Amritpal Singh: ನೇಪಾಳದಲ್ಲಿ ಅಮೃತ್ ಪಾಲ್ ಸಿಂಗ್, ದೇಶ ಬಿಟ್ಟು ಹೋಗದಂತೆ ಆತನನ್ನು ತಡೆಯಲು ಭಾರತ ಮನವಿ - Vistara News

ದೇಶ

Amritpal Singh: ನೇಪಾಳದಲ್ಲಿ ಅಮೃತ್ ಪಾಲ್ ಸಿಂಗ್, ದೇಶ ಬಿಟ್ಟು ಹೋಗದಂತೆ ಆತನನ್ನು ತಡೆಯಲು ಭಾರತ ಮನವಿ

Amritpal Singh: ಪಂಜಾಬ್ ಪೊಲೀಸರಿಂದ ತಪ್ಪಿಸಿಕೊಂಡಿರುವ ಖಲಿಸ್ತಾನಿ ಪ್ರತ್ಯೇಕತಾ ಉಗ್ರರ ನಾಯಕ ಅಮೃತ್ ಪಾಲ್ ಸಿಂಗ್ ನೇಪಾಳದಲ್ಲಿ (Nepal) ಅಡಗಿಕೊಂಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತ ನೇಪಾಳ ಬಿಟ್ಟು ಹೋಗದಂತೆ ತಡೆಯಬೇಕೆಂದು ಭಾರತ (India) ಸರ್ಕಾರ ಮಾನವಿ ಮಾಡಿಕೊಂಡಿದೆ.

VISTARANEWS.COM


on

Amritpal Singh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಖಲಿಸ್ತಾನಿ ಪ್ರತ್ಯೇಕತಾವಾದಿ ಉಗ್ರ ನಾಯಕ ಅಮೃತ್ ಪಾಲ್ ಸಿಂಗ್ (Amritpal Singh) ಪಂಜಾಬ್‌ನಿಂದ ತಪ್ಪಿಸಿಕೊಂಡು ನೆರೆಯ ರಾಷ್ಟ್ರ ನೇಪಾಳವನ್ನು (Nepal) ಪ್ರವೇಶಿಸಿರುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಾರತ (India) ಸರ್ಕಾರವು ನೇಪಾಳ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಯಾವುದೇ ಕಾರಣಕ್ಕೂ ನೇಪಾಳದಿಂದ ಮೂರನೇ ರಾಷ್ಟ್ರಕ್ಕೆ ಅಮೃತ್ ಪಾಲ್ ಪರಾರಿಯಾಗದಂತೆ ನೋಡಿಕೊಳ್ಳಲು ಕೋರಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ನೇಪಾಳದಲ್ಲಿ ತಲೆಮರೆಸಿಕೊಂಡಿದ್ದಾನೆಂದು ನಂಬಲಾಗಿರುವ ಅಮೃತಪಾಲ್ ಸಿಂಗ್ ಮೂರನೇ ದೇಶಕ್ಕೆ ಪಲಾಯನ ಮಾಡಲು ಅವಕಾಶ ನೀಡಬಾರದು. ಭಾರತೀಯ ಪಾಸ್‌ಪೋರ್ಟ್ ಅಥವಾ ಯಾವುದೇ ನಕಲಿ ಪಾಸ್‌ಪೋರ್ಟ್ ಬಳಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಆತನನ್ನು ಬಂಧಿಸಲು ಭಾರತವು ನೇಪಾಳ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ನೇಪಾಳದ ಕಾಠ್ಮಂಡು ಪೋಸ್ಟ್ ಪತ್ರಿಕೆ ಸೋಮವಾರ ವರದಿ ಮಾಡಿದೆ.

ಕಾಠ್ಮಂಡುವಿನ ಭಾರತೀಯ ರಾಯಭಾರ ಕಚೇರಿ ಶನಿವಾರದಂದು ಕಾನ್ಸುಲರ್ ಸೇವೆಗಳ ಇಲಾಖೆಗೆ ಕಳುಹಿಸಿರುವ ಪತ್ರದಲ್ಲಿ ಸಿಂಗ್ ನೇಪಾಳದಿಂದ ಪಲಾಯನ ಮಾಡಲು ಪ್ರಯತ್ನಿಸಿದರೆ ಆತನನ್ನು ಬಂಧಿಸುವಂತೆ ಸರ್ಕಾರಿ ಸಂಸ್ಥೆಗಳಿಗೆ ಮನವಿ ಮಾಡಿದೆ ಎಂದು ನೇಪಾಳದ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ಭಾರತೀಯ ಮಾಧ್ಯಮಗಳೂ ಸುದ್ದಿ ಮಾಡಿವೆ.

