Rahul Gandhi: 'ಮೋದಿ ಉಪನಾಮ' ಒಂದೇ ಅಲ್ಲ, ಗೌರಿ ಲಂಕೇಶ್‌ ಕೇಸ್‌ ಸೇರಿ ರಾಹುಲ್‌ ವಿರುದ್ಧ ದಾಖಲಾದ ಪ್ರಕರಣ ಯಾವವು? - Vistara News

ದೇಶ

Rahul Gandhi: ‘ಮೋದಿ ಉಪನಾಮ’ ಒಂದೇ ಅಲ್ಲ, ಗೌರಿ ಲಂಕೇಶ್‌ ಕೇಸ್‌ ಸೇರಿ ರಾಹುಲ್‌ ವಿರುದ್ಧ ದಾಖಲಾದ ಪ್ರಕರಣ ಯಾವವು?

Rahul Gandhi: ಮೋದಿ ಉಪನಾಮ ಪ್ರಕರಣ ಒಂದೇ ಅಲ್ಲ, ರಾಹುಲ್‌ ಗಾಂಧಿ ವಿರುದ್ಧ ಹಲವು ಮಾನನಷ್ಟ ಮೊಕದ್ದಮೆಗಳು ದಾಖಲಾಗಿವೆ. ಬಹುತೇಕ ಕೇಸ್‌ಗಳಲ್ಲಿ ಅವರಿಗೆ ಜಾಮೀನು ಸಿಕ್ಕಿದೆ.

VISTARANEWS.COM


on

Here are some cases that Rahul Gandhi is still embroiled in or is out on bail
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಮೋದಿ ಉಪನಾಮ ಇರುವವರೆಲ್ಲರರೂ ಕಳ್ಳರೇ ಎಂಬ ಹೇಳಿಕೆ ನೀಡಿ, ಬಳಿಕ ದಾಖಲಾದ ಮಾನಹಾನಿ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್‌ ಗಾಂಧಿ (Rahul Gandhi) ಅವರು ಲೋಕಸಭೆಯಿಂದಲೂ ಅನರ್ಹಗೊಂಡಿದ್ದಾರೆ. ರಾಹುಲ್‌ ಗಾಂಧಿ ಅನರ್ಹತೆ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 8 (3)ರ ಮಾನ್ಯತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಲಾಗಿದೆ. ಅಷ್ಟರಮಟ್ಟಿಗೆ ರಾಹುಲ್‌ ಗಾಂಧಿ ವಿರುದ್ಧ ದಾಖಲಾದ ಮಾನಹಾನಿ ಕೇಸ್‌ ಪ್ರಭಾವ ಬೀರಿದೆ. ಹಾಗೆ ನೋಡಿದರೆ, ಕಾಂಗ್ರೆಸ್‌ ನಾಯಕನ ವಿರುದ್ಧ ಮಾನಹಾನಿ ಪ್ರಕರಣ ಒಂದೇ ಅಲ್ಲ, ಅವರ ವಿರುದ್ಧ ಇನ್ನೂ ಹಲವು ಕೇಸ್‌ಗಳು ದಾಖಲಾಗಿವೆ.

ಇವುಗಳಲ್ಲಿಯೇ ಕೆಲವೊಂದು ಕೇಸ್‌ನಲ್ಲಿ ಅವರು ಜಾಮೀನು ಪಡೆದಿದ್ದಾರೆ. ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ನೀಡಿದ ಹೇಳಿಕೆ ವಿರುದ್ಧ ದಾಖಲಾಗಿರುವುದು ಸೇರಿ ರಾಹುಲ್‌ ಗಾಂಧಿ ವಿರುದ್ಧ ಹಲವು ಕೇಸ್‌ಗಳು ದಾಖಲಾಗಿವೆ. ಹಾಗಾದರೆ, ಕಾಂಗ್ರೆಸ್‌ ನಾಯಕನ ವಿರುದ್ಧ ದಾಖಲಾಗಿರುವ ಕೇಸ್‌ಗಳು ಯಾವವು? ಯಾವ ಪ್ರಕರಣಗಳಲ್ಲಿ ಅವರು ಜಾಮೀನು ಪಡೆದಿದ್ದಾರೆ? ಪ್ರಕರಣಗಳ ಪ್ರಸ್ತುತ ಸ್ಥಿತಿಗತಿ ಹೇಗಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ನ್ಯಾಷನಲ್‌ ಹೆರಾಲ್ಡ್‌

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ 2015ರಲ್ಲಿ ಜಾಮೀನು ಸಿಕ್ಕಿದೆ.

ಗೌರಿ ಲಂಕೇಶ್‌ ಹತ್ಯೆ ಪ್ರಕರಣ

ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್‌ ಅವರನ್ನು 2017ರಲ್ಲಿ ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ನೀಡಿದ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. “ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಸಿದ್ಧಾಂತಗಳೇ ಗೌರಿ ಲಂಕೇಶ್‌ ಅವರನ್ನು ಹತ್ಯೆಗೈದಿವೆ” ಎಂಬುದಾಗಿ ರಾಹುಲ್‌ ಹೇಳಿದ್ದರು. ರಾಹುಲ್‌ ವಿರುದ್ಧ ಆರ್‌ಎಸ್‌ಎಸ್‌ ಮುಖಂಡರೊಬ್ಬರು ಮಾನಹಾನಿ ಕೇಸ್‌ ದಾಖಲಿಸಿದ್ದು, ಮುಂಬೈ ಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ.

ಗಾಂಧೀಜಿ ಹತ್ಯೆ ಕುರಿತು ಹೇಳಿಕೆ

ರಾಹುಲ್‌ ಗಾಂಧಿ ಅವರು ಆರ್‌ಎಸ್‌ಎಸ್‌ ಕುರಿತು ಮತ್ತೊಂದು ಹೇಳಿಕೆ ನೀಡಿದ ಕಾರಣ ಮಹಾರಾಷ್ಟ್ರದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರು ಅವರು ರಾಹುಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. “ಮಹಾತ್ಮ ಗಾಂಧೀಜಿ ಅವರನ್ನು ಕೊಂದಿದ್ದು ಆರ್‌ಎಸ್‌ಎಸ್‌” ಕಾಂಗ್ರೆಸ್‌ ನಾಯಕ ಹೇಳಿದ್ದರು. ಈ ಪ್ರಕರಣದಲ್ಲಿ ಮಹಾರಾಷ್ಟ್ರದ ಭಿವಂಡಿ ಕೋರ್ಟ್‌ ಕಾಂಗ್ರೆಸ್‌ ನಾಯಕನಿಗೆ ಜಾಮೀನು ನೀಡಿದೆ.

