ವಿಸ್ತಾರ ಸಂಪಾದಕೀಯ: ಚೀನಾದ ತಗಾದೆಗೆ ಭಾರತದ ಉತ್ತರ ಒಂದೇ- ಅರುಣಾಚಲ ನಮ್ಮದು - Vistara News

ದೇಶ

ವಿಸ್ತಾರ ಸಂಪಾದಕೀಯ: ಚೀನಾದ ತಗಾದೆಗೆ ಭಾರತದ ಉತ್ತರ ಒಂದೇ- ಅರುಣಾಚಲ ನಮ್ಮದು

ಚೀನಾ ಏನು ಬೇಕಿದ್ದರೂ ಹೇಳಲಿ, ಅರುಣಾಚಲ ಪ್ರದೇಶ ನಮ್ಮದೆಂಬ ಭಾರತದ ನಿಲುವಿನಲ್ಲೇನೂ ಬದಲಾವಣೆಯಿಲ್ಲ. 1962ರಲ್ಲಿ ನಡೆದ ಯುದ್ಧದಲ್ಲಿ ಅರುಣಾಚಲ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿತ್ತು. ಆದರೆ 2019ರಲ್ಲಿ ನಡೆದ ಗಲ್ವಾನ್‌ ಗಡಿ ಚಕಮಕಿಯಲ್ಲಿ ಚೀನಾಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ.

VISTARANEWS.COM


on

Arunachal Pradesh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

“ಅರುಣಾಚಲ ಪ್ರದೇಶ (Arunachal Pradesh) ಭೌಗೋಳಿಕವಾಗಿ ತನ್ನ ಗಡಿಗೇ ಸೇರಿದ್ದು” ಎಂದು ಚೀನಾ ಮತ್ತೊಮ್ಮೆ ಪ್ರತಿಪಾದಿಸಿದೆ. ಈ ಹಿಂದೆಯೂ ಚೀನಾ ಹೀಗೆ ಪ್ರತಿಪಾದಿಸಿತ್ತು. ನಿನ್ನೆಯಷ್ಟೇ ಅಮೆರಿಕದ ವಿದೇಶಾಂಗ ಇಲಾಖೆ, “ಅರುಣಾಚಲ ಪ್ರದೇಶ ಭಾರತಕ್ಕೆ ಸೇರಿದ್ದು” ಎಂದು ಹೇಳಿತ್ತು. ಈ ಅಂತಾರಾಷ್ಟ್ರೀಯ ಬೆಂಬಲದಿಂದ ಸಂತೋಷಗೊಂಡಿರುವ ಭಾರತವನ್ನು ಚುಚ್ಚಲೆಂದೇ ಚೀನಾ ಮತ್ತೊಮ್ಮೆ ಅರುಣಾಚಲದ ವಿಷಯ ಎತ್ತಿದೆ. ಹಿಂದೆಯೂ “ಚೀನಾದ ಈ ನಿಲುವು ಅಸಂಬದ್ಧ ಹಾಗೂ ಹಾಸ್ಯಾಸ್ಪದ” ಎಂದು ಭಾರತ ತಳ್ಳಿಹಾಕಿತ್ತು. ಈಗಲೂ ಅದನ್ನೇ ಪುನರುಚ್ಚರಿಸಿದೆ. ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ನೀಡಿದ್ದ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್, ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸುವ ಮಾತಾಡಿದ್ದಾರೆ. “ಚೀನಾದ ಹೇಳಿಕೆಯಲ್ಲಿ ಹೊಸದೇನಿಲ್ಲ. ಅದು ಇಂದಿಗೂ ಹಾಸ್ಯಾಸ್ಪದವೇ ಆಗಿದೆ” ಎಂದು ಜೈಶಂಕರ್ ಹೇಳಿದ್ದರು.

ಅರುಣಾಚಲ ಪ್ರದೇಶ ಭಾರತಕ್ಕೇ ಸೇರಿದ್ದು ಎಂದು ಸ್ಪಷ್ಟವಾಗಿ ಗೊತ್ತಿದ್ದರೂ ಚೀನಾ ಮತ್ತೆ ಮತ್ತೆ ಆ ಪ್ರದೇಶದ ಬಗೆಗೆ ಹಕ್ಕು ಸಾಧಿಸುವ ಮಾತುಗಳನ್ನಾಡದೇ ಬಿಡುವುದಿಲ್ಲ. ಅದರ ಜೊತೆಗೆ ಇನ್ನೂಕೆಲವಷ್ಟು ಚೇಷ್ಟೆಗಳನ್ನೂ ಅದು ಮಾಡುತ್ತದೆ. ಉದಾಹರಣೆಗೆ 2023ರ ಏಪ್ರಿಲ್‌ನಲ್ಲಿ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ ಮಾಡಿತ್ತು. ಹೆಸರು ಬದಲಿಸಿದ 11 ಸ್ಥಳಗಳು ಇರುವ ಒಟ್ಟಾರೆ ಪ್ರದೇಶವನ್ನು ಚೀನಾ ದಕ್ಷಿಣ ಟಿಬೆಟ್ ಎಂದು ಕರೆದಿದೆ. ಪರ್ವತ ಶ್ರೇಣಿಗಳು, ನದಿಗಳು, ಜನವಸತಿ ಪ್ರದೇಶಗಳ ಹೆಸರುಗಳ ಬದಲಾವಣೆ ಮಾಡಿರುವ ಆ ದೇಶ, ಇಷ್ಟು ದಿನ ಇದ್ದ ಹೆಸರನ್ನು ತೆಗೆದುಹಾಕಿ ಚೀನಿ ಭಾಷೆಯ ನಾಮಕರಣ ಮಾಡಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ದೇಶ ಹೀಗೆ ಹೆಸರು ಬದಲಾವಣೆಯ ಅಧಿಕಪ್ರಸಂಗತನ ತೋರುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ 2017ರ ಏಪ್ರಿಲ್ನಲ್ಲಿ 6 ಮತ್ತು 2021ರ ಡಿಸೆಂಬರ್ನಲ್ಲಿ 15 ಪ್ರದೇಶಗಳ ಹೆಸರನ್ನು ಏಕಪಕ್ಷೀಯವಾಗಿ ನಿರ್ಣಯ ಮಾಡಿ ಬದಲಿಸಿತ್ತು. ನಂತರ ಕಳೆದ ವರ್ಷ ಆಗಸ್ಟ್‌ನಲ್ಲಿ ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯ ಬಿಡುಗಡೆ ಮಾಡಿದ ನಕ್ಷೆಯಲ್ಲಿ ಅರುಣಾಚಲ ಪ್ರದೇಶದ ಹಲವು ಪ್ರದೇಶಗಳನ್ನು ತನ್ನ ವ್ಯಾಪ್ತಿಯೊಳಗೆ ತೋರಿಸಿಕೊಂಡಿತ್ತು. ಇದರಲ್ಲಿ ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರಕ್ಕೆ ಸಮೀಪದ ಪಟ್ಟಣವೂ ಸೇರಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಚಂದ್ರಯಾನ 3 ಇಳಿದ ಜಾಗವೀಗ ‘ಶಿವಶಕ್ತಿ’;‌ ದೇಶದ ಸಾಧನೆ ಚಿರಾಯು