Amritpal Singh: ಅಕ್ರಮ ಸಂಬಂಧಗಳು, ಅಶ್ಲೀಲ ಚಾಟ್​, ವಿಡಿಯೊ ಕಾಲ್​ನಲ್ಲಿ ಕಿಸ್​​

ಒಂದೆಡೆ ಹಿಂಸಾಚಾರ ಪ್ರಚೋದನೆ ಮಾಡುತ್ತ, ಹೋರಾಟದ ಮಾತುಗಳನ್ನು ಆಡುತ್ತ, ಕೈಯಲ್ಲಿ ಮಾರಕಾಸ್ತ್ರ ಹಿಡಿದಿರುತ್ತಿದ್ದ ಅಮೃತ್​ಪಾಲ್​ ಖಾಸಗಿ ಜೀವನ ಹೇಗಿತ್ತು? ಆತನೊಬ್ಬ ಮಹಾನ್​ ವಿಲಾಸಿಯಾಗಿದ್ದ. ಅವನು ಹಲವು ಯುವತಿಯರು / ಮಹಿಳೆಯರೊಂದಿಗೆ ವಾಟ್ಸ್​​ಆ್ಯಪ್​, ಇನ್​ಸ್ಟಾಗ್ರಾಂನಲ್ಲಿ ಅಶ್ಲೀಲ ಚಾಟ್​ ಮಾಡುತ್ತಿದ್ದ. ವಿಡಿಯೊ ಕಾಲ್​ ಮಾಡುತ್ತಿದ್ದ. ಅದರಲ್ಲಿ ಮಹಿಳೆಯರೊಟ್ಟಿಗೆ ಚುಂಬನ, ಅಶ್ಲೀಲ ಮಾತುಗಳು ನಡೆಯುತ್ತಿದ್ದವು. ಆತನಿಗೆ ಇದೇ ಫೆಬ್ರವರಿಯಲ್ಲಿ ಮದುವೆಯಾಗಿತ್ತು. ಆದರೆ ಅದರಾಚೆ ಹಲವು ಯುವತಿಯರು/ಮದುವೆಯಾದ ಮಹಿಳೆಯರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಅಷ್ಟೇ ಅಲ್ಲ, ತಾನು ಲೈಂಗಿಕ ಸಂಪರ್ಕ ಬೆಳೆಸಿದ ಮಹಿಳೆಯರ ಅಶ್ಲೀಲ ವಿಡಿಯೊ ಮಾಡಿಟ್ಟುಕೊಂಡು, ಅವರಿಗೆ ಬ್ಲ್ಯಾಕ್​ ಮೇಲೆ ಮಾಡುತ್ತಿದ್ದ ಎಂದೂ ಹೇಳಿದೆ.

ಅಮೃತ್​ಪಾಲ್​ ಮಹಿಳೆಯರಿಗೆ ಮಾಡಿದ ಮೆಸೇಜ್​, ಕಳಿಸಿದ ಸುಮಾರು 12 ವೈಸ್​ನೋಟ್​​ಗಳು ತಮಗೆ ಸಿಕ್ಕಿದ್ದಾಗಿ ಇಂಡಿಯಾ ಟುಡೆ ತಿಳಿಸಿದೆ. ‘ನಾನು ಯಾವುದೇ ಮಹಿಳೆಯೊಂದಿಗೆ ಗಂಭೀರವಾಗಿ ಸಂಬಂಧ ಬೆಳೆಸಲು ಇಷ್ಟಪಡುವುದಿಲ್ಲ. ಆಯಾ ಸಂದರ್ಭಕ್ಕಷ್ಟೇ ಸ್ನೇಹ ಬಯಸುತ್ತೇನೆ’ ಎಂದು ಅಮೃತ್​ಪಾಲ್ ಹೇಳಿದ್ದನ್ನು ಒಂದು ವೈಸ್​ ನೋಟ್​​ನಲ್ಲಿ ಕೇಳಬಹುದು. ಹಾಗೇ, ಇನ್ನೊಂದರಲ್ಲಿ ‘ಮಹಿಳೆಯೊಬ್ಬರು ನನ್ನ ಜತೆ ಅಫೇರ್ ಇಟ್ಟುಕೊಳ್ಳಲು ಬಯಸುತ್ತಿದ್ದಾರೆ. ಅವರಿಗೆ ಮದುವೆಯಾಗಿದೆ, ನನ್ನೊಂದಿಗೆ ಸಂಬಂಧ ಬೆಳೆಸಿದರೆ, ಅವರ ವಿವಾಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆಕೆ ಹೇಳುತ್ತಿದ್ದಾಳೆ’ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ. ಇನ್​ಸ್ಟಾಗ್ರಾಂನಲ್ಲಿ ಮಹಿಳೆಯೊಬ್ಬಳ ಜತೆ ಚಾಟ್​ ಮಾಡುತ್ತ ‘ನಮ್ಮ ಸಂಬಂಧ ದೃಢಪಟ್ಟಿತಲ್ಲವಾ? ಅಂದರೆ, ನಮ್ಮ ಹನಿಮೂನ್​ ದುಬೈನಲ್ಲಾ’ ಎಂದು ಈತ ಮೆಸೇಜ್​ ಮಾಡಿದ್ದಾನೆ. ಅದಕ್ಕೆ ಮಹಿಳೆ ನಗುವಿನ ಇಮೋಜಿ ಹಾಕಿ ಪ್ರತಿಕ್ರಿಯೆ ನೀಡಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: Amritpal Singh: ಪಾಶ್ಚಾತ್ಯ ಶೈಲಿಯ ಉಡುಪು ಧರಿಸಿ ಪರಾರಿಯಾಗಿರುವ ಅಮೃತ್​ಪಾಲ್​ ಸಿಂಗ್​; ಬೈಕ್​ ವಶಪಡಿಸಿಕೊಂಡ ಪೊಲೀಸ್​

