇದರೊಂದಿಗೆ ವಿವಿಧ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಾರಣಾಸಿಯ ಕಲಾವಿದರು ಮೋದಿಯನ್ನು ಸ್ವಾಗತಿಸಲು ಜಾನಪದ ನೃತ್ಯ ಮತ್ತು ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಮುಸ್ಲಿಂ ಸಮುದಾಯದವರೂ ಸ್ವಾಗತಕ್ಕೆ ಮುಂದೆ ಬಂದಿದ್ದು, ಮದನಪುರದಲ್ಲಿಯೇ ಮಾಜಿ ಸಂಸದ ರಾಜೇಶ್ ಮಿಶ್ರಾ ನೇತೃತ್ವದಲ್ಲಿ ಮುಸ್ಲಿಮರು ಪುಷ್ಪಾರ್ಚನೆ ಮಾಡಲಿದ್ದಾರೆ. ಪ್ರಧಾನಿ ತಮ್ಮ ತಾಯಿಯ ಪಾದಗಳನ್ನು ಸ್ಪರ್ಶಿಸುವ ಚಿತ್ರವೂ ರೋಡ್ ಶೋನಲ್ಲಿ ಇರುತ್ತದೆ. ಕಾರ್ಯಕ್ರಮ ಮುಕ್ತಾಯವಾದ ಬಳಿಕ ಮೋದಿ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ನಾಳೆ ನಾಳೆ ಬೆಳಿಗ್ಗೆ 11:40ಕ್ಕೆ ಪ್ರಧಾನಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಕಾಶಿಯ ಕಾಲ ಭೈರವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಯ ಮುಹೂರ್ತವು ಹಿಂದೂ ಪಂಚಾಂಗದ ಪ್ರಕಾರ ʼಅಭಿಜಿತ್ ಮಹೂರ್ತ’ವಾಗಿದ್ದು, ʼಆನಂದ ಯೋಗ’ದ ಅಡಿಯಲ್ಲಿ ಬರುತ್ತಿದ್ದು ಅತ್ಯಂತ ಮಂಗಳಕರ ಅವಧಿ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂಡಿಯಾ ಒಕ್ಕೂಟ ಅಭ್ಯರ್ಥಿಯಾಗಿ ಅಜಯ್ ರೈ ಕಣದಲ್ಲಿದ್ದಾರೆ. ಅಜಯ್ ರೈ ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದು, ಕಳೆದ ಎರಡು ಬಾರಿಯೂ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಪ್ರಧಾನಿ ಮೋದಿಯವರ ಗೆಲುವಿನ ಅಂತರವನ್ನು 7 ಲಕ್ಷಕ್ಕೂ ಮೀರಿ ಹೆಚ್ಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ. 2019ರಲ್ಲಿ 64% ಮತ ಹಂಚಿಕೆಯೊಂದಿಗೆ ಮೋದಿಯವರು 4.8 ಲಕ್ಷ ಅಂತದಲ್ಲಿ ಗೆಲುವು ಸಾಧಿಸಿದ್ದರು. 2014ರಲ್ಲಿ ಅವರು 3.7 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.

ಇದನ್ನೂ ಓದಿ: Lok Sabha Election: 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ಮತದಾನ ಆರಂಭ; ʻಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿʼ ಎಂದ ಮೋದಿ

Continue Reading

ಪ್ರವಾಸ

Kochi Tour: ವಾರಾಂತ್ಯದ ಪ್ರವಾಸಕ್ಕೆ ಕೊಚ್ಚಿ ಸೂಕ್ತ ತಾಣ; ಏನೇನಿವೆ ಆಕರ್ಷಣೆ?