‘ರೇಪ್‌ ಇನ್‌ ಇಂಡಿಯಾ’ ಕೇಸ್‌

ಜಾರ್ಖಂಡ್‌ನಲ್ಲಿ 2019ರಲ್ಲಿ ಭಾಷಣ ಮಾಡುವಾಗ ರಾಹುಲ್‌ ಗಾಂಧಿ ನೀಡಿದ ‘ರೇಪ್‌ ಇನ್‌ ಇಂಡಿಯಾ’ ಹೇಳಿಕೆಯನ್ನು ಖಂಡಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಕರಣ ದಾಖಲಿಸಿದ್ದಾರೆ. ಭೋಪಾಲ್‌ ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುತ್ತಿದೆ.

ರಫೇಲ್‌ ಡೀಲ್‌ ಕೇಸ್‌ನಲ್ಲಿ ಕ್ಷಮೆಯಾಚನೆ

ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ತಪ್ಪಾಗಿ ಉಲ್ಲೇಖಿಸಿದ್ದ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿಯ ಮೀನಾಕ್ಷಿ ಲೇಖಿ ದೂರು ಸಲ್ಲಿಸಿದ್ದರು. ಅದರಂತೆ ರಾಹುಲ್‌ ಗಾಂಧಿ ಸುಪ್ರೀಂ ಕೋರ್ಟ್‌ ಕ್ಷಮೆಯಾಚಿಸಿದ್ದರು. ಇವಿಷ್ಟೇ ಅಲ್ಲ, ಆರ್‌ಎಸ್‌ಎಸ್‌ ವಿರುದ್ಧ ನೀಡಿದ ಹೇಳಿಕೆಗಳಿಗಾಗಿ ರಾಹುಲ್‌ ಗಾಂಧಿ ವಿರುದ್ಧ ಇನ್ನೂ ಹಲವು ಮಾನನಷ್ಟ ಮೊಕದ್ದಮೆಗಳು ದಾಖಲಾಗಿವೆ. ಅವುಗಳ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: Rahul Gandhi Disqualified: ರಾಹುಲ್‌ ಗಾಂಧಿ ಅನರ್ಹತೆ ಬೆನ್ನಲ್ಲೇ ಜನಪ್ರತಿನಿಧಿ ಕಾಯ್ದೆ ಮಾನ್ಯತೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

VVPAT Verification: ಇವಿಯಂ-ವಿವಿಪ್ಯಾಟ್‌ ತಾಳೆ ಪ್ರಕರಣ; ಇಂದು ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

VVPAT Verification: ವಿದ್ಯುನ್ಮಾನ ಮತಯಂತ್ರಗಳಲ್ಲಿ ಚಲಾವಣೆಯಾಗುವ ಪ್ರತಿಯೊಂದು ಮತಗಳನ್ನೂ ವಿವಿಪ್ಯಾಟ್‌ನಲ್ಲಿ ದಾಖಲಾಗುವ ಮುದ್ರಿತ ಪ್ರತಿಯೊಂದಿಗೆ ತಾಳೆ ಹಾಕಬೇಕು ಎಂದು ಕೋರಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ ಇಂದು ತನ್ನ ತೀರ್ಪು ಪ್ರಕಟಿಸಲಿದೆ. ಮತ ಎಣಿಕೆ ವೇಳೆ ಪ್ರತಿ ಕ್ಷೇತ್ರದ ಆಯ್ದ ಬೂತ್‌ಗಳಲ್ಲಿ ಮಾತ್ರವೇ ಚಲಾವಣೆಯಾದ ಮತ ಮತ್ತು ವಿವಿಪ್ಯಾಟ್‌ನಲ್ಲಿ ದಾಖಲಾದ ಮುದ್ರಿತ ಪ್ರತಿಗಳೊಂದಿಗೆ ತಾಳೆ ಹಾಕಲಾಗುತ್ತದೆ. ಆದರೆ ಎಲ್ಲ ಮತಗಳನ್ನೂ ತಾಳೆ ಹಾಕಬೇಕು ಎಂದು ಅರ್ಜಿದಾರರು ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು.

VISTARANEWS.COM


on

VVPAT Verification
Koo

ನವದಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿ (EVM) ಚಲಾವಣೆಯಾಗುವ ಪ್ರತಿಯೊಂದು ಮತಗಳನ್ನೂ ವಿವಿಪ್ಯಾಟ್‌ನಲ್ಲಿ ದಾಖಲಾಗುವ ಮುದ್ರಿತ ಪ್ರತಿಯೊಂದಿಗೆ ತಾಳೆ ಹಾಕಬೇಕು (VVPAT Verification) ಎಂದು ಕೋರಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ (Supreme Court) ಇಂದು (ಏಪ್ರಿಲ್‌ 24) ತನ್ನ ತೀರ್ಪು ಪ್ರಕಟಿಸಲಿದೆ.

ಮತದಾರ ಇವಿಎಂನಲ್ಲಿ ಮತ ಚಲಾಯಿಸಿದ ಕೂಡಲೇ ಆತ ಯಾವ ಪಕ್ಷಕ್ಕೆ ಮತ ಹಾಕಿದ್ದಾನೆ ಎನ್ನುವ ವಿವರ ಆ ಪಕ್ಷದ ಅಭ್ಯರ್ಥಿಯ ಚಿಹ್ನೆಯೊಂದಿಗೆ ವಿವಿಪ್ಯಾಟ್‌ ಯಂತ್ರದಲ್ಲಿ ಕಾಣಿಸಿಕೊಂಡು ಬಳಿಕ ಮುದ್ರಿತ ರೂಪದಲ್ಲಿ ಒಳ ಸೇರಿಕೊಳ್ಳುತ್ತದೆ. ಆದರೆ ಮತ ಎಣಿಕೆ ವೇಳೆ ಪ್ರತಿ ಕ್ಷೇತ್ರದ ಆಯ್ದ ಬೂತ್‌ಗಳಲ್ಲಿ ಮಾತ್ರವೇ ಚಲಾವಣೆಯಾದ ಮತ ಮತ್ತು ವಿವಿಪ್ಯಾಟ್‌ನಲ್ಲಿ ದಾಖಲಾದ ಮುದ್ರಿತ ಪ್ರತಿಗಳೊಂದಿಗೆ ತಾಳೆ ಹಾಕಲಾಗುತ್ತದೆ. ಆದರೆ ಎಲ್ಲ ಮತಗಳನ್ನೂ ತಾಳೆ ಹಾಕಬೇಕು ಎಂದು ಅರ್ಜಿದಾರರು ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ನ್ಯಾಯಪೀಠವು ಎರಡು ದಿನಗಳ ವಿಚಾರಣೆಯ ನಂತರ ಏಪ್ರಿಲ್ 18ರಂದು ಅರ್ಜಿಗಳ ಮೇಲಿನ ತೀರ್ಪನ್ನು ಕಾಯ್ದಿರಿಸಿತ್ತು. ವಿಚಾರಣೆ ಚುನಾವಣಾ ಆಯೋಗದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಮಣಿಂದರ್ ಸಿಂಗ್, ʼʼಇವಿಎಂಗಳು ಸ್ವತಂತ್ರ ಯಂತ್ರಗಳಾಗಿವೆ ಮತ್ತು ಅವುಗಳನ್ನು ತಿರುಚಲು ಸಾಧ್ಯವಿಲ್ಲ. ಆದರೆ ಮಾನವ ದೋಷದ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲʼʼ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯವನ್ನು ಕಾಪಾಡಬೇಕು ಎಂದು ಒತ್ತಿ ಹೇಳಿದ ನ್ಯಾಯಮೂರ್ತಿ ದತ್ತಾ, “ನೀವು ನ್ಯಾಯಾಲಯದ ಒಳಗೆ ಮತ್ತು ನ್ಯಾಯಾಲಯದ ಹೊರಗೆ ಆತಂಕಗಳನ್ನು ನಿವಾರಿಸಬೇಕು. ನಿರೀಕ್ಷಿಸಿದ ಕೆಲಸವನ್ನು ಮಾಡಲಾಗುತ್ತಿಲ್ಲ ಎಂಬ ಆತಂಕ ಯಾರಿಗೂ ಇರಬಾರದು” ಎಂದು ಹೇಳಿದ್ದರು. ಜತೆಗೆ “ಎಲ್ಲವನ್ನೂ ಅನುಮಾನಿಸಲು ಸಾಧ್ಯವಿಲ್ಲ. ಚುನಾವಣಾ ಆಯೋಗ ಏನಾದರೂ ಒಳ್ಳೆಯದನ್ನು ಮಾಡಿದ್ದರೆ ನೀವು ಅದನ್ನು ಪ್ರಶಂಸಿಸಬೇಕು. ನೀವು ಎಲ್ಲವನ್ನೂ ಟೀಕಿಸಬೇಕಾಗಿಲ್ಲ” ಎಂದು ನ್ಯಾಯಪೀಠವು ಅರ್ಜಿದಾರರಿಗೆ ತಿಳಿಸಿತ್ತು.