ಪಂಜಾಬ್​ ಪೊಲೀಸರು ಸದ್ಯ ಅಮೃತ್​ಪಾಲ್​​ ಬಂಧನಕ್ಕೆ ಬಲೆಬೀಸಿದ್ದಾರೆ. ಮಾರ್ಚ್​ 18ರಂದು ಅವನನ್ನು ಅರೆಸ್ಟ್ ಮಾಡಲು, ಪೊಲೀಸರ ತಂಡ ಇನ್ನಿಲ್ಲದ ಪ್ರಯತ್ನ ಮಾಡಿತ್ತು. ಆದರೆ ಅವನು ಅಲ್ಲಿಂದ ಪರಾರಿಯಾಗಿದ್ದಾನೆ. ಪೊಲೀಸರು ಈಗಾಗಲೇ ಅಮೃತ್​​ಪಾಲ್ ಹುಟ್ಟೂರಿಗೆ ತೆರಳಿ ಅಲ್ಲಿದ್ದ ಅವನ ಪತ್ನಿ ಮತ್ತು ತಾಯಿಯನ್ನೂ ವಿಚಾರಣೆ ಮಾಡಿದ್ದಾರೆ. ಆದರೆ ಅವನ ಸುಳಿವು ಸಿಕ್ಕಿಲ್ಲ. ಈಗಿರುವ ಮಾಹಿತಿಗಳ ಪ್ರಕಾರ, ಆತ ಈಗ ನೇಪಾಳದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

BJP candidate list : ಬಿಜೆಪಿ ಟಿಕೆಟ್ ತಿರಸ್ಕರಿಸಿದ ಭೋಜಪುರಿ ಗಾಯಕ ಪವನ್ ಸಿಂಗ್​

BJP candidate list : ಪವನ್ ಸಿಂಗ್ ಬಂಗಾಳಿ ಮಹಿಳೆಯರ ಬಗ್ಗೆ ಅನುಚಿತ ಪದಗಳನ್ನು ಬಳಸಿದ್ದಾರೆ ಎಂಬ ಆರೋಪಗಳಿವೆ.

VISTARANEWS.COM


on

Pawan Singh
Koo

ನವದೆಹಲಿ: ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಿಂದ ಬಿಜೆಪಿ ಲೋಕಸಭಾ ಟಿಕೆಟ್ ಪಡೆದ (BJP candidate list) ಭೋಜಪುರಿ ಗಾಯಕ ಮತ್ತು ನಟ ಪವನ್ ಸಿಂಗ್ ಅವರು ಉಮೇದುವಾರಿಕೆಯ ಅವಕಾಶವನ್ನು ತಿರಸ್ಕರಿಸಿದ್ದಾಎರ. ಕೆಲವು ‘ಕಾರಣಗಳಿಂದಾಗಿ’ ಈ ಸ್ಥಾನಕ್ಕೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ. ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಪ್ರಮುಖ ರಾಜಕೀಯ ವ್ಯಕ್ತಿಗಳ ಹೆಸರುಗಳಿವೆ.

“ಭಾರತೀಯ ಜನತಾ ಪಕ್ಷದ ಉನ್ನತ ನಾಯಕತ್ವಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಪಕ್ಷವು ನನ್ನನ್ನು ನಂಬಿತು ಮತ್ತು ಪಶ್ಚಿಮ ಬಂಗಾಳದ ಅಸನ್ಸೋಲ್​ನಿಂದ ಅಭ್ಯರ್ಥಿಯಾಗಿ ಘೋಷಿಸಿದೆ. ಆದರೆ ಕೆಲವು ಕಾರಣಗಳಿಂದಾಗಿ ನಾನು ಅಸನ್ಸೋಲ್​ನಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ” ಎಂದು ಪವನ್ ಸಿಂಗ್ ಹೇಳಿಕೊಂಡಿದ್ದಾರೆ.

ಹೊರಗುಳಿಯಲು ಕಾರಣವೇನು?

ವರದಿಯ ಪ್ರಕಾರ, ಪವನ್ ಸಿಂಗ್ ಲೋಕಸಭಾ ಚುನಾವಣೆಯಲ್ಲಿ ಅರಾಹ್ ಸ್ಥಾನದಿಂದ ಬಿಜೆಪಿ ಟಿಕೆಟ್​ ಬಯಸಿದ್ದರು. ಬಿಹಾರದ ಅರಾಹ್ ಅವರಿಗೆ ಸುರಕ್ಷಿತ ಸ್ಥಾನವಾಗಿದೆ. ಯಾಕೆಂದರೆ ಅದು ಬಿಜೆಪಿಯ ಭದ್ರಕೋಟೆಯಾಗಿದೆ. 2019 ರ ಚುನಾವಣೆಯಲ್ಲಿ ಆರ್.ಕೆ.ಸಿಂಗ್ ಮೂಲಕ ಕೇಸರಿ ಪಕ್ಷವು ಈ ಸ್ಥಾನವನ್ನು ಗೆದ್ದಿತ್ತು.

