Independence day 2024: ಆಗಸ್ಟ್ 15ರ ಕುರಿತ 8 ಪ್ರಶ್ನೆಗಳಿಗೆ ಇಲ್ಲಿದೆ ಕುತೂಹಲಕರ ಉತ್ತರ! - Vistara News

ದೇಶ

Independence day 2024: ಆಗಸ್ಟ್ 15ರ ಕುರಿತ 8 ಪ್ರಶ್ನೆಗಳಿಗೆ ಇಲ್ಲಿದೆ ಕುತೂಹಲಕರ ಉತ್ತರ!

ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಗೆ (Independence day 2024) ದೇಶ ಮತ್ತೊಮ್ಮೆ ಸಾಕ್ಷಿಯಾಗುತ್ತಿದೆ. ಈ ವಿಶೇಷ ದಿನದಂದು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ನೀಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಚಾರಗೋಷ್ಠಿಗಳನ್ನು ನಡೆಸಲಾಗುತ್ತದೆ. ಹಲವು ಶಾಲೆ, ಕಾಲೇಜುಗಳಲ್ಲಿ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಗಳನ್ನೂ ನಡೆಸಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೇಳಬಹುದಾದ ಕೆಲವು ಕುತೂಹಲಕರ ಪ್ರಶ್ನೆ, ಉತ್ತರಗಳು ಇಲ್ಲಿವೆ.

VISTARANEWS.COM


on

Independence Day 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

78ನೇ ಸ್ವಾತಂತ್ರ್ಯ ದಿನಾಚರಣೆಯ (Independence day 2024) ಸಂಭ್ರಮ ಪ್ರಾರಂಭವಾಗಲು ಕ್ಷಣಗಣನೆ ಪ್ರಾರಂಭವಾಗಿದೆ. ಪ್ರತಿ ವರ್ಷ ಆಗಸ್ಟ್ 15ರಂದು (August 15) ಆಚರಿಸಲಾಗುವ ಈ ದಿನದಂದು ರಾಷ್ಟ್ರಧ್ವಜ ಹಾರಿಸುವುದು, ದೇಶ ಭಕ್ತಿ ಗೀತೆಗಳನ್ನು ಹಾಡುವುದು, ಮೆರವಣಿಗೆ, ವಿವಿಧ ಸ್ಪರ್ಧೆಗಳನ್ನು ನಡೆಸುವುದು ವಾಡಿಕೆ. ಈ ವಿಶೇಷ ದಿನದಂದು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ನೀಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಲು ಜನರು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಚಾರಗೋಷ್ಠಿಗಳನ್ನು ನಡೆಸುತ್ತಾರೆ. ಹಲವು ಶಾಲೆ, ಕಾಲೇಜುಗಳಲ್ಲಿ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಗಳನ್ನೂ ನಡೆಸಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೇಳಬಹುದಾದ ಕೆಲವು ಪ್ರಶ್ನೆ ಮತ್ತು ಉತ್ತರಗಳು ಇಂತಿವೆ.

1947ರ ಆಗಸ್ಟ್ 15 ಭಾರತ ಸ್ವತಂತ್ರವಾದಾಗ ಅದು ಯಾವ ದಿನ(ವಾರ)ವಾಗಿತ್ತು?

1947ರ ಆಗಸ್ಟ್ 15ರಂದು ಭಾರತವು ಬ್ರಿಟಿಷ್ ವಸಾಹತುಶಾಹಿ ನಿಯಂತ್ರಣದಿಂದ ತನ್ನ ಸ್ವಾತಂತ್ರ್ಯವನ್ನು ಅಧಿಕೃತವಾಗಿ ಗುರುತಿಸಿತು. ಇದು ವಿಶ್ವ ಇತಿಹಾಸದಲ್ಲಿ ಒಂದು ಮಹತ್ವದ ದಿನ ಮತ್ತು ಭಾರತೀಯ ಉಪಖಂಡಕ್ಕೆ ಒಂದು ಮಹತ್ವದ ತಿರುವು. ಶತಮಾನಗಳ ವಿದೇಶಿ ಪ್ರಾಬಲ್ಯವನ್ನು ಕೊನೆಗೊಳಿಸಿದ ಮತ್ತು ಸ್ವರಾಜ್ಯದ ಹೊಸ ಅವಧಿಗೆ ನಾಂದಿ ಹಾಡಿದ ಈ ಐತಿಹಾಸಿಕ ಘಟನೆ ʼಶುಕ್ರವಾರʼ ನಡೆಯಿತು.


ಭಾರತದ ರಾಷ್ಟ್ರಧ್ವಜವನ್ನು ಮೊದಲ ಬಾರಿಗೆ ಎಲ್ಲಿ ಹಾರಿಸಲಾಯಿತು?

ಭಾರತದ ರಾಷ್ಟ್ರಧ್ವಜವನ್ನು 1906ರ ಆಗಸ್ಟ್ 7ರಂದು ಕೋಲ್ಕತ್ತಾದ ಪಾರ್ಸಿ ಬಗಾನ್ ಚೌಕದಲ್ಲಿ ಹಾರಿಸಲಾಯಿತು. ಹಸಿರು, ಹಳದಿ ಮತ್ತು ಕೆಂಪು ಧ್ವಜವು ಎಂಟು ಬಿಳಿ ಕಮಲಗಳನ್ನು ಅದು ಹೊಂದಿತ್ತು. ಬಳಿಕ ದೇವನಾಗರಿ ಬರವಣಿಗೆಯಲ್ಲಿ “ವಂದೇ ಮಾತರಂ” ಪದಗಳು, ಅರ್ಧಚಂದ್ರ ಮತ್ತು ಸೂರ್ಯ ಧ್ವಜದ ವಿನ್ಯಾಸವನ್ನು ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಅಭಿವೃದ್ಧಿಗೊಂಡಿತು. 1947ರಲ್ಲಿ ಈಗಿರುವ ಧ್ವಜ ರೂಪುಗೊಂಡಿತ್ತು.