ಇವೆಲ್ಲವನ್ನೂ ಮಾಡುತ್ತಿರುವುದು ಚೀನಾದ ಹತಾಶೆಯ ಪ್ರತೀಕ. ಯಾಕೆಂದರೆ, ಅರುಣಾಚಲ ಪ್ರದೇಶದಲ್ಲಿ ಎನ್‌ಡಿಎ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಇಲ್ಲಿನ ಪೌರರಿಗೆ ಸುಗಮ ಬದುಕಿಗೆ ಅವಶ್ಯವಾದ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಇಲ್ಲಿನ ಗಡಿ ಪ್ರದೇಶಗಳಿಗೆ ಕ್ಷಿಪ್ರವಾಗಿ ಧಾವಿಸಬಲ್ಲ ಸರ್ವಋತು ರಸ್ತೆಗಳನ್ನು ನಿರ್ಮಿಸುತ್ತಿದೆ. ಇತ್ತೀಚೆಗೆ ಲೋಕಾರ್ಪಣೆಯಾದ ಸೆಲಾ ಸುರಂಗ ಅವುಗಳಲ್ಲಿ ಒಂದು. ಇದನ್ನು ಸ್ವತಃ ಪ್ರಧಾನಿ ಮೋದಿ ಅಲ್ಲಿಗೆ ತೆರಳಿ ಉದ್ಘಾಟಿಸಿದ್ದಾರೆ. ತವಾಂಗ್‌ ಪ್ರದೇಶದಲ್ಲಿ ಈ ಸುರಂಗವು ಸಂಪರ್ಕ ಕಲ್ಪಿಸಲಿದೆ. ಇದರಿಂದ ತವಾಂಗ್‌ ಪ್ರದೇಶದಲ್ಲಿ ಭಾರತೀಯ ಸೇನೆಯು ಹೆಚ್ಚು ನಿಗಾ ಇರಿಸಲು ಸಾಧ್ಯವಾಗಲಿದೆ. ಚಳಿಗಾಲದಲ್ಲಿ ಗಡಿಯಲ್ಲಿ ಯಾವುದೇ ತುರ್ತು ಸಂದರ್ಭ ಎದುರಾದರೆ, ಸೇನೆಯು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಲು ಸುರಂಗವು ಅನುಕೂಲ ಕಲ್ಪಿಸಲಿದೆ. ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಕ್ಷಿಪ್ರವಾಗಿ ನಿಯೋಜಿಸಲು, ಶಸ್ತ್ರಾಸ್ತ್ರಗಳನ್ನು ಸಾಗಿಸಲು ಕೂಡ ಅನುಕೂಲವಾಗಲಿದೆ. ಇವೆಲ್ಲವೂ ಚೀನಾವನ್ನು ಕೆರಳಿಸಿದೆ.

ಚೀನಾ ಏನು ಬೇಕಿದ್ದರೂ ಹೇಳಲಿ, ಅರುಣಾಚಲ ಪ್ರದೇಶ ನಮ್ಮದೆಂಬ ಭಾರತದ ನಿಲುವಿನಲ್ಲೇನೂ ಬದಲಾವಣೆಯಿಲ್ಲ. 1962ರಲ್ಲಿ ನಡೆದ ಯುದ್ಧದಲ್ಲಿ ಅರುಣಾಚಲ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿತ್ತು. ಆದರೆ 2019ರಲ್ಲಿ ನಡೆದ ಗಲ್ವಾನ್‌ ಗಡಿ ಚಕಮಕಿಯಲ್ಲಿ ಚೀನಾಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. 1962ರ ಭಾರತಕ್ಕೂ 2024ರ ಭಾರತಕ್ಕೂ ವ್ಯತ್ಯಾಸವಿದೆ. ಗಡಿಯಲ್ಲಿ ಹಾಗೂ ಮಿಲಿಟರಿಯಲ್ಲಿ ಸಕಲ ಸನ್ನದ್ಧತೆಯೇ ಇಂದಿನ ಭಾರತದ ಸ್ವಾಭಿಮಾನ, ಸಾರ್ವಭೌಮತೆಗೆ ಕಾರಣ. ಲಕ್ಷದ್ವೀಪದಲ್ಲಿ ಸೇನಾ ನೆಲೆ ಸ್ಥಾಪಿಸುವ ಮೂಲಕ ಚೀನಾದ ಸಾಗರ ವಿಸ್ತರಣೆಗೆ ಭಾರತ ಪರೋಕ್ಷ ಉತ್ತರವನ್ನೂ ನೀಡಿದೆ. ಹೀಗೆ ವ್ಯೂಹಾತ್ಮಕ ಸನ್ನದ್ಧತೆ ಹಾಗೂ ರಾಜನೈತಿಕತೆ- ಎರಡೂ ಹಾದಿಗಳಲ್ಲಿ ಭಾರತದ ಉಪಕ್ರಮಗಳು ಚೀನಾವನ್ನು ಪರಿಣಾಮಕಾರಿಯಾಗಿ ಎದುರಿಸಿವೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Narendra Modi: ರಾಮಲಲ್ಲಾನಿಗೆ ಮೋದಿ ಸಾಷ್ಟಾಂಗ ನಮಸ್ಕಾರ; ಇಲ್ಲಿವೆ ಅಯೋಧ್ಯೆ ಭೇಟಿ Photos