ಸಿಂಗ್ ಅವರು ಅಸನ್ಸೋಲ್ ಟಿಕೆಟ್ ನಿರಾಕರಿಸಲು ಮತ್ತೊಂದು ಕಾರಣವೆಂದರೆ ಬಿಹಾರ ಮೂಲದ ಮತ್ತು ಈ ಹಿಂದೆ ಬಿಜೆಪಿ ಸಂಸದರಾಗಿದ್ದ ಶತ್ರುಘ್ನ ಸಿನ್ಹಾ. ಹಿರಿಯ ನಟ ಸಿನ್ಹಾ ಅವರು ಪವನ್ ಸಿಂಗ್ ಅವರಿಗೆ ಮನರಂಜನಾ ಉದ್ಯಮದಲ್ಲಿ ತಂದೆಯಂತೆ ಎಂದು ಹೇಳಲಾಗುತ್ತದೆ. ವರದಿಗಳ ಪ್ರಕಾರ, ಪವನ್​ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಿಂಗ್ ಅವರಿಗೆ ಸಹಾಯ ಮಾಡಿದ್ದರು.

ಅಸನ್ಸೋಲ್​ನಿಂದ ಬಿಜೆಪಿ ಟಿಕೆಟ್ ನಿರಾಕರಿಸುವುದು ಸೂಕ್ತವೆಂದು ಪವನ್ ಸಿಂಗ್ ಭಾವಿಸಿದ್ದಾರೆ. ಈಗ, ಬಿಜೆಪಿ ಸಿಂಗ್ ಅವರನ್ನು ಬೇರೆ ಯಾವುದೇ ಸ್ಥಾನದಿಂದ ಕಣಕ್ಕಿಳಿಸುತ್ತದೆಯೇ ಅಥವಾ ಪಟ್ಟಿಯಿಂದ ಕೈಬಿಡುತ್ತದೆಯೇ ಎಂದು ನೋಡಬೇಕಾಗಿದೆ.

ಇದನ್ನೂ ಓದಿ : BJP Candidates List : ಬಿಜೆಪಿಯ ಈ ನಾಲ್ವರು ವಿವಾದಾತ್ಮಕ ಸಂಸದರಿಗೆ ಈ ಬಾರಿ ಟಿಕೆಟಿಲ್ಲ!

ವಿವಾದವಾಗಿತ್ತು

38 ವರ್ಷದ ಭೋಜಪುರಿ ಗಾಯಕನಿಗೆ ಟಿಕೆಟ್ ನೀಡಿರುವುದು ಭಾರಿ ವಿವಾದವನ್ನು ಹುಟ್ಟುಹಾಕಿತು. ಅವರ ಸಂಗೀತದಲ್ಲಿ ಬಂಗಾಳಿ ಮಹಿಳೆಯರ ಬಗ್ಗೆ ಅನುಚಿತ ಉಲ್ಲೇಖಗಳಿವೆ ಎಂಬ ಆರೋಪಗಳನ್ನು ಮುನ್ನೆಲೆಗೆ ತರಲಾಗಿದೆ.

ಏತನ್ಮಧ್ಯೆ, ಜಾರ್ಖಂಡ್​ನ ಹಜಾರಿಬಾಗ್ ಜಯಂತ್ ಸಿನ್ಹಾ ಮತ್ತು ಪೂರ್ವ ದೆಹಲಿ ಸಂಸದ ಗೌತಮ್ ಗಂಭೀರ್ ನಂತರ ಮುಂಬರುವ ಲೋಕಸಭಾ ಚುನಾವಣೆಯಿಂದ ಹೊರಗುಳಿದ ಮೂರನೇ ಬಿಜೆಪಿ ನಾಯಕ ಪವನ್ ಸಿಂಗ್.

Continue Reading

ಪ್ರಮುಖ ಸುದ್ದಿ

Accident News : 3.6 ಕೋಟಿ ರೂ. ಪಡೆದ ಬುಡಕಟ್ಟು ಸಮುದಾಯದ ಐಪಿಎಲ್ ಆಟಗಾರನಿಗೆ ಬೈಕ್ ಅವಘಡದಲ್ಲಿ ಗಾಯ

Accident News : ರಾಬಿಜ್​ ಮಿಂಜ್​ ಅವರನ್ನು ಗುಜರಾತ್​ ಟೈಟಲ್ಸ್​ ಮುಂದಿನ ಆವೃತ್ತಿಯ ಐಪಿಎಲ್​ಗಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