ಭಾರತದ ರಾಷ್ಟ್ರಗೀತೆಯನ್ನು ಯಾವಾಗ ಅಧಿಕೃತವಾಗಿ ಅಂಗೀಕರಿಸಲಾಯಿತು?

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅಧಿಕೃತ ರಾಷ್ಟ್ರಗೀತೆ ಇರಲಿಲ್ಲ. ರವೀಂದ್ರನಾಥ ಟ್ಯಾಗೋರ್ ಅವರು 1911ರಲ್ಲಿ ಜನ ಗಣ ಮನವನ್ನು ಬರೆದರೂ ಅದನ್ನು ಔಪಚಾರಿಕವಾಗಿ 1950ರ ಜನವರಿ 25ರಂದು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು.

ಜನ ಗಣ ಮನವನ್ನು ಹಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಸರಿಯಾದ ವೇಗದಲ್ಲಿ ಹಾಡಿದಾಗ ಭಾರತೀಯ ರಾಷ್ಟ್ರಗೀತೆ ಜನ ಗಣ ಮನ, ಪೂರ್ಣಗೊಳ್ಳಲು ಸುಮಾರು 52 ಸೆಕೆಂಡುಗಳನ್ನು ಬೇಕಾಗುತ್ತವೆ.

ಲಾರ್ಡ್ ಮೌಂಟ್ ಬ್ಯಾಟನ್ ಭಾರತಕ್ಕೆ ಅಧಿಕಾರ ಹಸ್ತಾಂತರಿಸಲು ಆಗಸ್ಟ್ 15ನ್ನು ಏಕೆ ಆರಿಸಿಕೊಂಡರು?
ಬ್ರಿಟಿಷ್ ಪಾರ್ಲಿಮೆಂಟ್ ಲಾರ್ಡ್ ಮೌಂಟ್‌ಬ್ಯಾಟನ್ ಅವರಿಗೆ ಜವಾಬ್ದಾರಿಯನ್ನು ವರ್ಗಾಯಿಸಲು 1948ರ ಜೂನ್ 30ರವರೆಗೆ ಅಧಿಕಾರ ನೀಡಿತು. ಆದರೆ ಅವರು 1947ರ ಆಗಸ್ಟ್ 15 ಅನ್ನು ಆಯ್ಕೆ ಮಾಡಿದರು. ಯಾಕೆಂದರೆ ಇದು ಜಪಾನ್ ದೇಶವು ಮಿತ್ರ ಪಡೆಗಳಿಗೆ ಶರಣಾದ ಎರಡನೇ ವಾರ್ಷಿಕೋತ್ಸವವಾಗಿತ್ತು.

Independence Day 2024
Independence Day 2024


1947ರ ಆಗಸ್ಟ್ 15ರಂದು ಡಾಲರ್ ಮತ್ತು ರೂಪಾಯಿ ವಿನಿಮಯ ದರ ಎಷ್ಟಿತ್ತು?

1947ರ ಆಗಸ್ಟ್ 15ರ ಐತಿಹಾಸಿಕ ದಿನದಂದು, ಭಾರತವು ಸಾರ್ವಭೌಮತ್ವದ ಹೊಸ ಯುಗವನ್ನು ಪ್ರವೇಶಿಸಿದಾಗ 1 ಯುಎಸ್ ಡಾಲರ್ 1 ಭಾರತೀಯ ರೂಪಾಯಿ ವಿನಿಮಯ ದರವನ್ನು ಹೊಂದಿತ್ತು! ಭಾರತೀಯ ರೂಪಾಯಿ ತನ್ನ ಸ್ವತಂತ್ರ ಪ್ರಯಾಣವನ್ನು ಪ್ರಮುಖ ಜಾಗತಿಕ ಕರೆನ್ಸಿಯೊಂದಿಗೆ ಸಮಾನವಾಗಿ ಪ್ರಾರಂಭಿಸಿತು. ಆದರೆ ಈಗ ಒಂದು ಡಾಲರ್‌ ವಿನಿಮಯ ದರ ಸುಮಾರು 84 ರೂ. ಆಗಿದೆ!

ಭಾರತವನ್ನು ಹೊರತುಪಡಿಸಿ ಎಷ್ಟು ದೇಶಗಳು ಆಗಸ್ಟ್ 15ರಂದು ತಮ್ಮ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತವೆ?

ಹಲವಾರು ದೇಶಗಳು ಪ್ರಮುಖ ರಾಷ್ಟ್ರೀಯ ರಜಾದಿನಗಳನ್ನು ಅಥವಾ ತಮ್ಮ ವಿಶಿಷ್ಟ ಸ್ವಾತಂತ್ರ್ಯದ ದಿನಗಳನ್ನು ಆಗಸ್ಟ್ 15 ರಂದು ಆಚರಿಸುತ್ತವೆ.

ಇದನ್ನೂ ಓದಿ: Independence Day 2024: ವಾಟ್ಸ್‌ಆಪ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸ್ಟಿಕ್ಕರ್‌, ಮೆಸೆಜ್‌, ಇಮೇಜ್‌ ಪಡೆಯುವುದು ಹೇಗೆ?

ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ ದಕ್ಷಿಣ ಮತ್ತು ಉತ್ತರ ಕೊರಿಯಾಗಳು ಜಪಾನಿನ ಆಕ್ರಮಣದಿಂದ ತಮ್ಮ ವಿಮೋಚನೆಯನ್ನು ನೆನಪಿಸಿಕೊಳ್ಳುತ್ತವೆ. ಕಾಂಗೋ ಗಣರಾಜ್ಯವು ಫ್ರಾನ್ಸ್‌ನಿಂದ ಪಡೆದ ಸ್ವಾತಂತ್ರ್ಯವನ್ನು ಸ್ಮರಿಸುತ್ತದೆ. ಆದರೆ ಬಹ್ರೇನ್ ಬ್ರಿಟಿಷ್ ಒಪ್ಪಂದದ ಸಂಬಂಧಗಳನ್ನು ಅನುಸರಿಸಿ ಸಾರ್ವಭೌಮ ರಾಷ್ಟ್ರವೆಂದು ಗುರುತಿಸಲ್ಪಟ್ಟ ದಿನವನ್ನು ಗುರುತಿಸುತ್ತದೆ. ಗಮನಾರ್ಹವಾಗಿ, ಲಿಚ್ಟೆನ್‌ಸ್ಟೈನ್‌ನ ಪುಟ್ಟ ರಾಷ್ಟ್ರವು ತನ್ನ ರಾಷ್ಟ್ರೀಯ ದಿನವನ್ನು ಸ್ಮರಿಸುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Droupadi Murmu: ಹೊಸ ಕ್ರಿಮಿನಲ್‌ ಕಾನೂನು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂದ ಗೌರವ; ರಾಷ್ಟ್ರಪತಿ ಮುರ್ಮು

Droupadi Murmu: ಭಾರತ ವಿಭಜನೆಯ ಕರಾಳ ದಿನದ ಬಗ್ಗೆ ಪ್ರಸ್ತಾಪಿಸಿದ ಅವರು, ಇಂದು, ಆಗಸ್ಟ್ 14, ನಮ್ಮ ದೇಶವು ವಿಭಜನೆಯ ಭಯಾನಕ ಕರಾಳ ದಿನವನ್ನು ಆಚರಿಸುತ್ತಿದೆ. ವಿಭಜನೆಯ ಭೀಕರತೆಯನ್ನು ನೆನಪಿಸಿಕೊಳ್ಳುವ ದಿನವಿದು. ನಮ್ಮ ರಾಷ್ಟ್ರವು ವಿಭಜನೆಯಾದಾಗ, ಲಕ್ಷಾಂತರ ಜನರು ಪಲಾಯನ ಮಾಡಲು ಒತ್ತಾಯಿಸಲ್ಪಟ್ಟರು ಮತ್ತು ಲೆಕ್ಕವಿಲ್ಲದಷ್ಟು ಜೀವಗಳನ್ನು ಕಳೆದುಕೊಂಡರು.

VISTARANEWS.COM


on

Droupadi Murmu
Koo

ನವದೆಹಲಿ: ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯ (Independence Day) ಮನ್ನ ದಿನವಾದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಶುಭಕೋರುತ್ತಾ ಭಾಷಣ ಆರಂಭಿಸಿದ ರಾಷ್ಟ್ರಪತಿ ಇಂದು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ಭಾರತ ವಿಭಜನೆಯ ಕರಾಳ ದಿನದ ಬಗ್ಗೆ ಪ್ರಸ್ತಾಪಿಸಿದ ಅವರು, ಇಂದು, ಆಗಸ್ಟ್ 14, ನಮ್ಮ ದೇಶವು ವಿಭಜನೆಯ ಭಯಾನಕ ಕರಾಳ ದಿನವನ್ನು ಆಚರಿಸುತ್ತಿದೆ. ವಿಭಜನೆಯ ಭೀಕರತೆಯನ್ನು ನೆನಪಿಸಿಕೊಳ್ಳುವ ದಿನವಿದು. ನಮ್ಮ ರಾಷ್ಟ್ರವು ವಿಭಜನೆಯಾದಾಗ, ಲಕ್ಷಾಂತರ ಜನರು ಪಲಾಯನ ಮಾಡಲು ಒತ್ತಾಯಿಸಲ್ಪಟ್ಟರು ಮತ್ತು ಲೆಕ್ಕವಿಲ್ಲದಷ್ಟು ಜೀವಗಳನ್ನು ಕಳೆದುಕೊಂಡರು. ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು, ನಾವು ಈ ದುರಂತ ಘಟನೆಯನ್ನು ನೆನಪಿಸಿಕೊಳ್ಳುತ್ತೇವೆ ಮತ್ತು ನೋವು ಸಂಕಷ್ಟಕ್ಕೀಡಾಗಿದ್ದ ಕುಟುಂಬಗಳ ಜೊತೆ ನಾವಿದ್ದೇವೆ ಎಂದರು.