ವಿವಿಪ್ಯಾಟ್ ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಮತ್ತು ಮತದಾರ ತಾವು ಬೆಂಬಲಿಸುವ ಅಭ್ಯರ್ಥಿಗೆ ಮತ ಚಲಾವಣೆ ಆಗಿದೆಯೇ ಎನ್ನುವುದನ್ನು ಖಾತರಿಪಡಿಸಲು ಅನುವು ಮಾಡಿಕೊಡುತ್ತದೆ. ವಿವಿಪ್ಯಾಟ್ ಮುದ್ರಿತ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಲಾಗುತ್ತದೆ ಮತ್ತು ವಿವಾದವಿದ್ದರೆ ಅದನ್ನು ತೆರೆಯಬಹುದಾಗಿದೆ. ಪ್ರಸ್ತುತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಇವಿಎಂಗಳ ವಿವಿಪ್ಯಾಟ್ ಸ್ಲಿಪ್‌ಗಳನ್ನು ಪರಿಶೀಲಿಸಲಾಗುತ್ತದೆ.

ಇದನ್ನೂ ಓದಿ: VVPAT Verification: ಇವಿಎಂ-ವಿವಿಪ್ಯಾಟ್‌ ತಾಳೆಯ ಪ್ರಕ್ರಿಯೆ ತಿಳಿಸಿ; ಆಯೋಗಕ್ಕೆ ಸುಪ್ರೀಂ ಸೂಚನೆ

ಅರ್ಜಿದಾರರ ಆತಂಕವೇನು?

ಇವಿಎಂ ಮತದಾನದ ವ್ಯವಸ್ಥೆಯ ಬಗ್ಗೆ ಪ್ರತಿಪಕ್ಷಗಳ ಪ್ರಶ್ನೆಗಳು ಮತ್ತು ಆತಂಕಗಳ ನಡುವೆ, ಕೋರ್ಟ್‌ಗೆ ಸಲ್ಲಿಸಿದ ಅರ್ಜಿಗಳು ಪ್ರತಿ ಮತದ ಪರಿಶೀಲನೆ ನಡೆಸಬೇಕು ಎಂದು ಮನವಿ ಸಲ್ಲಿಸಿವೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ಕಾರ್ಯಕರ್ತ ಅರುಣ್ ಕುಮಾರ್ ಅಗರ್ವಾಲ್ ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅಗರ್ವಾಲ್ ಅವರು ಎಲ್ಲಾ ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಕೆ ಮಾಡಲು ಕೋರಿದ್ದಾರೆ. ಹೀಗಾಗಿ ಇಂದಿನ ತೀರ್ಪು ಕುತೂಹಲ ಮೂಡಿಸಿದೆ.

Continue Reading

ವೈರಲ್ ನ್ಯೂಸ್

Board Exam Result: 93.5% ಫಲಿತಾಂಶ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ! ಐಸಿಯುಗೆ ದಾಖಲು

Board Exam Result: ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಸಂತೋಷದಿಂದ ಜಿಗಿಯುವುದು ಸ್ವಾಭಾವಿಕ. ವಿಶೇಷವಾಗಿ, 90%ಕ್ಕಿಂತ ಹೆಚ್ಚಿರುವಾಗ ಇನ್ನಷ್ಟು ಸಂತಸವಾಗುತ್ತದೆ. ಆದರೆ ಮೀರತ್‌ನ 10ನೇ ತರಗತಿಯ ವಿದ್ಯಾರ್ಥಿ ತನ್ನ ಫಲಿತಾಂಶಗಳನ್ನು ನೋಡಿದ ನಂತರ ಮೂರ್ಛೆ ಹೋದ.

VISTARANEWS.COM


on

board exam tension viral news
Koo

ಲಖನೌ: ತನ್ನ ಯುಪಿ ಬೋರ್ಡ್ (UP Board Exam, Public Exam) 10ನೇ ತರಗತಿಯ ಪರೀಕ್ಷೆಯಲ್ಲಿ 93.5% ಅಂಕಗಳನ್ನು ಪಡೆದ ಪಾಸಾದ ವಿದ್ಯಾರ್ಥಿಯೊಬ್ಬ (Student), ಫಲಿತಾಂಶ ನೋಡಿದ ಕ್ಷಣವೇ ನಂಬಲಾಗದೆ ಮೂರ್ಛೆ ಹೋಗಿದ್ದಾನೆ. ನಂತರ ಈತನನ್ನು ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಯಿತು.

ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಸಂತೋಷದಿಂದ ಜಿಗಿಯುವುದು ಸ್ವಾಭಾವಿಕ. ವಿಶೇಷವಾಗಿ, 90%ಕ್ಕಿಂತ ಹೆಚ್ಚಿರುವಾಗ ಇನ್ನಷ್ಟು ಸಂತಸವಾಗುತ್ತದೆ. ಆದರೆ ಮೀರತ್‌ನ 10ನೇ ತರಗತಿಯ ವಿದ್ಯಾರ್ಥಿ ತನ್ನ ಫಲಿತಾಂಶಗಳನ್ನು ನೋಡಿದ ನಂತರ ಮೂರ್ಛೆ ಹೋದ. ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ ವಿದ್ಯಾರ್ಥಿಗಳು ಅನುಭವಿಸುವ ಒತ್ತಡವನ್ನು ಇದು ಎತ್ತಿ ತೋರಿಸಿದೆ.

ತನ್ನ ಯುಪಿ ಬೋರ್ಡ್ 10ನೇ ತರಗತಿಯ ಪರೀಕ್ಷೆಯಲ್ಲಿ 93.5% ಪಡೆದ ನಂತರ, ಐಸಿಯುಗೆ ದಾಖಲಾದ ವಿದ್ಯಾರ್ಥಿ ನಂತರ ಚೇತರಿಸಿಕೊಂಡಿದ್ದಾನೆ. ಮೀರತ್‌ನ ಮೋದಿಪುರಂನಲ್ಲಿರುವ ಮಹರ್ಷಿ ದಯಾನಂದ ಇಂಟರ್ ಕಾಲೇಜಿನ 16 ವರ್ಷದ ಅನ್ಶುಲ್ ಕುಮಾರ್ ತನ್ನ ಪರೀಕ್ಷೆಗಳಲ್ಲಿ 93.5% ಅಂಕಗಳನ್ನು ಗಳಿಸಿದ್ದಾನೆ. ಆದರೆ ಸಂತೋಷದ ಕ್ಷಣವೇ ಆತನ ಕುಟುಂಬಕ್ಕೆ ದುಃಖದಾಯಕವಾಯಿತು. ಆತನ ಸ್ಥಿತಿ ಸುಧಾರಿಸದ ಕಾರಣ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ಕುಮಾರ್ ಬೇಗನೆ ಪ್ರಜ್ಞೆಯನ್ನು ಪಡೆದ.

ಉತ್ತರ ಪ್ರದೇಶದಲ್ಲಿ 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಏಪ್ರಿಲ್ 20, 2024ರಂದು ಬಿಡುಗಡೆ ಮಾಡಲಾಯಿತು. 10 ನೇ ತರಗತಿಯಲ್ಲಿ 89.55% ಮತ್ತು 12 ನೇ ತರಗತಿಯಲ್ಲಿ 82.60% ಮಂದಿ ಉತ್ತೀರ್ಣರಾಗಿದ್ದಾರೆ. ಶುಭಂ ವರ್ಮಾ ಮತ್ತು ಪ್ರಾಚಿ ನಿಗಮ್ ಯುಪಿಎಂಎಸ್‌ಪಿ 10 ಮತ್ತು 12 ನೇ ತರಗತಿಯಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು.

ಇದನ್ನೂ ಓದಿ: Drought Relief: ಒಂದು ವಾರದಲ್ಲಿ ಕರ್ನಾಟಕಕ್ಕೆ ಬರ ಪರಿಹಾರ; ಸುಪ್ರೀಂಗೆ ಕೇಂದ್ರ ಮಹತ್ವದ ಮಾಹಿತಿ

Continue Reading

ಅಂಕಣ

ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

ರಾಜಮಾರ್ಗ ಅಂಕಣ: ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದು ನಿಂತು ಆತ ಇಡೀ ಜಗತ್ತಿನ ಕಣ್ಮಣಿಯಾಗಿ ಮೂಡಿ ಬಂದಿದ್ದಾನೆ. ವಿಶ್ವನಾಥನ್ ಆನಂದ್ ನಂತರ ಆ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯನಾಗಿ ಆತ ಇತಿಹಾಸಕ್ಕೆ ಸೇರಿ ಹೋಗಿದ್ದಾನೆ. ಆ ಹುಡುಗನ ಹೆಸರು ಡಿ.ಗುಕೇಶ್.

VISTARANEWS.COM


on

gukesh dommaraju rajamarga column
Koo

17ರ ಹರೆಯದ ಈ ಹುಡುಗನ ಸಾಧನೆಗೆ ವಿಶ್ವವೇ ತಲೆದೂಗುತ್ತಿದೆ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಚೆನ್ನೈ ಮೂಲದ ಗುಕೇಶ್ (Gukesh Dommaraju) ವಿಶ್ವ ಚಾಂಪಿಯನ್ (World Champion) ಆಗಲು ಇನ್ನೊಂದೇ ಮೆಟ್ಟಿಲು ಬಾಕಿ ಇದೆ! ಈತನ ವಯಸ್ಸು ಇನ್ನೂ 17 ವರ್ಷ. ಮೌನದ ಮೂಲಕ ಜಗತ್ತನ್ನು ಗೆಲ್ಲಲು ಹೊರಟ ಆತನ ತೀಕ್ಷ್ಣ ಕಣ್ಣುಗಳು ಈಗಲೇ ವಿಶ್ವ ವಿಜಯಿಯಾಗುವ ಕನಸಿನಿಂದ ತುಂಬಿವೆ. ಹಿಂದೊಮ್ಮೆ ವಿಶ್ವ ಚಾಂಪಿಯನ್ ಚೆಸ್ ಆಟಗಾರ (Chess) ಮ್ಯಾಗ್ನಸ್ ಕಾರ್ಲಸನ್ (Magnus Carlson) ಅವರನ್ನು ಇದೇ ಹುಡುಗ ಸೋಲಿಸಿದಾಗ ಇಡೀ ಜಗತ್ತು ನಿಬ್ಬೆರಗಾಗಿ ಆತನನ್ನು ಗಮನಿಸಿತ್ತು.

ಈಗ ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದು ನಿಂತಾಗ ಆತ ಇಡೀ ಜಗತ್ತಿನ ಕಣ್ಮಣಿಯಾಗಿ ಮೂಡಿ ಬಂದಿದ್ದಾನೆ. ವಿಶ್ವನಾಥನ್ ಆನಂದ್ ನಂತರ ಆ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯನಾಗಿ ಆತ ಇತಿಹಾಸಕ್ಕೆ ಸೇರಿ ಹೋಗಿದ್ದಾನೆ.