VISTARANEWS.COM


on

Robin Minz
Koo

ನವದೆಹಲಿ: ಐಪಿಎಲ್ 2024 ರ ಹರಾಜಿನಲ್ಲಿ ಸುದ್ದಿಯಾಗಿದ್ದ ಜಾರ್ಖಂಡ್​​ನ ಭರವಸೆಯ ಬುಡಕಟ್ಟು ಸಮುದಾಯದ ಕ್ರಿಕೆಟಿಗ ರಾಬಿನ್ ಮಿನ್ಜ್ ಅಪಘಾತಕ್ಕೊಳಗಾಗಿದ್ದಾರೆ (Accident News) ಎಂದು ಅವರ ತಂದೆ ಭಾನುವಾರ ತಿಳಿಸಿದ್ದಾರೆ. ಐಪಿಎಲ್​​ನ ಮಾಜಿ ಚಾಂಪಿಯನ್ ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ 21 ವರ್ಷದ ಮಿನ್ಜ್​ ಅವರನ್ನು 3.60 ಕೋಟಿ ರೂ.ಗೆ ಖರೀದಿಸಿದೆ. ವರದಿಯ ಪ್ರಕಾರ, ದೊಡ್ಡ ಹಿಟ್ಟಿಂಗ್ ಸಾಮರ್ಥ್ಯಗಳಿಗೆ ಹೆಸರುವಾಸಿಯಾದ ಮಿನ್ಜ್​, ಕವಾಸಕಿ ಸೂಪರ್ ಬೈಕ್ ಸವಾರಿ ಮಾಡುತ್ತಿದ್ದಾಗ ಮತ್ತೊಂದು ಬೈಕಿಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡಿದ್ದಾರೆ. ತಂದೆ ಫ್ರಾನ್ಸಿಸ್ ಮಿನ್ಜ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. “ರಾಬಿನ್ ಹೋಗುತತಿದ್ದ ಬೈಕ್ ಮತ್ತೊಂದು ಬೈಕಿಗೆ ಡಿಕ್ಕಿ ಹೊಡೆದಾಗ ನಿಯಂತ್ರಣ ಕಳೆದುಕೊಂಡಿದ್ದಾರೆ. ಗಂಭೀರ ಗಾಯವಾಗಿಲ್ಲ. ಫ್ರಾನ್ಸಿಸ್ ಹೇಳಿದ್ದಾರೆ.

ವರದಿಯ ಪ್ರಕಾರ, ಅಪಘಾತದಿಂದಾಗಿ ಬೈಕಿನ ಮುಂಭಾಗವು ತೀವ್ರವಾಗಿ ಹಾನಿಗೊಳಗಾಗಿದೆ. ಎಡಗೈ ಬ್ಯಾಟ್ಸ್ಮನ್ ಬಲ ಮೊಣಕಾಲಿಗೆ ಗಾಯಗಳಾಗಿವೆ. ದೊಡ್ಡ ಹಿಟ್ಟಿಂಗ್ ಸಾಮರ್ಥ್ಯಗಳಿಗೆ ಹೆಸರುವಾಸಿಯಾದ ಮಿನ್ಜ್ ಎಡಗೈ ಬ್ಯಾಟರ್​ ಮತ್ತು ಎಂಎಸ್ ಧೋನಿಯ ನಿಷ್ಠಾವಂತ ಅಭಿಮಾನಿ. ಅವರ ಕ್ರಿಕೆಟ್ ಪ್ರಯಾಣವನ್ನು ಅನುಭವಿ ತರಬೇತುದಾರ ಚಂಚಲ್ ಭಟ್ಟಾಚಾರ್ಯ ರೂಪಿಸಿದ್ದಾರೆ. ಅವರೇ ಭಾರತದ ಮಾಜಿ ನಾಯಕ ಧೋನಿಗೆ ಕೋಚಿಂಗ್​ ನೀಡಿದವರು.

ಮೂಲತಃ ಜಾರ್ಖಂಡ್​ನ ಗುಮ್ಲಾ ಜಿಲ್ಲೆಯವರಾದ ಮಿನ್ಜ್, ಯುನೈಟೆಡ್ ಕಿಂಗ್​ಡಮ್​ನಲ್ಲಿ ತರಬೇತಿಪಡೆದುಕೊಂಡಿದ್ದಾರೆ. ಪ್ರಸ್ತುತ ಜಾರ್ಖಂಡ್ ರಾಜಧಾನಿ ರಾಂಚಿಯ ನಾಮ್ಕುಮ್ ಪ್ರದೇಶದಲ್ಲಿ ವಾಸಿಸುತ್ತಿರುವ ಮಿಂಜ್, ರಣಜಿ ಟ್ರೋಫಿಯಲ್ಲಿ ಇನ್ನೂ ರಾಜ್ಯವನ್ನು ಪ್ರತಿನಿಧಿಸದಿದ್ದರೂ, ಜಾರ್ಖಂಡ್​ನ ಅಂಡರ್ 19 ಮತ್ತು ಅಂಡರ್ 25 ತಂಡಗಳ ಭಾಗವಾಗಿದ್ದಾರೆ.

ಇದನ್ನೂ ಓದಿ : WTC Ranking : ಭಾರತ ತಂಡವೀಗ ನಂಬರ್​ 1

ಅವರ ತಂದೆ ನಿವೃತ್ತ ಸೇನಾ ಸಿಬ್ಬಂದಿಯಾಗಿದ್ದು, ಈಗ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಮಿನ್ಜ್​ಗೆ ಇಬ್ಬರು ಸಹೋದರಿಯರು ಇದ್ದಾರೆ.