ವಾರಾಂತ್ಯದ ವಿಹಾರಕ್ಕೆ ಕೊಚ್ಚಿಯಲ್ಲಿ (Kochi Tour) ಯಾವುದೇ ಕೊರತೆ ಇಲ್ಲ. ಮುನ್ನಾರ್‌ನ ಮಂಜಿನ ಬೆಟ್ಟಗಳಿಂದ ಹಿಡಿದು ಅಲೆಪ್ಪಿ ಮತ್ತು ಚೆರೈ ಬೀಚ್‌ನ ಶಾಂತ ಹಿನ್ನೀರು ಮತ್ತು ಮರಳಿನ ತೀರಗಳವರೆಗೆ ಅನೇಕ ರೋಮಾಂಚಕಾರಿ ಸ್ಥಳಗಳು ಇಲ್ಲಿದೆ. ಈ ಪ್ರವಾಸಿ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

By

Kochi Tour
Koo

ಸಮುದ್ರ ತೀರಗಳಿಂದ ಸುತ್ತುವರಿದಿರುವ ಕೇರಳದ (kerala) ಹೃದಯ ಭಾಗವಾದ ಕೊಚ್ಚಿಯು ಅತ್ಯಂತ ಆಕರ್ಷಕ ಪ್ರವಾಸಿ (Kochi Tour) ತಾಣಗಳಿಂದ ದೂರದ ಊರಿನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಹೆಸರುವಾಸಿಯಾಗಿರುವ ಕೊಚ್ಚಿ ಗೇಟ್ ವೇ ಆಗಿರುವ ಹಿನ್ನೀರು (backwaters) ಪ್ರದೇಶಗಳಿಂದ, ಗಿರಿಧಾಮಗಳಿಂದ (hill stations) ನೈಸರ್ಗಿಕ ಸೌಂದರ್ಯವನ್ನು ಮಡಿಲಲ್ಲಿ ತುಂಬಿಕೊಂಡು ನಿಂತಂತಿದೆ.

ಕಣ್ಣಿಗೆ ಸೌಂದರ್ಯ, ಮನಸ್ಸಿಗೆ ಶಾಂತಿ ನೀಡುವ ಪ್ರಶಾಂತವಾದ ಮರಳಿನ ಬಿಳಿ ಕಡಲತೀರಗಳು ಮನೆಯಿಂದ ದೂರವಿದ್ದು, ಕೊಂಚ ರಿಲ್ಯಾಕ್ಸ್ ಮಾಡಿಕೊಳ್ಳಬೇಕು ಎನ್ನುವವರಿಗೆ ಸೂಕ್ತ ತಾಣ ಕೊಚ್ಚಿ. ಇಲ್ಲಿನ ಸುತ್ತಮುತ್ತ ಕೆಲವು ಅತ್ಯುತ್ತಮ ಪ್ರವಾಸಿ ತಾಣಗಳಿವೆ. ವಾರಾಂತ್ಯದ ರಜೆಯನ್ನು ಇಲ್ಲಿ ಕಳೆಯಬಹುದು.


ಮುನ್ನಾರ್ (Munnar)

ಚಹಾ ತೋಟಗಳು, ಮಂಜಿನ ಕಣಿವೆಗಳು ಮತ್ತು ಶಾಂತ ವಾತಾವರಣಕ್ಕೆ ಹೆಸರುವಾಸಿಯಾದ ಮುನ್ನಾರ್ ಸುಂದರವಾದ ಗಿರಿಧಾಮವಾಗಿದ್ದು, ಕೊಚ್ಚಿಯ ಸಮೀಪದಲ್ಲಿದೆ. ಮುನ್ನಾರ್‌ಗೆ ಹೋಗುವ ದಾರಿಯಲ್ಲಿ ದಟ್ಟ ಕಾಡುಗಳು ಮತ್ತು ಹಸಿರು ಪರ್ವತಗಳ ರುದ್ರರಮಣೀಯ ದೃಶ್ಯಗಳನ್ನು ನೀಡುತ್ತದೆ. ಮುನ್ನಾರ್ ತಲುಪಿದ ಅನಂತರ ಟ್ರೆಕ್ಕಿಂಗ್, ಪಕ್ಷಿ ವೀಕ್ಷಣೆಗೆ ಹೋಗಬಹುದು ಅಥವಾ ಶಾಂತಿಯುತ ಪರಿಸರದಲ್ಲಿ ವಿಶ್ರಾಂತಿ ಪಡೆಯಬಹುದು. ಇಲ್ಲಿನ ಟೀ ಮ್ಯೂಸಿಯಂಗೆ ಭೇಟಿ ನೀಡಿದರೆ ಚಹಾ ತಯಾರಿಕೆಯಲ್ಲಿ ಒಳಗೊಂಡಿರುವ ಸಾಂಸ್ಕೃತಿಕ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಬಹುದು.