Narendra Modi: Narendra Modi: ರಾಮಲಲ್ಲಾ ದರ್ಶನ ಪಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್‌ ಶೋ ಕೈಗೊಳ್ಳುತ್ತಿದ್ದಾರೆ. ಸುಗ್ರೀವ ಕೋಟೆಯಿಂದ ಪ್ರಾರಂಭವಾಗಿ ಲತಾ ಚೌಕ್‌ವರೆಗೆ ಮೋದಿ ರೋಡ್‌ ಶೋ ಕೈಗೊಂಡರು. ನರೇಂದ್ರ ಮೋದಿ ಅವರು ಸಾಗುವ ದಾರಿಯುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲ್ಲೆಡೆ ಜೈಶ್ರೀರಾಮ್‌ ಎಂಬ ಘೋಷಣೆಗಳು ಮೊಳಗಿದವು.

VISTARANEWS.COM


on

Narendra Modi
Koo

ಅಯೋಧ್ಯೆ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ, ದೇಶಾದ್ಯಂತ ಸಾಲು ರ‍್ಯಾಲಿಗಳ ಭರಾಟೆಯ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಯೋಧ್ಯೆಗೆ ತೆರಳಿ, ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಕಳೆದ ಜನವರಿ 22ರಂದು ರಾಮಮಂದಿರದಲ್ಲಿ (Ram Mandir) ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ್ದ ನರೇಂದ್ರ ಮೋದಿ ಅವರೀಗ ಮತ್ತೆ ಅಯೋಧ್ಯೆಗೆ ತೆರಳಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಇದೇ ವೇಳೆ ಅವರು ರಾಮಲಲ್ಲಾನಿಗೆ ವಿಶೇಷ ಪೂಜೆ ಸಲ್ಲಿಸುವ ಜತೆಗೆ ದೀರ್ಘದಂಡ ನಮಸ್ಕಾರ ಹಾಕಿದರು.

ಕಳೆದ ಜನವರಿ 22ರಂದು ನರೇಂದ್ರ ಮೋದಿ ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ಮಾಡಿದ ಬಳಿಕ ಮಾಡಿದ ಬಳಿಕ ರಾಮಮಂದಿರಕ್ಕೆ ಮೊದಲ ಬಾರಿ ಭೇಟಿ ನೀಡಿದರು.

ರಾಮನಗರಿ ಅಯೋಧ್ಯೆಯಲ್ಲಿ ಭರ್ಜರಿ ರೋಡ್‌ ಶೋ ಕೈಗೊಳ್ಳುವ ಮೊದಲು ಮೋದಿ ಅವರು ರಾಮಲಲ್ಲಾನಿಗೆ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಮೋದಿ ಭೇಟಿ ಹಿನ್ನೆಲೆಯಲ್ಲಿ ರಾಮಮಂದಿರದ ಸುತ್ತ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಅಯೋಧ್ಯೆ ಭೇಟಿ ನೀಡುವ ಮೊದಲು ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ದೌರಾಹ್ರ ಲೋಕಸಭೆ ಕ್ಷೇತ್ರದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡರು.

ರಾಮಲಲ್ಲಾ ದರ್ಶನದ ಬಳಿಕ ಮೋದಿ ಅವರು ಅಯೋಧ್ಯೆಯಲ್ಲಿ ಸುಮಾರು ಎರಡು ಕಿಲೋಮೀಟರ್‌ವರೆಗೆ ರೋಡ್‌ ಶೋ ನಡೆಸಿದರು. ಮಾರ್ಗದುದ್ದಕ್ಕೂ ನೆರೆದಿದ್ದ ಜನ ಹೂಮಳೆ ಸುರಿಸಿ ಅಭಿಮಾನ ಮೆರೆದರು.

ರೋಡ್‌ ಶೋಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಕೂಡ ಸಾಥ್‌ ನೀಡಿದ್ದಾರೆ. ಇನ್ನು, ರೋಡ್‌ ಶೋ ಉದ್ದಕ್ಕೂ ಜನ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರು.

ಉತ್ತರ ಪ್ರದೇಶದಲ್ಲಿ ಮೂರನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, 10 ಲೋಕಸಭಾ ಕ್ಷೇತ್ರದಲ್ಲಿ ಮೇ 7 ಮತದಾನ ನಡೆಯಲಿದೆ. ಅಯೋಧ್ಯೆಯಲ್ಲಿ ಮೇ 20ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ.

ಇದನ್ನೂ ಓದಿ: Narendra Modi: ಮತಬ್ಯಾಂಕ್‌ ಗುತ್ತಿಗೆದಾರರ ಸ್ನೇಹಕ್ಕೆ ಮುಸ್ಲಿಮರು ವಿದಾಯ; ಕಾಂಗ್ರೆಸ್‌ಗೆ ಮೋದಿ ಟಾಂಗ್!