ಮುಂಬೈ ಇಂಡಿಯನ್ಸ್ , ಲಕ್ನೋ ಸೂಪರ್ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಸೇರಿದಂತೆ ವಿವಿಧ ಫ್ರಾಂಚೈಸಿಗಳೊಂದಿಗೆ ಮಿಂಚ್​ ಟ್ರಯಲ್ಸ್​ಗೆ ಒಳಗಾಗಿದ್ದರು. ಐಪಿಎಲ್ 2023 ಹರಾಜಿನಲ್ಲಿ ಮಾರಾಟವಾಗದಿದ್ದರೂ, ಮಿನ್ಜ್ ಹಾಲಿ ಆವೃತ್ತಿಯಲ್ಲಿ ಗಮನಾರ್ಹ ವೇತನವನ್ನು ಪಡೆದರು.

Continue Reading

ದೇಶ

Encounter In Kanker: ಛತ್ತೀಸ್‌ಗಢದಲ್ಲಿ ಮಾವೋವಾದಿಗಳೊಂದಿಗೆ ಎನ್‌ಕೌಂಟರ್‌; ಕಾನ್ಸ್‌ಟೇಬಲ್‌ ಹುತಾತ್ಮ

Encounter In Kanker: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಪೊಲೀಸ್ ಕಾನ್ಸ್‌ಟೇಬಲ್‌ ಹುತಾತ್ಮರಾಗಿದ್ದಾರೆ. ಜತೆಗೆ ಮಾವೋವಾದಿಯೊಬ್ಬ ಸಾವೀಗಿಡಾಗಿದ್ದಾನೆ.

VISTARANEWS.COM


on

Encounter In Kanker
Koo

ನವದೆಹಲಿ: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಭಾನುವಾರ ನಡೆದ ಎನ್‌ಕೌಂಟರ್‌ (Encounter In Kanker)ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ ಮತ್ತು ಮಾವೋವಾದಿ (Maoist) ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಛೋಟೆಬೆಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿಡೂರ್ ಗ್ರಾಮದ ಬಳಿಯ ಕಾಡಿನಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಅವರು ಹೇಳಿದರು.

ಹಿಡೂರ್ ಅರಣ್ಯದಲ್ಲಿ ಮಾವೋವಾದಿಗಳ ಅಡಗಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅಧಿಕಾರಿ ವಿವರಿಸಿದರು. ರಾಜ್ಯ ಪೊಲೀಸ್ ಘಟಕ ಬಸ್ತಾರ್ ಫೈಟರ್ಸ್‌ಗೆ ಸೇರಿದ ಕಾನ್ಸ್‌ಟೇಬಲ್‌ ರಮೇಶ್ ಕುರೇತಿ ಅವರು ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.

ಸ್ಥಳದಿಂದ ಮಾವೋವಾದಿಯ ಶವ ಮತ್ತು ಎಕೆ -47 ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು. ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿ ಮಾವೋವಾದಿಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ವಿಶೇಷ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆ್ಯಕ್ಷನ್‌ಗೆ ಸೇರಿದ ಇಬ್ಬರು ಸೇರಿದಂತೆ ಕೇಂದ್ರ ಮೀಸಲು ಪೊಲೀಸ್ ಪಡೆಯ ಮೂವರು ಸಿಬ್ಬಂದಿ ಮೃತಪಟ್ಟ ಒಂದು ತಿಂಗಳ ನಂತರ ಈ ಘಟನೆ ನಡೆದಿದೆ. 2021ರಲ್ಲಿ ಇಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ 23 ಸೈನಿಕರು ಹುತಾತ್ಮರಾಗಿದ್ದರು.

ಇದನ್ನೂ ಓದಿ: ಛತ್ತೀಸ್​ಗಢ್​​ನಲ್ಲಿ ಮತ್ತೆ ನಕ್ಸಲರ ಕ್ರೌರ್ಯ; ಬೆಟ್ಟದ ಬುಡದಲ್ಲಿ ಐಇಡಿ ಸ್ಫೋಟ, ಸಿಆರ್​ಪಿಎಫ್​​ನ ಇಬ್ಬರು ಯೋಧರಿಗೆ ಗಾಯ

Continue Reading

ದೇಶ

Andhra Train Accident: ಚಾಲಕ ಮೊಬೈಲ್‌ನಲ್ಲಿ ಕ್ರಿಕೆಟ್‌ ನೋಡುತ್ತಿದ್ದುದೇ ರೈಲು ದುರಂತಕ್ಕೆ ಕಾರಣ

Andhra Train Accident: ಕಳೆದ ವರ್ಷ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಆಂಧ್ರ ರೈಲು ದುರಂತದ ಕಾರಣ ಬಹಿರಂಗಗೊಂಡಿದೆ. ಚಾಲಕರಿಬ್ಬರು ಮೊಬೈಲ್‌ ವೀಕ್ಷಿಸುತ್ತಿದ್ದುದೇ ಈ ದುರಂತಕ್ಕೆ ಕಾರಣ ಎನ್ನುವ ಮಾಹಿತಿ ಹೊರ ಬಿದ್ದಿದೆ.