ಅಲೆಪ್ಪಿ (Alleppey)

‘ಪೂರ್ವದ ವೆನಿಸ್ ಎಂದು ಕರೆಯಲ್ಪಡುವ ಅಲೆಪ್ಪಿ ಹಿನ್ನೀರು, ಪ್ರಶಾಂತವಾದ ಹೌಸ್‌ಬೋಟ್ ವಿಹಾರ ಮತ್ತು ಎಲ್ಲಿ ನೋಡಿದರೂ ಹಸಿರಿನಿಂದ ತುಂಬಿದ ಭತ್ತದ ಗದ್ದೆಗಳ ವ್ಯಾಪಕ ಜಾಲದಿಂದ ಆವರಿಸಲ್ಪಟ್ಟಿದೆ. ಈ ನಿಶ್ಯಬ್ದ ತಾಣವು ಕೊಚ್ಚಿನ್‌ನಿಂದ ಸ್ವಲ್ಪ ದೂರದಲ್ಲಿದೆ. ಪ್ರವಾಸಿಗರು ಹಿನ್ನೀರಿನಲ್ಲಿ ಹೌಸ್‌ಬೋಟ್ ಸವಾರಿಗಳನ್ನು ನಡೆಸಬಹುದು. ಇಲ್ಲಿ ತಂಗುವ ಸಮಯದಲ್ಲಿ ಸುತ್ತಲಿನ ಸುಂದರವಾದ ಭೂದೃಶ್ಯಗಳನ್ನು ವೀಕ್ಷಿಸಬಹುದು. ರಾತ್ರಿಯಲ್ಲಿ ಆಕಾಶದಲ್ಲಿ ನಕ್ಷತ್ರಗಳನ್ನು ನೋಡುತ್ತಾ ದೋಣಿ ವಿಹಾರ ನಡೆಸುವುದು ಅಲೆಪಿಯ ಮ್ಯಾಜಿಕ್ ಅನುಭವವನ್ನು ಕೊಡುತ್ತದೆ.


ಫೋರ್ಟ್ ಕೊಚ್ಚಿ (Fort Kochi)

ವಾರಾಂತ್ಯದ ವಿಹಾರಕ್ಕೆ ಫೋರ್ಟ್ ಕೊಚ್ಚಿಯು ಒಂದು ಸುಂದರ ತಾಣ. ಹಳೆಯ ವಸಾಹತುಶಾಹಿ ಕಟ್ಟಡಗಳಿಂದ ಕೂಡಿದ್ದು, ಕಿರಿದಾದ ಕಲ್ಲುಮಣ್ಣುಗಳಿಂದ ತುಂಬಿದ ಬೀದಿಗಳಲ್ಲಿ ನಡೆದುಕೊಂಡು ಹೋಗುವಾಗ ಈ ಸ್ಥಳದ ಹಿಂದಿನ ವೈಭವದ ದಿನಗಳ ಬಗ್ಗೆ ಚಿತ್ರ ಬರೆದಂತ ಭಾಸವಾಗುವುದು. ಇಲ್ಲಿ ಚೈನೀಸ್ ಫಿಶಿಂಗ್ ನೆಟ್ಸ್, ಸೇಂಟ್ ಫ್ರಾನ್ಸಿಸ್ ಚರ್ಚ್ ಮತ್ತು ಮತ್ತಂಚೇರಿ ಅರಮನೆಗೆ ಭೇಟಿ ನೀಡಿ ರಜಾ ದಿನವನ್ನು ಕಳೆಯಬಹುದು. ಈ ನಗರದ ಪರಂಪರೆಯ ಬಗ್ಗೆ ತಿಳಿದುಕೊಳ್ಳಲು ಕಥಕ್ಕಳಿ ಪ್ರದರ್ಶನವನ್ನು ಮಿಸ್ ಮಾಡದೇ ನೋಡಿ. ಕೇರಳದ ಶಾಸ್ತ್ರೀಯ ನೃತ್ಯ ಪ್ರಕಾರವು ಅದರ ರೋಮಾಂಚಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಬಹಿರಂಗಪಡಿಸುತ್ತದೆ.