ರಾಷ್ಟ್ರಪತಿ ಭಾಷಣದ ಪ್ರಮುಖಾಂಶ

  1. ಅಧ್ಯಕ್ಷ ದ್ರೌಪದಿ ಮುರ್ಮು ಅವರು 2024 ರ ಲೋಕಸಭೆ ಚುನಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಹಾಯ ಮಾಡಿದ EC, ಎಲ್ಲಾ ಅಧಿಕಾರಿಗಳು, ಭದ್ರತಾ ಸಿಬ್ಬಂದಿಯನ್ನು ಶ್ಲಾಘನೆ
  2. ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ ಮತ್ತು ದೇಶಾದ್ಯಂತ ‘ನಾರಿ ಶಕ್ತಿ’ ವಿಸ್ತರಿಸಲು ಕೆಲಸ ಮಾಡಿದೆ.
  3. ಪ್ರಧಾನ ಮಂತ್ರಿಯವರ ಇಂಟರ್ನ್‌ಶಿಪ್ ಯೋಜನೆಯನ್ನು ಶ್ಲಾಘನೆ. ಇದು ದೇಶಾದ್ಯಂತ 1 ಕೋಟಿಗೂ ಹೆಚ್ಚು ಯುವಕರಿಗೆ ಕೆಲಸದ ಅನುಭವ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
  4. ಪ್ಯಾರಿಸ್ ಒಲಂಪಿಕ್‌ನಲ್ಲಿ ಭಾಗವಹಿಸಿ ಹೆಮ್ಮೆ ತಂದಿರುವ ಭಾರತೀಯ ಕ್ರೀಡಾಪಟುಗಳಿಗೆ ಮತ್ತು ಟಿ 20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಗೆಲುವಿಗಾಗಿ ಅಭಿನಂದನೆ
  5. 2021 ಮತ್ತು 2024 ರ ನಡುವೆ ಸರಾಸರಿ ವಾರ್ಷಿಕ 8% ಬೆಳವಣಿಗೆಯೊಂದಿಗೆ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಇದು ಜನರ ಕೈಗೆ ಹೆಚ್ಚಿನ ಹಣವನ್ನು ನೀಡಿದೆ ಮಾತ್ರವಲ್ಲ, ಆದರೆ ಒಂದು ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.
  6. ರಾಷ್ಟ್ರದಾದ್ಯಂತ ಜಾರಿಗೊಳಿಸಲಾದ ಹೊಸ ಕ್ರಿಮಿನಲ್ ಕಾನೂನುಗಳು “ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ”
  7. ಭಾರತವು ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ವಿಶ್ವದ ಮೂರು ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಲು ಸಿದ್ಧವಾಗಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.
  8. ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಜನಾಂಗದ ತಿಲ್ಕಾ ಮಾಂಝಿ, ಬಿರ್ಸಾ ಮುಂಡಾ, ಲಕ್ಷ್ಮಣ್ ನಾಯ್ಕ್ ಮತ್ತು ಫುಲೋ-ಝಾನೋ ಅವರ ತ್ಯಾಗ ಬಲಿದಾನ ಮರೆಯುವಂತಿಲ್ಲ. ನಾವು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಜಂಜಾಟಿಯ ಗೌರವ್ ದಿವಸ್ ಎಂದು ಆಚರಿಸಲು ಪ್ರಾರಂಭಿಸಿದ್ದೇವೆ

ಇದನ್ನೂ ಓದಿ: Independence day 2024: ಆಗಸ್ಟ್ 15ರ ಕುರಿತ 8 ಪ್ರಶ್ನೆಗಳಿಗೆ ಇಲ್ಲಿದೆ ಕುತೂಹಲಕರ ಉತ್ತರ!

Continue Reading

ದೇಶ

Director of ED: ಜಾರಿ ನಿರ್ದೇಶನಾಲಯ ಪೂರ್ಣಾವಧಿ ನಿರ್ದೇಶಕರಾಗಿ ರಾಹುಲ್ ನವೀನ್ ನೇಮಕ

Director of ED: 1984ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ಸಂಜಯ್ ಕುಮಾರ್ ಮಿಶ್ರಾ (ಹಾಲಿ ನಿರ್ದೇಶಕ) ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರ 1993 ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ರಾಹುಲ್ ನವೀನ್ ಇಡಿ ಯ ಹಂಗಾಮಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಅವರನ್ನು ಪೂರ್ಣಾವಧಿ ನಿರ್ದೇಶಕರಾಗಿ ನೇಮಿಸಲಾಗಿದೆ.

VISTARANEWS.COM


on

Rahul Navin
Koo

ನವದೆಹಲಿ: ಜಾರಿ ನಿರ್ದೇಶನಾಲಯ(ED)ದ ಉಸ್ತುವಾರಿ ನಿರ್ದೇಶಕರಾಗಿರುವ(Director of ED) ಹಿರಿಯ ಐಆರ್‌ಎಸ್ ಅಧಿಕಾರಿ ರಾಹುಲ್ ನವೀನ್(Rahul Gandhi) ಅವರನ್ನು ಪೂರ್ಣಾವಧಿ ನಿರ್ದೇಶಕರನ್ನಾಗಿ ನೇಮಿಸಿದೆ. ಅಕ್ರಮ ಹಣ ವರ್ಗಾವಣೆ ವಿರೋಧಿ ಸಂಸ್ಥೆ ಇಡಿಯ ನಿರ್ದೇಶಕರಾಗಿ ಎರಡು ವರ್ಷಗಳ ಕಾಲ ರಾಹುಲ್ ನವೀನ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

1984ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ಸಂಜಯ್ ಕುಮಾರ್ ಮಿಶ್ರಾ (ಹಾಲಿ ನಿರ್ದೇಶಕ) ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರ 1993 ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ರಾಹುಲ್ ನವೀನ್ ಇಡಿ ಯ ಹಂಗಾಮಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಅವರನ್ನು ಪೂರ್ಣಾವಧಿ ನಿರ್ದೇಶಕರಾಗಿ ನೇಮಿಸಲಾಗಿದೆ. ಜಾರಿ ನಿರ್ದೇಶಾನಲಯದ ನಿರ್ದೇಶಕ ಹುದ್ದೆಗೇರಿದ ಅತ್ಯಂತ ಹಿರಿಯ ಅಧಿಕಾರಿ ಎಂಬ ಖ್ಯಾತಿಗೆ ರಾಹುಲ್ ನವೀನ್‌ ಅವರಿಗಿದೆ. ನವೀನ್ ಅವರು ಜಾರಿ ನಿರ್ದೇಶಾನಲಯದ ಪ್ರಧಾನ ಕಚೇರಿಯ ಮುಖ್ಯ ವಿಜಿಲೆನ್ಸ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ

ಜಾರಿ ನಿರ್ದೇಶನಾಲಯದ ಹಾಲಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್ ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕಳೆದ ಜುಲೈ ತಿಂಗಳಲ್ಲಿ ತೀರ್ಪು ನೀಡಿ, ಹಾಲಿ ನಿರ್ದೇಶಕರ ಅಧಿಕಾರವಧಿಯನ್ನು ವಿಸ್ತರಿಸುವಂತಿಲ್ಲ ಹೇಳಿತ್ತಲ್ಲದೇ, ಸೆಪ್ಟೆಂಬರ್ 15ರೊಳಗೆ ಹೊಸ ನಿರ್ದೇಶಕರನ್ನು ನೇಮಕ ಮಾಡುವಂತೆ ತಿಳಿಸಿತ್ತು.

ಮಿಶ್ರಾ ಅವರು ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ಪ್ರತಿ ಬಾರಿಯೂ ಒಂದು ವರ್ಷಕ್ಕೆ ಸೇವಾ ವಿಸ್ತರಣೆಯನ್ನು ನೀಡುವ ಕೇಂದ್ರದ ಎರಡು ಅಧಿಸೂಚನೆಗಳನ್ನು “ಕಾನೂನುಬಾಹಿರ” ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೇ ಹೇಳಿತ್ತು. ಆದರೆ, ಕೇಂದ್ರ ಸರ್ಕಾರವು ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು. ಅಲ್ಲದೇ, ಅವರ ಅಧಿಕಾರಾವಧಿಯನ್ನು ಮುಂದುವರಿಸುವ ತುರ್ತು ಬಗ್ಗೆ ಹೇಳಿತ್ತು. ಅಂತಿಮವಾಗಿ ಸೆಪ್ಟೆಂಬರ್ 15ರ ನಂತರ ಮತ್ತೆ ವಿಸ್ತರಣೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಇದನ್ನೂ ಓದಿ: ಶಾ ವಿರುದ್ಧ ಹೇಳಿಕೆ; ಮಾನಹಾನಿ ಕೇಸ್‌ ರದ್ದು ಕೋರಿ ರಾಹುಲ್‌ ಗಾಂಧಿ ಸಲ್ಲಿಸಿದ ಅರ್ಜಿ ವಜಾ, ಮತ್ತೆ ಸಂಕಷ್ಟ

Continue Reading

ದೇಶ

Terror Attack: ಕ್ಯಾಪ್ಟನ್‌ ಹುತಾತ್ಮರಾಗಿರುವ ಬೆನ್ನಲ್ಲೇ ಉಗ್ರನನ್ನು ಹೊಡೆದುರುಳಿಸಿದ ಸೇನೆ; ಮುಂದುವರಿದ ಕಾರ್ಯಾಚರಣೆ

Terror Attack: ನಾಲ್ವರು ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಭಾರತೀಯ ಸೇನೆಯ ಯೋಧರು ದಾಳಿ ನಡೆಸಿದರು. ಗುಂಡಿನ ಚಕಮಕಿ ವೇಳೆ ಓರ್ವ ಭಯೋತ್ಪಾದಕ ಗಾಯಗೊಂಡಿರುವುದಾಗಿ ಸೇನೆ ಮಾಹಿತಿ ನೀಡಿದೆ. ಉಗ್ರರ ಜತೆಗಿನ ಕಾಳಗದಲ್ಲಿ ಹುತಾತ್ಮರಾದವರು ಭಾರತೀಯ ಸೇನೆಯ ಕ್ಯಾಪ್ಟನ್ ದೀಪಕ್‌ ಸಿಂಗ್‌ ಎಂದು ತಿಳಿದು ಬಂದಿದೆ.

VISTARANEWS.COM


on

Terror Attack
Koo

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ದೋಡಾ ಜಿಲ್ಲೆಯಲ್ಲಿ ಬುಧವಾರ ನಡೆದ ಸೇನಾ ಕಾರ್ಯಾಚರಣೆ ವೇಳೆ ಕ್ಯಾಪ್ಟನ್‌ವೊಬ್ಬರು ಹುತಾತ್ಮರಾಗಿದ್ದಾರೆ. ಇನ್ನು ಗುಂಡಿನ ಚಕಮಕಿ(Terror Attack)ಯಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದ್ದು, ಮೂವರು ಉಗ್ರರು ಎಸ್ಕೇಪ್‌ ಆಗಿದ್ದಾರೆ. ಘಟನೆಯಲ್ಲಿ ಓರ್ವ ನಾಗರಿಕನೂ ಗಾಯಗೊಂಡಿದ್ದಾನೆ. ಇನ್ನು ಉಗ್ರರ ಪತ್ತೆಗೆ ಸೇನೆ ಭರ್ಜರಿ ಕಾರ್ಯಾಚರಣೆ ಕೈಗೆತ್ತಿಕೊಂಡಿದೆ.