VISTARANEWS.COM


on

train accident
Koo

ನವದೆಹಲಿ: ಕಳೆದ ವರ್ಷ ಅಕ್ಟೋಬರ್‌ 29ರಂದು ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಸಂಭವಿಸಿದ ರೈಲು ದುರಂತಕ್ಕೆ (Andhra Train Accident) ಚಾಲಕ ಮತ್ತು ಸಹಾಯಕ ಮೊಬೈಲ್‌ ಫೋನ್‌ನಲ್ಲಿ ಕ್ರಿಕೆಟ್‌ ವೀಕ್ಷಿಸುತ್ತಿದ್ದುದೇ ಕಾರಣ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಶನಿವಾರ (ಮಾರ್ಚ್‌ 2) ತಿಳಿಸಿದರು. ಅಂದು ಎರಡು ರೈಲುಗಳು ಪರಸ್ಪರ ಡಿಕ್ಕಿ ಹೊಡೆದು ಸುಮಾರು 14 ಮಂದಿ ಮೃತಪಟ್ಟಿದ್ದರು. ಎರಡು ರೈಲಿನ ಪೈಕಿ ಒಂದರ ಚಾಲಕ ಮತ್ತು ಸಹಾಯಕ ಚಾಲಕ ಮೊಬೈಲ್‌ ಫೋನ್‌ನಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದರಿಂದ ಸಿಗ್ನಲ್‌ ಗಮನಿಸಿರಲಿಲ್ಲ. ಇದರಿಂದ ಈ ದುರಂತ ಸಂಭವಿಸಿದೆ ಎಂದು ಸಚಿವರು ವಿವರಿಸಿದರು.

ಅಂದು ಸಂಜೆ 7 ಗಂಟೆ ಸುಮಾರಿಗೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಕಂಟಕಪಲ್ಲಿಯ ಹೌರಾ-ಚೆನ್ನೈ ಮಾರ್ಗದಲ್ಲಿ ವಿಶಾಖಪಟ್ಟಣಂ-ಪಲಸಾ ವಿಶೇಷ ಪ್ಯಾಸೆಂಜರ್ ರೈಲು ತಾಂತ್ರಿಕ ದೋಷದಿಂದಾಗಿ ಸಿಗ್ನಲ್‌ಗೆ ಕಾಯುತ್ತಿದ್ದಾಗ ವಿಶಾಖಪಟ್ಟಣಂ-ರಾಯಗಢ ಪ್ಯಾಸೆಂಜರ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಪರಿಣಾಮ ಮೂರು ಬೋಗಿಗಳು ಹಳಿ ತಪ್ಪಿ 14 ಮಂದಿ ಮೃತಪಟ್ಟು 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು.

ಭಾರತೀಯ ರೈಲ್ವೆ ಅಳವಡಿಸಿಕೊಳ್ಳುತ್ತಿರುವ ಹೊಸ ಸುರಕ್ಷತಾ ಕ್ರಮಗಳ ಬಗ್ಗೆ ಮಾತನಾಡುವ ವೇಳೆ ಅಶ್ವಿನಿ ವೈಷ್ಣವ್ ಆಂಧ್ರ ರೈಲು ಅಪಘಾತವನ್ನು ಉಲ್ಲೇಖಿಸಿದರು. “ಆಂಧ್ರಪ್ರದೇಶದಲ್ಲಿ ಅಕ್ಟೋಬರ್‌ 29ರಂದು ನಡೆದ ರೈಲು ಅಪಘಾತಕ್ಕೆ ಚಾಲಕ ಮತ್ತು ಸಹಾಕನ ನಿರ್ಲಕ್ಷ್ಯವೇ ಕಾರಣ. ಅಂದು ಅವರು ಮೊಬೈಲ್‌ನಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದರು. ಈಗ ನಾವು ಅಂತಹ ಪರಿಸ್ಥಿತಿಯಿಂದ ಹೇಗೆ ಪಾರಾಗಬಹುದು ಎನ್ನುವುದರ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಪೈಲಟ್‌ ಮತ್ತು ಸಹಾಯಕ ಪೈಲಟ್‌ ವಿಚಲಿತರಾಗದೆ ರೈಲನ್ನು ಓಡಿಸುವತ್ತ ಸಂಪೂರ್ಣ ಗಮನ ಹರಿಸಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದೇವೆʼʼ ಎಂದು ತಿಳಿಸಿದರು.

ಸುರಕ್ಷತೆಗೆ ಆದ್ಯತೆ

“ನಾವು ರೈಲು ಪ್ರಯಾಣದ ಸುರಕ್ಷತೆಯ ಮೇಲೆ ಗಮನ ಕೇಂದ್ರೀಕರಿಸುವುದನ್ನು ಮುಂದುವರಿಸುತ್ತೇವೆ. ಪ್ರತಿ ಘಟನೆಯ ಮೂಲ ಕಾರಣವನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತೇವೆ ಮತ್ತು ಅದು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತೇವೆʼʼ ಎಂದು ಸಚಿವರು ಭರವಸೆ ನೀಡಿದರು. ರೈಲ್ವೆ ಸುರಕ್ಷತಾ ಆಯುಕ್ತರು (CRS) ನಡೆಸಿದ ತನಿಖಾ ವರದಿಯನ್ನು ಇನ್ನೂ ಬಹಿರಂಗವಾಗಿಲ್ಲ. ಅದಾಗ್ಯೂ ಪ್ರಾಥಮಿಕ ತನಿಖೆಯು, ರಾಯಗಡ ಪ್ಯಾಸೆಂಜರ್ ರೈಲಿನ ಚಾಲಕ ಮತ್ತು ಸಹಾಯಕ ಚಾಲಕ ನಿಯಮಗಳನ್ನು ಉಲ್ಲಂಘಿಸಿ ಎರಡು ದೋಷಯುಕ್ತ ಆಟೋ ಸಿಗ್ನಲ್‌ಗಳನ್ನು ಹಾದು ಹೋಗಿದ್ದರಿಂದ ಅವಘಡ ನಡೆದಿದೆ ಎನ್ನುವುದನ್ನು ತಿಳಿಸಿದೆ. ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದರು.