Continue Reading

ದೇಶ

Narendra Modi: ಮತಬ್ಯಾಂಕ್‌ ಗುತ್ತಿಗೆದಾರರ ಸ್ನೇಹಕ್ಕೆ ಮುಸ್ಲಿಮರು ವಿದಾಯ; ಕಾಂಗ್ರೆಸ್‌ಗೆ ಮೋದಿ ಟಾಂಗ್!

Narendra Modi: ಉತ್ತರ ಪ್ರದೇಶದ ದೌರಾಹ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರ‍್ಯಾಲಿ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, “ದೇಶದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಯಾವುದೇ ಜಾತಿ, ಧರ್ಮದ ತಾರತಮ್ಯ ಇಲ್ಲದೆ ಜನರಿಗೆ ತಲುಪುತ್ತಿವೆ. ಮುಸ್ಲಿಂ ಸಹೋದರ-ಸಹೋದರಿಯರು ಕೂಡ ನೋಡುತ್ತಿದ್ದಾರೆ. ಪಿಎಂ ಆವಾಸ್‌ ಯೋಜನೆ, ಉಜ್ವಲ ಯೋಜನೆ ಸೇರಿ ಎಲ್ಲ ಯೋಜನೆಗಳ ಸೌಲಭ್ಯಗಳು ಮುಸ್ಲಿಮರಿಗೂ ತಲುಪುತ್ತಿವೆ” ಎಂದು ತಿಳಿಸಿದರು.

VISTARANEWS.COM


on

Narendra Modi
Koo

ಲಖನೌ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಮೇ 5) ಉತ್ತರ ಪ್ರದೇಶದಲ್ಲಿ (Uttar Pradesh) ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ದೌರಾಹ್ರದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಅದರಲ್ಲೂ, “ಮುಸ್ಲಿಮರು ಈಗ ಮತಬ್ಯಾಂಕ್‌ನ ಗುತ್ತಿಗೆದಾರರಿಂದ ಪ್ರತ್ಯೇಕವಾಗಿದ್ದಾರೆ. ಅವರು ಅಭಿವೃದ್ಧಿಯ ಪರವಾಗಿದ್ದಾರೆ” ಎಂದು ಕಾಂಗ್ರೆಸ್‌ಗೆ ಮೋದಿ ಟಾಂಗ್‌ ಕೊಟ್ಟರು.

“ದೇಶದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಯಾವುದೇ ಜಾತಿ, ಧರ್ಮದ ತಾರತಮ್ಯ ಇಲ್ಲದೆ ಜನರಿಗೆ ತಲುಪುತ್ತಿವೆ. ಮುಸ್ಲಿಂ ಸಹೋದರ-ಸಹೋದರಿಯರು ಕೂಡ ನೋಡುತ್ತಿದ್ದಾರೆ. ಪಿಎಂ ಆವಾಸ್‌ ಯೋಜನೆ, ಉಜ್ವಲ ಯೋಜನೆ ಸೇರಿ ಎಲ್ಲ ಯೋಜನೆಗಳ ಸೌಲಭ್ಯಗಳು ಮುಸ್ಲಿಮರಿಗೂ ತಲುಪುತ್ತಿವೆ. ಯಾವುದೇ ಭೇದ-ಭಾವ ಇಲ್ಲದೆ, ಪ್ರತಿಯೊಬ್ಬರಿಗೂ ಯೋಜನೆಗಳು ತಲುಪುತ್ತವೆ. ಹಾಗಾಗಿ, ಮುಸ್ಲಿಮರು ಕೂಡ ಮತಬ್ಯಾಂಕ್‌ನ ಗುತ್ತಿಗೆದಾರರ ಸಹವಾಸ ಬಿಟ್ಟಿದ್ದಾರೆ” ಎಂದು ಹೇಳಿದರು.

“ಮುಸ್ಲಿಮರನ್ನು ಕಾಂಗ್ರೆಸ್‌ ಸೇರಿ ಇಂಡಿಯಾ ಒಕ್ಕೂಟದ ಪಕ್ಷಗಳು ಮತಬ್ಯಾಂಕ್‌ಗಾಗಿ ಬಳಸಿಕೊಂಡವು. ಆದರೆ, ಈಗ ಮುಸ್ಲಿಮರು ಅಂತ ತುಷ್ಟೀಕರಣದ ಕುತಂತ್ರದಿಂದ ಹೊರಬಂದಿದ್ದಾರೆ. ಆದರೆ, ಕಾಂಗ್ರೆಸ್‌ ಸೇರಿ ಇಂಡಿಯಾ ಒಕ್ಕೂಟದ ಪಕ್ಷಗಳು ಮಾತ್ರ ಈಗಲೂ ಓಲೈಕೆಯಲ್ಲಿಯೇ ತೊಡಗಿವೆ. ಮುಸ್ಲಿಮರನ್ನು ಮತ ಬ್ಯಾಂಕ್‌ಗಾಗಿಯೇ ಬಳಸಿಕೊಳ್ಳಲು ಯತ್ನಿಸುತ್ತಿವೆ. ಇದೇ ಕಾರಣಕ್ಕಾಗಿಯೇ, ಮುಸ್ಲಿಂ ಲೀಗ್‌ನ ಪ್ರತಿರೂಪದಂತಿರುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ” ಎಂಬುದಾಗಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