ಆ ಹುಡುಗನ ಹೆಸರು ಡಿ.ಗುಕೇಶ್

ಆತ ಚೆನ್ನೈಯ ಪ್ರತಿಭೆ. ವಿಶ್ವನಾಥನ್ ಆನಂದ್ ಐದು ಬಾರಿ ವಿಶ್ವ ಚಾಂಪಿಯನ್ ಆದ ನಂತರ ನಿವೃತ್ತಿ ಪಡೆದು ಚೆನ್ನೈಯಲ್ಲಿ ವಿಶ್ವನಾಥನ್ ಆನಂದ ಚೆಸ್ ಆಕಾಡೆಮಿ (WACA)ಯನ್ನು ಸ್ಥಾಪನೆ ಮಾಡಿದ್ದರು. ಅದರಿಂದ ಸ್ಫೂರ್ತಿ ಪಡೆದು ಚೆನ್ನೈಯಲ್ಲಿ ಈಗ 60ಕ್ಕಿಂತ ಅಧಿಕ ಚೆಸ್ ಅಕಾಡೆಮಿಗಳು ಇವೆ. ಅದರ ಪರಿಣಾಮವಾಗಿ ಇದೀಗ ಚೆನ್ನೈ ನಗರವು ಭಾರತದ ಚೆಸ್ ರಾಜಧಾನಿ ಆಗಿ ಬೆಳೆದಿದೆ. ಅತೀ ಸಣ್ಣ ವಯಸ್ಸಿನಲ್ಲಿ ಗ್ರಾನ್ ಮಾಸ್ಟರ್ ಆದ ಆರ್ ಪ್ರಜ್ಞಾನಂದ, ಆರ್ ವೈಶಾಲಿ, ಸುಬ್ಬರಾಮನ್ ವಿಜಯಲಕ್ಷ್ಮಿ ಇವರೆಲ್ಲರೂ ಚೆನ್ನೈಯವರು. ಈ ಪಟ್ಟಿಗೆ ಈಗ ಹೊಳೆಯುವ ಪ್ರತಿಭೆ ಸೇರ್ಪಡೆ ಆಗಿದೆ. ಆತ ಡಿ ಗುಕೇಶ್. ಭಾರತದ ಒಟ್ಟು ಚೆಸ್ ಗ್ರಾನ್ ಮಾಸ್ಟರಗಳಲ್ಲಿ 35% ಆಟಗಾರರು ಚೆನ್ನೈಗೆ ಸೇರಿದವರು ಅನ್ನುವಾಗ ಆ ನಗರದ ಬಗ್ಗೆ ಹೆಮ್ಮೆ ಮೂಡುತ್ತದೆ.

ಬಾಲ್ಯದಿಂದಲೇ ಚೆಸ್ ಆಟಕ್ಕೆ ಸಮರ್ಪಣೆ ಆಗಿ ಬೆಳೆದ ಹುಡುಗ ಆತ .ಅದಕ್ಕಾಗಿ ತನ್ನ ಬಾಲ್ಯದ ಆಟ, ಶಾಲೆ, ತುಂಟಾಟ ಎಲ್ಲವನ್ನೂ ಬದಿಗೆ ಇಟ್ಟು ಹೋರಾಟಕ್ಕೆ ಇಳಿದವನು.

ಮಗನಿಗಾಗಿ ಅಪ್ಪ, ಅಮ್ಮ ಮಾಡಿದ ತ್ಯಾಗ

ಅವನ ತಂದೆ ಡಾ.ರಜಿನಿಕಾಂತ್ ನಗರದ ಪ್ರಸಿದ್ಧ ENT ಸರ್ಜನ್. ತಾಯಿ ಡಾ. ಪದ್ಮಕುಮಾರಿ ಕೂಡ ಮೈಕ್ರೋಬಯೊಲಜಿ ತಜ್ಞರು. ಇಬ್ಬರೂ ತಮ್ಮ ಮಗನಿಗಾಗಿ ತಮ್ಮ ಪ್ರಾಕ್ಟೀಸ್ ಮರೆತು ಜಗತ್ತಿನಾದ್ಯಂತ ಓಡಾಡಿದ್ದಾರೆ. ತರಬೇತಿಗಾಗಿ ತುಂಬಾ ದುಡ್ಡು ಖರ್ಚು ಮಾಡಿದ್ದಾರೆ. ತುಂಬಾ ಸಮಯ ಕೊಟ್ಟಿದ್ದಾರೆ. ಮಗನ ಚೆಸ್ ಭವಿಷ್ಯಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದರಾಗಿ ನಿಂತಿದ್ದಾರೆ.

ಹುಡುಗನೂ ನಾಲ್ಕನೇ ತರಗತಿಯಿಂದ ಶಾಲೆಗೇ ಹೋಗದೇ ಚೆಸ್ ಆಟದಲ್ಲಿ ಮೈ ಮರೆತಿದ್ದಾನೆ. ಶಾಲಾ ಶಿಕ್ಷಣಕ್ಕೆ ಸಮಯ ದೊರೆಯದ ಬಗ್ಗೆ ಹೆತ್ತವರಿಗೆ ಬೇಸರ ಇದೆ. ಆದರೆ ಆತನು 12ನೆಯ ವಯಸ್ಸಿಗೇ ಚೆಸ್ ಗ್ರಾನ್ ಮಾಸ್ಟರ್ ಹುದ್ದೆಗೆ ಏರಿದಾಗ ಅವರು ಆನಂದ ಭಾಷ್ಪ ಸುರಿಸಿದ್ದಾರೆ. ಮುಂದೆ ಚೆಸ್ ವಿಶ್ವ ಚಾಂಪಿಯನ್ ಮ್ಯಾಗ್ನೆಸ್ ಕಾರ್ಲಸನ್ ಅವರನ್ನು ಆತನು ಸೋಲಿಸಿದಾಗ ತುಂಬಾ ಖುಷಿ ಪಟ್ಟಿದ್ದಾರೆ. ಮ್ಯಾಗ್ನೆಸನನ್ನು ಸೋಲಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಗುಕೇಶ್ ಅನ್ನುವುದು ಸದ್ಯಕ್ಕೆ ಅಳಿಸಲಾಗದ ದಾಖಲೆ!

ಸಾಂಪ್ರದಾಯಕ ಚೆಸ್ ಕಲಿಕೆ, ಅಹಂಕಾರದಿಂದ ದೂರ!

ಸಾಮಾನ್ಯವಾಗಿ ಇತ್ತೀಚಿನ ಚೆಸ್ ಕಲಿಯುವ ಮಕ್ಕಳು ಕಂಪ್ಯೂಟರ್ ಜೊತೆ ಕೂತು ಚೆಸ್ ಆಡುತ್ತಾರೆ. ಆದರೆ ಗುಕೇಶ್ ಚೆಸ್ ಕಲಿತದ್ದು ಸಾಂಪ್ರದಾಯಿಕ ವಿಧಾನದಲ್ಲಿ. ಗುರುಗಳು ಹೇಳಿದ್ದನ್ನು ನೂರಕ್ಕೆ ನೂರರಷ್ಟು ಪಾಲಿಸುವ ಅವನ ಶ್ರದ್ಧೆ, ಏಕಾಗ್ರತೆ, ಬದ್ಧತೆ ಅವನನ್ನು ಪ್ರತೀ ಹೆಜ್ಜೆಯಲ್ಲಿಯೂ ಗೆಲ್ಲಿಸುತ್ತಿವೆ. ಯಾರಾದರೂ ಸನ್ಮಾನಕ್ಕೆ, ಸಂವಾದಕ್ಕೆ ಕರೆದರೆ ಆತನು ನಯವಾಗಿ ನೋ ಅನ್ನುವುದನ್ನು ಕಲಿತಿದ್ದಾನೆ. ಪ್ರಚಾರದಿಂದ ಆತ ಗಾವುದ ದೂರ ಓಡುತ್ತಾನೆ. ತಾನಾಯಿತು, ತನ್ನ ಅಭ್ಯಾಸವಾಯಿತು ಎಂದು ಚೆಸ್ ಆಟದಲ್ಲಿ ಮುಳುಗಿ ಬಿಡುವ ನಾಚಿಕೆಯ ಹುಡುಗ ಗುಕೇಶ್.