ಇದನ್ನೂ ಓದಿ: Andhra Train Accident: ಆಂಧ್ರಪ್ರದೇಶ ರೈಲು ಅಪಘಾತದಲ್ಲಿ ಮಡಿದವರ ಸಂಖ್ಯೆ 13ಕ್ಕೆ ಏರಿಕೆ, ಮೃತರಿಗೆ 12 ಲಕ್ಷ ರೂ. ಪರಿಹಾರ

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಒಡಿಶಾ ದುರಂತ

ಇದಲ್ಲದೆ ಕಳೆದ ವರ್ಷ ಒಡಿಶಾದಲ್ಲೂ ಭೀಕರ ರೈಲು ದುರಂತ ಸಂಭವಿಸಿತ್ತು. ಜೂನ್ 2ರಂದು ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 288 ಜನರು ಸಾವನ್ನಪ್ಪಿದ್ದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ದೋಷದಿಂದ ಈ ದುರಂತ ಸಂಭವಿಸಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Shehbaz Shariff
ಪ್ರಮುಖ ಸುದ್ದಿ10 mins ago

Pakistan Prime Minster : ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆ

Nathan Lyon
ಕ್ರೀಡೆ19 mins ago

Nathan Lyon: ಬ್ಯಾಟಿಂಗ್​ನಲ್ಲಿ ವಿಶ್ವ ದಾಖಲೆ ಬರೆದ ಬೌಲರ್​ ನಥಾನ್​ ಲಿಯೋನ್

Murder Case Son kills Mother
ಕ್ರೈಂ21 mins ago

Murder Case: ಹಣಕ್ಕಾಗಿ ತಾಯಿಯನ್ನೇ ಪೀಡಿಸುತ್ತಿದ್ದ ಧೂರ್ತ; ಕೊನೆಗೆ ಅಮ್ಮನ ಕೊಂದು ತಾನೂ ಸತ್ತ

Murder Case _ Shootout
ಉಡುಪಿ31 mins ago

Murder Case : ಒಂಟಿ ಮನೆಯಲ್ಲಿ ಫೈರಿಂಗ್‌ ಸೌಂಡ್‌, ನಿಗೂಢವಾಗಿ ಕೊಲೆ ಮಾಡಿ ಹೋದವರು ಯಾರು?

Pawan Singh
ಪ್ರಮುಖ ಸುದ್ದಿ39 mins ago

BJP candidate list : ಬಿಜೆಪಿ ಟಿಕೆಟ್ ತಿರಸ್ಕರಿಸಿದ ಭೋಜಪುರಿ ಗಾಯಕ ಪವನ್ ಸಿಂಗ್​

Mother attack to child
ಬೆಂಗಳೂರು1 hour ago

Bengaluru News : ಛೇ.. ಇವಳೆಂಥಾ ತಾಯಿ? ಬುದ್ಧಿ ಕಲಿಸಲು 3 ವರ್ಷದ ಮಗುವನ್ನು ಕೂಡಿಹಾಕಿದ್ದಳಂತೆ!

Robin Minz
ಪ್ರಮುಖ ಸುದ್ದಿ1 hour ago

Accident News : 3.6 ಕೋಟಿ ರೂ. ಪಡೆದ ಬುಡಕಟ್ಟು ಸಮುದಾಯದ ಐಪಿಎಲ್ ಆಟಗಾರನಿಗೆ ಬೈಕ್ ಅವಘಡದಲ್ಲಿ ಗಾಯ

Elephant Attack New
ಕೊಡಗು1 hour ago

Elephant Attack : ನಿಶಾನಿ ಬೆಟ್ಟದಲ್ಲಿ ಆನೆ ದಾಳಿಗೆ ವೃದ್ಧ ಬಲಿ; ಟ್ರೆಕಿಂಗ್‌ಗೆ ಹೋದವರಿಗೆ ಕಂಡಿತು ಶವ

Yuva Rajkumar And Shiva Rajkumar Dance Together obbane shiva song
ಸ್ಯಾಂಡಲ್ ವುಡ್1 hour ago

Yuva Movie: ಡ್ಯಾನ್ಸ್ ಮೂವ್ಸ್‌ನಲ್ಲಿ ಕಿಚ್ಚು ಹಚ್ಚಿದ ದೊಡ್ಮನೆ ಕುಡಿಗಳು: ಯಾರು ಬೆಸ್ಟ್?

Team India
ಕ್ರೀಡೆ2 hours ago

WTC Ranking : ಭಾರತ ತಂಡವೀಗ ನಂಬರ್​ 1

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for march 3rd 2024
ಭವಿಷ್ಯ10 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು22 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು1 day ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು2 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ5 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ಟ್ರೆಂಡಿಂಗ್‌