“2014ಕ್ಕಿಂತ ಮೊದಲು ದೇಶದಲ್ಲಿ ತುಷ್ಟೀಕರಣದ ಆಡಳಿತ ನಡೆಯುತ್ತಿತ್ತು. ಉಗ್ರವಾದದ ವಿರುದ್ಧ ಕ್ರಮ ತೆಗೆದುಕೊಳ್ಳಲು ತನಿಖಾ ಸಂಸ್ಥೆಗಳಿಗೆ ಅಧಿಕಾರವೇ ಇರಲಿಲ್ಲ. ಇನ್ನು, ಸಮಾಜವಾದಿ ಪಕ್ಷವಂತೂ ಉಗ್ರರ ವಿರುದ್ಧದ ಪ್ರಕರಣಗಳನ್ನು ವಾಪಸ್‌ ಪಡೆಯುತ್ತಿತ್ತು. ಆದರೀಗ ಉಗ್ರರನ್ನು ಹೆಡೆಮುರಿ ಕಟ್ಟಲಾಗುತ್ತಿದೆ. ನನಗೆ ಕುಟುಂಬ ಇಲ್ಲ. ಆದರೆ, ದೇಶದ ಜನರೇ ನನ್ನ ಕುಟುಂಬ. ಜನರ ಏಳಿಗೆಗಾಗಿ, ವಿಕಸಿತ ಭಾರತದ ನಿರ್ಮಾಣಕ್ಕಾಗಿ ನಾನು ನಿರಂತರವಾಗಿ ಶ್ರಮಿಸುತ್ತೇನೆ” ಎಂದರು.

ಇದನ್ನೂ ಓದಿ: Pralhad Joshi: ಕಾಂಗ್ರೆಸ್‌ನಿಂದ ಮೋದಿ ಎಂಬ ಆಕಾಶಕ್ಕೆ ಉಗುಳೋ ಕೃತ್ಯ: ಪ್ರಲ್ಹಾದ್ ಜೋಶಿ

Continue Reading

ದೇಶ

ಪಿಒಕೆ ನಮ್ಮದು ಎಂದಿದ್ದಕ್ಕೆ ಪಾಕ್ ಬಳೆ ತೊಟ್ಟಿಲ್ಲ ಎಂದ ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ!‌ ಇವರ ಬೆಂಬಲ ಯಾರಿಗೆ?

ಪಿಒಕೆ ನಾಗರಿಕರೇ ಭಾರತದೊಂದಿಗೆ ವಿಲೀನವಾಗಲು ಬಯಸುತ್ತಿದ್ದಾರೆ. ಪಿಒಕೆ ಮೊದಲು ಕೂಡ ನಮ್ಮದಾಗಿತ್ತು. ಮುಂದೆಯೂ ನಮ್ಮದಾಗಿ ಇರಲಿದೆ. ಹಾಗಂತ, ಪಿಒಕೆಗೆ ಸೈನಿಕರನ್ನೇ ಕಳುಹಿಸಬೇಕಾಗಿಲ್ಲ. ಅಲ್ಲಿನ ಜನರೇ, ಭಾರತದೊಂದಿಗೆ ವಿಲೀನವಾಗಲು ಬಯಸುತ್ತಿದ್ದಾರೆ ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಫಾರೂಕ್‌ ಅಬ್ದುಲ್ಲಾ, ಪಾಕಿಸ್ತಾನವೇನೂ ಬಳೆ ತೊಟ್ಟುಕೊಂಡು ಕೂತಿಲ್ಲ ಎಂದು ಹೇಳಿದ್ದಾರೆ.

VISTARANEWS.COM


on

Farooq Abdullah
Koo

ಶ್ರೀನಗರ: ಲೋಕಸಭೆ ಚುನಾವಣೆ (Lok Sabha Election 2024) ಹೊತ್ತಿನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರ (PoK) ಕುರಿತು ಮಹತ್ವದ ಚರ್ಚೆಯೊಂದು ಶುರುವಾಗಿದೆ. “ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತ ವಶಪಡಿಸಿಕೊಳ್ಳುವುದು, ಸೇನೆಯನ್ನು ನುಗ್ಗಿಸಿ ವಾಪಸ್‌ ಪಡೆಯುವುದು ಬೇಕಾಗಿಲ್ಲ. ಅಲ್ಲಿನ ಜನರೇ ಭಾರತದ ಜತೆ ವಿಲೀನವಾಗಲು ಬಯಸುತ್ತಿದ್ದಾರೆ” ಎಂಬುದಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಹೇಳಿದ್ದಾರೆ. ಇನ್ನು ಇದಕ್ಕೆ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ (Farooq Abdullah) ಪ್ರತಿಕ್ರಿಯಿಸಿದ್ದು, “ಭಾರತ ಆಕ್ರಮಣ ಮಾಡುವುದು ಬೇಕಾಗಿಲ್ಲ. ಪಾಕಿಸ್ತಾನವೇನೂ ಬಳೆ ತೊಟ್ಟಿಲ್ಲ” ಎಂದು ಹೇಳಿದ್ದಾರೆ. ಇದು ಈಗ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.

ರಾಜನಾಥ್‌ ಸಿಂಗ್‌ ಹೇಳಿದ್ದೇನು?

ಪಿಟಿಐಗೆ ಸಂದರ್ಶನ ನೀಡುವ ವೇಳೆ ರಾಜನಾಥ್‌ ಸಿಂಗ್‌ ಹೇಳಿಕೆ ನೀಡಿದ್ದರು. “ಪಿಒಕೆ ವಿಚಾರದಲ್ಲಿ ಭಾರತ ಏನೂ ಮಾಡಬೇಕಿಲ್ಲ. ಜಮ್ಮು-ಕಾಶ್ಮೀರದ ಪರಿಸ್ಥಿತಿ ಬದಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸುವ ಜತೆಗೆ ಆರ್ಥಿಕ ಪ್ರಗತಿಯಾಗುತ್ತಿದೆ. ಇದರಿಂದಾಗಿ ನಾವು ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಬೇಕಿಲ್ಲ. ಪಿಒಕೆ ನಾಗರಿಕರೇ ಭಾರತದೊಂದಿಗೆ ವಿಲೀನವಾಗಲು ಬಯಸುತ್ತಿದ್ದಾರೆ. ಪಿಒಕೆ ಮೊದಲು ಕೂಡ ನಮ್ಮದಾಗಿತ್ತು. ಮುಂದೆಯೂ ನಮ್ಮದಾಗಿ ಇರಲಿದೆ. ಹಾಗಂತ, ಪಿಒಕೆಗೆ ಸೈನಿಕರನ್ನೇ ಕಳುಹಿಸಬೇಕಾಗಿಲ್ಲ. ಅಲ್ಲಿನ ಜನರೇ, ಭಾರತದೊಂದಿಗೆ ವಿಲೀನವಾಗಲು ಬಯಸುತ್ತಿದ್ದಾರೆ” ಎಂಬುದಾಗಿ ರಾಜನಾಥ್‌ ಸಿಂಗ್‌ ಹೇಳಿದ್ದರು.