ವಾಗಮೋನ್ (Vagamon)

ಕೇರಳದ ಪಶ್ಚಿಮ ಘಟ್ಟಗಳ ಮಡಿಕೆಗಳೊಳಗೆ ಅಡಗಿರುವ ವಾಗಮೋನ್ ಶಾಂತವಾದ, ಸಣ್ಣ ಗಿರಿಧಾಮವಾಗಿದೆ. ಪ್ರವಾಸಿಗರಿಗೆ ರೋಲಿಂಗ್ ಬೆಟ್ಟಗಳು, ಹಸಿರು ಹುಲ್ಲುಗಾವಲುಗಳು ಮತ್ತು ಪೈನ್ ಮರಗಳ ತೋಪುಗಳು ಜಲಪಾತಗಳ ನಡುವೆ ವಿಶ್ರಾಂತಿ ಪಡೆಯಲು ಅತ್ಯುತ್ತಮ ಅವಕಾಶವನ್ನು ನೀಡುತ್ತದೆ. ನಿಸರ್ಗವನ್ನು ಪ್ರೀತಿಸುವವರಿಗೆ ಮತ್ತು ಪೈನ್ ಫಾರೆಸ್ಟ್ ಅಥವಾ ಕುರಿಸುಮಲ ಆಶ್ರಮದಂತಹ ಹಲವಾರು ಗುಪ್ತ ರತ್ನಗಳಿಂದ ಕೂಡಿದ ವಿಸ್ಮಯಕಾರಿಯಾಗಿ ಸುಂದರವಾದ ಭೂದೃಶ್ಯದ ಮೂಲಕ ಟ್ರೆಕ್ಕಿಂಗ್‌ನಂತಹ ಸಾಹಸ ಚಟುವಟಿಕೆಗಳನ್ನು ಇಲ್ಲಿ ನಡೆಸಬಹುದು. ಪ್ಯಾರಾಗ್ಲೈಡಿಂಗ್ ಮತ್ತು ರಾತ್ರಿಯ ಕ್ಯಾಂಪಿಂಗ್ ಗೆ ಸೂಕ್ತ ತಾಣ ಗಳು ಇಲ್ಲಿದೆ.

ಇದನ್ನೂ ಓದಿ: Dwarka Tour: ದ್ವಾರಕೆಗೆ ಹೋದಾಗ ಏನೇನು ನೋಡಬಹುದು?


ಚೆರೈ ಬೀಚ್ (Cherai Beach)

ಕೊಚ್ಚಿ ಬಳಿ ಪರಿಪೂರ್ಣ ವಿಶ್ರಾಂತಿ ಅನುಭವಕ್ಕಾಗಿ, ಬೀಚ್ ವಿಹಾರಕ್ಕಾಗಿ ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಚೆರೈ ಬೀಚ್‌ಗೆ ಭೇಟಿ ನೀಡಬಹುದು. ಇದು ಕರಾವಳಿಯ ಉದ್ದಕ್ಕೂ ತೂಗಾಡುತ್ತಿರುವ ತೆಂಗಿನ ಮರಗಳು, ಪ್ರಾಚೀನ ಮರಳು, ಚಿನ್ನದ ಬಣ್ಣದಲ್ಲಿ ಕಂಗೊಳಿಸುವ ಸೂರ್ಯ ಮತ್ತು ನೀಲಿ ಅರೇಬಿಯನ್ ಸಮುದ್ರದಿಂದ ಸುತ್ತುವರೆದಿದೆ. ಸೂರ್ಯನನ್ನು ನೋಡುತ್ತಾ ತೀರದಲ್ಲಿ ಸುತ್ತಾಡಲು ಪರಿಪೂರ್ಣ ವಾತಾವರಣವನ್ನು ಸೃಷ್ಟಿಸುತ್ತದೆ. ಇಲ್ಲಿ ತಾಜಾ ಸಮುದ್ರಾಹಾರ ಸತ್ಕಾರವನ್ನು ಪಡೆಯಬಹುದು