ಪ್ರಶಸ್ತಿ ಗೆದ್ದಾಗ ನಿನಗೆ ಹೇಗನ್ನಿಸಿತು ಹುಡುಗ? ಎಂದು ಕೇಳಿದಾಗ “ನನ್ನ ಗೆಲುವಿಗಿಂತ ದೇಶವನ್ನು ರೆಪ್ರೆಸೆಂಟ್ ಮಾಡುವ ಅವಕಾಶ ದೊರೆತದ್ದು ನನಗೆ ಹೆಚ್ಚು ಖುಷಿ ಕೊಟ್ಟಿದೆ” ಅನ್ನುತ್ತಾನೆ.

ನಿನ್ನ ಭವಿಷ್ಯದ ಗುರಿ ಏನು ಎಂದು ಯಾರೋ ಕೇಳಿದಾಗ “ನನಗೆ ವಿಶಿ ಸರ್ (ವಿಶ್ವನಾಥನ್ ಆನಂದ್) ಅವರು ಏನು ಹೇಳುತ್ತಾರೆಯೋ ಆ ಪ್ರಕಾರ ಮಾಡುತ್ತೇನೆ. ನನಗೆ ಏನು ಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತಿದೆ” ಅನ್ನುತ್ತಾನೆ.

ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ತನಗೆ ಈಗ ಒಳ್ಳೆಯ ಶಿಷ್ಯ ದೊರೆತ ಖುಷಿಯಲ್ಲಿ ಇದ್ದಾರೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

Continue Reading

ದೇಶ

ವಿಸ್ತಾರ ಸಂಪಾದಕೀಯ: ರಕ್ಷಣಾ ರಫ್ತು ಕ್ಷೇತ್ರದಲ್ಲಿ ಬೆಳವಣಿಗೆ ನಮ್ಮ ಹೆಗ್ಗಳಿಕೆ

ರಫ್ತು ಮಾತ್ರವಲ್ಲ, ರಕ್ಷಣಾ ಸಾಮಗ್ರಿಗಳಲ್ಲಿ ಆತ್ಮನಿರ್ಭರತೆ ಕೂಡ ನಮ್ಮಿಂದ ಸಾಧ್ಯವಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ತುಮಕೂರಿನ ಗುಬ್ಬಿಯಲ್ಲಿ ಪ್ರಧಾನಿ ಉದ್ಘಾಟಿಸಿರುವ ಹಿಂದೂಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್ಎಎಲ್) ನೂತನ ಹೆಲಿಕಾಪ್ಟರ್ ಉತ್ಪಾದನಾ ಘಟಕ. ಇದು ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

VISTARANEWS.COM


on

vistara Editorial ವಿಸ್ತಾರ ಸಂಪಾದಕೀಯ
Koo

ಫಿಲಿಪ್ಪೀನ್ಸ್‌ಗೆ (Philippines) ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳ (BrahMos missiles) ಭೂ ಆವೃತ್ತಿಯ ನಾಲ್ಕನೇ ʼಬ್ಯಾಟರಿ’ಯನ್ನು ಭಾರತ ಕಳುಹಿಸುತ್ತಿದೆ. ಬ್ರಹ್ಮೋಸ್ ಕ್ಷಿಪಣಿಗಳ ಮೂರು ‘ಬ್ಯಾಟರಿ’ಗಳನ್ನು ಈಗಾಗಲೇ ದ್ವೀಪ ರಾಷ್ಟ್ರಕ್ಕೆ ಹಸ್ತಾಂತರಿಸಲಾಗಿದೆ. ಪ್ರತಿ ಬ್ಯಾಟರಿಯೂ ನಾಲ್ಕು ಲಾಂಚರ್‌ಗಳನ್ನು ಒಳಗೊಂಡಿರುತ್ತದೆ. ಪ್ರತಿ ಲಾಂಚರ್‌ನಲ್ಲೂ 290 ಕಿಮೀ ವ್ಯಾಪ್ತಿಯ ಮೂರು ಕ್ಷಿಪಣಿಗಳಿರುತ್ತವೆ. ಈ ಕ್ಷಿಪಣಿ ಸೂಪರ್‌ಸಾನಿಕ್ ವೇಗವನ್ನು ಹೊಂದಿರುತ್ತದೆ. ಇದನ್ನು ಭೂಮಿ ಅಥವಾ ಹಡಗು ಆಧಾರಿತ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ (BMDs) ವ್ಯವಸ್ಥೆಗಳಿಂದಲೂ ಎದುರಿಸುವುದು ತುಂಬಾ ಕಷ್ಟ. 2022ರಲ್ಲಿ ಭಾರತ- ಫಿಲಿಪ್ಪೀನ್ಸ್‌ ಸಹಿ ಮಾಡಿದ USD 375 ಮಿಲಿಯನ್ ಒಪ್ಪಂದದ ಭಾಗವಿದು. ಸದ್ಯ ಭಾರತದ ಬ್ರಹ್ಮೋಸ್ ದಾಖಲೆ ಮಾರಾಟ ಕಂಡಿದೆ. ಮುಂದಿನ ದಿನಗಳಲ್ಲಿ ಭಾರತವು ಈ ಸೂಪರ್‌ಸಾನಿಕ್ ಕ್ಷಿಪಣಿಗಳ ಹೆಚ್ಚಿನ ಆರ್ಡರ್‌ಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