ಫಾರೂಕ್‌ ಅಬ್ದುಲ್ಲಾ ಪ್ರತಿಕ್ರಿಯೆ ಏನು?

ಸುದ್ದಿಗೋಷ್ಠಿ ನಡೆಸಿದ ಜಮ್ಮು-ಕಾಶ್ಮೀರ ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ, ರಾಜನಾಥ್‌ ಸಿಂಗ್‌ ಹೇಳಿಕೆಗೆ ಪ್ರತಿಕ್ರಿಯಿಸಿದರು. “ದೇಶದ ರಕ್ಷಣಾ ಸಚಿವರು ಪಿಒಕೆ ಮೇಲೆ ದಾಳಿ ಮಾಡಿ ಎಂಬುದಾಗಿ ಹೇಳಿದರೆ, ಅದನ್ನು ತಡೆಯಲು ನಾವು ಯಾರು? ಆದರೆ, ಒಂದು ನೆನಪಿರಲಿ. ಪಾಕಿಸ್ತಾನವೇನೂ ಬಳೆ ತೊಟ್ಟುಕೊಂಡು ಕೂತಿಲ್ಲ. ಅವರ ಬಳಿಯೂ ಪರಮಾಣು ಬಾಂಬ್‌ಗಳಿವೆ. ಆ ಪರಮಾಣು ಬಾಂಬ್‌ಗಳು ನಮ್ಮ ಮೇಲೆ ಬಂದು ಬೀಳುತ್ತವೆ” ಎಂಬುದಾಗಿ ಫಾರೂಕ್‌ ಅಬ್ದುಲ್ಲಾ ಎಚ್ಚರಿಸಿದ್ದಾರೆ.

ಜೈಶಂಕರ್‌ ಕೂಡ ಮಹತ್ವದ ಹೇಳಿಕೆ

ಪಿಒಕೆ ಕುರಿತು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಕೂಡ ಹೇಳಿಕೆ ನೀಡಿದ್ದಾರೆ. “ಪಿಒಕೆ ಭಾರತದ ಭಾಗವಾಗಿದೆ. ಪಿಒಕೆ ಭಾರತದ ಭಾಗ ಎಂಬುದಾಗಿ ಸಂಸತ್ತಿನಲ್ಲೂ ನಿರ್ಣಯ ತೆಗೆದುಕೊಳ್ಳಲಾಗಿದೆ. ಪಿಒಕೆ ಮೊದಲು ಕೂಡ ನಮ್ಮದಾಗಿತ್ತು. ಆದರೆ, ಅದನ್ನು ಅತಿಕ್ರಮಣ ಮಾಡಿಕೊಳ್ಳಲು ಕಾರಣರಾದವರು ಯಾರು? ಅದರ ಮೇಲೆ ಬೇರೆಯವರು ನಿಯಂತ್ರಣ ಸಾಧಿಸಲು ಯಾರು ಕಾರಣ” ಎಂಬುದಾಗಿ ಪರೋಕ್ಷವಾಗಿ ಕಾಂಗ್ರೆಸ್‌ಗೆ ಕುಟುಕಿದರು. ಇದಕ್ಕೂ ಮೊದಲು ಕೂಡ, ಅಮಿತ್‌ ಶಾ ಅವರು ಪಿಒಕೆ ನಮ್ಮದೇ ಎಂದು ಹೇಳಿದ್ದರು.

ಇದನ್ನೂ ಓದಿ: ಚೀನಾ ದಯೆಯಿಂದ ಮೊದಲ ಚಂದ್ರಯಾನ ಕೈಗೊಂಡ ಪಾಕಿಸ್ತಾನ; ಆದರೂ ಭಾರತಕ್ಕಿಂತ 16 ವರ್ಷ ಹಿಂದೆ!

Continue Reading

ದೇಶ

Air India: ವಿಮಾನ ಪ್ರಯಾಣಿಕರೇ ಗಮನಿಸಿ, ಚೆಕ್-ಇನ್ ಬ್ಯಾಗೇಜ್ ಭಾರದ ಮಿತಿ ಇಳಿಕೆ!

ಏರ್ ಇಂಡಿಯಾವು ದೇಶೀಯ ವಿಮಾನಗಳಲ್ಲಿ ಉಚಿತ ಚೆಕ್-ಇನ್ ಬ್ಯಾಗೇಜ್ ಭತ್ಯೆಯನ್ನು 20 ಕೆ.ಜಿ.ಯಿಂದ 15 ಕೆ.ಜಿ.ಗೆ ಇಳಿಕೆ (Air India) ಮಾಡಲಾಗಿದೆ. ಮೇ 2ರಿಂದಲೇ ಈ ಹೊಸ ನೀತಿ ಜಾರಿಯಾಗಿದೆ.

VISTARANEWS.COM


on

By

Air India
Koo

ವಿಮಾನ ಪ್ರಯಾಣದ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ ಗಮನಿಸಿ. ಏರ್ ಇಂಡಿಯಾವು (Air India) ದೇಶೀಯ ವಿಮಾನಗಳಲ್ಲಿ (domestic flights) ಲಗೇಜ್ ಭಾರವನ್ನು (check-in baggage) 20 ಕೆ.ಜಿ.ಯಿಂದ 15 ಕೆ.ಜಿ.ಗೆ ಇಳಿಕೆ ಮಾಡಿದೆ. ಇನ್ನು ಮುಂದೆ 15 ಕೆ.ಜಿ.ಗಿಂತ ಹೆಚ್ಚು ಸಾಮಗ್ರಿ ಒಯ್ಯುವುದಾದರೆ ಅದಕ್ಕೆ ಶುಲ್ಕ ಪಾವತಿ ಮಾಡಲೇಬೇಕು.