Continue Reading
Advertisement
CBSE 12th results 2024
ಪ್ರಮುಖ ಸುದ್ದಿ2 mins ago

CBSE 12th Results 2024: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ, 87.98% ಪಾಸ್‌

ವಿದೇಶ11 mins ago

Gold Heist Case: ಬಹುಕೋಟಿ ಚಿನ್ನ, ವಿದೇಶಿ ಕರೆನ್ಸಿ ದರೋಡೆ; ಭಾರತೀಯ ಮೂಲದ ವ್ಯಕ್ತಿ ಲಾಕ್‌!

Murder Case in hubballi
ಹುಬ್ಬಳ್ಳಿ17 mins ago

Murder case : ಸರ್ಕಾರಿ ಶಾಲೆಯಲ್ಲಿ ಹರಿದ ನೆತ್ತರು; ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

Kareena Kapoor Saif Ali Khan share a kiss in front of paparazzi
ಬಾಲಿವುಡ್17 mins ago

Kareena Kapoor: ರೊಮ್ಯಾಂಟಿಕ್‌ ಮೂಡ್‌ನಲ್ಲಿ ಸೈಫ್-ಕರೀನಾ: ಫೋಟೊಗ್ರಾಫರ್‌ಗಳ ಮುಂದೆಯೇ ಕಿಸ್ಸಿಂಗ್‌!

shivamogga road accident hit and run
ಕ್ರೈಂ38 mins ago

Hit and Run: ಆಟೋಗೆ ಗುದ್ದಿ ವಿದ್ಯಾರ್ಥಿನಿಯನ್ನು ಕೊಂದು ಪರಾರಿಯಾದ ಕ್ಯಾಂಟರ್ ಚಾಲಕ

Karnataka Rain
ಮಳೆ46 mins ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

Lok Sabha Election 2024
ದೇಶ1 hour ago

Lok Sabha election 2024: 4ನೇ ಹಂತದ ಮತದಾನ..ಮೈತ್ರಿಕೂಟದಲ್ಲಿ ಬಿಕ್ಕಟ್ಟು ನೂರು.. ಗೆಲುವಿನ ಲೆಕ್ಕಾಚಾರದಲ್ಲಿ ಎನ್‌ಡಿಎ ಮತ್ತು ಇಂಡಿಯಾ

Lok Sabha Elections 2024 Jr NTR, Allu Arjun, Chiranjeevi cast votes
ಟಾಲಿವುಡ್1 hour ago

Lok Sabha Elections 2024: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಟಾಲಿವುಡ್ ಸ್ಟಾರ್ಸ್‌​!

shivamogga triple murder case
ಕ್ರೈಂ2 hours ago

Murder Case: ಮೂರು ಮಂದಿಯನ್ನು ಕೊಂದು ಅಬ್ಬರಿಸಿದ ರೌಡಿ ಶೀಟರ್‌ ಕಾಲಿಗೆ ಗುಂಡೇಟು, ಬಂಧನ

Turbo Trailer Out mammoottys raj b shetty looks menacing
ಮಾಲಿವುಡ್2 hours ago

Turbo Trailer Out: ಮಮ್ಮುಟ್ಟಿ ನಟನೆಯ ‘ಟರ್ಬೋ’ ಟ್ರೈಲರ್‌ ಔಟ್‌: ರಾಜ್‌ ಬಿ ಶೆಟ್ಟಿ ಖದರ್‌ಗೆ ಫ್ಯಾನ್ಸ್‌ ಫಿದಾ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ46 mins ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ5 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ7 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ18 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ18 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ18 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ22 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ23 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ1 day ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು2 days ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

ಟ್ರೆಂಡಿಂಗ್‌