ನಾಲ್ವರು ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಭಾರತೀಯ ಸೇನೆಯ ಯೋಧರು ದಾಳಿ ನಡೆಸಿದರು. ಗುಂಡಿನ ಚಕಮಕಿ ವೇಳೆ ಓರ್ವ ಭಯೋತ್ಪಾದಕ ಗಾಯಗೊಂಡಿರುವುದಾಗಿ ಸೇನೆ ಮಾಹಿತಿ ನೀಡಿದೆ. ಉಗ್ರರ ಜತೆಗಿನ ಕಾಳಗದಲ್ಲಿ ಹುತಾತ್ಮರಾದವರು ಭಾರತೀಯ ಸೇನೆಯ ಕ್ಯಾಪ್ಟನ್ ದೀಪಕ್‌ ಸಿಂಗ್‌ ಎಂದು ತಿಳಿದು ಬಂದಿದೆ. . ಶಿವಘರ್ – ಅಸಾರ್ ವಲಯದಲ್ಲಿ ಈ ಕಾರ್ಯಾಚರಣೆ ನಡೆಯಿತು ಎಂದು ಭಾರತೀಯ ಸೇನೆಯ ಮೂಲಗಳು ಮಾಹಿತಿ ನೀಡಿವೆ.

ಅಮೆರಿಕ ಶಸ್ತ್ರಾಸ್ತ್ರ ಪತ್ತೆ

ಎನ್‌ಕೌಂಟರ್‌ ನಡೆದ ಸ್ಥಳದಿಂದ ಅಮೆರಿಕ ನಿರ್ಮಿತ ಎಂ 4 ಅಸಾಲ್ಟ್ ರೈಫಲ್, ವಿವಿಧ ಉಪಕರಣಗಳು ಹಾಗೂ ಲಾಜಿಸ್ಟಿಕ್ಸ್ ಹೊಂದಿರುವ ಮೂರು ರಕ್ತಸಿಕ್ತ ಚೀಲಗಳನ್ನು ವಶಪಡಿಸಿಕೊಳ್ಳುವಲ್ಲಿ ಸೇನೆ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಸಂಜೆ ಭಯೋತ್ಪಾದಕರ ಅಡಗುತಾಣದ ಬಗ್ಗೆ ಸೇನೆಗೆ ಸುಳಿವು ಲಭಿಸಿತ್ತು. ಹೀಗಾಗಿ ರಾತ್ರಿಯೇ ಸ್ವಲ್ಪ ಸಮಯ ಗುಂಡಿನ ಚಕಮಕಿ ನಡೆದಿತ್ತು. ಇಂದು ಬೆಳಿಗ್ಗೆ ಕಾರ್ಯಾಚರಣೆ ಪುನರಾರಂಭಿಸಲಾಯಿತು.

ಜಮ್ಮು ಮತ್ತು ಕಾಶ್ಮೀಶರದಲ್ಲಿ ಇತ್ತೀಚೆಗೆ ಉಗ್ರರ ಚಟುವಟಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಹಿರಿಯ ಅಧಿಕಾರಿಗಳು, ಪ್ರಮುಖ ನಾಯಕರು ಭಾಗವಹಿಸಿದರು.

ಜಮ್ಮು ಮತ್ತು ಕಾಶ್ಮೀರ ಪೀರ್ ಪಂಜಾಲ್ ರೇಂಜ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ಈ ವಲಯದಲ್ಲಿ ಸಾಕಷ್ಟು ಅರಣ್ಯ ಪ್ರದೇಶಗಳು ಹಾಗೂ ಬೆಟ್ಟ ಗುಡ್ಡಗಳು ಇದ್ದು, ಉಗ್ರರು ತಮ್ಮ ಅಡಗುತಾಣವನ್ನಾಗಿ ಮಾಡಿಕೊಳ್ಳಲು ಅನುಕೂಲವಾಗುವಂತಿದೆ. ಉಗ್ರರನ್ನು ನಿಯಂತ್ರಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಹೊಸ ಭದ್ರತಾ ಮ್ಯಾಟ್ರಿಕ್ಸ್ ಅನ್ನು ರೂಪಿಸಲಾಗುತ್ತಿದೆ ಎಂದು ಈ ತಿಂಗಳ ಆರಂಭದಲ್ಲಿ ಸರ್ಕಾರ ಹೇಳಿತ್ತು. ಕಳೆದ ತಿಂಗಳು ಕುಪ್ವಾರಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದರು.

ಜೂನ್‌ 16ರಂದು ಸಭೆ ನಡೆಸಿದ್ದ ಗೃಹ ಸಚಿವ ಅಮಿತ್‌ ಶಾ ಅವರು, “ಜಮ್ಮುವಿನಲ್ಲಿ ಉಗ್ರವಾದವನ್ನು ಸಂಪೂರ್ಣವಾಗಿ ನಿಗ್ರಹಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. “ಜಮ್ಮು-ಕಾಶ್ಮೀರದಲ್ಲಿ ಉಗ್ರವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಕಾಶ್ಮೀರದಲ್ಲಿ ನಿಗ್ರಹಿಸಿದಂತೆ ಜಮ್ಮುವಿನಲ್ಲೂ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು. ಗಡಿಗಳನ್ನು ಇನ್ನಷ್ಟು ಭದ್ರಗೊಳಿಸಬೇಕು. ಒಳನುಸುಳುಕೋರರ ಮೇಲೆ ಹದ್ದಿನ ಕಣ್ಣಿಡಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು” ಎಂದು ಭದ್ರತಾ ಪಡೆಗಳಿಗೆ ಅಮಿತ್‌ ಶಾ ಸೂಚಿಸಿದ್ದರು. ಕೆಲ ದಿನಗಳ ಹಿಂದಷ್ಟೇ ನರೇಂದ್ರ ಮೋದಿ ಅವರು ಕೂಡ ಜಮ್ಮು-ಕಾಶ್ಮೀರ ಭದ್ರತೆ ಕುರಿತಂತೆ ಉನ್ನತಮಟ್ಟದ ಸಭೆ ನಡೆಸಿದ್ದರು. ಎಲ್ಲ ಸೈನಿಕರನ್ನು ಗಡಿ ಸೇರಿ ಆಯಕಟ್ಟಿನ ಪ್ರದೇಶಗಳಿಗೆ ನಿಯೋಜಿಸಬೇಕು ಎಂದು ಹೇಳಿದ್ದರು.