ದೇಶೀಯ ವಿಮಾನಗಳಲ್ಲಿ ಕಡಿಮೆ ಆರ್ಥಿಕ ದರದ ವಿಭಾಗದಲ್ಲಿ ಉಚಿತ ಚೆಕ್-ಇನ್ ಬ್ಯಾಗೇಜ್ ಭತ್ಯೆಯನ್ನು 20 ಕೆ.ಜಿ.ಯಿಂದ 15 ಕೆ.ಜಿ.ಗೆ ಇಳಿಕೆ ಮಾಡಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಟಾಟಾ ಗ್ರೂಪ್ (Tata Group) ಮಾಲೀಕತ್ವದ ಏರ್ ಇಂಡಿಯಾ ಪರಿಚಯಿಸಿದ ಮೆನು-ಆಧಾರಿತ ಬೆಲೆ ಮಾದರಿಯ ದರದ ಭಾಗವಾಗಿ ಈ ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಈ ಮೊದಲು ಏರ್ ಇಂಡಿಯಾದ ದೇಶೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 25 ಕೆ.ಜಿ. ಚೆಕ್-ಇನ್ ಬ್ಯಾಗೇಜ್ ಅನ್ನು ಸಾಗಿಸಲು ಅನುಮತಿಸಲಾಗಿತ್ತು. ಆದರೆ ಇತರ ದೇಶೀಯ ವಾಹಕಗಳಾದ ಇಂಡಿಗೊ, ವಿಸ್ತಾರಾ ಮತ್ತು ಸ್ಪೈಸ್ ಜೆಟ್ 15 ಕೆ.ಜಿ. ಚೆಕ್-ಇನ್ ಬ್ಯಾಗೇಜ್ ಅನ್ನು ನೀಡುತ್ತವೆ. ಬಳಿಕ ಹೆಚ್ಚುವರಿ ಶುಲ್ಕ ವಿಧಿಸುತ್ತಿದೆ.

ಹೇಗಿದೆ?

ಚೆಕ್-ಇನ್ ಬ್ಯಾಗೇಜ್ ನಲ್ಲಿ ಮೂರು ದರದ ಗುಂಪುಗಳಿವೆ. ಒಂದು ಕಂಫರ್ಟ್, ಎರಡನೆದ್ದು ಕಂಫರ್ಟ್ ಪ್ಲಸ್ ಮತ್ತು ಮೂರನೆಯದ್ದು ಫ್ಲೆಕ್ಸ್ . ಈ ಮೂರು ವಿಭಾಗಳಿಗೆ ಪ್ರತ್ಯೇಕ ದರ ನಿಗದಿ ಪಡಿಸಿರುವುದಾಗಿ ಏರ್ ಇಂಡಿಯಾ ವಕ್ತಾರರು ಶನಿವಾರ ತಿಳಿಸಿದ್ದಾರೆ. ವಿವಿಧ ಬೆಲೆಗಳಲ್ಲಿ ವಿಭಿನ್ನ ಮಟ್ಟದ ಪ್ರಯೋಜನಗಳನ್ನು ಗ್ರಾಹಕರು ಪಡೆಯಬಹುದಾಗಿದೆ.

ಈಗಾಗಲೇ ಜಾರಿ

ಚೆಕ್-ಇನ್ ಬ್ಯಾಗೇಜ್ ಮಿತಿಯನ್ನು ಮೇ 2ರಿಂದ ಈ ಜಾರಿಗೆ ಬರುವಂತೆ ಕ್ರಮಕೈಗೊಳ್ಳಲಾಗಿದೆ. ಏರ್‌ಲೈನ್ಸ್ ಹೇಳಿಕೆಯ ಪ್ರಕಾರ, ಕಂಫರ್ಟ್ ಮತ್ತು ಕಂಫರ್ಟ್ ಪ್ಲಸ್ ವರ್ಗಗಳಿಗೆ ಉಚಿತ ಚೆಕ್-ಇನ್ ಬ್ಯಾಗೇಜ್ ಭತ್ಯೆಯನ್ನು ಕ್ರಮವಾಗಿ 20 ಮತ್ತು 25 ಕೆ.ಜಿ.ಯಿಂದ 15 ಕೆ.ಜಿ.ಗೆ ಇಳಿಸಲಾಗಿದೆ.

ಬದಲಾವಣೆ

ಎಕಾನಮಿ ಕ್ಲಾಸ್‌ನಲ್ಲಿ ದೇಶೀಯ ಮಾರ್ಗಗಳಲ್ಲಿ ಕಂಫರ್ಟ್ ಮತ್ತು ಕಂಫರ್ಟ್ ಪ್ಲಸ್ ದರಗಳು ಈಗ 15 ಕೆ.ಜಿ. ಲಗೇಜ್ ಭತ್ಯೆಯನ್ನು ನೀಡುತ್ತವೆ. ಆದರೆ ಫ್ಲೆಕ್ಸ್ 25 ಕೆ.ಜಿ.ವರೆಗೆ ಭತ್ಯೆಯನ್ನು ಒದಗಿಸುತ್ತದೆ. ದೇಶೀಯ ಮಾರ್ಗಗಳಲ್ಲಿ ವ್ಯಾಪಾರ ವರ್ಗದ ಬ್ಯಾಗೇಜ್ ಭತ್ಯೆ 25 ಕೆ.ಜಿ.ಯಿಂದ 35 ಕೆ.ಜಿ. ವರೆಗೆ ಇರುತ್ತದೆ. ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಉಚಿತ ಲಗೇಜ್ ಭತ್ಯೆಯು ಮಾರುಕಟ್ಟೆಯಿಂದ ಮಾರುಕಟ್ಟೆಗೆ ಬದಲಾಗುತ್ತದೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.