ಬ್ರಹ್ಮೋಸ್‌ನ ಫಿಲಿಪ್ಪೀನ್ಸ್ ಒಪ್ಪಂದದ ಮೂಲಕ, 2023-2024ರಲ್ಲಿ ಭಾರತದ ರಕ್ಷಣಾ ರಫ್ತು ₹21083 ಕೋಟಿಗಳನ್ನು ಮುಟ್ಟಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ.32.5ರಷ್ಟು ರಫ್ತು ಬೃಹತ್ ಬೆಳವಣಿಗೆಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಕಾರ, 2026ರ ವೇಳೆಗೆ ರಕ್ಷಣಾ ರಫ್ತನ್ನು 40 ಸಾವಿರ ಕೋಟಿ ರೂ. ದಾಟಿಸುವ ಗುರಿ ಹೊಂದಲಾಗಿದೆ. ಅನೇಕ ಕಾರಣಗಳಿಂದಾಗಿ ಇದೊಂದು ಮೈಲುಗಲ್ಲು. ಬಾಹ್ಯಾಕಾಶ ಸಂಶೋಧನೆ ಹಾಗೂ ರಕ್ಷಣಾ ರಫ್ತುಗಳು ಭಾರತದ ಜಿಡಿಪಿ ಬೆಳವಣಿಗೆ, ವಿದೇಶಾಂಗ ನೀತಿಯ ವರ್ಧನೆ ಇತ್ಯಾದಿಗಳಲ್ಲಿ ಗರಿಷ್ಠತೆ ಸಾಧಿಸಲು ಕಾರಣವಾಗುತ್ತಿರುವ ಬೆಳವಣಿಗೆಗಳು. ಈ ಹಿಂದೆ ಪ್ರತಿಯೊಂದು ಶಸ್ತ್ರಕ್ಕೂ ಭಾರತ ವಿದೇಶಗಳನ್ನು ಅವಲಂಬಿಸಿತ್ತು. ಆದರೆ ಈಗ ರಕ್ಷಣಾ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ದಿನೇದಿನೆ ಸ್ವಾವಲಂಬನೆ ಸಾಧಿಸುತ್ತಿದೆ. ಶಸ್ತ್ರಾಸ್ತ್ರಗಳಿಂದ ಹಿಡಿದು ಯುದ್ಧ ನೌಕೆಗಳನ್ನೂ ಭಾರತದಲ್ಲೇ ತಯಾರಿಸಲಾಗುತ್ತಿದೆ. ಪಾಕಿಸ್ತಾನ ಹೊರತುಪಡಿಸಿ ಇತರ ಹಲವು ನೆರೆದೇಶಗಳಿಗೆ ಭಾರತ ಯಥೇಚ್ಛವಾಗಿ ಶಸ್ತ್ರಾಸ್ತ್ರ ರಫ್ತು ಮಾಡುತ್ತಿದೆ. ಮಿಲಿಟರಿ ಸಾಧನಗಳಿಗಾಗಿ ಭಾರತ ಪ್ರತಿವರ್ಷ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಈ ನಿಟ್ಟಿನಲ್ಲಿ ಈಗಿನ ಶಸ್ತ್ರಾಸ್ತ್ರ ರಫ್ತು ದಾಖಲೆ ದೇಶದ ಪ್ರಗತಿ ಮತ್ತು ಸ್ವಾವಲಂಬನೆಯ ದೃಷ್ಟಿಯಿಂದ ಮಹತ್ವದ್ದಾಗಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಚೀನಾವನ್ನೂ ಹಿಂದಿಕ್ಕಿದ ಭಾರತದ ಆರ್ಥಿಕತೆಯ ಬೆಳವಣಿಗೆ ಐತಿಹಾಸಿಕ

ಈಗಾಗಲೇ ಭಾರತ ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌ ಕ್ಷಿಪಣಿಗಳನ್ನು, ಮಾರಿಷಸ್‌ಗೆ ಹಗುರ ಯುದ್ಧ ವಿಮಾನಗಳನ್ನು, ವಿಯೆಟ್ನಾಂಗೆ ಅತಿವೇಗದ ರಕ್ಷಣಾ ಬೋಟ್‌ಗಳನ್ನು, ಆರ್ಮೇನಿಯಾಕ್ಕೆ ಆಯುಧಶೋಧಕ ರೇಡಾರ್‌ಗಳನ್ನು, ಇಟಲಿ, ಮಾಲ್ದೀವ್ಸ್‌, ಶ್ರೀಲಂಕಾ, ಮಲೇಷಿಯಾ ಮುಂತಾದ ಹಲವು ದೇಶಗಳಿಗೆ ಪಿನಾಕ ರಾಕೆಟ್‌ ಲಾಂಚರ್‌ಗಳನ್ನು ಹಾಗೂ ಇತರ ಹಲವು ತಂತ್ರಜ್ಞಾನಗಳನ್ನು ರಫ್ತು ಮಾಡುತ್ತಿದೆ. ರಕ್ಷಣಾ ಸಾಮಗ್ರಿಗಳ ರಫ್ತು ಜತಜತೆಗೇ ನೋಡಬೇಕಾದ ಇನ್ನೊಂದು ಸಂಗತಿ ಎಂದರೆ, ಇಸ್ರೋ ಸಂಸ್ಥೆಯು ಉಡಾಯಿಸುತ್ತಿರುವ ಉಪಗ್ರಹಗಳು. ಸ್ಥಳೀಯ ತಂತ್ರಜ್ಞಾನದ ಉಪಗ್ರಹ ವಾಹಕಗಳನ್ನು (ಎಸ್‌ಎಲ್‌ವಿ) ನಾವು ತಯಾರಿಸಿದ್ದು, ಅವುಗಳ ಮೂಲಕ ಅಕ್ಕಪಕ್ಕದ ದೇಶಗಳ ಉಪಗ್ರಹಗಳನ್ನೂ ಕಕ್ಷೆಗೆ ಉಡಾಯಿಸುವ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ. ನಮ್ಮ ದೇಶದ ಇಂಥ ಸಾಧನೆಗೆ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ಎಚ್‌ಎಎಲ್‌, ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮಹತ್ವದ ಕೊಡುಗೆ ನೀಡುತ್ತಿವೆ. ಡಿಆರ್‌ಡಿಒ ಅಭಿವೃದ್ಧಿಪಡಿಸುತ್ತಿರುವ ಡ್ರೋನ್‌ಗಳು ನಮ್ಮ ಗಡಿಯನ್ನು ಕಾಯುತ್ತಿರುವ ಯೋಧರಿಗೆ ಅತ್ಯುತ್ತಮ ಜತೆಗಾರರಾಗಿವೆ.