ಇದನ್ನೂ ಓದಿ: Terrorist Attack: ಕುಪ್ವಾರ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮ: ಪಾಕ್‌ ಉಗ್ರನನ್ನು ಹೊಡೆದುರುಳಿಸಿದ ಸೇನೆ

Continue Reading

ದೇಶ

Kolkata Doctor Murder Case: ದೇಹದಲ್ಲಿ 150 ಮಿಲಿ ಗ್ರಾಂ ವೀರ್ಯ ಪತ್ತೆ- ಟ್ರೈನಿ ವೈದ್ಯೆಯ ಮೇಲೆ ಗ್ಯಾಂಗ್‌ರೇಪ್‌ ಆಗಿತ್ತಾ?

Kolkata Doctor Murder Case: ಪೋಷಕರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ತಮ್ಮ ಪುತ್ರಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಶಂಕೆ ಇದೆ. ಮರಣೋತ್ತರ ಪರೀಕ್ಷೆ ವರದಿ ಕೇಸ್‌ನ ದಿಕ್ಕನ್ನೇ ಬದಲಿಸಿದೆ. ಮಗಳ ದೇಹವು ಹಲವಾರು ಗಾಯದ ಗುರುತುಗಳನ್ನು ಇದ್ದು, ಇದು ಕ್ರೂರ ಮತ್ತು ಹಿಂಸಾತ್ಮಕ ದಾಳಿಯಂತೆ ಕಂಡು ಬಂದಿದೆ. ಆಕೆಯ ಕತ್ತಿನ ಮೇಲೆ ಕಚ್ಚಿರುವ ಗುರುತು ಕಂಡುಬಂದಿದೆ ಎಂದು ಹೇಳಿದ್ದಾರೆ.

VISTARANEWS.COM


on

kolkata doctor murder case
Koo

ಕೋಲ್ಕತ್ತಾ: ಪಶ್ಚಿಮ ಬಂಗಾಳ(West Bengal)ದ ಕೋಲ್ಕತ್ತಾ(Kolkata)ದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಮತ್ತು ಕೊಲೆಯಾಗಿರುವ(Kolkata Doctor Murder Case) ಟ್ರೈನಿ ವೈದ್ಯೆಯ ದೇಹದಲ್ಲಿ 150 ಮಿಲಿ ಗ್ರಾಂ ವೀರ್ಯ(Semen) ಪತ್ತೆಯಾಗಿದೆ. ಹೀಗಾಗಿ ಇದು ಒಬ್ಬನಿಂದ ಆಗಿರುವ ಕೃತ್ಯ ಅಲ್ಲ. ಇದು ಸಾಮೂಹಿಕ ಅತ್ಯಾಚಾರ(Gangrape) ಎಂದು ಸಂತ್ರಸ್ತೆಯ ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಪೋಷಕರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ತಮ್ಮ ಪುತ್ರಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಶಂಕೆ ಇದೆ. ಮರಣೋತ್ತರ ಪರೀಕ್ಷೆ ವರದಿ ಕೇಸ್‌ನ ದಿಕ್ಕನ್ನೇ ಬದಲಿಸಿದೆ. ಮಗಳ ದೇಹವು ಹಲವಾರು ಗಾಯದ ಗುರುತುಗಳನ್ನು ಇದ್ದು, ಇದು ಕ್ರೂರ ಮತ್ತು ಹಿಂಸಾತ್ಮಕ ದಾಳಿಯಂತೆ ಕಂಡು ಬಂದಿದೆ. ಆಕೆಯ ಕತ್ತಿನ ಮೇಲೆ ಕಚ್ಚಿರುವ ಗುರುತು ಕಂಡುಬಂದಿದೆ ಎಂದು ಹೇಳಿದ್ದಾರೆ.

ಪ್ರಕರಣವನ್ನು ಹೈಕೋರ್ಟ್‌ ಸಿಬಿಐ(CBI Probe) ತನಿಖೆಗೆ ಆದೇಶಿಸಿರುವ ಬೆನ್ನಲ್ಲೇ ಸಿಬಿಐ ಆರೋಪಿಯನ್ನು ತನ್ನ ವಶಕ್ಕೆ ಪಡೆದಿದೆ. ಮತ್ತೊಂದೆಡೆ ಘಟನೆಯನ್ನು ಖಂಡಿಸಿ ಇಂದು ರಾತ್ರಿ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನ ಪ್ರತಿಭಟನೆ ನಡೆಸಲಿದ್ದಾರೆ.

ಬುಧವಾರ ಮಧ್ಯಾಹ್ನ, ಮಣಿಪಾಲ, ಮೆಡಿಕಾ, ಪೀರ್‌ಲೆಸ್ ಮತ್ತು ಆರ್‌ಎನ್ ಟ್ಯಾಗೋರ್ ಸೇರಿದಂತೆ ಕೋಲ್ಕತ್ತಾದ ಪೂರ್ವ ಮೆಟ್ರೋಪಾಲಿಟನ್ ಬೈಪಾಸ್‌ನ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿಗಳು ಮುಕುಂದಪುರದಿಂದ ಬೃಹತ್‌ ಮೆರವಣಿಗೆ ಕೈಗೊಂಡರು.

ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪುರಸ್ಕರಿಸಿದ ಕೋಲ್ಕತಾ ಹೈಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದೆ. ಆರಂಭದಲ್ಲಿಯೇ ಕೊಲೆ ಪ್ರಕರಣವನ್ನು ಏಕೆ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದ ಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಗಿನ ಪ್ರಾಂಶುಪಾಲರಾದ ಡಾ ಸಂದೀಪ್ ಘೋಷ್ ಅವರನ್ನು ಮೊದಲು ವಿಚಾರಣೆಗೆ ಒಳಪಡಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ ಘೋಷ್ ಅವರು ರಾಜೀನಾಮೆ ನೀಡಿದ ಗಂಟೆಗಳ ನಂತರ ಮತ್ತೊಂದು ಕಾಲೇಜಿನ ಪ್ರಾಂಶುಪಾಲರಾಗಿ ಏಕೆ ನೇಮಕಗೊಂಡರು ಎಂದು ಪೀಠವು ರಾಜ್ಯ ಸರ್ಕಾರದ ವಕೀಲರನ್ನು ಪ್ರಶ್ನಿಸಿತು.

ಏನಿದು ಘಟನೆ?

ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಗುರುವಾರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು.
ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿ, ʼʼಸಂತ್ರಸ್ತೆ ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದ್ದಾರೆ. ಬಳಿಕ ಸೆಮಿನಾರ್ ಹಾಲ್‌ಗೆ ತೆರಳಿದ್ದರು. ನಂತರ ಸೆಮಿನಾರ್‌ ಹಾಲ್‌ನಲ್ಲಿ ಅವರ ಶವ ಪತ್ತೆಯಾಗಿತ್ತುʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Kolkata Doctor Murder Case: ನೋ ಸೇಫ್ಟಿ…ನೋ ಡ್ಯೂಟಿ- ವೈದ್ಯೆ ಕೊಲೆ ಖಂಡಿಸಿ ದೇಶವ್ಯಾಪಿ ಭಾರೀ ಪ್ರತಿಭಟನೆ

Continue Reading
Advertisement
Murder Case
ಕರ್ನಾಟಕ24 seconds ago

Murder Case: ಪತ್ನಿಯನ್ನು ಸ್ಮಶಾನಕ್ಕೆ ಕರೆದೊಯ್ದು ಕೊಲೆಗೈದ ಪತಿ!

Multivitamins
ಆರೋಗ್ಯ6 mins ago

Multivitamins: ನಮಗೆ ವಿಟಮಿನ್‌ ಪೂರಕಗಳು ಅಗತ್ಯವೆಂದು ತಿಳಿಯುವುದು ಹೇಗೆ?

Varamahalakshmi Festival 2024
ಧಾರ್ಮಿಕ7 mins ago

Varamahalakshmi Festival 2024: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಏನು? ಹೆಚ್ಚಿನ ಫಲ ಪಡೆಯಲು ಪೂಜೆ ಹೇಗೆ ಮಾಡಬೇಕು?

Droupadi Murmu
ದೇಶ33 mins ago

Droupadi Murmu: ಹೊಸ ಕ್ರಿಮಿನಲ್‌ ಕಾನೂನು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂದ ಗೌರವ; ರಾಷ್ಟ್ರಪತಿ ಮುರ್ಮು

Tea vs Coffee
ಆರೋಗ್ಯ50 mins ago

Health Tips: ಬಿಸಿ ಕಾಫಿಗೆ ಬಾಯಿ ಸುಟ್ಟಿತೇ? ಇಲ್ಲಿದೆ ಉಪಶಮನ!

Cooker Blast
ಕರ್ನಾಟಕ50 mins ago

Cooker Blast: ಅಡುಗೆ ಮಾಡುವಾಗ ಕುಕ್ಕರ್ ಸ್ಫೋಟವಾಗಿ ಯುವಕ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

Rahul Navin
ದೇಶ1 hour ago

Director of ED: ಜಾರಿ ನಿರ್ದೇಶನಾಲಯ ಪೂರ್ಣಾವಧಿ ನಿರ್ದೇಶಕರಾಗಿ ರಾಹುಲ್ ನವೀನ್ ನೇಮಕ

Varamahalakshmi Festival 2024
ಫ್ಯಾಷನ್2 hours ago

Varamahalakshmi Festival 2024: ಹಬ್ಬಕ್ಕೆ ಸೀರೆಯನ್ನು ದಾವಣಿಯಂತೆ ಉಡುವುದು ಹೇಗೆ? ಇಲ್ಲಿದೆ ಸಿಂಪಲ್‌ ಐಡಿಯಾ

Terror Attack
ದೇಶ2 hours ago

Terror Attack: ಕ್ಯಾಪ್ಟನ್‌ ಹುತಾತ್ಮರಾಗಿರುವ ಬೆನ್ನಲ್ಲೇ ಉಗ್ರನನ್ನು ಹೊಡೆದುರುಳಿಸಿದ ಸೇನೆ; ಮುಂದುವರಿದ ಕಾರ್ಯಾಚರಣೆ

Viral Video
Latest2 hours ago

Viral Video: ಶಾಲೆಯಲ್ಲಿ ಶಿಕ್ಷಕಿ, ಶಿಕ್ಷಕನ ನಡುವೆ ಭೀಕರ ಮಾರಾಮಾರಿ! ವಿಡಿಯೊ ನೋಡಿದವರಿಗೆ ಗಾಬರಿ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ6 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ6 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ6 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