ಪ್ರಯಾಣಿಕರ ವೈವಿಧ್ಯಮಯ ಆದ್ಯತೆಗಳನ್ನು ಪರಿಗಣಿಸಿ,ಅವಶ್ಯಕತೆಗಳಿಗೆ ಸೂಕ್ತವಾದ ದರ ಮತ್ತು ಸೇವೆಗಳನ್ನು ಆಯ್ಕೆ ಮಾಡಲು ಪ್ರಯಾಣಿಕರಿಗೆ ಅವಕಾಶ ನೀಡಲು ಶುಲ್ಕದಲ್ಲಿ ವ್ಯತ್ಯಾಸಗಳನ್ನು ಮಾಡಲಾಗಿದೆ ಎಂದು ಏರ್ ಲೈನ್ಸ್ ತಿಳಿಸಿದೆ.

ಇದನ್ನೂ ಓದಿ: Dubai Airport : ದುಬೈನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಏರ್​ಪೋರ್ಟ್​​; ಏನಿದರ ವಿಶೇಷತೆ? ಎಲ್ಲ ಮಾಹಿತಿ ಇಲ್ಲಿದೆ

ಹೇಗಿದೆ ದರ?

ಕಂಫರ್ಟ್ ಪ್ಲಸ್ ಮತ್ತು ಫ್ಲೆಕ್ಸ್ ದರಗಳ ನಡುವಿನ ಬೆಲೆ ವ್ಯತ್ಯಾಸವು ದೆಹಲಿ- ಮುಂಬಯಿನಂತಹ ದೇಶೀಯ ವಲಯದಲ್ಲಿ ಸಾಮಾನ್ಯವಾಗಿ 1,000 ರೂ. ಆಗಿರುತ್ತದೆ. 10 ಕೆ.ಜಿ. ಹೆಚ್ಚುವರಿ ಬ್ಯಾಗೇಜ್ ಮತ್ತು ಶೂನ್ಯ ಬದಲಾವಣೆ ಅಥವಾ ರದ್ದತಿ ಶುಲ್ಕ ಸೇರಿದಂತೆ 9,000 ರೂ.ವರೆಗೆ ಇರುತ್ತದೆ. ಗ್ರಾಹಕರ ಅಭಿಪ್ರಾಯವನ್ನು ಪಡೆದೇ ಈ ದರವನ್ನು ನಿಗದಿ ಪಡಿಸಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

Continue Reading
Advertisement
Pain relievers
ಆರೋಗ್ಯ7 mins ago

Pain Relievers: ಸೈಡ್‌ ಎಫೆಕ್ಟ್‌ ಇಲ್ಲದ ಪ್ರಕೃತಿದತ್ತ ನೋವು ನಿವಾರಕಗಳಿವು

Dina bhavishya
ಭವಿಷ್ಯ1 hour ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Ramanagara News
ಕರ್ನಾಟಕ6 hours ago

Channapatna News: ಮದುವೆಯಲ್ಲಿ ಐಸ್ ಕ್ರೀಂ ತಿಂದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Narendra Modi
ದೇಶ6 hours ago

Narendra Modi: ರಾಮಲಲ್ಲಾನಿಗೆ ಮೋದಿ ಸಾಷ್ಟಾಂಗ ನಮಸ್ಕಾರ; ಇಲ್ಲಿವೆ ಅಯೋಧ್ಯೆ ಭೇಟಿ Photos

IPL 2024
ಪ್ರಮುಖ ಸುದ್ದಿ6 hours ago

IPL 2024 : ಇವರೇ ನೋಡಿ ಐಪಿಎಲ್​ 2024ರ ಮೊದಲ ಕನ್​ಕಷನ್​ ಬದಲಿ ಆಟಗಾರ

Prajwal Revanna Case
ಪ್ರಮುಖ ಸುದ್ದಿ6 hours ago

Prajwal Revanna Case: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಶೇರ್‌ ಮಾಡಿದ್ರೆ ಕೇಸ್‌ ಗ್ಯಾರಂಟಿ; ಎಸ್‌ಐಟಿ ಎಚ್ಚರಿಕೆ

IPL 2024
ಕ್ರೀಡೆ7 hours ago

IPL 2024 : ಲಕ್ನೊ ವಿರುದ್ಧ ಕೆಕೆಆರ್​​ಗೆ 98 ರನ್​ಗಳ ಬೃಹತ್​ ಜಯ

Narendra Modi
ದೇಶ7 hours ago

Narendra Modi: ಮತಬ್ಯಾಂಕ್‌ ಗುತ್ತಿಗೆದಾರರ ಸ್ನೇಹಕ್ಕೆ ಮುಸ್ಲಿಮರು ವಿದಾಯ; ಕಾಂಗ್ರೆಸ್‌ಗೆ ಮೋದಿ ಟಾಂಗ್!

Prajwal Revanna Case
ಕರ್ನಾಟಕ7 hours ago

Prajwal Revanna Case: ಜಡ್ಜ್‌ ಮುಂದೆಯೂ ನಿಂಬೆ ಹಣ್ಣು ಹಿಡಿದುಕೊಂಡಿದ್ದ ಎಚ್‌.ಡಿ.ರೇವಣ್ಣ!

IPL 2024
ಪ್ರಮುಖ ಸುದ್ದಿ7 hours ago

IPL 2024 : ಐಪಿಎಲ್ ಸ್ಟೇಡಿಯಮ್​ಗಳ ಗಾತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಆರ್​ ಅಶ್ವಿನ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ1 hour ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ10 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ12 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ12 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