ರಫ್ತು ಮಾತ್ರವಲ್ಲ, ರಕ್ಷಣಾ ಸಾಮಗ್ರಿಗಳಲ್ಲಿ ಆತ್ಮನಿರ್ಭರತೆ ಕೂಡ ನಮ್ಮಿಂದ ಸಾಧ್ಯವಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ತುಮಕೂರಿನ ಗುಬ್ಬಿಯಲ್ಲಿ ಪ್ರಧಾನಿ ಉದ್ಘಾಟಿಸಿರುವ ಹಿಂದೂಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್ಎಎಲ್) ನೂತನ ಹೆಲಿಕಾಪ್ಟರ್ ಉತ್ಪಾದನಾ ಘಟಕ. ಇದು ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, 3 ಟನ್‌ನಿಂದ 12 ಟನ್ ತೂಕದ ತನಕ ವಿವಿಧ ಶ್ರೇಣಿಗಳ ಹೆಲಿಕಾಪ್ಟರ್‌ಗಳನ್ನು ನಿರ್ಮಿಸುತ್ತದೆ. ಇಲ್ಲಿ ಉತ್ಪಾದನೆಗೊಳ್ಳಲಿರುವ ಹಗುರ ಹೆಲಿಕಾಪ್ಟರ್‌ಗಳು (ಎಲ್‌ಯುಎಚ್) ದೇಶದ ಮಿಲಿಟರಿ ಮತ್ತು ನಾಗರಿಕ ಅಗತ್ಯಗಳನ್ನು ಪೂರೈಸಲಿವೆ. ಇದರಿಂದ ಭಾರತದ ವಾಯುಪಡೆ ಹಾಗೂ ವಾಯುಸಾರಿಗೆ ಇನ್ನಷ್ಟು ಸಮೃದ್ಧವಾಗಲಿವೆ. ಇದು ಒಂದು ಉದಾಹರಣೆ ಮಾತ್ರ. ಇನ್ನೊಂದು ಉದಾಹರಣೆ ಎಂದರೆ ಇತ್ತೀಚೆಗೆ ಪ್ರಯೋಗಾರ್ಥ ಉಡಾಯಿಸಲಾದ ಅಣ್ವಸ್ತ್ರ ಸಿಡಿತಲೆಯನ್ನು 5000 ಕಿಲೋಮೀಟರ್‌ ದೂರ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಅಗ್ನಿ-5 ಖಂಡಾಂತರ ಕ್ಷಿಪಣಿಯ ಅಭಿವೃದ್ಧಿ. ಈ ಕ್ಷಿಪಣಿ ಚೀನಾದ ಉತ್ತರ ತುದಿಯಿಂದ ಹಿಡಿದು ಯುರೋಪಿನ ಬಹುತೇಕ ಭಾಗಗಳಿಗೂ ಗುರಿ ಇಟ್ಟು ದಾಳಿ ಮಾಡುವ ಸಾಮರ್ಥ್ಯ ಹೊಂದಿರುವುದು ಭಾರತದ ರಕ್ಷಣಾ ದೃಷ್ಟಿಯಿಂದ ಮಹತ್ವದ್ದು. ಹಾಗೆಯೇ ಕಳೆದ ತಿಂಗಳು ಪರೀಕ್ಷಿಸಲಾದ ಮಿಷನ್‌ ದಿವ್ಯಾಸ್ತ್ರ. ಇದು ಏಕಕಾಲಕ್ಕೆ ಹಲವು ಸಿಡಿತಲೆಗಳನ್ನು ಉಡಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ತಂತ್ರಜ್ಞಾನ ಕಾಲದಲ್ಲೂ ಐಪಿಎಲ್​ ಅಂಪೈರ್ ಗಳ ಸೋಮಾರಿತನ ಆಕ್ಷೇಪಾರ್ಹ

ಇದೆಲ್ಲದರ ಹಿನ್ನೆಲೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ ಭಾರತ ಅಭಿಯಾನ ಫಲ ಕೊಡಲಾರಂಭಿಸಿದೆ ಎನ್ನಬಹುದು. ಆದರೂ ಭಾರತ ತರಿಸಿಕೊಳ್ಳುತ್ತಿರುವ ಶಸ್ತ್ರಾಸ್ತ್ರಗಳ ಪ್ರಮಾಣ ಸಾಕಷ್ಟಿದೆ. ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತವೂ ಒಂದು. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಹೆಚ್ಚಿದಷ್ಟು ಆಮದು ಕಡಿಮೆಯಾಗಬಹುದು. ರಫ್ತು ಹೆಚ್ಚಾದಷ್ಟು ನಮ್ಮ ಗಣ್ಯತೆ, ಜಿಡಿಪಿ, ವಿದೇಶಾಂಗ ಸಾಮರ್ಥ್ಯವೂ ಅಧಿಕವಾಗುತ್ತದೆ.

Continue Reading
Advertisement
Zero Shadow Day
ವಿಜ್ಞಾನ5 mins ago

Zero Shadow Day: ಇಂದು ಬೆಂಗಳೂರಿನಲ್ಲಿ ನೆರಳೇ ಮೂಡುವುದಿಲ್ಲ; ಅದ್ಯಾಕೆ? ಏನಿದು ʼಶೂನ್ಯ ನೆರಳಿನ ದಿನʼ ?

Karan Johar receives Director of the Year award from Vice President of India
ಬಾಲಿವುಡ್8 mins ago

Karan Johar: ಉಪ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ ಕರಣ್ ಜೋಹರ್

VVPAT Verification
ದೇಶ32 mins ago

VVPAT Verification: ಇವಿಯಂ-ವಿವಿಪ್ಯಾಟ್‌ ತಾಳೆ ಪ್ರಕರಣ; ಇಂದು ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

board exam tension viral news
ವೈರಲ್ ನ್ಯೂಸ್1 hour ago

Board Exam Result: 93.5% ಫಲಿತಾಂಶ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ! ಐಸಿಯುಗೆ ದಾಖಲು

Kannada New Movie Dadasaheb Phalke Film Festival Kenda Movie
ಸ್ಯಾಂಡಲ್ ವುಡ್1 hour ago

Kannada New Movie:ʻದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ಗೆ ಆಯ್ಕೆಯಾದ ಕನ್ನಡದ ʻಕೆಂಡʼ ಸಿನಿಮಾ!

Naga Chaitanya and Sobhita Dhulipala holidaying together
ಟಾಲಿವುಡ್2 hours ago

Naga Chaitanya: ವಕೇಶನ್‌ ಮೂಡ್‌ನಲ್ಲಿ ಸಮಂತಾ ಮಾಜಿ ಪತಿ! ಶೋಭಿತಾ ಜತೆ ಕಾಡಿನಲ್ಲಿ ಸುತ್ತಾಟ?

Rajkumar Birth Anniversary TOP 10 Movies
ಸಿನಿಮಾ2 hours ago

Rajkumar Birth Anniversary: ವರನಟ ಡಾ. ರಾಜ್​ಕುಮಾರ್ ಅವರ ಟಾಪ್‌ 10 ಸಿನಿಮಾಗಳಿವು!

jai sriram slogan koppal crime news
ಕ್ರೈಂ2 hours ago

Jai Sriram Slogan: ಜೈ ಶ್ರೀರಾಮ್‌ ಹೇಳಿದ್ದಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ; ಇನ್ನೊಂದು ಘಟನೆ

ಪ್ರಮುಖ ಸುದ್ದಿ3 hours ago

Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!

bhagavanth khuba poster lok sabha election 2024
ಬೀದರ್‌3 hours ago

Lok Sabha Election 2024: ಪೋಸ್ಟರ್‌ ಮೂಲಕ ಸಚಿವ ಭಗವಂತ ಖೂಬಾ ಅವಹೇಳನ, ದೂರು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